Tag: Ashta mutt

  • ಪಟ್ಟದ ದೇವರನ್ನು ಶಿರೂರು ಶ್ರೀಗಳಿಗೆ ಕೊಡದೆ ಇರಲು ಕಾರಣವಿದೆ – ರಹಸ್ಯ ಬಿಚ್ಚಿಟ್ಟ ಪೇಜಾವರ ಶ್ರೀ

    ಪಟ್ಟದ ದೇವರನ್ನು ಶಿರೂರು ಶ್ರೀಗಳಿಗೆ ಕೊಡದೆ ಇರಲು ಕಾರಣವಿದೆ – ರಹಸ್ಯ ಬಿಚ್ಚಿಟ್ಟ ಪೇಜಾವರ ಶ್ರೀ

    ಕಾರವಾರ: ಶಿರೂರು ಶ್ರೀಗಳು ನನಗೆ ಮಕ್ಕಳಿದ್ದಾರೆ ಎಂದು ಅವರೇ ಒಪ್ಪಿಕೊಂಡಿದ್ದರಿಂದ ಅವರಿಗೆ ಪಟ್ಟದ ದೇವರನ್ನು ಕೊಡಲಿಲ್ಲ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.

    ಶಿರೂರು ಶ್ರೀ ಗಳ ಅಂತಿಮ ದರ್ಶನಕ್ಕೆ ಹೋಗದ ಕುರಿತು ಸ್ವಷ್ಟನೆ ನೀಡಿ ಶಿರಸಿಯಲ್ಲಿ ಮಾತನಾಡಿದ ಪೇಜಾವರ ಶ್ರೀಗಳು, ಶಿರೂರು ಶ್ರೀಗಳು ಸನ್ಯಾಸತ್ವಕ್ಕೆ ಭ್ರಷ್ಟರಾಗಿದ್ದರು ಎಂಬುದರ ಬಗ್ಗೆ ನಮ್ಮ ಬಳಿ ಮಾಹಿತಿಗಳಿವೆ. ಅದ್ದರಿಂದ ಅವರನ್ನು ಪೀಠಾಧಿಪತಿ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಸ್ವಾಮಿಗಳಾದ ಮೇಲೆ ಧರ್ಮ ಬೇಕು. ಅದ್ದರಿಂದ ಅವರು ಮಠಾಧೀಶರಲ್ಲ, ಅವರು ಸನ್ಯಾಸವನ್ನು ಬಿಟ್ಟಿದ್ದಾರೆ, ಅವರೇ ಒಪ್ಪಿಕೊಂಡಿದ್ದಾರೆ. ಆದ್ದರಿಂದ ಅವರ ಅಂತಿಮ ದರ್ಶನಕ್ಕೆ ಹೋಗಿಲ್ಲ ಎಂದರು.

    ಶಿರೂರು ಶ್ರೀಗಳ ಮೇಲೆ ಮಠಾಧೀಶರಿಗೆ ದ್ವೇಷವಿಲ್ಲ. ನನ್ನ ಅವರ ಮಧ್ಯೆ ಉತ್ತಮ ವಿಶ್ವಾಸವಿತ್ತು. ಆದರೆ ಕೆಲವು ನೈತಿಕ, ತಾತ್ವಿಕ ಕಾರಣಗಳಿಂದ ಅವರ ಅಂತಿಮ ದರ್ಶನಕ್ಕೆ ಹೋಗಿಲ್ಲ. ಅವರ ಅಂತ್ಯ ಸಂಸ್ಕಾರಕ್ಕೆ ಎಲ್ಲಾ ವ್ಯವಸ್ಥೆ ಮಾಡುತ್ತೇವೆ. ಶಿರೂರು ಶ್ರೀಗಳನ್ನು ಪೀಠಾಧಿಪತಿ ಅಲ್ಲ ಎಂದು ಎಲ್ಲರೂ ತೀರ್ಮಾನ ಮಾಡಿ ಒಪ್ಪಿಕೊಂಡಿದ್ದೇವೆ. ಅವರು ಸನ್ಯಾಸ ಜೀವನದಿಂದ ಭ್ರಷ್ಟರಾಗಿದ್ದಾರೆ ಅವರಿಗೆ ಮಗನಿದ್ದಾನೆ. ತನ್ನ ಮಗನೆಂದು ಎಲ್ಲರಿಗೂ ತೋರಿಸಿದ್ದಾರೆ. ಅಂತವರು ಸ್ವಾಮಿಗಳಾಗಲು ಸಾಧ್ಯವಿಲ್ಲ ಎಂದರು.

    ಇದೇ ವೇಳೆ ಶಿರೂರು ಶ್ರೀಗಳ ಸಂಶಯಾಸ್ಪದ ಸಾವು ಕುರಿತು ಪೂರ್ವಾಶ್ರಮದ ಸಹೋದರ ಆರೋಪದ ಕುರಿತು ಪ್ರತಿಕ್ರಿಯೆ ನೀಡಿ, ಅವರು ನಿನ್ನೆ ನನ್ನೊಂದಿಗೆ ಲಾತವ್ಯ ಆಚಾರ್ಯ ಮಾತನಾಡುವಾಗ ಶಿರೂರು ಶ್ರೀಗಳು ಫಲಾಹಾರವನ್ನು ತೆಗೆದುಕೊಂಡಿದ್ದರು. ಆಹಾರವನ್ನು ಒಂದು ಕೆಟ್ಟ ಕಿಲುಬು ಪಾತ್ರೆಯನ್ನು ನೀಡಲಾಗಿದೆ ಅಂದಿದ್ದರು. ಅವರ ಸಾವಿಗೆ ಪಾತ್ರೆ ದೋಷ ಕಾರಣವಾಗಿರುವ ಸಾಧ್ಯತೆಗಳಿವೆ. ನಿನ್ನೆ ಅನುಮಾನ ಬಾರದ್ದು ಇಂದು ಹೇಗೆ ಅನುಮಾನ ಬಂತು. ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಬಂದ ಬಳಿಕ ಈ ಕುರಿತು ಎಲ್ಲಾ ವಿಷಯ ತಿಳಿಯುತ್ತದೆ ಎಂದರು.

  • ಶಿರೂರು ಶ್ರೀಗಳ ಕೊನೆಯ ಮಾತು

    ಶಿರೂರು ಶ್ರೀಗಳ ಕೊನೆಯ ಮಾತು

    ಬೆಂಗಳೂರು: ಶಿರೂರು ಶ್ರೀಗಳು ಪತ್ರಕರ್ತರೊಂದಿಗೆ ಪಟ್ಟದ ದೇವರ ವಿಚಾರವಾಗಿ ಮಾತನಾಡಿರುವ ವಿಡಿಯೋವೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

    ಶ್ರೀಗಳ ಕೊನೆಯ ಮಾತು:
    ನಾನು ಪದೇ ಪದೇ ಆಸ್ಪತ್ರೆಗೆ ದಾಖಲಾಗುತ್ತಿದ್ದರಿಂದ ಪಟ್ಟದ ದೇವರ ವಿಗ್ರಹಗಳನ್ನು ಕೃಷ್ಣ ಮಠಕ್ಕೆ ನೀಡಿದ್ದೆ. ಆದ್ರೆ ಈಗ ಕೃಷ್ಣ ಮಠ ನನ್ನ ವಿಗ್ರಹಗಳನ್ನು ಮರಳಿ ಕೊಡುತ್ತಿಲ್ಲ. ನನನಗೆ ನನ್ನ ವಿಗ್ರಹಗಳು ಬೇಕು. ಅದಕ್ಕಾಗಿ ನ್ಯಾಯಾಲಯದ ಮೊರೆ ಹೋಗಲು ಸಹ ನಾನು ಸಿದ್ಧ. ನನ್ನ ವಿಗ್ರಹಗಳನ್ನು ಪಡೆಯೋದಕ್ಕಾಗಿ ಸಮಯ ಬಂದಾಗ ಕ್ರಿಮಿನಲ್ ಕೇಸ್ ಹಾಕುತ್ತೇನೆ ಅಂತ ಹೇಳಿದ್ದರು.

    ಕೃಷ್ಣ ನನ್ನ ಸ್ವತ್ತು ಅಲ್ಲ, ರಾಮ ನನ್ನ ಸ್ವತ್ತು ಅಲ್ಲ, ವಿಠಲ್ ನನ್ನ ಸ್ವತ್ತು. ನಾನು ನನ್ನ ವಿಗ್ರಹಗಳನ್ನು ಕೇಳಿದರು ಕೊಡುತ್ತಿಲ್ಲ. ಕೃಷ್ಣ ಮಠದೊಳಗೆ ಗನ್ ಮ್ಯಾನ್ ಗಳನ್ನು ನೇಮಿಸಿಕೊಳ್ಳಲಾಗಿದೆ. ಗನ್ ಮ್ಯಾನ್ ವ್ಯವಸ್ಥೆ ಬೇಕಾಗಿರೋದು ನನಗೆ ಆದರೆ ಕೃಷ್ಣ ಮಠದಲ್ಲಿ 50 ಜನ ಗನ್ ಮ್ಯಾನ್‍ಗಳನ್ನು ಇರಿಸಿಕೊಂಡಿದ್ದು ಯಾಕೆ ಎಂದು ಪ್ರಶ್ನಿಸಿದರು. ಎಲ್ಲ ಸ್ವಾಮಿಗಳು ಒಟ್ಟಾಗಿ ಇದ್ದಾರೆ. ಎಲ್ಲ ಸ್ವಾಮಿಗಳು ಲೀಡರ್ ಹೇಳಿದರೆ ಮಾತ್ರ ವಿಗ್ರಹಗಳನ್ನು ಕೊಡುತ್ತೇವೆ ಅಂತಾ ಹೇಳುತ್ತಿದ್ದಾರೆ ಎಂದು ಪೇಜಾವರ ಶ್ರೀಗಳ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದರು.

    https://www.youtube.com/watch?v=oIVAFQigp0M

  • ಶಿಷ್ಯನನ್ನು ಸ್ವೀಕರಿಸೋವರೆಗೂ ಶೀರೂರು ಶ್ರೀಗಳಿಗೆ ಪಟ್ಟದ ದೇವರು ಕೊಡಬಾರದು: ಉಡುಪಿ ಅಷ್ಟಮಠಾಧೀಶರ ಪಟ್ಟು

    ಶಿಷ್ಯನನ್ನು ಸ್ವೀಕರಿಸೋವರೆಗೂ ಶೀರೂರು ಶ್ರೀಗಳಿಗೆ ಪಟ್ಟದ ದೇವರು ಕೊಡಬಾರದು: ಉಡುಪಿ ಅಷ್ಟಮಠಾಧೀಶರ ಪಟ್ಟು

    ಉಡುಪಿ: ಉಡುಪಿ ಶೀರೂರು ಸ್ವಾಮೀಜಿ ಕಡ್ಡಾಯವಾಗಿ ಶಿಷ್ಯ ಸ್ವೀಕಾರ ಮಾಡಬೇಕು ಎಂಬ ವಿಚಾರದಲ್ಲಿ ಇತರ ಅಷ್ಟಮಠಾಧೀಶರು ಕೆಲವೊಂದು ನಿರ್ಣಯ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಶಿರೂರು ಮಠಾಧೀಶರ ಬಗ್ಗೆ ಕೆಲ ತಿಂಗಳ ಹಿಂದೆ ಆರಂಭವಾಗಿದ್ದ ಚರ್ಚೆ ಈಗ ಮತ್ತೊಮ್ಮೆ ಜೀವ ಪಡೆದುಕೊಂಡಿದೆ. ಭಾನುವಾರ ಸೇರಿದ ಐದು ಮಠಾಧೀಶರು ಸೇರಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಆದರೆ ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ ಎಂದು ಪರ್ಯಾಯ ಪಲಿಮಾರು ಮಠಾಧೀಶರು ತಿಳಿಸಿದ್ದಾರೆ.

    ಅಷ್ಟಮಠಾಧೀಶರು ಪಾಲಿಸಬೇಕಾದ ನಿಯಮಗಳನ್ನು ಶೀರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಪಾಲಿಸುತ್ತಿಲ್ಲ ಎಂಬ ಬಗ್ಗೆ ಕೆಲ ತಿಂಗಳ ಹಿಂದೆ ಆರೋಪ ಕೇಳಿಬಂದಿತ್ತು. ಇದೇ ಸಂದರ್ಭದಲ್ಲಿ ಶೀರೂರು ಸ್ವಾಮೀಜಿಯವರಿಗೆ ಅನಾರೋಗ್ಯವಾಗಿದೆ. ಈ ಸಂದರ್ಭ ದಿನನಿತ್ಯ ಪೂಜೆ ಮಾಡುವ ಪಟ್ಟದ ದೇವರನ್ನು ಕೃಷ್ಣಮಠದಲ್ಲಿ ಇರಿಸಿದ್ದರು. ಅಂದಿನಿಂದ ಪರ್ಯಾಯ ಪೀಠದಲ್ಲಿರುವ ಪಲಿಮಾರು ಸ್ವಾಮೀಜಿ ಪಟ್ಟದ ದೇವರಿಗೆ ಪೂಜೆ ನಡೆಸುತ್ತಿದ್ದಾರೆ.

    ಈಗ ಶೀರೂರು ಸ್ವಾಮೀಜಿ ಗುಣಮುಖರಾಗಿದ್ದು, ಪಟ್ಟದ ದೇವರನ್ನು ವಾಪಸ್ ಕೇಳುತ್ತಿದ್ದಾರೆ. ಆದರೆ ಉಳಿದ ಏಳು ಮಠಾಧೀಶರು ಶೀರೂರು ಶ್ರೀಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ತನಕ ಪಟ್ಟದ ದೇವರನ್ನು ಶೀರೂರು ಸ್ವಾಮೀಜಿಗೆ ಕೊಡಬಾರದು ಎಂದು ನಿರ್ಧರಿಸಿದ್ದಾರೆ.

    ಪೇಜಾವರ ಸ್ವಾಮೀಜಿ ನೇತೃತ್ವದಲ್ಲಿ ಇನ್ನೊಮ್ಮೆ ಸಭೆ ಸೇರಿ ಶಿಷ್ಯ ಸ್ವೀಕಾರದ ಬಗ್ಗೆ ಸರಿಯಾದ ತೀರ್ಮಾನ ಕೈಗೊಳ್ಳುತ್ತೇವೆ. ಅಷ್ಟಮಠಾಧೀಶರಲ್ಲಿ ಬಹುಮತದ ತೀರ್ಮಾನವೇ ಅಂತಿಮ ಎಂದು ಪರ್ಯಾಯ ಪಲಿಮಾರು ಸ್ವಾಮೀಜಿ ತಿಳಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಶೀರೂರು ಸ್ವಾಮೀಜಿಯ ಶಿಷ್ಯ ಸ್ವೀಕಾರದ ಕುರಿತು ಚರ್ಚೆ ಆರಂಭವಾಗಿತ್ತು. ಇದೀಗ ಮತ್ತೆ ಚರ್ಚೆ ಆರಂಭವಾಗಿದೆ. ಶೀರೂರು ಸ್ವಾಮೀಜಿ ಕಡ್ಡಾಯವಾಗಿ ಶಿಷ್ಯ ಸ್ವೀಕಾರ ಮಾಡಬೇಕೆಂಬ ವಿಚಾರಕ್ಕೆ ಮತ್ತೆ ಜೀವ ಬಂದಿದೆ.

    ಯಾರು ಪರ್ಯಾಯ ಸ್ವೀಕರಿಸುತ್ತಾರೋ ಆ ಶ್ರೀಗಳೇ ಎರಡು ವರ್ಷಗಳ ಪಟ್ಟದ ದೇವರಿಗೆ ಪೂಜೆ ಮಾಡಬೇಕೆಂಬ ನಿಯಮವಿದೆ. ಒಂದು ವೇಳೆ ಈ ಅವಧಿಯಲ್ಲಿ ಶ್ರೀಗಳು ಅನಾರೋಗ್ಯಕ್ಕೆ ಒಳಗಾದರೆ ಅವರ ಶಿಷ್ಯ ಪೂಜೆ ಮಾಡಬೇಕಾಗುತ್ತದೆ.