Tag: Ashish Nehra

  • UK ಪ್ರಧಾನಿಯಾದ ರಿಷಿ ಸುನಾಕ್ – ಸಾಮಾಜಿಕ ಜಾಲತಾಣದಲ್ಲಿ ಆಶಿಶ್ ನೆಹ್ರಾ ಫೋಟೋ ಟ್ರೆಂಡ್

    UK ಪ್ರಧಾನಿಯಾದ ರಿಷಿ ಸುನಾಕ್ – ಸಾಮಾಜಿಕ ಜಾಲತಾಣದಲ್ಲಿ ಆಶಿಶ್ ನೆಹ್ರಾ ಫೋಟೋ ಟ್ರೆಂಡ್

    ಮುಂಬೈ: ಬ್ರಿಟನ್ ಪ್ರಧಾನಿಯಾಗಿ (British Prime Minister)  ಭಾರತೀಯ ಮೂಲದ ರಿಷಿ ಸುನಾಕ್ (Rishi Sunak) ಆಯ್ಕೆಗೊಳ್ಳುತ್ತಿದ್ದಂತೆ ಇತ್ತ ಟೀಂ ಇಂಡಿಯಾದ (Team India) ಮಾಜಿ ವೇಗಿ ಆಶಿಶ್ ನೆಹ್ರಾ (Ashish Nehra) ಅವರು ಸಾಮಾಜಿಕ ಜಾಲತಾಣದಲ್ಲಿ (Social Media) ಟ್ರೆಂಡ್ ಆಗಿದ್ದಾರೆ.

    ಹೌದು ರಿಷಿ ಸುನಾಕ್ ಬ್ರಿಟನ್‍ನ ಪ್ರಧಾನಿಯಾಗಿ ಆಯ್ಕೆಗೊಂಡಂತೆ ಮೊದಲ ಬಿಳಿಯರಲ್ಲದ, ಭಾರತೀಯ ಮೂಲದವರೊಬ್ಬರು ಪ್ರಧಾನಿಯಾದರೆಂಬ ಇತಿಹಾಸ ಕೂಡ ಸೃಷ್ಟಿಯಾಗಿದೆ. ಈ ಎಲ್ಲದರ ನಡುವೆ ಆಶಿಶ್ ನೆಹ್ರಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿದೆ. ರಿಷಿ ಸುನಕ್ ಮತ್ತು ಆಶಿಶ್ ನೆಹ್ರಾ ನೋಡಲು ಒಂದೇ ಥರವಾಗಿ ಕಾಣುವ ಕಾರಣ ಆಶಿಶ್ ನೆಹ್ರಾ ಅವರ ಫೋಟೋ ರಿಷಿ ಸುನಕ್ ಫೋಟೋದೊಂದಿಗೆ ಕಾಣಿಸಿಕೊಂಡಿದೆ. ಇದನ್ನೂ ಓದಿ: ವಿಶ್ವ ನಾಯಕರ ಪಟ್ಟಿಯಲ್ಲಿ ಭಾರತೀಯರ ಪಾರುಪತ್ಯ – ರಿಷಿ ಸುನಾಕ್ ನೂತನ ಎಂಟ್ರಿ

    ಆಶಿಶ್ ನೆಹ್ರಾ ಟೀಂ ಇಂಡಿಯಾದಲ್ಲಿ ವೇಗದ ಬೌಲರ್ ಆಗಿ ಮಿಂಚಿದ್ದ ಆಟಗಾರ. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿ ಐಪಿಎಲ್‍ನಲ್ಲಿ (IPL) ಗುಜರಾತ್ ಟೈಟಾನ್ಸ್ (Gujarat Titans) ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2021ನೇ ಐಪಿಎಲ್‍ನಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡ ಐಪಿಎಲ್ ಟ್ರೋಫಿ ಗೆಲ್ಲಲು ನೆಹ್ರಾ ಕೋಚ್ ಆಗಿ ಸಹಕರಿಸಿದ್ದರು. ಇದನ್ನೂ ಓದಿ: ಬ್ರಿಟನ್ ನೂತನ ಪ್ರಧಾನಿ ಭಾರತ ಮೂಲದ ರಿಷಿ ಸುನಾಕ್ ಬಗ್ಗೆ ನೀವು ತಿಳಿಯಲೇಬೇಕಾದ ಸಂಗತಿಗಳಿವು

    https://twitter.com/TheKochiBoy/status/1584555131714273281

    ಇದೀಗ ನೆಹ್ರಾರಿಂದ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮ್ಯಾನ್‌ ವಿರಾಟ್ ಕೊಹ್ಲಿ (Virat Kohli) ಸಣ್ಣವರಿದ್ದಾಗ ಪ್ರಶಸ್ತಿ ಸ್ವೀಕರಿಸಿದ್ದ ಫೋಟೋವೊಂದು ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಹ್ರಾ ಜೊತೆ ಕೊಹ್ಲಿ ಎಂದು ಕೆಲವರು ಫೋಸ್ಟ್ ಮಾಡುವ ಬದಲು ರಿಷಿ ಸುನಕ್ ಜೊತೆ ಕೊಹ್ಲಿ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಿತ್ತು ಹೋದ ಶೂ ಧರಿಸಿ ಮೊದ್ಲ ಟೆಸ್ಟ್ ಪಂದ್ಯವಾಡಿದ್ದ ನೆಹ್ರಾ

    ಕಿತ್ತು ಹೋದ ಶೂ ಧರಿಸಿ ಮೊದ್ಲ ಟೆಸ್ಟ್ ಪಂದ್ಯವಾಡಿದ್ದ ನೆಹ್ರಾ

    ಮುಂಬೈ: ಟೀಂ ಇಂಡಿಯಾ ಮಾಜಿ ಆಟಗಾರ ಆಶಿಶ್ ನೆಹ್ರಾ ತಮ್ಮ ಪಾದಾರ್ಪಣೆ ಪಂದ್ಯದ ವೇಳೆ ನಡೆದ ಘಟನೆಯೊಂದನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿರುವ ನೆಹ್ರಾ, ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ ಮೊದಲ ಪಂದ್ಯದ ವೇಳೆ ಕಿತ್ತು ಹೋದ ಶೂ ಧರಿಸಿಯೇ ಆಡಿದ್ದಾಗಿ ಹೇಳಿದ್ದಾರೆ.

    ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವಾಡಲು ನನ್ನ ಬಳಿ ಇದ್ದ ಒಂದು ಜೋಡಿ ಶೂಗಳನ್ನೇ ಬಳಿಸಿದ್ದೆ. ಅವುಗಳನ್ನು ನಾನು ರಣಜಿ ಪಂದ್ಯಗಳನ್ನಾಡುವ ವೇಳೆ ಹೆಚ್ಚು ಬಳಿಸಿದ್ದ ಕಾರಣ ಆಟದ ನಡುವೆ ಕಿತ್ತು ಬಂದಿತ್ತು. ನನ್ನ ಬಳಿ ಬೇರೆ ಶೂ ಇಲ್ಲದ ಕಾರಣ ಇನ್ನಿಂಗ್ಸ್ ವಿರಾಮದ ಸಮಯದಲ್ಲಿ ಕಿತ್ತು ಬಂದ ಶೂ ಹೊಲಿದುಕೊಂಡು ಪಂದ್ಯದಲ್ಲಿ ಆಡಿದ್ದೆ. ಇಂದಿಗೂ ಆ ಘಟನೆ ನನಗೆ ನೆನಪಿದೆ ಎಂದು ಹೇಳಿದ್ದಾರೆ.

    1999ರಲ್ಲಿ ಶ್ರೀಲಂಕಾ ವಿರುದ್ಧ ಕೊಲಂಬೊದಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ನೆಹ್ರಾ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದರು. ದೆಹಲಿಯ ಕಂಟೋನ್ಮೆಂಟ್ ರೈಲ್ವೆ ಸ್ಟೇಷನ್ ಬಳಿಯ ಮೈದಾನದಲ್ಲಿ ನೆಹ್ರಾ ಬೌಲಿಂಗ್ ಅಭ್ಯಾಸ ಮಾಡಿದ್ದಾಗಿ ತಿಳಿಸಿದ್ದಾರೆ. ಸ್ಟೆಷನ್ ಬಳಿಯ ಮೈದಾನಕ್ಕೆ ಹಲವರು ಬರುತ್ತಿದ್ದ ಕಾರಣ ಎಂದು ಒಬ್ಬನೇ ಇರುತ್ತಿರಲಿಲ್ಲ. ಕಲ್ಲುಗಳನ್ನು ಎಸೆದು ಬೌಲಿಂಗ್ ತರಬೇತಿ ಮಾಡಿದ್ದೆವು. ನನ್ನ ಕೋಚ್ ಬೌಲಿಂಗ್ ನಲ್ಲಿ ಹೊಸ ವೈವಿದ್ಯವನ್ನು ತೋರಿಸುವಂತೆ ಹೇಳುತ್ತಿದ್ದರು ಎಂದು ನೆಹ್ರಾ ತಮ್ಮ ಆರಂಭಿಕ ಜೀವನದ ಬಗ್ಗೆ ತಿಳಿಸಿದ್ದಾರೆ.

    ಟೀಂ ಇಂಡಿಯಾ ಪರ 17 ಟೆಸ್ಟ್, 120 ಏಕದಿನ, 27 ಟಿ20 ಪಂದ್ಯಗಳನ್ನು ನೆಹ್ರಾ ಆಡಿದ್ದಾರೆ. ಇದೇ ವೇಳೆ ಧೋನಿ ಭವಿಷ್ಯದ ಕುರಿತ ಪ್ರಶ್ನೆಗೆ ಉತ್ತರಿಸುವ ನೆಹ್ರಾ, ಧೋನಿ ಫಿಟ್ನೆಸ್ ಕಾಯ್ದುಕೊಂಡು ಆಡುವ ಅವಕಾಶ ಇದ್ದರೆ ಈಗಲೂ ಅವರೇ ನನ್ನ ಮೊದಲ ಆಯ್ಕೆ. ಆದರೆ ಧೋನಿ ಯಾವಾಗ ಯಾವ ಶಾಕ್ ನೀಡುತ್ತಾರೆ ಎಂದು ನಾವು ಊಹಿಸಲು ಸಾಧ್ಯವಿಲ್ಲ. ಅವರು ಸದ್ಯ ನಿವೃತ್ತಿ ಘೋಷಣೆ ಮಾಡದಿದ್ದರು ಅವರ ನಿವೃತ್ತಿ ನನಗೆ ನೋವುಂಟು ಮಾಡುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

  • ವರ್ಷಾಂತ್ಯದಲ್ಲಿ ಐಪಿಎಲ್- ಆಶಿಶ್ ನೆಹ್ರಾ

    ವರ್ಷಾಂತ್ಯದಲ್ಲಿ ಐಪಿಎಲ್- ಆಶಿಶ್ ನೆಹ್ರಾ

    ನವದೆಹಲಿ: ವರ್ಷಾಂತ್ಯದಲ್ಲಿ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) 13ನೇ ಆವೃತ್ತಿ ನಡೆಯಲಿದೆ ಎಂದು ಟೀಂ ಇಂಡಿಯಾ ಮಾಜಿ ವೇಗದ ಬೌಲರ್ ಆಶಿಶ್ ನೆಹ್ರಾ ಹೇಳಿದ್ದಾರೆ.

    ಹೆಮ್ಮಾರಿ ಕೊರೊನಾ ವೈರಸ್‍ನಿಂದಾಗಿ ಐಪಿಎಲ್ ಅನ್ನು ಮಾರ್ಚ್ 29ರಿಂದ ಏಪ್ರಿಲ್ 15ರವರೆಗೆ ಮುಂದೂಡಲಾಗಿದೆ. ಆದರೆ ಸದ್ಯದ ಪರಿಸ್ಥಿತಿ ಗಮನಿಸಿದರೆ ಟೂರ್ನಿ ನಡೆಯುತ್ತೋ, ಇಲ್ಲವೋ ಎನ್ನುವ ಗೊಂದಲ ಇನ್ನೂ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತದ ಮಾಜಿ ವೇಗದ ಬೌಲರ್ ಆಶಿಶ್ ನೆಹ್ರಾ ಅವರು, ಐಪಿಎಲ್ ಟೂರ್ನಿ ವರ್ಷದ ಕೊನೆಯಲ್ಲಿ ನಡೆಯಬಹದು. ಏಪ್ರಿಲ್-ಆಗಸ್ಟ್ ಮಧ್ಯನಲ್ಲಿ ಟೂರ್ನಿ ನಡೆಸಲು ಸಾಧ್ಯವೇ ಇಲ್ಲ ಎಂಬ ಭರವಸೆ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ‘ಐಪಿಎಲ್ ನಡೆಯಲೇಬೇಕು’: ಟೂರ್ನಿ ನಡೆಸುವ ಬಗ್ಗೆ ಪೀಟರ್ಸನ್ ಸಲಹೆ

    ಸಂದರ್ಶನವೊಂದರಲ್ಲಿ ಮಾತನಾಡಿದ ನೆಹ್ರಾ, ‘ಏಪ್ರಿಲ್‍ನಲ್ಲಿ ಐಪಿಎಲ್ ನಡೆಸುವ ಸಾಧ್ಯತೆ ತೀರಾ ಕಡಿಮೆ ಇದೆ. ಟೂರ್ನಿಯನ್ನು ಆಗಸ್ಟ್ ಗೆ ಮುಂದೂಡಿದರೆ ಆಗ ಮಳೆಗಾಲ ಇರುತ್ತದೆ. ಹೀಗಾಗಿ ಅನೇಕ ಪಂದ್ಯಗಳು ರದ್ದಾಗುವ ಸಾಧ್ಯತೆ ಇರುತ್ತದೆ. ಅಕ್ಟೋಬರ್ ವೇಳೆಗೆ ವಿಶ್ವವ್ಯಾಪಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಂದರೆ ವರ್ಷದ ಕೊನೆಯಲ್ಲಿ ಐಪಿಎಲ್ ನಡೆಯಬಹುದು ಎಂಬ ವಿಶ್ವಾಸವಿದೆ’ ಎಂದು ತಿಳಿಸಿದ್ದಾರೆ.

    ಆಶಿಶ್ ನೆಹ್ರಾ ಇದುವರೆಗೆ ಐಪಿಎಲ್‍ನಲ್ಲಿ 88 ಪಂದ್ಯಗಳನ್ನು ಆಡಿದ್ದು, 23.54 ಸರಾಸರಿಯಲ್ಲಿ 106 ವಿಕೆಟ್ ಪಡೆದಿದ್ದಾರೆ. ಇದನ್ನೂ ಓದಿ: ಆಸೀಸ್ ಆಟಗಾರರು ವಿರಾಟ್ ವಿರುದ್ಧ ಸ್ಲೆಡ್ಜಿಂಗ್ ಮಾಡಲು ಹೆದರುತ್ತಾರೆ: ಕ್ಲಾರ್ಕ್

    ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ಸ್ಟೀವ್ ಸ್ಮಿತ್ ಹಾಗೂ ಇಂಗ್ಲೆಂಡ್ ಕ್ರಿಕೆಟರ್ ಜೋಸ್ ಬಟ್ಲರ್ ಕೂಡ, ಈ ವರ್ಷ ಐಪಿಎಲ್ ನಡೆಯಲಿದೆ ಎಂಬ ಭರವಸೆ ಇದೆ. ಆದರೆ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಸಹ ಅಕ್ಟೋಬರ್‍ನಲ್ಲಿ ನಡೆಯಲಿದೆ. ಇಂತಹ ಪರಿಸ್ಥಿತಿಯಲ್ಲಿ ಐಪಿಎಲ್ ನಡೆಸುವುದು ಬಿಸಿಸಿಐಗೆ ಸವಾಲಿನ ಕೆಲಸವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ರನ್ನಿಂಗ್ ಕ್ಯಾಚ್ ಹಿಡಿದು ಸ್ವಚ್ಛ ಕೈಗಳ ಸಂದೇಶ ಕೊಟ್ಟ ಕೈಫ್

    ಇತ್ತ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸ್ಟೀವ್ ಸ್ಮಿತ್, ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್ ಮತ್ತು ರಿಯಾನ್ ಪರಾಗ್ ಅವರನ್ನು ನೋಡಿ ಉತ್ಸುಕನಾಗಿದ್ದೇನೆ ಎಂದಿದ್ದರು. ರಾಜಸ್ಥಾನ್ ರಾಯಲ್ಸ್ ಫೇಸ್‍ಬುಕ್ ಪುಟದಲ್ಲಿ ಸಹ ಆಟಗಾರ ಇಶ್ ಸೋಧಿ ಅವರೊಂದಿಗಿನ ಸಂಭಾಷಣೆಯಲ್ಲಿ ಸ್ಮಿತ್ ಈ ವಿಷಯ ತಿಳಿಸಿದ್ದರು.

    ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ ಚೇತೇಶ್ವರ ಪೂಜಾರ ಈ ಹಿಂದೆ ಮಾತನಾಡಿ, ಜಗತ್ತಿನಾದ್ಯಂತ ಜನರು ಇಂದು ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆಯನ್ನು ನೋಡಿದರೆ ನಾವು ಇದೀಗ ಕ್ರಿಕೆಟ್ ಬಗ್ಗೆ ಯೋಚಿಸಬಾರದು. ಹೆಮ್ಮಾರಿ ಕೊರೊನಾ ವೈರಸ್ ವಿರುದ್ಧ ಯುದ್ಧದಂತೆ ಒಟ್ಟಿಗೆ ಹೋರಾಡಬೇಕಾಗಿದೆ. ಪರಿಸ್ಥಿತಿಯನ್ನು ನಿವಾರಿಸುವುದು ನಮ್ಮ ಮೊದಲ ಪ್ರಯತ್ನವಾಗಬೇಕು. ಆ ಬಳಿಕ ನಾವು ಕ್ರಿಕೆಟ್ ಮತ್ತು ಇತರ ಕ್ರೀಡೆಗಳ ಬಗ್ಗೆ ಯೋಚಿಸಬಹುದು ಎಂದು ಹೇಳಿದ್ದರು.

  • ಕಪ್ ಗೆಲ್ಲಲು ಆರ್‌ಸಿಬಿ ಕೋಚಿಂಗ್ ವಿಭಾಗದಲ್ಲಿ ಮುಖ್ಯ ಬದಲಾವಣೆ

    ಕಪ್ ಗೆಲ್ಲಲು ಆರ್‌ಸಿಬಿ ಕೋಚಿಂಗ್ ವಿಭಾಗದಲ್ಲಿ ಮುಖ್ಯ ಬದಲಾವಣೆ

    ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಕಪ್ ಗೆಲ್ಲುವುದಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕೋಚಿಂಗ್ ವಿಭಾಗದಲ್ಲಿ ಮುಖ್ಯ ಬದಲಾವಣೆ ತಂದಿದೆ.

    ಮುಖ್ಯ ಕೋಚ್ ಗ್ಯಾರಿ ಕರ್ಸ್ಟನ್ ಮತ್ತು ಬೌಲಿಂಗ್ ಕೋಚ್ ಆಶಿಶ್ ನೆಹ್ರಾ ಅವರನ್ನು ಆರ್‌ಸಿಬಿ ಕೈಬಿಟ್ಟಿದೆ. ಈ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ ಮಾಜಿ ಸಹಾಯಕ ಕೋಚ್ ಸೈಮನ್ ಕ್ಯಾಟಿಚ್, ಆರ್‌ಸಿಬಿ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದಾರೆ.

    ಆರ್‌ಸಿಬಿ ಫ್ರಾಂಚೈಸಿ ನೂತನ ಮುಖ್ಯ ಕೋಚ್ ಹೆಸರನ್ನು ಶುಕ್ರವಾರ ಪ್ರಕಟಿಸಿದ್ದಾರೆ. ನ್ಯೂಜಿಲೆಂಡ್‍ನ ಮಾಜಿ ಕೋಚ್ ಮೈಕ್ ಹೆಸ್ಸನ್‍ರನ್ನು ಕ್ರಿಕೆಟ್ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಸದ್ಯ ಆರ್‌ಸಿಬಿ ಮುಖ್ಯ ಕೋಚ್ ಆಗಿ ಆಯ್ಕೆಯಾಗಿರುವ ಸೈಮನ್ ಕ್ಯಾಟಿಚ್ ಅವರು ಆಸ್ಟ್ರೇಲಿಯಾದ ಮಾಜಿ ಆರಂಭಿಕ ಬ್ಯಾಟ್ಸಮನ್ ಆಗಿದ್ದರು. ಜೊತೆಗೆ ಕೋಲ್ಕತ್ತಾ ನೈಟ್ ರೈಡರ್ಸ್ ಮಾಜಿ ಸಹಾಯಕರಾಗಿ ಕೆಲಸ ಮಾಡಿದ್ದಾರೆ.

    ಆಶಿಶ್ ನೆಹ್ರಾ ಹಾಗೂ ಕರ್ಸ್ಟನ್ ಅವರು 2011ರ ವಿಶ್ವಕಪ್ ವಿಜೇತ ಭಾರತೀಯ ತಂಡದೊಂದಿಗೆ ಗುರುತಿಸಿಕೊಂಡಿದ್ದರು. ಆಗ ನೆಹ್ರಾ ತಂಡದಲ್ಲಿ ಬೌಲರ್ ಮತ್ತು ಕರ್ಸ್ಟನ್ ಭಾರತದ ತಂಡದ ಮುಖ್ಯ ಕೋಚ್ ಆಗಿದ್ದರು. ಹೀಗಾಗಿ ಈ ಜೋಡಿಗೆ ಆರ್‌ಸಿಬಿ ಮಣೆ ಹಾಕಿತ್ತು. ಆದರೆ ಐಪಿಎಲ್ 12 ಆವೃತ್ತಿಗಳಲ್ಲಿ ಯಾವುದರಲ್ಲಿಯೂ ಆರ್‌ಸಿಬಿ ಗೆಲುವು ಸಾಧಿಸಿಲ್ಲ. ಹೀಗಾಗಿ ಕೋಚಿಂಗ್ ವಿಭಾಗದಲ್ಲಿ ಮುಖ್ಯ ಬದಲಾವಣೆ ತರಲಾಗಿದೆ ಎಂದು ವರದಿಯಾಗಿದೆ.

    2018ರಲ್ಲಿ ನ್ಯೂಜಿಲೆಂಡ್‍ನ ಡೇನಿಯಲ್ ವೆಟೋರಿ ಬದಲಿಗೆ ಗ್ಯಾರಿ ಕರ್ಸ್ಟನ್ ಅವರಿಗೆ ಆರ್‌ಸಿಬಿ ಮಣೆ ಹಾಕಿತ್ತು. ಆದರೆ ಅವರ ತರಬೇತಿ ಅಡಿ ತಂಡದ ಸಾಧನೆ ನಿರಾಶಾದಾಯಕವಾಗಿತ್ತು. 2016ರಲ್ಲಿ ಫೈನಲ್‍ಗೆ ತಲುಪಿತ್ತು. ಆ ಬಳಿಕ ನಡೆದ 2018ರ ಹಾಗೂ 2019ರ ಆವೃತ್ತಿಯಲ್ಲಿ ಕ್ರಮವಾಗಿ ಆರು, ಎಂಟನೇ ಸ್ಥಾನಕ್ಕೆ ಕುಸಿತ ಕಂಡಿತ್ತು. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಬೆಂಗಳೂರಿಗೆ ಇದುವರೆಗೂ ಒಂದು ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಕ್ಯಾಟಿಚ್ ಐಪಿಎಲ್‍ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಹೆಸ್ಸನ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ತರಬೇತುದಾರರಾಗಿದ್ದರು.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್‌ಸಿಬಿ ತಂಡದ ಅಧ್ಯಕ್ಷ ಸಂಜೀವ್ ಚುರಿವಾಲಾ, ಬೆಂಗಳೂರು ತಂಡವು ವಿಶ್ವಾಸಾರ್ಹ, ಗೌರವಾನ್ವಿತ ಮತ್ತು ಅತ್ಯುತ್ತಮ ಟಿ-20 ಫ್ರ್ಯಾಂಚೈಸ್ ಆಗಿದೆ. ಹೆಸ್ಸನ್ ಮತ್ತು ಕ್ಯಾಟಿಚ್ ಇಬ್ಬರೂ ನಮ್ಮನ್ನು ವಿಜೇತ ತಂಡವನ್ನಾಗಿ ಮಾಡಲು ಅಗತ್ಯವಾದ ಅನುಭವವನ್ನು ಹೊಂದಿದ್ದಾರೆ. ಕ್ಯಾಟಿಚ್ ಅವರ ಅನುಭವ ಮತ್ತು ಬಲವಾದ ತಂಡಗಳನ್ನು ನಿರ್ಮಿಸಿದ ಹೆಸ್ಸನ್ ಅವರ ಅನುಭವವು ನಮ್ಮನ್ನು ಗೆಲ್ಲುವ ತಂಡವನ್ನಾಗಿ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಗೆಲ್ಲದ ತಂಡಗಳು:
    ಇಲ್ಲಿವರೆಗೆ ಐಪಿಎಲ್ 12 ಆವೃತ್ತಿಗಳು ನಡೆದಿದ್ದು, ಮೂರು ತಂಡಗಳು ಇಲ್ಲಿವರೆಗೂ ಒಂದು ಬಾರಿಯೂ ಟ್ರೋಫಿ ಗೆದ್ದಿಲ್ಲ. ಆರ್‍ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಕಪ್ ಗೆಲ್ಲದೆ ಇರುವ ತಂಡಗಳಾಗಿದೆ.

    2019ರ ಐಪಿಎಲ್ ಆವೃತ್ತಿಯಲ್ಲಿ ಗೆಲ್ಲುವ ಮೂಲಕ ಮುಂಬೈ ನಾಲ್ಕನೇ ಬಾರಿ ಟ್ರೋಫಿ ತನ್ನದಾಗಿಸಿಕೊಂಡ ತಂಡವಾಗಿ ಹೊರ ಹೊಮ್ಮಿತು. ಈ ಮೂಲಕ ಐಪಿಎಲ್ ಸೀಸನ್‍ನಲ್ಲಿ ಅತಿ ಹೆಚ್ಚು ಟ್ರೋಫಿ ಗೆದ್ದ ತಂಡವಾಗಿ ಮುಂಬೈ ಇಂಡಿಯನ್ಸ್ ಗುರುತಿಸಿಕೊಂಡಿದೆ. ರಾಜಸ್ಥಾನ ರಾಯಲ್ಸ್ ಚೊಚ್ಚಲ ಸೀಸನ್ (2008)ರಲ್ಲಿ ಗೆಲುವು ಸಾಧಿಸಿತ್ತು. ಉಳಿದಂತೆ ಚೆನ್ನೈ ಸೂಪರ್ ಕಿಂಗ್ಸ್ 3, ಕೋಲ್ಕತ್ತಾ ನೈಟ್‍ರೈಡರ್ಸ್ 2 ಹಾಗೂ ಸನ್‍ರೈಸರ್ಸ್ ಹೈದರಾಬಾದ್ ಒಂದು ಬಾರಿ ಟ್ರೋಫಿ ಗೆದ್ದುಕೊಂಡಿದೆ.

  • ನೀವು ಎಂದು ನೋಡಿರದ ವಿಚಿತ್ರ ಬೌಲಿಂಗ್- ವೈರಲ್ ವಿಡಿಯೋ ನೋಡಿ

    ನೀವು ಎಂದು ನೋಡಿರದ ವಿಚಿತ್ರ ಬೌಲಿಂಗ್- ವೈರಲ್ ವಿಡಿಯೋ ನೋಡಿ

    ಮುಂಬೈ: ವಿಚಿತ್ರವಾಗಿ ಬೌಲರ್ ಒಬ್ಬ ಬೌಲಿಂಗ್ ಮಾಡಿರುವ ವಿಡಿಯೋವನ್ನು ಟೀಂ ಇಂಡಿಯಾ ಮಾಜಿ ಆಟಗಾರ ಆಶಿಶ್ ನೆಹ್ರಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಅಪ್‍ಲೋಡ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಆಶಿಶ್ ನೆಹ್ರಾ ಅಪ್‍ಲೋಡ್ ಮಾಡಿರುವ ವಿಡಿಯೋದಲ್ಲಿ ಸ್ಪಿನ್ ಬೌಲಿಂಗ್ ಮಾಡುತ್ತಿರುವ ಬೌಲರ್ ಶೈಲಿ ವಿಭಿನ್ನವಾಗಿದ್ದು ನೋಡುಗರಲ್ಲಿ ಅಚ್ಚರಿ ಮೂಡಿಸಿದೆ. ಈ ವಿಡಿಯೋ ಅಪ್‍ಲೋಡ್ ಮಾಡಿರುವ ನೆಹ್ರಾ, ಟೀಂ ಇಂಡಿಯಾ ಬೌಲರ್ ಗಳಾದ ಚಹಲ್ ಹಾಗೂ ಕುಲದೀಪ್ ಯಾದವ್‍ಗೆ ಟ್ಯಾಗ್ ಮಾಡಿ, ನೀವು ಟ್ರೈ ಮಾಡಬಹುದಾ ಎಂದು ಪ್ರಶ್ನೆ ಮಾಡಿದ್ದಾರೆ.

    ಅಂದಹಾಗೇ ಈ ವಿಡಿಯೋ ಎಲ್ಲಿಗೆ ಸೇರಿದ್ದು, ಯಾವ ಬೌಲರ್ ಈ ರೀತಿ ಬೌಲ್ ಮಾಡಿದ್ದಾರೆ ಎಂಬ ಬಗ್ಗೆ ನೆಹ್ರಾ ಮಾಹಿತಿ ನೀಡಿಲ್ಲ. ಆದರೆ ಬೌಲರ್ ಶೈಲಿ ಕಂಡು ಕ್ಷಣ ಕಾಲ ಅಚ್ಚರಿಗೆ ಒಳಗಾದ ಅಂಪೈರ್ ಡೆಡ್ ಬಾಲ್ ಎಂದು ತೀರ್ಪು ನೀಡಿದ್ದಾರೆ. ಆದರೆ ಬೌಲರ್ ಹಾಗೂ ತಂಡದ ಆಟಗಾರರು ಮಾತ್ರ ಅಂಪೈರ್ ತೀರ್ಮಾನಕ್ಕೆ ಬೇಸರದೊಂದಿಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ಈ ವಿಡಿಯೋವನ್ನು ಬಿಸಿಸಿಐ ಅಪ್ಲೋಡ್ ಮಾಡಿದ್ದು, ಬ್ಯಾಟ್ಸ್ ಮನ್ ಗಳು ಇಷ್ಟಬಂದಂತೆ ಬ್ಯಾಟ್ ಮಾಡುತ್ತಾರೆ. ಆದರೆ ಬೌಲರ್ ಗೆ ಯಾಕೆ ಈ ಸ್ವಾತಂತ್ರ್ಯ ಇಲ್ಲ. ಇದು ಸರಿಯೇ ಎಂದು ಕ್ರಿಕೆಟ್ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

    https://www.instagram.com/p/Bp6AV6FAYSt/?utm_source=ig_web_copy_link

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಶ್ರೀಲಂಕಾ ಟೆಸ್ಟ್ ವೇಳೆ ಹೊಸ ಇನ್ನಿಂಗ್ಸ್ ಆರಂಭಿಸಿದ ನೆಹ್ರಾ

    ಶ್ರೀಲಂಕಾ ಟೆಸ್ಟ್ ವೇಳೆ ಹೊಸ ಇನ್ನಿಂಗ್ಸ್ ಆರಂಭಿಸಿದ ನೆಹ್ರಾ

    ಕೋಲ್ಕತ್ತಾ: ನ್ಯೂಜಿಲೆಂಡ್ ವಿರುದ್ಧ ಕೊನೆಯ ಟಿ 20 ಪಂದ್ಯವನ್ನು ಆಡಿ ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಗುಡ್‍ಬೈ ಹೇಳಿದ್ದ ಎಡಗೈ ವೇಗದ ಬೌಲರ್ ಆಶಿಶ್ ನೆಹ್ರಾ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.

    ನೆಹ್ರಾ ಶ್ರೀಲಂಕಾ ವಿರುದ್ಧ ಈಡನ್ ಗಾರ್ಡನ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಬಗ್ಗೆ ಮಾಜಿ ಟೀಂ ಇಂಡಿಯಾ ಆಟಗಾರ ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿ ನೆಹ್ರಾ ಅವರನ್ನು ಸ್ವಾಗತಿಸಿದ್ದಾರೆ.

    ಕ್ರಿಕೆಟ್ ನಲ್ಲಿ ನಮಗೆ ಮನರಂಜನೆ ನೀಡುತ್ತಿದ್ದ ನೆಹ್ರಾ ಇನ್ನು ಮುಂದೆ ಮೈಕ್ ಮುಂದೆ ಮನರಂಜನೆ ನೀಡಲಿದ್ದಾರೆ ಎಂದು ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿದ್ದಾರೆ.

    1979ರ ಏಪ್ರಿಲ್ 29ರಂದು ದೆಹಲಿಯಲ್ಲಿ ಜನಿಸಿದ ನೆಹ್ರಾಗೆ ಈಗ 38 ವರ್ಷ. 1999ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ ಗೆ ಎಂಟ್ರಿಕೊಟ್ಟ ನೆಹ್ರಾ 2004ರಲ್ಲಿ ಪಾಕ್ ವಿರುದ್ಧ ರಾವಲ್ಪಿಂಡಿಯಲ್ಲಿ ಕೊನೆಯ ಟೆಸ್ಟ್ ಆಡಿದ್ದರು.

    2001ರಲ್ಲಿ ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ಮೊದಲ ಏಕದಿನ ಆಡಿದ್ದರೆ, 2011ರಲ್ಲಿ ಮೊಹಾಲಿಯಲ್ಲಿ ಪಾಕ್ ವಿರುದ್ಧ ಕೊನೆಯ ಪಂದ್ಯ ಆಡಿದ್ದರು. 2009ರಲ್ಲಿ ನಾಗ್ಪುರದಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಟಿ20 ಪಂದ್ಯ ಆಡಿದ್ದರು.

    17 ಟೆಸ್ಟ್ ಗಳಿಂದ 44 ವಿಕೆಟ್ ಪಡೆದಿರುವ ನೆಹ್ರಾ 120 ಏಕದಿನದಿಂದ 157 ವಿಕೆಟ್ ಸಂಪಾದಿಸಿದ್ದಾರೆ. 27 ಟಿ20 ಪಂದ್ಯಗಳಿಂದ 34 ವಿಕೆಟ್ ಗಳಿಸಿದ್ದಾರೆ. ಕೊನೆಯ ಟಿ20 ಪಂದ್ಯದಲ್ಲಿ ನೆಹ್ರಾ 4 ಓವರ್ ಎಸೆದು 29 ರನ್ ನೀಡಿದ್ದರು.

    ಇದನ್ನೂ ಓದಿ: ಮೊದಲ ಟಿ20ಯಲ್ಲಿ ನೆಹ್ರಾ ಕೊನೆಯ ಓವರ್ ಎಸೆದಿದ್ದು ಯಾಕೆ ಅನ್ನೋದು ರಿವೀಲ್ ಆಯ್ತು

  • ಮೊದಲ ಟಿ20ಯಲ್ಲಿ ನೆಹ್ರಾ ಕೊನೆಯ ಓವರ್ ಎಸೆದಿದ್ದು ಯಾಕೆ ಅನ್ನೋದು ರಿವೀಲ್ ಆಯ್ತು

    ಮೊದಲ ಟಿ20ಯಲ್ಲಿ ನೆಹ್ರಾ ಕೊನೆಯ ಓವರ್ ಎಸೆದಿದ್ದು ಯಾಕೆ ಅನ್ನೋದು ರಿವೀಲ್ ಆಯ್ತು

    ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಶಿಶ್ ನೆಹ್ರಾ ಕೊನೆಯ ಓವರ್ ಎಸೆದಿದ್ದು ಯಾಕೆ ಎನ್ನುವುದು ರಿವೀಲ್ ಆಗಿದೆ.

    ಮಾಜಿ ಕ್ರಿಕೆಟ್ ಆಟಗಾರ ಸಂಜಯ್ ಮಂಜ್ರೇಕರ್ ಜೊತೆ ಮಾತನಾಡಿದ ನೆಹ್ರಾ, ಭಾರತದ ತಂಡದಲ್ಲಿ ಅತಿ ಹೆಚ್ಚು ಬಾರಿ ಕೊನೆಯ ಓವರ್ ಎಸೆದ ಬೌಲರ್ ನಾನು. ಆದರೆ ಈ ಪಂದ್ಯದಲ್ಲಿ ಅಷ್ಟೊಂದು ಒತ್ತಡ ಇರಲಿಲ್ಲ. ನಾಯಕ ವಿರಾಟ್ ಕೊಹ್ಲಿ ಕೊನೆಯ 2-3 ಓವರ್ ಇದ್ದಾಗ ನಾನೇ ಕೊನೆಯ ಓವರ್ ಎಸೆಯುತ್ತೇನೆ ಎಂದು ಹೇಳಿದೆ ಎಂಬುದಾಗಿ ತಿಳಿಸಿದರು.

    ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿ, 2003ರಲ್ಲಿ ನೆಹ್ರಾ ವಿಶ್ವಕಪ್ ಆಡುತ್ತಿದ್ದಾಗ ನನಗೆ 13 ವರ್ಷ. ಆ ವೇಳೆ ಶಾಲಾ ತಂಡದಲ್ಲಿ ಸ್ಥಾನ ಪಡೆಯಲು ಕಷ್ಟಪಡುತ್ತಿದ್ದೆ. 19 ವರ್ಷಗಳ ಕಾಲ ವೇಗದ ಬೌಲರ್ ಆಗಿ ಜೀವನ ನಡೆಸುವುದು ಸುಲಭದ ಮಾತಲ್ಲ. ವೈಯಕ್ತಿಕವಾಗಿ ನೆಹ್ರಾ ನನಗೆ ಗೊತ್ತಿದ್ದು, ಎಷ್ಟು ಪರಿಶ್ರಮ ಪಟ್ಟಿದ್ದಾರೆ ಎನ್ನುವುದು ನನಗೆ ತಿಳಿದಿದೆ. ಇನ್ನು ಮುಂದೆ ಅವರು ತಮ್ಮ ಸುಂದರವಾದ ಕುಟುಂಬದ ಜೊತೆ ಕಾಲ ಕಳೆಯಬಹುದು ಎಂದು ಹೇಳಿ ವಿಶ್ರಾಂತ ಜೀವನಕ್ಕೆ ಶುಭಹಾರೈಸಿದರು.

    1979ರ ಏಪ್ರಿಲ್ 29ರಂದು ದೆಹಲಿಯಲ್ಲಿ ಜನಿಸಿದ ನೆಹ್ರಾಗೆ ಈಗ 38 ವರ್ಷ. 1999ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ ಗೆ ಎಂಟ್ರಿಕೊಟ್ಟ ನೆಹ್ರಾ 2004ರಲ್ಲಿ ಪಾಕ್ ವಿರುದ್ಧ ರಾವಲ್ಪಿಂಡಿಯಲ್ಲಿ ಕೊನೆಯ ಟೆಸ್ಟ್ ಆಡಿದ್ದರು.

    2001ರಲ್ಲಿ ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ಮೊದಲ ಏಕದಿನ ಆಡಿದ್ದರೆ, 2011ರಲ್ಲಿ ಮೊಹಾಲಿಯಲ್ಲಿ ಪಾಕ್ ವಿರುದ್ಧ ಕೊನೆಯ ಪಂದ್ಯ ಆಡಿದ್ದರು. 2009ರಲ್ಲಿ ನಾಗ್ಪುರದಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಟಿ20 ಪಂದ್ಯ ಆಡಿದ್ದರು.

    17 ಟೆಸ್ಟ್ ಗಳಿಂದ 44 ವಿಕೆಟ್ ಪಡೆದಿರುವ ನೆಹ್ರಾ 120 ಏಕದಿನದಿಂದ 157 ವಿಕೆಟ್ ಸಂಪಾದಿಸಿದ್ದಾರೆ. 27 ಟಿ20 ಪಂದ್ಯಗಳಿಂದ 34 ವಿಕೆಟ್ ಗಳಿಸಿದ್ದಾರೆ. ಕೊನೆಯ ಟಿ20 ಪಂದ್ಯದಲ್ಲಿ ನೆಹ್ರಾ 4 ಓವರ್ ಎಸೆದು 29 ರನ್ ನೀಡಿದ್ದರು.

  • ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಗೆ ನೆಹ್ರಾ ಆಯ್ಕೆ ಆಗಿದ್ದು ಹೇಗೆ?

    ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಗೆ ನೆಹ್ರಾ ಆಯ್ಕೆ ಆಗಿದ್ದು ಹೇಗೆ?

    ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಟಿ-20 ಸರಣಿಗೆ ಆಶಿಶ್ ನೆಹ್ರಾ(38) ರನ್ನು ಅಯ್ಕೆ ಮಾಡಿ ಟೀಂ ಇಂಡಿಯಾ ಆಯ್ಕೆ ಸಮಿತಿ ಅಭಿಮಾನಿಗಳಲ್ಲಿ ಅಚ್ಚರಿಯನ್ನು ಮೂಡಿಸಿದೆ.

    ಯುವರಾಜ್ ಸಿಂಗ್ ಹಾಗೂ ಸುರೇಶ್ ರೈನಾ ಫಿಟ್ ನೆಸ್ ಪರೀಕ್ಷೆಯಲ್ಲಿ ಫೇಲ್ ಆದ ಹಿನ್ನೆಲೆಯಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರೆ, ನೆಹ್ರಾ ಫಿಟ್‍ನೆಸ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದು 8 ತಿಂಗಳ ಬಳಿಕ ತಂಡಕ್ಕೆ ಕಮ್‍ಬ್ಯಾಕ್ ಮಾಡಿದ್ದಾರೆ.

    ನೆಹ್ರಾ ಕಳೆದ ಐಪಿಎಲ್‍ನಲ್ಲಿ ಗಾಯಗೊಂಡು ಕೆಲವು ದಿನಗಳ ಕಾಲ ವಿಶ್ರಾಂತಿಯನ್ನು ಪಡೆದಿದ್ದರು. ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಗೆ ಕಮ್‍ಬ್ಯಾಕ್ ಮಾಡಿರುವ ನೆಹ್ರಾರ ವೃತ್ತಿ ಬದುಕಿನ ಸೆಕೆಂಡ್ ಇನಿಂಗ್ಸ್ ಆರಂಭವಾಗಿದೆ. ಕ್ರೀಡಾಂಗಣದಲ್ಲಿ ಅಪಾರ ಅನುಭವನ್ನು ಹೊಂದಿರುವ ನೆಹ್ರಾ ಯುವ ಬೌಲರ್‍ಗಳಿಗೆ ಉತ್ತಮ ಮಾರ್ಗದರ್ಶನ ನೀಡಲಿದ್ದಾರೆ.

    ಈ ಕುರಿತು ಪ್ರತಿಕ್ರಿಯೆಯನ್ನು ನೀಡಿರುವ ಟೀಮ್ ಹಿರಿಯ ಅಧಿಕಾರಿಯೊಬ್ಬರು ನೆಹ್ರಾ ಕಳೆದ ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ್ದು, ಫಿಟ್‍ನೆಸ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ವರ್ಷದ ಆರಂಭದಲ್ಲಿ ಇಂಗ್ಲೆಡ್ ವಿರುದ್ಧ ನಡೆದ ಸರಣಿಯಗೆ ಆಯ್ಕೆಯಾಗಿ ಉತ್ತಮ ಪ್ರದರ್ಶನವನ್ನು ನೀಡಿದ್ದರು. ಈ ಸರಣಿಯಲ್ಲಿ ಗಾಯಗೊಂಡ ನೆಹ್ರಾ ಅವರಿಗೆ ವೆಸ್ಟ್‍ಇಂಡಿಸ್ ಹಾಗೂ ಶ್ರೀಲಂಕಾ ವಿರುದ್ಧ ಸರಣಿಗಳಿಂದ ಕೆಲವು ದಿನಗಳ ಕಾಲ ವಿಶ್ರಾಂತಿಯನ್ನು ನೀಡಲಾಗಿತ್ತು. ಪ್ರಸ್ತುತ ಅವರು ಸಂಪೂರ್ಣ ಫಿಟ್ ಆಗಿದ್ದು ಆಯ್ಕೆಯಾಗಿದ್ದಾರೆ ಎಂದು ಅಧಿಕಾರಿ ತಿಳಿಸಿದರು.

    ನೆಹ್ರಾ ಅವರು ಇದುವರೆಗೂ 26 ಟಿ-20 ಪಂದ್ಯಗಳನ್ನು ಆಡಿದ್ದು, 34 ವಿಕೆಟ್‍ಗಳನ್ನು ಪಡೆದಿದ್ದಾರೆ. ಮೈದಾನದಲ್ಲಿ ಉತ್ತಮ ಪ್ರದರ್ಶವನ್ನು ನೀಡಲು ವಯಸ್ಸಿಗೆ ಸಂಬಂಧವಿಲ್ಲ ಎಂದು 38 ವರ್ಷದ ನೆಹ್ರಾ ಸಾಬೀತುಪಡಿಸಿದ್ದಾರೆ. ನೆಹ್ರಾ ತಮ್ಮ ವೃತ್ತಿ ಬದುಕಿನಲ್ಲಿ ಎಂದೂ ಕೆಟ್ಟ ಪ್ರದರ್ಶನವನ್ನು ನೀಡಿ ತಂಡದಿಂದ ಹೊರಗುಳಿದಿರಲಿಲ್ಲ ಹೆಚ್ಚಿನ ಸಮಯ ಗಾಯ ಸಮಸ್ಯೆಯಿಂದ ತಂಡದಿಂದ ದೂರ ಉಳಿದಿದ್ದರು.

    ಟಿ20 ಸರಣಿಗೆ ಯುವಿ ಕೈಬಿಟ್ಟಿದ್ದು ಯಾಕೆ: ಬಿಸಿಸಿಐ ವಿರುದ್ಧ ಅಭಿಮಾನಿಗಳು ಗರಂ