Tag: Aryavardhan Guruji

  • ಪ್ರೀತಿಯಿಂದ ಆಯ್ಕೆ ಮಾಡಿದ ಸೋನು ಮಾತಿನಿಂದ ಜಯಶ್ರೀಗೆ ಬೇಸರ –  ಎಲ್ಲರೂ ದಂಗಾಗುವಂತೆ ಕಿರುಚಿದ್ಯಾಕೆ ಜಯಶ್ರೀ

    ಪ್ರೀತಿಯಿಂದ ಆಯ್ಕೆ ಮಾಡಿದ ಸೋನು ಮಾತಿನಿಂದ ಜಯಶ್ರೀಗೆ ಬೇಸರ – ಎಲ್ಲರೂ ದಂಗಾಗುವಂತೆ ಕಿರುಚಿದ್ಯಾಕೆ ಜಯಶ್ರೀ

    ವತ್ತಿನ ಎಪಿಸೋಡ್ ಪೂರ್ತಿ ಗುರೂಜಿಯ ಸ್ವಾರ್ಥ, ಆ ಸ್ವಾರ್ಥದ ಹಿಂದಿನ ಉದ್ದೇಶ, ಅದರ ಜೊತೆಗೆ ಹೊತ್ತಿಕೊಂಡ ಬೆಂಕಿಯಿಂದಾನೇ ಅರ್ಧ ದಿನ ಕಳೆದು ಹೋಯ್ತು. ಗುರೂಜಿ ಹೇಳಿದ ಮಾತುಗಳಿಗೆ, ಸೋನು ಮತ್ತು ಜಯಶ್ರೀ ಕೊಟ್ಟ ವಿವರಣೆಗೆ ರೂಪೇಶ್ ಅಂಡ್ ರಾಕೇಶ್ ಬಿದ್ದು ಬಿದ್ದು ನಕ್ಕಿದ್ದಾರೆ. ಇಷ್ಟು ದಿನದ ಬಿಗ್ ಬಾಸ್ ಮನೆಯಲ್ಲಿ ಇಷ್ಟು ಒಳ್ಳೆಯ ಎಂಟರ್ಟೈನ್ಮೆಂಟ್ ಸಿಕ್ಕಿದ್ದು ಇಲ್ಲವೇ ಇಲ್ಲ ಎನಿಸುತ್ತದೆ.

    ಜಯಶ್ರೀ, ಸೋನುಳನ್ನು ಆಯ್ಕೆ ಮಾಡಿದ್ದಕ್ಕೆ ಗುರೂಜಿ ಕೋಪ ಹೆಚ್ಚಾಗಿದೆ. ಅದನ್ನು ಸೋಫಾದ ಮೇಲೆ ಕುಳಿತಾಗಲೂ ಹೇಳಿದ್ದಾರೆ. ಜಯಶ್ರೀ ನೋಡುವ ತನಕ ನೋಡಿ ಇದ್ಯಾಕೋ ನಿಲ್ಲಲ್ಲ ಎಂದು ಗೊತ್ತಾದಾಗ ಅಡುಗೆ ಮನೆ ಕಡೆಗೆ ಬಂದಿದ್ದಾಳೆ. ಆಗ ಸೋಮಣ್ಣ ಮತ್ತು ಸಾನ್ಯಾಗೆ ಅಲ್ಲಿ ಏನೆಲ್ಲಾ ನಡೆಯಿತು ಎಂಬುದನ್ನು ವಿವರಿಸಿದ್ದಾಳೆ. ಅದೇ ಸಮಯಕ್ಕೆ ಗುರೂಜಿ ಮತ್ತೆ ಅಲ್ಲಿಗೆ ಬಂದಿದ್ದಾರೆ. ಬದವರು ಮತ್ತೆ ಅದೇ ಆಯ್ಕೆಯ ವಿಚಾರ ತೆಗೆದಿದ್ದಾರೆ. ಜಯಶ್ರೀ ಅದಾಗ್ಯೂ ನಾನು ಈಗಾಗಲೇ ಎಲ್ಲವನ್ನು ವಿವರಿಸಿದ್ದೀನಿ ಎಂದೇ ಹೇಳಿದ್ದಾಳೆ. ಆದರೆ ಗುರೂಜಿ ಮಾತ್ರ ತನ್ನ ವಿವರಣೆಯನ್ನು ಮಾತ್ರ ನಿಲ್ಲಿಸಲೇ ಇಲ್ಲ. ಇದನ್ನೂ ಓದಿ: ಸೋನು ಆಯ್ಕೆ ಮಾಡಿದ್ದಕ್ಕೆ ಗುರೂಜಿಗೆ ಕೋಪ – ನನ್ನ ವೋಟಿಗೆ ನ್ಯಾಯ ಬೇಕೆಂದು ಮನೆ ತುಂಬಾ ರಾದ್ಧಾಂತ!

    ನಿಂದೆಲ್ಲಾ ಓಕೆ, ನಾಲ್ಕು ಜನ ಒಳಗೆ ಇದ್ದಾಗ ನೀನು ಯೋಚಿಸಬೇಕು. ಇಲ್ಲಿಗೆ ಆಗೋಯ್ತು ಬಿಡು ಆದರೆ ಹೊರಗು ಸರಿಯಾಗಿ ಯೋಚನೆ ಮಾಡು ಎಂದು ಜಯಶ್ರೀಗೆ ಬುದ್ದಿ ಹೇಳಿದ್ದಾರೆ. ಅಲ್ಲಿಯೇ ಇದ್ದ ಸೋಮಣ್ಣ, ಆಯ್ತು ನೀವೂ ಇವತ್ತು ಎರಡು ಆಟ ಗೆದ್ದಿದ್ದೀರಿ ಅದನ್ನು ಸಂತೋಷ ಪಡಿ ಎಂದಿದ್ದಾರೆ. ಆಗ ಸುಮ್ಮನೆ ಕುಳಿತುಕೊಳ್ಳದ ಸೋನು, ಅವಳು ಅಂದುಕೊಂಡಿರಬಹುದು. ಈಗಾಗಲೇ ಎರಡು ಗೇಮ್ ಸೋತಿದ್ದೀನಿ ಮತ್ತೆ ಸೋಲುವುದು ಬೇಡ ಅಂತ ಆ ರೀತಿ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಒತ್ತಿ ಒತ್ತಿ ಹೇಳಿದ್ದಾಳೆ. ಈ ಮಧ್ಯೆ ಮತ್ತೆ ಮಾತನಾಡಿದ ಗುರೂಜಿ, ಅವರ ಬದಲು ನೀವೇ ವೋಟನ್ನು ಕೊಡಿ. ನಮ್ಮ ಮಧ್ಯೆ ಈ ರೀತಿ ಮಾತುಕತೆಯಾಗಿದೆ ಅಂತ ಕೇಳಬೇಕಿತ್ತು ಎಂದು ಸೋಮಣ್ಣನ ಬಳಿ ಹಂಚಿಕೊಳ್ಳುತ್ತಾ ಇದ್ದರು. ಇದನ್ನೂ ಓದಿ: ಆರ್ಯವರ್ಧನ್ ಮುಗ್ಧರಲ್ಲ ಅನ್ನೋದು ಮನೆಮಂದಿಗೆಲ್ಲ ಪ್ರೂವ್ ಆಯ್ತು!

    ಆಗ ಮತ್ತೆ ಮಾತು ಶುರು ಮಾಡಿದ ಸೋನು, ನೀನು ಅವರ ವೋಟು ತೆತಗೆದುಕೊಂಡು ದೊಡ್ಡ ತಪ್ಪು ಮಾಡಿದೆ ಎಂದು ಜಯಶ್ರೀಗೆ ಹೇಳಿದ್ದಾಳೆ. ಜಯಶ್ರೀ, ಆಯ್ತು ಬಿಡೆ. ಅದನ್ನೇ ಎಳಿಬೇಡ ಎಂದು ಇತ್ತ ಗುರೂಜಿಗೂ ಬುದ್ದಿ ಹೇಳಿದ್ದಾಳೆ. ಆಯ್ತು ಒಂದು ಮಾತಿಗೆ ಇದನ್ನು ಬಿಡಿ ಗುರೂಜಿ ಎಂದಿದ್ದಾಳೆ. ಆಗ ಮತ್ತೆ ಗುರೂಜಿ ಎರಡು ಥರ ಮಾತನಾಡಬೇಡ ಎಂದಿದ್ದಾರೆ. ಆಗ ಮತ್ತೆ ರೊಚ್ಚಿಗೆದ್ದ ಸೋನು, ಎರಡು ಥರ ಯಾರು ಮಾತನಾಡುತ್ತಿಲ್ಲ ಇಲ್ಲಿ. ನೆಗೆಟಿವಿಟಿಯಿಂದಾನೇ ಅವಳು ಬಿಟ್ಟಿದ್ದಾಳೆ. ಎರಡು ಗೇಮ್ ಸೋತಿರೋದಕ್ಕೆ ಬಿಟ್ಟಿದ್ದಾಳೆ ಎಂದಾಗ ಜಯಶ್ರೀ ಆ ಥರ ಎಲ್ಲಾ ಹೇಳಬೇಡ ಸೋನು, ಈ ಮಾತನ್ನೆಲ್ಲಾ ನಾನು ತಗೋಳುವುದಿಲ್ಲ. ನೆಕ್ಸ್ಟ್ ನಾನು ಆಡಿರುವ ಆಟಗಳಿದ್ದವು. ಆಡದೆ ಇರುವವರನ್ನು ಕರೆದುಕೊಂಡು ನಾನು ಆಡುತ್ತಾ ಇದ್ದೆ. ಗೆದ್ದು ತೋರಿಸಬೇಕು ಅಂತ ನಾನು ನಿಂತುಕೊಳ್ಳಬಹುದಿತ್ತು. ನಾನು ಅದಾಗಲೇ ಆಡಿದ್ದೀನಿ. ಈಗಾಗಲೇ ಜನರಿಗೆ ನಾವೂ ಏನು ಅಂತ ಗೊತ್ತಾಗಿದೆ. ಈ ಕೊನೆವಾರವನ್ನು ಎಂಜಾಯ್ ಮಾಡಲಿ ಅಂತ ಬಿಟ್ಟುಕೊಟ್ಟಿದ್ದು ಅಂತ ಜಯಶ್ರೀ ಹೇಳಿದ್ದಾಳೆ. ಮತ್ತೆ ಅದೇ ಚರ್ಚೆ ಜೋರಾಗಿದೆ. ಈಗ ಇನ್ನು ಬಿಗ್ ಬಾಸ್ ಆದೇಶ ಬಂದಿಲ್ಲ ತಾನೇ ಬದಲಾಯಿಸಿ ಎಂದಿದ್ದಾಳೆ. ಆಗ ಸೋನು ಜಸ್ಟ್ ಆಯ್ತು ಅವರ ಬಾಯಿಯನ್ನು ಮುಚ್ಚಿಸು ಎಂದಿದ್ದಾಳೆ. ಅದಕ್ಕೆ ರೊಚ್ಚಿಗೆದ್ದ ಜಯಶ್ರೀ, ಜೋರು ಧ್ವನಿಯಲ್ಲಿ ನಾನು ಅವರ ಬಾಯಿ ಮುಚ್ಚಿಸುವುದಕ್ಕೆ ಬಿಗ್ ಬಾಸ್‍ಗೆ ಬಂದಿಲ್ಲ ಕಣೇ. ಅವರು ಮಾತನಾಡುವುದಕ್ಕೆ ಎಲ್ಲಾ ಅಧಿಕಾರವೂ ಇದೆ. ನಾನು ಏನು ಅಲ್ಲ. ಅವರ ಮಗಳ, ಬಂಧುವ, ಬಳಗವಾ ಬಾಯಿ ಮುಚ್ಚಿಸು ಮುಚ್ಚಿಸು ಅಂತ ಹೇಳುವುದಕ್ಕೆ. ನಾನೇ ಅಲ್ಲಿಂದ ಎದ್ದು ಬಂದೆ. ಈಗ ನೀನು ಅವರಿರುವ ಕಡೆ ಇರಬೇಡ ಎದ್ದು ಹೋಗು ಎಂದಿದ್ದಾಳೆ.

    Live Tv
    [brid partner=56869869 player=32851 video=960834 autoplay=true]

  • ಸೋನು ಆಯ್ಕೆ ಮಾಡಿದ್ದಕ್ಕೆ ಗುರೂಜಿಗೆ ಕೋಪ – ನನ್ನ ವೋಟಿಗೆ ನ್ಯಾಯ ಬೇಕೆಂದು ಮನೆ ತುಂಬಾ ರಾದ್ಧಾಂತ!

    ಸೋನು ಆಯ್ಕೆ ಮಾಡಿದ್ದಕ್ಕೆ ಗುರೂಜಿಗೆ ಕೋಪ – ನನ್ನ ವೋಟಿಗೆ ನ್ಯಾಯ ಬೇಕೆಂದು ಮನೆ ತುಂಬಾ ರಾದ್ಧಾಂತ!

    ಷ್ಟು ದಿನ ಬಿಗ್ ಬಾಸ್ (Bigg Boss OTT) ಮನೆಯಲ್ಲಿ ನೋಡಿದ ಗುರೂಜಿಯೇ ಬೇರೆ. ಇವತ್ತು ನೋಡಿದ ಗುರೂಜಿಯೇ (Aryavardhan Guruji) ಬೇರೆ. ಮನೆ ಮಂದಿಯೆಲ್ಲಾ ಇಷ್ಟ ಪಡುವಂತೆ ನಡೆದುಕೊಳ್ಳುತ್ತಿದ್ದ ಆರ್ಯವರ್ಧನ್ ಇಂದು ಒಂದೇ ಒಂದು ಸ್ವಾರ್ಥದಿಂದ ಇಡೀ ಮನೆ ಮಂದಿಯೆಲ್ಲಾ ಕಿರಿಕಿರಿ ಅನುಭವಿಸುವಂತೆ ನಡೆದುಕೊಂಡಿದ್ದಾರೆ. ಜಯಶ್ರೀ ನನ್ನನ್ನೇ ಆಯ್ಕೆ ಮಾಡುತ್ತಾಳೆ ಎಂಬ ಭ್ರಮೆಯಲ್ಲಿದ್ದ ಗುರೂಜಿಗೆ ಜಯಶ್ರೀ (Jayashree) ಕೂಡ ಸರಿಯಾಗಿ ಗುನ್ನ ಇಟ್ಟಿದ್ದಾಳೆ. ಸೋನು (Sonu Srinivas Gowda) ಆಯ್ಕೆಯ ಬಳಿಕ ಗುರೂಜಿಯಿಂದ ಮನೆ ಅಕ್ಷರಶಃ ರಣರಂಗವಾಯಿತು.

    ಗುರೂಜಿ ಸಣ್ಣ ಮಿಸ್ಟೇಕ್‍ನಿಂದಾಗಿ ಗುರೂಜಿ ತನಗೆ ಸಿಕ್ಕಿದ್ದ ಸ್ಪೆಷಲ್ ಅವಕಾಶವನ್ನು ಕಳೆದುಕೊಂಡರು. ಮನೆಯವರೆಲ್ಲ ಒಪ್ಪಿದರೆ ಜಯಶ್ರೀಯೇ ಮುಂದುವರಿಯಬಹುದು ಅಥವಾ ಬೇರೆ ಯಾರಿಗಾದರೂ ಆ ಸ್ಥಾನ ನೀಡಬಹುದು. ಒಂದಷ್ಟು ಚರ್ಚೆಗಳಾದ ಬಳಿಕ ವೋಟಿಂಗ್ ಮಾಡಲಾಯ್ತು. ಅದರಲ್ಲಿ ಸೋನುಗೂ ನಾಲ್ಕು ಜಯಶ್ರೀಗೂ ನಾಲ್ಕು ಬಂದಿತ್ತು. ಜಯಶ್ರೀ ಅದಾಗಲೇ ಹೇಳಿದ್ದಳು, ನಾನು ಎರಡು ಆಟ ಆಡಿದ್ದೀನಿ. ಬೇರೆಯವರಿಗೆ ನೀಡಬಹುದು ಎಂದು. ಅದರಂತೆ ಸೋನುಗೆ ಬಿಟ್ಟುಕೊಟ್ಟಳು. ಆದ್ರೆ ಅದು ಆಯ್ಕೆ ಮಾಡುವುದಕ್ಕೂ ಮುನ್ನ ಸೋನು, ನಾನು ನಿನ್ನನ್ನು ಸೆಲೆಕ್ಟ್ ಮಾಡಲ್ಲ ಎಂದೇ ಹೇಳಿದ್ದಳು. ಅದಕ್ಕೆ ಜಯಶ್ರೀಯ ಸಮ್ಮತ ಕೂಡ ಇತ್ತು. ಇದನ್ನೂ ಓದಿ: ಆರ್ಯವರ್ಧನ್ ಮುಗ್ಧರಲ್ಲ ಅನ್ನೋದು ಮನೆಮಂದಿಗೆಲ್ಲ ಪ್ರೂವ್ ಆಯ್ತು!

    ಬಳಿಕ ಎಲ್ಲಾ ಮಾತುಕತೆ ಮುಗಿದ ಮೇಲೆ ಸೋನು ಮತ್ತು ಜಯಶ್ರೀ ಸೋಫಾದ ಕುಳಿತು ಮಾತನಾಡುತ್ತಿದ್ದರು. ಅಲ್ಲಿಗೆ ಬಂದ ಗುರೂಜಿ ಮತ್ತೆ ಜಗಳ ತೆಗೆದಿದ್ದಾರೆ. ನೀನು ಮಾಡಿದ್ದನ್ನು ನಾನು ಒಪ್ಪಲ್ಲ ಜಯಶ್ರೀ, ನಿನಗೆ ನಾನು ವೋಟ್ ಮಾಡಿದ್ದೆ. ನೀನು ಸೆಲೆಕ್ಟ್ ಆಗಿ ಮತ್ತೆ ನನ್ನೇ ಸೆಲೆಕ್ಟ್ ಮಾಡ್ತೀಯಾ ಎಂದುಕೊಂಡಿದ್ದೆ ಎಂದಿದ್ದಾರೆ. ಈ ಮಾತು ಮನೆಯವರಿಗೆಲ್ಲಾ ಬೇಸರ ತರಿಸಿದೆ.

    ಆದರೆ ಜಯಶ್ರೀ, ಇದಕ್ಕೆ ವಿವರಣೆಯನ್ನು ನೀಡಿದ್ದಾಳೆ. ನಾನು ಯಾಕೆ ಸೋನುಳನ್ನು ಸೆಲೆಕ್ಟ್ ಮಾಡಿದ್ದು, ಅದಾಗಲೇ ನಾನು ಎರಡು ಆಟ ಆಡಿದ್ದೀನಿ. ಇರೋದು ಇದು ಒಂದೇ ವಾರ. ಸೋ ಎಲ್ಲರು ಆಡಲಿ. ಈಗ ನನಗೆ ಆಟಕ್ಕೆ ಕರೆದುಕೊಳ್ಳದೇ ಇದ್ದಾಗ ಎಷ್ಟು ನೋವಾಗುತ್ತಾ ಇತ್ತು ಬೇರೆಯವರಿಗೂ ಹಾಗೇ ಆಗಬಾರದು ಎಂದಾಗ ಗುರೂಜಿ, ನೋಡು ಅದು ನಿನ್ನ ಪರ್ಸನಲ್. ಇಲ್ಲಿ ವೋಟ್ ಹಾಕಿದವರಿಗೆ ಮರ್ಯಾದೆ ಹೋಗುತ್ತೆ. ನೆಕ್ಸ್ಟ್ ಟೈಮ್ ನೀನು ಕನ್ಫ್ಯೂಶನ್ ಆಗ್ತೀಯಾ ಅಂತ ನಿಂಗೆ ಯಾರು ವೋಟ್ ಹಾಕಲ್ಲ. ಮುಂದಿನ ಸಲ ವೋಟ್ ಹಾಕುವುದಕ್ಕೆ ಆಗಲ್ಲ ಎಂದು ಜಯಶ್ರೀ, ಸೋನುಳನ್ನೂ ಆಯ್ಕೆ ಮಾಡಿದ್ದೇ ತಪ್ಪು ಎಂದೇ ವಾದಿಸಿದ್ದಾರೆ. ಇದನ್ನೂ ಓದಿ: ಬುಲ್ಡೋಜರ್ ಬಲಿಷ್ಠರ ಗೋಡೆನೂ ಕೆಡುವುತ್ತಾ ಎಂದು ಸಿಎಂಗೆ ತಿವಿದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ

    ಡಿಸಿಷನ್ ತೆಗೆದುಕೊಂಡಾಗ ನೀವೂ ನನ್ನ ಕೇಳಬೇಕಿತ್ತು. ನಾಲ್ಕು ಆಟಗಳನ್ನು ನಾವಿಬ್ಬರೇ ಆಡೋಣಾ. ಉಳಿದ ಆಟಗಳು ದೇವರಿಕ್ಕಿದ್ದಂತೆ ಆಗಲಿ ಎಂದುಕೊಂಡಿದ್ದೆ. ನಾನು ಗೆದ್ದರೆ ನಿನ್ನೆ ಕರೆಯುತ್ತಿದ್ದೆ ಎಂದಿದ್ದಾರೆ. ಬಳಿಕ ಸೋನು ಮಾತನಾಡಿ, ಗುರೂಜಿ ಇದು ಅವಳ ಆಯ್ಕೆ. ಅವಳು ನನ್ನೆ ಆಯ್ಕೆ ಮಾಡುತ್ತಾ ಇದ್ದಳು. ನೀವ್ಯಾಕೆ ಗುರೂಜಿ ಇಷ್ಟೊಂದು ಮಾತನಾಡುತ್ತಿದ್ದೀರಾ ಎಂದಿದ್ದಾಳೆ. ಆಗ ಮತ್ತೆ ಮಾತನಾಡಿದ ಗುರೂಜಿ, ನಾನು ಅವಳಿಗೆ ವೋಟ್ ಹಾಕಿದ್ದೀನಿ. ಅದಕ್ಕೆ ಮಾತನಾಡಿದ್ದೀನಿ. ಜಯಶ್ರೀ ಈ ಡಿಸಿಷನ್ ನೀನು ನಿನ್ನ ಲೈಫ್ ನಲ್ಲೂ ಅಳವಡಿಸಿಕೊಳ್ಳಬೇಕು. ನೀನು ಗೆದ್ದು ನನ್ನೇ ಕರೆದುಕೊಂಡು ಬರಬಹುದಿತ್ತು ಎಂದಾಗ ಜಯಶ್ರೀ ಅದಕ್ಕೆ ಉತ್ತರ ಕೊಟ್ಟಿದ್ದಾಳೆ, ನೀವೂ ಎರಡು ಸಲ ನನ್ನನ್ನು ಕರೆದಿದ್ದಕ್ಕೆ ಮನೆಯವರು ಬೇಜಾರು ಮಾಡಿಕೊಂಡಿದ್ದಾರೆ. ಇನ್ನು ಮತ್ತೆ ಮತ್ತೆ ನಾವೇ ಆಡುವುದಾ ಎಂದರೆ, ಅದು ನೂರು ಸಲ ಆಗಲಿ. ಇದು ಬಿಗ್ ಬಾಸ್ ರೂಲ್ಸ್. ಬಿಗ್ ಬಾಸೇ ಹೇಳಿರುವಾಗ ನಾವ್ಯಾರು. ಜನರು ನೆಕ್ಸ್ಟ್ ಬಿಗ್ ಬಾಸ್ ಫಸ್ಟ್. ಜನರು ಮೆಚ್ಚುವುದಕ್ಕೋಸ್ಕರವೇ ಆಡುತ್ತಿದ್ದೀವಿ ಎಂದು ಹೇಳಿದ್ದನ್ನೇ ಹೇಳಿ ಮನೆಯವರಿಗೆಲ್ಲಾ ಬೇಸರ ಮಾಡಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಮನೆ ಕಂಡ ಅಚ್ಚರಿಯ ಕ್ಷಣಗಳು

    Live Tv
    [brid partner=56869869 player=32851 video=960834 autoplay=true]

  • ಸೋನು ಗೌಡ ಪ್ರಕಾರ ಆರ್ಯವರ್ಧನ್‌ ಗುರೂಜಿ ಕಳ್ಳ ಸ್ವಾಮಿ ಅಂತೆ

    ಸೋನು ಗೌಡ ಪ್ರಕಾರ ಆರ್ಯವರ್ಧನ್‌ ಗುರೂಜಿ ಕಳ್ಳ ಸ್ವಾಮಿ ಅಂತೆ

    ಬಿಗ್ ಬಾಸ್ ಓಟಿಟಿಗೆ(Bigg Boss) ಅಭಿಮಾನಿಗಳು ಫಿದಾ ಆಗಿದ್ದಾರೆ. ಸಾಕಷ್ಟು ವಿಚಾರಗಳಿಂದ ಓಟಿಟಿ ನೋಡುಗರ ಗಮನ ಸೆಳೆಯುತ್ತಿದೆ. ದೊಡ್ಮನೆಯಲ್ಲಿ ತನ್ನ ನಡೆ, ನುಡಿಯಿಂದ ಹೈಲೈಟ್ ಆಗಿರುವ ಸೋನು ಶ್ರೀನಿವಾಸ್ ಗೌಡ(Sonu Srinivas Gowda) ಮತ್ತೆ ಕಿರಿಕ್ ಮಾಡಿಕೊಂಡಿದ್ದಾರೆ. ಗುರೂಜಿಗೆ ಕಳ್ಳ ಸ್ವಾಮೀಜಿ ಎಂದು ಸೋನುಗೆ ಮನೆ ಮಂದಿ ಕೂಡ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಮನೆಗೆ ಬಂದ ದಿನದಿಂದ ಸೋನು ಒಂದಲ್ಲಾ ಒಂದು ವಿಷ್ಯವಾಗಿ ಕಿರಿಕ್ ಮಾಡುತ್ತಲೇ ಬಂದಿದ್ದಾರೆ. ಗುರೂಜಿಗೆ ರೂಪೇಶ್ ಹೆಡ್ ಮಸಾಜ್ ಮಾಡುವಾಗ ಮನೆ ಮಂದಿಯೆಲ್ಲ ಒಟ್ಟಿಗೆ ಕುಳಿತಿದ್ದರು. ಈ ವೇಳೆ ಸೋನು, ಗುರೂಜಿಗೆ ಡವ್ ರಾಜ ಎಂದು ಹೇಳಿದ್ದಾರೆ. ಹೀಗೆ ಮಾತನಾಡಬೇಡ ಎಂದ ಗುರೂಜಿಗೆ ಮತ್ತೆ ಕಳ್ಳ ಸ್ವಾಮೀಜಿ ಎಂದು ಕರೆಯಬೇಕಾ ಎಂದಿದ್ದಾರೆ. ಈ ವೇಳೆ ಸಾನ್ಯ, ಅವರು ದೊಡ್ಡವರು ಹೀಗೆಲ್ಲಾ ಮಾತನಾಡಬಾರದು ಎಂದು ಹೇಳಿದ್ದಾರೆ. ನೀನು ಮಧ್ಯೆ ಮಾತನಾಡಬೇಡ ಎಂದು ಸೋನು ಗದರಿಸಿದ್ದಾರೆ.

    ಇನ್ನು ಸೋನು ಮಾತಿಗೆ ಸಾನ್ಯ ಕೂಡ ಖಡಕ್ ಉತ್ತರ ನೀಡಿದ್ದಾರೆ. ನಾನು ನಿಮ್ಮ ಮನೆ ನಾಯಿನಾ, ಹೋಗೆಲೇ ಎಂದು ಪ್ರತಿಯುತ್ತರ ನೀಡಿದ್ದಾರೆ. ನೀನು ಆಡಿದ ಮಾತು ಸರಿಯಿಲ್ಲ ಅವರನ್ನ ಫಾಲೋವ್ ಮಾಡುವ ಸಾಕಷ್ಟು ಜನ ಇದ್ದಾರೆ. ಅವರಿಗೂ ಬೇಸರವಾಗುತ್ತೆ ಎಂದು ಜಯಶ್ರೀ ಕೂಡ ಈ ವೇಳೆ ಧ್ವನಿಗೂಡಿಸಿದ್ದಾರೆ. ಬಳಿಕ ಗುರೂಜಿ ಬಳಿ ಸೋನು ಕ್ಷಮೆ ಕೇಳಿದ್ದಾರೆ. ಮೊದಲಿಗೆ ತಮಾಷೆಯಿಂದ ಆಡಿದ ಮಾತು ನಂತರ ಗಲಾಟೆಯಲ್ಲಿ ಅಂತ್ಯವಾಗಿದೆ. ಇದನ್ನೂ ಓದಿ:ಯಶ್ ಮುಂದಿನ ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿನಾ?

    ಸೋನು ಆಡಿರುವ ಮಾತಿನಿಂದ ಗುರೂಜಿ ಕೂಡ ಬೇಸರಗೊಂಡಿದ್ದಾರೆ. ತಮ್ಮ ವೃತ್ತಿಯ ಬಗ್ಗೆ ಮಾತನಾಡಿದ್ದು ತಪ್ಪು ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಎಷ್ಟೇ ಚೆನ್ನಾಗಿದ್ರೂ ಯಾವ ಹುಡುಗರು ನನ್ನ ಮಾತಾಡಿಸುವುದೇ ಇಲ್ಲ: ಜಯಶ್ರೀ ಬೇಸರ

    ಎಷ್ಟೇ ಚೆನ್ನಾಗಿದ್ರೂ ಯಾವ ಹುಡುಗರು ನನ್ನ ಮಾತಾಡಿಸುವುದೇ ಇಲ್ಲ: ಜಯಶ್ರೀ ಬೇಸರ

    ಬಿಗ್ ಬಾಸ್ (Bigg Boss) ಇನ್ನು ಕೇವಲ ಒಂದೇ ವಾರ ಇರುವುದು. ಏಳು ದಿನವಾದ ಮೇಲೆ ಮನೆಯ ಸದಸ್ಯರು ಮನೆಯ ಹೊರಗೆ ಇರುತ್ತಾರೆ. ಈ ಬಗ್ಗೆ ಕಿಚ್ಚ ಸುದೀಪ್ (Kichcha Sudeepa) ವಾರದ ಕಥೆಯಲ್ಲೂ ಕನ್ಫರ್ಮ್ ಮಾಡಿದ್ದಾರೆ. ಹೀಗಿರುವಾಗ ಮನೆಯಲ್ಲಿ ಉಳಿದಿರುವವರ ನಡುವೆಯೇ ಒಂದೊಳ್ಳೆ ಬಾಂಧವ್ಯ, ಒಂದೊಳ್ಳೆ ಒಡನಾಟವಿರಬೇಕು. ಆದ್ರೆ ಈಗಲೂ ಅಂತ ಒಡನಾಟ ಕೆಲವರಲ್ಲಿ ಆಗುತ್ತಿಲ್ಲ. ಒಂಟಿತನ ಎಂಬುದು ಹಲವರಲ್ಲಿ ಕಾಡುತ್ತಿದೆ. ನಿನ್ನೆಯೆಲ್ಲಾ ಸೋಮಣ್ಣ (Somanna Machimada) ಕೂಡ ನನಗು ಒಂದು ಕಂಪನಿ ಬೇಕು ಅಂತ ಫುಲ್ ಫೀಲ್ ಮಾಡಿಕೊಳ್ಳುತ್ತಿದ್ದರು. ಆದ್ರೆ ಆ ಸರದಿ ಇಂದು ಜಯಶ್ರೀಯದ್ದಾಗಿದೆ.

    ಜಯಶ್ರೀಗೆ ಚೈತ್ರಾ ಇದ್ದಾಗ ದಿನ ಹೋಗುತ್ತಿದ್ದದ್ದು ಗೊತ್ತೇ ಆಗುತ್ತಿರಲಿಲ್ಲ. ಆದರೆ ಚೈತ್ರಾ (Chaitra Hallikere) ಹೋದ ಮೇಲೆ ಅಕ್ಷರಶಃ ಕುಗ್ಗಿ ಹೋಗಿದ್ದಳು. ದಿನ ಕಳೆದರೆ ಅಳುತ್ತಾ ಕೂರುತ್ತಿದ್ದಳು. ನಂಗೆ ಇರುವುದಕ್ಕೆ ಆಗುತ್ತಿಲ್ಲ. ದಯವಿಟ್ಟು ನನ್ನನ್ನು ಕಳುಹಿಸಿ ಬಿಡಿ ಎನ್ನುತ್ತಿದ್ದಳು. ಆದ್ರೆ ಅದು ಎರಡು ದಿನ ಮಾತ್ರ. ಬಳಿಕ ಮಾಮೂಲಿಯಂತೆ ಎಲ್ಲರ ಜೊತೆ ಜಗಳವಾಡುತ್ತಾ, ಮಾತನಾಡುತ್ತಾ ಇದ್ದಾಳೆ. ಆದ್ರೆ ಅದ್ಯಾಕೋ ಬಿಗ್ ಬಾಸ್ ಮನೆಯಲ್ಲಿರುವ ಹುಡುಗರು ಇವಳನ್ನು ನೋಡುತ್ತಿಲ್ಲ ಎಂಬ ಬೇಸರ ಅವಳನ್ನು ಕಾಡುತ್ತಿದೆ. ಆ ಬಗ್ಗೆ ಗುರೂಜಿ (Aryavardhan Guruji) ಹತ್ರ ಹೇಳಿಕೊಂಡು ಗೊಳೋ ಅಂತಿದ್ದಾಳೆ. ಇದನ್ನೂ ಓದಿ: ರೂಪೇಶ್‍ಗೆ ಶುರುವಾಯ್ತು ಇಮೇಜ್ ಚಿಂತೆ – ಮಂಗ್ಳೂರು ಹುಡ್ಗಿ ಬಿಟ್ಟಳಾ ಹುಳ?

    ಬೆಳಗ್ಗೆ ಗೂರೂಜಿ, ಸೋನು (Sonu Srinivas Gowda) ಜೊತೆ ಕುಳಿತು ತಿನ್ನುತ್ತಾ ಕುಳಿತಿದ್ದಳು. ಆಗ ಏನೋ ಗುರುಗಳೇ ಎಷ್ಟೇ ಚೆನ್ನಾಗಿದ್ದರೂ, ಯಾವ ಹುಡುಗರು ನನ್ನ ಮಾತನಾಡಿಸುವುದೇ ಇಲ್ಲ ಅಂತಾರಲ್ಲ ಅಂದಿದ್ದಾಳೆ. ಆಗ ಗುರೂಜಿ ಆಯ್ತು ಬಿಡು ನಾನು ಒಂದೆರಡು ಹುಡುಗರನ್ನು ಕಳುಹಿಸಿ ಕೊಡುತ್ತೀನಿ ಎಂದಿದ್ದಾರೆ. ನಾನು ಇಷ್ಟು ಚೆನ್ನಾಗಿದ್ರು ಯಾರು ನನ್ನ ಮಾತನಾಡಿಸಲ್ಲ ಅಂತಿದ್ದಾಳೆ. ಅದ್ಕೆ ನಾನು ಹೇಳಿದ್ದೀನಿ, ಸುಮ್ನೆ ಇರು ನಮ್ಮ ಆಫೀಸಿನಲ್ಲಿ ಇರುವ ಹುಡುಗರನ್ನು ಕಳುಹಿಕೊಡ್ತೀನಿ ಅಂತ ಹೇಳಿದೆ ಎಂದು ಸೋನು ಬಳಿ ಹೇಳಿಕೊಂಡು ಗುರೂಜಿ ನಗುತ್ತಾರೆ. ಇದನ್ನೂ ಓದಿ: ಬಿಗ್ ಬಾಸ್’ ಮನೆಯಿಂದ ನಂದಿನಿ ಔಟ್

    ನಾನು ಹೇಳುತ್ತಾ ಇರುವುದು ಬಿಗ್ ಬಾಸ್ ಮನೆಯಲ್ಲಿ ಹೊರಗಡೆಯಲ್ಲ. ಹೊರಗಡೆ ಏನು ಬೇಡ ನಂಗೆ ಎಂದಿದ್ದಾಳೆ. ಆಗ ಗುರೂಜಿ ಬಿಗ್ ಬಾಸ್ ಮನೆಯಲ್ಲಿ ಅವರವರನ್ನು ಮಾತನಾಡಿಸುವುಕ್ಕೆ ಸಮಯ ಇಲ್ಲ. ಇನ್ನು ನಿನ್ನ ಮಾತನಾಡಿಸುತ್ತಾರಾ ಅಂತ ಕಾಮಿಡಿ ಮಾಡಿದ್ದಾರೆ. ನಿಮಗೆ ಯಾಕೆ ಸುಮ್ನೆ ಇರು ಹೊರಗೆ ಹೋದ ಮೇಲೆ ಕಳುಹಿಸಿಕೊಡ್ತೀನಿ ಅಂದಾಗ, ಸೋನು ಮಾತನಾಡಿ, ಗುರೂಜಿಗಿಂತ ಬೇಕೆನೆ ನಿಂಗೆ. ನಮ್ಮ ಜನಗಳಿಗೆ ಎಷ್ಟು ದುರಾಸೆ ಅಂದ್ರೆ ಸಿಕ್ಕಿರುವುದನ್ನು ಬಿಟ್ಟು ಬಿಡುತ್ತಾರೆ ಎಂದಾಗ ಗುರೂಜಿ ಕೂಡ ಅದೇ ಡೈಲಾಗ್ ಹೊಡೆದಿದ್ದಾರೆ. ಗುರೂಜಿ ಯುವಕ ಅಲ್ವಲ್ಲ ಎಂದು ಜಯಶ್ರೀ (Jayashree) ಹೇಳಿದರೆ, ಗುರೂಜಿಯಲ್ಲಿಯೇ ಯುವಕನನ್ನು ನೋಡು. ಯಾಕೆ ಮಾತನಾಡಲ್ವಾ, ತುಂಟ ತುಂಟ ಮಾತನಾಡಲ್ವಾ, ಯೂಸ್ ಲೆಸ್ ಮಾತುಗಳು ಎಂದು ಸೋನು ಹೇಳಿದ್ದಾಳೆ.

    ಆಗ ಜಯಶ್ರೀ ನೋಡಿ ಗುರೂಜಿ ನಿಮ್ಮನ್ನೆ ಯೂಸ್ ಲೆಸ್ ಅಂತಿದ್ದಾಳೆ ಅಂತ ಹಾಕೊಟ್ಟಿದ್ದಾಳೆ. ಆಗ ಗುರೂಜಿ ಅವಳಿಗೆ ನಾನು ಆ ರೀತಿ ಕಂಡಿರಬಹುದು. ಆದರೆ ನಾನು ಅದಲ್ವಲ್ಲ. ನೀನು ನನ್ನಲ್ಲಿ ಒಳ್ಳೆಯವನನ್ನು ನೋಡಿದ್ದೀಯಾ, ಅವಳು ನನ್ನಲ್ಲಿ ಕೆಟ್ಟವಳನ್ನು ನೋಡಿದ್ದಾಳೆ. ಅದಕ್ಕೆ ನಾನ್ಯಾಕೆ ತಪ್ಪು ತಿಳಿದುಕೊಳ್ಳಲಿ ಅಂತ ಗುರೂಜಿ ಬುದ್ಧಿವಂತಿಕೆಯ ಮಾತನಾಡಿದ್ದಾರೆ. ಅಲ್ಲಿಗೆ ಬಂದ ರಾಕಿ(Rakesh Adiga) ಗೂ ಈ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಆಮೇಲೆ ಸೋನು ಮೇಲೆ ಒಂದು ಹಾಡನ್ನು ರಚಿಸಿ ಕಾಮಿಡಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಿನ್ನ ತಲೆಯ ಮೇಲೆ ತೆಂಗಿನಕಾಯಿ ಒಡೆದು ಬಿಗ್ ಬಾಸ್ ಮನೆಯಿಂದ ಹೋಗ್ತೀನಿ: ಸೋನುಗೆ ಗುರೂಜಿ ವಾರ್ನಿಂಗ್

    ನಿನ್ನ ತಲೆಯ ಮೇಲೆ ತೆಂಗಿನಕಾಯಿ ಒಡೆದು ಬಿಗ್ ಬಾಸ್ ಮನೆಯಿಂದ ಹೋಗ್ತೀನಿ: ಸೋನುಗೆ ಗುರೂಜಿ ವಾರ್ನಿಂಗ್

    ಬಿಗ್ ಬಾಸ್ (Bigg boss) ಮನೆಯಲ್ಲಿ ಆರ್ಯವರ್ಧನ್ ಗುರೂಜಿ (Aryavardhan guruji) ಸಾಕಷ್ಟು ವಿಚಾರವಾಗಿ ಹೈಲೈಟ್ ಆಗಿದ್ದಾರೆ. ಗುರೂಜಿ ಒಳಗೊಬ್ಬ ಒಳ್ಳೆಯ ಕಾಮಿಡಿಯನ್ ಇದ್ದಾರೆ ಎಂಬುದು ಮತ್ತೆ ಪ್ರೂವ್ ಮಾಡಿದ್ದಾರೆ. ಇತ್ತೀಚಿನ ಎಪಿಸೋಡ್‌ನಲ್ಲಿ ಆ ಕಾಮಿಡಿ ಮ್ಯಾನ್ ಹೆಚ್ಚಾಗಿನೆ ಹೊರಗೆ ಬಂದಿದ್ದಾನೆ. ಗುರೂಜಿ ತಮ್ಮ ಆಟದ ಜೊತೆ ಅವರ ಕಾಮಿಡಿ ಕಿಕ್‌ಗೆ ಮನೆ ಮಂದಿ ತಲೆ ಬಾಗಿದ್ದಾರೆ.

    ದೊಡ್ಮನೆಯಲ್ಲಿ ಬಿಗ್ ಬಾಸ್ ಕೊಟ್ಟ ಬಾಲ್ ಆಟದ ಟಾಸ್ಕ್ವೊಂದರಲ್ಲಿ ಫೈನಲಿ ಗೆದ್ದಿದ್ದು ಗುರೂಜಿ ಅಂಡ್ ಸೋಮಣ್ಣ. ನಾನು ಸ್ಟ್ರಾಂಗ್ ಅಂತಿದ್ದೋರೆಲ್ಲಾ ಬಾಲ್ ಬಿಸಾಕಿ ಹೋಗಿಯೇ ಬಿಟ್ಟರು. ಗುರೂಜಿಯಿಂದ ಸಾಧ್ಯವಾ, ಸೋಮಣ್ಣನಿಗೆ ಅಷ್ಟು ಶಕ್ತಿ ಇದೆಯಾ ಅಂದುಕೊಂಡವರಿಗೆ ಇಬ್ಬರು ತಲಾ 12 ಸಾವಿರ ಗೆದ್ದು ಮನೆಗೆ 50 ಸಾವಿರ ತಂದುಕೊಡುವಲ್ಲಿ ಯಶಸ್ವಿಯಾದರು. ಬಾಲ್ ಹಿಡಿಯುವುದು ಅಷ್ಟು ಸುಲಭದ ಕೆಲಸವಲ್ಲ. ಅದೇನು ಸಣ್ಣ ಬಾಲ್ ಅಲ್ಲ. ದೇಹದ ಎರಡರಷ್ಟಿತ್ತು.ಗುರೂಜಿಯದ್ದೋ ಹೊಟ್ಟೆ ಸ್ವಲ್ಪ ಜಾಸ್ತಿಯೇ ಇತ್ತು. ಆದರೂ ಬಾಲನ್ನ ಹಿಡಿದು ಮೂರು ಗಂಟೆಗಳ ಕಾಲ ಬ್ಯಾಲೆನ್ಸ್ ಮಾಡಿದ್ದಾರೆ. ಆ ಬ್ಯಾಲೆನ್ಸ್ ಮಾಡುವ ಮಧ್ಯೆ ನಡೆಯಿತಲ್ಲ ಕಾಮಿಡಿ ಅದನ್ನು ಕೇಳಿ, ಮನೆಮಂದಿ ಮತ್ತು ವೀಕ್ಷಕರು ನಕ್ಕು ನಕ್ಕು ಸಾಕಾಗಿದ್ದಾರೆ. ಇದನ್ನೂ ಓದಿ:ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ನಟಿ ಲೀಲಾವತಿ

    ಮೊದಲಿಗೆ ಬಾಲ್ ಹಿಡಿದು 28 ನಿಮಿಷವಾಗಿತ್ತು. ಒಂದು ದೇವರ ನಾಮ ಹಾಡುವುದಕ್ಕೆ ಶುರು ಮಾಡಿದರು. ಮಧ್ಯರಾತ್ರಿ ಆಗುತ್ತಿದ್ದಂತೆ ಬಾಲಿನ ಮರೆಯೊಳಗೆ ತಲೆ ಇಟ್ಟುಕೊಂಡು ಗುರೂಜಿ ಒಳ್ಳೆ ನಾಗವಲ್ಲಿಯ ರೀತಿಗೆ ಓಓಓ ಅಂತ ನಕ್ಕಿದ್ದಾರೆ. ಆಮೇಲೆ ಬಂದ ಧ್ವನಿ, ನನಗಿದು ಬೇಕಾಗಿತ್ತಾ. ನೆಮ್ಮದಿಯಾಗಿ ಮಲಗಿದ್ದೆ ಮನೆಯಲ್ಲಿ ಯಾವಳೇ ಅವಳು ಫೋನ್ ಮಾಡಿದ್ದು? ನಂಗೆ ಏನ್ ಆಗಬೇಕಿತ್ತು. ಥೂ ಈ ಮಾರ್ಕೇಟ್ ಕಟ್ಟಿಕೊಂಡು ಏನ್ ಆಗಬೇಕಿತ್ತು. ಪಿಚ್ಚರ್‌ಗೆ ಹೋಗಿ ಏನ್ ಆಗಬೇಕಿತ್ತು. ಅಂತ ಸಖತ್ ಕಾಮಿಡಿ ಮಾಡುವಾಗ ಮನೆಯವರೆಲ್ಲಾ ಬಿದ್ದು ಬಿದ್ದು ನಕ್ಕಿದ್ದಾರೆ. ಈ ನಡುವೆ ರಾಕಿ ಕೂಡ ತನ್ನದೆ ಸ್ಟೈಲ್ ನಲ್ಲಿ ರ್ಯಾಪ್ ಸಾಂಗ್ ಆಡಿ ಸಪೋರ್ಟ್ ಮಾಡಿದ್ದಾನೆ.

    ಈ ಮಾರ್ಕೇಟ್ ತಗೊಂಡು ನಾನೇನ್ ಮಾಡ್ಲಿ. ಸೂಪರ್ ಸ್ಟಾರ್ ಆಗ್ಲಾ. ದೊಡ್ಡ ಹೀರೋ ಆಗ್ಲಾ ಇರೋದಕ್ಕೆ ಮನೆ ಇಲ್ವಾ. ಎಲ್ಲೋ ಕೊಡೋ ಮನೆಗೆ ನಾನ್ಯಾಕೆ ಹೋಗ್ಲಿ ಎಂದಾಗ ಸೋನು, ಸುಮ್ನೆ ನಿಂತ್ಕೊಳಿ ಹಂಗAದ್ರೆ ಶನಿವಾರ ಕಳಿಸಿಬಿಡ್ತಾರೆ ಎಂದಿದ್ದಾಳೆ. ಅದಕ್ಕೆ ಗುರೂಜಿ, ನನ್ನನ್ನ ಕಳ್ಸಿಬಿಟ್ರೆ ನಿನಗೊಂದು ತೆಂಗಿನಕಾಯಿ ಒಡೆದು ನೆಮ್ಮದಿಯಾಗಿ ಹೋಗಿ ಬಿಡ್ತೀನಿ ಎಂದು ಸೋನುಗೆ (Sonu srinivas gowda) ಗುರೂಜಿ ತಮಾಷೆಯಾಗಿ ವಾರ್ನಿಂಗ್ ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಕೇಶ್‌ಗಾಗಿ ಬಿಗ್ ಬಾಸ್ ಮನೆನಾ ಎರಡು ಮನೆ ಮಾಡಬೇಕಾ: ಸೋನು ವಿರುದ್ಧ ಗುರೂಜಿ ಗರಂ

    ರಾಕೇಶ್‌ಗಾಗಿ ಬಿಗ್ ಬಾಸ್ ಮನೆನಾ ಎರಡು ಮನೆ ಮಾಡಬೇಕಾ: ಸೋನು ವಿರುದ್ಧ ಗುರೂಜಿ ಗರಂ

    ಬಿಗ್ ಬಾಸ್ ಮನೆಯ ಆಟ ಇದೀಗ ನಾಲ್ಕು ವಾರಗಳು ಪೂರ್ಣಗೊಂಡು ಐದನೇ ವಾರದತ್ತ ಲಗ್ಗೆ ಇಟ್ಟಿದೆ. ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆಯ ರಂಗು ಹೆಚ್ಚುತ್ತಿದೆ. ಇದೀಗ ಸೋನು (Sonu srinivas gowda) ಸೂಪರ್ ಆದರೆ ಆಕೆಯ ಬಾಯಿ ಡೇಂಜರ್ ಎಂಬುದು ಮತ್ತೊಮ್ಮೆ ಪ್ರೂವ್ ಆಗಿದೆ. ರಾಕೇಶ್‌ಗಾಗಿ ಸೋನು, ಮನೆಯವರ ವಿರುದ್ಧ ಮಾತನಾಡಿ, ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಬಿಗ್ ಬಾಸ್ (Bigg boss) ಮನೆಯಲ್ಲಿ ರಾಕೇಶ್ ಅಡಿಗ ಮತ್ತು ಸೋನು ಗೌಡ, ಈ ಜೋಡಿ ಹೈಲೈಟ್ ಆಗಿದೆ. ಮನೆಯಲ್ಲಿ ಪ್ರತಿ ಕೆಲಸದಲ್ಲೂ ಒಬ್ಬರ ಪರ ಮತ್ತೊಬ್ಬರು ನಿಲ್ಲುತ್ತಾರೆ. ಸೋನು ನಡೆ ಮತ್ತು ನುಡಿಯಲ್ಲಿ ನೇರವಾಗಿರೋದು ಕೂಡ ಅವರನ್ನ ಸಂಕಷ್ಟಕ್ಕೆ ನೂಕಿದೆ. ಈಗ ರಾಕೇಶ್‌ಗಾಗಿ ಸೋನು, ಮನೆಯಲ್ಲಿ ಧ್ವನಿಯೆತ್ತಿದ್ದಾರೆ. ಇದರಿಂದ ಮನೆಯವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಗುರೂಜಿ ಮನೆಯವರಿಗಾಗಿ ಪಪಾಯ ಕಟ್ ಮಾಡಿ ಕೊಟ್ಟಿದ್ದಾರೆ. ಈ ವೇಳೆ ಸೋನು, ರಾಕಿಗೆ ಪಪಾಯ ಮೂರು ಪೀಸ್ ಎಂದಿದ್ದಾರೆ. ಆಗ ಸೋಮಣ್ಣ ಅವರು, ನಿನಗೆ ಮಾತ್ರ ಕಾಣುತ್ತಾರಾ ಎಂದಿದ್ದಾರೆ. ಬಳಿಕ ರಾಕೇಶ್‌ಗಾಗಿ ಬಿಗ್ ಬಾಸ್ ಮನೆಯಲ್ಲಿ ಎರಡು ಮನೆ ಮಾಡಬೇಕಾ ಎಂದು ಗುರೂಜಿ ಕೂಡ ಸೋನು ವಿರುದ್ಧ ಗರಂ ಆಗಿದ್ದಾರೆ. ಇದನ್ನೂ ಓದಿ:ಡಿವೋರ್ಸ್ ನಂತರ ಬೇಕಾಬಿಟ್ಟಿ ಡ್ರೆಸ್ ಹಾಕುತ್ತಿದ್ದೀರಾ ಎಂದು ಸಮಂತಾ ಮೇಲೆ ಗರಂ ಆದ ಫ್ಯಾನ್ಸ್

    ಇದಕ್ಕೆ ಸೋನು ಕೂಡ ಪ್ರತಿಕ್ರಿಯೆ ನೀಡಿದ್ದು, ಮಾತನಾಡಬೇಕಾದ್ರೆ ಸರಿಯಾಗಿ ಮಾತನಾಡು ಅಂತಾ ನನಗೆ ಹೇಳುತ್ತೀರಾ. ನೀವು ಕೂಡ ಮಾತನಾಡಬೇಕಾದ್ರೆ ನಿಗಾ ಇಟ್ಕೋಂಡು ಮಾತನಾಡಿ ಎಂದು ಸೋನು ಕೂಡ ಗುರೂಜಿ ವಿರುದ್ಧ ಗರಂ ಆಗಿದ್ದಾರೆ. ಅದಕ್ಕೆ ಸುಮ್ಮನೆ ಕೂತ್ಕೋ ನೀನು, ಗಂಟಲು ಹರ್ಕೋ ಬೇಡ ಎಂದು ಗುರೂಜಿ ಸೋನುಗೆ ಟಾಂಗ್ ಕೊಟ್ಟಿದ್ದಾರೆ. ಒಟ್ನಲ್ಲಿ ರಾಕೇಶ್‌ಗೆ ಪಪಾಯ ಕೊಡಲು ಮನೆಯವರ ವಿರುದ್ಧ ಸೋನು ಸಿಡಿದೆದ್ದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ನಿನ್ನ ಬಾಯಿಗೆ ಪೊರಕೆ ಇಡ್ಬೇಕಾ, ಸುಮ್ನಿರ್ತಿಯಾ’ ಅಂತ ಸೋನು ಮೇಲೆ ಗರಂ ಆದ ಗುರೂಜಿ

    ‘ನಿನ್ನ ಬಾಯಿಗೆ ಪೊರಕೆ ಇಡ್ಬೇಕಾ, ಸುಮ್ನಿರ್ತಿಯಾ’ ಅಂತ ಸೋನು ಮೇಲೆ ಗರಂ ಆದ ಗುರೂಜಿ

    ತೀ ಹೆಚ್ಚು ಮಾತನಾಡುವ ವಿಚಾರವಾಗಿ ಬಿಗ್ ಬಾಸ್ ಮನೆಯಲ್ಲಿ ಆರ್ಯವರ್ಧನ್ ಗುರೂಜಿ ಮತ್ತು ಸೋನು ಶ್ರೀನಿವಾಸ್ ಗೌಡ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಆರ್ಯವರ್ಧನ್ ಗುರೂಜಿ ಅಡುಗೆ ಮಾಡುತ್ತಿರುವ ಸಮಯದಲ್ಲಿ, ಈ ಜಗಳ ನಡೆದಿದ್ದು ಸೋನು ಶ್ರೀನಿವಾಸ್ ಗೌಡ ಅವರನ್ನು ಸುಮ್ಮನಿರಿಸಲು ಆಡಬಾರದ ಮಾತುಗಳನ್ನು ಆಡಿದ್ದಾರೆ ಗುರೂಜಿ. ಅದನ್ನು ಕೇಳಿಸಿಕೊಂಡ ಸೋನು, ಗುರೂಜಿ ನೀವು ಆ ರೀತಿ ಮಾತಡಬೇಡಿ ಎಂದು ಬುದ್ದಿವಾದ ಹೇಳಿದ್ದಾರೆ.

    ಊಟದ ವಿಚಾರಕ್ಕಾಗಿ ನಡೆದ ಮಾತು, ಜಗಳಕ್ಕೆ ತಿರುಗಿದ್ದು ಈ ಸಮಯದಲ್ಲಿ ಸುಮ್ಮನಿರುವಂತೆ ಸೋನು ಶ್ರೀನಿವಾಸ್ ಗೌಡಗೆ ಹೇಳುತ್ತಲೇ ಇರುತ್ತಾರೆ ಗುರೂಜಿ. ಆದರೆ, ಸೋನು ಮಾತನಾಡುತ್ತಲೇ ಹೋಗುತ್ತಾರೆ. ನೀವು ಮಾತನಾಡುತ್ತೀರಿ ಎಂದು ಗುರೂಜಿಗೆ ಹೇಳುತ್ತಾರೆ. ನಾನ್ ಸ್ಟಾಪ್ ಮಾತುಗಳನ್ನು ಕೇಳಿದ ಗುರೂಜಿ ಕೋಪ ಮಾಡಿಕೊಂಡು ‘ನಿನ್ನ ಬಾಯಿಗೆ ಪೊರಕೆ ಇಡ್ಬೇಕಾ? ಸುಮ್ನಿರ್ತಿಯಾ’ ಎಂದು ಆವಾಜ್ ಹಾಕುತ್ತಾರೆ. ಅದನ್ನು ಕೇಳಿಸಿಕೊಂಡ ಸೋನು, ನೀವು ಈ ರೀತಿ ಮಾತನಾಡಬೇಡಿ ಎಂದು ತಿರುಗೇಟು ನೀಡುತ್ತಾರೆ. ಇದನ್ನೂ ಓದಿ:ಪ್ರೀ ವೆಡ್ಡಿಂಗ್ ಫೋಟೋಶೂಟ್‌ನಲ್ಲಿ ಮಿಂಚಿದ `ಕಮಲಿ’ ಖ್ಯಾತಿಯ ಗೇಬ್ರಿಯೆಲಾ- ಸುಹಾಸ್

    ಸೋನು ಶ್ರೀನಿವಾಸ್ ಗೌಡ ಸದಾ ಮಾತನಾಡುತ್ತಲೇ ಇರುತ್ತಾಳೆ ಮತ್ತು ಗೌರವ ಕೊಡುವುದಿಲ್ಲ ಎನ್ನುವುದನ್ನು ಬಿಗ್ ಬಾಸ್ ಮನೆಯಲ್ಲಿರುವ ಬಹುತೇಕರು ಮಾತನಾಡಿದ್ದಾರೆ. ಇದೇ ಕಾರಣಕ್ಕಾಗಿ ಸುದೀಪ್ ಕೂಡ ಸೋನುಗೆ ಬುದ್ದಿವಾದ ಹೇಳಿದ್ದಾರೆ. ಆದರೂ, ಸೋನು ತಿದ್ದಿಕೊಂಡಂತೆ ಕಾಣುತ್ತಿಲ್ಲ. ಹಾಗಾಗಿಯೇ ಆಡಬಾರದ ಪದಗಳಿಂದ ಆಕೆಯನ್ನು ನಿಂದಿಸುತ್ತಲೇ ಇರುತ್ತಾರೆ ಬಿಗ್ ಬಾಸ್ ಸ್ಪರ್ಧಿಗಳು. ಅದರಲ್ಲಿ ಗುರೂಜಿ ಆಡಿದ ಈ ಮಾತೂ ಒಂದಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸೋನು ಅಂದ್ರೆ ಹಾಲು ಇದ್ದಂಗೆ, ಆದರೆ ಸಡನ್ನಾಗಿ ಉಕ್ಕುತ್ತಾಳೆ ಎಂದ ಗುರೂಜಿ

    ಸೋನು ಅಂದ್ರೆ ಹಾಲು ಇದ್ದಂಗೆ, ಆದರೆ ಸಡನ್ನಾಗಿ ಉಕ್ಕುತ್ತಾಳೆ ಎಂದ ಗುರೂಜಿ

    ಪ್ರೇಕ್ಷಕರನ್ನ ಮೋಡಿ ಮಾಡುತ್ತಿರುವ ಏಕೈಕ ಶೋ ಅಂದ್ರೆ ಬಿಗ್ ಬಾಸ್ ಓಟಿಟಿ. ಇದೀಗ ನಾಲ್ಕನೇ ವಾರ ಪೂರ್ಣಗೊಳಿಸಿ, ಐದನೇ ವಾರದತ್ತ ಮುನ್ನುಗ್ಗುತ್ತಿದೆ. ಭಿನ್ನ ಮನಸ್ಥಿತಿ ಇರುವ ಸ್ಪರ್ಧಿಗಳು ಈ ಶೋನಲ್ಲಿ ಭಾಗಿಯಾಗಿದ್ದಾರೆ. ಇನ್ನು ನೇರವಾಗಿ ಮಾತನಾಡುವ ಮೂಲಕ ಮನೆಮಂದಿಯ ಕೆಂಗಣ್ಣಿಗೆ ಗುರಿಯಾಗಿರುವ ವೈರಲ್ ಹುಡುಗಿ ಸೋನು, ನಾಲ್ಕನೇ ವಾರದಲ್ಲಿ ಕಳಪೆ ಎಂಬ ಹಣೆಪಟ್ಟಿ ಪಡೆದು ಜೈಲು ಸೇರಿದ್ದರು. ಇದೀಗ ಸೋನು ವ್ಯಕ್ತಿತ್ವ ಹೇಗೆ ಎಂಬುದನ್ನ ಗುರೂಜಿ ಈ ವೇಳೆ ಬಣ್ಣಿಸಿದ್ದಾರೆ.

    ಬಿಗ್ ಬಾಸ್ ಮನೆಯ ಆಟ ಮುಗಿಯಲು ಇದೀಗ ಎರಡೇ ವಾರ ಬಾಕಿದೆ. ದಿನದಿಂದ ದಿನಕ್ಕೆ ಹಲವಾರು ಬದಲಾವಣೆಗಳಾಗುತ್ತಿದೆ. ಇನ್ನು ಮನೆಯಲ್ಲಿ ಸಾಕಷ್ಟು ವಿಚಾರವಾಗಿ ಹೈಲೈಟ್ ಆಗಿರುವ ಸೋನು ಶ್ರೀನಿವಾಸ ಗೌಡ, ಇಡೀ ವಾರದ ಪರ್ಫಾಮೆನ್ಸ್ ಮೇರೆಗೆ ಕಳಪೆ ಬೋರ್ಡ್ ಪಡೆದು, ಜೈಲು ಸೇರಿದ್ದರು. ಇನ್ನು ಜೈಲಿನಲ್ಲಿರುವಾಗ ಮನೆಯವರನ್ನ ಬೈದುಕೊಂಡೆ ಮನೆಯಲ್ಲಿದ್ದರು. ಈ ವೇಳೆ ಸೋನು ಅವರನ್ನ ಇತರ ಸ್ಪರ್ಧಿಗಳು ಬಂದು ಸಮಾಧಾನಿಸಲು ಪ್ರಯತ್ನಿಸಿದ್ದರು. ಇನ್ನು ಆರ್ಯವರ್ಧನ್ ಗುರೂಜಿ, ಸೋನು ಒಟ್ಟಾರೆ ವ್ಯಕ್ತಿತ್ವದ ಬಗ್ಗೆ ಬಣ್ಣಿಸಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಜಯಶ್ರೀ ಆರಾಧ್ಯ

    ನಾನು ನೋಡಿದಂತೆ ನೀನು ಒಂಥರಾ ಹಾಲು ಇದ್ದಂಗೆ. ಸಿಟ್ಟಾದರೆ ಒಂದೇ ಸಲ ಉಕ್ಕುತ್ತೀಯ, ಪಾತ್ರೆ ಸರಿಯಿಲ್ಲ ಅಂದ್ರೆ ಒಂದೇ ಸಲ ಒಡೆದು ಸಲ ಹೊಡೆದು ಹೋಗುತ್ತೀಯ ಎಂದು ಆರ್ಯವರ್ಧನ್ ಮಾತನಾಡಿದ್ದಾರೆ. ಗುರೂಜಿ ಹೀಗೆ ಹೇಳಿದಕ್ಕೆ ಸೋನು ನಕ್ಕಿದ್ದಾರೆ. ಆದರೆ, ನಾನು ಹಾಲಾಗಲು ಮತ್ತೆ ಟ್ರೈ ಮಾಡಲ್ಲ. ಮಾತನಾಡುತ್ತೀನಿ, ನಾರ್ಮಲ್ ಆಗಿರುತ್ತೀನಿ ಎಂದು ಸೋನು ಮಾತನಾಡಿದ್ದಾರೆ.

    ಇನ್ನು ಕಿಚ್ಚನ ವೀಕೆಂಡ್ ಪಂಚಾಯಿತಿಯಲ್ಲಿ ಮನೆಯಲ್ಲಿ ಸೋನು ನಡೆಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದರು. ರಾಕೇಶ್ ಅಡಿಗ ಜೊತೆ ಸೋನು ನಡೆದುಕೊಂಡಿರುವ ರೀತಿಗೆ ಸುದೀಪ್ ಖಡಕ್ ಕ್ಲಾಸ್ ತೆಗೆದುಕೊಂಡು ಮನವರಿಕೆ ಮಾಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಜಯಶ್ರೀ ಮೇಲೆ ಆರ್ಯವರ್ಧನ್ ಗುರೂಜಿ ಕೋಪಿಸಿಕೊಂಡ್ರಾ?

    ಜಯಶ್ರೀ ಮೇಲೆ ಆರ್ಯವರ್ಧನ್ ಗುರೂಜಿ ಕೋಪಿಸಿಕೊಂಡ್ರಾ?

    ನುಷ್ಯನಿಗೆ ತಾಳ್ಮೆ ಇರುವುದು ಸಹಜ. ಆದರೆ ತುಂಬಾ ಪ್ರೆಶರ್ ಆದಾಗ ಆ ತಾಳ್ಮೆ ಎಂಬ ಕಟ್ಟೆ ಒಡೆಯುತ್ತದೆ. ಅದು ಒಡೆದಾಗ ಎದುರಿಗಿದ್ದವರು ಯಾರು ಬೇಕಾದರೂ ಅದರ ಅಪಾಯದಲ್ಲಿ ಸಿಲುಕಬಹುದು. ಇಂದು ಬಿಗ್ ಬಾಸ್ ಮನೆಯಲ್ಲಿ ಕಂಡದ್ದು ಅದೇ. ಆರ್ಯವರ್ಧನ್ ಗುರೂಜಿಗೆ ಕೋಪ ಬಂದರೆ ಏನಾಗಬಹುದು ಎಂಬ ಸುಳಿವು ಸಿಕ್ಕಿದೆ.

    ಆರ್ಯವರ್ಧನ್ ಗುರೂಜಿ ಎಂದಾಕ್ಷಣ ಬಿಗ್ ಬಾಸ್ ಮನೆಯ ಯಾವ ಸದಸ್ಯರನ್ನು ಕೇಳಿದರು ಎಲ್ಲರೂ ಹೇಳುವುದು ಅವರು ಒಂಥರ ಮಗುವಿನಂಥವರು. ಅವರಿಗೆ ಮಗುವಿನಂಥ ಮನಸ್ಸಿದೆ ಎಂದು. ಅದರ ಜೊತೆಗೆ ಇನ್ನು ಒಂದು ಮಾತು ಕೂಡ ಕೇಳಿ ಬಂದಿದೆ. ಗುರೂಜಿಗೂ ಒಮ್ಮೊಮ್ಮೆ ಮನಸ್ಸಿಗೆ ನೋವಾಗುತ್ತದೆ. ಆದರೆ ನೋವಾದರೂ ಆ ನೋವನ್ನು ತೋರಿಸಿಕೊಳ್ಳಲ್ಲ. ಬದಲಿಗೆ ಅವರೇ ಅನುಭವಿಸಿ, ಖುಷಿಯನ್ನು ಹಂಚುತ್ತಾರೆ ಎನ್ನುತ್ತಾರೆ.

    ಅದಷ್ಟೇ ಅಲ್ಲದೆ ಕೆಲವೊಮ್ಮೆ ಏನೇ ಪ್ರಶ್ನೆ ಕೇಳಿದರೂ ಅದು ಗುರೂಜಿಗೆ ಅರ್ಥವಾಗಿರುವುದಿಲ್ಲ ಎಂದೇ ಕಾಣುತ್ತದೆ. ಅಥವಾ ಅದಕ್ಕೆ ಸರಿಯಾದ ಉತ್ತರ ಕೊಡುವುದಕ್ಕೂ ಬರಲ್ಲ. ಅದು ಈಗಾಗಲೇ ಕಿಚ್ಚ ಸುದೀಪ್ ವೇದಿಕೆಯಲ್ಲೂ ಪ್ರೂವ್ ಆಗಿದೆ. ಆದರೆ ಅದನ್ನು ಕಿಚ್ಚ ಸುದೀಪ್ ತಮಾಷೆಯಂತೆಯೇ ಬಿಂಬಿಸಿ ಸುಮ್ಮನೆ ಆಗಿದ್ದಾರೆ. ಗುರೂಜಿಯ ಮುಖಭಾವವನ್ನು ಆ ಸಮಯದಲ್ಲಿ ನೋಡಿದರೆ ಅವರು ಅವರದ್ದೇ ಯೋಚನಾ ಲೋಕದಲ್ಲಿ ಇರುತ್ತಾರೆ ಎಂಬ ಭಾವನೆ ಬರುತ್ತದೆ. ಇದೆಲ್ಲಾ ಗುರೂಜಿಯ ಮೇಲೆ ಪ್ರಭಾವ ಬೀರಿದೆಯೇನೋ? ಮನೆಯಲ್ಲಿ ಯಾವಾಗಲೂ ಸೀರಿಯಸ್‌ನೆಸ್ ಇಲ್ಲದಂತೆ ಆಡುವುದು ಗುರೂಜಿಗೆ ಕಿರಿಕಿರಿಯಾಗಿತ್ತು ಎನಿಸುತ್ತದೆ. ಅದೆಲ್ಲವನ್ನು ಇವತ್ತು ಒಂದೇ ಸಲ ಹೊರಹಾಕಿದ್ದಾರೆ. ಇದನ್ನೂ ಓದಿ: ಸುದೀಪ್ ಹುಟ್ಟು ಹಬ್ಬಕ್ಕೆ ಯಾಕೆ ಸಿನಿಮಾ ಘೋಷಣೆ ಇಲ್ಲ?: ಅನುಮಾನ ಮೂಡಿಸಿದ ಕಿಚ್ಚನ ನಡೆ

    ಇಂದಿಗೆ ಸೋಮಣ್ಣ ಕ್ಯಾಪ್ಟೆನ್ಸಿ ಮುಗಿದಿದೆ. ರೂಪೇಶ್ ಕೊನೆಯ ಕ್ಯಾಪ್ಟನ್ ಆಗಿದ್ದಾರೆ. ಈ ಮಧ್ಯೆ ಕ್ಯಾಪ್ಟನ್ ಬಗ್ಗೆ ಏನು ಅನ್ನಿಸಿತು, ಎಷ್ಟು ಮಾರ್ಕ್ಸ್ ಕೊಡುತ್ತೀರಾ ಎಂಬುದು ಮನೆಯ ಸದಸ್ಯರ ಟಾಸ್ಕ್ ಆಗಿರುತ್ತೆ. ಎಲ್ಲರೂ ಸೋಮಣ್ಣ ಅವರ ಕ್ಯಾಪ್ಟೆನ್ಸಿಗೆ ಸಮಾಧಾನಗೊಂಡಿದ್ದಾರೆ. ತಮ್ಮ ಅಭಿಪ್ರಾಯವನ್ನು ಹೇಳುವ ಸರದಿ ಆರ್ಯವರ್ಧನ್ ಅವರಿಗೆ ಬಂತು. ಆಗ, ಜೀವನದಲ್ಲಿ ಸಾಕಷ್ಟು ಕಷ್ಟವನ್ನು ಹೇಳಿಕೊಳ್ಳುತ್ತಾ ಇದ್ದರು. ಬರುವಾಗ ಬಹಳಷ್ಟು ನೋವಲ್ಲಿ ಬಂದಿದ್ರು ಎನಿಸುತ್ತೆ. ಆದರೆ ಯಾರು ಊಹೆ ಮಾಡಿಕೊಳ್ಳುವುದಕ್ಕೆ ಆಗುತ್ತಿರಲಿಲ್ಲ. ಅವರಿಗೆ ಗೊತ್ತಿತ್ತು. ಯಾರ್ ಯಾರನ್ನು ಕ್ಯಾಪ್ಟನ್ ಮಾಡಬೇಕು ಅಂತ. ಅವರ ಟೀಂನಲ್ಲಿ ಮಾಡಿದ ಸೆಲೆಕ್ಷನ್, ನಡೆದುಕೊಂಡ ರೀತಿ ಚೆನ್ನಾಗಿದೆ. ಜಯಶ್ರೀ ಅವರು ಹಠ ಹಿಡಿದು ಗೆದ್ದರು. ಆದರೆ ಸೋಮಣ್ಣ ಸ್ವಲ್ಪ ನೊಂದುಕೊಂಡರು ಎಂದರು. ಆಗ ಸೋಫಾ ಮೇಲೆ ಕುಳಿತಿದ್ದ ಜಯಶ್ರೀ ಏನೋ ಮಾತನಾಡಿದಂತೆ ಆಯಿತು.

    ಆಗ ಆರ್ಯವರ್ಧನ್ ಕೊಂಚ ಗರಂ ಆಗಿಯೇ ಉತ್ತರ ಕೊಟ್ಟಿದ್ದಾರೆ. ದಯವಿಟ್ಟು ಕೇಳಿ. ನಿಮ್ಮದೆಲ್ಲಾ ಮುಚ್ಚಿಕೊಂಡು ಕೇಳಲಿಲ್ಲವಾ..? ನಾನು ರಾಶಿ ಭವಿಷ್ಯ ಹೇಳಿದಾಗ ಹರ್ಕೊಳ್ತಾ ಇದ್ರಿ. ಜೀವನ ಕೆಟ್ಟದಾದಾಗ ಇಲ್ಲ ವಿಷ ಕುಡಿತೀರಾ, ಇಲ್ಲ ಹೋಗಿ ಸಾಯ್ತೀರ. ನಿಮ್ಮ ನಾಯಿ ಬುದ್ಧಿ ಕೋತಿ ಬುದ್ಧಿ ಎಲ್ಲಾ ನಿಮ್ಮ ಊರಲ್ಲಿ ಇಟ್ಕೊಳಿ. ಇದು ಬಿಗ್ ಬಾಸ್, ಬಿಗ್ ಬಾಸ್‌ಗೆ ಮೊದಲು ಮರ್ಯಾದೆ ಕೊಡಿ. ನಾಯಿ ಥರ ಎಲ್ಲಾ ಆಡಬೇಡಿ. ಒಳ್ಳೆ ದೆವ್ವದ ಥರ ಆಡುತ್ತೀರಾ. ನನ್ನ ಮಾತುಗಳು ಪರ್ಫೆಕ್ಟ್ ಆಗಿ ಇದ್ದಾವೆ.

    ಉದಾಹರಣೆಗಳನ್ನು ಕೊಟ್ಟು ಮಾತನಾಡುತ್ತೇನೆ. ನಾವೂ ದಿವಸ ನೂರು ಜನಕ್ಕೆ ಬೈಯ್ಯುವವರು. ಮೂರು ಜನಕ್ಕೆ ಬೈಯ್ಯುವುದು ದೊಡ್ಡ ಕೆಲಸವೇನಲ್ಲ. ನಾಯಿಗೆ ಉಗಿದವರಂತೆ ಉಗಿಯುತ್ತೀನಿ. ಉಗಿದರೆ ಡಿಕ್ಷನರಿಯಲ್ಲಿ ಇಲ್ಲದ ಪದಗಳನ್ನೇ ಹೇಳುತ್ತೇನೆ. ನಾಲ್ಕು ಪದ ಅರ್ಥ ಆಗಬಹುದು. ಆದರೆ ನಾಲ್ಕು ನೂರು ವರ್ಷದ ಮಾತನ್ನು ಬೇಕಾದರೂ ಮಾತನಾಡುತ್ತೇನೆ ಎಂದು ಗರಂ ಆಗಿ ಬಳಿಕ ಮಾತನಾಡಿ, ಬಿಗ್ ಬಾಸ್‌ನಲ್ಲಿ ಎಲ್ಲಾ ಗೇಮ್ ಅನ್ನು ಅಟ್ಯಾಕ್ ಮಾಡುವ ತಾಕತ್ತು ಇರುವುದು ಸೋಮಣ್ಣನಿಗೆ ಮಾತ್ರ ಎಂದು ಹೊಗಳಿದ್ದಾರೆ. ಇದನ್ನೂ ಓದಿ: ಕಳಪೆ ಎಂದ ರಾಕೇಶ್ ಮೇಲೆ ಸೋನುಗೆ ಕೆಂಡದಷ್ಟು ಕೋಪ

    Live Tv
    [brid partner=56869869 player=32851 video=960834 autoplay=true]

  • ಬಿಗ್‍ಬಾಸ್ ಮನೆಯಲ್ಲಿ ನೆಗೆಟಿವ್ ಎಂದರೆ ಅದು ಜಯಶ್ರೀ ಮಾತ್ರನಾ?

    ಬಿಗ್‍ಬಾಸ್ ಮನೆಯಲ್ಲಿ ನೆಗೆಟಿವ್ ಎಂದರೆ ಅದು ಜಯಶ್ರೀ ಮಾತ್ರನಾ?

    ಬಿಗ್‍ಬಾಸ್ ಮನೆಯಲ್ಲಿ ಬದಲಾವಣೆ ತುಂಬಾ ಅನಿವಾರ್ಯತೆ. ಆದರೆ ಅದ್ಯಾಕೋ ಜಯಶ್ರೀ ಮತ್ತೆ ಬದಲಾದಂತೆ ಕಾಣುತ್ತಲೇ ಇಲ್ಲ. ಯಾಕೆಂದರೆ ಇಂದು ಮನೆಯವರೆಲ್ಲಾ ಸೇರಿ ಕಷ್ಟದ ಗಿಫ್ಟ್ ನೀಡಿದಾಗಲೇ ಜಯಶ್ರೀ ಮೇಲಿರುವ ಒಪಿನಿಯನ್ ಇನ್ನು ಕೂಡ ಬದಲಾಗಿಲ್ಲ ಎಂಬುದು ತಿಳಿದುಬಂದಿದೆ. ಕಳೆದ ವಾರ ಸುದೀಪ್ ಕೂಡ ಜಯಶ್ರೀಗೆ ಕಿವಿ ಮಾತು ಹೇಳಿದ್ದರು. ರಿವೆಂಜ್ ತಪ್ಪು ಎಂಬುದನ್ನು ಮನವರಿಕೆ ಮಾಡಿದ್ದರು. ಹೌದು ಈ ಬಗ್ಗೆ ರಿಯಲೈಸ್ ಆಗಿದೆ. ಸರಿ ಮಾಡಿಕೊಳ್ಳುತ್ತೀನಿ ಎಂದಿದ್ದ ಜಯಶ್ರೀ ಇನ್ನು ಸರಿಯಾಗಿಲ್ಲ ಎಂಬ ಅನುಮಾನ ಕಾಡುವುದಕ್ಕೆ ಶುರುವಾಗಿದೆ.

    ಇಂದು ಇಷ್ಟ ಕಷ್ಟದ ಆಟ ಆಡುವುದಕ್ಕೆ ಬಿಗ್‍ಬಾಸ್ ಸ್ಪರ್ಧಿಗಳಿಗೆ ಹೇಳಿತ್ತು. ಅದಕ್ಕೆಂದೇ ಒಂದಷ್ಟು ಗಿಫ್ಟ್‌ಗಳಿರುವ ಬಾಕ್ಸ್ ಅನ್ನು ನೀಡಿತ್ತು. ಇಷ್ಟವಾದವರಿಗೆ ಇಷ್ಟದ ಗಿಫ್ಟ್, ಕಷ್ಟ ಎನಿಸಿದವರಿಗೆ ಕಷ್ಟದ ಗಿಫ್ಟ್ ನೀಡಬೇಕಾಗಿತ್ತು. ಹೆಚ್ಚಿನ ಸದಸ್ಯರು ಇಷ್ಟದ ಗಿಫ್ಟ್ ನೀಡಲು ಆರ್ಯವರ್ಧನ್ ಗುರೂಜಿಯವರನ್ನು ಆಯ್ದುಕೊಂಡರು. ಅದೇ ರೀತಿ ಹೆಚ್ಚು ಜನ ಕಷ್ಟದ ಗಿಫ್ಟ್ ನೀಡಲು ಜಯಶ್ರೀಯನ್ನು ಆಯ್ದುಕೊಂಡರು. ಬೇಡ ಎಂಬ ವಿಚಾರ ಬಂದಾಗೆಲ್ಲಾ ಹೆಚ್ಚಿನ ಬಾರಿ ಆಯ್ಕೆಯಾಗುತ್ತಿರುವುದು ಜಯಶ್ರೀಯವರಾಗಿದ್ದಾರೆ.

    ಮೊದಲಿಗೆ ನಂದಿನಿ ತಮ್ಮ ಗಿಫ್ಟ್ ನೀಡಲು ಬಂದರು. ಬೆಸ್ಟ್ ಗಿಫ್ಟ್ ತೆಗೆದುಕೊಂಡು ಸಾನ್ಯಾಗೆ ಪ್ರಿಫರೆನ್ಸ್ ನೀಡಿದರು. ಸಾನ್ಯಾ ಬಗ್ಗೆ ತಮಗಿರುವ ಒಪಿನಿಯನ್ ಕೂಡ ಹಂಚಿಕೊಂಡರು. ಆ ಗಿಫ್ಟ್ ಕೊಟ್ಟು ಲೈಫ್ ಲಾಂಗ್ ಫ್ರೆಂಡ್ ಅಂತ ತಬ್ಬಿದರು. ನಂತರ ಕಷ್ಟದ ಗಿಫ್ಟ್ ನೀಡಬೇಕಾಗಿತ್ತು. ಆ ವೇಳೆ ಜಯಶ್ರೀಯನ್ನು ಆಯ್ಕೆ ಮಾಡಿಕೊಂಡರು. ಬೇರೆ ಯಾವ ಕಾರಣವೂ ಇಲ್ಲ. ಆದರೆ ಮಾತು ಕಡಿಮೆ ಮಾಡಿದರೆ ಬೆಟರ್ ಎಂದುಕೊಂಡು ಈ ಗಿಫ್ಟ್ ಅನ್ನು ಜಯಶ್ರೀಗೆ ನೀಡುತ್ತಿದ್ದೇನೆ ಎಂದರು. ಗಿಫ್ಟ್ ತೆಗೆದುಕೊಂಡ ಜಯಶ್ರೀ ಮುಖದಲ್ಲಿ ನಂದಿನಿ ಕಂಡರೆ ಇಷ್ಟವಿಲ್ಲದ ರೀತಿಯ ಭಾವವೇ ಎದ್ದು ಕಾಣುತ್ತಿತ್ತು. ಇದನ್ನೂ ಓದಿ: ಆರ್ಯವರ್ಧನ್ ಗುರೂಜಿಯವರಲ್ಲಿ ಅಪ್ಪನ ಪ್ರೀತಿ ಕಂಡೆ: ರೂಪೇಶ್ ಭಾವುಕ

    ನೆಕ್ಸ್ಟ್ ಸೋಮಣ್ಣ ಕೂಡ ಎರಡು ಗಿಫ್ಟ್ ಆಯ್ಕೆ ಮಾಡಿಕೊಂಡರು. ಮೊದಲು ಇಷ್ಟದ ಗಿಫ್ಟ್ ಅನ್ನು ಆರ್ಯವರ್ಧನ್ ಅವರಿಗೆ ನೀಡಲಾಯಿತು. ಅದಕ್ಕೆ ಕಾರಣವೆಂದರೆ ಆರ್ಯವರ್ಧನ್ ಮಾಡುತ್ತಿದ್ದ ಕೇರಿಂಗ್. ಸೋಮಣ್ಣ ಅವರು ಆ ಬಗ್ಗೆ ಹಂಚಿಕೊಂಡಿದ್ದು ಹೀಗೆ, ನನಗೆ ಸೋದರ ಭಾವ ಬರಿಸಿದರು. ಊಟದ ವಿಚಾರದಲ್ಲಿ ಅಣ್ಣನ ಸ್ಥಾನದಲ್ಲಿ ನಿಂತು ನನ್ನನ್ನು ಕೇರ್ ಮಾಡಿದ್ದಾರೆ. ಒಮ್ಮೊಮ್ಮೆ ಊಟ ಸಾಕಾಗಿಲ್ಲ ಎಂದಾಗ ಅವರ ಊಟದಲ್ಲಿ ಯಾರಿಗೂ ಕಾಣದ ಹಾಗೇ ತಂದು ನನಗೆ ಕೊಟ್ಟಿದ್ದಾರೆ. ಗಂಜಿಗೆ ತುಪ್ಪ ಬೆರೆಸಿಕೊಂಡು ಬಂದು ತಿನ್ನು ಎನ್ನುತ್ತಿದ್ದರು. ಹೀಗಾಗಿ ಈ ಗಿಫ್ಟ್ ಅವರಿಗೆ ಕೊಡಬೇಕು ಎಂದು ಕೊಟ್ಟಿದ್ದಾರೆ.

    ಕಷ್ಟದ ಗಿಫ್ಟ್ ಅನ್ನು ಜಯಶ್ರೀಗೆ ನೀಡಿದ್ದು, ಈ ಮನೆಯಲ್ಲಿ ಕೆಲವೊಂದು ಸಲ ಒಳ್ಳೆಯದ್ದನ್ನು ಹೇಳಿದರೂ ತಪ್ಪಾಗುತ್ತದೆ. ಆದರೆ ಈ ಮನೆಯಲ್ಲಿ ಸ್ವಲ್ಪ ಅವರು ಬದಲಾಗಬೇಕು ಎಂಬುದಷ್ಟೇ. ಬೇರೆ ಏನನ್ನು ಯೋಚಿಸಬೇಡ ಎಂದು ಜಯಶ್ರೀಗೆ ಹೇಳಿದ್ದಾರೆ. ಇದನ್ನೂ ಓದಿ: ಬಿಗ್‌ಬಾಸ್‌ ಮನೆಯಲ್ಲಿ ನಿಜ ವಯಸ್ಸು ರಿವೀಲ್‌ ಮಾಡಿದ ಸೋನು ಗೌಡ..!

    ನಂತರ ಬಂದ ಸಾನ್ಯಾ ತಮ್ಮ ಬೆಸ್ಟ್ ಗಿಫ್ಟ್, ಪ್ಲಾಂಟ್ ಅನ್ನು ರೂಪೇಶ್‍ಗೆ ಕೊಟ್ಟಿದ್ದಾರೆ. ನೀನು ಮಂಗಳೂರಲ್ಲಿ ಇರುತ್ತೀಯಾ ಬೆಂಗಳೂರಲ್ಲಿ ಇರಲ್ಲ ಮಿಸ್ ಮಾಡಿಕೊಳ್ಳುತ್ತೇನೆ. ನಿನ್ನ ಆಫೀಸ್ ಅಥವಾ ಮನೆಯಲ್ಲಿ ಇಟ್ಟುಕೋ ನೋಡಿದಾಗೆಲ್ಲಾ ನಾನೇ ಕೊಟ್ಟಿದ್ದು ಎಂದು ನೆನಪಾಗಲಿ ಎಂದಿದ್ದಾರೆ. ಅಟ್ ದಿ ಸೇಮ್ ಟೈಮ್ ಕಷ್ಟದ ಉಡುಗೊರೆಯನ್ನು ಜಯಶ್ರೀಗೆ ನೀಡಿದ್ದಾರೆ. ಈ ಮನೆಯಲ್ಲಿ ಪ್ರತಿಯೊಂದನ್ನು ದುರ್ಬಿನ್ ಹಾಕಿ ಹುಡುಕುತ್ತಾರೆ. ಪ್ರತಿಯೊಂದು ಪಾಯಿಂಟ್ ಮಾಡಿ ಹೇಳುವುದನ್ನು ನಿಲ್ಲಿಸಬೇಕು. ನಾವೆಲ್ಲರೂ ಮನುಷ್ಯರೇ ತಪ್ಪು ಮಾಡುತ್ತೀವಿ. ಅದನ್ನು ತಿದ್ದಿಕೋ. ಇದನ್ನು ಬಿಸಿಲಿನಲ್ಲಿ ಹಿಡಿದು ನೋಡು ವಜ್ರದಂತೆ ಹೊಳೆಯುತ್ತೀಯಾ ಎಂದು ಕಾಮಿಡಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]