Tag: asha karyakarthe

  • ಮಂಡ್ಯದಲ್ಲಿ ಭ್ರೂಣ ಪತ್ತೆ, ಹತ್ಯೆ ಪ್ರಕರಣ- ಆಲೆಮನೆ ಮಾಲೀಕನಿಂದ ಆಶಾ ಕಾರ್ಯಕರ್ತೆಗೆ ಬೆದರಿಕೆ

    ಮಂಡ್ಯದಲ್ಲಿ ಭ್ರೂಣ ಪತ್ತೆ, ಹತ್ಯೆ ಪ್ರಕರಣ- ಆಲೆಮನೆ ಮಾಲೀಕನಿಂದ ಆಶಾ ಕಾರ್ಯಕರ್ತೆಗೆ ಬೆದರಿಕೆ

    ಮಂಡ್ಯ: ಇಲ್ಲಿನ ಹುಳ್ಳೇನಹಳ್ಳಿಯ ಆಲೆಮನೆಯಲ್ಲಿ ನಡೆಯುತ್ತಿದ್ದ ಭ್ರೂಣ (Foetus)  ಪತ್ತೆ ಮತ್ತು ಹತ್ಯೆಯ ಕರಾಳ ದಂಧೆಯನ್ನು ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಪೊಲೀಸರು ಬಯಲಿಗೆ ತಂದಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ಸೇರಿದಂತೆ ಹಲವು ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ವರದಿಗಳು ವ್ಯಾಪಕ ಚರ್ಚೆಗೆ ಗ್ರಾಸವಾಗಿವೆ.

     

    ಮಂಗಳವಾರ ಆರೋಗ್ಯ ಇಲಾಖೆಯಿಂದ ಡಿಎಚ್‍ಓ ಮೋಹನ್, ಕಂದಾಯ ಇಲಾಖೆಯಿಂದ ಎಸಿ ಶಿವಮೂರ್ತಿ ಹಾಗೂ ಪೊಲೀಸ್ ಇಲಾಖೆಯಿಂದ ಡಿವೈಎಸ್‍ಪಿ ಶಿವಮೂರ್ತಿ ಹಾಗೂ ಇತರ ಅಧಿಕಾರಿಗಳು ಆಲೆಮನೆಗೆ ಭೇಟಿ ನೀಡಿದರು. ಈ ವೇಳೆ ಪರಿಶೀಲನೆ ನಡೆಸಿ ಒಂದಷ್ಟು ಮಾಹಿತಿಯನ್ನು ಕಲೆ ಹಾಕಿದ್ದಾರೆ. ಈ ತಂಡ ತೆರಳಿದ ಮೇಲೆ ಲೋಕಾಯುಕ್ತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಜೊತೆ ಹುಳ್ಳೇನಹಳ್ಳಿ ಗ್ರಾಮದಲ್ಲಿನ ಗ್ರಾಮಸ್ಥರ ಜೊತೆಯೂ ಸಹ ಒಂದಷ್ಟು ಮಾಹಿತಿಗಳನ್ನು ಕಲೆ ಹಾಕಿದ್ದಾರೆ.

    ಲೋಕಾಯುಕ್ತ ಅಧಿಕಾರಿಗಳು ಆರಂಭದಿಂದ ತನಿಖೆ ನಡೆಸುತ್ತಿದ್ದು, ಸಂಕ್ಷಿಪ್ತ ವರದಿಯನ್ನು ಕಲೆ ಹಾಕ್ತಾ ಇದ್ದಾರೆ. ಇದರಲ್ಲಿ ಆರೋಗ್ಯ ಇಲಾಖೆ, ಪೊಲೀಸರು ಶಾಮಿಲಾಗಿದ್ದಾರಾ ಎಂಬುದರ ಬಗ್ಗೆಯೂ ಇನ್ವೇಷ್ಟಿಕೇಷನ್ ಸಹ ಮಾಡ್ತಾ ಇದ್ದಾರೆ. ಒಂದು ವೇಳೆ ಯಾರಾದ್ರು ಅಧಿಕಾರಿಗಳು ಹಾಗೂ ಸಿಬ್ಬಂದಿ ಶಾಮೀಲಾಗಿರುವ ಬಗ್ಗೆ ತಿಳಿದು ಬಂದ್ರೆ ಲೋಕಾಯುಕ್ತ ಅಧಿಕಾರಿಗಳು ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡು ತನಿಖೆ ನಡೆಸುವ ಸಾಧ್ಯತೆ ದಟ್ಟವಾಗಿ ಕಾಣ್ತಾ ಇದೆ.

    ಒಂದು ಕಡೆ ಈ ಕರಾಳ ದಂದೆಯ ತನಿಖೆ ನಡೆಯುತ್ತಿದ್ರೆ, ಇನ್ನೊಂದೆಡೆ ದಂಧೆ ನಡೆಯುವಾಗ ಸೈಲೆಂಟ್ ಆಗಿದ್ದ ಆರೋಪಿ ನವೀನ್ ಅಕ್ಕನ ಮಗ ಪ್ರಶಾಂತ್ ಆಶಾ ಕಾರ್ಯಕರ್ತೆರಿಗೆ ಬೆದರಿಸುವ ಕೆಲಸಕ್ಕೆ ಮುಂದಾಗಿದ್ದಾನೆ. ನಿನ್ನೆ ಆಶಾ ಕಾರ್ಯಕರ್ತೆಯರು ಆಲೆಮನೆ ಸಮೀಪ ಹೋಗಿ ಪ್ರಶಾಂತ್‍ಗೆ ಕರೆಮಾಡಿ ಸ್ಥಳಕ್ಕೆ ಬರುವಂತೆ ಹೇಳಿದ್ದಾರೆ. ಈ ವೇಳೆ ಪ್ರಶಾಂತ್ ಯಾರ ಪರ್ಮಿಷನ್ ತೆಗೆದುಕೊಂಡು ಆಲೆಮನೆ ಬಳಿ ಹೋಗಿದ್ದೀರಾ. ಅಲ್ಲಿ ಬೆಲೆ ಬಾಳುವ ವಸ್ತುಗಳು ಇವೆ. ನಾವು ಅಲ್ಲಿ ಸಿಸಿ ಕ್ಯಾಮೆರಾ ಹಾಕಿಸಿದ್ದೇವೆ. ನಿಮ್ಮ ನಂಬರ್ ನಿಂದ ಕರೆ ಬಂದಿದೆ, ಏನಾದ್ರು ಆದರೆ ನಿಮ್ಮ ಮೇಲೆ ಕೇಸ್ ಕೊಡ್ತೀನಿ ಎಂದು ಬೆದರಿಕೆ ಹಾಕಿದ್ದಾನೆ.

  • ಮಾಸ್ಕ್ ಹಾಕಿ, ಅಂತರ ಕಾಯ್ದುಕೊಳ್ಳಿ ಎಂದಿದ್ದಕ್ಕೆ ಆಶಾ ಕಾರ್ಯಕರ್ತೆಗೆ ಧಮ್ಕಿ

    ಮಾಸ್ಕ್ ಹಾಕಿ, ಅಂತರ ಕಾಯ್ದುಕೊಳ್ಳಿ ಎಂದಿದ್ದಕ್ಕೆ ಆಶಾ ಕಾರ್ಯಕರ್ತೆಗೆ ಧಮ್ಕಿ

    ಮೈಸೂರು: ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಘಟನೆ ಮಾಸುವ ಮುನ್ನವೇ ಇದೀಗ ಮೈಸೂರಿನಲ್ಲೂ ಆಶಾ ಕಾರ್ಯಕರ್ತೆಯ ಮೇಲೆ ದೌರ್ಜನ್ಯ ನಡೆದಿದೆ.

    ಬನ್ನಿಮಂಟಪ ಸರ್ಕಾರಿ ಆಸ್ಪತ್ರೆಯ ಆಶಾ ಕಾರ್ಯಕರ್ತೆ ಸುಮಯಾ ಪಿರ್ದೋಶ್ ಅವರಿಗೆ ಆಲೀಂ ನಗರದಲ್ಲಿ ಮೂವರು ಪುಂಡರು ಧಮ್ಕಿ ಹಾಕಿದ್ದಾರೆ.

    ಸುಮಯಾ ಅವರು ಕೊರೊನಾ ಲಕ್ಷಣಗಳ ಬಗ್ಗೆ ಸರ್ವೆ ಮಾಡಲು ತೆರಳಿದ್ದರು. ಈ ವೇಳೆ ಮೂವರು ಪುಂಡರು ಸುಮಯಾ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಮಾಸ್ಕ್ ಹಾಕಿ, ಸಾಮಾಜಿಕ ಅಂತರ ಕಾಯ್ದಿಕೊಳ್ಳಿ ಎಂದಿದ್ದಕ್ಕೆ ಗಲಾಟೆ ಮಾಡಿದ್ದಾರೆ. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಆಶಾ ಕಾರ್ಯಕರ್ತೆ ಮೇಲೆ ಮುಗಿಬಿದ್ದಿದ್ದಾರೆ.

    ಭಾನುವಾರ ರಾತ್ರಿ ಬೆಂಗಳೂರಿನ ಪಾದರಾಯನಪುರದಲ್ಲಿ ಕೂಡ ಇಂತದ್ದೇ ಘಟನೆ ನಡೆದಿತ್ತು. ಕೊರೊನಾ ಸೋಂಕಿತರು ಹೆಚ್ಚು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಾದರಾಯನಪುರವನ್ನು ಸಂಪೂರ್ಣವಾಗಿ ಸೀಲ್‍ಡೌನ್ ಮಾಡಲಾಗಿತ್ತು. ಪಾದರಾಯನಪುರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳನ್ನು ಬಂದ್ ಮಾಡಿ, ಪ್ರಮುಖ ರಸ್ತೆಯಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು.

    ಭಾನುವಾರ ಕೊರೊನಾ ಶಂಕಿತ 58 ಮಂದಿಯನ್ನು ಬೇರೆಡೆಗೆ ಸ್ಥಳಾಂತರಿಸಲು ಪೊಲೀಸರು ಮತ್ತು ಆರೋಗ್ಯ ಸಿಬ್ಬಂದಿ ಮುಂದಾಗಿದ್ದರು. ಈ ವೇಳೆ ಪುಂಡರು ಗುಂಪು ಗುಂಪಾಗಿ ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. ಅಲ್ಲದೆ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಮತ್ತು ಚೆಕ್‍ಪೋಸ್ಟ್ ಧ್ವಂಸಗೊಳಿಸಿದ್ದರು. ಘಟನೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಪಾದರಾಯನಪುರಕ್ಕೆ ಪೊಲೀಸರ ನಿಯೋಗವೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯ ಗರುಡ ಟೀಂ ಎಂಟ್ರಿ ಕೊಟ್ಟಿದೆ. ಘಟನೆಗೆ ಸಂಬಂಧಿಸಿದಂತೆ 60 ಮಂದಿಯನ್ನು ಬಂಧಿಸಲಾಗಿದ್ದು, ಆರೋಪಿಗಳನ್ನು ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ.

    ಈ ಸಂಬಂಧ ಆಶಾ ಕಾರ್ಯಕರ್ತೆ ಎನ್ ಆರ್ ಠಾಣೆಗೆ ದೂರು ನೀಡಿದ್ದಾರೆ.

  • ಬೆಂಗ್ಳೂರಿನಲ್ಲಿ ನರ್ಸ್, ಆಶಾ ಕಾರ್ಯಕರ್ತೆಯರ ಮೇಲೆ ಗ್ಯಾಂಗ್ ದಾಳಿ

    ಬೆಂಗ್ಳೂರಿನಲ್ಲಿ ನರ್ಸ್, ಆಶಾ ಕಾರ್ಯಕರ್ತೆಯರ ಮೇಲೆ ಗ್ಯಾಂಗ್ ದಾಳಿ

    ಬೆಂಗಳೂರು: ಹೆಗಡೆ ನಗರ ಸಮೀಪ ಬರುವ ಸಾರಾಯಿಪಾಳ್ಯದ ಸಾದಿಕ್ ನಗರದಲ್ಲಿ ನರ್ಸ್ ಹಾಗೂ ಆಶಾ ಕಾರ್ಯಕರ್ತೆಯರ ಮೇಲೆ ದಾಳಿ ನಡೆದಿರುವ ಬಗ್ಗೆ ಇಂದು ಬೆಳಕಿಗೆ ಬಂದಿದೆ.

    ಕಳೆದ 15 ದಿನಗಳಿಂದ ನರ್ಸ್ ಹಾಗೂ ಆಶಾ ಕಾರ್ಯಕರ್ತೆಯರು ಹೆಲ್ತ್ ಸರ್ವೆ ಮಾಡುತ್ತಿದ್ದು, ಜನರಿಂದ ನೆಗಡಿ, ಜ್ವರ, ಕೆಮ್ಮು ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಅಂತೆಯೇ ಬುಧವಾರ ಕೂಡ ಮಾಹಿತಿ ಪಡೆಯುತ್ತಿದ್ದಾಗ ಗ್ಯಾಂಗ್ ಒಂದು ನರ್ಸ್ ಹಾಗೂ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ ಮಾಡಿದೆ.

    ಆಶಾ ಕಾರ್ಯಕರ್ತೆ ಪಡೆದ ರಿಪೋರ್ಟ್ ಹರಿದು ಹಾಕಿದ್ದಾರೆ. ಫೋನ್ ಕಸಿದುಕೊಂಡು ಯಾರನ್ನು ಕರೆಯುತ್ತೀರೋ ಕರೀರಿ ಎಂದು ಅವಾಜ್ ಹಾಕಿದ್ದಾರೆ. ಅಲ್ಲದೆ ಇವರಿಗೆ ಯಾರು ಕೂಡ ಮಾಹಿತಿ, ಫೋನ್ ನಂಬರ್ ಕೂಡಬೇಡಿ ಅಂತ ಮಸೀದಿಯ ಮೈಕ್ ನಲ್ಲಿ ಅನೌನ್ಸ್ ಮಾಡಲಾಗಿದೆ.

    ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ ಬಗ್ಗೆ ಹೇಳಿದ್ರೆ ಆರೋಗ್ಯ ಅಧಿಕಾರಿಗಳು ಕೂಡ ಡೋಂಟ್ ಕೇರ್ ಮಾಡುತ್ತಿದ್ದಾರೆ. ಜನರ ವರ್ತನೆ ನೋಡಿ ಆಶಾ ಕಾರ್ಯಕರ್ತೆ ಕೃಷ್ಣವೇಣಿ ಕಣ್ಣೀರು ಹಾಕಿದ್ದಾರೆ.

  • ಜ್ವರ ಅಂತ ಹೋದ್ರೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿದ ಆಶಾ ಕಾರ್ಯಕರ್ತೆ!

    ಜ್ವರ ಅಂತ ಹೋದ್ರೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿದ ಆಶಾ ಕಾರ್ಯಕರ್ತೆ!

    ಚಿಕ್ಕಬಳ್ಳಾಪುರ: ಆಶಾಕಾರ್ಯಕರ್ತೆಯೊಬ್ಬಳು ಜ್ವರದಿಂದ ಬಳಲುತ್ತಿದ್ದವರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿದ ಆರೋಪವೊಂದು ಶಿಡ್ಲಘಟ್ಟ ತಾಲೂಕಿನಲ್ಲಿ ಕೇಳಿಬಂದಿದೆ

    ತಾಲೂಕಿನ ಮಾರಪ್ಪನಹಳ್ಳಿ ನಿವಾಸಿಗಳಾದ ನರಸಿಂಹಮೂರ್ತಿ ಹಾಗೂ ಬ್ಯಾಟಪ್ಪ ಎಂಬವರಿಗೆ ಈ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ ಎನ್ನಲಾಗಿದೆ.

    ಏನಿದು ಘಟನೆ?: ಗ್ರಾಮದ ಆಶಾ ಕಾರ್ಯಕರ್ತೆ ಪದ್ಮಾವತಿ, ಜ್ವರ ಹಾಗೂ ಬಾಯಿ ಹುಣ್ಣಿನಿಂದ ಬಳಲುತ್ತಿದ್ದ 30 ವರ್ಷದ ನರಸಿಂಹಮೂರ್ತಿ ಹಾಗೂ 70 ವರ್ಷದ ಬ್ಯಾಟಪ್ಪ ಎಂಬವರನ್ನು ಕಳೆದ ಶುಕ್ರವಾರ ಶಿಡ್ಲಘಟ್ಟ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸಂತಾನಹರಣ ಚಿಕಿತ್ಸೆ ಮಾಡಿಸಿದ್ದಾಳೆ. ಇದೀಗ ಶಸ್ತ್ರ ಚಿಕಿತ್ಸೆ ನಂತರ ನರಸಿಂಹಮೂರ್ತಿ ಪತ್ನಿ ಛಾಯಾ ಆಶಾಕಾರ್ಯಕರ್ತೆ ಪದ್ಮಾವತಿ ವಿರುದ್ಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಆದ್ರೆ ಇದನ್ನ ನಿರಾಕರಿಸಿರುವ ಆಶಾಕಾರ್ಯಕರ್ತೆ ಹಾಗೂ ತಾಲೂಕು ಆರೋಗ್ಯಾಧಿಕಾರಿ ಅನಿಲ್ ಕುಮಾರ್, ಶುಕ್ರವಾರದ ಕ್ಯಾಂಪಿನಲ್ಲಿ 20 ಮಂದಿಗೆ ವ್ಯಾಸೆಕ್ಟಮಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಎಲ್ಲರ ಒಪ್ಪಿಗೆಯನ್ನ ಪಡೆದೆ ಈ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಬಲವಂತವಾಗಿ ಯಾರಿಗೂ ಮಾಡಲು ಆಗುವುದಿಲ್ಲ ಅಂತ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ವ್ಯಾಸೆಕ್ಟೆಮಿ ಶಸ್ತ್ರಚಿಕಿತ್ಸೆಗೆ ಒಳಪಡುವ ಪ್ರತಿಯೊಬ್ಬರಿಗೂ ಸರ್ಕಾರದಿಂದ 1200 ರೂಪಾಯಿ ಹಾಗೂ ಆಶಾ ಕಾರ್ಯಕರ್ತೆಗೆ 200 ರೂಪಾಯಿ ಗೌರವಧನ ನೀಡಲಾಗುತ್ತದೆ. ಹೀಗಾಗಿ ಹಣದ ಆಸೆಗೆ ಆಶಾಕಾರ್ಯಕರ್ತೆ ಹೀಗೆ ಮಾಡಿದ್ದಾಳೆ ಅಂತ ನರಸಿಂಹಮೂರ್ತಿ ಸಂಬಂಧಿಕರು ದೂರಿದ್ದಾರೆ. ಈ ಕುರಿತು ಆಶಾಕಾರ್ಯಕರ್ತೆ ಮೇಲೆ ದೂರು ದಾಖಲಾಗುತ್ತಿದ್ದಂತೆ ಆಶಾ ಕಾರ್ಯಕರ್ತೆ ನರಸಿಂಹಮೂರ್ತಿಯವರ ಕಡೆಯ ಮಹಿಳೆಯರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಅಂತ ದೂರು ನೀಡಲು ಮುಂದಾಗಿದ್ದಾರೆ.

    ಸದ್ಯ ಈ ಘಟನೆ ಮಾರಪ್ಪನಹಳ್ಳಿ ಗ್ರಾಮದಲ್ಲಿ ರಾಜಕೀಯ ಬಣ್ಣ ಸಹ ಪಡೆದುಕೊಂಡಿದೆ. ಪರ ವಿರೋಧದ ನಡುವೆ ವಾದ-ವಿವಾದ ವಾಗ್ವಾದಗಳು ಜೋರಾಗಿ ನಡೆದಿದ್ದು, ಈ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಠಾಣಾ ಪೊಲೀಸರು ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದಾರೆ.