Tag: Ashram

  • ಆಶ್ರಮದಲ್ಲಿ ತಂಗಿದ್ದ ಯುಎಸ್ ಮಹಿಳೆ ಮೇಲೆ ಗ್ಯಾಂಗ್‌ರೇಪ್- ಇಬ್ಬರ ಬಂಧನ

    ಆಶ್ರಮದಲ್ಲಿ ತಂಗಿದ್ದ ಯುಎಸ್ ಮಹಿಳೆ ಮೇಲೆ ಗ್ಯಾಂಗ್‌ರೇಪ್- ಇಬ್ಬರ ಬಂಧನ

    ತಿರುವನಂತಪುರ: ಇತ್ತೀಚೆಗೆ ಅಮೆರಿಕಾದಿಂದ (America) ಭಾರತಕ್ಕೆ ಆಗಮಿಸಿ ಕೇರಳದ (Kerala) ಆಶ್ರಮವೊಂದರಲ್ಲಿ (Ashram) ತಂಗಿದ್ದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ (Gang Rape) ಮಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ದುಷ್ಕೃತ್ಯ ನಡೆಸಿದ ಇಬ್ಬರು ಆರೋಪಿಗಳನ್ನು ಮಂಗಳವಾರ ಪೊಲೀಸರು ಬಂಧಿಸಿದ್ದು, ಐಪಿಸಿ ಸೆಕ್ಷನ್ 376 ಡಿ (ಸಾಮೂಹಿಕ ಅತ್ಯಾಚಾರ) ಮತ್ತು 376 (2) (ಎನ್) ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ (FIR) ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹರಿಯಾಣದಲ್ಲಿ ಕೋಮು ಸಂಘರ್ಷ: ಸಾವಿನ ಸಂಖ್ಯೆ 5ಕ್ಕೆ ಏರಿಕೆ, 70 ಮಂದಿಗೆ ಗಾಯ, ಅಂಗಡಿ-ಮುಂಗಟ್ಟುಗಳಿಗೆ ಬೆಂಕಿ

    ಜುಲೈ 31ರಂದು ಘಟನೆ ನಡೆದಿದ್ದು, 44 ವರ್ಷದ ಯುಎಸ್ ಮಹಿಳೆ ಕಡಲ ತೀರದಲ್ಲಿ ಒಬ್ಬಂಟಿಯಾಗಿ ಕುಳಿತಿದ್ದ ಸಂದರ್ಭ ಆರೋಪಿಗಳು ಈ ದುಷ್ಕೃತ್ಯ ನಡೆಸಿದ್ದಾರೆ. ಮೊದಲಿಗೆ ಆರೋಪಿಗಳು ಸಿಗರೇಟ್ ಹಂಚಿಕೊಳ್ಳುವ ನೆಪದಲ್ಲಿ ಮಹಿಳೆಯ ಬಳಿ ಬಂದಿದ್ದಾರೆ. ಆಕೆ ಸಿಗರೇಟ್ ನಿರಾಕರಿಸಿದ ಸಂದರ್ಭ ಆಕೆಗೆ ಮದ್ಯ (Alcohol) ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮೊಬೈಲ್ ಚಾರ್ಜರ್ ಪಿನ್‌ಗೆ ಬಾಯಿ ಹಾಕಿ 8 ತಿಂಗಳ ಕಂದಮ್ಮ ಸಾವು

    ಮದ್ಯ ಸೇವಿಸಿದ ಬಳಿಕ ಮಹಿಳೆಗೆ ನಶೆ ಏರಿದ್ದು, ಈ ವೇಳೆ ಆರೋಪಿಗಳು ಆಕೆಯನ್ನು ಬೈಕಿನಲ್ಲಿ ಕರೆದುಕೊಂಡು ಹೋಗಿ ಸಮೀಪದ ಖಾಲಿ ಮನೆಯಲ್ಲಿ ಪದೇ ಪದೇ ಅತ್ಯಾಚಾರ ಮಾಡಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ದೂರನ್ನು ನೀಡಿದ್ದಾರೆ. ಇದನ್ನೂ ಓದಿ: ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮತ್ತೊಂದು ಚೀತಾ ಸಾವು – 9 ಕ್ಕೇರಿದ ಸಾವಿನ ಸಂಖ್ಯೆ

    ಆಗಸ್ಟ್ 1ರಂದು ರಾತ್ರಿ ಸಂತ್ರಸ್ತೆ ದೂರನ್ನು ನೀಡಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಸಂತ್ರಸ್ತೆ ಆಗಸ್ಟ್ 22ರಂದು ಕೇರಳಕ್ಕೆ ಬಂದಿದ್ದರು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: Odisha Train Accident – 2 ತಿಂಗಳಾದರೂ ಪತ್ತೆಯಾಗದ 29 ಶವಗಳ ಗುರುತು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಈ ಹೊತ್ತಲ್ಲಿ ಯಾಕೋ ಬಂದಿದ್ದೀಯಾ ಅಂತಾ ಚಂದ್ರುನನ್ನು ವಿನಯ್ ಗುರೂಜಿ ಪ್ರಶ್ನಿಸಿದ್ರು: ಆಶ್ರಮದ ಸಿಬ್ಬಂದಿ

    ಈ ಹೊತ್ತಲ್ಲಿ ಯಾಕೋ ಬಂದಿದ್ದೀಯಾ ಅಂತಾ ಚಂದ್ರುನನ್ನು ವಿನಯ್ ಗುರೂಜಿ ಪ್ರಶ್ನಿಸಿದ್ರು: ಆಶ್ರಮದ ಸಿಬ್ಬಂದಿ

    ಚಿಕ್ಕಮಗಳೂರು: ಹೊನ್ನಾಳಿ ಶಾಸಕ ರೇಣುಕಾಚಾರ್ಯ (MP Renukacharya) ಸಹೋದರನ ಪುತ್ರ ಚಂದ್ರು ನಿಗೂಢವಾಗಿ ನಾಪತ್ತೆಯಾಗಿ ಸಾವನ್ನಪ್ಪುವ ಮುನ್ನ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ವಿನಯ್ ಗುರೂಜಿ (Vinay Guruji) ಅವರ ಆಶ್ರಮಕ್ಕೆ ಬಂದಿದ್ದರು. ಈ ವೇಳೆ ವಿನಯ್ ಗುರೂಜಿ ಕೂಡ ಭೇಟಿಯಾಗಿದ್ದರು.

    ಆಶ್ರಮದ ಭಕ್ತನಾಗಿದ್ದ ಚಂದ್ರು (Chandrashekhar) ವಿಗೆ ವಿನಯ್ ಗುರೂಜಿ ಈ ಹೊತ್ತಿನಲ್ಲಿ ಯಾಕೋ ಬಂದಿದ್ದೀಯಾ ಎಂದು ಪ್ರಶ್ನೆ ಮಾಡಿದ್ದರು. ಸುಮಾರು ಅರ್ಧ ಗಂಟೆಗಳ ಕಾಲ ಆಶ್ರಮದಲ್ಲಿದ್ದ ಚಂದ್ರು ಹಾಗೂ ಕಿರಣ್ ಗೆ ಕೈಗೆ ಒಂದು ಹಣ್ಣನ್ನು ನೀಡಿ ಟೈಂ ಆಗಿದೆ. ಹುಷಾರಾಗಿ ಹೋಗಿ ಎಂದಿದ್ದರು. ಚಂದ್ರು ಸಾವು ವಿನಯ್ ಗುರೂಜಿಗೂ ಕೂಡ ನೋವು ತಂದಿದೆ ಎಂದು ಆಶ್ರಮದ ಸಿಬ್ಬಂದಿಯೊಬ್ಬರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದರು. ಇದನ್ನೂ ಓದಿ: ಚಂದ್ರು ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ: ಸಿದ್ದರಾಮಯ್ಯ ಆಗ್ರಹ

    ಆಶ್ರಮಕ್ಕೆ ನಿತ್ಯ ಸಾವಿರಾರು ಜನ ಬರುತ್ತಾರೆ. ನಾವು ಯಾರನ್ನೂ ವಿ.ಐ.ಪಿ. ಎಂದು ಪರಿಗಣಿಸಲ್ಲ. ಚಂದ್ರು ಕೂಡ ಕಿರಣ್ ಜೊತೆ ಬಂದಿದ್ದರು, ಬರುತ್ತಿದ್ದರು. ಅವರ ಸರಳತೆ ನೋಡಿ ಇಂದು ನಮಗೆ ತುಂಬಾ ಬೇಜಾರಾಗಿದೆ. ನಿನ್ನೆಯಿಂದ ಗುರುಗಳು ತುಂಬಾ ಬೇಜಾರಾಗಿದ್ದಾರೆ. ಆಶ್ರಮದಲ್ಲಿ ಚಂದ್ರು ಊಟ ಬಡಿಸುತ್ತಿದ್ದ, ತೆಂಗಿನಕಾಯಿ ಸುಲಿಯುತ್ತಿದ್ದ. ಆದರೆ ಇಂದು ಚಂದ್ರು ಸಾವು ನಮಗೆ ತುಂಬಾ ನೋವು ತಂದಿದೆ ಎಂದು ಸಿಬ್ಬಂದಿ ಸುಧಾಕರ್ ಪ್ರತಿಕ್ರಿಯಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 52ರ ಮಹಿಳೆ ಮೇಲೆ ಆಶ್ರಮದಲ್ಲೇ ಸಾಮೂಹಿಕ ಅತ್ಯಾಚಾರ

    52ರ ಮಹಿಳೆ ಮೇಲೆ ಆಶ್ರಮದಲ್ಲೇ ಸಾಮೂಹಿಕ ಅತ್ಯಾಚಾರ

    ಲಕ್ನೋ: 52 ವರ್ಷದ ಮಹಿಳೆ (Woman) ಮೇಲೆ ದೇವಾಲಯದ ಆಶ್ರಮವೊಂದರಲ್ಲಿ (Ashram) ಸಾಮೂಹಿಕ ಅತ್ಯಾಚಾರ (Gang Rape) ಎಸಗಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಲಕ್ನೋವಿನಲ್ಲಿ (Lucknow) ಗೋಮತಿ ನಗರದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದು ಲಕ್ನೋವಿನಲ್ಲಿ ಕೇವಲ 24 ಗಂಟೆಗಳ ಒಳಗೆ ನಡೆದಿರುವ 2ನೇ ಸಾಮೂಹಿಕ ಅತ್ಯಾಚಾರ ಪ್ರಕರಣವಾಗಿದೆ.

    ಸಂತ್ರಸ್ತ ಮಹಿಳೆ ನೀಡಿರುವ ದೂರಿನ ಪ್ರಕಾರ, ಘಟನೆ ಅಕ್ಟೋಬರ್ 4 ರಂದು ನಡೆದಿದೆ. ಆಕೆ ಈ ಹಿಂದೆ ಮಥುರಾದ ಆಶ್ರಮದಲ್ಲಿದ್ದು, ಬಳಿಕ ಸನ್ಯಾಸಿನಿಯೊಬ್ಬರ ಶಿಫಾರಸಿನ ಮೇರೆಗೆ ಲಕ್ನೋದಲ್ಲಿರುವ ಆಶ್ರಮಕ್ಕೆ ಬಂದಿದ್ದರು. ಆಕೆ ಕಳೆದ ತಿಂಗಳು ಲಕ್ನೋ ಆಶ್ರಮಕ್ಕೆ ಸ್ಥಳಾಂತರವಾಗಿದ್ದು, ಬಳಿಕ ಆಕೆಗೆ ಶಿಫಾರಸು ಮಾಡಿದ್ದ ಸನ್ಯಾಸಿನಿ ಕಾರಣಾಂತರಗಳಿಂದ ವಾರಣಾಸಿಗೆ ಹೋಗಿದ್ದರು.

    ಈ ವೇಳೆ ಆಶ್ರಮದಲ್ಲಿ ಆಕೆ ಒಂಟಿಯಾಗಿದ್ದು, ಇದೇ ಸಮಯಕ್ಕೆ ಕಾದು ಕುಳಿತಿದ್ದ ಕೆಲ ಕಿಡಿಗೇಡಿ ಆಶ್ರಮವಾಸಿಗಳು ಊಟದಲ್ಲಿ ಮತ್ತು ಬರುವ ಪದಾರ್ಥ ಸೇರಿಸಿ ಆಕೆಗೆ ನೀಡಿದ್ದರು. ತನಗೆ ಪ್ರಜ್ಞೆ ಬಂದಾಗ ಸಂಪೂರ್ಣ ಬೆತ್ತಲಾಗಿದ್ದು, ನಿಶ್ಶಕ್ತರಾಗಿದ್ದರು. ತನ್ನ ಮೇಲೆ ನಾಲ್ವರು ಅತ್ಯಾಚಾರವೆಸಗಿರುವುದು ತಿಳಿದು, ಈ ಬಗ್ಗೆ ಆಶ್ರಮದ ಮುಖ್ಯಸ್ಥರಿಗೆ ದೂರು ನೀಡಿದ್ದರು. ಆದರೆ ಅವರು ತನಗೆ ಜೀವ ಬೆದರಿಕೆ ಹಾಕಿರುವುದಾಗಿ ಮಹಿಳೆ ದೂರು ನೀಡಿದ್ದಾರೆ.

    ಆಶ್ರಮದ ಮುಖ್ಯಸ್ಥರು ತನಗೆ ಸಹಾಯ ಮಾಡದ ಕಾರಣ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಘಟನೆಯ ಬಗ್ಗೆ ಎಲ್ಲಾ ಕೋನಗಳಿಂದಲೂ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಗಡಿಯಲ್ಲಿ 12 ಕೆ.ಜಿ ಸರಕು ಹೊತ್ತ ಡ್ರೋನ್ ಹೊಡೆದುರುಳಿಸಿದ ಭಾರತ

    ಇದಕ್ಕೂ ಮುನ್ನ ಲಕ್ನೋದಲ್ಲಿ 18 ವರ್ಷದ ಯುವತಿಯ ಮೇಲೆ ಆಟೋ ಚಾಲಕ ಮತ್ತು ಆತನ ಸಹಾಯಕರು ಸಾಮೂಹಿಕ ಅತ್ಯಾಚಾರವೆಸಗಿರುವುದಾಗಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪರೇಶ್ ಮೇಸ್ತಾ ಕೇಸ್ ರೀ ಓಪನ್‍ಗೆ ಒತ್ತಡ – ಸರ್ಕಾರ ಸೈಲೆಂಟ್

    Live Tv
    [brid partner=56869869 player=32851 video=960834 autoplay=true]

  • ಸಬರಮತಿ ಆಶ್ರಮದಲ್ಲಿ ಚರಕ ಸುತ್ತಿ ನೂಲು ತೆಗೆದ ದ್ರೌಪದಿ ಮುರ್ಮು

    ಸಬರಮತಿ ಆಶ್ರಮದಲ್ಲಿ ಚರಕ ಸುತ್ತಿ ನೂಲು ತೆಗೆದ ದ್ರೌಪದಿ ಮುರ್ಮು

    ಗಾಂಧಿನಗರ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೊಮವಾರ ಸಬರಮತಿ (Sabarmati) ಆಶ್ರಮದಲ್ಲಿ (Ashram) ಚರಕ (Charkha) ಹಿಡಿದು ನೂಲು ತೆಗೆದರು.

    ಎರಡು ದಿನಗಳ ಕಾಲ ದ್ರೌಪದಿ ಮುರ್ಮು (Droupadi Murmu) ಗುಜರಾತ್ ಪ್ರವಾಸದಲ್ಲಿದ್ದಾರೆ. ಈ ಮೂಲಕ ಅವರು ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಗುಜರಾತ್‍ಗೆ (Gujarat) ಭೇಟಿ ಕೊಟ್ಟಿದ್ದಾರೆ.

    ಸಬರಮತಿ ಆಶ್ರಮದ ಭೇಟಿಯ ಬಗ್ಗೆ ಟ್ವೀಟ್ ಮಾಡಿರುವ ಅವರು, ಆಶ್ರಮ ಭೇಟಿ ವರ್ಣಿಸಲು ಸಾಧ್ಯವಿಲ್ಲದ ಸ್ಫೂರ್ತಿಯಾಗಿದೆ. ಈ ಹಿಂದೆಯೂ ಚರಕವನ್ನು ತಿರುಗಿಸಿದ್ದೆ. ಆದರೆ ಸಬರಾಮತಿಯಲ್ಲಿರುವ ಬಾಪು ಆಶ್ರಮದಲ್ಲಿ ಚರಕ ತಿರುಗಿಸಿರುವುದು ಸಂತೋಷವನ್ನು ತಂದಿದೆ. ಮಹಾತ್ಮ ಗಾಂಧೀಜಿ ಅವರ ಸಬರಮತಿ ಆಶ್ರಮ, ಸ್ವಾತಂತ್ರ್ಯ ಚಳುವಳಿ ಸಂದರ್ಭದಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ಮಹಾತ್ಮರ ಕಾರ್ಯಕ್ಷೇತ್ರವಾಗಿತ್ತು. ನಂತರವೂ ಆಶ್ರಮದ ಪಾವಿತ್ರ್ಯತೆ ಹಾಗೂ ಗಾಂಧಿ ನೆನಪು ಅಚ್ಚಳಿಯದೆ ಉಳಿದಿದೆ ಎಂದು ತಿಳಿಸಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ ರಾಷ್ಟ್ರಪತಿ ಮುರ್ಮು ಚರಕದ ಮುಂದೆ ಕುಳಿತಿದ್ದಾರೆ. ಅವರಿಗೆ ಮಹಿಳೆಯೊನ್ನರು ಮಾರ್ಗದರ್ಶನವನ್ನು ನೀಡುತ್ತಿದ್ದು, ಅದರ ಪ್ರಕಾರವಾಗಿಯೇ ಚರಕದಿಂದ ನೂಲು ತೆಗೆಯುತ್ತಿದ್ದಾರೆ. ಇದನ್ನೂ ಓದಿ: ದಸರಾ ಸಂಭ್ರಮ – 85 ದೇಶಗಳ 1.50 ಲಕ್ಷ ಭಕ್ತರಿಂದ ಪ್ರಾರ್ಥನೆ

    ಈ ವೇಳೆ ಆಶ್ರಮದ ಆವರಣದಲ್ಲಿರುವ ಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಮತ್ತು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಉಪಸ್ಥಿತರಿದ್ದರು. ಮುರ್ಮು ಅವರು ಗಾಂಧಿಯವರ ಜೀವನ ಮತ್ತು ದೇಶದ ಸ್ವಾತಂತ್ರ್ಯ ಹೋರಾಟವನ್ನು ಬಿಂಬಿಸುವ ಆರ್ಕೈವಲ್ ಪ್ರದರ್ಶನವನ್ನು ವೀಕ್ಷಿಸಿದರು. ಇದನ್ನೂ ಓದಿ: ರಕ್ಷಣಾ ಪಡೆಗಳ ಮುಖ್ಯಸ್ಥ ಅನಿಲ್ ಚೌಹಾಣ್‍ಗೆ Z+ ಭದ್ರತೆ

    Live Tv
    [brid partner=56869869 player=32851 video=960834 autoplay=true]

  • ಸರ್ಪದೋಷ ಪರಿಹಾರ ಮಾಡ್ತೀನೆಂದು, ಮಹಿಳೆ ಬಾಯಿಗೆ ಬಟ್ಟೆ ತುರುಕಿ ಆಶ್ರಮದಲ್ಲೇ ರೇಪ್ ಮಾಡಿದ ಬಾಬಾ!

    ಜೈಪುರ: ರಾಜಸ್ಥಾನದ ಜಲೋರ್ ಜಿಲ್ಲೆಯ ಸಂಚೋರ್ ಪ್ರದೇಶದಲ್ಲಿರುವ ಆಶ್ರಮ ಇದಾಗಿದ್ದು, ಶತಮಾನಗಳಷ್ಟು ಹಳೆಯ ಇತಿಹಾಸ ಹೊಂದಿದೆ. ಆದರೆ ಕಾಳಸರ್ಪ ದೋಷ ನಿವಾರಣೆಯ ಹೆಸರಿನಲ್ಲಿ ಆಶ್ರಮದ ಬಾಬಾ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಮಹಿಳೆಯೊಬ್ಬರು ಆರೋಪಿಸಿದ್ದಾರೆ.

    ಅಲ್ಲದೆ ಬಾಬಾ ತನ್ನೊಂದಿಗೆ ಅಕ್ರಮ ಸಂಬಂಧ ಹೊಂದುವಂತೆಯೂ ಒತ್ತಡ ಹೇರುತ್ತಿದ್ದ ಎಂದು ಹೇಳಲಾಗಿದೆ. 108 ದಿನದಲ್ಲಿ ನೀನು ನನ್ನ ಜೊತೆ 21 ಬಾರಿ ಸಂಬಂಧ ಬೆಳೆಸಬೇಕು. ಇದರಿಂದ ನಿನ್ನ ಕಾಳಸರ್ಪ ದೋಷ ನನ್ನ ಮೇಲೆ ಬರುತ್ತದೆ ಎಂದೆಲ್ಲಾ ಕಥೆ ಕಟ್ಟಿದ್ದಾನೆ. ಆದರೆ ಈ ಕ್ರಮ ಆಕೆಗೆ ಇಷ್ಟವಿರಲಿಲ್ಲವೆಂದೂ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಲಾರಿ ಹರಿದು 10 ವರ್ಷದ ಬಾಲಕ ದುರ್ಮರಣ- ರೊಚ್ಚಿಗೆದ್ದ ಜನ ಮಾಡಿದ್ದೇನು?

    ಸಂತ್ರಸ್ತೆ ಅಂಚೆ ಮೋಲಕ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಜುಲೈ 27ರಂದು ಪೊಲೀಸರು ಈ ಪತ್ರವನ್ನು ಪಡೆದುಕೊಂಡಿದ್ದು, ಜುಲೈ 28ರ ರಾತ್ರಿ 10 ಗಂಟೆ ಸುಮಾರಿಗೆ ಎಫ್‌ಐಆರ್ ದಾಖಲಿಸಿದ್ದಾರೆ. 32 ವರ್ಷದ ಸಂತ್ರಸ್ತೆ ಜಲೋರ್‌ನ ಚಿಟಲ್ವಾನಾ ತಹಸಿಲ್ ನಿವಾಸಿ ಎಂದು ಸಂಚೋರ್‌ನ ಸರ್ವಾನಾ ಪೊಲೀಸ್ ಠಾಣೆಯ ಉಸ್ತುವಾರಿ ಕಿಷ್ಣರಾಮ್ ಬಿಷ್ಣೋಯ್ ಹೇಳಿದ್ದಾರೆ.

    ಜಲೋರ್‌ನ ಮಾನವ ಸೇವಾ ವಿಶ್ವ ಗುರು ಭಗವಾನ್ ದತ್ತಾತ್ರೇಯ ಆಶ್ರಮದ ಬಾಬಾ ತಾಗಾರಾಮ್ ತನ್ನನ್ನು ಅತ್ಯಾಚಾರ ಮಾಡಿದ್ದು, ಅವರ ಸಹಾಯಕಿ ಸಾಧ್ವಿ ಹೇಮಲತಾ ಇದರ ವೀಡಿಯೋ ಮಾಡಿದ್ದಾರೆ. ರೇಪ್ ಮಾಡುವ ವೇಳೆ ಸಂತ್ರಸ್ತೆಯು ಚೀರಾಡುವಾಗ, ಸಾಧ್ವಿ ಆಕೆಯ ಬಾಯಿಗೆ ಬಟ್ಟೆ ತುರುಕುತ್ತಿದ್ದಳು ಎನ್ನುವ ವಿಷಯ ಬಹಿರಂಗವಾಗಿದೆ. ರಾಜಸ್ಥಾನದ ಜಲೋರ್‌ನ ಸಂಚೋರ್‌ನಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಮಿಡ್-ಡೇ ಮೀಲ್ ಯೋಜನೆಯಿಂದ 11 ಕೋಟಿ ರೂ. ವಸೂಲಿ – ಪ್ರಾಂಶುಪಾಲರ ವಿರುದ್ಧ ಆರೋಪ

    ಸಂತ್ರಸ್ತೆ ಜೋಧಪುರದಲ್ಲಿ ಅವರು ಕೆಲಸ ಮಾಡತ್ತಿದ್ದಾರೆ. ತನ್ನ ಪತಿ ಮತ್ತು ಅತ್ತೆಯಂದಿರು ದೇವತಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆಕೆಯ ಪತಿ 2021ರಲ್ಲಿ ಸಂಚೋರ್‌ನ ಅರ್ವಾ ಜನೈಪುರ ಗ್ರಾಮದಲ್ಲಿನ `ಮಾನವ ಸೇವಾ ವಿಶ್ವ ಗುರು ದತ್ತಾತ್ರೇಯ ಆಶ್ರಮ’ಕ್ಕೆ ಕರೆತಂದಿದ್ದರು. ಇಲ್ಲಿ ಅವರು ಸಾಧ್ವಿ ಹೇಮಲತಾ ಮತ್ತು ಅವರ ಸಹೋದ್ಯೋಗಿ ತಾಗರಾಮ್ ಅವರನ್ನು ಭೇಟಿಯಾಗಿದ್ದರು.

    ಹರಿದ್ವಾರದಲ್ಲಿ ಮೊದಲ ಬಾರಿಗೆ ರೇಪ್: ಆಶ್ರಮದ ಮೇಲಿನ ನಂಬಿಕೆ ಹೆಚ್ಚಾದಾಗ ನವೆಂಬರ್ 2021 ರಲ್ಲಿ ಸಂಸ್ಥೆಯ ಗುಂಪಿನೊಂದಿಗೆ ಮಹಿಳೆ ಹರಿದ್ವಾರಕ್ಕೆ ಹೋಗಿದ್ದರು. 2021ರ ನವೆಂಬರ್ 18 ರಂದು ಹರಿದ್ವಾರದಲ್ಲಿ, ತಾಗರಾಮ್ ರಾತ್ರಿಯ ವೇಳೆ ಮಹಿಳೆಯನ್ನು ಕೋಣೆಗೆ ಕರೆಸಿದ್ದರು. ಒಳಗೆ ಬಂದ ನಂತರ ಬಾಗಿಲನ್ನು ಹಾಕಿ ಅಶ್ಲೀಲ ಕೃತ್ಯ ಎಸಗಿದ್ದಾನೆ. ಇದಾದ ನಂತರ ಹರಿದ್ವಾರದಲ್ಲಿ ನಡೆದ ಘಟನೆಯ ಬಗ್ಗೆ ಯಾರಿಗೂ ಹೇಳದಂತೆ ಹೆದರಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಾಬಾ ಆಕೆಯ ಆರೋಪಗಳೆಲ್ಲವೂ ಸುಳ್ಳು ಎಂದು ಹೇಳಿದ್ದಾರೆ. ಸದ್ಯ ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮಂಗಳೂರಿನ ಅನಾಥ ಆಶ್ರಮವೊಂದರ 210 ಮಂದಿಗೆ ಕೊರೊನಾ ಪಾಸಿಟಿವ್

    ಮಂಗಳೂರಿನ ಅನಾಥ ಆಶ್ರಮವೊಂದರ 210 ಮಂದಿಗೆ ಕೊರೊನಾ ಪಾಸಿಟಿವ್

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಅನಾಥಾಶ್ರಮವೊಂದರಲ್ಲಿ ಕೊರೊನಾ ಸ್ಪೋಟಗೊಂಡಿದೆ. ಅನಾಥ ಆಶ್ರಮದಲ್ಲಿದ್ದ ಬರೋಬ್ಬರಿ 210 ಮಂದಿಗೆ ಒಂದೇ ದಿನ ಕೊರೊನಾ ಪಾಸಿಟಿವ್ ವರದಿಯಾಗಿದೆ.

    ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಂಡಿಬಾಗಿಲಿನಲ್ಲಿರುವ ಸಿಯೋನ್ ಆಶ್ರಮದಲ್ಲಿ 270 ಮಂದಿ ವೃದ್ಧರು ಮತ್ತು ಮನೋರೋಗಿಗಳಿದ್ದು, ಕೆಲ ದಿನದ ಹಿಂದೆ ಕೆಲವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ನಿನ್ನೆ ಎಲ್ಲರನ್ನು ರ್ಯಾಂಡಮ್ ಟೆಸ್ಟ್ ನಡೆಸಿದ್ದು, 270 ಮಂದಿಯಲ್ಲಿ ಬರೋಬ್ಬರಿ 210 ಜನರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ಕೆಲ ಕಾಲ ಸುರಿದ ಮಳೆಗೆ ಕೃತಕ ನೆರೆ

    ವಿಷಯ ತಿಳಿದ ತಕ್ಷಣ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಆಶ್ರಮಕ್ಕೆ ಆಗಮಿಸಿ ಎಲ್ಲ ಸೋಂಕಿತರನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ರಜತಾದ್ರಿ ವಸತಿಗೃಹಕ್ಕೆ ಸ್ಥಳಾಂತರಿಸಿದ್ದಾರೆ. ಸದ್ಯ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಸೂಚನೆಯಂತೆ ರಜತಾದ್ರಿ ವಸತಿ ಗೃಹ ಕೋವಿಡ್ ಕೇರ್ ಆಗಿ ಬದಲಾಗಿದೆ.

  • ತಡರಾತ್ರಿ ಆಶ್ರಮಕ್ಕೆ ನುಗ್ಗಿದ ನಾಲ್ವರಿಂದ ಸಾಧ್ವಿ ಮೇಲೆ ಗ್ಯಾಂಗ್‍ರೇಪ್

    ತಡರಾತ್ರಿ ಆಶ್ರಮಕ್ಕೆ ನುಗ್ಗಿದ ನಾಲ್ವರಿಂದ ಸಾಧ್ವಿ ಮೇಲೆ ಗ್ಯಾಂಗ್‍ರೇಪ್

    – ಸಾಧುಗಳನ್ನ ರೂಮಿನಲ್ಲಿ ಲಾಕ್ ಮಾಡಿ ಸಾಮೂಹಿಕ ಅತ್ಯಾಚಾರ
    – ತಡೆಯಲು ಬಂದ ಸಾಧುಗೆ ಥಳಿತ

    ರಾಂಚಿ: ಸಾಧ್ವಿ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಜಾರ್ಖಂಡ್‍ನ ಗೊಡ್ಡಾ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಆಶ್ರಮವೊಂದರಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ಪೊಲೀಸರು ಮಂಗಳವಾರ ನಾಲ್ವರು ಆರೋಪಿಗಳಲ್ಲಿ ಮೂವರನ್ನು ಬಂಧಿಸಿದ್ದಾರೆ.

    ಜಿಲ್ಲೆಯ ಆಶ್ರಮಕ್ಕೆ ಸೋಮವಾರ ತಡರಾತ್ರಿ ನಾಲ್ವರು ಆರೋಪಿಗಳು ಏಕಾಏಕಿ ಬಲವಂತವಾಗಿ ನುಗ್ಗಿದ್ದಾರೆ. ನಂತರ ಆಶ್ರಮದಲ್ಲಿದ್ದ ಸಾಧುಗಳನ್ನು ಒಂದು ರೂಮಿನಲ್ಲಿ ಕೂಡಿ ಹಾಕಿ ಬೀಗ ಹಾಕಿದ್ದಾರೆ. ಈ ವೇಳೆ ಆಶ್ರಮದಲ್ಲಿದ್ದ 38 ವರ್ಷದ ಸಾಧ್ವಿ ಮೇಲೆ ನಾಲ್ವರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ವೇಳೆ ಸಾಧ್ವಿ ಮೇಲಿನ ಅತ್ಯಾಚಾರವನ್ನು ಸಾಧುವೊಬ್ಬರು ತಡೆಯಲು ಬಂದಾಗ ಅವರನ್ನು ಆರೋಪಿಗಳು ಥಳಿಸಿದ್ದಾರೆ. ಸಂತ್ರಸ್ತೆ ಮಂಗಳವಾರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಸಂತ್ರಸ್ತೆ ನೀಡಿದ ದೂರಿನ ಅನ್ವಯ ಪೊಲೀಸರು ಎಫ್‍ಐಆರ್ ದಾಖಲಿಸಿದ್ದು, ಘಟನೆ ನಡೆದ ಸ್ಥಳಕ್ಕೆ ಹೋಗಿ ತನಿಖೆ ನಡೆಸಿದ್ದಾರೆ.

    ಸದ್ಯಕ್ಕೆ ನಾಲ್ವರು ಆರೋಪಿಗಳಲ್ಲಿ ಮೂವರನ್ನು ಬಂಧಿಸಿದ್ದು, ನಾಲ್ಕನೇ ಆರೋಪಿ ಪರಾರಿಯಾಗಿದ್ದಾನೆ. ಇದೀಗ ಆತನಿಗೆ ಪೊಲೀಸರು ಶೋಧಕಾರ್ಯ ಆರಂಭಿಸಿದ್ದಾರೆ.

  • 3 ದಿನ ಆಶ್ರಮದಲ್ಲಿ ಅಪ್ರಾಪ್ತೆಯರಿಬ್ಬರ ಮೇಲೆ ಬಾಬಾ ಅತ್ಯಾಚಾರ

    3 ದಿನ ಆಶ್ರಮದಲ್ಲಿ ಅಪ್ರಾಪ್ತೆಯರಿಬ್ಬರ ಮೇಲೆ ಬಾಬಾ ಅತ್ಯಾಚಾರ

    – ಕೇಸ್ ದಾಖಲಾಗ್ತಿದ್ದಂತೆ ಬಾಬಾ ಎಸ್ಕೇಪ್

    ಚಂಡೀಗಢ: ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಾಬಾನ ವಿರುದ್ಧ ಹರಿಯಾಣ ಪೊಲೀಸರು ಕೇಸ್ ಬುಕ್ ಮಾಡಿದ್ದಾರೆ.

    ಆರೋಪಿ ಬಾಬಾನನ್ನು ಸ್ವಾಮಿ ಲಕ್ಷಾನಂದ್ ಎಂದು ಗುರುತಿಸಲಾಗಿದೆ. ಈತ ಪಂಚಕುಲ ಜಿಲ್ಲೆಯ ಚೋಟಾ ತ್ರಿಲೋಕ್‍ಪುರದಲ್ಲಿ ಆಶ್ರಮ ನಡೆಸುತ್ತಿದ್ದನು. ಸ್ವಾಮಿ ಲಕ್ಷಾನಂದ್ 14 ಮತ್ತು 15 ವರ್ಷದ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

    ಇಬ್ಬರು ಅಪ್ರಾಪ್ತ ಬಾಲಕಿಯರು ಸೇವೆ ಮಾಡಲು ಆಶ್ರಮಕ್ಕೆ ಹೋಗಿದ್ದರು. ಈ ವೇಳೆ ಅವರಿಬ್ಬರನ್ನು ಬಂಧನದಲ್ಲಿಟ್ಟು ಮೂರು ದಿನಗಳ ಕಾಲ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಪ್ರಾಪ್ತ ಬಾಲಕಿಯರು ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯವರಾಗಿದ್ದು, ನಡೆದ ಘಟನೆಯನ್ನು ತಾಯಿಯ ಬಳಿ ಹೇಳಿದಾಗ ಈ ವಿಚಾರ ಬೆಳಕಿಗೆ ಬಂದಿದೆ ಎಂದು ಮಹಿಳಾ ಪೊಲೀಸ್ ಅಧಿಕಾರಿ ನೇಹಾ ಚೌಹಾನ್ ತಿಳಿಸಿದ್ದಾರೆ.

    ಪೊಲೀಸರು ಸ್ವಾಮಿ ಲಕ್ಷಾನಂದ್ ವಿರುದ್ಧ ದೂರು ದಾಖಲಿಸಿದ ನಂತರ ಆರೋಪಿ ಪರಾರಿಯಾಗಿದ್ದಾನೆ. ಸದ್ಯಕ್ಕೆ ಸ್ವಾಮಿ ಲಕ್ಷಾನಂದ್ ವಿರುದ್ಧ ದಾಖಲಾದ ದೂರಿನ ಆಧಾರದ ಮೇಲೆ ನಾವು ಪ್ರಕರಣ ದಾಖಲಿಸಿದ್ದೇವೆ. ಇಬ್ಬರು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದೇವೆ. ಆಶ್ರಮದಲ್ಲಿ ಮೂರು ದಿನಗಳ ಕಾಲ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯಕ್ಕೆ ಪೊಲೀಸರು ಆರೋಪಿ ಬಾಬಾನಿಗೆ ಶೋಧಕಾರ್ಯ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಆರೋಪಿ ಸ್ವಾಮಿ ಲಕ್ಷಾನಂದ್‍ನನ್ನು ಬಂಧಿಸಲಾಗುವುದು ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.

  • ಆಶ್ರಮದಲ್ಲಿರುವ ಮಕ್ಕಳಿಗೆ ಕಿರುಕುಳ ನೀಡಿದವನಿಗೆ ಧರ್ಮದೇಟು

    ಆಶ್ರಮದಲ್ಲಿರುವ ಮಕ್ಕಳಿಗೆ ಕಿರುಕುಳ ನೀಡಿದವನಿಗೆ ಧರ್ಮದೇಟು

    ಧಾರವಾಡ: ಆಶ್ರಮದಲ್ಲಿರುವ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದವನಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.

    ನಗರದ ಹೊರವಲಯದ ಅಕ್ಕಮಹಾದೇವಿ ಆಶ್ರಮದಲ್ಲಿ ಶಿಕ್ಷಕಿ ಮಕ್ಕಳ ಆರೈಕೆ ಮಾಡಿಕೊಂಡಿದ್ದಾರೆ. ಆಕೆಯ ಗಂಡ ಲಕ್ಷ್ಮಣ ಪೂರದ ಕೂಡ ಇದೇ ಆಶ್ರಮದಲ್ಲಿ ಬಂದು ಇರುತ್ತಿದ್ದನು. ಲಕ್ಷ್ಮಣ ಇಲ್ಲಿರುವ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದನು. ಈ ವಿಷಯ ಮಂಡ್ಯದಿಂದ ಕೆಲಸದ ನಿಮಿತ್ತ ಬಂದಿದ್ದ ಕೆಲ ಯುವಕರಿಗೆ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಮಂಡ್ಯದ ಯುವಕರು ಆತನಿಗೆ ಪ್ರಶ್ನೆ ಮಾಡಿ ಚೆನ್ನಾಗಿ ಹೊಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಮಕ್ಕಳಿಂದ ಮಸಾಜ್ ಮಾಡಿಸುವುದು, ಅವರಿಗೆ ವಿಡಿಯೋ ತೋರಿಸುವ ಕೆಲಸ ಮಾಡುತ್ತಿದ್ದ ಲಕ್ಷ್ಮಣ ಕಿತಾಪತಿ ಇಷ್ಟು ದಿನ ಗೊತ್ತಿರಲಿಲ್ಲ. ಆದರೆ ಈ ಮಕ್ಕಳು ಮಂಡ್ಯದಿಂದ ಬಂದಿರುವ ಯುವಕರ ಕೊಠಡಿಗೆ ಹೋಗಿ ಊಟ ಕೇಳಿದ್ದಾರೆ. ಆಗ ಯುವಕರು ಮಕ್ಕಳಿಗೆ ಯಾಕೆ ಊಟ ಮಾಡಿಲ್ಲ ಎಂದು ಪ್ರಶ್ನೆ ಮಾಡಿದಾಗ, ಮಕ್ಕಳು ಊಟ ಸರಿಯಾಗಿ ನೀಡುತ್ತಿಲ್ಲ, ಹಾಗೂ ಕೇಳಿದ್ರೆ ಆತ ಹೊಡೆಯುತ್ತಾನೆ ಎಂಬ ಎಲ್ಲಾ ವಿಷಯ ಬಿಚ್ಚಿಟ್ಟಿದ್ದಾರೆ.

    ಈ ಹಿನ್ನೆಲೆಯಲ್ಲಿ ಭಾನುವಾರ ಮಂಡ್ಯದ ಯುವಕರ ಜೊತೆ ಸ್ಥಳೀಯ ಯುವಕರು ಕೂಡ ಸೇರಿ ಆತನಿಗೆ ಧರ್ಮದೇಟು ನೀಡಿದ್ದಾರೆ. ಕೂಡಲ ಸಂಗಮದಲ್ಲಿ ಕಳೆದ ನಾಲ್ಕು ದಿನಗಳಿಂದ ಶರಣ ಮೇಳ ನಡೆಯುತ್ತಿರುವುದರಿಂದ ಆಶ್ರಮದ ಎಲ್ಲರೂ ಅಲ್ಲಿಗೆನೇ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಕ್ಕಳ ಜವಾಬ್ದಾರಿಯನ್ನು ಲಕ್ಷ್ಮಣ ಮೇಲೆ ಬಿಟ್ಟು ಹೋಗಿದ್ದಾರೆ. ಆದರೆ ಲಕ್ಷ್ಮಣ ಮಕ್ಕಳಿಗೆ ಊಟ ನೀಡದೇ ಸತಾಯಿಸಿದ್ದಾನೆ.

    ಈ ಹಿಂದೆ ಮಾತೇ ಮಹಾದೇವಿ ಇದ್ದಾಗ ಈತನಿಗೆ ಮಾತೇ ಅವರೇ ಇರಲು ಅವಕಾಶ ನೀಡಿದ್ದರು. ಅದಕ್ಕಾಗಿ ಆಶ್ರಮದ ಉಳಿದವರು ಇವನನ್ನು ಏನೂ ಪ್ರಶ್ನೆ ಮಾಡುತ್ತಿರಲಿಲ್ಲ. ಸದ್ಯ ಉಪನಗರ ಪೊಲೀಸರು ಲಕ್ಷ್ಮಣ ಪೂರದಗೆ ವಾರ್ನಿಂಗ್ ಮಾಡಿ ಬಿಟ್ಟಿದ್ದಾರೆ. ಆದರೆ ಆಶ್ರಮದ ಹಿರಿಯರು ಇದರ ಮೇಲೆ ಏನೂ ಕ್ರಮ ಕೈಗೊಳ್ಳುತ್ತಾರೆ ಎಂಬುದು ಶರಣ ಮೇಳ ಮುಗಿದ ಮೇಲೆ ಎಲ್ಲರೂ ಕೂಡಲಸಂಗಮದಿಂದ ವಾಪಸ್ಸಾದ ಮೇಲೆನೇ ಗೊತ್ತಾಗಲಿದೆ.

  • ಕಲ್ಕಿ ಭಗವಾನ್ ಆಶ್ರಮದ ಮೇಲೆ ಮುಂದುವರಿದ ಐಟಿ ದಾಳಿ- ಅಪಾರ ಪ್ರಮಾಣದ ಆಸ್ತಿ ಪತ್ತೆ

    ಕಲ್ಕಿ ಭಗವಾನ್ ಆಶ್ರಮದ ಮೇಲೆ ಮುಂದುವರಿದ ಐಟಿ ದಾಳಿ- ಅಪಾರ ಪ್ರಮಾಣದ ಆಸ್ತಿ ಪತ್ತೆ

    ಬೆಂಗಳೂರು: ಸ್ವಯಂ ಘೋಷಿತ ದೇವಮಾನವ ಕಲ್ಕಿ ಆಶ್ರಮ, ಶಿಕ್ಷಣ ಸಂಸ್ಥೆ ಮೇಲೆ ಸತತ ಮೂರನೇ ದಿನವೂ ಐಟಿ ದಾಳಿ ಮುಂದುವರಿದಿದೆ. ಇಂದು ಬೆಂಗಳೂರಿನ ದೊಮ್ಮಲೂರು ಬಳಿಯಿರುವ ಒನ್ ನೆಸ್ ಕಚೇರಿ ಮೇಲೆ ಐಟಿ ರೇಡ್ ನಡೆದಿದ್ದು, ಶೋಧ ಕಾರ್ಯ ಇನ್ನೂ ಮುಂದುವರಿದಿದೆ.

    ಇದುವರೆಗೆ ತಮಿಳುನಾಡು, ಆಂಧ್ರ ಪ್ರದೇಶ, ಕರ್ನಾಟಕದಲ್ಲಿರುವ ಕಲ್ಕಿಯ 40ಕ್ಕೂ ಹೆಚ್ಚು ಆಸ್ತಿಗಳ ಮೇಲೆ ದಾಳಿ ನಡೆದಿದೆ. ಒನ್‍ನೆಸ್, ವೆಲ್‍ನೆಸ್ ಸಮೂಹದ ಎಲ್ಲ ಕಂಪನಿಗಳನ್ನು ಜಾಲಾಡಲಾಗುತ್ತಿದೆ. ಇದುವರೆಗೆ ಅಘೋಷಿತ ಆಸ್ತಿ ಪತ್ರಗಳು, ವಜ್ರವೈಢೂರ್ಯ, ಅಪಾರ ಪ್ರಮಾಣದ ನೋಟಿನ ಕಂತೆಗಳು ಸೇರಿ ಬರೋಬ್ಬರಿ 112 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂಬ ಮಾಹಿತಿ ಲಭಿಸಿದೆ. ಆಂಧ್ರದ ವರದಯ್ಯಪಾಳ್ಯಂನ ಆಶ್ರಮದಿಂದ ಕದ್ದು ಮುಚ್ಚಿ ಸಾಗಿಸುತ್ತಿದ್ದ 45 ಕೋಟಿ ರೂ. ನಗದನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

    ಕಲ್ಕಿ ಭಗವಾನ್ ಪುತ್ರ ಕೃಷ್ಣಾ ವಿವಿಧ ಉದ್ಯಮಗಳಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಿದ್ದು ಲೆಕ್ಕ ಪತ್ರದಲ್ಲಿ ಗೋಲ್‍ಮಾಲ್ ಎಸಗಿದ್ದಾನೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಐಟಿ ದಾಳಿ ನಡೆದಿದೆ ಎನ್ನಲಾಗುತ್ತಿದೆ. ಅಲ್ಲದೇ ತೆರಿಗೆ ವಂಚನೆ ಹಾಗೂ ಅಕ್ರಮ ಆಸ್ತಿ ಸಂಪಾದನೆ ಹಾಗೂ ವಿದೇಶಿ ಭಕ್ತರ ಹೆಸರಿನ ಮೇಲೆ ಭಾರೀ ಮೊತ್ತದಲ್ಲಿ ನಗದನ್ನು ವಿದೇಶಕ್ಕೆ ರವಾನೆ ಮಾಡಿದ ಆರೋಪ ಕೂಡ ಕೇಳಿ ಬಂದಿದೆ.

    ಎಲ್‍ಐಸಿಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿದ್ದ ಆಂಧ್ರಪ್ರದೇಶ ಮೂಲದ ವಿಜಯ್‍ಕುಮಾರ್ ನಾಯ್ಡು ಕೆಲಸಕ್ಕೆ ರಾಜೀನಾಮೆ ನೀಡಿದ ಬಳಿಕ ಬೆಂಗಳೂರಿನ ಶಾಲೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ನಂತರ ಅಲ್ಲಿಂದಲೂ ಹೊರಬಿದ್ದು ಚಿತ್ತೂರಿನಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದ. 1989ರಲ್ಲಿ ಶಿಕ್ಷಣ ಸಂಸ್ಥೆಗಳು ನಷ್ಟ ಅನುಭವಿಸಿದ ಬಳಿಕ ಕೆಲ ವರ್ಷ ಭೂಗತನಾಗಿದ್ದ ವಿಜಯ್‍ಕುಮಾರ್ ದಿಢೀರ್ ಸ್ವಾಮಿ ವೇಷದಲ್ಲಿ ಪ್ರತ್ರ್ಯಕ್ಷನಾಗಿ,” ನಾನು ವಿಷ್ಣುವಿನ 10ನೇ ಅವತಾರ. ನಾನು ಕಲ್ಕಿ ಭಗವಾನ್” ಎಂದು ಘೋಷಿಸಿಕೊಂಡಿದ್ದ.

    ನನ್ನ ಪತ್ನಿಯೂ ದೇವರ ಅವತಾರ ಎಂದು ಘೋಷಿಸಿಕೊಂಡಿದ್ದ. ಕೆಲ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ದುಡ್ಡುಕೊಟ್ಟಂತೆ ಇವರ ಸಾಮಾನ್ಯ ದರ್ಶನಕ್ಕೆ ಭಕ್ತರು 5 ಸಾವಿರ ರೂ. ಮತ್ತು ವಿಶೇಷ ದರ್ಶನಕ್ಕೆ 25 ಸಾವಿರ ರೂ. ಪಾವತಿಸಬೇಕಿತ್ತು. ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಹಲವು ಕಡೆ ಆಶ್ರಮ ಕಡೆ ಸ್ಥಾಪಿಸಿದ್ದ. ಈತನಿಗೆ ಅನಿವಾಸಿ ಭಾರತೀಯರು ಮತ್ತು ದೊಡ್ಡ ದೊಡ್ಡ ಉದ್ಯಮಿಗಳು ಭಕ್ತರಿದ್ದಾರೆ. ಭಕ್ತರು ಆಶ್ರಮಕ್ಕೆ ನೀಡಿದ ದೇಣಿಗೆ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಲಾಗಿದೆ. ಭಾರೀ ತೆರಿಗೆ ವಂಚನೆ ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ.