Tag: Ashok Kumar Rai

  • ಪುತ್ತೂರು: ಕ್ರಿಕೆಟ್ ಆಡುತ್ತಿದ್ದಾಗ ಜಾರಿ ಬಿದ್ದ ಕಾಂಗ್ರೆಸ್ ಶಾಸಕ

    ಪುತ್ತೂರು: ಕ್ರಿಕೆಟ್ ಆಡುತ್ತಿದ್ದಾಗ ಜಾರಿ ಬಿದ್ದ ಕಾಂಗ್ರೆಸ್ ಶಾಸಕ

    ಮಂಗಳೂರು: ಕ್ರಿಕೆಟ್ ಆಡುತ್ತಿದ್ದಾಗ ಪುತ್ತೂರು (Puttur) ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ (Ashok Kumar Rai) ಜಾರಿ ಬಿದ್ದಿರುವ ಘಟನೆ ನಡೆದಿದೆ.

    ಪುತ್ತೂರಿನ ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದ ವೇಳೆ ಈ ಘಟನೆ ನಡೆದಿದೆ. ಬಂಟರ ಸಂಘದ ವತಿಯಿಂದ ಕ್ರೀಡಾಕೂಟ ಆಯೋಜಿಸಲಾಗಿತ್ತು.

    ಕ್ರೀಡಾಕೂಟದಲ್ಲಿ ಶಾಸಕ ಅಶೋಕ್ ಕುಮಾರ್ ಅವರು ಭಾಗಿಯಾಗಿದ್ದರು. ಆಟವಾಡುತ್ತಿದ್ದಾಗ ಕ್ರೀಸ್ ಮುಟ್ಟಲು ಓಡುತ್ತಿದ್ದ ವೇಳೆ ಜಾರಿ ಬಿದ್ದಿದ್ದಾರೆ.

    ಬಿದ್ದ ಶಾಸಕರನ್ನು ಸಹ ಆಟಗಾರರು ಮೇಲೆತ್ತಿದ್ದಾರೆ.

  • ತುಳುವನ್ನ 2ನೇ ಹೆಚ್ಚುವರಿ ಭಾಷೆಯಾಗಿ ಘೋಷಿಸಿ – ಕಾಂಗ್ರೆಸ್‌ ಶಾಸಕ ಅಶೋಕ್ ರೈ ಒತ್ತಾಯ; ತುಳುವಿನಲ್ಲೇ ಮನವಿ‌

    ತುಳುವನ್ನ 2ನೇ ಹೆಚ್ಚುವರಿ ಭಾಷೆಯಾಗಿ ಘೋಷಿಸಿ – ಕಾಂಗ್ರೆಸ್‌ ಶಾಸಕ ಅಶೋಕ್ ರೈ ಒತ್ತಾಯ; ತುಳುವಿನಲ್ಲೇ ಮನವಿ‌

    ಬೆಂಗಳೂರು: ತುಳು ಭಾಷೆಯನ್ನು (Tulu language) 2ನೇ ಹೆಚ್ಚುವರಿ ಭಾಷೆಯಾಗಿ ಘೋಷಿಸಿ ಎಂದು ಕಾಂಗ್ರೆಸ್ ಶಾಸಕ ಅಶೋಕ್ ರೈ ವಿಧಾನಸಭೆಯಲ್ಲಿ ಒತ್ತಾಯಿಸಿದರು. ತುಳುವಿನಲ್ಲೇ ಮಾತನಾಡಿ ಅಶೋಕ್ ರೈ (Ashok Kumar Rai) ಮನವಿ ಮಾಡಿದರು. ಅತ್ತ ಸ್ಪೀಕರ್ ಯು.ಟಿ ಖಾದರ್‌ (UT Khader) ಸಹ ತುಳುವಿನಲ್ಲೇ ಸ್ಪಷ್ಟನೆ ನೀಡಿದರು.

    ಈ ವೇಳೆ ನೀವಿಬ್ಬರೇ ಮಾತನಾಡಿದ್ರೆ ಹೇಗೆ? ನಮಗೆ ನಿಮ್ಮ ಭಾಷೆ ಹೇಗೆ ಗೊತ್ತಾಗಬೇಕು? ಅಂತ ಹಲವು ಶಾಸಕರು ತಮಾಷೆಗೆಳೆದ ಪ್ರಸಂಗವೂ ಸದನದಲ್ಲಿ ನಡೆಯಿತು. ನೀವು ಏನು ಹೇಳಿದ್ರಿ‌ ನಮಗೆ ಗೊತ್ತಾಗಲಿಲ್ಲ. ನಾವೇನು ಮಂಗಳೂರಿನ (Mangaluru) ಅಧಿವೇಶನದಲ್ಲಿ ಇದ್ದೇವಾ? ಅಂತಾ ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ (R Ashoka) ಜೋರಾಗಿ ನಕ್ಕು, ಕನ್ನಡದಲ್ಲಿ ಮಾತನಾಡಿ ಎಂದರು.

    ಈ ವೇಳೆ ವೇದವ್ಯಾಸ ಕಾಮತ್‌ ರಿಂದಲೂ (Veda Vyasa Kamath) ತುಳು ಸಂಭಾಷಣೆ ನಡೆಯಿತು. ಶಾಸಕ ಅಶೋಕ್ ರೈ ಹೇಳಿದಂತೆ 2ನೇ ಅಧಿಕೃತ ಭಾಷೆ ಮಾಡಿ ಎಂದು ಸದನದಲ್ಲಿ ಕೈಮುಗಿದು ಮನವಿ ಮಾಡಿದರು. ಇದನ್ನೂ ಓದಿ: ಹಾವಿನ ವಿಷವೇ ಈತನಿಗೆ ಆಹಾರ – ʻಸ್ನೇಕ್‌ ಮ್ಯಾನ್‌ʼ ಜೀವನ ಕಥೆಯೇ ರೋಚಕ!

    ಇದರಿಂದ ತಂಗಡಗಿ ಅನುಪಸ್ಥಿತಿಯಲ್ಲಿ ಪ್ರಿಯಾಂಕ್ ಖರ್ಗೆ ಉತ್ತರ ನೀಡಿ, ಬೇರೆ ರಾಜ್ಯಗಳಲ್ಲಿ ಎರಡು ಭಾಷೆಗಳಿವೆ. ಬಿಹಾರದಲ್ಲೂ ಎರಡು ಭಾಷೆಗಳಿವೆ, ಸ್ವಂತ ಖರ್ಚಿನಲ್ಲಿ ಅಧ್ಯಯನ ಮಾಡಿ ತಂದಿದ್ದಾರೆ. ತುಳು ಭಾಷೆಯ ಪ್ರಾಚೀನತೆ ಇತಿಹಾಸ ಗಮನಕ್ಕಿದೆ. ನನ್ನ ಬಾಲ್ಯ ಸ್ನೇಹಿತ ಶ್ರವಣ್ ಅನ್ನುವವರಿದ್ದರು. ಅವರಿಗೆ ಅವರ ತಾಯಿ ತುಳುವಿನಲ್ಲೇ ಬೈಯ್ಯುತ್ತಿದ್ರು. ಹಾಗಾಗಿ ನೀವೇನು ಹೇಳಿದ್ರಿ ನನಗೂ ಅರ್ಥವಾಗಿದೆ. ನಾನು ಇದರ ಪರವಾಗಿದ್ದೇನೆ. ನಾಳೆಯೇ ಸಚಿವರ ಗಮನಕ್ಕೆ ತರುತ್ತೇನೆ. ಸಭೆ ಮಾಡಿ ನಿರ್ಧಾರ ಮಾಡ್ತೇವೆ, ಅಂತ ಸದನಕ್ಕೆ ಪ್ರಿಯಾಂಕ್ ಖರ್ಗೆ ಉತ್ತರ ನೀಡಿದರು.

    ಈ ವೇಳೆ ಲಂಬಾಣಿಯನ್ನೂ ಸೇರಿಸುವಂತೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಮನವಿ ಮಾಡಿದರು. 8ನೇ ಪರಿಚ್ಚೇದಕ್ಕೆ ಸೇರಿಸಲು ಮನವಿ‌ ಮಾಡಿದರು. ಇದನ್ನೂ ಓದಿ: ಬೆಂಗಳೂರು 5 ಭಾಗಗಳಾಗಿ ವಿಭಜನೆ – ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಮಸೂದೆಯಲ್ಲಿ ಏನಿದೆ? ಇಲ್ಲಿದೆ ಕಂಪ್ಲೀಟ್‌ ಮಾಹಿತಿ

  • ಕಂಬಳದಲ್ಲಿ ಭಾಗವಹಿಸಲು 100ಕ್ಕೂ ಅಧಿಕ ಜೊತೆ ಕೋಣಗಳು ಬೆಂಗಳೂರಿಗೆ: ಅಶೋಕ್ ರೈ

    ಕಂಬಳದಲ್ಲಿ ಭಾಗವಹಿಸಲು 100ಕ್ಕೂ ಅಧಿಕ ಜೊತೆ ಕೋಣಗಳು ಬೆಂಗಳೂರಿಗೆ: ಅಶೋಕ್ ರೈ

    ಮಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಇದೇ ಮೊತ್ತಮೊದಲ ಬಾರಿಗೆ ಕಂಬಳ (Kambala) ಆಯೋಜನೆಗೊಳ್ಳುತ್ತಿದೆ. ನವೆಂಬರ್ 25 ಮತ್ತು 26ರಂದು ನಡೆಯುವ ಕಂಬಳದಲ್ಲಿ ಭಾಗವಹಿಸಲು ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳದ ಕಾಸರಗೋಡು ಜಿಲ್ಲೆಯ 100ಕ್ಕೂ ಅಧಿಕ ಜೋಡಿ ಕೋಣಗಳು (Buffalo) ಮಂಗಳೂರಿನಿಂದ (Mangaluru) ಮೆರವಣಿಗೆ ಮೂಲಕ ಬೆಂಗಳೂರಿಗೆ ತೆರಳಲಿದೆ ಎಂದು ಬೆಂಗಳೂರು ಕಂಬಳ ಸಮಿತಿಯ ಅಧ್ಯಕ್ಷ, ಶಾಸಕ ಅಶೋಕ್ ಕುಮಾರ್ ರೈ (Ashok Kumar Rai) ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ ನಡೆಯುವ ಕಂಬಳಕ್ಕೆ ಸಂಬಂಧಿಸಿದಂತೆ ಕಂಬಳ ಕೋಣಗಳ ಮಾಲೀಕರ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ನವೆಂಬರ್ 23ರಂದು ಮೆರವಣಿಗೆಯ ಮೂಲಕ ಕೋಣಗಳನ್ನು ಲಾರಿಯಲ್ಲಿ ಬೆಂಗಳೂರಿಗೆ ಕೊಂಡೊಯ್ಯಲಾಗುತ್ತದೆ. ಹಾಸನದಲ್ಲಿ ಎರಡು ಗಂಟೆಗಳ ಕಾಲ ಕೋಣಗಳಿಗೆ ವಿಶ್ರಾಂತಿ ಮತ್ತು ಆಹಾರ ನೀಡಲಾಗುತ್ತದೆ. ಬಳಿಕ ಚನ್ನರಾಯಪಟ್ಟಣ, ತುಮಕೂರಿನಲ್ಲಿ ವಿಶ್ರಾಂತಿ ಪಡೆದು ಬೆಂಗಳೂರಿಗೆ ಹೋಗಲಾಗುವುದು. ಹಾಸನ, ಚನ್ನರಾಯಪಟ್ಟಣ ಮತ್ತು ತುಮಕೂರಿನಲ್ಲಿ ಕರಾವಳಿಯ ಜನರು ಸೇರಿದಂತೆ ಸ್ಥಳೀಯರು ಕೋಣಗಳಿಗೆ ಸ್ವಾಗತಿಸಲಿದ್ದಾರೆ. ಈ ಕೋಣಗಳನ್ನು ಕೊಂಡೊಯ್ಯುವಾಗ ಪಶು ವೈದ್ಯಾಧಿಕಾರಿಗಳು ಮತ್ತು ಪಶು ಅಂಬುಲೆನ್ಸ್‌ಗಳು ಜೊತೆಗಿರಲಿದೆ ಎಂದರು. ಇದನ್ನೂ ಓದಿ: ಲಿಂಗಾಯತರ ವಿರುದ್ಧ ಸಿಎಂ ಪದೇ ಪದೇ ದ್ವೇಷ ಸಾಧಿಸುತ್ತಿದ್ದಾರೆ: ಬಿಜೆಪಿ ಟೀಕೆ

    125 ಜೋಡಿ ಕೋಣಗಳಿಗೆ ಬೆಂಗಳೂರಿನಲ್ಲಿ ಟೆಂಟ್ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿದೆ. ಕೋಣಗಳ ಮಾಲೀಕರಿಗೆ ಕೊಠಡಿ ವ್ಯವಸ್ಥೆಯನ್ನು ಮಾಡಲಾಗಿದೆ. ಕೋಣಗಳಿಗೆ ನೀರಿನ ವ್ಯತ್ಯಾಸವಾಗಬಾರದೆಂಬ ನೆಲೆಯಲ್ಲಿ ಮಂಗಳೂರಿನಿಂದಲೇ 5 ಟ್ಯಾಂಕರ್ ನೀರನ್ನು ಅಲ್ಲಿಗೆ ಕೊಂಡೊಯ್ಯಲಾಗುತ್ತದೆ. ಕೋಣಗಳಿಗೆ ಬೈಹುಲ್ಲು, ಹುರುಳಿಯನ್ನು ಇಲ್ಲಿಂದಲೇ ಕೊಂಡೊಯ್ದು ಅಲ್ಲಿಯೇ ತಯಾರಿಸಿ ಕೊಡಲಾಗುತ್ತದೆ. ಈ ವರ್ಷ ಆರಂಭಿಸಲಾದ ಕಂಬಳಕ್ಕೆ ಉತ್ತಮ ಸ್ಪಂದನೆ ಸಿಕ್ಕಿದರೆ ಇದನ್ನು ಪ್ರತೀ ವರ್ಷ ಮುಂದುವರಿಸಲಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಮತ್ತೆ ಕಾಂಗ್ರೆಸ್‌ನಲ್ಲಿ ಲಿಂಗಾಯತ ಬಾಂಬ್‌: ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾಗ್ತಾರಾ ಸಿಎಂ?

    ಅರಮನೆ ಮೈದಾನದಲ್ಲಿ ಕಂಬಳ ನಡೆಯಲಿದ್ದು, ಸ್ಯಾಂಡಲ್‌ವುಡ್, ಬಾಲಿವುಡ್ ಸ್ಟಾರ್ ನಟ-ನಟಿಯರು ಕಂಬಳಕ್ಕೆ ಬರುವ ನಿರೀಕ್ಷೆಯಿದೆ. ಈ ಕಾರ್ಯಕ್ರಮದಲ್ಲಿ ಸಿಎಂ, ಡಿಸಿಎಂ ಸೇರಿದಂತೆ ಎಲ್ಲಾ ಪಕ್ಷಗಳ ಪ್ರಮುಖರು ಭಾಗಿಯಾಗಲಿದ್ದಾರೆ. ಈ ಕಂಬಳದಲ್ಲಿ 7 ರಿಂದ 8 ಲಕ್ಷ ಜನ ಸೇರುವ ನಿರೀಕ್ಷೆಯಿದೆ. 2,000 ಮಂದಿ ವಿಐಪಿಗಳಿಗೆ ಆಸನ ವ್ಯವಸ್ಥೆ ಮಾಡಲಾಗುತ್ತದೆ. 15 ಸಾವಿರ ಮಂದಿಗೆ ಗ್ಯಾಲರಿಯಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ಒಂದೆಡೆ ಕಂಬಳ ನಡೆಯುತ್ತಿದ್ದರೆ, ಮತ್ತೊಂದೆಡೆ ಕರಾವಳಿಯ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು, ನೂರಕ್ಕೂ ಅಧಿಕ ಮಳಿಗೆಗಳಲ್ಲಿ ಕರಾವಳಿಯ ಆಹಾರ ಮಳಿಗೆಗಳನ್ನು ಅಳವಡಿಸಲಾಗುತ್ತದೆ ಎಂದರು. ಇದನ್ನೂ ಓದಿ: ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 209ರೂ. ಏರಿಕೆ

    ಕಂಬಳವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯಲು ಬೆಂಗಳೂರು ಕಂಬಳವನ್ನು ಕರಾವಳಿಯಲ್ಲಿ ನಡೆಯುವ ಕಂಬಳದಂತೆ ಆಯೋಜಿಸಲಾಗುತ್ತದೆ. ಕಂಬಳಕ್ಕೆ ಸಂಬಂಧಿಸಿದಂತೆ ನೀತಿ ನಿಯಮಗಳನ್ನು, ಕಾನೂನುಗಳನ್ನು, ಸುಪ್ರೀಂ ಕೋರ್ಟ್ ಆದೇಶಗಳನ್ನು ಪಾಲಿಸಿಕೊಂಡು ವ್ಯವಸ್ಥೆ ಮಾಡಲಾಗುತ್ತಿದೆ. ಸುಮಾರು 5ರಿಂದ 6 ಕೋಟಿ ರೂ. ವೆಚ್ಚದಲ್ಲಿ ಕಂಬಳ ಮಾಡಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಅ.7 ರವರೆಗೆ 2,000 ರೂ. ನೋಟು ಬದಲಿಸಿಕೊಳ್ಳಲು ದಿನ ವಿಸ್ತರಿಸಿದ RBI

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಕಂಬಳ’ ಉದ್ಘಾಟನೆಗಾಗಿ ಬೆಂಗಳೂರಿಗೆ ಆಗಮಿಸಲಿದ್ದಾರೆ ಅನುಷ್ಕಾ ಶೆಟ್ಟಿ

    ‘ಕಂಬಳ’ ಉದ್ಘಾಟನೆಗಾಗಿ ಬೆಂಗಳೂರಿಗೆ ಆಗಮಿಸಲಿದ್ದಾರೆ ಅನುಷ್ಕಾ ಶೆಟ್ಟಿ

    ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ (Ashok Kumar Rai) ನೇತೃತ್ವದಲ್ಲಿ ನಡೆಯಲಿರುವ ಕರಾವಳಿ ಜಾನಪದೀಯ ಕ್ರೀಡೆ ಕಂಬಳ ಉದ್ಘಾಟನೆಗೆ ಮಂಗಳೂರು ಮೂಲದ ನಟಿ ಅನುಷ್ಕಾ ಶೆಟ್ಟಿ (Anushka Shetty) ಅವರನ್ನು ಆಹ್ವಾನಿಸಲಾಗಿದೆ. ಈ ಬಾರಿ ಕಂಬಳವನ್ನು (Kambala) ಬೆಂಗಳೂರಿನಲ್ಲಿ ಆಯೋಜನೆ ಮಾಡಿದ್ದು, ಬೆಂಗಳೂರಿನ ಅರಮನೆ ಮೈದಾನದಲ್ಲಿ  ಈ ಕ್ರೀಡೆ ನಡೆಯಲಿದೆ.

    ಇದೇ ನವೆಂಬರ್ 25 ಮತ್ತು 26ರಂದು ಕಂಬಳವನ್ನು ಆಯೋಜನೆ ಮಾಡಿದ್ದು, ದಕ್ಷಿಣದ ತಾರೆ ಅನುಷ್ಕಾ ಶೆಟ್ಟಿ ಅವರಿಗೆ ಆಹ್ವಾನ ನೀಡಲಾಗಿದೆ. ಅವರು ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಭಾಗಿಯಾಗಲಿದ್ದಾರೆ. ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ಅಪಾರ ಅಭಿಮಾನಿಗಳನ್ನೂ ಹೊಂದಿರುವ ಮತ್ತು ಮಂಗಳೂರು ಮೂಲದವರು ಆಗಿರುವ ಕಾರಣದಿಂದಾಗಿ ಅನುಷ್ಕಾ ಅವರನ್ನು ಆಹ್ವಾನಿಸಲಾಗಿದೆ.

     

    ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಂಬಳ ಆಯೋಜನೆಯಾಗಿದ್ದು, ಇದಕ್ಕಾಗಿ ಭಾರೀ ಸಿದ್ಧತೆ ಕೂಡ ಮಾಡಲಾಗುತ್ತಿದೆ. ರಾಜಧಾನಿಗೆ ಬರಲು ಕಂಬಳದ ಕೋಣಗಳು ಕೂಡ ರೆಡಿಯಾಗತ್ತಿವೆ. ಮಂಗಳೂರಿನಿಂದ ಬೆಂಗಳೂರಿಗೆ ಬರಲಿರುವ ಕಂಬಳ ಕೋಣಗಳು, ಇಲ್ಲಿನ ಜನರಿಗೆ ಸಖತ್ ಮನರಂಜನೆ ಕೂಡ ನೀಡಲಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತುಳುವನ್ನು 2ನೇ ಅಧಿಕೃತ ಭಾಷೆಯನ್ನಾಗಿ ಮಾಡಿ – ಮುಲ್ಪ ಪಾತೆರೊಡ್ಚಿ, ಸದನದಲ್ಲಿ ಸ್ವಾರಸ್ಯಕರ ಚರ್ಚೆ

    ತುಳುವನ್ನು 2ನೇ ಅಧಿಕೃತ ಭಾಷೆಯನ್ನಾಗಿ ಮಾಡಿ – ಮುಲ್ಪ ಪಾತೆರೊಡ್ಚಿ, ಸದನದಲ್ಲಿ ಸ್ವಾರಸ್ಯಕರ ಚರ್ಚೆ

    ಬೆಂಗಳೂರು: ವಿಧಾನಸಭೆ ಕಲಾಪದಲ್ಲಿಂದು ತುಳು ಭಾಷೆ (Tulu Language) ಗಮನಸೆಳೆದಿದೆ. ತುಳುವನ್ನು ರಾಜ್ಯದ 2ನೇ ಅಧಿಕೃತ ಭಾಷೆಯನ್ನಾಗಿ ಮಾಡುವಂತೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ (Ashok Kumar Rai) ಮನವಿ ಮಾಡಿದ್ದಾರೆ.

    ತುಳು ಭಾಷೆಯಲ್ಲೇ ಮಾತನಾಡಿ ಅಶೋಕ್ ಕುಮಾರ್ ರೈ ಗಮನಸೆಳೆದಿದ್ದು, ಈ ವೇಳೆ ಸ್ಪೀಕರ್ ಯುಟಿ ಖಾದರ್ (UT Khader) ತುಳು ಭಾಷೆಯಲ್ಲೇ ಅವರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಶಾಸಕ ವೇದವ್ಯಾಸ್ ಕಾಮತ್ (Vedavyas Kamath) ತುಳುವಿನಲ್ಲಿ ಮಾತನಾಡಲು ಮುಂದಾದಾಗ ಕನ್ನಡದಲ್ಲಿ ಮಾತನಾಡಿ ಎಂದು ಸ್ಪೀಕರ್ ಖಾದರ್ ಸೂಚನೆ ನೀಡಿದ್ರು.

    ಬಳಿಕ ಕನ್ನಡ ಹಾಗೂ ತುಳುವಿನಲ್ಲಿ ವೇದವ್ಯಾಸ್ ಕಾಮತ್ ಮಾತನಾಡಿದ್ದಾರೆ. ತುಳುವಿನಲ್ಲಿ ಮಾತನಾಡುವುದಕ್ಕೆ ವಿರೋಧ ಇಲ್ಲ. ಆದರೆ ಬರೆದುಕೊಳ್ಳುವವರಿಗೆ ಸಮಸ್ಯೆ ಆಗುತ್ತದೆ ಎಂದು ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಧ್ವನಿಯೆತ್ತಿದ್ದಾರೆ. ನೀವು ತುಳುವಿನಲ್ಲಿ ಮಾತನಾಡಿದರೆ ನಾನು ಅರ್ಥ ಆಗದೇ ಉತ್ತರ ಕೊಡುವುದು ಹೇಗೆ ಎಂದು ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಹಿಂದೂ ಸಮಾಜ ಉಳಿಸುತ್ತಿರುವವರು ಮೇಲ್ಜಾತಿ ಹುಡುಗರಲ್ಲ: ಯತ್ನಾಳ್‌

    ಈ ವೇಳೆ ಸ್ಪೀಕರ್ ಮಾತನಾಡಿ, ತುಳು ಮಾತನಾಡಿದಾಗ ಎಲ್ಲರೂ ಖುಷಿ ಖುಷಿಯಿಂದ ಇದ್ದರು. ತುಳು ಮಾತನಾಡುವವರು ಎಲ್ಲರನ್ನೂ ಖುಷಿಯಾಗಿರಿಸುತ್ತಾರೆ. ನೀವು ಕೂಡಾ ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿ ಎಂದು ಸಲಹೆ ನೀಡಿದರು.

    ಆಗ ಶಿವರಾಜ್ ತಂಗಡಗಿ ಮಾತನಾಡಿ ವರದಿಗಳನ್ನು ತರಿಸಿಕೊಂಡು ಪರಿಶೀಲನೆ ಮಾಡುವುದಾಗಿ ಉತ್ತರಿಸಿದರು. ನೀವು ಕಾನೂನು ಇಲಾಖೆ, ಎಲ್ಲಾ ಇಲಾಖೆಗಳ ವರದಿಗಳನ್ನು ತರಿಸಿಕೊಂಡು ತುಳು ಭಾಷೆಯನ್ನು 2ನೇ ಅಧಿಕೃತ ರಾಜ್ಯ ಭಾಷೆಯನ್ನಾಗಿ ಮಾಡಿ ಎಂದು ಸಚಿವರಿಗೆ ಸ್ಪೀಕರ್ ಖಾದರ್ ಸೂಚಿಸಿದರು. ಇದನ್ನೂ ಓದಿ: ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಆರೋಪ – ಬ್ರಿಜ್ ಭೂಷಣ್ ಸಿಂಗ್‌ಗೆ ಮಧ್ಯಂತರ ಜಾಮೀನು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]