Tag: Ashok Kheny

  • ಟಿಕೆಟ್ ಮಾರಿಕೊಂಡ ವೀಡಿಯೋ ಇದ್ರೆ, ತಲೆ ಬೋಳಿಸಿಕೊಂಡು ರಾಜೀನಾಮೆ ನೀಡುತ್ತೇನೆ: ಅಶೋಕ್ ಖೇಣಿ

    ಟಿಕೆಟ್ ಮಾರಿಕೊಂಡ ವೀಡಿಯೋ ಇದ್ರೆ, ತಲೆ ಬೋಳಿಸಿಕೊಂಡು ರಾಜೀನಾಮೆ ನೀಡುತ್ತೇನೆ: ಅಶೋಕ್ ಖೇಣಿ

    ಬೀದರ್: ಟಿಕೆಟ್ ಮಾರಿಕೊಂಡ ವೀಡಿಯೋ ಇದ್ದರೆ ನಾನು ತಲೆ ಬೋಳಿಸಿಕೊಂಡು ರಾಜೀನಾಮೆ ನೀಡುತ್ತೇನೆ ಎಂದು ಅಶೋಕ್ ಖೇಣಿ (Ashok Kheny) ಗರಂ ಆಗಿದ್ದಾರೆ.

    ಬೀದರ್‌ನಲ್ಲಿ (Bidar) ನಾಮಪತ್ರ (Nomination) ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ (Congress) ಟಿಕೆಟ್ ಮಾರಿಕೊಂಡಿದೆ ಎಂಬ ಚಂದ್ರಾಸಿಂಗ್ (Chandra Singh) ಆರೋಪಕ್ಕೆ ತೀರುಗೇಟು ನೀಡಿದ್ದಾರೆ. ನಾನು ಟಿಕೆಟ್ ಖರೀದಿ ಮಾಡುವ ಸ್ವಭಾವದವನಲ್ಲ. ನನಗೆ ಟಿಕೆಟ್ ಸಿಕ್ಕಿದ್ದಕ್ಕೆ ಚಂದ್ರಾಸಿಂಗ್ ಬೇಸರಗೊಂಡಿದ್ದಾರೆ. ಅವರ ಜೊತೆ ಮಾತನಾಡಿ ಸಮಾಧಾನ ಮಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವ ನಾಮಪತ್ರ ಸಲ್ಲಿಕೆ ವೇಳೆ ಭಿನ್ನಮತ ಸ್ಪೋಟ – ಮಾಜಿ ಶಾಸಕಿ ಮನೆಗೆ ತೆರಳಿ ಸ್ಪರ್ಧೆಗೆ ಒತ್ತಾಯಿಸಿದ ಕಾರ್ಯಕರ್ತರು

    ನಾನು ಯಾರಿಗೆ ಬೀದರ್‌ನ್ನು ಸಿಂಗಾಪುರ್ ಮಾಡುತ್ತೇನೆ ಎಂದು ಹೇಳಿದ್ದೇನೆ? ಅವರನ್ನು ತೋರಿಸಿ ನಾನು ಒಂದು ಕೋಟಿ ಕೊಡುತ್ತೇನೆ. ತೋರಿಸಲು ಸಾಧ್ಯವಾಗದೇ ಇದ್ದರೆ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಸವಾಲು ಹಾಕಿದ್ದಾರೆ. ಕೆಲವರು ಟಿಆರ್‌ಪಿಗಾಗಿ ಈ ರೀತಿ ಮಾಡುತ್ತಿದ್ದಾರೆ. ಇದು ತಪ್ಪು ಎಂದು ಮಾಧ್ಯಮಗಳ ವಿರುದ್ಧ ಸಿಟ್ಟಾಗಿದ್ದಾರೆ. ಇದನ್ನೂ ಓದಿ: ಪುತ್ರನ ನಾಮಪತ್ರ ಸಲ್ಲಿಸಲು ತನ್ನ ಹಳೆಯ ಅಂಬಾಸಿಡಾರ್ ಕಾರಿನಲ್ಲಿ ಪ್ರಯಾಣಿಸಿದ ಯಡಿಯೂರಪ್ಪ

  • ಕಾಂಗ್ರೆಸ್ ಅಶೋಕ್ ಖೇಣಿಗೆ ಟಿಕೆಟ್ ಮಾರಿಕೊಂಡಿದೆ – ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಚಂದ್ರಾಸಿಂಗ್ ಕಿಡಿ

    ಕಾಂಗ್ರೆಸ್ ಅಶೋಕ್ ಖೇಣಿಗೆ ಟಿಕೆಟ್ ಮಾರಿಕೊಂಡಿದೆ – ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಚಂದ್ರಾಸಿಂಗ್ ಕಿಡಿ

    – ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆಂದು ಘೋಷಣೆ

    ಬೀದರ್: ಕಾಂಗ್ರೆಸ್‌ನ (Congress) ಮೊದಲ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಗಡಿ ಜಿಲ್ಲೆ ಬೀದರ್‌ನ (Bidar) ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಅಶೊಕ್ ಖೇಣಿಗೆ (Ashok Kheny)ಟಿಕೆಟ್ ನೀಡಿದ್ದಕ್ಕೆ ಮಾಜಿ ಸಿಎಂ ಧರ್ಮಸಿಂಗ್ ಅಳಿಯ ಚಂದ್ರಾಸಿಂಗ್ (Chandra Singh) ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಳೆದ ಬಾರಿ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಸೇರಿದಂತೆ ಎಲ್ಲಾ ನಾಯಕರು ಮುಂದಿನ ಬಾರಿ ಟಿಕೆಟ್ ಕೊಡುವುದಾಗಿ ಹೇಳಿ ಸಮಾಧಾನ ಮಾಡಿದ್ದರು. ಕಾಂಗ್ರೆಸ್‌ನಲ್ಲಿ ದಲ್ಲಾಳಿಗಳ ಕೆಲಸ ನಡೆಯುತ್ತಿದೆ. ಅಶೋಕ್ ಖೇಣಿಗೆ ಕಾಂಗ್ರೆಸ್ ಟಿಕೆಟ್ ಮಾರಿಕೊಂಡಿದ್ದಾರೆ. ಟಿಕೆಟ್ ಎಷ್ಟಕ್ಕೆ ಮಾರಿಕೊಂಡಿದ್ದೀರೀ ಎಂದು ನಾನು ಕಾಂಗ್ರೆಸ್ ನಾಯಕರಿಗೆ ಕೇಳಬೇಕು ಎಂದು ಹರಿಹಾಯ್ದರು. ಇದನ್ನೂ ಓದಿ: ನಾನು ಸಾವರ್ಕರ್ ಅಲ್ಲ, ಕ್ಷಮೆ ಕೇಳುವುದಿಲ್ಲ: ಅನರ್ಹತೆ ಕುರಿತು ರಾಹುಲ್ ಗಾಂಧಿ

    ಈ ಬಾರಿ ನಾನು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ. ಜಿಲ್ಲೆಯಿಂದ ಹಿಡಿದು ರಾಜ್ಯದ ನಾಯಕರು ಕುತಂತ್ರ ಮಾಡಿ ನನಗೆ ಟಿಕೆಟ್ ತಪ್ಪಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕಾಂಗ್ರೆಸ್‌ ಮೊದಲ ಪಟ್ಟಿಯಲ್ಲಿ ಹೊಸ ಮುಖಗಳು

  • ಮಸೀದಿ, ಮಂದಿರಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡ್ತಾರೆ – ವಿವಾದಾತ್ಮಕ ಹೇಳಿಕೆಗೆ ಉಲ್ಟಾ ಹೊಡೆದ ಅಶೋಕ್ ಖೇಣಿ

    ಮಸೀದಿ, ಮಂದಿರಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡ್ತಾರೆ – ವಿವಾದಾತ್ಮಕ ಹೇಳಿಕೆಗೆ ಉಲ್ಟಾ ಹೊಡೆದ ಅಶೋಕ್ ಖೇಣಿ

    ಬೀದರ್ : ಮಸೀದಿ (Mosque) ಹಾಗೂ ಮಂದಿರಗಳಲ್ಲಿ (Temple) ಮದ್ಯ ಮಾರಾಟ ಮಾಡುತ್ತಾರೆ ಎಂದು ಶನಿವಾರ ವಿವಾದಾತ್ಮಕ ಹೇಳಿಕೆ ನೀಡಿದ್ದ ನೈಸ್‌ ಖ್ಯಾತಿಯ ಅಶೋಕ್ ಖೇಣಿ  (Ashok Kheny) ಇದೀಗ ಸ್ಪಷ್ಟನೆ ನೀಡಿ ಉಲ್ಟಾ ಹೊಡೆದಿದ್ದಾರೆ‌.

    ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ಮಸೀದಿ ಬಳಿ, ಮಂದಿರದ ಬಳಿ ಹಾಗೂ ಸ್ಕೂಲ್ ಬಳಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಾರೆ ಎಂದು ನಾನು ಹೇಳಿದ್ದೆ. ಆದರೆ ಕೆಲವರು ತಮ್ಮ ಸ್ವಲಾಭಕ್ಕಾಗಿ ತಿರುಚಿ ಹೇಳಿದ್ದಾರೆ ಎಂದು ಉಲ್ಟಾ ಹೊಡೆದಿದ್ದಾರೆ.

    ನಾನು ಜಾತ್ಯತೀತ ವ್ಯಕ್ತಿಯಾಗಿದ್ದು, ಎಲ್ಲಾ ಧರ್ಮ, ಜಾತಿಯವರು ನನ್ನ ಸಹೋದರ, ಸಹೋದರಿಯರಿದ್ದಂತೆ. ಹೀಗಾಗಿ ಕೆಲವರು ನನಗೆ ತೊಂದರೆ ಕೊಟ್ಟು, ಅವರ ಲಾಭಕ್ಕಾಗಿ ಸುಳ್ಳುಗಳ ಮೇಲೆ ಸುಳ್ಳು ಹೇಳುತ್ತಿದ್ದಾರೆ. ಹೀಗಾಗಿ ನಾನು ಇಂತಹ ವಿವಾದಾತ್ಮಕ ಹೇಳಿಕೆ ಕೊಟ್ಟಿಲ್ಲ, ಆದರೂ ಕ್ಷೇತ್ರದ ಜನರಿಗೆ ಬೇಸರವಾಗಿರಬಹುದು ಎಂದು ಹೇಳಿದರು. ಇದನ್ನೂ ಓದಿ: ಪ್ರೇಮ ವೈಫಲ್ಯ – ಕಳೆನಾಶಕ ಸೇವಿಸಿ ಅಪ್ರಾಪ್ತೆ ಆತ್ಮಹತ್ಯೆ

    ಈ ಹೇಳಿಕೆಗೆ ಶನಿವಾರ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅಷ್ಟೇ ಅಲ್ಲದೇ ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ನಿರ್ಣಾ ಗ್ರಾಮದಲ್ಲಿ ಅಶೋಕ್ ಖೇಣಿ ವಿರುದ್ಧ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು, ಬೆಂಕಿ ಹಚ್ಚಿ ಬೀದರ್ (Bidar) ದಕ್ಷಿಣ ಕ್ಷೇತ್ರದ ಜನರು ಪ್ರತಿಭಟನೆ ನಡೆಸಿದ್ದರು. ಕಾಂಗ್ರೆಸ್ (Congress) ಪಕ್ಷದಿಂದ ಖೇಣಿ ಅವರನ್ನ ಉಚ್ಛಾಟನೆ ಮಾಡುವಂತೆ ಒತ್ತಾಯಿಸಿದ್ದರು. ಆ ಬಳಿಕ ಭಾನುವಾರ ಬೀದರ್‌ನಲ್ಲಿ ವಿವಾದಾತ್ಮಕ ಹೇಳಿಕೆಗೆ ಖೇಣಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಮಾರುವೇಷದಲ್ಲಿದ್ದ ಸ್ಯಾಂಟ್ರೋ ರವಿ ಬಗ್ಗೆ ಸುಳಿವು ಕೊಡ್ತು ಹಣೆ ಮೇಲಿನ ಮಾರ್ಕ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಸೀದಿ, ಮಂದಿರಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡ್ತಾರೆ – ಖೇಣಿ ವಿವಾದಾತ್ಮಕ ಹೇಳಿಕೆ

    ಮಸೀದಿ, ಮಂದಿರಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡ್ತಾರೆ – ಖೇಣಿ ವಿವಾದಾತ್ಮಕ ಹೇಳಿಕೆ

    ಬೀದರ್: ಮಂದಿರ ಹಾಗೂ ಮಸೀದಿಗಳಲ್ಲಿ (Mosque) ಅಕ್ರಮವಾಗಿ ಮದ್ಯ ಮಾರಾಟ ಮಾಡ್ತಾರೆ ಎಂದು ಬೀದರ್ (Bidar) ನಲ್ಲಿ ನೈಸ್ ಖ್ಯಾತಿಯ ಅಶೋಕ್ ಖೇಣಿ (Ashok Kheny) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಖಾಸಗಿ ವಾಹಿನಿಗೆ ಪ್ರತಿಕ್ರಿಯೆ ನೀಡುವಾಗ ತಮ್ಮ ನಾಲಿಗೆ ಹರಿಬಿಟ್ಟಿರುವ ಅಶೋಕ್ ಖೇಣಿ, ಅಕ್ರಮವಾಗಿ ಕಿರಾಣಿ ಸ್ಟೋರ್, ಮಸೀದಿ, ಮಂದಿರಗಳಲ್ಲಿ (Temple) ಮದ್ಯ ಮಾರಾಟ ಮಾಡ್ತಾರೆ ಎಂದಿದ್ದರು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗ್ತಿದೆ. ಇದನ್ನೂ ಓದಿ: ಅಪಘಾತದಲ್ಲಿ ಬ್ರೈನ್ ಡೆಡ್ ಆದ ಮಗನ ಅಂಗಾಂಗ ದಾನ ಮಾಡಿದ ಪೋಷಕರು

    ಇದೇ ವೇಳೆ ಕಾಂಗ್ರೆಸ್ (Congress) ಟಿಕೆಟ್ ಆಕಾಂಕ್ಷಿ ಚಂದ್ರಾ ಸಿಂಗ್ ಅವರನ್ನ ಅಶೋಕ್ ಖೇಣಿ ಬೀದಿ ನಾಯಿಗೆ ಹೋಲಿಕೆ ಮಾಡಿ ಟೀಕಿಸಿದ್ದಾರೆ. ನಿಮ್ಮ ಮನೆಯಲ್ಲಿ ಜರ್ಮನ್ ಶೆಪರ್ಡ್ ನಾಯಿ, ಹೊರಗಡೆ ಬೀದಿ ನಾಯಿ ಇದೆ. ನೀವು ಯಾವ ನಾಯಿಯನ್ನು ಇಷ್ಟ ಪಡತ್ತೀರಾ? ನೀವು ಬೀದಿ ನಾಯಿ ಇಷ್ಟಪಟ್ಟರೆ ಅದನ್ನೇ ನಿಮ್ಮ ಮನೆಗೆ ಕಳಿಸುತ್ತೇನೆ. ಆದ್ರೆ ಜರ್ಮನ್ ಶೆಪರ್ಡ್ ನಾಯಿ ಬಿಟ್ಟು ಬೀದಿ ನಾಯಿಗೆ ಆಸೆ ಪಡ್ತೀರಾ ಎಂದು ತಮ್ಮದೇ ಪಕ್ಷದ ಟಿಕೆಟ್ ಆಕಾಂಕ್ಷಿಯನ್ನ ಅಲ್ಲಗಳೆದಿದ್ದಾರೆ. ಇದನ್ನೂ ಓದಿ: ನಟಿ ಉರ್ಫಿ ಜಾವೇದ್ ಗೆ ಸಮನ್ಸ್ ನೀಡಿದ ಮುಂಬೈ ಪೊಲೀಸ್

    ವ್ಯಾಪಕ ಪ್ರತಿಭಟನೆ (Protest): `ಮಸೀದಿ, ಮಂದಿರಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡ್ತಾರೆ’ ಎಂಬ ಖೇಣಿ ಹೇಳಿಕೆ ಖಂಡಿಸಿ ಬೀದರ್‌ನಲ್ಲಿ ವ್ಯಾಪಕ ಪ್ರತಿಭಟನೆ ನಡೆದಿದೆ. ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ನಿರ್ಣಾ ಗ್ರಾಮದಲ್ಲಿ ಅಶೋಕ್ ಖೇಣಿ ವಿರುದ್ಧ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಬೀದರ್ ದಕ್ಷಿಣ ಕ್ಷೇತ್ರದ ಜನರು ಪ್ರತಿಭಟನೆ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಖೇಣಿ ಅವರನ್ನ ಉಚ್ಛಾಟನೆ ಮಾಡುವಂತೆ ಒತ್ತಾಯಿಸಿದ್ದಾರೆ.

    ಕಳೆದ ಬಾರಿಯೂ ಜೂಜು, ಇಸ್ಪೀಟ್ ಆಡಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿ ಖೇಣಿ ಸುದ್ದಿಯಾಗಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಾನು ತಪ್ಪು ಜಾತಿಯಲ್ಲಿ ಹುಟ್ಟಿದ್ದೀನಿ, ಅಶೋಕ್ ಗೌಡ ಆಗಿದ್ರೆ ಕನ್ಯಾಕುಮಾರಿವರೆಗೂ ನೈಸ್ ಪ್ರಾಜೆಕ್ಟ್!

    ನಾನು ತಪ್ಪು ಜಾತಿಯಲ್ಲಿ ಹುಟ್ಟಿದ್ದೀನಿ, ಅಶೋಕ್ ಗೌಡ ಆಗಿದ್ರೆ ಕನ್ಯಾಕುಮಾರಿವರೆಗೂ ನೈಸ್ ಪ್ರಾಜೆಕ್ಟ್!

    – ಬಿಎಸ್‍ವೈ ಬೇಗ ಸಿಎಂ ಆಗಲಿ ಎಂದು ಹಾರೈಕೆ

    ಮೈಸೂರು: ನಾನು ಲಿಂಗಾಯತ ಜಾತಿಯಲ್ಲಿ ಹುಟ್ಟಿದ ಪರಿಣಾಮ ನೈಸ್ ಪ್ರಾಜೆಕ್ಟ್ ಪೂರ್ಣಗೊಳಿಸಲು ಆಗಲಿಲ್ಲ. ಅಶೋಕ್ ಗೌಡ ಆಗಿದ್ದರೆ ಕನ್ಯಾಕುಮಾರಿವರೆಗೂ ನೈಸ್ ಪ್ರಾಜೆಕ್ಟ್ ಸಿಗುತಿತ್ತು ಎಂದು ಪರೋಕ್ಷವಾಗಿ ಜೆಡಿಎಸ್ ಪಕ್ಷದ ವರಿಷ್ಠರ ಬಗ್ಗೆ ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿ ಅಸಮಾಧಾನ ಹೊರಹಾಕಿದ್ದಾರೆ.

    ಮೈಸೂರಿನಲ್ಲಿ ನಡೆದ ಲಿಂಗಾಯತ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೈಸ್ ಪ್ರಾಜೆಕ್ಟ್ ನಾನು ಲಿಂಗಾಯುತ ಆದ ಕಾರಣ ಪೂರ್ಣಗೊಳಿಸಲಾಗಲಿಲ್ಲ. ನಾನು ತಪ್ಪು ಜಾತಿಯಲ್ಲಿ ಹುಟ್ಟಿದ್ದೇನೆ. ನಾನೇನಾದರೂ ಅಶೋಕ್ ಗೌಡ ಆಗಿದ್ದರೆ ಕನ್ಯಾಕುಮಾರಿವರೆಗೆ ನೈಸ್ ಪ್ರಾಜೆಕ್ಟ್ ಆಗುತ್ತಿತ್ತು ಎಂದು ಹೇಳಿದ್ದಾರೆ.

    ಸಭೆಯಲ್ಲಿ ಭಾಗವಹಿಸಿದ್ದು ನನಗೆ ಬಹಳ ಸಂತಸ ತಂದಿದೆ. ಬಿಎಸ್ ಯಡಿಯೂರಪ್ಪ ಅವರನ್ನು ಬಹು ದಿನಗಳ ಬಳಿಕ ನಗು ಮುಖದಿಂದ ನೋಡುತ್ತಿದ್ದೇನೆ. ನಾನು ಕಾಂಗ್ರೆಸ್ ಪಕ್ಷದಲ್ಲಿ ಇದ್ದರೂ ಕೂಡ ಅವರು ಬೇಗ ಸಿಎಂ ಆಗಲಿ ಎಂದು ಹಾರೈಕೆ ಮಾಡುತ್ತೇನೆ ಎಂದರು.

    ಜನರು ನನ್ನನ್ನು ಸೋಲಿಸಿದ ವೇಳೆ ನಾನು ಶ್ರೀಗಳ ಸಲಹೆ ಪಡೆದು ಸಂತನಾಗಿದ್ದೆ. ಈಗ ಜನರಿಗೆ ತಿಳಿಯುತ್ತಿದೆ ಯಾರು ಎಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂದು ತಿಳಿಸಿದರು. ತಮ್ಮ ಭಾಷಣದಲ್ಲಿ ಲಿಂಗಾಯುತ ಪದ ಬಳಸಿ ಸ್ಪಷ್ಟನೆ ನೀಡಿದ ಅವರು, ಈಗ ಲಿಂಗಾಯತ ಎಂದರೆ ಬೈತಾರೆ, ವೀರಶೈವ ಲಿಂಗಾಯುತ ಎನ್ನಬೇಕು ಎಂದರು. ಅಲ್ಲದೇ ನಮಗೆ ವಿಭೂತಿಯೇ ಎಲ್ಲಕ್ಕಿಂತ ಹೆಚ್ಚಿನ ಮೇಕಪ್ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುತ್ತೂರು ಸ್ವಾಮೀಜಿ ಬಹಳ ಸುಂದರವಾಗಿದ್ದಾರೆ: ಅಶೋಕ್ ಖೇಣಿ

    ಸುತ್ತೂರು ಸ್ವಾಮೀಜಿ ಬಹಳ ಸುಂದರವಾಗಿದ್ದಾರೆ: ಅಶೋಕ್ ಖೇಣಿ

    -ನನ್ನ ಮಕ್ಕಳಿಗೆ ಅವಳಿ ಹೆಣ್ಣು ಹುಡುಕಿ ಕೊಡಿ

    ಮೈಸೂರು: ಸುತ್ತೂರು ಶ್ರೀಗಳನ್ನು ಹೊಗಳುವ ಭರದಲ್ಲಿ ಮಾಜಿ ಶಾಸಕ ಅಶೋಕ್ ಖೇಣಿ ಸ್ವಾಮೀಜಿಗಳಿಗೆ ಮುಜುಗುರು ಉಂಟು ಮಾಡಿದ್ದಾರೆ.

    ಸುತ್ತೂರು ಮಠದಲ್ಲಿ ನಡೆಯುತ್ತಿರುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಶೋಕ್ ಖೇಣಿ, ನನಗೆ ಮೈಸೂರಿಗೆ ಬಂದಾಗ ತವರು ಮನೆಗೆ ಬಂದ ಅನುಭವ ಉಂಟಾಗುತ್ತದೆ. ನನ್ನ ಪತ್ನಿ ಯಾವಗಲೂ ಸ್ವಾಮೀಜಿಗಳ ಕಣ್ಣುಗಳ ಬಗ್ಗೆ ಹೊಗಳುತ್ತಾರೆ. ಸ್ವಾಮೀಜಿಗಳ ಅರ್ಥ ಗರ್ಭಿತ ಮಾತು, ದಿವ್ಯ ದೃಷ್ಟಿ ಎಲ್ಲವೂ ಅದ್ಭುತ. ಮುಂದೆ ನನ್ನ ಮಕ್ಕಳ ಮದುವೆಯನ್ನು ಸುತ್ತೂರು ಮಠದಲ್ಲೇ ಸ್ವಾಮೀಜಿಗಳ ಸಮ್ಮುಖದಲ್ಲೇ ಮಾಡುತ್ತೇನೆ ಎಂದರು.

    ನನ್ನ ಮಕ್ಕಳಿಗೆ 25 ವರ್ಷ ಆಗಿದ್ದು, ಮದುವೆ ಮಾಡಬೇಕಿದೆ. ನನ್ನಿಬ್ಬರು ಗಂಡು ಮಕ್ಕಳಿಗೆ ಅವಳಿ-ಜವಳಿ ಹೆಣ್ಣು ಮಕ್ಕಳನ್ನು ಹುಡುಕಿ ಕೊಡಿ. ಹುಡುಗಿ ಲಿಂಗಾಯತರಾಗಿರಬೇಕು, ಸುಂದರವಾಗಿರಬೇಕು. ನಮ್ಮೆಲ್ಲರ ಮೇಲೆ ನಿಮ್ಮ ಆಶೀರ್ವಾದ ಇರಬೇಕು ಎಂದು ಸ್ವಾಮೀಜಿಗಳಿಗೆ ತಮ್ಮ ಮಕ್ಕಳಿಗೆ ಹೆಣ್ಣು ಹುಡುಕುವ ಜವಾಬ್ದಾರಿ ಅಶೋಕ್ ಖೇಣಿ ನೀಡಿದರು.

    ಉದ್ಯಮ, ರಾಜಕಾರಣ ಎಲ್ಲವೂ ಆಯಿತು. ನನ್ನನ್ನು ನಿಮ್ಮ ಮಠಕ್ಕೆ ಸೇರಿಸಿಕೊಳ್ಳಿ ಅಥವಾ ನನಗೊಂದು ಬೇರೆ ಮಠ ಮಾಡಿಕೊಡಿ ಎಂದು ನಾನು ಸ್ವಾಮೀಜಿಗಳ ಬಳಿ ಕೇಳಿಕೊಂಡಿದ್ದೇನೆ. ಆದ್ರೆ ಸ್ವಾಮೀಜಿಗಳು ಒಪ್ಪುತ್ತಿಲ್ಲ. ನಿಮ್ಮ ಪತ್ನಿಯಿಂದ ಅನುಮತಿ ಪಡೆದುಕೊಂಡು ಬನ್ನಿ ಎಂದು ಹೇಳ್ತಾರೆ. ನಾನೇನು ಮಾಡಲಿ ಎಂದು ಆಶೋಕ್ ಖೇಣಿ ಹೇಳಿದರು.

  • ಅಶೋಕ್ ಖೇಣಿಯನ್ನ ಜನರು ಮನೆಯಲ್ಲಿ ಕೂರಿಸಿದ್ದು ಯಾಕೆ: ಎಚ್‍ಡಿಕೆ ಮಾತಲ್ಲಿ ಕೇಳಿ

    ಅಶೋಕ್ ಖೇಣಿಯನ್ನ ಜನರು ಮನೆಯಲ್ಲಿ ಕೂರಿಸಿದ್ದು ಯಾಕೆ: ಎಚ್‍ಡಿಕೆ ಮಾತಲ್ಲಿ ಕೇಳಿ

    ಬೆಂಗಳೂರು: ಮಾಜಿ ಶಾಸಕ ಅಶೋಕ್ ಖೇಣಿ ಸಮ್ಮಿಶ್ರ ಸರ್ಕಾರದಲ್ಲಿ ನನಗೆ ಬೆಂಬಲ ನೀಡಬಾರದು ಎಂದು ಜನಗಳೇ ಅವರನ್ನೇ ಮನೆಯಲ್ಲಿ ಕೂರಿಸಿದ್ದಾರೆ ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

    ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ನಡೆದ ಚರ್ಚೆಯಲ್ಲಿ ಸಿಎಂ ವಿರೋಧ ಪಕ್ಷದ ವಿರೋಧ ನಾಯಕರ ಹೇಳಿಕೆಗಳಿಗೆ ತಿರುಗೇಟು ನೀಡುತ್ತಿದ್ದರು. ಚುನಾವಣೆ ಸಂದರ್ಭದಲ್ಲಿ ತಮ್ಮ ಪ್ರತಿ ಸ್ಪರ್ಧಿಗಳ ವಿರುದ್ಧ ಮಾತನಾಡಿದ್ದಾರೆ. ಅಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜೆಡಿಎಸ್ ವಿರುದ್ಧ ಮಾತನಾಡಿದರು. ರಾಜಕಾರಣದಲ್ಲಿ ಯಾರು ಶತ್ರುಗಳಲ್ಲಿ, ಮಿತ್ರರೂ ಅಲ್ಲ. ಬದಲಾದ ಪರಿಸ್ಥಿತಿ ಮತ್ತು ಸನ್ನಿವೇಶದಲ್ಲಿ ಇಂದು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ ಎಂದು ತಿಳಿಸಿದರು.

    ಈ ಹಿಂದೆ ನೈಸ್ ಕಂಪೆನಿಯ ಒಪ್ಪಂದವನ್ನು ರದ್ದುಗೊಳಿಸಲು ಸಂಪುಟ ಸಭೆಯನ್ನು ಕರೆದರೆ, ಬಿಜೆಪಿಯವರು 6 ಗಂಟೆಗಳ ಕಾಲ ಸಭೆಯಿಂದ ಹೊರ ನಡೆದಿದ್ದರು ಎಂದು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಮಾಜಿ ಸಚಿವ ಎಸ್.ಆರ್.ಬೊಮ್ಮಾಯಿ ಈಗ ಖೇಣಿ ನಿಮ್ಮ ಬಳಿಯಲ್ಲಿದ್ದಾರೆ. ಇವಾಗ ನೀವೇ ಮುಖ್ಯಮಂತ್ರಿಯಾಗಿದ್ದು, ನೈಸ್ ಪ್ರಸ್ತಾಪವನ್ನು ಸಂಪುಟದಲ್ಲಿಟ್ಟು ಚರ್ಚಿಸಿ. ಈಗಲೂ ನಮ್ಮ ಮುಂದೆ ಜಯಚಂದ್ರ ವರದಿ ಇದೆ. ಆದ್ರೆ ನೈಸ್ ಪ್ರಸ್ತಾಪವನ್ನು ಸಂಪುಟದಲ್ಲಿಡಲು ನಿಮ್ಮಿಂದ ಸಾಧ್ಯವಾಗಲ್ಲ. ಅಶೋಕ್ ಖೇಣಿಗೆ ಕಾಂಗ್ರೆಸ್‍ನಿಂದ ದೊಡ್ಡ ಬೆಂಬಲವಿದೆ ಎಂದು ಟೀಕಿಸಿದರು.

    ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಇನ್ನು ಕಾಲಾವಕಾಶವಿದ್ದು, ನೈಸ್ ಕಂಪೆನಿ ಪ್ರಸ್ತಾಪವನ್ನು ಸಂಪುಟದಲ್ಲಿ ಇಡುತ್ತೇವೆಯೋ ಇಲ್ಲವೋ ಎಂಬುವುದನ್ನು ಮುಂದಿನ ದಿನಗಳಲ್ಲಿ ತಿಳಿಯಲಿದೆ ಅಂತಾ ಉತ್ತರಿಸಿದರು.

  • ನೈಸ್ ಅಶೋಕ್ ಖೇಣಿಗೆ ಐಟಿ ಶಾಕ್

    ನೈಸ್ ಅಶೋಕ್ ಖೇಣಿಗೆ ಐಟಿ ಶಾಕ್

    ಬೀದರ್: ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆಯಲ್ಲಿ ಹಾಲಿ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಮತ್ತು ಕಾಂಗ್ರೆಸ್ ಅಭ್ಯರ್ಥಿ ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿಗೆ ಐಟಿ ಶಾಕ್ ನೀಡಿದೆ.

    ಅಭ್ಯರ್ಥಿ ಅಶೋಕ್ ಖೇಣಿಯ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದ್ದಾರೆ. ಅಕ್ರಮ ಹಣ ಸಂಗ್ರಹ ದೂರು ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೀದರ್ ರಾಂಪೂರೆ ಕಾಲೋನಿಯಲ್ಲಿರುವ ನಿವಾಸದಲ್ಲಿ ಅಧಿಕಾರಿಗಳು ದಾಖಲೆಯನ್ನು ಪರಿಶೀಲನೆ ನಡೆಸುತ್ತಿದ್ದಾರೆ.

    ಖೇಣಿ ನಿವಾಸದ ಮೇಲೆ ಐಟಿ ದಾಳಿ ನಡೆಯುತ್ತಿದ್ದಾಗ ಖೇಣಿ ಬೆಂಬಲಿಗರು ಮಾಧ್ಯಮಗಳ ಮೇಲೆ ದರ್ಪ ತೋರಿದ್ದಾರೆ. ಬೆಂಬಲಿಗರು ಖೇಣಿ ವಿರುದ್ಧ ಸುದ್ದಿ ಮಾಡುತ್ತೀರಿ ಎಂದು ಅವಾಜ್ ಹಾಕಿ ದರ್ಪ ತೋರಿಸಿದ್ದಾರೆ.

     

  • ಅಶೋಕ್ ಖೇಣಿಗೆ ಬಿಗ್ ರಿಲೀಫ್- ನಾಮಪತ್ರ ಅಂಗೀಕಾರ

    ಅಶೋಕ್ ಖೇಣಿಗೆ ಬಿಗ್ ರಿಲೀಫ್- ನಾಮಪತ್ರ ಅಂಗೀಕಾರ

    ಬೀದರ್: ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿಗೆ ರಿಲೀಫ್ ಸಿಕ್ಕಿದ್ದು, ಚುನಾವಣಾ ಅಧಿಕಾರಿಗಳು ನಾಮಪತ್ರವನ್ನು ಅಂಗೀಕಾರಿಸಿದ್ದಾರೆ.

    ಅಶೋಕ್ ಖೇಣಿ ಅಮೆರಿಕದ ಪೌರತ್ವ ಹೊಂದಿದ್ದಾರೆ. ಬೇರೆ ದೇಶಗಳಲ್ಲಿ ವ್ಯವಹಾರ ಮಾಡುತ್ತಿದ್ದಾರೆ. ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆಸಿ ನೊಂದಣಿ ಮಾಡಿಕೊಂಡಿದ್ದಾರೆ. ಸರ್ಕಾರದ ಕಾಮಗಾರಿಗಳಲ್ಲಿ ಪಾಲನ್ನು ಹೊಂದಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ ಅವರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ದೂರು ದಾಖಲಾದ ನಂತರ ಖೇಣಿ ಪರ ವಕೀಲರು ಪೂರಕ ದಾಖಲೆಗಳನ್ನು ಸಲ್ಲಿಸಲು ಸಮಯಾವಕಾಶ ಕೇಳಿದ್ದರು.

    ಇಂದು ಬೆಳಗ್ಗೆ 11 ಘಂಟೆಗೆ ಖೇಣಿಯವರ ಪಾಸ್ ಪೋರ್ಟ್ ಮತ್ತು ಆದಾಯ ತೆರಿಗೆ ಇಲಾಖೆಗೆ ಕಟ್ಟಿರುವ ದಾಖಲೆಗಳನ್ನು ಚುನಾವಣಾ ಆಯೋಗಕ್ಕೆ ಖೇಣಿ ಪರ ವಕೀಲರು ಸಲ್ಲಿಸಿದರು. ದಾಖಲೆಗಳನ್ನು ಪರಿಶೀಲಿಸಿದ ಅಧಿಕಾರಿಗಳು, ಮತದಾರರ ಪಟ್ಟಿಯ ಅಕ್ರಮ ನೊಂದಣಿ ವಿಚಾರಣೆ ನಮ್ಮ ಪರಿಧಿಯಲ್ಲಿ ಬರುವುದಿಲ್ಲ ಈ ಕುರಿತು ಕೇಂದ್ರ ಗೃಹ ಇಲಾಖೆಯ ಸಕ್ಷಮ ಪ್ರಾಧಿಕಾರದಲ್ಲಿ ದೂರನ್ನು ಸಲ್ಲಿಸಬಹುದು. ಸರ್ಕಾರದ ಕಾಮಗಾರಿಗಳಲ್ಲಿ ನೈಸ್ ಕಂಪನಿ ಒಪ್ಪಂದ ಮಾಡಿಕೊಂಡಿದೆಯೇ ವಿನಃ ಖೇಣಿ ಹೆಸರಿನಲ್ಲಿ ಆಗಿಲ್ಲ ಎಂದು 2103ರಲ್ಲೇ ನ್ಯಾಯಾಲಯ ದೂರು ಅರ್ಜಿಯನ್ನು ವಜಾ ಮಾಡಿದೆ ಎಂದು ತಿಳಿಸಿ ಅಶೋಕ್ ಖೇಣಿ ಅವರ ನಾಮಪತ್ರ ಅಂಗೀಕರಿಸಲಾಗಿದೆ ಎಂದು ತಿಳಿಸಿದರು.

    ಆಯೋಗದ ನಿರ್ಧಾರದ ಬಳಿಕ ಪ್ರತಿಕ್ರಿಯಿಸಿದ ಅಬ್ರಹಾಂ, ಅರ್ಜಿಯಲ್ಲಿರುವ ಆಕ್ಷೇಪಣೆಗಳ ವಿಚಾರ ಚುನಾವಣಾಧಿಕಾರಿಗಳ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಆಯೋಗ ತಿಳಿಸಿದೆ. ಹೀಗಾಗಿ ನ್ಯಾಯಾಲಯದಲ್ಲಿ ದೂರು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

    2013ರಲ್ಲಿ ಅಶೋಕ್ ಖೇಣಿ ಕರ್ನಾಟಕ ಮಕ್ಕಳ ಪಕ್ಷದ ಅಡಿಯಲ್ಲಿ ಬೀದರ್ ದಕ್ಷಿಣ ಕ್ಷೇತ್ರದಿಂದ ಕಣಕ್ಕೆ ಇಳಿದು ಗೆದ್ದಿದ್ದರು. ರಾಜ್ಯಸಭಾ ಚುನಾವಣೆಯಲ್ಲಿ ಕೈ ಅಭ್ಯರ್ಥಿಗಳಿಗೆ ವೋಟ್ ಹಾಕಿದ್ದ ಖೇಣಿ ಮಾರ್ಚ್ ತಿಂಗಳಿನಲ್ಲಿ ಕಾಂಗ್ರೆಸ್ ಸೇರಿದ್ದರು. ಪ್ರಸ್ತುತ ಖೇಣಿ ಅವರಿಗೆ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಸಿಕ್ಕಿದೆ.

  • ಅಶೋಕ್ ಖೇಣಿ ಅಮೆರಿಕದ ಪ್ರಜೆ – ಆಯೋಗದಿಂದ ನಾಮಪತ್ರ ಅಂಗೀಕಾರಕ್ಕೆ ಬ್ರೇಕ್

    ಅಶೋಕ್ ಖೇಣಿ ಅಮೆರಿಕದ ಪ್ರಜೆ – ಆಯೋಗದಿಂದ ನಾಮಪತ್ರ ಅಂಗೀಕಾರಕ್ಕೆ ಬ್ರೇಕ್

    ಬೀದರ್: ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿ ನಾಮಪತ್ರ ಅಂಗೀಕಾರ ಮಾಡದಂತೆ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಾಹಂ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

    ಅಶೋಕ್ ಖೇಣಿ ಭಾರತದ ಪ್ರಜೆ ಅಲ್ಲ. ಅವರು ಅಮೆರಿಕದ ಪ್ರಜೆಯಾಗಿದ್ದು, ಸರ್ಕಾರದ ಹಲವು ಯೋಜನೆಗಳಲ್ಲಿ ಗುತ್ತಿಗೆ ಪಡೆದಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.

    ದೂರು ದಾಖಲಾದ ಹಿನ್ನೆಲೆಯಲ್ಲಿ ಖೇಣಿ ನಾಮಪತ್ರ ಅಂಗೀಕಾರಕ್ಕೆ ಆಯೋಗದ ಅಧಿಕಾರಿಗಳು ತಡೆ ನೀಡಿದ್ದಾರೆ. ದೂರಿನ ಸಂಬಂಧ ಚುನಾವಣಾ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.

    2013ರಲ್ಲಿ ಅಶೋಕ್ ಖೇಣಿ ಕರ್ನಾಟಕ ಮಕ್ಕಳ ಪಕ್ಷದ ಅಡಿಯಲ್ಲಿ ಬೀದರ್ ದಕ್ಷಿಣ ಕ್ಷೇತ್ರದಿಂದ ಕಣಕ್ಕೆ ಇಳಿದು ಗೆದ್ದಿದ್ದರು. ರಾಜ್ಯಸಭಾ ಚುನಾವಣೆಯಲ್ಲಿ ಕೈ ಅಭ್ಯರ್ಥಿಗಳಿಗೆ ವೋಟ್ ಹಾಕಿದ್ದ ಖೇಣಿ ಮಾರ್ಚ್ ತಿಂಗಳಿನಲ್ಲಿ ಕಾಂಗ್ರೆಸ್ ಸೇರಿದ್ದರು. ಪ್ರಸ್ತುತ ಖೇಣಿ ಅವರಿಗೆ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಸಿಕ್ಕಿದೆ.