Tag: ashok gehlot

  • ರಾಜಸ್ಥಾನ ಮಾಜಿ ಸಿಎಂ ಅಶೋಕ್‌ ಗೆಹ್ಲೋಟ್‌ಗೆ ಹಂದಿ ಜ್ವರ & ಕೋವಿಡ್‌ ಪಾಸಿಟಿವ್‌

    ರಾಜಸ್ಥಾನ ಮಾಜಿ ಸಿಎಂ ಅಶೋಕ್‌ ಗೆಹ್ಲೋಟ್‌ಗೆ ಹಂದಿ ಜ್ವರ & ಕೋವಿಡ್‌ ಪಾಸಿಟಿವ್‌

    ಜೈಪುರ: ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ಗೆ (Ashok Gehlot) ಕೋವಿಡ್‌-19 ಹಾಗೂ ಹಂದಿ ಜ್ವರ ಪಾಸಿಟಿವ್‌ ಕಾಣಿಸಿಕೊಂಡಿದೆ.

    ಈ ಕರಿತು ಅಶೋಕ್‌ ಗೆಹ್ಲೋಟ್‌ ಅವರೇ ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ರಘುರಾಮ್‌ ರಾಜನ್‌ ಕಾಂಗ್ರೆಸ್‌ ರಾಜ್ಯಸಭಾ ಅಭ್ಯರ್ಥಿ- ಮಹಾರಾಷ್ಟ್ರದಿಂದ ಆಯ್ಕೆ? 

    ಕಳೆದ ಕೆಲವು ದಿನಗಳಿಂದ ಜ್ವರ ಕಾಣಿಸಿಕೊಂಡಿತ್ತು. ಹಾಗಾಗಿ ವೈದ್ಯರ ಸಲಹೆ ಮೇರೆಗೆ ನಾನು ಪರೀಕ್ಷೆಗೆ ಒಳಗಾಗಿದ್ದು ಕೋವಿಡ್‌-19 ಹಾಗೂ ಹಂದಿಜ್ವರ ಪಾಸಿಟಿವ್‌ (Covid 19 And Swine Flu) ಎಂದು ದೃಢಪಟ್ಟಿದೆ. ಇದರಿಂದಾಗಿ ಮುಂದಿನ ಏಳು ದಿನಗಳವರೆಗೆ ನಾನು ಯಾರನ್ನೂ ಭೇಟಿಯಾಗಲು ಸಾಧ್ಯವಾಗುವುದಿಲ್ಲ. ಬದಲಾದ ಕಾಲಮಾನದಲ್ಲಿ ಪಕ್ಷದ ಮುಖಂಡರೂ ತಮ್ಮ ಆರೋಗ್ಯ ನೋಡಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಪಕ್ಷದ ಮುಖಂಡರು ಸಹ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಸಲಹೆ ನೀಡಿದ್ದಾರೆ.

    ಮುಂದಿನ ಚಿಕಿತ್ಸೆಗಾಗಿ ಅಶೋಕ್‌ ಗೆಹ್ಲೋಟ್‌ ಅವರನ್ನು ಜೈಪುರದ SMS ಆಸ್ಪತ್ರೆಯ ಐಡಿಎಚ್ ಕೇಂದ್ರಕ್ಕೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬಿಜೆಪಿಯಿಂದ ಕೋಟಿ ಕೋಟಿ ಆಫರ್‌ – ಆರೋಪ ಮಾಡಿದ್ದ ಕೇಜ್ರಿವಾಲ್‌ಗೆ ಕಂಟಕ – ದೆಹಲಿ ಕ್ರೈಂಬ್ರ್ಯಾಂಚ್‌ ನೋಟಿಸ್‌

    ಪಂಚರಾಜ್ಯ ಚುನಾವಣೆ ಸಂದರ್ಭದಲ್ಲಿ ಸಕ್ರೀಯವಾಗಿ ಪ್ರಚಾರದಲ್ಲಿ ತೊಡಗಿದ್ದ ಅಶೋಕ್‌ ಗೆಹ್ಲೋಟ್‌ ಚುನಾವಣೆ ಫಲಿತಾಂಶದ ಬಳಿಕ ಸಾರ್ವಜನಿಕ ವೇದಿಕೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದನ್ನೂ ಕಡಿಮೆ ಮಾಡಿದ್ದರು. ಕಳೆದ ಒಂದು ವಾರದಿಂದ ಅವರಿಗೆ ಜ್ವರ ಕಾಣಿಸಿಕೊಂಡಿದ್ದ ಕಾರಣ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದರು. ಇದನ್ನೂ ಓದಿ: ಲೋಕಸಭೆಯಲ್ಲಿ ಕಾಂಗ್ರೆಸ್‌ 40 ಸೀಟು ಗೆಲ್ಲೋದು ಡೌಟ್‌ – ಬಿಜೆಪಿ ಪರ ದೀದಿ ಬ್ಯಾಟಿಂಗ್‌

  • ಬಿಜೆಪಿ ಪಕ್ಷದಲ್ಲಿ ಶಿಸ್ತು ಇಲ್ಲ: ಅಶೋಕ್ ಗೆಹ್ಲೋಟ್

    ಬಿಜೆಪಿ ಪಕ್ಷದಲ್ಲಿ ಶಿಸ್ತು ಇಲ್ಲ: ಅಶೋಕ್ ಗೆಹ್ಲೋಟ್

    ನವದೆಹಲಿ: ಇತ್ತೀಚಿನ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸಾಧನೆಯನ್ನು ಮೌಲ್ಯಮಾಪನ ಮಾಡುವ ನಿರ್ಣಾಯಕ ಸಭೆಗೆ ಮುಂಚಿತವಾಗಿ, ಕಾಂಗ್ರೆಸ್ ನಾಯಕ ಮತ್ತು ರಾಜಸ್ಥಾನದ ಉಸ್ತುವಾರಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಅವರು ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನಗಳಿಗೆ ಮುಖ್ಯಮಂತ್ರಿಯನ್ನು ಘೋಷಿಸುವಲ್ಲಿ ಬಿಜೆಪಿ (BJP) ವಿಳಂಬವನ್ನು ಶನಿವಾರ ಟೀಕಿಸಿದ್ದು, ಈ ಪಕ್ಷದಲ್ಲಿ ಶಿಸ್ತು ಇಲ್ಲ ಎಂದು ಹೇಳಿದ್ದಾರೆ.

    ರಾಜಸ್ಥಾನದಲ್ಲಿ (Rajasthan) ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸಾಧನೆಯನ್ನು ಪರಿಶೀಲಿಸುವ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಬಂದಿರುವ ಗೆಹ್ಲೋಟ್, ರಾಜಸ್ಥಾನದ ಬಿಜೆಪಿ ಮುಖ್ಯಮಂತ್ರಿಯನ್ನು ಘೋಷಿಸುವಲ್ಲಿ ವಿಳಂಬವಾದ ಬಗ್ಗೆ ಪ್ರತಿಕ್ರಿಯಿಸಿದರು. ಈ ಪಕ್ಷದಲ್ಲಿ ಶಿಸ್ತು ಇಲ್ಲ. ನಾವೂ ಇದೇ ರೀತಿ ಮಾಡಿದ್ದರೆ ನಮ್ಮ ಮೇಲೆ ಯಾವ ಆರೋಪಗಳನ್ನು ಮಾಡಿ ಜನರನ್ನು ದಾರಿ ತಪ್ಪಿಸುತ್ತಿದ್ದರೋ ಗೊತ್ತಿಲ್ಲ. ಅವರು ಚುನಾವಣೆಗಳನ್ನು ಧ್ರುವೀಕರಿಸಿದರು. ಒಂದು ವೇಳೆ ಕಾಂಗ್ರೆಸ್ (Congress) ಸಿಎಂ ಆಯ್ಕೆ ಮಾಡದಿದ್ದರೆ ಇಷ್ಟು ದಿನ ಬಿಜೆಪಿಯವರು ಸಾಕಷ್ಟು ಕೂಗಾಡುತ್ತಿದ್ದರು. ನಾವು ಹೊಸ ಸರ್ಕಾರದೊಂದಿಗೆ ಸಹಕರಿಸುತ್ತೇವೆ ಎಂದರು. ಇದನ್ನೂ ಓದಿ: ಅಕ್ಬರುದ್ದೀನ್‌ ಓವೈಸಿಗೆ ಹಂಗಾಮಿ ಸ್ಪೀಕರ್‌ ಪಟ್ಟ – ಪ್ರಮಾಣ ವಚನ ಬಹಿಷ್ಕರಿಸಿದ ಬಿಜೆಪಿ ಶಾಸಕರು

    ಇತ್ತೀಚಿನ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸಾಧನೆಯನ್ನು ನಿರ್ಣಯಿಸಲು ಪ್ರಮುಖ ಸಭೆಗಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಸಂಸದ ರಾಹುಲ್ ಗಾಂಧಿ ಅವರು ದೆಹಲಿಯಲ್ಲಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಕೇಂದ್ರ ಕಚೇರಿಗೆ ಆಗಮಿಸಿದ್ದಾರೆ. ಇದನ್ನೂ ಓದಿ: ಐಟಿ ದಾಳಿಯಲ್ಲಿ 290 ಕೋಟಿ ರೂ. ಜಪ್ತಿ – ಎಣಿಸಿದಷ್ಟು ಹೆಚ್ಚುತ್ತಲೇ ಇದೆ ಹಣ

    ಸಭೆಯಲ್ಲಿ ಪಾಲ್ಗೊಳ್ಳಲು ರಾಜಸ್ಥಾನದ ಕಾಂಗ್ರೆಸ್ ನಾಯಕ ಗೋವಿಂದ್ ಸಿಂಗ್ ದೋತಸ್ರಾ ಕೂಡ ದೆಹಲಿಗೆ ಆಗಮಿಸಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಗೆ ನ್ಯೂನತೆಗಳನ್ನು ವಿಶ್ಲೇಷಿಸಲು ಮತ್ತು ತಿದ್ದುಪಡಿ ಮಾಡಲು ಪಕ್ಷದ ಗಮನವನ್ನು ಅವರು ವ್ಯಕ್ತಪಡಿಸಿದರು. ರಾಜ್ಯದಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬರಲು ಕಾರಣವೇನು ಎಂಬುದರ ಕುರಿತು ನಾವು ಚರ್ಚಿಸುತ್ತೇವೆ. ನಾವು ನಮ್ಮ ನ್ಯೂನತೆಗಳನ್ನು ವಿಶ್ಲೇಷಿಸುತ್ತೇವೆ ಮತ್ತು ಮುಂಬರುವ ಲೋಕಸಭೆ ಚುನಾವಣೆಗೆ ತಿದ್ದುಪಡಿ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ತೆಲಂಗಾಣ ಹಂಗಾಮಿ ಸ್ಪೀಕರ್‌ ಆಗಿ AIMIM ಶಾಸಕ ಅಕ್ಬರುದ್ದೀನ್ ಓವೈಸಿ ಪ್ರಮಾಣ ವಚನ

    ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದಲ್ಲಿ ಪಕ್ಷದ ಸೋಲನ್ನು ಪರಿಶೀಲಿಸಲು ಕಾಂಗ್ರೆಸ್ ಶುಕ್ರವಾರ ಪ್ರತ್ಯೇಕ ಸಭೆಗಳನ್ನು ನಡೆಸಿದ್ದು, ಇತ್ತೀಚಿನ ಸುತ್ತಿನ ವಿಧಾನಸಭಾ ಚುನಾವಣೆಯಲ್ಲಿ ಅದರ ಕಳಪೆ ಪ್ರದರ್ಶನದ ಬಗ್ಗೆ ರಾಜ್ಯ ಘಟಕದ ಮುಖ್ಯಸ್ಥರಿಂದ ವಿವರವಾದ ವರದಿಯನ್ನು ಕೇಳಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ. ದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಭೆ ಕರೆದಿದ್ದು, ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಇತರ ಹಿರಿಯ ನಾಯಕರು ಉಪಸ್ಥಿತರಿದ್ದರು. ಇದನ್ನೂ ಓದಿ: ಶತ್ರು ಸೇನೆಗಳಿಂದ ರಕ್ಷಣೆಗೆ ಮಾಸ್ಟರ್‌ ಪ್ಲ್ಯಾನ್‌ – ಫೈಟರ್‌ ಜೆಟ್‌ಗಳಿಗೆ ಶೀಘ್ರವೇ ಬರಲಿದೆ ಡಿಜಿಟಲ್‌ ನಕ್ಷೆ

    ನಾಲ್ಕು ರಾಜ್ಯಗಳಲ್ಲಿನ ಚುನಾವಣಾ ಫಲಿತಾಂಶಗಳು, ವಿಶೇಷವಾಗಿ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿನ ಸೋಲುಗಳು, 2024ರ ಕಾಂಗ್ರೆಸ್‌ನ ಭರವಸೆಗೆ ಭಾರಿ ಹೊಡೆತವನ್ನು ನೀಡಿವೆ. ಏಕೆಂದರೆ ಅದು ಅಧಿಕಾರದಿಂದ ಹೊರಗುಳಿದಿದೆ. ರಾಜಸ್ಥಾನದಲ್ಲಿ, ಮತ ಎಣಿಕೆಯು ಕೆಲವು ಸಮೀಕ್ಷೆಗಳು ಭವಿಷ್ಯ ನುಡಿದಿದ್ದಕ್ಕಿಂತ ಸಂಪೂರ್ಣವಾಗಿ ವಿಭಿನ್ನವಾದ ಚಿತ್ರವನ್ನು ಚಿತ್ರಿಸಿದೆ. ಬಿಜೆಪಿ 115 ಸ್ಥಾನಗಳನ್ನು ಗೆಲ್ಲುವ ಮೂಲಕ ಸರ್ಕಾರ ರಚಿಸಲು ಸಿದ್ಧವಾಗಿದ್ದು, ಕಾಂಗ್ರೆಸ್ 69 ಸ್ಥಾನಗಳಲ್ಲಿ ಹಿಂದುಳಿದಿದೆ. ಇದನ್ನೂ ಓದಿ: ಐಸಿಸ್‌ ಉಗ್ರರೊಂದಿಗೆ ನಂಟು; ಬೆಂಗಳೂರು ಸೇರಿ ದೇಶದ ಹಲವೆಡೆ NIA ದಾಳಿ

  • ಜೀವ ಬೆದರಿಕೆ ಇದ್ದರೂ ಗೆಹ್ಲೋಟ್, ಪೊಲೀಸರು ಭದ್ರತೆ ನೀಡಲಿಲ್ಲ: ಕರ್ಣಿ ಸೇನಾ ಮುಖ್ಯಸ್ಥನ ಪತ್ನಿ ಆರೋಪ

    ಜೀವ ಬೆದರಿಕೆ ಇದ್ದರೂ ಗೆಹ್ಲೋಟ್, ಪೊಲೀಸರು ಭದ್ರತೆ ನೀಡಲಿಲ್ಲ: ಕರ್ಣಿ ಸೇನಾ ಮುಖ್ಯಸ್ಥನ ಪತ್ನಿ ಆರೋಪ

    ಜೈಪುರ: ರಾಜಸ್ಥಾನ (Rajasthan) ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಮತ್ತು ಪೊಲೀಸ್ ಮಹಾನಿರ್ದೇಶಕರು ಸುಖದೇವ್ ಸಿಂಗ್ ಗೊಗಮೇಡಿಗೆ (Sukhdev Singh Gogamedi) ಜೀವ ಬೆದರಿಕೆ ಇದ್ದರೂ ಭದ್ರತೆ ನೀಡಲು ವಿಫಲರಾಗಿದ್ದಾರೆ ಎಂದು ಸುಖದೇವ್ ಸಿಂಗ್ ಪತ್ನಿ ಆರೋಪಿಸಿದ್ದಾರೆ.

    ಕರ್ಣಿ ಸೇನೆಯ ಅಧ್ಯಕ್ಷ ಸುಖದೇವ್ ಸಿಂಗ್ ಗೊಗಮೆಡಿ ಅವರನ್ನು ಮಂಗಳವಾರ ಅಪರಿಚಿತ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಘಟನೆಯ ಸಿಸಿಟಿವಿ ವೀಡಿಯೋದಲ್ಲಿ ಬಂದೂಕುಧಾರಿಗಳು ಗೊಗಮೆಡಿಗೆ ಗುಂಡು ಹಾರಿಸಿ ನಂತರ ಸ್ಥಳದಿಂದ ಪರಾರಿಯಾಗುವುದನ್ನು ತೋರಿಸುತ್ತದೆ. ಈ ಕುರಿತು ಅವರ ಪತ್ನಿ ದೂರು ದಾಖಲಿಸಿದ್ದು, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಪೊಲೀಸ್ ಮಹಾನಿರ್ದೇಶಕರು ಗೋಗಮೆಡಿಗೆ ಜೀವ ಬೆದರಿಕೆಯ ನಡುವೆಯೂ ಭದ್ರತೆ ನೀಡಲು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: POK ನಮ್ಮದೇ, 24 ಅಸೆಂಬ್ಲಿ ಸೀಟ್‌ಗಳನ್ನು ಮೀಸಲಿಟ್ಟಿದ್ದೇವೆ: ಅಮಿತ್‌ ಶಾ

     

    ಸುಖದೇವ್ ಸಿಂಗ್ ಗೊಗಮೆಡಿ ಅವರನ್ನು ಕೊಲ್ಲಲು ಯೋಜನೆ ರೂಪಿಸಲಾಗಿದೆ ಎಂದು ಮಾರ್ಚ್‌ನಲ್ಲಿ ರಾಜಸ್ಥಾನ ಡಿಜಿಪಿ ಉಮೇಶ್ ಮಿಶ್ರಾ ಅವರಿಗೆ ಪತ್ರವೊಂದನ್ನು ಕಳುಹಿಸಲಾಗಿತ್ತು ಎಂದು ಸುಖದೇವ್ ಸಿಂಗ್ ಪತ್ನಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಗೊಗಮೆಡಿಗೆ ಕೊಲೆ ಬೆದರಿಕೆಗಳ ಕುರಿತು ಮಾಹಿತಿ ನೀಡಿದರೂ ಗೆಹ್ಲೋಟ್ ಮತ್ತು ಮಿಶ್ರಾ ಅವರು ಕರ್ಣಿ ಸೇನಾ ಮುಖ್ಯಸ್ಥರಿಗೆ ಭದ್ರತೆಯನ್ನು ನೀಡಲಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ವೈದ್ಯ

    ಘಟನೆಯ ಕುರಿತು ಪೊಲೀಸರು ಭಾರತೀಯ ದಂಡ ಸಂಹಿತೆಯ ಹಲವಾರು ಸೆಕ್ಷನ್‌ಗಳ ಅಡಿಯಲ್ಲಿ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ ಮತ್ತು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯ 10 ಸಂಸದರಿಂದ ಸಂಸತ್ ಸ್ಥಾನಕ್ಕೆ ರಾಜೀನಾಮೆ

    ಇಬ್ಬರು ಆರೋಪಿಗಳ ಗುರುತು ಪತ್ತೆ:
    ರಾಷ್ಟ್ರೀಯ ರಜಪೂತ ಕರ್ಣಿ ಸೇನೆಯ ಅಧ್ಯಕ್ಷ ಸುಖದೇವ್ ಸಿಂಗ್ ಗೊಗಮೆಡಿ ಅವರ ಹತ್ಯೆಯ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳ ಗುರುತನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಆರೋಪಿಗಳಲ್ಲಿ ಒಬ್ಬನನ್ನು ರೋಹಿತ್ ರಾಥೋಡ್ ಎಂದು ಗುರುತಿಸಲಾಗಿದೆ. ಈತ ಮಕ್ರಾನಾ ನಾಗೌರ್ ಮೂಲದವನಾಗಿದ್ದು, ಮತ್ತೊಬ್ಬನನ್ನು ಹರಿಯಾಣದ ಮಹೇಂದ್ರಗಾತ್ ಮೂಲದ ನಿತಿನ್ ಫೌಜಿ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಪ್ಯಾಕಿಂಗ್ ಆಹಾರ ಉತ್ಪನ್ನಗಳಿಂದ ಜೀರ್ಣಾಂಗಕ್ಕೆ ಹಾನಿ- ಏಮ್ಸ್ ವೈದ್ಯರಿಂದ ಹೊಸ ವರದಿ

    ಆರೋಪಿಗಳಾದ ನವೀನ್ ಶೇಖಾವತ್, ರೋಹಿತ್ ರಾಥೋಡ್ ಮತ್ತು ನಿತಿನ್ ಫೌಜಿ ಅವರು ಮದುವೆ ಕಾರ್ಡ್ ನೀಡುವ ನೆಪದಲ್ಲಿ ಕರ್ಣಿ ಸೇನಾ ಮುಖ್ಯಸ್ಥರನ್ನು ಭೇಟಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಜಮೀನು ವಿವಾದದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ವರದಿಯ ಪ್ರಕಾರ, ಕರ್ಣಿ ಸೇನಾ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೆಡಿ ಅವರು ರೋಹಿತ್ ಗೋಡಾರಾ ಅವರ ಭೂ ವಿವಾದಗಳಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ. ಇದನ್ನೂ ಓದಿ: ಜಮೀನು ವಿವಾವದವೇ ಕರ್ಣಿ ಸೇನಾ ಮುಖ್ಯಸ್ಥನ ಕೊಲೆಗೆ ಕಾರಣವಾಯ್ತಾ?

  • Election Results: ಛತ್ತಿಸ್‌ಗಢದಲ್ಲಿ ಬಿಜೆಪಿ-ಕಾಂಗ್ರೆಸ್‌ ಹಾವು ಏಣಿ ಆಟ

    Election Results: ಛತ್ತಿಸ್‌ಗಢದಲ್ಲಿ ಬಿಜೆಪಿ-ಕಾಂಗ್ರೆಸ್‌ ಹಾವು ಏಣಿ ಆಟ

    ರಾಯಪುರ: ಛತ್ತಿಸ್‌ಗಢದಲ್ಲಿ ಸದ್ಯ ಬಿಜೆಪಿ-ಕಾಂಗ್ರೆಸ್‌ (Congress, BJP) ನಡುವೆ ಹಾವು ಏಣಿ ಆಟ ಶುರುವಾಗಿದೆ. ಜಿದ್ದಾ ಜಿದ್ದಿ ಕಣದಲ್ಲಿ ಒಮ್ಮೆ ಬಿಜೆಪಿ, ಒಮ್ಮೆ ಕಾಂಗ್ರೆಸ್‌ ನಡುವೆ ಏರಿಳಿತ ಕಂಡುಬರುತ್ತಿದೆ.

    ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಶುರುವಾಗಿದೆ. ಬೆಳಗ್ಗೆ 9:35ರ ವರೆಗೂ ಮುನ್ನಡೆ ಸಾಧಿಸಿದ್ದ ಆಡಳಿತ ಪಕ್ಷ ಕಾಂಗ್ರೆಸ್‌ನಲ್ಲಿ ಇದ್ದಕ್ಕಿದ್ದಂತೆ ಒಂದೊಂದೇ ಸ್ಥಾನ ಇಳಿಕೆಯಾಗುತ್ತಿರುವುದು ಕಂಡುಬರುತ್ತಿದೆ.

    ಬೆಳಗ್ಗೆ 9:15ರ ವೇಳೆಗೆ ಛತ್ತಿಸ್‌ಗಢದಲ್ಲಿ (Chhattisgarh) ಬಿಜೆಪಿ 30, ಕಾಂಗೆಸ್ 49, ಇತರೇ 1 ಸ್ಥಾನಗಳಲ್ಲಿ, ಬೆಳಗ್ಗೆ 9:35ರ ವೇಳೆಗೆ ಬಿಜೆಪಿ 31, ಕಾಂಗೆಸ್ 59, ಇತರೇ 2 ಸ್ಥಾನಗಳಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿತ್ತು. 10:05 ಗಂಟೆ ವೇಳೆಗೆ ಬಿಜೆಪಿ 42, ಕಾಂಗ್ರೆಸ್‌ 46 ಹಾಗೂ ಇತರೇ 2 ಸ್ಥಾನಕ್ಕೆ ಬಂದು ನಿಂತಿತ್ತು. ಆದ್ರೆ 10:06 ಗಂಟೆ ವೇಳೆಗೆ ಪುನಃ ಬಿಜೆಪಿ 45, ಕಾಂಗ್ರೆಸ್‌ 44, ಇತರೇ 1 ಸ್ಥಾನಕ್ಕೆ ಬಂದು ನಿಂತಿದೆ. ಸದ್ಯ ಛತ್ತಿಸ್‌ಗಡದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಆಡಳಿತದಲ್ಲಿದೆ. ಪ್ರತಿ 5 ನಿಮಿಷಕ್ಕೆ ಫಲಿತಾಂಶ ಏರಿಳಿತ ಕಂಡುಬರುತ್ತಿದೆ.

    ಎಲ್ಲಿ ಎಷ್ಟು ಮ್ಯಾಜಿಕ್ ನಂಬರ್?
    ಮಧ್ಯಪ್ರದೇಶ: ಒಟ್ಟು ಸ್ಥಾನ- 230, ಸರಳ ಬಹುಮತಕ್ಕೆ-116, ರಾಜಸ್ಥಾನ: ಒಟ್ಟು ಸ್ಥಾನ- 199, ಸರಳ ಬಹುಮತಕ್ಕೆ-100, ಛತ್ತಿಸ್‌ಗಢ: ಒಟ್ಟು ಸ್ಥಾನ- 90, ಸರಳ ಬಹುಮತಕ್ಕೆ-46, ತೆಲಂಗಾಣ- ಒಟ್ಟು ಸ್ಥಾನ-119, ಸರಳ ಬಹುಮತಕ್ಕೆ-60.

  • Madhya Pradesh: ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಸಿಎಂ ಅಭಿನಂದನೆ ಪೋಸ್ಟರ್‌ ಹಾಕಿದ ಕಾಂಗ್ರೆಸ್‌

    Madhya Pradesh: ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಸಿಎಂ ಅಭಿನಂದನೆ ಪೋಸ್ಟರ್‌ ಹಾಕಿದ ಕಾಂಗ್ರೆಸ್‌

    – ಮಧ್ಯ ಪ್ರದೇಶದಲ್ಲಿ ಬಿಜೆಪಿಗೆ ಆರಂಭಿಕ ಮುನ್ನಡೆ

    ಭೋಪಾಲ್:‌ ಮಧ್ಯಪ್ರದೇಶದಲ್ಲಿ ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಕಾಂಗ್ರೆಸ್‌ ಗೆಲುವು ಘೋಷಿಸಿಕೊಂಡಿದೆ. ರಾಜಧಾನಿ ಭೋಪಾಲ್‌ನಲ್ಲಿರುವ ಪಕ್ಷದ ಕಚೇರಿಯ ಮುಂಭಾಗ ಕಮಲ್‌ನಾಥ್‌ ಅವರು ಮುಖ್ಯಮಂತ್ರಿಯಾಗಿ ಅಭಿನಂದನೆ ಸ್ವೀಕರಿಸುತ್ತಿರುವ ದೊಡ್ಡ ಪೋಸ್ಟರ್‌ ಸಹ ಅಳವಡಿಸಲಾಗಿದೆ. ‘ಮುಖ್ಯಮಂತ್ರಿಯಾದ ಗೌರವಾನ್ವಿತ ಕಮಲ್ ನಾಥ್ ಅವರಿಗೆ ಅಭಿನಂದನೆಗಳು’ ಎಂದು ಪೋಸ್ಟರ್‌ನಲ್ಲಿ ಅಭಿನಂದನೆ ಸಲ್ಲಿಸಲಾಗಿದೆ.

    ಇನ್ನೂ ಭಾನುವಾರ (ಇಂದು) ಬೆಳಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಚುನಾವಣಾ ಅಭ್ಯರ್ಥಿ ಕಮಲ್‌ನಾಥ್‌, ಬಿಜೆಪಿಐ ಆರಂಭಿಕ ಮುನ್ನಡೆಯ ನಡುವೆಯೂ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ತೆಲಂಗಾಣ, ಛತ್ತಿಸ್‌ಗಡದಲ್ಲಿ ಕಾಂಗ್ರೆಸ್‌ಗೆ ಮುನ್ನಡೆ – ಕೈ ಹಿಡಿಯುತ್ತಾ ಗ್ಯಾರಂಟಿ?

    ನಾವು ಈವರೆಗೆ ಯಾವುದೇ ಟ್ರೆಂಡ್‌ ನೋಡಿಲ್ಲ. 11 ಗಂಟೆವರೆಗೆ ಟ್ರೆಂಡ್‌ ನೋಡುವ ಅಗತ್ಯವೂ ಇಲ್ಲ. ನಾನು ಮಧ್ಯಪ್ರದೇಶದ ಮತದಾರರನ್ನು ನಂಬುತ್ತೇನೆ. ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸ ನನಗಿದೆ. ಜನ ಯಾವುದೇ ತೀರ್ಪು ಕೊಟ್ಟರೂ ನಾವು ಸ್ವೀಕರಿಸಲು ಸಿದ್ಧ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜಸ್ಥಾನದಲ್ಲಿ ಈ ಬಾರಿಯೂ ಕಾಂಗ್ರೆಸ್‌ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ: ಅಶೋಕ್‌ ಗೆಹ್ಲೋಟ್‌ ವಿಶ್ವಾಸ

    ಮಧ್ಯ ಪ್ರದೇಶದಲ್ಲಿ 230 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಭಾನುವಾರ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭಗೊಂಡಿದೆ. ಬಹುಮತಕ್ಕೆ 116 ಸ್ಥಾನಗಳ ಅಗತ್ಯವಿದೆ. ಬೆಳಗ್ಗೆ 9:35ರ ವೇಳೆಗೆ ಬಿಜೆಪಿ 138 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್‌ 91, ಇತರೇ ಪಕ್ಷಗಳು 1 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಇದನ್ನೂ ಓದಿ: ಕೈ ಗ್ಯಾರಂಟಿಯೋ – ಮೋದಿ ಜನಪ್ರಿಯತೆಯೋ; ಇಂದು 4 ರಾಜ್ಯಗಳ ಚುನಾವಣಾ ಫಲಿತಾಂಶ – ಯಾರಿಗೆ ಎಲ್ಲಿ ಸಿಗುತ್ತೆ ಅಧಿಕಾರದ ಚುಕ್ಕಾಣಿ?

  • ತೆಲಂಗಾಣ, ಛತ್ತಿಸ್‌ಗಡದಲ್ಲಿ ಕಾಂಗ್ರೆಸ್‌ಗೆ ಮುನ್ನಡೆ – ಕೈ ಹಿಡಿಯುತ್ತಾ ಗ್ಯಾರಂಟಿ?

    ತೆಲಂಗಾಣ, ಛತ್ತಿಸ್‌ಗಡದಲ್ಲಿ ಕಾಂಗ್ರೆಸ್‌ಗೆ ಮುನ್ನಡೆ – ಕೈ ಹಿಡಿಯುತ್ತಾ ಗ್ಯಾರಂಟಿ?

    ಹೈದರಾಬಾದ್‌: ನಾಲ್ಕು ರಾಜ್ಯಗಳ ಚುನಾವಣಾ ಮತ ಎಣಿಕೆ (Election Counting) ಬೆಳಗ್ಗೆ 8 ಗಂಟೆಯಿಂದ ಶುರುವಾಗಿದ್ದು, ತೆಲಂಗಾಣ, ಛತ್ತಿಸ್‌ಗಡದಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಿದೆ.

    ಬೆಳಗ್ಗೆ 9:15ರ ವೇಳೆಗೆ ತೆಲಂಗಾಣದಲ್ಲಿ ಕಾಂಗ್ರೆಸ್‌ 62, ಬಿಆರ್‌ಎಸ್‌ 36, ಬಿಜೆಪಿ 3, ಇತರೇ 6 ಸ್ಥಾನಗಳಿದ್ದರೆ, ಛತ್ತಿಸ್‌ಗಡದಲ್ಲಿ ಬಿಜೆಪಿ 30, ಕಾಂಗೆಸ್‌ 49, ಇತರೇ 1 ಸ್ಥಾನಗಳಲ್ಲಿ ಕಾಂಗ್ರೆಸ್‌ ಮುನ್ನಡೆ ಕಾಯ್ದುಕೊಂಡಿದೆ. ಇದನ್ನೂ ಓದಿ: ರಾಜಸ್ಥಾನದಲ್ಲಿ ಬಿಜೆಪಿಗೆ ಆರಂಭಿಕ ಮುನ್ನಡೆ – ಫೈಟ್‌ ನೀಡುತ್ತಿದೆ ಕಾಂಗ್ರೆಸ್‌

    ತೆಲಂಗಾಣದಲ್ಲಿ 119 ಹಾಗೂ ಛತ್ತಿಸ್‌ಗಡದಲ್ಲಿ 90 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ತೆಲಂಗಾಣದಲ್ಲಿ ಬಹುಮತಕ್ಕೆ 100 ಸ್ಥಾನಗಳು ಹಾಗೂ ಛತ್ತಿಸ್‌ಗಡದಲ್ಲಿ 46 ಸ್ಥಾನಗಳ ಅಗತ್ಯವಿದೆ. ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ: ನರೋತ್ತಮ ಮಿಶ್ರಾ

    ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಗ್ಯಾರಂಟಿಗಳು ಪ್ರಮುಖ ಪಾತ್ರ ವಹಿಸಿದ್ದವು. ಇದೇ ಗ್ಯಾರಂಟಿ ತಂತ್ರವನ್ನು ತೆಲಂಗಾಣದಲ್ಲಿಯೂ ಅನುಸರಿಸಲಾಗಿತ್ತು. ಕರ್ನಾಟಕದ ಪ್ರಮುಖ ನಾಯಕರು ತೆಲಂಗಾಣದಲ್ಲಿ ಪ್ರಚಾರ ನಡೆಸಿದ್ದರು.

    ತೆಲಂಗಾಣದಲ್ಲಿ ಕಾಂಗ್ರೆಸ್‍ನಲ್ಲಿ ಆರು ಗ್ಯಾರಂಟಿ..!
    * ಗ್ಯಾರಂಟಿ 1 – ಪ್ರತಿ ತಿಂಗಳು ಅತ್ತೆಗೆ 4,000 ರೂ. – ಸೊಸೆಗೆ 2,500 ರೂ.
    * ಗ್ಯಾರಂಟಿ 2 – ಪ್ರತಿ ಹೆಣ್ಣುಮಗುವಿನ ಖಾತೆಗೆ ಪ್ರತಿ ತಿಂಗಳು 2,500 ರೂ. (ಮಹಾಲಕ್ಷ್ಮಿ ಯೋಜನೆ)
    * ಗ್ಯಾರಂಟಿ 3 – ಪಿಂಚಣಿ ಮೊತ್ತ 2,000 ರೂ.ನಿಂದ 4,000 ರೂ.ಗೆ ಹೆಚ್ಚಳ
    * ಗ್ಯಾರಂಟಿ 4 – 500 ರೂಪಾಯಿಗೆ ಒಂದು ಗ್ಯಾಸ್ ಸಿಲಿಂಡರ್
    * ಗ್ಯಾರಂಟಿ 5 – ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ನೆರವು
    * ಗ್ಯಾರಂಟಿ 6 – ಬಡವರಿಗೆ 200 ಯೂನಿಟ್‍ವರೆಗೂ ಉಚಿತ ವಿದ್ಯುತ್

    ಎಲ್ಲಿ ಎಷ್ಟು ಮ್ಯಾಜಿಕ್ ನಂಬರ್?
    ಮಧ್ಯಪ್ರದೇಶ: ಒಟ್ಟು ಸ್ಥಾನ- 230, ಸರಳ ಬಹುಮತಕ್ಕೆ-116, ರಾಜಸ್ಥಾನ: ಒಟ್ಟು ಸ್ಥಾನ- 199, ಸರಳ ಬಹುಮತಕ್ಕೆ-100, ಛತ್ತೀಸ್ ಗಡ: ಒಟ್ಟು ಸ್ಥಾನ- 90, ಸರಳ ಬಹುಮತಕ್ಕೆ-46, ತೆಲಂಗಾಣ- ಒಟ್ಟು ಸ್ಥಾನ-119, ಸರಳ ಬಹುಮತಕ್ಕೆ-60.

  • ರಾಜಸ್ಥಾನದಲ್ಲಿ ಈ ಬಾರಿಯೂ ಕಾಂಗ್ರೆಸ್‌ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ: ಅಶೋಕ್‌ ಗೆಹ್ಲೋಟ್‌ ವಿಶ್ವಾಸ

    ರಾಜಸ್ಥಾನದಲ್ಲಿ ಈ ಬಾರಿಯೂ ಕಾಂಗ್ರೆಸ್‌ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ: ಅಶೋಕ್‌ ಗೆಹ್ಲೋಟ್‌ ವಿಶ್ವಾಸ

    ಜೈಪುರ: ರಾಜಸ್ಥಾನ (Rajasthan), ಮಧ್ಯಪ್ರದೇಶ, ತೆಲಂಗಾಣ, ಛತ್ತೀಸ್‌ಗಡ ರಾಜ್ಯಗಳಲ್ಲಿ ಯಾರು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ಚಿತ್ರಣ ಇನ್ನು ಕೆಲವೇ ಗಂಟೆಗಳಲ್ಲಿ ತಿಳಿಯಲಿದೆ. ಈ ನಡುವೆ ಚುನಾವಣಾ ಫಲಿತಾಂಶ ಪ್ರಕಟವಾಗುವುದಕ್ಕೂ ಮುನ್ನ ರಾಜಸ್ಥಾನದ ಹಾಲಿ ಸಿಎಂ ಅಶೋಕ್‌ ಗೆಹ್ಲೋಟ್‌ (Ashok Gehlot) ಈ ಬಾರಿ ಚುನಾವಣೆಯಲ್ಲೂ ಸ್ಪಷ್ಟ ಬಹುಮತದೊಂದಿಗೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಭಾನುವಾರ (ಇಂದು) 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭವಾಗುತ್ತಿದೆ. ಇದಕ್ಕೂ ಮುನ್ನ ಜೈಪುರದಲ್ಲಿರುವ ಕಾಂಗ್ರೆಸ್‌ ಪಕ್ಷದ ವಾರ್‌ರೂಮ್‌ನಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದ್ದಾರೆ. ಈ ಬಾರಿಯೂ ರಾಜಸ್ಥಾನದಲ್ಲಿ ಕಾಂಗ್ರೆಸ್‌ (Congress) ಸ್ಪಷ್ಟ ಬಹುಮತದೊಂದಿಗೆ ಗೆದ್ದು ಸರ್ಕಾರ ರಚಿಸಲಿದೆ ಎಂದು ತಿಳಿಸಿದ್ದಾರೆ.

    ಪಕ್ಷದ ಸಭೆಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಸುಖ್‌ಜಿಂದರ್ ಸಿಂಗ್ ರಾಂಧವಾ ಮತ್ತು ಪಕ್ಷದ ಮುಖ್ಯಸ್ಥ ಗೋವಿಂದ್ ಸಿಂಗ್ ದೋಟಸಾರಾ ಮೊದಲಾದವರು ಪಾಲ್ಗೊಂಡಿದ್ದರು. ಚುಣಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಶಾಸಕರನ್ನು ಸೇಫ್‌ ಮಾಡಿಕೊಳ್ಳುವ ಬಗ್ಗೆಯೂ ಚರ್ಚಿಸಲಾಯಿತು. ಇದನ್ನೂ ಓದಿ: ಬಿಜೆಪಿ ಸರ್ಕಾರವಿರೋ ಮಧ್ಯಪ್ರದೇಶದಲ್ಲಿ ಈ ಬಾರಿಗೆ ಗೆಲುವು ಯಾರಿಗೆ?

    ರಾಜಸ್ಥಾನದಲ್ಲಿ ಒಟ್ಟು 199 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ರಾಜ್ಯದಲ್ಲಿ 75.45% ರಷ್ಟು ಮತದಾನವಾಗಿದೆ, 2018 ರಲ್ಲಿ 74.71% ಮತದಾನವಾಗಿತ್ತು.

    ಎಲ್ಲಿ ಎಷ್ಟು ಮ್ಯಾಜಿಕ್ ನಂಬರ್?
    ಮಧ್ಯಪ್ರದೇಶ: ಒಟ್ಟು ಸ್ಥಾನ- 230, ಸರಳ ಬಹುಮತಕ್ಕೆ-116, ರಾಜಸ್ಥಾನ: ಒಟ್ಟು ಸ್ಥಾನ- 199, ಸರಳ ಬಹುಮತಕ್ಕೆ-100, ಛತ್ತೀಸ್ ಗಡ: ಒಟ್ಟು ಸ್ಥಾನ- 90, ಸರಳ ಬಹುಮತಕ್ಕೆ-46, ತೆಲಂಗಾಣ- ಒಟ್ಟು ಸ್ಥಾನ-119, ಸರಳ ಬಹುಮತಕ್ಕೆ-60. ಇದನ್ನೂ ಓದಿ: ಕೈ ಗ್ಯಾರಂಟಿಯೋ – ಮೋದಿ ಜನಪ್ರಿಯತೆಯೋ; ಇಂದು 4 ರಾಜ್ಯಗಳ ಚುನಾವಣಾ ಫಲಿತಾಂಶ – ಯಾರಿಗೆ ಎಲ್ಲಿ ಸಿಗುತ್ತೆ ಅಧಿಕಾರದ ಚುಕ್ಕಾಣಿ?

  • ಹಸು ಸಗಣಿ ಕೆಜಿಗೆ 2 ರೂ., ರಾಜ್ಯದ ಪ್ರತಿ ಮಗುವಿಗೂ ಇಂಗ್ಲಿಷ್‌ ಶಿಕ್ಷಣ – ರಾಜಸ್ಥಾನಕ್ಕೆ ಕಾಂಗ್ರೆಸ್‌ ಗ್ಯಾರಂಟಿ

    ಹಸು ಸಗಣಿ ಕೆಜಿಗೆ 2 ರೂ., ರಾಜ್ಯದ ಪ್ರತಿ ಮಗುವಿಗೂ ಇಂಗ್ಲಿಷ್‌ ಶಿಕ್ಷಣ – ರಾಜಸ್ಥಾನಕ್ಕೆ ಕಾಂಗ್ರೆಸ್‌ ಗ್ಯಾರಂಟಿ

    ಜೈಪುರ: ರಾಜ್ಯ ವಿಧಾನಸಭೆ ಚುನಾವಣೆ (Rajasthan Assembly Elections) ಹಿನ್ನೆಲೆ ಮತದಾರರನ್ನು ಸೆಳೆಯಲು ಕಾಂಗ್ರೆಸ್ (Congress) ತನ್ನ ಪ್ರಣಾಳಿಕೆ (Manifesto) ಬಿಡುಗಡೆ ಮಾಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪ್ರಣಾಳಿಕೆ ಬಿಡುಗಡೆ ಮಾಡಿದರು. ಪ್ರಣಾಳಿಕೆಯಲ್ಲಿ ರಾಜಸ್ಥಾನದ ಜನರಿಗೆ 7 ಗ್ಯಾರಂಟಿ (Guarantee) ಘೋಷಿಸಿದ್ದು ಜೊತೆಗೆ ಜಾತಿ ಸಮೀಕ್ಷೆ ನಡೆಸಿ ಬಿಡುಗಡೆ ಮಾಡುವ ಭರವಸೆ ನೀಡಲಾಗಿದೆ.

    ಕರ್ನಾಟಕದ ಮಾದರಿಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ವಾರ್ಷಿಕ 10,000 ರೂ. ನೀಡುವುದಾಗಿ ಕಾಂಗ್ರೆಸ್ ಹೇಳಿದೆ. ಗೊಧನ್ ಯೋಜನೆಯಡಿ ಸರ್ಕಾರವು ಹಸುವಿನ ಸಗಣಿ ಪ್ರತಿ ಕೆಜಿಗೆ 2 ರೂ.ಯಲ್ಲಿ ಖರೀದಿ ಮಾಡಲಾಗುವುದು. ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್/ಟ್ಯಾಬ್ಲೆಟ್ ವಿತರಿಸಲಾಗುವುದು ಎಂದು ಹೇಳಿದೆ.

    ಚಿರಂಜೀವಿ ವಿಪತ್ತು ಪರಿಹಾರ ವಿಮೆ ಯೋಜನೆಯಡಿ ಪ್ರತಿಯೊಬ್ಬರಿಗೂ 15 ಲಕ್ಷ ರೂ. ವಿಮೆ ನೀಡಲಾಗುವುದು, 500 ರೂ.ಯಲ್ಲಿ ಗ್ಯಾಸ್ ಸಿಲಿಂಡರ್ ವಿತರಣೆ, ರಾಜ್ಯದ ಪ್ರತಿಯೊಂದು ಮಗುವಿಗೂ ಇಂಗ್ಲಿಷ್ ಶಿಕ್ಷಣ ನೀಡಲಾಗುವುದು, ಹಳೆ ಪಿಂಚಣಿ ವ್ಯವಸ್ಥೆ ಜಾರಿ ಮಾಡುವ ಭರವಸೆ ಕಾಂಗ್ರೆಸ್ ನೀಡಿದೆ. ಈ ಗ್ಯಾರಂಟಿ ಹೊರತಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಜಾತಿ ಸಮೀಕ್ಷೆ ನಡೆಸುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಪಂಚಾಯತ್ ಮಟ್ಟದಲ್ಲಿ ನೇಮಕಾತಿ ಮತ್ತು ಇತರ ಕಲ್ಯಾಣ ಯೋಜನೆಗಳಿಗೆ ಹೊಸ ಯೋಜನೆ ಭರವಸೆ ನೀಡಿತು.

    ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ ಅಶೋಕ್ ಗೆಹ್ಲೋಟ್, ನಾವು ಜನರಿಂದ ಸಲಹೆಗಳನ್ನು ಪಡೆದು ಪ್ರಣಾಳಿಕೆ ರಚಿಸಿದ್ದೇವೆ. ಕಳೆದ ಬಾರಿ ನೀಡಿದ ಭರವಸೆಯಲ್ಲಿ 96% ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಹೇಳಿದರು. ಉತ್ತರ ಭಾರತದ ರಾಜ್ಯಗಳಲ್ಲಿ ಆರ್ಥಿಕ ಅಭಿವೃದ್ಧಿ ದರದಲ್ಲಿ ರಾಜಸ್ಥಾನ ಮೊದಲ ಸ್ಥಾನದಲ್ಲಿದೆ. ರಾಜಸ್ಥಾನದ ಆರ್ಥಿಕತೆಯು ವರ್ಷಾಂತ್ಯದ ವೇಳೆಗೆ 15 ಲಕ್ಷ ರೂ. ಆಗಲಿದೆ. 2030ರ ವೇಳೆಗೆ 30 ಲಕ್ಷ ಕೋಟಿ ರೂ. ಇರಲಿದೆ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರು ಕಂಬಳಕ್ಕೆ ಬಿಜೆಪಿ ಸಂಸದ ಬ್ರಿಜ್ ಭೂಷಣ್‌ಗೆ ಆಹ್ವಾನ – ಆಹ್ವಾನಿಸಿದ್ದಕ್ಕೆ ಸ್ಪಷ್ಟನೆ ಕೊಟ್ಟ ಕೈ ಶಾಸಕ

    ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅವರು ನಮ್ಮನ್ನು ನಿಂದಿಸಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ. ರಾಹುಲ್ ಅವರನ್ನು ನಿಂದಿಸುತ್ತಿದ್ದರು, ನನ್ನನ್ನು ನಿಂದಿಸುತ್ತಿದ್ದರು. ಈಗ ಅಶೋಕ್ ಗೆಹ್ಲೋಟ್ ಅವರನ್ನೂ ನಿಂದಿಸಲು ಆರಂಭಿಸಿದ್ದಾರೆ. ನಾನು ಅವರ ತಂದೆಯನ್ನು ನಿಂದಿಸಿದ್ದೇನೆ ಎಂದು ಅವರು ಹೇಳುತ್ತಾರೆ. ನಾನೇಕೆ ಹಾಗೆ ಮಾಡಲಿ ಎಂದು ಪ್ರಶ್ನಿಸಿದರು.

    ಬಿಜೆಪಿ ನಮ್ಮ ಯೋಜನೆಗಳನ್ನು ನಕಲು ಮಾಡುತ್ತಿದೆ. ಆದರೆ ನೀವು ಏನೇ ಮಾಡಿದರೂ ರಾಜಸ್ಥಾನದಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ. ಯಾವುದೇ ಷರತ್ತಿನಲ್ಲಿಯೂ ರಾಜಸ್ಥಾನದಲ್ಲಿ ಜಾತಿ ಗಣತಿ ನಡೆಯುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಇದನ್ನೂ ಓದಿ: ಮೋದಿ ಡೀಪ್‌ ಫೇಕ್‌ ವಿಡಿಯೋ ವೈರಲ್‌ – ಗರ್ಬಾ ನೃತ್ಯ ಮಾಡಿದ್ದು ನಾನೇ ಎಂದ ವ್ಯಕ್ತಿ

  • ಉದಯಪುರ ಟೈಲರ್ ಹಂತಕರಿಗೆ ಬಿಜೆಪಿ ಜೊತೆ ನಂಟಿದೆ: ಸಿಎಂ ಅಶೋಕ್ ಗೆಹ್ಲೋಟ್

    ಉದಯಪುರ ಟೈಲರ್ ಹಂತಕರಿಗೆ ಬಿಜೆಪಿ ಜೊತೆ ನಂಟಿದೆ: ಸಿಎಂ ಅಶೋಕ್ ಗೆಹ್ಲೋಟ್

    ಜೈಪುರ: ಉದಯಪುರದಲ್ಲಿ ಟೈಲರ್ (Udaipur Tailor) ಕನ್ಹಯ್ಯಾ ಲಾಲ್ (Kanhaiya Lal) ಅವರನ್ನು ಭೀಕರವಾಗಿ ಹತ್ಯೆ ಮಾಡಿದ್ದ ಇಬ್ಬರು ಕೊಲೆಗಡುಕರು ಬಿಜೆಪಿಯೊಂದಿಗೆ (BJP) ನಂಟು ಹೊಂದಿದ್ದಾರೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಆರೋಪಿಸಿದ್ದಾರೆ.

    ಭಾನುವಾರ ಜೋಧ್‌ಪುರದಲ್ಲಿ ಪ್ರಚಾರದ ಜಾಥಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೆಹ್ಲೋಟ್, ಉದಯಪುರ ಘಟನೆಗೂ ಕೆಲ ದಿನಗಳ ಮೊದಲು ಬೇರೊಂದು ಪ್ರಕರಣದಲ್ಲಿ ಪೊಲೀಸರು ಇವರಿಬ್ಬರನ್ನು ಬಂಧಿಸಿದ್ದರು. ಅವರನ್ನು ಬಿಡುಗಡೆ ಮಾಡಲು ಬಿಜೆಪಿ ನಾಯಕರು ಪೊಲೀಸ್ ಠಾಣೆಗೆ ಬಂದಿದ್ದರು ಎಂದು ಗೆಹ್ಲೋಟ್ ಗಂಭೀರ ಆರೋಪ ಮಾಡಿದ್ದಾರೆ.

     

    ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬದಲಿಗೆ ರಾಜಸ್ಥಾನದ ಪೊಲೀಸರ ವಿಶೇಷ ಕಾರ್ಯಾಚರಣೆಯ ತಂಡ (SOG) ಈ ಪ್ರಕರಣವನ್ನು ನಿರ್ವಹಿಸಿದ್ದರೆ ತನಿಖೆ ತಾರ್ಕಿಕವಾಗಿ ಸಾಗುತ್ತಿತ್ತು ಎಂದು ಹೇಳಿದರು. ಇದನ್ನೂ ಓದಿ: ಫೋಟೋ ಶೂಟ್ ವೇಳೆ ಕಿರಿಕ್ – ಯುವಕನ ಇರಿದು ಕೊಂದ ಕಿಡಿಗೇಡಿಗಳು

    ಕಳೆದ ವರ್ಷ ಜೂನ್ 28 ರಂದು ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ವಿಷಯವನ್ನು ಪೋಸ್ಟ್ ಮಾಡಿದ್ದಕ್ಕೆ ಕನ್ಹಯ್ಯಾ ಲಾಲ್ ಅವರನ್ನು ಇಬ್ಬರು ದುಷ್ಕರ್ಮಿಗಳು ಹಗಲು ಹೊತ್ತಿನಲ್ಲಿಯೇ ಶಿರಚ್ಛೇದ ಮಾಡಿದ್ದರು. ಮಾತ್ರವಲ್ಲದೇ ಕೃತ್ಯದ ವೀಡಿಯೋವನ್ನು ಕೂಡಾ ಮಾಡಿದ್ದು, ಭಯಾನಕ ವೀಡಿಯೋ ಕಂಡು ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಯಿತು.

    ಈ ಪ್ರಕರಣವನ್ನು ಆರಂಭದಲ್ಲಿ ಉದಯಪುರದ ಧನ್ಮಂಡಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿತ್ತು. ಆದರೆ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ 2022ರ ಜೂನ್ 29 ರಂದು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿತ್ತು.

    ಇದೊಂದು ದುರದೃಷ್ಟಕರ ಘಟನೆಯಾಗಿದ್ದು, ನಾನು ಈ ವಿಷಯವನ್ನು ತಿಳಿದ ತಕ್ಷಣ ನಿಗದಿಯಾಗಿದ್ದ ಕಾರ್ಯಕ್ರಮಗಳನ್ನು ರದ್ದುಗೊಳಿಸಿ, ಉದಯಪುರಕ್ಕೆ ಹೊರಟಿದ್ದೆ. ಆದರೆ ಉದಯಪುರ ಘಟನೆಯ ಬಗ್ಗೆ ತಿಳಿದ ನಂತರವೂ ಬಿಜೆಪಿಯ ಹಲವಾರು ಉನ್ನತ ನಾಯಕರು ಹೈದರಾಬಾದ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು ಎಂದು ಗೆಹ್ಲೋಟ್ ಆರೋಪಿಸಿದ್ದಾರೆ.

    ಘಟನೆ ನಡೆದ ದಿನವೇ ಎನ್‌ಐಎ ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ರಾಜ್ಯ ಸರ್ಕಾರ ಇದಕ್ಕೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಏನು ಕ್ರಮ ಕೈಗೊಂಡಿದೆ ಎಂಬುದು ಯಾರಿಗೂ ತಿಳಿದಿಲ್ಲ. ನಮ್ಮ ಎಸ್‌ಒಜಿ ಪ್ರಕರಣವನ್ನು ಮುಂದುವರಿಸಿದ್ದರೆ ಅಪರಾಧಿಗಳನ್ನು ಇಷ್ಟು ಹೊತ್ತಿಗೆ ನ್ಯಾಯಾಂಗಕ್ಕೆ ತರಲಾಗುತ್ತಿತ್ತು ಎಂದು ಸಿಎಂ ಗೆಹ್ಲೋಟ್ ಹೇಳಿದ್ದಾರೆ. ಇದನ್ನೂ ಓದಿ: ಗುಟುಕು ಮದ್ಯ ಕೊಡಲು ನಿರಾಕರಿಸಿದ್ದಕ್ಕೆ ವೈನ್ ಶಾಪ್‌ಗೇ ಬೆಂಕಿ ಇಟ್ಟ ಭೂಪ

    ಘಟನೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಕೃತ್ಯದ ವೀಡಿಯೋವನ್ನು ಪೋಸ್ಟ್ ಮಾಡಿದ್ದ ಕೊಲೆಗಡುಕರು ತಮ್ಮನ್ನು ತಾವು ರಿಯಾಜ್ ಅಖ್ತರಿ ಮತ್ತು ಘೌಸ್ ಮೊಹಮ್ಮದ್ ಎಂದು ಪರಿಚಯ ಮಾಡಿಕೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರಿಗೂ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದರು. ಇದು ಬೆಳಕಿಗೆ ಬರುತ್ತಲೇ ಕೆಲವೇ ಗಂಟೆಗಳಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು.

  • ಸಿಎಂ ಸ್ಥಾನ ಬಿಟ್ಟುಕೊಡಲು ಸಿದ್ಧ, ಆದರೆ ಕುರ್ಚಿ ಬಿಡ್ತಿಲ್ಲ: ಅಶೋಕ್ ಗೆಹ್ಲೋಟ್

    ಸಿಎಂ ಸ್ಥಾನ ಬಿಟ್ಟುಕೊಡಲು ಸಿದ್ಧ, ಆದರೆ ಕುರ್ಚಿ ಬಿಡ್ತಿಲ್ಲ: ಅಶೋಕ್ ಗೆಹ್ಲೋಟ್

    ನವದೆಹಲಿ: ಮುಖ್ಯಮಂತ್ರಿ ಉದ್ದೆಯನ್ನು ಬಿಟ್ಟು ಕೊಡಲು ನಾನು ತಯಾರಿದ್ದೇನೆ. ಆದರೆ ನನ್ನನ್ನು ಕುರ್ಚಿ ಬಿಡುತ್ತಿಲ್ಲ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಹೇಳುವ ಮೂಲಕ ಸಚಿನ್ ಪೈಲಟ್‍ಗೆ (Sachin Pilot) ಟಾಂಗ್ ನೀಡಿದ್ದಾರೆ.

    ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳಾ ಬೆಂಬಲಿಗರೊಬ್ಬರು ತಾನು 4ನೇ ಬಾರಿಗೆ ಮುಖ್ಯಮಂತ್ರಿಯಾಗಬೇಕು ಎಂದು ಬಯಸುವುದಾಗಿ ಹೇಳಿದ್ದರು. ಅದಕ್ಕೆ ನಾನು ಅವರಿಗೆ ಈ ರೀತಿ ಹೇಳಿದೆ. ನಾನು ಮುಖ್ಯಮಂತ್ರಿ ಸ್ಥಾನ ತೊರೆಯಲು ರೆಡಿಯಿದ್ದೇನೆ, ಆದರೆ ಈ ಹುದ್ದೆಯು ನನ್ನನ್ನು ಹೋಗಲು ಬಿಡುತ್ತಿಲ್ಲ ಎಂದು ಹೇಳಿದೆ ಅಂತ ತಿಳಿಸಿದರು.

    ಪಕ್ಷ ನನ್ನಲ್ಲಿರುವ ವಿಶೇಷತೆಗಳನ್ನು ಗುರುತಿಸಿ ಮೂರು ಬಾರಿ ರಾಜ್ಯವನ್ನು ಮುನ್ನಡೆಸಲು ಅವಕಾಶ ಮಾಡಿಕೊಟ್ಟಿದೆ. ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರ ಎಲ್ಲರಿಗೂ ಒಪ್ಪಿಗೆಯಾಗುತ್ತದೆ. ಬಿಜೆಪಿ ಕುತಂತ್ರ ರಾಜಕಾರಣದಿಂದಾಗಿ ಕಾಂಗ್ರೆಸ್‍ನಲ್ಲಿ ಒಳಜಗಳವಾಗುತ್ತಿದೆ ಹೊರತು ಬೇರೇನಿಲ್ಲ. ಕಾಂಗ್ರೆಸ್‍ನಲ್ಲಿ (Congress) ಒಗ್ಗಟ್ಟಿದ್ದು, ಅದನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಅದು ಸಾಬೀತಾಗಲಿದೆ ಎಂದು ಹೇಳಿದರು. ಇದನ್ನೂ ಓದಿ: ದೇವೇಗೌಡರು ನನ್ನ ತಂದೆ ಸಮಾನ ಅಂದುಕೊಂಡಿದ್ದೆ, ನನ್ನನ್ನ ಕೆಣಕಿದ್ದೀರಿ ಪರಿಣಾಮ ಕಾದು ನೋಡಿ: ಇಬ್ರಾಹಿಂ ಎಚ್ಚರಿಕೆ

    ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದಂತೆ ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ನಡುವೆ ಮುಸುಕಿನ ಗುದ್ದಾಟ ನಡೆದಿತ್ತು. ಈ ಗುದ್ದಾಟವು ಬಹುತೇಕ ರಾಜಸ್ಥಾನ ಸರ್ಕಾರವನ್ನು ಉರುಳಿಸುವ ಹಂತಕ್ಕೆ ಬಂದಿತ್ತು. ಈ ವೇಳೆ ಹೈಕಮಾಂಡ್ ಮಧ್ಯಪ್ರವೇಶ ಮಾಡಿದ್ದರಿಂದ ಸರ್ಕಾರ ಉಳಿದುಕೊಂಡಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]