Tag: AS Patila Nadahalli

  • ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಸ್ಥಳಾಂತರಕ್ಕೆ ಯತ್ನ – ನಡಹಳ್ಳಿ ವಿರುದ್ಧ ದೇವಾನಂದ ಚವ್ಹಾಣ್ ಗರಂ

    ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಸ್ಥಳಾಂತರಕ್ಕೆ ಯತ್ನ – ನಡಹಳ್ಳಿ ವಿರುದ್ಧ ದೇವಾನಂದ ಚವ್ಹಾಣ್ ಗರಂ

    ವಿಜಯಪುರ: ನಾಗಠಾಣ ಮತಕ್ಷೇತ್ರದಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ಆದರೆ ಇದರ ಸ್ಥಳಾಂತರಕ್ಕೀಗ ಹುನ್ನಾರ ನಡೆದಿದೆ ಎಂದು ನಾಗಠಾಣ ಶಾಸಕ ದೇವಾನಂದ್ ಚವ್ಹಾಣ್ ಆರೋಪಿಸಿದ್ದಾರೆ.

    ವಿಜಯಪುರದಲ್ಲಿ ಮಾತನಾಡಿದ ದೇವಾನಂದ್ ಚವ್ಹಾಣ್ , ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕಳೆದ 32 ವರ್ಷಗಳಿಂದ ವಿಜಯಪುರದ ಹಿಟ್ನಳ್ಳಿ ಫಾರ್ಮ್ ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇದನ್ನೀಗ ಮುದ್ದೇಬಿಹಾಳ ತಾಲೂಕಿಗೆ ಸ್ಥಳಾಂತರಿಸಲು ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಕೃಷಿ ಸಚಿವ ಬಿ ಸಿ ಪಾಟೀಲರಿಗೆ ಮನವಿ ಮಾಡಿದ್ದಾರೆ.

    ಸದ್ಯ ಕೇಂದ್ರ ಸ್ಥಾನದಲ್ಲಿರುವುದರಿಂದ ಜಿಲ್ಲೆಯ ಎಲ್ಲ ಭಾಗದ ಜನರಿಗೆ ಅನುಕೂಲ ಆಗಿದೆ. ಮುದ್ದೇಬಿಹಾಳದಲ್ಲಿ ಸ್ಥಳಾಂತರ ಆಗುವುದರಿಂದ ಜಿಲ್ಲೆಯ ಉಳಿದ ಭಾಗದ ರೈತರಿಗೆ ತೊಂದರೆ ಆಗಲಿದೆ ಎಂದರು. ಅಲ್ಲದೆ ಒಂದು ವೇಳೆ ಕೃಷಿ ಸಚಿವರು ಸ್ಥಳಾಂತರಕ್ಕೆ ಆದೇಶಿಸಿದ್ರೆ ರೈತರೊಂದಿಗೆ ಬೀದಿಗಿಳಿದು ಉಗ್ರ ಹೋರಾಟ ಮಾಡೋದಾಗಿ ಶಾಸಕ ದೇವಾನಂದ್ ಎಚ್ಚರಿಕೆ ನೀಡಿದ್ದಾರೆ.