Tag: Ashok Kadaba

  • ರಂಜನಿ ನಟನೆಯ ‘ಸತ್ಯಂ’ ಸಿನಿಮಾದ ಆಡಿಯೋ ರಿಲೀಸ್ ಮಾಡಿದ ಸಚಿವ ತಂಗಡಗಿ

    ರಂಜನಿ ನಟನೆಯ ‘ಸತ್ಯಂ’ ಸಿನಿಮಾದ ಆಡಿಯೋ ರಿಲೀಸ್ ಮಾಡಿದ ಸಚಿವ ತಂಗಡಗಿ

    ಹಾಂತೇಶ್ ವಿ.ಕೆ. ಅವರ ನಿರ್ಮಾಣದ ‘ಸತ್ಯಂ’ (Satyam) ಚಿತ್ರದ  ಆಡಿಯೋ ಬಿಡುಗಡೆ ಸಮಾರಂಭ ಗಂಗಾವತಿಯ ಜಗಜೀವನ ರಾಮ್ ಸರ್ಕಲ್ ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ  ನೆರವೇರಿತು. ಸಚಿವರಾದ ಶಿವರಾಜ್ ತಂಗಡಗಿ (Shivaraj Thangadagi) ಅವರು ಸತ್ಯಂ ಚಿತ್ರದ ಆಡಿಯೋ ಬಿಡುಗಡೆಗೊಳಿಸಿ ಮಾತನಾಡುತ್ತ ಬಾಂಧವ್ಯದ ಕಥೆ ಇಟ್ಟುಕೊಂಡು ಉತ್ತರ ಕರ್ನಾಟಕದವರೇ ಆದ  ನಿರ್ಮಾಪಕರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ನಮ್ಮ ಭಾಗದವರಾದ ಇವರನ್ನು ನಾವೆಲ್ಲ ಸೇರಿ ಗೆಲ್ಲಿಸಬೇಕು. ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ. ಅವರಿಗೆಲ್ಲ ಅವಕಾಶ ಸಿಗುವಂತಾಗಲಿ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು.

    ನಂತರ ನಿರ್ಮಾಪಕ ಮಹಾಂತೇಶ್ ಅವರು  ಮಾತನಾಡುತ್ತ ಇದು ನಮ್ಮ ಸಂಸ್ಥೆಯ ಎರಡನೇ ಚಿತ್ರ. ತಲೆಮಾರುಗಳ ನಡುವಿನ ಕಥಾಹಂದರ  ಇಟ್ಟುಕೊಂಡು ಒಂದೊಳ್ಳೇ ಸಿನಿಮಾ ಮಾಡಿದ್ದೇವೆ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ತಯಾರಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ, ನಮ್ಮ ಜನರ ಸಮ್ಮುಖದಲ್ಲಿ  ಆಡಿಯೋ ಬಿಡುಗಡೆ  ಮಾಡಬೇಕೆಂಬುದು ನನ್ನ ಕನಸಾಗಿತ್ತು. ದಯವಿಟ್ಟು ನಮ್ಮ ಚಿತ್ರವನ್ನು ಥೇಟರಿನಲ್ಲಿ ವೀಕ್ಷಿಸುವ ಮೂಲಕ ಪ್ರೋತ್ಸಾಹಿಸಿ ಎಂದು ಹೇಳಿದರು.

    ಸದಭಿರುಚಿಯ ಚಿತ್ರಗಳ ಮೂಲಕ ಗುರ್ತಿಸಿಕೊಂಡಿರುವ ಅಶೋಕ್ ಕಡಬ ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ಉತ್ತರ ಕರ್ನಾಟಕದಲ್ಲಿ ಕನ್ನಡ ಚಿತ್ರಗಳನ್ನು ಹೆಚ್ಚು  ಜನ ನೋಡುತ್ತಾರೆ. ಹಾಗಾಗಿ ನಿಮ್ಮ ಬಳಿಗೆ ಬಂದಿದ್ದೇವೆ. ಒಳ್ಳೇ ಸಿನಿಮಾ ಮಾಡಿದ್ದೇವೆ. ನೀವೆಲ್ಲ ಚಿತ್ರವನ್ನು ಗೆಲ್ಲಿಸುತ್ತೀರೆಂಬ ನಂಬಿಕೆಯಿದೆ ಎಂದರು. ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು, ಜಗದ್ಗುರು ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದ ವೇದಿಕೆಯಲ್ಲಿ ಉತ್ತರ ಕರ್ನಾಟಕ ಭಾಗದ ಅನೇಕ ರಾಜಕೀಯ ಗಣ್ಯರುಗಳು ಭಾಗವಹಿಸಿದ್ದರು.

     

    ಕಾಲಘಟ್ಟಗಳಲ್ಲಿ ನಡೆಯೋ ಕಥೆ ಸತ್ಯಂ ಚಿತ್ರದಲ್ಲಿದ್ದು,  ಜಮೀನ್ದಾರ್ ಕುಟುಂಬದ ಎಳೆಯೊಂದಿಗೆ ಪ್ರಸ್ತುತ ಬದುಕಿನ ಕಥೆಯೂ ಬೆಸೆದುಕೊಂಡಿದೆ. ತಾತನಾಗಿ ಹಿರಿಯ ನಟ ಸುಮನ್ , ಮೊಮ್ಮಗನಾಗಿ ಸಂತೋಷ್ ಅಭಿನಯಿಸಿದ್ದಾರೆ. ನಾಯಕಿಯಾಗಿ ರಂಜಿನಿ ರಾಘವನ್  (Ranjani Raghavan)  ಕಾಣಿಸಿಕೊಂಡಿದ್ದಾರೆ.  ಜನವರಿಯಲ್ಲಿ  ಚಿತ್ರದ ಟ್ರೈಲರ್  ಬಿಡುಗಡೆಯಾಗಲಿದೆ. ರವಿ ಬಸ್ರೂರು  ಅವರ ಸಂಗೀತ ಸಂಯೋಜನೆ,   ಸಿನಿಟೆಕ್ ಸೂರಿ ಅವರ ಕ್ಯಾಮೆರಾ ವರ್ಕ್ ಈ  ಚಿತ್ರಕ್ಕಿದೆ    ಕೆ.ವಿ.ರಾಜು ಅವರು ಒಂದಿಷ್ಟು ಚಿತ್ರಕಥೆ, ಸಂಭಾಷಣೆ  ಬರೆದಿದ್ದು, ಅದನ್ನು  ಕಿನ್ನಾಳ ರಾಜ್  ಪೂರ್ಣಗೊಳಿಸಿ, ಒಂದು ಹಾಡನ್ನೂ ಬರೆದಿದ್ದಾರೆ.

  • ‘ನಿಂಬಿಯಾ ಬನಾದ ಮ್ಯಾಗ’ ಬೆರಗು ಮೂಡಿಸಿದ ಅಶೋಕ್ ಕಡಬ!

    ‘ನಿಂಬಿಯಾ ಬನಾದ ಮ್ಯಾಗ’ ಬೆರಗು ಮೂಡಿಸಿದ ಅಶೋಕ್ ಕಡಬ!

    ರಮಹಾಲಕ್ಷ್ಮಿ ಹಬ್ಬದ ಶುಭ ಘಳಿಗೆಯಲ್ಲಿ ಅಶೋಕ್ ಕಡಬ (Ashok Kadaba)ನಿರ್ದೇಶನದ ‘ನಿಂಬಿಯಾ ಬನಾದ ಮ್ಯಾಗ’ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗೆಗೊಂಡಿದೆ. ಅದರಲ್ಲಿ ತೆರೆದುಕೊಂಡ ಸುಂದರ ದೃಶ್ಯಾವಳಿ, ಸಂವೇದನಾಶೀಲ ಕಥೆಯ ಸುಳಿವು ಕಂಡೇ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ. ಜನಪ್ರಿಯ ಧಾಟಿಯ ಸಿನಿಮಾಗಳ ರಾಟೆಯ ನಡುವೆ, ಆಗಾಗ ಪ್ರೇಕ್ಷಕರು ತಂಗಾಳಿ ತೀಡಿದಂಥಾ ಕಥೆಯನ್ನು ಕನವರಿಸುತ್ತಾರೆ. ಕುಟುಂಬ ಸಮೇತರಾಗಿ ಕೂತು ನೋಡುವ ಸಂಭ್ರಮವನ್ನು ಎದುರು ನೋಡುತ್ತಾರೆ. ಅದೆಲ್ಲವೂ ‘ನಿಂಬಿಯಾ ಬನಾದ ಮ್ಯಾಗ’ (Nimbiya Banada Myaga) ಚಿತ್ರದ ಮೂಲಕ ಸಿಗುವ ಭರವಸೆ ಮೂಡಿದೆ.

    ವರನಟ ಡಾ.ರಾಜ್‌ಕುಮಾರ್ (Rajakumar) ಅವರ ಮೊಮ್ಮಗ ಶಣ್ಮುಖ ಗೋವಿಂದರಾಜ್ (Shanmukha Govindraj) ಈ ಸಿನಿಮಾ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಖಾಸಗಿ ವಲಯದಲ್ಲಿ ಒಂದಷ್ಟು ಕಾಲ ಕಾರ್ಯ ನಿರ್ವಹಿಸುತ್ತಾ, ಅದರ ನಡುವೆಯೇ ನಟನಾಗಬೇಕೆಂಬ ಹಂಬಲ ಹೊಂದಿದ್ದವರು ಶಣ್ಮುಖ. ಕಡೆಗೂ ಸೂಕ್ಷ್ಮ ಕಥಾ ಹಂದರದೊಂದಿಗೆ ನಿರ್ದೇಶಕ ಅಶೋಕ್ ಕಡಬ ಶಣ್ಮುಖರ ಕನಸನ್ನು ನನಸು ಮಾಡಿದ್ದಾರೆ. ಈ ಫಸ್ಟ್ ಲುಕ್ ಚದುರಿಕೊಂಡಿರುವ ದೃಶ್ಯಾವಳಿ, ಸಂಭಾಷಣೆಗಳು ಈ ಸಿನಿಮಾ ಮೇಲೆ ಒಂದಷ್ಟು ನಿರೀಕ್ಷೆ ಮೂಡಿಸಿರೋದು ನಿಜ. ಇದನ್ನೂ ಓದಿ:ನಂಜನಗೂಡು ರಾಘವೇಂದ್ರ ಸ್ವಾಮಿ ಮಠಕ್ಕೆ ರಜನಿಕಾಂತ್‌ ಭೇಟಿ

    ಫಸ್ಟ್ ಲುಕ್ ಟೀಸರ್ ಮೂಲಕವೇ ಈ ಸಿನಿಮಾವನ್ನು ಪ್ರೇಕ್ಷಕರ ಆಸಕ್ತಿ ಕೇಂದ್ರಕ್ಕೆ ತಂದು ನಿಲ್ಲಿಸುವಲ್ಲಿ ಅಶೋಕ್ ಕಡಬ ಗೆದ್ದಿದ್ದಾರೆ. ಕಥಾ ನಾಯಕ ಇಪ್ಪತೈದು ವರ್ಷದ ನಂತರ ಮಲೆನಾಡಿನ ಗರ್ಭದಲ್ಲಿರುವ ಬೆಂಗಾಡಿಗೆ ಯಾಕೆ ಬರುತ್ತಾನೆ? ಆ ನಂತರ ಯಾವ ಬಗೆಗಿನ ಕಥನ ಬಿಚ್ಚಿಕೊಳ್ಳುತ್ತದೆ. ಈ ದಿಕ್ಕಿನಲ್ಲಿ ಪ್ರೇಕ್ಷಕರ ಮನಸಲ್ಲಿಯೇ ಸಂಭಾವ್ಯ ಕಥೆ ಕಾವುಗಟ್ಟಲಾರಂಭಿಸಿದೆ. ಅಷ್ಟರ ಮಟ್ಟಿಗೆ ಈ ಫಸ್ಟ್ ಲುಕ್ ಟೀಸರ್ ಪರಿಣಾಮಕಾರಿಯಾಗಿದೆ.

    ಈಗಾಗಲೇ ಅಣ್ಣಾವ್ರ ಕುಟುಂಬದ ಬಹುತೇಕರು ಈ ಫಸ್ಟ್ ಲುಕ್ ಟೀಸರ್ ಅನ್ನು ನೋಡಿ ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಇನ್ನು ಪ್ರೇಕ್ಷಕರ ವಲಯದಿಂದಲೂ ದೊಡ್ಡ ಸಿನಿಮಾಗಳಿಗೆ ಬರುವಂಥಾದ್ದೇ ಪ್ರತಿಕ್ರಿಯೆಗಳು ಬರುತ್ತಿವೆ. ಅತ್ಯಂತ ಕಡಿಮೆ ಅವಧಿಯಲ್ಲಿ ಈ ಫಸ್ಟ್ ಲುಕ್ ಟೀಸರ್ ಲಕ್ಷ ವೀಕ್ಷಣೆಯ ಗಡಿ ದಾಟಿಕೊಂಡಿದೆ. ಎಮ್.ಜಿ.ಪಿ.ಎಕ್ಸ್ ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ವಿ. ಮಾದೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

    ಹಿರಿಯ ನಟ ರಾಮಕೃಷ್ಣ, ಉಮೇಶ್, ಶಶಿಧರ ಕೋಟೆ ಮೊದಲಾದ ಘಟಾನುಘಟಿ ಕಲಾವಿದರ ತಾರಾಗಣ ಈ ಚಿತ್ರದಲ್ಲಿದೆ. ಹಿರಿಯ ನಿರ್ದೇಶಕ ಎಸ್.ನಾರಾಯಣ್ ಪುತ್ರ ಪಂಕಜ್ ಕೂಡಾ ಇಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಹಿರಿಯ ನಟಿ ಭವ್ಯಾ ಬಹು ಕಾಲದ ನಂತರ ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಅವರ ಪಾತ್ರವೂ ಕೂಡಾ ಕಾಡುವಂತಿದೆಯಂತೆ. ಇನ್ನುಳಿದಂತೆ ಸ್ಟಾರ್ ನಟರೋರ್ವರು ಈ ಸಿನಿಮಾದ ಮುಖ್ಯ ಪಾತ್ರವೊಂದರಲ್ಲಿ ನಟಿಸಲಿದ್ದಾರೆ. ಆ ನಟ ಯಾರೆಂಬುದು ಸೇರಿದಂತೆ ಇನ್ನೊಂದಷ್ಟು ಇಂಟರೆಸ್ಟಿಂಗ್ ವಿಚಾರಗಳು ಮುಂದಿನ ದಿನಗಳಲ್ಲಿ ಅಪ್‌ಡೇಟ್ ಸಿಗಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಶೋಕ್ ಕಡಬ ಸಾರಥ್ಯದಲ್ಲಿ ಅಣ್ಣಾವ್ರ ಮೊಮ್ಮಗನ ಆಗಮನ: ಆ.25ಕ್ಕೆ ಫಸ್ಟ್ ಲುಕ್ ಟೀಸರ್

    ಅಶೋಕ್ ಕಡಬ ಸಾರಥ್ಯದಲ್ಲಿ ಅಣ್ಣಾವ್ರ ಮೊಮ್ಮಗನ ಆಗಮನ: ಆ.25ಕ್ಕೆ ಫಸ್ಟ್ ಲುಕ್ ಟೀಸರ್

    ಮ್ಮದೇ ವಿಶಿಷ್ಟ ಹಾದಿಯಲ್ಲಿ ಮುನ್ನಡೆಯುತ್ತಾ ಬಂದು, ಭಿನ್ನ ಅಭಿರುಚಿಯ ನಿರ್ದೇಶಕರಾಗಿ ನೆಲೆ ಕಂಡುಕೊಂಡಿರುವವರು ಅಶೋಕ್ ಕಡಬ(Ashok Kadaba). ಇದುವರೆಗೂ ಸಾಕಷ್ಟು ಸಿನಿಮಾಗಳನ್ನು ನಿರ್ದೇಶನ ಮಾಡಿ ಸೈ ಅನ್ನಿಸಿಕೊಂಡಿರುವ ಅವರು ‘ಸತ್ಯಂ’ ಎಂಬ ಪಕ್ಕಾ ಕಮರ್ಶಿಯಲ್ ಧಾಟಿಯ ಸಿನಿಮಾವೊಂದನ್ನು ನಿರ್ದೇಶಿಸಿದ್ದಾರೆ. ಅದು ಬಿಡುಗಡೆಯ ಹೊಸ್ತಿಲಿನಲ್ಲಿರುವಾಗಲೇ `ನಿಂಬಿಯಾ ಬನಾದ ಮ್ಯಾಗ’ (Nimbiya Banada, Myaga) ಎಂಬ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾ ಮೂಲಕ ವರನಟ ಡಾ.ರಾಜ್ ಕುಮಾರ್ (Raj Kumar) ಅವರ ಹಿರಿ ಮೊಮ್ಮಗ ಶಣ್ಮುಖ ಗೋವಿಂದರಾಜ್ (Shanmukh Govindaraj) ನಾಯನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

    ಶೀರ್ಷಿಕೆಯಲ್ಲಿಯೇ ಹೊಸತೇನನ್ನೋ ಬಚ್ಚಿಟ್ಟುಕೊಂಡಿರುವ ಚಿತ್ರ ನಿಂಬಿಯಾ ಬನಾದ ಮ್ಯಾಗ. ಇದರ ಫಸ್ಟ್ ಲುಕ್ (First Look) ಟೀಸರ್ ಇದೇ ತಿಂಗಳ 25ರಂದು, ವರಮಹಾಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಗೊಳ್ಳಲಿದೆ. ಈಗಾಗಲೇ ಈ ಸಿನಿಮಾದ ಪೋಸ್ಟರ್ ಒಂದು ಲಾಂಚ್ ಆಗಿತ್ತು. ಅದಕ್ಕೂ ಒಂದಷ್ಟು ಉತ್ತಮ ಪ್ರತಿಕ್ರಿಯೆಗಳು ಬಂದಿದ್ದವು. ಈ ಫಸ್ಟ್ ಲುಕ್ ಮೂಲಕ ಒಟ್ಟಾರೆ ಸಿನಿಮಾ ಒಂದಷ್ಟು ಸಾರ ಜಾಹೀರಾಗುವ ಸಾಧ್ಯತೆಗಳಿವೆ. ಹಾಗೆ ನೋಡಿದರೆ, ಡಾ. ರಾಜ್ ಕುಮಾರ್ ಕುಟುಂಬಸ್ಥರಿಗೆ ನಟನೆಯ ಕಲೆ ರಕ್ತಗತವಾಗಿಯೇ ಬಂದು ಬಿಟ್ಟಂತಿದೆ. ಈ ಮಾತಿಗೆ ತಕ್ಕುದಾಗಿ ಕಳೆದ ಒಂದಷ್ಟು ದಶಕಗಳಲ್ಲಿ ರಾಜ್ ಫ್ಯಾಮಿಲಿಯಿಂದ ಬಹಳಷ್ಟು ಕಲಾವಿದರು ಬಂದಿದ್ದರೆ. ಆ ಸಾಲಿಗೆ ಹೊಸಾ ಸೇರ್ಪಡೆ ಶಣ್ಮುಖ ಗೋವಿಂದರಾಜ್. ರಾಜ್ ಕುಮಾರ್ ಅವರ ಹಿರಿ ಮಗಳಾದ ಲಕ್ಷ್ಮಿಯವರ ಪುತ್ರ ಶಣ್ಮುಖ. ರಾಜ್ ಕುಟುಂಬಸ್ಥರು ಕಥೆಯನ್ನು ಅಳೆದೂ ತೂಗಿ ಒಪ್ಪಿಕೊಳ್ಳುವಲ್ಲಿಯೂ ನಿಷ್ಣಾತರು. ವಿಶೇಷವೆಂದರೆ, ಅಶೋಕ್ ಕಡಬ ಹೇಳಿದ ಕಥೆಯನ್ನು ಎಲ್ಲರೂ ಬಹುವಾಗಿ ಮೆಚ್ಚಿಕೊಂಡೇ ಒಪ್ಪಿಗೆ ಸೂಚಿಸಿದರಂತೆ.

    ಶಣ್ಮುಖ ಕೂಡಾ ಈ ಕಥೆ ಮತ್ತು ಪಾತ್ರಕ್ಕನುಗುಣವಾಗಿ ಒಂದಷ್ಟು ತಯಾರಿ ನಡೆಸಿಕೊಂಡೇ ಅಖಾಡಕ್ಕಿಳಿದಿದ್ದಾರೆ. ಈಗಾಗಲೇ ಈ ಸಿನಿಮಾ ಶೇಕಡಾ ನಲವತ್ತರಷ್ಟು ಚಿತ್ರೀಕರಣ ಮುಕ್ತಾಯವಾಗಿದೆ. ತಾಯಿ ಮಗನ ಸುತ್ತಸುತ್ತುವ ಭಾವನಾತ್ಮಕ ಕಥಾ ಹಂದರ ಹೊಂದಿರುವ ಈ ಕಥೆ ಮಲೆನಾಡಿನಲ್ಲಿಯೇ ಜರುಗುತ್ತದೆ. ಇದನ್ನೂ ಓದಿ:ತಮಿಳಿನ ‘ಜಂಟಲ್‌ಮ್ಯಾನ್ 2’ನಲ್ಲಿ ಸುಧಾರಾಣಿ

    ಈಗಾಗಲೇ ಎರಡು ಹಂತಗಳಲ್ಲಿ ಬೆಂಗಳೂರು, ಉಡುಪಿ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಬಾಕಿ ಉಳಿದಿರುವುದು ಮಲೆನಾಡಿನ ಭಾಗದ ಪ್ರಧಾನ ಭಾಗದ ಚಿತ್ರೀಕರಣವಷ್ಟೇ. ಸದ್ಯ ಅಶೋಕ್ ಕಡಬ ನಿರ್ದೇಶನ ಮಾಡಿರುವ ಬಿಗ್ ಬಜೆಟ್ ಚಿತ್ರವಾದ ಸತ್ಯಂ ಬಿಡುಗಡೆಯ ಸನಿಹದಲ್ಲಿದೆ. ಅದು ಸೆಪ್ಟೆಂಬರ್ ನಲ್ಲಿ ಬಿಡುಗಡೆಗೊಳ್ಳಲಿದೆ. ಅದರ ಕೆಲಸ ಕಾರ್ಯ ಮುಗಿದಾದ ಮೇಲೆ ಮೂರನೇ ಹಂತದ ಚಿತ್ರೀಕರಣ ಶುರು ಮಾಡುವ ನಿರ್ಧಾರ ನಿರ್ದೇಶಕರದ್ದು. ಅಂದಹಾಗೆ ಆ ಭಾಗದ ಚಿತ್ರೀಕರಣ ಶೃಂಗೇರಿ, ಹೊರನಾಡು ಸುತ್ತಮುತ್ತ ನಡೆಯಲಿದೆ.

     

    ಎಮ್.ಜಿ.ಪಿ.ಎಕ್ಸ್ ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ವಿ. ಮಾದೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹಿರಿಯ ನಟ ರಾಮಕೃಷ್ಣ, ಉಮೇಶ್, ಶಶಿಧರ ಕೋಟೆ ಮೊದಲಾದ ಘಟಾನುಘಟಿ ಕಲಾವಿದರ ತಾರಾಗಣದಲ್ಲಿದ್ದಾರೆ. ಹಿರಿಯ ನಿರ್ದೇಶಕ ಎಸ್. ನಾರಾಯಣ್ ಪುತ್ರ ಪಂಕಜ್ ಕೂಡಾ ಇಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಹಿರಿಯ ನಟಿ ಭವ್ಯಾ ಬಹು ಕಾಲದ ನಂತರ ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಅವರ ಪಾತ್ರವೂ ಕೂಡಾ ಕಾಡುವಂತಿದೆ. ಇನ್ನುಳಿದಂತೆ ಸ್ಟಾರ್ ನಟರೋರ್ವರು ಈ ಸಿನಿಮಾದ ಮುಖ್ಯ ಪಾತ್ರವೊಂದರಲ್ಲಿ ನಟಿಸಲಿದ್ದಾರೆ. ಆ ಬಗೆಗಿನ ವಿವರ ಸದ್ಯದಲ್ಲಿಯೇ ಜಾಹೀರಾಗಲಿದೆ. ಎ2 ಮ್ಯೂಸಿಕ್ ಮೂಲಕ ಟೀಸರ್ ಲಾಂಚ್ ಆಗಲಿದೆ. ಅದಾದ ಬಳಿಕ ನಿಂಬಿಯಾ ಬನಾದ ಮ್ಯಾಗಿನ ಮತ್ತೊಂದಷ್ಟು ಇಂಟರೆಸ್ಟಿಂಗ್ ವಿಚಾರಗಳು ಪ್ರೇಕ್ಷಕರನ್ನು ತಲುಪಲಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]