Tag: arvind kp

  • ವಿರಹ ಮುಂದುವರೆಯಲಿ ಎಂದು ದಿವ್ಯಾ ಉರುಡುಗ ಕಾಲೆಳೆದ ಕಿಚ್ಚ

    ವಿರಹ ಮುಂದುವರೆಯಲಿ ಎಂದು ದಿವ್ಯಾ ಉರುಡುಗ ಕಾಲೆಳೆದ ಕಿಚ್ಚ

    ಕಿರುತೆರೆಯ ನಂಬರ್ ಒನ್ ಶೋ ಬಿಗ್ ಬಾಸ್(Bigg Boss) ಸಾಕಷ್ಟು ರೋಚಕ ತಿರುವುಗಳನ್ನ ಪಡೆದು ಮುನ್ನುಗ್ಗುತ್ತಿದೆ. ವೀಕೆಂಡ್ ಪಂಚಾಯಿತಿಯಲ್ಲಿ ಕಿಚ್ಚನನ್ನು ನೋಡಲೆಂದೇ ಕಾಯುವ ಅಪಾರ ಅಭಿಮಾನಿಗಳಿದ್ದಾರೆ. ಇನ್ನೂ ಈ ವಾರಾಂತ್ಯದ ಮಾತುಕತೆಯಲ್ಲಿ ದಿವ್ಯಾ ಉರುಡುಗ ಅವರಿಗೆ ಅರವಿಂದ್ (Arvind Kp) ವಿಷ್ಯವಾಗಿ ಸುದೀಪ್ ಕಾಲೆಳೆದಿದ್ದಾರೆ.

    ಪ್ರೇಕ್ಷಕರು ಮೆಚ್ಚಿರುವ ಬಿಗ್ ಬಾಸ್ ಶೋ ಸಾಕಷ್ಟು ವಿಚಾರವಾಗಿ ಸದ್ದು ಮಾಡುತ್ತಿದೆ. ಬಿಗ್ ಬಾಸ್‌ನ(Bigg Boss) ಎಲ್ಲಾ ಸ್ಪರ್ಧಿಗಳಿಗೆ ಕಿಚ್ಚ ಅಚ್ಚರಿಯ ಗಿಫ್ಟ್‌ವೊಂದನ್ನ ಕಳುಹಿಸಿ ಕೊಟ್ಟಿದ್ದಾರೆ. ತಮ್ಮ ಕೈ ಬರಹದ ರೂಪದಲ್ಲಿ ಕಿಚ್ಚ, ಪ್ರತಿ ಸ್ಪರ್ಧಿಗೂ ಪತ್ರದ ಮೂಲಕ ಉತ್ಸಾಹ ತುಂಬಿದ್ದಾರೆ. ಇನ್ನೂ ಸುದೀಪ್ ಕಳುಹಿಸಿದ್ದ ಪತ್ರದಲ್ಲಿ ದಿವ್ಯಾಗೆ ಬರೆದ ಬರಹ ಎಲ್ಲರ ಗಮನ ಸೆಳೆದಿದೆ.

    ಪ್ರೀತಿಯ ದಿವ್ಯಾ ಅವರೇ, ಈ ವಿರಹ ಮುಂದುವರೆಯಲಿ ಅಲ್ವಾ ಎಂದು ದಿವ್ಯಾಗೆ ಕಿಚ್ಚ ಕಾಲೆಳೆದಿದ್ದಾರೆ. ಕಿಚ್ಚನ ಬರಹಕ್ಕೆ ದಿವ್ಯಾ ನಾಚಿ ನೀರಾಗಿದ್ದಾರೆ. ಬಿಗ್ ಬಾಸ್ ಸೀಸನ್ 8ರಲ್ಲಿ ದಿವ್ಯಾ ಉರುಡುಗ(Divya Uruduga) ಮತ್ತು ಅರವಿಂದ್ ಪರಿಚಯವಾಗಿತ್ತು. ಈ ಸ್ನೇಹ ಪ್ರೀತಿಗೆ ತಿರುಗಿ, ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. `ಅರ್ದಂ ಬರ್ಧ ಪ್ರೇಮ ಕಥೆ’ ಚಿತ್ರದ ಮೂಲಕ ದಿವ್ಯಾ ಮತ್ತು ಅರವಿಂದ್ ತೆರೆಯ ಮೇಲೂ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ:ಮಗ ಯಥರ್ವ್ ಹುಟ್ಟುಹಬ್ಬಕ್ಕೆ ರಾಧಿಕಾ ಪಂಡಿತ್ ಲವ್ಲಿ ವಿಶ್

    ಸದ್ಯ ದಿವ್ಯಾ ಟಿವಿ ಬಿಗ್ ಬಾಸ್ 9ರಲ್ಲಿ ಪ್ರವೀಣರ ಸಾಲಿನಲ್ಲಿ ಪ್ರತಿ ಸ್ಪರ್ಧಿಗೂ ಟಫ್ ಸ್ಪರ್ಧೆ ನೀಡುತ್ತಿದ್ದಾರೆ. ಹೀಗೆ ಗೆಲುವಿನ ವಿಜಯಲಕ್ಷ್ಮಿ ದಿವ್ಯಾ ಪಾಲಿಗೆ ಸಿಗಲಿ ಎಂಬುದೇ ಅಭಿಮಾನಿಗಳ ಆಶಯ. ಈಗಾಗಲೇ ಐಶ್ವರ್ಯ, ನವಾಜ್, ದರ್ಶ್, ಮಯೂರಿ, ನೇಹಾ ಗೌಡ ಮನೆಯಿಂದ ಹೊರ ಬಂದಿದ್ದಾರೆ. ಮುಂದಿನ ವಾರ ದೊಡ್ಮನೆಯ ಆಟ ಯಾರಿಗೆ ಅಂತ್ಯವಾಗಲಿದೆ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಕ್ಯೂಟ್ ಮೊಮೆಂಟ್ – ದಿವ್ಯಾ ಹಲ್ಲುಜ್ಜಿದ ಅರವಿಂದ್

    ಕ್ಯೂಟ್ ಮೊಮೆಂಟ್ – ದಿವ್ಯಾ ಹಲ್ಲುಜ್ಜಿದ ಅರವಿಂದ್

    ಬಿಗ್‍ಬಾಸ್ ನೀಡಿದ್ದ ಹೀಗೂ ಅಂಟೆ ಟಾಸ್ಕ್ ವೇಳೆ ದಿವ್ಯಾ ಉರುಡುಗ ಕೈಗೆ ಪೆಟ್ಟಾಗಿದ್ದಕ್ಕೆ ಅರವಿಂದ್ ಕೆ.ಪಿ ಬೇಸರಗೊಂಡಿದ್ದಾರೆ. ಆದರೆ ದಿವ್ಯಾ ಅವರಿಗೆ ಸಮಾಧಾನ ಮಾಡುತ್ತಲೇ ಇರುವ ಅರವಿಂದ್ ದಿವ್ಯಾ ಅವರನ್ನು ಕೇರ್ ಮಾಡುತ್ತಿರುವುದು ಮಾತ್ರ ಸಖತ್ ಮುದ್ದಾಗಿದೆ.

    ದಿವ್ಯಾ ಕೈಗೆ ಪೆಟ್ಟಾಗಿರುವುದರಿಂದ ಅವರಿಗೆ ಬೇಕಾಗಿರುವ ಸಹಾಯವನ್ನು ಅರವಿಂದ್ ಅವರು ಮಾಡುತ್ತಿದ್ದಾರೆ. ದಿವ್ಯಾ ಹಲ್ಲುಜ್ಜಲು ಕಷ್ಟ ಪಡುತ್ತಿದ್ದರು. ಇದನ್ನು ಗಮನಿಸಿದ ಅರವಿಂದ್ ನಾನು ಉಜ್ಜುತ್ತೇನೆ ಎಂದು ದಿವ್ಯಾ ಕೈಯಲ್ಲಿರುವ ಬ್ರೆಷ್ ತೆಗೆದುಕೊಂಡು ದಿವ್ಯಾ ಅವರ ಹಲ್ಲನ್ನು ಉಜ್ಜಿದ್ದಾರೆ. ದಿವ್ಯಾ ನಗುತ್ತಾ ಬೇಡಾ ನಾನೇ ಉಜ್ಜಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಈ ಕ್ಯೂಟ್ ಮೈಮೆಂಟ್ ನೋಡಿರುವ ಶುಭಾ ಅರವಿಂದ್ ದಿವ್ಯಾಳನ್ನು ಎಷ್ಟೊಂದು ಕೇರ್ ಮಾಡುತ್ತಾನೇ ಅಲ್ವಾ ಎಂದು ಮಂಜು ಬಳಿ ಹೇಳಿದ್ದಾರೆ.

    ಇವತ್ತು ನೀನು ತಿಂಡಿ ತಿಂದು ಮಾತ್ರೆ ತೆಗೆದುಕೊಂಡ್ರೆ ನೋವು ಕಡಿಮೆಯಾಗುತ್ತದೆ. ಕೈ ಮೇಲೆ ಇಟ್ಟಕೊಂಡು ಓಡಾಡು ನೋವು ಕಡಿಮೆಯಾಗುತ್ತದೆ ಎಂದು ಹೇಳುತ್ತಾ ಸಮಾಧಾನ ಮಾಡಿದ್ದಾರೆ. ನೋವಲ್ಲಿ ಇರುವ ದಿವ್ಯಾ ಅವರಿಗೆ ಅರವಿಂದ್ ಸಖತ್ ಕ್ಯೂಟ್ ಆಗಿ ದೈರ್ಯವನ್ನು ಹೇಳುವ ಕೆಲಸ ಮಾಡಿದ್ದಾರೆ.

    ನಿನ್ನೆ ದಿವ್ಯಾಗೆ ಗಾಯವಾದಾಗ ಅರವಿಂದ್ ತಬ್ಬಿಕೊಂಡು ನಿಟ್ಟುಸಿರು ಬಿಟ್ಟು, ದಿವ್ಯಾ ಉರುಡುಗರನ್ನು ಸಮಾಧಾನ ಪಡಿಸಿದ್ದರು. ನಂತರ ದಿವ್ಯಾ ಉರುಡುಗ ಅರವಿಂದ್ ಕೆನ್ನೆಯನ್ನು ಕ್ಯೂಟ್ ಆಗಿ ಹಿಡಿದುಕೊಂಡು, ನನಗೆ ಹೀಗೆ ಪೆಟ್ಟಾಗಿದಕ್ಕೆ ಅತ್ರಾ ಎಂದು ಕೇಳುತ್ತಾ ಸಮಾಧಾನ ಮಾಡಿದ್ದರು. ಆಗ ದಿವ್ಯಾ ಉರುಡುಗ ನನಗೆ ನಿಮ್ಮ ಧ್ವನಿ ಅತ್ತಿರುವಂತೆ ಕೇಳಿಸುತ್ತಿದೆ. ನನಗೆ ಗೊತ್ತು, ನೀವು ಅತ್ತಿದ್ದೀರಾ ಎಂದು ಹೇಳುತ್ತಾ ಇಬ್ಬರು ತಬ್ಬಿಕೊಂಡು ಸಮಾಧಾನದ ಮಾತುಗಳನ್ನಾಡಿದ್ದರು.

    ಬಿಗ್‍ಬಾಸ್ ಮೊದಲ ಇನ್ನಿಂಗ್ಸ್‍ನಿಂದಲೂ ಚೆನ್ನಾಗಿರುವ ಈ ಜೋಡಿ ಗೇಮ್, ಮನರಂಜನೆಯಲ್ಲಿ ಬಿಗ್‍ಬಾಸ್ ವೀಕ್ಷಕರಿಗೆ ಸಖತ್ ಇಷ್ಟವಾಗಿದೆ. ಈ ಮುದ್ದಾದ ಜೋಡಿ ಯಾವುದೇ ವಿಚಾರಕ್ಕೆ ಬೇಸರವಾದರೆ, ಗೇಮ್ ಸೋತರೆ ಒಬ್ಬರಿಗೊಬ್ಬರು ಸಮಾಧಾನ ಮಾಡಿಕೊಳ್ಳುವುದು ಸಖತ್ ಮುದ್ದಾಗಿರುತ್ತದೆ ಎಂದು ಹೇಳಿದರೆ ತಪ್ಪಾಗಲಾರದು

  • ದಿವ್ಯಾ ಪಕ್ಕಕ್ಕೆ ಇರುತ್ತಿದ್ದದ್ದು ನೆನೆದು ಮತ್ತೆ ಕಣ್ಣೀರು ಹಾಕಿದ ಅರವಿಂದ್

    ದಿವ್ಯಾ ಪಕ್ಕಕ್ಕೆ ಇರುತ್ತಿದ್ದದ್ದು ನೆನೆದು ಮತ್ತೆ ಕಣ್ಣೀರು ಹಾಕಿದ ಅರವಿಂದ್

    ರವಿಂದ್ ಅವರಿಗೆ ದಿವ್ಯಾ ಉರುಡುಗ ಪದೇ ಪದೇ ನೆನಪಾಗುತ್ತಿದ್ದು, ಪ್ರತಿಯೊಂದು ವಿಚಾರದಲ್ಲೂ ಅವರನ್ನು ಊಹಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಇಂದು ಬಿಗ್ ಬಾಸ್ ಮನೆಯಲ್ಲಿ ಕೊನೇಯದಾಗಿ ಮಾತನಾಡುವಾಗ ಸಹ ಅವರ ಸ್ನೇಹ, ಬಾಂಧವ್ಯದ ಕುರಿತು ಹೇಳಿ ಕಣ್ಣೀರು ಹಾಕಿದ್ದಾರೆ.

    ಬಿಗ್ ಬಾಸ್ ಸೀಸನ್ 8 ಮೊಟಕುಗೊಳ್ಳುತ್ತಿರುವ ಹಿನ್ನೆಲೆ ಇಂದು ಕೊನೆಯ ದಿನವಾಗಿದ್ದು, ಬಿಗ್ ಮನೆಯ ಅನುಭವದ ಕುರಿತು ಕೊನೆಯ ಮಾತು ಹೇಳುವಂತೆ ಸ್ಪರ್ಧಿಗಳಲ್ಲಿ ಕಣ್ಮಣಿ ಕೇಳಿದ್ದಾರೆ. ಎಲ್ಲರೂ ತಮ್ಮ ಅನಿಸಕೆಯನ್ನು ಹಂಚಿಕೊಂಡಿದ್ದಾರೆ. ಅದೇ ರೀತಿ ಅರವಿಂದ ಮಾತನಾಡುತ್ತಲೇ ಭಾವುಕರಾದರು. ಅಲ್ಲದೆ ದಿವ್ಯಾ ಉರುಡುಗ ಅವರನ್ನು ನೆನೆದು ಕಣ್ಣೀರನ್ನು ಸಹ ಹಾಕಿದ್ದಾರೆ.

    ನಾನು ಕ್ರೀಡಾ ವಲಯದಿಂದ ಬಂದವನು, ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಮನರಂಜನಾ ಕ್ಷೇತ್ರದವರಾಗಿದ್ದಾರೆ. ಹೇಗೆ ಬೆರೆಯುವುದು, ಕನೆಕ್ಟ್ ಆಗುತ್ತಾರಾ ಎಂಬ ಚಿಂತೆ ಮನೆಗೆ ಬರುವುದಕ್ಕೂ ಮುನ್ನ ಕಾಡಿತ್ತು. ತುಂಬಾ ಡೌಟ್‍ಫುಲ್ ಆಗೇ ಬಂದೆ. ಆದರೆ ದಿನ ಕಳೆದಂತೆ ತಿಳಿಯಿತು, ಯಾರೀಗೂ ಆ ರೀತಿಯ ಆಟಿಟ್ಯೂಡ್ ಇರಲ್ಲ, ಎಲ್ಲರೂ ನಮ್ಮ ರೀತಿಯೇ ಸ್ವಲ್ಪ ಜೀವನ ನೋಡಿರುತ್ತಾರೆ ಎನ್ನುವುದು.

    ಈ ರೀತಿಯ ಅನುಭವ ನೋಡಿ ಸುಮಾರು 15 ವರ್ಷಗಳೇ ಕಳೆಯಿತು. ಬೈಕ್ ರೇಸ್‍ನಲ್ಲಿ ಭಾಗವಹಿಸುವುದರಿಂದ ಕುಟುಂಬಸ್ಥರಿಂದ ದೂರ ಇರುತ್ತೇನೆ. ಟ್ರಾವೆಲ್ ಮಾಡುತ್ತಲೇ ಇರುತ್ತೇನೆ. ಹೀಗಾಗಿ ಸ್ನೇಹಿತರಿಗೂ ಸಿಗುವುದು ಅಪರೂಪ. ಆದರೆ 15 ವರ್ಷಗಳ ಬಳಿಕ ಈ ರೀತಿ 17 ಸ್ನೇಹಿತರು, ದಿನ ನಿತ್ಯ ಅವರೊಟಿಗೆ ಕಾಲ ಕಳೆಯುವುದು, ಟಾಸ್ಕ್ ಮಾಡುವುದು, ಅವರ ಜೊತೆಗೆ ಗುದ್ದಾಡುವುದು, ಮಾತನಾಡುವುದು, ಮತ್ತೆ ಅವರಿಂದಲೇ ಮೆಚ್ಚುಗೆ ಪಡೆಯುವುದು, ತಪ್ಪಾದಲ್ಲಿ ಸರಿ ಮಾಡಿಕೊಳ್ಳುವುದು ತುಂಬಾ ಖುಷಿ ಆಯಿತು ಎಂದು ಭಾವುಕರಾದರು.

    ನನ್ನ ಫೀಲ್ಡ್ ಅವರಿಗೆ ಅರ್ಥವಾಗದಿದ್ದರೂ, ಮಾನವೀಯತೆಯ ದೃಷ್ಟಿಯಿಂದ ನನ್ನ ಮಟ್ಟಕ್ಕೆ ಇಳಿದು ನನ್ನನ್ನು ಒಪ್ಪಿಕೊಂಡರು. ಒಳ್ಳೆಯ ಸ್ನೇಹಿತನನ್ನಾಗಿ ತೆಗೆದುಕೊಂಡು, ಎಲ್ಲದರಲ್ಲೂ ಸರಿಸಮಾನವಾಗಿ ತೆಗೆದುಕೊಂಡರು. ಡೌಟ್ ಇದ್ದಾಗ ನನ್ನ ಬಳಿ ಬಂದಿದ್ದಾರೆ, ನನಗೆ ಡೌಟ್ ಇದ್ದಾಗ ಅವರ ಬಳಿ ಹೋಗಿದ್ದೇನೆ. ಇದೇ ಗ್ಯಾಪ್‍ನಲ್ಲಿ ದಿವ್ಯಾ ಉರುಡುಗ ಕ್ಲೋಸ್ ಆದರು, ಇಂದು ಅವಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಯಾವಾಗಲೂ ನನ್ನ ಪಕ್ಕದಲ್ಲೇ ಕುಳಿತುಕೊಳ್ಳುತ್ತಿದ್ದಳು. ಒಳ್ಳೆ ಫ್ರಂಡ್ ಸಿಕ್ಕಿದಾರೆ ಇಲ್ಲಿ, ಅಲ್ಲದೆ ಎಕ್ಸ್ಟೆಂಡೆಡ್ ಫ್ಯಾಮಿಲಿ, ಒಳ್ಳೆಯ ಅನುಭವ ನನ್ನ ಜೀವನದಲ್ಲಿ ಇಷ್ಟು ಸಿಲ್ಲಿಯಾಗಿರೋಕೆ, ಇಷ್ಟು ನಗಲು ಆಗಿರಲಿಲ್ಲ. ಆರಂಭದಲ್ಲಿ ಮನೆಗೆ ಬಂದಾಗ ಎರಡು ವಾರ ನಕ್ಕು, ನಕ್ಕು ನನ್ನ ಧ್ವನಿಯೇ ಹೋಗಿತ್ತು. ಮಾತನಾಡಲು ಆಗುತ್ತಕಲೇ ಇರಲಿಲ್ಲ, ಅಷ್ಟು ನಕ್ಕಿದ್ದೇನೆ. ನನ್ನ ಜೀವನದ ಅದ್ಭುತ ಭಾಗ ಇದು. ಇಲ್ಲಿಂದ ದೊಡ್ಡ ಎಕ್ಸ್ಟೆಂಡೆಟ್ ಫ್ಯಾಮಿಲಿ ಕೊಂಡೊಯ್ಯುತ್ತೇನೆ. ಇದೊಂದು ರಿಲೇಶನ್‍ಶಿಪ್ ಫಾರ್ ಲೈಫ್ ಎಂದು ಭಾವಿಸುತ್ತೇನೆ ಎಂದಿದ್ದಾರೆ.

  • ಬಿಗ್ ಬಾಸ್ ಮನೆಗೆ ದಿವ್ಯಾ ವಾಪಸ್?

    ಬಿಗ್ ಬಾಸ್ ಮನೆಗೆ ದಿವ್ಯಾ ವಾಪಸ್?

    ಬಿಗ್ ಬಾಸ್ ಮನೆಯಿಂದ ಆಸ್ಪತ್ರೆಗೆ ದಾಖಲಾಗಿರುವ ದಿವ್ಯಾ ಉರುಡುಗ ಮತ್ತೆ ಮನೆಗೆ ವಾಪಸ್ ಆಗ್ತಾರಾ ಈ ಪ್ರಶ್ನೆಯನ್ನು ಇಟ್ಟುಕೊಂಡು ಅಭಿಮಾನಿಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಸುತ್ತಿದ್ದಾರೆ.

    ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ದಿವ್ಯಾ 67ನೇ ದಿನ ಮನೆಯನ್ನು ತೊರೆದಿದ್ದರು. ತೊರೆದ ಬಳಿಕ ಬಟ್ಟೆಗಳನ್ನು ಪ್ಯಾಕ್ ಮಾಡಿ ಕಳುಹಿಸಿದ್ದರಿಂದ ಪೂರ್ಣವಾಗಿ ಮನೆಯನ್ನು ಬಿಟ್ಟುಹೋಗಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಅವರು ಈಗ ಸೀಕ್ರೇಟ್ ರೂಮಿನಲ್ಲಿರಬಹುದು ಎಂಬ ಅನುಮಾನವನ್ನು ಅಭಿಮಾನಿಗಳು ಹೊರಹಾಕಿದ್ದಾರೆ.

    ದಿವ್ಯಾ ಯೂರಿನರಿ ಟ್ರ್ಯಾಕ್ ಇನ್‍ಫೆಕ್ಷನ್‍ನಿಂದ ಬಳಲಿದ್ದ ಕಾರಣ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಮಸ್ಯೆ ಬಹಳ ಗಂಭೀರ ಅಲ್ಲದ ಕಾರಣ ಕೆಲ ದಿನಗಳಲ್ಲಿ ವಾಸಿಯಾಗಬಹುದು. ವಾಸಿಯಾದರೂ ಸದ್ಯ ಈಗ ಕೊರೊನಾ ಇದ್ದು ಬಿಗ್‍ಬಾಸ್ ಬಯೋ ಬಬಲ್‍ನಿಂದ ಹೊರಗಡೆ ಬಂದ ಕಾರಣ ಮತ್ತೆ ಮನೆ ಪ್ರವೇಶಕ್ಕೆ ಕ್ವಾರಂಟೈನ್ ಅಗತ್ಯ. ಹೀಗಾಗಿ ಸೀಕ್ರೇಟ್ ರೂಮ್ ಹೆಸರಿನಲ್ಲಿ ದಿವ್ಯಾ ಕ್ವಾರಂಟೈನ್ ಆಗಿ ಸಂಪೂರ್ಣ ಆರೋಗ್ಯ ಸುಧಾರಿಸಿದ ಮೇಲೆ ಮತ್ತೆ ಅವರನ್ನು ಮನೆಗೆ ಕಳುಹಿಸಬಹುದು ಎಂಬ ಮಾತು ವ್ಯಕ್ತವಾಗುತ್ತಿದೆ.

    ಬಿಗ್‍ಬಾಸ್ 8ನೇ ಅವೃತ್ತಿಯಲ್ಲಿ ಮನರಂಜನೆ, ಟಾಸ್ಕ್ ಈ ಎರಡರಲ್ಲೂ ದಿವ್ಯಾ ಅವರ ಪ್ರದರ್ಶನ ಅತ್ಯುತ್ತಮವಾಗಿದೆ. ಟಾಪ್ 5 ಒಳಗಡೆ ಬರುವ ಸ್ಪರ್ಧಿಗಳ ಪೈಕಿ ಇವರು ಒಬ್ಬರು ಎಂಬ ಅಭಿಪ್ರಾಯವಿದೆ. ಈ ವಾದದ ಜೊತೆ ಬಹಳ ಕಡಿಮೆ ಸಲ ಎಲಿಮಿನೇಷನ್ ಆಗಿದ್ದಾರೆ. ಅಷ್ಟೇ ಅಲ್ಲದೇ ಅರವಿಂದ್ ಮತ್ತು ದಿವ್ಯಾ ಅವರ ಅಭಿಮಾನಿಗಳ ಸಂಖ್ಯೆಯೂ ಜಾಸ್ತಿ ಇದ್ದು, ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ಹೆಸರಿನಲ್ಲಿ ಭಾರೀ ಸಂಖ್ಯೆಯ ಫ್ಯಾನ್ ಪೇಜ್‍ಗಳು ಸೃಷ್ಟಿಯಾಗಿದೆ. ಈ ಎಲ್ಲ ಕಾರಣಕ್ಕೆ ಶೋಗೆ ಒಂದು ಟ್ವಿಸ್ಟ್ ನೀಡಲು ವಾಹಿನಿ ದಿವ್ಯಾ ಅವರನ್ನು ಕ್ವಾರಂಟೈನ್ ನೆಪದಲ್ಲಿ ಸೀಕ್ರೇಟ್ ರೂಮಿನಲ್ಲಿ ಇಟ್ಟಿರುವ ಸಾಧ್ಯತೆಯಿದೆ.

    ಅಭಿಮಾನಿಗಳು ಈ ರೀತಿ ಹೇಳಲು ಕಾರಣವಿದೆ. ಒಂದು ವೇಳೆ ನೇರವಾಗಿ ಎಲಿಮಿನೇಟ್ ಆಗಿದ್ದರೆ ಅದು ಬೇರೆ ವಿಚಾರ. ಆದರೆ ಇಲ್ಲಿ ಅರೋಗ್ಯ ಸಮಸ್ಯೆಯಿಂದ ಹೊರ ಬಂದಿದ್ದಾರೆ. ಈ ಹಿಂದೆ ಉತ್ತಮವಾಗಿ ಆಡುತ್ತಿದ್ದ ರಾಜೀವ್ ಅವರು ಔಟ್ ಆದಾಗಲೂ ಅವರು ಸೀಕ್ರೇಟ್ ರೂಮಿನಲ್ಲಿರಬಹುದು ಎಂಬ ಮಾತು ಕೇಳಿ ಬಂದಿತ್ತು. ನಂತರದ ಎಪಿಸೋಡ್‍ನಲ್ಲಿ ಎಲ್ಲೂ ರಾಜೀವ್ ಕಾಣಿಸದ ಹಿನ್ನೆಲೆಯಲ್ಲಿ ಅವರು ಸೀಕ್ರೇಟ್ ರೂಮಿನಲ್ಲಿ ಇಲ್ಲ ಎನ್ನುವುದು ದೃಢವಾಗಿತ್ತು. ಬಿಗ್ ಬಾಸ್ ಶೋದಲ್ಲಿ ಸ್ಪರ್ಧಿಗಳು ಸೀಕ್ರೇಟ್ ರೂಮಿಗೆ ಹೋಗುವುದು ಸಾಮಾನ್ಯ. ಈ ಬಾರಿ ಯಾರೂ ಸೀಕ್ರೇಟ್ ರೂಮಿಗೆ ಹೋಗಿಲ್ಲ. ಈ ಕಾರಣಕ್ಕೆ ದಿವ್ಯಾ ಅವರು ಮತ್ತೆ ಮನೆ ಪ್ರವೇಶಿಸುತ್ತಾರೆ ಎಂಬ ಅನುಮಾನ ಅಭಿಮಾನಿಗಳದ್ದು.

    ಅಭಿಮಾನಿಗಳ ಹಾರೈಕೆ ನಿಜವಾಗುತ್ತಾ? ಇಲ್ಲವೋ ಎನ್ನುವುದು ಮುಂದಿನ ಎಪಿಸೋಡ್‍ನಲ್ಲಿ ತಿಳಿಯಲಿದೆ. ದಿವ್ಯಾ ಮತ್ತೆ ಬಿಗ್ ಬಾಸ್ ಶೋಗೆ ಬರಬೇಕೇ? ಬರಬೇಕಾದರೆ ಯಾಕೆ ಬರಬೇಕು? ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ.

  • ‘ನುಸುಳಿದ ಚೆಂಡು’ – ಗೆದ್ದವರು ಯಾರು? ಬಿಸಿ ಬಿಸಿ ಚರ್ಚೆ

    ‘ನುಸುಳಿದ ಚೆಂಡು’ – ಗೆದ್ದವರು ಯಾರು? ಬಿಸಿ ಬಿಸಿ ಚರ್ಚೆ

    ಬಿಗ್ ಬಾಸ್ ಮನೆಯಲ್ಲಿ 60ನೇ ದಿನ ನಡೆದ ‘ನುಸುಳಿದ ಚೆಂಡು’ ಟಾಸ್ಕ್ ವಿಚಾರದಲ್ಲಿ ಅರವಿಂದ್ ಗೆದ್ದ ಬಗ್ಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತದೆ.

    ಮೂವರು ಸ್ಪರ್ಧಿಗಳ ಕೈ ಮತ್ತು ಕಾಲನ್ನು ಕಟ್ಟಲಾಗುತ್ತದೆ. ಸ್ಪರ್ಧಿಗಳು ತಲೆಯಿಂದ ಚೆಂಡನ್ನು ಗೆರೆ ದಾಟಿಸಬೇಕು. ಚೆಂಡಿನ ಜೊತೆಗೆ ಮೊದಲು ಗೆರೆ ಮುಟ್ಟಿದ ಸದಸ್ಯ ಮೊದಲ ಬೋಗಿಗೆ ಹೋಗುತ್ತಾರೆ ಎನ್ನುವುದು ಈ ಆಟದ ನಿಯಮವಾಗಿತ್ತು.

    ಚಕ್ರವರ್ತಿ ಚಂದ್ರಚೂಡ್ ಈ ನಿಯಮವನ್ನು ಹೇಳಿದ ಕೂಡಲೇ ಪ್ರಿಯಾಂಕ ಅವರು, ಒಂದು ವೇಳೆ ಬಾಲ್ ಹಳದಿ ಗೆರೆಯನ್ನು ದಾಟಿದರೆ ಔಟ್ ಆಗುತ್ತಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಮಂಜು, ಔಟ್ ಆಗಲ್ಲ, ಆದರೆ ಚೆಂಡನ್ನು ತಲೆಯ ಸಹಾಯದಿಂದ ಮುಂದಕ್ಕೆ ತಳ್ಳಬೇಕು ಎಂದು ಉತ್ತರ ನೀಡುತ್ತಾರೆ.

     

    ಅರವಿಂದ್, ಪ್ರಶಾಂತ್ ಸಂಬರಗಿ ಮೂವರು ಸಿದ್ಧವಾಗಿ ಆಟ ಆಡಲು ಪ್ರಾರಂಭಿಸುತ್ತಾರೆ. ಆರಂಭದಲ್ಲಿ ಅರವಿಂದ್ ಬಾಲ್ ಹಳದಿ ಗೆರೆ ದಾಟಿ ಪ್ರಶಾಂತ್ ಸಂಬರಗಿ ಟ್ರ್ಯಾಕ್‍ಗೆ ಬರುತ್ತದೆ. ಈ ವೇಳೆ ಮುನ್ನುಗ್ಗುವ ಬರದಲ್ಲಿ ಪ್ರಶಾಂತ್ ಸಂಬರಗಿ ತಲೆ ಅರವಿಂದ್ ಚೆಂಡಿಗೆ ತಾಗಿದ ಕಾರಣ ಅರವಿಂದ್ ಚೆಂಡು ಪ್ರಿಯಾಂಕ ಟ್ರ್ಯಾಕ್‍ಗೆ ಹೋಗುತ್ತದೆ. ಈ ಚೆಂಡನ್ನು ಪಡೆಯುವ ನಿಟ್ಟಿನಲ್ಲಿ ಮುನ್ನುಗ್ಗುತ್ತಿದ್ದಾಗ ಪ್ರಿಯಾಂಕ ಅವರ ಟ್ರ್ಯಾಕ್‍ನಲ್ಲಿದ್ದ ಚೆಂಡಿಗೆ ಅರವಿಂದ್ ಕಾಲು ಆಕಸ್ಮಾತ್ ಆಗಿ ಸಿಕ್ಕಿದ ಪರಿಣಾಮ ಪಿಂಕ್ ಚೆಂಡು ಟ್ರ್ಯಾಕ್‍ನಿಂದ ದೂರ ಹೋಗುತ್ತದೆ. ನಂತರ ಅರವಿಂದ್ ಪ್ರಿಯಾಂಕ ಟ್ರ್ಯಾಕ್‍ನಲ್ಲಿ ಮುಂದಕ್ಕೆ ಹೋಗಿ ಬಾಲನ್ನು ಕೆಂಪು ಗೆರೆ ದಾಟಿಸುತ್ತಾರೆ.

    ಆರಂಭದಲ್ಲಿ ಪ್ರಶಾಂತ್ ಸಂಬರಗಿ ಜಯಗಳಿಸಿದ್ದಾರೆ ಎಂದು ಮಂಜು ಹೇಳಿದ್ದರೂ ನಂತರ ಅರವಿಂದ್, ನನ್ನ ಚೆಂಡು ರೆಡ್‍ಲೈನ್ ಕ್ರಾಸ್ ಆಗಿದೆ. ಜೊತೆಗೆ ಆಚೆ ಕಡೆಯಿಂದ ನಾನು ಲೈನ್ ಕ್ರಾಸ್ ಮಾಡಿದ್ದೇನೆ. ಒಮ್ಮೆ ಯೋಚನೆ ಮಾಡಿ ಎಂದು ಹೇಳುತ್ತಾರೆ. ಕೊನೆಗೆ ಹಲವು ಚರ್ಚೆಗಳು ನಡೆದು ಮಂಜು, ವೈಷ್ಣವಿ, ಚಂದ್ರಚೂಡ್ ಅವರು ಅರವಿಂದ್ ಗೆದ್ದಿದ್ದಾರೆ. ಪ್ರಶಾಂತ್ ಸಂಬರಗಿ ಎರಡನೇ ಸ್ಥಾನ, ಪ್ರಿಯಾಂಕಗೆ ಮೂರನೇ ಸ್ಥಾನ ಘೋಷಿಸುತ್ತಾರೆ.

    ಈಗ ಅರವಿಂದ್ ಗೆದ್ದ ಬಗ್ಗೆ ಭಾರೀ ಚರ್ಚೆ ನಡೆಯುತ್ತದೆ. ಕೆಲವರು ಪ್ರಿಯಾಂಕ ಗೆದ್ದಿದ್ದಾರೆ ಎಂದು ಹೇಳಿದ್ದರೆ ಇನ್ನೂ ಕೆಲವರು ಅರವಿಂದ್ ಗೆದ್ದಿದ್ದಾರೆ ಎಂದು ವಾದಿಸುತ್ತಾರೆ.

    ಕ್ರೀಡಾ ನಿಯಮದ ಪ್ರಕಾರ ಅರವಿಂದ್ ಮಾಡಿದ್ದು ತಪ್ಪು ಇರಬಹುದು. ಆದರೆ ಬಿಗ್ ಬಾಸ್ ನಿಯಮದ ಪ್ರಕಾರ ಇದು ತಪ್ಪಲ್ಲ. ಯಾಕೆಂದರೆ ಸ್ಪರ್ಧೆ ಆರಂಭಕ್ಕೂ ಮೊದಲೇ ಪ್ರಿಯಾಂಕ, ಚೆಂಡು ಒಂದು ವೇಳೆ ಹಳದಿ ಗೆರೆ ದಾಟಿದರೆ ಆಗ ಏನು ಎಂದು ಪ್ರಶ್ನೆ ಕೇಳಿದ್ರು. ಆಗಲೇ ಔಟ್ ಎಂದು ಹೇಳಿದ್ದರೆ ವಿವಾದವೇ ಇರುತ್ತಿರಲಿಲ್ಲ. ಆರಂಭದಲ್ಲಿ ಈ ನಿಯಮವನ್ನು ಮೂವರು ಒಪ್ಪಿದ ಕಾರಣ ನಂತರ ಟಾಸ್ಕ್ ನಡೆದಿದೆ. ಟಾಸ್ಕ್ ನಡೆದ ಬಳಿಕ ಸರಿಯಲ್ಲ ಎಂದು ಹೇಳುವುದು ತಪ್ಪು ಎಂದು ಹೇಳುತ್ತಿದ್ದಾರೆ.

    ಇನ್ನು ಕೆಲವರು ಈ ಟಾಸ್ಕ್ ನಲ್ಲಿ  ಪ್ರಶಾಂತ್ ಸಂಬರಗಿ ಜಯಗಳಿಸಿದ್ದಾರೆ. ಆದರೆ ಪ್ರಶಾಂತ್ ಅವರನ್ನು ಇಷ್ಟಪಡದ ಕಾರಣ ಮಂಜು ಅವರು ಅರವಿಂದ್ ಅವರನ್ನು ಸಪೋರ್ಟ್ ಮಾಡಿದ್ದಾರೆ. ಇದು ಮಂಜು ಮಾಡಿದ ಕುತಂತ್ರ ಎಂದು ದೂರುತ್ತಿದ್ದಾರೆ. ಇದಕ್ಕೆ ಅರವಿಂದ್ ಅಭಿಮಾನಿಗಳು, ಆರಂಭದಲ್ಲಿ ಅರವಿಂದ್ ಚೆಂಡು ಸಂಬರಗಿ ಟ್ರ್ಯಾಕ್‍ಗೆ ಬಂದಾಗ ಸಂಬರಗಿ ತಲೆಗೆ ಸಿಕ್ಕಿ ಅದು ಪ್ರಿಯಾಂಕ ಟ್ರ್ಯಾಕ್‍ಗೆ ಹೋಗಿದೆ. ಇದು ಉದ್ದೇಶಪೂರ್ವಕವಾಗಿ ಮಾಡಿದ್ದೋ ಅಥವಾ ಅಕಸ್ಮಾತ್ ಆಗಿದ್ದೋ ಎಂದು ಪ್ರಶ್ನಿಸುತ್ತಿದ್ದಾರೆ.

    ಪ್ರಶಾಂತ್ ಸಂಬರಗಿ ಅವರು ಕಳೆದ ವಾರದ ಕ್ಯಾಪ್ಟನ್ಸಿ ಟಾಸ್ಕ್‍ನಲ್ಲಿ ರಾಘುಗೆ ಎಲ್ಲ ಹೂಗಳನ್ನು ನೀಡಿದ್ದರು. ಇದು ಟಾಸ್ನ್ ನಲ್ಲಿ ಇತ್ತಾ? ರಾಜೀವ್ ವಿನ್ ಆಗಬಾರದು ಎಂಬ ಒಂದೇ ಕಾರಣಕ್ಕೆ ಈ ತಂತ್ರ ಮಾಡಿದ್ದರು. ಇಲ್ಲಿ ಅರವಿಂದ್ ಉದ್ದೇಶಪೂರ್ವಕವಾಗಿ ಮಾಡಿದ್ದರೆ ಇದು ತಪ್ಪು ಎಂದು ಹೇಳಬಹುದಿತ್ತು. ಆದರೆ ಇಲ್ಲಿ ಆಕಸ್ಮತ್ ಆಗಿರುವ ಕಾರಣ ಬಾಲ್ ಟ್ರ್ಯಾಕ್‍ನಿಂದ ಹೊರಗಡೆ ಹೋಗಿದ್ದು ನಿಜ. ಹೊರಗಡೆ ಹೋದರೂ ಕುಗ್ಗದೇ ಪ್ರಯತ್ನ ಬಿಡದೇ ಬಾಲನ್ನು ಕೆಂಪು ಗೆರೆಯನ್ನು ದಾಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಪ್ರಿಯಾಂಕ ಯಾವುದೇ ಪ್ರಯತ್ನ ಮಾಡಲಿಲ್ಲ ಎಂದು ವಾದಿಸುತ್ತಿದ್ದಾರೆ.

    ಇನ್ನು ಕೆಲವರು ಮೊದಲೇ ನಿಯಮಗಳನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕಿತ್ತು. ನಿಯಮ ಸ್ಪಷ್ಟವಾಗಿ ತಿಳಿಯದ ಆಟ ಆಡಿದ್ದರಿಂದ ಈ ಗೊಂದಲವಾಗಿದೆ. ಅಂತಿಮವಾಗಿ ನಾಯಕರು ಏನು ಹೇಳುತ್ತಾರೋ ಅದೇ ಫೈನಲ್. ಅದನ್ನು ಎಲ್ಲರೂ ಒಪ್ಪಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಈ ಚರ್ಚೆ ಈಗ ಜೋರಾಗಿ ನಡೆಯುತ್ತಿದ್ದು, ನಿಮ್ಮ ಪ್ರಕಾರ ಈ ಟಾಸ್ಕ್ ನಲ್ಲಿ ವಿನ್ ಯಾರು ಎಂಬುದನ್ನು ಕಮೆಂಟ್ ಮಾಡಿ ತಿಳಿಸಿ.

  • ನಾಚಿ ನೀರಾದ ಅರವಿಂದ್, ದಿವ್ಯಾ ಉರುಡುಗ

    ನಾಚಿ ನೀರಾದ ಅರವಿಂದ್, ದಿವ್ಯಾ ಉರುಡುಗ

    ಬಿಗ್‍ಬಾಸ್  ಮನೆಯ ಸ್ಪರ್ಧಿಗಳ ಆಟವನ್ನು ನೋಡಿದ ವೀಕ್ಷಕರಿಗೆ ವಾರಾಂತ್ಯದಲ್ಲಿ ಕಾಲ್ ಮಾಡಿ ತಮ್ಮ ಅಭಿಪ್ರಾಯವನ್ನು ಹೇಳುವ ಅವಕಾಶವನ್ನು ನೀಡಲಾಗುತ್ತದೆ. ಇಂದು ಬಂದಿರುವ ಫೋನ್ ಕರೆ ದಿವ್ಯಾ ಉರುಡುಗ ಅವರಿಗೆ ಆಗಿತ್ತು. ದಿವ್ಯಾ ಕಾಲ್ ಮಾಡಿರುವ ವೀಕ್ಷಕರ ಮಾತನ್ನು ಕೇಳಿ ನಾಚಿ ನೀರಾಗಿದ್ದಾರೆ.


    ದಿವ್ಯಾ ಉರುಡುಗ ನಿಮ್ಮ ಅರವಿಂದ್ ಜೋಡಿ ತುಂಬಾ ಚೆನ್ನಾಗಿದೆ. ನೀವು ಸ್ಟ್ರಾಂಗ್ ಅಂತಾ ಅರವಿಂದ್ ನಿಮ್ಮನ್ನು ಜೋಡಿ ಟಾಸ್ಕ್‍ನಲ್ಲಿ ಆಯ್ಕೆ ಮಾಡಿಕೊಳ್ಳುತ್ತಾರೆ. ನೀವು ತುಂಬಾ ಸ್ಟ್ರಾಂಗ್ ಚೆನ್ನಾಗಿಯೇ ಆಡುತ್ತಾ ಇದ್ದೀರಾ. ಆದರೆ ಕೆಲವು ದಿನಗಳಿಂದ ನಿಮ್ಮ ಆಟ ನಮಗೆ ಕಾಣಿಸುತ್ತಿಲ್ಲ ಎಂದು ಹೇಳಿದ್ದಾರೆ.

    ನೀವು ಹುಡುಗರಿಗೂ ಸರಿಸಮಾನವಾಗಿ ಆಟವನ್ನು ಆಡುತ್ತಿರಾ. ಹೀಗೆ ಆಟವನ್ನು ಮುಂದುವರೆಸಿ. ನಿಮ್ಮನ್ನು ನಾವು ಇನ್ನು ಹೆಚ್ಚು ಟಾಸ್ಕ್‍ನಲ್ಲಿ ನೋಡಲು ಇಚ್ಚಿಸುತ್ತೇವೆ ಎಂದು ಹೇಳಿದ್ದಾರೆ. ಆಗ ದಿವ್ಯಾ ಇಲ್ಲ ನನಗೆ ಕೆಲವು ಟಾಸ್ಕ್‍ಗಳಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿಲ್ಲ. ನಾನು ಚೆನ್ನಾಗಿ ಆಡುತ್ತೇನೆ ಮುಂದೆ ಎಂದು ಹೇಳಿದ್ದಾರೆ.

    ಅರವಿಂದ್ ದಿವ್ಯಾ ಕೇಮಿಸ್ಟ್ರೀ ಸೂಪರ್ ಆಗಿದೆ. ಚೆನ್ನಾಗಿ ಆಡಿ. ಶುಭಾ ಎಂದರೆ ನನಗೆ ತುಂಬಾ ಇಷ್ಟ ಅವರು ಎಷ್ಟೊಂದು ಕ್ಯೂಟ್. ಎಲ್ಲರೂ ಚೆನ್ನಾಗಿ ಆಡಿ ಎಂದು ಕಾಲರ್ ಹೇಳಿದ್ದಾರೆ. ಕಾಲರ್ ಮಾತನ್ನು ಕೇಳಿ ಮನೆಮಂದಿಗೆ ಸಖತ್ ಇಷ್ಟವಾಗಿದೆ. ದಿವ್ಯಾ, ರವಿಂದ್ ಮಾತ್ರ ನಿಮ್ಮ ಕೆಮಿಸ್ಟ್ರೀ ಸೂಪರ್ ಆಗಿದೆ ಎಂದು ಹೇಳಿರುವುದನ್ನು ಕೇಳಿ ನಾಚಿ ನೀರಾಗಿದ್ದಾರೆ. ಇಬ್ಬರು ಮನಸ್ಸಿನಲ್ಲಿಯೇ ಸಂತೋಷವನ್ನು ಪಟ್ಟಂತೆ ಕಾಣುತ್ತಿದೆ.

  • ಅರವಿಂದ್ ಕೈಯಲ್ಲಿ ಮಗು – ಬಿದ್ದು ಬಿದ್ದು ನಕ್ಕ ದಿವ್ಯಾ

    ಅರವಿಂದ್ ಕೈಯಲ್ಲಿ ಮಗು – ಬಿದ್ದು ಬಿದ್ದು ನಕ್ಕ ದಿವ್ಯಾ

    ವಾರದ ಎಲಿಮಿನೇಷನ್ ಪ್ರಕ್ರಿಯೆಯ ವೇಳೆ ಅರವಿಂದ್ ಕೈಯಲ್ಲಿ ಮಗು ನಗುವುದನ್ನು ನೋಡಿ ದಿವ್ಯಾ ಉರುಡುಗ ಬಿದ್ದು ಬಿದ್ದು ನಕ್ಕ ಪ್ರಸಂಗ ನಡೆಯಿತು.

    ಮೊದಲ ರೌಂಡ್‌ನ ಎಲಿಮಿನೇಷನ್‌ನಲ್ಲಿ ದಿವ್ಯಾ ಉರುಡುಗ ಸೇಫ್ ಆದ ಬಳಿಕ ಎರಡನೇ ರೌಂಡ್ ನಡೆಯಿತು. ಅಳುತ್ತಿರುವ ಮಗುವನ್ನು ಸಮಾಧಾನ ಮಾಡಿ ಯಾರ ಕೈಯಲ್ಲಿ ನಗುತ್ತದೋ ಆ ಸದಸ್ಯ ಸೇಫ್ ಎಂದು ಬಿಗ್ ಬಾಸ್ ಘೋಷಿಸಿದರು.

    ಚಕ್ರವರ್ತಿ ಚಂದ್ರಚೂಡ್, ಶಮಂತ್ ಆದ ಬಳಿಕ ಮಗು ಅರವಿಂದ್ ಕೈಯಲ್ಲಿ ಬಂತು. ಅರವಿಂದ್ ಹೆಗಲ ಮೇಲೆ ಹಾಕಿ ಸಮಾಧಾನ ಮಾಡುವುದನ್ನು ನೋಡಿದ ನೋಡಿ ಶುಭ ಪೂಂಜಾ, “ಇಷ್ಟು ಪಕ್ಕ ರೆಡಿ ಮಾಡಿ ಬಿಟ್ರಾ ನೀವು?” ಎಂದು ಪ್ರಶ್ನಿಸಿ ದಿವ್ಯಾ ಉರುಡುಗ ಅವರ ಕಾಲೆಳೆದರು. ಅರವಿಂದ್ ಬಳಿಕ ರಾಜೀವ್, ವಿಶ್ವನಾಥ್, ಮಂಜ, ದಿವ್ಯಾ ಸುರೇಶ್ ಅವರ ಬಳಿ ಹೋದರೂ ಮಗು ಮಾತ್ರ ನಗಲಿಲ್ಲ.

    ಎರಡನೇ ರೌಂಡ್ ಆರಂಭದಲ್ಲಿ ಚಕ್ರವರ್ತಿ ಅವರು ಮಗುವನ್ನು ಕೆಳಗಡೆ ಮಲಗಿಸಿ ಹಾಡು ಹೇಳಿ ಸಮಾಧಾನ ಮಾಡುವ ಪ್ರಯತ್ನ ಮಾಡಿದರೂ ಮಗು ಅಳುತ್ತಲೇ ಇತ್ತು. ನಂತರ ಶಮಂತ್ ಪ್ರಯತ್ನ ಪಟ್ಟರೂ ಮಗು ಅಳುವುದನ್ನು ನಿಲ್ಲಿಸಲೇ ಇಲ್ಲ. ಬಳಿಕ ಮಗು ಅರವಿಂದ್ ಕೈಗೆ ಬಂತು. ಆರಂಭದಲ್ಲಿ ಅಳುತ್ತಿದ್ದ ಮಗು ಕೆಲ ಸೆಕೆಂಡ್‌ನಲ್ಲಿ ನಗಲು ಆರಂಭಿಸಿತು. ಅರವಿಂದ್ ಕೈಯಲ್ಲಿ ಮಗು ನಕ್ಕಿದ್ದನ್ನು ನೋಡಿ ದಿವ್ಯಾ ಉರುಡುಗ ಎರಡು ಕೈಯನ್ನು ಕೆನ್ನೆಗೆ ಹಿಡಿದು ಬಿದ್ದು ಬಿದ್ದು ನಗಲು ಆರಂಭಿಸಿದರು. ಈ ವೇಳೆ ಬಿಗ್ ಮನೆಯ ಸದಸ್ಯರು ಸಹ ನಕ್ಕು ಅರವಿಂದ್ ಅವರನ್ನು ಚಪ್ಪಾಳೆ ತಟ್ಟಿ ಅಭಿನಂದಿಸಿದರು.

    ಈ ಸಂದರ್ಭಲ್ಲಿ ಬಿಗ್ ಬಾಸ್,”ಅರವಿಂದ್ ನೀವು ಸೇಫ್ ಆಗಿದ್ದೀರಿ ಅಭಿನಂದನೆಗಳು” ಎಂದು ಹೇಳಿದಾಗ ಅರವಿಂದ್ ಧನ್ಯವಾದ ಹೇಳಿದರು. ಬಳಿಕ ಅರವಿಂದ್ ಶುಭಾ ಪೂಂಜಾ ಕೈಯಲ್ಲಿರುವ ಗೊಂಬೆಯನ್ನು ಪಡೆಯಲು ಮುಂದಾದಾಗ ಕೂಡಲೇ ಬಂದ ದಿವ್ಯಾ ಉರುಡುಗ, “ಎಲ್ಲರಿಗೂ ಥ್ಯಾಂಕ್ಯೂ ಹೇಳಿಲ್ಲ” ಎಂದು ಹೇಳಿ ಅರವಿಂದ್ ಅವರನ್ನು ಎಚ್ಚರಿಸಿದರು. ಕೂಡಲೇ ಅರವಿಂದ್ ಕೈ ಮುಗಿದು,”ವೋಟ್ ಮಾಡಿದ ಎಲ್ಲ ಕನ್ನಡಿಗರಿಗೆ ಧನ್ಯವಾದಗಳು. ಮುಂದೆ ನಾನು ಪ್ರತಿ ವಾರ ನಾಮಿನೆಟ್ ಆಗಬಹುದು. ಹೀಗಾಗಿ ನನಗೆ ವೋಟ್ ಮಾಡಿ” ಎಂದು ವಿನಂತಿ ಮಾಡಿಕೊಂಡರು.

    ಸದಸ್ಯರ ಕೈಗೆ ಮಗುವಿನ ಗೊಂಬೆಯನ್ನು ನೀಡಿ ಅಳುವ ಮತ್ತು ನಗುವ ಮ್ಯೂಸಿಕ್ ಪ್ಲೇ ಮಾಡಿದ ಈ ರೌಂಡ್ ಬಿಗ್ ಮನೆಯ ಸದಸ್ಯರಿಗೆ ಭರಪೂರ್ಣ ಮನರಂಜನೆಯನ್ನು ನೀಡಿತು. ಇದನ್ನೂ ಓದಿ: ನಿನ್ನ ಜೊತೆ ನಾನಿದ್ದೇನೆ- ದಿವ್ಯಾ ಬೆನ್ನಿಗೆ ನಿಂತ ಅರವಿಂದ್