ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ ಅವರನ್ನು ಹೊರ ಹಾಕಿದ ನಂತರ ಅವರು ನೋವಿನಲ್ಲಿರುವುದನ್ನು ನಾನಾ ರೀತಿಯಲ್ಲಿ ತೋರಿಸಿಕೊಳ್ಳುತ್ತಿದ್ದಾರೆ. ದಿನವೂ ಅಭಿಮಾನಿಗಳಿಗೆ ಸೋಷಿಯಲ್ ಮೀಡಿಯಾ ಮೂಲಕ ಗುಡ್ ಮಾರ್ನಿಂಗ್ ಹೇಳುವಾಗ ಜೊತೆ ಜೊತೆಯಲಿ ಧಾರಾವಾಹಿಯ ಫೋಟೋಗಳನ್ನೇ ಬಳಸುತ್ತಿದ್ದಾರೆ. ಅಷ್ಟರ ಮಟ್ಟಿಗೆ ಆ ಧಾರಾವಾಹಿಯನ್ನು ಅವರು ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ಇದೀಗ ಅನಿರುದ್ಧ ಅವರು ಹಲವು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದು, ಆಯಾ ದೇವಸ್ಥಾನಗಳ ಫೋಟೋಗಳನ್ನೂ ಅವರು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಿದ್ದಾರೆ. ಹಣೆಗೆ ಭಂಡಾರ ಹಚ್ಚಿದ್ದು ನೋಡಿದರೆ ಅವರು ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ಸಾಯಿಬಾಬಾ ಫೋಟೋ ಮುಂದಿರ ಫೋಟೋವನ್ನೂ ಅವರು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ನಾನು ಅಂಬರೀಶ್ ಅಣ್ಣನ ಅಭಿಮಾನಿ, ಅವರ ಮಗನಿಗೆ ಸಿನಿಮಾ ಮಾಡುತ್ತಿರುವುದು ಹೆಮ್ಮೆ : ನಿರ್ದೇಶಕ ಮಹೇಶ್ ಕುಮಾರ್
ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ ಹೊರ ಬಂದ ನಂತರ ಸೀರಿಯಲ್ ನಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದು, ಅವೆಲ್ಲವನ್ನೂ ಸಸ್ಪೆನ್ಸ್ ಆಗಿಯೇ ಇಡುತ್ತಿದೆ ತಂಡ. ಅನಿರುದ್ಧ ನಿರ್ವಹಿಸುತ್ತಿದ್ದ ಆರ್ಯವರ್ಧನ್ ಪಾತ್ರದ ಬದಲು ಹೊಸದೊಂದು ಪಾತ್ರ ತರಲಾಗುತ್ತಿದೆ ಎಂದು ಹೇಳಲಾಗುತ್ತಿದ್ದು, ಆ ಪಾತ್ರವನ್ನು ಹರೀಶ್ ರಾಜ್ ಮಾಡಲಿದ್ದಾರಂತೆ. ಆದರೆ, ಆರ್ಯವರ್ಧನ್ ಪಾತ್ರವನ್ನು ಸದ್ಯಕ್ಕೆ ಯಾರೂ ಮಾಡುವುದಿಲ್ಲ ಎನ್ನಲಾಗುತ್ತಿದೆ.
Live Tv
[brid partner=56869869 player=32851 video=960834 autoplay=true]
ಬಿಗ್ ಬಾಸ್ ಮನೆಯಲ್ಲಿ ಸೋನು ಹಾಗೂ ಅಕ್ಷತಾ ಮಾಡಿದ ಪ್ರ್ಯಾಂಕ್ ಬಗ್ಗೆ ಸೂಪರ್ ಸಂಡೇ ವಿತ್ ಸುದೀಪ ವೇದಿಕೆಯಲ್ಲಿ ಚರ್ಚೆಯಾಗಿತ್ತು. ದೆವ್ವದಂತೆ ಮೇಕಪ್ ಮಾಡ್ಕೊಂಡು ಬಂದಿದ್ದ ಸೋನು ನೋಡಿ ಆರ್ಯವರ್ಧನ್ ಅವರು ತಲೆ ತಿರುಗಿ ಬಿದ್ದುಬಿಟ್ಟಿದ್ದರು. ಆದರೆ ಮನೆಮಂದಿಯೆಲ್ಲಾ ಅವರು ಆಕ್ಟಿಂಗ್ ಮಾಡುತ್ತಿದ್ದಾರೆ ಎಂದು ತಿಳಿದುಕೊಂಡಿದ್ದರಂತೆ. ಆದರೆ ಅಂದು ನಿಜವಾಗಲೂ ಅವರ ಜೀವಕ್ಕೆ ಅಪಾಯ ಬಂದೊದಗಿತ್ತು ಎಂಬುದು ಬಳಿಕ ಗೊತ್ತಾಗಿದೆ.
ಹೌದು, ಅಕ್ಷತಾ ಮತ್ತು ಸೋನು ಗುರೂಜಿಯನ್ನು ಪ್ರ‍್ಯಾಂಕ್ ಮಾಡಬೇಕು ಎಂದು ಪ್ಲ್ಯಾನ್ ಮಾಡಿದ್ದರು. ಅದರಂತೆ ಸೋನು ದೆವ್ವದಂತೆ ಮೇಕಪ್ ಕೂಡ ಮಾಡಿಕೊಂಡಳು. ಇದಕ್ಕೂ ಮುನ್ನ ರಾಕೇಶ್ ಹಾಗೂ ರೂಪೇಶ್ ಗುರೂಜಿ ಬಳಿ ಹೋಗಿ ಈ ರೀತಿ ನಿಮಗೆ ಪ್ರ್ಯಾಂಕ್ ಮಾಡುತ್ತಾರೆ, ಅವರು ಬಂದಾಕ್ಷಣ ನೀವೂ ಪ್ರಜ್ಞೆ ತಪ್ಪಿ ಬಿದ್ದು ಬಿಡಿ ಎಂದು ಆರ್ಯವರ್ಧನ್ ಅವರಿಗೆ ಹೇಳಿಕೊಟ್ಟಿದ್ದರು. ಎಲ್ಲವೂ ಹೇಳಿದಂತೆಯೇ ನಡೆಯಿತು. ಗುರೂಜಿ ಬಾತ್ ರೂಮಿನಿಂದ ಹೊರಗೆ ಬಂದಾಗ ಸೋನು ಹೆದರಿಸಿದಳು. ಗುರೂಜಿ ತಕ್ಷಣ ಬಿದ್ದು ಬಿಟ್ಟರು. ಎಷ್ಟೇ ಎಚ್ಚರ ಮಾಡಿದರೂ ಎಚ್ಚರವಾಗಲೇ ಇಲ್ಲ. ರಾಕೇಶ್ ಇದು ಸೂಪರ್ ಪರ್ಫಾಮೆನ್ಸ್ ಎಂದುಕೊಂಡರು. ಆದರೆ ರೂಪೇಶ್‌ಗೆ ಕೊಂಚ ಅನುಮಾನ ಮೂಡಿತ್ತು. ಆಮೇಲೆ ಅವರನ್ನು ಕಷ್ಟಪಟ್ಟು ಹೊರಗೆ ಎಳೆದು ತಂದರು.
ಇದೆಲ್ಲಾ ನೋಡುತ್ತಿದ್ದಂತೆ ಅಕ್ಷತಾ ಹಾಗೂ ಸೋನು ಗಾಬರಿಗೊಂಡಿದ್ದರು. ಸ್ವಲ್ಪ ಸಮಯವಾದ ಬಳಿಕ ಗುರೂಜಿಗೆ ಪ್ರಜ್ಞೆ ಬಂತು. ಆದರೆ ಜಯಶ್ರೀ ಈ ಮಧ್ಯೆ ಸೋನು ಹಾಗೂ ಅಕ್ಷತಾ ಬಳಿ ಹೋಗಿ, ಇದು ಅವರೆಲ್ಲ ಸೇರಿ ಮಾಡಿದ ಪ್ರ್ಯಾಂಕ್ ಅಂತ ಹೇಳಿದ್ದರು. ಈ ಬಗ್ಗೆ ಸೋನು ಕ್ಲಾರಿಟಿ ತೆಗೆದುಕೊಳ್ಳಲು ಹೋದಾಗ ರಾಕೇಶ್ ಹಾಗೂ ರೂಪೇಶ್ ಬುದ್ಧಿ ಹೇಳಿ ಕಳುಹಿಸಿದ್ದರು. ಇದರ ನಡುವೆ ತಾವು ಮಾಡಿದ ತಪ್ಪನ್ನು ನೆನೆದು ಅಕ್ಷತಾ ಜೋರಾಗಿ ಅತ್ತಿದ್ದು, ರಾಕೇಶ್ ಆಕೆಯನ್ನು ಸಮಾಧಾನ ಮಾಡಿದ್ದ. ಇದನ್ನೂ ಓದಿ: ಮೊದಲ ಜಗಳ, ವಾದ, ಗಾಯ ಆಗಿದ್ದೇ ಉದಯ್‍ಯಿಂದ – ಬೇರೆಯವರ ಇಮೋಷನ್ ನೋಡಿ ಉದಯ್ ಡಿಸ್ಟರ್ಬ್ ಆಗಿದ್ರಾ?
ಈ ಎಲ್ಲಾ ಡ್ರಾಮಾದ ಬಗ್ಗೆ ಸೂಪರ್ ಸಂಡೇನಲ್ಲಿ ಸುದೀಪ್ ಕೇಳಿದಾಗ ರೂಪೇಶ್ ಮತ್ತು ರಾಕೇಶ್, ನಾವೂ ಕೂಡ ಅದನ್ನು ಆಕ್ಟಿಂಗ್ ಎಂದೇ ಭಾವಿಸಿದ್ದೆವು. ಆದರೆ ಅವರು ನಿಜವಾಗಿಯೂ ಪ್ರಜ್ಞೆ ತಪ್ಪಿದ್ದರು ಎಂದು ಸ್ಪಷ್ಟನೆ ನೀಡಿದ್ದಾರೆ. ಇದಕ್ಕೆ ಸುದೀಪ್ ಗುರೂಜಿ ಅವರಿಗೆ ಧೈರ್ಯ ತುಂಬಿದ್ದಾರೆ. ಇಲ್ಲಿ ಎರಡೇ ದೆವ್ವ ಇರುವುದು. ಪಿಂಕ್ ಕಲರ್ ಹಾಕಿರುವ ದೆವ್ವ ಹಾಗೂ ಹಸಿರು ಬಣ್ಣ ತೊಟ್ಟಿರುವ ದೆವ್ವ. ನೀವು ಯಾವುದಕ್ಕೂ ಹೆದರಬೇಡಿ. ಇಲ್ಲಿ ನಮ್ಮನ್ನು ಹೊರತುಪಡಿಸಿ 300 ಜನ ನಿಮ್ಮ ಕಾವಲಿಗಿದ್ದಾರೆ ಎಂದು ಧೈರ್ಯ ತುಂಬಿದರು.
ಆಗ ಗುರೂಜಿ ನನಗೆ ದೆವ್ವ ಎಂದರೆ ತುಂಬಾ ಭಯ. ಸೋನು ಬಂದಾಗ ವಿಕಾರವಾಗಿ ಕಂಡಿತು, ತಕ್ಷಣ ಬಿದ್ದು ಬಿಟ್ಟೆ. ಆಮೇಲೆ ಇವರೆಲ್ಲ ಕರೆದು ತಂದು ಮಲಗಿಸಿದ್ದರು ಎಂದರು. ಮತ್ತೆ ಸುದೀಪ್ ನಿಮಗೆ ಏನು ಆಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಕೂಡ ಎಂದು ಸೋನು ಹಾಗೂ ಅಕ್ಷತಾಗೂ ಬುದ್ಧಿ ಹೇಳಿದ್ದಾರೆ. ಪ್ರ‍್ಯಾಂಕ್ ಮಾಡಿ ಆದರೆ ಈ ರೀತಿಯಾದ ಟಾಪಿಕ್ ಬೇಡ ಎಂದಿದ್ದಾರೆ. ಇದನ್ನೂ ಓದಿ: ಜಯಶ್ರೀ, ಚೈತ್ರಾ ಬೆಸ್ಟಿ ಅಂದ ರೂಪೇಶ್- ಸಾನ್ಯಾಗೆ ಶುರುವಾಯ್ತು ಹೊಟ್ಟೆಕಿಚ್ಚು..?
Live Tv
[brid partner=56869869 player=32851 video=960834 autoplay=true]
ಆರ್ಯವರ್ಧನ್ ಗುರೂಜಿ ಬಳಿ ಶಾಸ್ತ್ರ ಕೇಳಬೇಕು ಎಂದರೆ ಕೇವಲ ಇನ್ನೂರು, ಮುನ್ನೂರು ರೂಪಾಯಿ ಹಣ ಇದ್ದರೆ ಸಾಲದು. ಜಸ್ಟ್ ಶಾಸ್ತ್ರ ಕೇಳುವುದಕ್ಕೆ ಐದಾರು ಸಾವಿರ ರೂಪಾಯಿ ಹಣ ಇಟ್ಟುಕೊಂಡು ಹೋಗಬೇಕು ಎಂದು ಶಾಸ್ತ್ರ ಕೇಳಲು ಹೋದ ಜನ ಮಾತಾಡಿಕೊಳ್ಳುತ್ತಿದ್ದರು. ಈ ವಿಚಾರ ಇದೀಗ ಬಿಗ್ ಬಾಸ್ ಮನೆಯಲ್ಲಿ ಆರ್ಯವರ್ಧನ್ ಮಾತಾಡಿದ ಮಾತುಗಳಿಂದ ಎಲ್ಲವೂ ಸತ್ಯವಾಗಿದೆ ಎನಿಸುತ್ತಿದೆ.
ಆರ್ಯವರ್ಧನ್ ಬಿಗ್ ಬಾಸ್ ಮನೆಯಲ್ಲಿ ಬೇರೆ ಜೀವನದ ಬಗ್ಗೆ ಸಾಕಷ್ಟು ಫೀಲ್ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ತಮ್ಮ ದೇಹ ಸೌಂದರ್ಯ, ಆರೋಗ್ಯದ ಬಗ್ಗೆ ಸಾಕಷ್ಟು ಯೋಚನೆ ಮಾಡಿದ್ದರು. ಆದರೆ ಇದೀಗ ಮತ್ತೆ ಅದೇ ರೀತಿ ಉಚ್ಛರಿಸಿದ್ದು, ಇಲ್ಲಿಂದ ಹೋದ ಮೇಲೆ ಹೆಂಡತಿ, ಮಗಳನ್ನು ಚೆನ್ನಾಗಿ ನೋಡಿಕೊಳ್ಳುವುದರ ಜೊತೆಗೆ ಜೀವನವನ್ನು ಚೆನ್ನಾಗಿ ಇಟ್ಟುಕೊಳ್ಳುವುದರ ಬಗ್ಗೆಯೂ ಆಲೋಚಿಸಿದ್ದಾರೆ.
ಈ ವಾರದ ಬೆಸ್ಟ್ ಕಂಟೆಸ್ಟೆಂಟ್ ಆಗಿ ಜನರು ಆರ್ಯವರ್ಧನ್ ಅವರನ್ನು ಆಯ್ಕೆ ಮಾಡಿದ್ದಾರೆ. ಅಲ್ಲದೇ ನಾಮಿನೇಷನ್‍ನಿಂದಲೂ ಮೊದಲು ಆರ್ಯವರ್ಧನ್ ಅವರನ್ನೇ ಜನರು ಸೇಫ್ ಮಾಡಿದ್ದಾರೆ. ಈ ವೇಳೆ ಭಾವುಕರಾದ ಆರ್ಯವರ್ಧನ್ ಅವರು ಕಿಚ್ಚ ಸುದೀಪ್ ಅವರಿಗೆ ಬಿಗ್‍ಬಾಸ್ ಮನೆಗೆ ಬಂದಿದ್ದು, ನನಗೆ ಬಹಳ ಖುಷಿಯಾಗಿದೆ. ನಾನು ಮನೆಗೆ ಕೇವಲ ಮಲಗುವುದಕ್ಕೆ ಹೋಗುತ್ತಿದ್ದೆ. ಊಟ ಬೇಕಾದಾಗಲೂ ಹೊಟೇಲ್ ನಲ್ಲಿ ತರಿಸಿಕೊಂಡು ಬಿಡುತ್ತಿದ್ದೆ. ಹಾಗಾಗಿ ದುಡ್ಡೆ ಜಗತ್ತು ಎಂದು ಬರೀ ಬಿಸಿನೆಸ್ ಮೇಲೆಯೇ ಅತಿ ಹೆಚ್ಚು ಗಮನ ಕೊಟ್ಟಿದ್ದೆ. ಆದರೆ ಇಲ್ಲಿಗೆ ಬಂದ ಮೇಲೆ ಗೊತ್ತಾಗುತ್ತಿದೆ. ಇದು ನಾಟಕದ ಪ್ರೀತಿಯೋ ಒರಿಜಿನಲ್ ಪ್ರೀತಿಯೋ ಎಂದಿದ್ದಾರೆ.
ಪ್ರೀತಿ ಬಗ್ಗೆ ಮುಂದುವರೆದು ಮಾತನಾಡಿದ ಆರ್ಯವರ್ಧನ್, ನಾಟಕದ ಪ್ರೀತಿ ಹಾಗೂ ಒರ್ಜಿನಲ್ ಪ್ರೀತಿ ಬಗ್ಗೆ ತಿಳಿದ ಮೇಲೆ, ನಾನು ಇಲ್ಲಿಂದ ಹೋದ ಮೇಲೆ ಹೆಂಡತಿ, ಮಗಳನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತೇನೆ. ಇದೇ ನಮ್ಮ ಆಸ್ತಿ ಅಂದುಕೊಂಡಿದ್ದೆ. ಮನೆಗೆ ಹೋದರೆ ಹೆಂಡತಿ ನೋಡಿಕೊಳ್ಳಬೇಕು. ಮಗಳಿದ್ದಾಳೆ ಮಗಳಿಗಾಗಿ ದುಡಿಬೇಕು ಎಂದುಕೊಂಡಿದ್ದೆ. ಆ ಮಗಳನ್ನೂ ಪ್ರೀತಿ ಮಾಡಬೇಕು, ಹೆಂಡತಿಯನ್ನು ಪ್ರೀತಿ ಮಾಡಬೇಕು ಎಂದು ಬಂದಿರುವುದೇ ಬಿಗ್‍ಬಾಸ್‍ಗೆ ಬಂದ ಮೇಲೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬಿಗ್‍ಬಾಸ್‍ನಲ್ಲಿ ಸ್ಪರ್ಧಿ ಉದಯ್ ಎಲ್ಲರ ಬಳಿಯೂ ಎಲ್ಲರ ಬಗ್ಗೆ ಮಾತನಾಡಿರುತ್ತಾರೆ. ಹೀಗಾಗಿ ಉದಯ್‍ಗೆ ಮನೆಮಂದಿ ಪೋಸ್ಟ್ ಮಾಸ್ಟರ್ ಎಂದು ಹೆಸರಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಸಾನ್ಯಾ ಜೊತೆ ಸ್ನೇಹದಲ್ಲಿದ್ದಾಗ ಬೆಳೆಸಿಕೊಂಡ ಸಲಿಗೆಯನ್ನು ಕೆಟ್ಟದಾಗಿ ಮಾತನಾಡಿದ್ದನು. ಇದೀಗ ವಾರದ ಕಥೆಯಲ್ಲಿ ಕಿಚ್ಚ ಸುದೀಪ್ ಅವರು ಈ ವಿಚಾರವನ್ನು ಪ್ರಸ್ತಾಪ ಮಡುವ ಮೂಲಕ ಉದಯ್ ಗೆ ಮನದಟ್ಟು ಮಾಡಿಸಿದ್ದಾರೆ.
ವಾರದ ಕಥೆಯಲ್ಲಿ ಸುದೀಪ್ ಅವರು ಉದಯ್ ಜೊತೆ ಮಾತನಾಡುತ್ತಾ, ಈ ಮನೆಯಲ್ಲಿ ನಿಮಗೊಂದು ಅಡ್ಡ ಹೆಸರಿದೆ ಗೊತ್ತಾ ಎಂದು ಕೇಳುತ್ತಾರೆ. ಆಗ ಉದಯ್ ಇಲ್ಲ ಸರ್ ಎಂದು ಹೇಳುತ್ತಾರೆ. ಹಾಗಾದರೆ ಯಾರಿಗಾದರೂ ಗೊತ್ತಿದ್ದರೆ ಹೇಳಿ ಎಂದಾಗ ಆರ್ಯವರ್ಧನ್, ನನಗೆ ಗೊತ್ತು ಎಂದು ಹೇಳುತ್ತಾ, ಪೋಸ್ಟ್ ಮ್ಯಾನ್ ಕೆಲಸ. ಅವರ ಬಾಯಿ ಸುಮ್ಮನೆ ಇರಲ್ಲ. ಅಲ್ಲಿ ಇಲ್ಲಿ ಹೇಳಿ ಬಿಡುತ್ತಾರೆ. ಜಗಳ ಆಡುವಾಗ ನನ್ನ ಬೇಡ ಹೋಗಿ ಎನ್ನುತ್ತಾರೆ. ಇದಕ್ಕೆ ಬೈಸಿಕೊಂಡು ಇದ್ದಾರೆ ಎಂದು ಹೇಳುತ್ತಾರೆ.
ಈ ವೇಳೆ ಸುದೀಪ್ ಅವರು, ಉದಯ್ ಅವರೇ ಚೈತ್ರಾ ಬಳಿ ಹೋಗಿ ಸಾನ್ಯಾ ಬಗ್ಗೆ ಅಂದು ಹೇಳಿದ ಮಾತು ಹಾಗೂ ನಂದಿನಿ ಮತ್ತು ಜಶ್ವಂತ್ ಅವರ ರಿಲೇಷನ್ ಶಿಪ್ ಬಗ್ಗೆ ಮಾತನಾಡಿದ್ದು ತುಂಬಾ ಗೊಂದಲಕ್ಕೆ ಕಾರಣವಾಗಿದೆ. ಅದು ಈಗ ಒಂದು ಹಂತಕ್ಕೆ ಬಂದು ನಿಂತಿದೆ. ಜನ ನೋಡಿದ್ದಾರೆ, ನಾವೂ ನೋಡಿದ್ದೀವಿ ನೋಡಿದವರಿಗೆ ಒಂದು ಕ್ಲಾರಿಟಿ ಇದೆ. ಆದರೆ ಮನೆಯವರಿಗೆ ಇನ್ನೂ ಯಾವ ಕ್ಲಾರಿಟಿ ಇಲ್ಲ. ಹೀಗಾಗಿ ನಾನು ಒಂದು ಅವಕಾಶ ಕೊಡ್ತೀನಿ, ಎಲ್ಲಿಂದ, ಯಾಕೆ ಸ್ಟಾರ್ಟ್ ಆಯ್ತು, ಹೇಗೆ ಎಂಡ್ ಆಯ್ತು, ಚೈತ್ರಾ ಅವರ ಬಳಿ ಹೋಗಿ ನೀವೂ ಹೇಳಿದ್ದೇನು ಅನ್ನೋದನ್ನು ಕ್ಲಿಯರ್ ಆಗಿ ಹೇಳಿ ಎಂದಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಉದಯ್ ಸೂರ್ಯ ಔಟ್
ಕಿಚ್ಚ ಈ ರೀತಿ ಹೇಳುತ್ತಿದ್ದಂತೆಯೇ ಉದಯ್ ತಬ್ಬಿಬ್ಬಾಗುತ್ತಾರೆ. ಅಲ್ಲದೆ ಪ್ರತಿಕ್ರಿಯಿಸುತ್ತಾ, ಚೈತ್ರಾ ಬಳಿ ಹೋಗಿ ಹೇಳಿದೆ. ಜಶ್ವಂತ್ ಹೋಟೆಲ್ ಊಟಕ್ಕೆ ಹೋಗ್ತಾರೆ. ಇಲ್ಲಿ ಕ್ಯಾಮೆರಾ ಇಲ್ಲದೆ ಇದ್ದಾಗ ಏನೋ ಒಂದು ಆಗಬಹುದು ಎಂದು ಹೇಳಿದೆ ಸರ್ ಅನ್ನುತ್ತಾರೆ. ಆಗ ಸುದೀಪ್, ಸರಿಯಾದ ಕ್ಲಾರಿಟಿ ಸಿಕ್ಕಿಲ್ಲ ಅನ್ನುತ್ತಾ ಮತ್ತೆ ಪ್ರಶ್ನೆ ಮಾಡುತ್ತಾರೆ. ಇಷ್ಟೆ ಆಗಿದ್ದಿದ್ದರೆ ಜಶ್ವಂತ್ ನಿಮ್ಮ ನಡುವೆ ಮಾತುಕತೆಯಾಗುತ್ತಿತ್ತು. ಆದರೆ ಇಲ್ಲಿ ರೂಪೇಶ್ ಹೇಗೆ ಬಂದ್ರು, ಸಾನ್ಯಾ ಹೇಗೆ ಬಂದ್ರು ಅದನ್ನು ಕ್ಲಾರಿಟಿ ಕೊಡಿ ಎಂದಿದ್ದಾರೆ.
ಮತ್ತೆ ತಡಬಡಾಯಿಸಿದ ಉದಯ್, ಸಾನ್ಯಾ ಅವರ ಬಗ್ಗೆ ಮಾತು ಬಂದಾಗ ನನ್ನ ಮತ್ತು ಸಾನ್ಯಾ ನಡುವೆ ಕ್ಲೋಸ್ ನೆಸ್ ಇತ್ತು. ಅದು ಯಾವ ಮಟ್ಟಿಗೆ ಇತ್ತು ಎಂಬುದನ್ನು ಉದಾಹರಣೆ ಕೊಟ್ಟು ಹೇಳಿದೆ ಎಂದು ತೊದಲುತ್ತಲಕೇ ಉದಯ್ ಹೇಳಿದ್ದಾರೆ. ಆ ಉದಾಹರಣೆಯೇ ತುಂಬಾ ಮುಖ್ಯವಾಗಿದ್ದರಿಂದ ಏನು ಉದಾಹರಣೆ ಕೊಟ್ಟಿ ಹೇಳಿದ್ರಿ ಎಂದು ಸುದೀಪ್ ಪ್ರಶ್ನಿಸಿದ್ದಾರೆ. ಆಗ ಉದಯ್, ಗುರೂಜಿ ಹತ್ರ ನಾನು ಕಲರ್ ಕೇಳಿನೇ ಪ್ರತಿ ದಿನ ಬಟ್ಟೆ ಹಾಕುವುದು. ಒಂದು ದಿನ ನಾನು ಕಲರ್ ಕೇಳುವಾಗ ಸಾನ್ಯಾ ಕೂಡ ನನ್ನ ಪಕ್ಕದಲ್ಲಿ ಇದ್ರು. ಆಗ ನನ್ನನ್ನು ಕೇಳಿದ್ರು. ಆ ಕಲರ್ ದು ಒಳ ಉಡುಪು ತೋರಿಸಿದರು. ಇದನ್ನೂ ಓದಿ: ಬಿಗ್ ಬಾಸ್: ಜಯಶ್ರೀಗೆ ಮೆಂಟಲ್ ಆಗೋಗ್ತಿಯಾ ಎಂದು ಎಚ್ಚರಿಕೆ ನೀಡಿದ ನಂದು
ಆಗ ನಾನು ಹೇಳಿದೆ, ಬೇಕಾದರೇ ಗುರೂಜಿ ಹತ್ರ ಹೋಗಿ ತೋರಿಸು ಅವರು ಖುಷಿ ಖುಷಿಯಾಗಿ ಒಪ್ಪಿಕೊಳ್ಳುತ್ತಾರೆ ಎಂದೆ. ಅದಕ್ಕೆ ಅವರು, ಈ ಥರ ಎಲ್ಲಾ ಮಾತನಾಡುವ ಹಾಗಿಲ್ಲ ಅಂತ ನಡೆದ ವಿಚಾರವನ್ನು ತಿಳಿಸಿದ್ದಾರೆ. ಈ ವಿಚಾರದಲ್ಲಿ ಸುದೀಪ್, ಚೈತ್ರಾ ಅವರನ್ನು ಹೊಗಳಿದ್ದಾರೆ. ಉದಯ್ ಅಂದು ಆ ಮಾತು ಹೇಳಿದಾಗ ನೀವು ನಡೆದುಕೊಂಡಿದ್ದು, ನಿಮಗೆ ಹೆಚ್ಚು ಗೌರವ ತಂದುಕೊಟ್ಟಿದೆ ಎಂದಿದ್ದಾರೆ.
Live Tv
[brid partner=56869869 player=32851 video=960834 autoplay=true]
ಜೊತೆ ಜೊತೆಯಲಿ ಟೀಮ್ ನಿಂದ ಹೊಸ ಹೊಸ ಸುದ್ದಿಗಳು ಬರುತ್ತಿವೆ. ಅನಿರುದ್ಧ ಅವರನ್ನು ಧಾರಾವಾಹಿಯಿಂದ ಕೈ ಬಿಟ್ಟಿದ್ದರಿಂದ, ಇವರು ನಿರ್ವಹಿಸುತ್ತಿದ್ದ ಆರ್ಯವರ್ಧನ್ ಪಾತ್ರಕ್ಕೆ ಬೇರೆ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಲಾಯಿತು. ನಿರ್ದೇಶಕ ಅನೂಪ್ ಭಂಡಾರಿ, ನಟರಾದ ಸುನೀಲ್ ಪುರಾಣಿಕ್ ಮತ್ತು ಹರೀಶ್ ರಾಜ್ ಅವರನ್ನು ಪಾತ್ರ ನಿರ್ವಹಿಸಲು ಕೇಳಲಾಯಿತು. ಕೊನೆಗೆ ಹರೀಶ್ ರಾಜ್ ಪಕ್ಕಾ ಆಯ್ಕೆ ಎನ್ನುವ ಸುದ್ದಿಯೂ ಬಂತು. ಆದರೆ, ಇವೆಲ್ಲವೂ ಮತ್ತೆ ಉಲ್ಟಾ ಹೊಡೆಯುತ್ತಿವೆ.
ಧಾರಾವಾಹಿ ಲೋಕದಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಸದ್ಯಕ್ಕೆ ಆರ್ಯವರ್ಧನ್ ಪಾತ್ರಕ್ಕೆ ಯಾರನ್ನೂ ಆಯ್ಕೆ ಮಾಡಿಕೊಳ್ಳುವದಿಲ್ಲವಂತೆ. ಹರೀಶ್ ರಾಜ್ ಅವರು ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ನಟಿಸುತ್ತಿದ್ದರೂ, ಅವರ ಪಾತ್ರ ಬೇರೆಯದ್ದೇ ಆಗಿರಲಿದೆಯಂತೆ. ಆರ್ಯವರ್ಧನ್ ಪಾತ್ರ ಮನೆಬಿಟ್ಟು ಹೋಗಲಿದೆ ಎಂದು ಹೇಳಲಾಗುತ್ತಿದೆ. ಆರ್ಯವರ್ಧನ್ ಪಾತ್ರಕ್ಕೆ ಯಾರನ್ನೂ ಆಯ್ಕೆ ಮಾಡಿಕೊಂಡಿಲ್ಲ ಅಂತಾರೆ, ಮನೆ ಬಿಟ್ಟು ಹೋದ ಆರ್ಯವರ್ಧನ್ ಮುಂದಿನ ದಿನಗಳಲ್ಲಿ ಮತ್ತೆ ವಾಪಸ್ಸು ಮನೆಗೆ ಬಂದರೆ, ಆ ಪಾತ್ರವನ್ನು ಅನಿರುದ್ಧ ಅವರೇ ಮಾಡಲಿದ್ದಾರೆ ಎನ್ನುವ ಅನುಮಾನ ಎಲ್ಲರದ್ದು.
ಆದರೆ, ಇಷ್ಟೊಂದು ರಾದ್ಧಾಂತ ಮಾಡಿಕೊಂಡು, ಒಬ್ಬರಿಗೊಬ್ಬರ ಮೇಲೆ ಕೆಸರಾಟವಾಡಿ ಮತ್ತೆ ಅನಿರುದ್ಧ ಮತ್ತು ನಿರ್ಮಾಪಕ ಆರೂರು ಜಗದೀಶ್ ಒಟ್ಟಿಗೆ ಕೆಲಸ ಮಾಡುತ್ತಾರಾ ಎನ್ನುವ ಪ್ರಶ್ನೆ ಎಲ್ಲರದ್ದು. ಮಾಧ್ಯಮಗಳ ಮುಂದೆ ಆರೋಪ ಪ್ರತ್ಯಾರೋಪ ಮಾಡಿದ ನಂತರ, ವಾಹಿನಿಯ ಪ್ರತಿನಿಧಿಯೇ ಅನಿರುದ್ಧ ಅವರು ಧಾರಾವಾಹಿಯಲ್ಲಿ ಇರುವುದಿಲ್ಲ ಎಂದು ಘೋಷಿದ ಮೇಲೆ ಮತ್ತೆ ಒಂದಾಗಿ ಕೆಲಸ ಮಾಡುವುದು ಅನುಮಾನ ಎನ್ನುವ ಮಾತೂ ಕೇಳಿ ಬರುತ್ತಿದೆ. ಇದನ್ನೂ ಓದಿ:ಅವಳು ನನ್ನನ್ನ ಯೂಸ್ ಮಾಡೋಕೆ ಟಿಶ್ಯೂ ಪೇಪರ್ ಅಲ್ಲ ಎನ್ನುವ ಮಾತಿಗೆ ಗಳಗಳನೆ ಅತ್ತ ಸಾನ್ಯ
ಏನೇ ಇರಲಿ, ಮತ್ತೆ ಅನಿರುದ್ಧ ಅವರು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟಿಸಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆ. ಹಾಗಾಗಿ ವಾಹಿನಿಯ ಮುಖ್ಯಸ್ಥರನ್ನೂ ಸೇರಿಸಿ, ಧಾರಾವಾಹಿಯ ತಂಡಕ್ಕೆ ಒತ್ತಡ ಹಾಕುವಂತಹ ಕೆಲಸಗಳು ತೆರೆಮರೆಯಲ್ಲಿ ನಡೆಯುತ್ತಿದೆ. ಇಬ್ಬರೂ ರಾಜಿಯಾಗಿ ಮತ್ತೆ ಅನಿರುದ್ಧ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿ ಎನ್ನುವುದು ಹಲವು ಜನರ ಆಸೆ. ಮುಂದಿನ ದಿನಗಳಲ್ಲಿ ಏನಾಗತ್ತೋ ಕಾದು ನೋಡಬೇಕು.
Live Tv
[brid partner=56869869 player=32851 video=960834 autoplay=true]
ಬಿಗ್ ಬಾಸ್ ಮನೆ ಸಾಕಷ್ಟು ವಿಚಾರಗಳಿಂದ ನೋಡುಗರ ಗಮನ ಸೆಳೆದಿದೆ. ಇದೀಗ 12 ಸ್ಪರ್ಧಿಗಳ ನಡುವೆ ಜಟಾಪಟಿ ಜೋರಾಗಿದೆ. ಈ ಶೋನಲ್ಲಿ ಸಾನ್ಯ ಅಯ್ಯರ್ ಕೂಡ ಸ್ಟ್ರಾಂಗ್ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಬಾಡಿ ಶೇಮಿಂಗ್ ಜಾಸ್ತಿ ಆಗಿರುವುದರ ಕುರಿತು ಸಾನ್ಯ ಅಯ್ಯರ್ ಮಾತನಾಡಿದ್ದಾರೆ. ಬಾಡಿ ಶೇಮಿಂಗ್ ವಿಚಾರ ಈಗ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.
ದೊಡ್ಮನೆಯಲ್ಲಿ ಭಿನ್ನ ಮನಸ್ಥಿತಿಯ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಅದೇ ರೀತಿ ದೇಹದ ಆಕಾರ, ರೂಪ ಎಲ್ಲವೂ ಬೇರೇ ಬೇರೇ ರೀತಿಯಲ್ಲಿ ಭಿನ್ನವಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಬಾಡಿ ಶೇಮಿಂಗ್ ಎದುರಿಸುತ್ತಿದ್ದಾರೆ. ಆರ್ಯವರ್ಧನ್ ಗುರೂಜಿ ಹೊಟ್ಟೆ ನೋಡಿ ಕೆಲವರು ಟೀಕಿಸಿದ್ದರು. ಹಾಗೆಯೇ ಈ ವಿಚಾರವಾಗಿ ಗೂರೂಜಿ ಬೇಸರ ಹೊರ ಹಾಕಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಿಂದ ಈ ವಾರ ಜಯಶ್ರೀ ಆರಾಧ್ಯಗೆ ಗೇಟ್ ಪಾಸ್?
ಗುರೂಜಿ ಅವರ ಹೊಟ್ಟೆ ನೋಡಿ ಕೆಲವರು ನಕ್ಕಿದ್ದರು. ಅವರು ನೋಡಲು ಸುಂದರವಾಗಿಲ್ಲ ಎಂಬ ಕಾರಣಕ್ಕೆ ಅನೇಕರು ಅವರನ್ನು ಟೀಕೆ ಮಾಡಿದ್ದರು. ಹೀಗಾಗಿ, ತಾವು ಹೊಟ್ಟೆ ಕರಗಿಸಿಕೊಳ್ಳುತ್ತೇವೆ ಎಂಬುದನ್ನು ಆರ್ಯವರ್ಧನ್ ಒತ್ತಿ ಹೇಳಿದ್ದರು. ನನ್ನನ್ನು ನನಗೆ ನೋಡಿಕೊಳ್ಳಲು ಆಗುತ್ತಿಲ್ಲ. ಹೊಟ್ಟೆ ತುಂಬಾ ದೊಡ್ದಾಗಿದೆ. ನನಗೆ ನನ್ನ ಮೇಲೆ ಅಸಹ್ಯ ಹುಟ್ಟುತ್ತಿದೆ. ಮನೆಯಿಂದ ಹೊರ ಹೋಗುವುದಕ್ಕೂ ಮೊದಲು ಹೊಟ್ಟೆ ಕರಗಿಸುತ್ತೇನೆ ಎಂದು ಆರ್ಯವರ್ಧನ್ ಹೇಳಿದ್ದರು.
ತಮ್ಮ ಬಗ್ಗೆಯೇ ಕೆಟ್ಟಾದಾಗಿ ಮಾತನಾಡಿಕೊಂಡ ಗುರೂಜಿಗೆ ಸಾನ್ಯ ಪ್ರತಿಕ್ರಿಯೆ ನೀಡಿದ್ದಾರೆ. ನಿಮ್ಮ ಬಗ್ಗೆ ಮೊದಲು ಕೆಟ್ಟದಾಗಿ ಮಾತನಾಡಬೇಡಿ. ಮೊದಲೇ ಬಿಗ್ ಬಾಸ್ ಮನೆಯಲ್ಲಿ ಬಾಡಿ ಶೇಮಿಂಗ್ ಜಾಸ್ತಿ ಆಗಿದೆ. ನನಗೂ ಈ ಬಗ್ಗೆ ಅನುಭವ ಆಗಿದೆ. ನಮ್ಮನ್ನು ನಾವು ಮೊದಲು ಕೀಳಾಗಿ ನೋಡುವುದನ್ನ ಬಿಡಬೇಕು ಎಂದು ಸಾನ್ಯ ಅಯ್ಯರ್ ಗುರೂಜಿ ಬಳಿ ಮಾತನಾಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ಸ್ಯಾಂಡಲ್ ವುಡ್ ನಟ ಹರೀಶ್ ರಾಜ್ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ನಟಿಸುವುದು ಪಕ್ಕಾ ಆಗಿದೆ. ಈ ಧಾರಾವಾಹಿ ಟೀಮ್ ಕಡೆಯಿಂದ ತಮಗೆ ಕರೆ ಬಂದಿರುವ ವಿಚಾರವನ್ನೂ ಅವರು ಹಂಚಿಕೊಂಡಿದ್ದರು. ತಾವು ಕೂಡ ಸೀರಿಯಲ್ ತಂಡಕ್ಕೆ ಕೆಲವು ಷರತ್ತುಗಳನ್ನು ವಿಧಿಸಿರುವುದಾಗಿ, ಅದಕ್ಕೆ ಅವರು ಒಪ್ಪಿಕೊಂಡರೆ ಧಾರಾವಾಹಿಯಲ್ಲಿ ನಟಿಸುವುದಾಗಿ ತಿಳಿಸಿದ್ದರು. ಹರೀಶ್ ರಾಜ್ ಷರತ್ತುಗಳನ್ನು ವಾಹಿನಿ ಮತ್ತು ಧಾರಾವಾಹಿ ತಂಡ ಒಪ್ಪಿಕೊಂಡಿದೆ ಎನ್ನಲಾಗುತ್ತಿದೆ.
ಹರೀಶ್ ರಾಜ್ ಸಿನಿಮಾ ರಂಗದಲ್ಲೂ ಸಕ್ರೀರಾಗಿರುವ ಕಾರಣದಿಂದ ಹದಿನೈದು ದಿನ ಸೀರಿಯಲ್, ಹದಿನೈದು ದಿನ ಸಿನಿಮಾದಲ್ಲಿ ನಟಿಸುವುದಾಗಿ ಅವರು ವಾಹಿನಿಗೆ ತಿಳಿಸಿದ್ದರಂತೆ. ಈ ಮಾತಿಗೆ ವಾಹಿನಿ ಮತ್ತು ಧಾರಾವಾಹಿ ತಂಡ ಕೂಡ ಒಪ್ಪಿಗೆ ಸೂಚಿಸಿದೆ ಎನ್ನಲಾಗುತ್ತಿದ್ದು, ಅತೀ ಶೀಘ್ರದಲ್ಲೇ ಅವರು ಜೊತೆ ಜೊತೆಯಲಿ ಟೀಮ್ ಸೇರಿಕೊಳ್ಳಲಿದ್ದಾರೆ. ಇದನ್ನೂ ಓದಿ:ಆ ಒಂದು ಹೆಸರಿನ ಟ್ಯಾಟೋನಿಂದ ಎರಡನೇ ಮದುವೆ ವದಂತಿಗೆ ಫುಲ್ ಸ್ಟಾಪ್ ಹಾಕಿದ ಮೇಘನಾ ರಾಜ್
ಈವರೆಗೂ ಅನಿರುದ್ಧ ಅವರು ನಿರ್ವಹಿಸುತ್ತಿದ್ದ ಆರ್ಯವರ್ಧನ್ ಪಾತ್ರಕ್ಕೆ ಹರೀಶ್ ರಾಜ್ ಅವರು ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿತ್ತು. ಆರ್ಯವರ್ಧನ್ ಪಾತ್ರವನ್ನು ಹರೀಶ್ ರಾಜ್ ಮುಂದುವರೆಸಿಕೊಂಡು ಹೋಗಲಿದ್ದಾರೆ ಎನ್ನುವ ಸುದ್ದಿಯಿತ್ತು. ಆದರೆ, ಹರೀಶ್ ರಾಜ್ ಬೇರೆ ಪಾತ್ರವನ್ನು ಮಾಡಲಿದ್ದಾರಂತೆ. ಆ ಪಾತ್ರ ಯಾವುದು? ಆರ್ಯವರ್ಧನ್ ಪಾತ್ರಕ್ಕೂ ಈ ಪಾತ್ರಕ್ಕೂ ಲಿಂಕ್ ಇದೆಯಾ? ಕಥೆಯಲ್ಲಿ ತಿರುವು ಎಂಥದ್ದು ಎನ್ನುವ ಕುತೂಹಲ ಇದೀಗ ಶುರುವಾಗಿದೆ.
Live Tv
[brid partner=56869869 player=32851 video=960834 autoplay=true]
ಧಾರಾವಾಹಿ ಅಂದರೆ ಹಾಗೆನೇ. ತಿರುವುಗಳೇ ಧಾರಾವಾಹಿಯನ್ನು ನೋಡಿಸಿಕೊಂಡು ಹೋಗುತ್ತವೆ. ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ ಅವರನ್ನು ಹೊರಗೆ ಕಳುಹಿಸಿದಾಗ, ಅನಿರುದ್ಧ ಇಲ್ಲದೇ ಆರ್ಯವರ್ಧನ್ ಪಾತ್ರ ಹೇಗೆ ಎಂಬ ಚರ್ಚೆ ಶುರುವಾಗಿತ್ತು. ಆರ್ಯವರ್ಧನ್ ಪಾತ್ರಕ್ಕೆ ಯಾರೆಲ್ಲ ನಟರು ಬರಬಹುದು ಎಂದು ಅಂದಾಜಿಸಲಾಗಿತ್ತು. ಈ ಅಂದಾಜೇ ಬುಡಮೇಲು ಆಗುವಂತಹ ಟ್ವಿಸ್ಟ್ ಅನ್ನು ಧಾರಾವಾಹಿ ತಂಡ ನೀಡಿದೆ.
ಆರ್ಯವರ್ಧನ್ ಪಾತ್ರಕ್ಕಾಗಿ ನಿರ್ದೇಶಕ ಅನೂಪ್ ಭಂಡಾರಿ ಅವರನ್ನು ಕೇಳಲಾಯಿತು. ಸಿನಿಮಾ ಕಾರಣದಿಂದಾಗಿ ಅವರು ಒಪ್ಪಿಕೊಳ್ಳಲಿಲ್ಲ. ಆನಂತರ ಸುನೀಲ್ ಪುರಾಣಿಕ್, ಹರೀಶ್ ರಾಜ್ ರೀತಿಯ ಹೆಸರುಗಳು ಹರಿದಾಡಿದವು. ಹರೀಶ್ ರಾಜ್ ಆ ಪಾತ್ರಕ್ಕೆ ನಿಕ್ಕಿ ಆಗಿದ್ದಾರೆ ಎಂದು ಹೇಳಲಾಗಿತ್ತು. ಇದೆಲ್ಲ ಸುದ್ದಿಯೂ ಸುಳ್ಳಾಗಿದೆ. ಕಥೆಯಲ್ಲಿ ಸಖತ್ ಟ್ವಿಸ್ಟ್ ನೀಡುವ ಮೂಲಕ ಕಥೆಯನ್ನು ಮತ್ತೊಂದು ಹಂತಕ್ಕೆ ತಗೆದುಕೊಂಡು ಹೋಗಿದೆ ಧಾರಾವಾಹಿ ತಂಡ. ಈ ಟ್ವಿಸ್ಟ್ ನೋಡುಗರಿಗೆ ಮತ್ತಷ್ಟು ಥ್ರಿಲ್ ನೀಡಲಿದೆ. ಇದನ್ನೂ ಓದಿ:ಜಯಶ್ರೀಗೆ ಎರಡು ಮದುವೆ ಆಗ್ತವೆ ಎಂದು ಬಿಗ್ ಬಾಸ್ ಮನೆಯಲ್ಲಿ ಭವಿಷ್ಯ ನುಡಿದ ಆರ್ಯವರ್ಧನ್ ಗುರೂಜಿ
ಈಗಾಗಲೇ ಕಥೆಯಲ್ಲಿ ಆರ್ಯವರ್ಧನ್ ಮನೆಬಿಟ್ಟು ಹೋಗಿದ್ದ. ಆನಂತರ ಅನು ಆತನನ್ನು ಹುಡುಕಾಡಿ ಕೊನೆಗೂ ಮನೆಗೆ ಕರೆದುಕೊಂಡು ಬಂದಿದ್ದಾಳೆ. ಮನೆಗೆ ಬಂದ ಆರ್ಯವರ್ಧನ್ ಏನು ಮಾಡುತ್ತಾನೆ ಎನ್ನುವ ಕುತೂಹಲ ಎಲ್ಲರದ್ದು. ಮನೆಗೆ ಬಂದವನು ಏನಾದರೂ ಮಾಡಲಿ. ಆದರೆ, ಆರ್ಯವರ್ಧನ್ ಪಾತ್ರವೇ ಕಥೆಯಲ್ಲಿ ಇರುವುದಿಲ್ಲ ಎನ್ನುವ ಮಾಹಿತಿ ಹರಿದಾಡುತ್ತಿದೆ. ಆ ಪಾತ್ರವನ್ನು ಕೈ ಬಿಟ್ಟು, ಹೊಸ ಪಾತ್ರಕ್ಕೆ ಎಂಟ್ರಿ ಕೊಡುವ ಮೂಲಕ ಕಥೆಗೆ ಮಹಾಟ್ವಿಸ್ಟ್ ನೀಡಲಾಗುತ್ತಿದೆ ಎನ್ನುತ್ತಿವೆ ಮೂಲಗಳು.
ಈ ರೀತಿಯ ಕಥೆಯನ್ನು ಮಾಡಲು ಏಳುಗುಂಡಿಗೆ ಬೇಕು. ಯಾಕೆಂದರೆ, ಕಥಾನಾಯಕನನ್ನೇ ಸ್ಕ್ರೀನ್ ಮೇಲೆ ತೋರಿಸದೇ ಕಥೆ ಹೇಳುವ ಕಲೆ ಅಷ್ಟು ಸುಲಭದ್ದಲ್ಲ. ಅಂತಹ ರಿಸ್ಕ್ ತಗೆದುಕೊಂಡು ಜೊತೆ ಜೊತೆಯಲಿ ಧಾರಾವಾಹಿ ಮುಂದುವರೆಯಲಿದೆ ಎಂದು ಹೇಳಲಾಗುತ್ತಿದೆ. ಮುಂದಿನ ಸಂಚಿಕೆಗಳು ಹೇಗೆ ಇರುತ್ತವೆ ಎನ್ನುವುದನ್ನು ಕಾದು ನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
ಬಿಗ್ ಬಾಸ್ ಮನೆಯ ವಿಡಿಯೋ ತುಣುಕೊಂದನ್ನು ಕಲರ್ಸ್ ವಾಹಿನಿಯು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದೆ. ಅದು ಆರ್ಯವರ್ಧನ್ ಗುರೂಜಿಗೆ ಸಂಬಂಧಿಸಿದ ವಿಡಿಯೋ. ಬಿಗ್ ಬಾಸ್ ಮನೆಯಲ್ಲಿ ಇದ್ದವರಿಗೆ ಟಾಸ್ಕ್ ಹೇಗೆ ಗೆಲ್ಲೋದು ಎನ್ನುವುದು ಚಿಂತೆಯಾದರೆ, ಆರ್ಯವರ್ಧನ್ ಗುರೂಜಿದ್ದು ತಮ್ಮ ಹೊಟ್ಟೆಯನ್ನು ಹೇಗೆ ಕರೆಗಿಸೋದು ಎನ್ನುವ ಚಿಂತೆ. ಹಾಗಾಗಿಯೇ ಯಾವಾಗಲೂ ತಮ್ಮ ಹೊಟ್ಟೆಯನ್ನು ಅಲ್ಲಾಡಿಸುತ್ತಾ ಅದನ್ನು ಕರಗಿಸೋ ಪ್ರಯತ್ನ ಮಾಡುತ್ತಲೇ ಇರುತ್ತಾರೆ.
ಒಂದು ಸಲ ಅಂಗಾತ ಮಲಗಿಕೊಂಡು ಹೊಟ್ಟೆ ಅಲ್ಲಾಡಿಸಿದರೆ, ಮತ್ತೊಂದು ಸಲ ಸೈಡ್ ಗೆ ಮಲಗಿ ಹೊಟ್ಟೆಯನ್ನು ಮುಟ್ಟಿಕೊಳ್ಳುತ್ತಾರೆ. ಇಂತಹ ಹೊಟ್ಟೆ ಇರುವ ಕಾರಣದಿಂದಾಗಿಯೇ ತಮಗೆ ಪದೇ ಪದೇ ಅಡುಗೆ ಮನೆ ನೆನಪಾಗುತ್ತಿದೆ ಎಂದು ಹೇಳುತ್ತಾರೆ. ಅವರಿಗೆ ಹೊಟ್ಟೆಯದ್ದೇ ಬಹುದೊಡ್ಡ ಚಿಂತೆಯಾಗಿದೆ. ಏನಾದರೂ ಮಾಡಿ, ಇದನ್ನು ಕರಗಿಸಲೇಬೇಕಲ್ಲ ಎಂದು ಪಣತೊಟ್ಟಿರುವ ರೀತಿಯಲ್ಲಿ ಹೊಟ್ಟೆಯನ್ನು ಸದಾ ಮುಟ್ಟಿಕೊಂಡು ಅಲ್ಲಾಡಿಸ್ತಾ ಇರುತ್ತಾರೆ. ಇದನ್ನೂ ಓದಿ:ಜಯಶ್ರೀ ಜೊತೆ ಸೋನು ಶ್ರೀನಿವಾಸ್ ಗೌಡ ಕಿರಿಕ್
ಕೇವಲ ಆರ್ಯವರ್ಧನ್ ಗುರೂಜಿಗೆ ಮಾತ್ರ ಹೊಟ್ಟೆ ಬಗ್ಗೆ ಯೋಚನೆ ಇಲ್ಲ. ಸಹ ಸ್ಪರ್ಧಿಗಳು ಕೂಡ ಗುರೂಜಿ ಹೊಟ್ಟೆಯ ಬಗ್ಗೆಯೇ ಮಾತಾಡುವಂತಾಗಿದೆ. ಕೆಲವರು ಆರ್ಯವರ್ಧನ್ ಅವರ ಡೊಳ್ಳು ಹೊಟ್ಟೆನ್ನು ಮುಟ್ಟಿ, ಏನ್ ಸಖತ್ತಾಗಿ ಬೆಳೆಸಿದ್ದೀರಿ ಸರ್ ಎಂದು ತಮಾಷೆ ಮಾಡುತ್ತಾರೆ. ಹೊಟ್ಟೆ ಮುಟ್ಟಿ ಮುಟ್ಟಿ ತಮಾಷೆ ತಗೆದುಕೊಳ್ಳುತ್ತಾರೆ. ಏನೇ ಇರಲಿ, ಪಾಪ ಅಂತಹ ಹೊಟ್ಟೆ ಇಟ್ಟುಕೊಂಡು ಗುರೂಜಿ ಸಖತ್ ಆಗಿಯೇ ಆಟ ಆಡುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
ಆರ್ಯವರ್ಧನ್ ಗುರೂಜಿ ಬಿಗ್ ಬಾಸ್ ಮನೆಯಲ್ಲೂ ಭವಿಷ್ಯ ಹೇಳಲು ಶುರು ಮಾಡಿದ್ದಾರೆ. ತಮ್ಮ ಸಹ ಸ್ಪರ್ಧಿ ಜಯಶ್ರೀಗೆ ಭವಿಷ್ಯ ಹೇಳುವ ಮೂಲಕ ಆತಂಕ ಮೂಡಿಸಿದ್ದಾರೆ. ಈಗಾಗಲೇ ಮದುವೆ ಆದ ವ್ಯಕ್ತಿಯ ಜೊತೆ ರಿಲೇಷನ್ ಶಿಪ್ ನಲ್ಲಿ ಇದ್ದೆ ಎಂದು ಬಿಗ್ ಬಾಸ್ ಮನೆಯಲ್ಲಿ ಜಯಶ್ರೀ ಹೇಳಿಕೊಂಡಿದ್ದರು. ಆದರೂ, ಅವರಿಗೆ ಎರಡು ಮದುವೆ ಆಗುತ್ತವೆ ಎಂದು ಗುರೂಜಿ ಭವಿಷ್ಯ ನುಡಿದಿದ್ದಾರೆ.
ನಿನಗೆ ಎರಡು ಮದುವೆ ಆಗುತ್ತವೆ. ಚೆನ್ನಾಗಿರೋ ಮಕ್ಕಳು ಹುಟ್ತವೆ. ಮಕ್ಕಳನ್ನು ನೀನು ಚೆನ್ನಾಗಿಯೇ ನೋಡ್ಕೋತೀಯಾ. ನಿನಗೆ ಹುಟ್ಟಿರುವ ಮಕ್ಕಳು ನಿನಗಿಂತೂ ಎತ್ತರವಾಗಿ ಬೆಳೆಯುತ್ತವೆ. ನಿನ್ನ ಮಕ್ಕಳು ಪುಣ್ಯ ಮಾಡಿರುತ್ತವೆ ಎಂದು ಭವಿಷ್ಯ ನುಡಿದಿರುವ ಆರ್ಯವರ್ಧನ್ ಗುರೂಜಿ. ಮದುವೆ ಬಗ್ಗೆ ಜಯಶ್ರೀ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:‘ಜೊತೆ ಜೊತೆಯಲಿ’ ಅನಿರುದ್ಧ ಗಲಾಟೆ ಧಾರವಾಡಕ್ಕೆ ಶಿಫ್ಟ್: ಪ್ರಕರಣ ತಿಳಿಗೊಳಿಸಲು ಸ್ನೇಹಿತರ ಮನವಿ
ಇದೇ ಸಂದರ್ಭದಲ್ಲಿ ಜಯಶ್ರೀ ತನ್ನ ಬ್ಯುಸಿನೆಸ್ ಬಗ್ಗೆಯೂ ಭವಿಷ್ಯ ಕೇಳಿದರು. ಅದಕ್ಕೂ ಉತ್ತರ ನೀಡಿದ ಆರ್ಯವರ್ಧನ್ ಗುರೂಜಿ, ನಿನಗೆ ಯಾರು ಸಿಗುತ್ತಾರೋ ಅವರನ್ನು ಸರಿಯಾದ ರೀತಿಯಲ್ಲಿ ಬಳಸಿಕೊ ಎಂದು ಕರೆ ನೀಡುತ್ತಾರೆ. ಜಯಶ್ರೀ ನಟಿಸುವ ಸಿನಿಮಾಗಳು ಗೆಲ್ಲದೇ ಇದ್ದರೂ, ಸಿನಿಮಾ ಮಾಡುತ್ತೀಯಾ ಎಂದೂ ಹೇಳಿದ್ದಾರೆ. ಅಲ್ಲದೇ, ಜಯಶ್ರೀಗೆ ದುಡ್ಡು ಮುಖ್ಯ ಎಂದು, ನಿನಗೆ ಮೋಸ ಮಾಡುವವರು ಇರುತ್ತಾರೆ ಎಂದು ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.
ಜಯಶ್ರೀಗೆ ಭವಿಷ್ಯ ನುಡಿದದ್ದು ಬಿಗ್ ಬಾಸ್ ಮನೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮೊದಲಿನಿಂದಲೂ ಬಿಗ್ ಬಾಸ್ ಮನೆಯ ಹಲವು ಸದಸ್ಯರು ಆರ್ಯವರ್ಧನ್ ಗುರೂಜಿ ಭವಿಷ್ಯದ ಬಗ್ಗೆ ಅಪನಂಬಿಕೆ ವ್ಯಕ್ತ ಪಡಿಸುತ್ತಲೇ ಬಂದಿದ್ದಾರೆ. ಬರೀ ಸುಳ್ಳುಗಳನ್ನು ಹೇಳುತ್ತಾರೆ ಎಂದು ಟೀಕೆ ಮಾಡಿದ್ದಾರೆ. ಯಾವ ಭವಿಷ್ಯವೂ ನಿಜವಾಗುವುದಿಲ್ಲ, ತಲೆ ಕೆಡಿಸಿಕೊಳ್ಳಬೇಡಿ ಎಂದು ಹೇಳಿದವರು ಇದ್ದಾರೆ. ಇದೀಗ ಜಯಶ್ರೀ ಈ ಭವಿಷ್ಯವನ್ನು ಯಾವ ರೀತಿ ತಗೆದುಕೊಳ್ಳುತ್ತಾರೋ ನೋಡಬೇಕು.
Live Tv
[brid partner=56869869 player=32851 video=960834 autoplay=true]