Tag: Ashneer Grover

  • ಭಾರತ್‍ಪೇ ವಂಚನೆ ಪ್ರಕರಣ: ಕಂಪನಿಯ ಮಾಜಿ ಅಧಿಕಾರಿ ಅರೆಸ್ಟ್

    ಭಾರತ್‍ಪೇ ವಂಚನೆ ಪ್ರಕರಣ: ಕಂಪನಿಯ ಮಾಜಿ ಅಧಿಕಾರಿ ಅರೆಸ್ಟ್

    ನವದೆಹಲಿ: ಕಂಪನಿಯ ಹಣವನ್ನು ದುರುಪಯೋಗಪಡಿಸಿಕೊಂಡ ಪ್ರಕರಣಕ್ಕೆ (BharatPe Fraud Case) ಸಂಬಂಧಿಸಿದಂತೆ ಭಾರತ್‍ಪೇ ಸಹ-ಸಂಸ್ಥಾಪಕ ಅಶ್ನೀರ್ ಗ್ರೋವರ್ (Ashneer Grover) ಅವರ ಕುಟುಂಬದ ಸದಸ್ಯ ದೀಪಕ್ ಗುಪ್ತಾ ಅವರನ್ನು ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು) ಬಂಧಿಸಿದೆ.

    ಈ ಪ್ರಕರಣದಲ್ಲಿ ಆರೋಪಿ ದೀಪಕ್ ಗುಪ್ತಾನನ್ನು ವಿಚಾರಣೆಗೊಳಪಡಿಸಲಾಗಿದ್ದು, ಕಾನೂನಿನ ಪ್ರಕಾರ ಬಂಧಿಸಲಾಗಿದೆ. ಪ್ರಕರಣ ನಡೆಯುವ ವೇಳೆ ಅವರು ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಇಒಡಬ್ಲ್ಯೂ ಉಪ ಪೊಲೀಸ್ ಆಯುಕ್ತ ರಾಜಾ ಬಂಥಿಯಾ ಹೇಳಿದ್ದಾರೆ. ಇದನ್ನೂ ಓದಿ: ಶೆಡ್‌ಗೆ ಕರೆದೊಯ್ದು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ – 6 ಮಂದಿಗೆ 20 ವರ್ಷ ಕಠಿಣ ಶಿಕ್ಷೆ

    ಮೇ 2023 ರಲ್ಲಿ ಅಶ್ನೀರ್ ಗ್ರೋವರ್, ಅವರ ಪತ್ನಿ ಮಾಧುರಿ ಜೈನ್ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ದಾಖಲಿಸಲಾದ ಎಫ್‍ಐಆರ್‍ನಲ್ಲಿ ಮಾಧುರಿಯವರ ಸಹೋದರಿಯ ಪತಿ ದೀಪಕ್ ಗುಪ್ತಾ ಅವರನ್ನು ಹೆಸರಿಸಲಾಗಿತ್ತು.

    ಇದಕ್ಕೂ ಮುನ್ನ ಈ ಪ್ರಕರಣದ ಮತ್ತೊಬ್ಬ ಆರೋಪಿ ಅಮಿತ್ ಬನ್ಸಾಲ್ ಅವರನ್ನೂ ಇಒಡಬ್ಲ್ಯು ಬಂಧಿಸಿತ್ತು. ಈ ಪ್ರಕರಣದಲ್ಲಿ ಗುಪ್ತಾ ಭಾಗಿಯಾಗಿರುವುದು ಆರೋಪಿ ಅಮಿತ್ ಬನ್ಸಾಲ್ ವಿಚಾರಣೆಯಿಂದ ದೃಢವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಅಶ್ನೀರ್ ಗ್ರೋವರ್ (ಭಾರತ್‍ಪೇ ಸ್ಥಾಪಕ ಮತ್ತು ಮಾಜಿ ನಿರ್ದೇಶಕ), ಅವರ ಪತ್ನಿ ಮಾಧುರಿ ಜೈನ್ ಗ್ರೋವರ್ ಮತ್ತು ಇತರ ಅಧಿಕಾರಿಗಳು ಕಂಪನಿಯ ಹಣವನ್ನು ದುರುಪಯೋಗಪಡಿಸಿಕೊಳ್ಳುವಲ್ಲಿ ವಿವಿಧ ನಕಲಿ ದಾಖಲೆಗಳ ಬಳಸಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಕಂಪನಿಗೆ 81 ಕೋಟಿ ರೂ. (ಅಂದಾಜು) ನಷ್ಟವನ್ನು ಉಂಟುಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

    ಭಾರತ್‍ಪೇ ಡಿಸೆಂಬರ್ 2022 ರಲ್ಲಿ ಅಶ್ನೀರ್ ಗ್ರೋವರ್, ಮಾಧುರಿ ಗ್ರೋವರ್, ಶ್ವೇತಾಂಕ್ ಜೈನ್, ಸುರೇಶ್ ಜೈನ್ ಮತ್ತು ದೀಪಕ್ ಗುಪ್ತಾ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿತ್ತು. ಇದನ್ನೂ ಓದಿ: Jammu & Kashmir | 40 ಅಡಿ ಆಳದ ಕಂದಕಕ್ಕೆ ಉರುಳಿದ ಸೇನೆಯ ಬಸ್‌ – ಮೂವರು ಯೋಧರು ದುರ್ಮರಣ

  • KGF ನಟಿಯ ಬಿಕಿನಿ ಫೋಟೋ ನೋಡಿದ್ದಕ್ಕೆ ಹೆಂಡ್ತಿ ರಿಯಾಕ್ಷನ್ ಬಗ್ಗೆ ಬಾಯ್ಬಿಟ್ಟ ಅಶ್ನೀರ್ ಗ್ರೋವರ್

    KGF ನಟಿಯ ಬಿಕಿನಿ ಫೋಟೋ ನೋಡಿದ್ದಕ್ಕೆ ಹೆಂಡ್ತಿ ರಿಯಾಕ್ಷನ್ ಬಗ್ಗೆ ಬಾಯ್ಬಿಟ್ಟ ಅಶ್ನೀರ್ ಗ್ರೋವರ್

    ಶಾರ್ಕ್ ಟ್ಯಾಂಕ್ ಇಂಡಿಯಾ ಖ್ಯಾತಿಯ ಉದ್ಯಮಿ ಅಶ್ನೀರ್ ಗ್ರೋವರ್ (Ashneer Grover) ಅವರು ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಖಾಸಗಿ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ‘ಕೆಜಿಎಫ್’ (KGF) ಬ್ಯೂಟಿ ಮೌನಿ ರಾಯ್ (Mouni Roy) ಅವರನ್ನ ಸೋಷಿಯಲ್ ಮೀಡಿಯಾದಲ್ಲಿ ಅನ್ ಫಾಲೋವ್ ಮಾಡಿದ್ಯಾಕೆ ಎಂದು ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.

     

    View this post on Instagram

     

    A post shared by Ashneer Grover (@ashneer.grover)

    ಉದ್ಯಮಿ ಅಶ್ನೀರ್ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್. ಉದ್ಯಮದ ಜೊತೆ ಕುಟುಂಬಕ್ಕೂ ಹೆಚ್ಚು ಆದ್ಯತೆ ನೀಡುತ್ತಾರೆ. ಇತ್ತೀಚೆಗೆ ಅವರು ಪತ್ನಿ ಮಾಧುರಿ ಜೊತೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಅವರು ಮೌನಿ ರಾಯ್ ಬಿಕಿನಿ ಫೋಟೋಗೆ ಲೈಕ್ ಮಾಡಿದ್ದಕ್ಕೆ ಪತ್ನಿಯ ಖಡಕ್ ಕ್ಲಾಸ್ ಬಗ್ಗೆ ಬಾಯ್ಬಿಟ್ಟಿದ್ದಾರೆ.

    ದಾಂಪತ್ಯ ಜೀವನದ ಬಗ್ಗೆ ಅಶ್ನೀರ್‌ಗೆ ಪ್ರಶ್ನೆ ಕೇಳಲಾಯಿತು. ಈ ವೇಳೆ ಅಶ್ನೀರ್ ಅವರು ಪತ್ನಿ ಬಗ್ಗೆ ಭಯ ಇದೆ ಎಂಬುದನ್ನು ಹೇಳಿಕೊಂಡರು. ನನಗೆ ಪತ್ನಿ ಬಗ್ಗೆ ಭಾರೀ ಭಯ ಇದೆ. ಒಂದು ಘಟನೆ ಹೇಳುತ್ತೇನೆ. ನಾನು ಇನ್ಸ್ಟಾಗ್ರಾಂನಲ್ಲಿ ತುಂಬಾನೇ ಕಡಿಮೆ ಜನರನ್ನು ಫಾಲೋ ಮಾಡುತ್ತೇನೆ. ಮೌನಿ ರಾಯ್ ಅವರನ್ನು ಕೂಡ ಹಿಂಬಾಲಿಸುತ್ತಿದ್ದೆ. ಅವರು ಬಿಕಿನಿಯಲ್ಲಿ ಫೋಟೋ ಹಾಕಿದ್ದರು. ನಾನು ಅದಕ್ಕೆ ಲೈಕ್ ಒತ್ತಿದೆ ಎಂದು ಅಶ್ನೀರ್ ಹೇಳುತ್ತಿದ್ದಂತೆ ಅವರ ಪತ್ನಿ ಮಾಧುರಿ, ಲೈಕ್ ಒತ್ತುವ ಅವಶ್ಯಕತೆ ಇತ್ತೇ ಎಂದು ಪ್ರಶ್ನೆ ಮಾಡಿದ್ದಾರೆ. ಈ ವಿಚಾರವಾಗಿ ನಮ್ಮಿಬ್ಬರ ನಡುವೆ ಜಗಳ ಆಯಿತು. ಇದನ್ನೂ ಓದಿ:ಮಂಗಳೂರಿನ ಕಾಡಿನಲ್ಲಿ ನಟಿ ಪೂಜಾ ಹೆಗ್ಡೆ ಸುತ್ತಾಟ

    ನಮ್ಮ ಜಗಳ ಆದಮೇಲೆ ಮೌನಿ ರಾಯ್ ಅವರನ್ನ ಅನ್‌ಫಾಲೋ ಮಾಡಿದೆ. ಬಳಿಕ ದಿಶಾ ಪಠಾಣಿ (Disha Patani)  ಸೇರಿದಂತೆ 15-20 ಹೀರೋಯಿನ್‌ಗಳನ್ನ ಅಶ್ನೀರ್ ಅನ್ ಫಾಲೋವ್ ಮಾಡಿದ್ರಂತೆ. ಈ ಬಗ್ಗೆ ಪತ್ನಿ ಮುಂದೆಯೇ ಅಶ್ನೀರ್ ಸಂದರ್ಶನದಲ್ಲಿ ಹೇಳಿದ್ದಾರೆ.

  • ಭಾರತ್‍ಪೇ ಎಂಡಿ ಸ್ಥಾನಕ್ಕೆ ಅಶ್ನೀರ್ ಗ್ರೋವರ್ ರಾಜೀನಾಮೆ

    ಭಾರತ್‍ಪೇ ಎಂಡಿ ಸ್ಥಾನಕ್ಕೆ ಅಶ್ನೀರ್ ಗ್ರೋವರ್ ರಾಜೀನಾಮೆ

    ನವದೆಹಲಿ: ಭಾರತ್‍ಪೇಯ ಸಹ-ಸಂಸ್ಥಾಪಕ ಅಶ್ನೀರ್ ಗ್ರೋವರ್ ಅವರು ಭಾರತೀಯ ಫಿನ್‍ಟೆಕ್ ಯುನಿಕಾರ್ನ್‍ನ ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    ಕಳೆದ ವಾರ ಅಶ್ನೀರ್ ಗ್ರೋವರ್ ಅವರ ಪತ್ನಿ ಮಾಧುರಿ ಜೈನ್ ಗ್ರೋವರ್ ಅವರನ್ನು ಹಣಕಾಸು ಅಕ್ರಮಗಳ ಆರೋಪದ ಮೇಲೆ ವಜಾಗೊಳಿಸಲಾಗಿತ್ತು ಮತ್ತು ಅವರ ಬಳಿ ಇದ್ದ ಇಎಸ್‍ಒಪಿಗಳನ್ನು ರದ್ದುಗೊಳಿಸಲಾಗಿತ್ತು.

    Madhuri Jain Grover

    ಈ ವಿಚಾರವಾಗಿ ತುರ್ತು ಮಧ್ಯಸ್ಥಿಕೆ ಮನವಿಯನ್ನು ಆಡಳಿತ ಪರಿಶೀಲನೆ ನಡೆಸುವ ಸಂಸ್ಥೆ ನಿರ್ಧಾರವನ್ನು ಸಿಂಗಾಪೂರ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ((SIAC) ತಿರಸ್ಕರಿಸಿದ ಬಳಿಕ ಅಶ್ನೀರ್ ಗ್ರೋವರ್ ರಾಜೀನಾಮೆ ನೀಡುವ ನಿರ್ಧಾರವನ್ನು ಕೈಗೊಂಡಿದ್ದಾರೆ. ಇದನ್ನೂ ಓದಿ: ಉಕ್ರೇನ್ ಬಂಕರ್‌ನ ಕರಾಳ ಪರಿಸ್ಥಿತಿ ಬಿಚ್ಚಿಟ್ಟ ರಾಯಚೂರು ವಿದ್ಯಾರ್ಥಿ

    ಮಂಡಳಿಯನ್ನು ಉದ್ದೇಶಿಸಿ ಅಶ್ನೀರ್ ಗ್ರೋವರ್ ಅವರು ಬರೆದಿರುವ ರಾಜೀನಾಮೆ ಪತ್ರದಲ್ಲಿ ಕೆಲವು ವ್ಯಕ್ತಿಗಳು ನನ್ನನ್ನು ಗುರಿಯಾಗಿಸಿಕೊಂಡಿದ್ದಾರೆ ಮತ್ತು ಅತ್ಯಂತ ಅವಮಾನಕರ ರೀತಿಯಲ್ಲಿ ನಿಂದಿಸಿ, ನಡೆಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    Ashneer Grover

    ನಾನೇ ಸ್ಥಾಪಿಸಿದ ಕಂಪೆನಿಗೆ ಬಲವಂತವಾಗಿ ರಾಜೀನಾಮೆ ಸಲ್ಲಿಸಿರುವಂತೆ ಮಾಡಿರುವುದಕ್ಕೆ ಭಾರವಾದ ಹೃದಯದಿಂದ ರಾಜೀನಾಮೆ ಪತ್ರವನ್ನು ಬರೆಯುತ್ತಿದ್ದೇನೆ. ಇಂದು ಈ ಕಂಪನಿಯು ಫಿನ್‍ಟೆಕ್ ಜಗತ್ತಿನಲ್ಲಿ ನಾಯಕನಾಗಿ ನಿಂತಿದೆ ಎಂದು ನಾನು ತಲೆ ಎತ್ತಿ ಹೇಳುತ್ತೇನೆ. 2022 ರ ಆರಂಭದಿಂದಲೂ ದುರದೃಷ್ಟವಶಾತ್ ನನಗೆ ಮತ್ತು ನನ್ನ ಕುಟುಂಬದಆಧಾರರಹಿತವಾಗಿ ಮತ್ತು ಗುರಿ ಮಾಡಿಕೊಂಡು ದಾಳಿ ನಡೆಯುತ್ತಿದೆ. ಅಲ್ಲದೇ ಕಂಪನಿ ವರ್ಚಸ್ಸಿಗೂ ಘಾಸಿ ಮಾಡಲು ಸಿದ್ಧರಾಗಿದ್ದಾರೆ. ಆದರೆ ಮೇಲ್ನೋಟಕ್ಕೆ ಕಂಪನಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿರುವಂತೆ ಕಾಣಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನ ಶಾಲಾ- ಕಾಲೇಜುಗಳ ಮೇಲೆ ರಷ್ಯಾದಿಂದ ಫಿರಂಗಿ ದಾಳಿ

    ಭಾರತೀಯ ಉದ್ಯಮಶೀಲತೆ ಮುಖವಾಗಿ ಮತ್ತು ಭಾರತೀಯ ಯುವಕರಿಗೆ ತಮ್ಮ ಸ್ವಂತ ವ್ಯವಹಾರಗಳನ್ನು ಆರಂಭಿಸಲು ಸ್ಫೂರ್ತಿಯಾಗಿ ಆಚರಿಸುವುದರಿಂದ, ನಾನು ಈಗ ಸ್ವಂತ ಹೂಡಿಕೆದಾರರು ಮತ್ತು ನಿರ್ವಹಣೆ ವಿರುದ್ಧ ಸುದೀರ್ಘ, ಏಕಾಂಗಿ ಹೋರಾಟವನ್ನು ಮಾಡುತ್ತಿದ್ದೇನೆ. ಆದರೆ ದುರದೃಷ್ಟವಶಾತ್ ಈ ಯುದ್ಧದಲ್ಲಿ ಭಾರತ್‍ಪೇ ನಿಜವಾಗಿಯೂ ಅಪಾಯದಲ್ಲಿದೆ ಎಂಬುದನ್ನು ಆಡಳಿತವು ಕಳೆದುಕೊಂಡಿದೆ ಎಂದಿದ್ದಾರೆ.