Tag: Ashika Ranganath

  • ದುಶ್ಯಂತ್-ಆಶಿಕಾ ನಟನೆಯ `ಗತವೈಭವ’ದ ಫಸ್ಟ್‌ ಸಾಂಗ್‌ ರಿಲೀಸ್

    ದುಶ್ಯಂತ್-ಆಶಿಕಾ ನಟನೆಯ `ಗತವೈಭವ’ದ ಫಸ್ಟ್‌ ಸಾಂಗ್‌ ರಿಲೀಸ್

    ನಿರ್ದೇಶಕ ಸಿಂಪಲ್ ಸುನಿ ಬೆಳ್ಳಿತೆರೆಯಲ್ಲಿ ‘ಗತವೈಭವ’ (Gathavaibhava Movie) ಸೃಷ್ಟಿಸಲು ಸಜ್ಜಾಗಿದ್ದಾರೆ. ಹೊಸ ಪ್ರತಿಭೆ ದುಶ್ಯಂತ್ ನಾಯಕನಾಗಿ, ಚುಟುಚುಟು ಬ್ಯೂಟಿ ಆಶಿಕಾ ರಂಗನಾಥ್ (Ashika Ranganath) ನಾಯಕಿಯಾಗಿ ಅಭಿನಯಿಸಿರುವ ಈ ಚಿತ್ರದ ಮೊದಲ ಗೀತೆ ರಿಲೀಸ್ ಆಗಿ ಗಮನ ಸೆಳೆಯುತ್ತಿದೆ. ಇತ್ತೀಚೆಗೆ ಟೀಸರ್ ಮೂಲಕ ಗಮನಸೆಳೆದಿರುವ ಗತವೈಭವ ಸಿನಿಮಾದ ಮೊದಲ ಹಾಡನ್ನು ಅನಾವರಣ ಮಾಡಲಾಗಿದೆ.

    ಪತ್ರಗಳ ಮೂಲಕ ಪ್ರೀತಿ ವಿನಿಮಯ ಮಾಡುವ ನವ ಪ್ರೇಮಿಗಳ ನಡುವಿನ ವರ್ಣಮಾಲೆ ಹಾಡಿಗೆ ಸಿಂಪಲ್ ಸುನಿ (Simple Suni) ಕ್ಯಾಚಿ ಮ್ಯಾಚಿ ಪದ‌ ಪೋಣಿಸಿದ್ದಾರೆ. ಅಭಿನಂದನ್ ಮಹಿಶಾಲೆ, ಸುನಿಧಿ ಗಣೇಶ್ ಕಂಠ ಕುಣಿಸಿದ್ದು, ಜೂಡಾ ಸ್ಯಾಂಡಿ‌ ಸಂಗೀತದ ಇಂಪು ವರ್ಣಮಾಲೆ ಗೀತೆಯ ಶ್ರೀಮಂತಿಕೆ ಹೆಚ್ಚಿಸಿದೆ. ದುಶ್ಯಂತ್-ಆಶಿಕಾ ಹಳ್ಳಿ ಗೆಟಪ್ ನಲ್ಲಿ ಮಿಂಚಿದ್ದಾರೆ.

    ‘ಗತವೈಭವ’ ಫ್ಯಾಂಟಸಿ ಹಾಗೂ ಪುರಾಣದ ಕಥೆ ಜೊತೆಗೆ ರೋಮ್ಯಾಂಟಿಕ್ ಲವ್ ಸ್ಟೋರಿ ಮಿಕ್ಸ್ ಮಾಡಿ ಸಿನಿಮಾ ಮಾಡಲಾಗಿದೆ. ಹೀಗಾಗಿ ಇದು ಸಿಂಪಲ್ ಸುನಿ ಕರಿಯರ್‌ನ ವಿಭಿನ್ನ ಸಿನಿಮಾ. ಕಥೆ-ಚಿತ್ರಕಥೆ, ಸಂಭಾಷಣೆ ಜೊತೆಗೆ ಹಾಡಿಗೆ ಸಾಹಿತ್ಯ ಕೂಡ ಬರೆದಿದ್ದಾರೆ. ಸರ್ವ್‌ಗರಾ ಸಿಲ್ವರ್ ಸ್ಕ್ರೀನ್ಸ್ ಹಾಗೂ ಸುನಿ ಸಿನಿಮಾಸ್ ಸಂಸ್ಥೆಯಲ್ಲಿ ದೀಪಿಕ್ ತಿಮ್ಮಯ್ಯ ಹಾಗೂ ಸುನಿ ಇಬ್ಬರೂ ಸೇರಿ ನಿರ್ಮಾಣ ಮಾಡ್ತಿದ್ದಾರೆ. ವಿಲಿಯಂ ಡೇವಿಡ್ ಕ್ಯಾಮೆರಾ ವರ್ಕ್, ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ.

  • ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಆಶಿಕಾ ರಂಗನಾಥ್

    ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಆಶಿಕಾ ರಂಗನಾಥ್

    ನ್ನಡದ ನಟಿ ಆಶಿಕಾ ರಂಗನಾಥ್ (Ashika Ranganath) ಅವರು ಸಿನಿಮಾ ಕೆಲಸಕ್ಕೆ ಬ್ರೇಕ್ ಸಿಕ್ಕ ಬೆನ್ನಲ್ಲೇ ತಿರುಪತಿ ತಿಮ್ಮಪ್ಪನ (Tirumala Temple) ದರ್ಶನ ಪಡೆದಿದ್ದಾರೆ. ತಿಮ್ಮಪ್ಪನಿಗೆ ನಟಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:ಬಹುನಿರೀಕ್ಷಿತ ‘ಹೌಸ್‌ಫುಲ್ 5’ ಚಿತ್ರದ ಟೀಸರ್ ಔಟ್

    ಅಕ್ಕ ಅನುಷಾ ಮತ್ತು ಭಾವನೊಂದಿಗೆ ಆಂಧ್ರಪ್ರದೇಶದ ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇಗುಲಕ್ಕೆ ಆಶಿಕಾ ಭೇಟಿ ನೀಡಿದ್ದಾರೆ. ತಿಮ್ಮಪ್ಪನಿಗೆ ಪೂಜೆ ಸಲ್ಲಿಸಿ ಕೆಲ ಕಾಲ ದೇವಸ್ಥಾನದಲ್ಲಿ ಸಮಯ ಕಳೆದಿದ್ದಾರೆ. ಈ ವೇಳೆ, ಬಹುಭಾಷಾ ನಟಿ ಆಶಿಕಾ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ. ಇದನ್ನೂ ಓದಿ:ಬಿಜೆಪಿ ಮುಖಂಡನ ಮಗನ ಮದುವೆಯಲ್ಲಿ ಜಾಕ್ವೆಲಿನ್‌ ಡ್ಯಾನ್ಸ್- ನೆಟ್ಟಿಗರಿಂದ ಟೀಕೆ

     

    View this post on Instagram

     

    A post shared by Ashika Ranganath (@ashika_rangnath)


    ಕಳೆದ ವಾರ ಗೆಳತಿ ಅರ್ಚನಾ ಕೊಟ್ಟಿಗೆ ಮತ್ತು ಕ್ರಿಕೆಟರ್ ಶರತ್ ಮದುವೆಯಲ್ಲಿ ಮಿಂಚಿದ್ದರು. ದಿಯಾ ಖ್ಯಾತಿಯ ಖುಷಿ, ತೇಜಸ್ವಿ ಶರ್ಮಾ, ಸಿರಿ ಪ್ರಹ್ಲಾದ್ ಸೇರಿದಂತೆ ಅನೇಕರು ಅರ್ಚನಾ ಮದುವೆಯಲ್ಲಿ ಭಾಗಿಯಾಗಿದ್ದರು.

    ಸದ್ಯ ಕಾರ್ತಿ ನಟನೆಯ ‘ಸರ್ದಾರ್ 2’, ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ವಿಶ್ವಂಭರ’, ಕನ್ನಡದ ‘ಗತವೈಭವ’ ಸೇರಿದಂತೆ ಹಲವು ಚಿತ್ರಗಳು ಆಶಿಕಾ ಕೈಯಲ್ಲಿವೆ.

  • ದಕ್ಷಿಣದ ಸಿನಿಮಾದಲ್ಲಿ ಬ್ಯುಸಿಯಾದ ಆಶಿಕಾ ರಂಗನಾಥ್

    ದಕ್ಷಿಣದ ಸಿನಿಮಾದಲ್ಲಿ ಬ್ಯುಸಿಯಾದ ಆಶಿಕಾ ರಂಗನಾಥ್

    ಟಿ ಆಶಿಕಾ ರಂಗನಾಥ್ (Ashika Ranganath) ಕನ್ನಡದ ಜೊತೆಗೆ ತೆಲುಗು ಮತ್ತು ತಮಿಳಿನ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದಕ್ಷಿಣದ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ‘ಮದಗಜ’ ನಟಿ ಆಶಿಕಾ ನಟಿಸುತ್ತಿದ್ದಾರೆ. ಸೌತ್‌ನಲ್ಲಿ ಕನ್ನಡದ ನಟಿಯರಿಗೆ ಬೇಡಿಕೆ ಹೆಚ್ಚಾಗಿದೆ. ಇದನ್ನೂ ಓದಿ: ರೀಲ್ಸ್ ಕೇಸ್ – ರಜತ್ ಜೈಲಿಗೆ, ವಿನಯ್‌ಗೆ 500 ರೂ. ದಂಡ

    ರಶ್ಮಿಕಾ ಮಂದಣ್ಣ, ಶ್ರೀಲೀಲಾರಂತೆಯೇ ಸೌತ್‌ನಲ್ಲಿ ಮೋಡಿ ಮಾಡಲು ಆಶಿಕಾ ರೆಡಿಯಾಗಿದ್ದಾರೆ. ಸದ್ಯ ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ವಿಶ್ವಂಭರ’, ಕಾರ್ತಿ ನಟನೆಯ ‘ಸರ್ದಾರ್ 2’ನಲ್ಲಿ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ನಟಿಯ ಕೈಯಲ್ಲಿವೆ. ಈ ಸ್ಟಾರ್‌ ನಟರ ಸಿನಿಮಾದಲ್ಲಿ ನಟನೆಗೆ ಸ್ಕೋಪ್‌ ಇರುವ ಪಾತ್ರಗಳು ಅವರಿಗೆ ಸಿಕ್ಕಿದೆ. ಇದನ್ನೂ ಓದಿ:ಶ್ರೀದೇವಿ ಬಯೋಪಿಕ್‌ನಲ್ಲಿ ನಟಿಸಲು ಸಿದ್ಧ ಎಂದ ಪೂಜಾ ಹೆಗ್ಡೆ

    ಸೌತ್‌ನಲ್ಲಿ ಬ್ಯುಸಿಯಾಗಿದ್ರು ಕನ್ನಡದ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಸಿಂಪಲ್ ಸುನಿ ನಿರ್ದೇಶನದ ‘ಗತವೈಭವ’ ಸೇರಿದಂತೆ ಹಲವು ಚಿತ್ರಗಳಲ್ಲಿ ಆಶಿಕಾ ನಟಿಸುತ್ತಿದ್ದಾರೆ.

    ಈಗಾಗಲೇ ಸೌತ್‌ನಲ್ಲಿ ನಂದಮೂರಿ ಕಲ್ಯಾಣ್ ಜೊತೆ ಅಮಿಗೋಸ್, ನಾಗಾರ್ಜುನ ಜೊತೆ ನಾ ಸಾಮಿ ರಂಗ, ಸಿದ್ಧಾರ್ಥ್ ಜೊತೆ ಮಿಸ್ ಯೂ ಚಿತ್ರಗಳಲ್ಲಿ ನಾಯಕಿಯಾಗಿ ಆಶಿಕಾ ನಟಿಸಿದ್ದಾರೆ.

  • ನಟಿ ಆಶಿಕಾ ರಂಗನಾಥ್ ನೋಡಲು ಮುಗಿಬಿದ್ದ ಜನ : ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಬಿದ್ದ ಅಂಬುಲೆನ್ಸ್

    ನಟಿ ಆಶಿಕಾ ರಂಗನಾಥ್ ನೋಡಲು ಮುಗಿಬಿದ್ದ ಜನ : ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಬಿದ್ದ ಅಂಬುಲೆನ್ಸ್

    ರಾಯಚೂರು: ನಗರದಲ್ಲಿ ನೂತನ ಶಾಪಿಂಗ್ ಮಾಲೊಂದರ ಉದ್ಘಾಟನೆಗೆ ಬಂದ ನಟಿ ಆಶಿಕಾ ರಂಗನಾಥ್‌ರನ್ನು (Ashika Ranganath) ನೋಡಲು ಜನ ಮುಗಿಬಿದ್ದ ಹಿನ್ನೆಲೆ ಸುಮಾರು ಒಂದು ಗಂಟೆ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಟ್ರಾಫಿಕ್ ಜಾಮ್‌ನಲ್ಲಿ ಅಂಬುಲೆನ್ಸ್ ಸಿಕ್ಕಿಬಿದ್ದಿದ್ದರಿಂದ ರೋಗಿ ಪರದಾಡಬೇಕಾಯಿತು.ಇದನ್ನೂ ಓದಿ: ಚಿತ್ರೀಕರಣದ ವೇಳೆ ಸುನೀಲ್ ಶೆಟ್ಟಿಗೆ ಗಾಯ

    ನಗರದ ರಾಯಚೂರು-ಲಿಂಗಸುಗೂರು (Raihcuru-Lingasuguru) ರಸ್ತೆಯಲ್ಲಿ ನೂತನವಾಗಿ ಆರಂಭಗೊಂಡ ಶಾಪಿಂಗ್ ಮಾಲ್‌ನ ಮಾಲೀಕರು ಶಾಪಿಂಗ್ ಮಾಲ್ ಹೊರಗಡೆ ಕಾರ್ಯಕ್ರಮ ಆಯೋಜಿಸಿದ್ದರಿಂದ ಹೆಚ್ಚು ಸಂಖ್ಯೆಯಲ್ಲಿ ಜನ ಸೇರಿದ್ದು, ಟ್ರಾಫಿಕ್ ಜಾಮ್ ಉಂಟಾಗಿದೆ. ಸಿನಿಮಾ ನಟಿಯನ್ನ ನೋಡಲು ಜನ ಮುಗಿಬಿದ್ದು, ಟ್ರಾಫಿಕ್ ಜಾಮ್ ಮಾಡಿದ್ದಾರೆ. ಕೊನೆಗೆ ಪೊಲೀಸರು ಲಾಠಿ ಬಿಸಿ ತೋರಿಸಿ ಜನರನ್ನು ಚದುರಿಸಿ ಅಂಬುಲೆನ್ಸ್ ಹೋಗಲು ದಾರಿ ಮಾಡಿಕೊಟ್ಟಿದ್ದಾರೆ.

    ಶಾಪಿಂಗ್ ಮಾಲ್ ಉದ್ಘಾಟನೆ ಬಳಿಕ ಕಾರ್ಯಕ್ರಮದಲ್ಲಿ ನಟಿ ಆಶಿಕಾ ರಂಗನಾಥ್ ಡ್ಯಾನ್ಸ್ ಮಾಡುವ ಮೂಲಕ ನೆರೆದಿದ್ದ ಜನರನ್ನ ರಂಜಿಸಿದರು. ಈ ವೇಳೆ ಕಿಕ್ಕಿರಿದು ಜನ ಸೇರಿದ ಹಿನ್ನೆಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ರಸ್ತೆಯೂ ಕಿರಿದಾಗಿರುವುದರಿಂದ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿತ್ತು.ಇದನ್ನೂ ಓದಿ: ಸಿಎಂ ಹೆಸರು ಹಾಳು ಮಾಡಲು ಮುಡಾ ಕೇಸ್‌ನಲ್ಲಿ ಆರೋಪ ಮಾಡ್ತಿದ್ದಾರೆ – ದಿನೇಶ್ ಗುಂಡೂರಾವ್

  • ಟ್ರೈನಿ ವೈದ್ಯೆ ಹತ್ಯೆ ಪ್ರಕರಣ: ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು ಎಂದ ಆಶಿಕಾ ರಂಗನಾಥ್

    ಟ್ರೈನಿ ವೈದ್ಯೆ ಹತ್ಯೆ ಪ್ರಕರಣ: ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು ಎಂದ ಆಶಿಕಾ ರಂಗನಾಥ್

    ಕೊಲ್ಕತ್ತಾದ ಆರ್‌ಜಿ ಕರ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಈ ಬೆನ್ನಲ್ಲೇ ಹಲವು ನಟ- ನಟಿಯರು ಈ ಕುರಿತು ಧ್ವನಿಯೆತ್ತಿದ್ದಾರೆ. ನೈಟ್ ಡ್ಯೂಟಿ ಟ್ರೈನಿ ವೈದ್ಯೆಗೆ ರೇಪ್‌ ಆದರೆ ಇನ್ನೆಲಿ ರಕ್ಷಣೆ ಎಂದು ನಟಿ ಆಶಿಕಾ ರಂಗನಾಥ್ (Ashika Ranganath) ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ:100 ಜನ್ಮದಲ್ಲೂ ನಿಮ್ಮನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ: ಯಶ್ ಕುರಿತು ರಾಧಿಕಾ ಲವ್ಲಿ ಪೋಸ್ಟ್

    ಕೊಲ್ಕತ್ತಾದ ಬರ್ಬರತೆಯ (Kolkata Rape-Murder) ಕುರಿತು ತಮ್ಮ ಇನ್ಸ್ಟಾಗ್ರಾಂ ಬರೆದುಕೊಂಡಿರುವ ಆಶಿಕಾ ರಂಗನಾಥ್, ಆರ್‌ಜಿ ಕರ್ ಮೆಡಿಕಲ್ ಕಾಲೇಜ್‌ನಲ್ಲಿ ನಡೆದ ಘಟನೆ ಕೇವಲ ವೈದ್ಯರಿಗೆ ಸಂಬಂಧಿಸಿದ ಸಮಸ್ಯೆಯಲ್ಲ, ಎಲ್ಲ ವೈದ್ಯಕೀಯೇತರ ವೃತ್ತಿಯಲ್ಲಿರುವವರೇ ಇದನ್ನು ದಯವಿಟ್ಟು ಅರ್ಥ ಮಾಡಿಕೊಳ್ಳಿ, ಆ ಮಹಿಳೆ ಕೆಲಸ ಮಾಡುವ ಜಾಗದಲ್ಲಿಯೇ ಸುರಕ್ಷಿತವಾಗಿಲ್ಲ ಅಂದ್ರೆ ಮತ್ತೆಲ್ಲಿ? ಇದು ನಿರ್ಭಯಾ ಪ್ರಕರಣಕ್ಕಿಂತ ಏನು ಕಡಿಮೆಯಿಲ್ಲ ಎಂದಿದ್ದಾರೆ ಆಶಿಕಾ.

    ಕೆಲವು ನಾಯಕರು ಹೇಳುವ ಪ್ರಕಾರ, ಮಧ್ಯರಾತ್ರಿ ಹೆಣ್ಣು ಮಕ್ಕಳು ರಸ್ತೆಯಲ್ಲಿ ಓಡಾಡಬಾರದು ಅಂತೆ. ಆದ್ರೆ ಅವಳು ಹೋಗಿದ್ದು ನೈಟ್ ಡ್ಯೂಟಿಗೆ, ಅತ್ಯಂತ ನೆಮ್ಮದಿಯ ವಲಯದಲ್ಲಿ ಇದ್ದಂತವಳು. ಅವಳಿಗೆ ಅಲ್ಲಾದರೂ ರಕ್ಷಣೆ ಸಿಕ್ಕಿದ್ಯಾ. ಈ ತರಹದ್ದು ಯಾರಿಗೆ ಬೇಕಾದರೂ, ಎಲ್ಲಿ ಬೇಕಾದರೂ, ಯಾವ ಸಮಯದಲ್ಲಿ ಬೇಕಾದರೂ ಕೂಡ ಆಗಬಹುದು. ಇದನ್ನೂ ಆದಷ್ಟು ಗಂಭೀರವಾಗಿ ಪರಿಗಣಿಸಬೇಕು. ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು. ಆ ಶಿಕ್ಷೆ ಇಂತಹ ಸೈಕೋಪಾತ್‌ಗಳಿಗೆ ಎಚ್ಚರಿಕೆಯ ಘಂಟೆಯಾಗಬೇಕು ಎಂದು ಆಶಿಕಾ ರಂಗನಾಥ್ ಆಗ್ರಹಿಸಿದ್ದಾರೆ.

    ಅಂದಹಾಗೆ, ಮೆಗಾಸ್ಟಾರ್‌ ಚಿರಂಜೀವಿ ಜೊತೆ ತೆಲುಗಿನ ‘ವಿಶ್ವಾಂಭರ’, ತಮಿಳಿನ ನಟ ಕಾರ್ತಿ ಜೊತೆ ‘ಸರ್ದಾರ್‌ 2’ ಸಿನಿಮಾದಲ್ಲಿ ಕನ್ನಡದ ನಟಿ ಆಶಿಕಾ ರಂಗನಾಥ್‌ ಬ್ಯುಸಿಯಾಗಿದ್ದಾರೆ.

  • ತಮಿಳು ನಟ ಕಾರ್ತಿಗೆ ಆಶಿಕಾ ರಂಗನಾಥ್ ಜೋಡಿ

    ತಮಿಳು ನಟ ಕಾರ್ತಿಗೆ ಆಶಿಕಾ ರಂಗನಾಥ್ ಜೋಡಿ

    ನ್ನಡದ ನಟಿ ಆಶಿಕಾ ರಂಗನಾಥ್‌ಗೆ (Ashika Ranganath) ಇಂದು (ಆ.5) ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ತಮಿಳಿನಲ್ಲಿ ಬಿಗ್ ಚಾನ್ಸ್ ಗಿಟ್ಟಿಸಿಕೊಂಡಿರುವ ಆಶಿಕಾ, ಮುಂದಿನ ಸಿನಿಮಾ ಬಗ್ಗೆ ಬಿಗ್ ಅಪ್‌ಡೇಟ್ ಹಂಚಿಕೊಂಡಿದ್ದಾರೆ.

    ತಮಿಳಿನ ಸ್ಟಾರ್ ನಟ ಕಾರ್ತಿ (Karthi) ಜೊತೆ ನಟಿ ಡ್ಯುಯೆಟ್ ಹಾಡುವ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಸರ್ದಾರ್ 2ಗೆ (Sardar 2) ಮತ್ತೋರ್ವ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಈ ಕುರಿತು ಸ್ವತಃ ಆಶಿಕಾ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:ಸಂಜಯ್‌ ಲೀಲಾ ಬನ್ಸಾಲಿ ಚಿತ್ರದಲ್ಲಿ ನನ್ನಂತಹ ನಟರ ಅಗತ್ಯವಿಲ್ಲ: ಮನೋಜ್‌ ಬಾಜಪೇಯಿ

    ನನ್ನ ಮುಂದಿನ ಸಿನಿಮಾದ ಅನೌನ್ಸ್‌ಮೆಂಟ್. ತಮಿಳಿನಲ್ಲಿ ನನ್ನ 3ನೇ ಸಿನಿಮಾವಾಗಿದ್ದು, ಕಾರ್ತಿ ಸರ್ ಜೊತೆ ಕೆಲಸ ಮಾಡಲು ಉತ್ಸುಕಳಾಗಿದ್ದೇನೆ. ನಿರ್ದೇಶಕ ಪಿ.ಎಸ್ ಮಿತ್ರನ್ ಜೊತೆ ಕೆಲಸ ಮಾಡಲು ಕಾಯುತ್ತಿದ್ದೇನೆ. ಥ್ರಿಲಿಂಗ್ ಆಗಿರುವ ಕಥೆಯಲ್ಲಿ ಭಾಗವಾಗಿರೋದಕ್ಕೆ ಖುಷಿಯಾಗಿದ್ದೇನೆ ಎಂದು ನಟಿ ತಿಳಿಸಿದ್ದಾರೆ. ವಿಶೇಷ ಪೋಸ್ಟರ್ ರಿಲೀಸ್ ಮಾಡಿ ಶುಭಕೋರಿದ ತಂಡಕ್ಕೂ ನಟಿ ಧನ್ಯವಾದ ತಿಳಿಸಿದ್ದಾರೆ.

    ಕಾರ್ತಿ ಜೊತೆ ಈ ಸಿನಿಮಾದಲ್ಲಿ ಆಶಿಕಾ, ಮಾಳವಿಕಾ ಮೋಹನನ್, ಎಸ್ ಸೂರ್ಯ ಸೇರಿದಂತೆ ಹಲವರು ನಟಿಸಲಿದ್ದಾರೆ. ಒಟ್ನಲ್ಲಿ ಚುಟು ಚುಟು ಸುಂದರಿ ಈಗ ಕಾಲಿವುಡ್‌ನಲ್ಲಿ ನೆಲೆ ನಿಲ್ಲುವತ್ತ ಹೆಜ್ಜೆ ಹಾಕ್ತಿದ್ದಾರೆ.

  • ತೆಲುಗಿನಲ್ಲಿ ಬಿಗ್ ಚಾನ್ಸ್ ಗಿಟ್ಟಿಸಿಕೊಂಡ ಆಶಿಕಾ ರಂಗನಾಥ್

    ತೆಲುಗಿನಲ್ಲಿ ಬಿಗ್ ಚಾನ್ಸ್ ಗಿಟ್ಟಿಸಿಕೊಂಡ ಆಶಿಕಾ ರಂಗನಾಥ್

    ನ್ನಡದ ನಟಿ ಆಶಿಕಾ ರಂಗನಾಥ್ (Ashika Ranganath) ಕನ್ನಡದ ಜೊತೆಗೆ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜ್ಯೂ.ಎನ್‌ಟಿಆರ್ ಸಹೋದರ ಕಲ್ಯಾಣ್ ರಾಮ್ ಅಭಿನಯದ ‘ಅಮಿಗೋಸ್’ ಸಿನಿಮಾ ಮೂಲಕ ತೆಲುಗಿಗೆ ಎಂಟ್ರಿ ಕೊಟ್ಟಿದ್ದರು. ಬಳಿಕ ‘ನಾ ಸಾಮಿ ರಂಗ’ ಚಿತ್ರದಲ್ಲಿ ಅಕ್ಕಿನೇನಿ ನಾಗಾರ್ಜುನ್ ಜೋಡಿಯಾಗಿ ನಟಿಸಿದ್ದರು. ಈಗ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಜೊತೆ ನಟಿಸುವ ಅವಕಾಶ ತಮ್ಮದಾಗಿಸಿಕೊಂಡಿದ್ದಾರೆ.

    ಚಿರಂಜೀವಿ ಅಭಿನಯಿಸುತ್ತಿರುವ ‘ವಿಶ್ವಂಭರ’ (Vishambhara) ಚಿತ್ರದಲ್ಲಿ ಚುಟು ಚುಟು ಚೆಲುವೆ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಅವರ ಪಾತ್ರದ ಬಗ್ಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿದೆ.

    ಮೆಗಾಸ್ಟಾರ್ ಚಿರಂಜೀವಿಗೆ ನಾಯಕಿಯಾಗಿ ತ್ರಿಷಾ ಕೃಷ್ಣನ್ ನಟಿಸಲಿದ್ದಾರೆ. ಯು.ವಿ ಕ್ರಿಯೇಷನ್ ಬ್ಯಾನರ್ ನಡಿ ವಿಕ್ರಮ್, ವಂಶಿ ಹಾಗೂ ಪ್ರಮೋದ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಬಿಂಬಿಸಾರ ಚಿತ್ರ ನಿರ್ದೇಶಿಸಿದ್ದ ವಸಿಷ್ಠ ವಿಶ್ವಂಭರ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

    ಆಸ್ಕರ್ ವಿಜೇತ ಎಂ.ಎಂ ಕೀರವಾಣಿ ಅವರು ಈ ಸಿನಿಮಾಗೆ ಸಂಗೀತ ಮಾಡುತ್ತಿದ್ದಾರೆ. ಚೋಟಾ ಕೆ ನಾಯ್ಡು ಛಾಯಾಗ್ರಹಣ, ರಾಮ ಲಕ್ಷ್ಮಣ ಸಾಹಸ ನಿರ್ದೇಶನ ‘ವಿಶ್ವಂಭರ’ ಚಿತ್ರಕ್ಕಿದೆ. 2025ರ ಸಂಕ್ರಾಂತಿ ಹಬ್ಬಕ್ಕೆ ಸಿನಿಮಾ ಬಿಡುಗಡೆಯಾಗಲಿದೆ.

  • ಮೆಗಾಸ್ಟಾರ್ ಚಿರಂಜೀವಿ ಚಿತ್ರದಲ್ಲಿ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್

    ಮೆಗಾಸ್ಟಾರ್ ಚಿರಂಜೀವಿ ಚಿತ್ರದಲ್ಲಿ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್

    ನ್ನಡತಿ ಆಶಿಕಾ ರಂಗನಾಥ್‌ಗೆ (Ashika Ranganath) ಗೋಲ್ಡನ್ ಚಾನ್ಸ್ ಸಿಕ್ಕಿದೆ. ಚುಟು ಚುಟು ಬೆಡಗಿಗೆ ಟಾಲಿವುಡ್ ಅಂಗಳದಲ್ಲಿ ಬೇಡಿಕೆ ಹೆಚ್ಚಾಗಿದೆ. ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಜೊತೆ ತೆರೆಹಂಚಿಕೊಳ್ಳುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ಸಿಹಿಸುದ್ದಿ ನೀಡಿದ್ದಾರೆ.

    ಕನ್ನಡ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಆಶಿಕಾ ರಂಗನಾಥ್ ಟಾಲಿವುಡ್‌ನಲ್ಲಿ ಭರವಸೆ ಮೂಡಿಸಿದ್ದಾರೆ. ಸದ್ಯ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ವಿಶ್ವಂಭರ’ (Vishwambhara Film) ಸಿನಿಮಾದಲ್ಲಿ ಆಶಿಕಾ ಬಹಳ ಮಹತ್ವದ ಪಾತ್ರವೇ ಸಿಕ್ಕಿದೆಯಂತೆ. ವಸಿಷ್ಠ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

    ಈ ಚಿತ್ರದಲ್ಲಿ ತ್ರಿಷಾ, ಮೀನಾಕ್ಷಿ ಚೌಧರಿ, ಬಣ್ಣ ಹಚ್ಚಿದ್ದಾರೆ. ಇವರ ಜೊತೆಗೆ ಆಶಿಕಾ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಈ ಸುದ್ದಿ ಕೇಳಿ ಫ್ಯಾನ್ಸ್ ಕೂಡ ಥ್ರಿಲ್ ಆಗಿದ್ದಾರೆ. ಇದನ್ನೂ ಓದಿ:ಪುಸ್ತಕದಲ್ಲೂ ನೋಡಿ ‘ಡೇರ್ ಡೆವಿಲ್‍ ಮುಸ್ತಾಫಾ’ ಸಿನಿಮಾ

    ಕಳೆದ ವರ್ಷ ನಂದಮೂರಿ ಕಲ್ಯಾಣ್ ನಟನೆಯ ‘ಆಮಿಗೋಸ್’ ಸಿನಿಮಾದಲ್ಲಿ ಹೀರೋಯಿನ್ ಆಗಿ ನಟಿಸಿದ್ದರು. ಆದರೆ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿತ್ತು. ನಂತರ ನಾಗಾರ್ಜುನ ಜೊತೆ ‘ನಾ ಸಾಮಿ ರಂಗ’ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ ಸೂಪರ್ ಹಿಟ್ ಆಯ್ತು. ಈ ಬೆನ್ನಲ್ಲೇ ಮೆಗಾಸ್ಟಾರ್ ನಟಿಸುವ ಬಂಪರ್ ಅವಕಾಶ ನಟಿಗೆ ಸಿಕ್ಕಿದೆ.


    ಕನ್ನಡದ ನಟಿಯರಾದ ರಶ್ಮಿಕಾ ಮಂದಣ್ಣ (Rashmika Mandanna), ಶ್ರೀಲೀಲಾ (Sreeleela), ಪೂಜಾ ಹೆಗ್ಡೆ, ಅನುಷ್ಕಾ ಶೆಟ್ಟಿ ಅವರಂತೆಯೇ ಆಶಿಕಾ ರಂಗನಾಥ್ ಪೈಪೋಟಿ ಗೆಲ್ತಾರಾ? ಎಂದು ಕಾದುನೋಡಬೇಕಿದೆ.

  • ತೆಲುಗು, ತಮಿಳು ಸಿನಿಮಾ ಒಪ್ಪಿಕೊಂಡ ಆಶಿಕಾ ರಂಗನಾಥ್

    ತೆಲುಗು, ತಮಿಳು ಸಿನಿಮಾ ಒಪ್ಪಿಕೊಂಡ ಆಶಿಕಾ ರಂಗನಾಥ್

    ಚುಟುಚುಟು ಖ್ಯಾತಿಯ ಹುಡುಗಿ ಆಶಿಕಾ ರಂಗನಾಥ್ (Ashika Ranganath) ಪರಭಾಷಾ ಸಿನಿಮಾಗಳಲ್ಲೂ ಬ್ಯುಸಿ ಆದಂತೆ ಕಾಣುತ್ತಿದೆ. ಈಗಾಗಲೇ ತಮಿಳು (Tamil) ಮತ್ತು ತೆಲುಗಿನಲ್ಲಿ (Telagu) ಆಶಿಕಾ ನಟಿಸಿದ್ದರು. ಸಿದ್ದಾರ್ಥ ಜೊತೆಗಿನ ಚಿತ್ರದ ಶೂಟಿಂಗ್ ಮುಗಿಸಿಕೊಂಡಿದ್ದಾರೆ. ಆ ಚಿತ್ರಕ್ಕೆ ಇನ್ನಷ್ಟೇ ಹೆಸರಿಡಬೇಕು. ಇದಕ್ಕೂ ಮೊದಲು ನಾಗಾರ್ಜುನ ಅಕ್ಕಿನೇನಿಗೆ ಜೋಡಿಯಾಗಿ ‘ನಾ ಸಾಮಿ ರಂಗ’ (Naa Saami Ranga) ಸಿನಿಮಾದಲ್ಲಿ ನಟಿಸಿದ್ದರು.

    ಜ.14ರಂದು ‘ನಾ ಸಾಮಿ ರಂಗ’ ಸಿನಿಮಾ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿತ್ತು. ನಾಗಾರ್ಜುನ ಮತ್ತು ಆಶಿಕಾ ಜೋಡಿ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಸಿನಿಮಾ ನೋಡಿ ಅಭಿಮಾನಿಗಳು ಕೂಡ ಮೆಚ್ಚಿಕೊಂಡಿದ್ದರು. ಡ್ಯಾನ್ಸ್ ಮಾಸ್ಟರ್ ವಿಜಯ್ ಬಿನ್ನಿ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು. ಗ್ರಾಮೀಣ ಸೊಗಡಿನ ಕಥೆಯನ್ನು ಈ ಚಿತ್ರದ ಮೂಲಕ ತೋರಿಸಿದ್ದರು. ನಾಗಾರ್ಜುನ ಅವರನ್ನು ಡಿಫರೆಂಟ್ ಆಗಿ ಅಭಿಮಾನಿಗಳಿಗೆ ತೋರಿಸುವ ಮೂಲಕ ಸದ್ದು ಮಾಡಿದ್ದರು. ಆಶಿಕಾ ಕೂಡ ಪವರ್‌ಫುಲ್ ಪಾತ್ರದಲ್ಲಿ ನಟಿಸಿದ್ದರು.

    ಈ ಸಿನಿಮಾ ಗೆಲುವು ಸಾಧಿಸುತ್ತಿರುವಂತೆ ಮತ್ತೆ ತಮಿಳು ಹಾಗೂ ತೆಲುಗು ಚಿತ್ರರಂಗಗಳಿಂದ ಆಶಿಕಾಗೆ ಅವಕಾಶ ಹುಡುಕಿ ಬಂದಿದೆ. ಅವರೇ ಹೇಳುವಂತೆ ತೆಲುಗಿನಲ್ಲೊ ಒಂದು ಹಾಗೂ ತಮಿಳಿನಲ್ಲಿ ಒಂದು ಚಿತ್ರವನ್ನು ಒಪ್ಪಿಕೊಂಡಿದ್ದಾರಂತೆ. ಎರಡೂ ಚಿತ್ರಗಳು ಶೂಟಿಂಗ್ ಶುರುವಾಗಬೇಕು.

     

    ಪುನೀತ್ ರಾಜ್ ಕುಮಾರ್ ಬ್ಯಾನರ್ ನಲ್ಲಿ ಮೂಡಿ ಬಂದಿರುವ 02 ಚಿತ್ರದಲ್ಲೂ ಆಶಿಕಾ ನಟಿಸಿದ್ದಾರೆ. ಮೊದಲ ಬಾರಿಗೆ ಡಾಕ್ಟರ್ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದಾರೆ. ಆಶಿಕಾ ಜೊತೆ ಮುಖ್ಯಭೂಮಿಕೆಯಲ್ಲಿ ಮಲೆನಾಡಿನ ಪ್ರತಿಭೆ ಪ್ರವೀಣ್ ತೇಜ್ ನಟಿಸಿದ್ದಾರೆ.

  • ಪುನೀತ್ ರಾಜ್ ಕುಮಾರ್ ನಿರ್ಮಾಣದ ’02’ ಚಿತ್ರದ ಟ್ರೈಲರ್ ರಿಲೀಸ್

    ಪುನೀತ್ ರಾಜ್ ಕುಮಾರ್ ನಿರ್ಮಾಣದ ’02’ ಚಿತ್ರದ ಟ್ರೈಲರ್ ರಿಲೀಸ್

    ಹೆಸರಾಂತ ಚಿತ್ರ ನಿರ್ಮಾಣ ಸಂಸ್ಥೆಯಾದ ಪಿ.ಆರ್.ಕೆ ಪ್ರೊಡಕ್ಷನ್ಸ್ ಇದೀಗ ಮತ್ತೊಮ್ಮೆ ಸಿನಿ ಪ್ರೇಕ್ಷಕರನ್ನು ‘O2’ ಎಂಬ ಹೊಸ ಚಿತ್ರದ ಮೂಲಕ ರಂಜಿಸಲು ಸಜ್ಜಾಗಿದೆ. ಒಂದು ಕುತೂಹಲಕಾರಿ ಮೆಡಿಕಲ್ ಥ್ರಿಲ್ಲರ್ ಕಥೆಯನ್ನು ಇದು ಒಳಗೊಂಡಿದೆ. ಈ ಕಥೆಯು ಕೇವಲ‌ ಥ್ರಿಲ್ಲರ್ ಅಂಶಗಳನ್ನಷ್ಟೇ ಅಲ್ಲದೆ, ಪ್ರೀತಿ-ಪ್ರೇಮದ ಅಂಶಗಳನ್ನೂ ಒಳಗೊಂಡಿರುವುದು ವಿಶೇಷ ಸಂಗತಿ. ಹಾಗಾಗಿ ಈ ಚಿತ್ರವನ್ನು ಲವ್ ಥ್ರಿಲ್ಲರ್ ಎಂದು ಕೂಡ ಪರಿಗಣಿಸಬಹುದು.

    ಚಿತ್ರರಂಗದಲ್ಲಿ ತನ್ನದೇ ಆದಂತಹ ಛಾಪನ್ನು ಮೂಡಿಸಿರುವ‌ ಪಿ.ಆರ್.ಕೆ ಪ್ರೊಡಕ್ಷನ್ಸ್ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವುದರಲ್ಲಿ‌ ನಿಸ್ಸೀಮರು. ಇದು ಪಿ.ಆರ್.ಕೆ ಬ್ಯಾನರ್ ನಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneeth Rajkumar) ಅವರ ನಿರ್ಮಾಣದ ಹತ್ತನೇ ಚಿತ್ರ. ಚಿತ್ರದಲ್ಲಿ ಆಶಿಕಾ ರಂಗನಾಥ್ (Ashika Ranganath), ಪ್ರವೀಣ್ ತೇಜ್ (Praveen), ರಾಘವ್ ನಾಯಕ್, ಸಿರಿ ರವಿಕುಮಾರ್, ಪ್ರಕಾಶ್ ಬೆಳವಾಡಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಹಾಗೂ ಚಿತ್ರವನ್ನು ಪ್ರಶಾಂತ್ ರಾಜ್ ಮತ್ತು ಚಿತ್ರದ‌ ನಾಯಕ ರಾಘವ್ ನಾಯಕ್ ನಿರ್ದೇಶಿಸಿರುತ್ತಾರೆ‌.

    ಹಳ ವಿಭಿನ್ನವಾದ ಕಥಾಹಂದರವನ್ನು ಹೊಂದಿರುವಂತಹ ಚಿತ್ರ. ಸಾಯುತ್ತಿರುವವರನ್ನು ಬದುಕಿಸುವುದೇ ವೈದ್ಯರ ಆದ್ಯ ಕರ್ತವ್ಯ ಎಂದು ನಂಬುವ ಶ್ರದ್ಧಾ (ಆಶಿಕಾ ರಂಗನಾಥ್), ತನ್ನ  ಸಂಶೋಧನೆಯ ಫಲವಾದ O2 ಎಂಬ ಡ್ರಗ್ ಮೂಲಕ ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವವರನ್ನು ಬದುಕಿಸುವ ಪ್ರಯತ್ನಕ್ಕೆ ಮುಂದಾಗುತ್ತಾಳೆ. ಈ ಹಾದಿಯಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾಳೆ. ಈ ಎಲ್ಲಾ ಅಡೆತಡೆಗಳನ್ನು ಮೀರಿ ಗುರಿ ತಲುಪಲು ಶ್ರದ್ಧಾಳಿಗೆ ಸಾಧ್ಯವಾಗುವುದೋ ಇಲ್ಲವೋ ಎಂಬುದನ್ನು ಪ್ರೇಕ್ಷಕರು ಚಿತ್ರಮಂದಿರದಲ್ಲಿ ನೋಡಿ ತಿಳಿದುಕೊಳ್ಳಬೇಕಿದೆ. ಒಟ್ಟಾರೆ ಈ ಚಿತ್ರ ಮನರಂಜನೆ, ವಿಜ್ಞಾನ, ಪ್ರೀತಿ, ಅನಿರೀಕ್ಷಿತ ತಿರುವುಗಳ ಸಮಾಗಮ ಎಂದರೆ ಉತ್ಪ್ರೇಕ್ಷೆಯಲ್ಲ.

    ಚಿತ್ರದ ನಿರ್ಮಾಪಕಿ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಮಾತನಾಡಿ, O2 ಎಂಬ ವಿಭಿನ್ನವಾದ ಚಿತ್ರವನ್ನು ನಿರ್ಮಿಸಿರುವುದು ನಮಗೆ ಹೆಮ್ಮೆ ತಂದಿದೆ. ಈ ಚಿತ್ರವನ್ನು ಪ್ರೇಕ್ಷಕರ ಮುಂದಿಡಲು ಕಾತುರದಿಂದ ಕಾಯುತ್ತಿದ್ದೇನೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶ ಹೊಂದಿರುವ ನಮ್ಮ ಸಂಸ್ಥೆಯಿಂದ ಮೂಡಿಬರುತ್ತಿರುವ ಈ‌ ಚಿತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತದೆ ಹಾಗೂ ಭಾರಿ‌ ಮಟ್ಟದಲ್ಲಿ ಪರಿಣಾಮ ಬೀರುತ್ತದೆ ಎಂದು ನಂಬಿದ್ದೇನೆ” ಎಂದಿದ್ದಾರೆ.