Tag: Aryavardhan Guruji

  • ಸುದೀಪ್‌ಗೆ ಆ್ಯಕ್ಷನ್ ಕಟ್ ಹೇಳ್ತಾರಂತೆ ಆರ್ಯವರ್ಧನ್ ಗುರೂಜಿ

    ಸುದೀಪ್‌ಗೆ ಆ್ಯಕ್ಷನ್ ಕಟ್ ಹೇಳ್ತಾರಂತೆ ಆರ್ಯವರ್ಧನ್ ಗುರೂಜಿ

    ಬಿಗ್ ಬಾಸ್ ಮನೆಯ (Bigg Boss House) ಆಟ ಇದೀಗ ಕಡೆಯ ಘಟ್ಟದಲ್ಲಿದೆ. ಫಿನಾಲೆಗೆ ಕೆಲವೇ ದಿನಗಳು ಬಾಕಿಯಿದೆ. ಹೀಗಿರುವಾಗ ಕಿಚ್ಚನ ಪಂಚಾಯಿತಿಯಲ್ಲಿ ಆರ್ಯವರ್ಧನ್ ಗುರೂಜಿ(Aryavardan Guruji), ಸುದೀಪ್‌ಗೆ (Sudeep) ಸಿನಿಮಾ ಮಾಡುವುದಾಗಿ ಹೇಳಿದ್ದಾರೆ. ಕಿಚ್ಚನಿಗಾಗಿಯೇ ಬಿಗ್ ಬಾಸ್ ಮನೆಯಲ್ಲಿ ಕಥೆ ಬರೆದಿದ್ದೇನೆ ಎಂದು ಮಾತನಾಡಿದ್ದಾರೆ.

    ಕಿಚ್ಚನನ್ನು ನೋಡಲು ವೀಕೆಂಡ್‌ಗಾಗಿ ಕಾದು ಕೂರುವ ಅಭಿಮಾನಿಗಳಿದ್ದಾರೆ. ವಾರಾಂತ್ಯದ ಪಂಚಾಯಿತಿಯಲ್ಲಿ ಈ ವೇಳೆ ಇಂಟರೆಸ್ಟಿಂಗ್ ಮಾಹಿತಿಯೊಂದು ಹೊರಬಿದ್ದಿದೆ. ನಿಮಗಾಗಿ ಒಂದು ಕಥೆ ಬರೆದಿದ್ದೇನೆ. ನೀವು ನಟಿಸಬೇಕು ಎಂದು ಗುರೂಜಿ ಕೇಳಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ನಿರ್ಮಾಪಕ ಕೆ.ಪಿ ಶ್ರೀಕಾಂತ್ (K.p Srikanth) ಜೊತೆ ಬಂದು ನಿಮ್ಮನ್ನ ಭೇಟಿ ಮಾಡುತ್ತೇನೆ. ಕಥೆ ಹೇಳುತ್ತೇನೆ ಎಂದು ಸುದೀಪ್‌ಗೆ ಹೇಳಿದ್ದಾರೆ. ಇದನ್ನೂ ಓದಿ: ನಾನು ಪಠಾಣ್ ಸಿನಿಮಾ ನೋಡುತ್ತೇನೆ: ಬಹಿರಂಗವಾಗಿ ಘೋಷಿಸಿಕೊಂಡ ನಟ ಪ್ರಕಾಶ್ ಬೆಳವಾಡಿ

    ನನ್ನ ಕಥೆಯಲ್ಲಿ ನೀವು ನಟಿಸಬೇಕು ಎಂದು ಮನವಿ ಮಾಡಿದ್ದಾರೆ. 300 ಕೋಟಿ ಬಜೆಟ್‌ನಲ್ಲಿ ಸಿನಿಮಾ ಮಾಡುತ್ತೇವೆ. ಇದೊಂದು ದೆವ್ವದ ಕಥೆಯಾಗಿದ್ದು, ಹೀರೋನೂ ನೀವೇ, ದೆವ್ವನೂ ನೀವೇ ಎಂದು ಗುರೂಜಿ ಹೇಳಿದ್ದಾರೆ. ಗುರೂಜಿ ಒನ್‌ಲೈನ್ ಸ್ಟೋರಿಗೆ ಸುದೀಪ್ ಕಿರುನಗೆ ಬೀರಿದ್ದಾರೆ. ಇವರಿಬ್ಬರ ಮಾತುಕಥೆ ಮನೆಮಂದಿಗೆ ಖುಷಿ ಕೊಟ್ಟಿದೆ. ಒಟ್ಟಿನಲ್ಲಿ ಇವರಿಬ್ಬರು ಒಟ್ಟಿಗೆ ಸಿನಿಮಾ ಮಾಡ್ತಾರಾ, ಶೋನಲ್ಲಿ ಇದು ಮಾತುಕಥೆಗಷ್ಟೇನಾ ಎಂಬುದನ್ನ ಮುಂದಿನ ದಿನಗಳಲ್ಲಿ ಕಾದುನೋಡಬೇಕಿದೆ.

    ಇನ್ನೂ ಗುರೂಜಿ ಸೇಫ್ ಆಗಿ ಬಿಗ್ ಬಾಸ್ ಮನೆಯಲ್ಲಿ ತಮ್ಮ ಆಟ ಮುಂದುವರೆಸಿದರೆ, ಅನುಪಮಾ ಗೌಡ ಈ ವಾರ ಎಲಿಮಿನೇಟ್ ಆಗಿ ಮನೆಯಿಂದ ಹೊರನಡೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನನ್ನ ಮನಸಾಕ್ಷಿ ಒಪ್ಪುತ್ತಿಲ್ಲ: ಗುರೂಜಿಗೆ ಕಳಪೆ ಎಂದ ಅಮೂಲ್ಯ

    ನನ್ನ ಮನಸಾಕ್ಷಿ ಒಪ್ಪುತ್ತಿಲ್ಲ: ಗುರೂಜಿಗೆ ಕಳಪೆ ಎಂದ ಅಮೂಲ್ಯ

    ಬಿಗ್ ಬಾಸ್ ಮನೆಯ(Bigg Boss House) ಆಟ 12 ವಾರಗಳು ಪೂರ್ಣಗೊಂಡಿದೆ. ಫಿನಾಲೆ ಇನ್ನೂ ಕೆಲವೇ ದಿನಗಳು ಬಾಕಿಯಿದ್ದು, ಈಗಾಗಲೇ ಸ್ಪರ್ಧಿಗಳಿಗೆ ಕೌಂಟ್‌ಡೌನ್ ಶುರುವಾಗಿದೆ. ಇದೀಗ ದೊಡ್ಮನೆಯಲ್ಲಿ ಅಮೂಲ್ಯ ಗೌಡ ತನಗೆ ಕಳಪೆ ಕೊಡಲು ಮನಸಾಕ್ಷಿ ಒಪ್ಪುತ್ತಿಲ್ಲ ಎಂದು ಆರ್ಯವರ್ಧನ್ ಗುರೂಜಿಗೆ (Aryavardhan Guruji) ಕಳಪೆ ಕೊಟ್ಟಿದ್ದಾರೆ. ಅಮೂಲ್ಯ (Amulya Gowda) ಮಾತಿಗೆ ಗುರೂಜಿ ಬೇಸರ ಹೊರಹಾಕಿದ್ದಾರೆ.

    ಪ್ರತಿವಾರವೂ ಕೂಡ ಬಿಗ್ ಬಾಸ್ ಮನೆಯಲ್ಲಿ ಉತ್ತಮ ಮತ್ತು ಕಳಪೆಯನ್ನು ಸ್ಪರ್ಧಿಗಳಿಗೆ ಕೊಡಲಾಗುತ್ತದೆ. ಈ ವಾರವೂ ಕೂಡ ಉತ್ತಮ ಮತ್ತು ಕಳಪೆ ಹೆಸರನ್ನ ಸೂಚಿಸಲಾಗಿದೆ. ರೂಪೇಶ್ ಶೆಟ್ಟಿ (Roopesh Shetty) ಕ್ಯಾಪ್ಟನ್ ಆಗಿ ಮನೆಯನ್ನ ಉತ್ತಮವಾಗಿ ನಿಭಾಯಿಸಿದ್ದರು ಎಂಬ ಕಾರಣಕ್ಕೆ ರೂಪೇಶ್‌ಗೆ ಉತ್ತಮ ಕೊಡಲಾಗಿದೆ. ಹಾಗೆಯೇ ಗುರೂಜಿಗೆ ಕಳಪೆ ನೀಡಲಾಗಿದೆ. ಈ ವಾರ ಗುರೂಜಿ ಜೈಲಿಗೆ ತೆರಳಿದ್ದಾರೆ. ಇದನ್ನೂ ಓದಿ: ದೀಪಿಕಾ ಪಡುಕೋಣೆ ಆಯ್ತು, ಈಗ ಕಂಗನಾ ರಣಾವತ್‌ಗೂ ಕೇಸರಿ ಕಂಟಕ

    ಈ ಕಳಪೆಗೆ ಹೆಸರನ್ನ ಸೂಚಿಸಲು ಮೊದಲು ಅಮೂಲ್ಯ ಗೌಡ (Amulya Gowda) ಹಾಗೂ ಅರುಣ್ ಸಾಗರ್ (Arun Sagar) ತಕರಾರು ಮಾಡಿದರು. ಆ ನಂತರ ಅರುಣ್ ಸಾಗರ್ ಅವರು ಗುರೂಜಿ ಹೆಸರನ್ನ ಕಳಪೆಗೆ ಸೂಚಿಸಿದರು. ಇದು ಆಟದ ಫಾರ್ಮ್ಯಾಟ್ ಕಳಪೆಗೆ ಹೆಸರು ಹೇಳಲೇಬೇಕು ಎಂದು ಎಲ್ಲರೂ ಹೇಳಿದ ಬಳಿಕ ನನ್ನ ಮನಸಾಕ್ಷಿ ಒಪ್ಪುತ್ತಿಲ್ಲ. ನನಗೆ ನಾನೇ ಕಳಪೆ ಹೆಸರು ಹೇಳಲೇಬೇಕು ಎಂಬ ಕಾರಣಕ್ಕೆ ಗುರೂಜಿ ಹೆಸರು ಹೇಳುತ್ತಿದ್ದೇನೆ. ಆದರೆ, ಅವರು ನಿಜವಾಗಿಯೂ ಕಳಪೆ ಅಲ್ಲ ಎಂದು ಅಮೂಲ್ಯ ಹೇಳಿದ್ದಾರೆ.

    ಐ ಆಮ್ ಸಾರಿ ಬಿಗ್ ಬಾಸ್ ನಿಮಗೆ ನಾನು ಅಗೌರವ ತೋರುತ್ತಿಲ್ಲ. ಫಾರ್ಮ್ಯಾಟ್‌ಗೆ ಅಗೌರವ ತೋರುತ್ತಿಲ್ಲ. ನನಗೆ ಕಳಪೆ ಕಾಣಿಸುತ್ತಿಲ್ಲ. ಹೀಗಾಗಿ ಕಳಪೆ ಕೊಡೋದಕ್ಕೆ ನನ್ನ ಮನಸಾಕ್ಷಿ ಒಪ್ಪುತ್ತಿಲ್ಲ. ನನಗೆ ಶಿಕ್ಷೆ ಕೊಟ್ಟರೆ ನಾನೂ ತೆಗೆದುಕೊಳ್ಳೋಕೆ ರೆಡಿ ಇದ್ದೇನೆ. ಇದು ರಿಯಾಲಿಟಿ, ಫಾರ್ಮ್ಯಾಟ್ ಪ್ರಕಾರ ಮಾಡಲೇಬೇಕು ಎಂದು ಇತರರು ಹೇಳಿದಾಗ, ನನಗೆ ಫೋರ್ಸ್ ಮಾಡ್ತಿದ್ದೀರಾ. ಉತ್ತಮಗೆ ಕಾರಣ ಇದೆ. ಕಳಪೆಗೆ ಕಾರಣ ಸಿಗುತ್ತಿಲ್ಲ. ನನಗೆ ನಾನೇ ಕಳಪೆ ಹೇಳಲು ಮನಸಾಕ್ಷಿ ಒಪ್ಪಿಕೊಂಡಿಲ್ಲ. ಆರ್ಯವರ್ಧನ್ ಗುರೂಜಿ ನಿಜವಾಗಿಯೂ ಕಳಪೆ ಅಲ್ಲ. ಒಂದು ಹೆಸರು ಹೇಳಬೇಕಾಗಿರೋದ್ರಿಂದ ಹೇಳ್ತಿದ್ದೇನೆ ಅಷ್ಟೇ ಎಂದರು ಅಮೂಲ್ಯ ಗೌಡ.

    Live Tv
    [brid partner=56869869 player=32851 video=960834 autoplay=true]

  • ದೀಪಿಕಾರನ್ನ ಎತ್ತಿಕೊಂಡು ಕುಣಿದಾಡಿದ ಆರ್ಯವರ್ಧನ್ ಗುರೂಜಿ

    ದೀಪಿಕಾರನ್ನ ಎತ್ತಿಕೊಂಡು ಕುಣಿದಾಡಿದ ಆರ್ಯವರ್ಧನ್ ಗುರೂಜಿ

    ಬಿಗ್ ಬಾಸ್ ಮನೆ (Bigg Boss House) ಸದಾ ಹೊಸ ಬಗೆಯ ಟಾಸ್ಕ್ ಮೂಲಕ ವೀಕ್ಷಕರಿಗೆ ಮನರಂಜನೆಯ ರಸದೌತಣ ನೀಡುತ್ತಿದೆ. ಇದೀಗ ಈ ವಾರದ ಟಾಸ್ಕ್‌ನಲ್ಲಿ ಮನೆ ಮಂದಿ ಹಾಡುತ್ತಲೇ ಭಾವುಕರಾಗಿದ್ದಾರೆ. ಹಾಗೆಯೇ ಎಂಜಾಯ್ ಕೂಡ ಮಾಡಿದ್ದಾರೆ. ಸದ್ಯ ದೀಪಿಕಾ ದಾಸ್‌ರನ್ನ (Deepika Das) ಎತ್ತಿ ಗುರೂಜಿ ಕುಣಿದಾಡಿದ್ದಾರೆ.

    ದೀಪಿಕಾ ಎಲಿಮಿನೇಷನ್ ನಂತರ ಮತ್ತೆ ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಹೊಸ ಅವರ ಆಟ, ನೋಟ, ಮಾತನಾಡುವ ಶೈಲಿ, ಮನೆಯವರೊಂದಿಗೆ ಬೆರೆಯುವ ರೀತಿ ಎಲ್ಲವೂ ಬದಲಾಗಿದೆ. ಈ ವಾರದ ಟಾಸ್ಕ್‌ನಲ್ಲಿ ಮ್ಯೂಸಿಕ್ ಗುರುತಿಸಿ ಯಾವ ಹಾಡು ಎಂದು ಹೇಳುವ ಟಾಸ್ಕ್‌ನಲ್ಲಿ ದೀಪಿಕಾ ಆಕ್ಟೀವ್ ಆಗಿ ಮನೆಯವರೊಂದಿಗೆ ಬೆರೆತಿದ್ದಾರೆ. ಗುರೂಜಿ (Aryavardhan Guruji) ಜೊತೆ ಮಸ್ತ್ ಆಗಿ ದೀಪಿಕಾ ಹೆಜ್ಜೆ ಹಾಕಿದ್ದಾರೆ.

    ʻನೀನೆಂದರೆ ನನ್ನೋಳಗೆʼ ಎಂಬ ಹಾಡಿಗೆ ಸೂಪರ್ ಆಗಿ ದೀಪಿಕಾ ದಾಸ್ ಹೆಜ್ಜೆ ಹಾಕಿದ್ದಾರೆ. ಆರ್ಯವರ್ಧನ್ ಗುರೂಜಿ ಜೊತೆ ಡ್ಯಾನ್ಸ್ ಮಾಡುತ್ತಾ ಮಿಂಚಿದ್ದಾರೆ. ಈ ವೇಳೆ ಗುರೂಜಿ ಕೂಡ ದೀಪಿಕಾರನ್ನ ಎತ್ತಿಕೊಂಡು ಕುಣಿದಾಡಿದ್ದಾರೆ. ಇದು ಶೋನಲ್ಲಿ ಮತ್ತಷ್ಟು ಹೈಲೈಟ್ ಆಗಿದೆ. ಇದನ್ನೂ ಓದಿ: ಸಾನ್ಯ ನೆನಪಲ್ಲಿ ಬಿಟ್ಟೋಗ್ಬೇಡ ಎಂದು ಭಾವುಕರಾದ ರೂಪೇಶ್ ಶೆಟ್ಟಿ

    ಯಾರ ಜೊತೆನೂ ಬೆರೆಯದ ದೀಪಿಕಾ ದಾಸ್ ಇದೀಗ ಈ ಹೊಸ ಬದಲಾವಣೆ ಮನೆಯವರಿಗೆ ಅಚ್ಚರಿ ಮೂಡಿಸಿದೆ. ಜೊತೆಗೆ ಹಾಡಿಗೆ ಮಸ್ತ್ ಆಗಿ ಡ್ಯಾನ್ಸ್ ಮಾಡುತ್ತಾ ತಾವೂ ಎಂಜಾಯ್ ಮಾಡಿದ್ದಾರೆ. ಗುರೂಜಿಗೆ ಸಾಥ್ ನೀಡುತ್ತಾ ದೀಪಿಕಾ ಕುಣಿದಿರೋದು ಪ್ರೇಕ್ಷಕರಿಗೂ ಮನರಂಜನೆ ಕೊಟ್ಟಿದೆ.

    Live Tv
    [brid partner=56869869 player=32851 video=960834 autoplay=true]

  • ರೂಪೇಶ್ ರಾಜಣ್ಣ – ಗುರೂಜಿ ಜಟಾಪಟಿ: ಸಂಬರ್ಗಿ ಗಪ್‌ಚುಪ್

    ರೂಪೇಶ್ ರಾಜಣ್ಣ – ಗುರೂಜಿ ಜಟಾಪಟಿ: ಸಂಬರ್ಗಿ ಗಪ್‌ಚುಪ್

    ಬಿಗ್ ಬಾಸ್ ಮನೆಯ(Bigg Boss House) ಆಟ ರೋಚಕ ತಿರುವುಗಳನ್ನ ಪಡೆದು ಮುನ್ನುಗ್ಗುತ್ತಿದೆ. ಈಗಾಗಲೇ 2 ತಿಂಗಳು ಪೂರೈಸಿರುವ ದೊಡ್ಮನೆಯ ಆಟದಲ್ಲಿ ಅಳಿವು ಉಳಿವಿನ ಪ್ರಶ್ನೆ ಶುರುವಾಗಿದೆ. ಯಾರು ಯಾರನ್ನು ಉಳಿಸಿದ್ದು ಎಂದು ವಾದ ಪ್ರತಿವಾದ ನಡೆದಿದೆ. ಈ ವೇಳೆ ಗುರೂಜಿ ಮೇಲೆ ರೂಪೇಶ್ ರಾಜಣ್ಣ (Roopesh Rajanna) ರಾಂಗ್ ಆಗಿದ್ದಾರೆ.

    ವಿನೋದ್ ಗೊಬ್ಬರಗಾಲ (Vinod Gobbaragala) ಎಲಿಮಿನೇಷನ್ ನಂತರ ಈ ವಾರ ಮತ್ತೊಬ್ಬ ಸ್ಪರ್ಧಿಗೆ ದೊಡ್ಮನೆಯಿಂದ ಗೇಟ್ ಪಾಸ್ ಸಿಗಲಿದೆ. ಈ ಬೆನ್ನಲ್ಲೇ ಯಾರಿಂದ ಯಾರು ಉಳಿದರು ಎಂಬ ಈ ಚರ್ಚೆಯೇ ಮನೆಯ ಜಗಳಕ್ಕೆ ಕಾರಣವಾಗಿದೆ. ರೂಪೇಶ್ ರಾಜಣ್ಣಗೆ ಉಳುವಿಗೆ ಯಾರು ಕಾರಣ ಎಂದು ಗುರೂಜಿ ಚರ್ಚೆ ಮಾಡಿದ್ದಾರೆ. ಈ ವೇಳೆ ನಿಮಗೆ ತಲೆಯಲ್ಲಿ ಕೂದಲು ಇಲ್ಲಾ ಅಂತಾ ಗೊತ್ತಿತ್ತು ಬುದ್ಧಿನು ಇಲ್ಲಾ ಎಂದು ಗುರೂಜಿ(Aryavardhan Guruji) ವಿರುದ್ಧ ರಾಜಣ್ಣ ಕಿಡಿಕಾರಿದ್ದಾರೆ. ಇದನ್ನೂ ಓದಿ: ಸ್ಟಾರ್ ನಟಿಯರಿಗೆ ಸೆಡ್ಡು ಹೊಡೆದು ತೆಲುಗಿನ 7 ಚಿತ್ರಗಳಿಗೆ ಸಹಿ ಹಾಕಿದ ಶ್ರೀಲೀಲಾ

    ರೂಪೇಶ್ ರಾಜಣ್ಣ ಉಳಿಯಲು ತಾನೇ ಕಾರಣ ಎಂಬ ಅರ್ಥದಲ್ಲಿ ಗುರೂಜಿ ರಾಜಣ್ಣಗೆ ಟಾಂಗ್ ಕೊಟ್ಟಿದ್ದಾರೆ. ಒಬ್ಬರಿಂದ ಒಬ್ಬರು ಉಳಿದರು ಎಂಬ ಮಾತನ್ನ ನೀವು ಮೊದಲು ವಾಪಸ್ ತೆಗೆದುಕೊಳ್ಳಿ ಎಂದು ರಾಜಣ್ಣ, ಗುರೂಜಿಗೆ ಹೇಳಿದ್ದಾರೆ. ನೀವು ಹೇಳಿದನ್ನ ನಾನ್ಯಾಕೆ ಒಪ್ಪಿಕೊಳ್ಳಬೇಕು. ತಲೆಯಲ್ಲಿ ಗೊಬ್ಬರ ಇದ್ದರೆ ಯೋಚನೆ ಮಾಡಿ ಎಂದು ಗುರೂಜಿ ಟಾಂಗ್ ಕೊಟ್ಟಿದ್ದಾರೆ. ಇಲ್ಲಿ 12 ಜನ ಸಮಾನರು ಯಾರಿಂದ ಯಾರು ಉಳಿದಿಲ್ಲ ಎಂದು ರಾಜಣ್ಣ ವಾದ ಮಾಡಿದ್ದಾರೆ. ನಿಮ್ಮ ತಲೆಯಲ್ಲಿ ಕೂದಲು ಇಲ್ಲಾ ಅಂದುಕೊಂಡಿದ್ವಿ, ಈಗ ಬುದ್ಧಿನೂ ಇಲ್ಲಾ ಅಂತಾ ಗೊತ್ತಾಯ್ತು ಎಂದು ಗುರೂಜಿಗೆ ರಾಜಣ್ಣ ಟಾಂಗ್ ಕೊಟ್ಟಿದ್ದಾರೆ.

    ಸ್ಪರ್ಧಿಗಳಿಗೆ ತನ್ನ ಮನೆಯವರು ಬಂದು ಸರ್ಪ್ರೈಸ್ ಕೊಟ್ಟಿರುವ ಬೆನ್ನಲ್ಲೇ ರಾಜಣ್ಣ, ಗುರೂಜಿ ಅವರ ಅಳಿವು ಉಳಿವಿನ ವಾದ ವಿವಾದ ಮನೆಮಂದಿಗೆ ತಲೆನೋವು ತಂದಿದೆ.

    Live Tv
    [brid partner=56869869 player=32851 video=960834 autoplay=true]

  • ಹೆಂಡ್ತಿ ನೆನಪು ಮಾಡಿಸಿದ್ದಕ್ಕೆ ರಾಜಣ್ಣ, ರೂಪೇಶ್‌ನನ್ನು ಅಟ್ಟಾಡಿಸಿದ ಗುರೂಜಿ

    ಹೆಂಡ್ತಿ ನೆನಪು ಮಾಡಿಸಿದ್ದಕ್ಕೆ ರಾಜಣ್ಣ, ರೂಪೇಶ್‌ನನ್ನು ಅಟ್ಟಾಡಿಸಿದ ಗುರೂಜಿ

    ಬಿಗ್ ಬಾಸ್ ಮನೆ (Bigg Boss House) 60 ದಿನಗಳನ್ನ ಪೂರೈಸಿ ಮುನ್ನುಗ್ಗುತ್ತಿದೆ. ಇಲ್ಲಿ ಕೋಪ, ದ್ವೇಷ, ನಗು, ಕಾಮಿಡಿ ಎಲ್ಲವೂ ಇದೆ. ಇದೀಗ ಆರ್ಯವರ್ಧನ್ ಗುರೂಜಿಗೆ ರಾಜಣ್ಣ (Rajanna) ಮತ್ತು ರೂಪೇಶ್ ಶೆಟ್ಟಿ (Roopesh Shetty) ಕಾಲೆಳೆದಿದ್ದಾರೆ. ಗುರೂಜಿ ಪತ್ನಿಯ ಹೆಸರು ಹೇಳಿ ಫುಲ್ ಕಾಮಿಡಿ ಮಾಡಿ, ಸತಾಯಿಸಿದ್ದಾರೆ.

    ಗುರೂಜಿಗೆ ಮಗಳೆಂದರೆ ಪಂಚಪ್ರಾಣ ಅದರಂತೆ ಅವರ ಧರ್ಮಪತ್ನಿ ಅವರ ಜೀವನ ಮತ್ತೊಂದು ಭಾಗ ಎಂದೇ ಹೇಳಬಹುದು. ಇದೀಗ ದೊಡ್ಮನೆಯ ಕಾಡಿನಲ್ಲಿ ವಾಸ ಮಾಡ್ತಿರುವ ಸ್ಪರ್ಧಿಗಳು ಮನರಂಜನೆಗಾಗಿ ಆರ್ಯವರ್ಧನ್‌ಗೆ ಕಾಲೆಳೆದಿದ್ದಾರೆ. ಹೆಂಡ್ತಿ ಹತ್ತಿರ ಹೇಗೆ ಮಾತಡಬೇಕು ಅಂತಾ ಗುರೂಜಿಗೆ ರಾಜಣ್ಣ ಮತ್ತು ರೂಪೇಶ್ ಶೆಟ್ಟಿ ಸ್ಪೆಷಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಹೆಂಡತಿ(Wife) ಹತ್ತಿರ ಹೇಗೆ ಮಾತಡಬೇಕು ಅಂತಾ ಹೇಳಿಕೊಂಡ್ತಿವಿ ಎಂದು ರೂಪೇಶ್ ಶೆಟ್ರ ಮಾತಿಗೆ ಗುರೂಜಿಗೆ ಕೊಂಚ ರಾಂಗ್ ಆಗಿದ್ದಾರೆ. ಬಾಡಿಯಲ್ಲಿರುವ ಎನರ್ಜಿಯೆಲ್ಲಾ ಆಚೆ ಬಂತು ನಿಮ್ಮ ಮಾತು ಕೇಳಿ ಕೇಳಿ ಎಂದು ಗುರೂಜಿ ಗದರಿಸಿದ್ದಾರೆ. ನೀವಿಬ್ಬರೂ ಸೇರಿ ನನ್ನ ಹೆಡ್ನನ್ಮಗ ಅಂತಾ ತಿಳಿದಿದ್ದೀರಾ. ನೀವಿಬ್ಬರೂ ನನ್ನ ಕಾಲು ಹಿಡಿದು ಕ್ಷಮೆ ಕೇಳಬೇಕು ಎಂದು ಗುರೂಜಿ, ರಾಜಣ್ಣ, ರೂಪೇಶ್ ಇಬ್ಬರಿಗೂ ಅಟ್ಟಾಡಿಸಿದ್ದಾರೆ. ಇದನ್ನೂ ಓದಿ: ಭಾರತೀಯ ಸೇನೆಯನ್ನು ಅವಮಾನಿಸಿದ ನಟಿ ರಿಚಾ ಚೆಡ್ಡಾ – ದೆಹಲಿಯಲ್ಲಿ ದೂರು ದಾಖಲು

    ಇದರ ಮಧ್ಯೆ ಗುರೂಜಿ ಪಾಡು ನೋಡಿರುವ ಮನೆಮಂದಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಇವರನ್ನ ಹಿಡಿಯೋದೋ ಅಥವಾ ನನ್ನ ಫ್ಯಾಂಟ್‌ನ ಹಿಡಿದುಕೊಳ್ಳಲೋ ಅಂದಿದ್ದಾರೆ. ಹೆಂಡತಿ ಜೊತೆ ಜಾಸ್ತಿ ಕಮ್ಯುನಿಕೇಷನ್ ಮಾಡಿ ಅಂತಾ ಶೆಟ್ರು ಸಲಹೆ ಕೊಟ್ಟಿದ್ದಾರೆ. ರೂಪೇಶ್ ಸಲಹೆಯ ಮಾತಿಗೆ ಮನೆಮಂದಿಯೆಲ್ಲಾ ಬಿದ್ದು ಬಿದ್ದು ನಕ್ಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗುರೂಜಿ ಮಾಡಿದ ಆ ಒಂದು ತಪ್ಪಿನಿಂದ, ಮನೆ ಮಂದಿಗೆ ಬಿಗ್ ಬಾಸ್ ಗುನ್ನ

    ಗುರೂಜಿ ಮಾಡಿದ ಆ ಒಂದು ತಪ್ಪಿನಿಂದ, ಮನೆ ಮಂದಿಗೆ ಬಿಗ್ ಬಾಸ್ ಗುನ್ನ

    ಬಿಗ್ ಬಾಸ್ (Bigg Boss) ಮನೆಯಲ್ಲಿ ಸಂಖ್ಯಾಶಾಸ್ತ್ರದ ಮೂಲಕ ಸದ್ದು ಮಾಡ್ತಿದ್ದ ಆರ್ಯವರ್ಧನ್ ಗುರೂಜಿ (Aryavardhan Guruji) ಇತ್ತೀಚೆಗೆ ಕಿರಿಕ್ ಮಾಡಿಕೊಳ್ಳುವ ಮೂಲಕ ಸದ್ದು ಮಾಡ್ತಿದ್ದಾರೆ. ಬಿಗ್ ಬಾಸ್ ಮಾಡಿರುವ ನಿಯಮವನ್ನೇ ಮೀರಿ, ಗುರೂಜಿ ತಪ್ಪು ಮಾಡಿದ್ದಾರೆ. ಗುರೂಜಿ ಮಾಡಿದ ಎಡವಟ್ಟಿಗೆ ಮನೆಮಂದಿ ಶಿಕ್ಷೆ ಅನುಭವಿಸುವಂತೆ ಆಗಿದೆ.

    ದೊಡ್ಮನೆಯಲ್ಲಿ ಗುರೂಜಿ ಅವರು ಯಾವಾಗಲೂ ತಮ್ಮ ನಿಲುವೇ ಸರಿ ಎನ್ನುತ್ತಾ ಬಂದವರು. ಅವರು ನಡೆದುಕೊಳ್ಳುವ ರೀತಿ ಅನೇಕರಿಗೆ ಇಷ್ಟವಾಗುತ್ತಿಲ್ಲ. ಕೆಲವೊಮ್ಮೆ ತಪ್ಪು ಮಾಡಿದರೂ ಅದನ್ನು ಒಪ್ಪಿಕೊಳ್ಳುವುದಿಲ್ಲ. ಈಗ ಆರ್ಯವರ್ಧನ್ ಅವರು ಒಂದು ದೊಡ್ಡ ತಪ್ಪು ಮಾಡಿದ್ದಾರೆ. ಇದರಿಂದ ಮನೆ ಮಂದಿಗೆ ದೊಡ್ಡ ಮಟ್ಟದ ನಷ್ಟ ಉಂಟಾಗಿದೆ.

    ಬಿಗ್ ಬಾಸ್‌ನಲ್ಲಿ (Bigg Boss) ಈ ವಾರ ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್ನ ಅನುಸಾರ ನೀರಿನಲ್ಲಿ ಮರದ ಪಂಜರ ಒಂದನ್ನು ಇಡಲಾಗಿತ್ತು. ಇದಕ್ಕೆ 12 ನಟ್‌ಗಳನ್ನು ಜೋಡಿಸಲಾಗಿತ್ತು. ಇದನ್ನು ಆಟ ಆಡುವ ಸ್ಪರ್ಧಿಗಳು ಬರಿಗೈನಲ್ಲಿ ಬಿಚ್ಚಬೇಕಿತ್ತು. ಈ ಆದೇಶ ಬಂದ ಹೊರತಾಗಿಯೂ ಆರ್ಯವರ್ಧನ್ ಬಟ್ಟೆ ಸಹಾಯದಿಂದ ನಟ್ ಬಿಚ್ಚಿದ್ದರು.

    ಬಿಗ್ ಬಾಸ್ ನೀಡಿದ ಆದೇಶದಲ್ಲಿ ಬಟ್ಟೆಯನ್ನು ಬಳಕೆ ಮಾಡಬಾರದು ಎಂಬುದನ್ನು ಸ್ಪಷ್ಟವಾಗಿ ಸೂಚಿಸಲಾಗಿತ್ತು. ಆದರೂ ಆಟದ ವೇಳೆ ಗುರೂಜಿ ಬಟ್ಟೆ ಬಳಸಿದ್ದರು. ಅನುಪಮಾ ಮತ್ತು ಮನೆಮಂದಿ ಎಷ್ಟೇ ಎಚ್ಚರಿಕೆ ನೀಡಿದ್ದರೂ ಕ್ಯಾರೆ ಎನ್ನದೇ ತಾವು ಮಾಡಿದ್ದೇ ಸರಿ ಎಂಬ ನಿಲುವು ತೋರಿಸಿದ್ದಾರೆ. ಇದರ ಪರಣಾಮ ಮನೆಗೆ ಸಿಗಬೇಕಾದ ಯಾವುದೇ ಸೌಕರ್ಯಗಳು ಸಿಗದೇ ಪೇಚಾಡುವ ಪರಿಸ್ಥಿತಿ ಮನೆ ಮಂದಿಗೆ ಒದಗಿ ಬಂದಿದೆ. ಗುರೂಜಿ ಮಾಡಿದ ತಪ್ಪಿಗೆ ಮನೆಗೆ ಸಿಗುವ ಸೌಕರ್ಯ ಕೂಡ ಬಿಗ್ ಬಾಸ್ ರದ್ದು ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಮನೆಯಲ್ಲಿ ಸ್ವಾರ್ಥಿ ಇವರೇ: ಕಿಚ್ಚನಿಗೆ ಸ್ಪರ್ಧಿಗಳಿಂದ ದೂರು

    ಬಿಗ್ ಬಾಸ್ ಮನೆಯಲ್ಲಿ ಸ್ವಾರ್ಥಿ ಇವರೇ: ಕಿಚ್ಚನಿಗೆ ಸ್ಪರ್ಧಿಗಳಿಂದ ದೂರು

    ಬಿಗ್ ಬಾಸ್(Bigg Boss Kannada) ಏಪಿಸೋಡ್ ಮಿಸ್ ಮಾಡದೇ ನೋಡುವ ಒಂದು ವರ್ಗದ ಜನರಿದ್ದರೆ, ಇನ್ನೊಂದ್ ಕಡೆ ಕಿಚ್ಚನಿಗಾಗಿ ವಾರದ ಪಂಚಾಯಿತಿ ನೋಡುವ ಬಹುದೊಡ್ಡ ವರ್ಗವೇ ಇದೆ. ಇದೀಗ ಕಿಚ್ಚನ ಪಂಚಾಯಿತಿಯಲ್ಲಿ ಹೆಚ್ಚು ಕಾಳಜಿ ಮಾಡುವುದು ಯಾರು ಮತ್ತು ಹೆಚ್ಚು ಸ್ವಾರ್ಥ ಬುದ್ದಿ ಹೊಂದಿರುವವರು ಯಾರು ಎಂದು ಸುದೀಪ್ (Kiccha Sudeep) ಎದುರಲ್ಲೇ ಸಖತ್ ಚರ್ಚೆ ಆಗಿದೆ.

    ದೊಡ್ಮನೆ ಆಟ ಇದೀಗ 57 ದಿನಗಳನ್ನ ಪೂರೈಸಿ, 60ನೇ ದಿನದತ್ತ ಮುನ್ನುಗ್ಗುತ್ತಿದೆ. ವಾರದ ಪಂಚಾಯಿತಿಯಲ್ಲಿ ಯಾರು ಹೆಚ್ಚು ಕಾಳಜಿ ಮಾಡ್ತಾರೆ ಮತ್ತು ಸ್ವಾರ್ಥ ಬುದ್ದಿ ಇರುವವರ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆದಿದೆ. ರೂಪೇಶ್ ರಾಜಣ್ಣ ಅವರು ಕನ್ನಡಪರ ಹೋರಾಟದ ಮೂಲಕ ಗುರುತಿಸಿಕೊಂಡವರು. ಇದನ್ನೂ ಓದಿ: ಕ್ಯಾನ್ಸರ್‌ ಗೆದ್ದಿದ್ದ 24ರ ಹರೆಯದ ನಟಿ ಐಂದ್ರಿಲಾ ಶರ್ಮಾ ಹೃದಯಾಘಾತದಿಂದ ನಿಧನ

    ರಾಜಣ್ಣ ಅವರಿಗೆ ಬಿಗ್ ಬಾಸ್ ಶೋನಿಂದ ಜನಪ್ರಿಯತೆ ಹೆಚ್ಚಿದೆ. ಆರಂಭದ ವಾರಗಳಲ್ಲಿ ಕೊಂಚ ಸೈಲೆಂಟ್ ಆಗಿದ್ದ ಅವರು ಈಗ ವೈಲೆಂಟ್ ಆಗಿದ್ದಾರೆ. ತಮ್ಮ ಅನಿಸಿಕೆಯನ್ನು ನೇರವಾಗಿ ಹೇಳುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅವರಿಂದಾಗಿ ಮನೆಯಲ್ಲಿ ಕೆಲವೊಮ್ಮೆ ಜಗಳ ಆಗಿದ್ದು ಕೂಡ ಇದೆ. ಅವರಲ್ಲಿನ ಒಂದಷ್ಟು ಗುಣಗಳು ಇನ್ನಿತರ ಸ್ಪರ್ಧಿಗಳಿಗೆ ಇಷ್ಟ ಆಗಿಲ್ಲ. ಅವರಿಗೆ ಸ್ವಾರ್ಥ ಬುದ್ಧಿ ಹೆಚ್ಚಿದೆ ಎಂದು ಬಹುತೇಕರು ಹೇಳಿದ್ದಾರೆ.

    ಆರ್ಯವರ್ಧನ್ ಗುರೂಜಿ ಕೂಡ ಸಾಕಷ್ಟು ವಿಚಾರಗಳಿಂದ ಹೈಲೈಟ್ ಆಗಿದ್ದಾರೆ. ಬಿಗ್ ಬಾಸ್ ಒಟಿಟಿಯಿಂದ ಟಿವಿ ಸೀಸನ್ ತನಕ ಅವರ ಬಿಗ್ ಬಾಸ್ ಜರ್ನಿ ನಡೆದುಕೊಂಡು ಬಂದಿದೆ. ಕೆಲವೊಮ್ಮೆ ಮುಗ್ಧರಂತೆ ಕಾಣಿಸಿಕೊಳ್ಳುವ ಅವರಿಗೆ ದೊಡ್ಮನೆಯ ಒಂದಷ್ಟು ಸದಸ್ಯರಿಂದ ಸ್ವಾರ್ಥಿ ಎಂಬ ಹಣೆಪಟ್ಟಿ ಸಿಕ್ಕಿದೆ. ದೀಪಿಕಾ ದಾಸ್, ರಾಕೇಶ್ ಅಡಿಗ, ಪ್ರಶಾಂತ್ ಸಂಬರ್ಗಿ, ರೂಪೇಶ್ ಶೆಟ್ಟಿ ಕೂಡ ಸ್ವಾರ್ಥಿಗಳ ಪಟ್ಟಿಯಲ್ಲಿ ಇದ್ದಾರೆ. ಸ್ವಾರ್ಥಿ ಎಂದು ರೂಪೇಶ್ ರಾಜಣ್ಣ ಮತ್ತು ಆರ್ಯವರ್ಧನ್ ಗುರೂಜಿಗೆ ಅತೀ ಹೆಚ್ಚು ವೋಟ್ ಬಿದ್ದಿದೆ. ಇನ್ನೂ ಬಿಗ್ ಬಾಸ್ ಮನೆಯಿಂದ ದೀಪಿಕಾ ದಾಸ್ ಹೊರ ನಡೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗುರೂಜಿಗೆ ಬಿಗ್ ಬಾಸ್ ಡಬಲ್ ಶಾಕ್: ಸೂಟ್ ಕೇಸ್ ರೆಡಿ ಮಾಡಿ ಎಂದ ನಟ ಸುದೀಪ್

    ಗುರೂಜಿಗೆ ಬಿಗ್ ಬಾಸ್ ಡಬಲ್ ಶಾಕ್: ಸೂಟ್ ಕೇಸ್ ರೆಡಿ ಮಾಡಿ ಎಂದ ನಟ ಸುದೀಪ್

    ಬಿಗ್ ಬಾಸ್ (Bigg Boss) ಮನೆಯ ‘ಸೂಪರ್ ಸಂಡ್ ವಿತ್ ಸುದೀಪ್’ (Sudeep) ಎಂದಿನಂತೆ ಇರಲಿಲ್ಲ. ಬಿಗ್ ಬಾಸ್ ಶುರುವಾಗಿ 50 ದಿನಗಳು ಕಳೆದ ಸಂರ್ಭದಲ್ಲಿ ಹಲವು ವಿಶೇಷತೆಗಳು ಮತ್ತು ಹಲವರಿಗೆ ಶಾಕ್ ಕಾದಿತ್ತು. ಲವಲವಿಕೆಯಿಂದಲೇ ತಮ್ಮ ಕಾರ್ಯಕ್ರಮವನ್ನು ನಡೆಸಿ ಕೊಡುವ ಸುದೀಪ್, ಎಲ್ಲ ಸ್ಪರ್ಧಿಗಳನ್ನು ಅಷ್ಟೇ ಪ್ರೀತಿಯಿಂದ ಮಾತನಾಡಿಸಿದರು. ಶನಿವಾರದ ಎಪಿಸೋಡ್ ಅಂದರೆ, ಅಲ್ಲೊಂದು ಎಲಿಮಿನೇಷನ್ ಇರತ್ತೆ. ಕಣ್ಣೀರು, ಕಲರವ ಎಲ್ಲವೂ ಬೆರೆತಿರುತ್ತದೆ. ಈ ವಾರವೂ ಅದೆಲ್ಲವೂ ಇತ್ತು. ಆದರೆ, ಕೊನೆಯ ಕ್ಷಣ ಮಾತ್ರ ಬೇರೆಯಾಗಿತ್ತು.

    ಶನಿವಾರ ಎಪಿಸೋಡ್ ಮುಗಿಯುತ್ತಿದ್ದಂತೆಯೇ ಆ ವಾರ ಬಿಗ್ ಬಾಸ್ (Kannada Bigg Boss)ಮನೆಯಿಂದ ಒಬ್ಬರನ್ನು ಹೊರಹಾಕಲಾಗುತ್ತದೆ. ಈ ವಾರ ಅಂಥದ್ದೊಂದು ಗಳಿಗೆ ಬಂದಿದ್ದು ಆರ್ಯವರ್ಧನ್ ಗುರೂಜಿಗೆ. ಈ ವಾರ ನೀವು ಮನೆಯಿಂದ ಹೊರ ಬರುತ್ತಿದ್ದೀರಿ ಎಂದು ಗುರೂಜಿಗೆ ಸುದೀಪ್ ಅವರು ಹೇಳಿ ಆಗಿತ್ತು. ‘ನನಗೆ 13 ನಂಬರ್ ಆಗಿ ಬರಲ್ಲ, ನಾಮಿನೇಟ್ ಮಾಡಬೇಡಿ ಅಂದರೂ ಕೇಳಲಿಲ್ಲ’ ಎಂದು ಗುರೂಜಿ ಕಣ್ಣೀರು ಕೂಡ ಇಟ್ಟರು. ಮನೆಯಲ್ಲಿದ್ದವರ ಹೃದಯ ಭಾರ ಭಾರ. ರೂಪೇಶ್ ಶೆಟ್ಟಿ (Rupesh Shetty) ಅತ್ತೇ ಬಿಟ್ಟರು. ಎಲ್ಲರೊಂದಿಗೆ ಖುಷಿಯಲ್ಲಿದ್ದ ಗುರೂಜಿ, ಎಲಿಮಿನೇಷನ್ ಸುದ್ದಿ ಸ್ಫೋಟವಾಗುತ್ತಿದ್ದಂತೆಯೇ ಕಣ್ಣೀರಿನೊಂದಿಗೆ ತಮ್ಮ ರೂಮ್‍ಗೆ ಹೊರಟರು.

    ಗುರೂಜಿ (Aryavardhan Guruji) ಮನೆಯಿಂದ ಆಚೆ ಬರಲು ಕೆಲವೇ ನಿಮಿಷಗಳ ವೇಳೆ ಕೊಟ್ಟಿದ್ದ ಕಾರಣಕ್ಕಾಗಿ ಸೂಟ್ ಕೇಸ್ ರೆಡಿ ಮಾಡಿಕೊಂಡು ಎಲ್ಲರಿಗೂ ಧನ್ಯವಾದ ಕೂಡ ಹೇಳಿದರು. ಕೆಲವರು ಅತ್ತರು, ಇನ್ನೂ ಕೆಲವರು ಕ್ಷಮೆ ಕೇಳಿದರು. ನಿತ್ಯ ಮನೆಯಲ್ಲಿ ಏನಾಗಬೇಕಿತ್ತೋ ಎಲ್ಲವೋ ಆಯಿತು. ಆ ನಂತರ ನೇರವಾಗಿ ನಾಮಿನೇಟ್ ಮಾಡುವಂತಹ ವಿಶೇಷ ಅಧಿಕಾರ ಕೂಡ ಗುರೂಜಿಗೆ ನೀಡಲಾಯಿತು. ಇನ್ನೇನು ಗುರೂಜಿ ನೇರ ನಾಮಿನೇಟ್ ಮಾಡಲು ಜನರನ್ನು ಹುಡುಕುವಾಗಲೇ ಮತ್ತೇ ಬಿಗ್ ಬಾಸ್ ಧ್ವನಿ ಬಂತು.

    ಅಲ್ಲಿವರೆಗೂ ಬಿಗ್ ಬಾಸ್ ಸಣ್ಣದೊಂದು ಗೇಮ್ ಆಡಿದ್ದರು. ಈ ವಾರ ಯಾವುದೇ ವೋಟಿಂಗ್ ಮತ್ತು ನಾಮಿನೇಷನ್ ಪ್ರಕ್ರಿಯೆ ಇರದೇ ಇರುವ ಕಾರಣಕ್ಕಾಗಿ ಈ ವಾರ ಯಾರೂ ಮನೆಯಿಂದ ಆಚೆ ಹೋಗುತ್ತಿಲ್ಲವೆಂದು ಘೋಷಣೆ ಮಾಡಿದರು. ಗುರೂಜಿ ನೀವು ಮನೆ ಒಳಗೆ ಹೋಗಬಹುದು ಎಂದು ಸರ್ ಪ್ರೈಸ್ ನೀಡಿದರು. ಗುರೂಜಿ ಮತ್ತೆ ಕಣ್ಣೀರು ಹಾಕುತ್ತಲೇ ವಿಶೇಷ ಧನ್ಯವಾದಗಳನ್ನು ತಿಳಿಸಿ ಬಿಗ್ ಬಾಸ್ ಮನೆ ಒಳಗೆ ಹೋದರು. ತಮಗೆ 13 ನಂಬರ್ ಆಗಿ ಬರುವುದಿಲ್ಲ ಎನ್ನುವುದನ್ನು ಬಿಗ್ ಬಾಸ್ ಸುಳ್ಳಾಗಿಸುವ ಮೂಲಕ ಬಿಗ್ ಶಾಕ್ ನೀಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಗೇಮ್‌ನಲ್ಲಿ ಪ್ಲ್ಯಾನ್ ಮುಖ್ಯ, ರೂಪೇಶ್ ರಾಜಣ್ಣಗೆ ಗುರೂಜಿ ಕ್ಲಾಸ್

    ಗೇಮ್‌ನಲ್ಲಿ ಪ್ಲ್ಯಾನ್ ಮುಖ್ಯ, ರೂಪೇಶ್ ರಾಜಣ್ಣಗೆ ಗುರೂಜಿ ಕ್ಲಾಸ್

    ಬಿ‌ಗ್ ಬಾಸ್ ಮನೆ(Bigg Boss Kannada) ಇದೀಗ ಹೊತ್ತಿ ಉರಿಯುತ್ತಿದೆ. ಯಾರು ಫೇಕ್, ಯಾರು ರಿಯಲ್ ಎಂಬ ಟಾಸ್ಕ್‌ನಲ್ಲಿ ಮನೆಮಂದಿಯ ನಿಜ ಸ್ವರೂಪ ಅನಾವರಣವಾಗುತ್ತಿದೆ. ಈ ವೇಳೆ ರೂಪೇಶ್ ರಾಜಣ್ಣ ದಿವ್ಯಾ ಉರುಡುಗ(Divya Uruduga) ಅವರಿಗೆ ಫೇಕ್ ಎಂದು ಕಿಡಿಕಾರಿದ್ದರು. ಇದನ್ನೆಲ್ಲ ಗಮನಿಸಿ, ರಾಜಣ್ಣಗೆ ಆರ್ಯವರ್ಧನ್ (Aryavardhan Guruji) ಪಾಠ ಮಾಡಿದ್ದಾರೆ.

    ಬಿಗ್ ಬಾಸ್ ಓಟಿಟಿ ಸೀಸನ್‌ನಿಂದ ಟಿವಿ ಬಿಗ್ ಬಾಸ್‌ವೆರೆಗೂ ತಮ್ಮದೇ ಶೈಲಿಯಲ್ಲಿ ಗುರೂಜಿ ಆಟವಾಡುತ್ತಿದ್ದಾರೆ. ಕೆಲವೊಮ್ಮೆ ಏನು ಗೊತ್ತಿಲ್ಲದವರಂತೆ ಇದ್ದರೂ ಗೂರೂಜಿ ಮೈಂಡ್ ಗೇಮ್‌ನಲ್ಲಿ ಮಾಸ್ಟರ್ ಆಗಿದ್ದಾರೆ. ಇದೀಗ ಮನೆಯಲ್ಲಿ ಸಿಂಪಥಿ ಗಿಟ್ಟಿಸಿಕೊಂಡು ವೋಟ್ ತೆಗೆದುಕೊಳ್ಳುತ್ತಾರೆ ಎಂಬ ವಿಷ್ಯವಾಗಿ ರಾಜಣ್ಣಗೆ (Roopesh Rajanna) ಗುರೂಜಿ ಸ್ಪೆಷಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:ಕಾಂತಾರ 1 ಕೋಟಿ ಟಿಕೆಟ್ಸ್ ಮಾರಾಟ: ದಾಖಲೆಗಳು ಪುಡಿಪುಡಿ

    ಈ ವಾರ ಬಿಗ್ ಬಾಸ್ ಸಿಂಗಲ್ ಆಗಿ ಆಡುವ ಆಟ ಕೊಟ್ಟಿದ್ದಾರೆ. ಎಲ್ಲರಿಗೂ ಯೋಗ ಇದೆ. ಬಹುಮತ ಕೊಡೋರು ಬೇಕು ಅಷ್ಟೇ. ಗೇಮ್‌ನಲ್ಲಿ ಪ್ಲಾನ್ ಮುಖ್ಯ. ದ್ವೇಷ, ಪ್ರೀತಿ, ಕೋಪ ಯಾವುದೂ ಮುಖ್ಯ ಅಲ್ಲ. ಸಿಂಪಥಿ ವೋಟ್‌ನ ಜಾಸ್ತಿ ತೆಗೆದುಕೊಳ್ಳುವವರು ಇದ್ದಾರೆ. ಸಣ್ಣ ಪದವನ್ನ ದೊಡ್ಡದಾಗಿ ಬಳಸಿಕೊಳ್ಳುತ್ತಾರೆ. ಅದಕ್ಕೆ ಹೊಣೆಯಾಗಿ ಕಸಿವಿಸಿ ಮಾಡಿಕೊಳ್ಳಬೇಡಿ. ತಾಳ್ಮೆಯಿಂದ ಮಾತನಾಡಿ, ಎಂದು ರೂಪೇಶ್ ರಾಜಣ್ಣ ಅವರಿಗೆ ಆರ್ಯವರ್ಧನ್ ಗುರೂಜಿ ಪಾಠ ಮಾಡಿದರು.

    ಸಂಬರ್ಗಿ ಕ್ಯಾಪ್ಟೆನ್ಸಿಯಲ್ಲಿ ರೂಪೇಶ್ ರಾಜಣ್ಣ ತುಂಬಾ ಅಗ್ರೆಸ್ಸಿವ್ ಆಗಿದ್ದಾರೆ. ಈ ವಾರ ಅವರು ಆಡುವ ಶೈಲಿ, ಮಾತನಾಡುವ ರೀತಿ ಇದೀಗ ಮನೆಮಂದಿಯ ತಲೆ ಕಡಿಸಿದೆ. ಇನ್ನೂ ಸಾನ್ಯ ಅಯ್ಯರ್ ನಂತರ ಯಾರು ಮನೆಯಿಂದ ಹೊರ ಬರಲಿದ್ದಾರೆ ಎಂಬುದರ ಬಗ್ಗೆ ಪ್ರೇಕ್ಷಕರಿಗೆ ಕುತೂಹಲ ಕೆರಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ದಿವ್ಯಾ, ಅರವಿಂದ್ ಮದುವೆಯಾದರೆ ಡಿವೋರ್ಸ್ ಆಗುತ್ತೆ ಎಂದು ಭವಿಷ್ಯ ನುಡಿದ ಗುರೂಜಿ

    ದಿವ್ಯಾ, ಅರವಿಂದ್ ಮದುವೆಯಾದರೆ ಡಿವೋರ್ಸ್ ಆಗುತ್ತೆ ಎಂದು ಭವಿಷ್ಯ ನುಡಿದ ಗುರೂಜಿ

    ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ನೇರ ನುಡಿಯಿಂದ ಸಾಕಷ್ಟು ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿರುವ ಗುರೂಜಿ ದಿವ್ಯಾ ಉರುಡುಗ (Divya Uruduga) ಬಗ್ಗೆ ಭವಿಷ್ಯ ನುಡಿದಿದ್ದಾರೆ. ಮುಖ, ಕೆನ್ನೆ, ತುಟಿ ನೋಡಿ ಭವಿಷ್ಯ ಹೇಳುತ್ತಿದ್ದ ಗುರೂಜಿ ಇದೀಗ ದಿವ್ಯಾ ಭವಿಷ್ಯದ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

    ದೊಡ್ಮನೆ ಆಟ ಇದೀಗ ಸಾಕಷ್ಟು ರೋಚಕ ತಿರುವುಗಳನ್ನ ಪಡೆದು ಮುನ್ನುಗ್ಗುತ್ತಿದೆ. ಇನ್ನೂ ಓಟಿಟಿಯಿಂದ ಟಿವಿ ಬಿಗ್ ಬಾಸ್‌ನಲ್ಲೂ ಹೈಲೈಟ್ ಆಗುತ್ತಿರುವ ಆರ್ಯವರ್ಧನ್ ಗುರೂಜಿ, ದಿವ್ಯಾ ಹುಟ್ಟಿದ ದಿನಾಂಕದ ಅನುಸಾರವಾಗಿ ಶಾಕಿಂಗ್ ಭವಿಷ್ಯ ನುಡಿದಿದ್ದಾರೆ. ದಿವ್ಯಾ ಉರುಡುಗ (Divya Uruduga), ಅರವಿಂದ್‌ನ(Aravind Kp) ಮದುವೆಯಾದರೆ ಡಿವೋರ್ಸ್ ಆಗುತ್ತೆ ಎಂದು ಗುರೂಜಿ ಭವಿಷ್ಯ ನುಡಿದಿರೋದು ಈಗ ದಿವ್ಯಾ ಮುನಿಸಿಗೆ ಕಾರಣವಾಗಿದೆ.

    ರಾಕೇಶ್ ಅಡಿಗ(Rakesh Adiga) ಬಳಿ ಗುರೂಜಿ ಮಾತನಾಡುತ್ತಿದ್ದರು. ಈ ವೇಳೆ ದಿವ್ಯಾ ಕೂಡ ಇದ್ದರು. ಈ ವೇಳೆ ಹುಟ್ಟಿದ ದಿನಾಂಕ ಅನುಸಾರವಾಗಿ ಭವಿಷ್ಯ ಹೇಳಿದ್ದಾರೆ. 7ನೇ ತಾರೀಖಿನವರಿಗೆ 8ನೇ ತಾರೀಖಿನವರು ಲೈಫ್ ಪಾರ್ಟ್ನರ್ ಆಗೋಕೆ ಆಗಲ್ಲ. ಬೆಸ್ಟ್ ಫ್ರೆಂಡ್ ಆಗಿರ್ತಾರೆ. ಲೈಫ್ ಪಾರ್ಟ್ನರ್ ಆದರೆ ಅವರು ಡಿವೋರ್ಸ್ ಆಗ್ತಾರೆ ಎಂದರು ಆರ್ಯವರ್ಧನ್ ಗುರೂಜಿ. ಇದನ್ನೂ ಓದಿ:ಅಪ್ಪುಗೆ ‘ಕರ್ನಾಟಕ ರತ್ನ’ ಪ್ರದಾನ: ಅತಿಥಿಯಾಗಿ ಬೆಂಗಳೂರಿಗೆ ಬಂದ ಜ್ಯೂನಿಯರ್ ಎನ್.ಟಿ.ಆರ್

    ಅಸಲಿಗೆ, ದಿವ್ಯಾ ಉರುಡುಗ ಅವರದ್ದು 7ನೇ ತಾರೀಖು. ಅರವಿಂದ್.ಕೆ.ಪಿ ಅವರದ್ದು 8ನೇ ತಾರೀಖು. ಹೀಗಾಗಿ, ಆರ್ಯವರ್ಧನ್ ಗುರೂಜಿ ನುಡಿದ ಭವಿಷ್ಯವನ್ನ ದಿವ್ಯಾ ಉರುಡುಗ ಕೈಯಲ್ಲಿ ಅರಗಿಸಿಕೊಳ್ಳಲು ಆಗಲಿಲ್ಲ. ಹೀಗಾಗಿ, ನಮಸ್ಕಾರ ನಿಮ್ಮ ಜ್ಯೋತಿಷ್ಯಕ್ಕೆ. ನಾನು ಇಲ್ವೇ ಇಲ್ಲ ಇದಕ್ಕೆ ಎಂದು ದಿವ್ಯಾ ಎದ್ದು ಹೊರಟುಬಿಟ್ಟರು. ದಿವ್ಯಾ ಮತ್ತು ಅರವಿಂದ ಬಿಗ್ ಬಾಸ್ 8ರಲ್ಲಿ ಪರಿಚಯವಾಗಿ, ಅಲ್ಲಿಂದ ಹೊರಬಂದ ಮೇಲೂ ಜೊತೆಯಾಗಿದ್ದಾರೆ. ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿದ್ದಾರೆ. ಈ ಸಂದರ್ಭದಲ್ಲಿ ಗುರೂಜಿ ಹೇಳಿರುವ ಮಾತು, ದಿವ್ಯಾ ಮನಸ್ಸಿಗೆ ಘಾಸಿಯಾಗಿದೆ.

    Live Tv
    [brid partner=56869869 player=32851 video=960834 autoplay=true]