Tag: Asha activist

  • ಬಿರುಗಾಳಿ ಸಹಿತ ಭಾರೀ ಮಳೆಗೆ ಮನೆ ಹಾನಿ – `ಆಶಾ’ಗೆ ಬೇಕಿದೆ ಆಸರೆ

    ಬಿರುಗಾಳಿ ಸಹಿತ ಭಾರೀ ಮಳೆಗೆ ಮನೆ ಹಾನಿ – `ಆಶಾ’ಗೆ ಬೇಕಿದೆ ಆಸರೆ

    ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಸಮೀಪದ ಕಸುವನಹಳ್ಳಿ ಗ್ರಾಮದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಗೆ ಮನೆ ಹಾಗೂ ಕೊಟ್ಟಿಗೆಗಳ ಶೀಟ್‍ಗಳು ಹಾರಿ ಹೋಗಿದ್ದು, ಅಪಾರ ನಷ್ಟ ಉಂಟಾಗಿದೆ.

    ಕಸುವನಹಳ್ಳಿ ಗ್ರಾಮದಲ್ಲಿ ಭಾರೀ ಮಳೆಯಾಗಿದ್ದು, ಗ್ರಾಮದಲ್ಲಿ ಹಲವು ಮನೆ, ಕೊಟ್ಟಿಗೆಗಳಿಗೆ ಹೊದಿಸಿದ್ದ ಸಿಮೆಂಟ್ ಶೀಟ್‍ಗಳು ಹಾರಿಹೋಗಿವೆ. ಆಶಾ ಕಾರ್ಯಕರ್ತೆ ಜಯಶ್ರೀಯವರು ಇದೇ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ್ದ ಮನೆಯ ಶೀಟ್ ಕೂಡ ಗಾಳಿಗೆ ಹಾರಿ ಹೋದ ಕಾರಣ ಕುಟುಂಬ ಮಳೆಯಲ್ಲಿಯೇ ನಿಲ್ಲುವಂತಾಗಿದೆ. ಇದನ್ನೂ ಓದಿ: ರೇಪ್ ಕೇಸ್ ದಾಖಲಿಸಲು ಠಾಣೆಗೆ ಹೋದ ಬಾಲಕಿ ಮೇಲೆ ಪೊಲೀಸ್‌ನಿಂದಲೂ ಅತ್ಯಾಚಾರ!

    ಆಶಾ ಕಾರ್ಯಕರ್ತೆ ಬಡ ಕುಟುಂಬದವರಾಗಿದ್ದು, ತಾಲೂಕು ಆಡಳಿತ ಅವರಿಗೆ ಪರಿಹಾರ ನೀಡಿ ಮನೆಯ ದುರಸ್ತಿ ಮಾಡಿಸಿಕೊಳ್ಳಲು ಅನುಕೂಲ ಕಲ್ಪಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಗಾಂಧಿನಗರ ಕಾಂಗ್ರೆಸ್ ಪಕ್ಷದ ವಕ್ತಾರರಾಗಿ ಲಕ್ಷ್ಮೀಕಾಂತ್ ನೇಮಕ

  • ನಾವು ಒಳ್ಳೆಯದು ಹೇಳಿದ್ರೂ ಜನ ಕೇಳಲ್ಲ- ರಕ್ಷಣೆ ಕೊಡಿ, ಇಲ್ಲವಾದ್ರೆ ನಮ್ಮನ್ನ ಬಿಟ್ಟು ಬಿಡಿ

    ನಾವು ಒಳ್ಳೆಯದು ಹೇಳಿದ್ರೂ ಜನ ಕೇಳಲ್ಲ- ರಕ್ಷಣೆ ಕೊಡಿ, ಇಲ್ಲವಾದ್ರೆ ನಮ್ಮನ್ನ ಬಿಟ್ಟು ಬಿಡಿ

    ಮಂಡ್ಯ: ನಾವು ಜನರಿಗೆ ಒಳ್ಳೆಯದು ಹೇಳಿದರೂ ಅವರು ಕೇಳುವುದಕ್ಕೆ ಸಿದ್ಧರಿಲ್ಲ. ಹೀಗಾಗಿ ನಮಗೆ ರಕ್ಷಣೆ ಕೊಡಿ. ನಿಮಗೆ ರಕ್ಷಣೆ ಕೊಡಲು ಆಗಲ್ಲ ಅಂದರೆ ನಮ್ಮನ್ನ ಕೋವಿಡ್ ಕೆಲಸದಲ್ಲಿ ಬಳಸಿಕೊಳ್ಳಬೇಡಿ ಎಂದು ಆಶಾ ಕಾರ್ಯಕರ್ತೆಯರು ಜಿಲ್ಲೆಯ ಕೆ.ಆರ್‌.ಪೇಟೆಯಲ್ಲಿ ಆಗ್ರಹಿಸಿದ್ದಾರೆ.

    ಆಶಾ ಕಾರ್ಯಕರ್ತೆಯ ಮೇಲೆ ಮತ್ತೊಂದು ಹಲ್ಲೆ ಪ್ರಕರಣ ನಡೆದಿದ್ದು, ಅಂತರ ಕಾಪಾಡಿಕೊಳ್ಳಿ ಎಂದಿದ್ದಕ್ಕೆ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ ಮಾಡಲಾಗಿದೆ. ಜಿಲ್ಲೆಯ ಕೆ.ಆರ್‌.ಪೇಟೆ ತಾಲೂಕಿನ ಮೊಸಳೆಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹೀಗಾಗಿ ಆಶಾ ಕಾರ್ಯಕರ್ತೆಯರ ಮೇಲೆ ಪದೇ ಪದೇ ಹಲ್ಲೆಗಳು ಜರುಗುತ್ತಿವೆ. ನಾವು ಯಾಕೆ ಅವರ ಕೈಯಿಂದ ಹೊಡೆಸಿಕೊಳ್ಳಬೇಕು. ನಮಗೆ ರಕ್ಷಣೆ ಕೊಡಿ, ಇಲ್ಲವಾದರೆ ನಮ್ಮನ್ನ ಬಿಟ್ಟು ಬಿಡಿ ಎಂದು ಆಶಾ ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಶನಿವಾರ ಮೊಸಳೆಕೊಪ್ಪಲು ಗ್ರಾಮದಲ್ಲಿ ಆಶಾ ಕಾರ್ಯಕರ್ತೆ, ಬೆಂಗಳೂರಿನಲ್ಲಿ ಕೊರೊನಾ ವೈರಸ್ ಹೆಚ್ಚಿದೆ. ಅಲ್ಲಿಂದ ಬಂದವರ ಜೊತೆ ಅಂತರ ಕಾಪಾಡಿಕೊಳ್ಳಿ, ಜಾಗೃತರಾಗಿರಿ ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದರು. ಈ ವೇಳೆ ಬೆಂಗಳೂರಿನಿಂದ ಬಂದ ಮಂಜೇಗೌಡ, ದರ್ಶನ್, ದೇವರಾಜು, ರಘು, ಪ್ರಸನ್ನ ಹಾಗೂ ಚಂದನ್ ಎಂಬವರು ಆಶಾ ಕಾರ್ಯಕರ್ತೆ ಮತ್ತು ಆಕೆಯ ಪತಿಯ ಮೇಲೆ ಹಲ್ಲೆ ಮಾಡಿದ್ದಾರೆ.

    ಹಲ್ಲೆಯಿಂದ ಆಶಾ ಕಾರ್ಯಕರ್ತೆಯ ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಅವರಿಗೆ ಕೆ.ಆರ್.‌ಪೇಟೆಯ ಪಟ್ಟಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ರಕ್ಷಣೆ ಇಲ್ಲ ಎಂದು ನಮ್ಮನ್ನ ನಮ್ಮ ಪಾಡಿಗೆ ಬಿಡಿ ಎಂದು ಆಶಾ ಕಾರ್ಯಕರ್ತೆಯರು ಆಗ್ರಹಿಸುತ್ತಿದ್ದಾರೆ.

  • ಹಾವೇರಿ ಜಿಲ್ಲೆಯ ಆಶಾ ಕಾರ್ಯಕರ್ತೆಗೆ ಕೊರೊನಾ ಸೋಂಕು

    ಹಾವೇರಿ ಜಿಲ್ಲೆಯ ಆಶಾ ಕಾರ್ಯಕರ್ತೆಗೆ ಕೊರೊನಾ ಸೋಂಕು

    -ಗರ್ಭಿಣಿ ಸೇರಿ ಮೂವರಲ್ಲಿ ಸೋಂಕು ದೃಢ
    -ಜಿಲ್ಲೆಯಲ್ಲಿ 42ಕ್ಕೇರಿದ ಸೋಂಕಿತರ ಸಂಖ್ಯೆ

    ಹಾವೇರಿ: ಜಿಲ್ಲೆಯಲ್ಲಿ ಇವತ್ತು ಮೂವರು ಮಹಿಳೆಯರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇಬ್ಬರ ಮಹಿಳೆಯರ ಟ್ರಾವೆಲ್ ಹಿಸ್ಟರಿ ಕಲೆ ಹಾಕಲು ಜಿಲ್ಲಾಡಳಿತ ಹರಸಾಹಸ ಮಾಡುತ್ತಿದೆ. ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕಾರಡಗಿ ಗ್ರಾಮದ 38 ವರ್ಷದ ಆಶಾ ಕಾರ್ಯಕರ್ತೆಗೂ (ರೋಗಿ 8,700) ಸೋಂಕು ತಗುಲಿದೆ.

    ಸವಣೂರು ಪಟ್ಟಣದ 23 ವರ್ಷದ ಗರ್ಭಿಣಿಗೂ (ರೋಗಿ 8699) ಕೊರೊನಾ ದೃಢಪಟ್ಟಿದೆ. ಜೂನ್ 19 ರಂದು ಗರ್ಭಿಣಿಯ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಆರೋಗ್ಯ ಇಲಾಖೆ ಪರೀಕ್ಷೆಗೆ ಕಳುಹಿಸಿತ್ತು. ಇಂದು ಬಂದ ವರದಿಯಲ್ಲಿ ಸೋಂಕು ತಗುಲಿರೋದು ಖಚಿತವಾಗಿದೆ.

    ಶಿಗ್ಗಾಂವಿ ಪಟ್ಟಣದ ದೇಸಾಯಿ ಗಲ್ಲಿಯ ಕಂಟೈನ್ಮೆಂಟ್ ಜೋನ್‍ನ ನಿವಾಸಿ 45 ವರ್ಷದ ಮಹಿಳೆ (ರೋಗಿ- 8698)ಗೂ ಸೋಂಕು ತಗುಲಿದೆ. ಈ ಮಹಿಳೆ ರೋಗಿ 6832ರ ಸಂಪರ್ಕದಲ್ಲಿದ್ದರು. ಆಶಾ ಕಾರ್ಯಕರ್ತೆ ಹಾಗೂ ಗರ್ಭಿಣಿ ವಾಸವಾಗಿದ್ದ ಲಾಲಸಾಕಟ್ಟಿ ಖಾದರ ಬಾಗ್ ಓಣಿ ಯನ್ನ ಜಿಲ್ಲಾಡಳಿತ ಸೀಲ್‍ಡೌನ್ ಮಾಡಿದೆ. ಒಟ್ಟು ಹಾವೇರಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 42ಕ್ಕೆ ಏರಿಕೆಯಾಗಿದೆ.

  • ಆಶಾ ಕಾರ್ಯಕರ್ತೆಯ ಎದೆ, ಹೊಟ್ಟೆಗೆ ಒದ್ದು ಹಲ್ಲೆಗೈದ ಪುಂಡ

    ಆಶಾ ಕಾರ್ಯಕರ್ತೆಯ ಎದೆ, ಹೊಟ್ಟೆಗೆ ಒದ್ದು ಹಲ್ಲೆಗೈದ ಪುಂಡ

    ಬಾಗಲಕೋಟೆ: ಪುಂಡನೊಬ್ಬ ಆಶಾ ಕಾರ್ಯಕರ್ತೆಯ ಎದೆ, ಹೊಟ್ಟೆಗೆ ಒದ್ದು ತಲೆಗೆ ಹೊಡೆದು ಹಲ್ಲೆಗೈದ ಘಟನೆ ಮುಧೋಳ ತಾಲೂಕಿನ ಕುಳಲಿ ಗ್ರಾಮದಲ್ಲಿ ನಡೆದಿದೆ.

    ಕುಳಲಿ ಗ್ರಾಮದ ಜ್ಯೋತಿ ಪೋಳ (23) ಹಲ್ಲೆಗೊಳಗಾದ ಆಶಾ ಕಾರ್ಯಕರ್ತೆ. ಅದೇ ಗ್ರಾಮದ ವಿಠ್ಠಲ ಗಸ್ತಿ ಹಲ್ಲೆಗೈದ ಆರೋಪಿ. ಇಂದು ಸಂಜೆ ನಡೆದ ಘಟನೆ ನಡೆದಿದ್ದು, ಸ್ಥಳದಿಂದ ಆರೋಪಿ ಪರಾರಿಯಾಗಿದ್ದ.

    ಗ್ರಾಮಕ್ಕೆ ಮಹಾರಾಷ್ಟ್ರದಿಂದ ಜನರು ಬರುತ್ತಿದ್ದಾರೆ ಎಂಬ ಮಾಹಿತಿ ಆಶಾ ಕಾರ್ಯಕರ್ತೆ ಜ್ಯೋತಿ ಪೋಳ ಅವರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆ ಇಂದು ಸಂಜೆ ವಿಠ್ಠಲ ಗಸ್ತಿ ಮನೆಗೆ ಹೋಗಿ ಮಹಾರಾಷ್ಟ್ರದಿಂದ ನಿಮ್ಮ ಮನೆಗೆ ಬರುತ್ತಿರುವವರ ಮಾಹಿತಿ ನೀಡುವಂತೆ ಕೇಳಿಕೊಂಡಿದ್ದಾರೆ. ಬೇರೆ ರಾಜ್ಯದಿಂದ ಬಂದವರನ್ನು ಕ್ವಾರಂಟೈನ್ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

    ಮಾಹಿತಿ ನೀಡಲು ಒಪ್ಪದ ವಿಠ್ಠಲ ಗಸ್ತಿ ಕೋಪಗೊಂಡು ಜ್ಯೋತಿ ಅವರ ಎದೆ, ಒಟ್ಟೆಗೆ ಒದ್ದಿದ್ದಾನೆ. ಅಷ್ಟೇ ಅಲ್ಲದೆ ತಲೆಗೆ ಹೊಡೆದು ಹಲ್ಲೆಗೈದಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಜ್ಯೋತಿ ಅವರನ್ನು ಮುಧೋಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಈ ಸಂಬಂಧ ಕುಳಲಿ ಗ್ರಾಮ ಪಂಚಾಯತಿ ಪಿಡಿಒ ಕವಿತಾ ಅವರು ವಿಠ್ಠಲ ವಿರುದ್ಧ ಮುಧೋಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿಗೆ ಬಲೆ ಬೀಸಿ ವಶಕ್ಕೆ ಪಡೆದಿದ್ದಾರೆ.

  • ಆಶಾಕಾರ್ಯಕರ್ತೆಯ ಮೇಲೆ ಪೊರಕೆಯಲ್ಲಿ ಹಲ್ಲೆಗೆ ಯತ್ನ

    ಆಶಾಕಾರ್ಯಕರ್ತೆಯ ಮೇಲೆ ಪೊರಕೆಯಲ್ಲಿ ಹಲ್ಲೆಗೆ ಯತ್ನ

    ಮಂಗಳೂರು: ಆಶಾ ಕಾರ್ಯಕರ್ತೆಯ ಮೇಲೆ ಪೊರಕೆಯಿಂದ ಹಲ್ಲೆ ಮಾಡಲು ಯತ್ನಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಕ್ಕಿಪಾಡಿಯಲ್ಲಿ ನಡೆದಿದೆ.

    ಕುಕ್ಕಿಪಾಡಿಯ ಶ್ರೀಮತಿ ಎಂಬಾಕೆ ಹಲ್ಲೆಗೆ ಯತ್ನಿಸಿದ್ದು, ಮನೆಯ ಮುಂದೆ ಜನ ಸೇರಿದ್ದನ್ನ ಪ್ರಶ್ನಿಸಿದ್ದಕ್ಕೆ ಪೊರಕೆಯಲ್ಲಿ ಆಶಾ ಕಾರ್ಯಕರ್ತೆ ಪುಷ್ಪಲತಾ ಮೇಲೆ ಹಲ್ಲೆಗೆ ಯತ್ನಿಸಿದ್ದಾಳೆ.

    ಶ್ರೀಮತಿಯ ಪತಿ ವಿಶ್ವನಾಥ್ ಮನೆಯಲ್ಲಿ ಮಂತ್ರವಾದಿ ಕಾರ್ಯ ನಡೆಸುತ್ತಿದ್ದನು. ಹೀಗಾಗಿ ಇವರ ಮನೆಗೆ ಹತ್ತಾರು ಜನರು ಬರುತ್ತಿದ್ದರು. ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನ ಸೇರಿದ್ದನ್ನ ಆಶಾ ಕಾರ್ಯಕರ್ತೆ ಪುಷ್ಪಲತಾ ಪ್ರಶ್ನಿಸಿದ್ದಾರೆ. ಆಗ ಶ್ರೀಮತಿ ಪೊರಕೆಯಿಂದ ಆಶಾ ಕಾರ್ಯಕರ್ತೆ ಪುಷ್ಪಲತಾ ಮೇಲೆ ಹಲ್ಲೆಗೆ ಯತ್ನಿಸಿದ್ದಾಳೆ.

    ಘಟನೆಯ ಬಳಿಕ ಕುಕ್ಕಿಪಾಡಿ ಪಂಚಾಯತ್ ಸದಸ್ಯರಾದ ಯೋಗೀಶ್ ಆಚಾರ್ಯ ಅವರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪಂಚಾಯತ್ ಸದಸ್ಯರ ಮೇಲೂ ಹಲ್ಲೆ ಯತ್ನಿಸಲಾಗಿದೆ. ಅಷ್ಟೇ ಅಲ್ಲದೇ ಮಹಿಳೆ  ಅವಾಚ್ಯವಾಗಿ ನಿಂದಿಸಿದ್ದಾಳೆ.

    ಈ ಘಟನೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಮಳೆಗೆ ಮನೆ ಬಿದ್ದು ವರ್ಷವೇ ಕಳೆಯಿತು – ದನದ ಕೊಟ್ಟಿಗೆಯಲ್ಲೇ ಆಶಾ ಕಾರ್ಯಕರ್ತೆ ಕುಟುಂಬ ವಾಸ

    ಮಳೆಗೆ ಮನೆ ಬಿದ್ದು ವರ್ಷವೇ ಕಳೆಯಿತು – ದನದ ಕೊಟ್ಟಿಗೆಯಲ್ಲೇ ಆಶಾ ಕಾರ್ಯಕರ್ತೆ ಕುಟುಂಬ ವಾಸ

    – ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಪ್ರಯೋಜನವಿಲ್ಲ

    ಶಿವಮೊಗ್ಗ: ಕೊರೊನಾ ವೈರಸ್ ಕಾಣಿಸಿಕೊಂಡ ದಿನದಿಂದ ವೈದ್ಯರು, ದಾದಿಯರ ರೀತಿ ಆಶಾ ಕಾರ್ಯಕರ್ತೆಯರು ಸಹ ತಮ್ಮ ಜೀವವನ್ನು ಪಣಕ್ಕಿಟ್ಟು ಕೊರೊನಾ ವಿರುದ್ಧ ಹೋರಾಡುತ್ತಿದ್ದಾರೆ. ಆದರೆ ಇಂತಹ ಆಶಾ ಕಾರ್ಯಕರ್ತೆಗೆ ಇರುವುದಕ್ಕೆ ಒಂದು ಸೂರಿಲ್ಲ. ಗುಡಿಸಿಲಿನಲ್ಲಿ ವಾಸಿಸುತ್ತಿರುವ ಈ ಕುಟುಂಬ ಪ್ರತಿದಿನ ತಮ್ಮ ಜೀವವನ್ನು ಕೈಯಲ್ಲಿಡಿದುಕೊಂಡು ಕಾಲದೂಡುವಂತಾಗಿದೆ.

    ಶಿವಮೊಗ್ಗದ ರಾಮೇನಕೊಪ್ಪದಲ್ಲಿ ಆಶಾ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರೀತಿ ಎಂಬವರ ಮನೆ ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿದೆ. ದನದ ಕೊಟ್ಟಿಗೆಗೂ ಯೋಗ್ಯವಲ್ಲದ ಮನೆಯಲ್ಲಿ ಕುಟುಂಬದ ವೃದ್ಧರು, ಮಕ್ಕಳು ಸೇರಿದಂತೆ 10ಕ್ಕೂ ಹೆಚ್ಚು ಮಂದಿ ವಾಸಮಾಡುತ್ತಿದ್ದಾರೆ.

    ಕಳೆದ ವರ್ಷ ಜಿಲ್ಲೆಯಲ್ಲಿ ಸುರಿದ ಮಳೆಗೆ ಪ್ರವಾಹ ಬಂದು ಇದ್ದ ಮನೆ ಬಿದ್ದು ಹೋಗಿದೆ. ಅಂದಿನಿಂದ ಈ ಕುಟುಂಬ ದನದ ಕೊಟ್ಟಿಗೆಯಲ್ಲಿ ವಾಸಿಸುತ್ತಿದೆ. ಅದು ಯಾವಾಗ ಬೀಳುತ್ತದೋ ಎಂಬ ಭಯದ ನಡುವೆ ಈ ಕುಟುಂಬ ಕಾಲದೂಡುತ್ತಿದೆ. ಸಂಜೆ ಆಯಿತು ಅಂದರೆ ಹಾವು, ಚೇಳುಗಳ ಕಾಟ ಇದೆ.

    ಮಳೆಯಿಂದಾಗಿ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿ ಕೊಡುವ ಭರವಸೆಯನ್ನು ಸರ್ಕಾರ ನೀಡಿತ್ತು. ಆದರೆ ಈ ಕುಟುಂಬಕ್ಕೆ ಇದುವರೆಗೂ ಮನೆ ನಿರ್ಮಿಸಿಕೊಡುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿಲ್ಲ. ಹೀಗಾಗಿ ಕೊಟ್ಟಿಗೆಯಲ್ಲಿಯೇ ವಾಸಿಸುತ್ತಿದ್ದಾರೆ. ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಹ ನೀಡಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ.

    ಸರ್ಕಾರ ಪ್ರತಿವರ್ಷ ಗ್ರಾಮ ಪಂಚಾಯ್ತಿ, ಸ್ಥಳೀಯ ಸಂಸ್ಥೆ ಮೂಲಕ ಆಶ್ರಯ ವಸತಿ ಯೋಜನೆಯಡಿ ಸಾವಿರಾರು ಮನೆಗಳನ್ನು ಕೊಡುತ್ತೇವೆ ಎಂದು ಹೇಳುತ್ತೆ. ಆದರೆ ಅವೆಲ್ಲಾ ಎಲ್ಲಿ ನಿರ್ಮಾಣ ಆಗುತ್ತಿದೆ ಎನ್ನುವುದೇ ಪ್ರಶ್ನೆಯಾಗಿದೆ. ಅಲ್ಲದೇ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಸಹ ಇದೇ ಜಿಲ್ಲೆಯವರು, ಗ್ರಾಮೀಣಾಭಿವೃದ್ಧಿ ಸಚಿವರ ಜಿಲ್ಲೆಯಲ್ಲಿಯೇ ಇಂತಹ ಸ್ಥಿತಿ ಇದ್ದರೆ ಇನ್ನೂ ರಾಜ್ಯದ ಇತರೆಡೆಗಳ ಸ್ಥಿತಿ ಹೇಗೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

  • ‘ಕ್ವಾರಂಟೈನ್ ಮಾಡೋದು ಅವಮಾನ ಅಲ್ಲ’- ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯಗೆ ತಿಳಿ ಹೇಳಿದ ಸಂಸದೆ ಸುಮಲತಾ

    ‘ಕ್ವಾರಂಟೈನ್ ಮಾಡೋದು ಅವಮಾನ ಅಲ್ಲ’- ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯಗೆ ತಿಳಿ ಹೇಳಿದ ಸಂಸದೆ ಸುಮಲತಾ

    ಮಂಡ್ಯ: ಕ್ವಾರಂಟೈನ್ ಮಾಡೋದು ಅವಮಾನ ಅಲ್ಲ ಎಂದು ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರಿಗೆ ಸಂಸದೆ ಸುಮಲತಾ ತಿಳಿ ಹೇಳಿದ್ದಾರೆ.

    ಆಶಾ ಕಾರ್ಯಕರ್ತೆಗೆ ಕ್ವಾರಂಟೈನ್ ಮಾಡಿದ್ದಾರೆ. ಮೊದಲೇ ಮನನೊಂದು ಆತ್ಮಹತ್ಯೆಗೆ ಆಶಾ ಕಾರ್ಯಕರ್ತೆ ಯತ್ನಿಸಿದ್ದರು. ಈಗ ಕ್ವಾರಂಟೈನ್ ಮಾಡಿ ಇನ್ನೊಂದು ಅವಮಾನ ಮಾಡಿದ್ದಾರೆ. ಕ್ವಾರಂಟೈನ್ ಮಾಡುವ ಅಗತ್ಯ ಏನಿತ್ತು? ನನಗೆ ಅವರು ಫೋನ್ ಮಾಡಿ ನೋವು ತೋಡಿಕೊಂಡಿದ್ದಾರೆ ಎಂದು ಶಾಸಕ ರವೀಂದ್ರ ಶೀಕಂಠಯ್ಯ ಅವರು ಮಂಡ್ಯದ ಜಿಲ್ಲಾ ಪಂಚಾಯತಿಯ ಸಭೆಯಲ್ಲಿ ಪ್ರಸ್ತಾಪಿಸಿದರು.

    ಈ ವೇಳೆ ಮಾತನಾಡಿದ ಸಂಸದೆ ಸುಮಲತಾ ಅವರು, ಕ್ವಾರಂಟೈನ್ ಮಾಡೋದು ಅವಮಾನ ಅಂತ ತಿಳಿದುಕೊಳ್ಳೋದು ತಪ್ಪು. ಅರಿವು ಮೂಡಿಸಬೇಕಾದ ನಮ್ಮಂತ ಜನಪ್ರತಿನಿಧಿಗಳೇ ಅವಮಾನ ಎಂದು ಹೇಳಿದು ಸರಿಯಲ್ಲ. ಅವಮಾನ ಅಂತ ಹೇಳಿದರೆ ಬಹಳಷ್ಟು ಜನ ಹೆದರುತ್ತಾರೆ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಸಭೆಯಲ್ಲಿ ಸಚಿವರಾದ ಡಾ.ಸುಧಾಕರ್, ನಾರಾಯಣಗೌಡ ಅವರು ಹಾಜರಿದ್ದರು.

    ಏನಿದು ಘಟನೆ: ಇತ್ತೀಚೆಗೆ ಮಂಡ್ಯ ಆಶಾ ಕಾರ್ಯಕರ್ತೆ ಮೇಲಾಧಿಕಾರಿಗಳು ಹಾಗೂ ಗ್ರಾಮ ಪಂಚಾಯ್ತಿ ಸದಸ್ಯನ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದರು. ಮಂಡ್ಯ ತಾಲೂಕಿನ ಕಾಗೇಹಳ್ಳ ದೊಡ್ಡಿ ಗ್ರಾಮದ ಅಂಗನವಾಡಿಯ ಆಶಾ ಕಾರ್ಯಕರ್ತೆ ಭಾಗ್ಯಮ್ಮ (45) ಆತ್ಮಹತ್ಯೆಗೆ ಯತ್ನಿಸಿದ್ದರು. ಮತದಾರರ ಪಟ್ಟಿಗೆ ಹೆಸರು ಸೇರಿಸುವ ಮತ್ತು ಪರಿಷ್ಕರಿಸುವ ಕೆಲಸಕ್ಕೆ ಭಾಗ್ಯಮ್ಮ ಅವರನ್ನು ನಿಯೋಜನೆ ಮಾಡಲಾಗಿತ್ತು. ಈ ವೇಳೆ ಗ್ರಾಮ ಪಂಚಾಯ್ತಿ ಸದಸ್ಯ ಅಕ್ರಮವಾಗಿ ಮತದಾರರ ಪಟ್ಟಿಗೆ ಸೇರಿಸುವಂತೆ ಒತ್ತಡ ಹೇರಿದ್ದರು. ಇದಕ್ಕೆ ಭಾಗ್ಯ ಅವರು ನಿರಾಕರಿಸಿದರು ಎನ್ನಲಾಗಿತ್ತು. ಬಳಿಕ ರಾಜಕೀಯ ಪ್ರಭಾವ ಬಳಸಿ ಭಾಗ್ಯಮ್ಮ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಈ ವಿಚಾರದಲ್ಲಿ ಮೇಲಾಧಿಕಾರಿಗಳು ಶಾಮೀಲಾಗಿ ಕಿರುಕುಳ ನೀಡುತ್ತಿದ್ದರು ಎಂದು ಭಾಗ್ಯಮ್ಮ ಹೇಳಿಕೊಂಡಿದ್ದರು ಎನ್ನಲಾಗಿತ್ತು. ಆತ್ಮಹತ್ಯೆ ಪ್ರತ್ನಿಸಿದ್ದ ಭಾಗ್ಯಮ್ಮ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗಿದ್ದರು. ಆದ್ದರಿಂದ ಅವರಿಗೆ ಮನೆಯಲ್ಲೇ ಉಳಿದುಕೊಳ್ಳುವಂತೆ ಕ್ವಾರಂಟೈನ್ ಮಾಡಲಾಗಿದೆ ಎಂದು ಶಾಸಕರು ಪ್ರಶ್ನಿಸಿದ್ದರು.

  • ಪದೇ ಪದೇ ನಮ್ಮ ಮನೆಗೆ ಯಾಕೆ ಬರ್ತಿರಿ: ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆಗೆ ಯತ್ನ

    ಪದೇ ಪದೇ ನಮ್ಮ ಮನೆಗೆ ಯಾಕೆ ಬರ್ತಿರಿ: ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆಗೆ ಯತ್ನ

    ವಿಜಯಪುರ: ಕೊರೊನಾ ಸಮೀಕ್ಷೆಗೆ ತೆರಳಿದ್ದ ಆಶಾ ಕಾರ್ಯಕರ್ತೆ ಮೇಲೆ ಮಹಿಳೆಯರು ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಹಚ್ಯಾಳ ಗ್ರಾಮದಲ್ಲಿ ನಡೆದಿದೆ.

    ಸಾವಿತ್ರಿ ಬಡಿಗೇರ್ ಆಶಾ ಕಾರ್ಯಕರ್ತೆ ಕೊರೊನಾ ಜಾಗೃತಿ ಮತ್ತು ಸಮೀಕ್ಷೆಗಾಗಿ ಹಚ್ಯಾಳ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಗ್ರಾಮದ ಕೆಲ ಮಹಿಳೆಯರು ಪದೇ ಪದೇ ನಮ್ಮ ಮನೆಗೆ ಹಾಗೂ ನಮ್ಮ ಕಾಲೋನಿಗೆ ಯಾಕೆ ಬರ್ತೀಯಾ ಎಂದು ಆಶಾ ಕಾರ್ಯಕರ್ತೆಗೆ ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ.

    ಮಹಿಳೆಯರು ಹಲ್ಲೆಗೆ ಯತ್ನಿಸುತ್ತಿದ್ದಂತೆ ಆತಂಕಗೊಂಡ ಆಶಾ ಕಾರ್ಯಕರ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ನಿರ್ಧರಿಸಿದ್ದಾರೆ.

  • ಆಶಾಕಾರ್ಯಕರ್ತೆಗೆ ಧಮ್ಕಿ ಪ್ರಕರಣ – ಆರೋಪಿಗಳ ಬಂಧನ

    ಆಶಾಕಾರ್ಯಕರ್ತೆಗೆ ಧಮ್ಕಿ ಪ್ರಕರಣ – ಆರೋಪಿಗಳ ಬಂಧನ

    ಮೈಸೂರು: ಆಶಾ ಕಾರ್ಯಕರ್ತೆಗೆ ಧಮ್ಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಖಲೀಲ್, ಮೆಹಬೂಬ್ ಹಾಗೂ ಜೀಸನ್ ಎಂದು ಗುರುತಿಸಲಾಗಿದೆ.

    ನಡೆದಿದ್ದೇನು..?
    ಕೊರೊನಾ ವೈರಸ್ ಭೀತಿಯಿಂದ ವೈದ್ಯರು ಹಾಗೂ ಆಶಾಕಾರ್ಯಕರ್ತೆಯರು ಮನೆ ಮನೆ ಸರ್ವೆ ಮಾಡುತ್ತಿದ್ದಾರೆ. ಹಾಗೆಯೇ ಮೈಸೂರಿನ ಬನ್ನಿಮಂಟಪ ಸರ್ಕಾರಿ ಆಸ್ಪತ್ರೆಯ ಆಶಾ ಕಾರ್ಯಕರ್ತೆ ಸುಮಯಾ ಫಿರ್ದೋಶ್ ಅವರು ಆಲೀಂ ನಗರಕ್ಕೆ ತೆರಳಿದ್ದರು. ಈ ವೇಳೆ ಸುಮಯಾ ಅವರು ಮಾಸ್ಕ್ ಹಾಕಿ, ಅಂತರ ಕಾಯ್ದುಕೊಳ್ಳಿ ಅಂತ ಬುದ್ಧಿವಾದ ಹೇಳಿದ್ದರು. ಇದರಿಂದ ಕೆರಳಿದ ಪುಂಡರು ಗಲಾಟೆ ಮಾಡಿದ್ದಾರೆ. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಆಶಾ ಕಾರ್ಯಕರ್ತೆ ಮೇಲೆ ಮುಗಿಬಿದ್ದಿದ್ದರು.

    ಈ ಕುರಿತು ಸುಮಯಾ ಅವರು ಎನ್ ಆರ್ ಠಾಣೆಗೆ ದೂರು ನೀಡಿದ್ದರು. ಸದ್ಯ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಈ ಸಂಬಂಧ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಅಲೀಂ ನಗರದಲ್ಲಿ ಸುಮಾಯಾ ಫಿರ್ದೋಶ್ ಎಂಬ ಆಶಾ ಕಾರ್ಯಕರ್ತೆಗೆ ದಮ್ಕಿ ಹಾಕಿದ್ದಾರೆ ಎಂಬ ಮಾಹಿತಿ ಇದೆ. ಈ ಬಗ್ಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಧಮ್ಕಿ ಹಾಕಿದ ಆರೋಪಿಗಳ ವಿರುದ್ದ ಎಫ್‍ಐಆರ್ ಹಾಕಲಾಗಿದೆ.

    ಕೊರೊನಾ ವಾರಿರ್ಯಸ್ ವಿರುದ್ಧ ಹೋರಾಡೋರಿಗೆ ತೊಂದರೆ ಕೊಟ್ಟರೆ ಕೇಸು ಗ್ಯಾರಂಟಿಯಾಗುತ್ತದೆ. ಉತ್ತರ ಪ್ರದೇಶ ಹಾಗೂ ಕೇರಳದ ಮಾದರಿಯ ಕಾನೂನು ಜಾರಿ ಮಾಡುವ ಚಿಂತನೆ ಮಾಡಿದ್ದೇವೆ. ಇಂದು ಸಂಜೆಯೋಳಗೆ ಈ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಅವರು ತಿಳಿಸಿದರು.

  • ಅಪಘಾತಗೊಂಡ ಮಗ ಮನೆಯಲ್ಲಿದ್ರೂ – ಜನರ ಹಿತ ಕಾಪಾಡಿ ಕರ್ತವ್ಯ ನಿಷ್ಠೆ ಮೆರೆಯುತ್ತಿರೋ ಆಶಾ ಕಾರ್ಯಕರ್ತೆ

    ಅಪಘಾತಗೊಂಡ ಮಗ ಮನೆಯಲ್ಲಿದ್ರೂ – ಜನರ ಹಿತ ಕಾಪಾಡಿ ಕರ್ತವ್ಯ ನಿಷ್ಠೆ ಮೆರೆಯುತ್ತಿರೋ ಆಶಾ ಕಾರ್ಯಕರ್ತೆ

    ಯಾದಗಿರಿ: ಮಗ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿ, ಚಿಕಿತ್ಸೆ ಪಡೆದು ಸದ್ಯ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ. ಆದರೂ ಆಶಾ ಕಾರ್ಯಕರ್ತೆಯೊಬ್ಬರು ತಮ್ಮ ಮಗನ ಆರೈಕೆ ಜೊತೆ ಕರ್ತವ್ಯ ಪ್ರಜ್ಞೆ ಮೆರೆಯುತ್ತಿದ್ದಾರೆ.

    ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕಾಟಮನಹಳ್ಳಿ ಆಶಾ ಕಾರ್ಯಕರ್ತೆ ದಾನಮ್ಮ ತನ್ನ ಕುಟುಂಬ ನೋವಿನಲ್ಲಿದ್ದರೂ ಜನರ ಸೇವೆ ಮಾಡುತ್ತಿದ್ದಾರೆ. ದಾನಮ್ಮ ಕೊರೊನಾ ಭೀತಿಯಿಂದ ಜಿಲ್ಲೆಗೆ ವಾಪಸಾಗಿರುವ ಕೂಲಿ ಕಾರ್ಮಿಕರಿಗೆ ಮತ್ತು ವಿದೇಶದಿಂದ ಬಂದವರಿಗೆ ತಪಾಸಣೆಗೆ ನಡೆಸಿ ವರದಿ ತಯಾರಿಸುತ್ತಿದ್ದಾರೆ. ಜೊತೆಗೆ ವಿವಿಧ ಹಳ್ಳಿಗಳಿಗೆ ತೆರಳಿ ಕೊರೊನಾ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.

    ಕಳೆದ ವಾರ ದಾನಮ್ಮರ ಮಗ ವಿಜಾಪುರದಿಂದ ಯಾದಗಿರಿಗೆ ಬೈಕಿನಲ್ಲಿ ಬರುತ್ತಿದ್ದ ವೇಳೆ, ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಕಲಬುರಗಿ ಖಾಸಗಿ ಆಸ್ಪತ್ರೆಗೆ ಸೇರಿದ್ದನು. ಸದ್ಯ ಸ್ವಲ್ಪ ಚೇತರಿಸಿಕೊಂಡಿರುವ ದಾನಮ್ಮನ ಮಗ ರಾಹುಲ್ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾನೆ. ಇಂತಹ ಸಮಯದಲೂ ತಮ್ಮ ವೃತ್ತಿಗೆ ಗೌರವ ಕೊಡುತ್ತಿರುವ ದಾನಮ್ಮ, ಮಗನ ಆರೈಕೆ ಜೊತೆಗೆ ಜನರ ಹಿತವನ್ನು ಸಹ ಕಾಯುತ್ತಿದ್ದಾರೆ. ದಾನಮ್ಮ ಕಾರ್ಯಕ್ಕೆ ಜಿಲ್ಲೆಯಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತದೆ.