Tag: Ashwath Narayan

  • ಸರ್ಕಾರಕ್ಕೆ ನೈತಿಕತೆ ಇದ್ದರೆ ಪ್ರಿಯಾಂಕ್ ಮೇಲೆ ಕೇಸ್ ದಾಖಲಿಸಲಿ: ಅಶ್ವಥ್ ನಾರಾಯಣ್

    ಸರ್ಕಾರಕ್ಕೆ ನೈತಿಕತೆ ಇದ್ದರೆ ಪ್ರಿಯಾಂಕ್ ಮೇಲೆ ಕೇಸ್ ದಾಖಲಿಸಲಿ: ಅಶ್ವಥ್ ನಾರಾಯಣ್

    ಬೆಂಗಳೂರು: ಸರ್ಕಾರಕ್ಕೆ ನೈತಿಕತೆ ಇದ್ದರೆ ಪ್ರಿಯಾಂಕ್ ಖರ್ಗೆ ಮೇಲೆ ಕೇಸ್ ದಾಖಲಿಸಲಿ ಎಂದು ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಆಗ್ರಹಿಸಿದ್ದಾರೆ.

    ಆರ್‌ಎಸ್‌ಎಸ್ ಚಟುವಟಿಕೆ ನಿಷೇಧದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದ ವಿಚಾರವಾಗಿ ಬಿಜೆಪಿ ಕಚೇರಿಯಲ್ಲಿಂದು ಮಾತನಾಡಿದರು. ಇಂತಹ ಘನಂದಾರಿ ಕೆಲಸ ಮಾಡಿರುವ ಪ್ರಿಯಾಂಕ್ ಖರ್ಗೆಯವರನ್ನು ಪತ್ರ ನೀಡಿದ ಕೂಡಲೇ ಸಿಎಂ ಸಿದ್ದರಾಮಯ್ಯ ಅವರು ವಜಾ ಮಾಡಬೇಕಿತ್ತು ಎಂದಿದ್ದಾರೆ. ಇದನ್ನೂ ಓದಿ: RSS ಇಂದಿರಾ ಗಾಂಧಿಗೆ ಹೆದರಿಲ್ಲ, ನೆಹರೂ ಮುಂದೆ ಮಂಡಿಯೂರಿಲ್ಲ, ಪ್ರಿಯಾಂಕ್ ಖರ್ಗೆ ಯಾರು?- ಸುನಿಲ್ ಕುಮಾರ್

    ಪ್ರಚಾರದ ಗೀಳು:
    ಸನ್ಮಾನ್ಯ ಪ್ರಿಯಾಂಕ್ ಖರ್ಗೆ ಯಾವಾಗಲೂ ಅಪ್ರಸ್ತುತ ಹೇಳಿಕೆ ಕೊಟ್ಟು ಸುದ್ದಿಯಲ್ಲಿರುವ ಮಂತ್ರಿ. ಅವರಿಗೆ ಯಾವಾಗಲೂ ಪ್ರಚಾರದಲ್ಲಿರುವ ಗೀಳು. ಅವರು ಏನು ಮಾತಾಡುತ್ತಿದ್ದಾರೆ ಅನ್ನೋದೇ ಅವರಿಗೆ ಗೊತ್ತಿಲ್ಲ. ದುರುದ್ದೇಶದಿಂದ ಸಿಎಂಗೆ ಈ ಪತ್ರವನ್ನು ಬರೆದಿದ್ದಾರೆ. ಈ ವ್ಯಕ್ತಿ ಯಾವಾಗಲೂ ಅಪ್ರಸ್ತುತ ಮಾತು ಹಾಗೂ ಕೆಲಸ ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆಯವರೇ ನಿಮ್ಮ ಮಕ್ಕಳಿಗೆ ಸರಿಯಾಗಿ ಪಾಠ ಹೇಳಿಕೊಡಿ: ಗೋವಿಂದ ಕಾರಜೋಳ

    ಮಗ ಎನ್ನುವುದಷ್ಟೇ ಅರ್ಹತೆ:
    ಇವರಿಗೆ ಮಲ್ಲಿಕಾರ್ಜುನ ಖರ್ಗೆಯವರ ಮಗ ಎನ್ನುವುದಷ್ಟೇ ಅರ್ಹತೆ. ಜ್ಞಾನ ಇಲ್ಲದಿದ್ದರೂ ಕುಳಿತಲ್ಲೇ ಅಧಿಕಾರ ಮಾಡುತ್ತಾರೆ. ಬರೀ ವಂಶಪಾರಂಪರ್ಯವಾಗಿ ಬಂದಿರುವವರಿಗೆ ಯಾವ ಅರ್ಹತೆ ಇದೆ. ನಿಮ್ಮ ಸಾಧನೆ ಹಾಗೂ ಕೆಲಸ ಮಾತಾಡಬೇಕು. ಪ್ರಿಯಾಂಕ್ ಖರ್ಗೆ ಅವರೇ ಸಮಾಜ ಒಡೆಯುವ ಕೆಲಸ ಮಾಡಬೇಡಿ. ಬದಲಾಗಿ ಬಾಂಧವ್ಯ ಮತ್ತು ಗೌರವವನ್ನು ಹೆಚ್ಚಿಸಿ ಎಂದು ಕಿವಿಮಾತು ಹೇಳಿದ್ದಾರೆ.

    ನಿಮ್ಮ ಕೀಳು ಆಲೋಚನೆಗಳಿಗೆ ಜನ ನಗುತ್ತಾರೆ. ನೀವು ಬರೆದಿರುವ ಪತ್ರ ಹಿಂಪಡೆದು ಕ್ಷಮೆಯಾಚಿಸಿ, ತಪ್ಪಿಗೆ ಪಶ್ಚಾತ್ತಾಪ ಪಡಲು ಅವಕಾಶ ಸಿಗುತ್ತದೆ. ಇಂತಹ ಘನಂದಾರಿ ಕೆಲಸ ಮಾಡಿರುವ ಪ್ರಿಯಾಂಕ್ ಖರ್ಗೆಯವರನ್ನು ಪತ್ರ ನೀಡಿದ ಕೂಡಲೇ ಸಿಎಂ ವಜಾ ಮಾಡಬೇಕಿತ್ತು. ಸಿದ್ದರಾಮಯ್ಯನವರೇ ಶತಮಾನೋತ್ಸವ ಆಚರಿಸಿಕೊಂಡಿರುವ ಆರ್‌ಎಸ್‌ಎಸ್ ಅನ್ನು ಕೆಟ್ಟದಾಗಿ ನಡೆಸಿಕೊಳ್ಳಲು ನಿಮಗೆ ಆತ್ಮಸಾಕ್ಷಿ ಇದ್ಯಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನೆಹರು ಮರಿ ಮೊಮ್ಮಗಳ ಹೆಸರು ಇಟ್ಕೊಂಡಿರುವ ನಿಮ್ಮಿಂದ RSS ಬ್ಯಾನ್ ಅಸಾಧ್ಯ: ಪ್ರತಾಪ್ ಸಿಂಹ

    ಇವರಿಗೆ ಬಯ್ಯಲು ಹೋದರೆ ನಾವೇ ಕೀಳುಮಟ್ಟಕ್ಕೆ ಹೋಗುತ್ತೇವೆ. ಸರ್ಕಾರಕ್ಕೆ ನೈತಿಕತೆಯನ್ನೋದು ಇದ್ದರೆ ಪ್ರಿಯಾಂಕ್ ಖರ್ಗೆ ಮೇಲೆ ಕೇಸ್ ದಾಖಲಿಸಲಿ ಎಂದು ಹೇಳಿದ್ದಾರೆ.

    ಮ್ಯೂಸಿಕಲ್ ಚೇರ್
    ಸಂಪುಟ ಪುನಾರಚನೆ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತೆ ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನ ಸಂಸ್ಕೃತಿ, ನಿಯಮ ನನಗೆ ಗೊತ್ತಿಲ್ಲ. ಆದರೆ ಮೊದಲ ದಿನದಿಂದಲೂ ಇಬ್ಬರಲ್ಲೂ ಕಾದಾಟ ಇದೆ. ಅದು ಸ್ಪಷ್ಟವಾಗಿ ಕಾಣುತ್ತಿದೆ. ಪರಮೇಶ್ವರ್ ಸಿಎಂ ಆಗುವ ಬಯಕೆ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ ಮ್ಯೂಸಿಕಲ್ ಚೇರ್ ಆಗಿದೆ. ಯಾರು ಎತ್ಕೊಂಡು ಹೋಗ್ತಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

  • ಬಿಡದಿ ಟೌನ್‌ಶಿಪ್ ಜಟಾಪಟಿ – ಡಿಕೆಶಿ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ

    ಬಿಡದಿ ಟೌನ್‌ಶಿಪ್ ಜಟಾಪಟಿ – ಡಿಕೆಶಿ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ

    -ರಿಯಲ್ ಎಸ್ಟೇಟ್ ದಂಧೆಗಾಗಿ ರೈತ ವಿರೋಧಿ ಯೋಜನೆ ಎಂದು ಕಿಡಿ

    ಬೆಂಗಳೂರು: ಬಿಡದಿ ಟೌನ್‌ಶಿಪ್ (Bidadi Township) ವಿರುದ್ಧ ಜೆಡಿಎಸ್ (JDS) ಹೋರಾಟ ಬೆನ್ನಲ್ಲೇ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಟೌನ್‌ಶಿಪ್ ವಿಚಾರದಲ್ಲಿ ಬಿಜೆಪಿ ನಾಯಕರು ಡಿಕೆಶಿ (DK Shivakumar) ವಿರುದ್ಧ ವಾಗ್ದಾಳಿ ನಡೆಸಿದರು.

    ಬೆಂಗಳೂರಿನಲ್ಲಿ ಮಾತನಾಡಿದ ಶಾಸಕ ಅಶ್ವಥ್ ನಾರಾಯಣ್, ಬಿಡದಿ ಟೌನ್‌ಶಿಪ್‌ಗೆ ಪ್ರಾಥಮಿಕ ನೋಟಿಫಿಕೇಷನ್ ಹೊರಡಿಸಿದ್ದೇ ಡಿಕೆಶಿ. ಈಗ ಗೊಂದಲ ಮೂಡಿಸುವ ಹೇಳಿಕೆ ಕೊಡ್ತಿರೋದು ಸರಿಯಲ್ಲ. ಡಿಕೆಶಿಯವರು ಇದರಲ್ಲಿ ಎಷ್ಟು ಹಣ ಮಾಡಿಕೊಳ್ಳುತ್ತಿದ್ದಾರೆ ಅನ್ನೋದು ನಮಗೆ ಮುಖ್ಯ ಅಲ್ಲ. ಆದ್ರೆ ಬೇಡಿಕೆ ಆಧರಿಸಿ ಮುಂದುವರೆಯಿರಿ, ಯಾವ ಕಂಪೆನಿಗಳು ಭೂಮಿ ಕೇಳಿದ್ದಾರೆ? ಎಷ್ಟು ಕೃಷಿ ಭೂಮಿ ಬೇಕು? ಪರಿಹಾರ ಎಷ್ಟು ಕೊಡುತ್ತೀರಿ? ಇದೆಲ್ಲದರ ಸ್ಪಷ್ಟತೆ ಕೊಡಿ ಮೊದಲು ಎಂದು ಡಿಕೆಶಿಗೆ ಕೌಂಟರ್ ಕೊಟ್ಟರು. ಇದನ್ನೂ ಓದಿ: ಸರ್ಕಾರದಿಂದ ಉತ್ತರ ಕರ್ನಾಟಕಕ್ಕೆ 3,000 ಕೋಟಿ ಪ್ರವಾಹ ಪರಿಹಾರ ನೀಡಬೇಕು – ಅಶೋಕ್ ಆಗ್ರಹ

    ರೈತರು ಟೌನ್‌ಶಿಪ್ ಮಾಡಬೇಡಿ ಅಂತ ಹೇಳುತ್ತಿಲ್ಲ. ಎಲ್ಲಿ ಅಗತ್ಯ ಇದೆಯೋ ಅಲ್ಲಿ ಮಾಡಬೇಕು. ಜವಾಬ್ದಾರಿಯಿಂದ ಎಷ್ಟು ಬೇಕೋ ಅಷ್ಟೇ ಭೂಸ್ವಾಧೀನ ಮಾಡಿ. ಸೂಕ್ತ ಪರಿಹಾರ ಕೊಡಿ. ಯಾರೋ ಕೆಲವರ ಅನುಕೂಲಕ್ಕಾಗಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಬೇಡ ಎಂದು ಕಿಡಿಕಾರಿದರು.  ರಿಯಲ್ ಎಸ್ಟೇಟ್ ದಂಧೆ ಮಾಡೋದು, ಕೃಷಿ ಭೂಮಿ ಸ್ವಾಧೀನ ಮಾಡೋದು, ಇದೇನಾ ಸರ್ಕಾರ ನಡೆಸುವ ರೀತಿ? ವ್ಯಾಪಾರ, ಹಣ, ಲಾಭ, ಅವರ ಅನುಕೂಲಕ್ಕೆ ಬಿಡದಿ ಟೌನ್‌ಶಿಪ್ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ದಸರಾ ಆನೆ ಬಳಿ ರೀಲ್ಸ್‌ ನಿಷೇಧ, ಕಮಾಂಡೋ ಕಾವಲು: ಈಶ್ವರ್ ಖಂಡ್ರೆ

    ಇನ್ನು ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, 2009ರಲ್ಲಿ ಬಿಜೆಪಿ ಅವಧಿಯಲ್ಲಿ ಬಿಡದಿ ಟೌನ್‌ಶಿಪ್ ಪ್ರಾಜೆಕ್ಟ್ ಕೈಬಿಟ್ಟಿದ್ದೆವು. ರೈತರಿಗೆ ಸಮಸ್ಯೆ ಆಗುತ್ತೆ ಅನ್ನೋ ಕಾರಣಕ್ಕೆ ಯೋಜನೆ ಕೈಬಿಟ್ಟಿದ್ದೆವು. ನಮ್ಮ ಅವಧಿಯಲ್ಲಿ ಭೂಸ್ವಾಧೀನಕ್ಕೆ ನೋಟಿಫಿಕೇಷನ್ ಆಗಿರಲಿಲ್ಲ, ಡಿಕೆಶಿ ಆರೋಪ ಸುಳ್ಳು. ಬಿಡದಿ ಟೌನ್‌ಶಿಪ್ ಸತ್ತು ಹೋಗಿದ್ದ ಪ್ರಾಜೆಕ್ಟ್. ಈಗ ಡಿಕೆಶಿ ಅವರು ರಿಯಲ್ ಎಸ್ಟೇಟ್ ದಂಧೆಗಾಗಿ ಯೋಜನೆಗೆ ಜೀವ ಕೊಟ್ಟಿದ್ದಾರೆ. ಯಾರಿಗೋಸ್ಕರ ಈ ಯೋಜನೆ, ಯಾರಿಗೆ ಸೈಟ್ ಹಂಚ್ತೀರ? ಡಿಕೆಶಿ ಹೇಳಲಿ. 20 ವರ್ಷಗಳ ಹಿಂದೆಯೇ ಈ ಪ್ರಾಜೆಕ್ಟ್ ಕೈಬಿಡಲಾಗಿತ್ತು. ನಾವು, ಜೆಡಿಎಸ್ ಇದ್ದಾಗ ಈ ಯೋಜನೆ ಮುಟ್ಟಿಲ್ಲ. ಈಗ ಡಿಕೆಶಿ ಯಾಕೆ ಈ ಯೋಜನೆಗೆ ಕೈಹಾಕಿದ್ದಾರೆ? ರಿಯಲ್ ಎಸ್ಟೇಟ್‌ಗಾಗಿ ಡಿಕೆಶಿ ಆಸಕ್ತಿ ತೋರುತ್ತಿದ್ದಾರೆ ಎಂದು ಆರೋಪ ಮಾಡಿದರು. ಇದನ್ನೂ ಓದಿ: 1 ಗಂಟೆ ಹೈಡ್ರಾಮಾ, ಟ್ರೋಫಿ ಜೊತೆ ಓಡಿದ ನಖ್ವಿ – ಮಧ್ಯರಾತ್ರಿ ಏನಾಯ್ತ? ಇಲ್ಲಿದೆ ಪೂರ್ಣ ವಿವರ

  • ದುರಹಂಕಾರದ ಮಾತು ಬಿಟ್ಟು, ಜನಪರ ಕೆಲಸ ಮಾಡಿ – ಉದ್ಯಮಿಗಳ ಬಗ್ಗೆ ಡಿಕೆಶಿ ಹೇಳಿಕೆಗೆ ಅಶ್ವಥ್ ನಾರಾಯಣ್‌ ಖಂಡನೆ

    ದುರಹಂಕಾರದ ಮಾತು ಬಿಟ್ಟು, ಜನಪರ ಕೆಲಸ ಮಾಡಿ – ಉದ್ಯಮಿಗಳ ಬಗ್ಗೆ ಡಿಕೆಶಿ ಹೇಳಿಕೆಗೆ ಅಶ್ವಥ್ ನಾರಾಯಣ್‌ ಖಂಡನೆ

    ಬೆಂಗಳೂರು: ಹಲವು ವರ್ಷಗಳಿಂದ ಅನಾನುಕೂಲಗಳನ್ನು ಎದುರಿಸಿದ ಕಂಪನಿ ಬೆಂಗಳೂರಿನ (Bengaluru) ಕುಂದುಕೊರತೆ, ವಿಫಲತೆಗಳ ಕುರಿತು ಮಾತನಾಡಿದರೆ ರಾಜ್ಯ ಸರ್ಕಾರಕ್ಕೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಮಾಜಿ ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ್ (C.N Ashwath Narayan)  ಅವರು ಟೀಕಿಸಿದರು.

    ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಉದ್ಯಮಿಗಳ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್‌  (D.K Shivakumar) ಅವರ ಡೋಂಟ್ ಕೇರ್ ಹೇಳಿಕೆಗೆ ಪ್ರತಿಕ್ರಿಯಿಸಿದರು. ಇಂತಹ ಕಂಪನಿಗೆ ಬೇಕಿದ್ದರೆ ಇರಿ; ಇಲ್ಲದಿದ್ದರೆ ಹೋಗಿ ಎನ್ನುವುದಾದರೆ, ಇದ್ಯಾವ ಸಂಸ್ಕೃತಿ? ಇದು ಜನಪರ ಸರ್ಕಾರದ ಮಾತುಗಳೇ? ಈ ದುರಹಂಕಾರದ ಮಾತು ಬಿಟ್ಟು, ಜನಪರವಾಗಿ ಕೆಲಸ ಮಾಡಿ ವಿಶ್ವಾಸ ಮೂಡಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಬೇರೆ ಧರ್ಮಕ್ಕೆ ಮತಾಂತರ ಆದ್ರೆ ಮುಗೀತು, ಧರ್ಮದ ಜೊತೆ ಜಾತಿ ಸೇರಿಸುವಂತಿಲ್ಲ: ಸತೀಶ್ ಜಾರಕಿಹೊಳಿ

    ಸರ್ಕಾರ ಎಂಬುದು ಜನಪರವಾಗಿರಬೇಕು. ಆಡಳಿತದಲ್ಲಿ ಸೌಜನ್ಯ, ಜನಪರ ಕಾಳಜಿ ಇರಬೇಕು. ಆದರೆ, ಕಾಂಗ್ರೆಸ್ಸಿನ ರಾಜ್ಯ ಸರಕಾರಕ್ಕೆ ಅಧಿಕಾರ ತಲೆಗೆ ಹತ್ತಿದೆ. ದುರಹಂಕಾರದ ಮಾತು ಆಡುತ್ತಿದ್ದಾರೆ. ಅವರ ವೈಫಲ್ಯಗಳನ್ನು ಜನರು ಎತ್ತಿ ಹಿಡಿದಾಗ ಅದನ್ನು ಒಪ್ಪಿಕೊಳ್ಳುವ ಸೌಜನ್ಯ, ಸಂಸ್ಕೃತಿ ಅವರಲ್ಲಿಲ್ಲ ಎಂದು ದೂರಿದರು.

    ಬೆಂಗಳೂರು ವಿಶ್ವದಲ್ಲೇ ಮಾನ್ಯತೆ ಪಡೆದ ಹೆಮ್ಮೆಯ ನಗರವಾಗಿದೆ. ಉದ್ಯಮಶೀಲತೆ, ತಂತ್ರಜ್ಞಾನ, ಸ್ಟಾರ್ಟಪ್‍ಗೆ ಹೆಸರುವಾಸಿಯಾಗಿದೆ. ಎಲ್ಲ ಪ್ರಧಾನಮಂತ್ರಿಗಳು, ಮಾನ್ಯ ರಾಷ್ಟ್ರಪತಿಗಳು, ವಿಶ್ವ ನಾಯಕರು ಭಾರತವನ್ನು ಬೆಂಗಳೂರಿನ ಮೂಲಕ ನೋಡುತ್ತಾರೆ. ಬೆಂಗಳೂರಿನ ವೈಫಲ್ಯವನ್ನು ತಿಳಿಸಿ, ಕುಂದುಕೊರತೆ ಹೇಳಿದಾಗ ಅದನ್ನು ಇವರಿಗೆ ಸಹಿಸಿಕೊಳ್ಳಲು ಆಗುವುದಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ವಿಜಯಪುರ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿ 270 ಕೋಟಿ ಕೊಡಲು ಒಪ್ಪಿಗೆ: ಎಂ.ಬಿ ಪಾಟೀಲ್

  • ಡಿಕೆಶಿ ಆರ್‌ಎಸ್‌ಎಸ್ ಗೀತೆ ಹಾಡಿದ್ದನ್ನು ಸ್ವಾಗತಿಸುತ್ತೇವೆ: ಅಶ್ವಥ್ ನಾರಾಯಣ್

    ಡಿಕೆಶಿ ಆರ್‌ಎಸ್‌ಎಸ್ ಗೀತೆ ಹಾಡಿದ್ದನ್ನು ಸ್ವಾಗತಿಸುತ್ತೇವೆ: ಅಶ್ವಥ್ ನಾರಾಯಣ್

    ಬೆಂಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಅವರು ಆರ್‌ಎಸ್‌ಎಸ್ ಗೀತೆ ಹಾಡಿದ್ದನ್ನ ಸ್ವಾಗತಿಸುತ್ತೇವೆ ಎಂದು ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ (Ashwath Narayan) ಹೇಳಿದ್ದಾರೆ.

    ವಿಧಾನಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಆರ್‌ಎಸ್‌ಎಸ್‌ನ (RSS) ಅಧಿಕೃತ ಪ್ರಾರ್ಥನಾ ಗೀತೆಯನ್ನು ಹಾಡಿರುವುದು, ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸಾವಾಗಿತ್ತು. ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು ಡಿಕೆಶಿಗೆ ಆರ್‌ಎಸ್‌ಎಸ್ ಬಗ್ಗೆ ಒಳ್ಳೆಯ ಭಾವನೆ ಇದೆ. ಆರ್‌ಎಸ್‌ಎಸ್ ಗೀತೆ `ನಮಸ್ತೇ ಸದಾ ವತ್ಸಲೇ ಮಾತೃಭೂಮೇ’ ಹಾಡಿರುವುದನ್ನ ಸ್ವಾಗತಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಡಿಕೆಶಿ ಆರ್‌ಎಸ್‍ಎಸ್ ಗೀತೆನೂ ಹಾಡಬಹುದು, ನಾವು ಮಾತ್ರ ಏನು ಮಾಡೋ ಹಾಗಿಲ್ಲ: ರಾಜಣ್ಣ

    ಡಿ.ಕೆ ಶಿವಕುಮಾರ್ ಯಾವ ಮನಸ್ಥಿತಿ ಇಟ್ಕೊಂಡು ಹೇಳಿದ್ದಾರೋ ಗೊತ್ತಿಲ್ಲ. ಯಾರೇ ಆದ್ರೂ ಸರಿ ಆರ್‌ಎಸ್‌ಎಸ್ ಮೇಲೆ ಗೌರವ ಇಡಬಹುದು. ಆದ್ರೆ ಕಾಂಗ್ರೆಸ್ (Congress) ಪಕ್ಷದ ಹಲವು ನಾಯಕರು ಆರ್‌ಎಸ್‌ಎಸ್‌ನ ವಿರೋಧಿಸುತ್ತಾರೆ. ಕಾಂಗ್ರೆಸ್ ನಾಯಕರು ಆರ್‌ಎಸ್‌ಎಸ್ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ರೆ ಜನರು ಅವ್ರನ್ನ ಒಪ್ಪಿಕೊಳ್ಳುತ್ತಾರೆ. ಕಾಂಗ್ರೆಸ್‌ನವರು ತುಷ್ಟೀಕರಣ ರಾಜಕಾರಣದಿಂದ ಹೊರಗೆ ಬರಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣವನ್ನು ಸರ್ಕಾರ ಎನ್‌ಐಎಗೆ ವರ್ಗಾಯಿಸಬೇಕು: ಪ್ರತಾಪ್ ಸಿಂಹ ಆಗ್ರಹ

    ಧರ್ಮಸ್ಥಳ ಪ್ರಕರಣಗಳ ಬಗ್ಗೆ ಮಾತನಾಡಿದ ಅವರು, ಧರ್ಮಸ್ಥಳ ವಿಚಾರದಲ್ಲಿ ಎಸ್‌ಐಟಿ ರಚನೆ ಆದಾಗ ಸಾಕಷ್ಟು ಅನುಮಾನ ಸೃಷ್ಟಿ ಆಗಿತ್ತು. ಎಸ್‌ಐಟಿಯನ್ನು ಎಲ್ಲರೂ ಸ್ವಾಗತ ಮಾಡಿದ್ರು, ನಾವೂ ಸ್ವಾಗತ ಮಾಡಿದ್ವಿ. ತನಿಖೆ ಕಾಲಮಿತಿಯಲ್ಲಿ ಆಗಲಿ ಅನ್ನೋ ಒತ್ತಾಯ ಇತ್ತು. ಸರ್ಕಾರದವರೇ ಒಂದೊಂದು ರೀತಿ ಮಾತಾಡ್ತಿದ್ರು. ಬಿಜೆಪಿಯವ್ರು ಮೊದಲು ಮಾತಾಡ್ಲಿಲ್ಲ. ಈಗ ಮಾತಾಡ್ತಿದ್ದಾರೆ ಅನ್ನೋದು ಸರಿಯಲ್ಲ. ನಾವು ಪ್ರಾರಂಭದಿಂದಲೂ ಸ್ಪಷ್ಟವಾಗಿಯೇ ಮಾತಾಡ್ತಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಭಗವಾನ್‌ ಹನುಮಂತ ಮೊದಲ ಬಾಹ್ಯಾಕಾಶ ಯಾನಿ: ವಿದ್ಯಾರ್ಥಿಗಳಿಗೆ ಕೇಂದ್ರ ಮಾಜಿ ಸಚಿವ ಅನುರಾಗ್‌ ಠಾಕೂರ್‌ ಮಾಹಿತಿ

    ತನಿಖೆ ಮುಗಿದು ಸತ್ಯ ಹೊರಗೆ ಬರಲಿ, ಅಲ್ಲಿಯವರೆಗೂ ನಾವು ಕಾಯ್ತೇವೆ. ಧರ್ಮಸ್ಥಳ ವಿರುದ್ಧ ಅಪಪ್ರಚಾರ ಹಿಂದೆ ಯಾರ ಕೈವಾಡ ಇದೆ ಅನ್ನೋದು ಬಯಲಾಗಬೇಕು. ಇದಕ್ಕಾಗಿ ಎಸ್‌ಐಟಿ ತನಿಖೆ ಆಗಬೇಕು ಅಂತ ನಮ್ಮ ಪಕ್ಷ ಆಗ್ರಹಿಸಿದೆ. ತನಿಖೆ ಸಂದರ್ಭದಲ್ಲಿ ಇನ್ನೂ ಗೊಂದಲ ಮೂಡಿಸೋದು ಬೇಡ. ಅನಾಮಿಕ ವ್ಯಕ್ತಿ ಮೇಲೆ ಅನುಮಾನ, ಎಲ್ಲ ರೀತಿಯ ಪ್ರಶ್ನೆಗಳು ಇವೆ. ಅನಾಮಿಕನ ಬಂಧನವನ್ನು ಸ್ವಾಗತ ಮಾಡುತ್ತೇವೆ. ಆತನ ವಿಚಾರಣೆ ನಡೆಸಲಿ. ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆದು ಸತ್ಯ ಹೊರಗೆ ಬರಲಿ ಎಂದು ಹೇಳಿದ್ದಾರೆ.

    ಹಿಂದೂ ಧಾರ್ಮಿಕ ಕೇಂದ್ರಗಳನ್ನು ಟಾರ್ಗೆಟ್ ಮಾಡಲಾಗಿದೆ. ವ್ಯವಸ್ಥಿತ ಷಡ್ಯಂತ್ರಗಳು ನಡೆಯುತ್ತಿವೆ. ಈ ಪಿತೂರಿಗಳನ್ನು ಬಯಲಿಗೆಳೆಯುವ ಕೆಲಸಗಳು ಆಗಬೇಕು. ಎಸ್‌ಐಟಿ ತನಿಖೆ ತೀವ್ರ ವೇಗದಲ್ಲಿ ನಡೆಯುತ್ತಿದೆ. ಈ ಹಂತದಲ್ಲಿ ಯಾವುದೇ ರಾಜಕೀಯ ಬೇಡ. ರಾಜಕೀಯವನ್ನು ದೂರ ಇಡೋಣ. ಕಾಂಗ್ರೆಸ್ ಇದರಲ್ಲೂ ರಾಜಕೀಯ ಮಾಡ್ತಿದೆ. ನಮಗೆ ಯಾವುದೇ ರಾಜಕೀಯ ಬೇಡ. ಸತ್ಯ ಹೊರಗೆ ಬರುವುದು ಮುಖ್ಯ. ಯಾರ ಷಡ್ಯಂತ್ರ ಅನ್ನೋದು ಆಚೆಗೆ ಬರಬೇಕು ಎಂದು ಆಗ್ರಹಿಸಿದ್ದಾರೆ.

  • ಧರ್ಮಸ್ಥಳ ಕೇಸ್ | ಅಪಪ್ರಚಾರಕರ ವಿರುದ್ಧ ಸ್ವಯಂಪ್ರೇರಿತ ಕೇಸ್ ಹಾಕಿ: ಅಶ್ವಥ್ ನಾರಾಯಣ್ ಆಗ್ರಹ

    ಧರ್ಮಸ್ಥಳ ಕೇಸ್ | ಅಪಪ್ರಚಾರಕರ ವಿರುದ್ಧ ಸ್ವಯಂಪ್ರೇರಿತ ಕೇಸ್ ಹಾಕಿ: ಅಶ್ವಥ್ ನಾರಾಯಣ್ ಆಗ್ರಹ

    ಬೆಂಗಳೂರು: ಧರ್ಮಸ್ಥಳದ (Dharmasthala) ಬಗ್ಗೆ ಅಪಪ್ರಚಾರ ಮಾಡ್ತಿರುವವರ ಮೇಲೆ ಸ್ವಯಂಪ್ರೇರಿತ ಕೇಸ್ ಹಾಕ್ಬೇಕು ಎಂದು ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ (Ashwath Narayan) ಆಗ್ರಹಿಸಿದ್ದಾರೆ.

    ವಿಧಾನಸೌಧದಲ್ಲಿ ಧರ್ಮಸ್ಥಳ ಅಸಹಜ ಸಾವು ಪ್ರಕರಣ (Dharamasthala Case) ಸದನದಲ್ಲಿ ಉತ್ತರ ಕೊಡುವ ವಿಚಾರವಾಗಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಇವತ್ತು ಸದನದಲ್ಲಿ ಗೃಹ ಸಚಿವರು, ಸಿಎಂ, ಡಿಸಿಎಂ ಸದನದಲ್ಲಿ ಉತ್ತರ ಕೊಡಬೇಕಿದೆ. ಧರ್ಮಸ್ಥಳ ಪ್ರಕರಣದಲ್ಲಿ ಬಹಳ ಸ್ಪಷ್ಟವಾಗಿ ಉತ್ತರ ಕೊಡಲಿ. ಅನಾಮಿಕ ವ್ಯಕ್ತಿಯ ಬಗ್ಗೆಯು ತನಿಖೆ ಆಗಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿಎಂ‌ ಕೊಲೆ ಮಾಡಿಸಿ ರಾಜಕಾರಣ ಮಾಡಿದ್ದಾರೆ ಅಂದ್ರೆ ನಾನು ನಂಬಲ್ಲ: ಸಿ.ಟಿ ರವಿ

    ಸೋಷಿಯಲ್ ಮೀಡಿಯಾದಲ್ಲಿ ಆರೋಪಗಳನ್ನು ಮಾಡ್ತಿದ್ದಾರೆ. ಅವರ ಮೇಲೆ ಸ್ವಯಂಪ್ರೇರಿತ ಕೇಸ್ ಹಾಕಬೇಕು. ಹಿಂದೂ ಕಾರ್ಯಕರ್ತರ ಮೇಲೆ ಕಾಂಗ್ರೆಸ್‌ನವರು ಕಾರಣ ಇಲ್ಲದೇ ಸುಮೋಟೋ ಕೇಸ್ ಹಾಕ್ತಾರೆ. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡ್ತಿರುವವರ ಮೇಲೆ ಕೇಸ್ ಹಾಕಬೇಕು. ಪ್ರಕರಣದಲ್ಲಿ ಷಡ್ಯಂತ್ರ ಏನಾಗಿದೆ ಎಂದು ಹೇಳಬೇಕು. ಗಾಳಿಯಲ್ಲಿ ತೇಲಿಸುವ ಕೆಲಸ ಆಗಬಾರದು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಧರ್ಮಾಧಿಕಾರಿಗಳ ವಿರುದ್ಧ ಯಾರೂ ಇಲ್ಲ: ರಾಮಲಿಂಗಾರೆಡ್ಡಿ

    ಅನಾಮಿಕ ವ್ಯಕ್ತಿಯು ಸುಪ್ರೀಂ ಕೋರ್ಟ್ಗೆ ಲಾಯರ್‌ಗಳನ್ನ ಇಟ್ಟುಕೊಂಡಿದ್ದು, ಇಷ್ಟ ಬಂದ ಹಾಗೆ ಕಥೆಯನ್ನ ಸೃಷ್ಟಿ ಮಾಡ್ತಿದ್ದಾರೆ. ಅನಾಮಿಕ ವ್ಯಕ್ತಿಯ ಮೂಲಕ ಸುಳ್ಳನ್ನೆ ಸತ್ಯವನ್ನಾಗಿ ಮಾಡಲು ಹೊರಟಿದ್ದಾರೆ. ಇದನ್ನ ಪಿಎಫ್‌ಐ, ಎಸ್‌ಡಿಪಿಐ ಮಾಡ್ತಿದೆ. ಅನಾಮಿಕ ವ್ಯಕ್ತಿ ಹಾಗೂ ಆತನ ಹಿಂದಿರುವ ವ್ಯಕ್ತಿಯ ಬಗ್ಗೆ ತನಿಖೆಯಾಗಲಿ ಎಂದು ಆಗ್ರಹಿಸಿದ್ದಾರೆ.

    ಈ ಪ್ರಕರಣದಲ್ಲಿ ರಾಜಕೀಯ ಮಾಡುವುದು ಹಾಗೂ ಸಮಾಜ ಒಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡ್ತಿದೆ ಎಂದು ಕಿಡಿಕಾರಿದ್ದಾರೆ.

  • ಧರ್ಮಸ್ಥಳದ ವಿರುದ್ಧ ಪೋಸ್ಟ್‌ ಹಾಕಿದ್ರೆ ಕೇಸ್‌ ದಾಖಲಾಗಲ್ಲ ಯಾಕೆ: ಅಶ್ವಥ್‌ನಾರಾಯಣ

    ಧರ್ಮಸ್ಥಳದ ವಿರುದ್ಧ ಪೋಸ್ಟ್‌ ಹಾಕಿದ್ರೆ ಕೇಸ್‌ ದಾಖಲಾಗಲ್ಲ ಯಾಕೆ: ಅಶ್ವಥ್‌ನಾರಾಯಣ

    – ಶಾಸಕರ ಮನೆಗೆ ಬೆಂಕಿ ಇಟ್ಟದ್ದನ್ನು ಕಾಂಗ್ರೆಸ್‌ ಸಮರ್ಥಿಸಿತ್ತು
    – ಒಂದು ಪೋಸ್ಟ್‌ ಹಾಕಿದ್ದಕ್ಕೆ ಠಾಣೆಗೆ ಬೆಂಕಿ ಹಾಕಿದ್ರು

    ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ (DK Shivakumar) ಅವರು ನಿಜಕ್ಕೂ ಮಂಜುನಾಥೇಶ್ವರ ದೇವರನ್ನು ನಂಬಿದ್ದರೆ, ಶ್ರೀಕ್ಷೇತ್ರ ಧರ್ಮಸ್ಥಳದ ವಿಷಯದಲ್ಲಿ ಹಿನ್ನೆಲೆಯಲ್ಲಿರುವ ವ್ಯಕ್ತಿಗಳ ತನಿಖೆ ಮಾಡಿ ಬಯಲಿಗೆಳೆಯಬೇಕು ಎಂದು ಶಾಸಕ ಡಾ. ಸಿ.ಎನ್. ಅಶ್ವಥ್‌ನಾರಾಯಣ (Ashwath Narayan) ಅವರು ಒತ್ತಾಯಿಸಿದ್ದಾರೆ.

    ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳದ (Dharmasthala) ವಿಷಯದಲ್ಲಿ ಜನರ ತಾಳ್ಮೆ, ಸಹನೆಯನ್ನು ಪರೀಕ್ಷೆ ಮಾಡುತ್ತಿದ್ದೀರಾ? ಸರಕಾರ ಬದುಕಿದೆಯೇ ಇಲ್ಲವೇ ಎಂದು ಗೊತ್ತಾಗಬೇಕಲ್ಲವೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಸರಕಾರ ಬದುಕಿದ್ದರೆ ತೋರಿಸಲಿ. ಯಾರಾದರೂ ತನಿಖೆಗೆ ಅಡಚಣೆ ಮಾಡಿದ್ದಾರಾ? ತನಿಖೆಯನ್ನು ಎಲ್ಲರೂ ಸ್ವಾಗತಿಸಿದ್ದಾರೆ. ಅನಾಮಿಕ ವ್ಯಕ್ತಿಯ ಕುರಿತಂತೆಯೂ ತನಿಖೆ ಆಗಬೇಕು ಎಂದು ಕೋರಿದರು. ಇದನ್ನೂ ಓದಿ: 13 ವರ್ಷದ ಹಿಂದೆ ಧರ್ಮಸ್ಥಳಕ್ಕೆ ಬಂದಿದ್ದ ನನ್ನ ತಂಗಿ ವಾಪಸ್‌ ಬರಲೇ ಇಲ್ಲ – ಎಸ್‌ಐಟಿಗೆ ದೂರು ನೀಡಿದ ಸಹೋದರ

     

    ಕೆಜಿ ಹಳ್ಳಿ, ಡಿಜೆ ಹಳ್ಳಿ ಘಟನೆ ಸಂದರ್ಭದಲ್ಲಿ ನೀವು ಅದನ್ನು ಸಮರ್ಥನೆ ಮಾಡಿದ್ದೀರಿ. ಪೊಲೀಸ್ ಠಾಣೆಗೆ ಬೆಂಕಿ, ಪೊಲೀಸರ ಮೇಲೆ ಹಲ್ಲೆ, ಪೊಲೀಸ್ ಜೀಪಿಗೆ ಬೆಂಕಿ, ಶಾಸಕರ ಮನೆಗೆ ಬೆಂಕಿ ಇಟ್ಟದ್ದನ್ನು ಸಮರ್ಥಿಸಿದ್ದೀರಿ ತಾನೇ ಎಂದು ಅವರು ಪ್ರಶ್ನಿಸಿದರು. ಧರ್ಮಸ್ಥಳದಲ್ಲಿ ಇಂಥ ಘಟನೆ ನಡೆದಿದೆಯೇ? ಯೂ ಟ್ಯೂಬರ್‌ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು. ಸಾಮಾಜಿಕ ಜಾಲತಾಣದಲ್ಲಿ ಇವರೇ ತನಿಖೆ ನಡೆಸಿ ಇವರೇ ತೀರ್ಪು ಕೊಡುತ್ತಾರೆ. ಇದರಿಂದ ಹಿಂದೂ ಸಮಾಜ- ಶ್ರೀ ಮಂಜುನಾಥೇಶ್ವರನನ್ನು ನಂಬುವ ಭಕ್ತರಿಗೆ ಬಹಳಷ್ಟು ನೋವಾಗಿದೆ ಎಂದು ಅಶ್ವಥ್‌ನಾರಾಯಣ ತಿಳಿಸಿದರು.

    ಕೆಜಿ ಹಳ್ಳಿ, ಡಿಜೆ ಹಳ್ಳಿಯಲ್ಲಿ ಯಾರೋ ಒಬ್ಬ ವ್ಯಕ್ತಿ ಒಂದು ಪೋಸ್ಟ್ ಹಾಕಿದ್ದಕ್ಕೆ ಪೊಲೀಸ್ ಠಾಣೆಗೇ ಬೆಂಕಿ ಹಾಕಿದ್ದರು. ಶಾಸಕನ ಮನೆಯನ್ನೇ ಸುಟ್ಟು ಹಾಕಿದ್ದರು. ಪೊಲೀಸರ ವಾಹನ ಸುಟ್ಟು, ಪೊಲೀಸರ ಮೇಲೆ ಹಲ್ಲೆ ಮಾಡಲಾಗಿತ್ತು. ಆಗ ಇದೇ ಕಾಂಗ್ರೆಸ್ ಪಕ್ಷ ಅದನ್ನು ಸಮರ್ಥಿಸಿಕೊಂಡಿತ್ತು ಎಂದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದರೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸುತ್ತಾರೆ. ಧರ್ಮಸ್ಥಳ, ಧರ್ಮಾಧಿಕಾರಿಗಳ ವಿಷಯದಲ್ಲಿ ಬೇರೆ ಬೇರೆ ಪೋಸ್ಟ್ ಹಾಕಿದಾಗ ಇದೇ ಗೃಹ ಇಲಾಖೆ ಯಾಕೆ ಕಾನೂನು ಕ್ರಮ, ಸ್ವಯಂಪ್ರೇರಿತ ಮೊಕದ್ದಮೆ ದಾಖಲಿಸುತ್ತಿಲ್ಲ ಎಂದು ಪ್ರಶ್ನಿಸಿದರು.

  • ಅಶ್ವಥ್ ನಾರಾಯಣ್‌ ನೀನು ಭ್ರಷ್ಟಾಚಾರದ ಪಿತಾಮಹ: ಡಿಕೆಶಿ ಕೆಂಡಾಮಂಡಲ

    ಅಶ್ವಥ್ ನಾರಾಯಣ್‌ ನೀನು ಭ್ರಷ್ಟಾಚಾರದ ಪಿತಾಮಹ: ಡಿಕೆಶಿ ಕೆಂಡಾಮಂಡಲ

    – ರಾಮನಗರದಲ್ಲಿ ಒಂದು ಕ್ಷೇತ್ರ ಗೆಲ್ಲಲಾಗದ ಅಶ್ವಥ್ ನಾರಾಯಣ್, ಅಲ್ಪಸಂಖ್ಯಾತ ನಾಯಕನನ್ನು ಅಸಮರ್ಥ ಎನ್ನುತ್ತೀಯಾ?
    – ಏಕವಚನದಲ್ಲೇ ಡಿಸಿಎಂ ಆಕ್ರೋಶ

    ಬೆಂಗಳೂರು: ಅಶ್ವಥ್ ನಾರಾಯಣ್ (Ashwath Narayan) ನೀನು, ನಿನ್ನ ಪಕ್ಷ ಭ್ರಷ್ಟಾಚಾರದ ಪಿತಾಮಹರು. ರಾಮನಗರದಲ್ಲಿ ಒಂದೂ ಕ್ಷೇತ್ರ ಗೆಲ್ಲಲಾಗದವ, ಅಲ್ಪಸಂಖ್ಯಾತ ನಾಯಕನನ್ನು ಅಸಮರ್ಥ ಎನ್ನುತ್ತೀಯಾ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಹರಿಹಾಯ್ದರು.

    ವಿಧಾನಸಭೆ ಕಲಾಪದಲ್ಲಿ (Karnataka Legislative Assembly) ರಸಗೊಬ್ಬರ ಕೊರತೆ ವಿಚಾರವಾಗಿ ನಡೆದ ಚರ್ಚೆ ವೇಳೆ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಬುಧವಾರ ಬಿರುಸಿನ ಮಾತಿನ ಚಕಮಕಿ ನಡೆಯಿತು. ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಅವರು ಚರ್ಚೆ ವೇಳೆ ಮಾತನಾಡುವಾಗ ತಪ್ಪು ಅಂಕಿ ಅಂಶಗಳನ್ನು ನೀಡಿದ ಕಾರಣ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಸರಿ ಅಂಕಿ-ಅಂಶಗಳ ಸ್ಪಷ್ಟನೆ ನೀಡಲು ಮುಂದಾದರು. ಇದನ್ನೂ ಓದಿ: ನಾನು ಕೇಂದ್ರಕ್ಕೆ ಹೋಗಲ್ಲ, ರಾಜ್ಯದಲ್ಲೇ ಇರ್ತೀನಿ: ಸಿದ್ದರಾಮಯ್ಯ

    ಈ ವೇಳೆ ಅಶ್ವಥ್ ನಾರಾಯಣ್ ಮಧ್ಯಪ್ರವೇಶಿಸಿ ವಾಗ್ವಾದ ಆರಂಭಿಸಿದರು. ಆಗ ಸಚಿವ ಕೆ.ಜೆ ಜಾರ್ಜ್, ಸುಳ್ಳು ಹೇಳಬೇಡಿ ಎಂದು ಹೇಳಿದಾಗ, ಅಶ್ವಥ್ ನಾರಾಯಣ್, ಸ್ಮಾರ್ಟ್ ಮೀಟರ್ ವಿಚಾರವಾಗಿ ಮಾತನಾಡಲು ನಿಮಗೆ ಧಮ್, ಯೋಗ್ಯತೆ ಇಲ್ಲ. ನೀವು ಅಸಮರ್ಥ ಎಂದು ಟೀಕೆ ಮಾಡಿದರು.

    ಈ ವೇಳೆ ಮಧ್ಯ ಪ್ರವೇಶಿಸಿದ ಡಿಸಿಎಂ ಡಿ.ಕೆ ಶಿವಕುಮಾರ್, ಅಸಮರ್ಥರು ಅವರಲ್ಲ. ನೀವು ಅಸಮರ್ಥರು. ರಾಜ್ಯದ ಜನ ಮತ ನೀಡಿ ಅಧಿಕಾರ ನಡೆಸಲು ಅವಕಾಶ ನೀಡಿರುವ ಜಾರ್ಜ್ ಅವರು ಅಸಮರ್ಥರಲ್ಲ. ನೀವು ಅಸಮರ್ಥರಾಗಿರುವ ಕಾರಣ ನಿಮ್ಮ ಪಕ್ಷ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿದೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ನಾಳೆ ದರ್ಶನ್‌ ಪಾಲಿಗೆ ಬಿಗ್‌ ಡೇ – ಸುಪ್ರೀಂ ತೀರ್ಪಿನತ್ತ ಚಿತ್ತ, ಮತ್ತೆ ಜೈಲುಪಾಲಾಗ್ತಾರಾ ನಟ?

    ಈ ಸಂದರ್ಭ ಅಶ್ವತ್ ನಾರಾಯಣ್, ಈ ಸರ್ಕಾರ ಅಸಮರ್ಥ, ಜನವಿರೋಧಿ, ಭ್ರಷ್ಟಾಚಾರ ಸರ್ಕಾರ ಎಂದರು. ಇದಕ್ಕೆ ಏಕವಚನದಲ್ಲೇ ತಿರುಗೇಟು ನೀಡಿದ ಡಿ.ಕೆ ಶಿವಕುಮಾರ್, ನೀನು, ನಿನ್ನ ಪಕ್ಷ ಭ್ರಷ್ಟಾಚಾರದ ಪಿತಾಮಹರು. ನಿಮ್ಮ ಭ್ರಷ್ಟಾಚಾರದಿಂದಲೇ ನಾವು 135 ಸ್ಥಾನಗಳೊಂದಿಗೆ ಅಧಿಕಾರಕ್ಕೆ ಬಂದಿದ್ದೇವೆ. ನೀನು ರಾಮನಗರಕ್ಕೆ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಬಂದಿದ್ಯಲ್ಲ. ಆಗ ನಿನಗೆ ಡೆಪಾಸಿಟ್ ಕೂಡ ಬರಲಿಲ್ಲ. ರಾಮನಗರದಲ್ಲಿ 1 ಸೀಟ್ ಕೂಡ ಬರಲಿಲ್ಲ. ನೀನು ನಿಜವಾದ ಅಸಮರ್ಥ ಎಂದು ಕೆಂಡಾಮಂಡಲರಾದರು.

    ಈ ವೇಳೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವೆ ವಾಗ್ವಾದ ಹೆಚ್ಚಾದ ಕಾರಣ ಸ್ಪೀಕರ್ ಅವರು ಕಲಾಪವನ್ನು ಅಲ್ಪಾವಧಿಗೆ ಮುಂದೂಡಿದರು.

  • ಪಬ್ಲಿಕ್ ಟಿವಿ `ವಿದ್ಯಾಮಂದಿರ’ – ಲಕ್ಕಿ ಡಿಪ್‌ನಲ್ಲಿ ಲ್ಯಾಪ್‌ಟಾಪ್‌, ಟ್ಯಾಬ್‌ ಗೆದ್ದ ಅದೃಷ್ಟವಂತರು ಇವರೇ…

    ಪಬ್ಲಿಕ್ ಟಿವಿ `ವಿದ್ಯಾಮಂದಿರ’ – ಲಕ್ಕಿ ಡಿಪ್‌ನಲ್ಲಿ ಲ್ಯಾಪ್‌ಟಾಪ್‌, ಟ್ಯಾಬ್‌ ಗೆದ್ದ ಅದೃಷ್ಟವಂತರು ಇವರೇ…

    ಬೆಂಗಳೂರು: `ಪಬ್ಲಿಕ್ ಟಿವಿ’ ಆಯೋಜಿಸಿರುವ 4ನೇ ಆವೃತ್ತಿಯ `ವಿದ್ಯಾಮಂದಿರ’ (Public TV Vidhya Mandira) ಶೈಕ್ಷಣಿಕ ಮೇಳಕ್ಕೆ ಇಂದು ಬೆಳಗ್ಗೆ ಅದ್ಧೂರಿ ಚಾಲನೆ ನೀಡಲಾಗಿದೆ. ವಿದ್ಯಾರ್ಥಿಗಳು ಮೇಳಕ್ಕೆ ಆಗಮಿಸುತ್ತಿದ್ದು ಮುಂದಿನ ಭವಿಷ್ಯಕ್ಕಾಗಿ ತಮ್ಮ ನೆಚ್ಚಿನ ಕಾಲೇಜುಗಳ ಬಗ್ಗೆ ಮಾಹಿತಿ ಪಡೆದುಕೊಳ್ತಿದ್ದಾರೆ. ಇದರೊಂದಿಗೆ ಬಂಪರ್ ಗಿಫ್ಟ್‌ಗಳನ್ನೂ ಬಾಚಿಕೊಂಡಿದ್ದಾರೆ.

    ಹೌದು. ಜೀನಿ ಸ್ಲಿಮ್‌ ಪ್ರಾಯೋಜಕತ್ವದಲ್ಲಿ ಲಕ್ಕಿಡಿಪ್‌ ವಿನ್ನರ್‌ಗಳಿಗೆ ಪ್ರತಿ ಒಂದು ಗಂಟೆಗೆ ಒಂದು ಟ್ಯಾಬ್‌ ಮತ್ತು ಸಪ್ತಗಿರಿ ಎನ್‌ಪಿಎಸ್‌ ವಿಶ್ವವಿದ್ಯಾಲಯದ ಕಡೆಯಿಂದ ಲ್ಯಾಪ್‌ಟಾಪ್‌ಗಳನ್ನ ಬಹುಮಾನಗಳನ್ನಾಗಿ ಕೊಡಲಾಗುತ್ತಿದೆ. ಮೊದಲ ದಿನ ಸಪ್ತಗಿರಿ ಎನ್‌ಪಿಎಸ್‌ ವಿವಿಯು ಓರ್ವ ವಿದ್ಯಾರ್ಥಿನಿಗೆ ಲ್ಯಾಪ್‌ಟಾಪ್‌ ಬಹುಮಾನ ನೀಡಿದ್ರೆ, ಜೀನಿ ಸ್ಲಿಮ್‌ ಲಕ್ಕಿಡಿಪ್‌ನಲ್ಲಿ ಗೆದ್ದ ಇಬ್ಬರು ವಿದ್ಯಾರ್ಥಿಗಳಿಗೆ ಟ್ಯಾಬ್‌ಗಳನ್ನ ಬಹುಮಾನವಾಗಿ ನೀಡಿತು. ಶಿವಮೊಗ್ಗದ ವಿದ್ಯಾರ್ಥಿನಿ ಶ್ವೇತಾ ಲ್ಯಾಪ್‌ಟಾಪ್‌ ಬಹುಮಾನ ಬಾಚಿಕೊಂಡರೆ, ಸಂಭ್ರಮ, ಆದಿತ್ಯ ಶಂಕರ್‌ ಲಕ್ಕಿಡಿಪ್‌ನಲ್ಲಿ ಟ್ಯಾಬ್‌ ಪಡೆದ ಅದೃಷ್ಟವಂತರಾದ್ರು. ಬಹುಮಾನ ಪಡೆದು ಪಬ್ಲಿಕ್‌ ಟಿವಿಗೆ ಧನ್ಯವಾದ ಹೇಳಿದ್ರು.

    ನಗರದ ಮಲ್ಲೇಶ್ವರಂನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಿಜಿ ಕೋರ್ಸ್‌ಗಳ ಮೆಗಾ ಶೈಕ್ಷಣಿಕ ಮೇಳಕ್ಕೆ ‘ಪಬ್ಲಿಕ್‌ ಟಿವಿ’ ಮುಖ್ಯಸ್ಥರಾದ ಹೆಚ್‌.ಆರ್‌.ರಂಗನಾಥ್‌ (H.R.Ranganath) ಬೆಳಗ್ಗೆ ಚಾಲನೆ ಕೊಟ್ಟರು. ಟೇಪ್‌ ಕತ್ತರಿಸುವ ಮೂಲಕ ಮೇಳವನ್ನು ಉದ್ಘಾಟಿಸಲಾಯಿತು. ಮಲ್ಲೇಶ್ವರಂ ಶಾಸಕ ಡಾ. ಸಿ.ಎನ್.ಅಶ್ವಥ್‌ ನಾರಾಯಣ್‌ (Ashwath Narayan) ಅವರು ಸಾಥ್‌ ನೀಡಿದರು. ಪ್ರೆಸಿಡೆನ್ಸಿ ಯೂನಿವರ್ಸಿಟಿಯ ವಿಸಿ ಡಾ. ವಿದ್ಯಾಶಂಕರ್ ಶೆಟ್ಟಿ, ಈಸ್ಟ್‌ ವೆಸ್ಟ್‌ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್‌ನ ಮುಖ್ಯಸ್ಥರಾದ ರಶ್ಮಿ ರವಿಕಿರಣ್‌ ಉಪಸ್ಥಿತರಿದ್ದರು.

    45ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಭಾಗಿ
    45ಕ್ಕೂ ಹೆಚ್ಚು ಪ್ರಮುಖ ಶಿಕ್ಷಣ ಸಂಸ್ಥೆಗಳು ಒಂದೇ ಸೂರಿನಡಿ ಪಾಲ್ಗೊಂಡಿವೆ. ಉದ್ಘಾಟನೆ ಬಳಿಕ ಎಜುಕೇಷನ್‌ ಎಕ್ಸ್‌ಫೋದಲ್ಲಿ ಪಾಲ್ಗೊಂಡಿರುವ ವಿವಿಧ ಸ್ಟಾಲ್‌ಗಳಿಗೆ ಅತಿಥಿಗಳು ಭೇಟಿ ನೀಡಿದರು. ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ದೀಪ ಬೆಳಗುವ ಮೂಲಕ ವೇದಿಕೆ ಕಾರ್ಯಕ್ರಮ ಉದ್ಘಾಟಿಸಲಾಯಿತು.

    ಇನ್ನೂ ಪಬ್ಲಿಕ್‌ ಟಿವಿಯ ಮೆಗಾ ಎಜುಕೇಷನ್‌ ಎಕ್ಸ್‌ಪೋಗೆ ಮೊದಲ ದಿನ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಶೈಕ್ಷಣಿಕ ಮೇಳಕ್ಕೆ ಆಗಮಿಸುತ್ತಿದ್ದಾರೆ. ಪೋಷಕರ ಜೊತೆ ಮೇಳದಲ್ಲಿ ಪಾಲ್ಗೊಂಡು ಪಿಜಿ ಕೋರ್ಸ್‌ಗಳ ಬಗ್ಗೆ ಉಪಯುಕ್ತ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

  • ಪಬ್ಲಿಕ್‌ ಟಿವಿ ವಿದ್ಯಾಮಂದಿರ ಶೈಕ್ಷಣಿಕ ಮೇಳಕ್ಕೆ ಅದ್ದೂರಿ ಚಾಲನೆ

    ಪಬ್ಲಿಕ್‌ ಟಿವಿ ವಿದ್ಯಾಮಂದಿರ ಶೈಕ್ಷಣಿಕ ಮೇಳಕ್ಕೆ ಅದ್ದೂರಿ ಚಾಲನೆ

    – ಟೇಪ್‌ ಕಟ್‌ ಮಾಡಿ ಮೇಳ ಉದ್ಘಾಟನೆ; ಹೆಚ್‌.ಆರ್‌.ರಂಗನಾಥ್‌, ಅಶ್ವಥ್‌ ನಾರಾಯಣ್‌ ಸಾಥ್‌
    – ಪಿಜಿ ಕೋರ್ಸ್‌ಗಳ ಮೆಗಾ ಶೈಕ್ಷಣಿಕ ಮೇಳಕ್ಕೆ ವಿದ್ಯಾರ್ಥಿಗಳ ದಂಡು

    ಬೆಂಗಳೂರು: `ಪಬ್ಲಿಕ್ ಟಿವಿ’ ಆಯೋಜಿಸಿರುವ 4ನೇ ಆವೃತ್ತಿಯ `ವಿದ್ಯಾಮಂದಿರ’ (Public TV Vidhya Mandira) ಶೈಕ್ಷಣಿಕ ಮೇಳಕ್ಕೆ ಶನಿವಾರ ಅದ್ದೂರಿ ಚಾಲನೆ ಸಿಕ್ಕಿತು.

    ನಗರದ ಮಲ್ಲೇಶ್ವರಂನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಿಜಿ ಕೋರ್ಸ್‌ಗಳ ಮೆಗಾ ಶೈಕ್ಷಣಿಕ ಮೇಳಕ್ಕೆ ‘ಪಬ್ಲಿಕ್‌ ಟಿವಿ’ ಮುಖ್ಯಸ್ಥರಾದ ಹೆಚ್‌.ಆರ್‌.ರಂಗನಾಥ್‌ (H.R.Ranganath) ಚಾಲನೆ ಕೊಟ್ಟರು. ಟೇಪ್‌ ಕತ್ತರಿಸುವ ಮೂಲಕ ಮೇಳವನ್ನು ಉದ್ಘಾಟಿಸಲಾಯಿತು. ಮಲ್ಲೇಶ್ವರಂ ಶಾಸಕ ಡಾ. ಸಿ.ಎನ್.ಅಶ್ವಥ್‌ ನಾರಾಯಣ್‌ (Ashwath Narayan) ಅವರು ಸಾಥ್‌ ನೀಡಿದರು. ಪ್ರೆಸಿಡೆನ್ಸಿ ಯೂನಿವರ್ಸಿಟಿಯ ವಿಸಿ ಡಾ. ವಿದ್ಯಾಶಂಕರ್ ಶೆಟ್ಟಿ, ಈಸ್ಟ್‌ ವೆಸ್ಟ್‌ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್‌ನ ಮುಖ್ಯಸ್ಥರಾದ ರಶ್ಮಿ ರವಿಕಿರಣ್‌ ಉಪಸ್ಥಿತರಿದ್ದರು. ಇದನ್ನೂ ಓದಿ: `ಪಬ್ಲಿಕ್ ಟಿವಿ’ ವಿದ್ಯಾಮಂದಿರಕ್ಕೆ ಇಂದು ಚಾಲನೆ

    45 ಕ್ಕೂ ಹೆಚ್ಚು ಪ್ರಮುಖ ಶಿಕ್ಷಣ ಸಂಸ್ಥೆಗಳು ಒಂದೇ ಸೂರಿನಡಿ ಪಾಲ್ಗೊಂಡಿವೆ. ಉದ್ಘಾಟನೆ ಬಳಿಕ ಎಜುಕೇಷನ್‌ ಎಕ್ಸ್‌ಫೋದಲ್ಲಿ ಪಾಲ್ಗೊಂಡಿರುವ ವಿವಿಧ ಸ್ಟಾಲ್‌ಗಳಿಗೆ ಅತಿಥಿಗಳು ಭೇಟಿ ನೀಡಿದರು. ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ದೀಪ ಬೆಳಗುವ ಮೂಲಕ ವೇದಿಕೆ ಕಾರ್ಯಕ್ರಮ ಉದ್ಘಾಟಿಸಲಾಯಿತು.

    ಪಬ್ಲಿಕ್‌ ಟಿವಿಯ ಮೆಗಾ ಎಜುಕೇಷನ್‌ ಎಕ್ಸ್‌ಪೋಗೆ ಉದ್ಘಾಟನೆ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಶೈಕ್ಷಣಿಕ ಮೇಳಕ್ಕೆ ಆಗಮಿಸುತ್ತಿದ್ದಾರೆ. ಪೋಷಕರ ಜೊತೆ ಮೇಳದಲ್ಲಿ ಪಾಲ್ಗೊಂಡು ಪಿಜಿ ಕೋರ್ಸ್‌ಗಳ ಬಗ್ಗೆ ಉಪಯುಕ್ತ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

    ವಿದ್ಯಾಮಂದಿರ ಶೈಕ್ಷಣಿಕ ಮೇಳವು ಇಂದು ಮತ್ತು ನಾಳೆ ಬೆಳಗ್ಗೆ 9 ರಿಂದ ಸಂಜೆ 6 ಗಂಟೆ ವರೆಗೆ ನಡೆಯಲಿದೆ. ಲಕ್ಕಿ ಡಿಪ್‌ ಮೂಲಕ ಲ್ಯಾಪ್‌ಟಾಪ್‌ ಮತ್ತು ಟ್ಯಾಬ್‌ ಗೆಲ್ಲುವ ಸುವರ್ಣಾವಕಾಶ ಕೂಡ ಇದೆ. ಪ್ರತಿ ಗಂಟೆಗೆ ಲಕ್ಕಿ ಡಿಪ್‌ ಮೂಲಕ ಟ್ಯಾಬ್‌ ಗೆಲ್ಲಬಹುದು. ಬೆಳಗ್ಗೆ 9 ರಿಂದ 11 ಗಂಟೆಯೊಳಗೆ ರಿಜಿಸ್ಟರ್‌ಗೆ ಅವಕಾಶ ಇದೆ. ಇದನ್ನೂ ಓದಿ: ‘ಪಬ್ಲಿಕ್ ಟಿವಿ’ ವಿದ್ಯಾಮಂದಿರಕ್ಕೆ ಬನ್ನಿ – ಪ್ರತಿ ಒಂದು ಗಂಟೆಗೆ ಟ್ಯಾಬ್ ಗೆಲ್ಲಿ

  • ಸ್ಮಾರ್ಟ್ ಮೀಟರ್ 15 ಸಾವಿರ ಕೋಟಿ ಹಗರಣ ಆರೋಪ – ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದ ಅಶ್ವಥ್ ನಾರಾಯಣ್‌

    ಸ್ಮಾರ್ಟ್ ಮೀಟರ್ 15 ಸಾವಿರ ಕೋಟಿ ಹಗರಣ ಆರೋಪ – ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದ ಅಶ್ವಥ್ ನಾರಾಯಣ್‌

    ಬೆಂಗಳೂರು: ಸ್ಮಾರ್ಟ್ ಮೀಟರ್‌ಗಳ 15 ಸಾವಿರ ಕೋಟಿ ರೂ. ಹಗರಣ‌ (Smart Meter Scam) ಆರೋಪದ ಜಟಾಪಟಿ ಮತ್ತೆ ಶುರುವಾಗಿದೆ. ಈ ಸಲುವಾಗಿ ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಜನಜಾಗೃತಿ ಹಾಗೂ ಆನ್‍ಲೈನ್ ಮೂಲಕ ಸಹಿ ಸಂಗ್ರಹ ಅಭಿಯಾನವನ್ನು ಬಿಜೆಪಿ (BJP) ಆರಂಭಿಸಿದೆ.

    ಸಹಿ ಸಂಗ್ರಹ ಅಭಿಯಾನಕ್ಕೆ ಬಿಜೆಪಿ ಕಚೇರಿಯಲ್ಲಿ ಶಾಸಕ ಡಾ.ಸಿ.ಎನ್ ಅಶ್ವಥ್ ನಾರಾಯಣ್‌ (Ashwath Narayan) ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿ, ಸರ್ಕಾರದ ಹಗಲುದರೋಡೆಯನ್ನು ಜನತೆಗೆ ತಿಳಿಸಲಿದ್ದೇವೆ. ಈ ಬಗ್ಗೆ ಸೋಮವಾರ ಲೋಕಾಯುಕ್ತಕ್ಕೆ ದೂರು ನೀಡಿದ್ದೇವೆ. ಸಿಎಜಿಗೆ, ಪ್ರಿನ್ಸಿಪಲ್ ಆಡಿಟರ್ ಜನರಲ್‍ಗೂ ದೂರು ನೀಡಿದ್ದೇವೆ. ಆದಷ್ಟು ಬೇಗನೆ ತನಿಖೆ ಮಾಡಲು ಕೋರಿದ್ದೇವೆ. ಎಲ್ಲಾ ದಿಕ್ಕಿನಿಂದ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಸ್ಮಾರ್ಟ್ ಮೀಟರ್ ದೊಡ್ಡ ಹಗರಣ- ಸಚಿವ ಜಾರ್ಜ್ ತಪ್ಪು ಮಾಹಿತಿ ನೀಡಿದ್ದಾರೆ: ಅಶ್ವಥ್ ನಾರಾಯಣ್‌

    ಸಾರ್ವಜನಿಕರು ಇದಕ್ಕೆ ದೂರು ಕೊಡಬಹುದು. ಇಂಧನ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಹಗರಣದ ವಿಷಯವನ್ನು ಸಾಕಷ್ಟು ಬಾರಿ ಪ್ರಸ್ತಾಪಿಸಿದ್ದೇವೆ. ಇದನ್ನು ತಾರ್ಕಿಕ ತುದಿ ಮುಟ್ಟಿಸಲು ಈಗಾಗಲೇ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದೇವೆ. ಸದನದಲ್ಲಿ ಹೇಳಿದರೂ ಪ್ರಯೋಜನವಿಲ್ಲ. ಇಂತಹ ಭಂಡಗೆಟ್ಟವರಿಗೆ, ಬೇಲಿಯೇ ಎದ್ದು ಹೊಲ ಮೇಯುವ ಸ್ಥಿತಿ ಇರುವಾಗ ಯಾವ ರೀತಿ ಜನಕ್ಕೆ ನ್ಯಾಯ ಸಿಗಲು ಸಾಧ್ಯ? ಇಷ್ಟ ಬಂದಂತೆ ಮೇಯುವ ಪರಿಸ್ಥಿತಿ ಇದೆ. ಖಜಾನೆ ಕಾಯುವವರೇ ಕನ್ನ ಹಾಕಲು ಶುರು ಮಾಡಿದರೆ, ಎಲ್ಲಿಗೆ ಹೋಗಬೇಕು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸ್ಮಾರ್ಟ್ ಮೀಟರ್ ಹಗರಣ ಆರೋಪ – ಸಚಿವ ಜಾರ್ಜ್ ವಿರುದ್ಧ ಲೋಕಾಯುಕ್ತಕ್ಕೆ ಬಿಜೆಪಿ ದೂರು