Tag: Aryavardhan

  • ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ಅನಿರುದ್ಧ್-ಅನು ಜೋಡಿ

    ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ಅನಿರುದ್ಧ್-ಅನು ಜೋಡಿ

    ಕಿರುತೆರೆಯ ಮುದ್ದಾದ ಜೋಡಿ ಅನಿರುದ್ಧ್ (Aniruddha Jatkar) ಮತ್ತು ಅನು ಸಿರಿಮನೆ (Anu Sirimane) ಮತ್ತೆ ಒಂದಾಗಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. `ಜೊತೆ ಜೊತೆಯಲಿ’ (Jothe Jotheyali) ಸೀರಿಯಲ್ ಮೂಲಕ ಮನೆ ಮಾತಾದ ಈ ಜೋಡಿ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

    ಟಿವಿ ಲೋಕದ ಸಕ್ಸಸ್‌ಫುಲ್ `ಜೊತೆ ಜೊತೆಯಲಿ’ ಸೀರಿಯಲ್‌ನಿಂದ ಆರ್ಯವರ್ಧನ್ ಅಲಿಯಾಸ್ ಅನಿರುದ್ಧ್ ಹೊರಬಂದ ಮೇಲೆ ಮತ್ತೆ ಆರ್ಯ ಮತ್ತು ಅನು ಜೊತೆಯಾಗಿ ಈ ಮೂಲಕ ತಮ್ಮ ಫ್ಯಾನ್ಸ್‌ಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಅನಿರುದ್ಧ್ ಮಾಡ್ತಿದ್ದ ಪಾತ್ರವನ್ನ ಇದೀಗ ಹರೀಶ್ ರಾಜ್(Harish Raj) ನಿಭಾಯಿಸುತ್ತಿದ್ದಾರೆ. ಅನಿರುದ್ಧ್ ಮತ್ತು ಮೇಘಾ ಶೆಟ್ಟಿ ಕಾಂಬಿನೇಷನ್‌ನ ತೆರೆಯ ಮೇಲೆ ಮಿಸ್ ಮಾಡಿಕೊಳ್ತಿರುವ ಫ್ಯಾನ್ಸ್‌ಗೆ ಈ ಜೋಡಿಯ ನಯಾ ಫೋಟೋ ನೋಡಿ ಸಂಭ್ರಮಿಸುತ್ತಿದ್ದಾರೆ. ಇದನ್ನೂ ಓದಿ: ದೊಡ್ಮನೆಯಲ್ಲಿ ಬ್ರೇಕಪ್ ಮಾಡಿಕೊಂಡ ರಾಕೇಶ್ – ಅಮೂಲ್ಯ

    ಅನಿರುದ್ಧ್ ಮತ್ತು ಭಾರತಿ ವಿಷ್ಣುವರ್ಧನ್ (Bharathi Vishnuvardhan) ಅವರ ಹೊಸ ಮನೆಯ ಗೃಹ ಪ್ರವೇಶಕ್ಕೆ (House Warming) ಅನು ಸಿರಿಮನೆ ಅಲಿಯಾಸ್ ಮೇಘಾ ಶೆಟ್ಟಿ (Megha Shetty) ಸಾಕ್ಷಿಯಾಗಿದ್ದಾರೆ. ಅನಿರುದ್ಧ್ ಅವರ ಹೊಸ ಮನೆಯ ಸಂಭ್ರಮಕ್ಕೆ ಮೇಘಾ ಕೂಡ ಸಾಕ್ಷಿಯಾಗಿದ್ದು, ತಾವು ಕೂಡ ಅವರ ಕುಟುಂಬದಲ್ಲಿ ಒಬ್ಬರಾಗಿ ಒಳ್ಳೆಯ ಸಮಯವನ್ನ ಕಳೆದಿದ್ದಾರೆ. ಆರ್ಯ ಮನೆಯ ಗೃಹಪ್ರವೇಶದ ಸಂಭ್ರಮದ ಫೋಟೋವನ್ನು ನಟಿ ಅನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

    ಆರ್ಯ ಮತ್ತು ಜೋಡಿ ಹೊಸ ಫೋಟೋ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಬಹುದಿನಗಳ ನಂತರ ಒಟ್ಟಿಗೆ ಕಾಣಿಸಿಕೊಳ್ಳುವುದರ ಮೂಲಕ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆರ್ಯವರ್ಧನ್ ಗುರೂಜಿ ಬಾಯಿಂದ ಬೈಗುಳ ಬರೋಕೆ ಗ್ರಹಗತಿ ಕಾರಣವಂತೆ

    ಆರ್ಯವರ್ಧನ್ ಗುರೂಜಿ ಬಾಯಿಂದ ಬೈಗುಳ ಬರೋಕೆ ಗ್ರಹಗತಿ ಕಾರಣವಂತೆ

    ಬಿಗ್ ಬಾಸ್ (Bigg Boss Season 9) ಮನೆಯಲ್ಲಿ ವಿಚಿತ್ರ ಸಂಗತಿಗಳು ನಡೆಯುತ್ತಲೇ ಇವೆ. ಪ್ರಶಾಂತ್ ಸಂಬರಗಿ ಜೋರು ಧ್ವನಿಯಲ್ಲಿ ಮಾತನಾಡಿದರೆ, ಅರುಣ್ ಸಾಗರ್ ವಿಪರೀತ ಮಾತನಾಡಿ ಮನೆಯಾಚೆ ಟ್ರೋಲ್ ಆಗುತ್ತಿದ್ದಾರೆ. ರೂಪೇಶ್ ಶೆಟ್ಟಿ ಮತ್ತು ಸಾನ್ಯ ಅಯ್ಯರ್ ನಡುವಿನ ಸ್ನೇಹಿ ವಿಚಿತ್ರ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಕಾವ್ಯಶ್ರೀ ಮತ್ತು ವಿನೋದ್ ನಡುವೆ ಮನಸ್ತಾಪ ಮುಂದುವರೆಯುತ್ತಲೇ ಇದೆ. ಅದೇ ರೀತಿಯ ಆರ್ಯವರ್ಧನ್ ಗುರೂಜಿಯ ಮಾತುಗಳು ಮನೆಯಲ್ಲಿರುವವರಿಗೆ ಇಷ್ಟವಾಗುತ್ತಿಲ್ಲ.

    ಆರ್ಯವರ್ಧನ್ (Aryavardhan) ಬಾಯ್ಬಿಟ್ಟರೆ ಬೈಗಳು ಕೇಳಿಸುತ್ತದೆ. ಹೀಗೆ ಬೈದರೆ ಹೇಗೆ ಎಂದು ಯಾರಾದರೂ ಕೇಳಿದರೆ, ಅದನ್ನೆಲ್ಲ ಕಟ್ ಮಾಡಿ ವಾಹಿನಿಯವರು ಪ್ರಸಾರ ಮಾಡ್ತಾರೆ ಬಿಡಿ ಅಂತಾರೆ. ಒಂದೊಂದು ಸಲ ಬಿಗ್ ಬಾಸ್ ಮನೆಯಲ್ಲಿ ಇರುವವರೂ ಮುಜುಗರ ಪಟ್ಟುಕೊಳ್ಳುವಷ್ಟು ಕೆಟ್ಟ ಪದಗಳಿಂದ ಅವರು ಬೈಯುತ್ತಾರೆ. ಈ ಮಾತುಗಳು ಸ್ವತಃ ಸುದೀಪ್ ಅವರಿಗೂ ನೋವನ್ನುಂಟು ಮಾಡಿವೆ. ಹಾಗಾಗಿಯೇ ಈ ಬಾರಿ ಈ ಕುರಿತು ಸುದೀಪ್ ‍(Sudeep) ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ:ರಚಿತಾ ರಾಮ್ @30: ಹ್ಯಾಪಿ ಬರ್ತ್‌ಡೇ ರಚ್ಚು ಅಂದ್ರು ಫ್ಯಾನ್ಸ್

    ಈ ವಾರ ನಡೆದ ಕಿಚ್ಚನ ಜೊತೆಗಿನ ಮಾತುಕತೆಯಲ್ಲಿ ಆರ್ಯವರ್ಧನ್ ಗುರೂಜಿ ಜೊತೆ ಮಾತನಾಡಿದ ಸುದೀಪ್, ‘ಯಾಕೆ ನೀವು ಅಷ್ಟೊಂದು ಕೆಟ್ಟದ್ದಾಗಿ ಬೈತಿರಿ? ಬೈಗುಳ (Baigula) ಕಂಟ್ರೋಲ್ ಮಾಡಿಕೊಳ್ಳಲು ಆಗುವುದಿಲ್ಲವಾ? ಎಂದು ಕೇಳುತ್ತಾರೆ. ಅದಕ್ಕೆ ಗುರೂಜಿ ಕೊಟ್ಟ ಉತ್ತರಕ್ಕೆ ಸುದೀಪ್ ತೃಪ್ತಿ ಆಗುವುದಿಲ್ಲ. ನಾನು ಹಳ್ಳಿಯಿಂದ ಬಂದವನು, ಹಳ್ಳಿಯ ಬೈಗುಳ ಸಡನ್ನಾಗಿ ಬರುತ್ತವೆ. ಅದು ನನಗೆ ಗೊತ್ತಿಲ್ಲದೇ ಬರುವಂಥದ್ದು ಅಂತಾರೆ.

    ಗುರೂಜಿ (Guruji) ಮಾತನ್ನು ಒಪ್ಪಿಕೊಳ್ಳದ ಸುದೀಪ್, ಏನೇನೋ ಮಾತಾಡಿ ಹಳ್ಳಿಯ ಮರ್ಯಾದೆ ತಗೆಯಬೇಡಿ. ಡಾ.ರಾಜ್ ಕುಮಾರ್ ಕೂಡ ಹಳ್ಳಿಯಿಂದಲೇ ಬಂದವರು. ಎಂದೂ ಅವರು ಕೆಟ್ಟ ಮಾತುಗಳನ್ನು ಆಡಲಿಲ್ಲ. ಅದೆಷ್ಟೋ ಜನರು ಹಳ್ಳಿಯಿಂದ ಬಂದಿದ್ದಾರೆ. ಅವರೆಲ್ಲರೂ ಅಂತಹ ಪದಗಳನ್ನು ಬಳಸುವುದಿಲ್ಲ ಎಂದು ಹೇಳುತ್ತಾರೆ. ಹೀಗೆ ಸಮರ್ಥನೆ ಮಾಡಿ ಹಳ್ಳಿಗೆ ಅವಮಾನ ಮಾಡಬೇಡಿ ಎನ್ನುತ್ತಾರೆ ಸುದೀಪ್.

    ಮತ್ತೆ ತಮ್ಮ ಮಾತನ್ನು ಮುಂದುವರೆಸುವ ಗುರೂಜಿ, ನಾನು ಹೀಗೆ ಆಡುವುದಕ್ಕೆ ಗ್ರಹಗತಿ ಕಾರಣ ಎಂದು ತಮ್ಮದೇ ಆದ ಲೆಕ್ಕಾಚಾರವನ್ನು ಮುಂದುವರೆಸುತ್ತಾರೆ ಗುರೂಜಿ. ಮೂರನೇ ಮನೆಯಲ್ಲಿ ಶನಿ ಇದ್ದಾನೆ. ಎರಡನೇ ಮನೆ ವಾಸಸ್ಥಾನ ಮತ್ತು ಮೂರನೇ ಮನೆ ಕೋಪ ಸ್ಥಾನ ಎಂದು ಹೇಳಲು ಶುರು ಮಾಡುತ್ತಾರೆ ಗುರೂಜಿ. ನನ್ನಿಂದ ಈ ಮಾತುಗಳು ಬರುತ್ತಿಲ್ಲ, ಗ್ರಹಗತಿಗಳೇ ನನ್ನಿಂದ ಹಾಗೆ ಆಡಿಸುತ್ತವೆ ಎಂದು ಹೇಳಿದಾಗ, ಸುದೀಪ್ ಅದನ್ನು ಒಪ್ಪಿಕೊಳ್ಳುವುದಿಲ್ಲ. ಎಲ್ಲದಕ್ಕೂ ಗ್ರಹಗತಿ ಅನ್ನಬೇಡಿ. ಕೆಟ್ ಕೆಟ್ ಪದಗಳನ್ನು ಆಡೋದು ಬೇಡ  ಎನ್ನುತ್ತಾರೆ.

    Live Tv
    [brid partner=56869869 player=32851 video=960834 autoplay=true]

  • ರೂಪೇಶ್ ಶೆಟ್ಟಿ ನನ್ನ ಮಗ ಇದ್ದಂತೆ ಎಂದು ಬಿಗ್ ಬಾಸ್ ಮನೆಯಲ್ಲಿ ಕಣ್ಣೀರಿಟ್ಟ ಗುರೂಜಿ

    ರೂಪೇಶ್ ಶೆಟ್ಟಿ ನನ್ನ ಮಗ ಇದ್ದಂತೆ ಎಂದು ಬಿಗ್ ಬಾಸ್ ಮನೆಯಲ್ಲಿ ಕಣ್ಣೀರಿಟ್ಟ ಗುರೂಜಿ

    ಬಿಗ್ ಬಾಸ್ (Bigg Boss Season 9) ಮನೆ ಒಳಗೆ ಪ್ರವೇಶ ಮಾಡುವಾಗ ಪ್ರತಿ ಸ್ಪರ್ಧಿಗೂ ಸುದೀಪ್ (Sudeep) ಒಂದೊಂದು ಬ್ಯಾಂಡ್ ಕೊಟ್ಟು ಮನೆ ಒಳಗೆ ಕಳುಹಿಸಿದ್ದರು. ಬಿಗ್ ಬಾಸ್ ಆದೇಶ ಮಾಡೋ ತನಕ ಈ ಪಟ್ಟಿ ನಿಮ್ಮ ಬಳಿ ಇರಲಿ ಎಂದು ಎಚ್ಚರಿಕೆಯನ್ನೂ ಕೊಟ್ಟು ಕಳುಹಿಸಿದ್ದರು. ಬಿಗ್ ಬಾಸ್ ಆದೇಶದ ನಂತರ ನಿಮಗೆ ಇಷ್ಟವಾದ ಸದಸ್ಯರಿಗೆ ಈ ಪಟ್ಟಿಯನ್ನು ಕೈಗೆ ಕಟ್ಬೇಕು, ಅದಕ್ಕೆ ಕಾರಣವನ್ನೂ ತಿಳಿಸಬೇಕು ಎಂದು ಹೇಳಲಾಗಿತ್ತು. ಇದೀಗ ಆ ಬ್ಯಾಂಡ್ (Band) ಕಟ್ಟುವ ಸಮಯ ಬಂದಿದೆ.

    ಮನೆಯ ಸದಸ್ಯರು ತಮಗೆ ಸಿಕ್ಕಿರುವ ಬ್ಯಾಂಡ್ ಅನ್ನು ತಮಗಿಷ್ಟದ ವ್ಯಕ್ತಿಗಳಿಗೆ ಕಟ್ಟಿದ್ದಾರೆ. ಅದಕ್ಕೆ ಕಾರಣವನ್ನೂ ಕೊಟ್ಟಿದ್ದಾರೆ. ಆದರೆ, ಆರ್ಯವರ್ಧನ್  (Aryavardhan) ಗುರೂಜಿ ಆಯ್ಕೆ ಮಾಡಿಕೊಂಡ ವ್ಯಕ್ತಿ ಮತ್ತು ಅವರು ಕೊಟ್ಟ ಕಾರಣದಿಂದಾಗಿ ಬಿಗ್ ಬಾಸ್ ಮನೆಯ ಸದಸ್ಯರು ಕೆಲ ನಿಮಿಷಗಳ ಕಾಲ ಭಾವುಕತೆಗೆ ಸಾಕ್ಷಿಯಾದರು. ಸ್ವತಃ ಗುರೂಜಿ (Guruji) ಕಣ್ಣೀರಿಟ್ಟು ಆ ಬ್ಯಾಂಡ್ ಅನ್ನು ವ್ಯಕ್ತಿಗೆ ನೀಡಿದರು. ಇದನ್ನೂ ಓದಿ: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಆಸ್ಪತ್ರೆ ದಾಖಲು: ಅಭಿಮಾನಿಗಳಿಗೆ ಹೆಚ್ಚಿದೆ ಆತಂಕ

    ನಾನು ಸೋತ ವೇಳೆಯಲ್ಲಿ, ಹತಾಶನಾದ ಟೈಮ್ನಲ್ಲಿ ನನ್ನ ಜೊತೆ ನಿಂತವನು ರೂಪೇಶ್ ಶೆಟ್ಟಿ (Rupesh Shetty), ನಾನು ನನ್ನ ಮಗನನ್ನು ಎಷ್ಟು ಪ್ರೀತಿಸುತ್ತೇನೋ ಅಷ್ಟೇ ಪ್ರೀತಿಯನ್ನು ರೂಪೇಶ್‍ ಗೆ ಕೊಡುವೆ. ಅವನು ನನ್ನ ಮಗನಿದ್ದಂತೆ ಎಂದು ಘೋಷಿಸಿದರು. ಈ ವೇಳೆಯಲ್ಲಿ ಭಾವುಕರೂ ಆದರು. ಭಾವುಕತೆಯ ತೀವ್ರ ಎಷ್ಟಿತ್ತು ಅಂದರೆ, ರೂಪೇಶ್ ಹೆಸರಿನ ಬದಲಾಗಿ ರಾಕೇಶ್ (Rakesh Adiga) ಎಂದು ಹೇಳಿದರು. ಈ ಮಾತು ಕೇಳಿ ರಾಕೇಶ್ ಅಚ್ಚರಿ ವ್ಯಕ್ತ ಪಡಿಸಿದರು. ಕೊನೆಗೆ ರಾಕೇಶ್ ಅಲ್ಲ ರೂಪೇಶ್ ಎಂದು ತಿದ್ದಿಕೊಂಡು ರೂಪೇಶ್ ಗೆ ಬ್ಯಾಂಡ್ ಕಟ್ಟಿದರು ಗುರೂಜಿ.

    ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ರಕ್ಷಣಾತ್ಮಕವಾಗಿ ಆಟ ಆಡುತ್ತಿದ್ದಾರೆ. ಬಿಗ್ ಬಾಸ್ ಓಟಿಟಿಯಲ್ಲಿಯ ಅನುಭವವನ್ನೂ ಈ ಮನೆಯಲ್ಲೂ ಉಪಯೋಗಿಸ್ತಿದ್ದಾರೆ. ಹಾಗಾಗಿ ರೂಪೇಶ್ ಎಲ್ಲರ ನೆಚ್ಚಿನ ಡಾರ್ಲಿಂಗ್ ಆಗಿದ್ದಾರೆ. ಅದರಲ್ಲೂ ಸದಾ ಗುರೂಜಿಯ ಬೆನ್ನಿಗೆ ನಿಂತ ಕಾರಣದಿಂದಾಗಿ ಪ್ರೀತಿಯ ಬ್ಯಾಂಡ್ ಅನ್ನು ಪಡೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಬಿಗ್ ಬಾಸ್’ ಮನೆಯಲ್ಲಿ ಭಯಾನಕ ಸೌಂಡ್ : ದಿಕ್ಕೆಟ್ಟು ಓಡಿದ ಸ್ಪರ್ಧಿಗಳು

    ‘ಬಿಗ್ ಬಾಸ್’ ಮನೆಯಲ್ಲಿ ಭಯಾನಕ ಸೌಂಡ್ : ದಿಕ್ಕೆಟ್ಟು ಓಡಿದ ಸ್ಪರ್ಧಿಗಳು

    ಬಿಗ್ ಬಾಸ್ (Bigg Boss Season 9) ಮನೆಯ ಅಷ್ಟೂ ಸದಸ್ಯರು ಬೆಚ್ಚಿ ಬಿದ್ದಿದ್ದಾರೆ. ಸವಿ ನಿದ್ರೆಯಲ್ಲಿ ಮೈ ಮರೆತು ಮಲಗಿದ್ದವರು, ಬಿಗ್ ಬಾಸ್ ಮನೆಯಲ್ಲಿ ಕೇಳಿ ಬಂದ ಭಯಾನಕ ಸೌಂಡ್‍ಗೆ ದಿಕ್ಕೆಟ್ಟು ಗಾರ್ಡನ್ ಏರಿಯಾದತ್ತ ಓಡಿದ ಪ್ರಸಂಗ ನಡೆದಿದೆ. ಶಬ್ದ ಕೇಳುತ್ತಿದ್ದಂತೆಯೇ ಜೀವವೇ ಬಾಯಿಗೆ ಬಂದಂತಾಗಿ, ಪ್ರಾಣ ರಕ್ಷಣೆಗಾಗಿ ಅತ್ತಿತ್ತ ಓಡಿದ ಘಟನೆ ನಡೆದಿದೆ. ಭಯಾನಕ ಹಾಗೂ ವಿಚಿತ್ರ ಸೌಂಡ್ ಜೊತೆಗೆ ಮನೆಯ ಲೈಟ್ ಕೂಡ ವಿಚಿತ್ರವಾಗಿ ಕುಣಿದು ಆತಂಕದ ವಾತಾವರಣ ಸೃಷ್ಟಿಯಾಗಿದೆ.

    ಒಬ್ಬರಿಗೊಬ್ಬರು ಕಾಲೆಳೆದುಕೊಂಡು, ಕಚಗುಳಿ ಇಡ್ತಾ, ಆಗೊಮ್ಮೆ ಈಗೊಮ್ಮೆ ರೊಮ್ಯಾಂಟಿಕ್ ಆಗಿ ಮಾತಾಡ್ತಾ, ಸವಿ ನಿದ್ದೆಗೆ ಜಾರೋದು ಬಿಗ್ ಬಾಸ್ ಮನೆಯಲ್ಲಿದ್ದವರ ದಿನಚರಿ. ರಾತ್ರಿ ಹಾಯಾಗಿ ಮಲಗಿ, ಬೆಳಗ್ಗೆ ‘ಎದ್ದೇಳು ಮಂಜುನಾಥ’ ಹಾಡಿಗೆ ಕುಣಿಯುತ್ತಾ ಹೊಸ ದಿನ ಶುರು ಮಾಡೋ ಹೊತ್ತಲ್ಲಿ ಈ ಭಾರೀ ಕೆಲ ಹೊತ್ತು ಆತಂಕ ಸೃಷ್ಟಿ ಮಾಡಿತ್ತು. ಕೆಲವರು ನಿಂತಲ್ಲಿಯೇ ಬೆಚ್ಚಿದರೆ, ಕೆಲವರು ಬಿಗ್ ಬಾಸ್ ಮನೆಯಿಂದ ಓಡಿ ಹೋಗುವ ಪ್ರಯತ್ನ ಮಾಡಿದ್ದಾರೆ. ಇನ್ನೂ ಕೆಲವರು ಗಾರ್ಡನ್ ಏರಿಯಾಗೆ ಬಂದು ಸುಧಾರಿಸಿಕೊಂಡಿದ್ದಾರೆ. ಇದನ್ನೂ ಓದಿ:‘ಸಂಸ್ಕಾರ ಭಾರತ’ದಲ್ಲಿ ಅನಾಮಿಕನ ರೋಚಕ ಸ್ಟೋರಿ

    ಅಷ್ಟಕ್ಕೂ ಆ ಶಬ್ದ ಬಂದಿದ್ದು ಎಲ್ಲಿಂದ ಎನ್ನುವುದೇ ಇಂಟ್ರಸ್ಟಿಂಗ್ ವಿಷ್ಯ. ಸಾಮಾನ್ಯವಾಗಿ ಬೆಳಗ್ಗೆ ಸ್ಪರ್ಧಿಗಳನ್ನು ಎಬ್ಬಿಸೋಕೆ ‘ಎದ್ದೇಳು ಮಂಜುನಾಥ’ ಹಾಡು ಹಾಕಲಾಗತ್ತೆ. ಅದರ ಬಲು ಭಾರೀ ಶಬ್ದ ಮಾಡಿ ಎಬ್ಬಿಸುವ ಪ್ರಯತ್ನ ನೆನ್ನೆ ನಡೆದಿದೆ. ಶಬ್ದ ಕೇಳಿ ಭಯಗೊಂಡು ಗಾರ್ಡನ್ ಏರಿಯಾಗೆ ಬಂದವರಿಗೆ ಅಲ್ಲೊಂದು ಸರ್ ಪ್ರೈಸ್ ಕಾದಿತ್ತು. ಗಾರ್ಡನ್ ಏರಿಯಾದಲ್ಲಿ ಮೆದುಳಿನ ಮಾದರಿಯನ್ನು ಇಡಲಾಗಿತ್ತು. ಈ ಮೆದುಳಿಗೆ ಲೈಟ್ ಕೂಡ ಹಾಕಿ ಡೆಕಾರೇಟ್ ಮಾಡಲಾಗಿದೆ.

    ಬಿಗ್ ಬಾಸ್ ಮನೆಯಲ್ಲಿ ಕೇಳಿ ಬಂದ, ಭಯಾನಕ ಶಬ್ದಕ್ಕೂ ಈ ಮೆದುಳಿನಾಕೃತಿಗೂ ಏನಾದರೂ ಸಂಬಂಧ ಇದೆಯಾ? ಎನ್ನುವ ಪ್ರಶ್ನೆ ಮೂಡುವುದು ಸಹಜ. ಹೌದು, ಈ ವಾರದಲ್ಲಿ ಮೆದುಳಿಗೆ ಸಂಬಂಧಿಸಿದ ಟಾಸ್ಟ್ ಇರಲಿದೆ ಎಂದು ಹೇಳಲಾಗುತ್ತಿದೆ. ಶಕ್ತಿ ಮತ್ತು ಯುಕ್ತಿಗಳ ಸಮ್ಮಿಲನವೇ ಈ ವಾರದ ಟಾಸ್ಕ್ ಎಂದು ಹೇಳಲಾಗುತ್ತಿದೆ. ಅದನ್ನು ತಿಳಿಸುವುದಕ್ಕಾಗಿಯೇ ಬಿಗ್ ಬಾಸ್ ಈ ರೀತಿ ಆಟವಾಡಿದ್ದಾರೆ ಎನ್ನುವುದು ಮನೆ ಒಳಗಿದ್ದವರು ಲೆಕ್ಕಾಚಾರ. ಆದರೆ, ಬಿಗ್ ಬಾಸ್ ಲೆಕ್ಕಾಚಾರ ಅದೇನಿದೆಯೋ, ಅವನೇ ಬಲ್ಲ.

    Live Tv
    [brid partner=56869869 player=32851 video=960834 autoplay=true]

  • ಆರ್ಯವರ್ಧನ್ ಹೆಸರನ್ನೂ ಅಳಿಸಿ ಹಾಕಲು ಮತ್ತೊಂದು ತಂತ್ರ ಹೆಣೆದ ‘ಜೊತೆ ಜೊತೆಯಲಿ’ ಟೀಮ್

    ಆರ್ಯವರ್ಧನ್ ಹೆಸರನ್ನೂ ಅಳಿಸಿ ಹಾಕಲು ಮತ್ತೊಂದು ತಂತ್ರ ಹೆಣೆದ ‘ಜೊತೆ ಜೊತೆಯಲಿ’ ಟೀಮ್

    ಜೊತೆ ಜೊತೆಯಲಿ (Jothe Jotheyali) ಧಾರಾವಾಹಿ ಅಂದಾಕ್ಷಣ ಥಟ್ಟನೆ ನೆನಪಾಗುವ ಹೆಸರು ಅನಿರುದ್ಧ ಮತ್ತು ಅವರು ನಿರ್ವಹಿಸುತ್ತಿದ್ದ ಆರ್ಯವರ್ಧನ್ ಪಾತ್ರ. ಸೀರಿಯಲ್ ಟೀಮ್ ಮತ್ತು ಅನಿರುದ್ಧ (Aniruddha) ಅವರ ಹೊಂದಾಣಿಕೆ ಕಾರಣದಿಂದಾಗಿ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಏನೆಲ್ಲ ಬದಲಾವಣೆ ಆಗಿವೆ. ಮೊದಲು ಅನಿರುದ್ಧ ಅವರನ್ನು ಧಾರಾವಾಹಿಯಿಂದ ಕೈ ಬಿಡಲಾಯಿತು. ಆ ಪಾತ್ರವನ್ನು ಕೊಲ್ಲುವ ಪ್ರಯತ್ನ ಮಾಡಲಾಯಿತು. ಹೊಸ ಕಲಾವಿದನನ್ನು ಆಯ್ಕೆ ಮಾಡಿ, ಹೈಡ್ರಾಮಾ ಮೂಲಕ ಅನಿರುದ್ಧ ಅವರ ಮುಖಕ್ಕೆ ಹರೀಶ್ ರಾಜ್  (Harish Raj) ತರಲಾಯಿತು.

    ಈ ಡ್ರಾಮಾ ಅಲ್ಲಿಗೆ ಮುಗಿಯಲಿಲ್ಲ. ಮನೆಯಲ್ಲಿ ಹಾಕಲಾಗಿದ್ದ ಆರ್ಯವರ್ಧನ್(ಅನಿರುದ್ಧ) ಫೋಟೋವನ್ನು ತಗೆಸಿ ಹಾಕಲು ಮತ್ತೊಂದು ತಂತ್ರವನ್ನು ಹೂಡಲಾಯಿತು. ಅಲ್ಲಿಗೆ ಮನೆಯಲ್ಲಿದ್ದ ಅನಿರುದ್ಧ ಫೋಟೋವನ್ನು ತೆಗೆಸುವ ಮೂಲಕ ಧಾರಾವಾಹಿಯಿಂದ ಅನಿರುದ್ಧ ಅವರನ್ನು ಸಂಪೂರ್ಣ ಕೈ ಬಿಡಲಾಯಿತು. ಇದೀಗ ಆರ್ಯವರ್ಧನ್ ಅಂದಾಕ್ಷಣ ಥಟ್ಟನೆ ಅನಿರುದ್ಧ ನೆನಪಾಗುವುದರಿಂದ  ಆ ಹೆಸರನ್ನೂ ಕೈ ಬಿಡುವ ಮತ್ತೊಂದು ತಂತ್ರಕ್ಕೆ ಟೀಮ್ ಮೊರೆ ಹೋಗಿದೆ. ಇದನ್ನೂ ಓದಿ:‘ಬಿಗ್ ಬಾಸ್’ ಮನೆಗೆ ಬ್ರಹ್ಮಾಂಡ ಗುರೂಜಿ ಹೋದರೆ ಮಜವಾಗಿರತ್ತೆ ಅಂತಿದ್ದಾರೆ ನೆಟ್ಟಿಗರು

    ಆರ್ಯವರ್ಧನ್ (Aryavardhan) ಹೆಸರಿನ ಬದಲು ಈ ಪಾತ್ರಕ್ಕೆ ಸಂಜು ಎಂದು ಮರುನಾಮಕಾರಣ ಮಾಡಲಾಗುತ್ತಿದೆ. ಸ್ವತಃ ಆರ್ಯವರ್ಧನ್ ತಾಯಿಯೇ ಮನೆಯವರಿಗೆ ಇವನ ಮೂಲ ಹೆಸರು ಸಂಜು. ನನಗೆ ಸಂಜು ಹೆಸರು ತುಂಬಾ ಇಷ್ಟ. ಹಾಗಾಗಿ ಈತನಿಗೆ ಸಂಜು ಅಂತಾನೇ ಹೆಸರಿಟ್ಟಿದ್ದೆ ಎಂದು ಎಲ್ಲರಿಗೂ ಪರಿಚಯಿಸುತ್ತಾಳೆ. ಈ ಹೆಸರು ಕೇಳಿ ಅನು ಶಾಕ್ ಆಗುತ್ತಾಳೆ. ನಾನು ಇವನನ್ನು ಸಂಜು (Sanju) ಅಂತಾನೇ ಕರೀತೀನಿ ಎಂದು ತಾಯಿಯ ಮೂಲಕ ಹೇಳಿಸಿ, ಆರ್ಯವರ್ಧನ್ ಹೆಸರನ್ನೂ ಅಳಿಸಿ ಹಾಕುವಂತಹ ಪ್ರಯತ್ನವು ನಡೆದಿದೆಯಾ ಎನ್ನುವ ಅನುಮಾನ ಮೂಡದೇ ಇರದು.

    ಕೇವಲ ತಾಯಿ ಮಾತ್ರ ಸಂಜು ಅನ್ನುತ್ತಾಳಾ ಅಥವಾ ಇಡೀ ಕುಟುಂಬವೇ ಆರ್ಯವರ್ಧನನ್ನು ಸಂಜು ಎಂದು ಕರೆಯುತ್ತಾ ಗೊತ್ತಿಲ್ಲ. ಸದ್ಯಕ್ಕಂತೂ ಪ್ರೇಕ್ಷಕರಿಗೆ ಇಂಥದ್ದೊಂದು ಅನುಮಾನ ಮೂಡಿದ್ದು ಸುಳ್ಳಲ್ಲ. ಇದು ತಂತ್ರವಾ? ಅಥವಾ ಕಥೆಯಲ್ಲಿ ಮತ್ತೇನೋ ಹೇಳುವ ಪ್ರಯತ್ನವಾ ಮುಂದಿನ ದಿನಗಳಲ್ಲಿ ತಿಳಿಯಲಿದೆ.

    Live Tv
    [brid partner=56869869 player=32851 video=960834 autoplay=true]

  • ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಇನ್ಮುಂದೆ ಅನಿರುದ್ಧ ಫೋಟೋನೂ ಇರಲ್ಲ

    ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಇನ್ಮುಂದೆ ಅನಿರುದ್ಧ ಫೋಟೋನೂ ಇರಲ್ಲ

    ಕೊನೆಗೂ ಅನಿರುದ್ಧ (Aniruddha) ಅವರನ್ನು ಜೊತೆ ಜೊತೆಯಲಿ ಧಾರಾವಾಹಿಯಿಂದ (Serial) ಸಂಪೂರ್ಣವಾಗಿ ಹೊರ ಹಾಕಿದಂತಾಗಿದೆ. ಈವರೆಗೂ ಟೈಟಲ್ ಕಾರ್ಡ್ ನಲ್ಲಿ ಮತ್ತು ಕಥಾಭಾಗದಲ್ಲೂ ಅನಿರುದ್ಧ ಅವರು ಬೇರೆ ಬೇರೆ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಸಂಪೂರ್ಣವಾಗಿ ಧಾರಾವಾಹಿಯಿಂದ ಅವರನ್ನು ಹೊರ ಹಾಕಲಾಗಿದೆ. ಈಗ ಜೊತೆ ಜೊತೆಯಲಿ (Jote Joteyali) ಧಾರಾವಾಹಿಯ ಟೈಟಲ್ ಕಾರ್ಡ್ ಬದಲಾಗಿದೆ. ಆದರೆ, ಕಥೆಯಲ್ಲಿ ಅವರು ಉಳಿದುಕೊಳ್ಳುವ ಸಾಧ್ಯತೆ ಇತ್ತು. ಅದನ್ನೂ ಇಲ್ಲದಂತೆ ಮಾಡಿದೆ ಟೀಮ್.

    ಕಥೆಯ ಪ್ರಕಾರ ಹರೀಶ್ ರಾಜ್ ನಿರ್ವಹಿಸುತ್ತಿದ್ದ ಪಾತ್ರ ಸತ್ತಿದೆ. ಅನು (Anu) ಪ್ರಕಾರ ಅನಿರುದ್ಧ ನಟಿಸುತ್ತಿದ್ದ ಆರ್ಯವರ್ಧನ್ ಪಾತ್ರ ಸತ್ತಿದೆ. ಹಾಗಾಗಿ ಮನೆಯಲ್ಲಿ ಆರ್ಯವರ್ಧನ್ ಫೋಟೋಗೆ ಪೂಜೆ ಮತ್ತು ಹಾರ ಹಾಕಿದ್ದ ಸನ್ನಿವೇಶವೊಂದು ಇತ್ತು. ಆರ್ಯವರ್ಧನ್ (Aryavardhan) ಸತ್ತಿದ್ದಾನೆ ಅಂದರೆ, ಅನು ಮನೆಯಲ್ಲಿ ಅವನ ಫೋಟೋ ಇರದೇ ಇದ್ದರೆ ಹೇಗೆ? ಒಂದು ವೇಳೆ ಫೋಟೋವಿದ್ದರೆ ನೋಡುಗರಿಗೆ ಕನ್ಫೂಷನ್, ಈ ಕಡೆ ಅನಿರುದ್ಧ ಅವರ ಫೋಟೋ. ಆದರೆ, ಪಾತ್ರ ಮಾಡುತ್ತಿರುವುದು ಸದ್ಯ ಹರೀಶ್ ರಾಜ್. ಈ ಗೊಂದಲವೇ ಬೇಡವೆಂದು ಬೇರೆ ಉಪಾಯ ಮಾಡಿದೆ ಟೀಮ್. ಇದನ್ನೂ ಓದಿ:‘ಬಿಗ್ ಬಾಸ್’ ಮನೆಗೆ ಬ್ರಹ್ಮಾಂಡ ಗುರೂಜಿ ಹೋದರೆ ಮಜವಾಗಿರತ್ತೆ ಅಂತಿದ್ದಾರೆ ನೆಟ್ಟಿಗರು

    ಆರ್ಯವರ್ಧನ್ ಸತ್ತಿದ್ದಾನೆ ಎಂದೇ ಈವರೆಗೂ ಕಥಾ ನಾಯಕಿ ಅನು ಅಂದುಕೊಂಡಿದ್ದಾಳೆ. ಹಾಗಾಗಿಯೇ ಆರ್ಯವರ್ಧನ್ ಫೋಟೋವನ್ನು ಅವರ ಮನೆಯಲ್ಲಿ ಹಾಕಿ, ಅದಕ್ಕೆ ಹೂವಿನ ಹಾರವನ್ನೂ ಹಾಕಲಾಗಿತ್ತು. ಅದನ್ನು ನೋಡಿದ ಅನು, ಆರ್ಯವರ್ಧನ್ ಫೋಟೋಗೆ ಹಾರ ಹಾಕುವುದನ್ನು ನೋಡಲು ನನಗೆ ಇಷ್ಟವಿಲ್ಲ ಎನ್ನುವ ಡೈಲಾಗ್ ಹೇಳಿಸುವ ಮೂಲಕ ಆರ್ಯವರ್ಧನ್ ಫೋಟೋವನ್ನೂ ತೆಗಿಸಿ ಹಾಕಿದ್ದಾಳೆ. ಅಲ್ಲಿಗೆ ಅನಿರುದ್ಧ ಸಂಪೂರ್ಣವಾಗಿ ಧಾರಾವಾಹಿಯಿಂದ ಹೊರ ನಡೆದಂತಾಗಿದೆ.

    ಇದೀಗ ಹೊಸ ಆರ್ಯವರ್ಧನ್ ಆಗಿ ಹರೀಶ್ ರಾಜ್ (Harish Raj) ಪ್ರವೇಶ ಮಾಡಿದ್ದಾರೆ. ಇವರೇ ಆರ್ಯವರ್ಧನ್ ಎಂದು ಒಪ್ಪಿಸುವ ಜವಾಬ್ದಾರಿ ಇನ್ಮುಂದೆ ಟೀಮ್ ನದ್ದು. ಅದಕ್ಕೆ ಯಾವ ರೀತಿಯ ಕಥೆಯನ್ನು ಹೊಸೆಯುತ್ತಾರೆ ಕಾದು ನೋಡಬೇಕು. ಏನೇ ಆಗಲಿ, ಈವರೆಗೂ ಅನಿರುದ್ಧ ಅವರೇ ಆರ್ಯವರ್ಧನ್ ಆಗಿಯೇ ಇದ್ದರು. ಇದೀಗ ಎಲ್ಲವೂ ಬದಲಾಗಿದೆ. ಕಥೆ ಮತ್ತು ಪಾತ್ರ ಕೂಡ ಬದಲಾವಣೆಗೆ ತೆರೆದುಕೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • Breaking: ಓಟಿಟಿಯಿಂದ ಬಿಗ್ ಬಾಸ್ 9ಕ್ಕೆ ಬರಲಿದ್ದಾರೆ ಈ ನಾಲ್ಕು ಜನ ಸ್ಪರ್ಧಿಗಳು

    Breaking: ಓಟಿಟಿಯಿಂದ ಬಿಗ್ ಬಾಸ್ 9ಕ್ಕೆ ಬರಲಿದ್ದಾರೆ ಈ ನಾಲ್ಕು ಜನ ಸ್ಪರ್ಧಿಗಳು

    ಬಿಗ್ ಬಾಸ್ ಓಟಿಟಿ, ಅಭಿಮಾನಿಗಳ ವಲಯದಲ್ಲಿ ಸಖತ್ ಹೈಪ್ ಕ್ರಿಯೆಟ್ ಮಾಡಿತ್ತು. ಓಟಿಟಿಯ 42 ದಿನಗಳ ಆಟಕ್ಕೆ ಕೊನೆಗೂ ಇದೀಗ ತೆರೆಬಿದ್ದಿದೆ. ಓಟಿಟಿ ಟಾಪರ್ ಆಗಿ ರೂಪೇಶ್ ಶೆಟ್ಟಿ(Roopesh Shetty) ಹೊರಹೊಮ್ಮಿದ್ದಾರೆ. ಅದಷ್ಟೇ ಅಲ್ಲ, ಟಿವಿ ಬಿಗ್ ಬಾಸ್‌ಗೆ ಎಂಟ್ರಿ ಪಡೆದಿದ್ದಾರೆ. ರೂಪೇಶ್ ಶೆಟ್ಟಿ ಜೊತೆಗೆ ಓಟಿಟಿಯ ಇನ್ನೂ ಮೂರು ಸ್ಪರ್ಧಿಗಳು ಟಿವಿ ಬಿಗ್ ಬಾಸ್‌ಗೆ(Bigg Boss9) ಆಯ್ಕೆ ಆಗಿದ್ದಾರೆ.

    ಓಟಿಟಿಯ ಬಿಗ್ ಬಾಸ್ ಆಟಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ಸೀಸನ್ ಟಾಪರ್ ಬಗ್ಗೆ ಸಾಕಷ್ಟು ಕ್ಯೂರಿಯಾಸಿಟಿ ಹುಟ್ಟು ಹಾಕಿತ್ತು. ಆ ಎಲ್ಲಾ ಕೂತೂಹಲಕ್ಕೆ ಈಗ ತೆರೆ ಬಿದ್ದಿದೆ. ತುಳುನಾಡಿನ ಬಹುಮುಖ ಪ್ರತಿಭೆ ರೂಪೇಶ್ ದೊಡ್ಮನೆಯ ಓಟಿಟಿ ಸೀಸನ್ 1ರ ಟಾಪರ್ ಆಗಿದ್ದಾರೆ. ಜತೆಗೆ ಟಿವಿ ಬಿಗ್ ಬಾಸ್‌ಗೆ ಸ್ಪರ್ಧಿಸಲು ರೂಪೇಶ್ ಶೆಟ್ಟಿ ಭರ್ಜರಿ ಅವಕಾಶ ಸಿಕ್ಕಿದೆ. ಅವರ ಜೊತೆ ಆರ್ಯವರ್ಧನ್ ಗುರೂಜಿ,(Aryavardhan) ಸಾನ್ಯ ಅಯ್ಯರ್ (Sanya), ರಾಕೇಶ್ ಅಡಿಗ(Rakesh Adiga) ಬಿಗ್ ಬಾಸ್ ಸೀಸನ್ 9ರಲ್ಲಿ ರಂಜಿಸಲಿದ್ದಾರೆ. ಇದನ್ನೂ ಓದಿ:Breaking: ಓಟಿಟಿ ಟಾಪರ್ ಆಗಿ ಬಿಗ್ ಬಾಸ್ ಸೀಸನ್ 9ಕ್ಕೆ ಎಂಟ್ರಿ ಪಡೆದ ರೂಪೇಶ್ ಶೆಟ್ಟಿ

    ಈ ಹಿಂದಿನ 8 ಸೀಸನ್‌ಗಳ ಕೆಲವು ಪ್ರವೀಣರ ಜೊತೆ ಹೊಸಬರು ಕೂಡ ಟಿವಿ ಬಿಗ್ ಬಾಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೊಸ ಸೀಸನ್‌ ಬಿಗ್‌ ಬಾಸ್ ಈ ಹಿಂದಿನ ಸೀಸನ್‌ಗಿಂತ ವಿಭಿನ್ನವಾಗಿರಲಿದೆ. ಸೆ.25ರಿಂದ ರಾತ್ರಿ 9.30ಕ್ಕೆ ಬಿಗ್ ಬಾಸ್ ಪ್ರಸಾರವಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • ‘ಜೊತೆ ಜೊತೆಯಲಿ’ ಸೀರಿಯಲ್ ಮತ್ತೊಂದು ಟ್ವಿಸ್ಟ್ : ಆರ್ಯವರ್ಧನ್ ಕೊಲ್ಲಿಸೋಕೆ ಅನುನೇ ಕೊಟ್ಳು ಸುಪಾರಿ

    ‘ಜೊತೆ ಜೊತೆಯಲಿ’ ಸೀರಿಯಲ್ ಮತ್ತೊಂದು ಟ್ವಿಸ್ಟ್ : ಆರ್ಯವರ್ಧನ್ ಕೊಲ್ಲಿಸೋಕೆ ಅನುನೇ ಕೊಟ್ಳು ಸುಪಾರಿ

    ಟ ಅನಿರುದ್ಧ(Aniruddha)  ಜೊತೆ ಜೊತೆಯಲಿ (Jothe Jotheyali) ಸೀರಿಯಲ್ ನಿಂದ ಆಚೆ ಬರುತ್ತಿದ್ದಂತೆಯೇ ಏನೆಲ್ಲ ಬೆಳವಣಿಗೆಗಳು ಕಥೆಯಲ್ಲಿ ಆಗುತ್ತಿವೆ. ವಾರಕ್ಕೊಂದು ತಿರುವು ಕೊಡುವುದರ ಮೂಲಕ ಪ್ರೇಕ್ಷಕರನ್ನು ಕಟ್ಟಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ ನಿರ್ದೇಶಕರು. ಮೊನ್ನೆಯಷ್ಟೇ ಆರ್ಯವರ್ಧನ್ ಪಾತ್ರಕ್ಕೆ ಕಾರು ಅಪಘಾತ ಮಾಡಿಸಿದ್ದರು. ಈಗಷ್ಟೇ ಎಂಟ್ರಿ ಕೊಟ್ಟಿರುವ ಹರೀಶ್ ರಾಜ್ ಪಾತ್ರವನ್ನು ಸಾಯಿಸೇ ಬಿಟ್ಟರು. ಇದೀಗ ಕಥಾ ನಾಯಕಿ ಅನು ಮೇಲೆ ಗುರುತರ ಆರೋಪವೊಂದನ್ನು ಹೊರಿಸಿದ್ದಾರೆ.

    ಆರ್ಯವರ್ಧನ್ ಕಾರು ಆಕ್ಸಿಡೆಂಟ್ ಮಾಡಿಕೊಂಡು ಮುಖ ಗುರುತೇ ಸಿಗದಷ್ಟು ಗಾಯ ಮಾಡಿಕೊಂಡು ಆಸ್ಪತ್ರೆ ಸೇರಿದ್ದರು. ಅದೇ ಆಸ್ಪತ್ರೆಗೆ ಹರೀಶ್ ರಾಜ್ (Harish Raj) ನಿರ್ವಹಿಸುವ ಪಾತ್ರವು ಆತ್ಮಹತ್ಯೆ ಮಾಡಿಕೊಂಡ ಬಾಡಿ ಕೂಡ ಬಂದಿತ್ತು. ಈಗ ಆರ್ಯವರ್ಧನ್ ಫೇಸ್ ಗೆ ಹರೀಶ್ ರಾಜ್ ಫೇಸ್ ಸೇರಿಸಿ ಹೊಸ ಆರ್ಯವರ್ಧನ್ ಸೃಷ್ಟಿ ಆಗಿದ್ದಾನೆ. ಹರೀಶ್ ರಾಜ್ ಪಾತ್ರಕ್ಕೆ ಬೆಂಕಿ ಇಡಲಾಗಿದೆ. ಅದೇ ಸಮಯದಲ್ಲೇ ಮತ್ತೊಂದು ಮೆಗಾ ಟ್ವಿಸ್ಟ್ ಕೊಡಲಾಗಿದೆ. ಇದನ್ನೂ ಓದಿ:‘ಥ್ಯಾಂಕ್ ಗಾಡ್’ ಚಿತ್ರದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ: ನಟ ಅಜಯ್ ದೇವಗನ್ ವಿರುದ್ಧ ದೂರು ದಾಖಲು

    ಗಂಡನನ್ನು ಅತಿಯಾಗಿ ಪ್ರೀತಿಸುತ್ತಿದ್ದ ಅನು (Anu) , ಹೆಂಡತಿ ಕಂಡರೇ ಅಷ್ಟೇ ಗೌರವ ಕೊಡುತ್ತಿದ್ದ ಆರ್ಯವರ್ಧನ್ ಪಾತ್ರದ ಮಧ್ಯ ಕಂದಕ ಸೃಷ್ಟಿ ಮಾಡಿದ್ದು, ಆರ್ಯವರ್ಧನ್ ಅಪಘಾತಕ್ಕೆ ಅನುನೆ ಕಾರಣವೆಂದು ಕಥೆ ಬರೆದುಕೊಳ್ಳಲಾಗಿದೆ. ಆರ್ಯವರ್ಧನ್ ಕೊಲೆ (Murder) ಮಾಡಲು ಅನು ಸಂಚು ರೂಪಿಸಿದ್ದರು ಎನ್ನುವ ಕಾರಣಕ್ಕಾಗಿ ಪೊಲೀಸರು (Police) ಅನುವನ್ನು ಬಂಧಿಸಿ ಸ್ಟೇಶನ್ ಗೆ ಕರೆದುಕೊಂಡು ಹೋಗಿದ್ದಾರೆ. ಸ್ಮಶಾನದಿಂದಲೇ ಅನುನನ್ನು ಕರೆದುಕೊಂಡು ಹೋಗಲಾಗಿದೆ.

    ಅನು ಮತ್ತು ಆರ್ಯವರ್ಧನ್ ಪಾತ್ರಗಳ ಸುತ್ತ ಮತ್ತೊಂದು ಸುತ್ತಿನ ಸಮರ ನಡೆಯಲಿದ್ದು, ಆರ್ಯವರ್ಧನ್ (Aryavardhan) ಕೊಲೆಯ ಸುತ್ತ ಹಲವು ಅನುಮಾನಗಳನ್ನು ಕ್ರಿಯೇಟ್ ಮಾಡಿ, ಪಾತ್ರಕ್ಕಿಂತಲೂ ಕಥೆಯೇ ಮುಖ್ಯ ಎಂದು ಸಾರುವಂತಹ ಪ್ರಯತ್ನಗಳನ್ನು ಜೊತೆ ಜೊತೆಯಲಿ ಸೀರಿಯಲ್ (Serial) ತಂಡ ಮಾಡುತ್ತಿದ್ದೆ. ಅದಕ್ಕಾಗಿಯೇ ಕಥೆಯಲ್ಲಿ ವೇಗ ಮತ್ತು ಅಚ್ಚರಿ ಮೂಡಿಸುವಂತಹ ತಿರುವುಗಳನ್ನು ನೀಡಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಆರ್ಯವರ್ಧನ್ ಪಾತ್ರಕ್ಕೆ ಹರೀಶ್ ರಾಜ್ ತರಲು ಏನೆಲ್ಲ ಕಸರತ್ತು ಮಾಡಿತು ‘ಜೊತೆ ಜೊತೆಯಲಿ’ ಟೀಮ್

    ಆರ್ಯವರ್ಧನ್ ಪಾತ್ರಕ್ಕೆ ಹರೀಶ್ ರಾಜ್ ತರಲು ಏನೆಲ್ಲ ಕಸರತ್ತು ಮಾಡಿತು ‘ಜೊತೆ ಜೊತೆಯಲಿ’ ಟೀಮ್

    ನಿರುದ್ಧ (Aniruddha) ನಿರ್ವಹಿಸುತ್ತಿದ್ದ ಆರ್ಯವರ್ಧನ್ (Aryavardhan) ಪಾತ್ರವನ್ನು ಸಾಯಿಸಲ್ಲ, ಬೇರೊಬ್ಬ ಕಲಾವಿದರನ್ನು ಆ ಪಾತ್ರಕ್ಕೆ ತರುವುದಿಲ್ಲ ಎಂದು ಜೊತೆ ಜೊತೆಯಲಿ (Jote Jotheyali) ಧಾರಾವಾಹಿಯ ನಿರ್ಮಾಪಕರು ಹೇಳಿದ್ದಾರೆ ಎನ್ನುವ ಮಾತು ಕಿರುತೆರೆ ಲೋಕದಲ್ಲಿ ಹರಿದಾಡುತ್ತಿತ್ತು. ಆದರೆ, ಎರಡೂ ಆಗಿವೆ, ಎರಡೂ ಆಗಿಲ್ಲ ಎನ್ನುವಂತೆ ಕಥೆಯಲ್ಲಿ ಬದಲಾವಣೆ ಮಾಡಿಕೊಂಡಿದೆ ಧಾರಾವಾಹಿ ತಂಡ. ಹಾಗಾಗಿ ಆರ್ಯವರ್ಧನ್ ಪಾತ್ರವನ್ನೂ ಸಾಯಿಸಿದೇ, ಆ ಪಾತ್ರಕ್ಕೆ ಅಂತ ಕಲಾವಿದನನ್ನೂ ಆಯ್ಕೆ ಮಾಡಿಕೊಳ್ಳದೇ ಜಾಣ ನಡೆ ಪ್ರದರ್ಶಿಸಿದೆ.

    ಆರ್ಯವರ್ಧನ್ ಪಾತ್ರಕ್ಕೆ ಕಾರು ಅಪಘಾತ ಮಾಡಿಸುವ ಮೂಲಕ ಪಾತ್ರದ ಮುಖವನ್ನು ಅಪ್ಪಚ್ಚಿ ಮಾಡಿ, ಆ ಮುಖವನ್ನು ಸರಿ ಮಾಡಲು ಪ್ಲ್ಯಾಸ್ಟಿಕ್ ಸರ್ಜರಿಗಿಂತಲೂ ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಫೇಸ್ ಜೋಡಿಸುವಂತಹ ಶಸ್ತ್ರ ಚಿಕಿತ್ಸೆಗೆ ಮುಂದಾಗಿ, ಆರ್ಯವರ್ಧನ್ ದೇಹಕ್ಕೆ ಹರೀಶ್ ರಾಜ್ (Harish Raj) ಮುಖ ಸೇರಿಸುವ ಮೂಲಕ ಹೊಸ ಆರ್ಯವರ್ಧನ್ ಇದೀಗ ಕಥೆಯೊಳಗೆ ಪ್ರವೇಶ ಮಾಡಿ, ಜನರೆದುರೂ ನಿಂತಿದ್ದಾನೆ. ಅಲ್ಲಿಗೆ ಕೊಟ್ಟ ಮಾತಿಗೆ ನಿರ್ಮಾಪಕರು ತಪ್ಪದಂತೆ ಆಗಿದೆ. ಇದನ್ನೂ ಓದಿ: ಸೋನು ಆಯ್ಕೆ ಮಾಡಿದ್ದಕ್ಕೆ ಗುರೂಜಿಗೆ ಕೋಪ – ನನ್ನ ವೋಟಿಗೆ ನ್ಯಾಯ ಬೇಕೆಂದು ಮನೆ ತುಂಬಾ ರಾದ್ಧಾಂತ!

    ಹರೀಶ್ ರಾಜ್ ಅವರೇ ಇನ್ಮುಂದೆ ಆರ್ಯವರ್ಧನ್ ಪಾತ್ರವನ್ನು ಮಾಡಲಿದ್ದಾರೆ. ಉಳಿದಂತೆ ಅಷ್ಟೂ ಪಾತ್ರಗಳು ಇವರನ್ನೇ ಆರ್ಯವರ್ಧನ್ ಎಂದು ತಿಳಿಯುತ್ತವೆ. ಅಲ್ಲಿಗೆ ಕಥೆ ಸರಾಗವಾಗಿ ಸಾಗುತ್ತದೆ. ಇವನೇ ಆರ್ಯವರ್ಧನ್ ಎಂದು ಪ್ರೇಕ್ಷಕರನ್ನು ನಂಬಿಸಲು ಕಸರತ್ತು ಮಾಡಬೇಕಾಗಿರುವುದರಿಂದ ಅದರಲ್ಲಿ ಧಾರಾವಾಹಿ (serial) ತಂಡ ಹೇಗೆ ಗೆಲುವು ಸಾಧಿಸಲಿದೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ. ಅನಿರುದ್ಧ ಜಾಗವನ್ನು ಹರೀಶ್ ರಾಜ್ ಅದೆಷ್ಟು ಬೇಗ ತುಂಬುತ್ತಾರೆ ಎನ್ನುವುದು ಅವರಿಗೆ ಸವಾಲಿನ ಕೆಲಸ ಕೂಡ.

    Live Tv
    [brid partner=56869869 player=32851 video=960834 autoplay=true]

  • ಆರ್ಯವರ್ಧನ್ ಮುಗ್ಧರಲ್ಲ ಅನ್ನೋದು ಮನೆಮಂದಿಗೆಲ್ಲ ಪ್ರೂವ್ ಆಯ್ತು!

    ಆರ್ಯವರ್ಧನ್ ಮುಗ್ಧರಲ್ಲ ಅನ್ನೋದು ಮನೆಮಂದಿಗೆಲ್ಲ ಪ್ರೂವ್ ಆಯ್ತು!

    ಬಿಗ್ ಬಾಸ್ (Bigg Boss) ಮನೆಯಲ್ಲಿ ಮುಗ್ಧರು ಯಾರು ಅಂತ ಯಾರಾದರೂ ಕೇಳಿದರೆ ಅದು ಆರ್ಯವರ್ಧನ್ ಗುರೂಜಿ (Aryavardhan Guruji) ಎಂದೇ ಮನೆ ಮಂದಿಯೆಲ್ಲಾ ವೋಟ್ ಹಾಕತ್ತಾ ಇದ್ದರು. ಸುದೀಪ್ (Kichcha Sudeepa) ಕೂಡ ಆರ್ಯವರ್ಧನ್ ಅವರಿಗೆ ಏನು ಅರ್ಥವಾಗುವುದಿಲ್ಲ ಅಂತ ಹೇಳಿದ್ದರು. ವೀಕೆಂಡ್ ವೇದಿಕೆಯಲ್ಲಂತೂ ಗುರೂಜಿ ನಡವಳಿಕೆ ಸಖತ್ ಕಾಮಿಡಿ ಕೊಡುತ್ತಿದೆ. ಆದರೆ ಗುರೂಜಿ ನಿಜವಾಗಿಯೂ ಅಷ್ಟು ಮುಗ್ಧರಾ ಎಂಬುದು ಇದೀಗ ಬಯಲಾಗಿದೆ.

    ಆರ್ಯವರ್ಧನ್‍ಗೆ ಬಿಗ್ ಬಾಸ್ ಸ್ಪೆಷಲ್ ಅವಕಾಶವೊಂದನ್ನು ನೀಡಿದೆ. ಅದು 9 ಟಾಸ್ಕ್ ಇರುತ್ತದೆ. ಆ ಟಾಸ್ಕ್ ನ ಮುಂದಾಳತ್ವವನ್ನು ಆರ್ಯವರ್ಧನ್ ವಹಿಸಿಕೊಳ್ಳಬೇಕು. ಆ 9 ಟಾಸ್ಕ್ ಗಳು ಕೂಡ ಈ ಹಿಂದೆ ಆಡಿರುವಂತದ್ದೇ ಆಗಿದೆ. ಮೊದಲ ಆಟದಲ್ಲಿ ಕಲ್ಲಾಟ ಆಯ್ಕೆ ಮಾಡಿಕೊಂಡಿದ್ದಾರೆ. ಈ ಆಟದಲ್ಲಿ ಸ್ವಿಮ್ಮಿಂಗ್ ಪೂಲ್ (Swimming Pool) ನಲ್ಲಿ ಕಲ್ಲುಗಳನ್ನು ಹುಡುಕುವುದಾಗಿದೆ. ಈ ಆಟಕ್ಕೆ ಆರ್ಯವರ್ಧನ್, ಸೋಮಣ್ಣ (Somanna) ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಲ್ಲಿಯ ತನಕ ಯಾರಿಗೆ ಏನೂ ಅನ್ನಿಸಿರಲಿಲ್ಲ.

    ಈವೆನ್ ಸೋಮಣ್ಣನಿಗೆ ಕೂಡ ಅದು ನೆಗೆಟಿವ್ ಪಾಯಿಂಟ್ ಎಂದು ಅನ್ನಿಸಿ ಇರಲಿಲ್ಲ. ಬದಲಿಗೆ ನಾನು ಗೆಲ್ಲಲಿ ಎಂಬುದು ಅವರಿಗೆ ಇದೆ ಎಂದುಕೊಂಡಿದ್ದರು. ಇತ್ತ ಸ್ವಿಮ್ಮಿಂಗ್ ಪೂಲ್‍ನಲ್ಲಿ ಆಟ ಶುರುವಾದಾಗ ಗುರೂಜಿ ಒಂದಷ್ಟು ಕಲ್ಲುಗಳನ್ನು ಸೋಮಣ್ಣನ ಕಡೆಗೆ ಎಸೆದರು. ಇದನ್ನು ಜಯಶ್ರೀ (Jayashree) ಗಮನಿಸಿದ್ದು, ಗುರೂಜಿ ಅಂದುಕೊಂಡಂತೆಯೇ ಸೋಮಣ್ಣ ಸೋತರು. ಆಗ ಜಯಶ್ರೀಯು ಗುರೂಜಿ ಸ್ಟಾಟರ್ಜಿ ಬಗ್ಗೆ ಮಾತನಾಡಿದ್ದಳು. ಇದನ್ನೂ ಓದಿ: ಬಿಗ್ ಬಾಸ್ ಮನೆ ಕಂಡ ಅಚ್ಚರಿಯ ಕ್ಷಣಗಳು

    ಅವರು ತಾವೂ ಗೆಲ್ಲಬೇಕು ಅಂತ ನೋಡುತ್ತಿದ್ದಾರೆಯೇ ವಿನಃ, ನೀವೂ ಗೆಲ್ಲಲಿ ಎಂಬುದು ಅವರ ಮನಸ್ಸಲ್ಲಿ ಇರಲಿಲ್ಲ. ಈಗ ನೆಕ್ಸ್ಟ್ ನನ್ನ ಆಯ್ಕೆ ಮಾಡಿಕೊಳ್ಳುತ್ತೀನಿ ಎಂದಿದ್ದಾರಲ್ಲ ಆಗ ಬಾಲ್ ಆಟ ಆಕೆ ಮಾಡಿಕೊಳ್ಳುತ್ತಾರೆ. ಯಾಕೆಂದ್ರೆ ಅದರಲ್ಲಿ ಅವರು ಗೆದ್ದಿದ್ದರು, ನಾನು ಸೋತಿದ್ದೆ ಎಂದಿದ್ದಾಳೆ. ಬಿಗ್ ಬಾಸ್ ನೆಕ್ಸ್ಟ್ ಗೇಮ್ ಆಡುವ ಸಮಯ ನೀಡಿದಾಗ ಜಯಶ್ರೀ ಹೇಳಿದ್ದೇ ಪ್ರೂವ್ ಆಯ್ತು. ಆ ಆಟದಲ್ಲಿ ಜಯಶ್ರೀ ಸೋತು, ಗುರೂಜಿ ಮತ್ತೊಂದು ಅವಕಾಶ ನೀಡಿದರು. ಆದರೆ ಅಷ್ಟರಲ್ಲಾಗಲೇ ಓವರ್ ಕಾನ್ಫಿಡೆನ್ಸ್ ಗುರೂಜಿಗೆ ಬಂದಿತ್ತು.

    ಆಗ ಮುಂದಿನ ಆಟ ಕ್ಯಾನ್ ನಿಂದ ಬಾಲ್ ಶಿಫ್ಟ್ ಮಾಡುವುನ್ನು ಆಯ್ಕೆ ಮಾಡಿಕೊಂಡರು. ಅದಕ್ಕೂ ಮತ್ತೆ ಜಯಶ್ರೀಯನ್ನೇ ಆಯ್ಕೆ ಮಾಡಿದರು. ನಿರೀಕ್ಷೆಯಂತೆ ಅವರೇ ಗೆದ್ದರು. ಆದರೆ ಮಾಡಿದ ಸಣ್ಣ ಮಿಸ್ಟೇಕ್ ಆಟದಿಂದ ಔಟ್ ಆದರೂ, ಅಧಿಕಾರ ಮನೆಮಂದಿಗೆ ವೋಟ್ (Vote) ಮಾಡಿ ಅಥವಾ ಒಮ್ಮತದಿಂದ ಆಯ್ಕೆ ಮಾಡುವ ಅವಕಾಶ ಸಿಕ್ಕಿತು. ಇದರಿಂದ ಇಡೀ ಮನೆ ಮಂದಿಗೆ ಗುರೂಜಿ ಏನು, ಅವರ ಟ್ರಿಕ್ಸ್ ಏನು ಎಂಬುದು ಪ್ರೂವ್ ಆಯ್ತು.

    ಜಯಶ್ರೀ ತನ್ನನ್ನು ಮೊದಲ ಬಾರಿ ಆಯ್ಕೆ ಮಾಡಿಕೊಂಡಾಗ ಖುಷಿಯಾದಳು. ನಾನು ಸೋಲುತ್ತೀನಿ ಅಂತ ಗೊತ್ತಿದ್ದರೂ ಬೇಕಂತಲೇ ಮಾಡಿದ್ದಾರೆ ಎಂದುಕೊಂಡಳು. ಆದರೆ ಮತ್ತೊಂದು ಸಲ ಆಯ್ಕೆ ಮಾಡಿದಾಗ ತಮಾಷೆಯಾಗಿ ನೀವೂ ನನ್ನನ್ನ ಆಯ್ಕೆ ಮಾಡಿ, ನಾನು ಗೆದ್ದರೆ ಮತ್ತೆ ನಿಮ್ಮನ್ನೆ ಆಯ್ಕೆ ಮಾಡುತ್ತೀನಿ ಎಂದಿದ್ದಳು. ಅದಾದ ಬಳಿಕ ಮುಂದಿನ ಆಟಕ್ಕೆ ನನ್ನನ್ನು ಆಯ್ಕೆ ಮಾಡಬೇಡಿ ಎಲ್ಲರೂ ಬೇಜಾರು ಮಾಡಿಕೊಳ್ಳುತ್ತಾರೆ. ಇದು ಕೊನೆ ವಾರ ಎಲ್ಲರಿಗೂ ಅವಕಾಶ ಸಿಗಲಿ ಎಂದೇ ಹೇಳಿದ್ದಳು. ಇದನ್ನೂ ಓದಿ: ಸೋನು ಗೌಡ ಪ್ರಕಾರ ಆರ್ಯವರ್ಧನ್‌ ಗುರೂಜಿ ಕಳ್ಳ ಸ್ವಾಮಿ ಅಂತೆ

    Live Tv
    [brid partner=56869869 player=32851 video=960834 autoplay=true]