Tag: Aryavardhan Guruji

  • ಹುಲಿ ಉಗುರು: ಬಿಗ್ ಬಾಸ್ ಸ್ಪರ್ಧಿ ಆರ್ಯವರ್ಧನ್ ಗೂ ನೋಟಿಸ್

    ಹುಲಿ ಉಗುರು: ಬಿಗ್ ಬಾಸ್ ಸ್ಪರ್ಧಿ ಆರ್ಯವರ್ಧನ್ ಗೂ ನೋಟಿಸ್

    ಬಿಗ್ ಬಾಸ್ (Big Boss) ಮಾಜಿ ಸ್ಪರ್ಧಿ ಆರ್ಯವರ್ಧನ್ ಗುರೂಜಿ (Aryavardhan Guruji) ಕೊರಳಲ್ಲೂ ಹುಲಿ ಉಗುರು (Tiger claw) ಪೆಂಡೆಂಟ್ ಧರಿಸಿದ್ದರು ಎನ್ನುವ ಕಾರಣಕ್ಕಾಗಿ ಅವರ ಕಚೇರಿ ಮೇಲೆ ಅರಣ್ಯಾಧಿಕಾರಿಗಳು ದಾಳಿ ಮಾಡಿದ್ದಾರೆ. ವಿಚಾರಣೆಗೆ ನೋಟಿಸ್ ನೀಡಿದ್ದು, ಹುಲಿ ಉಗುರನ್ನು ವಶ ಪಡಿಸಿಕೊಳ್ಳಲಾಗಿದೆ. ಬಿಗ್ ಬಾಸ್ ಮನೆಯಲ್ಲೇ ವರ್ತೂರ್ ಸಂತೋಷ್ ಬಂಧನವಾಗಿತ್ತು. ಈ ಬೆನ್ನಲ್ಲೆ ಹಲವು ದಾಳಿಗಳು ನಡೆಯುತ್ತಿವೆ.

    ಆರ್ಯವರ್ಧನ್ ಕೂಡ ಬಿಗ್ ಬಾಸ್ ಸ್ಪರ್ಧಿಯಾಗಿದ್ದರು. ಆ ಸಮಯದಲ್ಲೇ ಅವರು ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದರು. ಈಗ ಅದನ್ನು ಪತ್ತೆ ಹಚ್ಚಲಾಗಿದೆ. ಆರ್ಯವರ್ಧನ್ ಕಚೇರಿಗೆ ಆಗಮಿಸಿರುವ ಅರಣ್ಯಾಧಿಕಾರಿಗಳು, ನೋಟಿಸ್ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆರ್ಯವರ್ಧನ್ ಕುತ್ತಿಗೆಯಲ್ಲಿ ವ್ಯಾಘ್ರನಖ ಹಾಕಿಕೊಂಡಿದ್ದರು ಎಂದು ಹೇಳಲಾಗುತ್ತಿದೆ,

    ಅದು ಚಿನ್ನದ ಪೆಂಡೆಂಟ್ ಆಗಿರುವ ಕಾರಣದಿಂದಾಗಿ ಅರಣ್ಯಾಧಿಕಾರಿಗಳು ಅದನ್ನು ಚಿನ್ನದಂಗಡಿಗೆ ತೆಗೆದುಕೊಂಡು ಹೋಗಿದ್ದಾರೆ. ಪೆಂಡೆಂಟ್ ಜೊತೆಗೆ ಬಿಗ್ ಬಾಸ್ ಮಾಜಿ ಸ್ಪರ್ಧಿ ‍ಪ್ರಶಾಂತ್ ಸಂಬರಗಿ (Prashant Sambaragi) ಕೂಡ ಹೋಗಿದ್ದಾರೆ. ಹುಲಿ ಉಗುರನ್ನು ಮಾತ್ರ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ. ಇದು ಮೂರು ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನದ ಚೈನಾಗಿದೆ ಎನ್ನುವ ಮಾಹಿತಿ ಇದೆ.

    ತಪ್ಪಿದ್ದರೆ ಕ್ರಮ ತೆಗೆದುಕೊಳ್ಳಲಿ

    ಕಾನೂನಿನ ಮುಂದೆ ಎಲ್ಲರೂ ಒಂದೇ. ಅವರು ಯಾವುದೇ ಪಕ್ಷದಲ್ಲಿ ಇರಲಿ, ಎಂತಹ ಗಣ್ಯ ವ್ಯಕ್ತಿಗಳೇ ಆಗಿರಲಿ. ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದರೆ ಕ್ರಮ ತಗೆದುಕೊಳ್ಳಲಿ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ಇಂತಹ ಪ್ರಕರಣವನ್ನು ಅರಣ್ಯ ಸಚಿವರು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

     

    ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಈ ಪ್ರಕರಣದಲ್ಲಿ ಬಂಧನವಾಗುತ್ತಿದ್ದಂತೆಯೇ ನಟರಾದ ಜಗ್ಗೇಶ್, ದರ್ಶನ್, ನಿಖಿಲ್ ಕುಮಾರ ಸ್ವಾಮಿ, ವಿನಯ್ ಗುರೂಜಿ ಸೇರಿದಂತೆ ಹಲವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದವು. ಅರಣ್ಯಾಧಿಕಾರಿಗಳು ಎಚ್ಚೆತ್ತುಕೊಂಡು ನೋಟಿಸ್ ನೀಡಲು ಮುಂದಾದರು. ಇದೀಗ ಬಹುತೇಕ ಎಲ್ಲರಿಗೂ ನೋಟಿಸ್ ಜಾರಿ ಮಾಡಲಾಗಿದೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮತ್ತೆ ಜೊತೆಯಾದ ಬಿಗ್‌ ಬಾಸ್‌ ಸ್ಪರ್ಧಿಗಳು

    ಮತ್ತೆ ಜೊತೆಯಾದ ಬಿಗ್‌ ಬಾಸ್‌ ಸ್ಪರ್ಧಿಗಳು

    ಬಿಗ್ ಬಾಸ್ ಒಟಿಟಿ (Bigg Boss Kannada) ಮೂಲಕ ಸದ್ದು ಮಾಡಿದ್ದ ಸ್ಪರ್ಧಿಗಳು ಮತ್ತೆ ಜೊತೆಯಾಗಿದ್ದಾರೆ. ದೊಡ್ಮನೆ ಕಿಲಾಡಿಗಳು ಮೋಜು- ಮಸ್ತಿ ಮಾಡಿರುವ ವೀಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಇದನ್ನೂ ಓದಿ: ದೀಪಿಕಾ ಪಡುಕೋಣೆ ಜೊತೆ ನಟಿಸಿದ್ದಕ್ಕೆ ಲಕ್ಕಿ ಎಂದ ಉಪೇಂದ್ರ

     

    View this post on Instagram

     

    A post shared by Chythrra (@chythrrahallikeriofficial)

    ಒಟಿಟಿ ಮೂಲಕ ಬಿಗ್ ಬಾಸ್ ಶೋ ಸಂಚಲನ ಸೃಷ್ಟಿಸಿತ್ತು. ಸಾನ್ಯ ಅಯ್ಯರ್, ರೂಪೇಶ್ ಶೆಟ್ಟಿ, ಚೈತ್ರಾ ಹಳ್ಳಿಕೇರಿ, ಅಕ್ಷತಾ ಕುಕ್ಕಿ, ಲೋಕೇಶ್, ಸೋನು ಗೌಡ ಹೀಗೆ ಹಲವರು ಶೋನಲ್ಲಿ ಭಾಗಿಯಾಗುವ ಮೂಲಕ ರಂಗೇರಿತ್ತು. ಇದೀಗ ಸಾಕಷ್ಟು ಸಮಯದ ನಂತರ ಮತ್ತೆ ಬಿಗ್ ಬಾಸ್ ಸ್ಪರ್ಧಿಗಳು ಒಟ್ಟಾಗಿದ್ದಾರೆ. ಸಿಕ್ಕಾಪಟ್ಟೆ ಫನ್‌ ಮಾಡಿದ್ದಾರೆ.

    ನಟಿ ಚೈತ್ರಾ ಹಳ್ಳಿಕೇರಿ (Chythrra Hallikeri) ಮನೆಯಲ್ಲಿ ಅಕ್ಷತಾ ಕುಕ್ಕಿ, ಆರ್ಯವರ್ಧನ್ ಗುರೂಜಿ, ಜಯಶ್ರೀ ಆರಾಧ್ಯ, ಲೋಕೇಶ್ ಎಲ್ಲರೂ ಜೊತೆಗೂಡಿದ್ದಾರೆ. ಒಟ್ಟಿಗೆ ಒಂದೊಳ್ಳೆ ಸಮಯ ಕಳೆದಿದ್ದಾರೆ. ಬಳಿಕ ಮಸ್ತ್ ರೀಲ್ಸ್ ಹಾಗೂ ಫೋಟೋಶೂಟ್ ಮಾಡಿದ್ದಾರೆ.

    ನಟಿ ಅಕ್ಷತಾ ಕುಕ್ಕಿ ಅವರ ಮದುವೆಗೆ ಆಹ್ವಾನ ನೀಡಲು ಎಲ್ಲರೂ ಜೊತೆಯಾಗಿದ್ದಾರೆ. ಮಾರ್ಚ್ 27ಕ್ಕೆ ಅವಿನಾಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ನಟಿ ರೆಡಿಯಾಗಿದ್ದಾರೆ.

  • ಬಿಗ್ ಬಾಸ್ ಆರ್ಯವರ್ಧನ್ ಗುರೂಜಿಯನ್ನು ಭೇಟಿಯಾದ ಅರುಣ್ ಸಾಗರ್

    ಬಿಗ್ ಬಾಸ್ ಆರ್ಯವರ್ಧನ್ ಗುರೂಜಿಯನ್ನು ಭೇಟಿಯಾದ ಅರುಣ್ ಸಾಗರ್

    ಬಿಗ್ ಬಾಸ್ ಮನೆಯ (Bigg Boss House) ಆಟ ಮುಗಿದಿದೆ. ಆದರೆ ಸಂಬಂಧಗಳಿಗೆ ಲಗಾಮು ಬಿದ್ದಿಲ್ಲ. ದೊಡ್ಮನೆಯ ಆಟ ಮುಗಿದ ಬಳಿಕವೂ ಸಂಬಂಧಗಳು ಮತ್ತಷ್ಟು ಗಟ್ಟಿಯಾಗಿದೆ. ಇದೀಗ ಆರ್ಯವರ್ಧನ್ ಗುರೂಜಿ (Aryavardhan Guruji) ಮನೆಗೆ ಅರುಣ್ ಸಾಗರ್ (Arun Sagar) ಭೇಟಿ ನೀಡಿದ್ದಾರೆ.

    ಸಂಖ್ಯಾಶಾಸ್ತ್ರ ಹೇಳುವ ಮೂಲಕ ಜನಪ್ರಿಯತೆ ಹೊಂದಿದ್ದ ಆರ್ಯವರ್ಧನ್ ಗುರೂಜಿ ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದರು. ಮನೆಯಲ್ಲಿ ಕಡೆಯ ದಿನದವರೆಗೂ ಆಟವಾಡಿ ಸೈ ಎನಿಸಿಕೊಂಡಿದ್ದರು. ಅದೇ ರೀತಿ ಸ್ಪರ್ಧಿ ಅರುಣ್ ಸಾಗರ್ ಅವರು ತಮ್ಮದೇ ಶೈಲಿಯಲ್ಲಿ ಬಿಗ್ ಬಾಸ್ ಮನೆಯಲ್ಲಿ ಗುರುತಿಸಿಕೊಂಡಿದ್ದರು.‌ ಇದನ್ನೂ ಓದಿ: ಮಾಜಿ ಪತಿ ಫ್ಯಾಮಿಲಿ ಜೊತೆ ಸಮಂತಾ ಒಡನಾಟ, ವೈರಲಾಯ್ತು ಪೋಸ್ಟ್

    ಈಗ ಬಿಗ್ ಬಾಸ್ ಮನೆಯ ಆಟ ಮುಗಿದು ಒಂದು ತಿಂಗಳು ಕಳೆದಿದೆ. ಆಟ ಮುಗಿದ ಬಳಿಕವೂ ಸಂಬಂಧಗಳು ಮತ್ತಷ್ಟು ಗಟ್ಟಿಯಾಗಿದೆ. ಈಗ ಆರ್ಯವರ್ಧನ್ ಗುರೂಜಿ ಮನೆಗೆ ಅರುಣ್ ಸಾಗರ್ ಭೇಟಿ ನೀಡಿದ್ದಾರೆ. ಕೆಲ ಸಮಯ ಕಳೆದಿದ್ದಾರೆ. ದೊಡ್ಮನೆಯ ಸಾಕಷ್ಟು ವಿಚಾರಗಳನ್ನ ನೆನಪಿಸಿಕೊಂಡಿದ್ದಾರೆ.

    ಆರ್ಯವರ್ಧನ್ ಗುರೂಜಿ, ಅರುಣ್ ಸಾಗರ್ ಅವರಿಗೆ ಪೇಟ ತೋಡಿಸಿ, ಶಾಲು ಹಾಕಿ ಸನ್ಮಾನ ಮಾಡಿದ್ದಾರೆ. ಅರುಣ್ ಸಾಗರ್ ಸಹ ಖುಷಿ ಆಗಿದ್ದಾರೆ.
    ಇನ್ನು ಅರುಣ್ ಸಾಗರ್ ಅವರು ಗುರೂಜಿ ಅವರ ಮಗಳ ಜೊತೆಯೂ ಮಾತನಾಡಿ ಖುಷಿಪಟ್ಟರು. ಇಬ್ಬರ ಭೇಟಿ ನೋಡುಗರಿಗೂ ಖುಷಿ ನೀಡಿದೆ. ಈ ಪೋಸ್ಟ್ ಇದೀಗ ಸಖತ್ ವೈರಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಿವ್ಯಾ ಉರುಡುಗ ಮೇಲೆ ಹಲವು ಅನುಮಾನ ವ್ಯಕ್ತ ಪಡಿಸಿದ ಆರ್ಯವರ್ಧನ್ ಗುರೂಜಿ

    ದಿವ್ಯಾ ಉರುಡುಗ ಮೇಲೆ ಹಲವು ಅನುಮಾನ ವ್ಯಕ್ತ ಪಡಿಸಿದ ಆರ್ಯವರ್ಧನ್ ಗುರೂಜಿ

    ಬಿಗ್ ಬಾಸ್ ಮನೆಯಲ್ಲಿ ಚೆನ್ನಾಗಿಯೇ ಆಟವಾಡಿ, ಇನ್ನೇನು ಫಿನಾಲೆ ವೇದಿಕೆಯ ಮೇಲೆ ಆರ್ಯವರ್ಧನ್ ಗುರೂಜಿ ಕಾಣಿಸಿಕೊಳ್ಳುತ್ತಾರೆ ಎನ್ನುತ್ತಿರುವಾಗಲೇ ಮಿಡ್ ನೈಟ್ ಎಲಿಮಿನೇಷನ್ ನಲ್ಲಿ ರಾತ್ರೋರಾತ್ರಿ ಮನೆಗೆ ಬಂದರು. ಎಲ್ಲರೊಂದಿಗೆ ಬೆರೆತು, ಚೆನ್ನಾಗಿಯೇ ಆಟವಾಡಿ, ಮನರಂಜನೆ ಕೊಟ್ಟು, ಮೆಚ್ಚುಗೆಗೆ ಪಾತ್ರರಾದರೂ, ತಮಗೆ ಮಾತ್ರ ಯಾಕೆ ಈ ಎಲಿಮಿನೇಟ್ ಶಿಕ್ಷೆ ಎಂದು ಬಹಿರಂಗವಾಗಿಯೇ ಅವರು ಕೇಳಿದ್ದಾರೆ. ಜೊತೆಗೆ ದಿವ್ಯಾ ಉರುಡುಗ ಮೇಲೆ ಸಾಕಷ್ಟು ಅನುಮಾನ ವ್ಯಕ್ತ ಪಡಿಸಿದ್ದಾರೆ.

    ದಿವ್ಯಾ ಉರುಡುಗ ಜೊತೆ ತಮ್ಮನ್ನು ಕಂಪೇರ್ ಮಾಡಿಕೊಂಡಿರುವ ಗುರೂಜಿ, ಆ ಹುಡುಗಿಗಿಂತಲೂ ನಾನು ಚೆನ್ನಾಗಿ ಆಡಿದ್ದೇನೆ. ಕಿಚ್ಚನಿಂದ ಚಪ್ಪಾಳೆ, ಮೆಚ್ಚುಗೆ ತಗೆದುಕೊಂಡಿದ್ದಾರೆ. ದಿವ್ಯಾಗೆ ಯಾವತ್ತೂ ಚೆಪ್ಪಾಳೆ ಸಿಕ್ಕಿಲ್ಲ. ಆದರೂ, ಅವರು ಫಿನಾಲೆಗೆ ಹೋದರು ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಈ ಹಿಂದೆಯೂ ಇಂಥದ್ದೊಂದು ಅಸಮಾಧಾನವನ್ನು ಸುದೀಪ್ ಮುಂದೆಯೇ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಅದೃಷ್ಟದಿಂದಲೇ ಇಷ್ಟು ದಿನ ಬಿಗ್ ಬಾಸ್‌ನಲ್ಲಿದ್ದರು: ದಿವ್ಯಾಗೆ ಸಂಬರ್ಗಿ ಟಾಂಗ್

    ಆರ್ಯವರ್ಧನ್ ಗುರೂಜಿ ಈ ಬಾರಿ ಫಿನಾಲೆ ವೇದಿಕೆಯ ಮೇಲೆ ಇರಲಿದ್ದಾರೆ ಎಂದು ಬಹುತೇಕರು ನಂಬಿದ್ದರು. ಹಾಗಾಗಿ ಹಲವು ವಾರಗಳ ಕಾಲ ಗುರೂಜಿಯನ್ನು ಅಭಿಮಾನಿಗಳು ಉಳಿಸಿಕೊಂಡೇ ಬಂದರು. ಹಲವು ಬಾರಿ ನಾಮಿನೇಟ್ ಆಗಿದ್ದರೂ, ಎಲಿಮಿನೇಷನ್ ಕತ್ತಿಯಿಂದ ಬಚಾವ್ ಆಗುತ್ತಲೇ ಬಂದರು. ಹೀಗಾಗಿ ಈ ಸೀಸನ್ ನಲ್ಲಿ ಗುರೂಜಿ ಫಿನಾಲೆ ವೇದಿಕೆಯ ಮೇಲೆ ಮತ್ತಷ್ಟು ಮನರಂಜನೆ ನೀಡುತ್ತಾರೆ ಎಂದು ನಂಬಲಾಗಿತ್ತು. ಆದರೆ, ನಡುರಾತ್ರಿಯ ಎಲಿಮಿನೇಷನ್ ಅದಕ್ಕೆ ಅವಕಾಶ ಕೊಡಲಿಲ್ಲ.

    ಇದರಿಂದಾಗಿ ಗುರೂಜಿ ಬೇರೆ ಸ್ಪರ್ಧಿಗಳ ಜೊತೆ ತಮ್ಮನ್ನು ಕಂಪೇರ್ ಮಾಡಿಕೊಂಡು, ನಾನು ಹಾಗೆ ಇದ್ದೆ, ಅವರು ಹೀಗಿದ್ದರು ಎಂದು ತಮ್ಮ ನೋವುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಗುರೂಜಿಯ ಈ ನಡೆ ಸ್ವತಃ ದಿವ್ಯಾ ಅವರಿಗೆ ಬೇಸರ ತರಿಸಿದೆ. ಫಿನಾಲೆ ವೇದಿಕೆಯ ಮೇಲೆಯೇ ದಿವ್ಯಾ ಅವರು ಗುರೂಜಿಯ ಬಗ್ಗೆ ಬೇಸರದಿಂದಲೇ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್‌ಗೆ ಬರಲು‌ ಸುದೀಪ್‌ ಸಂಭಾವನೆ ಲೆವೆಲ್‌ಗೆ ಪೇಮೆಂಟ್ ಕೇಳಿದ್ದೆ: ಆರ್ಯವರ್ಧನ್

    ಬಿಗ್ ಬಾಸ್‌ಗೆ ಬರಲು‌ ಸುದೀಪ್‌ ಸಂಭಾವನೆ ಲೆವೆಲ್‌ಗೆ ಪೇಮೆಂಟ್ ಕೇಳಿದ್ದೆ: ಆರ್ಯವರ್ಧನ್

    ಬಿಗ್ ಬಾಸ್ (Bigg Boss) ಸೀಸನ್ 9ಕ್ಕೆ ಆರ್ಯವರ್ಧನ್ ಗುರೂಜಿ (Aryavardhan) ಕಾಲಿಟ್ಟಿದ್ದರು. ಟಾಸ್ಕ್, ಮನರಂಜನೆ, ಅಡುಗೆ ಅಂತಾ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದರು. ಆದರೆ ಫಿನಾಲೆ ಅಂತಿಮ ಘಟ್ಟದಲ್ಲಿರುವಾಗ ಮಿಡ್ ನೈಟ್ ಎಲಿಮಿನೇಟ್ ಆಗಿ ಹೊರಬಂದರು. ಈಗ ದೊಡ್ಮನೆಗೆ ಎಂಟ್ರಿ ಕೊಡಲು ಸುದೀಪ್ ಸರ್ ಸಂಭಾವನೆ (Kiccha Sudeep) ಲೆವೆಲ್‌ಗೆ ಪೇಮೆಂಟ್ ಮಾತನಾಡಿದ್ದೆ ಎಂದು ಆರ್ಯವರ್ಧನ್ ಗುರೂಜಿ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತನಾಡಿದ್ದಾರೆ.

    ಆರ್ಯವರ್ಧನ್ ಒಟಿಟಿ ಮತ್ತು ಟಿವಿ ಬಿಗ್ ಬಾಸ್ ಎರಡರಲ್ಲೂ ಆಕ್ಟೀವ್ ಆಗಿದ್ದರು. ಬಾಡಿ ಶೇಮಿಂಗ್ ಬಗ್ಗೆ ತಲೆ ಕೆಡಿಸಿಕೊಳ್ಳದೇ ಎಲ್ಲದರಲ್ಲೂ ಮುಂದಿರುತ್ತಿದ್ದರು. ಇತ್ತೀಚೆಗೆ ನಡುರಾತ್ರಿ ಎಲಿಮಿನೇಷನ್ ಮೂಲಕ ಗುರೂಜಿ ಆಟಕ್ಕೆ ಬ್ರೇಕ್ ಬಿದ್ದಿತ್ತು. ಫಿನಾಲೆ ಬಾಗಿಲಿಗೆ ಕದ ತಟ್ಟುವ ಮುನ್ನವೇ ಗುರೂಜಿ ಹೊರಬಂದರು. ಈಗ ಬಿಗ್ ಬಾಸ್‌ಗೆ ಬರಲು ಸುದೀಪ್ ಸರ್ ಸಂಭಾವನೆ ಲೆವೆಲ್‌ಗೆ ಪೇಮೆಂಟ್ ಮಾತನಾಡಿದ್ದೆ ಎಂದು ಗುರೂಜಿ ಬಾಯ್ಬಿಟ್ಟಿದ್ದಾರೆ. ಇದನ್ನೂ ಓದಿ: ರಾಕೇಶ್ ಅಡಿಗ ಬಿಗ್‌ ಬಾಸ್ ವಿನ್ ಆಗಬೇಕು ಆದ್ರೆ ನನಗೆ ರೂಪೇಶ್ ಶೆಟ್ಟಿ ಇಷ್ಟ: ದಿವ್ಯಾ ಸುರೇಶ್

    ಕಳೆದ 8 ಸೀಸನ್‌ನಿಂದ ನನಗೆ ಬಿಗ್ ಬಾಸ್ ತಂಡದಿಂದ ಆಫರ್ ಬರುತ್ತಿತ್ತು. ಆದರೆ ಎಲ್ಲಿ ಈ ಶೋಗೆ ಹೋದರೆ ನನ್ನ ವೃತ್ತಿ ಜೀವನಕ್ಕೆ ಹೊಡೆತ ಬೀಳುತ್ತೆ ಎಂದು ಹೆದರಿ ಹೋಗಿರಲಿಲ್ಲ. ಆದರೆ ಈ ಬಾರಿ ವಾಹಿನಿ ಮುಖ್ಯಸ್ಥ ಪರವೇಶ್ವರ್ ಗುಂಡ್ಕಲ್ ಮಾತಿಗೆ ಬೆಲೆ ಕೊಟ್ಟು ಹೋಗಿದ್ದೆ. ಇನ್ನೂ ಬಿಗ್ ಬಾಸ್ ಮನೆಗೆ ಬರಲು ಸುದೀಪ್ ಸರ್ ಸಂಭಾವನೆ ಲೆವೆಲ್‌ಗೆ ಪೇಮೆಂಟ್ ಡಿಮ್ಯಾಂಡ್ ಮಾಡಿದ್ದೆ. ಬಿಗ್ ಬಾಸ್ ಟೀಮ್ ಈ ಬಗ್ಗೆ ಗಾಬರಿಯಾಗಿದ್ದರು. ಕೊನೆಗೆ ಎಲ್ಲರಿಗಿಂತ ಕಮ್ಮಿ ಪೇಮೆಂಟ್‌ಗೆ ಒಪ್ಪಿಕೊಂಡು ಹೋದೆ ಎಂದು ಗುರೂಜಿ ಹೇಳಿದ್ದಾರೆ.

    ಇನ್ನೂ ಈ ಬಾರಿ ಬಿಗ್ ಬಾಸ್ ಪಟ್ಟವನ್ನ ನನ್ನ ಮಗ ರೂಪೇಶ್ ಶೆಟ್ಟಿ ಗೆಲ್ಲಬೇಕು ಎಂದು ಆಶಿಸುತ್ತೇನೆ. ಅವರೇ ಗೆಲ್ಲುತ್ತಾರೆ ಎಂದು ಆರ್ಯವರ್ಧನ್ ಗುರೂಜಿ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದಿವ್ಯಾ- ಅರವಿಂದ್ ಮದುವೆ ಆದರೆ ಡಿವೋರ್ಸ್ ಗ್ಯಾರಂಟಿ: ಆರ್ಯವರ್ಧನ್

    ದಿವ್ಯಾ- ಅರವಿಂದ್ ಮದುವೆ ಆದರೆ ಡಿವೋರ್ಸ್ ಗ್ಯಾರಂಟಿ: ಆರ್ಯವರ್ಧನ್

    ಬಿಗ್ ಬಾಸ್ ಮನೆ (Bigg Boss House) ಆಟ ಗ್ರ್ಯಾಂಡ್‌ ಫಿನಾಲೆಗೆ ಲಗ್ಗೆ ಇಡ್ತಿದ್ದಂತೆ ದೊಡ್ಮನೆಯಿಂದ ಆರ್ಯವರ್ಧನ್ ಗುರೂಜಿ ಹೊರಬಂದಿದ್ದಾರೆ. ಮಿಡ್ ನೈಟ್‌ನಲ್ಲಿ ಎಲಿಮಿನೇಟ್ ಆಗುವ ಮೂಲಕ ಗುರೂಜಿ ಆಟಕ್ಕೆ ಬ್ರೇಕ್ ಬಿದ್ದಿದೆ. ದೊಡ್ಮನೆಯಲ್ಲಿ ದಿವ್ಯಾ (Divya Uruduga) ಮತ್ತು ಅರವಿಂದ್ (Aravind Kp) ಮದುವೆಯಾದರೆ ಡಿವೋರ್ಸ್ (Divorce) ಆಗುತ್ತೆ ಎಂಬ ಮಾತನ್ನ ಹೇಳಿದ್ದರು. ಇದೀಗ ಈ ಬಗ್ಗೆ ಗುರೂಜಿ ಮಾತನಾಡಿದ್ದಾರೆ.

    ಬಿಗ್ ಬಾಸ್ ಸೀಸನ್ 8ರಲ್ಲಿ ಲವ್ ಬರ್ಡ್ಸ್ (Love Birds) ಆಗಿ ದಿವ್ಯಾ ಮತ್ತು ಅರವಿಂದ್ ಕಾಣಿಸಿಕೊಂಡಿದ್ದರು. ಈ ಶೋ ಮೂಲಕ ಇಬ್ಬರ ಪ್ರೀತಿಯ ವಿಚಾರ ಇಡೀ ಕರ್ನಾಟಕಕ್ಕೆ ಪರಿಚಯವಾಗಿತ್ತು. ಹೀಗಿರುವಾಗ ದಿವ್ಯಾ ಮತ್ತು ಅರವಿಂದ್ ಮದುವೆ ಆದರೆ ಡಿವೋರ್ಸ್ ಆಗುತ್ತೆ ಎಂದು ಮಾತನಾಡಿದ್ದರು. ಬಿಗ್ ಬಾಸ್ ಜರ್ನಿಯ ಬಗ್ಗೆ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಹಂಚಿಕೊಳ್ಳುವಾಗ ದಿವ್ಯಾ, ಅರವಿಂದ್ ಬಗ್ಗೆ ಕೂಡ ಮಾತನಾಡಿದ್ದಾರೆ. ಇದನ್ನೂ ಓದಿ: ನ್ಯೂ ಇಯರ್ ಪಾರ್ಟಿ ಮಾಡಲು ಲಂಡನ್‌ಗೆ ಹಾರಿದ ರಮ್ಯಾ- ಅಮೃತಾ

    ಯಾವಾಗಲೂ ರಾಂಗ್ ಡೇಟ್ ಬೆಸ್ಟ್ ಫ್ರೆಂಡ್ಸ್ ಆಗುತ್ತಾರೆ. ಆದರೆ ಬೆಸ್ಟ್ ಜೋಡಿಯಾಗಿ ಬದುಕೋಕೆ ಆಗಲ್ಲ. ದಿವ್ಯಾ, ಅರವಿಂದ್ ಮದುವೆಯಾದರೆ ಡಿವೋರ್ಸ್ ಗ್ಯಾರಂಟಿ ಎಂದು ಗುರೂಜಿ ಹೇಳಿದ್ದಾರೆ.

    ಇನ್ನೂ ದಿವ್ಯಾ ಉರುಡುಗ ಕೂಡ ಟಾಪ್ 5 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ. ರೂಪೇಶ್ ಶೆಟ್ಟಿ, ರಾಕೇಶ್, ರಾಜಣ್ಣ, ದೀಪಿಕಾ, ದಿವ್ಯಾ ಈ ಐವರಲ್ಲಿ ಬಿಗ್ ಬಾಸ್ ವಿನ್ನರ್ ಪಟ್ಟ ಯಾರಿಗೆ ಸಿಗಲಿದೆ ಎಂದು ಕಾದುನೋಡಬೇಕಿದೆ. ಫಿನಾಲೆಗೆ ಈಗಾಗಲೇ ಕೌಂಟ್‌ಡೌನ್ ಶುರುವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಆರ್ಯವರ್ಧನ್ ಔಟ್: ರಂಪಾಟ ಮಾಡಿ ಕಣ್ಣೀರಾಕಿದ ರೂಪೇಶ್ ಶೆಟ್ಟಿ

    ಆರ್ಯವರ್ಧನ್ ಔಟ್: ರಂಪಾಟ ಮಾಡಿ ಕಣ್ಣೀರಾಕಿದ ರೂಪೇಶ್ ಶೆಟ್ಟಿ

    ಕಿರುತೆರೆ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಆಟ (Bigg Boss) ಕೊನೆಗೊಳ್ಳಲು ಕೌಂಟ್‌ಡೌನ್ ಶುರುವಾಗಿದೆ. 6 ಜನ ಸ್ಪರ್ಧಿಗಳಿದ್ದ ಮನೆಯಲ್ಲಿ 5 ಜನ ಸ್ಪರ್ಧಿಗಳಾಗಿದ್ದಾರೆ. ಆರ್ಯವರ್ಧನ್ ಗುರೂಜಿಯನ್ನ ಎಲಿಮಿನೇಟ್ ಮಾಡುವ ಮೂಲಕ ಮನೆಮಂದಿಗೆ ಬಿಗ್ ಬಾಸ್ ಶಾಕ್ ಕೊಟ್ಟಿದ್ದಾರೆ. ಗುರೂಜಿ ಆಟ ಅಂತ್ಯವಾಗಿದ್ದಕ್ಕೆ ರೂಪೇಶ್ ಶೆಟ್ಟಿ (Roopesh Shetty) ಕಣ್ಣೀರಿಟ್ಟಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ (Bigg Boss House) ಸಾನ್ಯ ಅವರಂತೆಯೇ ಆರ್ಯವರ್ಧನ್ ಗುರೂಜಿ (Aryavardhan), ರೂಪೇಶ್ ಶೆಟ್ಟಿ (Roopesh Shetty) ಒಡನಾಟ ಹೊಂದಿದ್ದರು. ಗುರೂಜಿ ಅವರನ್ನ ತಂದೆ ಸ್ಥಾನದಲ್ಲಿ ಗೌರವಿಸುತ್ತಿದ್ದರು. ತಂದೆ ಮಗನಾಗಿಯೇ ದೊಡ್ಮನೆಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮಂಗಳವಾರ (ಡಿ.27) ಸಂಚಿಕೆಯಲ್ಲಿ ಗುರೂಜಿ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಇದರಿಂದ ರೂಪೇಶ್‌ಗೆ ಶಾಕ್ ಆಗಿದೆ. ಅಪ್ಪಾಜಿ ಬನ್ನಿ ಎಂದು ಕಣ್ಣೀರಿಟ್ಟಿದ್ದಾರೆ.

    ಸಾನ್ಯ ಅಯ್ಯರ್ (Sanya Iyer) ಕೂಡ ಎಲಿಮಿನೇಟ್ ಆದಾಗ ರೂಪೇಶ್ ಕಣ್ಣೀರಿಟ್ಟಿದ್ದರು. ಒಟಿಟಿಯಿಂದ ಟಿವಿ ಬಿಗ್ ಬಾಸ್‌ವರೆಗೂ ರೂಪೇಶ್ ಮತ್ತು ಗುರೂಜಿ ಜೊತೆಯಾಗಿಯೇ ಇದ್ದರು. ಇದೀಗ ಮಿಡ್ ನೈಟ್‌ನಲ್ಲಿ ಎಲಿಮಿನೇಷನ್ ನಡೆದ ರೀತಿ ನೋಡುಗರಿಗೂ ಜೊತೆಗೆ ಸ್ಪರ್ಧಿಗಳಿಗೂ ಬಿಗ್ ಶಾಕ್ ನೀಡಿದೆ. ಗುರೂಜಿ ಎಲಿಮಿನೇಟ್ ಎಂದು ತಿಳಿದ ಕೂಡಲೇ ರೂಪೇಶ್, ಅಪ್ಪಾಜಿ ಮಾತನಾಡಿ, ಬನ್ನಿ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮನೆಮಂದಿ ಕೂಡ ಈ ವೇಳೆ ಅವರಿಗೆ ಸಮಾಧಾನ ಮಾಡಿದ್ದಾರೆ. ಇದನ್ನೂ ಓದಿ:ದಿವ್ಯಾಳ ಆಸೆಯಂತೆ ದೊಡ್ಮನೆಗೆ ಎಂಟ್ರಿ ಕೊಟ್ಟ ಅರವಿಂದ್ ಕೆ.ಪಿ

    ಇನ್ನೂ ಆರ್ಯವರ್ಧನ್ ಗುರೂಜಿ ಎಲಿಮಿನೇಷನ್ ನಂತರ ಟಾಪ್ ಸ್ಪರ್ಧಿಗಳಲ್ಲಿ ದಿವ್ಯಾ ಉರುಡುಗ ಕೂಡ ಒಬ್ಬರಾಗಿದ್ದಾರೆ. ರೂಪೇಶ್ ರಾಜಣ್ಣ, ರಾಕೇಶ್, ರೂಪೇಶ್ ಶೆಟ್ಟಿ, ದೀಪಿಕಾ ದಾಸ್, ದಿವ್ಯಾ ಈ ಐವರಲ್ಲಿ ಯಾರಿಗೆ ವಿಜಯಲಕ್ಷಿö್ಮ ಒಲಿಯಲಿದೆ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ನಡುರಾತ್ರಿಯಲ್ಲಿ ಎಲಿಮಿನೇಷನ್: ಬಿಗ್ ಬಾಸ್ ಮನೆಯಿಂದ ಆರ್ಯವರ್ಧನ್ ಔಟ್

    ನಡುರಾತ್ರಿಯಲ್ಲಿ ಎಲಿಮಿನೇಷನ್: ಬಿಗ್ ಬಾಸ್ ಮನೆಯಿಂದ ಆರ್ಯವರ್ಧನ್ ಔಟ್

    ಪ್ರತಿ ಬಾರಿಯೂ ಬಿಗ್ ಬಾಸ್ ಫಿನಾಲೆ ವೇದಿಕೆಯ ಮೇಲೆ ಉಳಿಯೋದು ಐದೇ ಐದು ಜನ. ಆದರೆ, ಮನೆಯಲ್ಲಿ ಇರೋದು ಆರು ಜನ. ಹಾಗಾಗಿ ಅನಿವಾರ್ಯವಾಗಿ ಮನೆಯಿಂದ ಒಬ್ಬರನ್ನು ಆಚೆ ಕಳುಹಿಸಲೇ ಬೇಕಾಯಿತ್ತು. ಅಂಥದ್ದೊಂದು ಪ್ರಕ್ರಿಯೆ ನಿನ್ನೆ ಮಧ್ಯರಾತ್ರಿಯೇ ನಡೆದಿದೆ. ಬಿಗ್ ಬಾಸ್ ಮನೆಯಿಂದ ಆರ್ಯವರ್ಧನ್ ಗುರೂಜಿ ಆಚೆ ಬಂದಿದ್ದಾರೆ. ಯಾವಾಗಲೂ ನಂಬರ್ ಜೊತೆನೇ ಬದುಕುತ್ತಿದ್ದ ಗುರೂಜಿಯನ್ನೇ ಅದೇ ನಂಬರ್ ಗೇಮ್ ಮೂಲಕ ಆಚೆ ಕಳುಹಿಸಲಾಗಿದೆ.

    ನಿನ್ನೇ ರಾತ್ರಿ ವಿನೂತನ ಎಲಿಮಿನೇಷನ್ ಪ್ರಕ್ರಿಯೆ ನಡೆಯಿತು. ನಂಬರ್ ಜೊತೆ ಕಾಣಿಯಾಗುವಂತಹ ಗೇಮ್ ‍ಪ್ಲ್ಯಾನ್ ಅದು. ನಂಬರ್ 9 ರ ಜೊತೆ ಮುಳುಗುವ ಮತ್ತು ಅದರೊಂದಿಗೆ ಮತ್ತೆ ವಾಪಸ್ಸಾಗುವಂತೆ ಅದನ್ನು ಸಿದ್ಧಗೊಳಿಸಲಾಗಿತ್ತು. ಯಾವ ಸ್ಪರ್ಧಿ ನಂಬರ್ ಜೊತೆ ವಾಪಸ್ಸು ಬರುವುದಿಲ್ಲವೋ, ಅವರು ಎಲಿಮಿನೇಟ್ ಎಂದು ಘೋಷಿಸುವುದಾಗಿ ತಿಳಿಸಿತ್ತು. ಆ ನಂಬರ್ ಜೊತೆ ಆರ್ಯವರ್ಧನ್ ಗುರೂಜಿ ಬಂದಿಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಅದು ಇನ್ನೂ ಪ್ರಸಾರವಾಗಿಲ್ಲ. ಇದನ್ನೂ ಓದಿ: ಅಟಲ್ ಬಿಹಾರಿ ವಾಜಪೇಯಿ ರೋಲ್‌ನಲ್ಲಿ ಪಂಕಜ್ ತ್ರಿಪಾಠಿ: ಫಸ್ಟ್ ಲುಕ್ ಔಟ್

    ಈ ವಾರಾಂತ್ಯದ ಕಿಚ್ಚನ ಶೋನಲ್ಲಿ ಆರ್ಯವರ್ಧನ್ ಗುರೂಜಿ ಉತ್ತಮ ಆಟ ಆಡಿದ್ದಕ್ಕೆ ಮೆಚ್ಚುಗೆಯ ಚಪ್ಪಾಳೆಯನ್ನು ಪಡೆದಿದ್ದರು. ಈ ಕಾರಣದಿಂದಾಗಿಯೇ ಗುರೂಜಿ ಫಿನಾಲೆ ವೇದಿಕೆಯ ಮೇಲೆ ಇರಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಆದರೆ, ನಿರೀಕ್ಷೆ ಹುಸಿಯಾಗಿದೆ. ಮಧ್ಯರಾತ್ರಿಯೇ ಆರ್ಯವರ್ಧನ್ ಬಿಗ್ ಬಾಸ್ ಮನೆಯಿಂದ ಸೂಟ್ ಕೇಸ್ ತಗೆದುಕೊಂಡು ಮನೆ ಸೇರಿದ್ದಾರೆ.

    ಆರ್ಯವರ್ಧನ್ ಗುರೂಜಿ ಎಲಿಮಿನೇಟ್ ಆಗಿರುವ ವಿಚಾರ ವಾಹಿನಿಯಾಗಲಿ ಅಥವಾ ಗುರೂಜಿ ಆಗಲಿ ಖಚಿತ ಪಡಿಸಿಲ್ಲ. ಆದರೆ, ಗುರೂಜಿ ಮನೆಯಿಂದ ಆಚೆ ಬಂದಿರುವ ವಿಚಾರ ಬಿಗ್ ಬಾಸ್ ನೋಡುಗರ ನಡುವೆ ಚರ್ಚೆ ಆಗುತ್ತಿದೆ. ಫಿನಾಲೆಯಲ್ಲಿ ಇರಬೇಕಾದವರು ಮನೆ ಸೇರಿದ್ದಾರೆ ಎಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ‘ಬಿಗ್ ಬಾಸ್’ ಮನೆಯಲ್ಲಿ ದಿವ್ಯಾಗೆ ಕ್ಲಾಸ್ ತಗೆದುಕೊಂಡು ಆರ್ಯವರ್ಧನ್ ಗುರೂಜಿ

    ‘ಬಿಗ್ ಬಾಸ್’ ಮನೆಯಲ್ಲಿ ದಿವ್ಯಾಗೆ ಕ್ಲಾಸ್ ತಗೆದುಕೊಂಡು ಆರ್ಯವರ್ಧನ್ ಗುರೂಜಿ

    ಚಿತ್ರ ವಿಚಿತ್ರ, ವಿಭಿನ್ನ ಟಾಸ್ಕ್ ಕೊಡೊವುದರಲ್ಲಿ ಬಿಗ್ ಬಾಸ್ (Big Boss) ಯಾವಾಗಲೂ ಮುಂದು. ಎಲ್ಲೂ ನೋಡಿರದ ಡಿಫರೆಂಟ್ ಟಾಸ್ಕ್ ಗಳನ್ನು ಮನೆಯಲ್ಲಿರುವ ಸ್ಪರ್ಧಿಗಳಿಗೆ ಬಿಗ್  ಬಾಸ್ ಕೊಡುತ್ತಾರೆ. ಇದೀಗ ಭಿನ್ನವಾಗಿ ಟಾಸ್ಕ್ ಗಳನ್ನು ಕೊಡುವ ಬಗ್ಗೆ ಗುರೂಜಿ, ರೂಪೇಶ್ ಶೆಟ್ಟಿ (Rupesh Shetty) ಮತ್ತು ದಿವ್ಯಾ (Divya) ಮಾತನಾಡಿದ್ದಾರೆ. ಆಗ ಸಣ್ಣ ಬುದ್ಧಿ ಮಾತನಾಡಬೇಡ ಎಂದು ದಿವ್ಯಾಗೆ ಆರ್ಯವರ್ಧನ್ ಗುರೂಜಿ ಅವಾಜ್ ಹಾಕಿದ್ದಾರೆ.

    95 ದಿನಗಳನ್ನು ಪೂರೈಸಿರುವ ದೊಡ್ಮನೆಯ ಆಟ ಇದೀಗ  ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ.  ಫಿನಾಲೆಗೆ ಕೆಲವೇ ದಿನಗಳು ಬಾಕಿ ಇರುವ ಈ ವೇಳೆಯಲ್ಲಿ ಬಿಗ್ ಬಾಸ್ ಕೊಡುತ್ತಿರುವ ಟಾಸ್ಕ್ ನೋಡಿ ಮನೆಮಂದಿ ದಂಗಾಗಿದ್ದಾರೆ. ಟಾಸ್ಕ್ ಮಾಡುವ ಟೀಮ್  ವಿಚಾರದ ಬಗ್ಗೆ ಮಾತನಾಡುವಾಗ ಗುರೂಜಿಗೂ (Aryavardhan Guruji) ದಿವ್ಯಾಗೂ ಮಾತಿನ ಚಕಮಕಿ ನಡೆದಿದೆ. ಈ ವೇಳೆ ದಿವ್ಯಾಗೆ ಗುರೂಜಿ ಅವಾಜ್ ಹಾಕಿದ್ದಾರೆ. ಇದನ್ನೂ ಓದಿ: ‘ಪುಷ್ಪಾ 2’ ಟೀಮ್ ಸೇರಿಕೊಂಡ ನಟಿ ಸಾಯಿ ಪಲ್ಲವಿ: ರಶ್ಮಿಕಾ ಮಂದಣ್ಣ ಪಾತ್ರವೇನು?

    ಕ್ರಿಯೇಟಿವ್ ಆಗಿ ಟಾಸ್ಕ್ ಗಳನ್ನು ಸೃಷ್ಟಿಸುವ  ಟೀಮ್ ನ ಮೀಟ್ ಮಾಡಬೇಕು ಎಂದು ರೂಪೇಶ್ ಶೆಟ್ಟಿ ಹೇಳುತ್ತಾರೆ. ಆಗ ಗುರೂಜಿ, ಅವರೆಲ್ಲಾ ಇಲ್ಲಿ ಎಲ್ಲಿ ಇರುತ್ತಾರೆ. ಇಂಡಿಯಾದಲ್ಲೇ ಇರಲ್ಲವೇನೋ ಎಂದು ಹೇಳಿದ್ದಾರೆ. ನಾಲ್ಕನೇ ವ್ಯಕ್ತಿಯಿಂದ ಟಾಸ್ಕ್ ಬರುತ್ತೆ ಎಂದು ಟಾಸ್ಕ್ ಗಳನ್ನು ಕ್ರಿಯೇಟ್ ಮಾಡುವ ಟೀಮ್ ಬಗ್ಗೆ ಚರ್ಚೆ ನಡೆಯುತ್ತದೆ. ಟಾಸ್ಕ್ ಎಲ್ಲಿಂದ ಬರುತ್ತವೆ ಎನ್ನುವ ಕುರಿತು ಮಾತುಕತೆ ಆಗುತ್ತದೆ.

    ಈ ವೇಳೆ ಟಾಸ್ಕ್ ಕ್ರಿಯೇಟ್ ಮಾಡೋಕೆ ಎಂದೇ ಒಂದು ಕ್ರಿಯೇಟಿವ್ ಟೀಮ್ ಇದೆ ಗುರೂಜಿ ಎಂದು ದಿವ್ಯಾ ಹೇಳುತ್ತಾರೆ. ಇದರ ಬಗ್ಗೆ ಮಾತನಾಡುವಾಗ ಮಾತಿನ ಚಕಮಕಿ ಜೋರಾಗಿದೆ. ಆಗ ಸಣ್ಣ ಬುದ್ಧಿ ಮಾತನಾಡಬೇಡ, ನನ್ನ ಮಾತು ಕೇಳು, ನಾನು ಇಂಟರ್ ನ್ಯಾಷನಲ್ ಬ್ರೇನ್ ಬಗ್ಗೆ ಮಾತನಾಡುತ್ತಿದ್ದೀನಿ, ಇದನ್ನ ಕೇಳು ಅಂದ್ರೆ ನನ್ನ ಹತ್ತಿರನೇ ವಾದ ಮಾಡುತ್ತೀಯಾ ಎಂದು ದಿವ್ಯಾಗೆ ಗುರೂಜಿ ಕ್ಲಾಸ್ ತೆಗೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಗ ರೂಪಿಗಾಗಿ, ಮಗುವಿನಂತೆ ಗಳಗಳನೇ ಅತ್ತ ಆರ್ಯವರ್ಧನ್‌ ಗುರೂಜಿ

    ಮಗ ರೂಪಿಗಾಗಿ, ಮಗುವಿನಂತೆ ಗಳಗಳನೇ ಅತ್ತ ಆರ್ಯವರ್ಧನ್‌ ಗುರೂಜಿ

    ದೊಡ್ಮನೆಯಲ್ಲಿ ಗುರೂಜಿ ಹಾಗೂ ರೂಪೇಶ್ ಶೆಟ್ಟಿ (Roopesh Shetty) ಮಧ್ಯೆ ಗಾಢವಾದ ಆತ್ಮೀಯತೆ ಬೆಳೆದಿದೆ. ಗುರೂಜಿ ಅವರನ್ನ ರೂಪೇಶ್ ಶೆಟ್ಟಿ ತಂದೆಯಂತೆ ಕಾಣುತ್ತಾರೆ. ರೂಪೇಶ್ ಅವರನ್ನ ಆರ್ಯವರ್ಧನ್ ಗುರೂಜಿ (Aryavardhan Guruji)n ಮಗನಂತೆ ನೋಡುತ್ತಾರೆ. ಇವರಿಬ್ಬರೂ ಒಬ್ಬರಿಗೊಬ್ಬರು ನಿಷ್ಠೆಯಿಂದ ಇದ್ದಾರೆ. ಇದು ಓಟಿಟಿಯಿಂದ ಬಿಗ್ ಬಾಸ್‌ವರೆಗೂ ಮುಂದುವರೆದಿದೆ. ಈಗ ಮಗ ರೂಪಿಗಾಗಿ, ಗುರೂಜಿ ಗಳಗಳನೇ ಅತ್ತಿದ್ದಾರೆ.

    ರೂಪೇಶ್ ಶೆಟ್ಟಿ ಅವರನ್ನ ಸದಾ ಮಗ (Son) ಎನ್ನುವ ಗುರೂಜಿ, ಇದೀಗ ಅದೇ ಮಗನಿಗಾಗಿ ಕಣ್ಣೀರು ಹಾಕಿದ್ದಾರೆ. ಟಾಸ್ಕ್‌ನಲ್ಲಿ ಮಗನ ಕೈಯಿಂದ ಆಟ ಕಿತ್ತುಕೊಂಡು ಬಿಟ್ನಲ್ಲ ಅಂತ ಗುರೂಜಿ ಚಿಕ್ಕ ಮಗುವಿನಂತೆ ಭಾವುಕರಾಗಿದ್ದಾರೆ. ಬಾವುಟವನ್ನು ರೂಪೇಶ್ ಶೆಟ್ಟಿ ತಗೊಳ್ಬೇಕಿತ್ತು ಎಂದು ಗುರೂಜಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

    13ನೇ ವಾರದ ಎರಡನೇ ಟಾಸ್ಕ್ ಆಗಿ ಗೆಲುವಿನ ಧ್ವಜವನ್ನ ಬಿಗ್ ಬಾಸ್ ನೀಡಿದ್ದರು. ಇದರ ಅನುಸಾರ, ಎಲ್ಲಾ ಸ್ಪರ್ಧಿಗಳು ವೃತ್ತದ ಒಳಗಿರುವ ಧ್ವಜವನ್ನು ಪಡೆಯಬೇಕಿತ್ತು. ಏಳು ಸುತ್ತುಗಳಲ್ಲಿ ಈ ಆಟ ನಡೆಯಲಿದ್ದು, ಒಂದೊಂದು ಸುತ್ತಿನಲ್ಲಿ ಒಂದೊಂದು ಬಾವುಟ ಕಡಿತಗೊಳಿಸಲಾಗುತ್ತಿತ್ತು. ಯಾರಿಗೆ ಬಾವುಟ ಸಿಗುವುದಿಲ್ಲವೋ ಅವರು ಔಟ್ ಆದಂತೆ. ಆಟದ ಕೊನೆಯವರೆಗೂ ಯಾರು ಬಾವುಟ ಪಡೆಯುತ್ತಾರೋ, ಅವರು ಗೆದ್ದಂತೆ. ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಅಚ್ಚರಿಯ ಎಂಟ್ರಿ : ಹಾವು ಏಣಿ ಆಟದಲ್ಲಿ ಮಂಜು ಪಾವಗಡ

    ಆಟದ ವೇಳೆ ಆರ್ಯವರ್ಧನ್ ಗುರೂಜಿಗೆ ಪೆಟ್ಟು ಬಿತ್ತು. ಆದರೂ ಅವರು ಆಟ ಮುಂದುವರೆಸಿದರು. ಒಂದು ಹಂತದಲ್ಲಿ ಗುರೂಜಿ, ರೂಪೇಶ್ ಶೆಟ್ಟಿ ಒಂದೇ ಬಾವುಟ ಹಿಡಿದಿದ್ದರು. ಈ ವೇಳೆ ಗುರೂಜಿಗಾಗಿ ರೂಪೇಶ್ ಶೆಟ್ಟಿ ಬಾವುಟವನ್ನ ಬಿಟ್ಟರು. ಈ ವೇಳೆ ಕಣ್ಣೀರು ಹಾಕಿದ ಆರ್ಯವರ್ಧನ್ ಗುರೂಜಿ, ಅವನು ತಗೊಳ್ಬೇಕಿತ್ತು. ನಾನು ತಗೊಂಡೆ ಎಂದು ಬಿಕ್ಕಳಿಸಿದರು. ಆಗ, ನೀವೇ ತಗೊಂಡಿದ್ದು, ಅದಕ್ಕೆ ನಾನು ಬಿಟ್ಟಿದ್ದು. ನಾನು ನಿಮಗೆ ಕೊಡಲಿಲ್ಲ ಎಂದು ರೂಪೇಶ್ ಶೆಟ್ಟಿ ಸಮಾಧಾನ ಮಾಡಿದರೂ, ಇಲ್ಲ ನೀನೇ ತಗೊಳ್ಬೇಕಿತ್ತು ಎಂದು ಗುರೂಜಿ ಅತ್ತರು. ಈ ವೇಳೆ ಭಾವುಕರಾದರು.

    Live Tv
    [brid partner=56869869 player=32851 video=960834 autoplay=true]