Tag: Aryavardhan Guruji

  • ‘ಬಿಗ್ ಬಾಸ್’ ಮನೆಯಲ್ಲಿ ಜಯಶ್ರೀ ಕಡೆಯಿಂದ ಮೇಕಪ್  ಮಾಡಿಸಿಕೊಂಡ ಆರ್ಯವರ್ಧನ್ ಗುರೂಜಿ

    ‘ಬಿಗ್ ಬಾಸ್’ ಮನೆಯಲ್ಲಿ ಜಯಶ್ರೀ ಕಡೆಯಿಂದ ಮೇಕಪ್ ಮಾಡಿಸಿಕೊಂಡ ಆರ್ಯವರ್ಧನ್ ಗುರೂಜಿ

    ದೊಡ್ಮನೆ ಕಾಳಗ ಈಗಾಗಲೇ ಶುರುವಾಗಿ ಒಂದು ವಾರ ಪೂರೈಸಿದೆ. ಬಿಗ್ ಬಾಸ್ ಮನೆ ಒಂದಲ್ಲಾ ಒಂದು ವಿಚಾರವಾಗಿ ಸದ್ದು ಮಾಡುತ್ತಲೇ ಇದೆ. ಸ್ಪರ್ಧಿಗಳು ನಾ‌ನಾ ವಿಚಾರವಾಗಿ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ಸದ್ಯ ಜಯಶ್ರೀ ಆರಾಧ್ಯ ಅವರು ಗುರೂಜಿ ಆರ್ಯವರ್ಧನ್ ಮೇಕಪ್ ಮಾಡಿರೋದು ನೆಟ್ಟಿಗರ ಗಮನ ಸೆಳೆದಿದೆ.

    ನಂಬರ್ ಅಂದ್ರೆ ನಾನು​, ನಾನು ಅಂದ್ರೆ ನಂಬರ್ ಎಂದು ಭವಿಷ್ಯ ಹೇಳುವ ಆರ್ಯವರ್ಧನ್​ ಗುರೂಜಿ ಬಿಗ್​ ಬಾಸ್​ ಮನೆಯಲ್ಲಿ ಎಲ್ಲರೊಂದಿಗೆ ಬೆರೆತುಕೊಂಡು ಭಿನ್ನವಾಗಿ ಆಡುತ್ತಿದ್ದಾರೆ. ಹೀಗೆ ಬಿಗ್​ ಬಾಸ್​ ಮನೆಯ ಹೊರಾಂಗಣದಲ್ಲಿರುವಾಗ ಮೇಕಪ್​ ಹಚ್ಚಿಕೊಳ್ಳುವ ಬಯಕೆಯನ್ನು ತೋರ್ಪಡಿಸಿಕೊಂಡಿದ್ದಾರೆ. ಈ ವೇಳೆ ಹಿರಿಯ ಕಲಾವಿದೆ ಮಾರಿಮುತ್ತು ಅವರ ಮೊಮ್ಮಗಳು ಜಯಶ್ರೀ ಅವರು ಆರ್ಯವರ್ಧನ್​ ಗುರೂಜಿಗೆ ಮೇಕಪ್​ ಮಾಡಿದ್ದಾರೆ. ಇದನ್ನೂ ಓದಿ:ನಾನು ಮತ್ತು ರೂಪೇಶ್ ಶೆಟ್ಟಿ ಜಸ್ಟ್ ಫ್ರೆಂಡ್ಸ್, ಅಂಥದ್ದೇನೂ ಇಲ್ಲ: ಸಾನ್ಯಾ ಅಯ್ಯರ್

    ಜಯಶ್ರೀ ಅವರ ಸಹಾಯದಿಂದ ಕಣ್ಣಿಗೆ ಕಾಜಲ್​, ಮುಖಕ್ಕೆ ಮೇಕಪ್​, ತುಟಿಗೆ ಲಿಪ್​ಸ್ಟಿಕ್​​ ಹಾಕಿಕೊಂಡಿದ್ದಾರೆ. ಬಳಿಕ ತುಟಿಗೆ ಹಚ್ಚಿರುವ ಮೇಕಪ್​ ಕೊಂಚ ಜಾಸ್ತಿಯಾದಂತೆ ಗುರೂಜಿಗೆ ಕಂಡಿದೆ. ಕೂಡಲೇ ಉಜ್ಜಲು ಪ್ರಯತ್ನಿಸಿದ್ದಾರೆ. ಈ ವೇಳೆ ಹತ್ತಿರವಿದ್ದ ಸ್ಪರ್ಧಿ ಸೋಮಣ್ಣ ಮಾಚಿವಾಡ ಅವರು ಗುರೂಜಿಗೆ ಹಾಗೆಯೇ ಇರಲಿ ತೆಗೆಯಬೇಡಿ ಎಂದು ಹೇಳಿದ್ದಾರೆ. ಕನ್ನಡಿ ನೋಡಿದ ಗುರೂಜಿ ಜಯಶ್ರೀ ಅವರ ಬಳಿ, ಇಷ್ಟೇನಾ ಮೇಕಪ್​ ಕರ್ರಗೆ ಕಾಣಿಸ್ತಾ ಇದ್ದೇನೆ, ಬೆಳ್ಳಗೆ ಮಾಡಿ ಎಂದಿದ್ದಾರೆ. ಒಟ್ನಲ್ಲಿ‌ ಈಗ ಗುರೂಜಿ ಹೊಸ ಲುಕ್ ಜತೆಗೆ ಜಯಶ್ರೀ ಮೇಕಪ್ ಮಾಡಿರುವ ರೀತಿ ನೆಟ್ಟಿಗರ ಗಮನ ಸೆಳೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ದೊಡ್ಮನೆಯಲ್ಲಿ ಉಳಿವವರ ಅಂತಿಮ ಪಟ್ಟಿ: ಏನ್ ಆಟ ಆಡಿಸ್ತಾನ್ರಿ ಈ ಬಿಗ್ ಬಾಸ್

    ದೊಡ್ಮನೆಯಲ್ಲಿ ಉಳಿವವರ ಅಂತಿಮ ಪಟ್ಟಿ: ಏನ್ ಆಟ ಆಡಿಸ್ತಾನ್ರಿ ಈ ಬಿಗ್ ಬಾಸ್

    ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಇಂದಿನಿಂದ ಓಟಿಟಿಯಲ್ಲಿ ಮೂಡಿ ಬರುತ್ತಿರುವ ಬಿಗ್ ಬಾಸ್ ಶೋ ಗ್ರ್ಯಾಂಡ್ ಎಂಟ್ರಿ ಎಪಿಸೋಡ್ ಈಗಾಗಲೇ ಪ್ರಾರಂಭವಾಗಿದೆ. ಓಟಿಟಿ ಸೀಸನ್‌ 1ನಲ್ಲಿ ಯಾರೆಲ್ಲಾ ಕಾಣಿಸಿಕೊಳ್ಳುತ್ತಾರೆ ಎನ್ನುವ ಕುತೂಹಲಕ್ಕೆ ಬ್ರೇಕ್‌ ಬಿದ್ದಿದೆ. ಈ ಬಾರಿ ಸೋಷಿಯಲ್‌ ಮೀಡಿಯಾ, ಪತ್ರಿಕೋದ್ಯಮ, ಕಿರುತೆರೆ, ಸಿನಿಮಾ, ರೇಡಿಯೋ ಹೀಗೆ ಮುಂತಾದ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ.

    ಮೊದಲನೇ ಸ್ಪರ್ಧಿಯಾಗಿ ನಾನೆಂದರೆ ನಂಬರ್, ನಂಬರ್ ಅಂದರೆ ನಾನು ಎಂದು ಅಂಕಿಸಂಖ್ಯೆ ಭವಿಷ್ಯ ಹೇಳುವ ಜ್ಯೋತಿಷಿ ಆರ್ಯವರ್ಧನ್ ಗುರೂಜಿ ಈಗಾಗಲೇ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಎರಡನೇ ಸ್ಪರ್ಧಿಯಾಗಿ ಕಾಲಿಟ್ಟವರು ಟಿಕ್ ಟಾಕ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ಸೋನು ಗೌಡ ಈಗಾಗಲೇ ಹಿರಿಮನೆ ಪ್ರವೇಶಿಸಿರುವುದು ಗೊತ್ತಿರುವ ವಿಚಾರವೇ ಆಗಿದೆ.

    ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ಮನೋಜ್ಞ ನಟನೆಯ ಮೂಲಕ ಸೈ ಎನಿಸಿಕೊಂಡಿದ್ದ ನಟಿ ಡೈಸಿ ಭೂಪಣ್ಣ, ಅಕ್ಷತಾ ಅಶೋಕ್‌, ಚಿತ್ರನಟ ರಾಕೇಶ್‌ ಅಡಿಗ ಇದೀಗ ಬಿಗ್‌ ಬಾಸ್‌ ಒಟಿಟಿ ಮೂಲಕ ರಂಜಿಸಲಿದ್ದಾರೆ. ಇದನ್ನೂ ಓದಿ: ‘ಬಿಗ್ ಬಾಸ್’ ಮನೆಯಲ್ಲಿ ಆರ್ಯವರ್ಧನ್ ಗುರೂಜಿ ಜೊತೆ ಸ್ಪರ್ಧಿಸಲಿದ್ದಾರೆ ಈ ಬೆಡಗಿಯರು

    ಜಯಶ್ರೀ, ಜಸ್ವಂತ್‌ ಭೂಪಣ್ಣ, ಪುಟ್ಟ ಗೌರಿಯ ಮದುವೆ ಸೀರಿಯಲ್ ಖ್ಯಾತಿಯ ಸಾನ್ಯ ಅಯ್ಯರ್‌, ಚೈತ್ರಾ ಪೂಜಾರಿ, ಜಗದೀಶ್‌ ಪೂಜಾರಿ, ಸ್ಪೂರ್ತಿ ಕೆ.ಎಸ್‌, ಕಿರಣ್‌ ಕುಮಾರ್‌ ಯೋಗೇಶ್ವರ್‌, ಖಾಸಗಿ ಚಾನೆಲ್‌ವೊಂದರ ನಿರೂಪಕ ಕೂಡ ಭಾಗಿಯಾಗಲಿದ್ದಾರೆ.

    ನಟ, ನಿರ್ದೇಶಕ ಮತ್ತು ಖಾಸಗಿ ಎಫ್ ಎಂ ವಾಹಿನಿಯಲ್ಲಿ ಕೆಲಸ ಮಾಡುವ ರೂಪೇಶ್ ಶೆಟ್ಟಿ ಕೂಡ ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಅರ್ಜುನ್‌, ವಿವೇಕ್‌, ಲೋಕೇಶ್‌ ಭಾಗವಹಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಬಿಗ್ ಬಾಸ್’ ಮನೆಯಲ್ಲಿ ಆರ್ಯವರ್ಧನ್ ಗುರೂಜಿ ಜೊತೆ ಸ್ಪರ್ಧಿಸಲಿದ್ದಾರೆ ಈ ಬೆಡಗಿಯರು

    ‘ಬಿಗ್ ಬಾಸ್’ ಮನೆಯಲ್ಲಿ ಆರ್ಯವರ್ಧನ್ ಗುರೂಜಿ ಜೊತೆ ಸ್ಪರ್ಧಿಸಲಿದ್ದಾರೆ ಈ ಬೆಡಗಿಯರು

    ಕೆಲವೇ ಗಂಟೆಗಳಲ್ಲಿ ಬಿಗ್ ಬಾಸ್ ಶೋ ಶುರುವಾಗಲಿದೆ. ಈ ಬಾರಿ ದೊಡ್ಮನೆಯಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವ ಲೆಕ್ಕಾಚಾರ ಕೂಡ ಶುರುವಾಗಿದೆ. ಕ್ಷಣ ಕ್ಷಣದ ಅಪ್ ಡೇಟ್ ಕೊಡುತ್ತಿರುವ ಪಬ್ಲಿಕ್ ಟಿವಿ ಡಿಜಿಟೆಲ್ ಗೆ ಹಲವು ಎಕ್ಸ್ ಕ್ಲೂಸಿವ್ ಸಂಗತಿಗಳು ದೊರೆತಿವೆ. ನಿನ್ನೆಯಿಂದಲೇ ಗ್ರ್ಯಾಂಡ್ ಓಪನಿಂಗ್ ಎಪಿಸೋಡ್ ಚಿತ್ರೀಕರಣವಾಗಿದ್ದು, ಈಗಾಗಲೇ ಮನೆಯಲ್ಲಿ 16 ಸ್ಪರ್ಧಿಗಳು ಕಾಲಿಟ್ಟಿದ್ದಾರೆ. ಅವೆಲ್ಲವೂ ಶೂಟಿಂಗ್ ಆಗಿದೆ. ಈ ಬಾರಿ ಕೆಲ ಅಚ್ಚರಿಯ ವ್ಯಕ್ತಿಗಳು ಬಿಗ್ ಬಾಸ್ ಮನೆಗೆ ಪ್ರವೇಶ ಪಡೆದಿದ್ದಾರೆ.

    ನಾನೆಂದರೆ ನಂಬರ್, ನಂಬರ್ ಅಂದರೆ ನಾನು ಎಂದು ಅಂಕಿಸಂಖ್ಯೆ ಭವಿಷ್ಯ ಹೇಳುವ ಆರ್ಯವರ್ಧನ್ ಗುರೂಜಿ ಕೂಡ ಈ ಬಾರಿ ಬಿಗ್ ಬಾಸ್ ಮನೆಯಲ್ಲಿದ್ದಾರಂತೆ. ಇವರೊಂದಿಗೆ ಮಿಮಿಕ್ರಿಗೆ ಹೆಸರಾಗಿರುವ ಗೋಪಿ ಕೂಡ ಬಲಗಾಲಿಟ್ಟು ಮನೆ ಒಳಗೆ ಹೋಗಿದ್ದಾರೆ. ರಾಜಕಾರಣಗಳ ಮತ್ತು ಸಿನಿಮಾ ನಟರ ಧ್ವನಿಯನ್ನು ಅನುಕರಣೆ ಮಾಡುವ ಮೂಲಕ ಫೇಮಸ್ ಆಗಿರುವ ಗೂಪಿ, ಈ ಬಾರಿ ಮನೆಯಲ್ಲಿ ಎಲ್ಲರನ್ನೂ ರಂಜಿಸಲಿದ್ದಾರೆ. ಇದನ್ನೂ ಓದಿ:ಮತ್ತೆ ಟಾಪ್‌ಲೆಸ್ ಅವತಾರದಲ್ಲಿ ಬಂದ ಉರ್ಫಿ ಜಾವೇದ್: ನೆಟ್ಟಿಗರಿಂದ ನಟಿಗೆ ಕ್ಲಾಸ್

    ನಟ ಕಂ ನಿರ್ದೇಶಕ ನವೀನ್ ಕೃಷ್ಣ ಕೂಡ ದೊಡ್ಮೆನೆ ಪ್ರವೇಶ ಮಾಡಿದ್ದಾರೆ. ಕಲಾವಿದರ ಕುಟುಂಬದಿಂದ ಬಂದಿರುವ ನವೀನ್ ಕೃಷ್ಣ, ಕಾಮಿಡಿ ಮತ್ತು ಗಂಭೀರ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಕೆಲ ವರ್ಷಗಳಿಂದ ಬಿಗ್ ಬಾಸ್ ಲಿಸ್ಟ್ ನಲ್ಲಿ ಇವರ ಹೆಸರು ಕೇಳಿ ಬರುತ್ತಿತ್ತು, ಈ ಬಾರಿ ಅದು ನಿಜವಾಗಿದೆ. ನಟ, ನಿರ್ದೇಶಕ ಮತ್ತು ಖಾಸಗಿ ಎಫ್ ಎಂ ವಾಹಿನಿಯಲ್ಲಿ ಕೆಲಸ ಮಾಡುವ ರೂಪೇಶ್ ಶೆಟ್ಟಿ ಕೂಡ ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ ಎನ್ನಲಾಗುತ್ತಿದೆ.

    ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮೂಲಕವೇ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ, ಸದಾ ನಗುವ ಬೆಡಗಿ ಭೂಮಿಕಾ ಬಸವರಾಜ್ ಕೂಡ ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಜೊತೆಗೆ ಪುಟ್ಟ ಗೌರಿಯ ಮದುವೆ ಸೀರಿಯಲ್ ಖ್ಯಾತಿಯ ಸಾನ್ವಿ ಕೂಡ ನಿನ್ನೆ ಚಿತ್ರೀಕರಣ ಮುಗಿಸಿಕೊಂಡು ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಿದ್ದಾರೆ. ಖಾಸಗಿ  ವಾಹಿನಿಯ ನಿರೂಪಕರೊಬ್ಬರಿಗೂ ಈ ಬಾರಿ ಮನೆಗೆ ಹೋಗಲು ಅನುಮತಿಸಲಾಗಿದೆ.

    ಸಾಮಾಜಿಕ ಕಾರ್ಯಕರ್ತೆ ಕೆಚ್ಚೆದೆಯ ಕನ್ನಡತಿ ಅಕ್ಕ ಅನು, ರಿಯಾಲಿಟಿ ಶೋ ಸಿಂಗರ್ ಆಶಾ ಭಟ್, ನಟ ತರುಣ್ ಚಂದ್ರ, ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಮತ್ತು ಕಾಫಿ ನಾಡು ಚಂದ್ರು ಕೂಡ ಈ ಬಾರಿ ಮನೆಯಲ್ಲಿ ಇರಲಿದ್ದಾರೆ ಎನ್ನಲಾಗುತ್ತಿದೆ. ಈ ಲಿಸ್ಟ್ ಬಹುತೇಕ ಖಚಿತ ಎನ್ನುವ ಮಾಹಿತಿ ಕೂಡ ಲಭ್ಯವಾಗಿದೆ.

    Live Tv
    [brid partner=56869869 player=32851 video=960834 autoplay=true]