Tag: Ashoka City Police Station

  • ಹತ್ಯೆ ಪ್ರಕರಣ – ಆರು ಜನ ಹಂತಕರನ್ನು ಬಂಧಿಸಿದ ಕಲಬುರಗಿ ಪೊಲೀಸರು

    ಹತ್ಯೆ ಪ್ರಕರಣ – ಆರು ಜನ ಹಂತಕರನ್ನು ಬಂಧಿಸಿದ ಕಲಬುರಗಿ ಪೊಲೀಸರು

    ಕಲಬುರಗಿ: ಅಭಿಷೇಕ್ ಎನ್ನುವ ರೌಡಿಯನ್ನು ಕೊಚ್ಚಿ ಕೊಲೆ ಮಾಡಿದ್ದ, ಆರು ಜನ ಹಂತಕರನ್ನು ಕಲಬುರಗಿ ಪೊಲೀಸರು ಬಂಧಿಸಿದ್ದಾರೆ.

    ನ.4 ರಂದು ಕಲಬುರಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ರೌಡಿ ಅಭಿಷೇಕ್ ನನ್ನು ಹಾಡಹಗಲೇ ಭಯಾನಕವಾಗಿ ಹತ್ಯೆ ಮಾಡಲಾಗಿತ್ತು. ಅದು ಅಲ್ಲದೇ ಹತ್ಯೆ ಮಾಡಲಾಗಿದ್ದ ವೀಡಿಯೋ ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಸಂಬಂಧ ಕಲಬುರಗಿ ಜನರು ಬೆಚ್ಚಿ ಬಿದ್ದಿದ್ದರು. ಇದನ್ನೂ ಓದಿ: ಸ್ವಿಗ್ಗಿ ಊಟ ತಂದು ಕೊಡದಕ್ಕೆ ಪಿಎಂ, ಸಿಎಂಗೆ ಪತ್ರ ಬರೆದ ಸಿನಿಮಾ ಸೂಪರ್ ಸ್ಟಾರ್

    ಈ ಹಿನ್ನೆಲೆ ತಮ್ಮ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು ಹತ್ಯೆಯ ಆರೋಪದ ಮೇಲೆ, ಮುರ್ತುಜಾ ಮೊಹಮ್ಮದ್ ಅಲಿ(25), ಸಾಗರ ಭೈರಾಮಡಗಿ(22), ಆಕಾಶ್ ಜಾಧವ(22), ಶುಭಂ ದೊಡ್ಡಮನಿ(23), ಅಶೋಕ್ ಮೂಲಭಾರತಿ(21) ಹಾಗೂ ಕೌಶಿಕ್ ಹಳೆಮನಿ(21) ಎಂಬವರನ್ನು ಬಂಧಿಸಿದ್ದಾರೆ.

    ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ನಾಲ್ಕು ಲಾಂಗ್, ಮಚ್ಚು, ಎರಡು ಬೈಕ್ ಹಾಗೂ ಒಂದು ಇನ್ನೋವಾ ಕಾರ್ ನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕೊಲೆಗೀಡಾದ ಅಭಿಷೇಕ್ ತನ್ನ ಗ್ಯಾಂಗ್ ನೊಂದಿಗೆ ಒಂದುವರೆ ವರ್ಷದ ಹಿಂದೆ ಸಾಗರ ಭೈರಾಮಡಗಿ ಎನ್ನುವ ಯುವಕನ ಮೇಲೆ ಹಲ್ಲೆ ಮಾಡಿದ್ದರು. ಇದೇ ವೈಷಮ್ಯದಿಂದ ಸಾಗರ ಹಾಗೂ ಗ್ಯಾಂಗ್ ನಿಂದ ಅಭಿಷೇಕ್ ನ ಹತ್ಯೆ ಮಾಡಲಾಗಿದೆ. ಇದನ್ನೂ ಓದಿ: ಭೋಜನಪ್ರಿಯ ಅಪ್ಪುಗೆ ಯಾವ ಯಾವ ಫುಡ್ ಇಷ್ಟ? ಯಾವೆಲ್ಲ ಹೋಟೆಲ್‍ಗೆ ಹೋಗ್ತಿದ್ರು?

    ಈ ಪ್ರಕರಣ ಕಲಬುರಗಿಯ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.