ಕಿರುತೆರೆಯ ನಂಬರ್ ಒನ್ ಶೋ ಬಿಗ್ ಬಾಸ್‌ನಲ್ಲಿ ಆರ್ಯವರ್ಧನ್ ಗುರೂಜಿ(Aryavardhan Guruji) ತಮ್ಮ ನೇರ ಮಾತಿನ ಮೂಲಕ ಹೈಲೆಟ್ ಆಗಿದ್ದಾರೆ. ಮನೆಯ ಕ್ಯಾಪ್ಟನ್ ಆಗಿರುವ ಗುರೂಜಿ ರಾಕೇಶ್ ಅಡಿಗ (Rakesh Adiga) ಬಗ್ಗೆ ಹೇಳಿರುವ ಮಾತು ಸಖತ್ ವೈರಲ್ ಆಗುತ್ತಿದೆ. ವೀಕೆಂಡ್ ಪಂಚಾಯಿತಿಯಲ್ಲಿ ಕಿಚ್ಚ, ಬೆಳಿಗ್ಗೆ ಎದ್ದಾಗ ಯಾರು ಆಗೋಕೆ ಇಷ್ಟಪಡಲ್ಲ ಎಂದು ಕೇಳಿದ್ದಾರೆ. ಈ ವೇಳೆ ಗುರೂಜಿ ಹೇಳಿರುವ ಮಾತು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಬಿಗ್ ಬಾಸ್ ಶೋ(Bigg Boss) ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನ ಪಡೆದು ಮುನ್ನುಗ್ಗುತ್ತಿದೆ. ಮೂರನೇ ವಾರಕ್ಕೆ ದೊಡ್ಮನೆ ಕಾಲಿಟ್ಟಿದೆ. ವಾರದ ಕ್ಯಾಪ್ಟನ್ ಆಗಿ ಆರ್ಯವರ್ಧನ್ ಗುರೂಜಿ ಆಯ್ಕೆ ಆಗಿದ್ದಾರೆ. ವೀಕೆಂಡ್ ಪಂಚಾಯಿತಿಯಲ್ಲಿ ಕಿಚ್ಚನ ಮುಂದೆ ಇಂಟರೆಸ್ಟಿಂಗ್ ವಿಚಾರವೊಂದು ರಿವೀಲ್ ಆಗಿದೆ. ಒಂದು ವಾರ ರಾಕೇಶ್ ಜೊತೆಯಲ್ಲಿದ್ದ ಸಮಯದಲ್ಲಿ ಏನಾಯ್ತು ಎಂಬುದುದನ್ನ ಹೇಳಿಕೊಂಡಿದ್ದಾರೆ.
ವಾರಾಂತ್ಯದ ಪಂಚಾಯಿತಿಯಲ್ಲಿ ಯಾವ ವ್ಯಕ್ತಿ ಆಗೋಕೆ ಇಷ್ಟ ಇಲ್ಲ ಎಂದು ಸುದೀಪ್(Kicch Sudeep) ಸ್ಪರ್ಧಿಗಳಿಗೆ ಕೇಳಿದ್ದಾರೆ. ಈ ಸಮಯದಲ್ಲಿ ಗುರೂಜಿ ನನಗೆ ರಾಕೇಶ್ ಅಡಿಗ ಆಗೋಕೆ ಇಷ್ಟ ಇಲ್ಲ ಎಂದಿದ್ದಾರೆ. ಯಾಕೆ ಎಂದು ಕೇಳಿದಾಗ ರೂಮ್‌ನಲ್ಲಿ ನಡೆದಿರೋದನ್ನ ಹೇಳೋದ್ದಕ್ಕೆ ಆಗಲ್ಲ ಎಂದಿದ್ದಾರೆ. ಅರ್ಥ ಮಾಡಿಕೊಳ್ಳಿ ಎಂದು ಕುತೂಹಲ ಕೆರಳಿಸುವಂತೆ ಉತ್ತರಿಸಿದ್ದಾರೆ. ಇದನ್ನೂ ಓದಿ:ಪನೋರಮಾ ಸ್ಟುಡಿಯೋ ತೆಕ್ಕೆಗೆ ಝೈದ್ ಖಾನ್ ನಟನೆಯ ‘ಬನಾರಸ್’ ಸಿನಿಮಾ
ರಾಕೇಶ್‌ನ ಕಂಡರೆ ಭಯವಾಗುತ್ತದೆ. ರೂಮ್‌ನಲ್ಲಿ ಒಂದು ವಾರಗಳ ಕಾಲ ಸಾಕಷ್ಟು ವಿಚಾರಗಳನ್ನ ನಾವು ಹಂಚಿಕೊಂಡಿದ್ದೇವೆ ಎಂದು ಮಾತನಾಡಿದ್ದಾರೆ. ಜನಕ್ಕೆ ನೆಗಟಿವ್ ಮೇಸೆಜ್ ಹೋಗುತ್ತದೆ ಅದು ಎನು ಅಂತಾ ಹೇಳಿ ಎಂದು ರಾಕೇಶ್ ಕೂಡ ಗುರೂಜಿಗೆ ಮನವಿ ಮಾಡಿದ್ದಾರೆ. ಕಡೆಗೂ ಗುರೂಜಿ ಉತ್ತರ ನೀಡದೇ ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬಿಗ್ ಬಾಸ್ ಮನೆ(Bigg Boss House) ಸಾಕಷ್ಟು ವಿಚಾರವಾಗಿ ಹೈಲೆಟ್ ಆಗುತ್ತಿದೆ. 13ನೇ ದಿನಕ್ಕೆ ಕಾಲಿಟ್ಟಿರುವ ದೊಡ್ಮನೆ ಈಗ ರಣರಂಗವಾಗಿದೆ. ಮೊದಲನೇ ದಿನವಿದ್ದ ನಗು, ಶಾಂತಿ, ಶಿಸ್ತು ಇದೀಗ ಮರೆಯಾಗಿದೆ. ಇನ್ನೂ ಬಿಗ್ ಬಾಸ್ ಮನೆಯಲ್ಲಿ ಆರ್ಯವರ್ಧನ್ ಗುರೂಜಿ (Aryavardhan Guruji) ಮೇಲೆ ಆಗಾಗ ಪ್ರ್ಯಾಂಕ್‌ಗಳು ಆಗುತ್ತಲೇ ಇರುತ್ತದೆ. ಇದರಿಂದ ರೋಸಿ ಹೋಗಿರುವ ಗುರೂಜಿ ತಮ್ಮ ಕೋಪವನ್ನು ಕಂಟ್ರೋಲ್ ಮಾಡಿಕೊಳ್ಳುತ್ತಿದ್ದಾರೆ. ಇದೇ ವೇಳೆ ಮಾತನಾಡಿಸಿರುವ ಕಾವ್ಯಶ್ರೀಗೆ ಚಾಕು ತೋರಿಸಿ ಕೈ ಕೊಯ್ದುಕೊಳ್ತೀನಿ ಎಂದು ಹೆದರಿಸಿದ್ದಾರೆ.
ದೊಡ್ಮನೆಯಲ್ಲಿ ತಮ್ಮ ಚಾಣಾಕ್ಷತನ, ಅಡುಗೆ, ಟಾಸ್ಕ್ ಆಡುವ ವೈಖರಿಯಿಂದ ಅಪಾರ ಅಭಿಮಾನಿಗಳ ಮನಗೆದ್ದಿದ್ದಾರೆ. ಹಾಗೆಯೇ ತಮ್ಮ ನೇರ ಮಾತುಗಳಿಂದ ಕೆಲ ಸ್ಪರ್ಧಿಗಳ ಮುಂದೆ ನಿಷ್ಠುರ ಕೂಡ ಆಗಿದ್ದಾರೆ. ಇನ್ನೂ ಬಿಗ್ ಬಾಸ್ ಮನೆಯಲ್ಲಿ ಆರ್ಯವರ್ಧನ್ ಗುರೂಜಿ ಮೇಲೆ ಪ್ರ್ಯಾಂಕ್‌ಗಳು ಆಗುತ್ತಲೇ ಇರುತ್ತದೆ. ಈ ಪರಿಣಾಮ ಸಿಟ್ಟಿನಲ್ಲಿದ್ದ ವೇಳೆಯಲ್ಲಿ ಕಾವ್ಯಶ್ರೀ ಗೌಡ (Kavyashree Gowda) ಕೂಡ ಗುರೂಜಿ ಅನ್ನು ಕೆಣಕಿದ್ದಾರೆ. ಈ ವೇಳೆ ಗುರೂಜಿ ಕಾವ್ಯಗೆ ಕೈ ಕೊಯ್ದುಕೊಳ್ತೀನಿ ಎಂದು ಬೆದರಿಸಿದ್ದಾರೆ.
ಮನೆಯಲ್ಲಿ ಕ್ಯಾಪ್ಟೆನ್ಸಿ ವಿಚಾರವಾಗಿ ಗುರೂಜಿ ಮೇಲೆ ಪ್ರ್ಯಾಂಕ್ ನಡೆದ ಬಳಿಕ ಹತಾಶರಾಗಿದ್ದರು. ಈ ವೇಳೆ ನಾಟಕೀಯವಾಗಿ ಮಾತನಾಡುತ್ತಾರೆ, ಚುಚ್ಚಿ ಮಾತನಾಡಿದ್ದು, ಬೇಸರವಾಯಿತು ಎಂದು ಪದೇ ಪದೇ ಕಾವ್ಯಶ್ರೀ ವಿರುದ್ಧ ಗುರೂಜಿ ಮಾತನಾಡಿದ್ದಾರೆ. ಈ ಪರಿಣಾಮ ನಾಟಕೀಯವಾಗಿ ಎಲ್ಲಿ ಮಾತನಾಡಿದೆ ಎಂದು ಕಾವ್ಯ ಮರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಆರ್ಯವರ್ಧನ್ ಗುರೂಜಿ ಕಾವ್ಯ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಈ ವಿಷ್ಯ ಬಿಡು ಇಲ್ಲಾಂದ್ರೆ ನಾನು ಕೈ ಕೊಯ್ದುಕೊಳ್ಳುತ್ತೇನೆ ಎಂದು ಕಾವ್ಯ ವಿರುದ್ಧ ಗುರೂಜಿ ಫುಲ್ ರಾಂಗ್ ಆಗಿದ್ದಾರೆ. ಇದನ್ನೂ ಓದಿ:ಸಿಮ್ ಖರೀದಿಸಲು ಬಂದ ನಟಿಯನ್ನು ಕೂಡಿ ಹಾಕಿದ ಕಚೇರಿ ಸಿಬ್ಬಂದಿ
ಇನ್ನೂ ವಿನೋದ್ ಗೊಬ್ಬರಗಾಲ ಕ್ಯಾಪ್ಟನ್ಸಿ ನಂತರ 3ನೇ ವಾರದ ಕ್ಯಾಪ್ಟನ್ ಆಗಿ ಆರ್ಯವರ್ಧನ್ ಆಯ್ಕೆ ಆಗಿದ್ದಾರೆ. ಟಾಸ್ಕ್‌ನಲ್ಲಿ ದರ್ಶ್, ದಿವ್ಯಾ, ಅಮೂಲ್ಯ ಅವರನ್ನ ಸೋಲಿಸಿ ಕ್ಯಾಪ್ಟನ್ ಆಗಿದ್ದಾರೆ. ವಾರದ ಕಳಪೆ ಹಣೆಪಟ್ಟಿ ಪಡೆದು ರಾಕೇಶ್ ಅಡಿಗ ಜೈಲು ಸೇರಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬಿಗ್ ಬಾಸ್ ಸೀಸನ್ 9ರ(Bigg Boss Kannada 9) ಆಟ ದಿನದಿಂದ ದಿನಕ್ಕೆ ಸಾಕಷ್ಟು ಟ್ವಿಸ್ಟ್‌ಗಳನ್ನ ಪಡೆದು ಮುನ್ನುಗ್ಗುತ್ತಿದೆ. ಇನ್ನೂ ಬಿಗ್ ಬಾಸ್ ಹೆಸರಿನಲ್ಲಿ ಪ್ರಾಂಕ್ ಮಾಡಿದ ಮನೆಮಂದಿಗೆ ಬಿಗ್ ಬಾಸ್ ಕೂಡ ಪ್ರಾಂಕ್ ಮಾಡಿ, ಎಚ್ಚರಿಕೆ ಕೊಟ್ಟಿದ್ದಾರೆ. ಸದ್ಯ 13ನೇ ದಿನದಿಂದ ಕ್ಯಾಪ್ಟನ್ ಆಗಿ ಆರ್ಯವರ್ಧನ್ ಗುರೂಜಿ (Aryavardhan Guruji) ಹೊರಹೊಮ್ಮಿದ್ದಾರೆ. ಮಗಳಿಂದ ಲವ್ಲಿ ವಿಶ್ ಕೂಡ ಗುರೂಜಿ ಪಡೆದಿದ್ದಾರೆ.
ಬಿಗ್ ಬಾಸ್ (Bigg Boss) ತಂಡದ ಕ್ಯಾಪ್ಟನ್ ಅನುಪಮಾಗೆ ಕ್ಯಾಪ್ಟನ್ಸಿ ಆಯ್ಕೆಗೆ ಸೂಚನೆ ನೀಡಿದ್ದರು. ಅದರಂತೆ ಅಮೂಲ್ಯ, ದಿವ್ಯಾ, ಆರ್ಯವರ್ಧನ್ ಗುರೂಜಿ, ದರ್ಶ್ ಆಯ್ಕೆಯಾದರು. ತೆಂಗಿನಕಾಯಿ ಇರುವ ಮರದ ಪಟ್ಟಿಯನ್ನು ಅಡ್ಡಲಾಗಿ ಸಿಕ್ಕಿಸಿ, ಸಂಖ್ಯೆಗಳನ್ನು ಮೂಡುವಂತೆ ಮಾಡಬೇಕು. ನಾಲ್ವರು ಸದಸ್ಯರಿಗೂ ಪ್ರತ್ಯೇಕ ಫ್ರೇಮ್ ಇಡಲಾಗಿತ್ತು. ಈ ಟಾಸ್ಕ್ ನಲ್ಲಿ ಗುರೂಜಿ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ. ಇದನ್ನೂ ಓದಿ:ಪವನ್ ಒಡೆಯರ್ ಬಾಲಿವುಡ್ ಚಿತ್ರಕ್ಕೆ ಕ್ರಿಕೆಟಿಗ ಹರ್ಭಜನ್ ಸಿಂಗ್ ಪತ್ನಿ ನಾಯಕಿ
ತಮ್ಮ ನೇರ ಮಾತಿನ ಮೂಲಕ ಮನೆಯವರ ಕೆಂಗಣ್ಣಿಗೆ ಆಗಾಗ ಗುರಿಯಾಗುವ ಗುರೂಜಿ, ಅಡುಗೆ, ಟಾಸ್ಕ್, ಎಲ್ಲದರಲ್ಲೂ ಮುಂದು. ಇದೀಗ 3ನೇ ವಾರದ ಕ್ಯಾಪ್ಟನ್ ಆಗಿ ಗುರೂಜಿ ಹೊರಹೊಮ್ಮಿದ್ದಾರೆ. ಕ್ಯಾಪ್ಟನ್ ಆಗಿರುವ ಗುರೂಜಿಗೆ ಅವರ ಮುದ್ದು ಮಗಳು ಕೂಡ ಶುಭಹಾರೈಸಿದ್ದಾರೆ. ವಾಯ್ಸ್ ನೋಟ್ ಮೂಲಕ ಅಪ್ಪನಿಗೆ ಮಗಳು ವಿಶ್ ಮಾಡಿದ್ದಾರೆ. ಈ ಮೂಲಕ ಗುರೂಜಿಗೆ ಬಿಗ್ ಬಾಸ್ ಗಿಫ್ಟ್ ಕೊಟ್ಟಿದ್ದಾರೆ. ಇದನ್ನೂ ಓದಿ:ಪವನ್ ಒಡೆಯರ್ ಬಾಲಿವುಡ್ ಚಿತ್ರಕ್ಕೆ ಕ್ರಿಕೆಟಿಗ ಹರ್ಭಜನ್ ಸಿಂಗ್ ಪತ್ನಿ ನಾಯಕಿ
ಇನ್ನೂ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಆಡುವಾಗ ಗುರೂಜಿಗೆ ರಾಕೇಶ್ ಮತ್ತು ರೂಪೇಶ್ ಶೆಟ್ಟಿ ಸಹಾಯ ಮಾಡಿದ್ದಾರೆಂದು ಅನುಪಮಾ ಮತ್ತು ನೇಹಾ ಗೌಡ ಕಿಡಿಕಾರಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬಿಗ್ ಬಾಸ್ (Bigg Boss Season 9) ಮನೆಯು ಕೆಲವರಿಗೆ ಪ್ರೇಮಿಗಳ ತಾಣವಾಗಿದ್ದರೆ, ಇನ್ನೂ ಕೆಲವರು ಬಾಂಧವ್ಯದ ಕೊಂಡಿಯಾಗಿ ಕಾಣುತ್ತಿದೆ. ಹೀಗಾಗಿಯೇ ಅಲ್ಲಿ ಪ್ರೇಮಿಗಳು ಹುಟ್ಟಿಕೊಳ್ಳುತ್ತಿದ್ದಾರೆ, ಅಪ್ಪ, ತಂಗಿ, ಅಣ್ಣ ಹೀಗೆ ಸಂಬಂಧಗಳು ಬೆಸೆಯುತ್ತಿವೆ. ಬಿಗ್ ಬಾಸ್ ಮನೆಯಲ್ಲಿ ಅದೆಷ್ಟೋ ಹುಡುಗಿಯರು ಅರುಣ್ ಅಣ್ಣನಾಗಿದ್ದರೆ, ಆರ್ಯವರ್ಧನ್ ಗುರೂಜಿ ತಂದೆಯ ರೀತಿಯಂತೆ ಕಾಣುತ್ತಿದ್ದಾರೆ. ಹಾಗಾಗಿಯೇ ದಿವ್ಯ ಉರುಡುಗ ಸೇರಿದಂತೆ ಹಲವರು ಗುರೂಜಿಗೆ ಅಪ್ಪಾಜಿ ಅಂತಾನೇ ಕರೆಯುತ್ತಿದ್ದಾರೆ.
ದಿವ್ಯಾ ಉರುಡುಗ ಅವರು ಗುರೂಜಿಯನ್ನು (Aryavardhan Guruji) ಅಪ್ಪಾಜಿ ಎಂದು ಕರೆದರೆ, ಗುರೂಜಿ ಕೂಡ ದಿವ್ಯಾರನ್ನು ಮಗಳೆ (Daughter) ಎಂದೇ ಕರೆಯುತ್ತಾರೆ. ಸದ್ಯ ಈ ಬಾಂಧವ್ಯದಲ್ಲಿ ಕೊಂಚ ಬಿರುಕು ಮೂಡಿದೆ. ಹಾಗಾಗಿ ನಿನ್ನನ್ನು ನಾನು ಮಗಳೆ ಎಂದು ಕರೆಯಲಾರೆ ಅಂತ ಗುರೂಜಿ ಹೇಳಿದ್ದರೆ, ನಾನೂ ನಿಮ್ಮನ್ನು ಅಪ್ಪ ಅಂತ ಕರೆಯಲಾರೆ ಎಂದು ದಿವ್ಯಾ (Divya Uruduga) ಕೂಡ ಪ್ರತ್ಯುತ್ತರ ನೀಡಿದ್ದಾರೆ. ಟಾಸ್ಕ್ ವಿಚಾರವಾಗಿ ನಡೆದ ಗಲಾಟೆಯಲ್ಲಿ ಈ ಮಾತು ಕೇಳಿ ಬಂದಿದೆ. ಇದನ್ನೂ ಓದಿ :ಕನ್ನಡದ ನಟಿ ದಿವ್ಯಾ ಶ್ರೀಧರ್ ಲವ್ ಜಿಹಾದ್ ಆರೋಪಕ್ಕೆ ಪತಿ ಅಮ್ಜಾದ್ ಖಾನ್ ಪ್ರತಿಕ್ರಿಯೆ
ಮೊನ್ನೆ ನಡೆದ ತುಲಾಭಾರ ಟಾಸ್ಕ್ ನಲ್ಲಿ ಆರ್ಯವರ್ಧನ್ ಗುರೂಜಿಗೆ ‘ನಿಮ್ಮಲ್ಲಿ ರಾಕ್ಷಸಿ ಗುಣವಿದೆ’ ಎಂದು ಜರಿದಿದ್ದರು. ಅದರಂತೆ ಕುಪಿತಗೊಂಡ ಗುರೂಜಿ, ತಮ್ಮ ನೋವನ್ನು ತೋಡಿಕೊಂಡಿದ್ದರಂತೆ. ಆಗ ‘ಮಗಳೆ ಅನ್ನುವುದನ್ನು ನಿಮ್ಮಿಂದ ಕಿತ್ತಾಕಿದ್ದೇನೆ, ಇನ್ಮುಂದೆ ನನ್ನನ್ನು ಹಾಗೆ ಕರೆಯಬೇಡಿ’ ಎಂದು ಹೇಳಿದ್ದರು ದಿವ್ಯಾ. ಸಂಬರ್ಗಿಯಿಂದ (Prashant Sambargi) ತಂಗಿ ಪದ ಕಿತ್ತು ಹಾಕಿದೆ. ನನ್ನಿಂದ ಮಗಳು ಪದ ಕಿತ್ತ್ ಹಾಕಿದೆ. ಏನೆಲ್ಲ ಕಿತ್ತಾಕ್ತಿದ್ಯಾ ಎಂದು ಗುರೂಜಿ ತಮಾಷೆ ಮಾಡಿದ್ದರು.
ದಿವ್ಯಾ ಕೋಪ ಮಾಡಿಕೊಂಡು ಮಗಳು ಅಂತ ಕರೆಯಬೇಡಿ ಎಂದು ಗುರೂಜಿಗೆ ಹೇಳಿದ್ದರೂ, ಗುರೂಜಿ ಮಾತ್ರ ಈಗಲೂ ಮಗಳೇ ಅಂತಾನೇ ಕರೆಯುತ್ತಿದ್ದಾರೆ. ದಿವ್ಯಾಗೆ ಮಗಳು ಅಂತ ಕರೆದರೆ, ರೂಪೇಶ್ ಶೆಟ್ಟಿಗೆ ಮಗನ ಸ್ಥಾನ ಕೊಟ್ಟಿದ್ದಾರೆ. ವಯಸ್ಸಿನ ಅಂತವರನ್ನೂ ಲೆಕ್ಕಿಸದೇ ಬಿಗ್ ಬಾಸ್ ಮನೆಯಲ್ಲಿ ಎಲ್ಲರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದಾರೆ ಆರ್ಯವರ್ಧನ್ ಗುರೂಜಿ.
Live Tv
[brid partner=56869869 player=32851 video=960834 autoplay=true]
ಬಿಗ್ ಬಾಸ್ (Bigg Boss Season 9) ಮನೆಯಲ್ಲಿ ಯಾವುದೂ ಅಂದುಕೊಂಡಂತೆ ನಡೆಯುತ್ತಿಲ್ಲ. ಮನೆಯಲ್ಲಿ ಏನು ನಡೆಯುತ್ತಿದೆ ಎಂದು ಅರಿವಿಗೆ ಬಾರದೇ ದೊಡ್ಮನೆ ಸದಸ್ಯರು ಗಲಿಬಿಲಿಗೊಂಡಿದ್ದಾರೆ. ಒಬ್ಬೊಬ್ಬರದ್ದು ಒಂದೊಂದು ನಡವಳಿಕೆ. ಮೊದಲ ವಾರ ಸೈಲೆಂಟ್ ಆಗಿದ್ದವರು, ಎರಡನೇ ವಾರಕ್ಕೆ ಅಬ್ಬರಿಸುತ್ತಿದ್ದಾರೆ. ಕಿಚ್ಚನ ಪಂಚಾಯತಿಯಲ್ಲಿ ಕೆಲವರ ಬಣ್ಣ ಬಯಲಾಗುತ್ತಿದ್ದಂತೆಯೇ ಅವರನ್ನು ಇತರರು ನೋಡುವ ರೀತಿಯೇ ಬದಲಾಗಿದೆ.
ಈ ನಡುವೆ ಎರಡನೇ ವಾರದ ನಾಮಿನೇಟ್ ಪ್ರಕ್ರಿಯೆ ಕೂಡ ನಡೆದಿದ್ದು, ಇಬ್ಬರು ಸ್ಪರ್ಧಿಗಳು ನೇರವಾಗಿ ನಾಮಿನೇಟ್ ಆಗಿದ್ದಾರೆ. ಮೊದಲನೇ ವಾರದಲ್ಲೇ ಮನೆಯಿಂದ ಹೊರ ನಡೆದ ಐಶ್ವರ್ಯ ಪಿಸ್ಸೆಗೆ (Aishwarya Pisse) ಬಿಗ್ ಬಾಸ್ ವಿಶೇಷ ಅಧಿಕಾರವನ್ನು ನೀಡಿದ್ದರು. ಮನೆಯಿಂದ ಆಚೆ ಹೋಗುವಾಗ ಒಬ್ಬರನ್ನು ನಾಮಿನೇಟ್ ಮಾಡಿ ಎಂದು ತಿಳಿಸಿದ್ದರು. ಹಾಗಾಗಿ ಆರ್ಯವರ್ಧನ್ ಗುರೂಜಿಯನ್ನು (Aryavardhan Guruji) ಐಶ್ವರ್ಯ ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಇದನ್ನೂ ಓದಿ:ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಮೂರು ದಿನದ ಗಳಿಕೆ 230 ಕೋಟಿಗೂ ಅಧಿಕ
ಇದೇ ರೀತಿಯಾಗಿಯೇ ಮತ್ತೊಂದು ವಿಶೇಷ ಅಧಿಕಾರ ಸಿಕ್ಕಿದ್ದು ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿರುವ ವಿನೋದ್ ಗೊಬ್ರಗಾಲಗೆ. ವಿನೋದ್ (Vinod Gobragala) ಕೂಡ ಒಬ್ಬರನ್ನು ನೇರವಾಗಿ ನಾಮಿನೇಟ್ ಮಾಡುವ ಅಧಿಕಾರವನ್ನು ಹೊಂದಿದ್ದರಿಂದ ಅವರು ರೂಪೇಶ್ ರಾಜಣ್ಣ ಅವರ ಹೆಸರು ಸೂಚಿಸಿದ್ದರು. ಹೀಗಾಗಿ ಗುರೂಜಿ ಜೊತೆಗೆ ನೇರವಾಗಿ ರೂಪೇಶ್ ರಾಜಣ್ಣ (Rupesh Rajanna) ಕೂಡ ನಾಮಿನೇಟ್ ಆಗಿದ್ದಾರೆ.
ಗುರೂಜಿ ಮತ್ತು ರೂಪೇಶ್ ಇಬ್ಬರು ಬಿಗ್ ಬಾಸ್ ಮನೆಯಲ್ಲಿ ನೇರವಾಗಿ ನಾಮಿನೇಟ್ (Nominate)ಆಗಿದ್ದಾರೆ. ಇವರ ಜೊತೆ ಇತರರ ಏಳು ಜನರು ನಾಮಿನೇಟ್ ಯಾದಿಯಲ್ಲಿ ಇದ್ದಾರೆ. ಒಟ್ಟು ಒಂಭತ್ತು ಜನರ ಮೇಲೆ ಈ ಬಾರಿ ನಾಮಿನೇಟ್ ತೂಗುಕತ್ತಿ ತೂಗುತ್ತಿದೆ. ಈ ಒಂಭತ್ತು ಜನರಲ್ಲಿ ಯಾರು ಎರಡನೇ ವಾರಕ್ಕೆ ಮನೆಯಿಂದ ಆಚೆ ಬರಲಿದ್ದಾರೆ ಎನ್ನುವುದು ಕುತೂಹಲ.
Live Tv
[brid partner=56869869 player=32851 video=960834 autoplay=true]
ದೊಡ್ಮನೆಯಲ್ಲಿ 18 ಜನ ಭಿನ್ನ ವ್ಯಕ್ತಿಗಳಿದ್ದಾರೆ. ಮನೆಯ ರಂಗು ಮತ್ತಷ್ಟು ಜೋರಾಗಿದೆ. ಇನ್ನೂ ಈ ವೇಳೆ ಗುರೂಜಿ ಪ್ರಶಾಂತ್ ಸಂಬರ್ಗಿ (Prashant Sambargi) ಅವರನ್ನು ಸಂಪಂಗಿ ಅಂದಿದ್ದಾರೆ. ಈ ಮಾತು ಜಗಳಕ್ಕೆ ಎಡೆ ಮಾಡಿ ಕೊಟ್ಟಿದೆ. ರೀ ಅದು ಸಂಬರ್ಗಿ ಊರಿನ ಹೆಸರು ಎಂದು ಪ್ರಶಾಂತ್ ಕ್ಲ್ಯಾರಿಟಿ ಕೊಟ್ಟಿದ್ದಾರೆ. ಬಳಿಕ ನೀವು ಆರ್ಯವರ್ಧನ್ ಅಂತಾ ಯಾಕೆ ಇಟ್ಟುಕೊಂಡ್ರಿ ನಾನು ಹೇಳಲಾ ನಿಮ್ಮ ನಿಜವಾದ ಹೆಸರು ಎಂದು ಪ್ರಶಾಂತ್, ಗುರೂಜಿಗೆ ಟಾಂಗ್ ಕೊಟ್ಟಿದ್ದಾರೆ.
ಆರ್ಯವರ್ಧನ್ (Aryavardhan Guruji) ಉರುಫ್ ಏನು ಎಂದು ಪ್ರಶಾಂತ್ ಮತ್ತೆ ಕೇಳಿದ್ದಾರೆ. ಈ ಮಾತಿನ ಚಕಮಕಿ ಉರ್ಫಿಯಿಂದ ಉರಿಸೋದರವೆಗೆ ಚರ್ಚೆ ಆಗಿದೆ. ಈ ಜಗಳದ ನಡುವೆ ಇತ್ತ ಅರುಣ್ ಸಾಗರ್ (Arun Sagar) ಉರ್ಫಿಗೆ ಉರವಿದ್ದಾರೆ ಎಂದು ನಗೆಚಟಾಕಿ ಹಾರಿಸಿದ್ದಾರೆ. ಇವರು ಇನ್ಮೇಲೆ ಆರ್ಯವರ್ಧನ್ ಉರಸು ಎಂದು ಅರಣ್ ಸಾಗರ್ ಮನೆ ಮಂದಿ ಮುಂದೆ ಹೇಳಿದ್ದಾರೆ. ಅಷ್ಟಕ್ಕೇ ನಿಲ್ಲದ ಈ ಚರ್ಚೆ ಕಡೆಗೆ ಗುರೂಜಿ ಸಂಬರ್ಗಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ನನಗೆ ಏನೇ ಹೇಳಬೇಕಿದ್ದರೂ ನೇರವಾಗಿ ಹೇಳಿ ಎಂದು ನಾನು ಸೈಲೆಂಟ್ (Silent) ಅಲ್ಲ ವೈಲೆಂಟ್.. ಫೈಯರ್ ನಾನು ಎಂದು ಸಂಬರ್ಗಿಗೆ ನೇರವಾಗಿ ಟಾಂಗ್ ಕೊಟ್ಟಿದ್ದಾರೆ. ಉರಿಸಲು ಬಂದ ಪ್ರಶಾಂತ್ ಗೆ ಪಂಚಿಂಗ್ ಡೈಲಾಗ್ ಗಳ ಮೂಲಕ ಗುರೂಜಿ ಬೆವರಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬಿಗ್ ಬಾಸ್ ಓಟಿಟಿ ಮುಗಿದ ಒಂದು ವಾರದ ಗ್ಯಾಪ್ ನಂತರ ಬಿಗ್ ಬಾಸ್ ಸೀಸನ್ 9 ಶುರುವಾಗುತ್ತಿದೆ. ಸೆ.24 ಕ್ಕೆ ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳು ಕಾಲಿಡಲಿದ್ದಾರೆ. ಹೀಗಾಗಿ ಬಿಗ್ ಬಾಸ್ ಮನೆಗೆ ಆಯ್ಕೆಯಾದವರು ಯಾರು ಎನ್ನುವ ಕುತೂಹಲ ಹೆಚ್ಚಾಗಿದೆ. ಅದರಲ್ಲೂ ಹಳೆ ಮತ್ತು ಹೊಸ ಸ್ಪರ್ಧಿಗಳು ಈ ಬಾರಿ ಮನೆಯಲ್ಲಿ ಇರಲಿದ್ದಾರೆ ಎಂದು ಹೇಳಲಾಗುತ್ತದೆ. ಹಾಗೊಂದು ವೇಳೆ ಏನಾದರೂ ಮಾಜಿಗಳಿಗೂ ಅವಕಾಶ ಸಿಕ್ಕರೆ ಬ್ರಹ್ಮಾಂಡ ಗುರೂಜಿಯನ್ನು ಒಳಗೆ ಕಳುಹಿಸಿ ಎಂದು ಹೇಳುತ್ತಿದ್ದಾರೆ ನೋಡುಗರು.
ಈಗಾಗಲೇ ಜಿಂಗಲಕಾ ಲಕಾ ಲಕಾ ಅನ್ನುತ್ತಾ ಬಿಗ್ ಬಾಸ್ ಓಟಿಟಿಗೆ ಕಾಲಿಟ್ಟಿದ್ದ ಆರ್ಯವರ್ಧನ್ ಗುರೂಜಿ ಕೂಡ ಬಿಗ್ ಬಾಸ್ 9 ನಲ್ಲಿ ಭಾಗಿ ಆಗುತ್ತಿರುವುದರಿಂದ ಗುರೂಜಿಗಳ ಕಾಂಬಿನೇಷನ್ ಸಖತ್ತಾಗಿ ಇರಲಿದೆ ಎನ್ನುವುದು ಪ್ರೇಕ್ಷಕರು ಊಹೆ. ಅಲ್ಲದೇ, ಇಬ್ಬರೂ ಉತ್ತರ ದಕ್ಷಿಣ ಧೃವಗಳು ಆಗಿರುವುದರಿಂದ ಒಳ್ಳೆಯ ಮನರಂಜನೆಯೇ ಪ್ರೇಕ್ಷಕರಿಗೆ ಸಿಗಲಿದೆ ಎನ್ನುವ ಅಂದಾಜು ನೋಡುಗರದ್ದು. ಹಾಗಾಗಿ ಮತ್ತೆ ಬ್ರಹ್ಮಾಂಡ ಗುರೂಜಿಯನ್ನು ಮನೆ ಒಳಗೆ ಕಳುಹಿಸಿ ಎಂದು ನೆಟ್ಟಿಗರು ವಾಹಿನಿಯನ್ನು ಕೇಳುತ್ತಿದ್ದಾರೆ. ಇದನ್ನೂ ಓದಿ:ಟಿವಿ ಬಿಗ್ ಬಾಸ್ ಸೀಸನ್ 9ಕ್ಕೆ ಭರ್ಜರಿ ತಯಾರಿ: ಹೇಗಿದೆ ಗೊತ್ತಾ ದೊಡ್ಮನೆ?
ಈ ನಡುವೆ ಸೀಸನ್ 9ಗೆ ಯಾರೆಲ್ಲ ದೊಡ್ಮನೆ ಪ್ರವೇಶ ಮಾಡಲಿದ್ದಾರೆ ಎನ್ನುವ ಪಟ್ಟಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದರಲ್ಲಿ ಯಾರು ಹೋಗುತ್ತಾರೋ, ಯಾರು ಗಾಸಿಪ್ ಕಾಲಂನಲ್ಲೇ ಉಳಿಯುತ್ತಾರೋ ಕಾದು ನೋಡಬೇಕು. ಆದರೆ, ಈ ಬಾರಿ ಹೊಸ ಬಗೆಯ ಸ್ಪರ್ಧಿಗಳನ್ನೇ ಆಯ್ಕೆ ಮಾಡಿದ್ದಾರೆ ಎನ್ನುವ ಮಾಹಿತಿಯೂ ಇದೆ. ಜೊತೆಗೆ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ ಮತ್ತು ಸಾನ್ಯ ಐಯರ್ ಆಯ್ಕೆ ಆಗಿರುವುದರಿಂದ ಅವರು ಹೇಗೆ ಪೈಪೋಟಿ ನೀಡಲಿದ್ದಾರೆ ಎನ್ನುವ ಕುತೂಹಲವೂ ಇದೆ.
ಈಗಾಗಲೇ ದೊಡ್ಮನೆ ಒಳಗೆ ಹೋಗುವವರು ಅಂತಿಮ ಪಟ್ಟಿ ಸಿದ್ಧವಾಗಿದೆ. ನಾಳೆಯಿಂದಲೇ ಅಥವಾ ಶನಿವಾರ ಬೆಳಗ್ಗೆಯಿಂದ ಗ್ರ್ಯಾಂಡ್ ಓಪನಿಂಗ್ ಎಪಿಸೋಡ್ ಗಳು ಚಿತ್ರೀಕರಣವಾಗಲಿವೆ. ಶನಿವಾರ ಸಂಜೆ ಹೊತ್ತಿಗೆ ಬಿಗ್ ಬಾಸ್ ಮನೆಯೊಳಗೆ ಯಾರೆಲ್ಲ ಹೋಗಬಹುದು ಎನ್ನುವ ಅರ್ಧ ಮಾಹಿತಿ, ರಾತ್ರಿ ಒಳಗೆ ಪೂರ್ಣ ಮಾಹಿತಿ ಹೊರ ಬರಲಿದೆ.
Live Tv
[brid partner=56869869 player=32851 video=960834 autoplay=true]
ಬಿಗ್ ಬಾಸ್ ಓಟಿಟಿಯ (Bigg Boss OTT) ಆವೃತ್ತಿಯಲ್ಲಿ ಆಯ್ಕೆಯಾಗಿರುವ ಸಾನ್ಯ ಅಯ್ಯರ್, ಆರ್ಯವರ್ಧನ್ ಗುರೂಜಿ (Aryavardhan Guruji), ರಾಕೇಶ್ ಅಡಿಗ ಮತ್ತು ರೂಪೇಶ್ ಶೆಟ್ಟಿ (Rupesh Shetty) ಇನ್ನೂ ತಮ್ಮ ತಮ್ಮ ಮನೆ ತಲುಪಿಲ್ಲ. ಸದ್ಯಕ್ಕೆ ಅವರು ತಲುವುದೂ ಇಲ್ಲ. ಅಂದು ಓಟಿಟಿ ಫಿನಾಲೆ ಮುಗಿದ ತಕ್ಷಣವೇ ಈ ನಾಲ್ವರನ್ನೂ ನಿಗೂಢ ಜಾಗಕ್ಕೆ ಕರೆದುಕೊಂಡು ಹೋಗಲಾಗಿದ್ದು, ಅಲ್ಲಿಯೇ ಅವರು ದಿನಗಳನ್ನು ಕಳೆಯುತ್ತಿದ್ದಾರೆ. ಸೆ.24ರವರೆಗೂ ಅವರು ಈಗಿರುವ ಸ್ಥಳದಲ್ಲೇ ಇರಬೇಕಾಗಿದೆ.
ಈ ಮೊದಲು ಬೆಂಗಳೂರಿನ (Bangalore) ಪ್ರತಿಷ್ಠಿತ ಹೋಟೆಲ್ ವೊಂದರಲ್ಲಿ ಆ ನಾಲ್ವರನ್ನೂ ಇಡಲಾಗಿದೆ ಎಂದು ಹೇಳಲಾಗಿತ್ತು. ಆದರೆ, ಅಸಲಿಯಾಗಿ ಅವರು ಇರುವುದು ಬೆಂಗಳೂರು ಕನಕಪುರ (Kanakpur) ರಸ್ತೆಯಲ್ಲಿರುವ ರೆಸಾರ್ಟ್ ವೊಂದರಲ್ಲಿ ಎಂದು ಗೊತ್ತಾಗಿದೆ. ಯಾರ ಸಂಪರ್ಕಕ್ಕೂ ಸಿಗದೇ ಇರುವ ರೀತಿಯಲ್ಲಿ ಅವರನ್ನು ರೆಸಾರ್ಟ್ನಲ್ಲಿ ಇಡಲಾಗಿದ್ದು, ಬಿಗ್ ಬಾಸ್ ಸೀಸನ್ 9 ವೇದಿಕೆಯ ಮೇಲೆಯೇ ಈ ನಾಲ್ವರು ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ:ನೆಗೆಟಿವ್ ಕಾಮೆಂಟ್ ಗೆ ಹೆದರಲ್ಲ, ತುಂಬಾ ಜನ ನನ್ನನ್ನು ಪ್ರೀತಿಸ್ತಾರೆ ಎಂದ ಸೋನು ಶ್ರೀನಿವಾಸ್ ಗೌಡ
ಬೆಂಗಳೂರು ಕನಪುರ ರಸ್ತೆಯಲ್ಲಿನ ಪೈಪ್ ಲೈನ್ ರೋಡಿನಲ್ಲಿರುವ ಐಷಾರಾಮಿ ರೆಸಾರ್ಟ್ ನಲ್ಲಿ (Resort) ನಾಲ್ವರು ಇದ್ದರು, ಅವರನ್ನು ಯಾರಿಂದಲೂ ಸಂಪರ್ಕಿಸಲು ಸಾಧ್ಯವಾಗದಂತೆ ನೋಡಿಕೊಳ್ಳಲಾಗಿದೆ. ಅಲ್ಲದೇ, ರೆಸಾರ್ಟ್ಗೆ ಹೋಗುವ ದಾರಿಯಲ್ಲಿ ಕಾವೇರಿ ನೀರು ಯೋಜನೆ ಕಾಮಗಾರಿ ನಡೆಯುತ್ತಿರುವುದರಿಂದ ಸುಲಭಕ್ಕೆ ಹೋಗುವುದು ಅಸಾಧ್ಯ ಎನ್ನುವ ಕಾರಣಕ್ಕಾಗಿ ಆ ರೆಸಾರ್ಟ್ ಅನ್ನು ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ.
ಈ ಮಧ್ಯೆಯೂ ನಿನ್ನೆ ಸಾನ್ಯ ಐಯ್ಯರ್ ಅವರ ಹುಟ್ಟು ಹಬ್ಬವನ್ನು ಅದೇ ರೆಸಾರ್ಟ್ ನಲ್ಲಿ ಆಚರಿಸಲಾಗಿದೆ. ರೂಪೇಶ್, ರಾಕೇಶ್ ಅಡಿಗ (Rakesh Adiga) ಮತ್ತು ಆರ್ಯವರ್ಧನ್ ಗುರೂಜಿ ಕೇಕ್ ತರಿಸಿ, ಸಾನ್ಯ (Sanya Iyer) ಹುಟ್ಟುಹಬ್ಬವನ್ನು ಸಡಗರದಿಂದ ಆಚರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕುಟುಂಬಕ್ಕೆ ಅವಕಾಶವನ್ನು ನಿರಾಕರಿಸಲಾಗಿತ್ತು ಎಂದು ಹೇಳಲಾಗುತ್ತಿದೆ. ಮೊನ್ನೆಯಷ್ಟೇ ಈ ನಾಲ್ವರು ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲೂ ಪಾಲ್ಗೊಂಡಿದ್ದಾರೆ ಎನ್ನುವುದು ಮತ್ತೊಂದು ಮಾಹಿತಿ.
Live Tv
[brid partner=56869869 player=32851 video=960834 autoplay=true]
ರೂಪೇಶ್ ಮತ್ತು ಸಾನ್ಯಾ ನಡುವೆ ಮನೆಯಲ್ಲಿ ಆಗಾಗ ಸಣ್ಣ ಸಣ್ಣ ಮನಸ್ತಾಪಗಳು ಆಗುತ್ತಲೇ ಇರುತ್ತವೆ. ಒಂದು ಹಗ್ ಕೊಟ್ಟಿಲ್ಲದ ಕಾರಣಕ್ಕೋ, ಸಮಯ ಕೊಡದೆ ಇರುವ ಕಾರಣಕ್ಕೋ ಅದು ಜಗಳ ಅಲ್ಲ ಹೆಲ್ದಿ ಚರ್ಚೆಗಳು ನಡೆಯುತ್ತಲೆ ಇರುತ್ತವೆ. ಇವತ್ತು ಕೂಡ ಅಂತದ್ದೊಂದು ಸಣ್ಣ ಜಗಳವೇ ಆರಂಭವಾಗಿತ್ತು. ಆದರೆ ಮಧ್ಯೆ ಮಾಜಿ ಸ್ಪರ್ಧಿ ಉದಯ್ ಹೋಲಿಕೆ ರೂಪೇಶ್ ಮನಸ್ಸಿಗೆ ಅಗಾಧವಾದ ನೋವು ತಂದಿದೆ.
ಸಾನ್ಯಾ, ರೂಪೇಶ್ ಮತ್ತು ಸೋನು ಕೂತು ಬಿಟ್ಟರ್ ಬೆಟರ್ ಹೇಳುತ್ತಾ ಇದ್ದರು. ಆ ರೈಮ್ಸ್ ಅಷ್ಟು ಈಸಿಯಾಗಿಲ್ಲದ ಕಾರಣ ಕಷ್ಟಪಟ್ಟು ಸಾನ್ಯಾ ಹೇಳುತ್ತಾ ಇದ್ದಳು. ರೂಪೇಶ್ ಗಮನವಿಟ್ಟು ಕೇಳುತ್ತಾ ಇದ್ದ. ಆದ್ರೆ ರೂಪೇಶ್ ಪಕ್ಕದಲ್ಲಿ ಕೂತಿದ್ದ ಗುರೂಜಿ ಸಣ್ಣ ಚೇಷ್ಟೇ ಮಾಡಿದ್ದಾರೆ. ಅದು ಸಾನ್ಯಾಗೆ ಉರಿದು, ಅಲ್ಲಿಂದ ಮತ್ತೊಂದು ಸೋಫಾದ ಮೇಲೆ ಎದ್ದು ಹೋಗಿದ್ದಾಳೆ. ನಾವೂ ಎಷ್ಟು ಅಂತ ನೋಡುವುದು. ಬರೀ ನಿಮ್ಮದೇ ಕೇಳಬೇಕಾ. ಇದು ಫಸ್ಟ್ ಟೈಮ್ ಅಲ್ಲ ನೀವೂ ಹಿಂಗೆ ಮಾಡುತ್ತಾ ಇರುವುದು. ನಾನು ತಾಳ್ಮೆಯಿಂದ ಎಷ್ಟು ಸಲ ಅಂತ ಇರಲಿ. ಮಾತಾಡಿಕೊಳ್ಳಿ, ಏನಾದರೂ ಮಾಡಿಕೊಳ್ಳಿ. ತುಂಬಾ ಇರಿಟೇಟ್ ಮಾಡ್ತೀರಾ ಎಂದಿದ್ದಾಳೆ. ಇದನ್ನೂ ಓದಿ: ಮುಂದೆ ಕ್ಲೋಸ್ ಆಗಿರುವ ಜಯಶ್ರೀಯೇ ಸೋನು ಬಗ್ಗೆ ಕೆಟ್ಟ ಭವಿಷ್ಯ ನುಡಿದಳಾ?
ಆದ್ರೆ ರೂಪೇಶ್ ಬಾ ಇಲ್ಲಿಗೆ ಬಾ ಇಲ್ಲಿಗೆ ಅಂತ ಕರೆದರೂ ಸಾನ್ಯಾ ಬಂದಿಲ್ಲ. ನಿನ್ನೆ ರಾತ್ರಿಯೂ ಅದನ್ನೇ ಮಾಡಿದ್ದೀರಿ. ನಾನು ನೀವಿಬ್ಬರು ಇದ್ದ ಕಡೆ ನಾನು ಬರುವುದೇ ಇಲ್ಲ ಎಂದಿದ್ದಾಳೆ. ಆಗ ರೂಪೇಶ್, ಇದು ಮೊದಲ ಸಲ ತಾನೇ. ಬಾ ಇಲ್ಲಿಗೆ ಒಂದೇ ಒಂದು ಸಲ ಎಂದಿದ್ದಾನೆ. ಇದೆಲ್ಲಾ ಮುಗಿದರು ಸಾನ್ಯಾ ಮಾತ್ರ ಬರಲಿಲ್ಲ. ಕಡೆಗೆ ಎಲ್ಲಾ ಎದ್ದು ಹೋಗುವಾಗ ಗುರೂಜಿ, ನೀವಿಬ್ಬರು ಇಲ್ಲಿಯ ತನಕ ಮಾತನಾಡುತ್ತಲೇ ಇರಲಿಲ್ಲ ಹೊಸದಾಗಿ ಮಾತನಾಡುತ್ತಿದ್ದೀವಿ ಅನ್ನೋ ಥರ ಆಡುತ್ತಿರಲ್ಲ ಅಂದಿದ್ದಾರೆ. ಇದು ಸಾನ್ಯಾಗೆ ಕೋಪ ತರಿಸಿದೆ. ಇದನ್ನೂ ಓದಿ: ಸೋನು ಹಿಂದೆ ಸಾವಿರ ಹುಡುಗರು ಇದ್ದಾರಂತೆ – ಹಿಂದೆ ನಿಂತಿದ್ದ ಗುರೂಜಿಗೆ ನಾನೊಬ್ಬನೆ ಅಲ್ವಾ ಅನ್ನೋ ಅನುಮಾನ!
ಸಾನ್ಯಾ ಬಳಿ ಬಂದು ರೂಪೇಶ್ ವಿವರಣೆ ನೀಡಿದ್ದಾನೆ. ಅದಕ್ಕೂ ಒಪ್ಪದೆ ಮತ್ತೆ ವಾದ ಮಾಡುತ್ತಲೇ ಇದ್ದಾಗ, ರೂಪೇಶ್, ಆಯ್ತು ಬಿಡು ಸಾರಿ ಎಂದಿದ್ದಾನೆ. ಇಬ್ಬರ ನಡುವೆ ಕೋಳಿ ಜಗಳ ಮುಂದುವರೆದಿದೆ. ನನ್ನದು ತಪ್ಪಲ್ಲ ನಿನ್ನದು ತಪ್ಪಲ್ಲ ಎಂದೇ ವಾದ ಮಾಡಿದ್ದಾರೆ.
ಮತ್ತೆ ರಾತ್ರಿ 9.30ಕ್ಕೆ ಮತ್ತೆ ರೂಪೇಶ್ ಸಾನ್ಯಾ ಮಾತು ಶುರು ಮಾಡಿದ್ದಾರೆ. ನಾನು ಆಗಲೇ ಕರೆದಾಗಲೂ ನೀನು ಬರಲೇ ಇಲ್ಲ. ಒಂದು ಹಗ್ ಬೇಕು ಅಂತ ಕರೆದೆ ಅಷ್ಟೇ ಎಂದಾಗ ಜಶ್ವಂತ್, ನೀವು ಕೂತಿದ್ರಿ. ಆಗ ನೀನು ಏನೋ ಅಂದೆ ಅದು ನಂಗೆ ಕ್ಲಾರಿಟಿ ಸಿಕ್ಕಿಲ್ಲ. ಅದಕ್ಕೆ ಹೋದೆ ಎಂದಿದ್ದಾನೆ ರೂಪೇಶ್. ಏನೋ ಅಂದೇ ನಂಗೆ ಕನೆಕ್ಟ್ ಅಲ್ಲ ಅಂತ ನಾನು ಹೋದೆ ಅಂದಾಗ ಸಾನ್ಯಾ ಅದೇನು ಅಂತ ಬಿಡಿಸಿ ಹೇಳು ಅಂದಿದ್ದಾಳೆ. ಆಗ ರೂಪೇಶ್ ವಿಚಾರ ಹೇಳುವುದಕ್ಕೆ ತಡಕಾಡಿದ್ದಾನೆ. ನಾನು ಬಂದಾಗ ನಿಮ್ಮಿಬ್ಬರ ಮಾತು ಕಟ್ ಆಯ್ತು. ಅದಕ್ಕೆ ನಾನು ಎದ್ದು ಹೋದೆ ಎಂದಿದ್ದಾನೆ. ಅದಾದ ಬಳಿಕ ಸಾನ್ಯಾ ಒಂದಷ್ಟು ವಿಚಾರಗಳನ್ನು ತೆಗೆದು ಮತ್ತೆ ವಾದ ಮಾಡಿದ್ದಾಳೆ. ವಾದವೆಲ್ಲಾ ಮುಗಿದ ಮೇಲೆ ನಾನು ನಿನ್ನ ಕ್ಯಾರೆಕ್ಟರ್‌ಗೂ ಅವನ ಕ್ಯಾರೆಕ್ಟರ್ ಹೋಲಿಕೆ ಮಾಡುತ್ತಿಲ್ಲ ಎಂದಾಗ ರೂಪೇಶ್ ಹಂಗೆಲ್ಲಾ ಮಾತನಾಡಬೇಡ. ಎಲ್ಲರಿಗೂ ಗೊತ್ತಾಗಲ್ಲ. ಅಂತದ್ದು ನಾನು ಏನು ಮಾಡಿದೆ ಎಂದಿದ್ದಾಳೆ.
ಮತ್ತೆ ವಾದ ಪ್ರತಿವಾದ ಮುಂದುವರಿದು ಮಾತು ಮತ್ತೊಂದು ಸೋಫಾಗೆ ಶಿಫ್ಟ್ ಆಗಿದೆ. ಸಣ್ಣ ಸಣ್ಣ ಕೋಪ ಇರಬೇಕು ಓಕೆ. ಆದರೆ ಅದನ್ನೇ ಕಾಂಪ್ಲಿಕೇಟ್ ಮಾಡಿದರೆ ಮತ್ತೆ ಇನ್ನೇನೋ ಆಗುತ್ತೆ ಎಂದು ರೂಪಿ ಹೇಳಿದ್ದಾನೆ. ಅದಕ್ಕೆ ಸಾನ್ಯಾ, ಈಗ ಏನಾಗಿದ್ದು ನಿಂಗೆ ಅವನ ಹೆಸರು ಎತ್ತಿದ್ದ ಎಂದಾಗ. ಎತ್ತಬೇಡ. ಅದು ನಂಗೆ ಇಷ್ಟವೂ ಇಲ್ಲ. ನೀನು ಒಂದು ವಿಚಾರಕ್ಕೆ ತೆಗೆದಿರುತ್ತೀಯಾ. ಅದು ಎಷ್ಟು ದೊಡ್ಡ ಪದ ಗೊತ್ತಾ. ನೀನು ಉದಯ್ ಥರ ಕಾಣುತ್ತೀಯಾ ಅಂತ ಛೀ.. ಆ ಥರ ಎಲ್ಲಾ ಯಾಕೆ ಮಾತನಾಡುತ್ತೀಯಾ. ಹಂಗೇನಾದರೂ ಕಾಣಿಸ್ತಾ ನಿಂಗೆ ಎಂದಾಗ ಸಾನ್ಯಾ ಕ್ಷಮೆ ಕೇಳಿದ್ದಾಳೆ. ಒಂದಷ್ಟು ಮಾತು ಕತೆಯ ಮೂಲಕ ಆ ಟಾಪಿಕ್ ಮುಗಿದಿದೆ.
Live Tv
[brid partner=56869869 player=32851 video=960834 autoplay=true]
ಬಿಗ್ ಬಾಸ್ (Bigg Boss) Kannada OTT Aryavardhan Guruji And ಮನೆಯಲ್ಲಿ ಸೋನು (Sonu Srinivas Gowda) ಸಿಕ್ಕಾಪಟ್ಟೆ ಹಚ್ಚಿಕೊಂಡಿರುವುದು ಒನ್ ಅಂಡ್ ಓನ್ಲಿ ರಾಕೇಶ್‍ನನ್ನು (Rakesh Adiga) ಮಾತ್ರ. ಅದಕ್ಕೂ ಒಂದು ರೀಸನ್ ಇದೆ. ರಾಕೇಶ್ ಬೇರೆ ಯಾವ ಹುಡುಗಿಯರ ಜೊತೆ ಮಾತನಾಡುವುದಿಲ್ಲ, ಬೇರೆ ಯಾವ ಹುಡುಗಿಯರನ್ನು ಹಗ್ ಮಾಡುವುದಿಲ್ಲ ಎಂಬ ಕಾರಣಕ್ಕೆ ಸೋನು ಕೂಡ ಅದಕ್ಕೆ ಹೊರತಾಗಿಲ್ಲ. ತಾನು ಎಕ್ಸ್ಪೆಕ್ಟ್ ಮಾಡಿದ್ದಂತೆ ಅವಳು ನಡೆದುಕೊಂಡಿದ್ದಾಳೆ. ಅದು ಇವತ್ತು ರೂಪೇಶ್‍ಗೆ ಕೈ ತುತ್ತು ಕೊಟ್ಟಾಗಲೇ ಗೊತ್ತಾಯ್ತು. ಬಿಗ್ ಬಾಸ್ ಮನೆಯಲ್ಲಿ ನಾನು ಕೈ ತುತ್ತು ಕೊಡುತ್ತಿರುವ ಎರಡನೇ ಹುಡುಗ ನೀನು ಎಂದಿದ್ದಾಳೆ.
ಆದ್ರೆ ಸೋನು ಈ ರೀತಿ ಹಚ್ಚಿಕೊಳ್ಳುವುದು ರಾಕೇಶ್‍ಗೆ ಇಷ್ಟವಾಗುತ್ತಿಲ್ಲ. ಅವನು ಯೋಚನೆ ಮಾಡುವ ರೀತಿಯೂ ಸರಿಯಾಗಿದೆ. ಬಿಗ್ ಬಾಸ್ ಮನೆಯ ಜರ್ನಿ ಇರುವುದು ಇನ್ನು ಮೂರೇ ದಿನ. ನಾಲ್ಕನೇ ದಿನಕ್ಕೆ ಎಲ್ಲರೂ ಹೊರಗಿನ ಪ್ರಪಂಚದಲ್ಲಿರುತ್ತಾರೆ. ಅವಳ ಫೀಲಿಂಗ್ಸ್ ಜಾಸ್ತಿಯಾಗಿ ಅದರಿಂದ ಇಬ್ಬರಿಗೂ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಕೆಲವೊಮ್ಮೆ ನೇರ ಮಾತಿನಿಂದ ಉತ್ತರ ಕೊಡುತ್ತಾನೆ. ಈ ಮಾತುಗಳು ಸೋನುಗೆ ಫೀಲಿಂಗ್ ಲೆಸ್ ಹುಡುಗ ಎನಿಸಿದೆ. ಇದನ್ನೂ ಓದಿ: ಸೋನು-ರಾಕೇಶ್ ನಡುವೆ ಜಯಶ್ರೀ ಆಟ!
ಸೋನು ತನಗೆ ಬೇಜಾರಾದಾಗ ಕನ್ನಡಿ ಮುಂದೆ ನಿಂತು ಮಾತನಾಡಿಕೊಳ್ಳುವ ಅಭ್ಯಾಸ ಬೆಳೆಸಿಕೊಂಡಿದ್ದಾಳೆ. ಅವಳೇನಾದರೂ ತಪ್ಪು ಮಾಡಿದ್ದೀನಿ ಎನಿಸಿದರೆ ಆ ಕನ್ನಡಿಯಲ್ಲಿರುವ ಸೋನುಗೆ ಹೇಳಿ, ತಿದ್ದಿಕೊಳ್ಳುತ್ತಾಳೆ. ಈಗ ರಾಕಿ ವಿಚಾರದಲ್ಲಿಯೂ ಅದನ್ನೇ ಮಾಡುತ್ತಿದ್ದಾಳೆ. ಮಿರರ್ ಮುಂದೆ ಕುಳಿತು, ಬಿಡು ಸೋನು ನಿಂಗೆ ಯಾರ ಜೊತೆಗೂ ಫೀಲಿಂಗ್ಸ್ ಬರಲ್ಲ. ನೀನು ಆ ಥರದ ಹುಡುಗಿ. ನಿನಗೆ ಕಲ್ಲು ಮನಸ್ಸು, ನಂಗೆ ಗೊತ್ತು ನೀನು ಏನು ಅಂತ ಹಂಗೆ ಹಿಂಗೆ ಅಂತ ಹೇಳ್ತಿದ್ದೆ ತಾನೇ. ಈಗ ಹೆಂಗೆ ಫೀಲಿಂಗ್ಸ್ ಬಂತು ಹೇಳು. ನಿಂದು ತಪ್ಪು ಸೋನು. ಗುಡ್ ಗರ್ಲ್. ನಾಳೆಯಿಂದ ಕೇರ್ ಟೇಕ್ ಮಾಡಬಾರದು. ಅವರಾಗಿ ಅವರು ಮಾತನಾಡಿಸಿದರೆ ಮಾತ್ರ ಮಾತನಾಡಬೇಕು. ಇಲ್ಲಿ ಫೀಲಿಂಗ್ಸ್‌ಗೆ ವ್ಯಾಲ್ಯೂ ಇಲ್ಲ ಆಯ್ತಾ. ಆದರೂ ಏನೋ ಒಂಥರ ಫೀಲ್ ಆಗುತ್ತಾ ಇದೆ. ಕಣೇ. ಏನು ಫೀಲಿಂಗ್ ಆಗುತ್ತಾ ಇದೆ ಕಣೆ. ಅದೇ ನಂಗು ಗೊತ್ತಿಲ್ಲ ಕಣೇ. ಮಾಡುವುದೆಲ್ಲಾ ಮಾಡಿ ಈಗ ಏನು ಗೊತ್ತಿಲ್ಲ ಅಂದ್ರೆ. ನೀನು ಏನು ತಪ್ಪು ಮಾಡಿಲ್ಲ. ನೀನು ಜಸ್ಟ್ ಅವನಿಗೆ ಒಂದು ತಾಯಿ ಮಗು ಥರ ಟ್ರೀಟ್ ಮಾಡಿದ್ದೀಯಾ ಅಷ್ಟೇ. ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದೀಯಾ ತಾನೇ. ಇದನ್ನೂ ಓದಿ: ಪ್ರೀತಿಯಿಂದ ಆಯ್ಕೆ ಮಾಡಿದ ಸೋನು ಮಾತಿನಿಂದ ಜಯಶ್ರೀಗೆ ಬೇಸರ – ಎಲ್ಲರೂ ದಂಗಾಗುವಂತೆ ಕಿರುಚಿದ್ಯಾಕೆ ಜಯಶ್ರೀ
ನೀನು ಮಗು ಥರ ನೋಡಿದ್ದು ಅದೆಲ್ಲಾ ಓಕೆ. ಆದರೆ ಯಾಕೆ ನಿಂಗೆ ಪೊಸೆಸಿವ್‌ನೆಸ್ ಆಗುತ್ತಿದೆ. ತಲೇನೆ ಕೆಡಿಸಿಕೊಳ್ಳುವುದಕ್ಕೆ ಹೋಗಬೇಡ. ಯಾರಿಗೋ ಕೇರ್ ಟೇಕ್ ಮಾಡುವುದಕ್ಕೆ ಹೋಗಿ, ನೀನ್ಯಾಕೆ ಮೂಡ್‍ಆಫ್ ಆಗ್ತೀಯಾ. ನಿನ್ನ ಹಿಂದೆ ಸಾವಿರ ಜನ ಹುಡುಗರು ಇದ್ದಾರೆ ಅಂತ ಸೋನು ಹೇಳಿದ್ದೆ ತಡ, ಆ ಕತ್ತಲಲ್ಲಿ ನಿಂತು ಕೇಳಿಸಿಕೊಳ್ಳುತ್ತಿದ್ದ ಗುರೂಜಿ (Aryavardhan Guruji) ಹೊಟ್ಟೆ ಉಣ್ಣಾಗಿಸುವಷ್ಟು ಕಾಮಿಡಿ ಮಾಡಿದ್ದಾರೆ. ಎಲ್ಲಿದ್ದಾರೆ ಸಾವಿರ ಜನ ಹುಡುಗರು. ಇಲ್ಲಿ ನಾನೊಬ್ಬನೆ ಇರುವುದು. ಹಲೋ ನಾನು ಒಬ್ಬನೆ ಇರುವುದು. ನಾನೇ ನಿಂಗೆ ಸಾವಿರ ಜನರಂತೆ ಕಾಣುತ್ತಿದ್ದೀನಾ ಸೋನು ಅಂತ ಪ್ರಶ್ನೆ ಮಾಡಿದರೂ ಸೋನು ಸುಮ್ಮನೆ ಹೋಗಿದ್ದಾಳೆ. ಆದರೆ ಸೋನು ಮನಸ್ಥಿತಿ ನಾರ್ಮಲ್ ಆಗಿ ಇದ್ದಿದ್ದರೆ ಗುರೂಜಿ ಕಥೆ ಆ ಕಷ್ಣ ಮುಗಿದೇ ಹೋಗಿ ಬಿಡುತ್ತಾ ಇತ್ತು. ಮೈಯಲ್ಲಿರುವ ಬೆವರನ್ನೇ ಇಳಿಸುವಷ್ಟು ಜೋರು ಧ್ವನಿಯಲ್ಲಿ ಸೋನು ಮಾತನಾಡುತ್ತಿದ್ದಳು.
Live Tv
[brid partner=56869869 player=32851 video=960834 autoplay=true]