Tag: Arvind Kejriwal

  • ಕೇಜ್ರಿವಾಲ್ ಜೈಲಿನಲ್ಲಿ ಕಡಿಮೆ ಕ್ಯಾಲರಿ ಆಹಾರ ಸೇವಿಸುತ್ತಿದ್ದಾರೆ: ದೆಹಲಿ ಸಿಎಸ್‌ಗೆ ಲೆಫ್ಟಿನೆಂಟ್ ಗರ್ವನರ್ ವಿ.ಕೆ ಸಕ್ಸೇನಾ ಪತ್ರ

    ಕೇಜ್ರಿವಾಲ್ ಜೈಲಿನಲ್ಲಿ ಕಡಿಮೆ ಕ್ಯಾಲರಿ ಆಹಾರ ಸೇವಿಸುತ್ತಿದ್ದಾರೆ: ದೆಹಲಿ ಸಿಎಸ್‌ಗೆ ಲೆಫ್ಟಿನೆಂಟ್ ಗರ್ವನರ್ ವಿ.ಕೆ ಸಕ್ಸೇನಾ ಪತ್ರ

    ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಉದ್ದೇಶಪೂರ್ವಕವಾಗಿ ಜೈಲಿನಲ್ಲಿ ಕಡಿಮೆ ಕ್ಯಾಲರಿ ಇರುವ ಆಹಾರವನ್ನು ಸೇವಿಸುತ್ತಿದ್ದಾರೆ ಎಂದು ಲೆಫ್ಟಿನೆಂಟ್ ಗರ್ವನರ್ ವಿ.ಕೆ ಸಕ್ಸೇನಾ (V.K.Saxena) ಹೇಳಿದ್ದಾರೆ.

    ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಅವರ ಪ್ರಧಾನ ಕಾರ್ಯದರ್ಶಿ ದೆಹಲಿಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಇದರಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆರೋಗ್ಯದ ಬಗ್ಗೆ ಪ್ರಸ್ತಾಪಿಸಲಾಗಿದೆ. ತೂಕ ಕಳೆದುಕೊಳ್ಳಲು ಕಾರಣಗಳೇನು ಎಂದು ವಿವರಿಸಲಾಗಿದೆ. ಕಡಿಮೆ ಕ್ಯಾಲರಿಗಳ ಕಾರಣದಿಂದಾಗಿ ಕೇಜ್ರಿವಾಲ್ ಅವರು ತೂಕವನ್ನು ಕಳೆದುಕೊಳ್ಳುತ್ತಾರೆ. ಜೂನ್ 6 ರಿಂದ ಜುಲೈ 13 ರ ನಡುವೆ ಅವರು ಸರಿಯಾದ ಆಹಾರ ಸೇವಿಸಿಲ್ಲ. ಇದರಿಂದಾಗಿ ತೂಕ ಕಳೆದುಕೊಂಡಿದ್ದಾರೆ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ದೆಹಲಿ ಸಿಎಂ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು – ಆದರೂ ಇಲ್ಲ ಬಿಡುಗಡೆ ಭಾಗ್ಯ

    ಪತ್ರದಲ್ಲಿ ಜೈಲು ಅಧೀಕ್ಷಕರ ವರದಿಯನ್ನು ಉಲ್ಲೇಖಿಸಿದ್ದು, ಮುಖ್ಯಮಂತ್ರಿಗಳು ವೈದ್ಯರು ಸೂಚಿಸಿದ ಆಹಾರ ಮತ್ತು ಔಷಧಿಗಳನ್ನು ಸೇವಿಸದಿರುವ ಬಗ್ಗೆ ಎಲ್‌ಜಿ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಬರೆಯಲಾಗಿದೆ. ಕೇಜ್ರಿವಾಲ್ ಅವರು ಉದ್ದೇಶಪೂರ್ವಕವಾಗಿ ಕಡಿಮೆ ಕ್ಯಾಲರಿ ಆಹಾರವನ್ನು ಸೇವಿಸುತ್ತಿದ್ದಾರೆ ಎಂದು ವರದಿ ಹೇಳುತ್ತದೆ. ವೈದ್ಯರು ನೀಡುವ ಡಯಟ್ ಚಾರ್ಟ್ ಪಾಲಿಸುತ್ತಿಲ್ಲ ಎಂದು ಆರೋಪಿಸಲಾಗಿದೆ.

    ಎಲ್‌ಜಿ ಕಚೇರಿ ಬರೆದಿರುವ ಪತ್ರಕ್ಕೆ ಆಮ್ ಆದ್ಮಿ ಪಕ್ಷ ಆಕ್ಷೇಪ ವ್ಯಕ್ತಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯಸಭಾ ಸಂಸದ ಸಂಜಯ್ ಸಿಂಗ್, ಇದೇನು ತಮಾಷೆ ಎಲ್‌ಜಿ ಸಾಹೇಬರೇ! ಯಾರಾದರೂ ರಾತ್ರಿಯಲ್ಲಿ ಸಕ್ಕರೆಯನ್ನು ಕಡಿಮೆ ಮಾಡುತ್ತಾರೆಯೇ? ಯಾವುದು ತುಂಬಾ ಅಪಾಯಕಾರಿ. ಎಲ್ಜಿ ಸರ್, ನಿಮಗೆ ಕಾಯಿಲೆಯ ಬಗ್ಗೆ ತಿಳಿದಿಲ್ಲದಿದ್ದರೆ. ನೀವು ಅಂತಹ ಪತ್ರವನ್ನು ಬರೆಯಬಾರದು ಎಂದು ಕುಟುಕಿದ್ದಾರೆ.

    ದೆಹಲಿ ಸರ್ಕಾರದ ಸಚಿವೆ ಅತಿಶಿ ಮಾತನಾಡಿ, ಬಿಜೆಪಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಕೊಲ್ಲಲು ಸಂಚು ರೂಪಿಸುತ್ತಿದೆ. ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಸಕ್ಕರೆ ಮಟ್ಟ ಎಂಟು ಬಾರಿ 50ಕ್ಕಿಂತ ಕಡಿಮೆಯಾಗಿದೆ. ಕೋಮಾಕ್ಕೆ ಹೋಗಬಹುದು ಅಂತಹ ಪರಿಸ್ಥಿತಿಯಲ್ಲಿ, ಮಿದುಳಿನ ಸ್ಟ್ರೋಕ್ ಅಪಾಯವೂ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಬಕಾರಿ ನೀತಿ ಪ್ರಕರಣ – ಅರವಿಂದ್ ಕೇಜ್ರಿವಾಲ್‍ಗೆ ಮಧ್ಯಂತರ ಜಾಮೀನು

    ಈ ಬಗ್ಗೆ ಬಿಜೆಪಿ ನಾಯಕ ವೀರೇಂದ್ರ ಸಚ್‌ದೇವ್ ಪ್ರತಿಕ್ರಿಯಿಸಿ, ತಿಹಾರ್ ಜೈಲಿನ ಅಧೀಕ್ಷಕರ ಪತ್ರ ಸಾರ್ವಜನಿಕವಾಗಿದೆ. ನ್ಯಾಯಾಲಯದ ಆದೇಶದ ನಂತರ ಅರವಿಂದ್ ಕೇಜ್ರಿವಾಲ್ ಅವರಿಗೆ ಮನೆಯಲ್ಲೇ ತಯಾರಿಸಿದ ಆಹಾರವನ್ನು ನೀಡಲಾಗುತ್ತದೆ. ಜೂನ್ 6 ಮತ್ತು ಜುಲೈ 13 ರ ನಡುವೆ ಉದ್ದೇಶಪೂರ್ವಕವಾಗಿ ಕಡಿಮೆ ಕ್ಯಾಲರಿ ಆಹಾರ ಸೇವಿಸಿದ್ದಾರೆ. ಇದರಿಂದ ಅವರ ತೂಕ ಕಡಿಮೆಯಾಗುತ್ತದೆ. ಸಹಾನುಭೂತಿಗಾಗಿ ಅವರು ಜೈಲಿನಲ್ಲಿ ತೂಕವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

  • ದೆಹಲಿ ಸಿಎಂ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು – ಆದರೂ ಇಲ್ಲ ಬಿಡುಗಡೆ ಭಾಗ್ಯ

    ದೆಹಲಿ ಸಿಎಂ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು – ಆದರೂ ಇಲ್ಲ ಬಿಡುಗಡೆ ಭಾಗ್ಯ

    ನವದೆಹಲಿ: ಹೊಸ ಅಬಕಾರಿ ನೀತಿಯಲ್ಲಿ (Delhi Liquor Policy Case) ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ (Arvind Kejriwal) ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಇಡಿ ದಾಖಲಿಸಿದ ಪ್ರಕರಣದಲ್ಲಿ ಮಧ್ಯಂತರ ಜಾಮೀನು ದೊರಕಿದ್ದು, ಸಿಬಿಐ ಪ್ರಕರಣ ಬಾಕಿ ಇರುವ ಹಿನ್ನೆಲೆ ಕೇಜ್ರಿವಾಲ್‌ಗೆ ಸದ್ಯ ಬಿಡುಗಡೆ ಭಾಗ್ಯವಿಲ್ಲ.

    ಇಡಿ ಪ್ರಕರಣದಲ್ಲಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ.ಸಂಜೀವ್ ಖನ್ನಾ ನೇತೃತ್ವದ ದ್ವಿ ಸದಸ್ಯ ಪೀಠ ಶುಕ್ರವಾರ ಆದೇಶ ನೀಡಿತು. ಮಧ್ಯಂತರ ಜಾಮೀನು ನೀಡಿದ ಪೀಠ, ಬಂಧನವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯಲ್ಲಿ ಪಿಎಂಎಲ್‌ಎ ಸೆಕ್ಷನ್ 19 ರ ಅಡಿಯಲ್ಲಿ ‘ಬಂಧನದ ಅಗತ್ಯತೆ’ ಕುರಿತ ಕಾನೂನು ಪ್ರಶ್ನೆಯನ್ನು ಎತ್ತಿರುವ ಹಿನ್ನೆಲೆ ಇದನ್ನು ವಿಸ್ತೃತ ಪೀಠವು ಪರಿಗಣಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿತು. ಇದನ್ನೂ ಓದಿ: ಅಬಕಾರಿ ನೀತಿ ಪ್ರಕರಣ – ಅರವಿಂದ್ ಕೇಜ್ರಿವಾಲ್‍ಗೆ ಮಧ್ಯಂತರ ಜಾಮೀನು

    ಬಂಧನ ಪ್ರಶ್ನಿಸಿರುವುದು ಜೀವನದ ಹಕ್ಕಿಗೆ ಸಂಬಂಧಿಸಿದೆ. ಇದನ್ನು ನಾವು ದೊಡ್ಡ ಪೀಠಕ್ಕೆ ವರ್ಗಾಯಿಸುತ್ತೇವೆ. ಮಧ್ಯಂತರ ಜಾಮೀನಿನ ಮೇಲೆ ಅರವಿಂದ್ ಕೇಜ್ರಿವಾಲ್ ಅವರನ್ನು ಬಿಡುಗಡೆ ಮಾಡಲು ನಾವು ನಿರ್ದೇಶಿಸುತ್ತೇವೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿತು.

    2021-22ರ ದೆಹಲಿ ಅಬಕಾರಿ ನೀತಿಯಲ್ಲಿ ಲೋಪದೋಷಗಳನ್ನು ಸೃಷ್ಟಿಸಲು ಮನೀಶ್ ಸಿಸೋಡಿಯಾ ಮತ್ತು ಇತರರು ನಿಯಮಗಳಲ್ಲಿ ಸಡಿಲಿಕೆ ಮಾಡಲಾಗಿತ್ತು. ಇದಕ್ಕಾಗಿ ನೂರು ಕೋಟಿ ಕಿಕ್ ಬ್ಯಾಕ್ ಪಡೆದಿದ್ದು, ಇದರಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇರವಾಗಿ ಭಾಗಿಯಾಗಿದ್ದಾರೆ ಎಂದು ಇಡಿ ಆರೋಪಿಸಿತ್ತು. ಇದನ್ನೂ ಓದಿ: ನೇಪಾಳದ ಹೆದ್ದಾರಿಯಲ್ಲಿ ಭೂಕುಸಿತ – ಬಸ್‍ಗಳಲ್ಲಿದ್ದ 6 ಮಂದಿ ಭಾರತೀಯರು ಸೇರಿ 65 ಪ್ರಯಾಣಿಕರು ಕಣ್ಮರೆ

    ಕೇಜ್ರಿವಾಲ್ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಕೇಜ್ರಿವಾಲ್ ಅವರ ಬಂಧನವನ್ನು ಸಮರ್ಥಿಸಲು ಇಡಿ ಈಗ ಉಲ್ಲೇಖಿಸಿರುವ ಮಾಹಿತಿ ಅವರ ಬಂಧನದ ಸಮಯದಲ್ಲಿ ಇರಲಿಲ್ಲ ಮತ್ತು ನಂತರ ಹಾಜರುಪಡಿಸಲಾಗಿದೆ ಎಂದು ವಾದಿಸಿದರು. ಇಡಿ ಪರ ವಾದಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು ಅವರು, ಬಂಧನದ ಸಮಯದಲ್ಲಿ ಆರೋಪಿಯ ವಿರುದ್ಧ ಇಡಿ ಹೊಂದಿರುವ ದೋಷಾರೋಪಣೆ ವಸ್ತುಗಳನ್ನು ಪೂರೈಸುವ ಅಗತ್ಯವಿಲ್ಲ ಎಂದಿದ್ದರು‌.

  • ಅಬಕಾರಿ ನೀತಿ ಪ್ರಕರಣ – ಅರವಿಂದ್ ಕೇಜ್ರಿವಾಲ್‍ಗೆ ಮಧ್ಯಂತರ ಜಾಮೀನು

    ಅಬಕಾರಿ ನೀತಿ ಪ್ರಕರಣ – ಅರವಿಂದ್ ಕೇಜ್ರಿವಾಲ್‍ಗೆ ಮಧ್ಯಂತರ ಜಾಮೀನು

    ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ (Delhi excise policy case) ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರಿಗೆ ಸುಪ್ರೀಂ ಕೋರ್ಟ್ (Supreme Court) ಮಧ್ಯಂತರ ಜಾಮೀನು ನೀಡಿದೆ.

    ದೆಹಲಿಯಲ್ಲಿ ಈಗ ರದ್ದಾಗಿರುವ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿತ್ತು. ಇದನ್ನು ಪ್ರಶ್ನಿಸಿ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿಯ ಕುರಿತು ಇಂದು (ಶುಕ್ರವಾರ) ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಮೇ 17ರಂದು ಈ ತೀರ್ಪನ್ನು ಕಾಯ್ದಿರಿಸಿತ್ತು. ಇದನ್ನೂ ಓದಿ:

    ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಚಾರಕ್ಕಾಗಿ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಜೂನ್ 1ರವರೆಗೆ ಮಧ್ಯಂತರ ಜಾಮೀನು ನೀಡಿತ್ತು. ಬಳಿಕ ಅವರು ಜೂನ್ 2 ರಂದು ಕೋರ್ಟ್ ಮುಂದೆ ಶರಣಾಗಿದ್ದರು.

    ಜೂನ್ 20ರಂದು ಅರವಿಂದ್ ಕೇಜ್ರಿವಾಲ್ ಅವರಿಗೆ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯವು 1 ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್ ಮೇಲೆ ಜಾಮೀನು ನೀಡಿತ್ತು. ಇಡಿ ಮರುದಿನ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿತ್ತು. ಜೂನ್ 21ರಂದು ದೆಹಲಿ ಹೈಕೋರ್ಟ್, ವಿಚಾರಣಾ ನ್ಯಾಯಾಲಯದ ಜಾಮೀನು ಆದೇಶಕ್ಕೆ ಮಧ್ಯಂತರ ತಡೆ ನೀಡಿತ್ತು. ಇದಾದ ಬಳಿಕ ಜೂನ್ 26ರಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಕೇಜ್ರಿವಾಲ್ ಅವರನ್ನು ಬಂಧಿಸಿತ್ತು.

    ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಕೇಜ್ರಿವಾಲ್ ಸುಪ್ರೀಂ ಕೋರ್ಟ್‍ಗೆ ಮೊರೆ ಹೋಗಿದ್ದರು.

    ಏನಿದು ಅಬಕಾರಿ ನೀತಿ ಪ್ರಕರಣ?
    2021-22ರ ದೆಹಲಿ ಸರ್ಕಾರದ ಅಬಕಾರಿ ನೀತಿಯನ್ನು ರೂಪಿಸುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದೆ, ನಂತರ ಅದನ್ನು ರದ್ದುಗೊಳಿಸಲಾಗಿತ್ತು. ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಅವರು ಅಕ್ರಮಗಳ ಕುರಿತು ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದರು. ನಂತರ ಇಡಿ ಪಿಎಂಎಲ್‍ಎ ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು.

  • ಕಾನೂನು ತಂಡದೊಂದಿಗೆ ಚರ್ಚಿಸಲು ಸಮಯ ನೀಡುವಂತೆ ಕೇಜ್ರಿವಾಲ್‌ ಮನವಿ – ಇಡಿ, ತಿಹಾರ್ ಜೈಲು ಅಧಿಕಾರಿಗಳಿಗೆ ನೋಟಿಸ್

    ಕಾನೂನು ತಂಡದೊಂದಿಗೆ ಚರ್ಚಿಸಲು ಸಮಯ ನೀಡುವಂತೆ ಕೇಜ್ರಿವಾಲ್‌ ಮನವಿ – ಇಡಿ, ತಿಹಾರ್ ಜೈಲು ಅಧಿಕಾರಿಗಳಿಗೆ ನೋಟಿಸ್

    ನವದೆಹಲಿ: ತಮ್ಮ ಕಾನೂನು ತಂಡದೊಂದಿಗೆ ಹೆಚ್ಚುವರಿ ಸಭೆಗಳನ್ನು ನಡೆಸಲು ಅನುಮತಿ ನೀಡುವಂತೆ ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ (Delhi High Court) ಸೋಮವಾರ ತಿಹಾರ್ ಜೈಲು (Tihar Jail) ಅಧಿಕಾರಿಗಳು ಮತ್ತು ಜಾರಿ ನಿರ್ದೇಶನಾಲಯಕ್ಕೆ (ED) ನೋಟಿಸ್ ಜಾರಿ ಮಾಡಿದೆ.

    ಕೇಜ್ರಿವಾಲ್ ಅವರು ದೇಶಾದ್ಯಂತ 35 ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಮತ್ತು ಕಾನೂನು ಕಾರ್ಯತಂತ್ರವನ್ನು ಸಿದ್ಧಪಡಿಸಲು ತಮ್ಮ ತಂಡದೊಂದಿಗೆ ಸಭೆಗಳ ಅಗತ್ಯವಿದೆ ಎಂದು ಕೇಜ್ರಿವಾಲ್ ಪರ ವಕೀಲರು ಮನವಿ ಮಾಡಿದರು. ಈ ಮನವಿಯನ್ನು ಪುರಸ್ಕರಿಸಿದ  ನ್ಯಾ. ನೀನಾ ಬನ್ಸಾಲ್ ಕೃಷ್ಣ ಅವರು ತಿಹಾರ್ ಜೈಲು ಮತ್ತು ಇಡಿಯಿಂದ ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ಜುಲೈ 15 ಕ್ಕೆ ವಿಚಾರಣೆಯನ್ನು ಮುಂದೂಡಿದರು.ಇದನ್ನೂ ಓದಿ: ಋತುಚಕ್ರದ ವೇಳೆ ಮಹಿಳೆಯರಿಗೆ ರಜೆ ನೀಡೋದು ಸರ್ಕಾರದ ನೀತಿಯ ವಿಷಯ- ವಿಚಾರಣೆ ನಡೆಸಲು ಸುಪ್ರೀಂ ನಕಾರ

    ಕೇಜ್ರಿವಾಲ್ ಅವರ ಕಾನೂನು ತಂಡದೊಂದಿಗೆ ಒಂದು ವಾರದಲ್ಲಿ ಎರಡು ಸಭೆಗಳನ್ನು ಅನುಮತಿಸಲಾಗಿದೆ. ಕೇಜ್ರಿವಾಲ್ ಅವರು ಹೆಚ್ಚು ಪ್ರಕರಣಗಳನ್ನು ಎದುರಿಸುತ್ತಿರುವುದರಿಂದ ತಮ್ಮ ಕಾನೂನು ತಂಡದೊಂದಿಗೆ ಇನ್ನೆರಡು ಸಭೆಗಳನ್ನು ನಡೆಸಲು ಅವಕಾಶ ನೀಡುವಂತೆ ಕೋರಿ ವಿಚಾರಣಾ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ವಿಶೇಷ ನ್ಯಾಯಾಧೀಶೆ (ಪಿಸಿ ಕಾಯ್ದೆ) ಕಾವೇರಿ ಬವೇಜಾ ಅವರು ಮನವಿಯನ್ನು ತಿರಸ್ಕರಿಸಿದ್ದರು.

     

  • ಸಿಬಿಐನಿಂದ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಬಂಧನ

    ಸಿಬಿಐನಿಂದ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಬಂಧನ

    ನವದೆಹಲಿ: ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಸಿಎಂ ಮತ್ತು ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರನ್ನು ಸಿಬಿಐ (CBI) ಬಂಧಿಸಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಮಂಜೂರು ಮಾಡುವುದಕ್ಕೆ ಹೈಕೋರ್ಟ್‌ ತಡೆಯಾಜ್ಞೆ ಪ್ರಶ್ನಿಸಿ ಕೇಜ್ರಿವಾಲ್‌, ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಇದಕ್ಕೆ ಕೆಲವೇ ಗಂಟೆಗಳ ಮುಂಚೆ ಕೇಜ್ರಿವಾಲ್‌ ಅವರನ್ನು ಸಿಬಿಐ ಬಂಧಿಸಿದೆ. ಇದನ್ನೂ ಓದಿ: ಲೋಕಸಭೆಯ ಸ್ಪೀಕರ್‌ ಆಗಿ 2 ನೇ ಬಾರಿಗೆ ಓಂ ಬಿರ್ಲಾ ಆಯ್ಕೆ

    ಮದ್ಯ ನೀತಿ ಪ್ರಕರಣದಲ್ಲಿ ದೆಹಲಿಯ ರೋಸ್ ಅವೆನ್ಯೂ ಕೋರ್ಟ್‌ನೊಳಗೆ ಸಿಬಿಐನಿಂದ ಬಂಧಿಸಲಾಯಿತು. ಇದನ್ನೂ ಓದಿ: ನಾವು ಭಾರತದ ಜೊತೆಗಿದ್ದೇವೆ: ಪಾಕಿಸ್ತಾನ ಉಪ ಪ್ರಧಾನಿ

    ಕಳೆದ ವಾರ ರೋಸ್ ಅವೆನ್ಯೂ ಕೋರ್ಟ್ ದೆಹಲಿ ಸಿಎಂಗೆ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ಇಡಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತು. ಜಾಮೀನು ನೀಡಿ ಅವೆನ್ಯೂ ಕೋರ್ಟ್‌ ಹೊರಡಿಸಿದ್ದ ಆದೇಶಕ್ಕೆ ದೆಹಲಿ ಹೈಕೋರ್ಟ್‌ ತಡೆ ನೀಡಿತು. ಹೈಕೋರ್ಟ್‌ ಆದೇಶ ಪ್ರಶ್ನಿಸಿ ಕೇಜ್ರಿವಾಲ್‌ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

  • ದೆಹಲಿ ಮದ್ಯ ಹಗರಣ – ಈಗ ಸಿಬಿಐನಿಂದ ಕೇಜ್ರಿವಾಲ್‌ ಅರೆಸ್ಟ್‌

    ದೆಹಲಿ ಮದ್ಯ ಹಗರಣ – ಈಗ ಸಿಬಿಐನಿಂದ ಕೇಜ್ರಿವಾಲ್‌ ಅರೆಸ್ಟ್‌

    ನವದೆಹಲಿ: ದೆಹಲಿ ಮದ್ಯ ಹಗರಣಕ್ಕೆ (Delhi Liquor Scam) ಸಂಬಂಧಿಸಿದಂತೆ ಸಿಎಂ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಸಿಬಿಐನಿಂದ (CBI) ಈಗ ಬಂಧನಕ್ಕೆ ಒಳಗಾಗಿದ್ದಾರೆ.

    ಈಗಾಗಲೇ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಅರವಿಂದ್‌ ಕೇಜ್ರಿವಾಲ್‌ ಬಂಧನಕ್ಕೆ ಒಳಗಾಗಿ ತಿಹಾರ್‌ ಜೈಲಿನಲ್ಲಿ (Tihar Jail) ಇದ್ದಾರೆ. ಸಿಬಿಐ ಸೋಮವಾರ ತಿಹಾರ್‌ ಜೈಲಿನಲ್ಲೇ ಅರವಿಂದ್‌ ಕೇಜ್ರಿವಾಲ್‌ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ಇದನ್ನೂ ಓದಿ: ಇಡಿ ವಿವರಣೆ ಪರಿಗಣಿಸಲು ಟ್ರಯಲ್‌ ಕೋರ್ಟ್‌ ವಿಫಲ – ಕೇಜ್ರಿವಾಲ್‌ ಜಾಮೀನಿಗೆ ತಡೆ

     


    ಕಳೆದ ವಾರ ತಿಹಾರ್ ಜೈಲಿನಲ್ಲಿ ಕೇಜ್ರಿವಾಲ್ ಅವರನ್ನು ವಿಚಾರಣೆಗೆ ಒಳಪಡಿಸಲು ಸಿಬಿಐ ಅನುಮತಿ ಕೋರಿತ್ತು. ಬುಧವಾರ ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯದ ಮುಂದೆ ಅರವಿಂದ್ ಕೇಜ್ರಿವಾಲ್ ಅವರನ್ನು ಹಾಜರುಪಡಿಸಲು ಸಿಬಿಐ ಅನುಮತಿಯನ್ನು ಪಡೆದುಕೊಂಡಿದೆ. ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಸಂಬಂಧಿಸಿದಂತೆ ಮತ್ತಷ್ಟು ಸಾಕ್ಷ್ಯಗಳು ಲಭ್ಯವಾಗಿದೆ ಎಂದು ಸಿಬಿಐ ಕೋರ್ಟ್‌ಗೆ ತಿಳಿಸಿದೆ.

     

    ಆಪ್‌ ರಾಜ್ಯಸಭಾ ಸದಸ್ಯ ಸಂಜಯ್‌ ಸಿಂಗ್‌ ಪ್ರತಿಕ್ರಿಯಿಸಿ, ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಸಿಗುವ ಸಾಧ್ಯತೆ ಇರುವಾಗ ದೆಹಲಿ ಸಿಎಂ ವಿರುದ್ಧ ನಕಲಿ ಸಿಬಿಐ ಪ್ರಕರಣವನ್ನು ದಾಖಲಿಸಿ ಬಂಧಿಸಲು ಕೇಂದ್ರ ಸರ್ಕಾರ ಸಂಚು ರೂಪಿಸಿದೆ ಎಂದು ಮೂಲಗಳು ನನಗೆ ತಿಳಿಸಿವೆ. ಇಡೀ ರಾಷ್ಟ್ರವು ಇದನ್ನು ನೋಡಬಹುದು ಮತ್ತು ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಒಗ್ಗಟ್ಟಿನಿಂದ ನಿಂತಿದೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.

  • ಇಡಿ ವಿವರಣೆ ಪರಿಗಣಿಸಲು ಟ್ರಯಲ್‌ ಕೋರ್ಟ್‌ ವಿಫಲ – ಕೇಜ್ರಿವಾಲ್‌ ಜಾಮೀನಿಗೆ ತಡೆ

    ಇಡಿ ವಿವರಣೆ ಪರಿಗಣಿಸಲು ಟ್ರಯಲ್‌ ಕೋರ್ಟ್‌ ವಿಫಲ – ಕೇಜ್ರಿವಾಲ್‌ ಜಾಮೀನಿಗೆ ತಡೆ

    ನವದೆಹಲಿ: ದೆಹಲಿ ಮದ್ಯ ಹಗರಣದಲ್ಲಿ (Delhi Liquor Scam) ಬಂಧನಕ್ಕೆ ಒಳಗಾಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ (Arvind Kejriwal) ದೆಹಲಿ ಹೈಕೋರ್ಟ್‌ನಲ್ಲಿ (Delhi High Court) ರಿಲೀಫ್ ಸಿಕ್ಕಿಲ್ಲ. ಟ್ರಯಲ್ ಕೋರ್ಟ್ ಮಂಜೂರು ಮಾಡಿದ್ದ ಜಾಮೀನಿಗೆ (Bail) ಹೈಕೋರ್ಟ್ ಇಂದು ತಡೆಯಾಜ್ಞೆ ನೀಡಿದೆ.

    ಜಾರಿ ನಿರ್ದೇಶಾನಾಲಯ (ED) ನೀಡಿದ್ದ ವಿವರಣೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುವಲ್ಲಿ ಟ್ರಯಲ್ ಕೋರ್ಟ್ ವಿಫಲವಾಗಿದೆ ಎಂದು ನ್ಯಾ. ಸುಧೀರ್ ಕುಮಾರ್ ಜೈನ್ ಅವರಿದ್ದ ಪೀಠ ಹೇಳಿದೆ. ಇದನ್ನೂ ಓದಿ: ಗಂಡ ಇಲ್ಲದೇ ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿದೆ: ರೇಣುಕಾಸ್ವಾಮಿ ಕೊಲೆ ಕೇಸ್‌ನ ಎ4 ಆರೋಪಿ ಪತ್ನಿ ಕಣ್ಣೀರು

    ಜಾಮೀನು ಅರ್ಜಿ ಮೇಲೆ ನಿರ್ಣಯ ತೆಗೆದುಕೊಳ್ಳುವಾಗ ಸಮಗ್ರವಾಗಿ ಆಲೋಚನೆ ಮಾಡಿಲ್ಲ. ಜಾಮೀನು ಅರ್ಜಿ ವಿಚಾರಣೆ ವೇಳೆ ಇಡಿ ಪರ ವಕೀಲರಿಗೆ ಅಗತ್ಯ ಅವಕಾಶವನ್ನು ನೀಡಬೇಕಿತ್ತು ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

    ಟ್ರಯಲ್‌ ಕೋರ್ಟ್‌ ನೀಡಿದ್ದ ಜಾಮೀನು ಆದೇಶವನ್ನು ಪ್ರಶ್ನಿಸಿ ಇಡಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಪೀಠವು ಜೂನ್ 21 ರಂದು ಆದೇಶ ಕಾಯ್ದಿರಿಸಿ ಇಂದು ತನ್ನ ತೀರ್ಪು ಪ್ರಕಟಿಸಿದೆ.

    ಕೋರ್ಟ್‌ ತಡೆ ನೀಡಿದ್ದರಿಂದ ಕೇಜ್ರಿವಾಲ್‌ ತಿಹಾರ್‌ ಜೈಲಿನಲ್ಲೇ (Tihar Jail) ಮುಂದುವರಿಯಬೇಕಾಗುತ್ತದೆ. ಹೈಕೋರ್ಟ್‌ ನೀಡಿದ ಆದೇಶವನ್ನು ಸುಪ್ರೀಂನಲ್ಲಿ ಪ್ರಶ್ನಿಸಲು ಕೇಜ್ರಿವಾಲ್‌ ವಕೀಲರ ತಂಡ ಮುಂದಾಗಿದೆ.

    ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಕಳೆದ ಮಾರ್ಚ್ 21ರಂದು ಇಡಿ ಬಂಧಿಸಿತ್ತು. ಚುನಾವಣಾ ಪ್ರಚಾರಕ್ಕಾಗಿ ಸುಪ್ರೀಂ ಕೋರ್ಟ್ ಜೂನ್ 1ರವರೆಗೆ ಮಧ್ಯಂತರ ಜಾಮೀನು ನೀಡಿತ್ತು. ಜೂನ್ 2 ರಂದು ಅವರು ಮತ್ತೆ ಶರಣಾಗಿದ್ದರು.

     

  • ಕೇಜ್ರಿವಾಲ್ ಜಾಮೀನು ಪ್ರಕರಣ- ತುರ್ತು ಪರಿಹಾರ ನೀಡಲು ಸುಪ್ರೀಂ ನಕಾರ

    ಕೇಜ್ರಿವಾಲ್ ಜಾಮೀನು ಪ್ರಕರಣ- ತುರ್ತು ಪರಿಹಾರ ನೀಡಲು ಸುಪ್ರೀಂ ನಕಾರ

    ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ (Delhi Highcourt) ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಹೈಕೋರ್ಟ್ ಆದೇಶದವರೆಗೂ ಕಾಯುವಂತೆ ನ್ಯಾ. ಮನೋಜ್ ಮಿಶ್ರಾ ನೇತೃತ್ವದ ದ್ವಿ ಸದಸ್ಯ ಪೀಠ ಸೂಚಿಸಿದೆ.

    ರೋಸ್ ಅವೆನ್ಯೂ ಕೋರ್ಟ್ ನೀಡಿದ ಜಾಮೀನಿಗೆ ತಡೆ ನೀಡಿದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅರವಿಂದ್ ಕೇಜ್ರಿವಾಲ್, ಸುಪ್ರೀಂಕೋರ್ಟ್‌ಗೆ (Supreme Court) ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ, ವಿಚಾರಣಾ ನ್ಯಾಯಾಲಯದ ಜಾಮೀನು ಆದೇಶಕ್ಕಾಗಿ ಕಾಯದೇ ಹೈಕೋರ್ಟ್ ಆದೇಶವನ್ನು ನೋಡದೆ ತಡೆಹಿಡಿಯಬಹುದಾದರೆ, ನಿಮ್ಮ ಹೈಕೋರ್ಟ್ ಆದೇಶವನ್ನು ಏಕೆ ತಡೆಹಿಡಿಯಬಾರದು ಎಂದು ಪ್ರಶ್ನಿಸಿದರು‌.

    ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಮನೋಜ್ ಮಿಶ್ರಾ, ಹೈಕೋರ್ಟ್ ತಪ್ಪು ಮಾಡಿದ್ದರೆ ಅದನ್ನು ಪುನರಾವರ್ತಿಸಬೇಕೇ? ಎಂದು ಮರು ಪ್ರಶ್ನಿಸಿತು. ವಾದ ಮುಂದುವರಿಸಿದ ಸಿಂಘ್ವಿ, ಅಂತಿಮ ಆದೇಶವನ್ನು ಶೀಘ್ರದಲ್ಲೇ ನಿರೀಕ್ಷಿಸಬಹುದು ಎಂದು ಪೀಠ ಸೂಚಿಸಿತು ಮತ್ತು ಎಲ್ಲಾ ಪಕ್ಷಗಳು ತಾಳ್ಮೆಯಿಂದ ಕಾಯುವಂತೆ ಹೇಳಿತು. ಆದೇಶ ಬರುವ ಮುನ್ನವೇ ಹೈಕೋರ್ಟ್ ತಡೆ ನೀಡಿದೆ ಎಂದು ಬಗ್ಗೆ ಕಳವಳ ವ್ಯಕ್ತಪಡಿಸಿದರು. ಇದನ್ನೂ ಓದಿ: 18ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭ – ಮೊದಲ ದಿನವೇ ಪ್ರತಿಭಟನೆಯ ಬಿಸಿ!

    ನಾವು ಈಗ ಆದೇಶವನ್ನು ನೀಡಿದರೆ ಸಮಸ್ಯೆಯಾಗಬಹುದು ಒಂದು ದಿನ ಕಾಯುವುದರಲ್ಲಿ ಏನು ಸಮಸ್ಯೆ ಎಂದು ಪೀಠ ಕೇಳಿತು. ಈ ವೇಳೆ ಕೇಜ್ರಿವಾಲ್ (Arvind Kejriwal) ಪರ ವಾದ ಮಂಡಿಸಿದ ಮತ್ತೋರ್ವ ಹಿರಿಯ ವಕೀಲ ವಿಕ್ರಮ್ ಚೌಧರಿ, ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಸುಪ್ರೀಂ ಕೋರ್ಟ್‌ನ ಮೇ 10 ರ ಆದೇಶವನ್ನು ಉಲ್ಲೇಖಿಸಿದರು. ಕೇಜ್ರಿವಾಲ್ ಅವರು ದೆಹಲಿಯ ಮುಖ್ಯಮಂತ್ರಿಯಾಗಿಯೂ ಯಾವುದೇ ಕ್ರಿಮಿನಲ್ ಹಿನ್ನೆಲೆ ಹೊಂದಿಲ್ಲ, ತನಿಖೆಯ ದಿಕ್ಕು ತಪ್ಪಿಸಿಲ್ಲ, ಸಾಕ್ಷ್ಯಗಳ ಮೇಲೆ ಪರಿಣಾಮ ಬೀರಿಲ್ಲ ಎಂದರು.

    ಇಡಿ ಪರ ವಕೀಲ ಎಎಸ್‌ಜಿ ರಾಜು ಪ್ರತಿವಾದ ಮಂಡಿಸಿ, ವಿಚಾರಣಾ ನ್ಯಾಯಾಲಯದ ಜಾಮೀನು ಆದೇಶ ವಿಕೃತವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಲಯವು ಈ ಪ್ರಕರಣದಲ್ಲಿ ಹೈಕೋರ್ಟ್ ಮೇಲೆ ಒತ್ತಡ ಹೇರಲು ಬಯಸುವುದಿಲ್ಲ, ಒಂದೇರೆಡು ದಿನಗಳು ಕಾಯಿರಿ, ಈ ಮಧ್ಯೆ ಹೈಕೋರ್ಟ್‌ನ ಆದೇಶ ಜಾರಿಯಾದರೆ ಅದನ್ನು ದಾಖಲೆಗೆ ತರಬಹುದು ಎಂದೂ ಹೇಳಿತು. ಕೇಜ್ರಿವಾಲ್ ಅವರ ಮನವಿಯನ್ನು ಜೂನ್ 26 ಬುಧವಾರ ಮತ್ತೆ ಕೈಗೆತ್ತಿಕೊಳ್ಳಲಾಗುವುದು ತಿಳಿಸಿತು.

  • ದಾಖಲೆಗಳನ್ನು ನೋಡಲ್ಲ ಎಂದಿದ್ದ ದೆಹಲಿ ಕೋರ್ಟ್‌ – ಕೇಜ್ರಿವಾಲ್‌ಗೆ ಜಾಮೀನಿಗೆ ತಡೆ ನೀಡಿದ ಹೈಕೋರ್ಟ್‌

    ದಾಖಲೆಗಳನ್ನು ನೋಡಲ್ಲ ಎಂದಿದ್ದ ದೆಹಲಿ ಕೋರ್ಟ್‌ – ಕೇಜ್ರಿವಾಲ್‌ಗೆ ಜಾಮೀನಿಗೆ ತಡೆ ನೀಡಿದ ಹೈಕೋರ್ಟ್‌

    – ದಾಖಲೆಗಳು ದೊಡ್ಡದಾಗಿದೆ ಎಂದು ದೆಹಲಿ ಕೋರ್ಟ್‌ ಹೇಳಿದೆ
    – ನಮ್ಮ ವಾದವನ್ನು ಸರಿಯಾಗಿ ಆಲಿಸಿಲ್ಲ: ಇಡಿ

    ನವದೆಹಲಿ: ದೆಹಲಿ ಮದ್ಯ ಹಗರಣದಲ್ಲಿ (Delhi Liquor Scam) ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (CM Arvind Kejriwal) ಅವರಿಗೆ ರೋಸ್ ಅವೆನ್ಯೂ  ಕೋರ್ಟ್‌  ನೀಡಿದ ಜಾಮೀನಿಗೆ (Bail) ದೆಹಲಿ ಹೈಕೋರ್ಟ್ (Delhi High Court) ಮಧ್ಯಂತರ ತಡೆ ನೀಡಿದೆ. ವಿಸ್ತೃತ ಆದೇಶವನ್ನು ಕಾಯ್ದಿರಿಸಿದ್ದು ಎರಡು ಮೂರು ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.

    ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ED) ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುಧೀರ್ ಕುಮಾರ್ ಜೈನ್ ಈ ಆದೇಶ ನೀಡಿದ್ದಾರೆ. ನಾನು ಆದೇಶವನ್ನು ಎರಡು ಮೂರು ದಿನಗಳವರೆಗೆ ಕಾಯ್ದಿರಿಸುತ್ತಿದ್ದೇನೆ. ಆದೇಶವನ್ನು ಪ್ರಕಟಿಸುವವರೆಗೆ ವಿಚಾರಣಾ ನ್ಯಾಯಾಲಯದ ಆದೇಶದ ಕಾರ್ಯಾಚರಣೆಯನ್ನು ತಡೆಹಿಡಿಯಲಾಗಿದೆ ಎಂದು ತಿಳಿಸಿದರು.

    court order law

    ವಿಚಾರಣೆ ವೇಳೆ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಆದೇಶವಾಗಿದ್ದರೂ ವಿಚಾರಣಾ ನ್ಯಾಯಾಲಯವು ಇಡಿ ವಾದವನ್ನು ಸರಿಯಾಗಿ ಆಲಿಸಿಲ್ಲ ಎಂದು ಪ್ರತಿಪಾದಿಸಿದರು. ಇಡಿ ಸಲ್ಲಿಸಿದ ದಾಖಲೆಗಳನ್ನು ಪರಿಗಣಿಸಲು ವಿಚಾರಣಾ ನ್ಯಾಯಾಲಯ ವಿಫಲವಾಗಿದೆ ಎಂದು ಹೇಳಿದರು.  ಇದನ್ನೂ ಓದಿ: ಕೆಡಿಪಿ ಸಭೆಯಲ್ಲಿ ಭರ್ಜರಿ ನಿದ್ದೆ ಮಾಡಿದ ಎಂಎಲ್‌ಸಿ ವಸಂತ ಕುಮಾರ್‌

    ದಯವಿಟ್ಟು ವಿಚಾರಣಾ ನ್ಯಾಯಾಲಯದ ಆದೇಶವನ್ನು ಗಮನಿಸಬೇಕು. ನ್ಯಾಯಾಲಯವು ನಮ್ಮ ಮಾತುಗಳನ್ನು ಕೇಳುವುದಿಲ್ಲ, ನಾವು ನೀಡಿದ ದಾಖಲೆಗಳನ್ನು ನೋಡುವುದಿಲ್ಲ ಮತ್ತು ಅದು ದೊಡ್ಡದಾಗಿದೆ ಎಂದು ಹೇಳುತ್ತದೆ. ಬೃಹತ್ ದಾಖಲೆಗಳನ್ನು ಸಲ್ಲಿಸಲಾಗಿದೆ ಎಂದು ನ್ಯಾಯಾಲಯ ಹೇಳುತ್ತದೆ. ಇದಕ್ಕಿಂತ ವಿಕೃತ ಆದೇಶ ಇರಲು ಸಾಧ್ಯವಿಲ್ಲ. ಈ ಮೂಲಕ ನ್ಯಾಯಧೀಶರು ದಾಖಲೆಗಳನ್ನು ಪರಿಶೀಲಿಸಲಿಲ್ಲ ಎಂದು ಆದೇಶದಲ್ಲೇ ಒಪ್ಪಿಕೊಂಡಿದ್ದಾರೆ ಎಂಬ ವಿಚಾರವನ್ನು ಕೋರ್ಟ್‌ ಗಮನಕ್ಕೆ ತಂದರು.

     

    ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ (Abhishek Singhvi), ಇಡಿ 3 ಗಂಟೆ 45 ನಿಮಿಷಗಳ ಕಾಲ ವಾದ ಮಂಡಿಸಿದೆ. ತನ್ನ ವಾದದಲ್ಲಿ ಸರ್ಕಾರಿ ಸಂಸ್ಥೆಯ ಮೂಲಕ ನ್ಯಾಯಧೀಶರನ್ನು ನಿಂದಿಸಿದ್ದಾರೆ. ಬಂಧನದ ಕಾನೂನು ಬದ್ಧತೆಯ ವಿಷಯವು ಇನ್ನೂ ಉನ್ನತ ನ್ಯಾಯಾಲಯದ ಮುಂದೆ ಬಾಕಿ ಇದೆ. ಆರ್ಟಿಕಲ್ 21 ಅಸ್ತಿತ್ವದಲ್ಲಿಲ್ಲ, ವ್ಯಕ್ತಿ ಸ್ವಾತಂತ್ರ್ಯವು ತುಂಬಾ ಕಡಿಮೆಯಾಗಿದೆ. ಇಡಿಗೆ ಕಣ್ಣುಗಳಿದ್ದರೆ ವಾಸ್ತವದಲ್ಲಿ ಕೇಜ್ರಿವಾಲ್ ಅವರನ್ನು ಬಂಧಿಸುತ್ತಿರಲಿಲ್ಲ. ಜೈಲಿಗೆ ಕಳುಹಿಸುತ್ತಿರಲಿಲ್ಲ. ಇದು ಕೇವಲ ಹೇಳಿಕೆ ಮೇಲೆ ದಾಖಲಿಸಿರುವ ಪ್ರಕರಣ ಎಂದು ವಾದಿಸಿದರು.

  • ಜೈಲಿನಿಂದ ಸಿಎಂ ಕೇಜ್ರಿವಾಲ್‌ ಬಿಡುಗಡೆಗೆ ಹೈಕೋರ್ಟ್‌ ತಡೆ

    ಜೈಲಿನಿಂದ ಸಿಎಂ ಕೇಜ್ರಿವಾಲ್‌ ಬಿಡುಗಡೆಗೆ ಹೈಕೋರ್ಟ್‌ ತಡೆ

    ನವದೆಹಲಿ: ದೆಹಲಿ ಮದ್ಯ ನೀತಿಗೆ (Delhi Liquor Policy) ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ಗೆ (Arvind Kejriwal) ಹಿನ್ನಡೆಯಾಗಿದೆ. ಜೈಲಿನಿಂದ ಕೇಜ್ರಿವಾಲ್‌ ಬಿಡುಗಡೆಗೆ ದೆಹಲಿ ಹೈಕೋರ್ಟ್‌ ತಡೆ ನೀಡಿದೆ.

    ಹೊಸ ಮದ್ಯ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್‌ಗೆ ರೋಸ್‌ ಅವೆನ್ಯೂ ನ್ಯಾಯಾಲಯ ಗುರುವಾರ ಜಾಮೀನು ನೀಡಿತ್ತು. ಜಾಮೀನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ದೆಹಲಿ ಹೈಕೋರ್ಟ್‌ (Delhi High Court) ಮೊರೆ ಹೋಗಿತ್ತು. ನ್ಯಾ. ಸುಧೀರ್ ಕುಮಾರ್ ಜೈನ್ ಮತ್ತು ರವೀಂದರ್ ದುಡೇಜಾ ಪೀಠವು ಅರ್ಜಿ ತುರ್ತು ವಿಚಾರಣೆ ನಡೆಸಿದ್ದು, ಜಾಮೀನು ಆದೇಶಕ್ಕೆ ತಡೆ ನೀಡಿದೆ. ಇದನ್ನೂ ಓದಿ: ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ಗೆ ಜಾಮೀನು ಮಂಜೂರು

    ಅರ್ಜಿಯ ವಿಚಾರಣೆ ನಡೆಸುವವರೆಗೂ ವಿಚಾರಣಾ ನ್ಯಾಯಾಲಯದ ಆದೇಶದ ಪ್ರಕಾರ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.

    ಕೇಜ್ರಿವಾಲ್ ಅವರ ಪತ್ನಿ ಸುನಿತಾ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರು ಇಂದು ಸಂಜೆ 4 ಗಂಟೆಗೆ ತಿಹಾರ್ ಜೈಲಿಗೆ ಭೇಟಿ ನೀಡಿ ದೆಹಲಿ ಮುಖ್ಯಮಂತ್ರಿಯನ್ನು ಸ್ವಾಗತಿಸಲು ಯೋಜಿಸಿದ್ದರು. ಇದನ್ನೂ ಓದಿ: ಭಾರತ-ಪಾಕಿಸ್ತಾನ ಗಡಿಯಲ್ಲಿ ಯೋಗ ಪ್ರದರ್ಶನ