Tag: Ashika Ranganath

  • IPL ಎಫೆಕ್ಟ್‌- ‘ಅವತಾರ ಪುರುಷ 2’ ಸಿನಿಮಾ ರಿಲೀಸ್‌ ಡೇಟ್‌ ಮುಂದೂಡಿದ ಚಿತ್ರತಂಡ

    IPL ಎಫೆಕ್ಟ್‌- ‘ಅವತಾರ ಪುರುಷ 2’ ಸಿನಿಮಾ ರಿಲೀಸ್‌ ಡೇಟ್‌ ಮುಂದೂಡಿದ ಚಿತ್ರತಂಡ

    ಸ್ಯಾಂಡಲ್‌ವುಡ್ ನಟ ಶರಣ್ (Sharan), ಆಶಿಕಾ ರಂಗನಾಥ್ (Ashika Ranganath) ನಟನೆಯ ‘ಅವತಾರ ಪುರುಷ-2’ ರಿಲೀಸ್ ಡೇಟ್ ಮುಂದೂಡಲಾಗಿದೆ. ಐಪಿಎಲ್ ಎಫೆಕ್ಟ್‌ನಿಂದ ಅವತಾರ ಪುರುಷ- 2 (Avatara Purusha-2)  ಮುಂದಕ್ಕೆ ಹಾಕಲಾಗಿದೆ. ಹೊಸ ರಿಲೀಸ್‌ ಡೇಟ್‌ ಅನ್ನು ಚಿತ್ರತಂಡ ಅನೌನ್ಸ್‌ ಮಾಡಿದೆ. ಇದನ್ನೂ ಓದಿ:ಶೋಲ್ಡರ್ ಲೆಸ್ ಟಾಪ್, ತುಂಡು ಜೀನ್ಸ್‌ನಲ್ಲಿ ‘ಬೃಂದಾವನ’ ನಟಿ- ದಂಗಾದ ಫ್ಯಾನ್ಸ್

    ‘ಅವತಾರ ಪುರುಷ’ 2ನೇ ಭಾಗ ಇದೇ ಮಾರ್ಚ್ 22ರಂದು ರಾಜ್ಯಾದ್ಯಂತ ತೆರೆಗೆ ಬರಲು ರೆಡಿಯಾಗಿತ್ತು. ಆದರೆ ಮಾರ್ಚ್ 22ರಿಂದ ಐಪಿಎಲ್ ಪಂದ್ಯ ಪ್ರಾರಂಭವಾಗುತ್ತಿದ್ದು, ಪ್ರೇಕ್ಷಕರು ಕೂಡ ಮ್ಯಾಚ್ ಕಡೆಗೆನೇ ವಾಲುತ್ತಾರೆ. ಸಿನಿಮಾಗಳು ಇಷ್ಟಪಡುವಂತೆಯೇ ಐಪಿಎಲ್‌ಗೂ ದೊಡ್ಡ ಮಟ್ಟದ ಫ್ಯಾನ್ ಬೇಸ್ ಇದೆ.

    ಐಪಿಎಲ್ ವೇಳೆಯೇ ಸಿನಿಮಾ ರಿಲೀಸ್ ಮಾಡಿದ್ರೆ, ಎಲ್ಲಿ ಚಿತ್ರಮಂದಿರಕ್ಕೆ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗತ್ತೋ ಎಂದು ಚಿತ್ರತಂಡ ಕೂಡ ರಿಲೀಸ್ ಡೇಟ್ ಮುಂದಕ್ಕೆ ಹಾಕಿದೆ. ಒಳ್ಳೆಯ ಸಿನಿಮಾ ಸೋಲಬಾರದು ಎಂಬುದು ಚಿತ್ರತಂಡದ ಅಭಿಪ್ರಾಯ.

     

    View this post on Instagram

     

    A post shared by Su Ni (@simplesuni)

    ಐಪಿಎಲ್ ಮ್ಯಾಚ್ ಶುರುವಾದ್ರೆ ಸಾಕು, ಟಿಕೆಟ್‌ಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿ ಕ್ರಿಕೆಟ್ ವೀಕ್ಷಿಸಲು ಅಭಿಮಾನಿಗಳು ಮುಗಿಬೀಳುತ್ತಾರೆ. ಹಾಗಾಗಿ ಅವತಾರ ಪುರುಷ 2 ಏಪ್ರಿಲ್ 5ಕ್ಕೆ ರಿಲೀಸ್ ಆಗುತ್ತಿದೆ. ಇದನ್ನೂ ಓದಿ:ಮುನಿಸು ಮರೆತು ಸಿನಿಮಾಗಾಗಿ ಒಂದಾದ ಮಾಜಿ ಪ್ರೇಮಿಗಳು

    ನಟ ಶರಣ್- ನಟಿ ಆಶಿಕಾ ರಂಗನಾಥ್ ಜೋಡಿ, ಮತ್ತೆ ಶ್ರೀನಗರ ಕಿಟ್ಟಿಯ ಮಂತ್ರವಾದಿಯ ಪಾತ್ರ ಈ ಚಿತ್ರದಲ್ಲಿ ಅದ್ಭುತವಾಗಿ ಮೂಡಿ ಬಂದಿದೆ. ಶ್ರೀನಗರ ಕಿಟ್ಟಿ ಪಾತ್ರ ಮೊದಲ ಭಾಗಕ್ಕಿಂತ ಅವತಾರ ಪುರುಷ ಎರಡನೇ ಭಾಗದಲ್ಲಿ ಇನ್ನಷ್ಟು ಭಯಂಕರವಾಗಿಯೇ ಮೂಡಿ ಬಂದಿದೆ. ಈ ಸಿನಿಮಾದ ಹಾಡುಗಳು ಈಗಾಗಲೇ ಪ್ರೇಕ್ಷಕರ ಮನ ಗೆದ್ದಿದೆ. ‘ಅವತಾರ ಪುರುಷ’ ಮೊದಲ ಭಾಗವನ್ನು ಇಷ್ಟಪಟ್ಟಂತೆ ಕೂಡ ಎರಡನೇ ಭಾಗವನ್ನು ಮೆಚ್ಚುಗೆ ಸೂಚಿಸಬಹುದು. ರಿಲೀಸ್‌ ಆದ್ಮೇಲೆ ಶರಣ್‌ ಸಿನಿಮಾ ಅದೆಷ್ಟರ ಮಟ್ಟಿಗೆ ಮೋಡಿ ಮಾಡುತ್ತೆ ಎಂದು ಕಾದುನೋಡಬೇಕಿದೆ.

  • PRK ಪ್ರೊಡಕ್ಷನ್ಸ್ ನಿರ್ಮಾಣದ ಚಿತ್ರದಲ್ಲಿ ಆಶಿಕಾ ರಂಗನಾಥ್

    PRK ಪ್ರೊಡಕ್ಷನ್ಸ್ ನಿರ್ಮಾಣದ ಚಿತ್ರದಲ್ಲಿ ಆಶಿಕಾ ರಂಗನಾಥ್

    ಸ್ಯಾಂಡಲ್‌ವುಡ್ ಬ್ಯೂಟಿ ಆಶಿಕಾ ರಂಗನಾಥ್ (Ashika Ranganath) ತೆಲುಗು ಸಿನಿಮಾಗಳಲ್ಲಿ ಗುರುತಿಸಿಕೊಳ್ತಿದ್ದಾರೆ. ತೆಲುಗು ಸಿನಿಮಾಗಳಲ್ಲಿ ಬೇಡಿಕೆಯ ನಡುವೆಯೇ ಪಿಆರ್‌ಕೆ ಪ್ರೊಡಕ್ಷನ್ಸ್ (PRK Productions) ನಿರ್ಮಾಣದ ಚಿತ್ರದಲ್ಲಿ ಆಶಿಕಾ ರಂಗನಾಥ್ ನಟಿಸಿದ್ದಾರೆ. ರಿಲೀಸ್‌ಗೆ ಮುಹೂರ್ತ ಕೂಡ ಫಿಕ್ಸ್ ಆಗಿದೆ.

    ಮೊದಲ ಬಾರಿಗೆ ಡಾಕ್ಟರ್ ಪಾತ್ರಕ್ಕೆ ಆಶಿಕಾ ಬಣ್ಣ ಹಚ್ಚಿದ್ದಾರೆ. ಮೆಡಿಕಲ್ ಥ್ರೀಲರ್ ’02’ ಸಿನಿಮಾದಲ್ಲಿ ಪಟಾಕಿ ಪೋರಿ ನಟಿಸಿದ್ದಾರೆ. ಆಶಿಕಾ ಜೊತೆ ಮುಖ್ಯಭೂಮಿಕೆಯಲ್ಲಿ ಮಲೆನಾಡಿನ ಪ್ರತಿಭೆ ಪ್ರವೀಣ್ ತೇಜ್ ನಟಿಸಿದ್ದಾರೆ.

     

    View this post on Instagram

     

    A post shared by Ashika Ranganath (@ashika_rangnath)

    ’02’ ಸಿನಿಮಾಗೆ ಪ್ರಶಾಂತ್ ರಾಜ್ ಮತ್ತು ರಾಘವ್ ನಾಯಕ್ ಕಥೆ ಬರೆದಿದ್ದು, ನಿರ್ದೇಶಿಸಿದ್ದಾರೆ. ಟೀಸರ್ ಪ್ರೀತಿ, ನೈತಿಕತೆ ಮತ್ತು ಹಣೆಬರಹದ ಜಾಲದಲ್ಲಿ ಸಿಕ್ಕಿಹಾಕಿಕೊಂಡಿರುವ ವೈದ್ಯರ ಅಪಾಯಕಾರಿ ಪ್ರಯಾಣದ ಸುತ್ತ ಕೇಂದ್ರೀಕರಿಸಿ ಸಿನಿಮಾ ಮಾಡಲಾಗಿದೆ. ಇದೇ ಏಪ್ರಿಲ್‌ 19ಕ್ಕೆ ಸಿನಿಮಾ ರಿಲೀಸ್‌ ಆಗಲಿದೆ.

    ಈ ಚಿತ್ರದಲ್ಲಿ ಸಿರಿ ರವಿಕುಮಾರ್ (Siri Ravikumar), ಪುನೀತ್ ಬಿಎ, ಪ್ರಕಾಶ್ ಬೆಳವಾಡಿ, ಶ್ರೀಧರ್, ಗೋಪಾಲ್ ಕೃಷ್ಣ ದೇಶಪಾಂಡೆ ಮತ್ತು ರಂಗಭೂಮಿ ಕಲಾವಿದ ಮೋಹನ್ ನಟಿಸಿದ್ದಾರೆ. ಚಿತ್ರಕ್ಕೆ ನವೀನ್ ಕುಮಾರ್ ಅವರ ಛಾಯಾಗ್ರಹಣವಿದ್ದು, ವಿವನ್ ರಾಧಾಕೃಷ್ಣ ಸಂಗೀತ ಸಂಯೋಜಿಸಿದ್ದಾರೆ.

  • ಒಟಿಟಿಗೆ ಬರಲಿದೆ ಆಶಿಕಾ ರಂಗನಾಥ್ ನಟನೆಯ ‘ನಾ ಸಾಮಿ ರಂಗ’ ಸಿನಿಮಾ

    ಒಟಿಟಿಗೆ ಬರಲಿದೆ ಆಶಿಕಾ ರಂಗನಾಥ್ ನಟನೆಯ ‘ನಾ ಸಾಮಿ ರಂಗ’ ಸಿನಿಮಾ

    ನ್ನಡದ ಪಟಾಕಿ ಪೋರಿ ಆಶಿಕಾ ರಂಗನಾಥ್ (Ashika Ranganath) ಟಾಲಿವುಡ್‌ನಲ್ಲಿಯೂ ಮಿಂಚಿ ಗೆದ್ದಿದ್ದಾರೆ. ನಾಗಾರ್ಜುನ ಅಕ್ಕಿನೇನಿಗೆ ಜೋಡಿಯಾಗಿ ‘ನಾ ಸಾಮಿ ರಂಗ’ (Naa Saami Ranga) ಸಿನಿಮಾದಲ್ಲಿ ಆಶಿಕಾ ನಟಿಸಿದ್ದರು. ಚಿತ್ರಮಂದಿರದಲ್ಲಿ ಗೆದ್ದಿರೋ ಈ ಸಿನಿಮಾ ಈಗ ಒಟಿಟಿಗೆ ಲಗ್ಗೆ ಇಡುತ್ತಿದೆ.

    ಜ.14ರಂದು ‘ನಾ ಸಾಮಿ ರಂಗ’ ಸಿನಿಮಾ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿತ್ತು. ನಾಗಾರ್ಜುನ ಮತ್ತು ಆಶಿಕಾ ಜೋಡಿ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಸಿನಿಮಾ ನೋಡಿ ಅಭಿಮಾನಿಗಳು ಕೂಡ ಮೆಚ್ಚಿಕೊಂಡಿದ್ದರು. ಈಗ ಇದೇ ಫೆ.17ರಂದು ಒಟಿಟಿಯಲ್ಲಿ ಸಿನಿಮಾ ಪ್ರಸಾರ ಆಗಲಿದೆ. ಇದನ್ನೂ ಓದಿ:ಬಾಲಿವುಡ್‌ನತ್ತ ‘ಆರ್‌ಆರ್‌ಆರ್’ ಹೀರೋ ರಾಮ್ ಚರಣ್

    ಡ್ಯಾನ್ಸ್ ಮಾಸ್ಟರ್ ವಿಜಯ್ ಬಿನ್ನಿ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು. ಗ್ರಾಮೀಣ ಸೊಗಡಿನ ಕಥೆಯನ್ನು ಈ ಚಿತ್ರದ ಮೂಲಕ ತೋರಿಸಿದ್ದರು. ನಾಗಾರ್ಜುನ ಅವರನ್ನು ಡಿಫರೆಂಟ್ ಆಗಿ ಅಭಿಮಾನಿಗಳಿಗೆ ತೋರಿಸುವ ಮೂಲಕ ಸದ್ದು ಮಾಡಿದ್ದರು. ಆಶಿಕಾ ಕೂಡ ಪವರ್‌ಫುಲ್ ಪಾತ್ರದಲ್ಲಿ ನಟಿಸಿದ್ದರು.

    ಬೆಂಗಳೂರಿನ ಬೆಡಗಿ ಆಶಿಕಾ ಈಗ ತೆಲುಗಿನತ್ತ ಮುಖ ಮಾಡಿದ್ದಾರೆ. ರಶ್ಮಿಕಾ, ಶ್ರೀಲೀಲಾರಂತೆಯೇ ಆಶಿಕಾ ಕೂಡ ಟಾಲಿವುಡ್‌ನಲ್ಲಿ ಸೌಂಡ್ ಮಾಡುತ್ತಿದ್ದಾರೆ. ಸ್ಟಾರ್ ನಟರ ಜೊತೆ ಹೀರೋಯಿನ್ ಆಗಿ ಆಶಿಕಾ ಗುರುತಿಸಿಕೊಳ್ತಿದ್ದಾರೆ.

    ಸದ್ಯ ಆಶಿಕಾ ರಂಗನಾಥ್ ಕೈಯಲ್ಲಿ ‘ಅವತಾರ ಪುರುಷ 2’ ಸಿನಿಮಾ ಸೇರಿದಂತೆ ಹಲವು ತೆಲುಗು ಪ್ರಾಜೆಕ್ಟ್‌ಗಳಿವೆ. ಕನ್ನಡದ ಜೊತೆಗೆ ತೆಲುಗಿನಲ್ಲೂ ನಟಿ ಕಾಣಿಸಿಕೊಳ್ತಾರೆ.

  • ಅಕ್ಕನ ಮದುವೆಯಲ್ಲಿ ಮಿಂಚಿದ ಚುಟು ಚುಟು ಸುಂದರಿ ಆಶಿಕಾ

    ಅಕ್ಕನ ಮದುವೆಯಲ್ಲಿ ಮಿಂಚಿದ ಚುಟು ಚುಟು ಸುಂದರಿ ಆಶಿಕಾ

    ಸ್ಯಾಂಡಲ್‌ವುಡ್ ನಟಿ ಆಶಿಕಾ ರಂಗನಾಥ್ (Ashika Ranganath) ಅವರು ಅಕ್ಕನ ಮದುವೆಯಲ್ಲಿ ಮಿಂಚಿದ್ದಾರೆ. ಜನವರಿ 22ರಂದು ಆಶಿಕಾ ಸಹೋದರಿ ಅನುಷಾ ಅವರ ಮದುವೆ ಅದ್ಧೂರಿಯಾಗಿ ನಡೆಯಿತು. ಮದುವೆಯ ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.

    ಚುಟು ಚುಟು ನಟಿ ಆಶಿಕಾ ಅವರು ಅಕ್ಕನ ಮದುವೆಯಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಮದುವೆ ಹುಡುಗಿ ಅನುಷಾ, ಕೆಂಪು ಬಣ್ಣದ ಸೀರೆಯಲ್ಲಿ ಮಿಂಚಿದ್ರೆ, ಲೈಟ್ ಬಣ್ಣದ ಹಾಫ್ ಸೀರೆಯಲ್ಲಿ ಆಶಿಕಾ ಕಂಗೊಳಿಸಿದ್ದಾರೆ. ಅನುಷಾ- ಶ್ರವಣ್ ಮದುವೆ ಜ.22ರಂದು ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ನಡೆದಿದೆ.

    ಇನ್ನೂ ಅನುಷಾರ ಮದುವೆಯಲ್ಲಿ ನಟಿ ಸುಶ್ಮಿತಾ, ತಪಸ್ವಿನಿ ಪೂಣಚ್ಚ, ಸಿರಿ, ಕಿರುತೆರೆ ನಟಿ ಲಕ್ಷ್ಮಿ ಶೆಟ್ಟಿ ಸೇರಿದಂತೆ ಹಲವರು ಭಾಗಿಯಾಗಿ ನವಜೋಡಿಗೆ ಶುಭಕೋರಿದ್ದರು. ಇದನ್ನೂ ಓದಿ:‘ಗೌರಿಶಂಕರ’ ಸೀರಿಯಲ್‌ಗೆ ಗುಡ್‌ ಬೈ ಹೇಳಿದ ಕೌಸ್ತುಭ ಮಣಿ

    ಆಶಿಕಾ ರಂಗನಾಥ್‌ಗೆ ಕನ್ನಡ, ತೆಲುಗಿನಲ್ಲಿ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಆಶಿಕಾ ಅಕ್ಕ ಅನುಷಾ ಅವರು ‘ಗೋಕುಲದಲ್ಲಿ ಸೀತೆ’ (Gokuladali Seethe) ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು.

    ಅನುಷಾ (Anusha) ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ತಂಗಿ ಆಶಿಕಾರಂತೆ ಅವರಿಗೆ ಹೇಳಿಕೊಳ್ಳುವಂತಹ ಅವಕಾಶ ಸಿಕ್ಕಿಲ್ಲ.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆಶಿಕಾ ರಂಗನಾಥ್ ಅಕ್ಕ ಅನುಷಾ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆಶಿಕಾ ರಂಗನಾಥ್ ಅಕ್ಕ ಅನುಷಾ

    ಸ್ಯಾಂಡಲ್‌ವುಡ್ ಸ್ಟಾರ್ ನಟಿ ಆಶಿಕಾ ರಂಗನಾಥ್ (Ashika Ranganath) ಸಹೋದರಿ ಅನುಷಾ (Anusha) ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಶ್ರವಣ್ (Shravan) ಜೊತೆ ಅನುಷಾ ರಂಗನಾಥ್ ಇಂದು ಮದುವೆಯಾಗಿದ್ದಾರೆ. ಇದನ್ನೂ ಓದಿ:ರಾವಣನ ಪಾತ್ರ ಮಾಡಿದ್ದ ಸೈಫ್ ಅಲಿಖಾನ್ ಗೆ ಅಪಘಾತ: ಆಸ್ಪತ್ರೆಗೆ ದಾಖಲು

    ‘ಗೋಕುಲದಲ್ಲಿ ಸೀತೆ’ ಸೀರಿಯಲ್ ಖ್ಯಾತಿಯ ಅನುಷಾ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಖಾಸಗಿ ರೆಸಾರ್ಟ್‌ವೊಂದರಲ್ಲಿ ಇಂದು (ಜ.22) ಅನುಷಾ- ಶ್ರವಣ್ ಮದುವೆ ಅದ್ಧೂರಿಯಾಗಿ ನಡೆದಿದೆ. ವರ ಶ್ರವಣ್ ಹಿನ್ನೆಲೆ ಬಗ್ಗೆ ಮಾಹಿತಿ ರಿವೀಲ್ ಆಗಿಲ್ಲ.

    ಆಶಿಕಾ ಸಹೋದರಿ ಅನುಷಾ ಮದುವೆಯಲ್ಲಿ ‘ದಿಯಾ’ ಖ್ಯಾತಿಯ ಖುಷಿ ರವಿ (Kushee Ravi), ಸಿರಿ, ತಪಸ್ವಿನಿ ಪೂಣಚ್ಚ,’ಲವ್‌ ಮಾಕ್ಟೈಲ್‌ 2′ ನಟಿ ಸುಶ್ಮಿತಾ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಕಳೆದ ವಾರ ಅನುಷಾ ಅವರ ಬ್ರೈಡಲ್ ಪಾರ್ಟಿ ಗ್ರ್ಯಾಂಡ್ ಆಗಿ ನೆರವೇರಿತ್ತು.

    ‘ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ’, ’10’, ‘ಕೌರವ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅನುಷಾ ನಟಿಸಿದ್ದಾರೆ. ಆದರೆ ಚುಟು ಚುಟು ಬೆಡಗಿ ಆಶಿಕಾರಂತೆ ಅನುಷಾಗೆ ಚಿತ್ರರಂಗದಲ್ಲಿ ಹೇಳಿಕೊಳ್ಳುವಂತಹ ಅವಕಾಶ ಸಿಗಲಿಲ್ಲ. ಸದ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರೋ ಅನುಷಾಗೆ ಫ್ಯಾನ್ಸ್‌ ಶುಭಕೋರುತ್ತಿದ್ದಾರೆ.

  • ಆಶಿಕಾಗೆ ಮನೆ ಊಟ ಕಳುಹಿಸುತ್ತಿದ್ದ ನಾಗಾರ್ಜುನ- ನಟಿ ಭಾವುಕ

    ಆಶಿಕಾಗೆ ಮನೆ ಊಟ ಕಳುಹಿಸುತ್ತಿದ್ದ ನಾಗಾರ್ಜುನ- ನಟಿ ಭಾವುಕ

    ಶಿಕಾ ರಂಗನಾಥ್ (Ashika Ranganath) ಟಾಲಿವುಡ್‌ಗೆ (Tollywood) ಕಾಲಿಟ್ಟಿದ್ದಾರೆ. ನಟ ನಾಗಾರ್ಜುನ ಜೊತೆ ಮೊದಲ ಹೆಜ್ಜೆ ಹಾಕುತ್ತಿದ್ದಾರೆ. ಈ ಹೊತ್ತಲ್ಲೆ ನಾಗಾರ್ಜುನ ಮನೆಯಿಂದ ಬರುತ್ತಿದ್ದ ಊಟ ನೆನೆದು ಆಶಿಕಾ ಭಾವುಕರಾಗಿದ್ದಾರೆ. ಟಾಲಿವುಡ್‌ನಲ್ಲಿ ನನಗೆ ಇನ್ನೊಂದು ಮನೆ ಸಿಕ್ಕಿತು ಎಂದಿದ್ದಾರೆ. ಈಗಾಗಲೇ ಒಮ್ಮೆ ಡಿವೋರ್ಸ್ ಮಾಡಿಕೊಂಡು, ಆ ನಂತರ ನಟಿ ಅಮಲಾ ಕೈ ಹಿಡಿದ ನಾಗರ್ಜುನ ಅದ್ಯಾಕೆ ಆಶಿಕಾಗೆ ಊಟ ಕಳಿಸಿ ತೃಪ್ತರಾದರು? ಏನಿದರ ಹಿಂದಿನ ಅಸಲಿ ಗುಟ್ಟು? ಇಲ್ಲಿದೆ ಮಾಹಿತಿ.

    ಆಶಿಕಾ ರಂಗನಾಥ್ ಕನ್ನಡ ನಟಿ. ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಕೆಲವು ಹಿಟ್ ಇನ್ನು ಕೆಲವು ಫ್ಲಾಪ್. ಕನ್ನಡದಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಸಿಗದೇ ಇರುವ ಕಾರಣ. ಟಾಲಿವುಡ್‌ನಲ್ಲಿ ಆಶಿಕಾ ಈಗ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇದನ್ನೂ ಓದಿ:ನಟಿ ಮಹಾಲಕ್ಷ್ಮಿ ಪತಿಗೆ ಐಸಿಯುನಲ್ಲಿ ಚಿಕಿತ್ಸೆ: ಆಸ್ಪತ್ರೆಯಲ್ಲಿ ರವೀಂದರ್

    ಸಕ್ಸಸ್‌ಗಾಗಿಯೇ ನಟ ಅಕ್ಕಿನೇನಿ ನಾಗಾರ್ಜುನ ಪಕ್ಕ ನಿಂತಿದ್ದಾರೆ. ‘ನಾ ಸಾಮಿ ರಂಗ’ (Na Saami Ranga) ಸಿನಿಮಾದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಶೂಟಿಂಗ್‌ಗಾಗಿ ಹೈದರಾಬಾದ್‌ನ ಹೋಟೆಲ್‌ನಲ್ಲಿ ತಂಗಿದ್ದ ಆಶಿಕಾಗೆ ಅಲ್ಲಿನ ಊಟ ಅಡ್ಜಸ್ಟ್ ಆಗಿರಲಿಲ್ಲ. ಆಗ ನಾಗಾರ್ಜುನ ಮನೆಯಿಂದ ನನಗೆ ನಿತ್ಯ ಊಟ ಬರುತ್ತಿತ್ತು. ಡಯಟ್ ಫಾಲೋ ಮಾಡಲು ಅದು ಅನುಕೂಲ ಆಗುತ್ತಿತ್ತು. ಇದರಿಂದ ನನಗೆ ಟಾಲಿವುಡ್‌ನಲ್ಲಿ ಇನ್ನೊಂದು ಮನೆ ಸಿಕ್ಕಂತಾಗಿದೆ ಎಂದು ಕಾರ್ಯಕ್ರಮವೊಂದರಲ್ಲಿ ನಟಿ ಭಾವುಕರಾಗಿದ್ದಾರೆ. ಈ ಮೂಲಕ ನಾಗಾರ್ಜುನ ಅವರು ತಮ್ಮನ್ನು ಯಾವ ರೀತಿ ಟ್ರೀಟ್ ಮಾಡಿದ್ದರು ಎಂಬುದನ್ನು ವಿವರಿಸಿದ್ದಾರೆ. ಟಾಲಿವುಡ್‌ನಲ್ಲಿ ಕನ್ನಡದ ನಟಿಯರಿಗೆ ಸಾಕಷ್ಟು ಗೌರವ ಮತ್ತು ಪ್ರೀತಿ ಸಿಗುತ್ತಿರುವ ಬಗ್ಗೆ ಮಾತನಾಡಿದ್ದಾರೆ.

    ಇನ್ನೂ ಕನ್ನಡ ಚಿತ್ರರಂಗದಲ್ಲಿ ಸಿಗದ ಸಕ್ಸಸ್ ಟಾಲಿವುಡ್‌ನಲ್ಲಿ ಸಿಗುತ್ತಾ? ರಶ್ಮಿಕಾ ಮಂದಣ್ಣ(Rashmika Mandanna), ಶ್ರೀಲೀಲಾರಂತೆಯೇ (Sreeleela) ಆಶಿಕಾ ಕೂಡ ಹವಾ ಕ್ರಿಯೇಟ್ ಮಾಡುತ್ತಾರಾ ಎಂದು ಕಾದುನೋಡಬೇಕಿದೆ.

  • ಶ್ರೀಲೀಲಾಗೆ ಠಕ್ಕರ್, ನಾಗಾರ್ಜುನಗೆ ಆಶಿಕಾ ರಂಗನಾಥ್ ನಾಯಕಿ

    ಶ್ರೀಲೀಲಾಗೆ ಠಕ್ಕರ್, ನಾಗಾರ್ಜುನಗೆ ಆಶಿಕಾ ರಂಗನಾಥ್ ನಾಯಕಿ

    ನ್ನಡದ ನಟಿ ಆಶಿಕಾ ರಂಗನಾಥ್ (Ashika Ranganath) ಇದೀಗ ಟಾಲಿವುಡ್‌ನತ್ತ (Tollywood) ಮುಖ ಮಾಡಿದ್ದಾರೆ. ‘ಅಮಿಗೋಸ್’ ಚಿತ್ರದಲ್ಲಿ ನಟಿಸುವ ಮೂಲಕ ತೆಲುಗು ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಟ್ಟಿದ್ದಾರೆ. ಈ ಬೆನ್ನಲ್ಲೇ ಸ್ಟಾರ್ ನಟ ನಾಗಾರ್ಜುನಗೆ ಆಶಿಕಾ ನಾಯಕಿಯಾಗಿ ನಟಿಸುವ ಬಗ್ಗೆ ಸಿಹಿಸುದ್ದಿ ನೀಡಿದ್ದಾರೆ. ಈ ಮೂಲಕ ಬೇಡಿಕೆಯಲ್ಲಿರೋ ಶ್ರೀಲೀಲಾಗೆ (Sreeleela) ಆಶಿಕಾ ಠಕ್ಕರ್ ಕೊಟ್ಟಿದ್ದಾರೆ.

    ಆಶಿಕಾ ರಂಗನಾಥ್‌ಗೆ ಅಷ್ಟಾಗಿ ಕನ್ನಡದ ಚಿತ್ರಗಳು ಕೈಹಿಡಿಯುತ್ತಿಲ್ಲ. ಇದೀಗ ಎಲ್ಲರಂತೆ ಪಟಾಕಿ ಪೋರಿ ಕೂಡ ತೆಲುಗಿಗೆ ಹಾರಿದ್ದಾರೆ. ಟಾಲಿವುಡ್‌ನಲ್ಲಿ ಗೆದ್ದು ನಿಲ್ಲಲು ನಟಿ ಗಟ್ಟಿ ಮನಸ್ಸು ಮಾಡಿದ್ದಾರೆ. ರಶ್ಮಿಕಾ ಮಂದಣ್ಣ, ಶ್ರೀಲೀಲಾ, ರುಕ್ಮಿಣಿ ವಸಂತ್, ಸಪ್ತಮಿ ಗೌಡ ಬಳಿಕ ಆಶಿಕಾ ರಂಗನಾಥ್ ಕೂಡ ಆ ಸಾಲಿಗೆ ಸೇರಿಕೊಂಡಿದ್ದಾರೆ. ಇದನ್ನೂ ಓದಿ:ಪ್ರಜ್ವಲ್ ದೇವರಾಜ್ ನಟನೆಯ ‘ಮಾಫಿಯಾ’ ಸಿನಿಮಾದ ಟೀಸರ್ ರಿಲೀಸ್

    ಟಾಲಿವುಡ್ ಕಿಂಗ್ ನಾಗಾರ್ಜುನಗೆ (Nagarjuna) ಆಶಿಕಾ ನಾಯಕಿಯಾಗಿದ್ದಾರೆ. ನಾಗಾರ್ಜುನ ನಟನೆಯ ‘ನಾ ಸಾಮಿ ರಂಗ’ ಚಿತ್ರದಲ್ಲಿ ವರಲಕ್ಷ್ಮಿ ಎಂಬ ಪಾತ್ರಕ್ಕೆ ಆಶಿಕಾ ಜೀವ ತುಂಬಲಿದ್ದಾರೆ. ವಿಜಯ್ ಬಿನ್ನಿ ನಿರ್ದೇಶನ ಮಾಡಿದ್ರೆ, ಚಿತ್ರಕ್ಕೆ ಎಂ.ಎಂ ಕೀರವಾಣಿ ಸಂಗೀತವಿದೆ. ಈ ಸಿನಿಮಾಗೆ ಶ್ರೀನಿವಾಸ ಚಿಟ್ಟೂರಿ ನಿರ್ಮಾಣ ಮಾಡುತ್ತಿದ್ದಾರೆ.

     

    View this post on Instagram

     

    A post shared by Ashika Ranganath (@ashika_rangnath)

    60 ವರ್ಷವಾಗಿದ್ರೂ ಇನ್ನೂ ಚಾರ್ಮ್ ಉಳಿಸಿಕೊಂಡಿರೋ ನಾಗಾರ್ಜನಗೆ ಆಶಿಕಾ ನಾಯಕಿಯಾಗಿ ಬಿಗ್ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಇಬ್ಬರ ಜೋಡಿ ಅದೆಷ್ಟರ ಮಟ್ಟಿಗೆ ಮೋಡಿ ಮಾಡಲಿದೆ ಎಂಬ ಕೌತುಕ ಅಭಿಮಾನಿಗಳಲ್ಲಿ ಮೂಡಿದೆ. ಮುಂದಿನ ವರ್ಷ ಚಿತ್ರ ರಿಲೀಸ್ ಆಗಲಿದೆ.

    ತೆಲುಗಿನಲ್ಲಿ ಕನ್ನಡದ ನಟಿ ಮಣಿಯರೇ ಮಿಂಚುತ್ತಿರೋ ಈ ಟೈಮ್‌ನಲ್ಲಿ ಅದರಲ್ಲೂ ಶ್ರೀಲೀಲಾ ಜಮಾನ ಇರೋವಾಗಲೇ ಆಶಿಕಾ ಎಂಟ್ರಿ ಕೊಟ್ಟಿರೋದು ಅಭಿಮಾನಿಗಳಿಗೆ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಕನ್ನಡದ ನಟಿಮಣಿಯರ ಮುಂದೆ ಜಾಗ ಗಟ್ಟಿ ಮಾಡಿಕೊಂಡು ತೆಲುಗು ಪ್ರೇಕ್ಷಕರ ಮನಗೆಲ್ಲುತ್ತಾರಾ ಕಾದುನೋಡಬೇಕಿದೆ.

  • ರಶ್ಮಿಕಾ, ಶ್ರೀಲೀಲಾ ಬಳಿಕ ತೆಲುಗಿನಲ್ಲಿ ಬಂಪರ್ ಆಫರ್ ಗಿಟ್ಟಿಸಿಕೊಂಡ ಆಶಿಕಾ ರಂಗನಾಥ್

    ರಶ್ಮಿಕಾ, ಶ್ರೀಲೀಲಾ ಬಳಿಕ ತೆಲುಗಿನಲ್ಲಿ ಬಂಪರ್ ಆಫರ್ ಗಿಟ್ಟಿಸಿಕೊಂಡ ಆಶಿಕಾ ರಂಗನಾಥ್

    ಟಾಲಿವುಡ್ (Tollywood) ಅಂಗಳದಲ್ಲಿ ಕನ್ನಡದ ನಟಿಮಣಿಯರ ದರ್ಬಾರ್ ಜೋರಾಗಿದೆ. ರಶ್ಮಿಕಾ ಮಂದಣ್ಣ (Rashmika Mandanna), ಶ್ರೀಲೀಲಾ(Sreeleela), ನೇಹಾ ಶೆಟ್ಟಿ (Neha Shetty) ಬಳಿಕ ತೆಲುಗಿನಲ್ಲಿ ಬಂಪರ್ ಆಫರ್‌ನ ಆಶಿಕಾ ರಂಗನಾಥ್ ಗಿಟ್ಟಿಸಿಕೊಂಡಿದ್ದಾರೆ. ತೆಲುಗಿನ ಎವರ್‌ಗ್ರೀನ್ ಹೀರೋ ನಾಗಾರ್ಜುನಗೆ ಆಶಿಕಾ ನಾಯಕಿಯಾಗಿದ್ದಾರೆ. ಈ ಮೂಲಕ ಮತ್ತೆ ನಟಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

    ಅಕ್ಕಿನೇನಿ ನಾಗಾರ್ಜುನ ಅವರು ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡರು. ಈ ವಿಶೇಷ ದಿನದಂದು ಅವರ ಹೊಸ ಸಿನಿಮಾ ಘೋಷಣೆ ಆಯಿತು. ಈ ಚಿತ್ರಕ್ಕೆ ‘ನಾ ಸಾಮಿ ರಂಗ’ (Naa Saami Ranga) ಎನ್ನುವ ಶೀರ್ಷಿಕೆ ಇಡಲಾಗಿದೆ. ಸಖತ್ ರಗಡ್ ಅವತಾರದಲ್ಲಿ ನಾಗಾರ್ಜುನ (Nagarjuna) ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ವಿಜಯ್ ಬಿನ್ನಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಶ್ರೀನಿವಾಸ ಚಿತ್ತುರಿ ಅವರು ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಆಶಿಕಾ ರಂಗನಾಥ್ (Ashika Ranganath) ಅವರನ್ನು ನಾಯಕಿಯನ್ನಾಗಿ (Heroine) ಆಯ್ಕೆ ಮಾಡಿದ್ದಾರೆ. ಇದನ್ನೂ ಓದಿ:ವಿಜಯ್ ‘ಲಿಯೋ’ ಸಿನಿಮಾ ಮುಂದೆ ಬರಲಿದೆಯಾ ಸಲಾರ್? ಇಲ್ಲಿದೆ ಅಪ್‌ಡೇಟ್

    ಇತ್ತೀಚೆಗೆ ಹೈದರಾಬಾದ್‌ನಲ್ಲಿ ಫೋಟೋಶೂಟ್ ನಡೆದಿದೆ ಎಂದು ತಿಳಿದು ಬಂದಿದೆ. ಆಶಿಕಾ ಅವರು ಸಖತ್ ಗ್ಯಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಅವರಿಗೆ ತೆಲುಗು ಭಾಷೆಯ ಮೇಲೆ ಹಿಡಿತ ಇದೆ. ನಟನೆಯಲ್ಲೂ ಅವರು ಪಳಗಿದ್ದಾರೆ. ಈ ಕಾರಣದಿಂದ ಆಶಿಕಾ ಅವರನ್ನು ಫೈನಲ್ ಮಾಡಲಾಗಿದೆ ಎನ್ನಲಾಗಿದೆ. ಈ ವರ್ಷ ಕಲ್ಯಾಣ್ ರಾಮ್ (Kalyan Ram) ನಟನೆಯ ತೆಲುಗಿನ ‘ಅಮಿಗೋಸ್’ ಚಿತ್ರದಲ್ಲಿ ಆಶಿಕಾ ನಟಿಸಿದ್ದರು. ಈಗ ಅವರಿಗೆ ಮತ್ತೊಂದು ಟಾಲಿವುಡ್ ಆಫರ್ ಬಂದಿದೆ.

    ಕ್ರೇಜಿ ಬಾಯ್ ಸಿನಿಮಾ ಮೂಲಕ ತೆಲುಗಿಗೆ ಪರಿಚಿತರಾದ ನಟಿ ಆಶಿಕಾ, ಕನ್ನಡದ ಸ್ಟಾರ್ ನಟರಿಗೆ ಜೋಡಿಯಾಗುವ ಮೂಲಕ ಗಮನ ಸೆಳೆದರು. ಈಗ ತೆಲುಗಿನಲ್ಲಿ ನಾಯಕಿನಾಗಿ ಗಟ್ಟಿ ನೆಲೆ ಗಿಟ್ಟಿಸಿಕೊಳ್ಳಲು ತಯಾರಿ ಮಾಡ್ತಿದ್ದಾರೆ. ರಶ್ಮಿಕಾ ಮಂದಣ್ಣ, ಶ್ರೀಲೀಲಾಗಿರುವ ಡಿಮ್ಯಾಂಡ್ ನಡುವೆ ಆಶಿಕಾ ಗೆದ್ದು ಬೀಗುತ್ತಾರಾ ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚುಟುಚುಟು ಹುಡುಗಿಯ ಬರ್ತಡೇ: ಅಭಿಮಾನಿಗಳಿಗೆ ಪತ್ರ ಬರೆದ ಆಶಿಕಾ

    ಚುಟುಚುಟು ಹುಡುಗಿಯ ಬರ್ತಡೇ: ಅಭಿಮಾನಿಗಳಿಗೆ ಪತ್ರ ಬರೆದ ಆಶಿಕಾ

    ನ್ನಡ ಚಿತ್ರೋದ್ಯಮದ ಚುಟುಚುಟು ಹುಡುಗಿ ಎಂದೇ ಖ್ಯಾತಿಯಾಗಿರುವ ಆಶಿಕಾ ರಂಗನಾಥ್(Ashika Ranganath), ಇಂದು ಹುಟ್ಟು ಹಬ್ಬವನ್ನು (Birthday) ಆಚರಿಸಿಕೊಳ್ಳುತ್ತಿದ್ದಾರೆ. ಪ್ರತಿ ಬಾರಿಯೂ ಅಭಿಮಾನಿಗಳ ಜೊತೆ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ ಸುಂದರಿ, ಈ ಬಾರಿ ಊರಲ್ಲಿ ಇರದೇ ಇರುವ ಕಾರಣಕ್ಕಾಗಿ ಅಭಿಮಾನಿಗಳಿಗೆ ಕ್ಷಮೆ ಕೇಳಿದ್ದಾರೆ.

    ಕಳೆದ ಬಾರಿ ನಿಮ್ಮೊಂದಿಗೆ ನಾನು ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದೆ. ಆ ನೆನಪು ಇನ್ನೂ ಹಾಗೆಯೇ ಇದೆ. ಕ್ಷಮಿಸಿ, ಈ ಬಾರಿಯ ಹುಟ್ಟುಹಬ್ಬಕ್ಕೆ ನಿಮ್ಮ ಜೊತೆ ಇರಲು ನನಗೆ ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಒಳ್ಳೆಯ ಪ್ಲ್ಯಾನ್​ ಮಾಡೋಣ’ ಎಂದು ಆಶಿಕಾ  ಅಭಿಮಾನಿಗಳಿಗೆ (Fans) ತಿಳಿಸಿದ್ದಾರೆ. ಇದನ್ನೂ ಓದಿ:‘ರಾ’ ಏಜೆಂಟ್ ಆಗಿ ಬಾಲಿವುಡ್ ಪ್ರವೇಶ ಮಾಡಲಿದ್ದಾರೆ ‘ಪಾಕ್ ಪ್ರೇಮಿ’ ಸೀಮಾ

    ಪ್ರತಿ ಬಾರಿಯೂ ನೆಚ್ಚಿನ ನಟಿಯ ಹುಟ್ಟು ಹಬ್ಬಕ್ಕಾಗಿ ಮನೆ ಮುಂದೆ ಜಮಾಯಿಸುತ್ತಿದ್ದ ಅಭಿಮಾನಿಗಳಿಗೆ ‘ಮನೆಗೆ ಬರಬೇಡಿ. ನಾನು ಇರುವುದಿಲ್ಲ’ ಎಂದು ಬರೆದ ಪತ್ರ ನಿರಾಸೆ ಮೂಡಿಸಿದೆ. ಆದರೂ, ಕೆಲವರು ಆಶಿಕಾ ಮನೆ ಮುಂದೆ ಬಂದು ನಿರಾಸೆಯಿಂದ ವಾಪಸ್ಸಾಗಿದ್ದಾರೆ.

    ಇತ್ತೀಚೆಗೆ ಆಶಿಕಾ ರಂಗನಾಥ್ ಯಾವುದೇ ಸಿನಿಮಾ ಒಪ್ಪಿಕೊಂಡಂತೆ ಕಾಣುತ್ತಿಲ್ಲ. ಹಾಗಾಗಿ ಈ ಬಾರಿ ಯಾವುದೇ ಸಿನಿಮಾದ ಪೋಸ್ಟರ್ ಕೂಡ ರಿಲೀಸ್ ಆಗಿಲ್ಲ. ಆದರೂ, ಖುಷಿಯಿಂದ ಇರುವ ಆಶಿಕಾ ಈ ಬಾರಿಯ ಹುಟ್ಟು ಹಬ್ಬವನ್ನು ಎಲ್ಲಿ ಆಚರಿಸಿಕೊಂಡಿದ್ದಾರೆ ಎನ್ನುವ ಕುತೂಹಲ ಅವರ ಅಭಿಮಾನಿಗಳದ್ದು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯಶ್ ಥರ ಗಂಡ ಬೇಕು ಎಂದ ‘ಪಟಾಕಿ ಪೋರಿ’ ಆಶಿಕಾ ರಂಗನಾಥ್

    ಯಶ್ ಥರ ಗಂಡ ಬೇಕು ಎಂದ ‘ಪಟಾಕಿ ಪೋರಿ’ ಆಶಿಕಾ ರಂಗನಾಥ್

    ಸ್ಯಾಂಡಲ್‌ವುಡ್‌ನ ರ‍್ಯಾಂಬೋ ಬೆಡಗಿ ಆಶಿಕಾ ರಂಗನಾಥ್ (Ashika Ranganath) ಅವರು ಸದ್ಯ ಕನ್ನಡದ ಜೊತೆಗೆ ತೆಲುಗು- ತಮಿಳು ಚಿತ್ರರಂಗದಲ್ಲೂ ಆಕ್ಟೀವ್ ಆಗಿದ್ದಾರೆ. ಈ ನಡುವೆ ಕಾರ್ಯಕ್ರಮವೊಂದರಲ್ಲಿ ನಟಿ ಆಶಿಕಾ ಅವರು ತಮ್ಮ ಲೈಫ್ ಪಾರ್ಟನರ್ ಹೇಗಿರಬೇಕು ಎಂದು ಬಣ್ಣಿಸಿದ್ದಾರೆ. ಯಶ್ (Actor Yash) ತರ ಗಂಡ ಇರಬೇಕು ಎಂದು ಹೇಳಿಕೊಂಡಿದ್ದಾರೆ.

    ‘ಕ್ರೇಜಿ ಬಾಯ್’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಿತರಾದ ನಟಿ ಆಶಿಕಾ ರಂಗನಾಥ್, ಮುಗುಳುನಗೆ, ಮಾಸ್ ಲೀಡರ್, ರ‍್ಯಾಂಬೋ 2, ತಾಯಿಗೆ ತಕ್ಕ ಮಗ, ಮದಗಜ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ರು. ‘ಕೋಟಿಗೊಬ್ಬ-3’ನಲ್ಲಿ ಆಶಿಕಾ ರಂಗನಾಥ್, ಕಿಚ್ಚ ಸುದೀಪ್ (Kiccha Sudeep) ಜೊತೆ ಪಟಾಕಿ ಪೋರಿ ಹಾಡಿಗೆ ಸೊಂಟ ಬಳುಕಿಸಿದ್ದರು.

    ಇತ್ತೀಚಿನ ಅವಾರ್ಡ್ ಕಾರ್ಯಕ್ರಮದಲ್ಲಿ ಯಂಗ್ ಸ್ಟಾರ್ ಐಕಾನ್ ಪ್ರಶಸ್ತಿಯೂ ಆಶಿಕಾ ರಂಗನಾಥ್‌ಗೆ ಲಭಿಸಿದೆ. ನಟಿ ಪ್ರಶಸ್ತಿ ಪಡೆದು ತುಂಬಾ ಖುಷಿಯಾಗಿದ್ದಾರೆ. ಬ್ಲ್ಯಾಕ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಈ ಪ್ರಶಸ್ತಿ ಪಡೆದ ನಂತರ ನಿರೂಪಕ ನಿರಂಜನ್ ದೇಶಪಾಂಡೆ ಅವರು ನಿಮ್ಮ ಬಾಯ್ ಫ್ರೆಂಡ್ ಯಾವ ರೀತಿ ಇರಬೇಕು ಎಂದು ಕೇಳ್ತಾರೆ. ಅದಕ್ಕೆ ಆಶಿಕಾ, ನಮ್ಮ ನಡುವೆ ತುಂಬಾ ಹೊಂದಾಣಿಕೆ ಇರಬೇಕು. ಪ್ರೀತಿ ತೋರಿಸಬೇಕು ಎಂದು ಆಶಿಕಾ ಹೇಳಿದ್ದಾರೆ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ‘ಜೋಶ್’ ನಟಿ ಸ್ನೇಹಾ ಆಚಾರ್ಯ

    ನಿರಂಜನ್ ಸ್ಯಾಂಡಲ್‌ವುಡ್‌ನ ಹೀರೋ ಫೋಟೋಗಳನ್ನು ಹಾಕಿ. ಇದರಲ್ಲಿ ನಿಮ್ಮ ಮದುವೆ ಆಗೋ ಹುಡುಗ ಯಾವ ರೀತಿ ಇರಬೇಕು ಎಂದು ಕೇಳ್ತಾರೆ. ಅದಕ್ಕೆ ಆಶಿಕಾ, ಯಶ್ (Yash) ಸರ್ ಥರ ಗಂಡ (Husband) ಇರಬೇಕು ಎನ್ನಿಸುತ್ತೆ ಎಂದಿದ್ದಾರೆ. ನಾನು ಇವರನ್ನು ಓಡಿ ಹೋಗಿ ಪ್ರಪೋಸ್ ಮಾಡ್ತೀನಿ ಅಂದ್ರೆ ಯಾರನ್ನ ಎಂದು ನಿರೂಪಕ ಕೇಳಿದ್ದಾರೆ. ಅದಕ್ಕೆ ಆಶಿಕಾ, ಧ್ರುವ ಸರ್ಜಾ ಎಂದು ಹೇಳಿದ್ದಾರೆ.

    ಚಂದನವನದ ಬೆಸ್ಟ್ ಜೋಡಿ ಯಶ್- ರಾಧಿಕಾ ಪಂಡಿತ್ (Radhika Pandit) ಅವರದ್ದು ಹಲವು ವರ್ಷಗಳು ಪ್ರೀತಿಸಿ ಬಳಿಕ ಮದುವೆ ಆಗಿದ್ದಾರೆ. ಅಲ್ಲದೇ ಇತರೆ ಜೋಡಿಗಳಿಗೆ ಮಾದರಿ ಆಗಿದ್ದಾರೆ. ಅವರ ರೀತಿ ಗಂಡ ಇರಬೇಕು ಎಂದುಕೊಳ್ಳುವುದು ಸಹಜ ಬಿಡಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.