Tag: asaram bapu

  • ಅತ್ಯಾಚಾರ ಕೇಸ್‌ – ಸ್ವಯಂ ಘೋಷಿತ ದೇವಮಾನವ ಅಸರಾಂಗೆ ಮಧ್ಯಂತರ ಜಾಮೀನು

    ಅತ್ಯಾಚಾರ ಕೇಸ್‌ – ಸ್ವಯಂ ಘೋಷಿತ ದೇವಮಾನವ ಅಸರಾಂಗೆ ಮಧ್ಯಂತರ ಜಾಮೀನು

    ನವದೆಹಲಿ/ಜೈಪುರ: ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸ್ವಯಂ ಘೋಷಿತ ದೇವಮಾನವ ಅಸಾರಾಂಗೆ (Asaram Bapu) ವೈದ್ಯಕೀಯ ಚಿಕಿತ್ಸೆಗಾಗಿ ರಾಜಸ್ಥಾನ ಹೈಕೋರ್ಟ್ (Rajasthan High Court) ಆರು ತಿಂಗಳುಗಳ ಕಾಲ ಮಧ್ಯಂತರ ಜಾಮೀನು (Interim Bail) ನೀಡಿದೆ.

    ಪ್ರಕರಣದ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸಂಜೀವ್ ಪ್ರಕಾಶ್ ಶರ್ಮಾ ಅವರ ವಿಭಾಗೀಯ ಪೀಠ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಸರಾಂ ಅವರ ಪ್ರಸ್ತುತ ಆರೋಗ್ಯ ಸ್ಥಿತಿಯನ್ನು ಉಲ್ಲೇಖಿಸಿ ನಿಯಮಿತ ಜಾಮೀನು ಮಂಜೂರು ಮಾಡಿತು. ಇದನ್ನೂ ಓದಿ: ಕ್ವಾಂಟಮ್‌ ಸಿಟಿ ಅಭಿವೃದ್ಧಿ, ಸಹಭಾಗಿತ್ವಕ್ಕೆ ಸ್ವಿಟ್ಜರ್ಲೆಂಡ್‌ ಕಂಪನಿ, ಸಂಶೋಧನಾ ಸಂಸ್ಥೆಗಳ ಒಲವು: ಸಚಿವ ಬೋಸರಾಜು

    ಆಗಸ್ಟ್ 2013ರಿಂದ ಅಸಾರಾಂ ಬಾಪು ಜೈಲಿನಲ್ಲಿದ್ದಾರೆ. ಶಾಲಾ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಬಂಧನಕ್ಕೊಳಗಾದರು. ಬಾಲಕಿಯ ಪೋಷಕರು ಅವರ ಭಕ್ತರಾಗಿದ್ದು, ಪೊಲೀಸರಿಗೆ ದೂರು ನೀಡಿದ ನಂತರ ಬಂಧನ ಮಾಡಲಾಯ್ತು. ಎರಡು ತಿಂಗಳ ನಂತರ, ಗುಜರಾತ್‌ನ ಸೂರತ್ ಆಶ್ರಮದಲ್ಲಿ ಇಬ್ಬರು ಸಹೋದರಿಯರ ಮೇಲೆ ಅತ್ಯಾಚಾರ ಆರೋಪದಲ್ಲಿ ಅಸಾರಾಂ ಮತ್ತು ಅವರ ಮಗ ನಾರಾಯಣ್ ಸಾಯಿ ವಿರುದ್ಧ ಪ್ರಕರಣ ದಾಖಲಾಯಿತು. ಈ ಪ್ರಕರಣಗಳಲ್ಲಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇದನ್ನೂ ಓದಿ: ಕಾಗಿನೆಲೆ ಅಭಿವೃದ್ಧಿಗಾಗಿ 34 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಮಂಜೂರಾತಿ

    ಈ ವರ್ಷ ಜನವರಿಯಲ್ಲಿ ಸುಪ್ರೀಂ ಕೋರ್ಟ್ ಅಸಾರಾಂಗೆ ವೈದ್ಯಕೀಯ ಆಧಾರದ ಮೇಲೆ ಮಾರ್ಚ್ ಅಂತ್ಯದವರೆಗೆ ಮಧ್ಯಂತರ ಜಾಮೀನು ನೀಡಿತ್ತು. ನ್ಯಾಯಮೂರ್ತಿಗಳಾದ ಎಂ.ಎಂ. ಸುಂದ್ರೇಶ್ ಮತ್ತು ರಾಜೇಶ್ ಬಿಂದಾಲ್ ಅವರ ಪೀಠ ಈ ಆದೇಶ ನೀಡಿತ್ತು. ಮಧ್ಯಂತರ ಜಾಮೀನಿನ ಮೇಲೆ ಹೊರಗಿರುವಾಗ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಲು ಅಥವಾ ಅವರ ಅನುಯಾಯಿಗಳನ್ನು ಭೇಟಿ ಮಾಡಲು ಪ್ರಯತ್ನಿಸಬಾರದು ಎಂದು ಆದೇಶಿಸಿತು. ಇದನ್ನೂ ಓದಿ: ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ಬಗ್ಗೆ ಮಾತಾಡದೇ ಬಾಯಿಮುಚ್ಚಿಕೊಂಡು ಇರ್ಬೇಕು: ಬೋಸರಾಜು

    ಅಸಾರಾಂ ಬಾಪು ಹೃದಯ ಸಂಬಂಧಿ ಸಮಸ್ಯೆಗಳು, ಇತರ ವಯೋಸಹಜ ರೋಗಗಳಿಂದ ಬಳಲುತ್ತಿದ್ದಾರೆ. ಜೈಲಿನಲ್ಲಿ ಸರಿಯಾದ ಚಿಕಿತ್ಸೆ ಸಿಗದಿರುವುದು ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಉತ್ತಮ ಆರೈಕೆ ಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಹೈಕೋರ್ಟ್ ಈ ಆಧಾರಗಳನ್ನು ಪರಿಗಣಿಸಿ ಆರು ತಿಂಗಳ ಜಾಮೀನು ನೀಡಿದೆ. ಇದನ್ನೂ ಓದಿ: ನಾವು ಮಾತಾಡಿದಷ್ಟು ಪಕ್ಷಕ್ಕೆ ಡ್ಯಾಮೇಜ್, ಸೈಲೆಂಟ್ ಆಗಿ ಇರದಿದ್ರೆ ವಿಪಕ್ಷಗಳಿಗೆ ಆಹಾರ ಆಗ್ತೀವಿ: ರಾಮಲಿಂಗಾ ರೆಡ್ಡಿ

  • 2013ರ ರೇಪ್‌ಕೇಸ್‌: ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ

    2013ರ ರೇಪ್‌ಕೇಸ್‌: ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ

    ಗಾಂಧಿನಗರ: 2013ರ ಅತ್ಯಾಚಾರ ಪ್ರಕರಣದರಲ್ಲಿ ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪುಗೆ (81) (Asaram Bapu) ಗುಜರಾತ್‌ನ ಸೆಷನ್ಸ್ ನ್ಯಾಯಾಲಯವು (Gujarat Sessions Court) ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

    ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಡಿ.ಕೆ. ಸೋನಿ (DK Soni) ಅವರು ವಾದ-ವಿವಾದ ಆಲಿಸಿದ ನಂತರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಇದನ್ನೂ ಓದಿ: ವಿಸ್ತಾರ ವಿಮಾನದಲ್ಲಿ ಅರೆಬೆತ್ತಲಾಗಿ ಓಡಾಡಿದ ಮಹಿಳೆ – ಗಲಾಟೆ ಮಾಡಿ ಸಿಬ್ಬಂದಿ ಮೇಲೆ ಹಲ್ಲೆ

    2013ರಲ್ಲಿ ತನ್ನ ಶಿಷ್ಯೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣದಲ್ಲಿ 81 ವರ್ಷದ ಅಸಾರಾಂ ಬಾಪುವನ್ನು ದೋಷಿ ಎಂದು ಶಿಕ್ಷೆ ವಿಧಿಸಲಾಗಿದೆ. ಇದನ್ನೂ ಓದಿ: ಹುಡುಗಿಯರೇ.. ಮದುವೆಗೂ ಮುನ್ನ ಭಾವಿ ಪತಿಗೆ ಈ ಪ್ರಶ್ನೆ ಕೇಳೋದನ್ನ ಮರಿಬೇಡಿ

    ಸೋಮವಾರ ವಿಚಾರಣೆ ನಡೆಸಿದ್ದ ಗಾಂಧಿನಗರದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 2013ರ ಈ ಪ್ರಕರಣದಲ್ಲಿ ಅಸಾರಾಂ ಬಾಪುವಿನ ಪತ್ನಿ ಸೇರಿ ಪ್ರಕರಣದ ಆರೋಪಿಗಳಾಗಿದ್ದ 6 ಮಂದಿಯನ್ನ ಖುಲಾಸೆಗೊಳಿಸಿತು. ಪೂರಕ ಸಾಕ್ಷ್ಯಾಧಾರ ಇಲ್ಲದ ಕಾರಣ ಐವರು ಆರೋಪಿಗಳನ್ನು ಖುಲಾಸೆಗೊಳಿಸಿತು. ಇದರಲ್ಲಿ ಅಸಾರಾಂ ಬಾಪುವಿನ ಪತ್ನಿಯೂ ಸೇರಿದ್ದಾರೆ.

    ನಂತರ ನ್ಯಾಯಾಧೀಶರಾದ ಡಿ.ಕೆ ಸೋನಿ ಅವರು, ಐಪಿಸಿ (IPC) ಸೆಕ್ಷನ್ 376 (2)(ಸಿ) (ಬಲವಂತವಾಗಿ ಸಂಭೋಗ ಹಾಗೂ ತನ್ನ ಅಭಿರಕ್ಷೆಯಲ್ಲಿರುವ ಸ್ತ್ರೀಯೊಡನೆ ಸಂಭೋಗ ಮಾಡುವುದು), 377 (ಅಸ್ವಾಭಾವಿಕ ಲೈಂಗಿಕತೆ), 342 (ಅಕ್ರಮ ಬಂಧನಕ್ಕಾಗಿ ದಂಡನೆ), 506 (2) (ಅಪರಾಧಿಕ ಭಯೋತ್ಪಾದಕರಿಗೆ ದಂಡನೆ), 354 (ಮಹಿಳೆಯನ್ನು ಮಾನಭಂಗ ಮಾಡುವ ಉದ್ದೇಶದಿಂದ ಅವಳ ಮೇಲೆ ಹಲ್ಲೆ), 357 (ಒಬ್ಬ ವ್ಯಕ್ತಿಯನ್ನು ಅಕ್ರಮವಾಗಿ ಬಂಧನದಲ್ಲಿಡುವ ಪ್ರಯತ್ನದಲ್ಲಿ ಅವನ ಮೇಲೆ ಹಲ್ಲೆ) ಅಡಿಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

    ಅಸಾರಾಂ ಬಾಪು ಈಗಾಗಲೇ ಎರಡು ಪ್ರತ್ಯೇಕ ಲೈಂಗಿಕ ಅಪರಾಧ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ. 2013 ರಲ್ಲಿ ಅವನನ್ನು ಇಂದೋರ್‌ನಿಂದ ಕರೆತಂದು 2018 ರಿಂದ ಜೋಧ್‌ಪುರದ ಜೈಲಿನಲ್ಲಿ ಇರಿಸಲಾಗಿದೆ.

    2013ರಲ್ಲಿ ರಾಜಸ್ಥಾನದ ತನ್ನ ಆಶ್ರಮದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಇನ್ನೊಂದು ಪ್ರಕರಣದಲ್ಲಿ ಇದೀಗ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜೀವಾವಧಿ ಶಿಕ್ಷೆ ಕಡಿಮೆಗೊಳಿಸಿ: ರಾಜ್ಯಪಾಲರ ಮೊರೆ ಹೋದ ಆಸಾರಾಮ್ ಬಾಪು

    ಜೀವಾವಧಿ ಶಿಕ್ಷೆ ಕಡಿಮೆಗೊಳಿಸಿ: ರಾಜ್ಯಪಾಲರ ಮೊರೆ ಹೋದ ಆಸಾರಾಮ್ ಬಾಪು

    ಜೋಧಪುರ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಸ್ವಘೋಷಿತ ದೇವಮಾನ ಆಸಾರಾಮ್ ಬಾಪು ತಮ್ಮ ಜೀವಾವಧಿ ಶಿಕ್ಷೆಯನ್ನು ಕಡಿಮೆಗೊಳಿಸುವಂತೆ ರಾಜಸ್ಥಾನ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದಾರೆ.

    ಸ್ವಘೋಷಿತ ದೇವಮಾನವನೆಂದೇ ಹೆಸರು ಮಾಡಿದ್ದ ರಾಜಸ್ಥಾನದ ಆಸಾರಾಮ್ ಬಾಪು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸುಧೀರ್ಘ ವಿಚಾರಣೆ ನಡೆಸಿದ ಜೋಧಪುರ ನ್ಯಾಯಾಲಯ ಏಪ್ರಿಲ್ 25 ರಂದು ಜೀವಾವಧಿ ಶಿಕ್ಷೆ ಘೋಷಿಸಿತ್ತು.

    ಜೋಧಪುರ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿದ ಆಸಾರಾಮ್ ಬಾಪು ಜುಲೈ 2 ರಂದು ಹೈಕೋರ್ಟ್‍ಗೆ ಮೆಟ್ಟಿಲೇರಿದ್ದರು. ಆದರೆ ಇಲ್ಲಿಯವರೆಗೂ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತುಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ನೀಡಿರುವ ಜೀವಾವಧಿ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡುವಂತೆ ರಾಜಸ್ಥಾನದ ರಾಜ್ಯಪಾಲರ ಮೊರೆ ಹೋಗಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರು ಜೋಧಪುರ್ ಬಂಧಿಖಾನೆ ವರಿಷ್ಠಾಧಿಕಾರಿಯಾದ ಕೈಲಾಶ್ ತ್ರಿವೇದಿಯವರು, ಆಸಾರಾಮ್ ಬಾಪುರವರು ತಮ್ಮ ಶಿಕ್ಷೆಯ ಪ್ರಮಾಣವನ್ನು ಕಡಿಮೆಮಾಡುವಂತೆ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಿದ್ದು, ಮನವಿಯಲ್ಲಿ ವಯೋಸಹಜ ಜೀವನ ನಡೆಸುತ್ತಿರುವ ನನಗೆ ನೀಡಿರುವ ಜೀವಾವಧಿ ಶಿಕ್ಷೆಯ ಪ್ರಮಾಣವನ್ನು ಕಡಿಮೆಗೊಳಿಸುವಂತೆ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಹೇಳಿದ್ದಾರೆ.

    ಮಧ್ಯಪ್ರದೇಶದ ಚಿಂದ್ವಾರಾದಲ್ಲಿರುವ ಆಶ್ರಮದಲ್ಲಿ ಓದುತ್ತಿದ್ದ 16 ವರ್ಷದ ಬಾಲಕಿಯನ್ನು ಜೋಧಪುರದ ಬಳಿಯಿರುವ ಆಶ್ರಮದಲ್ಲಿ ಆಸಾರಾಮ ಬಾಪು 2013ರ ಆಗಸ್ಟ್ 15 ರಂದು ಅತ್ಯಾಚಾರ ಎಸಗಿದ್ದಕ್ಕೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಸಾರಾಂಗೆ ಜೀವವಾಧಿ ಶಿಕ್ಷೆ, ನನಗೆ ನ್ಯಾಯ ಸಿಕ್ತು: ಸಂತ್ರಸ್ತೆಯ ತಂದೆ

    ಅಸಾರಾಂಗೆ ಜೀವವಾಧಿ ಶಿಕ್ಷೆ, ನನಗೆ ನ್ಯಾಯ ಸಿಕ್ತು: ಸಂತ್ರಸ್ತೆಯ ತಂದೆ

    ಜೈಪುರ: ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ಜೀವವಾಧಿ ಶಿಕ್ಷೆ ಪ್ರಕಟವಾಗುತ್ತಿದಂತೆ ಸಂತ್ರಸ್ತ ಬಾಲಕಿಯ ತಂದೆ ತನಗೆ ನ್ಯಾಯ ದೊರಕಿದೆ ಎಂದು ಹೇಳಿದ್ದಾರೆ.

    ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣವನ್ನು ಸತತ ಐದು ವರ್ಷ ವಿಚಾರಣೆ ನಡೆಸಿದ ನ್ಯಾಯಾಲಯ ಇಂದು ಅಸಾರಾಂ ಬಾಪು ಹಾಗೂ ಪ್ರಕರಣದ ಇತರೇ ಆರೋಪಿಗಳಾದ ಶಿಲ್ಪಿ ಹಾಗೂ ಶರದ್ ತಪ್ಪಿಸ್ಥರು ಎಂದು ತೀರ್ಪು ನೀಡಿತ್ತು. ಬಳಿಕ ಪ್ರಮುಖ ಆರೋಪಿ ಅಸಾರಾಂ ಬಾಪು ಗೆ ಪೋಸ್ಕೋ ಕಾಯ್ದೆ ಅಡಿ ಅತಿ ಹೆಚ್ಚಿನ ಶಿಕ್ಷೆಯಾದ ಜೀವವಾಧಿ ಶಿಕ್ಷೆ ನೀಡಿದೆ. ಪ್ರಕರಣದ ಮತ್ತಿಬ್ಬರು ಅಪರಾಧಿಗಳಿಗೆ ತಲಾ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ.

    ಈ ವೇಳೆ ಪ್ರತಿಕ್ರಿಯೆ ನೀಡಿದ ಸಂತ್ರಸ್ಥೆಯ ತಂದೆ ನಮಗೆ ನ್ಯಾಯ ಸಿಕ್ಕಿದೆ. ಆರೋಪಿಗಳ ವಿರುದ್ಧ ಹೋರಾಟ ನಡೆಸಲು ಸಹಾಯ ಮಾಡಿದ ಎಲ್ಲರಿಗೂ ಋಣಿಯಾಗಿದ್ದೇನೆ. ಅಪರಾಧಿಗಳಿಗೆ ತಕ್ಕ ಶಿಕ್ಷೆ ಲಭಿಸಿದೆ. ಅಲ್ಲದೇ ಕೊಲೆ ಹಾಗೂ ಅಪಹರಣ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೋರಾಟ ನಡೆಸುತ್ತಿರುವ ಇತರರಿಗೆ ನ್ಯಾಯ ದೊರೆಯುವ ವಿಶ್ವಾಸವಿದೆ. ತಮ್ಮ ಹೋರಾಟವನ್ನು ಮುಂದುವರೆಸುವುದಾಗಿ ಹೇಳಿದ್ದಾರೆ.

    ಈ ಹಿಂದೆ ಪ್ರಕರಣದ ವಿಚಾರಣೆ ವೇಳೆ 9 ಸಾಕ್ಷಿಗಳ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ದಾಳಿಯಲ್ಲಿ ಮೂವರು ಸಾಕ್ಷಿಗಳು ಸಾವನ್ನಪ್ಪಿದರು. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸಾರಾಂ 12 ಬಾರಿ ಜಾಮೀನು ನೀಡುವಂತೆ ನ್ಯಾಯಾಲಯಕ್ಕೆ ತನ್ನ ವಕೀಲರ ಮೂಲಕ ಮನವಿ ಸಲ್ಲಿಸಿದ್ದ.

    ಸದ್ಯ ನ್ಯಾಯಾಲಯದ ತೀರ್ಪಿನ ಕುರಿತು ಪ್ರತಿಕ್ರಿಯೆ ನೀಡಿದ ಅಸಾರಾಂ ಪರ ವಕ್ತಾರ ನೀಲಂ ದುಬೇ, ಕೋರ್ಟ್ ತೀರ್ಪಿನ ಆದೇಶ ಪ್ರತಿ ಲಭಿಸಿದ ಬಳಿಕ ಮುಂದಿನ ಹೆಜ್ಜೆಯ ಕುರಿತು ತಿಳಿಸುತ್ತೆವೆ. ನಮಗೇ ನ್ಯಾಯಾಂಗ ಮೇಲೆ ನಂಬಿಕೆ ಇದೆ ಎಂದು ತಿಳಿಸಿದ್ದಾರೆ.

  • ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ- ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ದೋಷಿ

    ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ- ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ದೋಷಿ

    ಜೈಪುರ: 16 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ದೋಷಿ ಎಂದು ಜೋಧ್‍ಪುರ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

    ಐದು ವರ್ಷದ ಹಿಂದಿನ ಪ್ರಕರಣವನ್ನು ವಿಚಾರಣೆ ನಡೆಸಿದ್ದ ನ್ಯಾಯಾಧೀಶ ಮಧುಸೂದನ್ ಶರ್ಮಾ ಅವರು ಅಸಾರಾಂ ಬಾಪು, ಶಿಲ್ಪಿ ಹಾಗೂ ಶರದ್ ತಪ್ಪಿತಸ್ಥರು ಎಂದು ತೀರ್ಪು ನೀಡಿದ್ದಾರೆ. ಇನ್ನಿಬ್ಬರು ಆರೋಪಿಗಳಾದ ಶಿವ, ಪ್ರಕಾಶ್ ರನ್ನು ಖುಲಾಸೆಗೊಳಿಸಲಾಗಿದೆ. ಸದ್ಯ ದೇವಮಾನವನಿಗೆ ಜೀವವಾಧಿ ಶಿಕ್ಷೆ ಹಾಗೂ ಇನ್ನಿಬ್ಬರು ಅಪರಾಧಿಗಳಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

    ಕೇಸ್ ಹಿಸ್ಟರಿ:
    2013ರ ಆಗಸ್ಟ್ 15ರಂದು ಅಸಾರಾಂ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಛಿಂದ್ವಾರದಲ್ಲಿರುವ ಅಸಾರಾಂ ಆಶ್ರಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಉತ್ತರಪ್ರದೇಶದ ಷಹಜಹಾನ್‍ಪುರದ ಬಾಲಕಿ ದೂರು ನೀಡಿದ್ದಳು. ದೂರು ಆಧರಿಸಿ 2013ರ ಸೆಪ್ಟೆಂಬರ್ 1ರಂದು ಇಂದೋರ್‍ನಲ್ಲಿ ಅಸಾರಾಂ ನನ್ನು ಬಂಧಿಸಿ ಜೋಧಪುರಕ್ಕೆ ಕರೆತರಲಾಗಿತ್ತು. 2013ರ ಸೆಪ್ಟೆಂಬರ್ 2ರಿಂದ ಅಸಾರಾಂ ನ್ಯಾಯಾಂಗ ವಶದಲ್ಲಿದ್ದನು. ಪ್ರಕರಣಗಳ ಕುರಿತ ಅಂತಿಮ ವಿಚಾರಣೆಯನ್ನು ಏಪ್ರಿಲ್ 7ರಂದು ಪೂರ್ಣಗೊಳಿಸಿದ್ದ ನ್ಯಾಯಾಲಯ ಇಂದಿಗೆ ಆದೇಶ ಕಾಯ್ದಿರಿಸಿತ್ತು.

    ಸದ್ಯ ಬಾಬಾ ವಿರುದ್ಧ ತೀರ್ಪು ಬಂದಿರುವ ಹಿನ್ನೆಲೆಯಲ್ಲಿ ರಾಜಸ್ಥಾನ ಹಾಗೂ ಹರ್ಯಾಣ ಸಹಿತ ಮೂರು ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗಬಹುದೆಂಬ ಅನುಮಾನದಿಂದ ಏಪ್ರಿಲ್ 30ರವರೆಗೆ ಜೋಧ್‍ಪುರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.