Tag: Arvind Rao Deshpande

  • ಪೊಲೀಸರಿಗೆ ಕಾಯಬೇಡಿ, ನೀವೇ ಉತ್ತರ ಕೊಡಿ – RSS ಮುಖಂಡ ಅರವಿಂದ್ ದೇಶಪಾಂಡೆ

    ಪೊಲೀಸರಿಗೆ ಕಾಯಬೇಡಿ, ನೀವೇ ಉತ್ತರ ಕೊಡಿ – RSS ಮುಖಂಡ ಅರವಿಂದ್ ದೇಶಪಾಂಡೆ

    ಚಿಕ್ಕೋಡಿ: ದೇಶದಲ್ಲಿ ಲವ್ ಜಿಹಾದ್ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಸರ್ಕಾರ ಇವುಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಇಲ್ಲವಾದರೆ, ನಾವು ಮುಂದೊಂದು ದಿನ ಹಿಂದೂ ಜಿಹಾದ್ ಪ್ರಾರಂಭ ಮಾಡಬೇಕಾಗುತ್ತದೆ ಎಂದು RSS ಮುಖಂಡ ಅರವಿಂದ್ ರಾವ್ ದೇಶಪಾಂಡೆ ಆಕ್ರೋಶ ಹೊರಹಾಕಿದರು.

    ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತ ಹರ್ಷನನ್ನು ಬರ್ಬರವಾಗಿ ಕೊಲೆ ಮಾಡಿರುವುದನ್ನು ಖಂಡಿಸಿ, ಅಥಣಿ ಪಟ್ಟಣದಲ್ಲಿ ಹಿಂದೂಪರ ಸಂಘಟನೆಗಳು ಹಾಗೂ ಬಜರಂಗದಳ ಸಂಘಟನೆಗಳು ಜೊತೆಯಾಗಿ ಶಿವಾಜಿ ಸರ್ಕಲ್ ನಿಂದ ಅಂಬೇಡ್ಕರ್ ವೃತ್ತದ ವರೆಗೆ ಬೃಹತ್ ಪಾದಯಾತ್ರೆ ಮಾಡುವ ಮೂಲಕ ಹರ್ಷನ ಹತ್ಯೆಯನ್ನು ಖಂಡಿಸಿತು. ಇದೇ ಸಂದರ್ಭದಲ್ಲಿ ಸಂಘ ಪರಿವಾರದ ಉತ್ತರ ಪ್ರಾಂತ್ಯ ಮುಖಂಡರಾದ ಅರವಿಂದ್ ರಾವ್ ದೇಶಪಾಂಡೆ ಅವರು ಕೊಲೆಯನ್ನು ತೀವ್ರವಾಗಿ ಖಂಡಿಸಿ ತಪ್ಪಿತಸ್ಥರ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ:  ಕೋರ್ಟ್ ತೀರ್ಪು ಬರೋವರೆಗೂ ಪರೀಕ್ಷೆ ಮುಂದೂಡಿ – ಹಿಜಬ್ ಹೋರಾಟಗಾರ್ತಿಯರು

    ಇನ್ನು ಮುಂದೆ ಯಾವುದೇ ಹಿಂದೂ ಯುವಕನ ಮೇಲೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು. ಇದರೊಂದಿಗೆ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿವೆ. ಇವುಗಳಿಗೆ ಕಡಿವಾಣ ಬಿಳ್ಳದಿದ್ದರೆ ನಾವು ಕೂಡ ಮುಂದೊಂದು ದಿನ ಹಿಂದೂ ಜಿಹಾದ್ ಜಾರಿ ಮಾಡುವ ಸನ್ನಿವೇಶ ನಿರ್ಮಾಣ ಮಾಡಿಕೊಡಬೇಡಿ ಎಂದು ಎಚ್ಚರಿಸಿದರು.

    ಪೊಲೀಸರು ಬರೋವರೆಗೂ ನೀವು ಕಾಯಬೇಡಿ ಅವರಿಗೆ ಸರಿಯಾಗಿ ಉತ್ತರ ಕೊಡಿ. ಕೇರಳದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತರ ಕೊಲೆ ಅವ್ಯಾಹತವಾಗಿ ನಡೆಯುತ್ತಿತ್ತು. ನಾವು ಆಗ ಅವರ ಭಾಷೆಯಲ್ಲಿಯೇ ಉತ್ತರ ಕೊಟ್ಟೆವು. ಆಗ ಅವರೇ ನಮ್ಮ ಬಳಿ ಸಂಧಾನಕ್ಕೆ ಬಂದರು ಎಂದು ವಿವರಿಸಿದರು.

    ಕೇರಳದಲ್ಲಿ ಒಬ್ಬರನ್ನು ಹೊಡೆದರೆ ನಾವು ಇಬ್ಬರನ್ನು ಹೊಡೆಯುತ್ತಿದ್ದೆವು. ಅವರು ನಾಲ್ಕು ಜನರನ್ನು ಹೊಡೆದರೆ ನಾವೂ ಸಹ ನಾಲ್ಕು ಜನರನ್ನು ಹೊಡೆಯುತ್ತಿದ್ದೆವು. ಹೀಗಾಗಿ ಅವರೇ ಸಂಧಾನ ಮಾಡಿಕೊಂಡು ನಂತರ ರಕ್ತಪಾತ ಅಲ್ಲಿ ಕಡಿಮೆ ಆಯ್ತು ಎಂದು ಭಾಷಣ ಮಾಡಿದರು. ಇದನ್ನೂ ಓದಿ:  ಇನ್ನೊಬ್ಬನ ಜೊತೆ ಎಂಗೇಜ್ಮೆಂಟ್ – ಸಿಟ್ಟಿನಿಂದ ಪ್ರೇಯಸಿಗೆ ಹಲ್ಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ!

    ಇದೇ ಸಂದರ್ಭದಲ್ಲಿ ರೈತಮುಖಂಡ ರಾಜಕುಮಾರ್ ಜಂಬಿಗಿ, ಹಿಂದೂ ಪರ ಸಂಘಟನೆಯ ಮುಖಂಡರು ಸಹ ಮಾತನಾಡಿದರು. ರಾಜ್ಯದಲ್ಲಿ ಮತ್ತೆ ಈ ರೀತಿ ಪ್ರಕರಣಗಳು ಮರುಕಳಿಸದಂತೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ ಮೂಲಕ ರಾಜ್ಯ ಸರ್ಕಾರಕ್ಕೆ ವಿವಿಧ ಹಿಂದೂಪರ ಸಂಘಟನೆಗಳು ಮನವಿ ಪತ್ರವನ್ನು ಸಲ್ಲಿಸಿದರು.

  • ನಾಡೋಜ ಡಾ.ಮಹೇಶ್ ಜೋಶಿ ಕನ್ನಡದ ನಿಷ್ಠಾವಂತ ಸೇವಕ: ಅರವಿಂದರಾವ್ ದೇಶಪಾಂಡೆ

    ನಾಡೋಜ ಡಾ.ಮಹೇಶ್ ಜೋಶಿ ಕನ್ನಡದ ನಿಷ್ಠಾವಂತ ಸೇವಕ: ಅರವಿಂದರಾವ್ ದೇಶಪಾಂಡೆ

    ಚಿಕ್ಕೋಡಿ: ನಾಡೋಜ ಡಾ.ಮಹೇಶ್ ಜೋಶಿ ಅವರು ಕಸಾಪ ರಾಜ್ಯಾಧ್ಯಕ್ಷರಾಗಿರುವುದು ಹರ್ಷ ತಂದಿದೆ. ಅವರು ಕನ್ನಡದ ನಿಷ್ಠಾವಂತ ಸೇವಕ ಎಂದು ಆರ್‍ಎಸ್‍ಎಸ್ ಮುಖಂಡ ಹಾಗೂ ಶಿಕ್ಷಣ ಪ್ರೇಮಿ ಅರವಿಂದರಾವ್ ದೇಶಪಾಂಡೆ ಹೇಳಿದರು.

    ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ದಿನಾಂಕ 21ರಂದು ನಡೆದ ಕಸಾಪ ಚುನಾವಣೆಯಲ್ಲಿ ಜೋಶಿ ಅವರು 69,431 ಮತಗಳನ್ನು ಪಡೆಯುವ ಮೂಲಕ ದಾಖಲೆಯ ಗೆಲುವು ಸಾಧಿಸಿದ್ದಾರೆ. ಕಸಾಪ ನೂತನ ಸಾರಥಿಯಾಗಿ ಜೋಶಿ ಅವರು ಕನ್ನಡಾಂಬೆಯ ಸೇವೆಯನ್ನು ವಿನೂತನ ಮಾದರಿಯಲ್ಲಿ ಮಾಡುತ್ತಾರೆ ಎಂಬ ವಿಶ್ವಾಸದಿಂದ ಕನ್ನಡಿಗರು ಮತ ನೀಡಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿದ್ಧಾರೂಢ ಮಠದಲ್ಲಿ ಪೂಜೆಸಲ್ಲಿಸಲು ಹೋದ ಯುವಕ ಕೆರೆ ಪಾಲು

    ಅದೇ ರೀತಿ ಬೆಳಗಾವಿ ಜಿಲ್ಲೆಯ ಅಧ್ಯಕ್ಷರಾಗಿ ಮಂಗಲಾ ಮೆಟಗುಡ್ಡ ಅವರು ಮರು ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷರು ಗಡಿಭಾಗದ ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸಿ ಕೆಲಸವನ್ನು ಮಾಡಲಿ ಎಂದು ಶುಭ ಹಾರೈಸಿದ ಅವರು ಬಹುಮತ ನೀಡಿ ಆಯ್ಕೆ ಮಾಡಿದ ಮತದಾರರಿಗೆ ಅಭಿನಂದಿಸಿದರು.

    ಅಥಣಿ ತಾಲೂಕಿನ ಕನ್ನಡ ಸಾಹಿತ್ಯ ಮತ್ತು ಸಾಂಸ್ಕøತಿಕ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಕನಶೆಟ್ಟಿ ಮಾತನಾಡಿದ್ದು, ನಾಡೋಜ ಡಾ.ಮಹೇಶ್ ಜೋಶಿ ಅವರು ತಮ್ಮ ಪ್ರತಿಸ್ಪರ್ಧಿ ಶೇಖರ್‍ಗೌಡ ಮಾಲಿ ಪಾಟೀಲ್ ಅವರ ವಿರುದ್ಧ 46,236 ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಹಿಂದಿನ ಅಧ್ಯಕ್ಷರಾದ ಮನು ಬಳಿಗಾರ್ ಅವರ 38 ಸಾವಿರ ಮತಗಳ ದಾಖಲೆಯನ್ನು ಮುರಿದು ಹಾಕಿದ್ದಾರೆ ಎಂದು ತಿಳಿಸಿದರು.

    ಸಮಸ್ತ ಕನ್ನಡಿಗರಿಗೆ ಚಿರಪರಿಚಿತರಾಗಿರುವ ಜೋಶಿ ಅವರು ಚುನಾವಣೆಯ ಪೂರ್ವದಲ್ಲಿ ಅನೇಕ ಸುಧಾರಣೆಗಳು ಪ್ರಣಾಳಿಕೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ಕನ್ನಡಪರ ಕೆಲಸ ಮಾಡುವುದರ ಜೊತೆಗೆ ನಮ್ಮ ಗಡಿಭಾಗದಲ್ಲಿಯೂ ಕೂಡ ಕನ್ನಡ ಅಸ್ಮಿತೆಯನ್ನು ಕಾಪಾಡುವ ಕೆಲಸ ಮಾಡಲಿದ್ದಾರೆ ಎಂದರು. ಇದನ್ನೂ ಓದಿ: ಯಾರೂ ತಿರುಕನ ಕನಸು ಕಾಣೋದು ಬೇಡ: ಆರ್. ಅಶೋಕ್

    ಈ ವೇಳೆ ಆನಂದ್ ಟೋಣಪಿ, ಅನಿಲ್ ಶಾಸ್ತ್ರಿ, ವೆಂಕಟೇಶ್ ದೇಶಪಾಂಡೆ ಇನ್ನಿತರರು ಉಪಸ್ಥಿತರಿದ್ದರು.

    ಕನ್ನಡ ಸಾಹಿತ್ಯ ಪರಿಷತ್ತಿಗೆ 26ನೇಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಾಡೋಜ ಡಾ.ಮಹೇಶ್ ಜೋಶಿ ಹೆಸರು ಸಮಸ್ತ ಕನ್ನಡಿಗರಿಗೂ ಚಿರಪರಿಚಿತವಾಗಿದೆ. ಸಂತ ಶಿಶುನಾಳ ಶರೀಫರ ಗುರುಗಳಾದ ಗುರು ಗೋವಿಂದ ಭಟ್ಟರ ಮರಿಮೊಮ್ಮಗನಾಗಿರುವ ಜೋಶಿ ಅವರು ದೂರದರ್ಶನ ಚಂದನ ವಾಹಿನಿಯ ಮೂಲಕ ಮಧುರ ಮಧುರವೀ ಮಂಜುಳಗಾನ ಮತ್ತು ಥಟ್ಟಂತ ಹೇಳಿ ಕಾರ್ಯಕ್ರಮಗಳ ಮೂಲಕ ಮನೆಮಾತಾಗಿದ್ದರು.