Tag: ashok gehlot

  • ಭಯೋತ್ಪಾದಕರಿಗೆ ಕಾಂಗ್ರೆಸ್‌ ಮುಕ್ತ ಅವಕಾಶ ಕೊಟ್ಟಿದೆ; ಉದಯಪುರ ಟೈಲರ್‌ ಹತ್ಯೆ ಖಂಡಿಸಿದ ಮೋದಿ

    ಭಯೋತ್ಪಾದಕರಿಗೆ ಕಾಂಗ್ರೆಸ್‌ ಮುಕ್ತ ಅವಕಾಶ ಕೊಟ್ಟಿದೆ; ಉದಯಪುರ ಟೈಲರ್‌ ಹತ್ಯೆ ಖಂಡಿಸಿದ ಮೋದಿ

    ಜೈಪುರ: ಭಯೋತ್ಪಾದಕರು ಕೃತ್ಯಗಳನ್ನ ಎಸಗಲು ಕಾಂಗ್ರೆಸ್‌ ಮುಕ್ತ ಅವಕಾಶ ಕೊಟ್ಟಿದೆ. ಹೀಗಿರುವಾಗ ಅಪರಾಧಿಗಳಿಗೆ ಕಾನೂನಿನ ಮೇಲೆ ಭಯ ಹೇಗೆ ಬರುತ್ತದೆ? ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ವಾಗ್ದಾಳಿ ನಡೆಸಿದರು.

    ರಾಜಸ್ಥಾನದಲ್ಲಿ ಬಿಜೆಪಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ವರ್ಷ ಜೂನ್‌ ತಿಂಗಳಲ್ಲಿ ಉದಯಪುರದ ಟೈಲರ್‌ ಕನ್ಹಯ್ಯಾ ಲಾಲ್‌ ಹತ್ಯೆ (Udaipur Tailor Killing) ಪ್ರಕರಣವನ್ನು ಖಂಡಿಸಿದರು. ಜೊತೆಗೆ ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್‌ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು. ಈ ವಿಚಾರದಲ್ಲಿಯೂ ಕಾಂಗ್ರೆಸ್‌ ವೋಟ್‌ಬ್ಯಾಂಕ್‌ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಟ್ರ್ಯಾಕ್ ಮೇಲೆ ಕಲ್ಲು, ರಾಡ್‌ಗಳನ್ನಿಟ್ಟ ಕಿಡಿಗೇಡಿಗಳು – ವಂದೇ ಭಾರತ್ ರೈಲು ತುರ್ತು ನಿಲುಗಡೆ

    ಉದಯಪುರದಲ್ಲಿ ಅಂತಹ ಘಟನೆಯನ್ನು ಯಾರೂ ಊಹಿಸಿರಲ್ಲ. ಜನ ಸಾಮಾನ್ಯರಂತೆ ಬಟ್ಟೆ ಹೊಲಿಸುವ ನೆಪದಲ್ಲಿ ಬಂದು ಟೈಲರ್‌ ಕತ್ತು ಕತ್ತರಿಸುತ್ತಾರೆ. ಆ ಸಂದರ್ಭದಲ್ಲಿ ಕಾಂಗ್ರೆಸ್‌ ಸರ್ಕಾರ ಏನು ಕ್ರಮ ಕೈಗೊಂಡಿತು? ಆ ಘಟನೆಯನ್ನೂ ಕಾಂಗ್ರೆಸ್‌ ವೋಟ್‌ ಬ್ಯಾಂಕಿಗೆ (Congress Vote Bank) ಬಳಸಿಕೊಂಡಿತು. ತಲೆ ಕಡಿಯುವ ಪರಿಸರದಲ್ಲಿ ಹೊಸ ಉದ್ಯಮಗಳಿಗೆ ಹೂಡಿಕೆ ಹೇಗೆ ಬರುತ್ತದೆ? ಇದು ಸಾಮಾನ್ಯ ಅಪರಾಧವಲ್ಲ. ಕಾಂಗ್ರೆಸ್‌ ಸರ್ಕಾರದ ವೋಟ್‌ ಬ್ಯಾಂಕ್‌ ರಾಜಕಾರಣದ ಪರಿಣಾಮ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಉದಯಪುರ ಟೈಲರ್‌ ಹತ್ಯೆ ಪ್ರಕರಣ – ಟೀಕೆ ಬೆನ್ನಲ್ಲೇ 32 ಪೊಲೀಸ್‌ ಅಧಿಕಾರಿಗಳ ವರ್ಗಾವಣೆ

    ಕಾಂಗ್ರೆಸ್‌ ಸರ್ಕಾರ (Congress Government) ಭಯೋತ್ಪಾದಕರ ಬಗ್ಗೆ ಪ್ರೀತಿಯಿಂದ ವರ್ತಿಸುತ್ತಿದೆ. ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಇನ್ನಷ್ಟು ಕೃತ್ಯಗಳನ್ನ ಎಸಗಲು ಮುಕ್ತ ಅವಕಾಶ ನೀಡುತ್ತಿದೆ. ಹೀಗಿರುವಾಗ ಅಪರಾಧಿಗಳಿಗೆ ಕಾನೂನಿನ ಮೇಲೆ ಭಯ ಹೇಗೆ ಬರುತ್ತದೆ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಉದಯಪುರದ ಹತ್ಯೆ ಖಂಡನೀಯ: ಇದು ದೇಶದ ಕಾನೂನು, ಇಸ್ಲಾಂ ಧರ್ಮಕ್ಕೆ ವಿರುದ್ಧವಾದದ್ದು – ಮುಸ್ಲಿಂ ಮಂಡಳಿ

    ಕಳೆದ ವರ್ಷ ಜೂನ್‌ ತಿಂಗಳಿನ ಲ್ಲಿ ಪ್ರವಾದಿ ಮೊಹಮ್ಮದ್‌ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ನೂಪುರ್‌ ಶರ್ಮಾರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿವಾದಾತ್ಮಕ ಪೋಸ್ಟ್‌ ಹಾಕಿಕೊಂಡಿದ್ದರು ಎಂಬ ಕಾರಣಕ್ಕೆ ರಾಜಸ್ಥಾನದ ಉದಯಪುರದಲ್ಲಿ ಟೈಲರ್‌ ಕನ್ಹಯ್ಯ ಲಾಲ್‌ ಎಂಬುವವರನ್ನು ಇಬ್ಬರು ದುಷ್ಕರ್ಮಿಗಳು ಮಂಗಳವಾರ ಕತ್ತು ಸೀಳಿ ಹತ್ಯೆ ಮಾಡಿದ್ದರು. ಈ ಘಟನೆಯಿಂದ ರಾಜಸ್ಥಾನದ ದೇಶದ ವಿವಿಧೆಡೆ ಪ್ರತಿಭಟನೆ ಭುಗಿಲೆದ್ದಿತ್ತು. ಇದನ್ನೂ ಓದಿ: ಕಗ್ಗತ್ತಲ ಮಳೆಯಲ್ಲಿ ನದಿಯನ್ನು ರಸ್ತೆ ಎಂದು ತೋರಿಸಿದ ಜಿಪಿಎಸ್ – ಕಾರು ಮುಳುಗಿ ಕೇರಳದ ಇಬ್ಬರು ವೈದ್ಯರು ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗರ್ಭಿಣಿಗೆ ಥಳಿಸಿ ಬೆತ್ತಲೆ ಮೆರವಣಿಗೆ ಮಾಡಿದ ಪತಿ – ರಾಜಸ್ಥಾನದಲ್ಲಿ ಮಹಿಳೆಯರ ಸುರಕ್ಷತೆ ನಿರ್ಲಕ್ಷ್ಯ ಎಂದು ನಡ್ಡಾ ಟೀಕೆ

    ಗರ್ಭಿಣಿಗೆ ಥಳಿಸಿ ಬೆತ್ತಲೆ ಮೆರವಣಿಗೆ ಮಾಡಿದ ಪತಿ – ರಾಜಸ್ಥಾನದಲ್ಲಿ ಮಹಿಳೆಯರ ಸುರಕ್ಷತೆ ನಿರ್ಲಕ್ಷ್ಯ ಎಂದು ನಡ್ಡಾ ಟೀಕೆ

    ಜೈಪುರ: ರಾಜಸ್ಥಾನದ (Rajasthan) ಪ್ರತಾಪ್‌ಗಡ ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯದ ಗರ್ಭಿಣಿಯ ಮೇಲೆ ಆಕೆಯ ಪತಿಯೇ ಹಲ್ಲೆ ನಡೆಸಿ, ಹಳ್ಳಿಯ ಉದ್ದಗಲಕ್ಕೂ ಬೆತ್ತಲೆ ಮೆರವಣಿಗೆ (Women Naked Parades) ನಡೆಸಿದ ಅಮಾನವೀಯ ಘಟನೆ ಗುರುವಾರ ನಡೆದಿದೆ. ಘಟನೆಯಿಂದ ರಾಜಕೀಯ ವಲಯದಲ್ಲೂ ತೀವ್ರ ಚರ್ಚೆಗಳು ಶುರುವಾಗಿದ್ದು, ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದಿವೆ.

    ವಿವಾಹಿತ ಮಹಿಳೆಯು ಪರಪುರುಷನೊಂದಿಗೆ ಸಂಬಂಧ ಹೊಂದಿದ್ದಳು ಅವನೊಂದಿಗೆ ವಾಸವಿದ್ದಳು ಅನ್ನೋ ಕಾರಣಕ್ಕೆ ಕೆರಳಿದ್ದ ಪತಿ ಈ ಕೃತ್ಯ ಎಸಗಿದ್ದಾನೆ. ಈ ಘಟನೆಯ ಕ್ರೌರ್ಯದ ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಪತಿಯ ಮನೆಯ ಹೊರಗೆ ತನ್ನ 21 ವರ್ಷದ ಗರ್ಭಿಣಿಯ ಬಟ್ಟೆ ಕಳಚುವುದು ಮತ್ತು ನಗ್ನ ಮೆರವಣಿಗೆ ನಡೆಸುವುದು ವಿಡಿಯೋದಲ್ಲಿ ಕಾಣಿಸಿದೆ. ಆಕೆ ಸಹಾಯಕ್ಕಾಗಿ ಅಂಗಲಾಚುತ್ತಿದ್ದರೂ, ಯಾರೂ ನೆರವಿಗೆ ಮುಂದಾಗಿಲ್ಲ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

    ಮದುವೆಯಾಗಿದ್ದರೂ ಬೇರೊಬ್ಬ ಪುರುಷನ ಜತೆ ವಾಸಿಸುತ್ತಿರುವುದರಿಂದ ಕೋಪಗೊಂಡಿದ್ದ ಗಂಡ ಹಾಗೂ ಆತನ ಮನೆಯವರು ಆಕೆಯನ್ನು ಅಪಹರಿಸಿ, ತಮ್ಮ ಗ್ರಾಮಕ್ಕೆ ಕರೆತಂದಿದ್ದರು. ಅಲ್ಲಿ ಆಕೆಯನ್ನು ಅಮಾನುಷವಾಗಿ ಥಳಿಸಿ, ಬೆತ್ತಲಾಗಿಸಿ, ಮೆರವಣಿಗೆ ಮಾಡಲಾಗಿದೆ ಎಂದು ರಾಜಸ್ಥಾನ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಉಮೇಶ್ ಮಿಶ್ರಾ ಹೇಳಿದ್ದಾರೆ. ಇದನ್ನೂ ಓದಿ: ಪತ್ನಿಯನ್ನು ಥಳಿಸಿ ಬೆತ್ತಲೆ ಮೆರವಣಿಗೆ ಮಾಡಿದ ಪತಿ!

    ಈ ಮಹಿಳೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಳು ಎನ್ನಲಾಗಿದೆ. ಸಂತ್ರಸ್ತೆಯ ಗಂಡ ಕನಾ ಮೀನ, ನಾತು ಮೀನ ಹಾಗೂ ವಿಲಿಯಾ ಮೀನ ಎಂಬ ಇನ್ನಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಗ್ರಾಮಕ್ಕೆ ದೌಡಾಯಿಸಿದ ಪೊಲೀಸರು, ಆರೋಪಿ ಪತಿಯನ್ನ ಬಂಧಿಸಲು 6 ತಂಡಗಳನ್ನು ರಚಿಸಿದ್ದರು. ಮುಖ್ಯ ಆರೋಪಿಯಾದ ಮಹಿಳೆಯ ಗಂಡನನ್ನ ಹಿಡಿಯಲು ಬೆನ್ನಟ್ಟಿದ್ದ ಸಂದರ್ಭದಲ್ಲಿ ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಕಾಲಿಗೆ ಗುಂಡೇಟು ತಗುಲಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

    ಆಗಸ್ಟ್ 31ರ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮಹಿಳೆ ಹಾಗೂ ಕನಾ ಮೀನನಿಗೆ ಕಳೆದ ವರ್ಷ ಮದುವೆಯಾಗಿತ್ತು. ಪಕ್ಕದ ಮನೆಯಾತನ ಜತೆ ಆಕೆ ಪರಾರಿಯಾಗಿದ್ದಳು ಎಂದು ಆರೋಪಿಸಿ ಆಕೆಯ ಪತಿ ಮತ್ತು ಕುಟುಂಬದ ಇತರರು ಹಲ್ಲೆ ನಡೆಸಿದ್ದರು. ಬಳಿಕ ಹಳ್ಳಿಯ ತುಂಬಾ ಬೆತ್ತಲೆ ಮೆರವಣಿಗೆ ನಡೆಸಿದ್ದರು. ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳದಂತೆ ಪ್ರತಾಪ್‌ಗಡ ಪೊಲೀಸರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸಹೋದರಿಯರ ಮೇಲೆ 10 ಜನರಿಂದ ಸಾಮೂಹಿಕ ಅತ್ಯಾಚಾರ- ಆರೋಪಿಗಳು ಅರೆಸ್ಟ್

    ಈ ಘಟನೆಯನ್ನ ಸಂಪೂರ್ಣವಾಗಿ ಖಂಡಿಸಿರುವ ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್‌, ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಸುಸಂಸ್ಕೃತ ಸಮಾಜದಲ್ಲಿ ಇಂತಹ ಅಪರಾಧಿಗಳಿಗೆ ಜಾಗವಿಲ್ಲ. ಆದಷ್ಟು ಬೇಕ ಈ ಆರೋಪಿಗಳನ್ನ ಕಟೆಕಟೆಯಲ್ಲಿ ನಿಲ್ಲಿಸಿ, ತ್ವರಿತ ನ್ಯಾಯಾಲಯದಲ್ಲಿಯೇ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದ್ದಾರೆ.

    ಇನ್ನೂ ರಾಜಸ್ಥಾನ ಸರ್ಕಾರದ ವಿರುದ್ಧ ಕಿಡಿ ಕಾರಿಸುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ರಾಜಸ್ಥಾನದಲ್ಲಿ ಆಡಳಿತ ಪಕ್ಷ ತಮ್ಮ ಪಕ್ಷದ ಒಳಜಗಳಗಳನ್ನ ಪರಿಹರಿಸುವಲ್ಲಿ ನಿರತವಾಗಿದೆ. ಜನರೇ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಮುಖ್ಯಮಂತ್ರಿಗಳು ಬಣ ಜಗಳಗಳನ್ನ ಇತ್ಯರ್ಥಗೊಳಿಸುವಲ್ಲಿ ನಿರತರಾಗಿದ್ದಾರೆ. ಉಳಿದ ಸಮಯದಲ್ಲಿ ದೆಹಲಿಗೆ ಬಂದು ರಾಜವಂಶಸ್ಥರನ್ನು ಸಮಾಧಾನಪಡಿಸುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಪ್ರತಿದಿನ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಜನರೇ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪತ್ನಿಯನ್ನು ಥಳಿಸಿ ಬೆತ್ತಲೆ ಮೆರವಣಿಗೆ ಮಾಡಿದ ಪತಿ!

    ಪತ್ನಿಯನ್ನು ಥಳಿಸಿ ಬೆತ್ತಲೆ ಮೆರವಣಿಗೆ ಮಾಡಿದ ಪತಿ!

    ಜೈಪುರ್: ಮಹಿಳೆಯೊಬ್ಬರಿಗೆ (Woman) ಆಕೆಯ ಪತಿ ಹಾಗೂ ಕುಟುಂಬಸ್ಥರು ಥಳಿಸಿ, ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿದ ಘಟನೆ ರಾಜಸ್ಥಾನದ (Rajasthan) ಪ್ರತಾಪ್‍ಗಢ ಜಿಲ್ಲೆಯಲ್ಲಿ ನಡೆದಿದೆ.

    ಮಹಿಳೆಯ ಮೇಲೆ ಹಲ್ಲೆ ನಡೆಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ಮಹಿಳೆಯ ಪತಿ ಮಹಿಳೆಯನ್ನು ವಿವಸ್ತ್ರಗೊಳಿಸುತ್ತಿರುವುದು ಹಾಗೂ ಹಲ್ಲೆ ನಡೆಸುತ್ತಿರುವುದು ಸೆರೆಯಾಗಿದೆ. ಈ ವೇಳೆ ಆಕೆ ಸಹಾಯಕ್ಕಾಗಿ ಕಿರುಚಾಡಿದ್ದಾಳೆ.

    ಮಹಿಳೆ ಮನೆ ತೊರೆದು ಮತ್ತೊಬ್ಬ ವ್ಯಕ್ತಿಯೊಂದಿಗೆ ವಾಸವಾಗಿದ್ದಳು ಎನ್ನಲಾಗಿದೆ. ಇದರಿಂದ ಕೋಪಗೊಂಡ ಮಹಿಳೆಯ ಪತಿ ಆಕೆಯನ್ನು ಅಪಹರಿಸಿಕೊಂಡು ಬಂದಿದ್ದ. ಬಳಿಕ ಆಕೆಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು (Police) ತಿಳಿಸಿದ್ದಾರೆ.

    ಆರೋಪಿಗಳನ್ನು ಬಂಧಿಸಲು ಆರು ತಂಡಗಳನ್ನು ರಚಿಸಲಾಗಿದೆ. ಪ್ರತಾಪಗಢದ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದಾರೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಈ ಘಟನೆಯನ್ನು ಖಂಡಿಸಿದ್ದಾರೆ. ಅಪರಾಧ ವಿಭಾಗದ ಎಡಿಜಿ ಅವರನ್ನು ಸ್ಥಳಕ್ಕೆ ಕಳುಹಿಸಿ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಸುಸಂಸ್ಕೃತ ಸಮಾಜದಲ್ಲಿ ಇಂತಹವರಿಗೆ ಜಾಗವಿಲ್ಲ. ಆದಷ್ಟು ಬೇಗ ಈ ಕೃತ್ಯ ಎಸಗಿದವರನ್ನು ಕಟಕಟೆಯಲ್ಲಿ ನಿಲ್ಲಿಸಿ ವಿಚಾರಣೆ ನಡೆಸಲಾಗುವುದು. ಆದಷ್ಟು ಬೇಗ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 2024ರ ಲೋಕಸಭೆ ಚುನಾವಣೆಗೆ ರಾಹುಲ್ ಗಾಂಧಿ ಕಾಂಗ್ರೆಸ್‌ನ ಪ್ರಧಾನಿ ಅಭ್ಯರ್ಥಿ: ಗೆಹ್ಲೋಟ್

    2024ರ ಲೋಕಸಭೆ ಚುನಾವಣೆಗೆ ರಾಹುಲ್ ಗಾಂಧಿ ಕಾಂಗ್ರೆಸ್‌ನ ಪ್ರಧಾನಿ ಅಭ್ಯರ್ಥಿ: ಗೆಹ್ಲೋಟ್

    ನವದೆಹಲಿ: 2024ರ ಲೋಕಸಭೆ ಚುನಾವಣೆಗೆ (Lok Sabha Election) ರಾಹುಲ್ ಗಾಂಧಿ (Rahul Gandhi) ಕಾಂಗ್ರೆಸ್ (Congress) ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಹೇಳಿದ್ದಾರೆ.

    26 ವಿರೋಧ ಪಕ್ಷಗಳ ಐಎನ್‌ಡಿಐಎ (INDIA) ಸಭೆ ಕುರಿತು ಮಾತನಾಡಿದ ಅವರು, ಈ ನಿರ್ಧಾರವನ್ನು ಎಲ್ಲಾ ಪಕ್ಷಗಳು ಚರ್ಚೆ ಮತ್ತು ಸಮಾಲೋಚನೆ ನಡೆಸಿ ನಂತರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

    ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಗೆಹ್ಲೋಟ್ ಹೇಳಿದ್ದಾರೆ. ಐಎನ್‌ಡಿಐಎ ಮೈತ್ರಿಯ ಅಗತ್ಯತೆಯ ಕುರಿತು ಮಾತನಾಡಿದ ಅವರು, ಪ್ರತಿ ಚುನಾವಣೆಯಲ್ಲಿ ಸ್ಥಳೀಯ ಅಂಶಗಳೇ ಮುಖ್ಯವಾಗಿರುತ್ತದೆ. ಆದರೆ ದೇಶದ ಪ್ರಸ್ತುತ ಪರಿಸ್ಥಿತಿ ಎಲ್ಲಾ ಪಕ್ಷಗಳ ಮೇಲೆ ಅಗಾಧವಾದ ಒತ್ತಡವನ್ನು ಸೃಷ್ಟಿಸಿದೆ ಎಂದು ಹೇಳಿದರು.

    ಸಾರ್ವಜನಿಕರು ಇಂತಹ ಒತ್ತಡ ಸೃಷ್ಟಿಸಿದ್ದು, ಎಲ್ಲ ಪಕ್ಷಗಳ ಮೈತ್ರಿಗೆ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಹಂಕಾರಿ ಆಗಬಾರದು. 2014 ರಲ್ಲಿ ಬಿಜೆಪಿ ಕೇವಲ 31% ಮತಗಳಿಂದ ಅಧಿಕಾರಕ್ಕೆ ಬಂದಿದ್ದರಿಂದ ಪ್ರಧಾನಿ ಮೋದಿ ದುರಹಂಕಾರಿಯಾಗಬಾರದು. ಉಳಿದ 69% ಅವರ ವಿರುದ್ಧವಾಗಿದೆ ಎಂದು ಹೇಳಿದರು.

    2024ರ ಸಾರ್ವತ್ರಿಕ ಚುನಾವಣೆಯಲ್ಲಿ ಎನ್‌ಡಿಎ 50% ಮತಗಳೊಂದಿಗೆ ಅಧಿಕಾರಕ್ಕೆ ಬರುವಲ್ಲಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮಾತನಾಡಿದ ಅವರು, ಕಳೆದ ತಿಂಗಳು ಬೆಂಗಳೂರಿನಲ್ಲಿ ಐಎನ್‌ಡಿಐಎ ಮೈತ್ರಿ ಪಕ್ಷಗಳು ಸಭೆ ನಡೆಸಿದಾಗ ಎನ್‌ಡಿಎ ಭಯಗೊಂಡಿತ್ತು. ಪ್ರಧಾನಿ ಮೋದಿ ಅವರು ಅದನ್ನು ಸಾಧಿಸಲು ಎಂದಿಗೂ ಸಾಧ್ಯವಿಲ್ಲ. ಮೋದಿ ತಮ್ಮ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೇ ಅವರಿಗೆ ಇದನ್ನು ಸಾಧಿಸಲು ಸಾಧ್ಯವಾಗಲಿಲ್ಲ. 2024ರ ಚುನಾವಣೆಯ ಫಲಿತಾಂಶ ಪ್ರಧಾನ ಮಂತ್ರಿ ಯಾರು ಎಂಬುದನ್ನು ನಿರ್ಧರಿಸುತ್ತದೆ ಎಂದರು. ಇದನ್ನೂ ಓದಿ: ಮೋದಿ ಬರ್ತಾರೆ ಅಂತ ಸೌಜನ್ಯಕ್ಕೂ ನನ್ನನ್ನ ಕರೆಯಲಿಲ್ಲ – ಸ್ವಪಕ್ಷೀಯರ ವಿರುದ್ಧವೇ ಎಸ್‌ಟಿಎಸ್ ಅಸಮಾಧಾನ

    2014ರಲ್ಲಿ ಕಾಂಗ್ರೆಸ್‌ನಿಂದಾಗಿ ಮೋದಿ ಪ್ರಧಾನಿಯಾದರು. ಪ್ರಜಾಪ್ರಭುತ್ವದಲ್ಲಿ ಭವಿಷ್ಯ ನುಡಿಯಲು ಸಾಧ್ಯವಿಲ್ಲ. ಪ್ರಧಾನಿ ಮೋದಿ ಅನೇಕ ಭರವಸೆಗಳನ್ನು ನೀಡಿದ್ದಾರೆ. ಆದರೆ ಆ ಭರವಸೆಗಳು ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ ಎಂದರು.

    ಚಂದ್ರಯಾನ-3ರ ಯಶಸ್ಸಿಗೆ ಮಾಜಿ ಪ್ರಧಾನಿಗಳಾದ ಜವಾಹರ್ ಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಕಾರಣ. ಚಂದ್ರಯಾನ-3ರ ಯಶಸ್ಸಿನಲ್ಲಿ ನೆಹರೂ ಅವರ ಕೊಡುಗೆಯೂ ಮಹತ್ವದ್ದಾಗಿದೆ. ಪ್ರಸ್ತುತ ಸಾಧನೆಗಳು ಇಂದಿರಾ ಗಾಂಧಿ ಮತ್ತು ನೆಹರೂ ಅವರ ಪರಿಶ್ರಮದ ಫಲವಾಗಿದೆ. ವಿಜ್ಞಾನಿ ವಿಕ್ರಮ್ ಸಾರಾಭಾಯ್ ಅವರ ಸಲಹೆಯನ್ನು ನೆಹರೂ ಕೇಳಿದ್ದರಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯನ್ನು (ISRO) ಸ್ಥಾಪಿಸಲಾಯಿತು. ಅಂದು ಬಾಹ್ಯಾಕಾಶ ಕೇಂದ್ರದ ಹೆಸರು ಬೇರೆ ಇತ್ತು. ಆದರೆ ಇಂದಿರಾ ಗಾಂಧಿ ಅಧಿಕಾರಕ್ಕೆ ಬಂದ ನಂತರ ಅದನ್ನು ಇಸ್ರೋ ಎಂದು ಬದಲಾಯಿಸಲಾಯಿತು ಎಂದು ತಿಳಿಸಿದರು. ಇದನ್ನೂ ಓದಿ: 140 ಕೋಟಿ ಭಾರತೀಯರಲ್ಲಿ ಕಾಂಗ್ರೆಸ್ಸಿಗರೂ ಇದ್ದಾರೆಂದು ಭಾವಿಸಿದ್ದೇನೆ: ಸಿ.ಟಿ ರವಿ ವ್ಯಂಗ್ಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅತ್ಯಾಚಾರ ಆರೋಪಿಗಳಿಗೆ ಸರ್ಕಾರಿ ಉದ್ಯೋಗ ಕಟ್: ಅಶೋಕ್ ಗೆಹ್ಲೋಟ್

    ಅತ್ಯಾಚಾರ ಆರೋಪಿಗಳಿಗೆ ಸರ್ಕಾರಿ ಉದ್ಯೋಗ ಕಟ್: ಅಶೋಕ್ ಗೆಹ್ಲೋಟ್

    ಜೈಪುರ: ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯ ಪ್ರಕರಣಗಳಿಂದ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದ್ದ ರಾಜಸ್ಥಾನ ಸರ್ಕಾರ (Rajasthan Government) ಮಹತ್ವದ ಘೋಷಣೆ ಮಾಡಿದೆ. ರಾಜ್ಯದಲ್ಲಿ ಅತ್ಯಾಚಾರ ಆರೋಪಿಗಳು ಹಾಗೂ ಅಪರಾಧ ಕೃತ್ಯ ಹಿನ್ನೆಲೆ ಉಳ್ಳವರಿಗೆ ಸರ್ಕಾರಿ ಉದ್ಯೋಗ (Government Jobs) ನೀಡುವುದಿಲ್ಲ ಎಂದು ಘೋಷಣೆ ಮಾಡಿದೆ.

    ಮಹಿಳೆಯರ ವಿರುದ್ಧ ನಡೆಯುತ್ತಿರುವ ಅಪರಾಧ ಕೃತ್ಯಗಳನ್ನ ತಡೆಯಲು ಶಿಸ್ತು ಕ್ರಮದ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಬಾಲಕಿಯರು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರಕ್ಕೆ ಯತ್ನ ಇತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರಿಗೆ ಸರ್ಕಾರಿ ಉದ್ಯೋಗ ನಿಷೇಧಿಸಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಅನರ್ಹತೆ ಆದೇಶ ವಾಪಸ್ ಬಳಿಕ ಮೊದಲ ಬಾರಿಗೆ ವಯನಾಡ್‌ಗೆ ಭೇಟಿ ನೀಡಲಿರುವ ರಾಗಾ

    ಅಪರಾಧ ಹಿನ್ನೆಲೆ ಉಳ್ಳವರನ್ನು ಪತ್ತೆ ಮಾಡಲು ಪೊಲೀಸ್ ಠಾಣೆಗಳಲ್ಲಿ ದಾಖಲೆಗಳನ್ನ ಪರಿಶೀಲಿಸಲಾಗುತ್ತಿದೆ. ರಾಜ್ಯದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಪ್ರಕರಣಗಳ ಕುರಿತು ಬಿಜೆಪಿ ಆಡಳಿತ ಕಾಂಗ್ರೆಸ್ ಪಕ್ಷದ ಮೇಲೆ ಟೀಕಾ ಪ್ರಹಾರ ನಡೆಸುತ್ತಿರುವ ನಡುವೆ ಸರ್ಕಾರ ಈ ಘೋಷಣೆ ಮಾಡಿದೆ.

    ಇದೇ ಆಗಸ್ಟ್ 2ರಂದು ಬಿಲ್ವಾರ ಜಿಲ್ಲೆಯ ಕಲ್ಲಿದ್ದಲು ಕುಲುಮೆಯಲ್ಲಿ 4 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಅತ್ಯಾಚಾರ ಎಸಗಿದ ಬಳಿಕ ಬಾಲಕಿಯನ್ನ ಕೊಲೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಓರ್ವ ಮಹಿಳೆ ಸೇರಿ 7 ಜನರನ್ನ ಬಂಧಿಸಲಾಗಿದೆ. ಈ ಪ್ರಕರಣದ ಬಳಿಕ ಎಚ್ಚೆತ್ತುಕೊಂಡ ಸರ್ಕಾರ ಅಪರಾಧ ಕೃತ್ಯ ಹಿನ್ನೆಲೆ ಉಳ್ಳವರಿಗೆ ಸರ್ಕಾರಿ ಉದ್ಯೋಗ ನೀಡದಂತೆ ಸೂಚಿಸಿದೆ.

    ಬಿಲ್ವಾರಾ ಮತ್ತು ಜೋಧ್‌ಪುರದಂತಹ ಘಟನೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅಪರಾಧ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿರುವುದಾಗಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆಯನ್ನು ವಿರೋಧಿಸಿ ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 500 ಕೋಟಿ ಭ್ರಷ್ಟಾಚಾರ: ಗೆಹ್ಲೋಟ್‌ ವಿರುದ್ಧ ಮಾಜಿ ಸಚಿವನಿಂದಲೇ  ಬಾಂಬ್‌

    500 ಕೋಟಿ ಭ್ರಷ್ಟಾಚಾರ: ಗೆಹ್ಲೋಟ್‌ ವಿರುದ್ಧ ಮಾಜಿ ಸಚಿವನಿಂದಲೇ ಬಾಂಬ್‌

    ಜೈಪುರ: ಚುನಾವಣೆ ಸನಿಹದಲ್ಲಿ ರಾಜಸ್ಥಾನ ರಾಜಕೀಯದಲ್ಲಿ (Rajasthan Politics) ಭಾರೀ ಹೈಡ್ರಾಮಾಗಳು ನಡೆದಿವೆ. ಸಂಪುಟದಿಂದ ವಜಾ ಆಗಿರುವ ರಾಜೇಂದ್ರ ಸಿಂಗ್ ಗುಧಾ (Rajendra Singh Gudha) ಅವರು ಸಿಎಂ ಅಶೋಕ್‌ ಗೆಹ್ಲೋಟ್‌ (CM Ashok Gehlot) ವಿರುದ್ಧ 500 ಕೋಟಿ ಭ್ರಷ್ಟಾಚಾರದ (Corruption) ಬಾಂಬ್‌ ಸಿಡಿಸಿದ್ದಾರೆ.

    ಸೋಮವಾರ ಗುಧಾಗೆ ವಿಧಾನಸಭೆ ಪ್ರವೇಶಿಸಲು ಗುಂಪೊಂದು ಅವಕಾಶ ನೀಡಿಲ್ಲ. ವಿಧಾನಸಭೆಯ ಹೊರಗೆ ಅವರನ್ನು ತಡೆದು ಹಾಗೆಯೇ ಕಳಿಸಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ಸಿಎಂ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ರೆಡ್ ಡೈರಿ ಬಗ್ಗೆ ಪ್ರಸ್ತಾಪಿಸಲು ಮುಂದಾಗಿದ್ದೆ. ಆದರೆ ನಾನು ಬಿಜೆಪಿ ಜೊತೆ ಇದ್ದೇನೆ ಎಂಬ ಕಾರಣಕ್ಕೆ ಸ್ಪೀಕರ್ ತಮಗೆ ಸದನದಲ್ಲಿ ಮಾತಾಡಲು ಅವಕಾಶ ಕೊಡುತ್ತಿಲ್ಲ ಎಂದು ದೂರಿದರು.   ಇದನ್ನೂ ಓದಿ: ಸಿಂಗಾಪುರದಲ್ಲಿ ತಂತ್ರಗಾರಿಕೆ – ಕಾಂಗ್ರೆಸ್ ಸರ್ಕಾರಕ್ಕೆ ಆಪರೇಷನ್ ಭೀತಿ?

    ಕಾಂಗ್ರೆಸ್ ಶಾಸಕರು (Congress MLAs) ಸೇರಿಕೊಂಡು ನನ್ನ ಮೇಲೆ ದಾಳಿ ನಡೆಸಿದರು. ನನ್ನ ಕೈಯಲ್ಲಿದ್ದ ಡೈರಿಯ ಪೇಜ್‍ಗಳನ್ನು ಹರಿದು ಹಾಕಿದರು ಎಂದು ಆಪಾದಿಸಿ ಕಣ್ಣೀರಿಟ್ಟರು. ಸದನಕ್ಕೆ ನೀನು ಬರುವುದು ಬೇಡ. ಬಂದರೆ ಜೈಲಿಗೆ ಹಾಕಿಸುತ್ತೇವೆ ಎಂದು ಬೆದರಿಕೆ ಹಾಕ್ತಿದ್ದಾರೆ ಎಂದು ಆರೋಪಿಸಿದರು.

    ಸಚಿವ ಧರ್ಮೇಂದ್ರ ಮೇಲೆ ಆದಾಯ ತೆರಿಗೆ ಇಲಾಖೆಯ ದಾಳಿ (IT Raid) ನಡೆದ ಸಂದರ್ಭದಲ್ಲಿ, ಸಿಎಂ ಈ ಡೈರಿಯನ್ನು ನನಗೆ ನೀಡಿದರು. ಇದರಲ್ಲಿ 500 ಕೋಟಿ ವ್ಯವಹಾರದ ಉಲ್ಲೇಖಗಳಿವೆ. ಇದೇನಾದ್ರೂ ತನಿಖಾ ಸಂಸ್ಥೆಗೆ ಸಿಕ್ಕಿದ್ರೆ ಗೆಹ್ಲೋಟ್ ಜೈಲುಪಾಲಾಗುತ್ತಿದ್ದರು ಎಂದು ಬಾಂಬ್ ಸಿಡಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಹಿಳೆಯರ ಭದ್ರತೆ ಬಗ್ಗೆ ತಮ್ಮದೇ ಸರ್ಕಾರವನ್ನು ಟೀಕಿಸಿದ್ದಕ್ಕೆ ಸಚಿವ ರಾಜೇಂದ್ರ ಗುಧಾ ವಜಾ

    ಮಹಿಳೆಯರ ಭದ್ರತೆ ಬಗ್ಗೆ ತಮ್ಮದೇ ಸರ್ಕಾರವನ್ನು ಟೀಕಿಸಿದ್ದಕ್ಕೆ ಸಚಿವ ರಾಜೇಂದ್ರ ಗುಧಾ ವಜಾ

    ಜೈಪುರ: ತಮ್ಮದೇ ಸರ್ಕಾರವನ್ನು ಟೀಕಿಸಿದ ರಾಜೇಂದ್ರ ಗುಧಾ ಅವರನ್ನು ಸಚಿವ ಸ್ಥಾನದಿಂದ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ವಜಾಗೊಳಿಸಿದ್ದಾರೆ.

    ರಾಜೇಂದ್ರ ಗುಧಾ (Rajendra Gudha) ಅವರು ಸೈನಿಕ ಕಲ್ಯಾಣ್, ಗೃಹರಕ್ಷಕ ದಳ ಮತ್ತು ನಾಗರಿಕಾ ರಕ್ಷಣೆ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವರಾಗಿದ್ದರು. ಗುಧಾ ಅವರು ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ರಾಜ್ಯ ಸರ್ಕಾರವನ್ನು ಟೀಕಿಸಿದ ಕೆಲವೇ ಗಂಟೆಗಳ ಬಳಿಕ ಈ ಮಹತ್ತರ ಬೆಳವಣಿಗೆ ನಡೆದಿದೆ.

    ಗುಧಾ ಹೇಳಿದ್ದೇನು..?: ಮಣಿಪುರದಲ್ಲಿ (Manipur Women) ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ರಾಜಸ್ಥಾನದ (Rajasthan) ಮಹಿಳೆಯರ ಮೇಲಿನ ಘಟನೆಗಳೊಂದಿಗೆ ರಾಜೇಂದ್ರ ಗುಧಾ ಹೋಲಿಕೆ ಮಾಡಿದ್ದರು. ರಾಜಸ್ಥಾನದಲ್ಲೂ ಮಹಿಳೆಯರ ಮೇಲೆ ಸಾಕಷ್ಟು ದೌರ್ಜನ್ಯಗಳು ನಡೆಯುತ್ತಿವೆ ಎಂದು ಅಧಿವೇಶನದಲ್ಲಿ ಹೇಳಿದ್ದಾರೆ. ಮಣಿಪುರದ ಬದಲು ರಾಜಸ್ಥಾನದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಬೇರೆ ರಾಜ್ಯಗಳ ಬದಲು ಸ್ವಂತ ಹಿತ್ತಲನ್ನೇ ನೋಡಬೇಕು ಎಂದಿದ್ದರು.

    ಗುಧಾ ಅವರ ಈ ಹೇಳಿಕೆಯನ್ನು ತಕ್ಷಣವೇ ಕಾಂಗ್ರೆಸ್ ಹೈಕಮಾಂಡ್ (Congress Highcommand) ಗಮನಕ್ಕೆ ತರಲಾಯಿತು. ಹೈಕಮಾಂಡ್‍ನಿಂದ ಗ್ರೀನ್ ಸಿಗ್ನಲ್ ಸಿಕ್ಕ ಕೂಡಲೇ ಅಶೋಕ್ ಗೆಹ್ಲೋಟ್, ಗುಧಾ ಅವರನ್ನು ವಜಾಗೊಳಿಸಲು ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದಾರೆ.

    ವಜಾಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗುಧಾ, ಮಹಿಳೆಯರ ಮೇಲಿನ ಅಪರಾಧಗಳಲ್ಲಿ ರಾಜಸ್ಥಾನ ನಂಬರ್ ಒನ್ ಸ್ಥಾನದಲ್ಲಿದೆ. ಅಷ್ಟಕ್ಕೂ ನಾನೇನು ಹೇಳಿದ್ದೆ..?. ಒಟ್ಟಿನಲ್ಲಿ ಸತ್ಯ ಹೇಳಿದ್ದಕ್ಕೆ ನನಗೆ ಶಿಕ್ಷೆಯಾಗಿದೆ ಎಂದು ಕಿಡಿಕಾರಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 100 ಯೂನಿಟ್ ವಿದ್ಯುತ್ ಫ್ರೀ – ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಘೋಷಣೆ

    100 ಯೂನಿಟ್ ವಿದ್ಯುತ್ ಫ್ರೀ – ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಘೋಷಣೆ

    ಜೈಪುರ: ವರ್ಷಾಂತ್ಯದಲ್ಲಿ ವಿಧಾನಸಭಾ ಚುನಾವಣೆ (Election) ನಡೆಯಲಿರುವ ಹಿನ್ನೆಲೆ ರಾಜಸ್ಥಾನದ (Rajasthan) ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಬುಧವಾರ ರಾಜ್ಯದ ಜನರಿಗೆ 100 ಯೂನಿಟ್ ವರೆಗೆ ವಿದ್ಯುತ್ ಅನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದ್ದಾರೆ.

    ತಿಂಗಳಿಗೆ 100 ಯೂನಿಟ್‌ವರೆಗೆ ವಿದ್ಯುತ್ ಬಳಸುವ ಜನರಿಗೆ ವಿದ್ಯುತ್ ಬಿಲ್ ಶೂನ್ಯವಾಗಿರುತ್ತದೆ. ಮೊದಲ 100 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುವುದು. ಎಷ್ಟೇ ಬಿಲ್ ಬಂದರೂ ಮೊದಲ 100 ಯೂನಿಟ್ ವಿದ್ಯುತ್ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂದು ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಇದನ್ನೂ ಓದಿ: ಕರ್ನಾಟಕ ಸೇರಿದಂತೆ 3 ರಾಜ್ಯಗಳ 25 ಕಡೆ ಎನ್‌ಐ ದಾಳಿ – 17.50 ಲಕ್ಷ ಜಪ್ತಿ

    ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ 5 ಗ್ಯಾರಂಟಿಗಳನ್ನು ಘೋಷಿಸಿತ್ತು. ಅವುಗಳಲ್ಲಿ ಒಂದು ಪ್ರತಿ ಮನೆಗೆ 200 ಯೂನಿಟ್‌ಗಳ ವರೆಗೆ ಉಚಿತ ವಿದ್ಯುತ್ ಅನ್ನು ನೀಡುವುದಾಗಿ ಘೋಷಿಸಿತ್ತು. ಇದೀಗ ರಾಜಸ್ಥಾನದಲ್ಲೂ ಗೆಹ್ಲೋಟ್ ಚುನಾವಣೆ ಸಮೀಪಿಸುತ್ತಿದ್ದಂತೆ ಉಚಿತ ವಿದ್ಯುತ್ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನ ಗ್ಯಾರಂಟಿಗಳು ದೇಶವನ್ನು ದಿವಾಳಿಗೆ ತಳ್ಳಬಹುದು: ಮೋದಿ ಎಚ್ಚರಿಕೆ

  • ರಾಜಸ್ಥಾನ ಸರ್ಕಾರಿ ಕಟ್ಟಡದಲ್ಲಿ 2.1 ಕೋಟಿ ರೂ. ಹಣ, 1 ಕೆಜಿ ಚಿನ್ನ ಪತ್ತೆ

    ರಾಜಸ್ಥಾನ ಸರ್ಕಾರಿ ಕಟ್ಟಡದಲ್ಲಿ 2.1 ಕೋಟಿ ರೂ. ಹಣ, 1 ಕೆಜಿ ಚಿನ್ನ ಪತ್ತೆ

    ಜೈಪುರ: ರಾಜಸ್ಥಾನದ (Rajasthan) ಜೈಪುರದಲ್ಲಿರುವ (Jaipur) ಸರ್ಕಾರಿ ಕಟ್ಟಡದ ಯೋಜನ ಭವನದ ನೆಲಮಾಳಿಗೆಯಲ್ಲಿ ಬೀಗ ಹಾಕಲಾಗಿದ್ದ ಕಪಾಟಿನಲ್ಲಿ 2.31 ಕೋಟಿ ರೂ.ಗೂ ಅಧಿಕ ನಗದು ಹಾಗೂ 1 ಕೆಜಿ ಚಿನ್ನ ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ನೆಲಮಾಳಿಗೆಗೆ (Basement) ಪ್ರವೇಶ ಹೊಂದಿರುವ ಯೋಜನಾ ಭವನದ ಏಳು ಉದ್ಯೋಗಿಗಳನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಕಪಾಟಿನಲ್ಲಿ ಇರಿಸಲಾಗಿದ್ದ ಟ್ರಾಲಿ ಸೂಟ್‌ಕೇಸ್‌ನಲ್ಲಿ 2,000 ರೂ. ಹಾಗೂ 500 ರೂ. ಮುಖಬೆಲೆಯ ನೋಟುಗಳು ಪತ್ತೆಯಾಗಿದ್ದು, ಆರ್‌ಬಿಐ 2,000 ರೂ. ಕರೆನ್ಸಿ ಚಲಾವಣೆ ಹಿಂತೆಗೆದುಕೊಂಡ ದಿನ ಈ ಘಟನೆ ನಡೆದಿದೆ. ನಗದು ಹಾಗೂ ಚಿನ್ನವನ್ನು ವಶಪಡಿಸಿಕೊಂಡ ಪೊಲೀಸರು ಈ ಕುರಿತು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಅವರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: MIG-21 ಫೈಟರ್‌ ಜೆಟ್‌ ಹಾರಾಟ ಬಂದ್ – IAF ಮಹತ್ವದ ನಿರ್ಧಾರ

    ಮುಖ್ಯ ಕಾರ್ಯದರ್ಶಿ ಉಷಾ ಶರ್ಮಾ, ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಉಮೇಶ್ ಮಿಶ್ರಾ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ದಿನೇಶ್ ಎಂಎನ್ ಮತ್ತು ಜೈಪುರ ಕಮಿಷನರ್ ಆನಂದ ಶ್ರೀವಾಸ್ತವ ಅವರು ಶುಕ್ರವಾರ ತಡರಾತ್ರಿ ಸಚಿವಾಲಯದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೈಪುರ ಕಮೀಷನರ್ ಶ್ರೀವಾಸ್ತವ, ಕಪಾಟಿನಲ್ಲಿ ಅನೇಕ ಫೈಲ್‌ಗಳು ಮತ್ತು ಟ್ರಾಲಿ ಸೂಟ್‌ಕೇಸ್‌ನಲ್ಲಿ ಚಿನ್ನ ಮತ್ತು ನಗದು ತುಂಬಿದೆ ಎಂದು ಅಲ್ಲಿನ ನೌಕರರು ಅಶೋಕ್ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ ಎಂದರು. ಇದನ್ನೂ ಓದಿ: ಆರ್ಥಿಕ ತಜ್ಞ ಮೋದಿಯವರೇ 500 ನೋಟು ಹಿಂಪಡೆಯುತ್ತೀರಾ?: ಓವೈಸಿ ಪ್ರಶ್ನೆ

    ಇ-ಫೈಲಿಂಗ್ ಯೋಜನೆಯಡಿ ಕಡತಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣಗೊಳಿಸಲಾಗುತ್ತಿದೆ. ಅಲ್ಲದೇ ಬೀಗ ಹಾಕಿದ್ದ ಎರಡು ಕಪಾಟುಗಳ ಕೀಗಳು ಪತ್ತೆಯಾದ ನಂತರ ಅವುಗಳನ್ನು ತೆರೆಯಲಾಗಿದೆ. ಏಳು ಮಂದಿ ನೌಕರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಸಂಪೂರ್ಣ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿ ಸಂಪೂರ್ಣ ವಿಷಯವನ್ನು ಬಹಿರಂಗಪಡಿಸಲಾಗುವುದು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಪಾಕಿಸ್ತಾನದಿಂದ ಭಾರತಕ್ಕೆ ಡ್ರಗ್ಸ್ ಸಾಗಾಟ – ಎರಡು ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್

    ನಗದು ಮತ್ತು ಚಿನ್ನವನ್ನು ವಶಪಡಿಸಿಕೊಂಡ ಕಪಾಟಿಗೆ ಹಲವು ತಿಂಗಳುಗಳಿಂದ ಬೀಗ ಹಾಕಲಾಗಿತ್ತು. ಆಧಾರ್-ಯುಐಡಿ-ಸಂಯೋಜಿತ ಸಿಬ್ಬಂದಿಯ ಸಹಾಯದಿಂದ ನೆಲಮಾಳಿಗೆಯನ್ನು ಪ್ರವೇಶಿಸಿದ ಪೊಲೀಸರು ನೆಲಮಾಳಿಗೆಗೆ ಪ್ರವೇಶವಿರುವ ಉದ್ಯೋಗಿಗಳನ್ನು ಈ ಕುರಿತು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: 2,000 ರೂ. ಮುಖಬೆಲೆಯ ನೋಟ್‌ ಬ್ಯಾನ್‌ ಮಾಡಿದ RBI

    ಯಾರ ಹಣ? ಹೇಗೆ ಬಂತು ಎಂದು ತನಿಖೆ ನಡೆಸುತ್ತಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ಈ ಘಟನೆಯ ಬಳಿಕ ಪ್ರತಿಪಕ್ಷವಾದ ಬಿಜೆಪಿ ಈ ವಿಷಯದ ಬಗ್ಗೆ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿದೆ. ವಿರೋಧ ಪಕ್ಷದ ನಾಯಕ ರಾಜೇಂದ್ರ ರಾಥೋಡ್, ಇದು ಗೆಹ್ಲೋಟ್ ಸರ್ಕಾರ ಭ್ರಷ್ಟಾಚಾರದ ರಕ್ಷಕ ಎಂಬುವುದಕ್ಕೆ ಸಾಕ್ಷಿಯಾಗಿದೆ ಎಂದು ತಮ್ಮ ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ಯೋಜನಾ ಭವನಕ್ಕೆ ಇಷ್ಟು ದೊಡ್ಡ ಮೊತ್ತದ ನಗದು ಮತ್ತು ಚಿನ್ನ ಹೇಗೆ ತಲುಪಿತು ಎಂಬುದನ್ನು ಮುಖ್ಯಮಂತ್ರಿಗಳು ಉತ್ತರಿಸಬೇಕು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಷೇರು ವಿವಾದ; ಅದಾನಿ ಗ್ರೂಪ್‌ಗೆ ಸುಪ್ರೀಂ ಕೋರ್ಟ್ ಸಮಿತಿ ಕ್ಲೀನ್ ಚಿಟ್

  • ಗೆಹ್ಲೋಟ್‍ಗೆ ರಾವಣ ಎಂದಿದ್ದ ಕೇಂದ್ರ ಸಚಿವರ ವಿರುದ್ಧ FIR

    ಗೆಹ್ಲೋಟ್‍ಗೆ ರಾವಣ ಎಂದಿದ್ದ ಕೇಂದ್ರ ಸಚಿವರ ವಿರುದ್ಧ FIR

    ಜೈಪುರ: ರಾಜಸ್ಥಾನ (Rajastan) ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಅವರನ್ನು ರಾವಣನಿಗೆ ಹೋಲಿಸಿ ಟೀಕೆ ಮಾಡಿದ್ದ ಕೇಂದ್ರ ಸಚಿವ ಗಜೇಂದ್ರ ಶೇಖಾವತ್ (Gajendra Shekhawat) ಅವರ ವಿರುದ್ಧ ಕಾಂಗ್ರೆಸ್ (Congress) ಮುಖಂಡ ಸುರೇಂದ್ರ ಸಿಂಗ್ ಜಾದಾವತ್ ಚಿತ್ತೋರ್‌ಗಢದಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ.

    ಇತ್ತೀಚೆಗೆ ಚಿತ್ತೋರಗಢದಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ್ದ ಕೇಂದ್ರ ಸಚಿವ, ರಾವಣನಿಗೆ 10 ತಲೆಗಳಿದ್ದವು. ಅದೇ ರೀತಿ ಈ ರಾಜಸ್ಥಾನದ ಸರ್ಕಾರ ಹಾಗೂ ರಾಜಕೀಯದಲ್ಲಿ ಗೆಹ್ಲೋಟ್‌ ರಾವಣನಿದ್ದ ಹಾಗೇ. ಈ ಸರ್ಕಾರ ಭ್ರಷ್ಟಾಚಾರದ ಹರಿಕಾರವಾಗಿದ್ದು, ಓಲೈಕೆಯಲ್ಲಿ ತೊಡಗಿದೆ. ಜೊತೆಗೆ ರೈತರನ್ನು ಹಾಗೂ ಮಹಿಳೆಯರನ್ನು ದಬ್ಬಾಳಿಕೆ ಮಾಡುತ್ತದೆ. ಈ ಸರ್ಕಾರವು ಮಾಫಿಯಾ ರಾಜ್‍ನನ್ನು ಪೋಷಿಸುತ್ತಿದೆ. ಈ ರಾಜಕೀಯ ರಾವಣನನ್ನು ಮುಗಿಸುವ ಮೂಲಕ ರಾಜಸ್ಥಾನದಲ್ಲಿ ರಾಮರಾಜ್ಯವನ್ನು ಸ್ಥಾಪಿಸಬೇಕಾಗಿದೆ ಎಂದು ಹೇಳಿದ್ದರು.

    ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ ಮಾಡಿದ ಹಿನ್ನೆಲೆಯಲ್ಲಿ ಚಿತ್ತೋರ್‌ಗಢದ ಸದರ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಅಷ್ಟೇ ಅಲ್ಲದೇ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ರಾವಣ ಹೇಳಿಕೆಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಮಧು ಬಂಗಾರಪ್ಪ ಗೆದ್ದರೆ, ಸೊರಬಕ್ಕೆ ಬಂದು ಕುಣಿದು ಕುಪ್ಪಳಿಸುತ್ತೇನೆ: ಶಿವಣ್ಣ

    ಅಶೋಕ್ ಗೆಹ್ಲೋಟ್ ಈ ಬಗ್ಗೆ ಮಾತನಾಡಿ, ಗಜೇಂದ್ರ ಶೇಖಾವತ್ ಅವರು ಗೆಹ್ಲೋಟ್ ರಾವಣ ರೂಪಿ, ಅವರನ್ನು ಮುಗಿಸಬೇಕಾಗಿದೆ ಎಂದು ಹೇಳಿದ್ದರು. ನಾನು ಇದನ್ನು ಸಹ ಸ್ವಾಗತಿಸುತ್ತೇನೆ. ನೀವು ಭಗವಾನ್ ರಾಮನ ಅನುಯಾಯಿ ಮತ್ತು ನಾನು ರಾವಣ ಎಂದು ನಾವು ಒಪ್ಪಿಕೊಳ್ಳುತ್ತೇವೆ ಎಂದು ಹೇಳಿದ್ದರು. ಇದನ್ನೂ ಓದಿ:  ಪ್ರವೀಣ್ ಬಲಿದಾನ ಎಂದಿಗೂ ವ್ಯರ್ಥ ಆಗಲ್ಲ – ನೆಟ್ಟಾರು ಮನೆಗೆ ಜೆ.ಪಿ.ನಡ್ಡಾ ಭೇಟಿ