Tag: Aryavardhan Guruji

  • ನಾಲ್ವರ ಡೀಲ್ ಬಗ್ಗೆ ಬಾಯ್ಬಿಟ್ಟ ಆರ್ಯವರ್ಧನ್ ಗುರೂಜಿ

    ನಾಲ್ವರ ಡೀಲ್ ಬಗ್ಗೆ ಬಾಯ್ಬಿಟ್ಟ ಆರ್ಯವರ್ಧನ್ ಗುರೂಜಿ

    ಬಿಗ್ ಬಾಸ್(Bigg Boss House) ಮನೆ ಈಗ ಮೊದಲಿನಂತೆ ಇಲ್ಲ. ದೊಡ್ಮನೆಯ ಅಸಲಿ ಆಟ ಇದೀಗ ಶುರುವಾಗಿದೆ. ಸಾಕಷ್ಟು ರೋಚಕ ತಿರುವುಗಳನ್ನ ಪಡೆದು ಮುನ್ನುಗ್ಗುತ್ತಿದೆ. ಇದೀಗ ಸಾನ್ಯ, ರೂಪೇಶ್, ರಾಕೇಶ್ ಮತ್ತು ಗುರೂಜಿ ನಡುವೆ ನಡೆದ ಡೀಲ್ ಬಗ್ಗೆ ಇದೀಗ ಸ್ವತಃ ಗುರೂಜಿ ಬಾಯ್ಬಿಟ್ಟಿದ್ದಾರೆ.

    ಓಟಿಟಿಯಿಂದ ರಾಕೇಶ್ ಅಡಿಗ, ಸಾನ್ಯ, ರೂಪೇಶ್, ಗುರೂಜಿ ಇದೀಗ ಟಿವಿ ಬಿಗ್ ಬಾಸ್‌ನಲ್ಲಿ ಕಮಾಲ್ ಮಾಡುತ್ತಿದ್ದಾರೆ. ಇತರೆ ಸ್ಪರ್ಧಿಗಳ ಜೊತೆ ಓಟಿಟಿ ಸ್ಪರ್ಧಿಗಳು ಸಖತ್ ಪೈಪೋಟಿ ಕೊಡುತ್ತಿದ್ದಾರೆ. ಹೀಗಿರುವಾಗ ಈ ನಾಲ್ವರ ಡೀಲ್ ಸ್ಟೋರಿಯನ್ನ ಗುರೂಜಿ(Aryavardhan Guruji) ದೊಡ್ಮನೆಯಲ್ಲಿ ರಿವೀಲ್ ಮಾಡಿದ್ದಾರೆ. ಈ ವಿಷ್ಯ ಕೇಳಿ ಮನೆಮಂದಿ ಶಾಕ್ ಆಗಿದ್ದಾರೆ. ಇದನ್ನೂ ಓದಿ:ಸಾನ್ಯ ಕ್ಯಾಪ್ಟೆನ್ಸಿಗೆ ಕಳಪೆ ಎಂದ ರೂಪೇಶ್‌ ಶೆಟ್ಟಿ

    ಬಿಗ್ ಬಾಸ್‌ನಲ್ಲಿ ಎಲ್ಲರ ಮುಂದೆ ಸಾನ್ಯ ಅಯ್ಯರ್(Sanya Iyer) ನೇರವಾಗಿ ನಾಮಿನೇಟ್ ಮಾಡಿರುವುದು ಗುರೂಜಿ ಕೋಪಕ್ಕೆ ಕಾರಣವಾಗಿದೆ. ಈ ವಿಷ್ಯವಾಗಿ ಸಿಡಿದೆದ್ದ ಗುರೂಜಿ, ಡೀಲ್ ಬಗ್ಗೆ ಬಾಯ್ಬಿಟ್ಟಿದ್ದಾರೆ. ಮೂರನೇ ವಾರದ ವೀಕೆಂಡ್ ಪಂಚಾಯಿತಿಯಲ್ಲಿ ಬಿಗ್ ಬಾಸ್ ಒಂದು ಮ್ಯಾಚ್ ಫಿಕ್ಸಿಂಗ್ ಶೋ ಎಂದು ಆರೋಪ ಮಾಡಿ, ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ತಮ್ಮ ಡೀಲ್ ಬಗ್ಗೆ ಹೇಳಿದ್ದಾರೆ.

    ಓಟಿಟಿ ಮುಗಿದು ಟಿವಿ ಬಿಗ್ ಬಾಸ್(Bigg Boss)  ಶುರುವಾಗುವ ಗ್ಯಾಪ್‌ನಲ್ಲಿ ರಾಕೇಶ್, ಸಾನ್ಯ, ರೂಪೇಶ್, ಗುರೂಜಿ ರೆಸಾರ್ಟ್‌ನಲ್ಲಿ ವಾರಗಳ ಕಾಲ ಇರಿಸಲಾಗಿತ್ತು. ಈ ಸಮಯದಲ್ಲಿ ನಾಲ್ವರ ಮಧ್ಯೆ ಒಂದು ಡೀಲ್ ಆಗಿತ್ತು. ಯಾರನ್ನ ಯಾರು ನಾಮಿನೇಟ್ ಮತ್ತು ಕಳಪೆ ನೀಡಬಾರದು ಎಂದು ಮಾತಾಗಿತ್ತು. ಈ ಮಾತನ್ನ ಸಾನ್ಯ ತಪ್ಪಿರೋದಕ್ಕೆ ಗುರೂಜಿ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ಮಧ್ಯೆ ಇದ್ದ ಡೀಲ್ ಬಗ್ಗೆ ರಿವೀಲ್ ಮಾಡಿದ್ದಾರೆ. ಈ ವಿಚಾರ ಇದೀಗ ಬಿಗ್ ಬಾಸ್ ಮನೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಜೊತೆಗೆ ಎಲ್ಲರಿಗೂ ಅಚ್ಚರಿ ಮೂಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಸಾನ್ಯ ಐಯ್ಯರ್ ವಿಚಾರವಾಗಿ ಭದ್ರಕಾಳಿ ಮೇಲೆ ಶಪಥ ಮಾಡಿದ ಆರ್ಯವರ್ಧನ್ ಗುರೂಜಿ

    ಸಾನ್ಯ ಐಯ್ಯರ್ ವಿಚಾರವಾಗಿ ಭದ್ರಕಾಳಿ ಮೇಲೆ ಶಪಥ ಮಾಡಿದ ಆರ್ಯವರ್ಧನ್ ಗುರೂಜಿ

    ಬಿಗ್ ಬಾಸ್ (Bigg Boss) ಮನೆಯ ಕೆಲವರನ್ನು ‘ಮಗ’, ‘ಮಗಳು’ ಎಂದು ಪ್ರೀತಿಯಿಂದ ಕರೆಯುತ್ತಾರೆ ಆರ್ಯವರ್ಧನ್ ಗುರೂಜಿ. ಅಂತಹ ಮಕ್ಕಳೇ ಇಂದು ತಿರುಗಿ ಬೀಳುವಂತಹ ಪ್ರಸಂಗಗಳು ದೊಡ್ಮನೆಯಲ್ಲಿ ನಡೆಯುತ್ತಿವೆ. ಅದರಲ್ಲೂ ಗುರೂಜಿ (Aryavardhan Guruji) ಯಾರನ್ನೂ ಅಭಿಮಾನದಿಂದ, ಅಕ್ಕರೆಯಿಂದ ಕರೆಯುತ್ತಿದ್ದರೋ ಅಂಥವರು ಗುರೂಜಿ ಬೆನ್ನಿಗೆ ಚೂರಿ ಹಾಕುತ್ತಿದ್ದಾರಂತೆ. ಹಾಗಾಗಿ ಬಿಗ್ ಬಾಸ್ ಮನೆಯಲ್ಲಿ ನನಗೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಬೇಜಾರಾಗಿದೆ ಎಂದಿದ್ದಾರೆ.

    ದಿನವೂ ಒಂದೇ ತಟ್ಟೆಯಲ್ಲಿ ತಿಂದರೂ, ನಾಮಿನೇಷನ್ (nominated) ವಿಚಾರದಲ್ಲಿ ಬಿಗ್ ಬಾಸ್ ಮನೆಯ ಸದಸ್ಯರು ವಿಭಿನ್ನವಾಗಿಯೇ ಯೋಚಿಸುತ್ತಾರೆ. ತಾನು ಸೇಫ್ ಆಗಿ ಇದ್ದರೆ ಸಾಕು ಎಂದೇ ಯೋಚನೆ ಮಾಡುತ್ತಾರೆ. ಸಾನ್ಯ ಅಯ್ಯರ್ (Sanya Iyer) ಮತ್ತು ಆರ್ಯವರ್ಧನ್ ಗುರೂಜಿ ವಿಚಾರದಲ್ಲೂ ಅದೇ ಆಯಿತು. ನಾಮಿನೇಷನ್ ಪ್ರಕ್ರಿಯೆ ನಡೆದಾಗ, ನೇರವಾಗಿ ನಾನು ಆರ್ಯವರ್ಧನ್ ಗುರೂಜಿಯನ್ನು ನಾಮಿನೇಟ್ ಮಾಡುವೆ ಎಂದು ಸಾನ್ಯ ಹೇಳಿದರು. ನಿಜಕ್ಕೂ ಇದು ಶಾಕಿಂಗ್ ವಿಚಾರವಾಗಿತ್ತು ಗುರೂಜಿಗೆ. ಇದನ್ನೂ ಓದಿ:ಚೇತನ್ ಕಾಂಟ್ರವರ್ಸಿಗೆ ಪ್ರಗತಿ ರಿಷಬ್ ಶೆಟ್ಟಿ ಪ್ರತಿಕ್ರಿಯೆ

    ಮನೆಯ ಕ್ಯಾಪ್ಟನ್ ಆಗಿದ್ದ ಸಾನ್ಯಗೆ ನೇರವಾಗಿ ಒಬ್ಬರನ್ನು ನಾಮಿನೇಟ್ ಮಾಡಲು ಅವಕಾಶ ನೀಡಲಾಗಿತ್ತು. ಅದರಂತೆ ಗುರೂಜಿಯನ್ನು ಅವರು ಆಯ್ಕೆ ಮಾಡಿಕೊಂಡರು. ಇದರಿಂದ ಕೋಪ ಮಾಡಿಕೊಂಡ ಗುರೂಜಿ, ‘ಈ ಸೇಡನ್ನು ನಾನು ತೀರಿಸಿಕೊಳ್ಳದೇ ಬಿಡುವುದಿಲ್ಲ. ಮುಂದೊಂದು ದಿನ ನನಗೆ ಅಧಿಕಾರ ಬಂದರೆ, ಸಾನ್ಯರನ್ನು ನಾಮಿನೇಟ್ ಮಾಡುತ್ತೇನೆ ಎಂದು ಭದ್ರಕಾಳಿ ಮೇಲೆ ಶಪಥ ಮಾಡಿದರು ಆರ್ಯವರ್ಧನ್ ಗುರೂಜಿ.

    Live Tv
    [brid partner=56869869 player=32851 video=960834 autoplay=true]

  • ನಿಂತಲ್ಲೇ ಮೂತ್ರ ಮಾಡಿದ್ರೂ ಗೇಮ್ ಬಿಟ್ಟು ಕೊಡದ ಗುರೂಜಿ

    ನಿಂತಲ್ಲೇ ಮೂತ್ರ ಮಾಡಿದ್ರೂ ಗೇಮ್ ಬಿಟ್ಟು ಕೊಡದ ಗುರೂಜಿ

    ಬಿಗ್ ಬಾಸ್ ಮನೆಯ(Bigg Boss House) ಆಟ ಇದೀಗ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಸಾಕಷ್ಟು ತಿರುವುಗಳನ್ನು ಪಡೆದು ದೊಡ್ಮನೆಯ ಆಟ ಮುನ್ನುಗ್ಗುತ್ತಿದೆ. ಇದೀಗ ಗುರೂಜಿ ಮಾಡಿರುವ ಕೆಲಸವೊಂದು ಮನೆಯ ನಗುವಿಗೆ ಕಾರಣವಾಗಿದೆ. ಟಾಸ್ಕ್ ಆಡುವಾಗ ನಿಂತಲ್ಲೇ ಮೂತ್ರ ಮಾಡಿದ್ರೂ ಕೂಡ ಎಲ್ಲೂ ಗೇಮ್ ಬಿಟ್ಟು ಕೊಡದೇ ಆರ್ಯವರ್ಧನ್ ಗುರೂಜಿ(Aryavardhan Guruji) ಎದುರಾಳಿ ತಂಡಕ್ಕೆ  ಟಫ್ ಪೈಪೋಟಿ ನೀಡಿದ್ದಾರೆ.

    ದೊಡ್ಮನೆಯಲ್ಲಿ ಬಿಗ್ ಬಾಸ್, ಸ್ಪಧಿಗಳಿಗೆ ಸಾಲು ಸಾಲು ಟಾಸ್ಕ್ ನೀಡುತ್ತಿದ್ದಾರೆ. ದೀಪಿಕಾ ದಾಸ್ (Deepika Das) ಕ್ಯಾಪ್ಟನ್ಸಿಯಲ್ಲಿ ಒಂದರ ಹಿಂದೆ ಒಂದು ರೋಚಕ ಟಾಸ್ಕ್‌ಗಳು ಮೂಡಿ ಬರುತ್ತಿದೆ. ರಾತ್ರಿ ಇಡೀ ಲೈಟ್‌ನ್ನ ಒತ್ತಿ ಹಿಡಿಯುವ ಟಾಸ್ಕ್ ಅನ್ನು ಎರಡು ತಂಡಗಳಾದ `ಧಮ್ ಪವರ್’ ಮತ್ತು `ಕಾಮನಬಿಲ್ಲು’ ತಂಡಕ್ಕೆ ನೀಡಲಾಗಿತ್ತು. ಮೊದಲಿಗೆ ರಾಕೇಶ್(Rakesh Adiga), ಅರುಣ್ ಸಾಗರ್ (Arun Sagar) ಗೇಮ್‌ನಿಂದ ಔಟ್ ಆದರು. ಆ ನಂತರ ಒಬ್ಬಬ್ಬರಾಗಿ ಔಟ್ ಆಗುತ್ತಾ ಬಂದರು.

    ಈ ವೇಳೆ ಕಂಬವನ್ನು ಒತ್ತಿ ಹಿಡಿದ ಗುರೂಜಿಗೆ ವಾಶ್‌ರೂಮ್‌ಗೆ ಹೋಗಬೇಕಾಗಿರುತ್ತದೆ. ಕೈಬಿಟ್ಟರೇ ಔಟ್ ಆಗಬೇಕಾಗುತ್ತದೆ. ಅವರ ತಂಡದವರು ಬೇಕಾದ್ರೆ ಬಿಟ್ಟು ಹೋಗಿ ಎನ್ನುತ್ತಾರೆ. ಆದ್ರೂ ಪಟ್ಟು ಬಿಡದೇ ನಿಲ್ಲುತ್ತಾರೆ. ಕೊನೆಗೆ ವಾಶ್‌ರೂಮ್‌ಗೆ ಹೋದರೆ ಗೇಮ್ ಸೋಲುತ್ತೆ ಅಂತಾ ನಿಂತಲ್ಲೇ ಮೂತ್ರ ಮಾಡಿಕೊಂಡಿದ್ದಾರೆ. ಈ ವಿಷ್ಯಕ್ಕೆ ಮೊದಲು ಮನೆಯವರೆಲ್ಲರೂ ರೇಗಿಸಿದ್ದರು. ಆದರೂ ಗುರೂಜಿ ಛಲ ನೋಡಿ ಮನೆಮಂದಿ ಭೇಷ್ ಎಂದಿದ್ದಾರೆ. ನಂತರ 5 ಜನ ಕಡೆಯವರೆಗೂ ನಿಂತು ತಂಡವನ್ನು ಗೆಲ್ಲಿಸಿದ್ದಾರೆ. `ಕಾಮನಬಿಲ್ಲು’ ತಂಡದ ಗೆಲುವಿಗೆ ಗುರೂಜಿ ಶ್ರಮ ಕೂಡ ಕಾರಣವಾಗಿದೆ. ಇದನ್ನೂ ಓದಿ:ವಿಯೆಟ್ನಾಂನಲ್ಲೂ ಕಾಂತಾರ ಕಂಪು – ಮೊದಲ ಬಾರಿಗೆ ಕನ್ನಡ ಚಿತ್ರ ಬಿಡುಗಡೆ

    ಬಳಿಕ ಮಯೂರಿ ಡ್ರೆಸಿಂಗ್ ರೂಮ್‌ನಲ್ಲಿ ಈ ಬಗ್ಗೆ ಅನುಪಮಾ ಗೌಡ ಜೊತೆ ಚರ್ಚೆ ಮಾಡಿದ್ದಾರೆ. ಆರ್ಯವರ್ಧನ್ ಗುರೂಜಿ ನಿಂತಲ್ಲೇ ಮೂತ್ರ ಮಾಡಿದ್ದ ದೃಶ್ಯ ಕಂಡು ಜೋರಾಗಿ ನಕ್ಕಿದ್ದಾರೆ. ಒಟ್ನಲ್ಲಿ ಗುರೂಜಿ ಆಟ, ಛಲ ಮನೆಮಂದಿಗೆ ಮೆಚ್ಚುಗೆ ಆಗಿದೆ.

    Live Tv
    [brid partner=56869869 player=32851 video=960834 autoplay=true]

  • ಲವ್ ಯೂ ರಚಿತಾ, ನನ್ನ ನೀ ಹಗ್ ಮಾಡು: ಆರ್ಯವರ್ಧನ್ ಗುರೂಜಿ ಬೇಡಿಕೆ

    ಲವ್ ಯೂ ರಚಿತಾ, ನನ್ನ ನೀ ಹಗ್ ಮಾಡು: ಆರ್ಯವರ್ಧನ್ ಗುರೂಜಿ ಬೇಡಿಕೆ

    ಬಿಗ್ ಬಾಸ್ (Bigg Boss Season 9) ಮನೆಯಲ್ಲಿ ಆರ್ಯವರ್ಧನ್ ಗುರೂಜಿ (Aryavardhan Guruji) ವಿಚಿತ್ರ ಬೇಡಿಕೆ ಇಟ್ಟಿದ್ದಾರೆ. ಗುರೂಜಿ ಬಾಯಿಯಿಂದ ಇಂತಹ ನುಡಿಮುತ್ತುಗಳು ಬರುತ್ತಿದ್ದಂತೆಯೇ ಬಿಗ್ ಬಾಸ್ ಮನೆ ಸದಸ್ಯರೂ ಭಾವುಕರಾಗಿದ್ದಾರೆ. ಅಷ್ಟಕ್ಕೂ ಗುರೂಜಿಯ ಆ ಬೇಡಿಕೆ ಸದ್ಯಕ್ಕೆ ಈಡೇರದಿದ್ದರೂ, ಮುಂದಿನ ದಿನಗಳಲ್ಲಿ ಕಂಡಿತಾ ಸಾಧ್ಯವಾಗಬಹುದು ಎಂದು ಪ್ರಶಾಂತ್ ಸಂಬರ್ಗಿ ಭವಿಷ್ಯ ನುಡಿದಿದ್ದಾರೆ. ಹಾಗಾದರೆ, ಆರ್ಯವರ್ಧನ್ ಗುರೂಜಿ ಬೇಡಿಕೆ ಏನಾಗಿತ್ತು? ಯಾಕೆ ಬಿಗ್ ಬಾಸ್ ಮನೆಯ ಸದಸ್ಯರು ಭಾವುಕರಾದರು ಎನ್ನುವುದೇ ಸದ್ಯಕ್ಕಿರುವ ಕುತೂಹಲ.

    ಹೊಟ್ಟೆ ತುಂಬಾ ಊಟ ಮಾಡಿಕೊಂಡು ಬಂದ ಪ್ರಶಾಂತ್ ಸಂಬರ್ಗಿ(Prashant Sambargi) , ಕ್ಯಾಮೆರಾ ಮುಂದೆ ಬಂದು ‘ಬಿಗ್ ಬಾಸ್ ನನ್ನದು ಊಟ ಆಯಿತು, ನಿಮ್ಮದು ಆಯಿತಾ ಅಂದ್ಕೋತೀನಿ. ಥ್ಯಾಂಕ್ಸ್ ಬಿಗ್ ಬಾಸ್’ ಅಂದರು. ಅದನ್ನು ಗಮನಿಸುತ್ತಿದ್ದ ಆರ್ಯವರ್ಧನ್ ಗುರೂಜಿ, ‘ನೀವಷ್ಟೇ ಕ್ಯಾಮೆರಾ ಮುಂದೆ ಮಾತಾಡ್ಬೇಕಾ? ನಾನೂ ಮಾತಾಡ್ತೀನಿ’ ಅಂತ ಕ್ಯಾಮೆರಾ ಎದುರು ನಿಂತರು. ಪ್ರಶಾಂತ್ ಸಂಬರ್ಗಿ ರೀತಿಯಲ್ಲೇ ಗುರೂಜಿ ಕೂಡ ಬಿಗ್ ಬಾಸ್ ಗೆ ಏನಾದರೂ ಕೇಳುತ್ತಾರೆ ಅಂದುಕೊಂಡರೆ ಲೆಕ್ಕಾಚಾರವೇ ಉಲ್ಟಾ ಆಯಿತು. ಇದನ್ನೂ ಓದಿ: ‘ಬಿಗ್ ಬಾಸ್ ಸೀಸನ್ 9’ರ ಮೊದಲ ಮಹಿಳಾ ಕ್ಯಾಪ್ಟನ್ ಆಗಿ ದೀಪಿಕಾ ದಾಸ್ ಆಯ್ಕೆ

    ಕ್ಯಾಮೆರಾ ಮುಂದೆ ಬಂದ ಗುರೂಜಿ ತುಸು ಭಾವುಕರಾಗಿಯೇ ‘ ಐ ಲವ್ ಯೂ ರಚಿತಾ’ (Rachita) ಎಂದು ಬಿಟ್ಟರು. ರಚಿತಾ ಅಂದಾಕ್ಷಣ ಬಹುತೇಕರು ನಟಿ ರಚಿತಾ ರಾಮ್ ಗೆ ಹೇಳುತ್ತಿದ್ದಾರಾ ಅಂತ ಅಂದುಕೊಂಡಿದ್ದು ಸುಳ್ಳಲ್ಲ.  ಮತ್ತೆ ಮಾತು ಮುಂದುವರೆಸಿದ ಗುರೂಜಿ, ‘ನಿನಗೋಸ್ಕರ ನಾನು ಇಲ್ಲಿಗೆ ಬಂದಿದ್ದೇನೆ. ಆಚೆ ಬಂದ್ಮೇಲೆ ನನ್ನ ತುಂಬಾ ಲವ್ ಮಾಡು, ಯಾವತ್ತೂ ನಾನು ಲವ್ ನೋಡೇ ಇಲ್ಲ. ನಿನ್ನ ಪ್ರೀತಿ ಮಾಡಿಲ್ಲ. ನಿನ್ನ ಜೊತೆ ಲೈವ್ ಆಗಿ ಪ್ರೀತಿ ಮಾಡಿಲ್ಲ. ನಿನ್ನನ್ನು ನಾನು ರಿಯಲ್ ಆಗಿ ಲವ್ ಮಾಡ್ಬೇಕು. ನೀನು ನನ್ನ ಹಗ್ ಮಾಡಬೇಕು’ ಅಂತೆಲ್ಲ ಮಾತಾಡೋಕೆ ಶುರು ಮಾಡಿದ್ದರು. ಇದನ್ನು ಕೇಳಿ ಬಿಗ್ ಬಾಸ್ ಮನೆಯವರು ಒಂದು ಕ್ಷಣ ಶಾಕ್ ಗೆ ಒಳಗಾದರು.

    ರೋಮ್ಯಾಂಟಿಕ್ ಆಗಿ, ಎಮೋಷನಲ್ ಆಗಿ ಗುರೂಜಿ ಯಾವ ರಚಿತಾಗೆ ಈ ಮಾತುಗಳನ್ನು ಹೇಳುತ್ತಿರಬೇಕು ಎಂದು ಹಲವರು ತಲೆ ಕೆಡಿಸಿಕೊಂಡರು. ಆನಂತರ ಗೊತ್ತಾಗಿದ್ದು, ಗುರೂಜಿ ಅವರ ಪತ್ನಿಯ ಹೆಸರು ರಚಿತಾ ಅಂತ. ತಮ್ಮ ಪತ್ನಿಗೆ ಗುರೂಜಿ ಇದನ್ನೆಲ್ಲ ಹೇಳಿದ್ದಾರೆ ಎಂದು ಕೇಳಿ ಎಲ್ಲರೂ ನಿಟ್ಟುಸಿರಿಟ್ಟರು. ಅಷ್ಟಕ್ಕೆ ಸುಮ್ಮನಾಗದ ಗುರೂಜಿ, ‘ಇಲ್ಲಿ ಎಲ್ಲರೂ ನೈಟ್ ಹಗ್ ಮಾಡ್ತಾರೆ. ಅಯ್ಯಯ್ಯೋ ನಂಗೆ ನೋಡೋಕೆ ಆಗ್ತಿಲ್ಲ. ಅವರನ್ನೆಲ್ಲ ನೋಡಿ ನಿನ್ನ ಹಗ್ ಮಾಡ್ಬೇಕು ಅನಿಸ್ತಿದೆ’ ಎಂದು ತಮ್ಮೊಳಗೆ ತುಮುಲಗಳನ್ನು ಬಿಚ್ಚಿಟ್ಟರು ಗುರೂಜಿ.

    ಲವ್, ರಿಯಲ್ ಲವ್, ಹಗ್ ಅಂತೆಲ್ಲ ಮಾತನಾಡುತ್ತಾ ಗುರೂಜಿ, ನಂತರ ತುಸು ಭಾವುಕರಾಗಿ ‘ಇಲ್ಲಿವರೆಗೂ ಹೇಗೋ ಆಯ್ತು. ಕ್ಷಮಿಸಿ ಬಿಡಿ ನನ್ನ. ನಿನಗೋಸ್ಕರ ನಾನು ದುಡೀತೀನಿ. ನಿನಗೋಸ್ಕರ ಬದುಕ್ತೀನಿ’ ಎಂದು ಆಶ್ವಾಸನೆ ನೀಡಿದರು. ಗುರೂಜಿ ಮಾತುಗಳನ್ನು ಕೇಳಿಸಿಕೊಂಡ ದೊಡ್ಮನೆ ಸದಸ್ಯರು ಗುರೂಜಿ ಮಾತುಗಳಿಗೆ ಮೆಚ್ಚುಗೆ ಸೂಚಿಸಿದರು. ಗುರೂಜಿ ಮಾತು ಒಂದು ಕ್ಷಣ ಅಚ್ಚರಿ ಮತ್ತೊಂದು ಕ್ಷಣ ಭಾವುಕತೆಗೆ ನೂಕಿದ್ದು ಸುಳ್ಳಲ್ಲ. ಮನೆಯಿಂದ ಗುರೂಜಿ ಆಚೆ ಬಂದ ತಕ್ಷಣವೇ ರಚಿತಾ ಅವರು ಹಗ್ ಮಾಡಿಕೊಂಡು ಪತಿಯನ್ನು ಸ್ವಾಗತಿಸಿಕೊಳ್ಳಲಿ ಎಂದು ಹಾರೈಸೋಣ.

    Live Tv
    [brid partner=56869869 player=32851 video=960834 autoplay=true]

  • ಸಾನ್ಯ ಅಯ್ಯರ್ ಜೊತೆ ರೂಪೇಶ್ ಶೆಟ್ಟಿ ಬ್ರೇಕ್ ಅಪ್ : ಪ್ರಣಯ ಹಕ್ಕಿಗಳು ದೂರ ದೂರ

    ಸಾನ್ಯ ಅಯ್ಯರ್ ಜೊತೆ ರೂಪೇಶ್ ಶೆಟ್ಟಿ ಬ್ರೇಕ್ ಅಪ್ : ಪ್ರಣಯ ಹಕ್ಕಿಗಳು ದೂರ ದೂರ

    ಬಿಗ್ ಬಾಸ್ (Bigg Boss Season 9) ಮನೆಯ ಪ್ರಣಯ ಪಕ್ಷಿಗಳಲ್ಲಿ ಮುಂಚೂಣಿಯಲ್ಲಿದ್ದವರು ರೂಪೇಶ್ ಶೆಟ್ಟಿ (Rupesh Shetty) ಹಾಗೂ ಸಾನ್ಯ ಅಯ್ಯರ್. ಈ ಜೋಡಿಯ ಬಗ್ಗೆ ಪ್ರೇಕ್ಷಕರು ಕೂಡ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಬಿಗ್ ಬಾಸ್ ಮನೆಯಿಂದ ಆಚೆ ಬಂದ ಮೇಲೂ ಈ ಜೋಡಿ ಹೀಗೆಯೇ ನಗ್ತಾ ಇರಲಿ ಎಂದು ಹಾರೈಸಿದ್ದರು. ಹಾಗಂತ ರೂಪೇಶ್ ಶೆಟ್ಟಿ ಆಗಲಿ, ಸಾನ್ಯ ಅಯ್ಯರ್ ಆಗಲಿ ನೋಡುಗರಿಗೆ ಮುಜುಗರ ಪಡುವಂತೆ ಯಾವತ್ತೂ ನಡೆದುಕೊಂಡವರಲ್ಲ. ಆದರೆ, ಮೊನ್ನೆ ಹಾಗಾಗಲಿಲ್ಲ. ಅವರ ಉದ್ದೇಶ ಅದಾಗದೇ ಇರಬಹುದು. ಅದೇ ಇರಬಹುದು ಎನ್ನುವ ಕಾರಣಕ್ಕಾಗಿ ಸುದೀಪ್ ಸಿಡಿದೆದ್ದರು.

    ಬಿಗ್ ಬಾಸ್ ಮನೆಯ ಕ್ಯಾಪ್ಟೆನ್ಸಿ ರೂಮ್ ನಲ್ಲಿ ರೂಪೇಶ್ ಶೆಟ್ಟಿ ಮೈಮೇಲೆ ಸಾನ್ಯ ಅಯ್ಯರ್  (Sanya Iyer) ಮಲಗಿಕೊಂಡಿದ್ದರು. ರೂಪೇಶ್ ಶೆಟ್ಟಿ ತಮ್ಮ ತೊಳಿನಿಂದ ಸಾನ್ಯ ಅಯ್ಯರ್ ಅನ್ನು ಬಿಗಿದಪ್ಪಿದ್ದರು. ಇವರ ಎದುರು ಆರ್ಯವರ್ಧನ್ (Aryavardhan Guruji) ಮಲಗಿದ್ದರು. ಮೂವರು ಮಲಗಿಕೊಂಡೇ ಹರಟೆ ಹೊಡೆಯುತ್ತಿದ್ದರು. ತಾವು ಮಲಗಿದ ರೀತಿ ಸರಿ ಇಲ್ಲ ಅಂತ ರೂಪೇಶ್ ಗಾಗಲಿ, ಸಾನ್ಯ ಅಯ್ಯರ್ ಗಾಗಲೇ ಅನಿಸದೇ ಇರಬಹುದು. ಆದರೆ, ಅದನ್ನು ಬಿಗ್ ಬಾಸ್ ನೋಟಿಸ್ ಮಾಡಿದ್ದಾರೆ. ಆ ರೀತಿ ವರ್ತಿಸೋದು ತಪ್ಪು ಎಂದು ಸುದೀಪ್ ಮೂಲಕ ಹೇಳಿಸಿದ್ದಾರೆ. ಇದನ್ನೂ ಓದಿ:ಕೊಟ್ಟ ಮಾತಿನಂತೆ ದಾವಣಗೆರೆ ಬೆಣ್ಣೆದೋಸೆ ಸವಿದ ಸ್ಯಾಂಡಲ್ ವುಡ್ ಕ್ವೀನ್

    ರೂಪೇಶ್ ಮತ್ತು ಸಾನ್ಯ ಆ ರೀತಿ ಮಾಡಿದ್ದಕ್ಕೆ  ಗರಂ ಆದ ಸುದೀಪ್ (Kichcha Sudeep) ‘ಕ್ಯಾಪ್ಟೆನ್ಸಿ ರೂಮ್ ನಲ್ಲಾಗಿದ್ದು ನಾಟ್ ಆಕ್ಸೆಪ್ಟಬಲ್. ಇದರಿಂದ ಕಂಟೆಂಟ್ ಸಿಗುತ್ತದೆ ಅಂದುಕೊಂಡಿದ್ದರೆ, ದಿಸ್ ಈಸ್ ನಾಟ್ ಎ ಶೋ ಫಾರ್ ದಟ್. ಈ ಮನೆ ಅದಕ್ಕಲ್ಲ’ ಎಂದು ಕಿಚ್ಚ ಖಡಕ್ಕಾಗಿಯೇ ವಾರ್ನಿಂಗ್ ಕೊಟ್ಟರು. ಸುದೀಪ್ ಅವರ ಮಾತಿನಿಂದ ಶಾಕ್ ಗೆ ಒಳಗಾದ ಈ ಜೋಡಿಗೆ ನಂತರ ಸಮಾಧಾನ ಮಾಡ್ತಾ, ‘ಯಾವುದೂ ಏನೂ ಹೊರಗೆ ಡ್ಯಾಮೇಜ್ ಆಗಿಲ್ಲ. ನೆಕ್ಸ್ಟ್ ಆಗೋದನ್ನ ತಡೆಯೋ ಪ್ರಯತ್ನ. ಫೋಕಸ್ ಮಿಸ್ ಮಾಡಬೇಡಿ’ ಎಂದು ಎಚ್ಚರಿಕೆ ನೀಡಿದರು.

    ಈ ಎಚ್ಚರಿಕೆಯನ್ನು ರೂಪೇಶ್ ಶೆಟ್ಟಿ ತುಂಬಾ ಸೀರಿಯಸ್ ಆಗಿ ತಗೆದುಕೊಂಡಿದ್ದಾರೆ. ಈ ಘಟನೆಯಿಂದ ನೊಂದುಕೊಂಡಿದ್ದ ರೂಪೇಶ್ ಮೊದಲು ಕಣ್ಣೀರು ಹಾಕಿದರು. ಇದೀಗ ಸಾನ್ಯರಿಂದ ದೂರ ಉಳಿಯುತ್ತಿದ್ದಾರೆ. ರೂಪೇಶ್ ಜೊತೆ ಊಟ ಮಾಡಲು ಸಾನ್ಯ ಕಾಯುತ್ತಿದ್ದರೂ, ಹೋಗಲಿಲ್ಲ. ಅಲ್ಲದೇ, ಸಾನ್ಯ ಜೊತೆ ಸರಿಯಾಗಿಯೂ ಅವರು ಮಾತನಾಡುತ್ತಿಲ್ಲ. ಪ್ರತಿ ನಿತ್ಯ ಸಾನ್ಯ ಜೊತೆನೇ ಕೂತು ಊಟ ಮಾಡುತ್ತಿದ್ದ ರೂಪೇಶ್, ಕಿಚ್ಚನ ಎಚ್ಚರಿಕೆಯ ಮಾತುಗಳ ನಂತರ ಸಾನ್ಯ ಜೊತೆ ಅಂತರವನ್ನು ಕಾಪಾಡಿಕೊಳ್ಳುತ್ತಿದ್ದಾರೆ. ‘ಈ ರೀತಿ ನೀನು ಮಾಡಬೇಡ’ ಎಂದು ಸಾನ್ಯ ಹೇಳಿದರೂ, ರೂಪೇಶ್ ಈವರೆಗೂ ಬದಲಾಗಿಲ್ಲ.

    ರೂಪೇಶ್ ಈ ನಡೆಯಿಂದ ಸಾನ್ಯ ಕೂಡ ಅಪ್ ಸೆಟ್ ಆಗಿದ್ದಾರೆ. ನೇರವಾಗಿಯೇ ರೂಪೇಶ್ ಬಳಿ ಬಂದು ‘ಮೊದಲಿನ ಹಾಗೆ ನೀನು ಇಲ್ಲ. ತುಂಬಾ ಚೇಂಜ್ ಆಗಿದ್ದೀಯಾ. ನಿನಗೆ ಅಪ್ ಸೆಟ್ ಆಗಿದೆ ಅಂತಾನೇ ನಿನ್ನ ಜೊತೆ ನಾನು ಇರಬೇಕು ಅಂತ ಬರ್ತಿರೋದು. ಆದರೆ, ನೀನು ಅವೈಡ್ ಮಾಡ್ತಿದ್ದೀಯಾ’ ಎಂದು ಹಲವು ಪ್ರಶ್ನೆಗಳನ್ನು ಬೇಸರದಿಂದಲೇ ಕೇಳಿದರು ಸಾನ್ಯ. ‘ನನ್ನ ಬಗ್ಗೆ ಸದ್ಯ ನೀನೇ ಏನೇ ಅಂದುಕೊಂಡಿದ್ದರೂ, ನಿನ್ನ ಮೇಲಿನ ಕಾಳಜಿ ಬದಲಾಗಲ್ಲ’ ಎನ್ನುವ ಮೂಲಕ ರೂಪೇಶ್ ಆಕೆಗೆ ಸಮಾಧಾನ ಮಾಡಿದ್ದಾರೆ. ಆದರೆ, ಈ ಪ್ರೀತಿ ಹಾಗೆಯೇ ಉಳಿಯತ್ತಾ? ಅಥವಾ ಸುದೀಪ್ ಅವರ ಮಾತಿನ ಕಾರಣದಿಂದಾಗಿ ಬ್ರೇಕ್ ಅಪ್ ಆಗತ್ತಾ ಕಾದು ನೋಡಬೇಕು.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ: ಗುರೂಜಿ ಮೇಲೆ ಕಿಚ್ಚ ಕೆಂಡಾಮಂಡಲ

    ಬಿಗ್ ಬಾಸ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ: ಗುರೂಜಿ ಮೇಲೆ ಕಿಚ್ಚ ಕೆಂಡಾಮಂಡಲ

    ಸಂಖ್ಯಾಶಾಸ್ತ್ರದ ಮೂಲಕ ಗುರುತಿಸಿಕೊಂಡಿದ್ದ ಆರ್ಯವರ್ಧನ್ ಗುರೂಜಿ(Aryavardhan Guruji) ಇದೀಗ ಟಿವಿ ಬಿಗ್ ಬಾಸ್‌ನಲ್ಲಿ(Bigg Boss) ಕಮಾಲ್ ಮಾಡುತ್ತಿದ್ದಾರೆ. ತಮ್ಮ ನೇರವಾದ ಮಾತಿನ ಮೂಲಕ ಮನೆಯವರ ಕೆಂಗಣ್ಣಿಗೆ ಗುರಿಯಾಗಿದ್ದು ಇದೆ. ಇದೀಗ ಮತ್ತೆ ದೊಡ್ಮನೆಯಲ್ಲಿ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ. ಬಿಗ್ ಬಾಸ್ ಮೇಲೆ ಗುರೂಜಿ ಮ್ಯಾಚ್ ಫಿಕ್ಸಿಂಗ್ ಆರೋಪವನ್ನು ಮಾಡಿದ್ದಾರೆ. ಗುರೂಜಿ ಮಾತಿಗೆ ಕಿಚ್ಚ ಫುಲ್ ಗರಂ ಆಗಿದ್ದಾರೆ.

    ದೊಡ್ಮನೆಯಲ್ಲಿ ಸದಾ ಒಂದಲ್ಲಾ ಒಂದು ಕಿರಿಕ್ ಮೂಲಕ ಸದ್ದು ಮಾಡುವ ಗುರೂಜಿ ಇದೀಗ ಕಿಚ್ಚನ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸೂಪರ್ ಸಂಡೇ ವಿತ್ ಸುದೀಪ ವೀಕೆಂಡ್ ಕಾರ್ಯಕ್ರಮದಲ್ಲಿ ಸುದೀಪ್ (Kiccha Sudeep) ಎಂದಿನಂತೆ ಸ್ಪರ್ಧಿಗಳ ಜೊತೆ ಮಾತನಾಡಿದ್ದಾರೆ. ಸ್ಪರ್ಧಿಗಳಿಗೆ ಪ್ರಶ್ನೆ ಕೇಳಿದ್ದಾರೆ. ಟಾಪ್ 2 ಯಾರು ಆಗ್ತಾರೆ ಎಂದು ಕೇಳಿದರು. ಸ್ಪರ್ಧಿಗಳು ಒಬ್ಬರ ಹೆಸರನ್ನು ಹೇಳುತ್ತಿದ್ದರು. ಗುರೂಜಿ, ಅನುಪಮಾ ಹೆಸರು ಹೇಳಿ ಬಿಗ್ ಬಾಸ್‌ಗೂ ಅನುಪಮಾ(Anupama Gowda) ಒಳಗಡೆ ಬರ್ಬೇಕು ಅಂತ ಆಸೆ ಇತ್ತು ಎಂದು ಹೇಳಿದರು. ಇದರಿಂದ ಕೆರಳಿದ ಸುದೀಪ್ ಹಾಗೆಲ್ಲ ಮಾತನಾಡಬೇಡಿ ಸರ್ ಎಂದು ಹೇಳಿದರು. ಬಂಗಾರದ ಟಾಸ್ಕ್‌ನಲ್ಲಿ ಎಷ್ಟು ಬಂಗಾರ ಇದೆ ಅಂತ ಗೊತ್ತಿದ್ದರೂ ಅನುಪಮಾನ ಒಳಗಡೆ ಕರೆಸುತ್ತಾರೆ ಅಂದರೆ ಏನು ಅರ್ಥ. ಮ್ಯಾಚ್ ಫಿಕ್ಸಿಂಗ್ ಆಗಿದೆ ಇಲ್ಲಿ ಎಂದು ಗಂಭೀರ ಆರೋಪ ಮಾಡಿದರು. ಸುದೀಪ್ ಸ್ಪರ್ಧಿಗಳಲ್ಲಿ ನಿಮಗೆ ಹಾಗೆ ಅನಿಸಿತಾ ಎಂದು ಕೇಳಿದರು. ಸ್ಪರ್ಧಿಗಳೆಲ್ಲಾ ಇಲ್ಲಾ ಎಂದರು.

    ಗುರೂಜಿ ಮಾತಿನ ವರಸೆಗೆ ಕೆಂಡವಾದ ಸುದೀಪ್ (Kiccha Sudeep) ಮಾತಿನ ಮೇಲೆ ನಿಗಾ ಇರಲಿ ಎಂದು ಎಚ್ಚರಿಕೆ ನೀಡಿದರು. ಆದರೂ ಸಹ ಗುರೂಜಿ ಯೋಚನೆ ಮಾಡಿ ಹೇಳಬೇಕಲ್ಲ ಹಾಗಾಗಿ ಹೇಳುತ್ತಿದ್ದೀನಿ ಎಂದು ತನ್ನ ಮಾತನ್ನು ಸಮರ್ಥಿಸಿಕೊಂಡರು. ಮ್ಯಾಚ್ ಫಿಕ್ಸಿಂಗ್ ಅಂದರೆ ಏನು ಅಲ್ಲಿ ಕುಳಿತು ಆಡುತ್ತಿರುವವರೆಲ್ಲ ಏನು ಹಾಗಾದ್ರೆ, ಯಾರಿಗೂ ಯೋಗ್ಯತೆ ಇಲ್ವಾ, ಮೋಸ ಮಾಡಿ ಗೆಲ್ತಾ ಇದ್ದಾರಾ ಎಂದು ಸುದೀಪ್ ಖಡಕ್ ಆಗಿ, ಕೇಳಿದ್ದರು. ಸಹಜವಾಗಿ ನಾನು ಹೇಳಿದ್ದು ಎಂದು ಆರ್ಯವರ್ದನ್ ಮತ್ತೆ ಮಧ್ಯೆ ಮಾತಾಡಿದರು. ಇದನ್ನೂ ಓದಿ:`ಬಿಗ್ ಬಾಸ್’ ಖ್ಯಾತಿಯ ವೈಶಾಲಿ ಠಕ್ಕರ್ ಆತ್ಮಹತ್ಯೆ

    ನಿಮ್ಮ ವ್ಯಕ್ತಿತ್ವದ ಮೇಲೆ ಮಾತನಾಡಿದರೆ ಇಷ್ಟು ಉದ್ದ ಮಾತನಾಡುತ್ತೀರಾ. ಈ ವೇದಿಕೆ ಮರ್ಯಾದೆ ತೆಗೆದರೆ ಸತ್ಯವಾಗಿ ಹೇಳ್ತೀನಿ, ನನಗೆ ನಿಮಗೆ ಇಲ್ಲೆ ಕೊನೆಯಾಗುತ್ತೆ ಎಂದು ಸುದೀಪ್ ಖಡಕ್ ವಾರ್ನಿಂಗ್ ನೀಡಿದ್ದಾರೆ. ನಿನ್ನೆಯ ಸಂಚಿಕೆಯಲ್ಲಿ ರೂಪೇಶ್‌, ಸಾನ್ಯಗೆ ಖಡಕ್‌ ಕ್ಲಾಸ್‌ ಸುದೀಪ್ ತೆಗೆದುಕೊಂಡಿದ್ದರು.‌ ಇದೀಗ ಗುರೂಜಿಗೆ ವಾರ್ನ್‌ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರೂಪೇಶ್-ಸಾನ್ಯ ಲವ್‌ಸ್ಟೋರಿಯಲ್ಲಿ ಹೊಸ ಟ್ವಿಸ್ಟ್: ಗುರೂಜಿ ಸೊಸೆಯಂತೆ ಸಾನ್ಯ

    ರೂಪೇಶ್-ಸಾನ್ಯ ಲವ್‌ಸ್ಟೋರಿಯಲ್ಲಿ ಹೊಸ ಟ್ವಿಸ್ಟ್: ಗುರೂಜಿ ಸೊಸೆಯಂತೆ ಸಾನ್ಯ

    ಬಿಗ್ ಬಾಸ್ ಮನೆಯಲ್ಲಿ(Bigg Boss House) ಪ್ರೇಮ ಪಕ್ಷಿಗಳಾಗಿ ಹೈಲೆಟ್ ಆಗಿರುವ ರೂಪೇಶ್(Roopesh Shetty) ಮತ್ತು ಸಾನ್ಯ (Sanya Iyer) ತಮ್ಮ ಸಂಬಂಧಕ್ಕೆ ಹೊಸ ಅರ್ಥ ಕೊಟ್ಟಿದ್ದಾರೆ. ಗುರೂಜಿಯನ್ನು ಅಪ್ಪಾಜಿ ಎಂದು ಕರೆಯುವ ರೂಪೇಶ್ ಶೆಟ್ಟಿ ಇದೀಗ ಸಾನ್ಯ ನಿಮ್ಮ ಸೊಸೆ (Daughter in Law) ಎಂದು ಗುರೂಜಿಗೆ ಹೇಳಿರುವುದು ದೊಡ್ಮನೆಯಲ್ಲಿ ದೊಡ್ಡ ಹೈಪ್ ಕ್ರಿಯೆಟ್ ಮಾಡಿದೆ.

    ದೊಡ್ಮನೆಯಲ್ಲಿ ರೂಪೇಶ್, ಸಾನ್ಯ (Sanya Iyer)  ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಎಂಬ ಅನುಮಾನ ಅನೇಕರಿಗಿದೆ. ಪದೇ ಪದೇ ನಾವು ಬೆಸ್ಟ್ ಫ್ರೆಂಡ್ಸ್ ಎಂದು ಹೇಳುವ ಮೂಲಕ ಗಾಸಿಪ್‌ಗೆ ಫುಲ್ ಸ್ಟಾಪ್ ಇಟ್ಟಿದ್ದು ಇದೆ. ಒಟಿಟಿಯಿಂದ ಶುರುವಾದ ಸಾನ್ಯ, ರೂಪೇಶ್, ಮತ್ತು ಗುರೂಜಿ ಗೆಳೆತನ ಟಿವಿ ಬಿಗ್ ಬಾಸ್‌ನಲ್ಲೂ ಮುಂದುವರೆದಿದೆ. ಇದೀಗ ರೂಪೇಶ್ ಹೊಸ ಬಾಂಬ್ ಸಿಡಿಸಿದ್ದಾರೆ. ಆರ್ಯವರ್ಧನ್ ಗುರೂಜಿ ಅವರನ್ನ ಅಪ್ಪ ಎಂದು ಕರೆಯುವ ರೂಪೇಶ್(Roopesh Shetty) ಇದೀಗ ಗುರೂಜಿ ಅವರ ಸೊಸೆ ಸಾನ್ಯ ಅಯ್ಯರ್ ಎಂದು ಬಿಟ್ಟಿದ್ದಾರೆ. ಇದನ್ನೂ ಓದಿ:ಈ ಮನೆ ಅದಕ್ಕಲ್ಲ; ಮಿತಿ ಮೀರಿದ ರೂಪೇಶ್, ಸಾನ್ಯ ರೊಮ್ಯಾನ್ಸ್‌ಗೆ ಕಿಚ್ಚ ವಾರ್ನಿಂಗ್

    ಅಡುಗೆ ಮನೆಯಲ್ಲಿ ಗುರೂಜಿ, ಸಾನ್ಯ, ರೂಪೇಶ್ ಶೆಟ್ಟಿ, ದಿವ್ಯಾ ಉರುಡುಗ (Divya Uruduga) ಇದ್ದರು. ಇದ್ಯಾರೋ ಒಡೆದು ಹಾಕಿದ್ದಾರೆ ಎಂದು ಗುರೂಜಿ ಹೇಳಿದಾಗ, ನಿಮ್ಮ ಮಗನೇ ರೂಪೇಶ್ ಇನ್ಯಾರು ಎಂದು ಸಾನ್ಯ ಉತ್ತರಿಸುತ್ತಾರೆ. ಆಗ, ಇದನ್ಯಾರು ಕ್ಲೀನ್ ಮಾಡಿದ್ರು ಗೊತ್ತಾ ಅಪ್ಪಾಜಿ ಕ್ಲೀನ್ ಮಾಡಿದ್ದು ನಿಮ್ಮ ಸೊಸೆ ಸಾನ್ಯ ಎನ್ನುತ್ತಾರೆ ರೂಪೇಶ್ ಶೆಟ್ಟಿ. ಬಳಿಕ ಏಯ್ ಸೊಸೆ ಅಂತೆ ಒಪ್ಪಿಕೊಂಡವ್ನೆ, ಸೊಸೆ ಅಂತ ಹೇಳಿದ ಎಂದು ಆರ್ಯವರ್ಧನ್ ಗುರೂಜಿ ಹೇಳುತ್ತಾರೆ. ಆಗ ದಿವ್ಯಾ ಉರುಡುಗ ಕೂಡ ಕಂಗ್ರ‍್ಯಾಟ್ಸ್ ಎನ್ನುತ್ತಾರೆ.

    ನಾನು ಯಾವಾಗ ಅವನ ಹೆಂಡತಿ ಆಗ್ತೀನಿ ಅಂದೆ, ಯಾರು ಪರ್ಮಿಷನ್ ಕೊಟ್ಟಿದ್ದು ಎಂದು ಸಾನ್ಯ ಅಯ್ಯರ್ ಪ್ರಶ್ನಿಸುತ್ತಾರೆ. ಅದಕ್ಕೆ, ತಮಾಷೆಗೆ ಹೇಳಿದ್ದು ನಾನು. ಅವಳು ಜಸ್ಟ್ ಫ್ರೆಂಡ್ ಅಷ್ಟೇ ಎಂದರು ರೂಪೇಶ್ ಶೆಟ್ಟಿ. ನೀನು ನಿನ್ನ ಪಾಡಿಗೆ ಇರಬಹುದಿತ್ತು. ಯಾರು ಪರ್ಮಿಷನ್ ಕೊಟ್ಟಿದ್ದು ಅಂತೆಲ್ಲಾ ಯಾಕೆ ಹೇಳಬೇಕಿತ್ತು. ನಾನು ಹೇಳಿದ್ದು ತಮಾಷೆಗೆ. ಯಾರಾಗ್ತಾರೆ ನಿನ್ನ ಹೆಂಡತಿ ಅಂತೆಲ್ಲಾ ಕೇಳಿದೆ. ನನಗೆ ಇನ್ಸಲ್ಟ್ ಆಗುತ್ತೆ. ನಾನು ಹೇಳಿದ್ದು ತಮಾಷೆಗೆ ಅಷ್ಟೇ ಎಂದು ಬೇಸರದಿಂದ ರೂಪೇಶ್ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮೊನ್ನೆ ತುಟಿ, ಈಗ ಮಚ್ಚೆ ನೋಡಿ ಭವಿಷ್ಯ ಹೇಳಿದ ಆರ್ಯವರ್ಧನ್ ಗುರೂಜಿ

    ಮೊನ್ನೆ ತುಟಿ, ಈಗ ಮಚ್ಚೆ ನೋಡಿ ಭವಿಷ್ಯ ಹೇಳಿದ ಆರ್ಯವರ್ಧನ್ ಗುರೂಜಿ

    ಬಿಗ್ ಬಾಸ್ (Bigg Boss House) ಮನೆಯಲ್ಲಿ ಸಂಖ್ಯೆ ನೋಡಿ ಭವಿಷ್ಯ ಹೇಳುವ ಮೂಲಕ ಹೈಲೆಟ್ ಆಗಿದ್ದ ಆರ್ಯವರ್ಧನ್ ಗುರೂಜಿ ನಂತರ ತುಟಿ, ಹಲ್ಲು, ಮೂಗು ನೋಡಿಯೂ ಭವಿಷ್ಯ ಹೇಳುತ್ತಿದ್ದರು. ಇದೀಗ ಮುಖದ ಮೇಲಿನ ಕಾವ್ಯಶ್ರೀ ಮಚ್ಚೆ ನೋಡಿ, ಗುರೂಜಿ ಭವಿಷ್ಯ ನುಡಿದಿದ್ದಾರೆ.

    ದೊಡ್ಮನೆಯಲ್ಲಿ ಅಡುಗೆ, ಟಾಸ್ಕ್, ತಮ್ಮ ನೇರವಾದ ಮಾತಿನಿಂದ ಈಗಾಗಲೇ ಹೈಲೆಟ್ ಆಗಿರುವ ಗುರೂಜಿ(Aryavardhan Guruji) ಆಗಾಗ ಸ್ಪರ್ಧಿಗಳಿಗೆ ಭವಿಷ್ಯ ನುಡಿಯುತ್ತಾರೆ. ಕಳೆದ ಬಾರಿ ಅಮೂಲ್ಯಗೆ (Amulya Gowda) ತುಟಿ ನೋಡಿ ಭವಿಷ್ಯ ಹೇಳಿದ್ದರು ಇದೀಗ ಮಚ್ಚೆ ನೋಡಿ ಕಾವ್ಯಶ್ರೀ (Kavyashree Gowda) ಭವಿಷ್ಯ ಹೇಳಿರೋದು ನೋಡುಗರ ಗಮನ ಸೆಳೆಯುತ್ತಿದೆ.

    ಬಿಗ್ ಬಾಸ್ (Bigg Boss Kannada)  ಮನೆಯಲ್ಲಿ ಮಚ್ಚೆ ವಿಚಾರವಾಗಿ ಗುರೂಜಿ ಮತ್ತು ಕಾವ್ಯಶ್ರೀ (Kavyashree) ಮಧ್ಯೆ ದೊಡ್ಡ ಚರ್ಚೆ ನಡೆದಿದೆ. ತನ್ನ ಮುಖದ ಮೇಲೆ ಮಚ್ಚೆ ಬಂದಿದೆ ಅಂತಾ ಹೇಳಿದ್ದಕ್ಕೆ ನಿಮ್ಮನ್ನ ತುಂಬಾ ಜನ ಲೈನ್ ಹೊಡೀತಾರೆ ಎಂದು ಗುರೂಜಿ ಭವಿಷ್ಯ ನುಡಿದಿದ್ದಾರೆ. ಎಷ್ಟು ಜನಕ್ಕಾದರೂ ನೀನು ಬೀಳಬಹುದು ಅಥವಾ ನೀನು ಬೀಳಿಸಿಕೊಳ್ಳಬಹುದು. ಅದು ನಿನ್ನ ವೈಯಕ್ತಿಕ ಎಂದು ಗುರೂಜಿ ಹೇಳಿದ್ದಾರೆ. ಇದನ್ನೂ ಓದಿ:‘ಕಾಂತಾರ’ದ ಮೂಗುತಿ ಸುಂದರಿಗೆ ಮೂಗು ಚುಚ್ಚಲು ಹೇಳಿದ್ದು ಅದೇ ಶೆಟ್ರು

    ಓಹ್, ಹೌದಾ ಆಗಲಿ ಬಿಡಿ. ಚೆನ್ನಾಗಿರೋರನ್ನ ನೋಡಿ ಮದುವೆ ಆಗುತ್ತೇನೆ ಎಂದು ಭವಿಷ್ಯ ನುಡಿದಿದ್ದಾರೆ. ಗುರೂಜಿ ಅವರ ಮಚ್ಚೆ ಶಾಸ್ತ್ರಕ್ಕೆ ಕಾವ್ಯಶ್ರೀ ಖುಷಿಯಿಂದಲೇ ಪ್ರತಿಯುತ್ತರ ನೀಡಿದ್ದಾರೆ. ಇನ್ನೂ ಈ ವಾರದ ಟಾಸ್ಕ್‌ನಲ್ಲಿ ನಿಧಿ ಶೋಧಕಿಯಾಗಿ ಕಾವ್ಯಶ್ರೀ ಗುರುತಿಸಿಕೊಂಡಿದ್ದರು. ಟಾಪ್ 3 ಹಂತದವರೆಗೂ ಕ್ಯಾಪ್ಟೆನ್ಸಿಗೆ ಪೈಪೋಟಿ ಕೊಟ್ಟಿದ್ದರು. ಆದರೆ ಕಡೆಯ ಹಂತದಲ್ಲಿ ರೇಸ್‌ನಿಂದ ಹೊರಬಿದ್ದರು.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಆಟಕ್ಕೆ ಫುಲ್ ಸ್ಟಾಪ್ ಇಡಲು ನಿರ್ಧರಿಸಿದ ಆರ್ಯವರ್ಧನ್ ಗುರೂಜಿ

    ಬಿಗ್ ಬಾಸ್ ಆಟಕ್ಕೆ ಫುಲ್ ಸ್ಟಾಪ್ ಇಡಲು ನಿರ್ಧರಿಸಿದ ಆರ್ಯವರ್ಧನ್ ಗುರೂಜಿ

    ಬಿಗ್ ಬಾಸ್ ಮನೆಯಲ್ಲಿ(Bigg Boss House) ಪ್ರತಿ ಸ್ಪರ್ಧಿ ಕೂಡ ಒಂದಲ್ಲಾ ಒಂದು ವಿಚಾರವಾಗಿ ಸೌಂಡ್ ಮಾಡುತ್ತಿದ್ದಾರೆ. ಗುರೂಜಿ ಇರುವ ನೋಡಿ ಹೀಯಾಳಿಸಿದ್ದ ಮನೆಮಂದಿಯ ಮುಂದೆ ತಾನೆಂತಹ ಗಟ್ಟಿ ಸ್ಪರ್ಧಿ ಎಂಬುದನ್ನ ಓಟಿಟಿಯಲ್ಲಿ ತೋರಿಸಿಕೊಟ್ಟಿದ್ದರು. ಸಾಕಷ್ಟು ಜಟಾಪಟಿ ಮಧ್ಯೆ ಇದೀಗ ಗುರೂಜಿ ಕ್ಯಾಪ್ಟನ್ ಆಗಿದ್ದಾರೆ. ಆದರೀಗ ರೂಪೇಶ್‌ಗೆ (Roopesh Shetty)  ಮನೆಯಿಂದ ಹೋಗುವುದಾಗಿ ಅಳಲು ತೋಡಿಕೊಂಡಿದ್ದಾರೆ.

    ಅಡುಗೆ, ಆಟ, ಮಾತು ಎಲ್ಲದರಲ್ಲೂ ಮಾಸ್ಟರ್ ಮೈಂಡ್ ಆಗಿರುವ ಆರ್ಯವರ್ಧನ್ ಗುರೂಜಿಗೆ(Aryavardhan Guruji) ಬಿಗ್ ಬಾಸ್ ಮನೆ ಸಾಕಾಗಿದೆಯಂತೆ. ತಮ್ಮ ನೇರ ಮಾತಿನ ಮೂಲಕ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿರುವ ಗುರೂಜಿಗೆ ಅದೇನು ಕಾಡ್ತಿದೆಯೋ ತಮ್ಮ ಮನೆಯತ್ತ ಹೋಗಲು ಮನಸ್ಸು ಮಾಡಿದ್ದಾರೆ. ದೊಡ್ಮನೆಯ ಆಟಕ್ಕೆ ಅಂತ್ಯ ಹಾಡಿ, ಮಗಳನ್ನ ನೋಡುವ ತವಕ ಜಾಸ್ತಿ ಆಗಿದೆ. ಇದೀಗ ಬಿಗ್ ಮನೆಯಿಂದ ಹೊರ ಹೋಗುವುದಾಗಿ ರೂಪೇಶ್ ಶೆಟ್ಟಿ ಬಳಿ ಗುರೂಜಿ ಹೇಳಿಕೊಂಡಿದ್ದಾರೆ.

    ಈಗ ಮೂರನೇ ವಾರದತ್ತ ಮುನ್ನುಗ್ಗುತ್ತಿರುವ ದೊಡ್ಮನೆಯಲ್ಲಿ ಗುರೂಜಿ ಅವರು ಕ್ಯಾಪ್ಟನ್ ಆಗಿದ್ದಾರೆ. ನಾಮಿನೇಷನ್ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ. ಹಾಗಾಗಿ ಅವರ ಹೆಸರನ್ನು ನಾಮಿನೇಷನ್‌ಗೆ ತೆಗೆದುಕೊಳ್ಳುವಂತಿರಲಿಲ್ಲ. ಈ ವಾರ ರೂಪೇಶ್ ರಾಜಣ್ಣ, ಪ್ರಶಾಂತ್ ಸಂಬರ್ಗಿ, ದರ್ಶ್ ಚಂದ್ರಪ್ಪ, ದಿವ್ಯಾ ಉರುಡುಗ, ಮಯೂರಿ, ಗೊಬ್ಬರಗಾಲ, ದೀಪಿಕಾ, ರೂಪೇಶ್ ಶೆಟ್ಟಿ, ಅಮೂಲ್ಯ ಹಾಗೂ ಅನುಪಮಾ ಅವರು ನಾಮಿನೇಷನ್ ಲಿಸ್ಟ್‌ನಲ್ಲಿದ್ದಾರೆ. ಇನ್ನು ವೋಟ್ ಪಡೆದ ಒಬ್ಬರು ಮನೆಯಿಂದ ಹೊರ ಹೋಗಲಿದ್ದಾರೆ. ಆದರೆ, ಈ ವಾರ ಗುರೂಜಿ ತಾವು ಮನೆಯಿಂದ ಹೊರ ಹೋಗಲು ನಿರ್ಧರಿಸಿದ್ದಾರೆ. ಇದನ್ನೂ ಓದಿ:`ಪುನೀತ ಪರ್ವ’ ಕಾರ್ಯಕ್ರಮಕ್ಕೆ ಸಿಎಂಗೆ ಆಹ್ವಾನ ನೀಡಿದ ಅಣ್ಣಾವ್ರ ಕುಟುಂಬ

    ಈ ವಾರ ನನ್ನನ್ನು ಕಳಿಸಿಕೊಡಿ ಅಂತ ಕೇಳ್ತೀನಿ ಎಂದು ಗುರೂಜಿ, ರೂಪೇಶ್ ಬಳಿ ಹೇಳಿಕೊಂಡಿದ್ದಾರೆ. ಆರಾಮಾಗಿ ಇದೀರಲ್ಲ. ಮತ್ಯಾಕೆ ಹೋಗೋ ಚಿಂತೆ ನಿಮಗೆ ಈಗ ಮನೆಯಿಂದ ಔಟ್ ಆದ್ರೆ ಮತ್ತೆ ನೀವು ಬರೋಕೆ ಆಗಲ್ಲ ಎಂದು ಹೇಳಿದರು ರೂಪೇಶ್. ಆಯ್ಕೆ ಇದ್ರೆ ಕಳಿಸಿಕೊಡಿ ಎಂದು ಕೇಳ್ತಿನಿ. ಹಾಗೆ ಆಯ್ಕೆ ಇಲ್ಲ ಅಂದ್ರೆ ಇಲ್ಲೇ ಮುಂದುವರಿಯುತ್ತೀನಿ. ನಾನು ಮನೆಯಿಂದ ಹೊರಹೋಗಬೇಕು. ಇಲ್ಲಿಗೆ ಬಂದು ಏನು ಆಗಬೇಕಿಲ್ಲ. 10 ವಾರ ಇದ್ರೂ ನನ್ನ ವ್ಯಕ್ತಿತ್ವ ಇರೋದು ಹೀಗೆ. ಇಷ್ಟು ದಿನ ಇದ್ದಿದ್ದು ಖುಷಿ ನೀಡಿದೆ ಎಂದು ಗುರೂಜಿ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗುರೂಜಿಗೆ ಸಹಾಯ ಮಾಡಿದ ರೂಪೇಶ್ ಶೆಟ್ಟಿ- ರಾಕೇಶ್‌ಗೆ ಕಿಚ್ಚನ ಖಡಕ್ ಕ್ಲಾಸ್

    ಗುರೂಜಿಗೆ ಸಹಾಯ ಮಾಡಿದ ರೂಪೇಶ್ ಶೆಟ್ಟಿ- ರಾಕೇಶ್‌ಗೆ ಕಿಚ್ಚನ ಖಡಕ್ ಕ್ಲಾಸ್

    ಬಿಗ್ ಬಾಸ್(Bigg Boss) ಮನೆಯ ರಂಗು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮನೆಯ ಆಟ ಮತ್ತಷ್ಟು ಕ್ಲಿಷ್ಟಕರವಾಗುತ್ತಿದೆ. ಇನ್ನೂ ಮನೆಯ ಕ್ಯಾಪ್ಟನ್ ಆಗಲು ಸಹಾಯ ಮಾಡಿದ್ದ ರೂಪೇಶ್(Roopesh Shetty) ಮತ್ತು ರಾಕೇಶ್‌ಗೆ (Rakesh Adiga) ಸುದೀಪ್ ಕೂಡ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ದೊಡ್ಮನೆಯಲ್ಲಿ ತಮ್ಮ ನೇರ ಮಾತಿನ ಮೂಲಕ ಗುರುತಿಸಿಕೊಂಡಿರುವ ಆರ್ಯವರ್ಧನ್ ಗುರೂಜಿ ತಾವು ಕ್ಯಾಪ್ಟನ್ ಆಗಿ ಕಾಣಿಸಿಕೊಳ್ಳಬೇಕು ಎಂದು ಮಹಾದಾಸೆಯಿತ್ತು. ಅದರಂತೆ ಮೂರನೇ ವಾರದ ಕ್ಯಾಪ್ಟನ್ ಆಗಿ ಗುರುತಿಸಿಕೊಂಡಿದ್ದಾರೆ. ಕ್ಯಾಪ್ಟನ್ ಆಗುವ ಮುಂಚೆ ಗುರೂಜಿ ಆಡಿದ ರೀತಿಗೆ ಮನೆಯವರಿಂದ ಆಕ್ಷೇಪ ವ್ಯಕ್ತವಾಗಿತ್ತು. ಕ್ಯಾಪ್ಟನ್ ಆಗಲು ನೀಡಿದ್ದ ಟಾಸ್ಕ್‌ನಲ್ಲಿ ಗುರೂಜಿಗೆ ರೂಪೇಶ್ ಮತ್ತು ರಾಕೇಶ್ ಸಹಾಯ ಮಾಡಿರುವುದು ಎಷ್ಟು ಸರಿ ಎಂಬುದನ್ನ ವಾರದ ಪಂಚಾಯಿತಿಯಲ್ಲಿ ಕಿಚ್ಚನ ಜೊತೆ ಚರ್ಚೆ ಕೂಡ ಆಗಿದೆ. ಇದನ್ನೂ ಓದಿ:ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಅಪ್ಪು ಕಪ್ ಸ್ಯಾಂಡಲ್ ವುಡ್ ಬ್ಯಾಡ್ಮಿಂಟನ್ ಲೀಗ್

    ವಾರಾಂತ್ಯದ ಏಪಿಸೋಡ್‌ನಲ್ಲಿ ಸುದೀಪ್ ಕೂಡ ಗುರೂಜಿಗೆ ಸಹಾಯ ಮಾಡಿರುವ ಬಗ್ಗೆ ರೂಪೇಶ್ ಮತ್ತು ರಾಕೇಶ್‌ಗೆ ಪ್ರಶ್ನೆ ಮಾಡಿದ್ದಾರೆ. ಅವರು ಯಾವಗಲೂ ಗೊಂದಲದ ಮನಸ್ಥಿತಿ ಇರುವ ಕಾರಣ. ಕೆಲವೊಂದು ಅರ್ಥವಾಗದ ಕಾರಣ ನಾವು ಸಹಾಯ ಮಾಡಿದ್ವಿ ಎಂದು ಇಬ್ಬರು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಗುರೂಜಿ ಅವರನ್ನ ಕೇಳಿದಾಗ ನಾನು ನನ್ನ ಸ್ವಂತ ಆಲೋಚನೆಯಿಂದ ಆಟ ಆಡಿದೆ. ರೂಪೇಶ್, ರಾಕೇಶ್ ಹೇಳಿದ್ದನ್ನ ಕೇಳಿ ಆಟ ಆಡಲಿಲ್ಲ ಎಂದು ಹೇಳಿದ್ದಾರೆ. ಚಂದ್ರನನ್ನು ನೋಡಿ ಆಟ ಪೂರ್ಣಗೊಳಿಸಿದೆ ಎಂದು ಗುರೂಜಿ ಹೇಳಿದ್ದಾರೆ.

    ಗುರೂಜಿ ಮಾತು ಕೇಳಿ, ಸುದೀಪ್ ಕೂಡ ರೂಪೇಶ್ ಮತ್ತು ರಾಕೇಶ್‌ಗೆ ಕೇಳಿದ್ದಾರೆ. ಇದು ನಿಮಗೆ ಬೇಕಿತ್ತಾ ಎಂದು ಮರು ಪ್ರಶ್ನೇ ಮಾಡಿದ್ದಾರೆ. ಬಳಿಕ ತಮ್ಮ ತಪ್ಪಿಗೆ ಇಬ್ಬರೂ ಕ್ಷಮೆ ಕೇಳಿದ್ದಾರೆ. ಆರ್ಯವರ್ಧನ್ ಗುರೂಜಿ ಅವರ ನಡೆ ಎಲ್ಲರ ಬೇಸರಕ್ಕೆ ಕಾರಣವಾಗಿದೆ.

    Live Tv
    [brid partner=56869869 player=32851 video=960834 autoplay=true]