Tag: Asha karyakarte

  • ಸರ್ವೇ ವೇಳೆ ಆಶಾ ಕಾರ್ಯಕರ್ತೆಯರ ದಾಖಲೆ ಕಸಿದುಕೊಂಡು ಕರ್ತವ್ಯಕ್ಕೆ ಅಡ್ಡಿ

    ಸರ್ವೇ ವೇಳೆ ಆಶಾ ಕಾರ್ಯಕರ್ತೆಯರ ದಾಖಲೆ ಕಸಿದುಕೊಂಡು ಕರ್ತವ್ಯಕ್ಕೆ ಅಡ್ಡಿ

    ಹುಬ್ಬಳ್ಳಿ: ಕೊರೊನಾ ವೈರಸ್ ಮುಂಜಾಗ್ರತಾ ಕ್ರಮವಾಗಿ ಸರ್ವೇ ಕಾರ್ಯ ಮಾಡುತ್ತಿದ್ದ ಆಶಾ ಕಾರ್ಯಕರ್ತೆಯರ ಕೈಯಲ್ಲಿದ್ದ ಕಡತಗಳನ್ನು ಕಸಿದುಕೊಂಡು ದುಷ್ಕರ್ಮಿಗಳು ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಘಟನೆ ಹುಬ್ಬಳ್ಳಿಯ ಗೌಳಿ ಗಲ್ಲಿಯಲ್ಲಿ ನಡೆದಿದೆ.

    ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಜಿಲ್ಲಾಡಳಿತದ ಆದೇಶದ ಮೇರೆಗೆ ಹಾಗೂ ಆರೋಗ್ಯ ಇಲಾಖೆಯ ನಿರ್ದೇಶನದ ಮೇರೆಗೆ ಸರ್ವೇ ಮಾಡಲು ಆಗಮಿಸಿದ ಆಶಾ ಕಾರ್ಯಕರ್ತೆಯರಿಗೆ ದುಷ್ಕರ್ಮಿಗಳು ಕೆಲಸ ಮಾಡಲು ಅಡ್ಡಿಪಡೆಸಿದ್ದಾರೆ. ಗೌಳಿ ಗಲ್ಲಿಯ ಕೆಲವು ಪುಡಾರಿಗಳು ಆಶಾ ಕಾರ್ಯಕರ್ತೆಯರ ಬಳಿಯಿದ್ದ ದಾಖಲೆಗಳನ್ನು ಕಸಿದುಕೊಂಡು ಅನುಚಿತವಾಗಿ ವರ್ತನೆ ಮಾಡಿದ್ದಾರೆ. ಆಶಾ ಕಾರ್ಯಕರ್ತೆಯರಾದ ನಾಗವೇಣಿ ಪಾನಗಲ್, ಲತಾ ಶ್ರೀರಾಮ ಮೇಲೆ ದೌರ್ಜನ್ಯ ನಡೆಸಲಾಗಿದೆ.

    ಸರ್ವೇ ಮಾಡುತ್ತಿದ್ದ ವೇಳೆ ಕಡತಗಳನ್ನು ಕಸಿದುಕೊಂಡು ನಮ್ಮ ಜಮಾತ್‍ನಲ್ಲಿ ಯಾವುದೇ ಮಾಹಿತಿಯಿಲ್ಲ ಎಂದು ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ. ಸ್ಥಳಕ್ಕೆ ಶಹರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಆಗಮಿಸಿದ್ದು, ಕರ್ತವ್ಯಕ್ಕೆ ಅಡ್ಡಿಪಡಿಸಿದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.

  • ಆಶಾ ಕಾರ್ಯಕರ್ತೆಗೆ ಜೀವ ಬೆದರಿಕೆ – ಇಬ್ಬರು ಆರೋಪಿಗಳ ಬಂಧನ

    ಆಶಾ ಕಾರ್ಯಕರ್ತೆಗೆ ಜೀವ ಬೆದರಿಕೆ – ಇಬ್ಬರು ಆರೋಪಿಗಳ ಬಂಧನ

    ಮಂಗಳೂರು: ಆರೋಗ್ಯ ವಿಚಾರಿಸಿದ ಆಶಾ ಕಾರ್ಯಕರ್ತೆಗೆ ಜೀವ ಬೆದರಿಕೆ ಹಾಕಿದ ಇಬ್ಬರು ಆರೋಪಿಗಳನ್ನು ಪೋಲಿಸರು ಬಂಧಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ.

    ಮಾರಪ್ಪ ಪೂಜಾರಿ ಹಾಗೂ ಉಮೇಶ್ ಬಂಧಿತ ಆರೋಪಿಗಳು. ಆರೋಗ್ಯ ಇಲಾಖೆಯಲ್ಲಿ ಕೊರೊನಾ ವೈರಸ್ ತಪಾಸಣೆ ಸಂಬಂಧಿಸಿದ ಕರ್ತವ್ಯ ನಿರ್ತಹಿಸುತ್ತಿದ್ದ ಅಮ್ಟಾಡಿ ಗ್ರಾಮದ ಆಶಾ ಕಾರ್ಯಕರ್ತೆ ತುಳಸಿ(48) ಅವರಿ ಇಬ್ಬರು ಆರೋಪಿಗಳು ಜೀವ ಬೆದರಿಕೆ ಹಾಕಿದ್ದರು. ತನ್ನ ಕರ್ತವ್ಯದಂತೆ ವಿದೇಶದಿಂದ ಬಂದು ಬಂಟ್ವಾಳ ತಾಲೂಕಿನ ಕಿನ್ನಿಬೆಟ್ಟಿನಲ್ಲಿರುವ ನಿತೇಶ್ ಹಾಗೂ ಜಯಂತ್ ಎಂಬವರಿಗೆ ಕರೆ ಮಾಡಿ ತುಳಸಿ ಅವರು ಆರೋಗ್ಯ ವಿಚಾರಿಸಿದ್ದರು. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ನರ್ಸ್, ಆಶಾ ಕಾರ್ಯಕರ್ತೆಯರ ಮೇಲೆ ಗ್ಯಾಂಗ್ ದಾಳಿ

    ಇಷ್ಟಕ್ಕೆ ಕೋಪಗೊಂಡ ನಿತೇಶ್ ಸಂಬಂಧಿಗಳಾದ ಮಾರಪ್ಪ ಪೂಜಾರಿ ಹಾಗೂ ಉಮೇಶ್ ಫೋನ್‍ನಲ್ಲಿಯೇ ತುಳಸಿ ಅವರಿಗೆ ಜೀವ ಬೆದರಿಕೆ ಹಾಕಿದ್ದರು. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.