Tag: Ash Barty

  • 25ರ ಹರೆಯದಲ್ಲೇ ಟೆನ್ನಿಸ್‍ಗೆ ವಿದಾಯ ಘೋಷಿಸಿದ ವಿಶ್ವ ನಂಬರ್ 1 ಆಟಗಾರ್ತಿ ಆಶ್ ಬಾರ್ಟಿ

    25ರ ಹರೆಯದಲ್ಲೇ ಟೆನ್ನಿಸ್‍ಗೆ ವಿದಾಯ ಘೋಷಿಸಿದ ವಿಶ್ವ ನಂಬರ್ 1 ಆಟಗಾರ್ತಿ ಆಶ್ ಬಾರ್ಟಿ

    ಮೆಲ್ಬರ್ನ್: ವಿಶ್ವ ನಂಬರ್ 1 ಟೆನ್ನಿಸ್ ಆಟಗಾರ್ತಿ ಆಸ್ಟ್ರೇಲಿಯಾದ ಆಶ್ ಬಾರ್ಟಿ 25ರ ಹರೆಯದಲ್ಲೇ ಟೆನ್ನಿಸ್‍ಗೆ ವಿದಾಯ ಘೋಷಿಸಿದ್ದಾರೆ.

    ಇತ್ತಿಚೇಗೆ ತವರಿನಲ್ಲಿ ನಡೆದ ಆಸ್ಟ್ರೇಲಿಯಾ ಓಪನ್ ಟೆನ್ನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಸಿದ್ದರು. ಈ ಮೂಲಕ 44 ವರ್ಷಗಳ ಬಳಿಕ ತವರಿನ ಪ್ರಶಸ್ತಿ ಬರವನ್ನು ನೀಗಿಸಿದ್ದರು. ವೃತ್ತಿಪರ ಟೆನ್ನಿಸ್‍ನಲ್ಲಿ ಉತ್ತಂಗದಲ್ಲಿದ್ದ ಬಾರ್ಟಿ ಇದೀಗ ವಿದಾಯ ಘೋಷಿಸಿ ಟೆನ್ನಿಸ್ ಅಂಗಳದಿಂದ ದೂರಸರಿದಿದ್ದಾರೆ. ಇದನ್ನೂ ಓದಿ: 44 ವರ್ಷಗಳ ಬಳಿಕ ಆಸ್ಟ್ರೇಲಿಯಾ ಓಪನ್ ಗೆದ್ದು ತವರಿನ ಪ್ರಶಸ್ತಿ ಬರ ನೀಗಿಸಿದ ಆಶ್ ಬಾರ್ಟಿ

    ಈ ಬಗ್ಗೆ ವೀಡಿಯೋ ಮೂಲಕ ಸ್ಪಷ್ಟಪಡಿಸಿರುವ ಬಾರ್ಟಿ, ಇಂದು ನಾನು ವೃತ್ತಿಪರ ಟೆನ್ನಿಸ್‍ಗೆ ವಿದಾಯ ಘೋಷಿಸಲು ನಿರ್ಧರಿಸಿದ್ದು, ತುಂಬಾ ಭಾವುಕಳಾಗಿದ್ದೇನೆ. ಈ ನಿರ್ಧಾರ ತೆಗೆದುಕೊಳ್ಳುವ ಮುನ್ನ ತುಂಬಾ ಯೋಚನೆ ಮಾಡಿ ಈ ತೀರ್ಮಾನಕ್ಕೆ ಬಂದಿದ್ದೇನೆ. ನನಗೆ ಕ್ರೀಡೆ ಎಲ್ಲವನ್ನು ಕೊಟ್ಟಿದೆ. ತುಂಬಾ ಹೆಮ್ಮೆಯಿಂದ ಈ ಹಿಂದಿನ ಸುಂದರ ಕ್ಷಣಗಳನ್ನು ನೆನಪಿಸಿಕೊಂಡು ಎಲ್ಲರಿಗೂ ಧನ್ಯವಾದ ತಿಳಿಸುತ್ತಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಐಪಿಎಲ್‍ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿ

     

    View this post on Instagram

     

    A post shared by Ash Barty (@ashbarty)

    2022ನೇ ವರ್ಷದ ಮೊದಲ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಜಯಿಸಿದ್ದ ಆಶ್ ಬಾರ್ಟಿ ಈ ಹಿಂದೆ 2019ರಲ್ಲಿ ಫ್ರೆಂಚ್ ಓಪನ್, 2021ರಲ್ಲಿ ವಿಂಬಲ್ಡ್ ಪ್ರಶಸ್ತಿ ಗೆದ್ದು, ತಮ್ಮ ವೃತ್ತಿ ಜೀವನದಲ್ಲಿ 3 ಗ್ರ್ಯಾನ್ ಸ್ಲಾಂ ಪ್ರಶಸ್ತಿಯನ್ನು ಎತ್ತಿ ಹಿಡಿದಿದ್ದರು. ಬಾರ್ಟಿ ಈ ಹಿಂದೆ ಟೆನ್ನಿಸ್‍ನಿಂದ ದೂರ ಸರಿದು ಕ್ರಿಕೆಟ್ ಆಟಗಾರ್ತಿಯಾಗಿದ್ದರು. ಆಸ್ಟ್ರೇಲಿಯಾದ ಬಿಗ್‍ಬಾಶ್ ಮಹಿಳಾ ಕ್ರಿಕೆಟ್ ಟೂರ್ನಿಯಲ್ಲಿ ಆಡಿ ಮಿಂಚಿದ್ದರು. ಬಳಿಕ ಟೆನಿಸ್ ಕಡೆ ಮತ್ತೆ ಆಕರ್ಷಿತರಾದ ಬಾರ್ಟಿ ಟೆನಿಸ್‍ನಲ್ಲಿ ಸಾಧನೆಯ ಉತ್ತಂಗದಲ್ಲಿದ್ದ ವೇಳೆಯೆ ಟೆನ್ನಿಸ್‍ಗೆ ವಿದಾಯ ಘೋಷಿಸಿದ್ದಾರೆ.

     

  • 44 ವರ್ಷಗಳ ಬಳಿಕ ಆಸ್ಟ್ರೇಲಿಯಾ ಓಪನ್ ಗೆದ್ದು ತವರಿನ ಪ್ರಶಸ್ತಿ ಬರ ನೀಗಿಸಿದ ಆಶ್ ಬಾರ್ಟಿ

    44 ವರ್ಷಗಳ ಬಳಿಕ ಆಸ್ಟ್ರೇಲಿಯಾ ಓಪನ್ ಗೆದ್ದು ತವರಿನ ಪ್ರಶಸ್ತಿ ಬರ ನೀಗಿಸಿದ ಆಶ್ ಬಾರ್ಟಿ

    ಮೆಲ್ಬರ್ನ್: ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಆಸ್ಟ್ರೇಲಿಯಾದ ಆಟಗಾರ್ತಿ ಆಶ್ ಬಾರ್ಟಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ 44 ವರ್ಷಗಳ ತವರಿನ ಪ್ರಶಸ್ತಿ ಬರವನ್ನು ನೀಗಿಸಿದ್ದಾರೆ.

    2022ನೇ ವರ್ಷದ ಮೊದಲ ಗ್ರ್ಯಾನ್ ಸ್ಲಾಂ ಪ್ರಶಸ್ತಿಗಾಗಿ ನಡೆದ ಫೈನಲ್ ಕಾದಾಟದಲ್ಲಿ ಆಶ್ ಬಾರ್ಟಿ ಎದುರಿಸಿದ್ದು ಅಮೆರಿಕಾದ ಡೇನಿಯಲ್ ಕಾಲಿನ್ಸ್‌ರನ್ನು. ಇಬ್ಬರು ಆಟಗಾರ್ತಿಯರ ಮಧ್ಯೆ ನಡೆದ ಜಿದ್ದಾಜಿದ್ದಿನ ಕಾದಾಟದಲ್ಲಿ ಆಶ್ ಬಾರ್ಟಿ 6-3, 7-6(7-2) ಸೆಟ್‍ಗಳಿಂದ ಗೆದ್ದು 1978ರ ಬಳಿಕ ಆಸ್ಟ್ರೇಲಿಯಾಗೆ ತವರಿನ ಪ್ರಶಸ್ತಿಯನ್ನು ತೊಡಿಸಿದ್ದಾರೆ. ಇದನ್ನೂ ಓದಿ: ಲೆಜೆಂಡ್ಸ್ ಕ್ರಿಕೆಟ್ ಲೀಗ್‍ನಲ್ಲಿ ಗಮನಸೆಳೆದ ಮಹಿಳಾ ಅಂಪೈರ್

    ಆಶ್ ಬಾರ್ಟಿ, 1980 ರಲ್ಲಿ ವೆಂಡಿ ಟರ್ನ್‍ಬುಲ್ ನಂತರ ಆಸ್ಟ್ರೇಲಿಯನ್ ಓಪನ್‍ನ ಸಿಂಗಲ್ಸ್ ಫೈನಲ್‍ಗೆ ಪ್ರವೇಶಿಸಿದ ಮೊದಲ ಆಸ್ಟ್ರೇಲಿಯನ್ ಮಹಿಳೆ ಎನಿಸಿಕೊಂಡಿದ್ದರು. ಈಗ 1978ರಲ್ಲಿ ಕ್ರಿಸ್ ಓನೀಲ್ ನಂತರ ಮೊದಲ ಆಸ್ಟ್ರೇಲಿಯನ್ ಚಾಂಪಿಯನ್ ಪ್ರಶಸ್ತಿ ಗೆದ್ದ ಆಟಗಾರ್ತಿ ಎಂಬ ಸಾಧನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮೂರು ಪ್ರತಿಷ್ಠಿತ ಪ್ರಶಸ್ತಿಯನ್ನು ಜಯಿಸಿದ ಆಟಗಾರ್ತಿಯಾಗಿ ಮೂಡಿಬಂದಿದ್ದು, ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ಜೊತೆಗೆ ಈ ಹಿಂದೆ 2019ರಲ್ಲಿ ಫ್ರೆಂಚ್ ಓಪನ್, 2021ರಲ್ಲಿ ವಿಂಬಲ್ಡ್ ಪ್ರಶಸ್ತಿ ಗೆದ್ದು, ತಮ್ಮ ವೃತ್ತಿ ಜೀವನದಲ್ಲಿ 3ನೇ ಗ್ರ್ಯಾನ್ ಸ್ಲಾಂ ಪ್ರಶಸ್ತಿಯನ್ನು ಎತ್ತಿ ಹಿಡಿದಿದ್ದಾರೆ. ಇದನ್ನೂ ಓದಿ: ಹಾರಿದವ ಒಬ್ಬ, ಹಿಡಿದವ ಇನ್ನೊಬ್ಬ – ಮ್ಯಾಕ್ಸ್‌ವೆಲ್‌ ಕ್ಯಾಚ್ ಕಂಡು ದಂಗಾದ ಫೀಲ್ಡರ್

    ಬಾರ್ಟಿ ಈ ಹಿಂದೆ ಟೆನಿಸ್‍ನಿಂದ ದೂರ ಸರಿದು ಕ್ರಿಕೆಟ್ ಆಟಗಾರ್ತಿಯಾಗಿದ್ದರು. ಆಸ್ಟ್ರೇಲಿಯಾದ ಬಿಗ್‍ಬಾಶ್ ಮಹಿಳಾ ಕ್ರಿಕೆಟ್ ಟೂರ್ನಿಯಲ್ಲಿ ಆಡಿ ಮಿಂಚಿದ್ದರು. ಬಳಿಕ ಟೆನಿಸ್ ಕಡೆ ಮತ್ತೆ ಆಕರ್ಷಿತರಾದ ಬಾರ್ಟಿ ಟೆನಿಸ್‍ನಲ್ಲಿ ಸಾಧನೆಯ ಉತ್ತಂಗದಲ್ಲಿದ್ದಾರೆ.