Tag: Arvind Kejriwal

  • ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆ ಪಡೆದ ವ್ಯಕ್ತಿಯನ್ನೇ ನೋಡಿಲ್ಲ – ಮೋದಿಗೆ ಕೇಜ್ರಿವಾಲ್ ತಿರುಗೇಟು

    ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆ ಪಡೆದ ವ್ಯಕ್ತಿಯನ್ನೇ ನೋಡಿಲ್ಲ – ಮೋದಿಗೆ ಕೇಜ್ರಿವಾಲ್ ತಿರುಗೇಟು

    ನವದೆಹಲಿ: ರಾಜಕೀಯ ಹಿತಾಸಕ್ತಿಗಳ ಕಾರಣದಿಂದ ಆಯುಷ್ಮಾನ್ ಭಾರತ್ (Ayushman Bharat) ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೊಳಿಸಲು ವಿಫಲವಾಗಿದೆ, ಸಾರ್ವಜನಿಕ ಆರೋಗ್ಯದ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಹೇಳಿದ್ದಾರೆ.

    ದೆಹಲಿ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೊಳಿಸಲು ವಿಫಲವಾಗಿದೆ ಎಂದು ಟೀಕಿಸಿದ ಪ್ರಧಾನಿ ಮೋದಿಗೆ (Narendra Modi) ಕೇಜ್ರಿವಾಲ್‌ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: Hyderabad | ಮೊಮೊಸ್ ತಿಂದು ಓರ್ವ ಮಹಿಳೆ ಸಾವು ಬೆನ್ನಲ್ಲೇ 20 ಜನರಿಗೆ ಫುಡ್ ಪಾಯ್ಸನ್

    ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮಾಡಿರುವ ಅವರು, ಸಾರ್ವಜನಿಕ ಆರೋಗ್ಯದ ವಿಷಯದ ಬಗ್ಗೆ ತಪ್ಪಾಗಿ ಮಾತನಾಡುವುದು ಮತ್ತು ಅದರ ಮೇಲೆ ರಾಜಕೀಯ ಮಾಡುವುದು ಸರಿಯಲ್ಲ. ಪ್ರಧಾನಿ ಮೋದಿ ದೆಹಲಿ ಮಾದರಿಯ ಆರೋಗ್ಯ ರಕ್ಷಣೆ ಯೋಜನೆಯನ್ನು ಅಧ್ಯಯನ ಮಾಡಬೇಕು. ದೆಹಲಿ ಸರ್ಕಾರದ ಯೋಜನೆಯಡಿಯಲ್ಲಿ, ನಗರದ ಪ್ರತಿಯೊಬ್ಬ ವ್ಯಕ್ತಿಯು ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುತ್ತಾನೆ. 5 ರೂ. ಮಾತ್ರೆ ಅಥವಾ 1 ಕೋಟಿ ರೂ. ಮೌಲ್ಯದ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರ ಭರಿಸುತ್ತದೆ ಎಂದು ಹೇಳಿದರು. ಇದನ್ನೂ ಓದಿ: Darshan Case File | ಜೂನ್‌ 8 ರಿಂದ ಅ.30ರ ವರೆಗೆ ಏನೆಲ್ಲಾ ಆಯ್ತು?

    ಜನರಿಗೆ ವಾಸ್ತವದಲ್ಲಿ ಆರೋಗ್ಯ ಪ್ರಯೋಜನಕ್ಕಾಗಿ ದೇಶದಾದ್ಯಂತ ದೆಹಲಿಯಂತೆ ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯನ್ನು ಬದಲಿಸಬೇಕು ಎಂದು ಒತ್ತಾಯಿಸಿದ ಕೇಜ್ರಿವಾಲ್, ಈವರೆಗೂ ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆ ಪಡೆದ ವ್ಯಕ್ತಿಯನ್ನು ತಾನು ಇನ್ನೂ ಭೇಟಿ ಮಾಡಿಲ್ಲ ಎಂದು ಕೇಜ್ರಿವಾಲ್ ವ್ಯಂಗ್ಯ ಮಾಡಿದರು. ಆಯುಷ್ಮಾನ್ ಭಾರತ್ ಯೋಜನೆಯಡಿ ಸಿಎಜಿ ಅದರಲ್ಲಿ ಹಲವಾರು ಅಕ್ರಮಗಳನ್ನು ಕಂಡುಹಿಡಿದಿದೆ ಎಂದು ಹೇಳಿದರು.

    ಆಯುಷ್ಮಾನ್ ಭಾರತ್ ʻವಿಫಲʼ ಯೋಜನೆಯಾಗಿದೆ ಎಂದು ದೆಹಲಿಯ ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಹೇಳಿದ್ದಾರೆ. ಯೋಜನೆಯನ್ನು ಜಾರಿಗೊಳಿಸಿದ ಉತ್ತರ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನದಂತಹ ಬಿಜೆಪಿ ಆಡಳಿತ ರಾಜ್ಯಗಳ ಬಡ ರೋಗಿಗಳು ಶಸ್ತ್ರಚಿಕಿತ್ಸೆಗಾಗಿ ದೆಹಲಿಯ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದಾರೆ ಎಂದು ಅವರು ತಿರಗೇಟು ನೀಡಿದರು. ಇದನ್ನೂ ಓದಿ: ದರ್ಶನ್‌ಗೆ ಜಾಮೀನು – ಪಾಸ್‌ಪೋರ್ಟ್‌ ಒಪ್ಪಿಸುವಂತೆ ಕೋರ್ಟ್‌ ಸೂಚಿಸಿದ್ದೇಕೆ?

  • ಮಹಾರಾಷ್ಟ್ರ ಚುನಾವಣೆಯಲ್ಲಿ ಎಎಪಿ ಸ್ಪರ್ಧಿಸಲ್ಲ – ಮಹಾ ವಿಕಾಸ್‌ ಅಘಾಡಿ ಒಕ್ಕೂಟಕ್ಕೆ ಬೆಂಬಲ

    ಮಹಾರಾಷ್ಟ್ರ ಚುನಾವಣೆಯಲ್ಲಿ ಎಎಪಿ ಸ್ಪರ್ಧಿಸಲ್ಲ – ಮಹಾ ವಿಕಾಸ್‌ ಅಘಾಡಿ ಒಕ್ಕೂಟಕ್ಕೆ ಬೆಂಬಲ

    ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷ ಸ್ಪರ್ಧಿಸುವುದಿಲ್ಲ. ಮಹಾ ವಿಕಾಸ್‌ ಅಘಾಡಿ (MVA) ಒಕ್ಕೂಟದ ಪರ ಪ್ರಚಾರ ನಡೆಸಲಿದೆ ಎಂದು ಎಎಪಿ ನಾಯಕ ಸಂಜಯ್‌ ಸಿಂಗ್‌ ತಿಳಿಸಿದ್ದಾರೆ.

    ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಅವರು, ಮಹಾರಾಷ್ಟ್ರ ಚುನಾವಣೆಯಲ್ಲಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಎಂವಿಎ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಆಮ್ ಆದ್ಮಿ ಪಕ್ಷವು ಮಹಾರಾಷ್ಟ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.

    ಮಹಾರಾಷ್ಟ್ರದಲ್ಲಿ ಅರವಿಂದ್ ಕೇಜ್ರಿವಾಲ್ ಪ್ರಚಾರ ಮಾಡುತ್ತಿರುವ ಬಗ್ಗೆ ಶಿವಸೇನೆ (ಯುಬಿಟಿ) ಮತ್ತು ಎನ್‌ಸಿಪಿ-ಎಸ್‌ಪಿ ಪಕ್ಷವನ್ನು ಸಂಪರ್ಕಿಸಿವೆ. ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಹೇಮಂತ್ ಸೋರೆನ್ ಅವರ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ ಪರ ಪ್ರಚಾರ ಮಾಡಲು ಅರವಿಂದ್ ಕೇಜ್ರಿವಾಲ್ ಕೂಡ ಸಿದ್ಧರಾಗಿದ್ದಾರೆ ಎಂದು ತಿಳಿಸಿದ್ದಾರೆ.

    ಎಂವಿಎ ಒಕ್ಕೂಟವು ಉದ್ಧವ್ ಠಾಕ್ರೆ ಅವರ ಶಿವಸೇನೆ (ಯುಬಿಟಿ), ಶರದ್ ಪವಾರ್ ಅವರ ಎನ್‌ಸಿಪಿ-ಎಸ್‌ಪಿ ಮತ್ತು ಕಾಂಗ್ರೆಸ್ ಅನ್ನು ಒಳಗೊಂಡಿದೆ.

    ಮಹಾರಾಷ್ಟ್ರದಲ್ಲಿ 288 ವಿಧಾನಸಭಾ ಸ್ಥಾನಗಳಿದ್ದು, ನ.20 ರಂದು ಮತದಾನ ನಡೆಯಲಿದೆ. ಜಾರ್ಖಂಡ್‌ನಲ್ಲಿ ನ.13 ಮತ್ತು 20 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಎರಡೂ ರಾಜ್ಯಗಳ ಮತ ಎಣಿಕೆ ನವೆಂಬರ್ 23 ರಂದು ನಡೆಯಲಿದೆ.

    ಎಎಪಿ ಮತ್ತು ಎಂವಿಎ ಘಟಕಗಳು ಬಿಜೆಪಿಯನ್ನು ಎದುರಿಸಲು 2024 ರ ಲೋಕಸಭಾ ಚುನಾವಣೆಯ ಮೊದಲು ರಚಿಸಲಾದ ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟದ (ಭಾರತ) ಭಾಗವಾಗಿದೆ.

  • ಸರ್ಕಾರಿ ನಿವಾಸ ತೊರೆದು ಆಪ್ ಸಂಸದನ ಮನೆಗೆ‌ ತೆರಳಿದ ಕೇಜ್ರಿವಾಲ್

    ಸರ್ಕಾರಿ ನಿವಾಸ ತೊರೆದು ಆಪ್ ಸಂಸದನ ಮನೆಗೆ‌ ತೆರಳಿದ ಕೇಜ್ರಿವಾಲ್

    ನವದೆಹಲಿ: ದೆಹಲಿಯ (Delhi) ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಫ್ಲಾಗ್‌ಸ್ಟಾಫ್ ರಸ್ತೆಯ ಸರ್ಕಾರಿ ನಿವಾಸವನ್ನು ತೆರವು ಮಾಡಿ ದೆಹಲಿ ಲುಟ್ಯೆನ್ಸ್‌ ವಲಯದಲ್ಲಿರುವ ತಮ್ಮ ಪಕ್ಷದ (Aam Aadmi Party) ನಾಯಕ ಅಶೋಕ್ ಮಿತ್ತಲ್ ಅವರ ಮನೆಗೆ ತೆರಳಿದ್ದಾರೆ.

    ಕೇಜ್ರಿವಾಲ್ ತಮ್ಮ ಪೋಷಕರು, ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಕಾರಿನಲ್ಲಿ ಮನೆಯಿಂದ ತೆರಳಿದ್ದಾರೆ. ತೆರಳುವ ಮುನ್ನ ಮನೆಯ ಕೆಲಸದ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದ್ದಾರೆ. ಅವರ ಕುಟುಂಬವು ಮಂಡಿ ಹೌಸ್ ಬಳಿಯ ಫಿರೋಜ್‌ಶಾ ರಸ್ತೆಯಲಿರುವ ಪಕ್ಷದ ಸದಸ್ಯ, ಅಶೋಕ್ ಮಿತ್ತಲ್ ಅವರ ಅಧಿಕೃತ ನಿವಾಸಕ್ಕೆ ತೆರಳಿತು. ಮಿತ್ತಲ್ ಅವರು ಪಂಜಾಬ್‌ನ ಸಂಸದರಾಗಿದ್ದಾರೆ.

    ಗುರುವಾರದಿಂದ ಆರಂಭವಾದ ಮಂಗಳಕರ ನವರಾತ್ರಿ ಅವಧಿಯಲ್ಲಿ ಮುಖ್ಯಮಂತ್ರಿ ನಿವಾಸವನ್ನು ಖಾಲಿ ಮಾಡುವುದಾಗಿ ಅವರು ಈ ಹಿಂದೆ ಹೇಳಿದ್ದರು.

    ಕೇಜ್ರಿವಾಲ್ ಕಳೆದ ತಿಂಗಳು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ವೇಳೆ ಫೆಬ್ರವರಿಯಲ್ಲಿ ನಡೆಯಲಿರುವ ಅಸೆಂಬ್ಲಿ ಚುನಾವಣೆಯಲ್ಲಿ ದೆಹಲಿಯ ಜನರಿಂದ ʻಪ್ರಾಮಾಣಿಕತೆಯ ಪ್ರಮಾಣಪತ್ರʼ ಪಡೆದ ನಂತರವೇ ಮತ್ತೆ ಹುದ್ದೆಯನ್ನು ಅಲಂಕರಿಸುವುದಾಗಿ ಅವರು ಘೋಷಿಸಿದ್ದರು.

    ಅಬಕಾರಿ ನೀತಿಯಲ್ಲಿ ಮತ್ತು ಮುಖ್ಯಮಂತ್ರಿ ಬಂಗಲೆಯ ಪುನರ್‌ನಿರ್ಮಾಣದಲ್ಲಿ ಕೇಜ್ರಿವಾಲ್ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು. ಅವರು ಅಬಕಾರಿ ನೀತಿ ಪ್ರಕರಣದಲ್ಲಿ ಐದು ತಿಂಗಳ ನಂತರ ಸುಪ್ರೀಂ ಕೋರ್ಟ್‌ನಿಂದ ಜಾಮೀನಿನ ಮೇಲೆ ಸೆ.13 ರಂದು ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದರು.

  • ಮೋದಿ ತುಂಬಾ ಪವರ್‌ಫುಲ್, ಆದರೆ ದೇವರಲ್ಲ: ಮಾಜಿ ಸಿಎಂ ಕೇಜ್ರಿವಾಲ್ ವ್ಯಂಗ್ಯ

    ಮೋದಿ ತುಂಬಾ ಪವರ್‌ಫುಲ್, ಆದರೆ ದೇವರಲ್ಲ: ಮಾಜಿ ಸಿಎಂ ಕೇಜ್ರಿವಾಲ್ ವ್ಯಂಗ್ಯ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ತುಂಬಾ ಪವರ್‌ಫುಲ್, ಆದರೆ ದೇವರಲ್ಲ ಎಂದು ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಹೇಳಿದರು.

    ಗುರುವಾರ ದೆಹಲಿ ವಿಧಾನಸಭೆಯಲ್ಲಿ ಎಎಪಿ (AAP) ಮುಖ್ಯಸ್ಥ ಹಾಗೂ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ 41ನೇ ಸ್ಥಾನವನ್ನು ನೀಡಲಾಯಿತು. ರಾಜೀನಾಮೆ ನೀಡಿದ ಬಳಿಕ ಮೊದಲ ಬಾರಿಗೆ ಗುರುವಾರ ದೆಹಲಿ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದರು.

    ವಿರೋಧ ಪಕ್ಷದಲ್ಲಿರುವ ನನ್ನ ಸಹೋದ್ಯೋಗಿಗಳು ಮನೀಷ್ ಸಿಸೋಡಿಯಾ (Manish Sisodia) ಮತ್ತು ನನ್ನನ್ನು ನೋಡಿ ದುಃಖಿತರಾಗಬೇಕು. ಪ್ರಧಾನಿ ಮೋದಿ ಅತ್ಯಂತ ಶಕ್ತಿಶಾಲಿ ವ್ಯಕ್ತಿ ಹಾಗೂ ಸಂಪನ್ಮೂಲ ವ್ಯಕ್ತಿ. ಆದರೆ ಮೋದಿ ದೇವರಲ್ಲ. ಇರುವ ದೇವರು ನಮ್ಮೊಂದಿಗಿದ್ದಾನೆ. ಇದರಿಂದ ನಾನು ಸುಪ್ರೀಂ ಕೋರ್ಟ್‌ಗೆ (Supreme Court) ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಟಾಂಗ್ ಕೊಟ್ಟಿದ್ದಾರೆ.ಇದನ್ನೂ ಓದಿ: ನಟ ದರ್ಶನ್‌ಗೆ ಐಟಿ ವಿಚಾರಣೆ ಬಿಸಿ – ಜೈಲಿನಲ್ಲೇ 7 ಗಂಟೆ ಡ್ರಿಲ್‌

    ಎಎಪಿಗೆ ಸಹಾಯ ಮಾಡಿದ ಸುಪ್ರೀಂ ಕೋರ್ಟ್‌ಗೆ ಧನ್ಯವಾದ ಹೇಳಲು ಬಯಸುತ್ತೇನೆ. ದೆಹಲಿಯಲ್ಲಿ ಆಡಳಿತವನ್ನು ಅಡ್ಡಿಪಡಿಸುವುದು ಬಿಜೆಪಿಯ (BJP) ಲೆಕ್ಕಾಚಾರವಾಗಿತ್ತು. ರಾಜಕೀಯ ನಡೆಯ ಭಾಗವಾಗಿ ಅವರ ಬಂಧನವಾಗಿದೆ. ರಾಜಕೀಯ ಸೇಡಿನ ಮೇಲೆ ಬಿಜೆಪಿ ಹೆಚ್ಚು ಗಮನಹರಿಸಿದೆ ಎಂದು ಕಿಡಿಕಾರಿದರು.

    ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಉದ್ದೇಶಪೂರ್ವಕವಾಗಿ ದೆಹಲಿಯ ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ಸ್ಥಗಿತಗೊಳಿಸುತ್ತಿದೆ ಮತ್ತು ಎಎಪಿ ನಾಯಕರನ್ನು ಸುಳ್ಳು ಆರೋಪಗಳೊಂದಿಗೆ ಗುರಿಯಾಗಿಸುವುದು ಅವರು ಉದ್ದೇಶ ಎಂದು ಆರೋಪಿಸಿದರು.

    ನನ್ನನ್ನು ಜೈಲಿಗೆ ಕಳುಹಿಸುವ ಮೂಲಕ ದೆಹಲಿಯ ಪರಿಸ್ಥಿತಿಯನ್ನು ಹದೆಗಡುವಂತೆ ಮಾಡುವುದು ಬಿಜೆಪಿ ಸರ್ಕಾರ ಉದ್ದೇಶವಾಗಿತ್ತು. ನನ್ನನ್ನು ಜೈಲಿಗೆ ಕಳುಹಿಸಿದ ಬಳಿಕ ದೆಹಲಿಯ ಕೆಲಸವನ್ನು ನಿಲ್ಲಿಸಿದ್ದಾರೆ. ಇದೀಗ ರಸ್ತೆಗಳು ಹಾಳಾಗಿವೆ. ಇಂದು ನಾನು ದೆಹಲಿ ವಿಶ್ವವಿದ್ಯಾಲಯದ ಮುಖ್ಯಮಂತ್ರಿ ಅತಿಶಿ ಅವರೊಂದಿಗೆ ದುರಸ್ತಿಯಾಗಬೇಕಿರುವ ರಸ್ತೆಯನ್ನು ಪರಿಶೀಲಿಸಿದ್ದೇನೆ. ಈ ರಸ್ತೆಯನ್ನು ಶೀಘ್ರದಲ್ಲೇ ದುರಸ್ತಿ ಮಾಡಲಾಗುವುದು, ಉಳಿದ ದೆಹಲಿಯ ರಸ್ತೆಗಳು ಕೂಡ ಶೀಘ್ರದಲ್ಲೇ ರಿಪೇರಿಯಾಗಲಿವೆ, ದೆಹಲಿಯ ಜನರು ಚಿಂತಿಸಬೇಕಾಗಿಲ್ಲ, ದೆಹಲಿಯಲ್ಲಿ ಬಾಕಿ ಉಳಿದಿರುವ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ.

    ಮುಖ್ಯಮಂತ್ರಿಯಾಗಿ ಮೊದಲ ಕುರ್ಚಿಯನ್ನು ಹೊಂದಿದ್ದ ಕೇಜ್ರಿವಾಲ್‌ಗೆ ಅವರಿಗೆ ಗುರುವಾರ ನಡೆದ ವಿಧಾನಸಭೆಯಲ್ಲಿ 41ನೇ ಸ್ಥಾನವನ್ನು ನೀಡಲಾಗಿತ್ತು. ಜೊತೆಗೆ ಅವರ ಪಕ್ಕದ 40ನೇ ಸ್ಥಾನವನ್ನು ಮನೀಶ್ ಸಿಸೋಡಿಯಾ ಅವರಿಗೆ ನೀಡಲಾಗಿತ್ತು.ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ- ಸಾವಿನ ಸುತ್ತ ಅನುಮಾನದ ಹುತ್ತ

    ಹೊಸ ಅಬಕಾರಿ ನೀತಿ ಪ್ರಕರಣ ಆರೋಪದ ಮೇಲೆ ಜೈಲಿನಲ್ಲಿದ್ದ ಅರವಿಂದ್ ಕೇಜ್ರಿವಾಲ್ ಒತ್ತಡದಿಂದಾಗಿ ರಾಜೀನಾಮೆ ನೀಡಿದರು. ಇದೇ ಪ್ರಕರಣ ಸಂಬಂಧ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಹಲವು ಎಎಪಿ ನಾಯಕರನ್ನು ತಿಂಗಳುಗಟ್ಟಲೇ ವಿಚಾರಣೆ ನಡೆಸಲಾಗಿತ್ತು.

  • ಬಿಜೆಪಿ ಅನೈತಿಕ ರಾಜಕೀಯ; ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್‌ಗೆ ಕೇಜ್ರಿವಾಲ್ ಐದು ಪ್ರಶ್ನೆ

    ಬಿಜೆಪಿ ಅನೈತಿಕ ರಾಜಕೀಯ; ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್‌ಗೆ ಕೇಜ್ರಿವಾಲ್ ಐದು ಪ್ರಶ್ನೆ

    ನವದೆಹಲಿ: ಬಿಜೆಪಿಯ (BJP) ರಾಜಕೀಯ ನಿಲುವುಗಳನ್ನು ಪ್ರಶ್ನಿಸಿ ಆಮ್ ಆದ್ಮಿ ಪಕ್ಷದ (AAP) ರಾಷ್ಟ್ರೀಯ ಸಂಚಾಲಕ ಮತ್ತು ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಆರ್‌ಎಸ್‌ಎಸ್ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಐದು ಪ್ರಶ್ನೆಗಳನ್ನು ಕೇಳಿರುವ ಅವರು ಅದಕ್ಕೆ ಉತ್ತರಿಸಲು ಮನವಿ ಮಾಡಿದ್ದಾರೆ.

    ಪತ್ರದಲ್ಲಿ ಏನಿದೆ?
    ನಾನು ಈ ಪತ್ರವನ್ನು ರಾಜಕೀಯ ಪಕ್ಷದ ನಾಯಕನಾಗಿ ಬರೆಯುತ್ತಿಲ್ಲ. ಬದಲಿಗೆ ಈ ದೇಶದ ಸಾಮಾನ್ಯ ಪ್ರಜೆಯಾಗಿ ಬರೆಯುತ್ತಿದ್ದೇನೆ. ದೇಶದ ಇಂದಿನ ಪರಿಸ್ಥಿತಿಯ ಬಗ್ಗೆ ನನಗೆ ತುಂಬಾ ಚಿಂತೆಯಾಗಿದೆ. ಬಿಜೆಪಿ ಕೇಂದ್ರ ಸರ್ಕಾರ ದೇಶವನ್ನು ಮತ್ತು ಅದರ ರಾಜಕೀಯವನ್ನು ಯಾವ ದಿಕ್ಕಿನಲ್ಲಿ ಕೊಂಡೊಯ್ಯುತ್ತಿದೆ ಎಂಬುದು ಇಡೀ ದೇಶಕ್ಕೆ ಹಾನಿಕಾರಕವಾಗಿದೆ. ಹೀಗೆಯೇ ಮುಂದುವರಿದರೆ ನಮ್ಮ ಪ್ರಜಾಪ್ರಭುತ್ವ ಕೊನೆಗೊಳ್ಳುತ್ತದೆ. ನಮ್ಮ ದೇಶವೂ ಕೊನೆಗೊಳ್ಳುತ್ತದೆ. ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆ ಪಡೆದರೆ ಇಡೀ ದಕ್ಷಿಣ ಭಾರತ ಹೊತ್ತಿ ಉರಿಯುತ್ತೆ: ಅಹಿಂದ ರಾಜ್ಯಾಧ್ಯಕ್ಷ

    ಪಕ್ಷಗಳು ಬರುತ್ತವೆ ಹೋಗುತ್ತವೆ, ಚುನಾವಣೆಗಳು ಬರುತ್ತವೆ ಮತ್ತು ಹೋಗುತ್ತವೆ, ನಾಯಕರು ಬರುತ್ತಾರೆ ಮತ್ತು ಹೋಗುತ್ತಾರೆ, ಆದರೆ ಭಾರತವು ಯಾವಾಗಲೂ ದೇಶವಾಗಿ ಉಳಿಯುತ್ತದೆ. ಈ ದೇಶದ ತ್ರಿವರ್ಣ ಧ್ವಜವು ಸದಾ ಹೆಮ್ಮೆಯಿಂದ ಆಕಾಶದಲ್ಲಿ ಹಾರಾಡುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಪೀಠಿಕೆ ಹಾಕಿರುವ ಕೇಜ್ರಿವಾಲ್ ಐದು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಇದನ್ನೂ ಓದಿ: ಕಮಲಾ ಹ್ಯಾರಿಸ್ ಕಚೇರಿ ಮೇಲೆ ಗುಂಡಿನ ದಾಳಿ

    ವಿವಿಧ ಪಕ್ಷಗಳ ನಾಯಕರಿಕೆ ಆಮಿಷಗಳನ್ನು ಒಡ್ಡುವ ಮೂಲಕ ಅಥವಾ ಇಡಿ-ಸಿಬಿಐಗೆ ಬೆದರಿಕೆ ಹಾಕುವ ಮೂಲಕ ಇತರ ಪಕ್ಷಗಳನ್ನು ಒಡೆಯಲಾಗುತ್ತಿದೆ. ವಿವಿಧ ಪಕ್ಷಗಳ ಸರ್ಕಾರಗಳನ್ನು ಉರುಳಿಸಲಾಗುತ್ತಿದೆ. ಚುನಾಯಿತ ಸರ್ಕಾರಗಳನ್ನು ಈ ರೀತಿ ಉರುಳಿಸುವುದು ದೇಶಕ್ಕೆ ಮತ್ತು ದೇಶದ ಪ್ರಜಾಪ್ರಭುತ್ವಕ್ಕೆ ಸರಿಯೇ? ಅಪ್ರಾಮಾಣಿಕ ವಿಧಾನದಿಂದ ಅಧಿಕಾರವನ್ನು ಗಳಿಸುವುದು, ಇದು ನಿಮಗೆ ಅಥವಾ ಆರ್‌ಎಸ್‌ಎಸ್‌ಗೆ ಸ್ವೀಕಾರಾರ್ಹವೇ? ಇದನ್ನೂ ಓದಿ: MUDA Scam: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಜೆಡಿಎಸ್‌ ಪ್ರತಿಭಟನೆ

    ಸ್ವತಃ ಪ್ರಧಾನಿ ಮತ್ತು ಅಮಿತ್ ಶಾ ಅವರು ದೇಶದ ಕೆಲವು ನಾಯಕರನ್ನು ಸಾರ್ವಜನಿಕ ವೇದಿಕೆಯಿಂದ ಭ್ರಷ್ಟರೆಂದು ಕರೆದರು. ಕೆಲವು ದಿನಗಳ ನಂತರ ಅವರನ್ನು ಭಾರತೀಯ ಜನತಾ ಪಕ್ಷಕ್ಕೆ ಸೇರಿಸಿಕೊಂಡರು. ನೀವು ಅಥವಾ ಆರ್‌ಎಸ್‌ಎಸ್ ಕಾರ್ಯಕರ್ತರು ಇಂತಹ ಬಿಜೆಪಿಯನ್ನು ಕಲ್ಪಿಸಿಕೊಂಡಿದ್ದೀರಾ? ಇದನ್ನೆಲ್ಲಾ ನೋಡಿದ ಮೇಲೆ ನಿಮಗೆ ನೋವು ಆಗುತ್ತಿಲ್ಲವೇ? ಇದನ್ನೂ ಓದಿ: ತಿನಿಸುಗಳಲ್ಲಿ ಉಗುಳು, ಮೂತ್ರ ಬೆರಕೆ; ಆಹಾರ ಕೇಂದ್ರಗಳಲ್ಲಿ ಮಾಲೀಕರ ಹೆಸರು ಪ್ರದರ್ಶನಕ್ಕೆ ಯೋಗಿ ಆದಿತ್ಯನಾಥ್‌ ಸೂಚನೆ

    ಆರ್‌ಎಸ್‌ಎಸ್‌ನ ಗರ್ಭದಿಂದ ಹುಟ್ಟಿದ ಪಕ್ಷ ಬಿಜೆಪಿ. ಬಿಜೆಪಿಗೆ ಗೊಂದಲವಾದರೆ ಅದನ್ನು ಸರಿದಾರಿಗೆ ತರುವುದು ಆರ್‌ಎಸ್‌ಎಸ್ ಜವಾಬ್ದಾರಿ. ಈ ಎಲ್ಲಾ ತಪ್ಪು ಕೆಲಸಗಳನ್ನು ಮಾಡುವುದನ್ನು ನೀವು ಎಂದಾದರೂ ಪ್ರಧಾನಿಯನ್ನು ತಡೆದಿದ್ದೀರಾ? ಇದನ್ನೂ ಓದಿ: ಸಿಎಂ ವೀಕ್ ಆಗಿಲ್ಲ, ಗುಂಡುಕಲ್ಲು ಇದ್ದ ಹಾಗೆ ಇದ್ದಾರೆ: ಪರಮೇಶ್ವರ್

    ಬಿಜೆಪಿಗೆ ಇನ್ನು ಆರೆಸ್ಸೆಸ್ ಅಗತ್ಯವಿಲ್ಲ ಎಂದು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಜೆಪಿ ನಡ್ಡಾ ಅವರು ಹೇಳಿದ್ದರು. ಆರ್‌ಎಸ್‌ಎಸ್ ಒಂದು ರೀತಿಯಲ್ಲಿ ಬಿಜೆಪಿಯ ತಾಯಿ. ಅಮ್ಮನಿಗೆ ಕಣ್ಣು ತೋರಿಸತೊಡಗಿದ ಮಗ ಇಷ್ಟು ಬೆಳೆದಿದ್ದಾನಾ ಎಂಬ ನಡ್ಡಾ ಅವರ ಈ ಹೇಳಿಕೆಯು ಪ್ರತಿಯೊಬ್ಬ ಆರ್‌ಎಸ್‌ಎಸ್ ಕಾರ್ಯಕರ್ತರನ್ನು ತೀವ್ರವಾಗಿ ನೋಯಿಸಿದೆ ಎಂದು ನಾನು ತಿಳಿದುಕೊಂಡಿದ್ದೇನೆ. ಅವರ ಹೇಳಿಕೆಯಿಂದ ನಿಮ್ಮ ಹೃದಯಕ್ಕೆ ಏನಾಯಿತು ಎಂದು ದೇಶವು ತಿಳಿಯಲು ಬಯಸುತ್ತದೆ? ಇದನ್ನೂ ಓದಿ: ಕಾಶ್ಮೀರದಲ್ಲಿ 2ನೇ ಹಂತದ ಚುನಾವಣೆ- 26 ಕ್ಷೇತ್ರಗಳ 239 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ

    ನೀವೆಲ್ಲರೂ ಸೇರಿ ಬಿಜೆಪಿ ನಾಯಕರು 75 ವರ್ಷದ ನಂತರ ನಿವೃತ್ತರಾಗುತ್ತಾರೆ ಎಂದು ಕಾನೂನು ಮಾಡಿದ್ದೀರಿ. ಈ ಕಾನೂನನ್ನು ವ್ಯಾಪಕವಾಗಿ ಪ್ರಚಾರ ಮಾಡಲಾಯಿತು. ಈ ನಿಯಮದನ್ವಯ ಪ್ರಮುಖ ನಾಯಕರನ್ನು ತೆರೆಮರೆಗೆ ಸರಿಸಲಾಯಿತು. ಈ ನಿಯಮ ಮೋದಿ ಅವರಿಗೆ ಅನ್ವಯಿಸಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ. ನಿಯಮ ಎಲ್ಲರಿಗೂ ಒಂದೇ ಇರಬೇಕಲ್ಲವೇ? ನೀವು ಇದನ್ನು ಒಪ್ಪುತ್ತೀರಾ? ಎಂದು ಕೇಜ್ರಿವಾಲ್ ಕೇಳಿದ್ದಾರೆ. ಇದನ್ನೂ ಓದಿ: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಪ್ರಚೋದನಕಾರಿ ಹೇಳಿಕೆ – ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್

  • ಶನಿವಾರ ದೆಹಲಿ ಮುಖ್ಯಮಂತ್ರಿಯಾಗಿ ಅತಿಶಿ ಪ್ರಮಾಣ ವಚನ

    ಶನಿವಾರ ದೆಹಲಿ ಮುಖ್ಯಮಂತ್ರಿಯಾಗಿ ಅತಿಶಿ ಪ್ರಮಾಣ ವಚನ

    ನವದೆಹಲಿ: ನಿಯೋಜಿತ ಮುಖ್ಯಮಂತ್ರಿ ಅತಿಶಿ ಸಿಂಗ್ (Atishi Marlena) ಶನಿವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಆಮ್‌ಆದ್ಮಿ ಪಕ್ಷದ (AAP) ಮೂಲಗಳು ಹೇಳಿವೆ. ಈ ಮೊದಲು ಸೆಪ್ಟೆಂಬರ್ 26-27ರ ವಿಶೇಷ ಅಧಿವೇಶನ ವೇಳೆ ಪ್ರಮಾಣ ವಚನ ಸ್ವೀಕರಿಸಲು ಚಿಂತಿಸಿತ್ತು. ಲೆಫ್ಟಿನೆಂಟ್ ಗವರ್ನರ್ ಸಲಹೆ ಮೇರೆಗೆ ಶನಿವಾರ ಪ್ರಮಾಣ ವಚನ ಸ್ವೀಕರಿಸಲು ನಿರ್ಧರಿಸಿದೆ.

    ಎಎಪಿ ಆರಂಭದಲ್ಲಿ ಅತಿಶಿ ಮಾತ್ರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಬೇಕೆಂದು ಯೋಜಿಸಿತ್ತು. ಬಳಿಕ ಮಂತ್ರಿಮಂಡಲದೊಂದಿಗೆ ಪ್ರಮಾಣವಚನ (Oath Taking) ಸ್ವೀಕರಿಸಲು ನಿರ್ಧರಿಸಲಾಗಿದೆ. ಹಿಂದಿನ ಅರವಿಂದ್ ಕೇಜ್ರಿವಾಲ್ (Aravind Kejriwal)  ಸರ್ಕಾರದಲ್ಲಿ ಸಚಿವರಾಗಿದ್ದ ಎಎಪಿ ನಾಯಕರಾದ ಗೋಪಾಲ್ ರಾಯ್, ಕೈಲಾಶ್ ಗೆಹ್ಲೋಟ್, ಸೌರಭ್ ಭಾರದ್ವಾಜ್ ಮತ್ತು ಇಮ್ರಾನ್ ಹುಸೇನ್ ಅವರು ಸಚಿವರಾಗಿ ಮುಂದುವರಿಯಲಿದ್ದು, ಪಕ್ಷದ ಇಬ್ಬರು ಶಾಸಕರನ್ನು ಸಹ ಹೊಸ ಕ್ಯಾಬಿನೆಟ್‌ಗೆ ಸೇರಿಸಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಜಮ್ಮು & ಕಾಶ್ಮೀರದಲ್ಲಿ ಮತ್ತೊಂದು ಪೀಳಿಗೆಯನ್ನು ನಾಶ ಮಾಡಲು ಬಿಡುವುದಿಲ್ಲ: ಮೋದಿ ಪ್ರತಿಜ್ಞೆ

    ಶಾಸಕ ಮುಖೇಶ್ ಅಹ್ಲಾವತ್ ಅವರು ಹೊಸದಾಗಿ ಅತಿಶಿ ಅವರ ಸಂಪುಟದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ಹೇಳಿವೆ. ಮುಖೇಶ್ ಅಹ್ಲಾವತ್ ದೆಹಲಿಯ ಸುಲ್ತಾನ್‌ಪುರ ಮಜ್ರಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಮಂತ್ರಿ ಮಂಡಲಕ್ಕೆ ಇನ್ನೊಬ್ಬರನ್ನು ಆಯ್ಕೆ ಮಾಡಬೇಕಿದ್ದು, ಈವರೆಗೂ ಈ ಹೆಸರು ಅಂತಿಮವಾಗಿಲ್ಲ. ಇದನ್ನೂ ಓದಿ: ಸಿದ್ದರಾಮಯ್ಯ ಹಿಟ್ಲರ್ ಆಗಿದ್ದಾರೆ – ಬಿಜೆಪಿ ನಾಯಕರನ್ನು ಹತ್ತಿಕ್ಕುವ ಕೆಲಸ ಮಾಡ್ತಿದ್ದಾರೆ: ಶೋಭಾ ಕರಂದ್ಲಾಜೆ

    ಮಂಗಳವಾರ ಹುದ್ದೆಗೆ ರಾಜೀನಾಮೆ ನೀಡಿದ ಅರವಿಂದ್ ಕೇಜ್ರಿವಾಲ್ ಅವರಿಂದ ಅತಿಶಿ ಅಧಿಕಾರ ಸ್ವೀಕರಿಸಲಿದ್ದಾರೆ. ಕೇಜ್ರಿವಾಲ್ ಅವರು ಭದ್ರತೆಯನ್ನು ತ್ಯಜಿಸುತ್ತಾರೆ ಮತ್ತು 15 ದಿನಗಳಲ್ಲಿ ಸಾಮಾನ್ಯನಂತೆ ಬದುಕಲು ಮುಖ್ಯಮಂತ್ರಿಗಳ ನಿವಾಸದಿಂದ ಹೊರಬರುತ್ತಾರೆ ಎಂದು ಎಎಪಿ ಹೇಳಿದೆ. ಅತಿಶಿ ದೆಹಲಿ ಅಸೆಂಬ್ಲಿಯಲ್ಲಿ ಕಲ್ಕಾಜಿ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ ಮತ್ತು ದೆಹಲಿ ಸರ್ಕಾರದಲ್ಲಿ ಅತಿ ಹೆಚ್ಚು ಖಾತೆಗಳನ್ನು ಹೊಂದಿದ್ದಾರೆ. ಇದನ್ನೂ ಓದಿ: ಆಂಧ್ರ ಸಿಎಂ ಹೇಳಿದ ಪ್ರಾಣಿಗಳ ತುಪ್ಪ ಯಾವುದೆಂದು ಅವರೇ ಹೇಳ್ಬೇಕು: ಕೆಎಂಎಫ್ ಅಧ್ಯಕ್ಷ ಭೀಮನಾಯ್ಕ್

    ಅಬಕಾರಿ ನೀತಿ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ಬಂಧನದ ನಂತರ ಎಎಪಿ ಎದುರಿಸಿದ ತೊಂದರೆಗಳ ಹಿನ್ನೆಲೆಯಲ್ಲಿ ಅವರನ್ನು ಮಾರ್ಚ್ 2023ರಲ್ಲಿ ದೆಹಲಿ ಕ್ಯಾಬಿನೆಟ್‌ಗೆ ನೇಮಿಸಲಾಯಿತು. ಈ ಪ್ರಕರಣದಲ್ಲಿ ಜಾಮೀನಿನ ಮೇಲೆಯೂ ಬಿಡುಗಡೆಯಾಗಿದ್ದಾರೆ. ರಾಷ್ಟç ರಾಜಧಾನಿಯಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಗುರಿಯೊಂದಿಗೆ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವಾಗ ಎಎಪಿಯ ಪ್ರಮುಖ ಮುಖವಾಗಿರುವುದರಿಂದ ಅತಿಶಿ ಅವರ ಕೆಲಸವನ್ನು ಕಡಿತಗೊಳಿಸಲಾಗುತ್ತದೆ. ದೆಹಲಿ ವಿಧಾನಸಭೆಗೆ ಶೀಘ್ರ ಚುನಾವಣೆ ನಡೆಸುವಂತೆ ಎಎಪಿ ಒತ್ತಾಯಿಸಿದೆ. ಕೊನೆಯ ವಿಧಾನಸಭೆ ಚುನಾವಣೆ 2020ರ ಆರಂಭದಲ್ಲಿ ನಡೆದಿತ್ತು. ಇದನ್ನೂ ಓದಿ: ಮೋದಿಯನ್ನ ಹಾವು, ಚೇಳು, ರಾಕ್ಷಸ ಎಂದೆಲ್ಲ ಕರೆದಿದ್ದಾರೆ – ಕೈ ನಾಯಕರ ಆಕ್ಷೇಪಾರ್ಹ ಹೇಳಿಕೆ ಪಟ್ಟಿ ರಿಲೀಸ್

  • ಇಂದು ಮಧ್ಯಾಹ್ನ ದೆಹಲಿಗೆ ನೂತನ ಮುಖ್ಯಮಂತ್ರಿ ಘೋಷಣೆ

    ಇಂದು ಮಧ್ಯಾಹ್ನ ದೆಹಲಿಗೆ ನೂತನ ಮುಖ್ಯಮಂತ್ರಿ ಘೋಷಣೆ

    ನವದೆಹಲಿ: ಮಧ್ಯಾಹ್ನ 12 ಗಂಟೆಗೆ ದೆಹಲಿಗೆ (Delhi) ನೂತನ ಮುಖ್ಯಮಂತ್ರಿ ಘೋಷಣೆ ಮಾಡಲಾಗುವುದು ಎಂದು ಆಪ್‌ (APP) ಘೋಷಿಸಿದೆ ಎಂದು ಮೂಲಗಳು ತಿಳಿಸಿದೆ.

    ಶಾಸಕಾಂಗ ಪಕ್ಷದ ಸಭೆ ಬಳಿಕ ನೂತನ ಸಿಎಂ ಹೆಸರು ಘೋಷಣೆ ಮಾಡಲಾಗುತ್ತದೆ. ಸಿಎಂ ಹೆಸರು ಘೋಷಿಸುವ ಬಗ್ಗೆ ಪಕ್ಷದ ಮೂಲಗಳು ಮಾಹಿತಿ ನೀಡಿವೆ ಎಂದು ವರದಿಯಾಗಿದೆ.

    ಸೆ. 15 ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ (Arvind Kejriwal) ಅವರು ಮುಂದಿನ 48 ಗಂಟೆಗಳ ಒಳಗೆ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು.

    ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ (Liquor Policy Case) ಬರೋಬ್ಬರಿ 6 ತಿಂಗಳು ಜೈಲಿನಲ್ಲಿದ್ದ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಇದೇ ಸೆಪ್ಟೆಂಬರ್‌ 13ರಂದು ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಜೈಲಿಂದ ರಿಲೀಸ್‌ ಆದ ನಂತರ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾಡಿದ ಮೊದಲ ಭಾಷಣದಲ್ಲಿ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು.

  • ಮುಂದಿನ 24 ಗಂಟೆಯಲ್ಲಿ ದೆಹಲಿ ಗದ್ದುಗೆಗೆ ನೂತನ ಸಾರಥಿ – ಸಿಎಂ ರೇಸ್‌ನಲ್ಲಿರುವ ಟಾಪ್‌ -5 ಕಲಿಗಳು ಯಾರು?

    ಮುಂದಿನ 24 ಗಂಟೆಯಲ್ಲಿ ದೆಹಲಿ ಗದ್ದುಗೆಗೆ ನೂತನ ಸಾರಥಿ – ಸಿಎಂ ರೇಸ್‌ನಲ್ಲಿರುವ ಟಾಪ್‌ -5 ಕಲಿಗಳು ಯಾರು?

    ನವದೆಹಲಿ: ಆಮ್‌ ಆದ್ಮಿ ಪಕ್ಷದ ನಾಯಕರೂ ಆಗಿರುವ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರು ದೆಹಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. 48 ಗಂಟೆಗಳ ಒಳಗಾಗಿ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದು, ಇನ್ನೂ 24 ಗಂಟೆ ಬಾಕಿ ಉಳಿದಿದೆ. ಈ ನಡುವೆ ದೆಹಲಿಯ ಸಿಎಂ ಗದ್ದುಗೆಗೆ ಪೈಪೋಟಿ ಶುರುವಾಗಿದೆ.

    ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ (Liquor Policy Case) ಬರೋಬ್ಬರಿ 6 ತಿಂಗಳು ಜೈಲಿನಲ್ಲಿದ್ದ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಇದೇ ಸೆಪ್ಟೆಂಬರ್‌ 13ರಂದು ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಆ ಬಳಿಕ ಮೊದಲ ಭಾಷಣ ಮಾಡಿದ ಕೇಜ್ರಿವಾಲ್‌ ರಾಜೀನಾಮೆ ಘೋಷಿಸಿದರು. ಅಲ್ಲದೇ ಜನತೆ ತೀರ್ಪು ನೀಡುವವರೆಗೂ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಈ ನಡುವೆ ಆಪ್‌ನಲ್ಲೇ ಇರುವ ದಿಗ್ಗಜ ನಾಯಕರ ನಡುವೆ ಪೈಪೋಟಿ ಶುರುವಾಗಿದೆ.

    ಸದ್ಯ ಸಿಎಂ ರೇಸ್‌ನಲ್ಲಿ ಸಚಿವೆ ಅತಿಶಿ (Atishi), ಮೂರು ಬಾರಿ ಶಾಸಕರಾಗಿರುವ ಸೌರಭ್ ಭಾರದ್ವಾಜ್, ರಾಘವ್‌ ಛಡ್ಡಾ, ಕೈಲಾಶ್‌ ಗೆಹ್ಲೋಟ್‌ ಹಾಗೂ ಸಂಜಯ್‌ ಸಿಂಗ್‌ ಅವರ ಹೆಸರು ಕೇಳಿಬಂದಿದೆ. ಸಚಿವ ಸಂಪುಟ ಸಭೆಯ ಬಳಿಕ ದೆಹಲಿಗೆ ನೂತನ ಸಿಎಂ ಹೆಸರು ಘೋಷಣೆ ಮಾಡಲಾಗುತ್ತದೆ ಎಂದು ವರದಿಗಳು ಉಲ್ಲೇಖಿಸಿವೆ. ಇದನ್ನೂ ಓದಿ: Viral Video | ಜಮ್ಮು-ಕಾಶ್ಮೀರದಲ್ಲಿ ಉಗ್ರರು ಸೇನೆ ನಡುವೆ ಗುಂಡಿನ ಚಕಮಕಿ – ರಕ್ಷಣೆಗಾಗಿ ಓಡಿದ ಭಯೋತ್ಪಾದಕ!

    2025ರ ಫೆಬ್ರವರಿಯಲ್ಲಿ ದೆಹಲಿ ಚುನಾವಣೆ:
    ಮುಂದಿನ ನವೆಂಬರ್‌ನಲ್ಲೇ ಮಹಾರಾಷ್ಟ್ರ ಚುನಾವಣೆಯ ಜೊತೆಗೆ ದೆಹಲಿ ಚುನಾವಣೆ ನಡೆಸುವಂತೆ ಕೇಜ್ರಿವಾಲ್‌ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ಆದ್ರೆ ಆಯೋಗ ಮನವಿ ತಿರಸ್ಕರಿಸಿದ್ದು, 2025ರ ಫೆಬ್ರವರಿಯಲ್ಲಿ ದೆಹಲಿಯ ವಿಧಾನಸಭಾ ಚುನಾವಣೆ ನಡೆಯಲಿದೆ.

    ಈ ನಡುವೆ ಮಾತನಾಡಿರುವ ಸಿಎಂ ಕೇಜ್ರಿವಾಲ್‌, ಮಾಡಿ ಡಿಸಿಎಂ ಮನೀಶ್ ಸಿಸೋಡಿಯಾ ಅವರೊಂದಿಗೆ ನಾನು ಜನರ ಬಳಿಗೆ ಹೋಗುತ್ತೇನೆ. ಜನರ ತೀರ್ಪು ಪಡೆದ ನಂತರವೇ ಕಚೇರಿಗೆ ಮರಳುತ್ತೇನೆ ಎಂದು ಗುಡುಗಿದ್ದಾರೆ. ಇದನ್ನೂಓದಿ: Breaking – ಸಿಎಂ ಹುದ್ದೆಗೆ ರಾಜೀನಾಮೆ ಘೋಷಿಸಿದ ಅರವಿಂದ್‌ ಕೇಜ್ರಿವಾಲ್‌!

    ಕೇಸ್‌ ಹಾಕಿದ್ರೆ ರಾಜೀನಾಮೆ ಕೊಡಬೇಡಿ:
    ಭಾನುವಾರ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದ ಕೇಜ್ರಿವಾಲ್‌, ಪ್ರಜಾಪ್ರಭುತ್ವ ಉಳಿಸುವ ಉದ್ದೇಶದಿಂದ ಈ ಹಿಂದೆ ಬಂಧನಕ್ಕೊಳಗಾಗಿದ್ದರೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲ ಎಂದ ಅವರು, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಉಲ್ಲೇಖಿಸಿದ್ದರು. ನಾನು ಬಿಜೆಪಿಯೇತರರಿಗೆ ಮನವಿ ಮಾಡಲು ಬಯಸುತ್ತೇನೆ, ಅವರು ನಿಮ್ಮ ವಿರುದ್ಧ ಪ್ರಕರಣ ದಾಖಲಿಸಿದರೆ ರಾಜೀನಾಮೆ ನೀಡಬೇಡಿ. ಇದು ಅವರ ಹೊಸ ಆಟ ಎಂದು ಕರೆ ನೀಡಿದ್ದರು.

    ಇದು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಗಿಂತ ಹೆಚ್ಚು ಸರ್ವಾಧಿಕಾರಿ ಆಡಳಿತವಾಗಿದೆ. ಕೇಂದ್ರ ಸರ್ಕಾರ ಏನೇ ಪಿತೂರಿ ಮಾಡಿದರೂ ನಮ್ಮ ಸಂಕಲ್ಪ ಮುರಿಯಲು ಸಾಧ್ಯವಿಲ್ಲ, ರಾಷ್ಟ್ರಕ್ಕಾಗಿ ನಮ್ಮ ಹೋರಾಟ ಮುಂದುವರಿಯುತ್ತೆ ಎಂದು ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ಮುಂಬೈ ಮೂಲದ ಮಾಡೆಲ್‍ಗೆ ಕಿರುಕುಳ – ಆಂಧ್ರದ ಮೂವರು ಐಪಿಎಸ್ ಅಧಿಕಾರಿಗಳು ಸಸ್ಪೆಂಡ್

  • Breaking – ಸಿಎಂ ಹುದ್ದೆಗೆ ರಾಜೀನಾಮೆ ಘೋಷಿಸಿದ ಅರವಿಂದ್‌ ಕೇಜ್ರಿವಾಲ್‌!

    Breaking – ಸಿಎಂ ಹುದ್ದೆಗೆ ರಾಜೀನಾಮೆ ಘೋಷಿಸಿದ ಅರವಿಂದ್‌ ಕೇಜ್ರಿವಾಲ್‌!

    ನವದೆಹಲಿ: ಆಮ್‌ ಆದ್ಮಿ ಪಕ್ಷದ (AAP) ನಾಯಕರೂ ಆಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ (Arvind Kejriwal) ಅವರು ಮುಂದಿನ 48 ಗಂಟೆಗಳ ಒಳಗೆ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಭಾನುವಾರ ಘೋಷಿಸಿದ್ದಾರೆ.

    ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ (Liquor Policy Case) ಬರೋಬ್ಬರಿ 6 ತಿಂಗಳು ಜೈಲಿನಲ್ಲಿದ್ದ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಇದೇ ಸೆಪ್ಟೆಂಬರ್‌ 13ರಂದು ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಜೈಲಿಂದ ರಿಲೀಸ್‌ ಆದ ನಂತರ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾಡಿದ ಮೊದಲ ಭಾಷಣದಲ್ಲಿ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ನೂತನ ಮುಖ್ಯಮಂತ್ರಿ ಆಯ್ಕೆಗೆ ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಮಹಾರಾಷ್ಟ್ರ ಚುನಾವಣೆಯೊಂದಿಗೆ ದೆಹಲಿ ವಿಧಾನಸಭಾ ಚುನಾವಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.

    ಮುಂದಿನ 48 ಗಂಟೆಗಳ ಒಳಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದೇನೆ. ಆ ನಂತರ ಸಚಿವ ಸಂಪುಟ ಸಭೆಯಲ್ಲಿ ಪಕ್ಷದ ಸದಸ್ಯರೊಬ್ಬರನ್ನು ಮುಖ್ಯಮಂತ್ರಿಯಾಗಿ ಹೆಸರಿಸಲಾಗುವುದು. ನಾನು ಜನತೆ ತೀರ್ಪು ನೀಡುವವರೆಗೂ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ. ಪ್ರತಿ ಮನೆ, ಬೀದಿಗೆ ಹೋಗುತ್ತೇನೆ, ಅಲ್ಲಿಯವರೆಗೆ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರುವುದಿಲ್ಲ. ನಾನು ಜನರಿಂದ ತೀರ್ಪು ಪಡೆಯುತ್ತೇನೆ ಎಂದು ಗುಡುಗಿದ್ದಾರೆ. ಇದನ್ನೂ ಓದಿ: Suicide Pod; ಒಂದು ಬಟನ್‌ ಒತ್ತಿದರೆ ಸಾಕು ನಿಮಿಷದಲ್ಲಿ ನೋವಿಲ್ಲದೇ ಸಾಯಬಹುದು!

    ಕೇಸ್‌ ಹಾಕಿದ್ರೆ ರಾಜೀನಾಮೆ ಕೊಡಬೇಡಿ:
    ಪ್ರಜಾಪ್ರಭುತ್ವ ಉಳಿಸುವ ಉದ್ದೇಶದಿಂದ ಈ ಹಿಂದೆ ಬಂಧನಕ್ಕೊಳಗಾಗಿದ್ದರೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲ ಎಂದ ಅವರು, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಉಲ್ಲೇಖಿಸಿದರು. ನಾನು ಬಿಜೆಪಿಯೇತರರಿಗೆ ಮನವಿ ಮಾಡಲು ಬಯಸುತ್ತೇನೆ, ಅವರು ನಿಮ್ಮ ವಿರುದ್ಧ ಪ್ರಕರಣ ದಾಖಲಿಸಿದರೆ ರಾಜೀನಾಮೆ ನೀಡಬೇಡಿ. ಇದು ಅವರ ಹೊಸ ಆಟ ಎಂದು ಕರೆ ನೀಡಿದ್ದಾರೆ.

    ಇದು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಗಿಂತ ಹೆಚ್ಚು ಸರ್ವಾಧಿಕಾರಿ ಆಡಳಿತವಾಗಿದೆ. ಕೇಂದ್ರ ಸರ್ಕಾರ ಏನೇ ಪಿತೂರಿ ಮಾಡಿದರೂ ನಮ್ಮ ಸಂಕಲ್ಪ ಮುರಿಯಲು ಸಾಧ್ಯವಿಲ್ಲ, ರಾಷ್ಟ್ರಕ್ಕಾಗಿ ನಮ್ಮ ಹೋರಾಟ ಮುಂದುವರಿಯುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: Video | ಕೇಸರಿ ಶಾಲು ಹಿಡಿದು ವೇದಿಕೆಗೆ ನುಗ್ಗಿದ ಯುವಕ – ಸಿಎಂ ಕಾರ್ಯಕ್ರಮದಲ್ಲಿ ಭದ್ರತಾ ಲೋಪ?

    ಜೈಲಿನ ಕಹಿ ಘಟನೆ ನೆನೆದ ಕೇಜ್ರಿವಾಲ್‌:
    ಇದೇ ವೇಳೆ ಜೈಲಿನ ಕಹಿ ಘಟನೆಗಳನ್ನು ನೆನೆದು ಕೇಜ್ರಿವಾಲ್‌ ಮಾತನಾಡಿದ್ದಾರೆ. ನಾನು ಜೈಲಿನಲ್ಲಿದ್ದಾಗ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನನ್ನ ಅನುಪಸ್ಥಿತಿಯಲ್ಲಿ ಅತಿಶಿ ಅವರಿಂದ ಧ್ವಜಾರೋಹಣಕ್ಕೆ ಅನುಮತಿ ಕೋರಿ ರಾಜ್ಯಪಾಲರಿಗೆ ಪತ್ರ ಬರೆದಿದ್ದೆ. ಆದ್ರೆ ಪತ್ರವನ್ನ ಹಿಂತಿರುಗಿಸಿದರು. ನನ್ನ ಕುಟುಂಬವನ್ನು ಭೇಟಿ ಮಾಡಬೇಕೆಂದು ಮತ್ತೊಂದು ಪತ್ರ ಬರೆದೆ, ಅದನ್ನೂ ತಿರಸ್ಕರಿಸಲಾಯಿತು ಎಂದು ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ಶಾಸಕ ಮುನಿರತ್ನ ಬಂಧನ ಪ್ರಕರಣ – ತಪ್ಪು ಮಾಡಿರೋದು ಸಾಮಾನ್ಯ ವ್ಯಕ್ತಿಯಲ್ಲ ಒಬ್ಬ ಮಾಜಿ ಮಂತ್ರಿ: ಡಿಕೆ ಸುರೇಶ್‌

  • ಕೇಜ್ರಿವಾಲ್‌ಗೆ ಜಾಮೀನು – 6 ತಿಂಗಳ ಬಳಿಕ ಜೈಲಿನಿಂದ ಹೊರಬಂದ ದೆಹಲಿ ಸಿಎಂ

    ಕೇಜ್ರಿವಾಲ್‌ಗೆ ಜಾಮೀನು – 6 ತಿಂಗಳ ಬಳಿಕ ಜೈಲಿನಿಂದ ಹೊರಬಂದ ದೆಹಲಿ ಸಿಎಂ

    ನವದೆಹಲಿ: ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ ಬರೋಬ್ಬರಿ 6 ತಿಂಗಳು ಜೈಲಿನಲ್ಲಿದ್ದ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಕೊನೆಗೂ ಜಾಮೀನಿನ ಮೇಲೆ ಹೊರಬಂದಿದ್ದಾರೆ.

    ಆಪಾದಿತ ಮದ್ಯ ನೀತಿ ಹಗರಣದಲ್ಲಿ ಕಳೆದ ಆರು ತಿಂಗಳಿನಿಂದ ಅರವಿಂದ್ ಕೇಜ್ರಿವಾಲ್‌ ಜೈಲುಪಾಲಾಗಿದ್ದರು. ಕೊನೆಗೂ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಎರಡು ತಿಂಗಳ ಹಿಂದೆ, ಲೋಕಸಭೆ ಚುನಾವಣೆಗೆ ಕೆಲವು ದಿನಗಳ ಮೊದಲು ಮುಖ್ಯಮಂತ್ರಿಗೆ ಜಾಮೀನು ನೀಡಲಾಗಿತ್ತು.

    ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಪ್ರಕರಣದಲ್ಲಿ ಕೇಜ್ರಿವಾಲ್‌ ಜೈಲು ಸೇರಿದ್ದರು. ಸುಮಾರು 6 ತಿಂಗಳುಗಳ ಕಾಲ ಜೈಲಲ್ಲಿದ್ದರು. ಈಗ ಜೈಲಿನಿಂದ ಹೊರಬಂದಿದ್ದಾರೆ. ಆದಾಗ್ಯೂ, ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರ ಒಪ್ಪಿಗೆಯಿಲ್ಲದೆ ಅವರು ತಮ್ಮ ಕಚೇರಿ ಅಥವಾ ದೆಹಲಿ ಸಚಿವಾಲಯಕ್ಕೆ ಹೋಗುವಂತಿಲ್ಲ, ಫೈಲ್‌ಗಳಿಗೆ ಸಹಿ ಹಾಕುವಂತಿಲ್ಲ ಎಂದು ಕೋರ್ಟ್‌ ಷರತ್ತು ವಿಧಿಸಿದೆ.

    ನನ್ನ ಜೀವನದಲ್ಲಿ ನಾನು ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದೇನೆ. ನಾನು ಜೀವನದಲ್ಲಿ ಕಷ್ಟಗಳನ್ನು ಎದುರಿಸಿದ್ದೇನೆ. ಆದರೆ ದೇವರು ಪ್ರತಿ ಬಾರಿಯೂ ನನಗೆ ಸಹಾಯ ಮಾಡುತ್ತಾನೆ. ಏಕೆಂದರೆ ನಾನು ಪ್ರಾಮಾಣಿಕ ಮತ್ತು ಸತ್ಯವಾದಿ ಎಂದು ಜೈಲಿನಿಂದ ಹೊರಬಂದ ಬಳಿಕ ಕೇಜ್ರಿವಾಲ್‌ ಮಾತನಾಡಿದರು.

    ದೇವರು ನನಗೆ ಸರಿಯಾದ ಮಾರ್ಗವನ್ನು ತೋರಿಸಿದ್ದಾನೆ. ನನಗೆ ಶಕ್ತಿಯನ್ನು ನೀಡಿದ್ದಾನೆ. ಭಾರತದ ಅಭಿವೃದ್ಧಿಯನ್ನು ತಡೆಯುವ ಮತ್ತು ದೇಶವನ್ನು ವಿಭಜಿಸುವ ಈ ಶಕ್ತಿಗಳ ವಿರುದ್ಧ ನಾವೆಲ್ಲರೂ ಹೋರಾಡುತ್ತೇವೆ ಎಂದು ತಿಳಿಸಿದರು.