Tag: Ashok Poojary

  • ಆಪಾದನೆಗಳಿಗೆ ನಾನ್ಯಾಕೆ ಉತ್ತರ ಕೊಡಲಿ, ಅದರ ಅವಶ್ಯಕತೆ ನಮಗಿಲ್ಲ: ಹೆಚ್‍ಡಿಕೆ

    ಆಪಾದನೆಗಳಿಗೆ ನಾನ್ಯಾಕೆ ಉತ್ತರ ಕೊಡಲಿ, ಅದರ ಅವಶ್ಯಕತೆ ನಮಗಿಲ್ಲ: ಹೆಚ್‍ಡಿಕೆ

    ಬೆಳಗಾವಿ: ಕೆ.ಆರ್ ಪೇಟೆ ಕ್ಷೇತ್ರದಲ್ಲಿ ನಡೆದ ಗಲಾಟೆ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಕುಮಾರಸ್ವಾಮಿಯವರು, ಆಪಾದನೆಗಳಿಗೆ ನಾನ್ಯಾಕೆ ಉತ್ತರ ಕೊಡಲಿ, ಅದರ ಅವಶ್ಯಕತೆ ನಮಗಿಲ್ಲ ಎಂದು ಖಡಕ್ ಹೇಳಿಕೆ ಕೊಟ್ಟಿದ್ದಾರೆ.

    ಗೋಕಾಕ್ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ನಾಮಪತ್ರ ಸಲ್ಲಿಕೆ ಹಿನ್ನೆಲೆ ಹೊರಗಡೆ ಇರುವುದರಿಂದ ನನ್ನ ಗಮನಕ್ಕೆ ಈ ವಿಚಾರ ಬಂದಿಲ್ಲ. ಅವರ ಆಪಾದನೆಗಳಿಗೆ ನಾನ್ಯಾಕೆ ಉತ್ತರ ಕೊಡಲಿ, ಅದರ ಅವಶ್ಯಕತೆ ನಮಗಿಲ್ಲ ಎಂದು ಬಿಜೆಪಿ ಅಭ್ಯರ್ಥಿ ನಾರಾಯಣಗೌಡರ ಆರೋಪಕ್ಕೆ ತಿರುಗೇಟು ಕೊಟ್ಟರು. ಇದನ್ನೂ ಓದಿ:ನಾರಾಯಣಗೌಡರು ಸಿಂಪತಿ ಗಿಟ್ಟಿಸಿಕೊಳ್ಳಲು ಚಪ್ಪಲಿಯಲ್ಲಿ ಹೊಡೆದ್ರು ಅಂತಿದ್ದಾರೆ: ದೇವರಾಜು ಕಿಡಿ

    ಇದೇ ವೇಳೆ ಗೋಕಾಕ್ ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿ ಅವರ ಬಗ್ಗೆ ಮಾತನಾಡಿ, ನಮ್ಮ ಕೆಲ ಲೋಪದೋಷಗಳಿಂದ 2008ರಲ್ಲಿ ಅಶೋಕ್ ಪೂಜಾರಿ ಚುನಾವಣೆ ಸೋತಿದ್ದರು. ಅಶೋಕ್ ನಾನು ಹಳೆ ಸ್ನೇಹಿತರು. ಅಶೋಕ್ ಮತ್ತೆ ತನ್ನ ಮನೆಗೆ ವಾಪಸ್ ಬಂದಿದ್ದಾರೆ. ಈ ಬಾರಿ ಅವರು ಗೆಲುವು ಸಾಧಿಸ್ತಾರೆ. ಚುನಾವಣೆಯಲ್ಲಿ ಸೋಲು, ಗೆಲುವು ಒಂದು ಪ್ರಕ್ರಿಯೆ, ನಮ್ಮ ಕುಟುಂಬ ಹಲವರು ಚುನಾವಣೆ ಸೋತಿದ್ದಾರೆ. ಇಷ್ಟು ದಿನ ರಮೇಶ್ ಜಾರಕಿಹೋಳಿ ಈ ಕ್ಷೇತ್ರದಲ್ಲಿ ಗೆದ್ದು ಬಂದಿದ್ದಾರೆ. ಈ ಬಾರಿ ಜನರು ಅವರಿಗೆ ಸೋಲಿನ ರುಚಿ ತೋರಿಸ್ತಾರೆ, ಸ್ವಲ್ಪ ಕಾದು ನೋಡಲಿ ಎಂದು ಬಿಜೆಪಿ ಅಭ್ಯರ್ಥಿಗೆ ಟಾಂಗ್ ಕೊಟ್ಟರು. ಇದನ್ನೂ ಓದಿ:ಎಕ್ಕಡದಲ್ಲಿ ಹೊಡೆದ್ರು, ದೇವರಾಜು ಅದನ್ನ ಅನುಭವಿಸಲೇ ಬೇಕು: ನಾರಾಯಣಗೌಡ ಆಕ್ರೋಶ

    ಇವತ್ತು ಚುನಾವಣೆ ಅವಶ್ಯಕತೆ ಇರಲಿಲ್ಲ. ಯಾಕೆಂದರೆ ಜನರು ಸಂಕಷ್ಟದಲ್ಲಿದ್ದಾರೆ, ಆದರೆ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ. ಕೊಡಗು ಮಾದರಿಯಲ್ಲಿ ಇಲ್ಲಿ ಕೂಡಾ ಅಭಿವೃದ್ಧಿ ಆಗಬೇಕಿದೆ. ಪ್ರವಾಹಕ್ಕೆ ಬೆಳೆ ನಾಶವಾಗಿದೆ. ಅದಕ್ಕೆ ನೆರವು ಕೊಡಿಸುವ ಕಲ್ಪನೆ ಇಟ್ಟುಕೊಂಡಿದ್ದು, ಕ್ಷೇತ್ರದ ಅಭಿವೃದ್ಧಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

  • ಗೋಕಾಕ್‍ನಲ್ಲಿ ರಂಗೇರಿದ ಮಿನಿ ಕದನ-ಇಂದು ರಮೇಶ್ ಜಾರಕಿಹೊಳಿ ಶಕ್ತಿ ಪ್ರದರ್ಶನ

    ಗೋಕಾಕ್‍ನಲ್ಲಿ ರಂಗೇರಿದ ಮಿನಿ ಕದನ-ಇಂದು ರಮೇಶ್ ಜಾರಕಿಹೊಳಿ ಶಕ್ತಿ ಪ್ರದರ್ಶನ

    ಬೆಳಗಾವಿ: ಕುಂದಾ ನಗರಿಯ ಗೋಕಾಕ್ ಉಪ ಸಮರ ಕಾವೇರಿದೆ. ಬಿಜೆಪಿ ಸೇರಿರುವ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಇವತ್ತು ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ. ಆದರೆ ಕಾಂಗ್ರೆಸ್‍ನಲ್ಲಿ ಗೊಂದಲ ಮುಂದುವರಿದಿದೆ. ರಮೇಶ್ ವಿರುದ್ಧ ಅಖಾಡ ಸಿದ್ಧಗೊಳಿಸಿಕೊಂಡಿರುವ ಲಖನ್ ಮತ್ತು ಕಾಂಗ್ರೆಸ್ ಟಿಕೆಟ್‍ಗಾಗಿ ಕಾದಿರೋ ಬಿಜೆಪಿಯ ಅಶೋಕ್ ಪೂಜಾರಿಗೆ ಇಲ್ಲೂ ಟಿಕೆಟ್ ತಪ್ಪಿದ ಟೆನ್ಷನ್. ಹಾಗಾಗಿ ಇಬ್ಬರು ನಾಯಕರು ಸಭೆಗಳನ್ನು ನಡೆಸುತ್ತಿದ್ದಾರೆ.

    ಇಂದು ಗೋಕಾಕ್‍ನ ಕೇಸರಿ ಕಾರ್ಯಕರ್ತರು ರಮೇಶ್ ಜಾರಕಿಹೊಳಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಸಜ್ಜಾಗಿದ್ದಾರೆ. ರಮೇಶ್ ಜಾರಕಿಹೊಳಿ ಅವರ ಮನೆ ಮುಂಭಾಗ ಮೈದಾನದಲ್ಲಿ ಸಂಕಲ್ಪ ಸಮಾವೇಶ ಆಯೋಜಿಸಿದ್ದಾರೆ. ಇದಕ್ಕಾಗಿ ಎಲ್ಲಾ ಗ್ರಾಮದ ಪಂಚಾಯಿತಿ ಸದಸ್ಯರು ತಲಾ 10ರಿಂದ 15 ಸಾವಿರ ಕಾರ್ಯಕರ್ತರನ್ನು ಸೇರಿಸುವ ಹೊಣೆ ಒಪ್ಪಿಸಿದ್ದಾರೆ.

    ಬಿಜೆಪಿಯಲ್ಲಿ ಅಭ್ಯರ್ಥಿ ಘೋಷಣೆಯಾದ್ರೆ, ಕಾಂಗ್ರೆಸ್‍ನಲ್ಲಿ ಇನ್ನೂ ಟಿಕೆಟ್ ಗೊಂದಲ ಮಾತ್ರ ಬಗೆ ಹರಿಯುತ್ತಿಲ್ಲ. ಅಶೋಕ್ ಪೂಜಾರಿಗೆ ಟಿಕೆಟ್ ಕೈತಪ್ಪಿದ್ದು ಈ ಕಾರಣಕ್ಕಾಗಿ ದಿಢೀರನೇ ಶನಿವಾರ ಕಾರ್ಯಕರ್ತರ ಸಭೆ ಕರೆದಿದ್ದಾರೆ.

    ಅಶೋಕ್ ಪೂಜಾರಿಗೆ ಟಿಕೆಟ್ ಕೊಡದಂತೆ ಈಗಾಗಲೇ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ವರಿಷ್ಠರಿಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ,, ಲಖನ್ ಜಾರಕಿಹೊಳಿಗೆ ಟಿಕೆಟ್ ಕೊಡೋದು ಬೇಡ ಡಿಕೆಶಿ-ಲಕ್ಷ್ಮಿ ಹೆಬ್ಬಾಳ್ಕರ್ ಅಂಡ್ ಟೀಮ್ ವಿರೋಧ ಮಾಡುತ್ತಿದೆದೆ. ಸಿದ್ದರಾಮಯ್ಯರನ್ನು ಭೇಟಿಯಾಗಿರೋ ಸತೀಶ್‍ ಸಹೋದರ ಲಖನ್‍ಗೆ ಟಿಕೆಟ್ ಕನ್ಫರ್ಮ್ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ.