Tag: Ashwini Choubey

  • ಕೇಂದ್ರ ಸಚಿವ ಅಶ್ವಿನಿ ಚೌಬೆ ಬೆಂಗಾವಲು ವಾಹನ ಪಲ್ಟಿ – ಪೊಲೀಸರಿಗೆ ಗಂಭೀರ ಗಾಯ

    ಕೇಂದ್ರ ಸಚಿವ ಅಶ್ವಿನಿ ಚೌಬೆ ಬೆಂಗಾವಲು ವಾಹನ ಪಲ್ಟಿ – ಪೊಲೀಸರಿಗೆ ಗಂಭೀರ ಗಾಯ

    ಪಾಟ್ನಾ: ಕೇಂದ್ರ ರಾಜ್ಯ ಸಚಿವ ಅಶ್ವಿನಿ ಚೌಬೆ (Ashwini Choubey) ಅವರ ಬೆಂಗಾವಲು ವಾಹನವು (Escort Vehicle) ಭಾನುವಾರ ರಾತ್ರಿ ಅಪಘಾತಕ್ಕೀಡಾಗಿದ್ದು (Accident), ಹಲವಾರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಕೇಂದ್ರ ಸಚಿವರು ಬಕ್ಸರ್ ನಿಂದ ಪಾಟ್ನಾಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಅಪಘಾತದಲ್ಲಿ ಪಲ್ಟಿಯಾದ (Overturn) ಬೆಂಗಾವಲು ವಾಹನವನ್ನು ಸಚಿವರು ಪರಿಶೀಲಿಸುತ್ತಿರುವ ವೀಡಿಯೋವನ್ನು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

    ಈ ಕುರಿತು ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿರುವ ಅವರು, ಬಕ್ಸರ್‌ನಿಂದ ಪಾಟ್ನಾಗೆ ತೆರಳುತ್ತಿದ್ದಾಗ ಕೊರಂಸಾರೈ ಪೊಲೀಸ್ ಠಾಣೆಯ ಕಾರು ಕಾರ್ಕೇಡ್‌ನಲ್ಲಿನ ಮಥಿಲ-ನಾರಾಯಣಪುರ ರಸ್ತೆಯ ಸೇತುವೆಯ ಕಾಲುವೆಯಲ್ಲಿ ಬಿದ್ದು, ಅಪಘಾತಕ್ಕೀಡಾಗಿದೆ. ಸದ್ಯ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೆಹಲಿ ವ್ಯಕ್ತಿಯ ದೇಹ 8 ಪೀಸ್ ಮಾಡಿ ವೀಡಿಯೋ ರೆಕಾರ್ಡ್ – ಪಾಕಿಸ್ತಾನಕ್ಕೆ ಶೇರ್

    ವರದಿಗಳ ಪ್ರಕಾರ, ಪೊಲೀಸ್ ಸಿಬ್ಬಂದಿ ಮತ್ತು ಚಾಲಕನಿಗೆ ಗಾಯಗಳಾಗಿದ್ದು, ಅವರನ್ನು ದುಮ್ರಾವ್ ಸದರ್ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ ಇಬ್ಬರು ಪೊಲೀಸರಿಗೆ ಗಂಭೀರ ಗಾಯಗಳಾಗಿರುವುದರಿಂದ ಅವರನ್ನು ಪಾಟ್ನಾದ ಅಖಿಲ ಭಾರತ ವೈದ್ಯಕೀಯ ವಿಜ್ಞಾನಕ್ಕೆ ಕಳುಹಿಸಲಾಗಿದೆ. ಇದನ್ನೂ ಓದಿ: ನಿನ್ನ ಬ್ಯಾನರ್ ಇಲ್ಯಾಕೆ..?- ವಿಜಯನಗರ ವಿಧಾನಸಭೆ ಕ್ಷೇತ್ರದ ಕೈ ಆಕಾಂಕ್ಷಿಗಳ ಗಲಾಟೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k