Tag: ashok kumar

  • ಇಡಿ ಅಧಿಕಾರಿಗಳಿಂದ ಸಚಿವ ಸೇಂಥಿಲ್ ಸಹೋದರನಿಗೂ ಸಮನ್ಸ್ ಜಾರಿ

    ಇಡಿ ಅಧಿಕಾರಿಗಳಿಂದ ಸಚಿವ ಸೇಂಥಿಲ್ ಸಹೋದರನಿಗೂ ಸಮನ್ಸ್ ಜಾರಿ

    ಚೆನ್ನೈ: ಅಬಕಾರಿ ಸಚಿವ ಸೇಂಥಿಲ್ ಬಾಲಾಜಿ (Senthil Balaji) ಬಂಧನದ ಬೆನ್ನಲ್ಲೇ ಇದೀಗ ಸಹೋದರ ಅಶೋಕ್ ಕುಮಾರ್ (Ashok Kumar) ಗೆ ಕೂಡ ಜಾರಿ ನಿರ್ದೇಶನಾಲಯ (ED) ಸಮನ್ಸ್ ಜಾರಿ ಮಾಡಿದೆ.

    ಹೌದು. ಉದ್ಯೋಗ ಹಗರಣದ ಆರೋಪದ ಮೇಲೆ ಅಧಿಕಾರಿಗಳು ಈ ಸಮನ್ಸ್ ಜಾರಿ ಮಾಡಲಾಗಿದೆ. ಮೂಲಗಳ ಪ್ರಕಾರ, ಉದ್ಯೋಗ ನೀಡುವುದಾಗಿ ಹೇಳಿ ಅಶೋಕ್ ಕುಮಾರ್ ಸಾಕಷ್ಟು ಹಣ ಪಡೆದಿದ್ದಾರೆ ಎಂದು ಈ ಹಿಂದೆ ಹಲವು ದೂರುಗಳು ಬಂದಿದ್ದವು. ಇದನ್ನೂ ಓದಿ: ಸಚಿವ ಸೆಂಥಿಲ್‌ ಬಾಲಾಜಿಗೆ ಶೀಘ್ರವೇ ಬೈಪಾಸ್‌ ಸರ್ಜರಿ ಅಗತ್ಯ – ಇಡಿ ಅರೆಸ್ಟ್‌ ಬೆನ್ನಲ್ಲೇ ವೈದ್ಯರ ಸಲಹೆ

    ಮಂಗಳವಾರ ಬೆಳಗ್ಗೆ ಅಬಕಾರಿ ಮತ್ತು ಇಂಧನ ಸಚಿವರಾಗಿದ್ದ ಸೇಂಥಿಲ್ ಬಾಲಾಜಿ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು. ಬಂಧನವಾಗಿ ಕಾರಿನಲ್ಲಿ ಹೋಗುತ್ತಿದ್ದಾಗ ಹೈಡ್ರಾಮವೇ ಸೃಷ್ಟಿಯಾಗಿತ್ತು. ಎದೆಯ ಮೇಲೆ ಕೈಯನ್ನು ಇಟ್ಟು ಸೇಂಥಿಲ್ ಬಾಲಾಜಿ ಕಣ್ಣೀರು ಹಾಕಿ ಗೋಳಾಡಿದ್ದರು. ನಂತರ ಅವರನ್ನು ಚೆನ್ನೈನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಸೇಂಥಿಲ್ ಅವರನ್ನು ಪರೀಕ್ಷಿಸಿದ ಬಳಿಕ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕರು ಮೆಡಿಕಲ್ ಬುಲೆಟಿನ್ ಪ್ರಕಟಿಸಿದ್ದಾರೆ. ಬೆಳಗ್ಗೆ 10:40ಕ್ಕೆ ಕೊರೊನರಿ ಆಂಜಿಯೋಗ್ರಾಮ್ ನಡೆಯಿತು. ಈ ವೇಳೆ ಹೃದಯದಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೂಡಲೇ ಬೈಪಾಸ್ ಶಸ್ತ್ರಚಿಕಿತ್ಸೆ ಮಾಡಬೇಕೆಂದು ಸಲಹೆ ನೀಡಲಾಗಿತ್ತು.

  • ನನ್ನ ಇಬ್ಬರೂ ಹೆಣ್ಣು ಮಕ್ಕಳು ನಿತ್ಯಾನಂದನ ಜೊತೆ ವಾಸಿಸುತ್ತಿದ್ದಾರೆ- ನಟ ಅಶೋಕ್ ಕುಮಾರ್ ಭಾವುಕ

    ನನ್ನ ಇಬ್ಬರೂ ಹೆಣ್ಣು ಮಕ್ಕಳು ನಿತ್ಯಾನಂದನ ಜೊತೆ ವಾಸಿಸುತ್ತಿದ್ದಾರೆ- ನಟ ಅಶೋಕ್ ಕುಮಾರ್ ಭಾವುಕ

    ಕ್ಷಿಣ ಭಾರತದ ಹಿರಿಯ ನಟ ಅಶೋಕ್ ಕುಮಾರ್ ಅವರು ನಿತ್ಯಾನಂದ ಸ್ವಾಮಿ (Nithyananda Swamy) ಬಗ್ಗೆ ಶಾಕಿಂಗ್ ಹೇಳಿಕೆಯೊಂದನ್ನ ಬಿಚ್ಚಿಟ್ಟಿದ್ದಾರೆ. ನನ್ನ ಇಬ್ಬರೂ ಮಕ್ಕಳು ನಿತ್ಯಾನಂದ ಸ್ವಾಮಿ ಜೊತೆ ಇರೋದಾಗಿ ಅಸಲಿ ವಿಚಾರವನ್ನ ಮಾಧ್ಯಮದ ಮುಂದೆ ಬಿಚ್ಚಿಟ್ಟಿದ್ದಾರೆ.

    ಪುಟ್ಟಣ್ಣ ಕಣಗಾಲ್ ಅವರ ಆಪ್ತ ಅಶೋಕ್ ಕುಮಾರ್ (Actor Ashok Kumar) ಅವರು ತೆಲುಗಿನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟ, ಪೋಷಕನಟ, ವಿಲನ್ ಆಗಿ ಜೀವತುಂಬಿದ್ದಾರೆ. ಅವಕಾಶ, ಸಕ್ಸಸ್ ಸಿಗದೇ ಇರೋ ಕಾರಣ ಚಿತ್ರರಂಗದಿಂದ ದೂರ ಸರಿದ್ದರು. ಇದೀಗ ಅಶೋಕ್ ಅವರು, ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಿದ್ದಾರೆ.

    85 ವರ್ಷ ವಯಸ್ಸಿನ ಅಶೋಕ್ ಕುಮಾರ್, ವಧು ನೋಡದೇ ಮದುವೆಯಾಗಿದ್ರಂತೆ. ಆಕೆ ಇಷ್ಟವಿಲ್ಲದೇ ಕುಟುಂಬದವರ ಮಾತಿಗೆ ಕಟ್ಟುಬಿದ್ದು ಮದುವೆಯಾದೆ. ನಮಗೆ ಮೂರು ಜನ ಹೆಣ್ಣು ಮಕ್ಕಳು, ಅವರು ಇಷ್ಟಪಟ್ಟರ ಜೊತೆ ಮದುವೆ ಮಾಡಿಸಿಕೊಟ್ಟೆ, ನನ್ನ ಮೊದಲನೇ ಮಗಳು ಅಮೆರಿಕಾದಲ್ಲಿ ಇದ್ದಾಳೆ. ಅವಳು ಆಗಾಗ ನಿತ್ಯಾನಂದ ಸ್ವಾಮಿ ಆಶ್ರಮಕ್ಕೆ ಪ್ರವಚನ ಕೇಳಲು ಹೋಗುತ್ತಿದ್ದಳು. ಅಕ್ಕನನ್ನು ನೋಡಲು ನನ್ನ 2ನೇ ಮಗಳು ರಂಜಿತಾ ಹೋಗಲು ಆರಂಭಿಸಿದ್ದಳು. ಇದನ್ನೂ ಓದಿ:ವಿಶ್ರಾಂತಿ ಬಳಿಕ ‘ಬಘೀರ’ ಶೂಟಿಂಗ್ ನಲ್ಲಿ ಭಾಗಿಯಾದ ಶ್ರೀಮುರಳಿ

    ನಿತ್ಯಾನಂದ ಸ್ವಾಮಿ ಜೊತೆ ನನ್ನ ಮಗಳು ರಂಜಿತಾ ಇದ್ದಾಳೆ ಅಂತಾ ಜನ ಹೇಳ್ತಾರೆ. ರಂಜಿತಾ- ನಿತ್ಯಾನಂದು ನಡುವಿನ ರಿಲೇಷನ್‌ಶಿಪ್ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಆ ಫೋಟೋಗಳನ್ನ ನೋಡಿದರೆ ಏನೋ ಹೇಳಬೇಕೋ ಗೊತ್ತಾಗುತ್ತಿಲ್ಲ. ನನ್ನ ಇಬ್ಬರು ಮಕ್ಕಳು ಗಂಡಂದಿರಿಗೆ ಡಿವೋರ್ಸ್ ನೀಡಿ, ನಿತ್ಯಾನಂದ ಸ್ವಾಮಿ ಆಶ್ರಮ ಸೇರಿದ್ದಾರೆ. ಇವತ್ತಿಗೂ ಅವರು ಅಲ್ಲೇ ಇದ್ದಾರೆ ಎಂದು ನಟ ಅಶೋಕ್ ಕುಮಾರ್ ಕಣ್ಣೀರಿಟ್ಟಿದ್ದಾರೆ. ಇಂದಿಗೂ ನನ್ನ ಇಬ್ಬರೂ ಮಕ್ಕಳು ಕರೆ ಮಾಡಲಿಲ್ಲ. ನಮ್ಮ 3ನೇ ಮಗಳು ನನ್ನನ್ನೂ ನೋಡಿಕೊಳ್ತಿದ್ದಾರೆ. ಇಬ್ಬರು ಮಕ್ಕಳು ನೆನಪಿನಲ್ಲೇ ನನ್ನ ಪತ್ನಿ ಪ್ರಾಣ ಬಿಟ್ಟರು ಎಂದು ಭಾವುಕರಾಗಿದ್ದಾರೆ.

  • ತವರೂರಿನಲ್ಲಿ ಸಿಎಂಗೆ ಶಾಕ್ – ಜೆಡಿಎಸ್ ಜಿಲ್ಲಾಧ್ಯಕ್ಷ ರಾಜೀನಾಮೆ

    ತವರೂರಿನಲ್ಲಿ ಸಿಎಂಗೆ ಶಾಕ್ – ಜೆಡಿಎಸ್ ಜಿಲ್ಲಾಧ್ಯಕ್ಷ ರಾಜೀನಾಮೆ

    ರಾಮನಗರ: ಒಂದೆಡೆ ರಾಜ್ಯ ಸರ್ಕಾರ ಅಸ್ಥಿರಗೊಳಿಸಲು ಶಾಸಕರ ರಾಜೀನಾಮೆ ಶುರುವಾಗಿದ್ರೆ, ಇತ್ತ ಸಿಎಂಗೆ ತಮ್ಮ ತವರು ರಾಮನಗರ ಜಿಲ್ಲೆಯಲ್ಲಿ ಶಾಕ್ ಎದುರಾಗಿದ್ದು, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಪಿ ಅಶೋಕ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    ಕಳೆದ ಮೂರು ವರ್ಷಗಳಿಂದ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿದ್ದ ಎಂ.ಪಿ ಅಶೋಕ್ ಕುಮಾರ್ ವೈಯಕ್ತಿಕ ಕಾರಣಗಳನ್ನು ನೀಡಿ ರಾಜೀನಾಮೆಯನ್ನು ಶಾಸಕಿ ಅನಿತಾ ಅವರಿಗೆ ಸಲ್ಲಿಸಿದ್ದಾರೆ. ವೈಯಕ್ತಿಕ ಕಾರಣ ನೀಡಿ ರಾಜೀನಾಮೆ ಸಲ್ಲಿಸಿದ್ರೂ ಕೂಡ ಪಕ್ಷದಲ್ಲಿ ಕಡಗಣನೆ ಮಾಡಿದ್ದೇ ಅಶೋಕ್ ರಾಜೀನಾಮೆಗೆ ಕಾರಣವಾಗಿದೆ ಎನ್ನಲಾಗಿದೆ.

    ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಅಶೋಕ್ ಕುಮಾರ್ ಪಕ್ಷದ ಸಂಘಟನೆ ಹಾಗೂ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಆದರೆ ಸಿಎಂ ರಾಮನಗರ ಹಾಗೂ ಚನ್ನಪಟ್ಟಣ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ರಾಮನಗರಕ್ಕೆ ರಾಜೀನಾಮೆ ನೀಡಿದ ಬಳಿಕ ಅಶೋಕ್ ಕುಮಾರ್ ಸರಿಯಾಗಿ ಪಕ್ಷದ ಚಟುವಟಿಕೆಗಳಲ್ಲಿ ಪಾಲ್ಗೊಂಡಿರಲಿಲ್ಲ.

    ಅನಿತಾ ಅವರು ಶಾಸಕಿಯಾಗಿ ಆಯ್ಕೆಯಾದ ಬಳಿಕ ತಮ್ಮನ್ನು ಸಾಕಷ್ಟು ಕಡೆಗಣಿಸಿದ್ದಾರೆ. ಅನಿತಾ ಅವರು ತಮ್ಮ ಬೆಂಬಲಿಗರಿಗೆ ಜಿಲ್ಲಾಧ್ಯಕ್ಷ ಸ್ಥಾನ ಕೊಡಿಸುವ ನಿಟ್ಟಿನಲ್ಲಿ ಅಶೋಕ್‍ರ ನಡುವೆ ಅಂತರ ಕಾಯ್ದುಕೊಂಡಿದ್ದರು. ಯಾವುದಕ್ಕೂ ಕೂಡ ಸ್ಪಂದಿಸುತ್ತಿರಲಿಲ್ಲ. ಹೀಗಾಗಿ ಮನನೊಂದು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅಶೋಕ್ ಕುಮಾರ್ ರಾಜೀನಾಮೆ ನೀಡಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ.

  • ಶ್ರೀನಿವಾಸಪುರವನ್ನ ಶ್ರೀಗಂಧದ ಗುಡಿ ಮಾಡ್ತಿದ್ದಾರೆ ಕೋಲಾರದ ಅಶೋಕ್

    ಶ್ರೀನಿವಾಸಪುರವನ್ನ ಶ್ರೀಗಂಧದ ಗುಡಿ ಮಾಡ್ತಿದ್ದಾರೆ ಕೋಲಾರದ ಅಶೋಕ್

    -ನೀಲಗಿರಿ ನಾಡಲ್ಲಿ ಸ್ಯಾಂಡಲ್‍ವುಡ್ ಕಂಪು

    ಕೋಲಾರ: ಕೋಲಾರ ಅಂದರೆ ಬರದ ಜೊತೆಗೆ ಬಂಗಾರವೂ ನೆನಪಿಗೆ ಬರುತ್ತೆ. ಆದ್ರೀಗ, ಗಂಧದ ಗುಡಿ ಎನ್ನುವಂತೆ ಮಾಡ್ತಿದ್ದಾರೆ ನಮ್ಮ ಪಬ್ಲಿಕ್ ಹೀರೋ ಅಶೋಕ್ ಕುಮಾರ್.

    ಕೋಲಾರದ ಶ್ರೀನಿವಾಸಪುರ ತಾಲೂಕಿನ ಆವಲಕುಪ್ಪೆಯ ಶ್ರೀಗಂಧದ ಕಾಡಿನಲ್ಲಿ ಕಣ್ಣು ಹಾಯಿಸಿದಷ್ಟುದ್ದಕ್ಕೂ ಶ್ರೀಗಂಧದ ಗಿಡಗಳು ಸೊಂಪಾಗಿ ಬೆಳೆದಿವೆ. ಅರಣ್ಯ ಇಲಾಖೆಯ ವಾಚರ್ ಅಶೋಕ್ ಕುಮಾರ್ ಅವರ ಹೆಚ್ಚಿನ ಮುತುವರ್ಜಿಯಿಂದ ಒಂದು ಗಿಡವೂ ಒಣಗಿ ಹೋಗದಂತೆ ಬೆಳೀತಿವೆ.

    25 ಎಕರೆ ಪ್ರದೇಶದ ಕಾಡಿನ ನರ್ಸರಿಯಲ್ಲಿ ಶ್ರೀಗಂಧ, ರಕ್ತಚಂದನ, ಹೊನ್ನೆ, ಬೀಟೆ, ಸೇರಿ ಮಾವು-ಬೇವು-ಹಲಸು, ಹೆಬ್ಬೇವು-ಹೊಂಗೆ, ನೆಲ್ಲಿ-ನೇರಳೆ, ಬೀಟೆ ಹೀಗೆ ನಾನಾ ಜಾತಿಯ 25ಕ್ಕೂ ಹೆಚ್ಚು ಸಸಿಗಳನ್ನ ಬೆಳೆದು ರೈತರಿಗೆ ನೀಡಿ, ಕೋಟಿ ವೃಕ್ಷ ಆಂದೋಲನವನ್ನ ಆರಂಭಿಸಿದ್ದಾರೆ.

    ಮಾವು ಬೇಸಾಯಕ್ಕೆ ಹೆಸರಾಗಿರೋ ಶ್ರೀನಿವಾಸಪುರದಲ್ಲಿ ಇದೀಗ ನೀಲಗಿರಿ ತೆಗೆದು ರೈತರು ಶ್ರೀಗಂಧ ಬೆಳೆಯಲು ಒಲವು ತೋರಿಸಿದ್ದಾರೆ. ಕಳ್ಳರಿಂದ ಗಿಡ ರಕ್ಷಿಸೋದು ಸವಾಲಾದರೂ ರೈತರ ಆರ್ಥಿಕ ಸಂಕಷ್ಟು ನಿವಾರಣೆ ಆಗ್ತಿದೆ. ಇದು ಅಶೋಕ್ ಅವರ ಸಾಧನೆ ಅಂತ ಅರಣ್ಯ ಇಲಾಖೆ ಅಧಿಕಾರಿ ಶ್ರೀನಾಥ್ ಹೇಳಿದ್ದಾರೆ.

    ಒಟ್ಟಿನಲ್ಲಿ ಮಾವಿನ ತವರು ಶ್ರೀನಿವಾಸಪುರವನ್ನು, ಚಿನ್ನದ ನಾಡು ಕೋಲಾರವನ್ನೂ ಅಶೋಕ್ ಕುಮಾರ್ ಅವರು ಗಂಧದ ಗುಡಿ ಮಾಡೋಕೆ ಹೊರಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=j5AKJqQUH5g