Tag: Arvind Kejriwal

  • Delhi Results | ದೆಹಲಿಯ ಗದ್ದುಗೆ ಯಾರಿಗೆ? ರಾಜಧಾನಿಯಲ್ಲಿ ಕಮಲ ಅರಳುತ್ತಾ? – ಇಂದು ಪ್ರಕಟವಾಗಲಿದೆ ಫಲಿತಾಂಶ

    Delhi Results | ದೆಹಲಿಯ ಗದ್ದುಗೆ ಯಾರಿಗೆ? ರಾಜಧಾನಿಯಲ್ಲಿ ಕಮಲ ಅರಳುತ್ತಾ? – ಇಂದು ಪ್ರಕಟವಾಗಲಿದೆ ಫಲಿತಾಂಶ

    ನವದೆಹಲಿ: ದೆಹಲಿ ಗದ್ದುಗೆಯನ್ನು (Delhi Election Results) ಏರೋದ್ಯಾರು? 27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಕಮಲ ಅರಳುತ್ತಾ? ಆಮ್ ಆದ್ಮಿ ಪಕ್ಷ ಹ್ಯಾಟ್ರಿಕ್ ಗೆಲುವು ಬಾರಿಸುತ್ತಾ? ಕಾಂಗ್ರೆಸ್ ಪಕ್ಷ ಡಾರ್ಕ್ ಹಾರ್ಸ್ ರೀತಿ ಹೊರಹೊಮ್ಮುತ್ತಾ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗಳಿಗೆ ಇಂದು ಉತ್ತರ ಸಿಗಲಿದೆ.

    ಬೆಳಗ್ಗೆ ಎಂಟು ಗಂಟೆಗೆ ಮತ ಎಣಿಕೆ ಶುರುವಾಗಲಿದ್ದು, 11 ಗಂಟೆಯ ಹೊತ್ತಿಗೆ ಯಾವ ಪಕ್ಷಕ್ಕೆ ಅಧಿಕಾರ ಎನ್ನುವುದು ಬಹುತೇಕ ಗೊತ್ತಾಗಲಿದೆ. ದೆಹಲಿಯ 70 ಕ್ಷೇತ್ರಗಳಿಗೆ ಫೆಬ್ರವರಿ 5ರಂದು ನಡೆದ ಚುನಾವಣೆಯಲ್ಲಿ 60.42% ರಷ್ಟು ಮತದಾನ ನಡೆದಿತ್ತು. ಸರಳ ಬಹುಮತಕ್ಕೆ 36 ಸ್ಥಾನಗಳ ಅಗತ್ಯವಿದೆ. ಇದನ್ನೂ ಓದಿ: ಬಿಜೆಪಿಯಿಂದ ಆಪ್‌ ಅಭ್ಯರ್ಥಿಗಳಿಗೆ 15 ಕೋಟಿ ಆಫರ್‌ – ಕೇಜ್ರಿವಾಲ್‌ ನಿವಾಸಕ್ಕೆ ಎಸಿಬಿ ಭೇಟಿ, ನೋಟಿಸ್‌

    699 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಯಂತ್ರ ಸೇರಿತ್ತು. ಬಹುತೇಕ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಬಿಜೆಪಿಗೆ (BJP) ಅಧಿಕಾರ ದಕ್ಕಲಿದೆ ಎಂದು ಹೇಳಿವೆ. ಈ ಸಮೀಕ್ಷೆಗಳನ್ನು ಒಪ್ಪದ ಆಮ್ ಆದ್ಮಿ ಪಕ್ಷ ಬಿಜೆಪಿ ವಿರುದ್ಧವೇ ಆಪರೇಷನ್ ಕಮಲದ ಆರೋಪ ಮಾಡಿದೆ.

    2013 ರ ಚುನಾವಣೆಯಲ್ಲಿ ಬಿಜೆಪಿ 31, ಆಪ್‌ 28, ಕಾಂಗ್ರೆಸ್‌ 08 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ ಇತರರು ಮೂರು ಸ್ಥಾನ ಗೆದ್ದಿದ್ದರು. ಆಪ್‌ಗೆ ಕಾಂಗ್ರೆಸ್‌ ಬೆಂಬಲ ನೀಡಿದ್ದರಿಂದ ಕೇಜ್ರಿವಾಲ್‌ (Arvind Kejriwal) ಮೊದಲ ಬಾರಿಗೆ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದರು.

    ಕಳೆದ 25 ವರ್ಷಗಳಿಂದ ಮರೀಚಿಕೆಯಾಗಿರುವ ಅಧಿಕಾರವನ್ನು ದಕ್ಕಿಸಿಕೊಳ್ಳಲು ಬಿಜೆಪಿ ಸರ್ವ ಶಕ್ತಿಗಳನ್ನು ಪಣಕ್ಕೊಡಿದೆ. ದಶಕದಿಂದ ಇರುವ ಅಧಿಕಾರವನ್ನು ಉಳಿಸಿಕೊಳ್ಳಲು ಹಿಂದೆಂದಿಗಿಂತಲೂ ಹೆಚ್ಚು ಉಚಿತ ಯೋಜನೆಗಳನ್ನು ಆಪ್ (AAP) ಘೋಷಿಸಿದೆ. ಒಂದಿಷ್ಟು ಸೀಟ್‌ಗಳನ್ನಾದರೂ ಗೆದ್ದು ಮಾನ ಉಳಿಸಿಕೊಳ್ಳಲು ಕಾಂಗ್ರೆಸ್ (Congress) ಸಹ ಭರವಸೆಗಳ ಮೇಲೆ ಭರವಸೆ ನೀಡಿದೆ.

     

  • ಬಿಜೆಪಿಯಿಂದ ಆಪ್‌ ಅಭ್ಯರ್ಥಿಗಳಿಗೆ 15 ಕೋಟಿ ಆಫರ್‌ – ಕೇಜ್ರಿವಾಲ್‌ ನಿವಾಸಕ್ಕೆ ಎಸಿಬಿ ಭೇಟಿ, ನೋಟಿಸ್‌

    ಬಿಜೆಪಿಯಿಂದ ಆಪ್‌ ಅಭ್ಯರ್ಥಿಗಳಿಗೆ 15 ಕೋಟಿ ಆಫರ್‌ – ಕೇಜ್ರಿವಾಲ್‌ ನಿವಾಸಕ್ಕೆ ಎಸಿಬಿ ಭೇಟಿ, ನೋಟಿಸ್‌

    ನವದೆಹಲಿ: ಬಿಜೆಪಿ (BJP) ತನ್ನ ಅಭ್ಯರ್ಥಿಗಳನ್ನು ಖರೀದಿಸಲು ಪ್ರಯತ್ನಿಸುತ್ತಿದೆ ಎಂದು ದೆಹಲಿ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್‌ (Arvind Kejriwal) ಆರೋಪ ಮಾಡಿದ ಬೆನ್ನಲ್ಲೇ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು ಶುಕ್ರವಾರ ಭ್ರಷ್ಟಾಚಾರ ನಿಗ್ರಹ ದಳ(ACB) ತನಿಖೆಗೆ ಆದೇಶಿಸಿದ್ದಾರೆ.

    ತನಿಖೆಗೆ ಆದೇಶಿಸಿದ ಕೆಲವೇ ಗಂಟೆಗಳಲ್ಲಿ ಎಸಿಬಿ ಅಧಿಕಾರಿಗಳು ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ನಿವಾಸಕ್ಕೆ ಭೇಟಿ ನೀಡಿ ನೋಟಿಸ್‌ ನೀಡಿದ್ದಾರೆ.

    ಬಿಜೆಪಿ ಖರೀದಿಗೆ ಪ್ರಯತ್ನಿಸಿದ 16 ಆಪ್‌ ಶಾಸಕರು ಯಾರು? ಆ ಶಾಸಕರ ಫೋನ್‌ ನಂಬರ್‌ ಯಾವುದು? ಆರೋಪಕ್ಕೆ ಸಾಕ್ಷ್ಯ ನೀಡುವಂತೆ ಎಸಿಬಿ ನೋಟಿಸ್‌ನಲ್ಲಿ ತಿಳಿಸಿದೆ.

    ದೆಹಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಷ್ಣು ಮಿತ್ತಲ್ ಅವರು ಲೆಫ್ಟಿನೆಂಟ್ ಗವರ್ನರ್ ಕಚೇರಿಗೆ ಸಲ್ಲಿಸಿದ ದೂರಿನ ಆಧಾರದ ಮೇಲೆ ಎಸಿಬಿ ತನಿಖೆಗೆ ಆದೇಶಿಸುವಂತೆ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಲಾಗಿದೆ. ಇದನ್ನೂ ಓದಿ: USAID| 294 ಮಂದಿ ಬಿಟ್ಟು 13,500ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಗೇಟ್‌ಪಾಸ್‌ ನೀಡಿದ ಟ್ರಂಪ್‌!


    ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿದ ಕೇಜ್ರಿವಾಲ್‌, ವಿಧಾನಸಭಾ ಚುನಾವಣಾ ಫಲಿತಾಂಶ (Delhi Election Results) ಪ್ರಕಟವಾಗುವ ಮುನ್ನ ಬಿಜೆಪಿ 16 ಆಪ್‌ ಅಭ್ಯರ್ಥಿಗಳನ್ನು ಖರೀದಿಸಲು ಪ್ರಯತ್ನಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು.

    ಎಎಪಿ ಅಭ್ಯರ್ಥಿಗಳು ಬಿಜೆಪಿ ಸೇರಿದರೆ ಸಚಿವ ಸ್ಥಾನದ ಜೊತೆ 15 ಕೋಟಿ ರೂ.ಗಳ ನೀಡುವ ಆಫರ್‌ ನೀಡಲಾಗಿದೆ ಅವರು ಆರೋಪಿಸಿದ್ದರು.

     

  • Delhi Election | ಇಂದು 70 ಕ್ಷೇತ್ರಗಳಿಗೆ ಚುನಾವಣೆ

    Delhi Election | ಇಂದು 70 ಕ್ಷೇತ್ರಗಳಿಗೆ ಚುನಾವಣೆ

    ನವದೆಹಲಿ: ಅಸೆಂಬ್ಲಿ ಚುನಾವಣೆಯಿಂದಾಗಿ ಚಳಿಗಾಲದಲ್ಲೂ ದೆಹಲಿ ರಾಜಕೀಯ (Delhi Election) ಬಿಸಿಯೇರಿದ್ದು ಇಂದು 70 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಆರಂಭಗೊಂಡಿದೆ.

    ಬೆಳಗ್ಗೆ 7 ಗಂಟೆಯಿಂದ ಸಂಜೆ 6:30 ಗಂಟೆವರೆಗೂ ಮತದಾನ ನಡೆಯಲಿದ್ದು 1.56 ಕೋಟಿ ಮತದಾರರು ಮತ (Vote) ಚಲಾವಣೆ ಮಾಡಲಿದ್ದಾರೆ. ಒಟ್ಟು 699 ಅಭ್ಯರ್ಥಿಗಳು ಕಣದಲ್ಲಿದ್ದು ಅದೃಷ್ಟ ಪರೀಕ್ಷಿಸಿಕೊಳ್ತಿದ್ದಾರೆ. ಫೆಬ್ರವರಿ 8ಕ್ಕೆ ಫಲಿತಾಂಶ ಹೊರಬೀಳಲಿದೆ. ಇದನ್ನೂ ಓದಿ: ದ್ರಾವಿಡ್‌ ಕಾರಿಗೆ ಗುದ್ದಿದ ಗೂಡ್ಸ್‌ ಆಟೋ

     

    ಕಳೆದ 25 ವರ್ಷಗಳಿಂದ ಮರೀಚಿಕೆಯಾಗಿರುವ ಅಧಿಕಾರವನ್ನು ದಕ್ಕಿಸಿಕೊಳ್ಳಲು ಬಿಜೆಪಿ (BJP) ಸರ್ವ ಶಕ್ತಿಗಳನ್ನು ಪಣಕ್ಕೊಡಿದೆ. ದಶಕದಿಂದ ಇರುವ ಅಧಿಕಾರವನ್ನು ಉಳಿಸಿಕೊಳ್ಳಲು ಹಿಂದೆಂದಿಗಿಂತಲೂ ಹೆಚ್ಚು ಉಚಿತ ಯೋಜನೆಗಳನ್ನು ಆಪ್ (AAP) ಘೋಷಿಸಿದೆ. ಒಂದಿಷ್ಟು ಸೀಟ್‌ಗಳನ್ನಾದರೂ ಗೆದ್ದು ಮಾನ ಉಳಿಸಿಕೊಳ್ಳಲು ಕಾಂಗ್ರೆಸ್ (Congress) ಸಹ ಭರವಸೆಗಳ ಮೇಲೆ ಭರವಸೆ ನೀಡಿದೆ.

    ಆಯೋಗದ ಪಾವಿತ್ರ್ಯತೆಗೆ ಮಸಿ ಬಳಿಯಲು ಕೇಜ್ರಿವಾಲ್ ಸುಳ್ಳು ಆರೋಪ ಮಾಡ್ತಿದ್ದಾರೆ. ಆಯೋಗವನ್ನು ಒಬ್ಬರು ನಡೆಸುತ್ತಿಲ್ಲ. ಇದು ಮೂವರು ಸದಸ್ಯರು ಇರುವ ಆಯೋಗ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

  • ಚುನಾವಣಾ ಆಯೋಗ ಬಿಜೆಪಿಗೆ ಶರಣಾಗಿದೆ: ಕೇಜ್ರಿವಾಲ್‌ ವಾಗ್ದಾಳಿ

    ಚುನಾವಣಾ ಆಯೋಗ ಬಿಜೆಪಿಗೆ ಶರಣಾಗಿದೆ: ಕೇಜ್ರಿವಾಲ್‌ ವಾಗ್ದಾಳಿ

    ನವದೆಹಲಿ: ದೆಹಲಿ ಚುನಾವಣೆ (Delhi Elections) ಸಮೀಪಿಸುತ್ತಿದ್ದಂತೆ ರಾಜಕೀಯ ಜಟಾಪಟಿ ದಿನೇ ದಿನೇ ಕಾವೇರುತ್ತಿದೆ. ಚುನಾವಣಾ ಆಯೋಗವು ಬಿಜೆಪಿ ಎದುರು ಶರಣಾಗಿದೆ ಎಂದು ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ವಾಗ್ದಾಳಿ ನಡೆಸಿದ್ದಾರೆ.

    ಭಾರತೀಯ ಚುನಾವಣಾ ಆಯೋಗವನ್ನು ಗುರಿಯಾಗಿಟ್ಟುಕೊಂಡು ದೆಹಲಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ದುಷ್ಕೃತ್ಯದ ವಿರುದ್ಧ ಕಾರ್ಯನಿರ್ವಹಿಸಲು ಆಯೋಗ ವಿಫಲವಾಗಿದೆ. ಇದನ್ನೆಲ್ಲಾ ಗಮನಿಸಿದ್ರೆ ಚುನಾವಣಾ ಆಯೋಗ ಅಸ್ತಿತ್ವದಲ್ಲಿಲ್ಲ ಎಂದು ತೋರುತ್ತದೆ. ಇದೊಂದು ರೀತಿಯಲ್ಲಿ ಬಹಳ ದೊಡ್ಡ ಪ್ರಶ್ನೆಯನ್ನ ಹುಟ್ಟುಹಾಕುತ್ತಿದೆ ಅಂದರು. ಇದನ್ನೂ ಓದಿ: ಬೆಂಗಳೂರಿಗೆ 2ನೇ ವಿಮಾನ ನಿಲ್ದಾಣ ಅಗತ್ಯ – ಹೆಚ್‌ಡಿಡಿ ಮನವಿಗೆ ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ 

    ಇದೇ ತಿಂಗಳ ಕೊನೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನಿವೃತ್ತರಾಗುತ್ತಿದ್ದಾರೆ. ನಿವೃತ್ತಿಯ ನಂತರ ಅವರಿಗೆ ರಾಜ್ಯಪಾಲರ ಹುದ್ದೆ, ರಾಷ್ಟ್ರಪತಿ ಹುದ್ದೆ ನೀಡಬಹುದು. ಹೀಗಾಗಿ ನಾನು ರಾಜೀವ್ ಕುಮಾರ್ ಅವರನ್ನ ಕೈಮುಗಿದು ಕೇಳಿಕೊಳ್ಳುತ್ತೇನೆ. ನಿಮ್ಮ ಕರ್ತವ್ಯವನ್ನ ನಿರ್ವಹಿಸಿ ಯಾವುದೇ ಹುದ್ದೆಯ ದುರಾಸೆಯನ್ನ ಬಿಟ್ಟುಬಿಡಿ ಎಂದು ಮನವಿ ಮಾಡಿದ್ರು.

    ನಿಮ್ಮ ವೃತ್ತಿಜೀವನದ ಕೊನೆಯಲ್ಲಿ, ದೇಶವನ್ನು ಮತ್ತು ದೇಶದ ಪ್ರಜಾಪ್ರಭುತ್ವವನ್ನು ನಾಶ ಮಾಡಬೇಡಿ ಎಂದು ನೇರ ವಾಗ್ದಾಳಿ ನಡೆಸಿದ್ರು. ಇದನ್ನೂ ಓದಿ: ಭಾರತದ ಗಡಿಯೊಳಗೆ ಚೀನಾ ಪ್ರವೇಶ ಮಾಡಿರುವುದೇ ʻಮೇಕ್ ಇನ್ ಇಂಡಿಯಾʼ ವೈಫಲ್ಯಕ್ಕೆ ಕಾರಣ: ರಾಗಾ ವಾಗ್ದಾಳಿ

  • ದೆಹಲಿ ಚುನಾವಣೆಗೆ 4 ದಿನ ಇರುವಾಗಲೇ ಶಾಕ್‌ – ಆಪ್‌ನ 8 ಮಂದಿ ನಿರ್ಗಮಿತ ಶಾಸಕರು ಬಿಜೆಪಿ ಸೇರ್ಪಡೆ

    ದೆಹಲಿ ಚುನಾವಣೆಗೆ 4 ದಿನ ಇರುವಾಗಲೇ ಶಾಕ್‌ – ಆಪ್‌ನ 8 ಮಂದಿ ನಿರ್ಗಮಿತ ಶಾಸಕರು ಬಿಜೆಪಿ ಸೇರ್ಪಡೆ

    ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ (Delhi Polls) ಇನ್ನೂ ನಾಲ್ಕು ದಿನಗಳು ಬಾಕಿಯಿರುವ ಹೊತ್ತಿನಲ್ಲೇ ಆಮ್‌ ಆದ್ಮಿ ಪಕ್ಷಕ್ಕೆ ದೊಡ್ಡ ಶಾಕ್‌ ಆಗಿದೆ. ಒಂದು ದಿನದ ಹಿಂದೆಯಷ್ಟೇ ಎಎಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ 8 ಮಂದಿ ನಿರ್ಗಮಿತ ಶಾಸಕರು ಶನಿವಾರ (ಇಂದು) ಬಿಜೆಪಿ (BJP) ಸೇರ್ಪಡೆಯಾಗಿದ್ದಾರೆ.

    ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಟಿಕೆಟ್‌ ಸಿಗದಿದ್ದಕ್ಕೆ ಕೋಪಗೊಂಡು ರಾಜೀನಾಮೆ ನೀಡಿದ್ದ ವಂದನಾ ಗೌರ್ (ಪಾಲಂ ಕ್ಷೇತ್ರದ ಶಾಸಕ), ರೋಹಿತ್ ಮೆಹ್ರಾಲಿಯಾ (ತ್ರಿಲೋಕಪುರಿ), ಗಿರೀಶ್ ಸೋನಿ (ಮದೀಪುರ), ಮದನ್ ಲಾಲ್ (ಕಸ್ತೂರ್ಬಾ ನಗರ), ರಾಜೇಶ್ ರಿಷಿ (ಉತ್ತಮ ನಗರ), ಬಿ ಎಸ್ ಜೂನ್ (ಬಿಜ್ವಾಸನ್), ನರೇಶ್ ಯಾದವ್ (ಮೆಹ್ರಾಲಿ) ಮತ್ತು ಪವನ್ ಶರ್ಮಾ (ಆದರ್ಶ ನಗರ) ಬಿಜೆಪಿ ಸೇರ್ಪಡೆಯಾಗಿದ್ದಾರೆ.

    ಎಎಪಿಗೆ ರಾಜೀನಾಮೆ ನೀಡಿದ ನಂತರ, ಸದನದ ಸದಸ್ಯತ್ವವನ್ನು ತ್ಯಜಿಸಿ ವಿಧಾನಸಭೆ ಸ್ಪೀಕರ್‌ಗೆ ರಾಜೀನಾಮೆ ಶುಕ್ರವಾರ ಪತ್ರಗಳನ್ನು ಕಳುಹಿಸಲಾಗಿತ್ತು. ಇದನ್ನೂ ಓದಿ: Union Budget: ಬಜೆಟ್‌ ಮಂಡಿಸಿ ಇತಿಹಾಸ ಬರೆಯಲಿದ್ದಾರೆ ನಿರ್ಮಲಾ ಸೀತಾರಾಮನ್‌

    ಎಎಪಿ ಮಾಜಿ ಶಾಸಕ ವಿಜೇಂದರ್ ಗಾರ್ಗ್ ಮತ್ತು ನಿರ್ಗಮಿತ ಎಎಪಿ ನಾಯಜರು ದೆಹಲಿ ಬಿಜೆಪಿಯ ಉಸ್ತುವಾರಿ ಬೈಜಯಂತ್ ಪಾಂಡಾ ಮತ್ತು ರಾಜ್ಯಾಧ್ಯಕ್ಷ ವೀರೇಂದ್ರ ಸಚ್‌ದೇವ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇದನ್ನೂ ಓದಿ: ಸೋನಿಯಾ ಗಾಂಧಿ ಹೇಳಿಕೆಯಿಂದ ರಾಷ್ಟ್ರಪತಿ ಹುದ್ದೆಯ ಘನತೆಗೆ ಘಾಸಿ – ರಾಷ್ಟ್ರಪತಿ ಭವನ ಪ್ರತಿಕ್ರಿಯೆ

  • ದೆಹಲಿ ಚುನಾವಣೆ ಹೊತ್ತಲ್ಲೇ ಎಎಪಿಗೆ ಶಾಕ್‌ – ಟಿಕೆಟ್‌ ಸಿಗದಿದ್ದಕ್ಕೆ ಸಿಟ್ಟಿಗೆದ್ದು 7 ಮಂದಿ ಶಾಸಕರು ರಾಜೀನಾಮೆ

    ದೆಹಲಿ ಚುನಾವಣೆ ಹೊತ್ತಲ್ಲೇ ಎಎಪಿಗೆ ಶಾಕ್‌ – ಟಿಕೆಟ್‌ ಸಿಗದಿದ್ದಕ್ಕೆ ಸಿಟ್ಟಿಗೆದ್ದು 7 ಮಂದಿ ಶಾಸಕರು ರಾಜೀನಾಮೆ

    ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಟಿಕೆಟ್‌ ಸಿಗದಿದ್ದಕ್ಕೆ ಕೋಪಗೊಂಡು 7 ಮಂದಿ ಎಎಪಿ ಶಾಸಕರು ರಾಜೀನಾಮೆ ನೀಡಿದ್ದಾರೆ.

    ನರೇಶ್ ಯಾದವ್ (ಮೆಹ್ರೌಲಿ), ರೋಹಿತ್ ಕುಮಾರ್ (ತ್ರಿಲೋಕಪುರಿ), ರಾಜೇಶ್ ರಿಷಿ (ಜನಕಪುರಿ), ಮದನ್ ಲಾಲ್ (ಕಸ್ತೂರ್ಬಾ ನಗರ), ಪವನ್ ಶರ್ಮಾ (ಆದರ್ಶ ನಗರ), ಮತ್ತು ಭಾವನಾ ಗೌಡ್ (ಪಾಲಂ). ಬಿಎಸ್ ಜೂನ್ (ಬಿಜ್ವಾಸನ್) ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.

    ಪಾಲಂ ಶಾಸಕಿ ಭಾವನಾ ಗೌರ್ ಅವರು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ, ‌’ಕೇಜ್ರಿವಾಲ್ ಮತ್ತು ಪಕ್ಷದ ಮೇಲಿನ ನಂಬಿಕೆಯನ್ನು ಕಳೆದುಕೊಂಡ ಕಾರಣ ರಾಜೀನಾಮೆ ನೀಡುತ್ತಿರುವುದಾಗಿ’ ತಿಳಿಸಿದ್ದಾರೆ.

  • ಯಮುನೆಗೆ ವಿಷ – ಕೇಜ್ರಿವಾಲ್ ಉತ್ತರಕ್ಕೆ ಚುನಾವಣಾ ಆಯೋಗದ ಅತೃಪ್ತಿ, ಮಾಜಿ ಸಿಎಂ ಮತ್ತೆ ಕಿಡಿ

    ಯಮುನೆಗೆ ವಿಷ – ಕೇಜ್ರಿವಾಲ್ ಉತ್ತರಕ್ಕೆ ಚುನಾವಣಾ ಆಯೋಗದ ಅತೃಪ್ತಿ, ಮಾಜಿ ಸಿಎಂ ಮತ್ತೆ ಕಿಡಿ

    ನವದೆಹಲಿ: ಯಮುನಾ ನದಿಗೆ ಹರಿಯಾಣ ಸರ್ಕಾರ ವಿಷ ಬೆರೆಸುತ್ತಿದೆ ಎಂದು ದೆಹಲಿ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್‌ ಮಾಡಿರುವ ಆರೋಪವು ಜನರ ಮನಸಿನಲ್ಲಿ ʻಶಾಶ್ವತ ಗಾಯʼವನ್ನುಂಟು ಮಾಡಬಹುದು ಎಂದು ಚುನಾವಣಾ ಆಯೋಗ (ಇಸಿ) ಗುರುವಾರ ಹೇಳಿದೆ.

    ಈ ಆರೋಪದ ಬಗ್ಗೆ ಸೂಕ್ತ ವಿವರಣೆ ನೀಡಲು ಕೇಜ್ರಿವಾಲ್‌ ಅವರಿಗೆ ಮತ್ತೊಂದು ನೋಟಿಸ್‌ ನೀಡಿದೆ. ಬಿಜೆಪಿ ಆಡಳಿತವಿರುವ ಹರಿಯಾಣ ರಾಜ್ಯದಿಂದ ಇತ್ತೀಚಿನ ದಿನಗಳಲ್ಲಿ ಪಡೆದ ನೀರು ಅತ್ಯಂತ ವಿಷಕಾರಿಯಾಗಿದ್ದು, ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕವಾಗಿದೆ ಎಂದು ಕೇಜ್ರಿವಾಲ್‌ ಅವರು ಇಸಿಯ ಮೊದಲ ನೋಟಿಸ್‌ಗೆ ನೀಡಿರುವ 14 ಪುಟಗಳ ಉತ್ತರದಲ್ಲಿ ಪ್ರತಿಕ್ರಿಯಿಸಿದ ಮರು ದಿನವೇ ಇಸಿ ಈ ರೀತಿ ಹೇಳಿದೆ.

    ಇಸಿಯ ಈ ನಡೆಗೆ ಕಿಡಿಕಾರಿರುವ ಕೇಜ್ರಿವಾಲ್‌, ಚುನಾವಣಾ ಆಯೋಗದ ಮುಖ್ಯಸ್ಥರಾದ ಮುಖ್ಯಸ್ಥ ರಾಜೀವ್‌ಕುಮಾರ್ ಅವರು ರಾಜಕೀಯ ಆಟ ಆಡುತ್ತಿದ್ದಾರೆ. ಅವರು ಇಸಿಯ ವಿಶ್ವಾಸಾರ್ಹತೆಯನ್ನು ನಾಶಪಡಿಸುತ್ತಿದ್ದಾರೆ. ಅಲ್ಲದೇ, ನಿವೃತ್ತಿಯ ನಂತರ ಅಧಿಕಾರ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಆರೋಪಿಸಿದರು.

    ಇಸಿಯಿಂದ 2ನೇ ನೋಟಿಸ್‌ ಬರುತ್ತಿದ್ದಂತೆ ಕೇಜ್ರಿವಾಲ್‌, ಎಎಪಿಯ ಪ್ರತಿಸ್ಪರ್ಧಿ ಅಭ್ಯರ್ಥಿಗಳ ಹಣ ಹಂಚಿಕೆ ಮತ್ತು ಇನ್ನಿತರ ಉಡುಗೊರೆಗಳಿಗೆ ಮತದಾರರರು ಮಾರುಹೋಗುವುದು ಕಾಣಿಸುತ್ತಿಲ್ಲ. ಹಾಗಾಗಿ ಇಸಿ ಇಂತಹ ರಾಜಕೀಯ ಆಟ ಆಡುತ್ತಿದೆ ಎಂದು ಆರೋಪಿಸಿದರು.

    ಕೇಜ್ರಿವಾಲ್‌ ಅವರು ನೋಟಿಸ್‌ಗೆ ನೀಡಿರುವ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಇಸಿ, ‘ನದಿ ನೀರು ವಿಷಮಯವಾಗುತ್ತಿರುವುದು ಮತ್ತು ಹೆಚ್ಚುತ್ತಿರುವ ಅಮೋನಿಯಾ ಬಳಕೆ ಚಾಲ್ತಿಯಲ್ಲಿರುವ, ದೀರ್ಘಕಾಲದ ಹಾಗೂ ಕಾನೂನಾತ್ಮಕವಾದ ಆಡಳಿತ ಸಮಸ್ಯೆಯಾಗಿದೆ. ಇದನ್ನು ಬೆರೆಸುವುದು ಸರಿಯಲ್ಲ. ಅಲ್ಲದೆ, ಕೇಜ್ರಿವಾಲ್‌ ಮಾಡಿರುವ ಆರೋಪಗಳು ಜನರ ನಡುವೆ ದ್ವೇಷ ಪ್ರಚೋದಿಸುತ್ತವೆ. ಸಾರ್ವಜನಿಕ ಶಾಂತಿಗೂ ಭಂಗ ತರಲಿವೆ. ತಮ್ಮ ಆರೋಪಗಳಿಗೆ ಸಂಬಂಧಿಸಿ ಸೂಕ್ತ ಸಾಕ್ಷ್ಯ ಮತ್ತು ವಿವರಣೆಯನ್ನು ನೀಡುವಂತೆ 2ನೇ ನೋಟಿಸ್‌ನಲ್ಲಿ ತಾಕೀತು ಮಾಡಿದೆ.

  • ಮೆಟ್ರೋ ಟಿಕೆಟ್‌ ದರದಲ್ಲಿ 50% ರಿಯಾಯಿತಿ, ಉಚಿತ ವಿದ್ಯುತ್‌, ನೀರು – ದೆಹಲಿ ಚುನಾವಣೆಗೆ 15 ಗ್ಯಾರಂಟಿ ಘೋಷಿಸಿದ ಕೇಜ್ರಿವಾಲ್

    ಮೆಟ್ರೋ ಟಿಕೆಟ್‌ ದರದಲ್ಲಿ 50% ರಿಯಾಯಿತಿ, ಉಚಿತ ವಿದ್ಯುತ್‌, ನೀರು – ದೆಹಲಿ ಚುನಾವಣೆಗೆ 15 ಗ್ಯಾರಂಟಿ ಘೋಷಿಸಿದ ಕೇಜ್ರಿವಾಲ್

    ನವದೆಹಲಿ: ಮುಂದಿನ ಫೆ.5ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ (Arvind Kejriwal) ಅವರು 15 ಗ್ಯಾರಂಟಿಗಳನ್ನೊಳಗೊಂಡ ಎಎಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

    ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಯುವಕರಿಗೆ ಉದ್ಯೋಗ, ಮಹಿಳೆಯರಿಗೆ ಮಹಿಳಾ ಸಮ್ಮಾನ್ ಯೋಜನೆ, 24 ಗಂಟೆ ಉಚಿತ ನೀರು, ಉಚಿತ ವಿದ್ಯುತ್‌, ದಲಿತ ವಿದ್ಯಾರ್ಥಿಗಳಿಗಾಗಿ ಅಂಬೇಡ್ಕರ್ ಸ್ಕಾಲರ್‌ ಶಿಪ್, ಯಮುನಾ ನದಿ ಶುದ್ಧೀಕರಣ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೆ ತರುವುದಾಗಿ ʻಕೇಜ್ರವಾಲ್ ಕಿ ಗ್ಯಾರಂಟಿʼ (Kejriwal Ki Guarantee) ಹೆಸರಿನ ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ.

    ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ಮತ್ತು ಮೆಟ್ರೋ ಪ್ರಯಾಣ ದರದಲ್ಲಿ (Metro Ticket Price) ಶೇ.50ರಷ್ಟು ರಿಯಾಯಿತಿ ನೀಡುವುದಾಗಿಯೂ ಭರವಸೆ ನೀಡಿದ ಕೇಜ್ರಿವಾಲ್‌ ಇದು ಮೋದಿ ಅವರ ʻನಕಲಿ ಗ್ಯಾರಂಟಿʼ ಅಲ್ಲ ʻಕೇಜ್ರಿವಾಲ್‌ ಕೀ ಗ್ಯಾರಟಿʼ ಅಂತ ಹೇಳಿದ್ದಾರೆ.

    ಎಎಪಿಯ 15 ಗ್ಯಾರಂಟಿಗಳು ಯಾವುವು?
    * ಉದ್ಯೋಗದ ಖಾತ್ರಿ
    * ಮಹಿಳಾ ಗೌರವ ಯೋಜನೆ – ಪ್ರತಿ ಮಹಿಳೆಗೆ ತಿಂಗಳಿಗೆ 2,100 ರೂ.
    * ಸಂಜೀವನಿ ಯೋಜನೆ – 60 ವರ್ಷ ಮೇಲ್ಪಟ್ಟವರಿಗೆ ಉಚಿತ ಚಿಕಿತ್ಸೆ
    * ತಪ್ಪಾಗಿ ಬಂದ ನೀರಿನ ಬಿಲ್‌ ಮನ್ನಾ
    * 24 ಗಂಟೆ ನೀರು ಪೂರೈಕೆ
    * ಯುರೋಪ್‌ ಮಾದರಿಯಲ್ಲೇ ರಸ್ತೆ ಅಭಿವೃದ್ಧಿ
    * ಯಮುನಾ ನದಿ ಶುದ್ಧೀಕರಣ
    * ಡಾ.ಅಂಬೇಡ್ಕರ್ ವಿದ್ಯಾರ್ಥಿವೇತನ ಯೋಜನೆ
    * ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ, ದೆಹಲಿ ಮೆಟ್ರೋದಲ್ಲಿ 50% ರಿಯಾಯಿತಿ
    * ಅರ್ಚಕರಿಗೆ 18,000 ಸಾವಿರ ರೂ.
    * ಬಾಡಿಗೆದಾರರಿಗೆ ಉಚಿತ ವಿದ್ಯುತ್ ಮತ್ತು ನೀರು
    * ಒಳಚರಂಡಿ ಶುದ್ಧೀಕರಣ
    * ಪಡಿತರ ಚೀಟಿ
    * ಆಟೋ, ಟ್ಯಾಕ್ಸಿ ಮತ್ತು ಇ-ರಿಕ್ಷಾ ಚಾಲಕರ ಮಗಳ ಮದುವೆಗೆ 1 ಲಕ್ಷ ರೂ., ಮಕ್ಕಳಿಗೆ ಉಚಿತ ತರಬೇತಿ, ಜೀವ ವಿಮೆ
    * RWA ಗಳಿಗೆ (ವಸತಿ ಕಲ್ಯಾಣ ಸಂಘಗಳು) ಖಾಸಗಿ ಭದ್ರತಾ ಸಿಬ್ಬಂದಿ ಒದಗಿಸಲಾಗುವುದು.

  • ಆಪ್ ಅಧಿಕಾರಕ್ಕೆ ಬಂದ್ರೆ ಮನೀಶ್ ಸಿಸೋಡಿಯಾ ಮತ್ತೊಮ್ಮೆ ಡಿಸಿಎಂ: ಕೇಜ್ರಿವಾಲ್

    ಆಪ್ ಅಧಿಕಾರಕ್ಕೆ ಬಂದ್ರೆ ಮನೀಶ್ ಸಿಸೋಡಿಯಾ ಮತ್ತೊಮ್ಮೆ ಡಿಸಿಎಂ: ಕೇಜ್ರಿವಾಲ್

    ನವದೆಹಲಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವೂ (AAP) ಅಧಿಕಾರ ಉಳಿಸಿಕೊಂಡಿರೆ ಮನೀಶ್ ಸಿಸೋಡಿಯಾ (Manish Sisodia) ಮತ್ತೆ ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಘೋಷಿಸಿದ್ದಾರೆ.

    ಜಂಗ್‌ಪುರ ಕ್ಷೇತ್ರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅರವಿಂದ್ ಕೇಜ್ರಿವಾಲ್ ಈ ಘೋಷಣೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿಸೋಡಿಯಾ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗುತ್ತಾರೆ ಮತ್ತು ಅವರೊಂದಿಗೆ ನೀವೆಲ್ಲರೂ ಉಪಮುಖ್ಯಮಂತ್ರಿಗಳಾಗುತ್ತೀರಿ. ಹೀಗಾಗಿ ನೀವು ಮನೀಶ್ ಸಿಸೋಡಿಯಾ ಅವರನ್ನು ಆಯ್ಕೆ ಮಾಡಬೇಕು ಎಂದು ಮತದಾರರಿಗೆ ಮನವಿ ಮಾಡಿದರು. ಇದನ್ನೂ ಓದಿ: MUDA Scam| ಸಿಎಂಗೆ ಸಂಕಷ್ಟ – ವಿಚಾರಣೆಗೆ ಹಾಜರಾಗುವಂತೆ ಪತ್ನಿಗೆ ಇಡಿ ಸಮನ್ಸ್‌

    ಹಾಲಿ ಎಎಪಿ ಸರ್ಕಾರದ ಬಹುಪಾಲು ಅವಧಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಉಪನಾಯಕರಾಗಿ ಸೇವೆ ಸಲ್ಲಿಸಿದ ಮನೀಶ್ ಸಿಸೋಡಿಯಾ ಅವರನ್ನು ಮಾರ್ಚ್ 2023ರಲ್ಲಿ ದೆಹಲಿ ಮದ್ಯದ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಯಿತು. ನಂತರ ಅವರು ರಾಜೀನಾಮೆ ನೀಡಿದರು. ಸಿಸೋಡಿಯಾ ಪ್ರಸುತ್ತ ಪತ್ಪರ್‌ಗಂಜ್‌ನಿಂದ ಶಾಸಕರಾಗಿದ್ದಾರೆ. ಆದರೆ ಈ ವಿಧಾನಸಭಾ ಚುನಾವಣೆಯಲ್ಲಿ ಜಂಗ್‌ಪುರದಿಂದ ಸ್ಪರ್ಧಿಸುತ್ತಿದ್ದಾರೆ ಎಂದರು. ಇದನ್ನೂ ಓದಿ: ಮದುವೆ, ವಿಚ್ಛೇದನ, ಆಸ್ತಿ.. ಎಲ್ಲಾ ಧರ್ಮಿಯರಿಗೆ ಒಂದೇ ಕಾನೂನು: ಇಂದಿನಿಂದ ಉತ್ತರಾಖಂಡದಲ್ಲಿ UCC ಜಾರಿ

    ಈ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರು ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದ್ದಾರೆ. ಕಳೆದ ಬಾರಿ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಗೆದ್ದಿದ್ದರು. ಅವರವರ ಕ್ಷೇತ್ರದಲ್ಲಿ ಯಾವುದೇ ಕಾಮಗಾರಿ ನಡೆಯಲು ಬಿಡಲಿಲ್ಲ. ಎಂಟು ಮಂದಿಯೂ ತಮ್ಮ ವಿಧಾನಸಭೆಯನ್ನು ನರಕವನ್ನಾಗಿಸಿದ್ದಾರೆ. ನೀವು ಇಂತಹ ತಪ್ಪು ಮಾಡಬೇಡಿ ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದರು. ಇದನ್ನೂ ಓದಿ: ಮಂತ್ರಾಲಯ ರಾಯರ ಮಠದ ಹೆಸರಿನಲ್ಲಿ ವಂಚಕರ ಜಾಲ – ನಕಲಿ ಯುಪಿಐ ಐಡಿಗಳ ಮೂಲಕ ಭಕ್ತರಿಗೆ ವಂಚನೆ

    ಮನೀಶ್ ಸಿಸೋಡಿಯಾ ಅವರ ಕೊಡುಗೆ ಬಗ್ಗೆ ಮಾತನಾಡಿದ ಅರವಿಂದ್ ಕೇಜ್ರಿವಾಲ್, ಮನೀಷ್ ಸಿಸೋಡಿಯಾ ಮತ್ತು ನಾನು ಒಟ್ಟಾಗಿ ನಿಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಸರ್ಕಾರಿ ಶಾಲೆಗಳನ್ನು ಅತ್ಯುತ್ತಮವಾಗಿ ಮಾಡಿದ್ದೇವೆ. ಈಗ ತಮ್ಮ ಸರ್ಕಾರ ರಚನೆಯಾದರೆ ಇಲ್ಲಿರುವ ಎಲ್ಲಾ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತೇವೆ ಎಂದು ಬಿಜೆಪಿ ಹೇಳುತ್ತಿದೆ. ಇದನ್ನೂ ಓದಿ: ಮೈಸೂರು| ಮೈಕ್ರೋ ಫೈನಾನ್ಸ್ ಸಾಲಕ್ಕೆ ಹೆದರಿ ಮಹಿಳೆ ಆತ್ಮಹತ್ಯೆ!

    ಎಎಪಿ ಸರ್ಕಾರಿ ಶಾಲೆಗಳನ್ನು ನಿರ್ಮಿಸುತ್ತದೆ. ಬಿಜೆಪಿ ‘ಅವುಗಳನ್ನು ಮುಚ್ಚುವ’ ನಿರ್ಧಾರ ಮಾಡಿದೆ. ಯಾರನ್ನು ಆಯ್ಕೆ ಮಾಡುತ್ತೀರಿ ಎಂಬುದು ನಿಮಗೆ ಬಿಟ್ಟದ್ದು. ಜಂಗ್‌ಪುರದಲ್ಲಿ ಆಪ್ ಗೆದ್ದರೆ ಇಲ್ಲಿನ ಪ್ರತಿಯೊಬ್ಬ ಸಹೋದರ ಸಹೋದರಿಯರೂ ಉಪಮುಖ್ಯಮಂತ್ರಿಯಾಗುತ್ತಾರೆ. ಇಲ್ಲಿನ ಜನರ ಕೆಲಸವನ್ನು ತಡೆಯುವ ಧೈರ್ಯ ಯಾರಿಗೂ ಬರುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ನಡೆಯುವ ಅಮೃತ ಸ್ನಾನದ ವಿಶೇಷತೆ, ಹಿನ್ನೆಲೆ ಏನು?

  • ದೆಹಲಿ ಮಾಜಿ ಸಿಎಂ ಕೇಜ್ರಿವಾಲ್‌ ಬಳಿ ಸ್ವಂತ ಮನೆ, ಕಾರು ಇಲ್ಲ

    ದೆಹಲಿ ಮಾಜಿ ಸಿಎಂ ಕೇಜ್ರಿವಾಲ್‌ ಬಳಿ ಸ್ವಂತ ಮನೆ, ಕಾರು ಇಲ್ಲ

    * 1.7 ಕೋಟಿ ಆಸ್ತಿ ಘೋಷಿಸಿಕೊಂಡ ಕೇಜ್ರಿವಾಲ್‌ – ಯಾರಿಂದಲೂ ಸಾಲ ಪಡೆದಿಲ್ಲ

    ನವದೆಹಲಿ: ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (AAP) ನಾಯಕ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಆಸ್ತಿ ವಿವರ ಘೋಷಿಸಿಕೊಂಡಿದ್ದಾರೆ.

    ಕೇಜ್ರಿವಾಲ್‌ ಅವರು ನವದೆಹಲಿ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಆಸ್ತಿ ವಿವರ ಘೋಷಿಸಿದ್ದಾರೆ. ಮಾಜಿ ಸಿಎಂ ಬಳಿ 40,000 ರೂ. ನಗದು ಹಾಗೂ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಬಳಿ 32,000 ನಗದು ಇದೆ ಎಂದು ವರದಿ ಮಾಡಿದ್ದಾರೆ. ಅವರ ಚರ ಆಸ್ತಿ 3.46 ಲಕ್ಷ ರೂ., ಸುನೀತಾ ಅವರ ಚರ ಆಸ್ತಿ 1 ಕೋಟಿ ರೂ. ಇದೆ.

    ಮಾಜಿ ಸಿಎಂ ಕೇಜ್ರಿವಾಲ್ ಕೂಡ 1.7 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿ ಹೊಂದಿದ್ದಾರೆ. ಸುನೀತಾ 1.5 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಅರವಿಂದ್ ಕೇಜ್ರಿವಾಲ್ ಬಳಿ ಸ್ವಂತ ಕಾರು ಅಥವಾ ಮನೆ ಇಲ್ಲ. ಆದರೆ, ಸುನೀತಾ 2017 ರ ಮಾಡೆಲ್ ಮಾರುತಿ ಬಲೆನೊ ಕಾರು ಹೊಂದಿದ್ದಾರೆ.

    ಸುನೀತಾ ಬಳಿ 320 ಗ್ರಾಂ ಚಿನ್ನ ಸೇರಿದಂತೆ 25.9 ಲಕ್ಷ ರೂ. ಮೌಲ್ಯದ ಆಭರಣಗಳಿವೆ ಎಂದು ಅಫಿಡವಿಟ್ ಬಹಿರಂಗಪಡಿಸಿದೆ. ದಂಪತಿ ಯಾವುದೇ ರೀತಿಯ ಸಾಲ ಮಾಡಿಲ್ಲ.

    2023-24ರ ಆದಾಯಕ್ಕೆ ಸಂಬಂಧಿಸಿದಂತೆ, ಕೇಜ್ರಿವಾಲ್‌ಗೆ ಶಾಸಕಾಂಗ ವೇತನದಿಂದ 7,21,530 ರೂ. ಬರುತ್ತದೆ. ಸುನೀತಾ ಅವರ ಪಿಂಚಣಿಯಿಂದ 14,10,740 ರೂ. ಗಳಿಸಿದ್ದಾರೆ. ಸುನೀತಾ ಗುರುಗ್ರಾಮದಲ್ಲಿ ಒಂದು ಮನೆಯನ್ನು ಹೊಂದಿದ್ದಾರೆ ಎಂದು ಅಫಿಡವಿಟ್ ಬಹಿರಂಗಪಡಿಸುತ್ತದೆ.

    ಕೇಜ್ರಿವಾಲ್‌ 14 ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇದರಲ್ಲಿ 2014 ರ ಅಮೇಥಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಒಂದು ಪ್ರಕರಣ ಮತ್ತು ದೆಹಲಿ ಅಬಕಾರಿ ನೀತಿಯ ಅನುಷ್ಠಾನದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಇತರ ಪ್ರಕರಣಗಳು ಸೇರಿವೆ.

    ಫೆ.5 ರಂದು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಬುಧವಾರ ಸಲ್ಲಿಸಿದ ಅಫಿಡವಿಟ್‌ನಲ್ಲಿ ಈ ಬಾಕಿ ಇರುವ ಪ್ರಕರಣಗಳನ್ನು ಬಹಿರಂಗಪಡಿಸಲಾಗಿದೆ. 2020 ರ ಚುನಾವಣಾ ಅಫಿಡವಿಟ್‌ನಲ್ಲಿ, ಕೇಜ್ರಿವಾಲ್ 13 ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಉಲ್ಲೇಖಿಸಿದ್ದರು.