ಬಹುನಿರೀಕ್ಷಿತ ‘ಪುಷ್ಪ 2’ (Pushap 2) ಸಿನಿಮಾದ ಹಾಡುಗಳು ಸಖತ್ ಸದ್ದು ಮಾಡುತ್ತಿವೆ. ಅದರಲ್ಲೂ ಇತ್ತೀಚೆಗೆ ರಿಲೀಸ್ ಆದ ಸೂಸೇನೆ ಎಂಬ ಹಾಡಿಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಈ ಹಾಡಿಗೆ ನಟಿ ಆಶಿಕಾ ರಂಗನಾಥ್ (Ashika Ranganath) ಕೂಡ ಹೆಜ್ಜೆ ಹಾಕಿದ್ದಾರೆ.
ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ಪುಷ್ಪ 2 ಸಿನಿಮಾ ಸೂಸೇನೆ ಸಾಂಗ್‌ಗೆ ಈಗಾಗಲೇ ಸಾಕಷ್ಟು ಜನ ರೀಲ್ಸ್ ಮಾಡುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಇದರ ನಡುವೆ ಆಶಿಕಾ ಕೂಡ ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಸೊಂಟ ಬಳುಕಿಸಿದ ಆಶಿಕಾಗೆ ಬಗೆ ಬಗೆಯ ಕಾಮೆಂಟ್ಸ್ ಹರಿದು ಬರುತ್ತಿವೆ. ಇದನ್ನೂ ಓದಿ:ಕಾನೂನಿಗಿಂತ ಯಾರು ಮೇಲಲ್ಲ, ಈ ಕೃತ್ಯ ಮಾಡುವ ವ್ಯಕ್ತಿತ್ವ ದರ್ಶನ್‌ದಲ್ಲ- ಮೌನ ಮುರಿದ ಸುಮಲತಾ
ಅಂದಹಾಗೆ, ನಟಿ ಆಶಿಕಾ ಕೂಡ ಕನ್ನಡದ ಜೊತೆ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರಿಗೂ ಉತ್ತಮ ಅವಕಾಶಗಳು ಅರಸಿ ಬರುತ್ತಿವೆ.
ಕನ್ನಡದ ಪ್ರತಿಭಾನ್ವಿತ ನಟ ಕಮ್ ರ್ಯಾಪರ್ ಅಲೋಕ್ (All ok) ಸದಾ ಹೊಸ ಪ್ರಯೋಗದ ಮೂಲಕ ಸದ್ದು ಮಾಡುತ್ತಾರೆ. ಹೊಸ ಹೊಸ ರ್ಯಾಪ್ ಸಾಂಗ್ (Rap song) ಮೂಲಕ ಮೋಡಿ ಮಾಡುತ್ತಾರೆ. ಇದೀಗ ಮಲ್ಲಿಗೆ ಹೂವಿನ ಮೇಲೆ ಹಾಡು ಮಾಡಿ, ಹೆಜ್ಜೆ ಹಾಕಿದ್ದಾರೆ. ಅಲೋಕ್‌ಗೆ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ (Ashika ranganath) ಸಾಥ್ ನೀಡಿದ್ದಾರೆ.
ಟ್ರೆಂಡಿ ಹಾಡುಗಳನ್ನ ಕಂಪೋಸ್ ಮಾಡುವುದರಲ್ಲಿ ಎತ್ತಿದ ಕೈ ಆಲ್ ಓಕೆ ಯಾವಾಗಲೂ ಮುಂದು. ಕನ್ನಡದ ಕಂಪು ಪ್ರತಿ ಹಾಡಲ್ಲೂ ಇರುತ್ತವೆ. ತಮ್ಮ ಹಾಡಿನ ಚೌಕಟ್ಟಿನಲ್ಲಿ ಕನ್ನಡದ ಕಂಪನ್ನ ಸೂಸುತ್ತಲೇ ಇರೋ ಈ ಗಾಯಕ, ಈ ಸಲ ಸಿಂಗಪುರಕ್ಕೆ ಹೋಗಿದ್ದಾರೆ. ಅಲ್ಲಿಯ ಸಮುದ್ರದ ಮೇಲೆ ತೇಲೋ ಬೃಹತ್ ಕ್ರೂಸ್ ಮೇಲೆ ಮಲ್ಲಿಗೆ ಹೂವಿನ ಅಂದ ಚಂದವನ್ನ ಸೆರೆ ಹಿಡಿದು ಚಂದದ ಹಾಡೊಂದನ್ನ ಮಾಡಿಕೊಂಡು ಬಂದಿದ್ದಾರೆ. ಅಷ್ಟೇ ಅಲ್ಲ, ಮಲ್ಲಿಗೆ ಹೂವಿನ ಅಂದವನ್ನ ಆಶಿಕಾ ರಂಗನಾಥ್ ಬ್ಯೂಟಿಗೆ ಹೋಲಿಸಲಾಗಿದೆ. ಚೆಂದದ ಹಾಡಿಗೆ ಅಲೋಕ್ (Alok) ಜೊತೆ ಪಟಾಕಿ ಪೋರಿ ಆಶಿಕಾ(Ashika ranganath) ಕೂಡ ಹೆಜ್ಜೆ ಹಾಕಿದ್ದಾರೆ. ಇದನ್ನೂ ಓದಿ:ಪಾಕಿಸ್ತಾನಿ ಬೌಲರ್ ನಸೀಮ್ ಶಾಗೆ ಬೋಲ್ಡ್ ಆದ `ಐರಾವತ’ ನಟಿ
ಈ ಹಾಡಿನಲ್ಲಿ ಆಶಿಕಾ ಮುದ್ದಾದ ನಗು, ನಟಿಯ ಸ್ಟೈಲ್, ಮತ್ತು ಸಿಂಗಾಪುರದ ಬ್ಯೂಟಿಫುಲ್ ಲೋಕೆಷನ್ ಹೈಲೈಟ್ ಆಗಿದೆ. ಈ ಹೊಸ ಆಲ್ಬಂ ಸಾಂಗ್ ಮೂಲಕ ಆಶಿಕಾ ರಂಗನಾಥ್ ಮತ್ತು ಅಲೋಕ್ ಸದ್ದು ಮಾಡುತ್ತಿದೆ. ಸಾಂಗ್ ನೋಡಿ ಫ್ಯಾನ್ಸ್ ಕೂಡ ಫಿದಾ ಆಗಿದ್ದಾರೆ.
Live Tv
[brid partner=56869869 player=32851 video=960834 autoplay=true]
ಭಿನ್ನ ಸಿನಿಮಾಗಳನ್ನ ಪ್ರಸ್ತುತಪಡಿಸುವುದರಲ್ಲಿ ನಿರ್ದೇಶಕ ಸಿಂಪಲ್ ಸುನಿ ಯಾವಾಗಲೂ ಮುಂದು. ಡಿಫರೆಂಟ್ ಕಥೆ ಹೊತ್ತು `ಗತವೈಭವ’ ಚಿತ್ರದ ಮೂಲಕ ಸದ್ದು ಮಾಡ್ತಿದ್ದಾರೆ. `ಅವತಾರ ಪುರುಷ’ ಚಿತ್ರದ ನಂತರ ಮತ್ತೆ ಆಶಿಕಾ ರಂಗನಾಥ್‌ಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ʻಗತವೈಭವʼ ಚಿತ್ರಕ್ಕೆ ನಾಯಕಿಯಾಗಿ ಪಟಾಕಿ ಪೋರಿ ಸಾಥ್ ನೀಡ್ತಿದ್ದಾರೆ.
ನಿರ್ದೇಶಕ ಸಿಂಪಲ್ ಸುನಿ ಬತ್ತಳಿಕೆಯ ಬಹುನಿರೀಕ್ಷಿತ ಸಿನಿಮಾ `ಗತವೈಭವ’ ಈ ಸಿನಿಮಾ ಮೂಲಕ ಶಾಸಕ ಎಸ್.ಆರ್ ಶ್ರೀನಿವಾಸ್ ಪುತ್ರ ದುಷ್ಯಂತ್ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ವಿಭಿನ್ನವಾಗಿ ದುಷ್ಯಂತ್ ಇಂಟ್ರುಡ್ಷನ್ ಟೀಸರ್ ರಿಲೀಸ್ ಮಾಡಿದ್ದ ಸುನಿ ಈಗ ನಾಯಕಿಯನ್ನು ಚಿತ್ರಪ್ರೇಮಿಗಳಿಗೆ ಪರಿಚಯಿಸಿದ್ದಾರೆ. ಇದನ್ನೂ ಓದಿ:‘ಹರ್ ಘರ್ ತಿರಂಗಾ’ ಆಂದೋಲನಕ್ಕೆ ಯಶ್, ಸುದೀಪ್ ಸೇರಿದಂತೆ ಹಲವು ಗಣ್ಯರು ಸಾಥ್
`ಗತವೈಭವ’ಕ್ಕೆ ನಾಯಕಿ ಯಾರು ಆಗ್ತಾರೆ ಎಂಬ ಕುತೂಹಲ ಚಿತ್ರರಸಿಕರಲ್ಲಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಹೀರೋ ಇಂಡ್ರುಡಕ್ಷನ್ ಟೀಸರ್ ದಾಟಿಯಲ್ಲಿಯೇ ಸುನಿ ತಮ್ಮದೇ ಸ್ಟೈಲ್‌ನಲ್ಲಿ ನಾಯಕಿಯನ್ನು ಪರಿಚಯಿಸಿದ್ದಾರೆ. ಹೊಸ ಹೀರೋಗೆ ಆಶಿಕಾ ಹೀರೋಯಿನ್ ಆಗಲು ಸುನಿ ಹೇಗೆ ಒಪ್ಪಿಸಿದ್ರೂ ಅನ್ನೋದನ್ನು ಸಣ್ಣದೊಂದು ಝಲಕ್ ಮೂಲಕ ತೋರಿಸಿಕೊಟ್ಟಿದ್ದಾರೆ. ವಿಡಿಯೋ ಕೊನೆಯಲ್ಲಿ ನಾಯಕಿ ಆಶಿಕಾ ಲುಕ್ ರಿವೀಲ್ ಮಾಡಿದ್ದು, ದೇವಕನ್ಯೆ ಗೆಟಪ್‌ನಲ್ಲಿ ಚುಟುಚುಟು ಬ್ಯೂಟಿ ಮಿಂಚಿದ್ದಾರೆ.
ರೊಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾದಲ್ಲಿ ಸೈಂಟಿಫಿಕ್ ಥ್ರಿಲ್ಲರ್ ಕಂಟೆಂಟ್ ಕೂಡ ಇರಲಿದ್ದು, ಈಗಾಗಲೇ 40ರಷ್ಟು ಕಂಪ್ಲೀಟ್ ಆಗಿದೆ. ಚಿತ್ರದಲ್ಲಿ ಆಶಿಕಾ ದುಷ್ಯಾಂತ್‌ಗೆ ಜೋಡಿಯಾಗಿ ನಟಿಸಲಿದ್ದು, ದೇವಕನ್ಯೆ ಹಾಗೂ ಪೋರ್ಚುಗೀಸ್ ಯುವತಿ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಗತವೈಭವ ಸಿನಿಮಾಕ್ಕೆ ಕಥೆ-ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದು, ಸುನಿ ಸಿನಿಮಾಸ್ ಸಂಸ್ಥೆಯಡಿ ದೀಪಿಕ್ ಹಾಗೂ ಸುನಿ ಚಿತ್ರ ನಿರ್ಮಾಣ ಮಾಡ್ತಿದ್ದು, ವಿಲಿಯಂ ಡೇವಿಡ್ ಕ್ಯಾಮೆರಾ ವರ್ಕ್, ಜೂಡಾ ಸ್ಯಾಂಡಿ ಸಂಗೀತ ಚಿತ್ರಕ್ಕಿದೆ.
Live Tv
[brid partner=56869869 player=32851 video=960834 autoplay=true]