Tag: Ashwini

  • ಮೊದಲ ಮಗುವಿನ ನಿರೀಕ್ಷೆಯಲ್ಲಿ ‘ಲವ್‌ ಮಾಕ್ಟೈಲ್‌ 2’ ನಟಿ

    ಮೊದಲ ಮಗುವಿನ ನಿರೀಕ್ಷೆಯಲ್ಲಿ ‘ಲವ್‌ ಮಾಕ್ಟೈಲ್‌ 2’ ನಟಿ

    ‘ಲವ್‌ ಮಾಕ್ಟೈಲ್‌ 2′ (Love Mocktail 2) ಸಿನಿಮಾದಲ್ಲಿ ನಟಿಸಿದ್ದ ಸುಷ್ಮಿತಾ ಗೌಡ (Sushmitha Gowda) ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ನಟಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೀಗ ಸರಳವಾಗಿ ಅವರಿಗೆ ಸೀಮಂತ ಶಾಸ್ತ್ರ ಜರುಗಿದೆ. ಇದನ್ನೂ ಓದಿ:ಶಾರ್ಟ್‌ ಡ್ರೆಸ್‌ ಧರಿಸಿ ನಿವೇದಿತಾ ಹೊಸ ರೀಲ್ಸ್-‌ ಕಾಲೆಳೆದ ನೆಟ್ಟಿಗರು

    ಮನೆಗೆ ಹೊಸ ಅತಿಥಿ ಆಗಮಿಸುವ ಖುಷಿಯಲ್ಲಿರುವ ನಟಿ ಸುಷ್ಮಿತಾಗೆ ಸರಳವಾಗಿ ಸೀಮಂತ ಶಾಸ್ತ್ರ ಮಾಡಲಾಗಿದೆ. ಈ ವೇಳೆ, ನೇರಳೆ ಬಣ್ಣದ ಸೀರೆಯುಟ್ಟು ನಟಿ ಮಿಂಚಿದ್ದಾರೆ. ತಾಯ್ತನದ ಸಂಭ್ರಮದಲ್ಲಿರುವ ನಟಿಗೆ ಫ್ಯಾನ್ಸ್‌ ಶುಭಕೋರಿದ್ದಾರೆ. ಇದನ್ನೂ ಓದಿ:ನಗದಿನ ಮೂಲಕ ಸಂಭಾವನೆ – ಮಹೇಶ್‌ ಬಾಬುಗೆ ಇಡಿ ನೋಟಿಸ್‌

     

    View this post on Instagram

     

    A post shared by Sushmitha Ashwin (@sushmitha2412)

    ಅಂದಹಾಗೆ, ಐಟಿ ಕ್ಷೇತ್ರದಲ್ಲಿ ಉದ್ಯೋಗಿ ಆಗಿರುವ ಅಶ್ವಿನ್ ಗೌಡ (Ashwin Gowda) ಅವರನ್ನು ಹಲವು ವರ್ಷಗಳು ಪ್ರೀತಿಸಿ 2022ರಲ್ಲಿ ಸುಷ್ಮಿತಾ ಮದುವೆಯಾದರು. ಇವರ ಮದುವೆಗೆ ‘ಲವ್‌ ಮಾಕ್ಟೈಲ್‌ 2’ ಟೀಮ್ ಮತ್ತು ಆಶಿಕಾ ರಂಗನಾಥ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

    ಡಾರ್ಲಿಂಗ್ ಕೃಷ್ಣ ನಟಿಸಿದ ‘ಲವ್‌ ಮಾಕ್ಟೈಲ್‌ 2’ ಚಿತ್ರದಲ್ಲಿ ಜಂಕಣ ಎಂಬ ಪಾತ್ರದಲ್ಲಿ ಸುಷ್ಮಿತಾ ಗೌಡ ನಟಿಸಿದ್ದರು. ನಟನೆಯ ಜೊತೆ ಸಾಮಾಜಿಕ ಜಾಲತಾಣದಲ್ಲಿ ಕಂಟೆಂಟ್ ಕ್ರಿಯೆಟರ್ ಆಗಿ ಕೂಡ ಅವರು ಗುರುತಿಸಿಕೊಂಡಿದ್ದಾರೆ.

  • ಅಪ್ಪು, ದಚ್ಚು ‘ಫ್ಯಾನ್ಸ್ ವಾರ್’ಗೆ ಧ್ರುವ ಸರ್ಜಾ ಅಭಿಮಾನಿಗಳು ಎಂಟ್ರಿ

    ಅಪ್ಪು, ದಚ್ಚು ‘ಫ್ಯಾನ್ಸ್ ವಾರ್’ಗೆ ಧ್ರುವ ಸರ್ಜಾ ಅಭಿಮಾನಿಗಳು ಎಂಟ್ರಿ

    ಪುನೀತ್ ರಾಜ್ ಕುಮಾರ್ (Puneeth Rajkumar) ಪತ್ನಿ ಅಶ್ವಿನಿ (Ashwini)  ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ವಿಚಾರ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ಗಜಪಡೆ ಸೋಷಿಯಲ್ ಮೀಡಿಯಾ ಖಾತೆಯಿಂದ ಅಶ್ವಿನಿ ಅವರಿಗೆ ಅವಹೇಳನ ಮಾಡಲಾಗಿತ್ತು. ಈ ಕೃತ್ಯವನ್ನು ದರ್ಶನ್ (Darshan) ಅಭಿಮಾನಿಗಳು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

    ಈ ಕೃತ್ಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಪ್ಪು ಅಭಿಮಾನಿಗಳು ನಾಲ್ಕು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದುರುಳರ ಹೆಡೆಮೂರಿ ಕಟ್ಟುವಂತೆ ಗೃಹ ಸಚಿವರಿಗೂ ವಿನಂತಿಸಿದ್ದಾರೆ. ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಈ ಪ್ರಕರಣವನ್ನು ಗಂಭೀರವಾಗಿ ತಗೆದುಕೊಂಡಿದ್ದಾರೆ. ಇಲ್ಲಿಗೆ ಏನೋ ಒಂದು ತಾರ್ಕಿಕ ಅಂತ್ಯ ಸಿಗಬಹುದು ಎನ್ನುತ್ತಿರುವಾಗಲೇ ಧ್ರುವ ಸರ್ಜಾ ಅಭಿಮಾನಿಗಳನ್ನು ಈ ಘಟನೆಯಲ್ಲಿ ಎಳೆತರಲಾಗುತ್ತಿದೆಯಂತೆ.

    ಈ ಪ್ರಕರಣದಲ್ಲಿ ಧ್ರುವ ಸರ್ಜಾ (Dhruva Sarja) ಅವರ ಅಭಿಮಾನಿಗಳನ್ನು ಎಳೆತಂದಿರುವುದಕ್ಕೆ ಧ್ರುವ ಸರ್ಜಾ ಅಭಿಮಾನಿಗಳು ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ದರ್ಶನ್ ಅಭಿಮಾನಿಗಳ  ಸಾಮಾಜಿಕ ಜಾಲತಾಣದ ಜಗಳಕ್ಕೆ ಧ್ರುವ ಸರ್ಜಾ ಹಾಗೂ ಅವರ ಅಭಿಮಾನಿಗಳನ್ನ ಎಳೆತಂದಿರುವುದನ್ನು ಖಂಡಿಸಿದ್ದಾರೆ.

     

    ಧ್ರುವ ಸರ್ಜಾ ಅಭಿಮಾನಿಗಳ ಹೆಸರಿಗೆ ಮಸಿ ಬಳಿಯಲು ದರ್ಶನ್ ಫ್ಯಾನ್ಸ್ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪ ಕೂಡ ಮಾಡಿದ್ದಾರೆ. ಕಿಡಿಗೇಡಿ ಯಾರೆಂದು ಪತ್ತೆ ಮಾಡ್ಬೇಕು. ನಮ್ಮ‌ ಮೇಲೆ ಬೆರಳು ತೋರಿಸುವ ಪ್ರಯತ್ನ‌‌ ನಡೆಯುತ್ತಿದೆ . ಈ  ವಿಚಾರಕ್ಕೆ ಶೀಘ್ರ ತನಿಖೆಗೆ ಆಗ್ರಹಿಸಿವೆವು ಎಂದಿದ್ದಾರೆ ಧ್ರುವ ಫ್ಯಾನ್ಸ್.

  • ಅಶ್ವಿನಿ ಪುನೀತ್ ರಾಜ್ ಕುಮಾರ್ ಬಗ್ಗೆ ಕೀಳು ಮಟ್ಟದ ಪೋಸ್ಟರ್: ದೂರು ನೀಡಲು ನಿರ್ಧಾರ

    ಅಶ್ವಿನಿ ಪುನೀತ್ ರಾಜ್ ಕುಮಾರ್ ಬಗ್ಗೆ ಕೀಳು ಮಟ್ಟದ ಪೋಸ್ಟರ್: ದೂರು ನೀಡಲು ನಿರ್ಧಾರ

    ನಿರ್ಮಾಪಕಿ, ಪುನೀತ್ ರಾಜ್ ಕುಮಾರ್ (Puneeth Rajkumar) ಪತ್ನಿ ಅಶ್ವಿನಿ (Ashwini) ಅವರ ಬಗ್ಗೆ ಕೆಟ್ಟದ್ದಾಗಿ , ಕೀಳು ಮಟ್ಟದಲ್ಲಿ ಪೋಸ್ಟರ್ (Poster) ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದವರ ವಿರುದ್ಧ ದೂರು ನೀಡಲು ಅಪ್ಪು ಅಭಿಮಾನಿಗಳು ನಿರ್ಧಾರ ಮಾಡಿದ್ದಾರೆ. ಜೊತೆಗೆ ಅಂಥವರ ವಿರುದ್ಧದ ಕ್ರಮಕ್ಕಾಗಿ ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ.

    ಆರ್.ಸಿ.ಬಿ ಸೋಲಿಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಕಾರಣ ಎಂದು ಕೀಳು ಮಟ್ಟದಲ್ಲಿ ಪೋಸ್ಟರ್ ಮಾಡಲಾಗಿದೆ. ಕೆಲ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಅವುಗಳನ್ನು ಹಂಚಿಕೊಂಡು ವಿಕೃತಿ ಮೆರೆಯಲಾಗುತ್ತಿದೆ. ಈ ಕುರಿತಂತೆ ಅನೇಕರ ಧ್ವನಿ ಎತ್ತಿದ್ದಾರೆ. ಅವರು ಯಾರ ಅಭಿಮಾನಿಗಳೇ ಆಗಿರಲಿ, ಅಂಥವರ ವಿರುದ್ಧ ಕ್ರಮಕ್ಕೆ ಒತ್ತಾಯ ಕೇಳಿ ಬರುತ್ತಿದೆ.

     

    ಅಶ್ವಿನಿ ಪುನೀತ್ ರಾಜ್ ಕುಮಾರ್ ಪರ ಸಾಕಷ್ಟು ಜನರು ಧ್ವನಿ ಎತ್ತಿದ್ದಾರೆ. ಅದರಲ್ಲೂ ಮಹಿಳಾ ಪರ ಸಂಘಟನೆಗಳು, ಹೋರಾಟಗಾರರು ಮತ್ತು ಬರಹಗಾರರು ಕೂಡ ಪೋಸ್ಟರ್  ವಿರುದ್ಧ ಧ್ವನಿ ಎತ್ತಿದ್ದಾರೆ. ಪೋಸ್ಟರ್ ಶೇರ್ ಮಾಡಿದ ಮತ್ತು ಹಂಚಿಕೊಂಡವರನ್ನು ಕೂಡಲೇ ಬಂಧಿಸಿ ಎನ್ನುವ ಮಾತುಗಳು ಕೇಳಿ ಬಂದಿವೆ.

  • ‘ಜಾಕಿ’ ಸಿನಿಮಾ ನೋಡಿ ಭಾವುಕರಾದ ಅಶ್ವಿನಿ ಪುನೀತ್ ರಾಜ್ ಕುಮಾರ್

    ‘ಜಾಕಿ’ ಸಿನಿಮಾ ನೋಡಿ ಭಾವುಕರಾದ ಅಶ್ವಿನಿ ಪುನೀತ್ ರಾಜ್ ಕುಮಾರ್

    ಪ್ಪು ಹುಟ್ಟು ಹಬ್ಬದ ನಿಮಿತ್ತ ಇಂದು ಮರುಬಿಡುಗಡೆಯಾದ ಜಾಕಿ ಸಿನಿಮಾವನ್ನು ನೋಡಲು ಥಿಯೇಟರ್ ಗೆ ಆಗಮಿಸಿದ್ದರು ಪುನೀತ್ ಪತ್ನಿ ಅಶ್ವಿನಿ. ಸಿನಿಮಾ ಮುಗಿದ ನಂತರ ಭಾವುಕರಾಗಿ ಚಿತ್ರಮಂದಿರದಿಂದ ಹೊರ ಬಂದರು. ಪುನೀತ್ ನಿಧನದ ನಂತರವೂ ಅವರನ್ನು ಅಭಿಮಾನಿಗಳು ಪ್ರೀತಿಸುತ್ತಿರುವ ರೀತಿಗೆ ಅಕ್ಷರಶಃ ಕಣ್ಣಲ್ಲಿ ನೀರು ತುಂಬಿಕೊಂಡಿದ್ದರು ಅಶ್ವಿನಿ.

    ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ ಅವರ ಜಾಕಿ (Jackie) ಸಿನಿಮಾವನ್ನು ಅವರ ಅಭಿಮಾನಿಗಳು ರಾಜ್ಯಾದ್ಯಂತ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಥಿಯೇಟರ್ ಮುಂದೆ ಆಳೆತ್ತರದ ಕಟೌಟ್ ಹಾಕಿ ಸಂಭ್ರಮಿಸಿದ್ದಾರೆ. ಅಪ್ಪು (Puneeth Rajkumar) ಹುಟ್ಟು ಹಬ್ಬಕ್ಕೆ (Birthday) ಈಗಿನಿಂದಲೇ ತಯಾರಿ ಮಾಡಿಕೊಳ್ಳಲಾಗುತ್ತಿದೆ.

    ದುನಿಯಾ ಸೂರಿ (Duniya Vijay)  ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಬಾಕ್ಸ್ ಆಫೀಸಿನಲ್ಲಿ ಸೂಪರ್ ಹಿಟ್ ಚಿತ್ರ ಎಂದು ದಾಖಲಾಗಿದೆ. ಅಲ್ಲದೇ, ಈ ಸಿನಿಮಾದ ಹಾಡುಗಳು ಕೂಡ ಹೊಸ ರೀತಿಯಲ್ಲಿ ಕೇಳಿಸಿದ್ದವು. ಹಾಗಾಗಿ ಅಪ್ಪು ಡಾನ್ಸ್ ಕೂಡ ಅಭಿಮಾನಿಗಳಿಗೆ ಇಷ್ಟವಾಗಿತ್ತು.

    ಚಿತ್ರದ ಕಥೆ, ಅಪ್ಪು ಡಾನ್ಸ್, ಹಾಡು ಹಾಗೂ ಸಾಹಸ ಸನ್ನಿವೇಶಗಳಿಂದ ಜಾಕಿ ಸಿನಿಮಾ ಗಮನ ಸೆಳೆದಿತ್ತು. ವಿಚಿತ್ರ ವೇಷಗಳನ್ನೂ ಈ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಹಾಕಿದ್ದರು. ಪಾರ್ವತಮ್ಮ ರಾಜ್ ಕುಮಾರ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಅಪ್ಪು ಜೊತೆ ಭಾವನಾ ನಾಯಕಿಯಾಗಿ ನಟಿಸಿದ್ದರು.

    ಜಾಕಿ ಚಿತ್ರವನ್ನು ಮತ್ತಷ್ಟು ಅಪ್ ಗ್ರೇಡ್ ಮಾಡಿ ಈ ಬಾರಿ ಥಿಯೇಟರ್ ಗೆ ತರಲಾಗುತ್ತಿದೆ. ಸೌಂಡ್, ರೆಸ್ಯುಲೇಷನ್ ಮತ್ತಷ್ಟು ಹೆಚ್ಚಿಸಲಾಗಿದೆಯಂತೆ. ಇನ್ನಷ್ಟು ಕಲರ್ ಫುಲ್ ನೊಂದಿಗೆ ಜಾಕಿ ಸಿನಿಮಾವನ್ನು ನೋಡಬಹುದಾಗಿದೆಯಂತೆ.

     

    ಬರೀ ಸಿನಿಮಾ ಮಾತ್ರವಲ್ಲ ಎಂದಿನಂತೆ ಅವರ ಅಭಿಮಾನಿಗಳು ಅನ್ನ ಸಂತರ್ಪಣೆ, ಕಣ್ಣುದಾನ, ರಕ್ತದಾನದಂತಹ ಶಿಬಿರಗಳನ್ನು ಅಪ್ಪು ಸಮಾಧಿ ಬಳಿ ಮಾಡಲು ರೆಡಿ ಆಗುತ್ತಿದ್ದಾರೆ. ಅಂದು ಯುವ ಸಿನಿಮಾದ ಇವೆಂಟ್ ಕೂಡ ಇರಲಿದೆ.

  • ನಾಳೆ ಅಪ್ಪು 2ನೇ ಪುಣ್ಯಸ್ಮರಣೆ : ಕುಟುಂಬದಿಂದ ಸಮಾಧಿ ನಿರ್ಮಾಣ

    ನಾಳೆ ಅಪ್ಪು 2ನೇ ಪುಣ್ಯಸ್ಮರಣೆ : ಕುಟುಂಬದಿಂದ ಸಮಾಧಿ ನಿರ್ಮಾಣ

    ವರ್ ಸ್ಟಾರ್ ಪುನೀತ್ ರಾಜ ಕುಮಾರ್ (Puneeth Rajkumar) ಅಗಲಿ ನಾಳೆಗೆ ಎರಡು ವರ್ಷ. ಪುಣ್ಯ ಸ್ಮರಣೆಯನ್ನು (Punyasmarane) ಆಚರಿಸಲು ಅಭಿಮಾನಿಗಳು ಮತ್ತು ಕುಟುಂಬ ಸರ್ವಸಿದ್ಧತೆ ಮಾಡಿಕೊಂಡಿದೆ. ನಾಳೆ ಬೆಳಗ್ಗೆಯಿಂದಲೇ ಅಭಿಮಾನಿಗಳು ಹಲವಾರು ಕಾರ್ಯಕ್ರಮಗಳನ್ನು ಹಂಚಿಕೊಂಡಿದ್ದಾರೆ. ಮೈಸೂರು ಮಾದರಿಯಲ್ಲೇ ಲೈಟಿಂಗ್ ಸೇರಿದಂತೆ ನೇತ್ರದಾನ, ಅನ್ನದಾನ ಶಿಬಿರಗಳನ್ನೂ ಏರ್ಪಡಿಸಿದ್ದಾರೆ.

    ಕುಟುಂಬವು ಡಾ.ರಾಜಕುಮಾರ್ ಸಮಾಧಿ ಮಾದರಿಯಲ್ಲೇ ಅಪ್ಪು (Appu) ಸಮಾಧಿಯನ್ನು ನಿರ್ಮಾಣ ಮಾಡಿದೆ. ಬಿಳಿ ಮಾರ್ಬಲ್ಸ್ ಬಳಸಿಕೊಂಡು ಅಪ್ಪು ಸಮಾಧಿಯನ್ನು ನಿರ್ಮಾಣ ಮಾಡಲಾಗಿದೆ. ಸ್ಮಾರಕದ ಸುತ್ತಲೂ ಸಾದೇನಹಳ್ಳಿ ಕಲ್ಲಿನ ಚಪ್ಪಡಿ ಹೊದಿಸಲಾಗಿದೆ. ಸಮಾಧಿ ಮೇಲೆ ಅಪ್ಪುವಿನ ನಗುಮೊಗದ ಫೋಟೋ ಇಡಲಾಗಿದೆ.

    ಮಾಹಿತಿಯಂತೆ ನಾಳೆ ಬೆಳಗ್ಗೆ 9 ಗಂಟೆಗೆ ಡಾ.ರಾಜ್ ಕುಟುಂಬ ಸಮಾಧಿಗೆ ಬಂದು ಪೂಜೆ ಸಲ್ಲಿಸಲಿದೆ. ಅಶ್ವಿನಿ (Ashwini) ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್ ಮತ್ತು ಡಾ.ರಾಜಕುಮಾರ್ ಅವರ ಇಡೀ ಕುಟುಂಬ ಪೂಜೆಯಲ್ಲಿ ಭಾಗಿಯಾಗಲಿದೆ.

     

    ಅಕ್ಟೋಬರ್ 29ರಂದು ಪುನೀತ್ ಅವರನ್ನು ಈ ನಾಡು ಕಳೆದುಕೊಂಡಿತು. ಅಲ್ಲಿಂದ ಈವರೆಗೂ ಅಪ್ಪು ಸಮಾಧಿಗೆ ಸಾವಿರಾರು ಅಭಿಮಾನಿಗಳು ಭೇಟಿ ನೀಡುತ್ತಲೇ ಇದ್ದಾರೆ. ರಾಜ್ಯಾದ್ಯಂತ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸರಕಾರ ಕೂಡ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದುಬೈನಲ್ಲಿ ನಡೆಯಿತು ಡಾ.ರಾಜ್ ಕಪ್ ಟೀಮ್ ಹರಾಜು ಪ್ರಕ್ರಿಯೆ

    ದುಬೈನಲ್ಲಿ ನಡೆಯಿತು ಡಾ.ರಾಜ್ ಕಪ್ ಟೀಮ್ ಹರಾಜು ಪ್ರಕ್ರಿಯೆ

    ನ್ನಡ ಚಿತ್ರರಂಗದ ನಟರು ಒಟ್ಟಾಗಿ ಆಡುವ ಡಾ.ರಾಜ್ ಕಪ್ ಕ್ರಿಕೆಟ್ (Cricket) ಪಂದ್ಯಾವಳಿ ಸೀಸನ್ 6ಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಪುನೀತ್ ರಾಜ್ ಕುಮಾರ್ (Puneeth Rajkumar) ಅವರ ಸ್ಮರಣಾರ್ಥವಾಗಿ ಈ ಬಾರಿ ರಾಜ್ ಕಪ್ ( (Dr. Raj Cup)) ಆಯೋಜಿಸಲಾಗಿದ್ದು, ನಿನ್ನೆ ಜೂನ್ 17 ರಂದು ದುಬೈನಲ್ಲಿ (Dubai) ಟೀಮ್ ಹರಾಜು (Auction) ಪ್ರಕ್ರಿಯೆ ನಡೆಯಿತು. ಈ ಹರಾಜು ಪ್ರಕ್ರಿಯೆಯಲ್ಲಿ ಸ್ಯಾಂಡಲ್ ವುಡ್ ಅನೇಕ ತಾರೆಯರು ಭಾಗಿಯಾಗಿದ್ದರು.

    ನಟರಾದ ನೀನಾಸಂ ಸತೀಶ್, ಡಾಲಿ ಧನಂಜಯ್, ಲೂಸ್ ಮಾದ ಯೋಗಿ, ವಶಿಷ್ಠ ಸಿಂಹ, ನಿರ್ದೇಶಕರಾದ ಪವನ್ ಒಡೆಯರ್, ಸಿಂಪಲ್ ಸುನಿ ಪನ್ನಗಾಭರಣ, ಚೇತನ್ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಸೇರಿದಂತೆ ಹಲವರು ಭಾಗಿಯಾಗಿದ್ದರು. ಇದನ್ನೂ ಓದಿ:ರಶ್ಮಿಕಾ ಮಾತ್ರವಲ್ಲ, ಪೂಜಾಗೂ ಠಕ್ಕರ್ ಕೊಡ್ತಿದ್ದಾರೆ ‘ಭರಾಟೆ’ ಬ್ಯೂಟಿ ಶ್ರೀಲೀಲಾ

    ಪಂದ್ಯಾವಳಿಯ ಉದ್ಘಾಟನೆಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneet Rajkumar) ವಿಶೇಷ ಅತಿಥಿಯಾಗಿ ಆಗಮಿಸಲಿದ್ದಾರೆ. ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಪಟ್ಟಂತೆ ಮೊನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ, ಆಯೋಜಕರಾದ ರಾಜೇಶ್ ಬ್ರಹ್ಮಾವರ, ಅನಿರುದ್ದ, ಮಣಿಕಾಂತ್ ಕದ್ರಿ, ಸಿಂಪಲ್ ಸುನಿ, ರವಿಶಂಕರ್ ಗೌಡ, ಜೇಮ್ಸ್ ಚೇತನ್, ಪವನ್ ಒಡೆಯರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದಾರೆ.

    ರಾಜ್ ಕಪ್ ಆಯೋಜಕರಾದ ರಾಜೇಶ್ ಬ್ರಹ್ಮಾವರ (Rajesh Brahmavar) ಮಾತನಾಡಿ, ಕಳೆದ ಬಾರಿ 8 ತಂಡ ಇತ್ತು. ಈ ಬಾರಿ 12 ತಂಡಗಳಾಗಿವೆ.  1000ಕ್ಕೂ ಹೆಚ್ಚು ಅಪ್ಲೀಕೇಷನ್ ಬಂದಿತ್ತು. ಅವುಗಳಲ್ಲಿ ರೂಲ್ಸ್ ಗೆ ತಕ್ಕಂತೆ ಆಯ್ಕೆ ಮಾಡಲಾಗಿದೆ. 12 ತಂಡಗಳಿಗೆ 12 ಕ್ಯಾಪ್ಟನ್, 12 ವೈಸ್ ಕ್ಯಾಪ್ಟನ್, ಸ್ಟಾರ್ ಕ್ಯಾಪ್ಟನ್ ಇರಲಿದ್ದಾರೆ. ರಾಜ್ ಕಪ್ ಸೀಸನ್ 6ನ್ನು ಆರು ದೇಶಗಳಲ್ಲಿ ಮಾಡುವ ಪ್ಲಾನ್ ನಡೆದಿದೆ. ಶ್ರೀಲಂಕಾ, ಸಿಂಗಾಪುರ, ಮಲೇಷ್ಯಾ, ಬ್ಯಾಂಕಾಕ್ ಮತ್ತು ದುಬೈನಲ್ಲಿ ಪಂದ್ಯ ನಡೆಯಲಿವೆ. ಇನ್ನೊಂದು ದೇಶ ಬಾಕಿ ಉಳಿದಿದೆ.

    ನಟ ಅನಿರುದ್ದ (Aniruddha) ಮಾತನಾಡಿ, ಡಾ.ರಾಜ್ ಕಪ್ ಹೆಸರಲ್ಲೇ ಸಕಾರಾತ್ಮಕತೆ ಇದೆ. ಆ ಒಂದು ವ್ಯಕ್ತಿಗೆ ಮಹಾನ್ ಕಲಾವಿದರಿಗೆ ಅವ್ರ ಹೆಸರಲ್ಲಿ ಅವರ ಸ್ಮರಣಾರ್ಥವಾಗಿ ಕ್ರಿಕೆಟ್ ಪಂದ್ಯಾವಳಿ ಆಡುತ್ತಿರುವುದು ನಿಜಕ್ಕೂ ಸಂತೋಷ. ಅದರಲ್ಲಿ ನಾನು ಭಾಗಿಯಾಗಿದ್ದು, ರಾಜೇಶ್ ಅವಕಾಶ ಕಲ್ಪಿಸಿಕೊಟ್ಟಿದ್ದು, ನನಗೆ ವೈಯಕ್ತಿಕವಾಗಿ ಬಹಳ ಸಂತೋಷವಾಗಿದೆ. ರಾಜೇಶ್ ನನಗೆ ಆತ್ಮೀಯರು. ನನ್ನ ಮೊದಲ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದೇವೆ. ಕ್ರಿಕೆಟ್ ಅನ್ನೋದು ನಿಮಿತ್ತ ಅಷ್ಟೇ. ನಮ್ಮ ಕನ್ನಡ ಚಿತ್ರರಂಗದ ಒಗ್ಗಟ್ಟಾಗಿದ್ದೇವೆ. ನಮ್ಮಲ್ಲಿ ಬಾಂಧವ್ಯ ಇದೆ ಅನ್ನೋದನ್ನು ತೋರಿಸಿಕೊಡುತ್ತದೆ. ಈ ಪಂದ್ಯಾವಳಿ ಯಶಸ್ವಿಯಾಗಲಿ ಎಂದರು.

     

    ಡಾ. ರಾಜ್ ಕಪ್ ಸೀಸನ್ 6 ನಲ್ಲಿ ಒಟ್ಟು 12 ತಂಡಗಳು ಭಾಗಿಯಾಗಲಿದ್ದು, 27 ಮ್ಯಾಚ್ ಗಳು ನಡೆಯಲಿದೆ.  ಡಾಲಿ ಧನಂಜಯ್, ಅನಿರುದ್ದ, ಡಾರ್ಲಿಂಗ್ ಕೃಷ್ಣ , ಅಭಿಷೇಕ್ ಅಂಬರೀಶ್, ನೀನಾಸಂ ಸತೀಶ್, ಲೂಸ್ ಮಾದ ಯೋಗಿ, ವಶಿಷ್ಠ ಸಿಂಹ, ಪ್ರಜ್ವಲ್, ಕೋಮಲ್, ಶ್ರೀನಗರ ಕಿಟ್ಟಿ, ರಾಜುಗೌಡ ನೇತೃತ್ವದ ತಂಡಗಳು ಪಾಲ್ಗೊಳ್ಳಲಿವೆ. ಇನ್ನು, ರಾಜ್ ಕಪ್ ಸೀಸನ್ 6ರ ಲೀಗ್ ಮ್ಯಾಚ್ ಗಳು ವಿದೇಶದಲ್ಲಿ ನಡೆಯಲಿದೆ. ಈ ಬಾರಿ ಲೀಗ್ ಪಂದ್ಯಗಳು ಶ್ರೀಲಂಕಾ, ಸಿಂಗಾಪುರ, ಮಲೇಷ್ಯಾ ಬ್ಯಾಂಕಾಕ್ ಮತ್ತು ದುಬೈನಲ್ಲಿ ನಡೆಯಲಿವೆ. ಈ ಮಹತ್ವದ ರಾಜ್ ಕಪ್ ಟೂರ್ನಿಗಾಗಿ ಸ್ಯಾಂಡಲ್ ವುಡ್ ತಾರೆಯರು, ತಂತ್ರಜ್ಞರ, ರಾಜಕೀಯ, ಮಾಧ್ಯಮದವರು ಭಾಗಿಯಾಗಲಿದ್ದಾರೆ.

  • ಪ್ರೇಮಿಗಳ ದಿನಕ್ಕೆ ದುನಿಯಾ ವಿಜಯ್ ಕೊಟ್ಟ ಸ್ಪೆಷಲ್ ಗಿಫ್ಟ್

    ಪ್ರೇಮಿಗಳ ದಿನಕ್ಕೆ ದುನಿಯಾ ವಿಜಯ್ ಕೊಟ್ಟ ಸ್ಪೆಷಲ್ ಗಿಫ್ಟ್

    ಲ್ಲೆಡೆ ಇಂದು ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತಿದೆ. ಈ ದಿನಕ್ಕಾಗಿ ತಮ್ಮ ಅಭಿಮಾನಿಗಳಿಗೆ ದುನಿಯಾ ವಿಜಯ್ ಸ್ಪೆಷಲ್ ಉಡುಗೊರೆಯನ್ನು ನೀಡಿದ್ದಾರೆ. ಇವರ ನಿರ್ದೇಶನ ಮತ್ತು ನಟನೆಯಲ್ಲಿ ಮೂಡಿ ಬರುತ್ತಿರುವ ಭೀಮಾ ಸಿನಿಮಾದ ನಾಯಕಿಯನ್ನು ಪರಿಚಯಿಸಿದ್ದು, ಫಸ್ಟ್ ಲುಕ್ ಕೂಡ ಬಿಡುಗಡೆ ಮಾಡಿದ್ದಾರೆ. ನಾಯಕಿಯ ಫಸ್ಟ್ ಲುಕ್ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

    ಸಲಗ ಸಿನಿಮಾದ ನಂತರ ಮೂಡಿ ಬರುತ್ತಿರುವ ಭೀಮ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಇವೆ. ಸಲಗ ಸಕ್ಸಸ್ ನಲ್ಲಿರುವ ದುನಿಯಾ ವಿಜಯ್, ತಮ್ಮ ಮುಂದಿನ ನಿರ್ದೇಶನದ ಸಿನಿಮಾ ಯಾವ ರೀತಿಯಲ್ಲಿ ಇರಲಿದೆ ಎನ್ನುವುದಕ್ಕೆ ಇಂದು ರಿಲೀಸ್ ಮಾಡಿರುವ ನಾಯಕಿಯ ಫಸ್ಟ್ ಲುಕ್ ಸಾಕ್ಷಿಯಾಗಿದೆ. ಇಡೀ ಸಿನಿಮಾವನ್ನು ಹೊಸ ರೀತಿಯಲ್ಲಿ ಕಟ್ಟುವ ಪ್ರಯತ್ನ ಮಾಡಿದ್ದಾರೆ ವಿಜಯ್. ಹಾಗಾಗಿ ನಾಯಕಿಯ ಕಾಸ್ಟ್ಯೂಮ್ ಮತ್ತು ಚಹರೆಯನ್ನು ಭಿನ್ನವಾಗಿಯೇ ಚಿತ್ರಿಸಿದ್ದಾರೆ. ಇದನ್ನೂ ಓದಿ: ಮಂಗಳೂರಿನಲ್ಲಿ ರಜನಿ ಜೊತೆ ಶಿವರಾಜ್ ಕುಮಾರ್: ಫೋಟೋ ಲೀಕ್

    ಈ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾದವರು ಅಶ್ವಿನಿ. ರಂಗಭೂಮಿ ಹಿನ್ನೆಲೆಯ ಈ ನಟಿ ಈಗಾಗಲೇ ಸಾಕಷ್ಟು ನಾಟಕಗಳಲ್ಲೂ ಅಭಿನಯಿಸಿದ್ದಾರೆ. ರಂಗಭೂಮಿಯ ಪ್ರತಿಭೆಯನ್ನು ಈ ಬಾರಿ ತಮ್ಮ ಸಿನಿಮಾಗಾಗಿ ಆಯ್ಕೆ ಮಾಡಿಕೊಂಡಿದ್ದಾರೆ ದುನಿಯಾ ವಿಜಯ್. ಈ ಸಿನಿಮಾದಲ್ಲಿ ಅಶ್ವಿನಿ ಯಾವ ರೀತಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವ ಕುರಿತು ಯಾವುದೇ ಮಾಹಿತಿ ನೀಡದೇ ಇದ್ದರೂ, ಬಿಡುಗಡೆ ಆಗಿರುವ ಫಸ್ಟ್ ಲುಕ್ ನಾನಾ ಸುದ್ದಿಗಳನ್ನು ನೀಡುತ್ತಿದೆ.

    ದುನಿಯಾ ವಿಜಯ್ ನಿರ್ದೇಶನದ ಎರಡನೇ ಸಿನಿಮಾವಿದು. ಸಲಗ ಅವರ ವೃತ್ತಿ ಬದುಕಿಗೆ ಮತ್ತೊಂದು ಬ್ರೇಕ್ ನೀಡಿದ ಸಿನಿಮಾ. ಬಾಕ್ಸ್ ಆಫೀಸನಲ್ಲಿ ಸಖತ್ ಸದ್ದು ಮಾಡಿತ್ತು. ಹಾಗಾಗಿ ಎರಡನೇ ಸಿನಿಮಾಗೆ ಬೇಡಿಕೆ ಸಾಕಷ್ಟಿದೆ. ನೋಡುಗರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗಾಗಲೇ ಹಲವು ಹಂತಗಳಲ್ಲಿ ಸಿನಿಮಾದ ಶೂಟಿಂಗ್ ಕೂಡ ಮುಗಿಸಿದ್ದಾರೆ ವಿಜಯ್.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಗಂಧದ ಗುಡಿ ಚಿತ್ರಕ್ಕೆ ‘ಜರ್ನಿ ಟು ರಿಮೆಂಬರ್’ ಅಂತ ಹೆಸರಿಟ್ಟು, ಅದನ್ನು ಬಿಟ್ಟಿದ್ದೇಕೆ?

    ಗಂಧದ ಗುಡಿ ಚಿತ್ರಕ್ಕೆ ‘ಜರ್ನಿ ಟು ರಿಮೆಂಬರ್’ ಅಂತ ಹೆಸರಿಟ್ಟು, ಅದನ್ನು ಬಿಟ್ಟಿದ್ದೇಕೆ?

    ಪುನೀತ್ ರಾಜ್ ಕುಮಾರ್ ಕನಸಿನ ಪ್ರಾಜೆಕ್ಟ್ ಗಂಧದ ಗುಡಿಯ (Gandhad Gudi) ‘ಜರ್ನಿ ಆಫ್ ಗಂಧದಗುಡಿ’ ವಿಡಿಯೋ ಬಿಡುಗಡೆ ಆಗಿದೆ. ಈ ಪ್ರಾಜೆಕ್ಟ್ ಹಿಂದಿನ ಕಥೆಯನ್ನು ನಿರ್ದೇಶಕ  ಅಮೋಘ ವರ್ಷ ಹಾಗೂ ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಸವಿವರವಾಗಿ ಹಂಚಿಕೊಂಡಿದ್ದಾರೆ. ಗಂಧದ ಗುಡಿ ಶುರುವಾಗಿದ್ದು ಹೇಗೆ? ಅದನ್ನು ಮೊದಲು ಯಾವ ಹೆಸರಿನಿಂದ ಪ್ರಾರಂಭಿಸಲಾಯಿತು. ನಂತರ ಏನೆಲ್ಲ ಬದಲಾವಣೆಗಳು ಆದವು ಎನ್ನುವ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

    ನಿರ್ದೇಶಕ ಅಮೋಘ ವರ್ಷ ಪ್ರಕೃತಿಯ ಸೌಂದರ್ಯ, ಕಾಡು ಮೇಡುಗಳ ಅಚ್ಚರಿಗಳನ್ನು ಚಿತ್ರೀಕರಿಸಿ ಪುನೀತ್ (Puneeth Rajkumar) ಅವರ ಮುಂದಿಟ್ಟಾಗ ಸ್ವತಃ ಅಪ್ಪು ಅವರೇ ಅದನ್ನು ಬೆರಗಿನಿಂದ ನೋಡಿದರಂತೆ. ಅಲ್ಲದೇ, ತಮ್ಮ ಆಸೆಗಳನ್ನೂ ಅಮೋಘ ಜೊತೆ ಹಂಚಿಕೊಂಡಿದ್ದರಂತೆ. ಈ ಕನಸಿಗೆ ಅವರು ಇಟ್ಟಿದ್ದ ಹೆಸರು ‘ಜರ್ನಿ ಟು ರಿಮೆಂಬರ್’. ಇದೇ ಹೆಸರಿನಲ್ಲೇ ಮೊದಲು ಪ್ರಾಜೆಕ್ಟ್ ಶುರು ಮಾಡಿದ್ದರಂತೆ. ಆನಂತರ ಇದಕ್ಕೆ ಗಂಧದ ಗುಡಿ ಅಂತ ಹೆಸರಿಟ್ಟಿದ್ದಾರೆ. ಇದನ್ನೂ ಓದಿ:ತುಳುವಿನಲ್ಲೂ ರಿಲೀಸ್ ಆಗಲಿದೆ `ಕಾಂತಾರ’: ರಿಲೀಸ್ ಡೇಟ್ ಫಿಕ್ಸ್

    ಕಾಡಿನಲ್ಲಿ ಜೀವಂತ ಆನೆ ಮತ್ತು ಹುಲಿಯನ್ನು ಒಮ್ಮೆಯಾದರೂ ನೋಡಬೇಕು ಎನ್ನುವುದು ಪುನೀತ್ ಅವರ ಆಸೆಯಾಗಿತ್ತಂತೆ. ಆನೆ ಸಿಗಬಹುದು. ಆದರೆ, ಹುಲಿಯನ್ನು ನೋಡುವುದು ತೀರಾ ಕಷ್ಟ ಮತ್ತು ವಿರಳ. ಆದರೆ, ಪುನೀತ್ ಅವರಿಗೆ ಮೊದಲ ದಿನವೇ ಹುಲಿಯನ್ನು ನೋಡುವಂತಹ ಬಂಪರ್ ಅವಕಾಶ ಸಿಕ್ಕಿತ್ತಂತೆ. ಈ ಕುರಿತು ಅಮೋಘ ಮಾತನಾಡುತ್ತಾ, ‘ಹುಲಿಯನ್ನು ನೋಡಲು ಹತ್ತಾರು ದಿನಗಳ ಕಾದಿದ್ದಿದೆ. ಎಷ್ಟೋ ಜನರಿಗೆ ಮೂರ್ನಾಲ್ಕು ವರ್ಷ ಕಾದರೂ ಸಿಗುವುದಿಲ್ಲ. ಆದರೆ, ಅಪ್ಪು ಅವರಿಗೆ ಮೊದಲ ದಿನವೇ ಹುಲಿ ಕಂಡಿತ್ತು. ಅವರ ಸಂಭ್ರಮಿಸಿದ್ದು ಇನ್ನೂ ಕಣ್ಮುಂದಿದೆ’ ಎಂದಿದ್ದಾರೆ.

    ಪುನೀತ್ ಅವರು ತಾವು ಕಾಡಿಗೆ ಹೋಗುತ್ತೇನೆ ಎಂದು ಹೇಳಿದಾಗ ಪತ್ನಿ ಅಶ್ವಿನಿ (Ashwini) ಅವರಿಗೆ ಸಖತ್ ಭಯವಾಗಿತ್ತಂತೆ. ಇದೆಲ್ಲ ನಿಮಗೆ ಬೇಕಾ ಅಂತಾನೂ ಕೇಳಿದ್ದರಂತೆ. ಆದರೆ, ಪುನೀತ್ ಅವರ ಉತ್ಸಾಹಕ್ಕೆ ಸುಮ್ಮನಾಗಿದ್ದರಂತೆ. ಹಾಗಂತ ಸುಮ್ಮನಿರುವುದಕ್ಕೂ ಆಗುತ್ತಿರಲಿಲ್ಲ. ಪ್ರತಿ ದಿನವೂ ಕಾಲ್ ಮಾಡಿ ಮಾತನಾಡುತ್ತಿದ್ದರು. ಅಲ್ಲಿಯ ಅನುಭವಗಳನ್ನು ಕೇಳಿ ತಿಳಿದುಕೊಳ್ಳುತ್ತಿದ್ದರು ಎಂದು ಸ್ವತಃ ಅಶ್ವಿನಿ ಅವರೇ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದುಷ್ಕರ್ಮಿಗಳಿಂದ ಭಯ ಹುಟ್ಟಿಸೋ ಪ್ರಕರಣ- ನಮಗೆ ಸೂಕ್ತ ರಕ್ಷಣೆ ಬೇಕು: ಹರ್ಷ ಸಹೋದರಿ

    ದುಷ್ಕರ್ಮಿಗಳಿಂದ ಭಯ ಹುಟ್ಟಿಸೋ ಪ್ರಕರಣ- ನಮಗೆ ಸೂಕ್ತ ರಕ್ಷಣೆ ಬೇಕು: ಹರ್ಷ ಸಹೋದರಿ

    ಶಿವಮೊಗ್ಗ: ದುಷ್ಕರ್ಮಿಗಳಿಂದ ಭಯ ಹುಟ್ಟಿಸುವ ಪ್ರಕರಣ ಹಿನ್ನೆಲೆಯಲ್ಲಿ ಇದೀಗ ನಮಗೆ ಸೂಕ್ತ ರಕ್ಷಣೆ ಬೇಕು ಎಂದು ಹಿಂದೂ ಕಾರ್ಯಕರ್ತ ದಿ. ಹರ್ಷ (Harsha) ಸಹೋದರಿ ಅಶ್ವಿನಿ (Ashwini) ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಗೆ ಹರ್ಷ ತಾಯಿ ಪದ್ಮಾವತಿ ಹಾಗೂ ಹರ್ಷ ಸಹೋದರಿ ಅಶ್ವಿನಿ ಮಾತನಾಡಿ, ರಾತ್ರಿ 11.15 ರ ಸಮಯಕ್ಕೆ 3-4 ಬೈಕ್ ನಲ್ಲಿ ಯುವಕರು ಬಂದಿದ್ದರು. ಮಾರಕಾಸ್ತ್ರ ಹಿಡಿದುಕೊಂಡು ಓಡಾಡುತ್ತಿದ್ದರು ಎಂದು ಹೇಳಿದರು.

    ಹರ್ಷನ ತೆಗೆದಿದ್ದು ಸಾಲದಾ, ನಿಮ್ಮನ್ನೂ ತೆಗೆಯಬೇಕಾ. ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಯುವಕರ ಗುಂಪು ಅವಾಜ್ ಹಾಕಿದ್ದಾರೆ. ಇನ್ನು ಎಷ್ಟು ಮಂದಿ ಹಿಂದೂ ಯುವಕರ ಬಲಿಯಾಗಬೇಕು..?. ನನ್ನ ಸಹೋದರ ಹರ್ಷ ಹೋದ, ಪ್ರವೀಣ್ ನೆಟ್ಟಾರ್ (Praveen Nettar) ಹೋದ. ಆದರೂ ಅವರ ದಾಹ ಇನ್ನೂ ತೀರಿಲ್ಲ. ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ನಮಗೆ ಸೂಕ್ತ ರಕ್ಷಣೆ ಕೊಡಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಆಜಾದ್ ನಗರದಲ್ಲಿ ಕಾರು ಜಖಂ – ಹರ್ಷ ಸಹೋದರಿ ಅಶ್ವಿನಿ ವಿರುದ್ಧ FIR

    ಸೀಗೆಹಟ್ಟಿಯ ನಿವಾಸ, ರವಿ ವರ್ಮ ಬೀದಿ, ಕೆ.ಆರ್ ಪುರಂ ರಸ್ತೆ ಮುಂತಾದೆಡೆ 2 ಬೈಕ್‍ಗಳಲ್ಲಿ ಬಂದ 6 ಮಂದಿ ಮುಸ್ಲಿಂ ಯುವಕರು ಮಚ್ಚು-ಲಾಂಗ್ ಹಿಡಿದು ಭಯ ಹುಟ್ಟಿಸಿದ್ದಾರೆ. ಮುಸ್ಲಿಂ ಪರ ಘೋಷಣೆ ಕೂಗುತ್ತಾ, ಲಾಂಗ್ ಬೀಸಿದ್ದಾರೆ. ಮತ್ತೊಂದೆಡೆ ಸಿಗೇಹಟ್ಟಿಯಲ್ಲಿ ದುಷ್ಕರ್ಮಿಗಳಿಂದ ಕಲ್ಲು ತೂರಾಟ ನಡೆದಿದ್ದು, ಪ್ರಕಾಶ್ (25) ಎಂಬಾತ ಗಾಯಗೊಂಡಿದ್ದಾರೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಘಟನೆಗೆ ಸಂಬಂಧಿಸಿ ಹರ್ಷನ ಸಹೋದರಿ ಅಶ್ವಿನಿ ಸೇರಿ 10-15 ಜನರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಫೆ.20ರಂದು ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಕೊಲೆಗೀಡಾಗಿದ್ದ.

    Live Tv
    [brid partner=56869869 player=32851 video=960834 autoplay=true]

  • ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿಗೆ ಏಷ್ಯಾದಿಂದಲೇ ಮೊದಲು, ಕೋಲಾರದ ಮಹಿಳೆ ನೇಮಕ

    ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿಗೆ ಏಷ್ಯಾದಿಂದಲೇ ಮೊದಲು, ಕೋಲಾರದ ಮಹಿಳೆ ನೇಮಕ

    ಕೋಲಾರ: ವಿಶ್ವಸಂಸ್ಥೆಯ (United Nations) ಮಾನವ ಹಕ್ಕು ಸಮಿತಿ ಯುಎನ್‌ಹೆಚ್‌ಆರ್‌ಸಿಗೆ (Special Repporeteur) ಏಷ್ಯಾದಿಂದಲೇ ಪ್ರಥಮ ಬಾರಿಗೆ ಕೋಲಾರ ಜಿಲ್ಲೆಯ ಮಹಿಳೆ ಡಾ.ಕೆ.ಪಿ ಅಶ್ವಿನಿ (Dr. KP Ashwini) ನೇಮಕವಾಗಿದ್ದಾರೆ.

    ಕೋಲಾರ (Kolar) ತಾಲೂಕಿನ ಕಸಬಾ ಕುರುಬರಹಳ್ಳಿ ಗ್ರಾಮದ ವಿ. ಪ್ರಸನ್ನ ಕುಮಾರ್ ಹಾಗೂ ಜಯಮ್ಮ ದಂಪತಿಯ ಜೇಷ್ಠ ಪುತ್ರಿ ಕೆ.ಪಿ ಅಶ್ವಿನಿ ಯವರು ತಮ್ಮ ಪದವಿ ವಿಧ್ಯಾಭ್ಯಾಸವನ್ನು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜು, ಸ್ನಾತಕೋತ್ತರ ಪದವಿಯನ್ನು ಸೇಂಟ್ ಜೋಸೆಫ್ ಕಾಲೇಜು ಹಾಗೂ ಎಂ.ಪಿಲ್, ಪಿಹೆಚ್.ಡಿ ಪದವಿಯನ್ನು ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಪಡೆದಿದ್ದಾರೆ.

    ಅಶ್ವಿನಿ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಕೆಲ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದು, ನಂತರ ಅಮೃಸ್ಟಿ ಇಂಟರ್‌ನ್ಯಾಷನಲ್ ಸಂಸ್ಥೆಯಲ್ಲಿ ಸೇವೆ ಮಾಡುತ್ತಾ ಒಡಿಸ್ಸಾ ಮತ್ತು ಛತ್ತೀಸ್‌ಗಢ ರಾಜ್ಯಗಳ ಆದಿವಾಸಿಗಳ ಪ್ರದೇಶಗಳಲ್ಲಿ ಗಣಿಗಾರಿಕೆಯಿಂದ ಅವರ ಮೇಲೆ ಬೀರಿರುವ ಪರಿಣಾಮಗಳ ಬಗ್ಗೆ ವಿಶೇಷ ಅಧ್ಯಯನ ಮಾಡಿದ್ದಾರೆ. ಇದನ್ನೂ ಓದಿ: ತಕ್ಷಣ ಉಕ್ರೇನ್‌ನಿಂದ ಹೊರಟುಬಿಡಿ – ವಿದ್ಯಾರ್ಥಿಗಳು, ನಾಗರಿಕರಿಗೆ ಭಾರತ ತುರ್ತು ಸಲಹೆ

    ಕಳೆದ 4 ವರ್ಷಗಳಿಂದ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಅಶ್ವಿನಿ, ಮೂಲತಃ ಅಂಬೇಡ್ಕರ್‌ವಾದಿಯಾಗಿದ್ದು, ದಲಿತ ಚಳುವಳಿಗಳಲ್ಲಿ ಕರ್ನಾಟಕ ಮತ್ತು ವಿದೇಶಗಳಲ್ಲಿ ಹೋರಾಟದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದಿದ್ದಾರೆ.

    ಪ್ರಸ್ತುತ ಇವರು ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿ ಯುಎನ್‌ಹೆಚ್‌ಆರ್‌ಸಿ (Special Repporeteur)ಗೆ ನೇಮಕವಾಗಿದ್ದಾರೆ. ಜಿನೀವಾ ಮೂಲದ 47 ಸದಸ್ಯರ ವಿಶ್ವಸಂಸ್ಥೆಯ ಮಾನವ ಹಕ್ಕು ಸಂಸ್ಥೆ, ಡಾ. ಅಶ್ವಿನಿ ಅವರ ನೇಮಕಾತಿಯನ್ನು ಅನುಮೋದಿಸಿದೆ. ಇದೀಗ ಅಶ್ವಿನಿ ವರ್ಣಬೇಧ, ಕೈನೋಫೋಬಿಯಾ ಅಸಹಿಷ್ಣುತೆಗೆ ಸಂಬಂಧಿಸಿದ ವಿಷಯಗಳನ್ನು ನಿರ್ವಹಿಸಲಿದ್ದಾರೆ.

    ಕೋಲಾರ ಜಿಲ್ಲೆಯ ನಿವಾಸಿ ಡಾ.ಕೆ.ಪಿ ಅಶ್ವಿನಿ ಅವರು ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿ ಯುಎನ್‌ಹೆಚ್‌ಆರ್‌ಸಿಗೆ ನೇಮಕವಾಗಿರುವುದು ಕೋಲಾರ ಜಿಲ್ಲೆಯ ಜನತೆಗೆ ಹೆಮ್ಮೆಯ ವಿಷಯವಾಗಿದೆ. ಇವರು ಇನ್ನಷ್ಟು ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಲಿ ಎಂದು ಕೋಲಾರ ಜಿಲ್ಲೆಯ ಜನತೆ ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ದೀಪಾವಳಿಯಲ್ಲಿ ನಿಷೇಧಿತ ಪಟಾಕಿ ಸಿಡಿಸಿದ್ರೆ 6 ತಿಂಗಳು ಜೈಲು ಶಿಕ್ಷೆ

    Live Tv
    [brid partner=56869869 player=32851 video=960834 autoplay=true]