Tag: Ashika Ranganath

  • ಚುಟು ಚುಟು ಹುಡುಗಿ ಆಶಿಕಾ ರಂಗನಾಥ್ ಮ್ಯಾರೇಜ್ ಫಿಕ್ಸ್, ಹುಡುಗ ಸಸ್ಪೆನ್ಸ್

    ಚುಟು ಚುಟು ಹುಡುಗಿ ಆಶಿಕಾ ರಂಗನಾಥ್ ಮ್ಯಾರೇಜ್ ಫಿಕ್ಸ್, ಹುಡುಗ ಸಸ್ಪೆನ್ಸ್

    ಚಂದನವನದ ಚುಟು ಚುಟು ಖ್ಯಾತಿಯ ಆಶಿಕಾ ರಂಗನಾಥ್ ಬಹುಬೇಡಿಕೆಯಲ್ಲಿ ಇರುವಾಗಲೇ ಮದುವೆ ಆಗುತ್ತಿರುವ ಸುದ್ದಿ ಕೊಟ್ಟು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ನಟನೆ, ಡಾನ್ಸ್ ಮೂಲಕ ಹೆಚ್ಚು ಫೇಮಸ್ ಆದ ಇವರು, ಕಡಿಮೆ ಸಮಯದಲ್ಲಿಯೇ ಹೆಚ್ಚು ಅಭಿಮಾನಿ ಬಳಗ ಪಡೆದುಕೊಂಡರು. ಆದರೆ ಈಗ ಆಶಿಕಾ ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ಚಂದನವನದಲ್ಲಿ ಹರಿದಾಡುತ್ತಿದೆ.

    ಇಷ್ಟು ಬೇಗ ಆಶಿಕಾ ಅವರಿಗೆ ಕಂಕಣ ಭಾಗ್ಯ ಕೂಡಿಬಂತಾ ಎಂದು ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಹೌದು, ಆಶಿಕಾ ಇದೇ ವರ್ಷವೇ ಮದುವೆಯಾಗುವ ಎಲ್ಲ ಸಾಧ್ಯತೆಗಳು ಇವೆ. ಈ ಕುರಿತು ಅವರೇ ಅಧಿಕೃತವಾಗಿ ಸ್ವಲ್ಪದಿಗಳಲ್ಲಿ ತಿಳಿಸುತ್ತಾರೆ ಎಂದು ಅವರ ಆಪ್ತ ಬಳಗದಿಂದ ತಿಳಿದುಬಂದಿದೆ. ಇದನ್ನೂ ಓದಿ: ಕಷ್ಟಪಟ್ಟು ಮಾಡುವ ಸಿನಿಮಾ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಆಲಿಯಾ ಗರಂ

    ಆಶಿಕಾ ಕೈ ಹಿಡಿಯುವ ಅದೃಷ್ಟವಂತ ಹುಡುಗ ಯಾರು ಎಂಬುದು ಸದ್ಯಕ್ಕೆ ಸಸ್ಪೆನ್ಸ್. ಆಶಿಕಾ ಮನೆಯವರೇ ನೋಡಿದ ಹುಡುಗನ ಜತೆ ಚುಟುಚುಟು ಹುಡುಗಿ ಹಸೆಮಣೆ ಏರಲಿದ್ದಾರೆ ಎನ್ನುವುದು ಅಸಲಿ ಕಹಾನಿ. ಹುಡುಗ ಬ್ಯುಸಿನೆಸ್ ಮ್ಯಾನ್ ಆಗಿರುವುದು ಇನ್ನೂ ಲೆಟೆಸ್ಟ್ ನ್ಯೂಸ್.

    ಈ ಹುಡುಗ ಆಶಿಕಾ ಕುಟುಂಬಕ್ಕೆ ತುಂಬಾ ಪರಿಚಯವಿದ್ದ ಹಿನ್ನೆಲೆ ಕುಟುಂಬದವರೇ ಆಗಿದ್ದಾರೆ. ಹಾಗಾಗಿ ಹುಡುಗನನ್ನು ನೋಡಿ ಮಾತುಕತೆ ಮಾಡಿದ್ದಾರೆ ಎಂದು ಆಪ್ತರು ತಿಳಿಸಿದ್ದಾರೆ. ಹುಡುಗನ ಹೆಸರು ಮತ್ತು ಮದುವೆ ದಿನಾಂಕ ಸದ್ಯದಲ್ಲೇ ತಿಳಿಸಲಿದೆ ಆಶಿಕಾ ಕುಟುಂಬ. ಇದನ್ನೂ ಓದಿ: ʼಆರ್‌ಆರ್‌ಆರ್‌ʼ ರಿಲೀಸ್ ಆದ ಕೆಲವೇ ದಿನಗಳಲ್ಲಿ 100 ಮಿಲಿಯನ್ ದಾಖಲೆ

    ಮೊದಲು ಈ ಜೋಡಿಯ ನಿಶ್ವಿತಾರ್ಥ ನೆರವೇರಲಿದ್ದು, ನಂತರ ವಿಜೃಂಭಣೆಯಿಂದ ಮದುವೆ ನಡೆಯಲಿದೆ. ಇದೇ ಡಿಸೆಂಬರ್ ನಲ್ಲಿ ಆಶಿಕಾ ಅವರ ನಿಶ್ವಿತಾರ್ಥ ಫಿಕ್ಸ್ ಆಗುವ ಸಾಧ್ಯತೆ ಇದೆ.

  • ಜೇಮ್ಸ್ ಟ್ರೇಡ್ ಮಾರ್ಕ್ ಹಾಡಿಗೆ ಪುನೀತ್ ಭರ್ಜರಿ ಸ್ಟೆಪ್: ಭಾವುಕರಾದ ಅಭಿಮಾನಿಗಳು

    ಜೇಮ್ಸ್ ಟ್ರೇಡ್ ಮಾರ್ಕ್ ಹಾಡಿಗೆ ಪುನೀತ್ ಭರ್ಜರಿ ಸ್ಟೆಪ್: ಭಾವುಕರಾದ ಅಭಿಮಾನಿಗಳು

    ಇಂದು ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರದ ಪ್ರೊಮೊಷನ್ ಸಾಂಗ್ ‘ಟ್ರೇಡ್ ಮಾರ್ಕ್’ ಬಿಡುಗಡೆ ಆಗಿದೆ. ರಿಲೀಸ್ ಆದ ಕೆಲವೇ ನಿಮಿಷಗಳಲ್ಲೇ ಈ ಹಾಡು ವೈರಲ್ ಆಗಿದ್ದು, ಈ ಸಿನಿಮಾದ ಕೆಲ ಹಾಡಿಗೆ ಪುನೀತ್ ಅವರು ಹಾಕಿದ ಸ್ಟೆಪ್ ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ. ಇದನ್ನೂ ಓದಿ : ಪ್ರಶ್ನೆ ಮಾಡುವುದನ್ನು ನಿಲ್ಲಿಸಲ್ಲ : ಮತ್ತೆ ಗುಡುಗಿದ ನಟ ಚೇತನ್

    ನಟನೆಯಷ್ಟೇ ನೃತ್ಯದಲ್ಲೂ ಪುನೀತ್ ಪಳಗಿದವರು. ಕೆಲವು ಸಲ ಸಿನಿಮಾ ಗೆಲ್ಲದಿದ್ದರೂ, ಹಾಡುಗಳು ಸೂಪರ್ ಹಿಟ್ ಆದ ಉದಾಹರಣೆಗಳು ಕೂಡ ಇವೆ. ಅದರಲ್ಲೂ ಹಾಡಿಗಾಗಿ ಅವರು ಹಾಕುವ ಸ್ಟೆಪ್ ಕೂಡ ವಿಭಿನ್ನವಾಗಿರುತ್ತವೆ. ಹಾಗಾಗಿ ಅಪ್ಪು ಡಾನ್ಸ್ ಅಂದರೆ ಎಲ್ಲರಿಗೂ ಇಷ್ಟ. ಜೇಮ್ಸ್ ನಲ್ಲೂ ಅವರು ಪವರ್ ಫುಲ್ ಆಗಿಯೇ ನೃತ್ಯ ಮಾಡಿದ್ದಾರೆ. ಇದೀಗ ಬಿಡುಗಡೆ ಆಗಿರುವ ಪ್ರಮೋಷನಲ್ ಸಾಂಗ್ ನಲ್ಲಿ ಒಂದಷ್ಟು ತುಣುಕುಗಳನ್ನು ಹಾಕಿದ್ದಾರೆ ನಿರ್ದೇಶಕರು. ಈ ನೃತ್ಯವೇ ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸಿದೆ. ಇಂತಹ ಡಾನ್ಸಿಗಾದರೂ ನೀವು ಇರಬೇಕಿತ್ತು ಎನ್ನುವ ಭಾವುಕ ನುಡಿಗಳನ್ನು ಅಭಿಮಾನಿಗಳು ಆಡಿದ್ದಾರೆ. ಇದನ್ನೂ ಓದಿ : ಶಿವರಾತ್ರಿ ವಿಶೇಷ: ತೆರೆಗೆ ಶಿವನಾಗಿ ದರ್ಶನ ಕೊಟ್ಟ ನಟ ಶಿವರು

    ಟ್ರೇಡ್ ಮಾರ್ಕ್ ಇದೊಂದು ಲಿರಿಕಲ್ ವಿಡಿಯೋ ಆಗಿದ್ದು, ಜೇಮ್ಸ್ ಸಿನಿಮಾದ ಮುಹೂರ್ತದಂದು ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಕ್ಲ್ಯಾಪ್ ಮಾಡುವ ದೃಶ್ಯದಿಂದ ಶುರುವಾಗುತ್ತದೆ. ಚಂದನ್ ಶೆಟ್ಟಿ, ಆಶಿಕಾ ರಂಗನಾಥ್, ಶ್ರೀಲೀಲಾ, ಮೋಹನ್ ಮೊದಲಾದವರು ಸ್ಟೆಪ್ ಹಾಕಿದ್ದಾರೆ. ಅಲ್ಲದೇ, ಜೇಮ್ಸ್ ಸಿನಿಮಾದ ಹಾಡಿನ ಕೆಲ ತುಣುಕುಗಳನ್ನೂ ಈ ವಿಡಿಯೋದಲ್ಲಿ ಹಾಕಲಾಗಿರುವುದು ಮತ್ತೊಂದು ವಿಶೇಷ. ಇದನ್ನೂ ಓದಿ : ಹರಿಪ್ರಿಯಾ ಟೆಂಪಲ್ ರನ್: ಉಡುಪಿ ಮಠದ ಆನೆಯೊಂದಿಗೆ ಸಮಯ ಕಳೆದ ನಟಿ

    ಚರಣ್ ರಾಜ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಟ್ರೇಡ್ ಮಾರ್ಕ್ ಗೀತೆಗೆ ವಿಕ್ಕಿ, ಅದಿತಿ ಸಾಗರ್ ಮತ್ತು ಚಂದನ್ ಶೆಟ್ಟಿ, ಶರ್ಮಿಳಾ, ಯುವ ರಾಜ್ ಕುಮಾರ್ ಮತ್ತು ಚರಣ್ ರಾಜ್ ದನಿಯಾಗಿದ್ದಾರೆ. ಚೇತನ್ ಕುಮಾರ್ ಸಾಹಿತ್ಯದಲ್ಲಿ ಹಾಡು ಮೂಡಿ ಬಂದಿದೆ.

  • ನನ್ನನ್ನು ಪ್ರೀತಿಸಿದ್ದಕ್ಕಾಗಿ ನನ್ನ ಎಲ್ಲಾ ಹುಡುಗರಿಗೆ ಥ್ಯಾಂಕ್ಸ್: ಆಶಿಕಾ ರಂಗನಾಥ್

    ನನ್ನನ್ನು ಪ್ರೀತಿಸಿದ್ದಕ್ಕಾಗಿ ನನ್ನ ಎಲ್ಲಾ ಹುಡುಗರಿಗೆ ಥ್ಯಾಂಕ್ಸ್: ಆಶಿಕಾ ರಂಗನಾಥ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಆಶಿಕಾ ರಂಗನಾಥ್ ನಟಿಸಿರುವ ಮದಗಜ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮದಗಜ ಸಿನಿಮಾಗಾಗಿ ತಾವು ಪಟ್ಟಿರುವ ಶ್ರಮದ ಕುರಿತಾಗಿ ಸೋಶಿಯಲ್ ಮಿಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ಮದಗಜ ಸಿನಿಮಾದಲ್ಲಿ ಪಲ್ಲವಿಯಾಗಿ ನಟಿಸಿದ ನಿಜ ಜೀವನದ ಅನುಭವ, ಕೆಲವು ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಈ ಪಾತ್ರಕ್ಕೆ ಸಾಕಷ್ಟು ಪ್ರಯತ್ನಗಳು, ಕಠಿಣ ಪರಿಶ್ರಮ, ತಾಳ್ಮೆ ಮತ್ತು ಪ್ರೀತಿಯನ್ನು ಹಾಕಲಾಗಿದೆ. ಇಂದು ಕರ್ನಾಟಕದೆಲ್ಲೆಡೆಯಿಂದ ಎಲ್ಲರ ಪ್ರೀತಿಯನ್ನು ಸ್ವೀಕರಿಸುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ. ನನ್ನನ್ನು ಪ್ರೀತಿಸಿದ್ದಕ್ಕಾಗಿ ನನ್ನ ಎಲ್ಲಾ ಹುಡುಗರಿಗೆ ಧನ್ಯವಾದಗಳು. ಲವ್ ಯು ಡಾಲಿರ್ಂಗ್ಸ್ ಎಂದು ಬರೆದುಕೊಂಡು ಕೆಲವು ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮದುವೆ ಮನೆಯಲ್ಲಿ ಕೋವಿಡ್ ವ್ಯಾಕ್ಸಿನೇಷನ್

     

    View this post on Instagram

     

    A post shared by Ashika Ranganath (@ashika_rangnath)

    ಮದಗಜ ಸಿನಿಮಾದಲ್ಲಿ ಆಶಿಕಾ ಅವರನ್ನು ಹಳ್ಳಿ ಹುಡುಗಿಯ ಪಾತ್ರದಲ್ಲಿ ನೋಡಬಹುದಾಗಿದೆ. ಗದ್ದೆಯಲ್ಲಿ ಟ್ರ್ಯಾಕ್ಟರ್ ಓಡಿಸುವ ಸಮಯದಲ್ಲಿ ಅವರ ಬೆನ್ನಿಗೆ ಟ್ಯಾನ್ ಆಗಿದೆ. ಈ ಫೋಟೋವನ್ನು ಮತ್ತು ಸಿನಿಮಾದಲ್ಲಿ ಬರುವ ಕೆಲವು ಸೀನ್‍ಗಳ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ತಾವು ಈ ಸಿನಿಮಾಗಾಗಿ ಎಷ್ಟು ಕಷ್ಟ ಪಟ್ಟಿದ್ದಾರೆ ಎನ್ನುವುದನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ. ಮದಗಜ ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದನ್ನೂ ಓದಿ:  ಓಮಿಕ್ರಾನ್‌ನಿಂದ ಗುಣಮುಖರಾಗಿ ಡಿಸ್ಚಾರ್ಜ್‌ ಆದವರಿಗೆ ಹೊಸ ಗೈಡ್‌ಲೈನ್ಸ್‌

  • ಕೆಂಪು ಬಣ್ಣದ ಸೀರೆಯುಟ್ಟು, ಮಲ್ಲಿಗೆ ಮುಡಿದ ಆಶಿಕಾ

    ಕೆಂಪು ಬಣ್ಣದ ಸೀರೆಯುಟ್ಟು, ಮಲ್ಲಿಗೆ ಮುಡಿದ ಆಶಿಕಾ

    ಬೆಂಗಳೂರು: ಸದಾ ಗ್ಲಾಮರ್ ಲುಕ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಸ್ಯಾಂಡಲ್‍ವುಡ್ ನಟಿ ಆಶಿಕಾ ರಂಗನಾಥ್ ಇದೀಗ ಸೀರೆಯುಟ್ಟು ಟ್ರೆಡಿಶನ್ ಲುಕ್‍ನಲ್ಲಿ ಮಿಂಚುತ್ತಿದ್ದಾರೆ.

    ಕನ್ನಡ ಚಿತ್ರರಂಗದ ಯುವ ನಟಿಯರಲ್ಲಿ ಒಬ್ಬರಾಗಿರುವ ಆಶಿಕಾ ರಂಗನಾಥ್ ಸಾಕಷ್ಟು ಅಭಿಮಾನಿ ಬಳಗ ಹೊಂದಿದ್ದಾರೆ. ತಮ್ಮ ಚೆಲುವಿನ ಮೂಲಕವೇ ಕನ್ನಡಿಗರ ಮನ ಗೆದ್ದಿರುವ ಆಶಿಕಾ ರಂಗನಾಥ್ ಮಾಡ್ರೆನ್ ಡ್ರೆಸ್ ಧರಿಸಿದರೂ ಅಥವಾ ಟ್ರೆಡಿಶನ್ ಉಡುಗೆ ತೊಟ್ಟರು ಸಖತ್ ಕ್ಯೂಟ್ ಆಗಿ ಕಾಣಿಸುತ್ತಾರೆ. ಸದ್ಯ ಆಶಿಕಾ ರಂಗನಾಥ್ ಕೆಂಪು ಬಣ್ಣದ ಸೀರೆಯುಟ್ಟು ಪಡ್ಡೆಹುಡುಗರ ನಿದ್ದೆ ಗೇಡಿಸುತ್ತಿದ್ದಾರೆ.

    ಆಶಿಕಾ ರಂಗನಾಥ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಕೆಲವೊಂದು ಫೋಟೋಗಳನ್ನು ಹಂಚಿಕೊಂಡಿದ್ದು, ಫೋಟೋದಲ್ಲಿ ಜುಟ್ಟಿಗೆ ಮಲ್ಲಿಗೆ ಮುಡಿದು, ಕೆಂಪುಬಣ್ಣದ ಸೀರೆಯುಟ್ಟು, ಅದಕ್ಕೆ ಸೂಟ್ ಆಗುವಂತಹ ಆಭರಣ ತೊಟ್ಟು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಇದನ್ನೂ ಓದಿ: ಮೊದಲ ಬಾರಿಗೆ ಮಗುವಿನ ಮುದ್ದಾದ ಫೋಟೋ ಶೇರ್ ಮಾಡಿದ ನಟಿ

     

    View this post on Instagram

     

    A post shared by Ashika Ranganath (@ashika_rangnath)

    ಸಿಂಪಲ್ ಲುಕ್‍ನಲ್ಲಿ ಆಶಿಕಾ ಕಾಣಿಸಿಕೊಂಡಿದ್ದರು, ನೋಡುಗರ ಕಣ್ಣಿಗೆ ಮಾತ್ರ ಸಖತ್ ಗ್ರ್ಯಾಂಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ವಿಶೇಷವೆಂದರೆ ಕಾಸ್ಟ್ಯೂಮ್, ಮೇಕಪ್ ಮತ್ತು ಹೇರ್ ಸ್ಟೈಲ್ ಎಲ್ಲವನ್ನು ಸ್ವತಃ ಅವರೇ ಮಾಡಿಕೊಂಡಿರುವುದಾಗಿ ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Ashika Ranganath (@ashika_rangnath)

    ಇತ್ತೀಚೆಗಷ್ಟೇ ಸ್ಯಾಂಡಲ್‍ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟಿಸಿದ್ದ ಕೋಟಿಗೊಬ್ಬ-3 ಸಿನಿಮಾದ ವಿಶೇಷ ಸಾಂಗ್‍ವೊಂದರಲ್ಲಿ ಆಶಿಕಾ ರಂಗನಾಥ್ ಮಸ್ತ್ ಸ್ಟೆಪ್ಸ್ ಹಾಕಿದ್ದರು. ಇದೀಗ ರೋರಿಂಗ್ ಸ್ಟಾರ್ ಶ್ರೀ ಮುರುಳಿ ಜೊತೆಗೆ ಮದಗಜ ಚಿತ್ರದಲ್ಲಿ ಆಶಿಕಾ ಸ್ಕ್ರೀನ್ ಶೇರ್ ಮಾಡಿದ್ದು, ಈ ಸಿನಿಮಾ ಇದೇ ಡಿಸೆಂಬರ್ 3ರಂದು ಬಿಡುಗಡೆಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.

  • ಸಿಗರೇಟ್ ಸೇದುತ್ತಾ ಪೋಸ್ ಕೊಟ್ಟ ಮುದ್ದು ಹುಡುಗಿ ಆಶಿಕಾ!

    ಸಿಗರೇಟ್ ಸೇದುತ್ತಾ ಪೋಸ್ ಕೊಟ್ಟ ಮುದ್ದು ಹುಡುಗಿ ಆಶಿಕಾ!

    ಬೆಂಗಳೂರು: ಸ್ಯಾಂಡಲ್‍ವುಡ್ ಬಹುಬೇಡಿಕೆಯ ನಟಿಯರಲ್ಲಿ ಆಶಿಕಾ ರಂಗನಾಥ್ ಕೂಡ ಒಬ್ಬರು. ಈಗಾಗಲೇ ಹಲವು ಹೀರೋಗಳ ಜೊತೆ ನಟಿಸುವ ಮೂಲಕ ಮನೆ ಮಾತಾಗಿರುವ ಆಶಿಕಾ ಕೈಯಲ್ಲಿ ಸದ್ಯ ಅನೇಕ ಆಫರ್ ಗಳಿವೆ.

    ಆಗಸ್ಟ್ 5ರಂದು ನಟಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ಆಶಿಕಾ ನಟಿಸುತ್ತಿರುವ ‘ಮದಗಜ’ ಸಿನಿಮಾದಿಂದ ಅವರ ಒಂದು ಹೊಸ ಪೋಸ್ಟರ್ ರಿಲೀಸ್ ಆಗಿದ್ದು ಅಚ್ಚರಿ ಮೂಡಿಸುವಂತಿದೆ. ಅದರಲ್ಲಿ ಆಶಿಕಾ ರಂಗನಾಥ್ ಸಿಗರೇಟ್ ಸೇದುತ್ತಿದ್ದು, ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

     

    ಇಷ್ಟು ದಿನ ಆಶಿಕಾ ರಂಗನಾಥ್ ಗ್ಲಾಮರಸ್ ಆಗಿದ್ದರೂ ಮುಗ್ಧ ಹುಡುಗಿಯ ಲುಕ್‍ನಲ್ಲಿ ಮಿಂಚುತ್ತಿದ್ದರು. ಆದರೆ ಇದೀಗ ಅವರು ಏಕಾಏಕಿ ಸಿಗರೇಟ್ ಕೈಯಲ್ಲಿ ಹಿಡಿದಿಕೊಂಡು ಪೋಸ್ ನೀಡುವ ಮೂಲಕ ಅಭಿಮಾನಿಗಳು ಹುಬ್ಬೇರುಸವಂತೆ ಮಾಡಿದ್ದಾರೆ. ಈ ಮೊದಲು ಮದಗಜ ತಂಡ ಬಿಡುಗಡೆ ಮಾಡಿದ್ದ ಪೋಸ್ಟರ್‍ನಲ್ಲಿ ಅವರು ಹಳ್ಳಿ ಹುಡುಗಿಯ ಗೆಟಪ್‍ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈಗ ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

    ‘ಮದಗಜ’ ಚಿತ್ರವನ್ನು ಮಹೇಶ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ರೋರಿಂಗ್ ಸ್ಟಾರ್’ ಶ್ರೀಮುರಳಿ ನಟನೆಯ ಈ ಸಿನಿಮಾ ಮೇಲೆ ಸಿನಿಪ್ರಿಯರು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗಾಗಲೇ ಟೀಸರ್‍ಗಳ ಮೂಲಕ ಈ ಚಿತ್ರ ಹೈಪ್ ಸೃಷ್ಟಿ ಮಾಡಿದೆ. ಅದನ್ನು ಇನ್ನಷ್ಟು ಹೆಚ್ಚಿಸುವ ರೀತಿಯಲ್ಲಿ ಆಶಿಕಾ ಅವರ ಈ ಹೊಸ ಪೋಸ್ಟರ್ ಅನಾವರಣಗೊಂಡಿದೆ.

     

    View this post on Instagram

     

    A post shared by Ashika Ranganath (@ashika_rangnath)

  • ಸ್ಮೈಲ್, ಸ್ಮೈಲ್- ಬಾಲಿವುಡ್ ಬೆಡಗಿಗೆ ಕಿಚ್ಚನ ವಿಶ್

    ಸ್ಮೈಲ್, ಸ್ಮೈಲ್- ಬಾಲಿವುಡ್ ಬೆಡಗಿಗೆ ಕಿಚ್ಚನ ವಿಶ್

    ಬೆಂಗಳೂರು: ನಟಿಯರಾದ ಜೆನಿಲಿಯಾ ಡಿಸೋಜಾ ಮತ್ತು ಆಶಿಕಾ ರಂಗನಾಥ್ ಹುಟ್ಟುಹಬ್ಬಕ್ಕೆ ಚಂದನವನದ ಪೈಲ್ವಾನ್ ಸುದೀಪ್ ಶುಭಾಶಯ ತಿಳಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಕಿಚ್ಚ ಸುದೀಪ್, ಬಾಲಿವುಡ್ ನಟಿ ಜೆನಿಲಿಯಾ ಡಿಸೋಜಾ ಅವರಿಗೆ ಶುಭ ಹಾರೈಸಿದ್ದಾರೆ. ಹ್ಯಾಪಿ ಬರ್ತ್ ಡೇ ಜನಿಲಿಯಾ ಡಿಸೋಜಾ, ಸ್ಮೈಲ್, ಸ್ಮೈಲ್, ಸ್ಮೈಲ್ ಆ್ಯಂಡ್ ಹ್ಯಾವ್ ಎ ಗ್ರೇಟ್ ಡೇ ಆ್ಯಂಡ್ ಇಯರ್, ಹ್ಯಾಪಿ ರಿಟರ್ನ್ಸ್. ವೆಗಾನ್ ಪಾರ್ಟಿ ಸೂನ್ ಎಂದು ಬರೆದುಕೊಂಡಿದ್ದಾರೆ.

    ಅಂದಹಾಗೆ ನಟಿ ಜೆನಿಲಿಯಾ ಡಿಸೋಜಾ ಪತಿ ರಿತೇಶ್ ದೇಶ್‍ಮುಖ್ ಹಾಗೂ ಕಿಚ್ಚ ಸುದೀಪ್ ಸಿಸಿಎಲ್‍ನಿಂದ ಪರಿಚಯ. ಹೀಗೆ ಇಬ್ಬರ ನಡುವೆ ಆತ್ಮೀಯತೆ ಬೆಳೆದಿದೆ. ಬಳಿಕ ಕುಟುಂಬ ಸ್ನೇಹಿತರಾಗಿದ್ದಾರೆ. ಹೀಗಾಗಿ ಜೆನಿಲಿಯಾಗೆ ಕಿಚ್ಚ ಸುದೀಪ್ ವಿಶ್ ಮಾಡಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ತಮ್ಮ ಸ್ನೇಹವನ್ನು ನೆನೆದು ಗಮನ ಸೆಳೆದಿದ್ದಾರೆ.

    ಜೆನಿಲಿಯಾ ಡಿಸೋಜಾ ಅವರು ಕನ್ನಡದಲ್ಲಿ ಸತ್ಯ ಇನ್ ಲವ್ ಸಿನಿಮಾದಲ್ಲಿ ನಟಿಸಿದ್ದಾರೆ. ಬಹುಭಾಷಾ ನಟಿಯಾಗಿರುವ ಜೆನಿಲಿಯಾ, ಹಿಂದಿ, ತೆಲುಗು, ತಮಿಳು ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ದಾರೆ.

    ಸ್ಯಾಂಡಲ್‍ವುಡ್ ಪಟಾಕಿ ಪೋರಿ ಆಶಿಕಾ ರಂಗನಾಥ್ ಅವರಿಗೆ ಸಹ ಅವರದ್ದೇ ಶೈಲಿಯಲ್ಲಿ ಶುಭಾಶಯ ತಿಳಿಸಿದ್ದಾರೆ. ಪಟಾಕಿ ಪೋರಿಯೋ ಹಾಡಿನ ಪಟಾಕಿ ಆಶಿಕಾ ರಂಗನಾಥ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಹ್ಯಾವ್ ಎ ಗ್ರೇಟ್ ಒನ್ ಎಂದು ಶುಭ ಹಾರೈಸಿದ್ದಾರೆ. ಪಟಾಕಿ ಪೋರಿಯೋ ಹಾಡು ಬಹುನಿರೀಕ್ಷಿತ ಕೋಟಿಗೊಬ್ಬ 3 ಸಿನಿಮಾದ್ದಾಗಿದ್ದು, ಹಾಡು ಭಾರೀ ಸದ್ದು ಮಾಡುತ್ತಿದೆ. ಹೀಗಾಗಿ ಇದೇ ಶೈಲಿಯಲ್ಲಿ ಸುದೀಪ್ ವಿಶ್ ಮಾಡಿದ್ದಾರೆ.

    ಆಶಿಕಾ ರಂಗನಾಥ್ ಸದ್ಯ ಶ್ರೀಮುರುಳಿ ಅಭಿನಯದ ಮದಗಜ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಇದರಲ್ಲಿ ಜಗಪತಿ ಬಾಬು ಹಾಗೂ ಚಿಕ್ಕಣ್ಣ ಸೇರಿದಂತೆ ಹಲವು ನಟರು ಅಭಿನಯಿಸುತ್ತಿದ್ದಾರೆ. ಇನ್ನೊಂದೆಡೆ ಕೋಟಿಗೊಬ್ಬ 3 ಸಿನಿಮಾದ ಡಬ್ಬಿಂಗ್ ಕೆಲಸ ಮುಗಿದಿದ್ದು, ಅಂತಿಮ ಹಂತದ ಕೆಲಸಗಳಷ್ಟೇ ಬಾಕಿ ಉಳಿದಿವೆ. ಲಾಕ್‍ಡೌನ್ ಹಿನ್ನೆಲೆ ಸಿನಿಮಾ ಬಿಡುಗಡೆ ತಡವಾಗಿದೆ.

  • ತೋಟದಲ್ಲಿ ಕೆಲಸ ಮಾಡ್ತಿರೋ ಆಶಿಕಾ ರಂಗನಾಥ್ ಫೋಟೋಗೆ ಭಾರೀ ಮೆಚ್ಚುಗೆ

    ತೋಟದಲ್ಲಿ ಕೆಲಸ ಮಾಡ್ತಿರೋ ಆಶಿಕಾ ರಂಗನಾಥ್ ಫೋಟೋಗೆ ಭಾರೀ ಮೆಚ್ಚುಗೆ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಆಶಿಕಾ ರಂಗನಾಥ್ ತೋಟದಲ್ಲಿ ಕೆಲಸ ಮಾಡುತ್ತಾ ಕಾಲ ಕಳೆಯುತ್ತಿರುವ ಫೋಟೋಗಳು ಸಖತ್ ವೈರಲ್ ಆಗುತ್ತಿವೆ.

    ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಚಂದನವನದ ನಟಿ ಆಶಿಕಾ ರಂಗನಾಥ್ ಈಗ ತೋಟ ಮನೆಯಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಜೊತೆಗೆ ತೋಟದಲ್ಲಿ ಕೆಲಸ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಆಶಿಕಾ ಅವರ ಫೋಟೋಗಳನ್ನು ನೋಡಿದ ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

    ಲಾಕ್‍ಡೌನ್ ಇರುವುದರಿಂದ ತಮ್ಮ ಫಾರ್ಮ್‍ಹೌಸ್‍ನಲ್ಲಿ ಕುಟಂಬಸ್ಥರ ಜೊತೆಗೆ ತೋಟದಲ್ಲಿ ಕೆಲಸ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಮಾವಿನ ತೋಟದಲ್ಲಿ ಕೆಲಸ ಮಾಡುತ್ತಾ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ತೋಟದ ಮನೆಯ ಫೋಟೋ ಹಾಗೂ ವೀಡಿಯೋಗಳನ್ನು ಶೇರ್ ಮಾಡಿದ್ದಾರೆ. ಆಶಿಕಾ ಮಾವಿನಹಣ್ಣು, ತರಕಾರಿಗಳನ್ನು ಕೊಯ್ಯುದು ಬಿದಿರಿನ ಬುಟ್ಟಿಯಲ್ಲಿ ಹೊತ್ತು ತರುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

  • ತಾಯಿಗೆ ತಕ್ಕ ಮಗನ ವಿಶೇಷತೆ ಮೊಗೆದಷ್ಟೂ ಮುಗಿಯೋದಿಲ್ಲ!

    ತಾಯಿಗೆ ತಕ್ಕ ಮಗನ ವಿಶೇಷತೆ ಮೊಗೆದಷ್ಟೂ ಮುಗಿಯೋದಿಲ್ಲ!

    ಬೆಂಗಳೂರು: ಶಶಾಂಕ್ ಸಿನಿಮಾಸ್ ಅಡಿಯಲ್ಲಿ ಶಶಾಂಕ್ ಅವರೇ ನಿರ್ಮಾಣ ಮಾಡಿ ನಿರ್ದೇಶನವನ್ನೂ ಮಾಡಿರೋ ಚಿತ್ರ ತಾಯಿಗೆ ತಕ್ಕ ಮಗ. ಈಗಾಗಲೇ ಮಾಧುರ್ಯದ ಹಾಡುಗಳು ಮತ್ತು ಎನರ್ಜೆಟಿಕ್ ಟ್ರೇಲರ್ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿರುವ ಈ ಚಿತ್ರ ಈ ವಾರ ತೆರೆ ಕಾಣುತ್ತಿದೆ.

    ‘ತಾಯಿಗೆ ತಕ್ಕ ಮಗ’ ಶಶಾಂಕ್ ಅವರ ಸ್ವಂತ ಬ್ಯಾನರಿನಡಿಯಲ್ಲಿ ನಿರ್ಮಾಣವಾಗುತ್ತಿರೋ ಮೊದಲ ಚಿತ್ರ. ಆದ್ದರಿಂದಲೇ ಆರಂಭವೇ ಅದ್ಧೂರಿಯಾಗಿರಬೇಕೆಂಬ ಮಹದಾಸೆಯಿಂದ ಪ್ರತಿಯೊಂದರಲ್ಲಿಯೂ ನಿಗಾ ವಹಿಸಿಯೇ ಈ ಚಿತ್ರವನ್ನು ರೂಪಿಸಿದ್ದಾರೆ. ಶಶಾಂಕ್ ಈ ಕಥೆಯನ್ನೂ ಕೂಡಾ ಅದಕ್ಕೆ ತಕ್ಕುದಾಗಿಯೇ ಹೊಸೆದಿದ್ದಾರಂತೆ. ಆದ್ದರಿಂದಲೇ ಬಿಡುಗಡೆಯ ಹೊಸ್ತಿಲಲ್ಲಿಯೇ ಗೆಲುವಿನ ಸೂಚನೆ ಮಿರುಗಲಾರಂಭಿಸಿದೆ.

    ಇದು ಶಶಾಂಕ್ ಮತ್ತು ಅಜೇಯ್ ರಾವ್ ಒಟ್ಟಾಗಿ ರೂಪಿಸಿದ ಮೂರನೇ ಚಿತ್ರ. ಅಜೇಯ್ ರಾವ್ ಅವರ ವೃತ್ತಿ ಜೀವನದಲ್ಲಿದು ಇಪ್ಪತೈದನೇ ಚಿತ್ರ. ಬಹಳಷ್ಟು ಕಷ್ಟಪಟ್ಟು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಅಜೇಯ್ ರಾವ್ ಈ ಹಾದಿಯಲ್ಲಿ ಹದಿನೈದು ವರ್ಷ ಸಾಗಿ ಬಂದಿದ್ದಾರೆ. ಅದನ್ನು ತಾಯಿಗೆ ತಕ್ಕ ಮಗ ಚಿತ್ರ ಸಾರ್ಥಕಗೊಳಿಸಲಿದೆ ಎಂಬ ಭರವಸೆಯನ್ನೂ ಹೊಂದಿದ್ದಾರೆ.

    ಕಳೆದ ಹದಿನೈದು ವರ್ಷದ ಅಜೇಯ್ ರಾವ್ ಬಣ್ಣದ ಬದುಕನ್ನೊಮ್ಮೆ ಅವಲೋಕಿಸಿದರೆ ಅವರು ಈವರೆಗೂ ಲವರ್ ಬಾಯ್ ಪಾತ್ರಗಳಲ್ಲಿಯೇ ಮಿಂಚುತ್ತಾ ಬಂದಿದ್ದಾರೆ. ಆದರೆ ಅವರ ಪ್ರಧಾನ ಆಸಕ್ತಿ ಆಕ್ಷನ್‍ನತ್ತಲೇ ಇತ್ತೆಂಬುದು ಅಚ್ಚರಿಯಾದರೂ ಸತ್ಯ. ಅಷ್ಟಕ್ಕೂ ಅಜೇಯ್ ರಾವ್ ಶಾಲಾ ದಿನಗಳಿಂದಲೇ ಕರಾಟೆ ಚಾಂಪಿಯನ್. ಈ ಚಿತ್ರದಲ್ಲಿ ಕರಾಟೆ ಪಟ್ಟುಗಳನ್ನೂ ಕೂಡಾ ಅಜೇಯ್ ಪ್ರದರ್ಶಿಸಿದ್ದಾರಂತೆ!

    ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಶೇಖರ್ ಚಂದ್ರ ಅವರ ಛಾಯಾಗ್ರಹಣವಿದೆ. ಗಿರಿ ಮಹೇಶ್ ಸಂಕಲನ ಹಾಗೂ ಕೆ.ರವಿವರ್ಮ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಕೃಷ್ಣ ಅಜೇಯ್ ರಾವ್, ಸುಮಲತಾ ಅಂಬರೀಶ್, ಆಶಿಕಾ ರಂಗನಾಥ್, ಅಚ್ಯುತಕುಮಾರ್, ಸಾಧುಕೋಕಿಲ, ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳೆ ಮುಂತಾದವರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ರಂಗಮಂದಿರಕ್ಕೆ ಬರ್ತಾರಂತೆ ಮುಗುಳುನಗೆ ಸುಂದರಿ ಆಶಿಕಾ!

    ರಂಗಮಂದಿರಕ್ಕೆ ಬರ್ತಾರಂತೆ ಮುಗುಳುನಗೆ ಸುಂದರಿ ಆಶಿಕಾ!

    ಬೆಂಗಳೂರು: ಯೋಗರಾಜಭಟ್ಟರ ಮುಗುಳು ನಗೆ ಚಿತ್ರದ ನಾಯಕಿಯರಲ್ಲೊಬ್ಬರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ಆಶಿಕಾ ರಂಗನಾಥ್. ಆ ನಂತರ ನಟಿಸಿದ ಚಿತ್ರಗಳಲ್ಲೆಲ್ಲ ಚೆಂದಗೆ ಅಭಿನಯಿಸುತ್ತಲೇ ಬೆಳೆದು ಬಂದ ಇವರೀಗ ಬಹು ಬೇಡಿಕೆಯ ನಾಯಕಿ. ರ‍್ಯಾಂಬೋ 2 ಯಶಸ್ಸಿನ ಬಳಿಕವಂತೂ ಆ ಬೇಡಿಕೆ ಇನ್ನೂ ಹೆಚ್ಚಾಗಿದೆ. ಇಂಥಾ ಆಶಿಕಾ ಇದೀಗ ರಂಗಮಂದಿರಕ್ಕೆ ಬರುವ ಸನ್ನಾಹದಲ್ಲಿದ್ದಾರೆ!

    ಆಶಿಕಾ ರಂಗನಾಥ್ ಇದೀಗ ಬಹು ತಾರಾಗಣ ಹೊಂದಿರುವ ರಂಗಮಂದಿರ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಪ್ರವೀಣ್ ತೇಜ್, ಅನುಪಮಾ ಗೌಡ ಮತ್ತು ಶ್ರುತಿ ಪ್ರಕಾಶ್ ನಟಿಸಲಿರೋ ಈ ಚಿತ್ರದಲ್ಲಿ ಆಶಿಕಾ ಬಹು ಮುಖ್ಯವಾದ ಪಾತ್ರವೊಂದಕ್ಕ ಜೀವ ತುಂಬಲಿದ್ದಾರಂತೆ. ಈ ಚಿತ್ರದಲ್ಲಿನ ಭಿನ್ನವಾದ ಕಥೆ ಮತ್ತು ತಮ್ಮ ಪಾತ್ರದ ಸೊಗಸನ್ನು ಮೆಚ್ಚಿಕೊಂಡೇ ಆಶಿಕಾ ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರಂತೆ. ರಂಗಾಯಣ ರಘು, ಅಚ್ಯುತ್ ಕುಮಾರ್, ತೆಲುಗು ನಟ ಸುಮನ್ ಮುಂತಾದವರೂ ಈ ಚಿತ್ರದಲ್ಲಿ ನಟಿಸಲಿದ್ದಾರೆ.

    ಈ ತಿಂಗಳ ಕೊನೆಯಲ್ಲಿ ಆಶಿಕಾ ರಂಗನಾಥ್ ಈ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚುಟು ಚುಟು ಅಂತಾ ಚುಮು ಚುಮು ಕಥೆ ಹೇಳಲು ಬರ್ತಿದ್ದಾನೆ ರ‍್ಯಾಂಬೋ

    ಚುಟು ಚುಟು ಅಂತಾ ಚುಮು ಚುಮು ಕಥೆ ಹೇಳಲು ಬರ್ತಿದ್ದಾನೆ ರ‍್ಯಾಂಬೋ

    ಬೆಂಗಳೂರು: ಚಂದನವನದಲ್ಲಿ ಚಿಕ್ಕ ಚಿಕ್ಕ ಪಾತ್ರಗಳಿಂದ ಮೇಲೆ ಬಂದವರು ಹಾಸ್ಯ ನಟ ಶರಣ್. ಇಂದು ಅದೇ ಹಾಸ್ಯ ನಟ ಪೂರ್ಣ ಪ್ರಮಾಣದ ನಾಯಕರಾಗಿ ಈಗಾಗಲೇ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಹಿಂದೆ ರ‍್ಯಾಂಬೋ ಎಂಬ ಸೂಪರ್ ಹಿಟ್ ಸಿನಿಮಾ ನೋಡಿದ್ದ ತಂಡ ಮತ್ತೊಮ್ಮೆ ಒಂದಾಗಿ ರ‍್ಯಾಂಬೋ-2 ಚಿತ್ರವನ್ನು ನಿರ್ಮಾಣ ಮಾಡಿದೆ.

    ಇದೇ ಶುಕ್ರವಾರ ರ‍್ಯಾಂಬೋ-2 ಚಂದನವನದಲ್ಲಿ ಬಿಡುಗಡೆ ಮುನ್ನವೇ ಹವಾ ಕ್ರಿಯೇಟ್ ಮಾಡಿದೆ. ರ‍್ಯಾಂಬೋ ಚಿತ್ರದ ಮುಂದುವರಿದ ಭಾಗವೇ ರ‍್ಯಾಂಬೋ -2 ಅಂತಾ ಹೇಳಲಾಗುತ್ತಿದೆ. ಆದ್ರೆ ಚಿತ್ರತಂಡ ಮುಂದುವರೆದ ಭಾಗ ಹೇಳುವಕ್ಕಿಂತ ರ್ಯಾಂಬೋ ಚಿತ್ರದ ಮತ್ತೊಂದು ಅಧ್ಯಾಯ ಅಂತಾ ಹೇಳಬಹುದು ಅಂತಾ ಹೇಳಿಕೊಂಡಿದೆ. ಇದೂವರೆಗೂ ಶರಣ್ ಮತ್ತು ಚಿಕ್ಕಣ್ಣ ಜೋಡಿಯಾಗಿ ನಟಿಸಿರುವ ಚಿತ್ರಗಳಲ್ಲಿ ಹಾಸ್ಯವೇ ಪ್ರಧಾನವಾಗಿತ್ತು. ಆದ್ರೆ ಚಿತ್ರತಂಡದ ಪ್ರಕಾರ ಈ ಬಾರಿ ಶರಣ್ ಮತ್ತು ಚಿಕ್ಕಣ್ಣ ತುಂಬಾ ವಿಭಿನ್ನವಾಗಿ ರ‍್ಯಾಂಬೋ ದಲ್ಲಿ ಕಾಣಿಸಿಕೊಂಡಿದ್ದಾರೆ ಅಂತಾ ತಿಳಿಸಿದೆ.

    ಮುದ್ದು ಹುಡುಗಿ ಆಶಿಕಾ ರಂಗನಾಥ್ ರ‍್ಯಾಂಬೋ-2 ಚಿತ್ರದಲ್ಲಿ ಶರಣ್‍ಗೆ ಜೊತೆಯಾಗಿದ್ದಾರೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ಯ ಜನ್ಯ ಸಂಯೋಜನೆಯಲ್ಲಿ ಐದು ಹಾಡುಗಳು ಮೂಡಿಬಂದಿವೆ. ಚಿತ್ರದ ಉತ್ತರ ಕರ್ನಾಟಕ ಶೈಲಿಯ ‘ಚುಟು ಚುಟು’ ಹಾಡು ಸೂಪರ್ ಹಿಟ್ ಆಗಿದೆ.

    ರ‍್ಯಾಂಬೋ ಚಿತ್ರ ಎಲ್ಲ ತಂತ್ರಜ್ಞರು ಒಂದಾಗಿ ಬಂಡವಾಳ ಹಾಕಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ, ನಟ ಚಿಕ್ಕಣ್ಣ, ನಿರ್ದೇಶಕರಾದ ತರುಣ್ ಸುಧೀರ್, ಮೋಹನ್ ಬಿ.ಕೆರೆ, ಛಾಯಾಗ್ರಾಹಕ ಎಸ್.ರಾಜ್, ಸಂಕಲನಕಾರ ಕೆ.ಎಂ.ಪ್ರಕಾಶ್, ಅಟ್ಲಾಂಟ್ ನಾಗೇಂದ್ರ ಮತ್ತು ಪ್ರೊಡೆಕ್ಷನ್ ಮ್ಯಾನೇಜರ್ ನರಸಿಂಹ ಜಾಲಹಳ್ಳಿ ಒಂದಾಗಿ ಹಣ ಹೂಡಿದ್ದಾರೆ. ಸಿನಿಮಾ ಶುಕ್ರವಾರ ರಾಜ್ಯಾದ್ಯಂತ ತೆರೆಕಾಣಲಿದೆ.