Tag: asani Cyclone

  • ಅಸನಿ ಚಂಡಮಾರುತದಿಂದಾಗಿ ಬೆಂಗಳೂರಲ್ಲಿ ಇಂದು ಸಹ ವಾತಾವರಣ ಕೂಲ್ ಕೂಲ್

    ಅಸನಿ ಚಂಡಮಾರುತದಿಂದಾಗಿ ಬೆಂಗಳೂರಲ್ಲಿ ಇಂದು ಸಹ ವಾತಾವರಣ ಕೂಲ್ ಕೂಲ್

    ಬೆಂಗಳೂರು: ಅಸನಿ ಚಂಡಮಾರುತ ಎಫೆಕ್ಟ್ ನಿಂದಾಗಿ ಬೆಂಗಳೂರಿನ ವಾತಾವರಣ ಕಂಪ್ಲೀಟ್ ಕೂಲ್ ಆಗಿದೆ. ಇಂದು ಕೂಡ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಮೋಡದ ಮರೆಯಲ್ಲೇ ಸೂರ್ಯ ದೇವನ ಜಾರಿಹೋಗಲಿದ್ದಾನೆ.

    ಬಂಗಾಳಕೊಲ್ಲಿಯನ್ನ ತೀವ್ರ ವಾಯುಭಾರ ಕುಸಿತದಿಂದ ಉಂಟಾಗಿರುವ ಅಸನಿ ಚಂಡಮಾರುತದ ಎಫೆಕ್ಟ್ ನಿಂದ ರಾಜ್ಯದ ಹಲವು ಕಡೆ ಜೋರು ಮಳೆ ಆಗ್ತಿದೆ. ಬೆಂಗಳೂರಿನಲ್ಲೂ ಚಂಡಮಾರುತದ ಪರಿಣಾಮ ಬೇಸಿಗೆ ಬೇಗೆಯಿಂದ ತತ್ತರಿಸಿದ್ದ ಜನರಿಗೆ ತಂಪೆರೆದಿದೆ. ನಗರದಲ್ಲಿ ನೆನ್ನೆಯಿಂದಲೂ ಸಹ ಮೋಡ ಕವಿದ ವಾತಾವರಣವಿದೆ. ನಿನ್ನೆ ನಗರದ ಬಹು ಭಾಗಗಳಲ್ಲಿ ಗಾಳಿ ಜೊತೆಗೆ ತುಂತುರು ಮಳೆ ಆಗಿತ್ತು. ಇಂದು ಸಹ ಅಂತಹದ್ದೆ ಪರಿಸ್ಥಿತಿ ಮುಂದುವರೆಯುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದನ್ನೂ ಓದಿ: ಅಸನಿ ಸೈಕ್ಲೋನ್ ಎಫೆಕ್ಟ್ – 3 ದಿನ ಮಳೆ ಸಂಭವ

    ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಜೊತೆಗೆ ಗುಡುಗು, ಮಿಂಚು ಸಹಿತ ಮಳೆಯ ಎಚ್ಚರಿಕೆ ನೀಡಲಾಗಿದೆ. ಜೊತೆಗೆ ಗಾಳಿಯ ವೇಗ ಸಹ ಹೆಚ್ಚಾಗುವ ಸಾಧ್ಯತೆ ಇದೆ. ಬೆಂಗಳೂರು ಹೊರತು ಪಡಿಸಿ ರಾಜ್ಯದ ದಕ್ಷಿಣ ಮತ್ತು ಉತ್ತರ ಒಳನಾಡು ಹಾಗೂ ಕರಾವಳಿ ಭಾಗದಲ್ಲೂ ಅನೇಕ ಕಡೆ ಅಸನಿ ಎಫೆಕ್ಟ್ ಇರಲಿದೆ. ಜೊತೆಗೆ ಮುಂದಿನ ಮೂರು ದಿನಗಳ ಮಳೆ ಎಚ್ಚರಿಕೆಯನ್ನು ಸಹ ನೀಡಿದ್ದು, ಮನೆಯಿಂದ ಅನವಶ್ಯಕವಾಗಿ ಆಚೆ ಬರುವವರು ಕೊಂಚ ಯೋಚಿಸಿ ಆಚೆ ಬಂದ್ರೆ ಒಳ್ಳೆಯದು.

    ಒಟ್ಟಾರೆ ಬೇಸಿಗೆಯ ಬಿಸಿಲಿನಿಂದ ಬಸವಳಿದಿದ್ದ ಬೆಂಗಳೂರನ್ನ ಅಸನಿ ಕೂಲ್ ಮಾಡಿದೆ.

  • ಅಸನಿ ಸೈಕ್ಲೋನ್ ಎಫೆಕ್ಟ್ – 3 ದಿನ ಮಳೆ ಸಂಭವ

    ಅಸನಿ ಸೈಕ್ಲೋನ್ ಎಫೆಕ್ಟ್ – 3 ದಿನ ಮಳೆ ಸಂಭವ

    ಬೆಂಗಳೂರು: ಅಸನಿ ಚಂಡಮಾರುತದ ಎಫೆಕ್ಟ್ ರಾಜ್ಯದಲ್ಲಿ ವ್ಯಾಪಕ ಮಳೆ ಆಗ್ತಿದೆ. ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಮಳೆ ಮುಂದುವರಿದಿದೆ.

    ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ರಾಮೇಶ್ವರ ಬಂಡೆ ಗ್ರಾಮದಲ್ಲಿ ಮರ ಬಿದ್ದು ಇಬ್ಬರಿಗೆ ಗಂಭೀರ ಗಾಯ. ಅಲ್ಲದೇ ಮನೆಯ ಮುಂದೆ ನಿಲ್ಲಿಸಿದ್ದ ಟ್ರಾಕ್ಟರ್ ಹಾಗೂ ಬೈಕ್ ಮೇಲೆ ಮರ ಬಿದ್ದಿದೆ. ಭತ್ತ, ಮಾವು, 14 ಎಕರೆಯ ಪಪ್ಪಾಯ ಬೆಳೆಗಳ ಸಂಪೂರ್ಣ ಹಾನಿ ಆಗಿದೆ.

    ಕೊಪ್ಪಳದಲ್ಲಿ ಅರ್ಧಗಂಟೆ ಸುರಿದ ಮಳೆಗೆ ಮನೆಯ ತಗಡುಗಳು ಹಾರಿ ಹೋಗಿದೆ. ಕೊಪ್ಪಳ ತಾಲೂಕಿನ ಟನಕನಕಲ್ ಗ್ರಾಮದಲ್ಲಿ ಸುಮಾರು 40ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಆಗಿದೆ. ಸಂಸದ ಸಂಗಣ್ಣ ಕರಡಿ ಸಹೋದರನಿಗೆ ಸೇರಿದ 12 ಎಕರೆ ಪಪ್ಪಾಯಿ ತೋಟ ಸಂಪೂರ್ಣ ಹಾನಿ ಆಗಿದೆ. ಇದನ್ನೂ ಓದಿ: ಧ್ವನಿವರ್ಧಕ ಬಳಕೆಗೆ ನಿಯಮ ಜಾರಿ – ಮಾರ್ಗಸೂಚಿಯಲ್ಲಿ ಏನಿದೆ?

    ಕೋಲಾರದಲ್ಲೂ ಮಳೆ ಆಗಿದ್ದು, ಶ್ರೀನಿವಾಸಪುರ ತಾಲೂಕಿನ ಕಂಬಾಲಪಲ್ಲಿ ಗ್ರಾಮದಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಹಸುವಿನ ಕೊಟ್ಟಿಗೆಗಗಳಿಗೆ ಹಾನಿ ಆಗಿದೆ. ಇತ್ತ ಚಿತ್ರದುರ್ಗದಲ್ಲಿ ಮಳೆಯಿಂದಾಗಿ ಹಾನಿ ಉಂಟಾಗಿದ್ದು ಸೂಕ್ತ ಪರಿಹಾರಕ್ಕಾಗಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಬಳಿ ರೈತ ಮಹಿಳೆಯೊಬ್ಬರು ಅಂಗಲಾಚಿದ್ರು. ಮಳೆ ಗಾಳಿಗೆ ಏನು ಮಾಡಲು ಸಾಧ್ಯ, ಅತ್ತರೆ ಸಮಸ್ಯೆ ಪರಿಹಾರ ಆಗಲ್ಲ ಎಂದು ಶಾಸಕಿ ಸಮಾಧಾನ ಪಡಿಸಿದ್ರು. ಇದನ್ನೂ ಓದಿ: ಸ್ಥಳೀಯ ಸಂಸ್ಥೆ ಚುನಾವಣೆ – ಸುಪ್ರೀಂ ಕೋರ್ಟ್ ಆದೇಶ ಅಧ್ಯಯನಕ್ಕೆ ಸಿಎಂ ಸೂಚನೆ

  • ಅಸನಿ ಚಂಡಮಾರುತದ ಎಫೆಕ್ಟ್ – ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಮಳೆ

    ಅಸನಿ ಚಂಡಮಾರುತದ ಎಫೆಕ್ಟ್ – ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಮಳೆ

    ಬೆಂಗಳೂರು: ಅಸನಿ ಚಂಡಮಾರುತದ ಪರಿಣಾಮವಾಗಿ ನಗರದಲ್ಲಿ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಹವಾಮಾನ ಇಲಾಖೆ ವಿಜ್ಞಾನಿ ಪ್ರಸಾದ್ ಪ್ರತಿಕ್ರಿಯಿಸಿ, ಅಸನಿ ಚಂಡಮಾರುತದ ತೀವ್ರತೆಯಿಂದಾಗಿ ಮಳೆಯಾಗುವ ವೇಳೆ ಗಾಳಿ ಹೆಚ್ಚಾಗಲಿದ್ದು, ಗುಡುಗು ಹಾಗೂ ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನಲ್ಲಿ ಅತಿಯಾಗಿ ಮಳೆಯಾಗಲಿದ್ದು, ಸೈಕ್ಲೋನ್‍ನಿಂದಲೇ ನಗರದಲ್ಲಿ ಮೋಡ ಕವಿದ ವಾತಾವರಣವಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಯುವಮೋರ್ಚಾ ಸಭೆಯಲ್ಲಿ ದ್ರಾವಿಡ್ ಭಾಗಿಯಾಗಲಿದ್ದಾರೆ: ಬಿಜೆಪಿ ಶಾಸಕ

    bengaluru weather

    ಬುಧವಾರ ಸಹಿತ ಮೋಡ ಕವಿದ ವಾತಾವರಣ ಹೀಗೆಯೇ ಇರಲಿದೆ. ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ದಕ್ಷಿಣ ಒಳನಾಡು ಬಿಟ್ಟು ಬೇರೆ ಎಲ್ಲ ಕಡೆ ಮಳೆ ಬರಲಿದೆ. ಮುಂದಿನ ಮೂರು ದಿನಗಳು ಬಹುತೇಕ ಕಡೆ ಮಳೆ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಂಶಾಡಳಿತ ರಾಜಕಾರಣಕ್ಕೆ ಬಿಜೆಪಿಯಲ್ಲಿ ಸ್ಥಾನವಿಲ್ಲ: ಜ್ಯೋತಿರಾದಿತ್ಯ ಸಿಂಧಿಯಾ