Tag: Ashok_Gehlot

  • ದೇಶವನ್ನು ಒಡೆಯಲು ಬಿಜೆಪಿಯಿಂದ ಲವ್ ಜಿಹಾದ್ ಪದ ಸೃಷ್ಟಿ – ಅಶೋಕ್ ಗೆಹ್ಲೋಟ್

    ದೇಶವನ್ನು ಒಡೆಯಲು ಬಿಜೆಪಿಯಿಂದ ಲವ್ ಜಿಹಾದ್ ಪದ ಸೃಷ್ಟಿ – ಅಶೋಕ್ ಗೆಹ್ಲೋಟ್

    ಜೈಪುರ: ರಾಷ್ಟ್ರವನ್ನು ವಿಭಜಿಸಲು ಮತ್ತು ಕೋಮು ಸೌಹಾರ್ದತೆಗೆ ಭಂಗ ತರಲು ಬಿಜೆಪಿ ಲವ್ ಜಿಹಾದ್ ಪದವನ್ನು ಸೃಷ್ಟಿಸಿದೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ದೂಷಿಸಿದ್ದಾರೆ.

    ಮದುವೆ ಎಂಬುದು ವೈಯಕ್ತಿಕ ನಿರ್ಧಾರವಾಗಿದೆ. ಆದರೆ ಬಿಜೆಪಿ ಅದನ್ನು ನಿರ್ಬಂಧ ಹೇರುತ್ತಿದೆ ಎಂದು ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.

    ದೇಶವನ್ನು ಒಡೆಯಲು ಮತ್ತು ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡಲು ಬಿಜೆಪಿ ಬಳಸುತ್ತಿರುವ ಲವ್ ಜಿಹಾದ್. ಮದುವೆ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿರುವ ವಿಚಾರವಾಗಿದೆ. ಅದಕ್ಕೆ ನಿರ್ಬಂಧ ವಿಧಿಸಲು ಕಾನೂನು ರೂಪಿಸುವುದು ಸರಿಯಲ್ಲ. ಇದು ಯಾವ ನ್ಯಾಯಾಲಯದಲ್ಲೂ ಒಪ್ಪಿತವಾಗದು. ಪ್ರೀತಿಯಲ್ಲಿ ಜಿಹಾದ್‍ಗೆ ಸ್ಥಾನವಿಲ್ಲ ಎಂದು ಗೆಹ್ಲೋಟ್ ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.

    ಮದುವೆಗಳಂತಹ ವೈಯಕ್ತಿಕ ವಿಚಾರಗಳಿಗೆ ಸರ್ಕಾರದ ಅನುಮತಿ ಅಗತ್ಯ ಎನ್ನುವಂತೆ ಬಿಜೆಪಿ ಹೇಳುತ್ತಿದೆ. ಇದು ವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಂಡಂತೆ ಇದೆ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ