Tag: Arvind Kejriwal

  • ಅರವಿಂದ್ ಕೇಜ್ರಿವಾಲ್ ಮೇಲೆ ಖಾರದ ಪುಡಿ ದಾಳಿ!

    ಅರವಿಂದ್ ಕೇಜ್ರಿವಾಲ್ ಮೇಲೆ ಖಾರದ ಪುಡಿ ದಾಳಿ!

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಮ್ ಆದ್ಮಿ ಪಾರ್ಟಿ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೇಲೆ ಅಪರಿಚಿತ ವ್ಯಕ್ತಿಯೋರ್ವ ಖಾರದ ಪುಡಿ ಎಸೆದು ದಾಳಿ ನಡೆಸಿದ್ದಾನೆ.

    ಮಂಗಳವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ಅರವಿಂದ್ ಕೇಜ್ರಿವಾಲ್ ಊಟಕ್ಕೆಂದು ಸಚಿವಾಲಯದಿಂದ ಹೊರಗೆ ಬರುತ್ತಿದ್ದರು. ಈ ವೇಳೆ ಅವರಿಗೆ ಎದುರಾದ ಅಪರಿಚಿತ ವ್ಯಕ್ತಿಯೊಬ್ಬ ಏಕಾಏಕಿ ಅವರ ಕಣ್ಣಿಗೆ ಖಾರದ ಪುಡಿಯನ್ನು ಎಸೆದಿದ್ದಾನೆ. ಅದೃಷ್ಟವಶಾತ್ ಅವರು ಕನ್ನಡಕ ಧರಿಸಿದ್ದರಿಂದ ಯಾವುದೇ ತೊಂದರೆ ಆಗಲಿಲ್ಲವೆಂದು ಎಎಪಿ ಶಾಸಕ ಅಲ್ಕಾ ಲಂಬಾ ಹೇಳಿದ್ದಾರೆ.

    ಕೂಡಲೇ ಎಚ್ಚೆತ್ತ ಭದ್ರತಾ ಸಿಬ್ಬಂದಿ ಖಾರದ ಪುಡಿ ದಾಳಿ ನಡೆಸಿದ ಅಪರಿಚಿತ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದಾಳಿ ನಡೆಸಿದ ಆರೋಪಿ ಅನಿಲ್ ಕುಮಾರ್ ಎಂದು ತಿಳಿದು ಬಂದಿದೆ. ಘಟನಾ ಸಂಬಂಧ ಬಂಧಿತ ಆರೋಪಿಯನ್ನು ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಘಟನೆಯನ್ನು ಖಂಡಿಸಿರುವ ಎಎಪಿ ಮುಖ್ಯಸ್ಥರು, ದೆಹಲಿಯಲ್ಲಿ ಮುಖ್ಯಮಂತ್ರಿಗೂ ಸಹ ಸುರಕ್ಷತೆ ಇಲ್ಲದಂತಾಗಿದೆ. ಇದು ಗಂಭೀರವಾದ ಭದ್ರತಾ ವೈಫಲ್ಯವೆಂದು ಆರೋಪಿಸಿದ್ದಾರೆ.

    ಈ ಕುರಿತು ಮಾತನಾಡಿರುವ ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ, ಅರವಿಂದ್ ಕೇಜ್ರಿವಾಲ್ ಮೇಲಿನ ದಾಳಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಇಂತಹ ದಾಳಿಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಈ ವಿಷಯವನ್ನು ಗಂಭೀರವಾಗಿ ತನಿಖೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

    ಎಎಪಿಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಈ ಜೀವನದಲ್ಲಿ ಅಶುತೋಷ್ ರಾಜೀನಾಮೆ ಅಂಗೀಕರಿಸಲು ಸಾಧ್ಯವಿಲ್ಲ: ಅರವಿಂದ್ ಕೇಜ್ರಿವಾಲ್

    ಈ ಜೀವನದಲ್ಲಿ ಅಶುತೋಷ್ ರಾಜೀನಾಮೆ ಅಂಗೀಕರಿಸಲು ಸಾಧ್ಯವಿಲ್ಲ: ಅರವಿಂದ್ ಕೇಜ್ರಿವಾಲ್

    ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಸದಸ್ಯ, ಪತ್ರಕರ್ತ ಅಶುತೋಷ್ ಅವರ ರಾಜೀನಾಮೆಯನ್ನು ಅಂಗೀಕರಿಸಲು ನಿರಾಕರಿಸಿದ್ದಾರೆ.

    ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ಕೇಜ್ರಿವಾಲ್, ಅಶುತೋಷ್ ಅವರ ರಾಜೀನಾಮೆಯನ್ನು ಅಂಗೀಕರಿಸಲು ಹೇಗೆ ಸಾಧ್ಯ? ನಾವು ಈ ಜೀವನದಲ್ಲಿ ರಾಜೀನಾಮೆಯನ್ನು ಅಂಗೀಕರಿಸುವುದಿಲ್ಲ ಎಂದು ತಿಳಿಸಿದ್ದಾರೆ.

    ಕಳೆದ ಐದು ವರ್ಷಗಳ ಹಿಂದೆ ಪತ್ರಕರ್ತ ವೃತ್ತಿಯನ್ನು ತೋರೆದು ಅಶುತೋಷ್ ಎಎಪಿ ಪಕ್ಷದ ಸ್ಥಾಪಕ ಸದಸ್ಯರಾಗಿದ್ದರು. ಅಲ್ಲದೇ ಕೇಜ್ರಿವಾಲ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಆದರೆ ದಿಢೀರ್ ಬೆಳವಣಿಗೆಯಲ್ಲಿ ವೈಯಕ್ತಿಕ ಕಾರಣದಿಂದ ಪಕ್ಷಕ್ಕೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಅಶುತೋಷ್ ತಿಳಿಸಿದ್ದರು.

    ಈ ಕುರಿತು ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಅವರು, ಇಲ್ಲಿಯವರೆಗೂ ಸಾಗಿದ ಎಎಪಿಯಲ್ಲಿನ ನನ್ನ ಪಯಣವು ಇಂದಿಗೆ ಮುಕ್ತಾಯಗೊಳ್ಳುತ್ತಿದೆ. ಇದರಿಂದಾಗಿ ಸುಂದರ ಹಾಗೂ ಕ್ರಾಂತಿಕಾರಿ ಕಾರ್ಯಗಳು ನಿಲ್ಲಲಿದೆ. ಪಕ್ಷವು ನನ್ನ ರಾಜೀನಾಮೆಯನ್ನು ಅಂಗೀಕರಿಸಬೇಕಾಗಿ ನಾನು ಕೇಳಿಕೊಳ್ಳುತ್ತೇನೆ. ಕೇವಲ ನನ್ನ ವೈಯಕ್ತಿಕ ಕಾರಣಗಳಿಂದಾಗಿ ನಾನು ರಾಜೀನಾಮೆಯನ್ನು ಸಲ್ಲಿಸುತ್ತಿದ್ದೇನೆ. ಪಕ್ಷದಲ್ಲಿ ನನ್ನನ್ನು ಬೆಂಬಲಿಸಿ ಸಹಕರಿಸಿದ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರಿಗೂ ನಾನು ಈ ಮೂಲಕ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದರು.

    ಮತ್ತೊಂದು ಟ್ವೀಟ್‍ನಲ್ಲಿ, ಮಾಧ್ಯಮಗಳು ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸಬೇಕು. ಮಾಧ್ಯಮ ಮಿತ್ರರೇ ಈ ಕುರಿತು ನಾನು ಯಾವುದೇ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ, ದಯಮಾಡಿ ಸಹಕರಿಸಿ ಎಂದು ಹೇಳಿದ್ದರು.

    ಅಶುತೋಷ್ 2014ರ ಲೋಕಸಭಾ ಚುನಾವಣೆಯ ವೇಳೆ ಎಎಪಿ ಪಕ್ಷದಿಂದ ದೆಹಲಿಯ ಚಾಂದಿನಿಚೌಕ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಕಳೆದ ಕೆಲ ದಿನಗಳ ಹಿಂದೆ ಎಎಪಿ ಪಕ್ಷದಿಂದ ರಾಜ್ಯಸಭೆಗೆ ಆಯ್ಕೆ ಮಾಡಿದ್ದ ಅಭ್ಯರ್ಥಿಗಳ ಕುರಿತು ಅಸಮಾಧಾನ ಹೊಂದಿದ್ದರು. ಅಲ್ಲದೇ ಕೆಲ ಅವಧಿಯಿಂದ ಅವರನ್ನು ಪಕ್ಷದ ಕಾರ್ಯ ಚಟುವಟಿಕೆಗಳಿಂದ ದೂರವಿಟ್ಟಿದ್ದರು ಎನ್ನುವ ಮಾತು ಕೇಳಿಬಂದಿದೆ.

    ಎಎಪಿ ಪಕ್ಷದಲ್ಲಿ ಕೆಲ ವರ್ಷಗಳಿಂದ ರಾಜಕೀಯ ಬಂಡಾಯ ಬಿಸಿ ಎದುರಿಸುತ್ತಿದೆ. 2015 ರಲ್ಲಿ ಎಎಪಿ ಮುಖಂಡ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ರನ್ನು ಪಕ್ಷ ವಿರೋಧಿ ಚಟುವಟಿಕೆ ಕಾರಣ ನೀಡಿ ಪಕ್ಷದಿಂದ ಅಮಾನತು ಮಾಡಲಾಗಿತ್ತು. ಬಳಿಕ ಶಾಜಿಯಾ ಇಲ್ಮಿ ಮತ್ತು ದೆಹಲಿ ವಿಧಾನಸಭಾ ಸ್ಪೀಕರ್ ಆಗಿದ್ದ ಎಂಎಸ್ ಧೀರ್ ಅವರು ಪಕ್ಷ ತೋರೆದು ಬಿಜೆಪಿ ಸೇರ್ಪಡೆಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆಪ್ ಹಿರಿಯ ನಾಯಕ ಅಶುತೋಷ್ ರಾಜೀನಾಮೆ

    ಆಪ್ ಹಿರಿಯ ನಾಯಕ ಅಶುತೋಷ್ ರಾಜೀನಾಮೆ

    ನವದೆಹಲಿ: ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಸದಸ್ಯ ಹಾಗೂ ವಕ್ತಾರರಾಗಿರುವ ಹಿರಿಯ ಮುಖಂಡ ಅಶುತೋಷ್ ದಿಢೀರ್ ಬೆಳವಣಿಗೆಯೊಂದರಲ್ಲಿ ರಾಜೀನಾಮೆ ನೀಡಿದ್ದಾರೆ.

    ಈ ಕುರಿತು ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಅವರು, ಇಲ್ಲಿಯವರೆಗೂ ಸಾಗಿದ ಎಎಪಿಯಲ್ಲಿನ ನನ್ನ ಪಯಣವು ಇಂದಿಗೆ ಮುಕ್ತಾಯಗೊಳ್ಳುತ್ತಿದೆ. ಇದರಿಂದಾಗಿ ಸುಂದರ ಹಾಗೂ ಕ್ರಾಂತಿಕಾರಿ ಕಾರ್ಯಗಳು ನಿಲ್ಲಲಿದೆ. ಪಕ್ಷವು ನನ್ನ ರಾಜೀನಾಮೆಯನ್ನು ಅಂಗೀಕರಿಸಬೇಕಾಗಿ ನಾನು ಕೇಳಿಕೊಳ್ಳುತ್ತೇನೆ. ಕೇವಲ ನನ್ನ ವೈಯಕ್ತಿಕ ಕಾರಣಗಳಿಂದಾಗಿ ನಾನು ರಾಜೀನಾಮೆಯನ್ನು ಸಲ್ಲಿಸುತ್ತಿದ್ದೇನೆ. ಪಕ್ಷದಲ್ಲಿ ನನ್ನನ್ನು ಬೆಂಬಲಿಸಿ ಸಹಕರಿಸಿದ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರಿಗೂ ನಾನು ಈ ಮೂಲಕ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಮತ್ತೊಂದು ಟ್ವೀಟ್‍ನಲ್ಲಿ, ಮಾಧ್ಯಮಗಳು ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸಬೇಕು. ಮಾಧ್ಯಮ ಮಿತ್ರರೇ ಈ ಕುರಿತು ನಾನು ಯಾವುದೇ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ, ದಯಮಾಡಿ ಸಹಕರಿಸಿ ಎಂದು ಹೇಳಿದ್ದಾರೆ.

    ಅಶುತೋಷ್‍ರವರು ಮೂಲತಃ ಪತ್ರಕರ್ತರಾಗಿದ್ದು, ಬದಲಾದ ಸನ್ನಿವೇಷಗಳಲ್ಲಿ ಅವರು ರಾಜಕೀಯಕ್ಕೆ ಧುಮುಕಿದ್ದರು. ಅಲ್ಲದೇ 2014ರ ಲೋಕಸಭಾ ಚುನಾವಣೆಯಲ್ಲಿ ಎಎಪಿಯಿಂದ ಚಾಂದಿನಿಚೌಕ್ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿದ್ದರು. ಎಎಪಿ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಹು ಆಪ್ತರಲ್ಲಿ ಗುರುತಿಸಿಕೊಂಡವರಲ್ಲಿ ಒಬ್ಬರಾಗಿದ್ದರು.

    ಎಎಪಿಯಿಂದ ರಾಜ್ಯಸಭೆಗೆ ಮೂವರು ಸದಸ್ಯರ ಆಯ್ಕೆ ಪ್ರಕ್ರಿಯೆಯಲ್ಲಿ ಇಬ್ಬರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಇದರಿಂದಾಗಿ ಅವರು ಹಲವು ದಿನಗಳ ಕಾಲ ಮೌನಕ್ಕೆ ಶರಣಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಂಡು ಮಗನೇ ಆಗಿದ್ರೆ ಟ್ವೀಟ್ ಡಿಲೀಟ್ ಮಾಡ್ಬೇಡ: ಆಪ್‍ಗೆ ಬಿಜೆಪಿ ಮುಖಂಡ ಸವಾಲ್

    ಗಂಡು ಮಗನೇ ಆಗಿದ್ರೆ ಟ್ವೀಟ್ ಡಿಲೀಟ್ ಮಾಡ್ಬೇಡ: ಆಪ್‍ಗೆ ಬಿಜೆಪಿ ಮುಖಂಡ ಸವಾಲ್

    ನವದೆಹಲಿ: ಗಂಡು ಮಗನೇ ಆಗಿದ್ದರೆ ಟ್ವೀಟ್ ಡಿಲೀಟ್ ಮಾಡಬೇಡ ಎಂದು ಬಿಜೆಪಿ ಮುಖಂಡ ತಜೀಂದ್ರ ಪಾಲ್ ಸಿಂಗ್ ಬಗ್ಗಾ ಬಹಿರಂಗವಾಗಿಯೇ ಆಪ್ ಪಕ್ಷಕ್ಕೆ ಸವಾಲು ಹಾಕಿದ್ದಾರೆ.

    ಬುಧವಾರ ಬೆಳಗ್ಗೆ 10.20ಕ್ಕೆ ಆಪ್ ತನ್ನ ಅಧಿಕೃತ ಟ್ವಟ್ಟರ್ ಖಾತೆಯಲ್ಲಿ ಫೋಟೋ ಜೊತೆಗೆ ಕೆಲವು ಪದಗಳನ್ನು ಬರೆದುಕೊಂಡು ಟ್ವೀಟ್ ಮಾಡಿತ್ತು. ಟ್ವೀಟ್ ನೋಡಿದ ತಜೀಂದ್ರ ನೀವು ಹೇಳುತ್ತಿರೋದು ಸರಿಯಾಗಿದೆ. ಹಾಗಾಗಿ ಗಂಡು ಮಗನೇ ಆಗಿದ್ರೆ ಟ್ವೀಟ್ ಡಿಲೀಟ್ ಮಾಡಕೂಡದು ಎಂದು ಪ್ರತಿಕ್ರಿಯೆ ನೀಡಿದ್ದರು. ಇತ್ತ ತನ್ನ ತಪ್ಪಿನ ಅರಿವಾಗುತ್ತಲೇ ಆಪ್ ಟ್ವೀಟ್ ಡಿಲೀಟ್ ಮಾಡಿತ್ತು.

    ಏನದು ಟ್ವೀಟ್?: ಕೇವಲ ಗಲಾಟೆ ಮಾಡೋದು ನಮ್ಮ ಉದ್ದೇಶವಲ್ಲ. ಬದಲಾಗಿ ನಮ್ಮ ಸಮಾಜದಲ್ಲಿ ಬದಲಾವಣೆಯನ್ನು ತರುವುದು ನಮ್ಮ ಧ್ಯೇಯ ಅಂತಾ ಸಾಲುಗಳನ್ನು ಬರೆಯಲಾಗಿತ್ತು. ಇದರ ಜೊತೆಗೆ ಕೆಲವು ಬರಹವುಳ್ಳ ಫೋಟೋ ಸಹ ಅಪ್ಲೋಡ್ ಮಾಡಿಕೊಂಡಿತ್ತು. 2011ರಲ್ಲಿ ಭ್ರಷ್ಟಾಚಾರರ ವಿರುದ್ಧ ಹೋರಾಟ. 2018ರಲ್ಲಿ ಪ್ರಜಾಪ್ರಭುತ್ವದ ಉಳಿವಿಗಾಗಿ ಅಂತಾ ಬರೆಯಲಾಗಿತ್ತು.

    ಆಪ್ ಖಾತೆಯಿಂದ ಟ್ವೀಟ್ ಪ್ರಕಟವಾಗುತ್ತಿದ್ದಂತೆ ತಜೀಂದ್ರ ಸ್ಕ್ರೀನ್ ಶಾಟ್ ತೆಗೆದುಕೊಂಡಿದ್ದಾರೆ. 2011ರಲ್ಲಿ ಭ್ರಷ್ಟಾಚಾರದ (ಕಾಂಗ್ರೆಸ್) ವಿರುದ್ಧ ಹೋರಾಟ ಮಾಡಿದ್ದವರು ಇಂದು ಅದೇ ರಾಹುಲ್ ಗಾಂಧಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದೀರಿ. 2018ರಲ್ಲಿ ಪ್ರಜಾಪ್ರಭುತ್ವದ ಉಳಿವಿಗಾಗಿ ಮಾಡುವ ಹೋರಾಟಕ್ಕೆ ಕಾಂಗ್ರೆಸ್‍ನೊಂದಿಕೆ ಕೈ ಕೈ ಮಿಲಾಯಿಸುತ್ತಿದ್ದೀರಿ. ನೀವು ಸತ್ಯವಾದದನ್ನು ಹೇಳಿದ್ದು ಟ್ವೀಟ್ ಡಿಲೀಟ್ ಮಾಡಕೂಡದು ಎಂದು ಅರವಿಂದ್ ಕೇಜ್ರಿವಾಲರಿಗೆ ಟ್ಯಾಗ್ ಮಾಡಿದ್ದರು.

    ಇತ್ತ ಟ್ವೀಟ್ ಡಿಲೀಟ್ ಆಗುತ್ತಿದ್ದಂತೆ ನೀವು ತಪ್ಪು ಮಾಡಿದ್ದೀರಿ ಎಂದು ತಜೀಂದ್ರ ಮತ್ತೊಮ್ಮೆ ತಮ್ಮ ಟ್ವಿಟ್ಟರ್‍ನಲ್ಲಿ ಬರೆದುಕೊಂಡಿದ್ದಾರೆ. ಆಪ್ ತನ್ನ ಟ್ವೀಟ್ ಡಿಲೀಟ್ ಮಾಡುತ್ತಿದ್ದಂತೆ ಸ್ಕ್ರೀನ್ ಶಾಟ್‍ನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್‍ಗೆ ಒಳಪಡುತ್ತಿದೆ.

    ಕರ್ನಾಟಕದಲ್ಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಮಾಣವಚನದ ಕಾರ್ಯಕ್ರಮಕ್ಕೆ ದೆಹಲಿ ಸಿಎಂ ಮತ್ತು ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಭಾಗಿಯಾಗಿದ್ದರು. ಅರವಿಂದ್ ಕೇಜ್ರಿವಾಲ್ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಂತೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನೊಂದಿಗೆ ಆಪ್ ಕೈ ಜೋಡಿಸಲಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಬರತೊಡಗಿದವು.

    ಇತ್ತ ಮೈತ್ರಿಯ ಮಾತುಗಳಿಗೆ ಪೂರಕ ಎಂಬಂತೆ ಕಾಂಗ್ರೆಸ್‍ನ ಹಿರಿಯ ನಾಯಕರು ನಮ್ಮನ್ನ ಸಂಪರ್ಕಿಸಿದ್ದಾರೆ ಎಂಬ ಟ್ವೀಟ್ ಆಪ್ ಮುಖಂಡರೊಬ್ಬರು ಟ್ವಿಟ್ಟರ್‍ನಲ್ಲಿ ಬರೆದುಕೊಂಡಿದ್ದಾರೆ. ಕೊನೆಗೆ ನಾವು ಯಾರನ್ನು ಸಂಪರ್ಕಿಸಿಲ್ಲ, ಲೋಕಸಭಾ ಚುನಾವಣೆಯ ಮೈತ್ರಿ ಬಗ್ಗೆ ಕಾಂಗ್ರೆಸ್‍ನೊಂದಿಗೆ ಚರ್ಚೆ ನಡೆಸಿಲ್ಲ ಎಂದು ಆಪ್ ಸ್ಪಷ್ಟೀಕರಣ ನೀಡಿತ್ತು.

  • ಮೈತ್ರಿ ಬಗ್ಗೆ ಆಪ್ ಜೊತೆ ಮಾತುಕತೆ ನಡೆಸಿಲ್ಲ- ಕಾಂಗ್ರೆಸ್ ಸ್ಪಷ್ಟನೆ

    ಮೈತ್ರಿ ಬಗ್ಗೆ ಆಪ್ ಜೊತೆ ಮಾತುಕತೆ ನಡೆಸಿಲ್ಲ- ಕಾಂಗ್ರೆಸ್ ಸ್ಪಷ್ಟನೆ

    ನವದೆಹಲಿ: 2019ರ ಲೋಕಸಭಾ ಚುನಾವಣೆ ಕುರಿತು ಚುನಾವಣಾ ಪೂರ್ವ ಮೈತ್ರಿ ಬಗ್ಗೆ ಆಪ್ ಜೊತೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.

    ಬಿಜೆಪಿ ಮತ್ತು ಮೋದಿ ಮೇಲೆ ಬರಲು ಅರವಿಂದ್ ಕೇಜ್ರಿವಾಲ್ ಮುಖ್ಯ ಕಾರಣ. ಕಾಂಗ್ರೆಸ್ ಪಕ್ಷವನ್ನು ತೆಗಳಿ ಮೋದಿಯನ್ನು ತೆರೆಗೆ ತಂದಿದ್ದು ಕೇಜ್ರಿವಾಲ್. ದೆಹಲಿ ಘಟಕದ ಕಾಂಗ್ರೆಸ್ ಅಧ್ಯಕ್ಷನಾಗಿ ನಾನು ಮತ್ತು ಇತರ ನಾಯಕರು ಹಾಗೂ ಕಾರ್ಯಕರ್ತರು ಕೇಜ್ರಿವಾಲ್ ರನ್ನು ಬೆಂಬಲಿಸುವುದಿಲ್ಲ. ಜನಗಳು ಕೂಡ ಬೆಂಬಲಿಸುತ್ತಿಲ್ಲ ಹಾಗಾಗಿ ನಾವು ಸಹ ಬೆಂಬಲಿಸುವುದಿಲ್ಲ ಎಂದು ಅಜಯ್ ಮಕೇನ್ ಟ್ವೀಟ್ ಮಾಡಿದ್ದಾರೆ.

    2019 ರ ಲೋಕಸಭಾ ಚುನಾವಣೆಗೆ ಚುನಾವಣಾ ಪೂರ್ವ ಮೈತ್ರಿ ಬಗ್ಗೆ ಕಾಂಗ್ರೆಸ್ ನಾಯಕರು ಆಪ್ ಪಕ್ಷದ ಜೊತೆ ಮಾತುಕತೆ ನಡೆಸಿದ್ದಾರೆ. ಮೇ 24 ರಂದು ಕಾಂಗ್ರೆಸ್ ನ ಜೈರಾಮ್ ರಮೇಶ್ ಮತ್ತು ಅಜಯ್ ಮಕೇನ್ ಆಪ್ ಜೊತೆ ಮಾತುಕತೆ ಮಾಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾದ ಬೆನ್ನಲ್ಲೇ ಅಜಯ್ ಮಕೇನ್ ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಇದನ್ನೂ ಓದಿ:ಲೋಕಸಭಾ ಚುನಾವಣಾ ಪೂರ್ವ ಮೈತ್ರಿಗೆ ಕಾಂಗ್ರೆಸ್, ಆಪ್ ಮಾತುಕತೆ!

    ಈಗಾಗಲೇ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಜೊತೆ ಲೋಕಸಭಾ ಚುನಾವಣೆಯನ್ನು ಎದುರಿಸಲು ಸನ್ನದ್ಧವಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಪ್ರಬಲವಾಗಿರುವ ಆಪ್ ಜೊತೆ ಕಾಂಗ್ರೆಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಸುದ್ದಿಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿದ್ದವು. ಈ ಸಂಬಂಧ ಅಜಯ್ ಮಕೇನ್ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.

  • ಕೇಜ್ರಿವಾಲ್ ಕಛೇರಿಯಲ್ಲಿ ಮೂರು ವರ್ಷದಲ್ಲಿ ಚಹಾ,ತಿಂಡಿಗಾಗಿ 1.03 ಕೋಟಿ ರೂ ಖರ್ಚು

    ಕೇಜ್ರಿವಾಲ್ ಕಛೇರಿಯಲ್ಲಿ ಮೂರು ವರ್ಷದಲ್ಲಿ ಚಹಾ,ತಿಂಡಿಗಾಗಿ 1.03 ಕೋಟಿ ರೂ ಖರ್ಚು

    ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಛೇರಿಯಲ್ಲಿ ಮೂರು ವರ್ಷದಲ್ಲಿ ಚಹಾ ಮತ್ತು ತಿಂಡಿಗಾಗಿ 1.03 ಕೋಟಿ ರೂ ಗಳನ್ನು ಖರ್ಚು ಮಾಡಲಾಗಿರುವ ವಿಚಾರ ಮಾಹಿತಿ ಹಕ್ಕು ಕಾಯ್ದೆಯ ಅಡಿ ಬಯಲಾಗಿದೆ.

    2015-16 ರಲ್ಲಿ 23.12 ಲಕ್ಷ ರೂ., 2016-17 ರಲ್ಲಿ 46.54 ಲಕ್ಷ ರೂ., 2017-18 ಆರ್ಥಿಕ ವರ್ಷದಲ್ಲಿ 33.36 ಲಕ್ಷ ರೂ. ಗಳನ್ನು ಚಹಾ ಮತ್ತು ತಿಂಡಿಗಾಗಿ ಖರ್ಚು ಮಾಡಲಾಗಿದೆ ಎಂದು ಆರ್ ಟಿ ಐ ಕಾರ್ಯಕರ್ತ ಹೇಮಂತ್ ಸಿಂಗ್ ಗೌನ್ಯ ತಿಳಿಸಿದ್ದಾರೆ.

    ಇದು ದುಂದು ವೆಚ್ಚವಾಗಿದ್ದು ಇದೇ ಹಣವನ್ನು ಒಪ್ಪತ್ತು ಊಟಕ್ಕೂ ಇಲ್ಲದವರಿಗೆ ವಿನಿಯೋಗಿಸಬಹುದು. ಈ ವೆಚ್ಚವನ್ನು ತಗ್ಗಿಸಿ ಒಳ್ಳೆಯ ಕೆಲಸಗಳಿಗೆ ಸರ್ಕಾರ ಬಳಸುತ್ತದೆ ಅಂತಾ ಅಂದು ಕೊಂಡಿದ್ದೇನೆ ಎಂದು ಹೇಮಂತ್ ಅಭಿಪ್ರಾಯಪಟ್ಟಿದ್ದಾರೆ.

  • ಅರುಣ್ ಜೇಟ್ಲಿ ಬಳಿ ಕ್ಷಮಾಪಣೆ ಕೋರಿದ ಅರವಿಂದ್ ಕೇಜ್ರಿವಾಲ್

    ಅರುಣ್ ಜೇಟ್ಲಿ ಬಳಿ ಕ್ಷಮಾಪಣೆ ಕೋರಿದ ಅರವಿಂದ್ ಕೇಜ್ರಿವಾಲ್

    ನವದೆಹಲಿ: ಕಳೆದ ಕೆಲ ದಿನಗಳ ಹಿಂದೆಯಷ್ಟೇ ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹಾಗೂ ಕಾಂಗ್ರೆಸ್ ಹಿರಿಯ ನಾಯಕ, ವಕೀಲ ಕಪಿಲ್ ಸಿಬಲ್ ಅವರ ಬಳಿ ಕ್ಷಮೆಯಾಚಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈಗ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬಳಿ ಕ್ಷಮೆ ಕೇಳಿದ್ದಾರೆ.

    ಕೇಜ್ರಿವಾಲ್ ಜೊತೆ ಆಪ್ ಮುಖಂಡರಾದ ಅಶುತೋಶ್, ರಾಘವ್ ಚಾಂದಾ, ಸಂಜಯ್ ಸಿಂಗ್ ಕೂಡ ತಮ್ಮ ವಿರುದ್ಧ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು 10 ಕೋಟಿ ರೂ. ಪರಿಹಾರ ಕೇಳಿ ದಾಖಲಿಸಿದ್ದ ಮಾನಹಾನಿ ಪ್ರಕರಣದಲ್ಲಿ ಕ್ಷಮೆ ಕೋರಿದ್ದಾರೆ.

    ಪಟಿಯಾಲ ಕೋರ್ಟ್ ನಲ್ಲಿ ದಾಖಲಾಗಿರುವ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರದ ಮೂಲಕ ಕ್ಷಮೆ ಕೋರಿದ್ದು, ಆಪ್ ಪಕ್ಷದ ಎಲ್ಲಾ ನಾಲ್ವರು ಮುಖಂಡರು ಪ್ರತ್ಯೇಕ ಪತ್ರ ಬರೆಯುವ ಮೂಲಕ ಕ್ಷಮೆ ಕೇಳಿದ್ದಾರೆ. ಅಲ್ಲದೇ ಈ ಪತ್ರವನ್ನು ಪ್ರತ್ಯೇಕವಾಗಿ ನ್ಯಾಯಾಲಯಕ್ಕೂ ಸಲ್ಲಿಸಿದ್ದಾರೆ.

    ನಿಮ್ಮ ವಿರುದ್ಧ ಮಾಡಿರುವ ಆರೋಪಗಳಿಗೆ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸುತ್ತೇನೆ. ನನಗೆ ಆ ವೇಳೆ ಸಿಕ್ಕ ಮಾಹಿತಿಗೆ ಯಾವುದೇ ದಾಖಲೆಗಳು, ಆಧಾರಗಳು ಇಲ್ಲ. ನಾನು ತಪ್ಪು ಮಾಹಿತಿ ಪಡೆದು ಆರೋಪ ಮಾಡಿದೆ. ಇದರಿಂದ ನಿಮಗೇ ಹಾಗೂ ನಿಮ್ಮ ಕುಟುಂಬ ಸದಸ್ಯರ ಗೌರವಕ್ಕೆ ದಕ್ಕೆ ಉಂಟಾಗಿದ್ದಾರೆ ಕ್ಷಮಿಸಿ ಎಂದು ಪತ್ರದಲ್ಲಿ ಬರೆದಿದ್ದಾರೆ.

    ಅರವಿಂದ್ ಕೇಜ್ರಿವಾಲ್ ಹಾಗೂ ಆಮ್ ಆದ್ಮಿ ಪಕ್ಷದ ಮುಖಂಡರಾದ ಕುಮಾರ್ ವಿಶ್ವಾಸ್, ಸಂಜಯ್ ಸಿಂಗ್, ಅಶುತೋಷ್ ಹಾಗೂ ದೀಪಕ್ ಬಾಜ್ ಪೈ ಪೈವಿರುದ್ಧ 10 ಕೋಟಿ ರೂಪಾಯಿಗಳ ಮಾನಹಾನಿ ಪ್ರಕರಣವನ್ನು ಅರುಣ್ ಜೇಟ್ಲಿ ದಾಖಲಿಸಿದ್ದರು.

    ಮುಖ್ಯ ಮಂತ್ರಿಯಾಗಿ ಕಾರ್ಯನಿರ್ವಹಿಸಲು ಆಡಳಿತ ವಿಷಯಗಳಲ್ಲಿ ಹೆಚ್ಚು ಗಮನಹರಿಸಲು ಕ್ರೇಜಿವಾಲ್ ತಮ್ಮ ವಿರುದ್ಧದ ದಾಖಲಾಗಿದ್ದ ಎಲ್ಲಾ ಮಾನನಷ್ಟ ಮೊಕದ್ದಮೆಗಳಿಗೆ ಕ್ಷಮೆ ಕೇಳಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ಕೇಜ್ರಿವಾಲರ ವಿರುದ್ಧ ದಾಖಲಾಗಿದ್ದ 30 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಸುಮಾರು 20 ಪ್ರಕರಣಗಳು ಬಾಕಿ ಉಳಿದಿದೆ. ಇದನ್ನೂ ಓದಿ: ಜೇಟ್ಲಿ ಕೇಸ್- ಕೇಜ್ರಿ ಪರ ವಾದದಿಂದ ರಾಮ್ ಜೇಠ್ಮಾಲನಿ, ಇನ್ನೊಬ್ಬ ವಕೀಲ ಹಿಂದಕ್ಕೆ ಸರಿದಿದ್ದು ಯಾಕೆ?

    ಏನಿದು ಪ್ರಕರಣ?
    ಅರುಣ್ ಜೇಟ್ಲಿ ದೆಹಲಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆಪ್ ಆರೋಪಿಸಿತ್ತು. ಇದರ ವಿರುದ್ಧ ಅರುಣ್ ಜೇಟ್ಲಿ, ಅರವಿಂದ ಕೇಜ್ರಿವಾಲ್, ಕುಮಾರ್ ವಿಶ್ವಾಸ್, ಸಂಜಯ್ ಸಿಂಗ್, ರಾಘವ್ ಚಡ್ಡಾ, ಅಶುತೋಶ್ ಹಾಗೂ ದೀಪಕ್ ಬಾಜ್ಪೈ ಅವರ ಮೇಲೆ ಸಿವಿಲ್ ಹಾಗೂ ಕ್ರಿಮಿನಲ್ ಸೇರಿದಂತೆ ಎರಡು ಮಾನನಷ್ಟ ಮೊಕದ್ದಮೆ ಹಾಕಿದ್ದರು. ಸುಳ್ಳು ಹೇಳಿಕೆ ನೀಡಿ ಘನತೆಗೆ ಧಕ್ಕೆ ತಂದ ಆರೋಪದ ಮೇಲೆ 10 ಕೋಟಿ ರೂ. ಪರಿಹಾರ ನೀಡುವಂತೆ ಕೇಜ್ರಿವಾಲ್ ಹಾಗೂ ಇತರೆ ಮುಖಂಡರ ಮೇಲೆ ಜೇಟ್ಲಿ ಸಿವಿಲ್ ಕೇಸ್ ಹಾಕಿದ್ದರು. ಇದನ್ನೂ ಓದಿ: ನಿತಿನ್ ಗಡ್ಕರಿ ಜೊತೆ ಕ್ಷಮೆ ಕೇಳಿದ ಕೇಜ್ರಿವಾಲ್

  • ನಿತಿನ್ ಗಡ್ಕರಿ ಜೊತೆ ಕ್ಷಮೆ ಕೇಳಿದ ಕೇಜ್ರಿವಾಲ್

    ನಿತಿನ್ ಗಡ್ಕರಿ ಜೊತೆ ಕ್ಷಮೆ ಕೇಳಿದ ಕೇಜ್ರಿವಾಲ್

    ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಲ್ಲಿ ಕ್ಷಮೆ ಕೇಳಿದ್ದಾರೆ.

    ಈ ಮೂಲಕ ಪಟಿಯಾಲ ಹೌಸ್ ಕೋರ್ಟ್ ನಲ್ಲಿ ಬಾಕಿ ಇರುವ ಮಾನಹಾನಿ ಕೇಸ್ ಹಿಂಪಡೆಯುವ ಸಲುವಾಗಿ ಗಡ್ಕರಿ ಜತೆಗಿನ ಜಂಟಿ ಹೇಳಿಕೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

    “ಸತ್ಯಾಂಶಗಳನ್ನು ಪರಿಶೀಲಿಸದೆಯೇ ನಾನು ನಿಮ್ಮ ವಿರುದ್ಧ ಮಾಡಿರುವ ಆರೋಪಗಳಿಗೆ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸುತ್ತೇನೆ. ದಯವಿಟ್ಟು ಈ ಹಿಂದೆ ನಡೆದ ಘಟನೆಗಳನ್ನು ಮರೆತು ಬಿಡಿ” ಎಂದು ಸಚಿವ ಗಡ್ಕರಿ ಅವರಿಗೆ ಕೇಜ್ರಿವಾಲ್ ಪತ್ರ ಬರೆದಿದ್ದಾರೆ.

    ಲೋಕಸಭಾ ಚುನಾವಣೆಗೂ ಮುನ್ನ ಗಡ್ಕರಿ ಅವರನ್ನು ಉದ್ದೇಶಿಸಿ, ಕೇಜ್ರಿವಾಲ್ ದೇಶದ ಅತಿ ದೊಡ್ಡ ಭ್ರಷ್ಟಾಚಾರಿ ಎಂದು ಆರೋಪಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಗಡ್ಕರಿ ಮಾನಹಾನಿ ಕೇಸ್ ಹಾಕಿದ್ದರು.

    ಪಂಜಾಬ್ ಮಾಜಿ ಕಂದಾಯ ಸಚಿವ ಬಿಕ್ರಂ ಸಿಂಗ್ ಮಜೀತಿಯ ಅವರಲ್ಲಿ ಕಳೆದ ವಾರ ಅರವಿಂದ ಕೇಜ್ರಿವಾಲ್ ಅವರು ಕ್ಷಮೆಯಾಚಿಸಿ ಅವರೊಂದಿಗಿನ ಮಾನಹಾನಿ ಕೇಸ್ ಕೋರ್ಟಿನಲ್ಲಿ ಇತ್ಯರ್ಥಪಡಿಸಿಕೊಂಡಿದ್ದರು.

    ಕೇಜ್ರಿವಾಲ್ ವಿರುದ್ಧ 33 ಮಾನನಷ್ಟ ಕೇಸ್ ಗಳು ದಾಖಲಾಗಿದ್ದು, ಈ ಎಲ್ಲ ಕೇಸ್ ಗಳನ್ನು ಹಿಂದಕ್ಕೆ ಪಡೆಯಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತಾನು ಮಾಡಿದ ಆರೋಪಗಳಿಗೆ ಕ್ಷಮೆ ಕೇಳುವ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಮುಂದಾಗಿದ್ದಾರೆ ಎಂದು ಮಾಧ್ಯಮವೊಂದು ವರದಿ ಪ್ರಕಟಿಸಿದೆ.


  • ಗುಜರಾತ್‍ನಲ್ಲಿ 30 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಆಪ್ ಗತಿ ಏನಾಯ್ತು?

    ಗುಜರಾತ್‍ನಲ್ಲಿ 30 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಆಪ್ ಗತಿ ಏನಾಯ್ತು?

    ನವದೆಹಲಿ: ಗುಜರಾತ್ ಹಾಗೂ ಹಿಮಾಚಲಪ್ರದೇಶ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಗುಜರಾತ್‍ನಲ್ಲಿ ಬಿಜೆಪಿ ಸತತ 6ನೇ ಬಾರಿ ಸರ್ಕಾರ ರಚಿಸಲು ಸಿದ್ಧವಾಗ್ತಿದೆ. ಹಾಗೆ ಕಾಂಗ್ರೆಸ್ ಕೂಡ ಉತ್ತಮ ಸಾಧನೆ ಮಾಡಿದೆ ಎಂದೇ ಸುದ್ದಿಯಾಗ್ತಿದೆ. ಆದ್ರೆ ಈ ಮಧ್ಯೆ ಗುಜರಾತ್‍ನ ಒಟ್ಟು 182 ಕ್ಷೇತ್ರಗಳಲ್ಲಿ ಸುಮಾರು 30 ಸ್ಥಾನಗಳಿಗೆ ಸ್ಪರ್ಧಿಸಿದ್ದ ಆಮ್ ಆದ್ಮಿ ಪಾರ್ಟಿ ಧೂಳಿಪಟವಾಗಿದೆ.

    2 ವರ್ಷಗಳ ಹಿಂದೆ ದೆಹಲಿಯಲ್ಲಿ ಬಿಜೆಪಿಯನ್ನೇ ಮುಳುಗಿಸಿದ್ದ ಆಪ್ ಈ ಬಾರಿಯ ಗುಜರಾತ್ ಚುನಾವಣೆಯಲ್ಲಿ 2 ಕ್ಷೇತ್ರಗಳಲ್ಲಿ ಸ್ಪರ್ಧೆಯೊಡ್ಡಿದ್ದು ಬಿಟ್ಟರೆ ಉಳಿದ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಅಲ್ಲದೆ ಕೆಲವರಂತೂ ಎರಡಂಕಿ ಮತಗಳನ್ನ ಪಡೆದಿದ್ದಾರೆ.

    ಆಪ್ ತನ್ನ ಇರುವಿಕೆಯನ್ನ ತೋರಿಸಿದ ಮೂರು ಕ್ಷೇತ್ರಗಳೆಂದರೆ ಚೋಟಾ ಉದೇಪುರ್, ವಂಕಾನೇರ್ ಹಾಗೂ ಬಾಪೂನಗರ್. ಚೋಟಾ ಉದೇಪುರ್‍ನಲ್ಲಿ ಆಪ್‍ನ ಅರ್ಜುನ್ ಭಾಯ್ ವಸಿಂಗ್‍ಭಾಯ್ ರತ್ವಾ 4500 ಮತಗಳನ್ನ ಪಡೆದಿದ್ದು, ಗುಜರಾತ್ ನಲ್ಲಿ ಇದೇ ಆಪ್ ನ ಅತ್ಯುತ್ತಮ ಸಾಧನೆ ಎಂದು ವರದಿಯಾಗಿದೆ.

    ಚೋಟಾ ಉದೇಪುರ್ ಕ್ಷೇತ್ರದಲ್ಲಿ ಗೆಲುವಿನ ಅಂತರವನ್ನ ನೋಡಿದಾಗ ರತ್ವಾ ಅವರ ಮತಗಳಿಕೆ ಗಮನಾರ್ಹವಾಗಿದೆ. ಇಲ್ಲಿ ಜಯ ಗಳಿಸಿರೋ ಕಾಂಗ್ರೆಸ್‍ನ ಮೋಹನ್ ಸಿನ್ ಚೋಟುಭಾಯ್ ಬಿಜೆಪಿಯ ಜಶುಭಾಯ್ ಭಿಲುಭಾಯ್ ರತ್ವಾ ಅವರನ್ನ ಕೇವಲ 1000 ಮತಗಳಿಂದ ಸೋಲಿಸಿದ್ದಾರೆ.

    ಅದರಂತೆ ವಾಂಕನೇರ್‍ನಲ್ಲಿ ಆಪ್‍ನ ಶೇರಾಸಿಯಾ ಉಸ್ಮಾಂಗನಿ ಹುಶೇನ್ 3000 ಕ್ಕೆ ಹತ್ತಿರದ ಮತಗಳನ್ನ ಗಳಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಮತ್ತೊಮ್ಮೆ ಗೆಲುವಿನ ಅಂತರ 3 ಸಾವಿರ ಮತಗಳಿಗಿಂತ ಕಡಿಮೆ.

    ಇನ್ನು ಪಾಟಿದಾರ್ ಪ್ರಾಬಲ್ಯವಿರೋ ಉಂಜಾ ಕ್ಷೇತ್ರದಲ್ಲಿ ಆಪ್‍ನ ರಮೇಶ್ ಪಟೇಲ್ 8ನೇ ಸ್ಥಾನದಲ್ಲಿದ್ದು, 400ಕ್ಕಿಂತ ಕಡಿಮೆ ಮತ ಪಡೆದಿದ್ದಾರೆ. ಇಲ್ಲಿ ಕಾಂಗ್ರೆಸ್‍ನ ಡಾ. ಆಶಾ ಪಟೇಲ್ 80,927 ಮತಗಳೊಂದಿಗೆ ಗೆಲುವು ಸಾಧಿಸಿದ್ದಾರೆ.

    ವರದಿಗಳ ಪ್ರಕಾರ ಆಪ್ ಸುಮಾರು 30 ಸ್ಥಾನಗಳಿಗೆ ಸ್ಪರ್ಧಿಸಲು ನಿರ್ಧರಿಸಿದ್ದರೂ, 10 ಸ್ಥಾನಗಳ ಮೇಲೆ ಮಾತ್ರ ಗಮನ ಹರಿಸಲು ತೀರ್ಮಾನಿಸಿತ್ತು. ಆಂತರಿಕ ಸಮೀಕ್ಷೆಯ ಪ್ರಕಾರ ಆಪ್ ಈ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆಂಬ ನಿರೀಕ್ಷೆಯಲ್ಲಿತ್ತು. ಆ ಹತ್ತು ಕ್ಷೇತ್ರಗಳಲ್ಲಿ ಉಂಜಾ, ಚೋಟಾ ಉದೇಪುರ್ ಹೊರತುಪಡಿಸಿ ಉಳಿದ ಕಡೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಹಾಗೂ ಅವರು ಪಡೆದ ಮತಗಳು ಈ ಕೆಳಕಂಡಂತಿವೆ

    ಪಲಂಪುರ್- ನಭಾನಿ ರಮೇಶ್‍ಕುಮಾರ್ ಖೇಮ್‍ರಾಜ್‍ಬಾಯ್ (452 ಮತಗಳು)
    ರಾಜ್‍ಕೋಟ್(ಪೂರ್ವ)- ಅಜಿತ್ ಘುಸಾಭಾಯ್ ಲೋಕಿಲ್(1927 ಮತಗಳು)
    ಗೋಂಡಾಲ್- ಕುಂಟ್ ನಿಮಿಶಾಬೇನ್ ಧೀರಜ್‍ಲಾಲ್(2179 ಮತಗಳು)
    ಲಾತಿ ಎಂಡಿ ಭಾನುಭಾಯ್ ಮಂಜಾರಿಯಾ( 797 ಮತಗಳು)
    ಕಮ್ರೇಜ್- ರಾಮ್ ಧಡುಕ್(1454 ಮತಗಳು)
    ಕರಂಜ್- ಮೆಹ್ತಾ ಜಿಗ್ನೇಶ್ ಧೀರಜ್‍ಲಾಲ್(325 ಮತಗಳು)
    ಪರ್ದಿ ಡಾ ರಾಜೀವ್ ಶಂಭುನಾತ್ ಪಾಂಡೇ ( 539 ಮತಗಳು)
    ಧ್ರಾಂಗಧ್ರಾ- ದಧಾನಿಯಾ ಕಮ್ಲೇಶ್ ಮುಲ್ಜಿಭಾಯ್(505 ಮತಗಳು)

  • 2018ರ ಚಳುವಳಿಯಿಂದ ಮತ್ತೊಬ್ಬ ಕೇಜ್ರಿವಾಲ್ ಹುಟ್ಟದೇ ಇದ್ದರೆ ಅಷ್ಟೇ ಸಾಕು: ಅಣ್ಣಾ ಹಜಾರೆ

    2018ರ ಚಳುವಳಿಯಿಂದ ಮತ್ತೊಬ್ಬ ಕೇಜ್ರಿವಾಲ್ ಹುಟ್ಟದೇ ಇದ್ದರೆ ಅಷ್ಟೇ ಸಾಕು: ಅಣ್ಣಾ ಹಜಾರೆ

    ನವದೆಹಲಿ: ಮುಂದಿನ ವರ್ಷ ಮಾರ್ಚ್ 23 ರಿಂದ ಆರಂಭಿಸಲು ಉದ್ದೇಶಿಸಲಾಗಿರುವ ಭ್ರಷ್ಟಚಾರ ವಿರೋಧಿ ಹಾಗೂ ಜನ ಲೋಕಪಾಲ್ ಮಸೂದೆ ಜಾರಿ ಸಂಬಂಧ ನಡೆಸಲಿರುವ ಹೋರಾಟದ ಚಳುವಳಿಯಲ್ಲಿ ಮತ್ತೊಬ್ಬ ಅರವಿಂದ ಕೇಜ್ರಿವಾಲ್ ಹುಟ್ಟಿ ಬಾರದೇ ಇದ್ದರೆ ಅಷ್ಟೇ ಸಾಕು ಎಂದು ಖ್ಯಾತ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ.

    ಅಣ್ಣಾ ಹಜಾರೆ ಅವರು ಬರುವ ಮಾರ್ಚ್ 23ಕ್ಕೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೊಡ್ಡ ಮಟ್ಟದ ಚಳುವಳಿ ಆಯೋಜಿಸಲಿದ್ದು, ಈ ಚಳುವಳಿಯಲ್ಲಿ ದೇಶದ ನಾನಾ ಭಾಗಗಳ ರೈತರು ಭಾಗವಹಿಸುವಂತೆ ಅವರು ಮನವಿ ಮಾಡಿದ್ದಾರೆ.

    ಆಗ್ರಾದ ಶಾಹಿರ್ ಸ್ಮಾರಕ್ (ಸ್ವಾತಂತ್ರ್ಯ ಹುತಾತ್ಮರ ಸ್ಮಾರಕ ) ಸಭೆಯಲ್ಲಿ ಮಾತನಾಡಿದ ಅವರು ಜನ ಲೋಕಪಾಲ್ ಮಸೂದೆಯ ಜಾರಿಗೆ ಮೋದಿ ಸರ್ಕಾರ ವಿಳಂಬ ಮಾಡುತ್ತಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ತಪ್ಪಿತಸ್ಥರು ಎಂದು ಆರೋಪಿಸಿದರು. ಅಲ್ಲದೇ ನಾವು ಬಂಡವಾಳಶಾಹಿಗಳ ಸರ್ಕಾರವನ್ನು ಬಯಸುವುದಿಲ್ಲ. ಮೋದಿ ಅಥವಾ ರಾಹುಲ್ ಗಾಂಧಿ ಯಾರೇ ಆಗಿರಲಿ ರೈತರ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡುವ ಸರ್ಕಾರವನ್ನು ನಾವು ಬಯಸುತ್ತೇವೆ ಎಂದರು.

    ಕೇಜ್ರಿವಾಲ್ ಜೊತೆಗೆ ಸದ್ಯ ನನಗೆ ಯಾವುದೇ ಸಂಬಂಧವಿಲ್ಲ, ಮುಂದಿನ ಹೋರಾಟದಲ್ಲಿ ಮತ್ತೆ ಅವರು ನನ್ನ ಚಳುವಳಿಯಲ್ಲಿ ಭಾಗವಹಿಸಿವುದಿಲ್ಲ ಎಂಬ ವಿಶ್ವಾಸ ಹೊಂದಿರುವುದಾಗಿ ತಿಳಿಸಿದರು.

    2011 ರಲ್ಲಿ ಅಣ್ಣಾ ಹಜಾರೆ ಯುಪಿಎ ಸರ್ಕಾರದ ವಿರುದ್ಧ ಜನ ಲೋಕಪಾಲ್ ಮಸೂದೆ ಜಾರಿಗೆ ತರುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಅರವಿಂದ್ ಕೇಜ್ರಿವಾಲ್, ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ನಂತರ 2012 ರಲ್ಲಿ ತಮ್ಮ ಸ್ವಂತ ಆಮ್ ಆದ್ಮಿ ಪಕ್ಷ ಸ್ಥಾಪಿಸಿ ರಾಜಕೀಯ ರಂಗ ಪ್ರವೇಶ ಮಾಡಿದರು. ಅಲ್ಲದೇ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಪಡೆದು ದೆಹಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ನಂತರ ದಿನಗಳಲ್ಲಿ ಹಜಾರೆ ಅವರು ತಮ್ಮ ಭ್ರಷ್ಟಾಚಾರ ಚಳುವಳಿಯಿಂದ ಸ್ವಲ್ಪ ಹಿಂದೆ ಸರಿದಿದ್ದರು.

    ಪ್ರಸ್ತುತ ಮತ್ತೆ ಜನ್ ಲೋಕಪಾಲ್ ನೇಮಕ, ಭ್ರಷ್ಟಚಾರ ವಿರೋಧಿ ಚಳುವಳಿ, ಚುನಾವಣೆ ಸುಧಾರಣೆಗಳು ಹಾಗೂ ದೇಶದಲ್ಲಿನ ರೈತರ ಸಮಸ್ಯೆಗಳ ಕುರಿತು ಹೋರಾಟಕ್ಕಿಳಿದಿರುವ ಅಣ್ಣಾ ಹಜಾರೆ ತನ್ನ ಹೋರಾಟವನ್ನು ಬೆಂಬಲಿಸುವಂತೆ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.

    ಕಳೆದ ವರ್ಷ ಕೇಂದ್ರ ಸರ್ಕಾರ ಭ್ರಷ್ಟಾಚಾರ ನಿಯಂತ್ರಣಕ್ಕೆ ಕೈಗೊಂಡಿದ್ದ ನೋಟು ನಿಷೇಧ ಕ್ರಮವು ವಿಫಲವಾಗಿದ್ದು, ದೇಶದಲ್ಲಿ ಭ್ರಷ್ಟಾಚಾರ ಮುಂದುವರೆದಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪ್ರಸ್ತುತ ರಾಜಕೀಯ ಸನ್ನಿವೇಶಗಳು ಯುವ ಜನರಿಗೆ ರಾಜಕೀಯ ಭವಿಷ್ಯದ ಭರವಸೆಯನ್ನು ನೀಡುವುದಿಲ್ಲ ಎಂದು ಹೇಳಿದ್ದಾರೆ.

    ನಾನು ಪ್ರಜಾಪ್ರಭುತ್ವದ ವ್ಯವಸ್ಥೆಯ ವಿರೋಧಿ ಅಲ್ಲ, ಆದರೆ ಚುನಾವಣೆಗಳು ಸಂವಿಧಾನದ ನೈಜ ಉದ್ದೇಶಗಳ ಅಡಿಯಲ್ಲಿ ನಡೆಸಬೇಕು. ನಾಯಕರು ಸಾಮಾನ್ಯ ವರ್ಗದ ಜನರಿಂದ ಬರಬೇಕು. ನಾವು ಬ್ರಿಟಿಷರನ್ನು ತೊರೆದು ಸ್ವಾತಂತ್ರ್ಯ ಪಡೆದಿದ್ದೇವೆ ಆದರೆ ಜನರು ಇನ್ನೂ ಪ್ರಜಾಪ್ರಭುತ್ವದ ನಿಜವಾದ ಅರ್ಥಕ್ಕಾಗಿ ಕಾಯುತ್ತಿದ್ದಾರೆ ಎಂದು ಹೇಳಿದರು.