Tag: Ashley St. Clair

  • 4ನೇ ಮಗುವಿನ ತಾಯಿಯಾದ ಶಿವೊನ್‌ ಜಿಲಿಸ್‌ – 14ನೇ ಮಗುವಿಗೆ ಅಪ್ಪನಾದ ಎಲಾನ್‌ ಮಸ್ಕ್‌

    4ನೇ ಮಗುವಿನ ತಾಯಿಯಾದ ಶಿವೊನ್‌ ಜಿಲಿಸ್‌ – 14ನೇ ಮಗುವಿಗೆ ಅಪ್ಪನಾದ ಎಲಾನ್‌ ಮಸ್ಕ್‌

    ವಾಷಿಂಗ್ಟನ್‌: ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ (Elon Musk) ಅವರ ಪತ್ನಿ ಶಿವೊನ್‌ ಜಿಲಿಸ್ (Shivon Zilis) ತಮ್ಮ ನಾಲ್ಕನೇ ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಮಸ್ಕ್‌ 14ನೇ ಮಗುವಿನ ತಂದೆಯಾಗಿದ್ದಾರೆ.

    ಸೆಲ್ಡಾನ್ ಲೈಕರ್ಗಸ್ ಹೆಸರಿನ ಗಂಡು ಮಗುವಿಗೆ ಜನ್ಮ ನೀಡಿದ್ದು ಈ ಸಂತಸವನ್ನು ತಮ್ಮ ಎಕ್ಸ್‌ ಖಾತೆಯಲ್ಲೂ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಎಲಾನ್‌ ಮಸ್ಕ್‌ ಅವರ 13ನೇ ಮಗುವಿಗೆ ಜನ್ಮ ನೀಡಿದ್ದೇನೆ: ಆಶ್ಲೇ ಹೇಳಿಕೆಗೆ ಮೌನ ಮುರಿದ ಮಸ್ಕ್‌

    ಶಿವೊನ್‌ ಜಿಲಿಸ್‌ ತನಗೆ 4ನೇ ಗಂಡು ಮಗು ಯಾವಾಗ ಜನಿಸಿದ್ದು ಎಂಬದನ್ನು ಬಹಿರಂಗಪಡಿಸದಿದ್ದರೂ ವಿಷಯವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಎಕ್ಸ್‌ನಲ್ಲೇ ಪ್ರತಿಕ್ರಿಯಿಸಿರುವ ಮಸ್ಕ್‌ ಲವ್‌ ಎಮೋಜಿಯೊಂದಿಗೆ ಕಾಮೆಂಟ್‌ ಮಾಡಿದ್ದಾರೆ.

    ಶಿವೊನ್‌ ಜಿಲಿಸ್‌ 2021ರ ನವೆಂಬರ್‌ನಲ್ಲಿ ಮೊದಲ ಬಾರಿಗೆ ಅವಳಿ ಮಕ್ಕಳಿಗೆ (ಹೆಸರು- ಸ್ಟ್ರೈಡರ್ ಮತ್ತು ಅಜುರೆ) ಜನ್ಮ ನೀಡಿದ್ದರು. ಆದ್ರೆ ಅದನ್ನು ರಹಸ್ಯವಾಗಿ ಮುಚ್ಚಿಟ್ಟಿದ್ದರು. 2022ರಲ್ಲಿ ಮಗು ಜನಿಸಿದ ವಿಷಯ ಬಹಿರಂಗಪಡಿಸಲಾಗಿತ್ತು. 2022ರಲ್ಲಿ 2ನೇ ಮಗು, 2024ರಲ್ಲಿ 3ನೇ ಮಗುವನ್ನು ಸ್ವಾಗತಿಸಿಲಾಯಿತು. ಸದ್ಯ ಇದೀಗ 4ನೇ ಮಗುವಿಗೆ ಜನ್ಮ ನೀಡಿರುವುದಾಗಿ ಜಿಲಿಸ್‌ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

    2025ರಲ್ಲಿ ಮಸ್ಕ್‌ ಅವರ ಮಾಜಿ ಪತ್ನಿ ಜಸ್ಟಿನ್ ವಿಲ್ಸನ್ ಅವರಿಗೆ ಜನಿಸಿದ್ದ ಮೊದಲ ಮಗ ನೆವಾಡಾ ಅಲೆಕ್ಸಾಂಡರ್‌ ಕಳೆದ ಕೆಲ ವಾರಗಳ ಹಿಂದೆಯಷ್ಟೇ ತೀರಿಕೊಂಡರು. ಬಳಿಕ ದಂಪತಿಗೆ ಅವಳಿ ಮತ್ತೊಮ್ಮೆ ತ್ರಿವಳಿ ಮಕ್ಕಳಾಯಿತು. ಇದನ್ನೂ ಓದಿ: ಟ್ರಂಪ್-ಝೆಲೆನ್ಸ್ಕಿ ನಡ್ವೆ ಮಾತಿನ ಚಕಮಕಿಗೆ ಬೆಚ್ಚಿಬಿದ್ದ ವಿಶ್ವ – ನಿಮ್ಮಿಂದ 3ನೇ ಮಹಾಯುದ್ಧ ಎಂದ ಯುಎಸ್‌ ಅಧ್ಯಕ್ಷ

    ಇತ್ತೀಚೆಗೆ ಅಮೆರಿಕದ ಮೇಕ್‌ ಅಮೆರಿಕ ಗ್ರೇಟ್‌ ಅಗೇನ್‌ (MAGA) ಲೇಖಕಿ, ಇನ್‌ಫ್ಲೂಯನ್ಸರ್‌ ಆಶ್ಲೇ ಸೇಂಟ್ ಕ್ಲೇರ್ (Ashley St. Clair), 5 ತಿಂಗಳ ಹಿಂದೆ ನನಗೆ ಮಗು ಜನಿಸಿದೆ. ಈ ಮಗುವಿನ ತಂದೆ ಎಲಾನ್‌ ಮಸ್ಕ್‌ (Elon Musk) ಎಂದು ಹೇಳಿದ್ದರು.

  • ಎಲಾನ್‌ ಮಸ್ಕ್‌ ಅವರ 13ನೇ ಮಗುವಿಗೆ ಜನ್ಮ ನೀಡಿದ್ದೇನೆ: ಆಶ್ಲೇ ಹೇಳಿಕೆಗೆ ಮೌನ ಮುರಿದ ಮಸ್ಕ್‌

    ಎಲಾನ್‌ ಮಸ್ಕ್‌ ಅವರ 13ನೇ ಮಗುವಿಗೆ ಜನ್ಮ ನೀಡಿದ್ದೇನೆ: ಆಶ್ಲೇ ಹೇಳಿಕೆಗೆ ಮೌನ ಮುರಿದ ಮಸ್ಕ್‌

    ವಾಷಿಂಗ್ಟನ್: ಎಲಾನ್‌ ಮಸ್ಕ್‌ (Elon Musk) ಅವರ 13ನೇ ಮಗುವಿನ ನಾನು ಜನ್ಮ ನೀಡಿದ್ದೇನೆ ಎಂಬ ಲೇಖಕಿ ಆಶ್ಲೇ ಸೇಂಟ್‌ ಕ್ಲೇರ್‌ (Ashley St Clair) ಅವರ ಹೇಳಿಕೆಗೆ ಟೆಸ್ಲಾ ಸಿಇಒ ಮಸ್ಕ್‌ ಕೊನೆಗೂ ಮೌನ ಮುರಿದಿದ್ದಾರೆ.

    ಶುಕ್ರವಾರ ಸೇಂಟ್‌ ಕ್ಲೇರ್‌ ಈ ಹೇಳಿಕೆ ನೀಡಿದ್ದರು. ತನ್ನ ಮಗುವಿಗೆ ಮಸ್ಕ್‌ ಅವರೇ ತಂದೆ ಎಂದು ಘೋಷಿಸಿದ್ದರು. ‘ಐದು ತಿಂಗಳ ಹಿಂದೆ, ನಾನು ಹೊಸ ಮಗುವನ್ನು ಜಗತ್ತಿಗೆ ಸ್ವಾಗತಿಸಿದೆ. ಎಲಾನ್‌ ಮಸ್ಕ್‌ ಅವರೇ ನನ್ನ ಮಗುವಿನ ತಂದೆ’ ಎಂದು ತಿಳಿಸಿದ್ದರು. ಆದರೆ, ಎಲಾನ್‌ ಮಸ್ಕ್‌ ಅವರಿಂದ ಈ ಬಗ್ಗೆ ಯಾವುದೇ ದೃಢೀಕರಣ ಬಂದಿಲ್ಲ. ಇದನ್ನೂ ಓದಿ: ಈಗ 5 ತಿಂಗಳ ಮಗುವಿನ ತಂದೆ – ಒಟ್ಟು 13 ಮಕ್ಕಳ ಅಪ್ಪನಾದ ಎಲಾನ್‌ ಮಸ್ಕ್‌!

    ಆಶ್ಲೇ ಸೇಂಟ್‌ ಕ್ಲೇರ್‌, ನಾನು ಜಗತ್ತಿನಲ್ಲಿ ಹೊಸ ಮಗುವಿಗೆ ಜನ್ಮ ನೀಡಿದ್ದೇನೆ. ಎಲಾನ್‌ ಮಸ್ಕ್‌ ಈ ಮಗುವಿಗೆ ತಂದೆ. ನಮ್ಮ ಮಗುವಿನ ಗೌಪ್ಯತೆ ಮತ್ತು ಸುರಕ್ಷತೆಗಾಗಿ ನಾನು ಇಲ್ಲಿಯ ವರೆಗೆ ಇದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿರಲಿಲ್ಲ. ಆದರೆ, ಕೆಲವು ದಿನಗಳಿಂದ ಇದು ಮಾಧ್ಯಮಗಳಲ್ಲಿ ಹೈಲೈಟ್‌ ಆಗುತ್ತಿದೆ. ನಮ್ಮ ಮಗು ಸಾಮಾನ್ಯ ಮತ್ತು ಸುರಕ್ಷಿತ ವಾತಾವರಣದಲ್ಲಿ ಬೆಳೆಯಬೇಕೆಂದು ನಾನು ಬಯಸುತ್ತೇನೆ. ಆದ್ದರಿಂದ ನಮ್ಮ ಮಗುವಿನ ವೈಯಕ್ತಿಕ ಜೀವನವನ್ನು ಗೌರವಿಸಿ ಮತ್ತು ಅನಗತ್ಯ ಹಸ್ತಕ್ಷೇಪವನ್ನು ತಪ್ಪಿಸುವಂತೆ ವಿನಂತಿಸುತ್ತೇನೆಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.

    ಈ ಕುರಿತು ಎಕ್ಸ್‌ನಲ್ಲಿ ಒಬ್ಬ ಬಳಕೆದಾರರು ಸ್ಕ್ರೀನ್‌ಶಾಟ್‌ ಹಂಚಿಕೊಂಡು, ಎಲಾನ್ ಮಸ್ಕ್ ಅವರನ್ನು ಸಿಲುಕಿಸಲು ಆಶ್ಲೇ ಸೇಂಟ್ ಕ್ಲೇರ್ ಅರ್ಧ ದಶಕದ ಸಂಚು ರೂಪಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಅದಕ್ಕೆ ಎಲಾನ್‌ ಮಸ್ಕ್‌, ‘ವಾವ್‌’ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಅಮೆರಿಕದಿಂದ 2ನೇ ಹಂತದ ಗಡಿಪಾರು – ಇಂದು 119 ಮಂದಿ ಅಕ್ರಮ ವಲಸಿಗರು ಭಾರತಕ್ಕೆ

    ಮಸ್ಕ್‌ ಪ್ರತಿಕ್ರಿಯೆಗೆ ಕ್ಲೇರ್‌ ರಿಪ್ಲೆ ಮಾಡಿ ನಂತರ ಡಿಲೀಟ್‌ ಮಾಡಿದ್ದರು. ಆದರೆ, ಅದರ ಸ್ಕ್ರೀನ್‌ಶಾಟ್‌ ಅನ್ನು ಮತ್ತೊಬ್ಬ ಎಕ್ಸ್‌ ಬಳಕೆದಾರ ಹಂಚಿಕೊಂಡಿದ್ದಾರೆ.

  • ಈಗ 5 ತಿಂಗಳ ಮಗುವಿನ ತಂದೆ – ಒಟ್ಟು 13 ಮಕ್ಕಳ ಅಪ್ಪನಾದ ಎಲಾನ್‌ ಮಸ್ಕ್‌!

    ಈಗ 5 ತಿಂಗಳ ಮಗುವಿನ ತಂದೆ – ಒಟ್ಟು 13 ಮಕ್ಕಳ ಅಪ್ಪನಾದ ಎಲಾನ್‌ ಮಸ್ಕ್‌!

    ವಾಷಿಂಗ್ಟನ್‌: ಐದು ತಿಂಗಳ ಹಿಂದೆ ನನಗೆ ಮಗು ಜನಿಸಿದೆ. ಈ ಮಗುವಿನ ತಂದೆ ಎಲಾನ್‌ ಮಸ್ಕ್‌ (Elon Musk) ಎಂದು ಅಮೆರಿಕದ ಮೇಕ್‌ ಅಮೆರಿಕ ಗ್ರೇಟ್‌ ಅಗೇನ್‌ (MAGA) ಲೇಖಕಿ, ಇನ್‌ಫ್ಲೂಯನ್ಸರ್‌ ಆಶ್ಲೇ ಸೇಂಟ್ ಕ್ಲೇರ್ (Ashley St. Clair) ಹೇಳಿದ್ದಾರೆ.

    ಪ್ರೇಮಿಗಳ ದಿನಾಚರಣೆಯಂದೇ (Valentine’s Day) ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಅವರು, ಐದು ತಿಂಗಳ ಹಿಂದೆ ನಾನು ನನ್ನ ಮಗುವನ್ನು ಜಗತ್ತಿಗೆ ಸ್ವಾಗತಿಸಿದ್ದೇನೆ. ನಮ್ಮ ಮಗುವಿನ ಗೌಪ್ಯತೆ ಮತ್ತು ಸುರಕ್ಷತೆಯನ್ನು ರಕ್ಷಿಸಲು ನಾನು ಇದನ್ನು ಈ ಹಿಂದೆ ಬಹಿರಂಗಪಡಿಸಿರಲಿಲ್ಲ ಎಂದು ತಿಳಿಸಿದ್ದಾರೆ.

    ನಮ್ಮ ಮಗು ಸಾಮಾನ್ಯ ಮತ್ತು ಸುರಕ್ಷಿತ ವಾತಾವರಣದಲ್ಲಿ ಬೆಳೆಯಲು ನಾನು ಅವಕಾಶ ನೀಡಲು ಉದ್ದೇಶಿಸಿದ್ದೇನೆ. ಆ ಕಾರಣಕ್ಕಾಗಿ ಮಾಧ್ಯಮಗಳು ನಮ್ಮ ಮಗುವಿನ ಗೌಪ್ಯತೆಯನ್ನು ಗೌರವಿಸಬೇಕು ಮತ್ತು ಟ್ಯಾಬ್ಲಾಯ್ಡ್‌ಗಳು ಆಕ್ರಮಣಕಾರಿ ವರದಿ ಮಾಡುವುದನ್ನು ನಿಲ್ಲಿಸಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

    ಬಲಪಂಥೀಯ ವಿಚಾರಗಳ ಧೋರಣೆ ಹೊಂದಿರುವ 31 ವರ್ಷದ ಆಶ್ಲೇ ಸೇಂಟ್ ಕ್ಲೇರ್ ಅವರಿಗೆ ಎಕ್ಸ್‌ನಲ್ಲಿ 10 ಲಕ್ಷ ಫಾಲೋವರ್ಸ್‌ಗಳಿದ್ದಾರೆ. ಡೊನಾಲ್ಡ್‌ ಟ್ರಂಪ್‌ ಅವರ ಅಭಿಮಾನಿಯಾಗಿರುವ ಆಶ್ಲೇ ಟ್ರಂಪ್‌ ಅವರ MAGA ಕಾರ್ಯಕ್ರಮವನ್ನು ಹೆಚ್ಚು ಪ್ರಚಾರ ಮಾಡುತ್ತಿದ್ದಾರೆ. ಟಿವಿ ವಾಹಿನಿಗಳ ಚರ್ಚೆಯಲ್ಲಿ ಭಾಗವಹಿಸಿ ಟ್ರಂಪ್‌ ನಿರ್ಧಾರವನ್ನು ಸಮರ್ಥಿಸುತ್ತಿರುತ್ತಾರೆ. ಇದನ್ನೂ ಓದಿ: ಚಾಮರಾಜನಗರ| ಲವ್, ಸೆಕ್ಸ್, ದೋಖಾ – ಗಂಡನ ಬಿಟ್ಟು ಬಂದವಳ ಜೊತೆ ಲೈಂಗಿಕ ಸಂಪರ್ಕ; 3 ಬಾರಿ ಗರ್ಭಪಾತ

    ಮಗು ಜನಿಸಿದ ಬಗ್ಗೆ ಮಸ್ಕ್‌ ಇಲ್ಲಿಯವರೆಗೆ ಅಧಿಕೃತವಾಗಿ ಹೇಳಿಕೆ ನೀಡಿಲ್ಲ ಆದರೆ ಮಗು ಜನಿಸಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾದ ಪೋಸ್ಟ್‌ಗೆ ನಗುವ ಇಮೋಜಿ ಹಾಕಿ ಪ್ರತಿಕ್ರಿಯೆ ನೀಡಿದ್ದಾರೆ.


     

    5 ತಿಂಗಳ ಮಗು ಸೇರಿ ಮಸ್ಕ್‌ ಅವರು ಇಲ್ಲಿಯರೆಗೆ 13 ಮಕ್ಕಳ ತಂದೆಯಾಗಿದ್ದಾರೆ. ಮಸ್ಕ್‌ಗೆ ಮೂವರು ಮಹಿಳೆಯರೊಂದಿಗೆ ಸಂಬಂಧದಿಂದ 12 ಮಕ್ಕಳು ಜನಿಸಿದ್ದಾರೆ. ಮೊದಲ ಪತ್ನಿ ಜಸ್ಟಿನ್‌ಗೆ 6 ಮಕ್ಕಳು ಜನಿಸಿದ್ದರು. ಸಂಗೀತಗಾರ್ತಿ ಗ್ರೀಮ್ಸ್‌ಗೆ 3 ಮಕ್ಕಳು ಹುಟ್ಟಿದ್ದರೆ ಮಸ್ಕ್‌ ಅವರ ಕಂಪನಿಯಾದ ನ್ಯೂರಾಲಿಂಕ್ ಕಾರ್ಯಾಚರಣೆಗಳ ಮಾಜಿ ನಿರ್ದೇಶಕಿ ಶಿವೋನ್ ಜಿಲಿಸ್‌ಗೆ ಮೂರು ಮಕ್ಕಳಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಭೇಟಿ ಸಮಯದಲ್ಲಿ ಮಸ್ಕ್‌ ಮೂವರು ಮಕ್ಕಳನ್ನು ಕರೆದುಕೊಂಡು ಬಂದಿದ್ದರು.

    ಜಾಗತಿಕ ತಾಪಮಾನ ಏರಿಕೆಗಿಂತ ಜನಸಂಖ್ಯಾ ಕುಸಿತವು ದೊಡ್ಡ ಅಪಾಯಕಾರಿ. ಜನನ ದರ ಕಡಿಮೆಯಾಗುವುದರಿಂದ ನಾಗರಿಕತೆಗೆ ಸಮಸ್ಯೆಯಾಗಲಿದೆ. ದಕ್ಷಿಣ ಕೊರಿಯಾ, ಜಪಾನ್ ಮತ್ತು ಸಿಂಗಾಪುರ ಸೇರಿದಂತೆ ಹಲವಾರು ಏಷ್ಯಾದ ದೇಶಗಳಲ್ಲಿ ಜನಸಂಖ್ಯೆ ಕುಸಿಯುತ್ತಿರುವುದಕ್ಕೆ ಮಸ್ಕ್‌ ಈ ಹಿಂದೆ ಆತಂಕ ವ್ಯಕ್ತಪಡಿಸಿದ್ದರು.

     

    ಮಾನವೀಯತೆ ಬೆಳೆಯಲು, ಹೆಚ್ಚಿನ ಜನರು ಪೋಷಕರಾಗಲು ಮತ್ತು ಆದರ್ಶಪ್ರಾಯವಾಗಿ ಮೂರು ಅಥವಾ ಹೆಚ್ಚಿನ ಮಕ್ಕಳನ್ನು ಹೊಂದಲು ಪ್ರೋತ್ಸಾಹಿಸಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇನೆ. ಹೆಚ್ಚಿನ ದೇಶಗಳಲ್ಲಿ ಜನಸಂಖ್ಯಾ ಕುಸಿತವು ಒಂದು ದುರಂತ. ವಯಸ್ಕ ಡೈಪರ್‌ಗಳ ಮಾರಾಟವು ಎಂದಿಗೂ ಮಗುವಿನ ಡೈಪರ್‌ಗಳ ಮಾರಾಟವನ್ನು ಮೀರಬಾರದು ಎಂದಿದ್ದರು.

    ಈ ಹಿಂದೆ ಮಾಧ್ಯಮವೊಂದು ಮಸ್ಕ್‌ ಅವರು ತಮ್ಮ ಸ್ವಂತ ವೀರ್ಯವನ್ನು ಸ್ನೇಹಿತರು ಮತ್ತು ಪರಿಚಯಸ್ಥರಿಗೆ ನೀಡಿದ್ದಾರೆ ಎಂದು ವರದಿ ಮಾಡಿತ್ತು.