Tag: Ashada Maasa

  • ಭೀಮನ ಅಮವಾಸ್ಯೆ; ರಾಜ್ಯಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆ – ಮಹಿಳೆಯರಿಂದ ಪ್ರಾರ್ಥನೆ

    ಭೀಮನ ಅಮವಾಸ್ಯೆ; ರಾಜ್ಯಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆ – ಮಹಿಳೆಯರಿಂದ ಪ್ರಾರ್ಥನೆ

    ಶಿವಮೊಗ್ಗ: ಇಂದು ಭೀಮನ ಅಮವಾಸ್ಯೆ (Bheemana Amavasy) ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವಿವಿಧ ದೇವಾಲಯಗಳಲ್ಲಿ ಭಕ್ತರು ವಿಶೇಷ ಪೊಜೆ ಸಲ್ಲಿಸುತ್ತಿದ್ದಾರೆ. ವಿವಾಹಿತ ಅಥವಾ ಅವಿವಾಹಿತ ಹೆಂಗಸರು ಅಥವಾ ಹುಡುಗಿಯರು ಪತಿ, ತಂದೆ, ಸಹೋದರ, ಮಗ ಮತ್ತು ಮನೆಯಲ್ಲಿನ ಇತರ ಪುರುಷರ ದೀರ್ಘಾಯುಷ್ಯ ಮತ್ತು ಸಮೃದ್ಧಿಗಾಗಿ ಭೀಮನ ಅಮವಾಸ್ಯೆ ವ್ರತ ಆಚರಿಸುತ್ತಿದ್ದಾರೆ.

    ಅದರಂತೆಯೇ ಶಿವಮೊಗ್ಗ (Shivamogga) ಜಿಲ್ಲೆಯ ಸಾಗರ ತಾಲೂಕಿನ ಸಿಗಂಧೂರು ಚೌಡೇಶ್ವರಿ ದೇವಾಲಯದಲ್ಲಿ (Sigandur Chowdeshwari Temple) ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ದೇವಿ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ಅಮವಾಸ್ಯೆ ಹಿನ್ನೆಲೆ ಭಕ್ತರು ಸಹಸ್ರ ಸಂಖ್ಯೆಯಲ್ಲಿ ದೇವಾಲಯಕ್ಕೆ ಆಗಮಿಸಿ ದೇವಿಯ ದರ್ಶನ ಪಡೆಯುತ್ತಿದ್ದಾರೆ.

    ಜ್ಯೋತಿರ್ಭೀಮೇಶ್ವರ ಅಮಾವಾಸ್ಯೆ ಎಂದು ಕರೆಯಲಾಗುವ ಭೀಮನ ಅಮವಾಸ್ಯೆ ವ್ರತವು ದಕ್ಷಿಣ ಭಾರತದಲ್ಲಿ ಅತ್ಯಂತ ಮಂಗಳಕರವಾದ ವ್ರತವಾಗಿದೆ. ವಿಶೇಷವಾಗಿ ಕರ್ನಾಟಕ ಮತ್ತು ತಮಿಳುನಾಡಿನ ಭಾಗಗಳಲ್ಲಿ, ಹಿಂದೂ ಚಾಂದ್ರಮಾನ ಪಂಚಾಂಗದ ಪ್ರಕಾರ ಆಷಾಢ ಮಾಸದ ಅಮಾವಾಸ್ಯೆಯ ರಾತ್ರಿಯಲ್ಲಿ ಮಹಿಳೆಯರು ಈ ಉಪವಾಸವನ್ನು ಆಚರಿಸುತ್ತಾರೆ. ಇದನ್ನೂ ಓದಿ: ನಾರಾಯಣಮೂರ್ತಿ ದಂಪತಿಯಿಂದ ತಿರುಪತಿ ತಿಮ್ಮಪ್ಪನಿಗೆ ಬಂಗಾರದ ಶಂಖ

    ಆಷಾಢ ಮಾಸವು ಹಿಂದೂ ಸಂಸ್ಕೃತಿಯ ಪ್ರಕಾರ ಹೊಸ ಆರಂಭದ ಸಮಯವಾಗಿದೆ. ಈ ವರ್ಷ ಭೀಮನ ಅಮಾವಾಸ್ಯೆಯನ್ನ 2023ರ ಜುಲೈ 17 ರಂದು ಸೋಮವಾರ ಆಚರಿಸಲಾಗುವುದು. ಈ ವ್ರತವನ್ನು ಶಿವ ಮತ್ತು ಪಾರ್ವತಿ ದೇವಿಗೆ ಸಮರ್ಪಿತವಾದ ವ್ರತವಾಗಿದ್ದು, ದಂಪತಿಗಳು ಈ ದಿನ ಶಿವ – ಪಾರ್ವತಿ ಪೂಜೆಯನ್ನು ಮಾಡುತ್ತಾರೆ. ಇದನ್ನೂ ಓದಿ: ಜೈನಮುನಿ ಹತ್ಯೆ ಪ್ರಕರಣ – ಅಂಡರ್‌ವೇರ್ ಸಹಿತ ಕೊಲೆ ಮಾಡಲು ಬಳಸಿದ್ದ ಬಟ್ಟೆಗಳನ್ನು ಸುಟ್ಟಿದ್ದ ಹಂತಕರು

    ಭೀಮನ ಅಮಾವಾಸ್ಯೆ ಮಹತ್ವ ಗೊತ್ತಾ?
    ವಿವಾಹಿತ ಅಥವಾ ಅವಿವಾಹಿತ ಹೆಂಗಸರು ಅಥವಾ ಹುಡುಗಿಯರು ಪತಿ, ತಂದೆ, ಸಹೋದರ, ಮಗ ಮತ್ತು ಮನೆಯಲ್ಲಿನ ಇತರ ಪುರುಷರ ದೀರ್ಘಾಯುಷ್ಯ ಮತ್ತು ಸಮೃದ್ಧಿಗಾಗಿ ಈ ವ್ರತವನ್ನು ಆಚರಿಸುತ್ತಾರೆ. ವಿವಾಹಿತ ಮಹಿಳೆಯರು ಮದುವೆಯಾದ ನಂತರ ಕನಿಷ್ಠ 9 ವರ್ಷಗಳ ಕಾಲ ಈ ವ್ರತವನ್ನು ಮಾಡುತ್ತಾರೆ. ಇನ್ನೂ ಅವಿವಾಹಿತ ಹುಡುಗಿಯರು ಸದ್ಗುಣಶೀಲ ಪತಿಯನ್ನ ಪಡೆಯುವುದಕ್ಕಾಗಿ, ಸಹೋದರರ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ಈ ವ್ರತವನ್ನು ಆಚರಿಸುತ್ತಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅದ್ಧೂರಿಯಾಗಿ ನೆರವೇರಿತು ಬನ್ನಿಮಹಾಂಕಾಳಿ ಕರಗ ಮಹೋತ್ಸವ

    ಅದ್ಧೂರಿಯಾಗಿ ನೆರವೇರಿತು ಬನ್ನಿಮಹಾಂಕಾಳಿ ಕರಗ ಮಹೋತ್ಸವ

    ರಾಮನಗರ: ಆಷಾಢ ಮಾಸದಲ್ಲಿ ನಡೆಯುವ ಬನ್ನಿಮಹಾಂಕಾಳಿ ಕರಗ ಮಹೋತ್ಸವದಿಂದಾಗಿ ಜಿಲ್ಲೆಯಲ್ಲಿ ಇದೀಗ ಹಬ್ಬದ ವಾತಾವರಣ ಜೋರಾಗಿದೆ.

    ಆಷಾಢ ಮಾಸದ ಕರಗಗಳಲ್ಲಿ ಒಂದಾದ ಬನ್ನಿ ಮಹಾಂಕಾಳಿ ದೇವಿಯ ಕರಗಮಹೋತ್ಸವ ಬುಧವಾರ ಅದ್ಧೂರಿಯಿಂದ ಜರುಗಿದೆ. ದೇವಿಯ ಅರ್ಚಕ ಕರಗಧಾರಿ ಯೋಗೇಶ್ ಅಗ್ನಿಕೊಂಡ ಹಾಯುವ ಮೂಲಕ ಬನ್ನಿಮಹಾಂಕಾಳಿ ದೇವಿಯ ಕರಗ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

    ರಾಮನಗರದ ಅಕ್ಕಪಕ್ಕದ 7 ದೇವತೆಗಳನ್ನ ಕಳೆದ ಒಂದು ವಾರದಿಂದ ನಗರದಾದ್ಯಂತ ಮೆರವಣಿಗೆ ಮಾಡಲಾಯಿತು. ಅಗ್ನಿಕೊಂಡ ನೋಡಲು ಭಕ್ತಾದಿಗಳ ಜನಸಾಗರವೇ ಹರಿದು ಬಂದಿತ್ತು. ಬುಧವಾರದಿಂದ ನಗರದೇವತೆ ಚಾಮುಂಡೇಶ್ವರಿಯ ಕರಗಮಹೋತ್ಸವ ಆರಂಭವಾಗಲಿದ್ದು, ಹಬ್ಬದ ವಾತಾವರಣ ರಾಮನಗರದಾದ್ಯಂತ ಮನೆ ಮಾಡಿದೆ.

  • ಮಂಡ್ಯದಲ್ಲಿ ಆಷಾಢ ವಿಶೇಷ ಪೂಜೆ – ಹರಿಸೇವೆ ಬಳಿಕ ತಾವರೆ ಎಲೆಯಲ್ಲಿಯೇ ಊಟ

    ಮಂಡ್ಯದಲ್ಲಿ ಆಷಾಢ ವಿಶೇಷ ಪೂಜೆ – ಹರಿಸೇವೆ ಬಳಿಕ ತಾವರೆ ಎಲೆಯಲ್ಲಿಯೇ ಊಟ

    ಮಂಡ್ಯ: ಆಷಾಢ ಮಾಸ ಅಂದರೆ ಆದಿ ಶಕ್ತಿ, ಚಾಮುಂಡೇಶ್ವರಿ ಸೇರಿದಂತೆ ಶಕ್ತಿ ದೈವ ಆರಾಧಿಸುವುದು ವಿಶೇಷ. ಆದರೆ ಜಿಲ್ಲೆಯ ಆಬಲವಾಡಿಯಲ್ಲಿ ಇದಕ್ಕೆ ತದ್ವಿರುದ್ಧವಾಗಿದೆ. ಯಾಕೆಂದರೆ ಇಲ್ಲಿ ಹರಿಸೇವೆ ಮಾಡುತ್ತಾರೆ.

    ಜಿಲ್ಲೆಯ ಮದ್ದೂರು ತಾಲೂಕಿನ ಅಬಲವಾಡಿ ಗ್ರಾಮದಲ್ಲಿರೋ ತಿಮ್ಮಪ್ಪ ದೇವರಿಗೆ ಆಷಾಢ ಮಾಸದ ಮೊದಲ ಶನಿವಾರ ವಿಶೇಷ ಪೂಜೆಯನ್ನು ಗ್ರಾಮಸ್ಥರು ಸೇರಿದಂತೆ ದೇವರ ಮನೆತನದವರು ಮಾಡಿಕೊಂಡು ಬರುತ್ತಿದ್ದಾರೆ. ಈ ವಿಶೇಷ ಪೂಜೆ ಶತಮಾನಗಳಿಂದಲೂ ನಡೆದುಕೊಂಡು ಬರುತ್ತಿರುವುದು ವಿಶೇಷ. ಈ ಬಾರಿಯೂ ಶನಿವಾರ ರಾತ್ರಿಯಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆ ಪ್ರಾರಂಭಗೊಂಡು, ಶನಿವಾರ ರಾತ್ರಿಯೆಲ್ಲಾ ಗ್ರಾಮದಲ್ಲಿ ತೋಪಿನ ತಿಮ್ಮಪ್ಪನ ಉತ್ಸವ ಮೂರ್ತಿಯನ್ನು ಗ್ರಾಮದಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು.

    ಈ ತಿಮ್ಮಪ್ಪನ ಆರಾಧಕರು ಉತ್ಸವ ಮೂರ್ತಿಯನ್ನು ಒತ್ತು ಮೆರವಣಿಗೆ ಮಾಡಿ ಹರಕೆ ತೀರಿಸಿದರು. ನಂತರ ಮುಂಜಾನೆಯೇ ಇಲ್ಲಿ ಬಂದ ಭಕ್ತರಿಗೆ ವಿಶೇಷವಾಗಿ ಪ್ರಸಾದವನ್ನು ನೀಡಲಾಯಿತು. ಪ್ಲಾಸ್ಟಿಕ್ ಮುಕ್ತ ಮಾಡುವ ಉದ್ದೇಶದಿಂದ ಈ ಬಾರಿ ಪ್ರಸಾದ ಸೇವಿಸುವ ಭಕ್ತರಿಗೆ ಸ್ವಯಂ ಸೇವಕರಿಂದ ಸ್ಟೀಲ್ ಲೋಟದಲ್ಲಿ ನೀರು ನೀಡಲಾಯಿತು.

    ದೇವರ ಉತ್ಸವ ಆರಂಭ ಆಗುತ್ತಿದ್ದಂತೆ ಟನ್ ಗಟ್ಟಲೆ ಅನ್ನವನ್ನು ಬೇಯಿಸುವ ಜೊತೆಗೆ ಕೊಪ್ಪರಿಕೆಗಳಲ್ಲಿ ಸಾಂಬಾರು ಮಾಡಿ ಸಿದ್ಧ ಮಾಡಿಕೊಳ್ಳಲಾಗುತ್ತದೆ. ನಂತರ ದೇವರ ಪೂಜೆ ಸಲ್ಲಿಸಿದ ನಂತರ ದೇವಸ್ಥಾನದ ಸುತ್ತ ಭಕ್ತರಿಗೆ ಪ್ರಸಾದದ ಹಂಚಿಕೆ ಕಾರ್ಯ ಆರಂಭ ಆಗುತ್ತದೆ. ಇಲ್ಲೆಗೆ ಬಂದ ಭಕ್ತರಿಗೆ ತಾವರೆ ಎಲೆಯಲ್ಲಿ ಪ್ರಸಾದ ಹಂಚಿಕೆ ಮಾಡೋದು ಇಲ್ಲಿನ ವಿಶೇಷ. ಎಲ್ಲರನ್ನೂ ಸರಥಿ ಸಾಲಿನಲ್ಲಿ ಕೂರಿಸಿ, ತಾವರೆ ಎಲೆಯನ್ನು ಮೊದಲು ಕೊಡಲಾಗುತ್ತದೆ. ನಂತರ ದೊಡ್ಡದೊಡ್ಡ ಪಾತ್ರೆಗಳಲ್ಲಿ ಒಮ್ಮೆ ಮಾತ್ರ ಅನ್ನವನ್ನು ಎಲೆಗೆ ಬಡಿಸಲಾಗುತ್ತದೆ. ಹಿಂದೆಯಿಂದಲೇ ಸಾಂಬರು ಹಾಕಲಾಗುತ್ತದೆ. ಮತ್ತೊಂದು ವಿಚಾರ ಅಂದರೆ ಇಲ್ಲಿ ಎಲ್ಲರಿಗೂ ಹಿಡಿ ಅನ್ನ ಹಾಕೋದು. ಒಮ್ಮೆ ಹಾಕಿದರೆ ಇಡೀ ತಾವರೆ ಎಲೆಯ ತುಂಬೆಲ್ಲಾ ಈ ಹಿಡಿ ಅನ್ನ ಹರಡಿಕೊಳ್ಳುತ್ತದೆ ಎಂದು ಅರ್ಚಕ ಹರಿಪ್ರಸಾದ್ ಹೇಳಿದ್ದಾರೆ.

    ಈ ಉತ್ಸವದಲ್ಲಿ ಮಂಡ್ಯ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಿಂದ ಸಾವಿರಾರು ಜನರು ಬಂದು ಪಾಲ್ಗೊಂಡಿದ್ದರು. ಈ ದೇವರ ಮನೆತನದವರು ಪ್ರತಿ ವರ್ಷ ಬಂದು ತಾವರೆ ಎಲೆ ಊಟ ಮಾಡಿ, ಪೂಜೆ ಸಲ್ಲಿಸಿದರೆ ಹರಕೆ ತೀರಿಸಿದಂತೆ ಎಂಬ ಪ್ರತೀತಿಯಿದ್ದು, ಈ ವರ್ಷವೂ ತೋಪಿನ ತಿಮ್ಮಪ್ಪನ ಹರಿಸೇವೆ ಅದ್ಧೂರಿಯಾಗಿ ನಡೆದಿದೆ.