Tag: Asha

  • ‘ಮಂತ್ರ ಮಾಂಗಲ್ಯ’ ಮದುವೆ ಮೂಲಕ ಮಾದರಿಯಾದ ನಿರ್ದೇಶಕ ಕೆ.ಎಂ. ರಘು

    ‘ಮಂತ್ರ ಮಾಂಗಲ್ಯ’ ಮದುವೆ ಮೂಲಕ ಮಾದರಿಯಾದ ನಿರ್ದೇಶಕ ಕೆ.ಎಂ. ರಘು

    ರಸಂಗ, ತರ್ಲೆ ವಿಲೇಜ್ , ದೊಡ್ಡಹಟ್ಟಿ ಬೋರೇಗೌಡ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿರುವ ಕೆ.ಎಂ.ರಘು ನಿನ್ನೆ ಮೈಸೂರಿನ ಕುಮಾರಬೀಡುವಿನಲ್ಲಿ ಕೆ.ಆರ್.ಆಶಾ ಜೊತೆ ಸಪ್ತಪದಿ ತುಳಿದಿದ್ದಾರೆ. ತಮ್ಮ ಆಶಯದಂತೆ ಅವರು ಮಂತ್ರ ಮಾಂಗಲ್ಯ ಮಾಡಿಕೊಂಡಿದ್ದಾರೆ. ಇದನ್ನೂ ಓದಿ : ಪ್ರಭುದೇವ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾಗೆ ಸಂದೇಶ್ ನಾಗರಾಜ್ ನಿರ್ಮಾಪಕ

    ಬೆಂಗಳೂರಿ ನಿವಾಸಿ ಕೆ.ಆರ್. ಆಶಾ ಅವರ ಜೊತೆ ನಿನ್ನೆ (ಮೇ 29) ಮಂತ್ರ ಮಾಂಗಲ್ಯ ಮಾಡಿಕೊಂಡಿರುವ ರಘುವಿಗೆ ಕನ್ನಡದ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಮಂತ್ರ ಮಾಂಗಲ್ಯ ಬೋಧನೆ ಮಾಡಿಸಿದರೆ, ಎರಡು ಕುಟುಂಬ ಸದಸ್ಯರು ಮತ್ತು ಆಪ್ತರು ಈ ಸರಳ ವಿವಾಹ ಮಹೋತ್ಸವಕ್ಕೆ ಸಾಕ್ಷಿಯಾಗಿದ್ದಾರೆ. ಇದನ್ನೂ ಓದಿ : ಅಕ್ಟೋಬರ್ 3ಕ್ಕೆ ಅಭಿಷೇಕ್ ಅಂಬರೀಶ್ ಹೊಸ ಸಿನಿಮಾಗೆ ಮುಹೂರ್ತ

    ಬೆಂಗಳೂರಿನ ಪಿಇಎಸ್ ಕಾಲೇಜು ಉಪನ್ಯಾಸಕಿ ಆಗಿರುವ ಆಶಾ ಕೂಡ ಕುವೆಂಪು ಅವರ ತತ್ವಗಳಲ್ಲಿ ನಂಬಿಕೆ ಇಟ್ಟವರು. ಹಾಗಾಗಿ ರಘು ಮತ್ತು ಆಶಾ ತಮ್ಮ ಕುಟುಂಬಗಳನ್ನು ಒಪ್ಪಿಸಿ, ಮಂತ್ರ ಮಾಂಗಲ್ಯ ಮಾಡಿಕೊಂಡಿದ್ದಾರೆ. ಖುಷಿಯಿಂದಲೇ ಎರಡು ಕುಟುಂಬಗಳು ಸತಿಪತಿಗೆ ಹಾರೈಸಿ, ಆಶೀರ್ವದಿಸಿದ್ದಾರೆ.

    ಹಲವಾರು ಚಿತ್ರಗಳನ್ನು ನಿರ್ದೇಶನ ಮಾಡಿರುವ ರಘು, ಈ ವರ್ಷ ಬೆಂಗಳೂರಿನ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ದೊಡ್ಡ ಹಟ್ಟಿ ಬೋರೇಗೌಡ ಚಿತ್ರಕ್ಕಾಗಿ ಪ್ರಶಸ್ತಿ ಕೂಡ ಪಡೆದಿದದ್ಆರೆ. ಪರಸಂಗ ಮತ್ತು ತರ್ಲೆ ವಿಲೇಜ್ ಚಿತ್ರಗಳು ಪ್ರೇಕ್ಷಕರ ಗಮನ ಸೆಳೆದಿವೆ.

  • ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಅಮೆರಿಕ ನೆರವಿನಿಂದ ಮಹಿಳಾ-ಮಕ್ಕಳ ಆರೋಗ್ಯ ಕೇಂದ್ರ

    ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಅಮೆರಿಕ ನೆರವಿನಿಂದ ಮಹಿಳಾ-ಮಕ್ಕಳ ಆರೋಗ್ಯ ಕೇಂದ್ರ

    ಬೆಂಗಳೂರು: ಅಮೆರಿಕದ ಅಂತರರಾಷ್ಟ್ರೀಯ ಅಭಿವೃದ್ಧಿ ನಿಧಿಯ(USAID) ಇಂಡಿಯಾ ಮಿಷನ್ ನಿರ್ದೇಶಕಿ ವೀಣಾ ರೆಡ್ಡಿ ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಆರೋಗ್ಯ ಕೇಂದ್ರ ಹಾಗೂ ಸಂಶೋಧನಾ ಕೇಂದ್ರವನ್ನು ವರ್ಚುಯಲ್ ಆಗಿ ಉದ್ಘಾಟಿಸಿದರು.

    Veena Reddy becomes first Indian-American to lead USAID-India

    ಈ ಕುರಿತು ವೀಣಾ ರೆಡ್ಡಿ ಮಾತನಾಡಿದ್ದು, ಬ್ಯಾಪ್ಟಿಸ್ಟ್ ಆಸ್ಪತ್ರೆಯು ಲಾಭದ ಉದ್ದೇಶವಿಲ್ಲದೇ ಯಾವುದೇ ಧರ್ಮ, ಜನಾಂಗ ಅಥವಾ ಆರ್ಥಿಕ ಹಿನ್ನೆಲೆಯ ಭೇದಭಾವವಿಲ್ಲದೇ ಎಲ್ಲರಿಗೂ ಆರೋಗ್ಯ ಸೇವೆ ಒದಗಿಸುತ್ತಿದೆ. ಅದರ ಮೌಲ್ಯಗಳು ಪ್ರಪಂಚದಾದ್ಯಂತ ಅಮೆರಿಕ ಅಂತರರಾಷ್ಟ್ರೀಯ ನಿಧಿ ನಡೆಸುತ್ತಿರುವ ಕೆಲಸಗಳೊಂದಿಗೆ ಹೊಂದಾಣಿಕೆಯಾಗುತ್ತಿದೆ ಎಂದು ಶ್ಲಾಘಿಸಿದರು. ಇದನ್ನೂ ಓದಿ: ಕೊಹ್ಲಿ ಯಾವುದೇ ವಿವಾದದಲ್ಲಿರಲು ಬಯಸುವುದಿಲ್ಲ: ಕೊಹ್ಲಿ ಬಾಲ್ಯದ ಕೋಚ್

    ‘ಅಮೆರಿಕನ್ ಸ್ಕೂಲ್ಸ್ ಅಂಡ್ ಹಾಸ್ಪಿಟಲ್ಸ್ ಅಬ್ರಾಡ್'(ಆಶಾ) ಯೋಜನೆಯಡಿ ಈ ನೆರವು ನೀಡಲಾಗುತ್ತಿದೆ. ಆಶಾ ಯೋಜನೆಯಡಿ 1979ರಿಂದ ಈವರೆಗೆ ಭಾರತದಲ್ಲಿ 28 ದಶಲಕ್ಷ ಡಾಲರ್ ನೆರವು ನೀಡಲಾಗಿದೆ ಎಂದು ತಿಳಿಸಿದರು.

    ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ‘ಆಶಾ’ ಯೋಜನೆ ನೆರವಿನಿಂದ ಮಹಿಳೆಯರು ಮತ್ತು ಮಕ್ಕಳಿಗಾಗಿ 100 ಹೆಚ್ಚುವರಿ ಹಾಸಿಗೆಗಳು ಹಾಗೂ 220ಕ್ಕೂ ಹೆಚ್ಚು ನರ್ಸಿಂಗ್ ವಿದ್ಯಾರ್ಥಿಗಳಿಗಾಗಿ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ವಿವರಿಸಿದರು.

    USAID Mission Director Veena Reddy Visits Hyd | INDToday

    ಅಮೆರಿಕದ ಬೇಲರ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಈ ಯೋಜನೆ ಕಾರ್ಯಗತಗೊಳಿಸಲಾಗುತ್ತಿದೆ ಎಂದ ಬೇಲರ್ ವಿವಿಯ ಡಾ.ಗಾರ್ನರ್ ಅವರಿಗೂ ಧನ್ಯವಾದ ಸಲ್ಲಿಸಿದರು. ಇದನ್ನೂ ಓದಿ: ‘ಪುಷ್ಪಾ’ ಸಿನಿಮಾಗೆ ಮುದ್ದಾದ ಗೌರವ ಸಲ್ಲಿಸಿದ ಅಮುಲ್

    ಪ್ರಯಾಣ ಮತ್ತು ಸಭೆ ನಡೆಸಲು ಸುರಕ್ಷಿತ ಸನ್ನಿವೇಶ ನಿರ್ಮಾಣವಾದಾಗ ಖುದ್ದಾಗಿ ಈ ಕೇಂದ್ರಕ್ಕೆ ಭೇಟಿ ನೀಡುವುದಾಗಿ ಭರವಸೆ ನೀಡಿದರು.