Tag: ashwath narayana

  • ಬೆಂಗಳೂರಿನಲ್ಲಿ ರಸ್ತೆಗುಂಡಿ ಮುಚ್ಚುವ ಮೂಲಕ ಸಾಂಕೇತಿಕ ಹೋರಾಟ – ಅಶ್ವತ್ಥ ನಾರಾಯಣ್

    ಬೆಂಗಳೂರಿನಲ್ಲಿ ರಸ್ತೆಗುಂಡಿ ಮುಚ್ಚುವ ಮೂಲಕ ಸಾಂಕೇತಿಕ ಹೋರಾಟ – ಅಶ್ವತ್ಥ ನಾರಾಯಣ್

    – ಬುಧವಾರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರಸ್ತೆ ತಡೆ

    ಬೆಂಗಳೂರು: ಅಭಿವೃದ್ಧಿ ಶೂನ್ಯತೆ ಹಾಗೂ ರಸ್ತೆ ಗುಂಡಿಯ ವಿಷಯವನ್ನು ಸರ್ಕಾರಕ್ಕೆ ಮನವರಿಕೆ ಮಾಡುವ ದೃಷ್ಟಿಯಿಂದ ರಾಜ್ಯದ ಎಲ್ಲ ಕಡೆ ಬುಧವಾರ (ಸೆ.24) ರಸ್ತೆ ತಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ್ (Ashwath Narayana) ಅವರು ತಿಳಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ (Bengaluru) ರಸ್ತೆ ಗುಂಡಿಗಳನ್ನು ಮುಚ್ಚುವ ಮೂಲಕ ಸಾಂಕೇತಿಕವಾಗಿ ಹೋರಾಟ ಮಾಡುತ್ತೇವೆ. ಕಾಂಗ್ರೆಸ್ (Congress) ಸರ್ಕಾರವು ಜನವಿರೋಧಿಯಾಗಿದ್ದು, ಆಡಳಿತದಲ್ಲಿ ವಿಫಲವಾಗಿದೆ. ಜನರನ್ನು ಬೆದರಿಸುವ ಸರ್ಕಾರವಾಗಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ವರ್ತನೆಯನ್ನು ಖಂಡಿಸಿ ಮತ್ತು ತಕ್ಷಣ ರಸ್ತೆಗಳ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ಕೊಪ್ಪಳ ಯಲ್ಲಾಲಿಂಗನ ಕೊಲೆ ಪ್ರಕರಣ – ಅ.3ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್

    ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ದಿನದಿಂದಲೂ ಸಂಪೂರ್ಣವಾಗಿ ಅಭಿವೃದ್ಧಿ ಕುಂಠಿತವಾಗಿದೆ. ರಸ್ತೆಗಳು ಎಲ್ಲೆಡೆ ಸಂಪೂರ್ಣವಾಗಿ ಹಾಳಾಗಿವೆ. ಎಲ್ಲ ಕಡೆ ಗುಂಡಿಯಲ್ಲಿ ರಸ್ತೆ ಇದೆ. ಇಷ್ಟೊಂದು ತೆರಿಗೆ ಹೇರಿದ ಮೇಲೂ ಹೀಗಾಗಿದೆ. ಬೆಲೆ ಏರಿಕೆ, ತೆರಿಗೆಗಳ ಮೂಲಕ ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 1.5 ಲಕ್ಷ ಕೋಟಿ ರೂ. ಆದಾಯ ಪಡೆದುಕೊಂಡಿದೆ. ಗ್ಯಾರಂಟಿಗೆ 90 ಸಾವಿರ ಕೋಟಿ ರೂ. ಖರ್ಚಾಗಿರಬಹುದು. ಇನ್ನೊಂದೆಡೆ ಸುಮಾರು 39 ಸಾವಿರ ಕೋಟಿ ರೂ. ಎಸ್‌ಇಪಿ, ಟಿಎಸ್‌ಪಿ ಹಣವನ್ನೂ ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿದ್ದಾರೆ.

  • ಹಿಂದೂಗಳ ಮೇಲೆ ಲಾಠಿಚಾರ್ಜ್ ಯಾಕೆ? ಕಲ್ಲೆಸೆದವರ ಮೇಲೆ ಪೊಲೀಸರು ಪೌರುಷ ತೋರಿಸಲಿ – ಅಶ್ವಥ್ ನಾರಾಯಣ

    ಹಿಂದೂಗಳ ಮೇಲೆ ಲಾಠಿಚಾರ್ಜ್ ಯಾಕೆ? ಕಲ್ಲೆಸೆದವರ ಮೇಲೆ ಪೊಲೀಸರು ಪೌರುಷ ತೋರಿಸಲಿ – ಅಶ್ವಥ್ ನಾರಾಯಣ

    ಮಂಡ್ಯ: ಪೊಲೀಸರು ಹಿಂದೂಗಳ ಮೇಲೆ ಲಾಠಿಚಾರ್ಜ್ ಮಾಡುತ್ತಿದ್ದಾರೆ. ಅದರ ಬದಲು ಕಲ್ಲೆಸೆದವರ ಮೇಲೆ ಪೊಲೀಸರು ತಮ್ಮ ಪೌರುಷ ತೋರಿಸಲಿ ಎಂದು ಶಾಸಕ ಡಾ.ಸಿ.ಎನ್ ಅಶ್ವಥ್ ನಾರಾಯಣ (Ashwath Narayana) ಆಗ್ರಹಿಸಿದರು.

    ಮದ್ದೂರು (Maddur) ಕಲ್ಲು ತೂರಾಟ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನ್ಯಾಯಕ್ಕಾಗಿ ಪ್ರತಿಭಟಿಸಿದ ಹಿಂದೂಗಳ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡುತ್ತಿದ್ದಾರೆ. ಅದರ ಬದಲು ಕಲ್ಲೆಸೆದವರ ಮೇಲೆ ಪೊಲೀಸರು ತಮ್ಮ ಪೌರುಷ ತೋರಿಸಲಿ. ಪೊಲೀಸ್ ಇಲಾಖೆ ಸರ್ಕಾರದ ಓಲೈಕೆಗಷ್ಟೇ ಸೀಮಿತವಾಗಿದೆ. ಪೋಸ್ಟಿಂಗ್ ಸಲುವಾಗಿ ಪೊಲೀಸ್ ಇಲಾಖೆ ಓಲೈಕೆಗಿಳಿದಿದೆ. ಹೀಗಾಗಿ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಈ ವ್ಯವಸ್ಥೆ ಮೇಲೆ ಜನರು ವಿಶ್ವಾಸ ಕಳ್ಕೊಂಡಿದ್ದಾರೆ. ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಸತ್ತು ಹೋಗಿದೆ, ಅಮಾಯಕರು ಬಲಿಯಾಗ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ಸರ್ಕಾರದ ಓಲೈಕೆ ರಾಜಕಾರಣವೇ ಮದ್ದೂರು ಗಲಭೆಗೆ ಕಾರಣ: ಬಸವರಾಜ ಬೊಮ್ಮಾಯಿ ಕಿಡಿ

    ಇನ್ನೂ ಅನ್ಯಧರ್ಮದ ವ್ಯಕ್ತಿಗಳು ಮತ್ತು ಸಮುದಾಯದವರು ಗಣೇಶೋತ್ಸವದ ಮೆರವಣಿಗೆ, ಹಿಂದೂ ಸಂಸ್ಕೃತಿ ಅರ್ಥ ಮಾಡಿಕೊಳ್ಳಬೇಕು. ಇತರ ಧರ್ಮದ ಆಚರಣೆಗೆ ಗೌರವ ಕೊಡಬೇಕು, ಒಪ್ಕೋಬೇಕು. ನಾವು ಇರಾನ್, ಪಾಕಿಸ್ತಾನ, ಸೌದಿಯಲ್ಲಿಲ್ಲ. ಭಾರತದಲ್ಲಿದ್ದೇವೆ. ಭಾರತದ ಸಂಸ್ಕೃತಿ, ಆಚರಣೆಗೆ ಅವಕಾಶವೇ ಇಲ್ಲದಂತಾಗಿದೆ. ಇದು ಪದೇ ಪದೇ ಅತಿರೇಕಕ್ಕೆ ಹೋಗ್ತಿದೆ. ಮೊನ್ನೆ ಇದೇ ಸ್ಥಳದಲ್ಲಿ ಈದ್ ಮಿಲಾದ್ ಮೆರವಣಿಗೆ ನಡೆದಿತ್ತು. ಆಗ ಹಿಂದೂಗಳು ಕಲ್ಲೆಸೆದಿದ್ರಾ ಎಂದು ಆಕ್ರೋಶ ಹೊರಹಾಕಿದರು.

    ಇದೇ ವೇಳೆ ಚಲುವರಾಯಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾವು ಏನು ಕುಮ್ಮಕ್ಕು ಕೊಟ್ಟಿದ್ದೀವಿ? ನಿಮಗೆ ಬುದ್ಧಿ ಕೆಟ್ಟಿದೆಯಾ? ನೀವು ಹೇಗೆ ಈ ಥರ ಮಾತಾಡ್ತೀರಿ? ಗಣೇಶ ಹಬ್ಬಕ್ಕೆ ನಮ್ಮ ಕುಮ್ಮಕ್ಕೇನಿರುತ್ತೆ? ಚಲುವರಾಯಸ್ವಾಮಿ ದುರಹಂಕಾರದ ಮಾತುಗಳನ್ನು ಬಿಡಲಿ. ಮೂಲೆಗೆ ಸೇರಿದ್ರು ಈಗ ಮತ್ತೆ ಮೂಲೆಗೆ ಸೇರುತ್ತೀರಾ? ಈ ರೀತಿ ಅಹಂಕಾರದ ಮಾತು ಬಿಟ್ಟು ಜವಾಬ್ದಾರಿ ನಿಭಾಯಿಸಿ ಎಂದರು.ಇದನ್ನೂ ಓದಿ: ನಾಳೆ ಮದ್ದೂರು ಸ್ವಯಂ ಪ್ರೇರಿತ ಬಂದ್‌ಗೆ ಕರೆ – ಹಿಂದೂ ಮುಖಂಡರ ತೀರ್ಮಾನ

  • ಅಧಿಕಾರ ದುರ್ಬಳಕೆ ಮೂಲಕ ಚುನಾವಣೆ ಗೆಲ್ಲುವ ಹುನ್ನಾರ, ಬ್ಯಾಲೆಟ್ ವಿರೋಧಿಸುತ್ತೇವೆ: ಅಶ್ವಥ್ ನಾರಾಯಣ

    ಅಧಿಕಾರ ದುರ್ಬಳಕೆ ಮೂಲಕ ಚುನಾವಣೆ ಗೆಲ್ಲುವ ಹುನ್ನಾರ, ಬ್ಯಾಲೆಟ್ ವಿರೋಧಿಸುತ್ತೇವೆ: ಅಶ್ವಥ್ ನಾರಾಯಣ

    ಬೆಂಗಳೂರು: ಅಧಿಕಾರಿ ದುರ್ಬಳಕೆ ಮೂಲಕ ಚುನಾವಣೆ ಗೆಲ್ಲುವ ಹುನ್ನಾರವಿದು ಎಂದು  ಬಿಜೆಪಿ (BJP) ಶಾಸಕ ಅಶ್ವಥ್ ನಾರಾಯಣ (Ashwath Narayana) ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಸರ್ಕಾರದ ಬ್ಯಾಲೆಟ್ ಪೇಪರ್ ಚುನಾವಣಾ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನವರು (Congress) ಎಲ್ಲದರಲ್ಲೂ ಹಸ್ತಕ್ಷೇಪ ಮಾಡುವ ದುರುದ್ದೇಶ ಇಟ್ಟುಕೊಂಡಿದ್ದಾರೆ. ಜನರ ಕೋಪ ಮುಗಿಲಿಗೇರಿದೆ. ಈ ಆಕ್ರೋಶವನ್ನು ಚುನಾವಣೆಯಲ್ಲಿ ತೋರಿಸುತ್ತಾರೆ ಎಂಬ ಭಯ ಇದೆ. ಹಾಗಾಗಿ ಬ್ಯಾಲೆಟ್ ಪೇಪರ್‌ಗೆ ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.ಇದನ್ನೂ ಓದಿ: ಕರ್ನಾಟಕದಲ್ಲಿ‌ ಬ್ಯಾಲೆಟ್ ಪೇಪರ್ ಎಲೆಕ್ಷನ್: ಕಾನೂನು ತರಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ

    ತಂತ್ರಜ್ಞಾನದ ಜಗತ್ತಿನಲ್ಲಿ ಯಾರಾದರೂ ಮತ್ತೆ ಹಿಂದಕ್ಕೆ ಹೋಗ್ತಾರಾ? ಇವರು ಮಾಡುವಂತಹ ಕ್ರಮ ರಾಜ್ಯವನ್ನು ಹಿಂದಕ್ಕೆ ತೆಗೆದುಕೊಂಡು ಹೋಗುವಂತದ್ದು. ಬ್ಯಾಲೆಟ್ ಪೇಪರ್ (Ballot Paper) ಮೂಲಕ ಚುನಾವಣೆ ಸಾಧ್ಯವಿಲ್ಲ ಎಂದು ಈ ಹಿಂದೆ ಕಾಂಗ್ರೆಸ್ ಅರ್ಥ ಮಾಡಿಕೊಂಡಿತ್ತು. ಅಧಿಕಾರ ಹಾಗೂ ಗೂಂಡಾಗಿರಿ ಮಾಡಬೇಕು. ಅಧಿಕಾರಗಳ ವ್ಯವಸ್ಥೆ ದುರ್ಬಳಕೆ ಮೂಲಕ ಚುನಾವಣೆ ಗೆಲ್ಲಬೇಕೆಂದು ಈ ನಿಯಮ ತರುತ್ತಿದ್ದಾರೆ. ಇದು ಪ್ರಗತಿಪರವಾದ ನಿರ್ಣಯವಲ್ಲ ಎಂದು ಕಿಡಿಕಾರಿದ್ದಾರೆ.

    ಇದು ಕಳಪೆ, ಕೀಳುಮಟ್ಟದ ಯೋಚನೆ. ಈ ಕ್ರಮ ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ವಿರುದ್ಧವಾಗಿದೆ. ಇದನ್ನು ನಾವು ಸಂಪೂರ್ಣವಾಗಿ ವಿರೋಧಿಸುತ್ತೇವೆ. ಇದರ ವಿರುದ್ಧ ರಾಜಕೀಯವಾಗಿ ಹಾಗೂ ಕಾನೂನಾತ್ಮಕವಾಗಿ ಹೋರಾಡುತ್ತೇವೆ. ಅವರ ಉದ್ದೇಶ ದುರ್ಬಲ ಅಷ್ಟೇ, ಸುದುದ್ದೇಶ ಅಲ್ಲ ಎಂದು ಆಕ್ರೋಶ ಹೊರಹಾಕಿದರು.ಇದನ್ನೂ ಓದಿ: ಧರ್ಮಸ್ಥಳ ಕೇಸ್ NIAಗೆ ಇಲ್ಲ – ಸಿಎಂ ಪರೋಕ್ಷ ಹೇಳಿಕೆ

  • ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಹೇಗೆ ಮಾಡಬೇಕು ಅನ್ನೋದು ನನಗೆ ಗೊತ್ತಿದೆ: ಡಿಕೆಶಿ

    ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಹೇಗೆ ಮಾಡಬೇಕು ಅನ್ನೋದು ನನಗೆ ಗೊತ್ತಿದೆ: ಡಿಕೆಶಿ

    ಬೆಂಗಳೂರು: ರಾಮನಗರವನ್ನು (Ramanagara) ಬೆಂಗಳೂರು ದಕ್ಷಿಣ ಜಿಲ್ಲೆ (Bengaluru South District) ಎಂದು ಹೇಗೆ ಬದಲಾಯಿಸಬೇಕು ಎನ್ನುವುದು ನನಗೆ ಗೊತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಹೇಳಿದ್ದಾರೆ.

    ರಿಯಲ್ ಎಸ್ಟೇಟ್‌ಗಾಗಿ (Real Estate) ರಾಮನಗರ ಹೆಸರನ್ನು ಬದಲಾಯಿಸಲಾಗಿದೆ ಎಂದು ಅಶ್ವತ್ಥನಾರಾಯಣ (Ashwath Narayana) ಹೇಳಿಕೆಗೆ ತಿರುಗೇಟು ನೀಡಿದ ಅವರು, ಇವರು ಬೆಂಗಳೂರಿಗೆ ಬಂದಿದ್ದು ಯಾಕೆ? ಕನಕಪುರದವರಿಗೆ, ರಾಮನಗರದವರಿಗೆ ಏನೂ ಬೇಡ್ವಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಬೆಟ್ಟಿಂಗ್‌ ಆಪ್‌ ಪ್ರಚಾರ – ದೇವರಕೊಂಡ, ಪ್ರಕಾಶ್‌ ರಾಜ್‌, ರಾಣಾ ಸೇರಿದಂತೆ 25 ಮಂದಿ ಮೇಲೆ ಕೇಸ್‌

    ಬೆಂಗಳೂರು ದಕ್ಷಿಣ ಜಿಲ್ಲೆ ಹೇಗೆ ಮಾಡ್ಬೇಕು ನಮಗೆ ಗೊತ್ತು, ರಾಮನಗರ ಹೆಸರು ಬರಬಾರದು ಎಂದು ಯಾರನ್ನು ಭೇಟಿ ಮಾಡಿದ್ದಾರೆ ಎನ್ನುವುದು ಗೊತ್ತಿದೆ. ಸಂವಿಧಾನದಲ್ಲಿ ಯಾರನ್ನ ಕೇಳ್ಬೇಕು ಅಂತೇನಿಲ್ಲ. ರಾಮನಗರ ಜಿಲ್ಲೆಯ ಹೆಸರನ್ನು ನಾವು ಬದಲಾವಣೆ ಮಾಡುತ್ತೇವೆ ಎಂದರು.

  • ಅಂಬೇಡ್ಕರ್ ಸೋಲಿಸುವುದಕ್ಕೆ ಸಾವರ್ಕರ್ ಕಾರಣ – ಪ್ರಿಯಾಂಕ್ ಖರ್ಗೆ, ಅಶ್ವಥ್ ನಾರಾಯಣ್ ನಡುವೆ ದಾಖಲೆ ಜಟಾಪಟಿ

    ಅಂಬೇಡ್ಕರ್ ಸೋಲಿಸುವುದಕ್ಕೆ ಸಾವರ್ಕರ್ ಕಾರಣ – ಪ್ರಿಯಾಂಕ್ ಖರ್ಗೆ, ಅಶ್ವಥ್ ನಾರಾಯಣ್ ನಡುವೆ ದಾಖಲೆ ಜಟಾಪಟಿ

    ಬೆಂಗಳೂರು: ಅಂಬೇಡ್ಕರ್ ಸೋಲಿಸುವುದಕ್ಕೆ ಸಾವರ್ಕರ್ ಕಾರಣ ಎಂಬ ಹೇಳಿಕೆ ವಿಚಾರವಾಗಿ ಬಿಜೆಪಿ ನಾಯಕರು, ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ನಡುವೆ ಜಟಾಪಟಿ ಮುಂದುವರಿದಿದೆ.

    ವಿಧಾನಸೌಧದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಸಾವರ್ಕರ್ ಅವರು ಅಂಬೇಡ್ಕರ್ ಅವರ ಸೋಲಿಗೆ ಸಂಚು ಮಾಡಿದ್ದರು. ಈ ಕುರಿತು ದಾಖಲೆ ಬಿಡುಗಡೆ ಮಾಡಿದರೆ ಬಿಜೆಪಿಯವರು ರಾಜೀನಾಮೆ ಕೊಡುತ್ತೀವಿ ಎಂದು ಹೇಳಿದ್ದರು. ಈಗ ದಾಖಲೆ ಬಿಡುಗಡೆ ಮಾಡಿದ್ದೇವೆ. ರಾಜೀನಾಮೆ ಕೊಡಲಿ. ಅಂಬೇಡ್ಕರ್ ಅವರು 1952ರಲ್ಲಿ ಅವರ ಸ್ನೇಹಿತರಿಗೆ ಪತ್ರ ಬರೆಯುತ್ತಾರೆ. ನಾನು ಸೋತಿರುವುದು ದಾಂಗೆ ಮತ್ತು ಸಾರ್ವಕರ್ ಅವರಿಂದ ಎಂದು ಪತ್ರದಲ್ಲಿ ಇದೆ. ಅಂಬೇಡ್ಕರ್ ಅವರೇ ಲಿಖಿತವಾಗಿ ಬರೆದಿದ್ದಾರೆ ಎಂದು ಹೇಳಿದರು.ಇದನ್ನೂ ಓದಿ: ಎಲ್ಲಾ ರೈತರಿಗೂ ಶೂನ್ಯ ಬಡ್ಡಿ ದರದಲ್ಲಿ ಬೆಳೆ ಸಾಲ ಕೊಡಲು ಸಾಧ್ಯವಿಲ್ಲ: ಕೆ.ಎನ್.ರಾಜಣ್ಣ

    ಇನ್ನೂ ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ ಮಾತನಾಡಿ, ಅವರು ದಾಖಲೆ ಬಿಡುಗಡೆ ಮಾಡಿದ್ದಾರೆ. ಆದರೆ ನಮ್ಮ ಕಡೆಗೆ ಸಾಕಷ್ಟು ದಾಖಲೆಗಳಿವೆ, ಅದನ್ನು ಬಿಡುಗಡೆ ಮಾಡ್ತೀವಿ. ಪ್ರಿಯಾಂಕ್ ಖರ್ಗೆ ಅವರು ಅಲ್ಪಸ್ವಲ್ಪ ಓದಿರುತ್ತಾರೆ. ಪೂರ್ತಿಯಾಗಿ ನಮ್ಮ ಕಡೆಯಿರುವ ದಾಖಲೆ ಕೊಡ್ತೀವಿ ಎಂದು ತಿರುಗೇಟು ನೀಡಿದರು.

    ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಹೇಗೆ ನಡೆಸಿಕೊಂಡಿದ್ದಾರೆ, ಹೇಗೆ ಕಡೆಗಣಿಸಿದ್ದರು ಎನ್ನುವುದನ್ನು ಬಹಿರಂಗ ಮಾಡ್ತೀವಿ. ಅವರನ್ನು ರಾಜಕೀಯವಾಗಿ ಬೆಳೆಯಲು ಬಿಡಲಿಲ್ಲ, ತುಳಿಯುವ ಕೆಲಸ ಮಾಡಿದರು. ಸತ್ಯ ಅಂದ್ರೆ ಕಾಂಗ್ರೆಸ್‌ಗೆ ಯಾವಾಗಲೂ ಕಹಿ. ಸತ್ಯ ಹೇಳಿದರೆ ಅವರಿಗೆ ಮೈ ಉರಿಯುತ್ತದೆ. ಅವರು ಸನಾತನ ಧರ್ಮದ ಬಗ್ಗೆಯೂ ಕೀಳಾಗಿ ಮಾತನಾಡುತ್ತಾರೆ. ನಾವೂ ಎಲ್ಲ ಸವಾಲು ಸ್ವೀಕರಿಸುತ್ತೇವೆ. ಬಾಯಿಗೆ ಬಂದಿದ್ದು ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ಒತ್ತುವರಿ ಆಗಿದ್ರೆ ತೆರವು ಮಾಡಿಕೊಳ್ಳಿ, ನಮ್ಮ ಜಮೀನು ಹುಡುಕಿಕೊಡಿ – ಭೂ ದಾಖಲೆಗಳ ಇಲಾಖೆಗೆ ಹೆಚ್‌ಡಿಕೆ ಪತ್ರ

  • ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸರ್ವರ್ ಸಮಸ್ಯೆ – ಕೈತಪ್ಪಿದ ಸಾವಿರಾರು ಕೋಟಿ ಆದಾಯ: ಅಶ್ವಥ್ ನಾರಾಯಣ್

    ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸರ್ವರ್ ಸಮಸ್ಯೆ – ಕೈತಪ್ಪಿದ ಸಾವಿರಾರು ಕೋಟಿ ಆದಾಯ: ಅಶ್ವಥ್ ನಾರಾಯಣ್

    ಬೆಂಗಳೂರು: ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ 28 ದಿನಗಳಿಂದ ಯಾವ ಸಾಫ್ಟ್‌ವೇರ್‌ ಕೂಡ ಕೆಲಸ ಮಾಡುತ್ತಿಲ್ಲ ಎಂದು ಬಿಜೆಪಿ (BJP) ರಾಜ್ಯ ಮುಖ್ಯ ವಕ್ತಾರ ಅಶ್ವಥ್ ನಾರಾಯಣ್ (Ashwath Narayana) ಸರ್ಕಾರದ ವಿರುದ್ಧ ಕಿಡಿಕಾರಿದರು.

    ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇ-ಖಾತೆ ಇಲ್ಲದೆ ನೋಂದಣಿ ಇಲ್ಲ ಎಂಬ ಹೊಸ ಷರತ್ತನ್ನು ಜಾರಿ ಮಾಡಿದ್ದಾರೆ. ಪೂರ್ವಾಪರ ಯೋಚಿಸದೆ ಹೀಗೆ ಮಾಡಿದ್ದಾರೆ. ಬೆಂಗಳೂರಿನಲ್ಲಿ 1 ಲಕ್ಷ 70 ಸಾವಿರ ಬಿಡಿಎ ನಿವೇಶನಗಳಿವೆ. ಹೌಸಿಂಗ್ ಸೊಸೈಟಿಯ 60 ಸಾವಿರ ನಿವೇಶನಗಳಿವೆ. 30ರಿಂದ 35 ಸಾವಿರ ಬಿಡಿಎ ಅಪ್ರೂವ್ಡ್ ಸೈಟ್‌ಗಳಿವೆ. ಉಳಿದ 17 ಲಕ್ಷ ಆಸ್ತಿಗಳನ್ನು ಕಾನೂನುಬಾಹಿರ ಎಂದಿದ್ದಾರೆ. ಇದೆಲ್ಲರ ಪರಿಣಾಮ ಕಳೆದ 3 ತಿಂಗಳಿನಿಂದ ಸುಮಾರು ನಾಲ್ಕೈದು ಸಾವಿರ ಕೋಟಿ ಆದಾಯ ಸರ್ಕಾರದ ಕೈತಪ್ಪಿ ಹೋಗಿದೆ ಎಂದು ವಿವರಿಸಿದರು.ಇದನ್ನೂ ಓದಿ: ಕಾರವಾರ: ವಾಹನ ಡಿಕ್ಕಿ ಹೊಡೆದು ಕಟ್ಟಡ ಕಾರ್ಮಿಕ ಸಾವು

     

    ಸಚಿವ ಕೃಷ್ಣಬೈರೇಗೌಡರು ಇದರ ಕಡೆ ಗಮನ ಕೊಡುತ್ತಿಲ್ಲ. ಬಿಬಿಎಂಪಿಯ ತುಷಾರ್ ಗಿರಿನಾಥ್, ಮನೀಷ್ ಮುದ್ಗಲ್ ಅವರು ತಮ್ಮದೇ ಆದ ರೀತಿಯಲ್ಲಿ ಐಡಿಯ ಕೊಡುತ್ತಿದ್ದು, ಕೃಷ್ಣಬೈರೇಗೌಡರು ತುತ್ತೂರಿ ಊದುತ್ತಿದ್ದಾರೆ. ಹೀಗಾಗಿ ಕೆಲಸ ಆಗುತ್ತಿಲ್ಲ. ಮಂಜೂರಾದ ವೈದ್ಯಕೀಯ ಸೀಟಿಗೆ ಹಣ ಕಟ್ಟಲು ಆಸ್ತಿ ಮಾರಾಟ ಮಾಡಲು ಆಗುತ್ತಿಲ್ಲ ಎಂದು ದೂರಿದರು.

    ಎನ್‌ಕಂಬರೆನ್ಸ್ ಸರ್ಟಿಫೈಡ್ ಕಾಪಿ ಸಿಗುತ್ತಿಲ್ಲ. ಎನ್‌ಕಂಬರೆನ್ಸ್ ಕೇಳಿದರೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸರ್ವರ್ ಡೌನ್ ಎನ್ನುತ್ತಾರೆ ಎಂದು ಟೀಕಿಸಿದರು. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಒಟಿಪಿ ಬಾರದೆ ನೋಂದಣಿ ಕಾರ್ಯ ನಡೆಯುತ್ತಿಲ್ಲ;. ಕಾವೇರಿ 2 ಆ್ಯಪ್ ಬಂದ ಬಳಿಕ ಒಂದು ದಿನದ ಮೊದಲು ಹಣ ಕಟ್ಟಬೇಕಾಗಿದೆ. ನಿಗದಿತ ಅವಧಿಯಲ್ಲಿ ಹೋದರೆ ಸಾಫ್ಟ್ವೇರ್ ಕೆಲಸ ಮಾಡದೆ ಸರ್ವರ್ ಡೌನ್ ಎಂಬ ಉತ್ತರ ಸಿಗುತ್ತದೆ. ನೋಂದಣಿ ನಡೆಯದೆ ಗೊಂದಲ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

    ರಾಜ್ಯದಲ್ಲಿ ಕಳೆದ ಎರಡು ತಿಂಗಳುಗಳಿಂದ ಇ-ಖಾತಾ ಹೆಸರಿನಲ್ಲಿ ಉಪನೋಂದಣಿ ಕಚೇರಿಯಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ. ಕೆಲಸ ಸ್ಥಗಿತವಾಗಿದ್ದು, ಸಾಮಾನ್ಯ ಜನರು, ಬಡವರು ಕಷ್ಟಕಾಲದಲ್ಲಿ ಆಸ್ತಿ ಮಾರಾಟ ಮಾಡಲು ಅಥವಾ ಕೊಳ್ಳಲಾಗದ, ಬ್ಯಾಂಕಿನಲ್ಲಿ ಅಡಮಾನ ಮಾಡಿ ಸಾಲ ಪಡೆಯಲು, ಕೈಸಾಲಕ್ಕೆ ತೊಂದರೆ ಆಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

    ರಾಜ್ಯದ ಕಂದಾಯ ಸಚಿವ ಕೃಷ್ಣಬೈರೇಗೌಡರು ಇಲಾಖೆ ಕೆಲಸ ಬಿಟ್ಟು ಬೇರೆ ಇಲಾಖೆಗಳ ಕೆಲಸಕ್ಕೆ ಮೂಗು ತೂರಿಸುವ ಕೆಲಸ ಮಾಡುತ್ತಿದ್ದಾರೆ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕಾವೇರಿ 2 ಸಾಫ್ಟ್‌ವೇರ್‌ ಹೆಸರಿನಲ್ಲಿ ಒಂದೊಂದು ಕೆಲಸಕ್ಕೆ ಒಂದೊಂದು ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಿದ್ದಾರೆ. ನೋಂದಣಿ ಕಾರ್ಯಕ್ಕೆ ಒಂದು ಸಾಫ್ಟ್‌ವೇರ್‌, ಎನ್‌ಕಂಬರೆನ್ಸ್‌ಗೆ ಒಂದು ಸಾಫ್ಟ್ವೇರ್, ದೃಢೀಕೃತ ಕಾಪಿ ಪಡೆಯಲು ಒಂದು ಸಾಫ್ಟ್‌ವೇರ್‌, ನಾಗರಿಕರು ಮನೆಯಿಂದ ಕಡತಗಳನ್ನು ಅಪ್‌ಲೋಡ್ ಮಾಡಲು ಮತ್ತೊಂದು ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಿದ್ದಾರೆ ಎಂದರು.ಇದನ್ನೂ ಓದಿ: ತರಬೇತಿ‌ ವೇಳೆ IAFನ ಮಿರಾಜ್-2000 ಯುದ್ಧ ವಿಮಾನ ಪತನ – ಇಬ್ಬರು ಪೈಲಟ್‌ ಸೇಫ್‌

     

  • ಸಿಎಂ, ಡಿಸಿಎಂ ನಿಜವಾದ ಕಾನೂನು ಪಾಲಕರಾಗಿದ್ರೆ ನಾನು ಸಾಷ್ಟಾಂಗ ನಮಸ್ಕಾರ ಮಾಡ್ತೇನೆ – ಅಶ್ವಥ್ ನಾರಾಯಣ

    ಸಿಎಂ, ಡಿಸಿಎಂ ನಿಜವಾದ ಕಾನೂನು ಪಾಲಕರಾಗಿದ್ರೆ ನಾನು ಸಾಷ್ಟಾಂಗ ನಮಸ್ಕಾರ ಮಾಡ್ತೇನೆ – ಅಶ್ವಥ್ ನಾರಾಯಣ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah), ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ನಿಜವಾದ ಕಾನೂನು ಪಾಲಕರಾಗಿದ್ದರೆ ನಾನು ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ ಎಂದು ಮಾಜಿ ಡಿಸಿಎಂ ಅಶ್ವಥ್ ನಾರಾಯಣ (Ashwath Narayana) ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು (ಡಿ.02) ಪೊಲೀಸರು ಚಂದ್ರಶೇಖರ ಸ್ವಾಮೀಜಿಗಳ ಹೇಳಿಕೆ ಪಡೆಯುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಸಿಎಂ, ಡಿಸಿಎಂ, ಅವರ ಪಕ್ಷದ ಪದಾಧಿಕಾರಿಗಳಿಗೆ ಕಾನೂನು ಯಾವುದೋ ಒಂದು ಸಂದರ್ಭದಲ್ಲಿ ನೆನಪಾಗುತ್ತದೆ. ಅದಕ್ಕಾಗಿ ಮನಬಂದಂತೆ, ಇಷ್ಟ ಬಂದಂತೆ ಸಿಎಂ, ಡಿಸಿಎಂ ಮಾತನಾಡುತ್ತಾರೆ. ಇವರೇ ಈ ರೀತಿ ಮಾತನಾಡಿದರೆ ಇವರ ಕೆಳಗಿರುವವರು ಇನ್ನು ಹೇಗೆ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇದನ್ನೂ ಓದಿ: ಆನೇಕಲ್ | ಸಿಲಿಂಡರ್ ಸ್ಫೋಟಗೊಂಡು ಮೂವರು ಕಾರ್ಮಿಕರು ಗಂಭೀರ

    ಇನ್ನೂ ಇವರಿಗೆ ವಕ್ಫ್ ವಿಚಾರದಲ್ಲಿ ಬಾಯಿ ಇಲ್ಲ. ಚಂದ್ರಶೇಖರ ಸ್ವಾಮೀಜಿಗಳು ಇಡೀ ಸಮುದಾಯಕ್ಕೆ ಆಗಿರುವ ಅನ್ಯಾಯ ಕುರಿತು ಹೇಳಿದರು. ನಿಮ್ಮ ಓಲೈಕೆ ರಾಜಕಾರಣ ಕಂಡು ಮಾತನಾಡಿದರು. ಮಾರನೇ ದಿನ ವಿಷಾದ ವ್ಯಕ್ತಪಡಿಸಿದ್ದರು. ಆದರೆ ನೀವು ಪಾಕಿಸ್ತಾನ ಜಿಂದಾಬಾದ್ ಹೇಳಿಕೆಗೆ ನಿಮ್ಮ ಸಂಸದರ ವಿರುದ್ಧ ಕ್ರಮ ತೆಗೆದುಕೊಂಡ್ರಾ? ಕಾನೂನು ಎಲ್ಲರಿಗೂ ಒಂದೇ ಎಂದು ಹೇಳುತ್ತೀರಾ? ನೀವು ನಿಜವಾದ ಕಾನೂನು ಪಾಲಕರೇ ಆಗಿದ್ದರೆ ನಾನು ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ. ನಿಮ್ಮ ಹಾಗೆ ಸ್ವಾಮೀಜಿಗಳು ಭಂಡರಲ್ಲ ಕೇಸ್ ಹಾಕಿದೀರ, ಬನ್ನಿ ಹೇಳಿಕೆ ತಗೊಳ್ಳಿ ಎಂದಿದ್ದಾರೆ ಸರ್ಕಾರದ ನಡೆಯನ್ನು ಜನ ಒಪ್ಪುವುದಿಲ್ಲ. ಹೋಗಿ ಮಠದಲ್ಲೇ ಉತ್ತರ ಪಡೆದುಕೊಳ್ಳಿ. ಸರ್ಕಾರದ ಮೇಲೆ ಜನ ವಿಶ್ವಾಸ ಕಳೆದುಕೊಂಡಿದ್ದಾರೆ. ಹಿಂದೆ ಒಕ್ಕಲಿಗ ಸಮಾವೇಶದಲ್ಲಿ ಪೆನ್ನು ಪೇಪರ್ ಕೊಡಿ ಎಂದು ಹೇಳಿದ್ದಿರಿ ಈಗ ಏನಾಯ್ತು? ನಿಮ್ಮ ಬೆದರಿಕೆಗೆ ಸಮಾಜ ಹೆದರಲ್ಲ, ಕಾನೂನು ಪಾಲನೆ ಏನು ಅಂತ ನಮಗೂ ಗೊತ್ತಿದೆ ಎಂದು ಕಿಡಿಕಾರಿದರು.

    ಇದೇ ವೇಳೆ ಯತ್ನಾಳ್‌ಗೆ ಶೋಕಾಸ್ ನೋಟಿಸ್ ವಿಚಾರವಾಗಿ ಮಾತನಾಡಿ, ವರಿಷ್ಠರು ನೋಟಿಸ್ ಕೊಟ್ಟಿದ್ದಾರೆ. ಸಂಬಂಧಪಟ್ಟವರು ನೋಟಿಸ್‌ಗೆ ಉತ್ತರ ಕೊಡಲಿದ್ದಾರೆ. ಎಲ್ಲರೂ ಪಕ್ಷದ ಚೌಕಟ್ಟಿನಲ್ಲಿ ಇರಬೇಕಾಗುತ್ತದೆ. ಒಗ್ಗಟ್ಟು, ಶಿಸ್ತು ಕಾಪಾಡಿಕೊಳ್ಳುವುದು ಎಲ್ಲರಿಗೂ ಅನ್ವಯ ಆಗುತ್ತದೆ. ನೋಟಿಸ್‌ಗೆ ಸಂಬಂಧಪಟ್ಟವರು ಉತ್ತರಿಸುತ್ತಾರೆ ಎಂದು ತಿಳಿಸಿದರು.ಇದನ್ನೂ ಓದಿ: ಉಪೇಂದ್ರ ನಟನೆಯ ‘ಯುಐ’ ವಾರ್ನರ್‌ ರಿಲೀಸ್

  • ಶಿವಕುಮಾರ್‌ ನೀವು ಏನು ಸೂಪರ್‌ಮ್ಯಾನಾ: ಅಶ್ವಥ್ ನಾರಾಯಣ ವಾಗ್ದಾಳಿ

    ಶಿವಕುಮಾರ್‌ ನೀವು ಏನು ಸೂಪರ್‌ಮ್ಯಾನಾ: ಅಶ್ವಥ್ ನಾರಾಯಣ ವಾಗ್ದಾಳಿ

    ಬೆಂಗಳೂರು: ಡಿಕೆ ಶಿವಕುಮಾರ್‌ (DK Shivakumar) ಏನು ಸೂಪರ್‌ಮ್ಯಾನಾ? ಬೆಂಗಳೂರಿಗೆ (Bengaluru) ಇವರಿಂದ ನಯಾ ಪೈಸೆ ಉಪಯೋಗ ಆಗುವುದಿಲ್ಲ ಎಂದು ಡಿಸಿಎಂ ಅಶ್ವಥ್‌ ನಾರಾಯಣ (Ashwath Narayana) ಪ್ರಶ್ನಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅವರಿಗೆ ಪಾಪಾ ಜವಾಬ್ದಾರಿ ಒಂದಾ ಎರಡಾ? ಬ್ರ್ಯಾಂಡ್‌ ಬೆಂಗಳೂರಿಗೆ (Brand Bengaluru) ನಿಮ್ಮಿಂದ ಏನು ಆಗುವುದಿಲ್ಲ. ಬ್ರ್ಯಾಂಡ್‌ ಶಿವಕುಮಾರ್‌ ಅಂತಾ ಒಂದು ಎರಡು ತಿಂಗಳು ಓಡುತ್ತದೆ. ಆಮೇಲೆ ಠುಸ್ ಅಂತಾ ಕೆಳಗೆ ಬಿದ್ದು ಹೋಗುತ್ತದೆ ಎಂದು ವ್ಯಂಗ್ಯವಾಡಿದರು.

     
    ನಾನು ರಾಮನಗರಕ್ಕೆ (Ramangara) ಹೋದಾಗ ನನಗೂ ರಾಮನಗರಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದರು. ಈಗ ನಾನು ಡಿಕೆ ಶಿವಕುಮಾರ್‌ಗೂ ಬೆಂಗಳೂರಿಗೂ ಏನು ಸಂಬಂಧ ಎಂದು ನಾನು ಕೇಳುತ್ತೇನೆ. ಡಿಕೆಶಿ ಅಂದ್ರೆ ದ್ವೇಷ, ಕಿರುಕುಳ. ಇವತ್ತು ನಾನು ಏನಾದರೂ ಹೇಳಿದ್ರೆ ದ್ವೇಷದಿಂದ ಹೇಳಿದ್ದೇನೆ ಅನ್ನಿಸಬಹುದು ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ: ನಳಿನ್‌ ಕುಮಾರ್ ಕಟೀಲ್

    ಇವರಿಂದ ಗುಣಮಟ್ಟದ ಶಾಲೆ, ಗುಣಮಟ್ಟದ ಆರೋಗ್ಯ ಕೇಂದ್ರ ಮಾಡೋಕೆ ಸಾಧ್ಯವೇ? ನೀವು ಒಬ್ಬರು ರಿಯಲ್ ಎಸ್ಟೇಟ್ ವ್ಯಾಪಾರಸ್ಥರು. ನೀವು ಬೆಂಗಳೂರಿಗೆ ಬಂದು ಏನ್ ಮಾಡ್ತೀರಿ ಎಂದು ಪ್ರಶ್ನಿಸಿದರು.

  • ಅಶ್ವಥ್‌ ನಾರಾಯಣ್‌ಗೆ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್‌

    ಅಶ್ವಥ್‌ ನಾರಾಯಣ್‌ಗೆ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್‌

    ಬೆಂಗಳೂರು: ಟಿಪ್ಪು ರೀತಿ ಸಿದ್ದರಾಮಯ್ಯರನ್ನು (Siddaramaiah) ಮುಗಿಸಬೇಕು ಎಂದಿದ್ದ ಮಾಜಿ ಮಂತ್ರಿ ಅಶ್ವಥ್‍ ನಾರಾಯಣ್‍ಗೆ (Ashwath Narayan) ಹೈಕೋರ್ಟ್ (High Court) ತಾತ್ಕಾಲಿಕ ರಿಲೀಫ್ ನೀಡಿದೆ.

    ಮೊನ್ನೆ ಮೈಸೂರಿನ ದೇವರಾಜ ಠಾಣೆಯಲ್ಲಿ ದಾಖಲಾಗಿದ್ದ ಎಫ್‍ಐಆರ್ (FIR) ರದ್ದತಿಗೆ ನಿರ್ದೇಶನ ನೀಡುವಂತೆ ಕೋರಿ ಅಶ್ವಥ್‍ನಾರಾಯಣ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಅಶ್ವಥ್‍ನಾರಾಯಣ್ ವಿರುದ್ಧದ ಎಫ್‍ಐಆರ್‌ಗೆ ಸಂಬಂಧಿಸಿದ ತನಿಖೆಗೆ ನಾಲ್ಕು ವಾರ ತಡೆ ನೀಡಿ ಆದೇಶ ನೀಡಿದೆ.

    ಅಶ್ವಥ್‍ನಾರಾಯಣ್ ವಿರುದ್ಧದ ತನಿಖೆಗೆ ನಾಲ್ಕು ವಾರ ತಡೆ ನೀಡಲಾಗಿದ್ದು, ಅಷ್ಟರೊಳಗೆ ರಾಜ್ಯ ಸರ್ಕಾರ ಆಕ್ಷೇಪಣೆ ಸಲ್ಲಿಸಬೇಕು ಎಂದು ಸೂಚಿಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ವಿಚಾರಣೆ ಮುಂದೂಡಿದೆ. ಇದನ್ನೂ ಓದಿ: 10 ಕೆಜಿ ಉಚಿತ ಅಕ್ಕಿ – ಸರ್ಕಾರದ ಲೆಕ್ಕಾಚಾರ ಏನು?

    ಅರ್ಜಿದಾರರ ಪರ ಹಿರಿಯ ವಕೀಲ ಪ್ರಭುಲಿಂಗ ನಾವಡಗಿ ಹಾಜರಾಗಿ, ಮೊದಲೆರಡು ದೂರುಗಳನ್ನು ಎನ್‍ಸಿಆರ್ ಹಾಕಿ ಮುಕ್ತಾಯ ಮಾಡಿರುವುದಕ್ಕೆ ಪೊಲೀಸರು ಮಾಹಿತಿ ಕೊಡಬೇಕು. ಸರ್ಕಾರ ಬದಲಾದ ಮಾತ್ರಕ್ಕೆ ರಾತ್ರೋರಾತ್ರಿ ಏನು ಬದಲಾವಣೆ ಆಗಿದೆ. ಪೊಲೀಸರು ಈ ರೀತಿ ನಡೆದುಕೊಳ್ಳಲಾಗದು ಎಂದು ಆಕ್ಷೇಪಿಸಿದರು. ಈ ವಾದಕ್ಕೆ ರಾತ್ರೋರಾತ್ರಿ ಏನು ಬದಲಾಗಿದೆ ಎಂದು ನೀವು ಕೇಳುವಂತಿಲ್ಲ ಎಂದು ಲಘುಧಾಟಿಯಲ್ಲಿ ನ್ಯಾಯಪೀಠ ಹೇಳಿತು.

     
    ಎನ್‍ಸಿಆರ್ ಬಳಿಕ ಅದೇ ಪ್ರಕರಣಕ್ಕೆ ಸಂಬಂಧಿಸಿ ಎಫ್‍ಐಆರ್ ದಾಖಲಿಸಲಾಗದು ಎಂಬ ಅರ್ಜಿದಾರರ ಪರ ವಕೀಲರ ವಾದವನ್ನು ಮೇಲ್ನೋಟಕ್ಕೆ ಒಪ್ಪಲಾಗದು. ಇದನ್ನು ಮುಂದಿನ ಹಂತದಲ್ಲಿ ಪರಿಗಣಿಸಲಾಗುವುದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

  • ಅವರು ಅಶ್ವಥ್ ನಾರಾಯಣ್ ಅಲ್ಲ.. ಮಾನಸಿಕ ಅಸ್ವಸ್ಥ: ಬಿ.ಕೆ.ಹರಿಪ್ರಸಾದ್

    ಅವರು ಅಶ್ವಥ್ ನಾರಾಯಣ್ ಅಲ್ಲ.. ಮಾನಸಿಕ ಅಸ್ವಸ್ಥ: ಬಿ.ಕೆ.ಹರಿಪ್ರಸಾದ್

    ಕಾರವಾರ: ಮಂಡ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ (Siddaramaiah) ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ ಸಚಿವ ಅಶ್ವಥ್ ನಾರಾಯಣ್ (Ashwath Narayan) ವಿರುದ್ಧ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ (B.K.Hariprasad) ವಾಗ್ದಾಳಿ ನಡೆಸಿದ್ದಾರೆ.

    ಕುಮುಟಾ ತಾಲೂಕಿನ ಮಿರ್ಜಾನ್ ಗ್ರಾಮದಲ್ಲಿ ಆಯೋಜಿಸಿದ್ದ ಕರಾವಳಿ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತಾನಾಡಿದ ಬಿ.ಕೆ.ಹರಿಪ್ರಸಾದ್, ಬಿಜೆಪಿಗರ ಮನೆ ದೇವರೇ ಸುಳ್ಳು. ಅವರ ಸಿದ್ಧಾಂತ ಹಿಂಸಿಸು ಎಂಬುದಾಗಿದೆ. ದ್ವೇಷದಿಂದ ನಡೆದುಕೊಳ್ಳಿ ಎನ್ನುತ್ತಾರೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಅಶ್ವಥ್ ನಾರಾಯಣ್ ಹೇಳಿಕೆ ನಾನೂ ಒಪ್ಪಲ್ಲ, ಯಾವತ್ತೂ ಸಾವು ಬಯಸಬಾರದು – ಸಿ.ಟಿ ರವಿ

    ದ್ವೇಷ, ಅಸೂಯೆ ಬಿಟ್ಟರೆ ಅವರಿಗೆ ದೇಶಭಕ್ತಿ ಇಲ್ಲ. ಮಂತ್ರಿ ಅಶ್ವಥ್ ನಾರಾಯಣ್, ಸಿದ್ದರಾಮಯ್ಯ ಅವರನ್ನು ಹೊಡದು ಹಾಕಿ ಎಂದು ಹೇಳುತ್ತಾರೆ. ಅವರು ಅಶ್ವಥ್ ನಾರಾಯಣ್ ಅಲ್ಲ. ಮಾನಸಿಕ ಅಸ್ವಸ್ಥರಾಗಿದ್ದಾರೆ. ಅವರನ್ನು ಬೆಂಗಳೂರಿನ ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು ಎಂದು ಕಿಡಿಕಾರಿದ್ದಾರೆ.

    ನಮ್ಮ ಹೆಣ ಕೂಡಾ ಬಿಜೆಪಿ, ಆರ್‌ಎಸ್‌ಎಸ್ ಸೇರುವುದಿಲ್ಲ. ರಸ್ತೆ, ಚರಂಡಿ ಬಗ್ಗೆ ಮಾತನಾಡಿದರೆ, ಲವ್ ಜಿಹಾದ್ ಬಗ್ಗೆ ಮಾತನಾಡಿ ಎನ್ನುತ್ತಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಅಶ್ವಥ್ ನಾರಾಯಣ್ ವಿವಾದಾತ್ಮಕ ಹೇಳಿಕೆ- ಸಾಕು ಬಿಟ್ಬಿಡಿ ಅಂತ ಮಾಧುಸ್ವಾಮಿ ಮನವಿ

    ಬುಧವಾರ ಮಂಡ್ಯದ ಸಾತನೂರು ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಸಚಿವ ಅಶ್ವಥ್ ನಾರಾಯಣ್ ಮಾತನಾಡಿ. ಟಿಪ್ಪುವಿನ ಜಾಗಕ್ಕೆ ಸಿದ್ದರಾಮಯ್ಯ ಬಂದುಬಿಡುತ್ತಾರೆ. ಉರಿಗೌಡ, ನಂಜೇಗೌಡ ಅವರು ಟಿಪ್ಪುವಿಗೆ ಏನು ಮಾಡಿದ್ದಾರೋ, ಅದೇ ರೀತಿ ಸಿದ್ದರಾಮಯ್ಯ ಅವರನ್ನು ಕೂಡಾ ಹೊಡೆದು ಹಾಕಬೇಕು. ನಿಮಗೆ ಸಾವರ್ಕರ್ ಬೇಕಾ? ಟಿಪ್ಪು ಬೇಕಾ? ನೀವೇ ತೀರ್ಮಾನಿಸಿ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು.

    ಅಶ್ವಥ್ ನಾರಾಯಣ್ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಯಿತು. ಸಚಿವರ ವಿರುದ್ಧ ಕಾಂಗ್ರೆಸ್ ನಾಯಕರು ಟೀಕಾಪ್ರಹಾರ ನಡೆಸಿದರು. ಸದನದಲ್ಲೂ ಅಶ್ವಥ್ ನಾರಾಯಣ್ ಅವರ ವಿವಾದಿತ ಹೇಳಿಕೆಯೇ ಸದ್ದು ಮಾಡಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k