Tag: Asha Bhatt

  • Bigg Boss Kannada 10: ಹೊರ ಬಿತ್ತು ಸ್ಪರ್ಧಿಗಳ ಮತ್ತೊಂದು ಲಿಸ್ಟ್

    Bigg Boss Kannada 10: ಹೊರ ಬಿತ್ತು ಸ್ಪರ್ಧಿಗಳ ಮತ್ತೊಂದು ಲಿಸ್ಟ್

    ಬಿಗ್ ಬಾಸ್ ಕನ್ನಡ (Bigg Boss Kannada) ಆವೃತ್ತಿ ಸೀಸನ್ 10 ಶುರುವಾಗಲು ಇನ್ನೂ ಐದೇ ದಿನಗಳು ಬಾಕಿ. ಈ ಬಾರಿ ಸ್ಪರ್ಧಾ ಕಣದಲ್ಲಿ ಯಾರಿರಲಿದ್ದಾರೆ ಎನ್ನುವುದು ಅಕ್ಟೋಬರ್ 8ಕ್ಕೆ ಗೊತ್ತಾಗಲಿದೆ. ಆದರೂ, ಕೆಲವು ಹೆಸರುಗಳು ಓಡಾಡುತ್ತಿವೆ. ಕೆಲವು ದಿನಗಳ ಹಿಂದೆ ಒಂದಷ್ಟು ಹೆಸರು ಕೇಳಿ ಬಂದಿದ್ದರೂ, ಈ ಬಾರಿ ಆ ಹೆಸರಗಳು ಹೊರತಾಗಿ ಬೇರೆ ಕಲಾವಿದರು ಹೆಸರು ಯಾದಿಯಲ್ಲಿ ಕಾಣಿಸಿಕೊಂಡು ಕುತೂಹಲ ಮೂಡಿಸಿವೆ.

    ಸಾಮಾನ್ಯ ಜನರ ಪ್ರವೇಶಕ್ಕಿಂತ ಕಿರುತೆರೆ ಮತ್ತು ಹಿರಿತೆರೆಯ ಕಲಾವಿದರ ಹೆಸರು ಮುಂಚೂಣೆಯಲ್ಲಿವೆ. ಕನ್ನಡತಿ ಖ್ಯಾತಿ ರಂಜನಿ ರಾಘವನ್ (Ranjani Raghavan), ಬುಲೆಟ್ ಪ್ರಕಾಶ್ ಪುತ್ರ ರಕ್ಷಿಕ್, ನಮ್ರತಾ ಗೌಡ (Namrata Gowda), ಸುಕೃತಾ ನಾಗ್, ಭವ್ಯ ಗೌಡ, ಅದ್ವಿತಿ ಶೆಟ್ಟಿ, ಆಶಾ ಭಟ್ (Asha Bhatt) ಮುಂತಾದವರು ಹೆಸರು ಕೇಳಿ ಬಂದಿವೆ. ಜೊತೆಗೆ ನ್ಯೂಸ್ ಆಂಕರ್ ಒಬ್ಬರ ಹೆಸರು ಕೇಳಿ ಬಂದಿದೆ.

    ಬಿಗ್ ಬಾಸ್ ಕನ್ನಡ ಸೀಸನ್ 10ಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಹಲವು ಪ್ರೋಮೋಗಳನ್ನು ರಿಲೀಸ್ ಮಾಡುವ ಮೂಲಕ ವಾಹಿನಿಯು ಪ್ರೇಕ್ಷಕರಲ್ಲಿ ಕುತೂಹಲವನ್ನುಂಟು ಮಾಡುತ್ತಿದೆ. ಈಗಾಗಲೇ ಬಿಗ್ ಬಾಸ್ ಯಾವಾಗಿಂದ ಶುರುವಾಗುತ್ತದೆ ಎನ್ನುವ ಮಾಹಿತಿಯನ್ನು ಹಂಚಿಕೊಂಡಿದೆ. ಈಗ ಪ್ರಸಾರದ ವೇಳೆಯನ್ನೂ ಅದು ಹೇಳಿಕೊಂಡಿದೆ.

    ಅಕ್ಟೋಬರ್ 8 ರಿಂದ ಪ್ರಾರಂಭವಾಗುವ ಬಿಗ್ ಬಾಸ್ ಶೋ, ಮೊದಲ ದಿನ ಸಂಜೆ ಆರು ಗಂಟೆಗೆ ಪ್ರಸಾರವಾಗಲಿದೆ. ಮರುದಿನದಿಂದ ಪ್ರತಿ ರಾತ್ರಿ  9.30ಕ್ಕೆ ಕಾರ್ಯಕ್ರಮ ಪ್ರಸಾರವಾಗಲಿದೆ ಎಂದು ವಾಹಿನಿಯು ರಿಲೀಸ್ ಮಾಡಿದ ಪ್ರೋಮೋದಲ್ಲಿ ತಿಳಿಸಲಾಗಿದೆ. ಇದಕ್ಕಾಗಿಯೇ ವಿಶೇಷ ಪ್ರೋಮೋ ಕೂಡ ಮಾಡಿದೆ.

    ಬಿಗ್ ಬಾಸ್ ಶೋನಲ್ಲಿ ಹೊಸ ಸ್ಪರ್ಧಿ

    ಕಿರುತೆರೆ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss Kannada 10) ಯಾವಾಗ ಎಂಬುದಕ್ಕೆ ಈಗಾಗಲೇ ಉತ್ತರ ಸಿಕ್ಕಿದೆ. ಅಕ್ಟೋಬರ್ 8ರಿಂದ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋ ಶುರುವಾಗಲಿದೆ. ವಾಹಿನಿಯ ‘ಅನುಬಂಧ 2023’ ಅವಾರ್ಡ್ಸ್ ಸಮಾರಂಭದಲ್ಲಿ ಬಿಗ್ ಬಾಸ್ ಯಾವಾಗ ಶುರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಯಾರೆಲ್ಲಾ ಬಿಗ್ ಬಾಸ್ ಮನೆಯೊಳಗಡೆ ಹೋಗಲಿದ್ದಾರೆ ಎಂಬ ಪ್ರಶ್ನೆ ಏಳೋದು ಸಹಜ. ಮೊದಲ ಬಾರಿಗೆ ಬಿಗ್ ಬಾಸ್ ಮನೆ ಪ್ರವೇಶ ಮಾಡುವ ಮೊದಲ ಸ್ಪರ್ಧಿಯನ್ನು ಕಲರ್ಸ್ ವಾಹಿನಿ ರಿವೀಲ್ ಮಾಡಿದೆ.

    ಬಿಗ್ ಬಾಸ್ ಮನೆಗೆ ಹೋಗುವ ಮುನ್ನವೇ ವಾಹಿನಿಯಾಗಲಿ, ಬಿಗ್ ಬಾಸ್ ಮನೆ ಪ್ರವೇಶ (Bigg Boss House) ಮಾಡುವ ಸ್ಪರ್ಧಿಗಳಾಗಲೀ ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡುವ ವಿಚಾರವನ್ನು ರಿವೀಲ್ ಮಾಡೋದಿಲ್ಲ. ಸ್ಪರ್ಧಿಗಳು ಯಾರು ಅನ್ನೋದು ಬಿಗ್ ಬಾಸ್ ಶೋ ಲಾಂಚ್ ಆಗುವ ದಿನವೇ ಗೊತ್ತಾಗುತ್ತದೆ. ಆದರೆ ಈ ಬಾರಿ ಮೊದಲ ಬಾರಿಗೆ ಸೋಶಿಯಲ್ ಮೀಡಿಯಾದಲ್ಲಿ ಸ್ಪರ್ಧಿ ಯಾರು ಅನ್ನೋದನ್ನು ಇದೀಗ ವಾಹಿನಿ ಹೇಳಿದೆ.

     

    ಬೆಸ್ಟ್ ರೇಟೆಡ್ ಚಲನಚಿತ್ರ – 777 ಚಾರ್ಲಿ. ಬಿಗ್ ಬಾಸ್ ಕನ್ನಡ ಸೀಸನ್ 10 ಮೊದಲ ಕಂಟೆಸ್ಟೆಂಟ್ ಆಗಿ ಎಂಟ್ರಿ ಕೊಡ್ತಿರೋ ಚಾರ್ಲಿ!! ಅಭಿನಂದನೆಗಳು ಚಾರ್ಲಿ ಎಂದು ವಾಹಿನಿಯ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ಮೂಲಕ ಚಾರ್ಲಿ ಮೊದಲ ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಡುತ್ತಿದೆ. ಅಂದಹಾಗೆ, 777 ಚಾರ್ಲಿ (777 charlie) ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ (Rakshit Shetty) ಜೊತೆ ಚಾರ್ಲಿ ಕೂಡ ಮನೋಜ್ಞವಾಗಿ ಅಭಿನಯಿಸುವ ಪ್ರೇಕ್ಷಕರ ಮನಗೆದ್ದಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕನ್ನಡದ ಎವರ್‌ಗ್ರೀನ್ ಸಾಂಗ್‍ಗೆ ದನಿಯಾದ ರಾಬರ್ಟ್ ರಾಣಿ!

    ಕನ್ನಡದ ಎವರ್‌ಗ್ರೀನ್ ಸಾಂಗ್‍ಗೆ ದನಿಯಾದ ರಾಬರ್ಟ್ ರಾಣಿ!

    ಚಂದನವನದ ನಟಿ ಆಶಾ ಭಟ್ ತಮ್ಮ ಫಸ್ಟ್ ಕವರ್ ಸಾಂಗ್ ಬಿಡುಗಡೆ ಮಾಡಿದ್ದಾರೆ. ಈ ಕವರ್ ಸಾಂಗ್‍ಗೆ ಅವರು ಕನ್ನಡದ ಎವರ್‌ಗ್ರೀನ್ ಸಾಂಗ್‍ಗೆ ದನಿಯಾಗಿದ್ದಾರೆ.

    ರಾಬರ್ಟ್ ಖ್ಯಾತಿಯ ಸಿಂಪಲ್ ಹುಡುಗಿ ಆಶಾ ಯಾವಾಗಲೂ ಸಾಂಪ್ರದಾಯಿಕ ಉಡುಗೆ, ಆಟ ಮತ್ತು ಅಡುಗೆ ಮಾಡುವ ಮೂಲಕ ಸುದ್ದಿಯಾಗುತ್ತಿದ್ದರು, ಆದರೆ ಈಗ ಕನ್ನಡ ದಶಕದ ಸೂಪರ್ ಹಿಟ್ ಸಾಂಗ್ ಮತ್ತು ಸೂಪರ್ ಹಿಟ್ ಸಿನಿಮಾವನ್ನು ಕನ್ನಡಿಗರಿಗೆ ನೆನಪಿಸಿದ್ದಾರೆ. ತಮ್ಮ ಕವರ್ ಸಾಂಗ್ ಝಲಕ್ ನನ್ನು ಇನ್‍ಸ್ಟಾದಲ್ಲಿ ಹಂಚಿಕೊಂಡಿರುವ ಅವರು, ಕನ್ನಡದ ಎವರ್‌ಗ್ರೀನ್ ಮೂವೀ ‘ಅಮೃತವರ್ಷಿಣಿ’ ಸಿನಿಮಾದ ‘ತುಂತುರು ಅಲ್ಲಿ ನೀರ ಹಾಡು’ ಸಾಂಗ್‍ನನ್ನು ತಮ್ಮ ಸುಮಧುರ ಕಂಠದಲ್ಲಿ ಹಾಡಿದ್ದಾರೆ. ಇದನ್ನೂ ಓದಿ: ಹೊಟ್ಟೆ ಡುಮ್ಮ ಅಂದಿದ್ದಕ್ಕೆ ಸೂಪರ್ ಸ್ಟಾರ್ ಅಜಿತ್ ಮಾಡಿದ್ದೇನು?

     

    View this post on Instagram

     

    A post shared by Asha Bhat (@asha.bhat)

    ಆಶಾ ಕನ್ನಡದಲ್ಲಿ ಮಾಡಿರುವುದು ಒಂದೇ ಸಿನಿಮಾವಾದರೂ ತಮ್ಮ ಸೃಜನಶಿಲತೆ ಮತ್ತು ಆಚಾರದಿಂದ ಕನ್ನಡಿಗರ ಮನವನ್ನು ಗೆದ್ದಿದ್ದಾರೆ. ತಮ್ಮ ಕವರ್ ಸಾಂಗ್ ಬಗ್ಗೆ ಪೋಸ್ಟ್ ಮಾಡಿರುವ ಅವರು, ಕೊನೆಗೂ ನನ್ನ ಮೊದಲ ಕವರ್ ಸಾಂಗ್ ಬಿಡುಗಡೆಯಾಗಿದೆ. ನೀವು ನನ್ನ ಪೂರ್ತಿ ಸಾಂಗ್ ಕೇಳಿಸಿಕೊಳ್ಳಬೇಕು ಎಂದರೆ ನನ್ನ ಇನ್‍ಸ್ಟಾ ಬಯೋದಲ್ಲಿ ಲಿಂಕ್ ಹಾಕಿದ್ದೇನೆ. ವೀಡಿಯೋವನ್ನು ವೀಕ್ಷಿಸಿ, ಪ್ರತಿಕ್ರಿಯಿಸಿ. ಈ ವೀಡಿಯೋ ಮಾಡಲು ಸಹಾಯ ಮಾಡಿದ ನನ್ನ ತಂಡಕ್ಕೆ ಧನ್ಯವಾದಗಳು ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಈ ವೀಡಿಯೋದಲ್ಲಿ ಆಶಾ ಕ್ಯೂಟ್ ಆಗಿ ಕಾಣಿಸುತ್ತಿದ್ದು, ಹಾಡನ್ನು ಹಾಡುವುದರ ಜೊತೆಗೆ ಭಾವನೆಯನ್ನು ಸಖತ್ ಆಗಿ ಎಕ್ಸ್‍ಪ್ರೆಸ್ ಮಾಡಿದ್ದಾರೆ. ಈ ವೀಡಿಯೋದಲ್ಲಿ ಪ್ರಕೃತಿ ಜೊತೆ ನಟಿಯನ್ನು ಸುಂದರವಾಗಿ ಕ್ಯಾಪ್ಚರ್ ಮಾಡಲಾಗಿದೆ. ಸುಂದರ ಜಾಗದಲ್ಲಿ ಆಶಾ ಇನ್ನೂ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.

    ಸೋಶಿಯಲ್ ಮೀಡಿಯಾದದಲ್ಲಿ ಆ್ಯಕ್ಟವ್ ಇರುವ ಈ ನಟಿ ತಮ್ಮ ಎಲ್ಲ ಅಪ್ಡೇಟ್‍ಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಈ ಹಿಂದೆ ಆಶಾ ಹಸಿರು ಕ್ರಾಂತಿಯ ಸೂಪರ್ ಹೀರೋಗಳು ಮತ್ತು ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ ಮತ್ತು ತುಳಸಿ ಗೌಡ ಅವರ ಜೊತೆಗೆ ಕೆಲವು ಕ್ಷಣ ಕಳೆದಿದ್ದರು. ಈ ಕುರಿತು ಸಹ ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದರು. ಇದನ್ನೂ ಓದಿ: ಟ್ರೋಲ್‌ಗೆ ಆಹಾರವಾದ ಬಾಲಿವುಡ್ ನಟಿ ಕರೀನಾ ಆ ಎರಡು ಪೀಸ್ ಬಟ್ಟೆ

    2014ರಲ್ಲಿ ಮಿಸ್ ಸುಪ್ರಾನ್ಯಾಷನಲ್ ಅವಾರ್ಡ್ ಗೆದ್ದ ಈ ನಟಿ ಕನ್ನಡ ಮಾತ್ರವಲ್ಲ ಬೇರೆ ಭಾಷೆಗಳಲ್ಲಿಯು ನಟಿಸಿದ್ದು, ಸದ್ಯಕ್ಕೆ ಯಾವುದೇ ಹೊಸ ಸಿನಿಮಾ ಬಗ್ಗೆ ಫೋಷಣೆಯನ್ನು ಮಾಡಿಲ್ಲ.

  • ಹುಟ್ಟುಹಬ್ಬದ ಸಂಭ್ರಮದಲ್ಲಿ ರಾಬರ್ಟ್ ಬೆಡಗಿ – ಚಿತ್ರತಂಡದಿಂದ ಫಸ್ಟ್‌ಲುಕ್ ಗಿಫ್ಟ್

    ಹುಟ್ಟುಹಬ್ಬದ ಸಂಭ್ರಮದಲ್ಲಿ ರಾಬರ್ಟ್ ಬೆಡಗಿ – ಚಿತ್ರತಂಡದಿಂದ ಫಸ್ಟ್‌ಲುಕ್ ಗಿಫ್ಟ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ಈಗಾಗಲೇ ಪೋಸ್ಟರ್ ಮೂಲಕ ಸದ್ದು ಮಾಡುತ್ತಿದೆ. ಇದೀಗ ಚಿತ್ರತಂಡ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ನಟಿ ಆಶಾ ಭಟ್‍ಗೆ ಸರ್ಪ್ರೈಸ್ ಉಡುಗೊರೆ ನೀಡಿದ್ದಾರೆ.

    ಇಂದು ನಟಿ ಆಶಾ ಭಟ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಹೀಗಾಗಿ ರಾಬರ್ಟ್ ಚಿತ್ರತಂಡ ಆಶಾ ಭಟ್ ಅವರ ಫಸ್ಟ್‌ಲುಕ್ ರಿಲೀಸ್ ಮಾಡಿದೆ. ಇದುವರೆಗೂ ದರ್ಶನ್ ಅವರ ಪೋಸ್ಟರ್ ಮತ್ತು ಟೀಸರ್ ಮಾತ್ರ ರಿವೀಲ್ ಮಾಡಿತ್ತು. ಇದೀಗ ಮೊದಲ ಬಾರಿಗೆ ನಾಯಕಿಯ ಪಾತ್ರವನ್ನು ಪರಿಚಯಿಸಿದೆ. ಸಿನಿಮಾದಲ್ಲಿ ಆಶಾ ಭಟ್, ದರ್ಶನ್ ಅವರಿಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

    ಬಿಡುಗಡೆಯಾಗಿರುವ ಫ‌ಸ್ಟ್‌ಲುಕ್‌ನಲ್ಲಿ ನಟಿ ಆಶಾ ಭಟ್ ಡ್ಯಾನ್ಸ್ ಮಾಡುತ್ತಿರುವ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಇದುವರೆಗೂ ಚಿತ್ರತಂಡ ಸಿನಿಮಾದ ಬಗ್ಗೆ ಹೆಚ್ಚಾಗಿ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಆದ್ದರಿಂದ ನಟಿ ಆಶಾ ಭಟ್ ಪಾತ್ರ ಹೇಗಿರಲಿದೆ ಎಂಬುದು ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ. ಸೋಶಿಯಲ್ ಮೀಡಿಯಾದ ಮೂಲಕ ನಟಿಗೆ ದರ್ಶನ್ ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

    ಫಸ್ಟ್‌ಲುಕ್ ರಿಲೀಸ್ ಮಾಡಿದ್ದಕ್ಕೆ ನಟಿ ಕೂಡ ಟ್ವೀಟ್ ಮಾಡುವ ಮೂಲಕ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. “ರಾಬರ್ಟ್ ತಂಡ, ನೀವು ನನಗೆ ಕುಟುಂಬದವರಂತೆ ಇದ್ದೀರಿ. ನನ್ನ ಹುಟ್ಟುಹಬ್ಬವನ್ನು ಹೇಗೆ ಅದ್ಭುತವಾಗಿಸಬೇಕೆಂದು ನಿಮಗೆ ಚೆನ್ನಾಗಿ ತಿಳಿದಿದೆ. ಕೊನೆಯ ಹುಟ್ಟುಹಬ್ಬದ ದಿನ ನಾವು ಒಟ್ಟಿಗೆ ಪ್ರಯಾಣವನ್ನು ಪ್ರಾರಂಭಿಸಿದ್ದೇವೆ. ಈ ಬರ್ತ್ ಡೇಯಲ್ಲಿ ನಮ್ಮ ಪ್ರಯತ್ನವನ್ನು ಆಚರಿಸುತ್ತಿದ್ದೇವೆ” ಎಂದು ಧನ್ಯವಾದಗಳನ್ನು ತಿಳಿಸಿದ್ದಾರೆ.

  • ‘ರಾಬರ್ಟ್’ನಲ್ಲಿ ದರ್ಶನ್‍ಗೆ ಭದ್ರಾವತಿ ಹುಡ್ಗಿ ಜೋಡಿ

    ‘ರಾಬರ್ಟ್’ನಲ್ಲಿ ದರ್ಶನ್‍ಗೆ ಭದ್ರಾವತಿ ಹುಡ್ಗಿ ಜೋಡಿ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ ‘ರಾಬರ್ಟ್’ ಸಿನಿಮಾ ನಾಯಕಿ ವಿಚಾರದಲ್ಲಿ ಭಾರೀ ಸದ್ದು ಮಾಡಿತ್ತು. ಅಭಿಮಾನಿಗಳಿಗೆ ನೆಚ್ಚಿನ ನಟ ದರ್ಶನ್‍ಗೆ ಜೋಡಿ ಯಾರಾಗುತ್ತಾರೆ ಎಂಬ ಕುತೂಹಲವಿತ್ತು. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ನಿರ್ದೇಶಕ ತರುಣ್ ಸುಧೀರ್ ಅವರು ನಾಯಕಿ ಯಾರೆಂದು ಅಧಿಕೃತವಾಗಿ ಫೋಷಣೆ ಮಾಡಿದ್ದಾರೆ.

    ‘ರಾಬರ್ಟ್’ ಸಿನಿಮಾದಲ್ಲಿ ದರ್ಶನ್‍ಗೆ ಜೋಡಿಯಾಗಿ ನಟಿ ಆಶಾ ಭಟ್ ಆಯ್ಕೆಯಾಗಿದ್ದಾರೆ. ಇಂದು ಬೆಳಗ್ಗೆ ತರುಣ್ ಸುಧೀರ್ ಅವರು ‘ರಾಬರ್ಟ್’ ಸಿನಿಮಾದಲ್ಲಿ ನಾಯಕಿ ಯಾರು ಎಂದು ಸಂಜೆ 4.02 ಗಂಟೆಗೆ ಅಧಿಕೃತವಾಗಿ ಘೋಷಣೆ ಮಾಡುವುದಾಗಿ ತಿಳಿಸಿದ್ದರು. ಈಗ ಅದೇ ರೀತಿ ಅವರ ಫೋಟೋ ಸಮೇತ ನಾಯಕಿಯ ಬಗ್ಗೆ ರಿವೀಲ್ ಮಾಡಿದ್ದಾರೆ.

    ತರುಣ್ ಸುಧೀರ್ ಈ ಬಗ್ಗೆ “ನಿಮ್ಮೆಲ್ಲರಿಗೂ ದೊಡ್ಡ ಸರ್ಪ್ರೈಸ್, ನಮ್ಮ ಕನ್ನಡತಿ, ಮಿಸ್‍ಸೂಪರ್ ನ್ಯಾಷನಲ್ ಆಗಿದ್ದ ಆಶಾ ಭಟ್ ‘ರಾಬರ್ಟ್’ ಚಿತ್ರತಂಡಕ್ಕೆ ಸೇರಿಕೊಂಡಿದ್ದಾರೆ” ಎಂದು ಟ್ವೀಟ್ ಮಾಡಿ ಅವರ ಫೋಟೋ ಸಮೇತ ಸ್ವಾಗತಿಸಿದ್ದಾರೆ.

    ಆಶಾ ಭಟ್ ಯಾರು?
    ಆಶಾ ಭಟ್ ಮೂಲತಃ ಕರ್ನಾಕಟದ ಭದ್ರಾವತಿಯವರಾಗಿದ್ದಾರೆ. 2014ರಲ್ಲಿ ಮಿಸ್‍ಸೂಪರ್ ಇಂಟರ್ ನ್ಯಾಷನಲ್ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದು ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದರು. ಇವರು ಎಲೆಕ್ಟ್ರಾನಿಕ್ಸ್ ನಲ್ಲಿ ಎಂಜಿನಿಯರ್ ಪದವೀಧರೆಯಾಗಿದ್ದಾರೆ. ಮೊದಲಿಗೆ ಆಶಾ ಭಟ್ ರೂಪದರ್ಶಿಯಾಗಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರ ಬಾಲಿವುಡ್ ಮತ್ತು ಬಾಲಿವುಡ್‍ನಲ್ಲಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇದೀಗ ‘ರಾಬರ್ಟ್’ ಸಿನಿಮಾದ ಮೂಲಕ ಕನ್ನಡತಿಯೇ ಸ್ಯಾಂಡಲ್‍ವುಡ್‍ಗೆ ಬರುತ್ತಿದ್ದಾರೆ.

    ಈ ಹಿಂದೆ ನಟಿ ಮೆಹರೀನ್ ಪಿರ್ಜಾದಾ ‘ರಾಬರ್ಟ್’ ಸಿನಿಮಾಗಾಗಿ ಬರುವುದು ಬಹುತೇಕ ಖಚಿತವಾಗಿತ್ತು. ಆದರೆ ಈಗ ಆಶಾ ಭಟ್ ಅವರನ್ನು ಚಿತ್ರತಂಡ ಪೈನಲ್ ಮಾಡಿದೆ.

    ಸದ್ಯಕ್ಕೆ ‘ರಾಬರ್ಟ್’ ಸಿನಿಮಾ ಸ್ವಲ್ಪ ಬ್ರೇಕ್ ತೆಗೆದುಕೊಂಡು ಶೂಟಿಂಗ್ ನಿಲ್ಲಿಸಿದೆ. ಈ ಬಗ್ಗೆ ಸ್ವತಃ ಟ್ವೀಟ್ ಮಾಡಿ ಮಾಹಿತಿ ನೀಡಿದ್ದ ನಿರ್ದೇಶಕ ತರುಣ್ ಸುಧೀರ್, ರಾಬರ್ಟ್ ಸಿನಿಮಾ ಮಾಹಿತಿಗಾಗಿ ಕಾಯುತ್ತಿದ್ದ ಅಭಿಮಾನಿಗಳು ಕ್ಷಮಿಸಬೇಕು. ಈಗಾಗಲೇ ‘ಕುರುಕ್ಷೇತ್ರ’ ಸಿನಿಮಾ ಬಿಡುಗಡೆಯಾಗಿ ಉತ್ತಮ ಪ್ರದರ್ಶನವಾಗುತ್ತಿದೆ. ಬೆನ್ನಲ್ಲೇ ‘ಒಡೆಯ’ ಕೂಡ ರಿಲೀಸ್ ಆಗಲು ಸಿದ್ಧವಾಗಿದೆ. ಹೀಗಾಗಿ ‘ರಾಬರ್ಟ್’ ಚಿತ್ರವನ್ನು ಕೆಲ ದಿನಗಳ ಕಾಲ ನಿಲ್ಲಿಸುವುದಾಗಿ ಹೇಳಿದ್ದಾರೆ. ಅಲ್ಲದೇ ಕೆಲವೇ ದಿನಗಳಲ್ಲಿ ಬಿಗ್ ನ್ಯೂಸ್‍ನೊಂದಿಗೆ ವಾಪಸ್ ಬರುವುದಾಗಿಯೂ ತಿಳಿಸಿದ್ದರು.