Tag: AsaduddinOwaisi

  • ಕ್ಷಮೆ ಕೇಳುವ ಅಗತ್ಯವಿಲ್ಲ, ನೂಪುರ್ ಶರ್ಮಾರನ್ನು ಕಾನೂನಿನ ಪ್ರಕಾರ ಬಂಧಿಸಿ: ಓವೈಸಿ

    ಕ್ಷಮೆ ಕೇಳುವ ಅಗತ್ಯವಿಲ್ಲ, ನೂಪುರ್ ಶರ್ಮಾರನ್ನು ಕಾನೂನಿನ ಪ್ರಕಾರ ಬಂಧಿಸಿ: ಓವೈಸಿ

    ನವದೆಹಲಿ: ಹಿಂಸಾತ್ಮಕ ಪ್ರತಿಭಟನೆಗಳ ವಿಚಾರದಲ್ಲಿ ರಾಜಕೀಯವೂ ನಡೆದಿದೆ. ನೂಪುರ್ ಶರ್ಮಾರನ್ನು ಗಲ್ಲಿಗೇರಿಸುವಂತೆ MIM ಸಂಸದ ಇಮ್ತಿಯಾಜ್ ಜಲೀಲ್ ಆಗ್ರಹಿಸಿದ್ದಾರೆ. ಈ ಹೇಳಿಕೆಗೆ ಓವೈಸಿ ಅಂತರ ಕಾಯ್ದುಕೊಂಡಿದ್ದಾರೆ. ಆದರೆ ನೂಪುರ್ ಶರ್ಮಾರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

    ನೂಪುರ್ ಶರ್ಮಾರನ್ನು ಗಲ್ಲಿಗೇರಿಸುವಂತೆ ಜಲೀಲ್ ಹೇಳಿಕೆಯಿಂದ ಓವೈಸಿ ಅಂತರ ಕಾಯ್ದುಕೊಂಡಿದ್ದಾರೆ. ಕಾನೂನಿನ ಪ್ರಕಾರ ನೂಪುರ್ ಶರ್ಮಾರನ್ನು ಬಂಧಿಸಬೇಕು. ಇದು ನಮ್ಮ ಪಕ್ಷದ ನಿಲುವೂ ಆಗಿದೆ ಎಂದು ಅಸಾದುದ್ದೀನ್ ಓವೈಸಿ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಪ್ರವಾದಿ ವಿರುದ್ಧ ಅವಹೇಳನ – ಮುಸ್ಲಿಂ ಸಂಘಟನೆಗಳ ಪ್ರತಿಭಟನೆಗೆ ವಿಹೆಚ್‌ಪಿ ತೀವ್ರ ಖಂಡನೆ 

    OWAISI

    ನೂಪುರ್ ಶರ್ಮಾರನ್ನು ಬಹಳ ದಿನ ಕಳೆದರೂ ಬಂಧಿಸಿಲ್ಲ. ಏಕೆ ಆಕೆಯನ್ನು ಬಂಧಿಸುತ್ತಿಲ್ಲ? ಏಕೆ ಕಾನೂನು ಕ್ರಮ ತೆಗೆದುಕೊಳ್ಳುತ್ತಿಲ್ಲ? ಯಾರು ನಿಮ್ಮನ್ನು ತಡೆಯುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಹಿಂಸಾಚಾರ ಸ್ಥಳಕ್ಕೆ ಭೇಟಿ ನೀಡಲು ಮುಂದಾದ ಬಿಜೆಪಿ ಮುಖಂಡನ ಬಂಧನ, ಬಿಡುಗಡೆ

    ಬಂಗಾಳದ ಹೌರ ಜಿಲ್ಲೆಯಲ್ಲಿ ಹಿಂಸಾತ್ಮಕ ಘಟನೆಗಳು ವರದಿಯಾಗುತ್ತಿವೆ. ದೇಶವು ಬೃಹತ್ ಪ್ರತಿಭಟನೆಗಳಿಗೆ ಸಾಕ್ಷಿಯಾಗುತ್ತಿದೆ. ಇದಕ್ಕೆ ಕಾರಣವಾದ ನೂಪುರ್ ಶರ್ಮಾ ವಿರುದ್ಧ ಕ್ರಮ ಕೈಗೊಂಡು ಕಾನೂನಿನ ಪ್ರಕಾರ ಬಂಧಿಸಬೇಕು. ಆಕೆ ಕ್ಷಮೆ ಕೇಳುವ ಅಗತ್ಯವಿಲ್ಲ. ಈ ವಿಚಾರದಲ್ಲಿ ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

    ಹಿಂಸಾಚಾರಕ್ಕೆ ಅವಕಾಶ ನೀಡದೇ ಇರುವುದು ಪ್ರಜಾಪ್ರಭುತ್ವ, ಹಿಂಸಾಚಾರ ತಡೆಯುವುದು ಸರ್ಕಾರದ ಜವಾಬ್ದಾರಿ. ಪೊಲೀಸರು ಕೂಡ ತಡೆಯುವ ಪ್ರಯತ್ನ ಮಾಡಬೇಕು ಎಂದು ಹೇಳಿದ್ದಾರೆ.

    ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಹ ನೂಪುರ್‌ಗೆ ಕಾನೂನು ಪ್ರಕಾರ ಶಿಕ್ಷೆಯಾಗಲಿ ಎಂದಿದ್ದಾರೆ. ಬಿಜೆಪಿಯ ಈ ಪಾಪಕ್ಕೆ ಜನರೇಕೆ ಒದ್ದಾಡಬೇಕು. ಈ ಹೌರಾ ಗಲಭೆ ಹಿಂದೆ ಕೆಲ ರಾಜಕೀಯ ಪಕ್ಷಗಳ ಕೈವಾಡವಿದೆ. ಗಲಭೆಕೋರರನ್ನು ಸುಮ್ನೆ ಬಿಡಲ್ಲ ಅಂತಾ ಗುಡುಗಿದ್ದಾರೆ. ಇದನ್ನೂ ಓದಿ: ಪದವೀಧರ ಮಹಿಳೆಯನ್ನು ಕೆಲಸಕ್ಕೆ ಹೋಗುವಂತೆ ಒತ್ತಾಯಿಸುವಂತಿಲ್ಲ – ಹೈಕೋರ್ಟ್ 

    ರಾಜ್ಯದಲ್ಲೂ ಸಹ ನೂಪುರ್ ಶರ್ಮಾ ಬಂಧನಕ್ಕೆ ಒತ್ತಾಯ ಹೆಚ್ಚಿದ್ದು ವಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಬಂಧನಕ್ಕೆ ಒತ್ತಾಯಿಸಿದ್ದಾರೆ. ಈ ಬೆನ್ನಲ್ಲೇ ಕಾಂಗ್ರೆಸ್‌ನ ಎನ್.ಎ.ಹ್ಯಾರೀಸ್ ಟ್ವೀಟ್ ಮಾಡಿದ್ದು, ಪ್ರತಿಭಟನೆ ಸರಿ.. ಆದ್ರೇ ಈ ಹಿಂಸೆ ಏಕೆ..? ಇದನ್ನು ಆ ಪ್ರವಾದಿಯೂ ಮೆಚ್ಚಲ್ಲ ಎಂದಿದ್ದಾರೆ.

    ಬೆಂಗಳೂರಿನ ಮುಸ್ಲಿಂ ಮುಖಂಡ ಉಮರ್ ಷರೀಫ್ ಮಾತನಾಡಿ, ನೂಪುರ್ ವಿರುದ್ಧ ಕ್ರಮ ಆಗುತ್ತೆ ಎಂದು ಮೋದಿ ಒಂದು ಟ್ವೀಟ್ ಮಾಡಿದ್ರೆ ಸಾಕು. ಈ ಸಮಸ್ಯೆ ಇಲ್ಲಿಗೆ ನಿಲ್ಲುತ್ತದೆ ಎಂದಿದ್ದಾರೆ.

    ಬಿಜೆಪಿ ನಾಯಕರು, ಹಿಂದೂಪರ ಮುಖಂಡರು, ಈ ಗಲಭೆಯನ್ನು ವ್ಯವಸ್ಥಿತ ಷಡ್ಯಂತ್ರ ಎಂದು ದೂಷಣೆ ಮಾಡಿದ್ದಾರೆ. ಈ ಮಧ್ಯೆ, ಬಾಂಗ್ಲಾ ಮೂಲದ ಲೇಖಕಿ ತಸ್ಲಿಮಾ ನಸ್ರೀನ್, ಮುಸ್ಲಿಮರು ನಡೆಸಿದ ಹಿಂಸಾತ್ಮಕ ಪ್ರತಿಭಟನೆಯನ್ನು ಖಂಡಿಸಿದ್ದಾರೆ. ಇಂದು ಪ್ರವಾದಿ ಮೊಹಮ್ಮದ್ ಪೈಗಂಬರ್ ಬದುಕಿದ್ದಿದ್ರೇ, ಮುಸ್ಲಿಂ ಮತಾಂಧದ ಹುಚ್ಚುತನ ನೋಡಿ ಬೆಚ್ಚಿಬೀಳುತ್ತಿದ್ರು ಎಂದು ನೋವು ಹೊರಹಾಕಿದ್ದಾರೆ.