Tag: Arvind Kejriwal

  • ಆಪ್ ನಾಯಕರ ಬಂಧನ – ಹೋಳಿ ತೊರೆದು ಧ್ಯಾನ ಆರಂಭಿಸಿದ ಕೇಜ್ರಿವಾಲ್

    ಆಪ್ ನಾಯಕರ ಬಂಧನ – ಹೋಳಿ ತೊರೆದು ಧ್ಯಾನ ಆರಂಭಿಸಿದ ಕೇಜ್ರಿವಾಲ್

    ನವದೆಹಲಿ: ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ (AAP) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ದೇಶಕ್ಕಾಗಿ ಪ್ರಾರ್ಥನೆಯನ್ನು ಪ್ರಾರಂಭಿಸಿದ್ದಾರೆ. ಪಕ್ಷದ ನಾಯಕರಾದ ಸತ್ಯೇಂದ್ರ ಜೈನ್ (Satyendar Jain) ಮತ್ತು ಮನೀಶ್ ಸಿಸೋಡಿಯಾ (Manish Sisodia) ಬಂಧನವನ್ನು ಖಂಡಿಸಿ ಅವರು ಹೋಳಿಯನ್ನು (Holi) ಆಚರಿಸದೆ ಧ್ಯಾನ ಆರಂಭಿಸಿದ್ದಾರೆ.

    ಬೆಳಗ್ಗೆ 10 ಗಂಟೆಯಿಂದ ಸಂಜೆ ಐದು ಗಂಟೆವರೆಗೂ ದೇಶದ ಒಳಿತಿಗಾಗಿ ಧ್ಯಾನ ಮಾಡುವುದಾಗಿ ಅವರು ಮಂಗಳವಾರ ಹೇಳಿದ್ದರು. ಅಂತೆಯೇ ಕೇಜ್ರಿವಾಲ್ ಧ್ಯಾನ ಆರಂಭಿಸಿದ್ದಾರೆ. ಇದಕ್ಕೂ ಮೊದಲು ಅವರು ರಾಜಘಾಟ್‌ಗೆ ತೆರಳಿ ಮಹಾತ್ಮಗಾಂಧಿ ಸ್ಮಾರಕಕ್ಕೆ ನಮನ ಸಲ್ಲಿಸಿದರು‌.

    ಶಾಲೆ ಕಾಲೇಜು, ಆಸ್ಪತ್ರೆಗಳನ್ನು ಕಟ್ಟುವ ನಾಯಕರನ್ನು ಜೈಲಿಗೆ ಕಳುಹಿಸಲಾಗುತ್ತಿದೆ. ದೇಶವನ್ನು ದರೋಡೆ ಮಾಡುವ ಜನರನ್ನು ಪ್ರಧಾನಿ ನರೇಂದ್ರ ಮೋದಿ ಅಪ್ಪಿಕೊಳ್ಳುತ್ತಿದ್ದಾರೆ. ಇದು ಆತಂಕಕಾರಿ ಬೆಳವಣಿಗೆ ಎಂದು ಅವರು ಹೇಳಿದ್ದಾರೆ. ಜೈನ್ ಮತ್ತು ಸಿಸೋಡಿಯಾ ಜೈಲಿನಲ್ಲಿರುವ ಬಗ್ಗೆ ನನಗೆ ಆತಂಕವಿಲ್ಲ. ಅವರು ಧೈರ್ಯಶಾಲಿಗಳು ಮತ್ತು ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಲು ಸಿದ್ಧರಾಗಿದ್ದಾರೆ. ಆದರೆ ದೇಶದ ದುರದೃಷ್ಟಕರ ಸ್ಥಿತಿಯು ನನ್ನನ್ನು ಚಿಂತೆಗೀಡು ಮಾಡಿದೆ. ಇದನ್ನೂ ಓದಿ: ಮೀಸಲು ಅರಣ್ಯದಲ್ಲಿ 60ಕ್ಕೂ ಹೆಚ್ಚು ಫೈರಿಂಗ್ ಕಾಟ್ರೇಜ್ ಪತ್ತೆ, ತನಿಖೆಗೆ ಇಳಿದ ಅರಣ್ಯ ಇಲಾಖೆ

    ನಾನು ದೇಶಕ್ಕಾಗಿ ಧ್ಯಾನ ಮಾಡುತ್ತೇನೆ, ಪ್ರಾರ್ಥಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಾಡುತ್ತಿರುವುದು ತಪ್ಪು ಎಂದು ನೀವು ಭಾವಿಸಿದರೆ ಮತ್ತು ನಿಮಗೂ ದೇಶದ ಬಗ್ಗೆ ಚಿಂತೆ ಇದ್ದರೆ ಹೋಳಿ ಆಚರಿಸಿದ ನಂತರ, ದಯವಿಟ್ಟು ಪ್ರಾರ್ಥಿಸಲು ಸಮಯ ಮೀಸಲಿಡಿ ಎಂದು ಸಾರ್ವಜನಿಕರಿಗೆ ಕೇಜ್ರಿವಾಲ್ ಕರೆ ನೀಡಿದ್ದರು. ಇದನ್ನೂ ಓದಿ: ಮಾ.9ರ ಕರ್ನಾಟಕ ಬಂದ್‌ ವಾಪಸ್ ಪಡೆದ ಕಾಂಗ್ರೆಸ್

  • ಕರ್ನಾಟಕದ ಜನ ಒಳ್ಳೆಯವ್ರು, ಆದ್ರೆ ನಾಯಕರು ಕೆಟ್ಟವ್ರು – ರಾಜ್ಯವನ್ನ ಬರ್ಬಾದ್ ಮಾಡ್ತಿದ್ದಾರೆ: ಕೇಜ್ರಿವಾಲ್ ಕಿಡಿ

    ಕರ್ನಾಟಕದ ಜನ ಒಳ್ಳೆಯವ್ರು, ಆದ್ರೆ ನಾಯಕರು ಕೆಟ್ಟವ್ರು – ರಾಜ್ಯವನ್ನ ಬರ್ಬಾದ್ ಮಾಡ್ತಿದ್ದಾರೆ: ಕೇಜ್ರಿವಾಲ್ ಕಿಡಿ

    ದಾವಣಗೆರೆ: ಕರ್ನಾಟಕದ ಜನ ಒಳ್ಳೆಯವರು, ದೇಶಭಕ್ತರು, ಆದ್ರೆ ನಿಮ್ಮ ನಾಯಕರು ಕೆಟ್ಟವರು. ರಾಜ್ಯವನ್ನ ಬರ್ಬಾದ್ ಮಾಡ್ತಿದ್ದಾರೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಬೇಸರ ವ್ಯಕ್ತಪಡಿಸಿದರು.

    ಆಮ್ ಆದ್ಮಿ ಪಕ್ಷದ ವತಿಯಿಂದ ದಾವಣಗೆರೆಯಲ್ಲಿ ನಡೆದ ಬೃಹತ್ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ನಮಸ್ಕಾರ ಕರ್ನಾಟಕ, ಕರ್ನಾಟಕದ ಹೃದಯ ಭಾಗ ದಾವಣಗೆರೆಗೆ ಬಂದಿದ್ದು ನನಗೆ ತುಂಬಾ ಸಂತೋಷವಾಗಿದೆ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದರು.

    ಬಳಿಕ ಹಿಂದಿಯಲ್ಲಿ ಭಾಷಣ ಮಾಡಿ, ಕರ್ನಾಟಕದ ಜನ ದೇಶಭಕ್ತರು, ಕಷ್ಟ ಪಡುವವರು, ತುಂಬಾ ಒಳ್ಳೆಯವರು. ಆದರೆ ನಿಮ್ಮ ನಾಯಕರು ಕೆಟ್ಟವರು ಎಂದು ಹೇಳಿದರು. ಇದನ್ನೂ ಓದಿ: Manish Sisodia ಸಿಬಿಐ ಕಸ್ಟಡಿ ವಿಸ್ತರಣೆ – ಮಾ.10 ರಂದು ಜಾಮೀನು ಅರ್ಜಿ ವಿಚಾರಣೆ

    ಇದು 40 ಪರ್ಸೆಂಟ್ ಸರ್ಕಾರ. ಇಂತಹ ಒಳ್ಳೆಯ ರಾಜ್ಯವನ್ನ ಬರ್ಬಾದ್ ಮಾಡ್ತಿದ್ದಾರೆ. ಅಮಿತ್ ಶಾ (Amit Shah) ಕರ್ನಾಟಕಕ್ಕೆ ಬಂದರು. ದೊಡ್ಡ-ದೊಡ್ಡ ಮಾತುಗಳನ್ನಾಡಿ ವಿಮಾನ ಹತ್ತಿ ಹೋದರು. ಅದೇ ದಿನ 8 ಕೋಟಿ ರೂಪಾಯಿಯೊಂದಿಗೆ ಬಿಜೆಪಿಯ ಒಬ್ಬ ನಾಯಕನ ಮಗ ಸಿಕ್ಕಿಬಿದ್ದ. ಆದ್ರೆ ಇದುವರೆಗೂ ಅವನನ್ನ ಅರೆಸ್ಟ್ ಮಾಡಿಲ್ಲ. ಮುಂದಿನ ವರ್ಷ ಇವರಿಗೆ ಪದ್ಮಭೂಷಣ ಪ್ರಶಸ್ತಿ ಕೊಡ್ತಾರೆ ಎಂದು ಟೀಕಿಸಿದರು.

    ರೇಡ್‌ನಲ್ಲಿ 8 ಕೋಟಿ ಸಿಕ್ಕರೂ, ಬಿಜೆಪಿ (BJP) ನಾಯಕಕನ್ನ ಅರೆಸ್ಟ್ ಮಾಡಿಲ್ಲ. ಆದ್ರೆ ನಮ್ಮ ಮನೀಶ್ ಸಿಸೋಡಿಯಾ (Manish Sisodia) ಅವರನ್ನ ಅರೆಸ್ಟ್ ಮಾಡಿದ್ದಾರೆ. ಆದ್ರೆ ಸಿಸೋಡಿಯಾ ಅವರ ಮನೆಯಲ್ಲಿ ಸಿಕ್ಕಿದ್ದು ಕೇವಲ 10 ಸಾವಿರ ರೂಪಾಯಿ ಎಂದು ಹೇಳಿದರು. ಇದನ್ನೂ ಓದಿ: ಭಾರತದ ಸಂಸ್ಥೆಯ ಕೆಮ್ಮಿನ ಸಿರಪ್‌ ಸೇವಿಸಿ ಉಜ್ಬೇಕಿಸ್ತಾನ ಮಕ್ಕಳ ಸಾವು ಕೇಸ್‌ – ನೋಯ್ಡಾದಲ್ಲಿ ಮೂವರು ಅರೆಸ್ಟ್‌

    ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮೋದಿಯವರು (Narendra Modi) ಇಲ್ಲಿಗೆ ಬಂದಾಗ, `20 ಪರ್ಸೆಂಟ್ ಸರ್ಕಾರ ಇದೆ, ನಮಗೆ ವೋಟ್ ಹಾಕಿ.. ಭ್ರಷ್ಟಾಚಾರ ನಿರ್ಮೂಲನೆ ಮಾಡ್ತೀವಿ’ ಅಂದಿದ್ರು. ಆದ್ರೆ ಡಬಲ್ ಎಂಜಿನ್ ಸರ್ಕಾರ ಅಂತಾ ಹೇಳಿ.. ಹೇಳಿ.. ಭ್ರಷ್ಟಾಚಾರವನ್ನೂ ಡಬಲ್ ಮಾಡಿದ್ದಾರೆ. ಆಗ 20 ಪರ್ಸೆಂಟ್ ಇತ್ತು, ಈಗ 40 ಪರ್ಸೆಂಟ್ ಆಗಿದೆ. ಮುಂದೆ 60 ಪರ್ಸೆಂಟ್, 100 ಪರ್ಸೆಂಟ್ ಸಹ ಆಗಲಿದೆ ಎಂದು ಕಿಡಿಕಾರಿದರು.

    ಪ್ರಧಾನಿ ಮೋದಿ ಅವರಿಗೆ ಕರ್ನಾಟಕದ ಗುತ್ತಿದಾರರ ಸಂಘದವರು ಪತ್ರ ಬರೆದರು. 2 ವರ್ಷ ಕಳೆದ್ರೂ ಮೋದಿ ಅವರಿಂದ ಯಾವುದೇ ಉತ್ತರ ಬರಲಿಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪತ್ರ ಬರೆದ್ರೆ ಅವರನ್ನೇ ಜೈಲಿಗಟ್ಟಿದ್ದರು. ಇದು ಯಾವ ರೀತಿಯ ಸರ್ಕಾರ? ಸಂತೋಷ್ ಪಾಟೀಲ್ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಕ್ಕೆ ಕಿರಕುಳ ಕೊಟ್ಟರು. ಕೊನೆಗೆ ಸಂತೋಷ್ ಆತ್ಮಹತ್ಯೆ ಮಾಡಿಕೊಂಡರು. ಈಗ ಶಾಲೆ, ಮಠಗಳನ್ನೂ ಬಿಡದೇ ಲೂಟಿ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ನಾವು ಪ್ರಾಮಾಣಿಕರು: ಅಷ್ಟೇ ಅಲ್ಲದೇ ಕಳೆದ 5 ವರ್ಷಗಳಿಂದ ಬೆಂಗಳೂರು ರಸ್ತೆಗಳನ್ನ ರಿಪೇರಿ ಮಾಡಲು 20 ಸಾವಿರ ಕೋಟಿ ಖರ್ಚು ಮಾಡಿದ್ದೀವಿ ಅಂತಾರೆ. ನೆಟ್ಟಗೆ 20 ಗುಂಡಿ ಮುಚ್ಚೋಕೆ ಆಗಿಲ್ಲ. ಹಾಗಾದ್ರೆ 20 ಸಾವಿರ ಕೋಟಿ ರೂ. ಎಲ್ಲಿ ಹೋಯ್ತು ಎಂದು ಪ್ರಶ್ನಿಸಿದ ಅವರು, ಒಳ್ಳೆಯ ಶಿಕ್ಷಣ, ಉದ್ಯೋಗ ನೀಡಲು ಆಮ್ ಆದ್ಮಿ ಪಕ್ಷದಿಂದ ಮಾತ್ರ ಸಾಧ್ಯ. ಹಾಗಾಗಿ ನಮ್ಮನ್ನು ಬೆಂಬಲಿಸಿ, ನಾವು ಪ್ರಾಮಾಣಿಕರು ಎಂದು ಜನತೆಯಲ್ಲಿ ಮನವಿ ಮಾಡಿದರು.

  • ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ ರಾಜೀನಾಮೆ – ಸೌರಭ್ ಭಾರದ್ವಾಜ್ ಮತ್ತು ಅತಿಶಿಗೆ ಮಂತ್ರಿ ಸ್ಥಾನ?

    ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ ರಾಜೀನಾಮೆ – ಸೌರಭ್ ಭಾರದ್ವಾಜ್ ಮತ್ತು ಅತಿಶಿಗೆ ಮಂತ್ರಿ ಸ್ಥಾನ?

    ನವದೆಹಲಿ: ಆರೋಗ್ಯ ಸಚಿವ ಸತ್ಯೇಂದ್ರ ಜೈನ್ (Satyendar Jain) ಮತ್ತು ಡಿಸಿಎಂ ಮನೀಶ್ ಸಿಸೋಡಿಯಾ (Manish Sisodia) ರಾಜೀನಾಮೆಯಿಂದ ತೆರವಾದ 2 ಸಚಿವ ಸ್ಥಾನಗಳನ್ನು ಭರ್ತಿ ಮಾಡಲು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ನಿರ್ಧರಿಸಿದ್ದು, ಶಾಸಕರಾದ ಸೌರಭ್ ಭಾರದ್ವಾಜ್ (Saurabh Bhardwaj) ಮತ್ತು ಅತಿಶಿ (Atishi) ಹೆಸರನ್ನು ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೆನಾ ಅನುಮತಿಗಾಗಿ ಕಳುಹಿಸಿದೆ.

    ಹೊಸ ಮದ್ಯ ನೀತಿಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಆರೋಪದಲ್ಲಿ ಬಂಧನಕ್ಕೊಳಗಾದ ಹಿನ್ನೆಲೆಯಲ್ಲಿ ಸತ್ಯೇಂದ್ರ ಜೈನ್ ಮತ್ತು ಮನೀಶ್ ಸಿಸೋಡಿಯಾ ರಾಜೀನಾಮೆ ನೀಡಿದ್ದರು. ರಾಜೀನಾಮೆ ಅಂಗೀಕರಿಸಿ ಲೆಫ್ಟಿನೆಂಟ್ ಗವರ್ನರ್ ಮಾಹಿತಿ ನೀಡಿದ್ದ ಕೇಜ್ರಿವಾಲ್ ಹೊಸ ಹೆಸರುಗಳನ್ನು ಕಳುಹಿಸಿಕೊಟ್ಟಿದ್ದಾರೆ.

    ಮನೀಶ್ ಸಿಸೋಡಿಯಾ ಡಿಸಿಎಂ ಮಾತ್ರವಲ್ಲದೇ ಶಿಕ್ಷಣ, ಹಣಕಾಸು, ಯೋಜನೆ, ಭೂಮಿ ಮತ್ತು ಕಟ್ಟಡ, ಸೇವೆಗಳು, ಪ್ರವಾಸೋದ್ಯಮ, ಕಲೆ-ಸಂಸ್ಕೃತಿ ಮತ್ತು ಭಾಷೆ, ಕಾರ್ಮಿಕ ಮತ್ತು ಉದ್ಯೋಗ, ಆರೋಗ್ಯ, ಕೈಗಾರಿಕೆ, ವಿದ್ಯುತ್, ಗೃಹ, ನಗರಾಭಿವೃದ್ಧಿ, ನೀರಾವರಿ, ಲೋಕೋಪಯೋಗಿ ಸೇರಿ 18 ಇಲಾಖೆಗಳನ್ನು ನಿಭಾಯಿಸುತ್ತಿದ್ದರು. ಸತ್ಯೇಂದ್ರ ಜೈನ್ ಆರೋಗ್ಯ, ಗೃಹ, ಕೈಗಾರಿಕೆ ಸೇರಿದಂತೆ 7 ಖಾತೆಗಳನ್ನು ನಿರ್ವಹಿಸುತ್ತಿದ್ದರು. ಇಬ್ಬರ ರಾಜೀನಾಮೆ ಬಳಿಕ ಖಾತೆಗಳನ್ನು ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಮತ್ತು ಸಮಾಜ ಕಲ್ಯಾಣ ಸಚಿವ ರಾಜ್ ಕುಮಾರ್ ಆನಂದ್ ನಡುವೆ ಹಂಚಿಕೆ ಮಾಡಿದೆ. ಇದನ್ನೂ ಓದಿ: ಬಿಜೆಪಿ ಮಾಡದಿದ್ರೆ, ನಾವು ಅಧಿಕಾರಕ್ಕೆ ಬಂದ್ಮೇಲೆ 7ನೇ ವೇತನ ಆಯೋಗ ಜಾರಿ ಮಾಡ್ತೀವಿ: ಸಿದ್ದರಾಮಯ್ಯ

    3 ಬಾರಿ ಶಾಸಕರಾಗಿರುವ ಮತ್ತು ಪ್ರಸ್ತುತ ದೆಹಲಿ ಜಲ ಮಂಡಳಿಯ ಉಪಾಧ್ಯಕ್ಷ ಹುದ್ದೆಯನ್ನು ಹೊಂದಿರುವ ಎಎಪಿ ಮುಖ್ಯ ವಕ್ತಾರ ಸೌರಭ್ ಭಾರದ್ವಾಜ್ ಮತ್ತು ಮನೀಶ್ ಸಿಸೋಡಿಯಾ ಜೊತೆಗೆ ಕಾರ್ಯ ನಿರ್ವಹಿಸಿದ ಕಾಲ್ಕಾಜಿ ಶಾಸಕಿ ಅತಿಶಿ ಅವರಿಗೆ ರಾಜ್ಯ ಖಾತೆ ನೀಡಲು ನಿರ್ಧರಿಸಿದ್ದು, ಲೆಫ್ಟಿನೆಂಟ್ ಗವರ್ನರ್ ಅನುಮತಿ ಮಾತ್ರ ಬಾಕಿ ಉಳಿದಿದೆ. ಇದನ್ನೂ ಓದಿ: ಏಪ್ರಿಲ್ 1 ರಿಂದಲೇ ವೇತನ ಹೆಚ್ಚಳ ಜಾರಿಗೆ- ಸರ್ಕಾರದಿಂದ ಅಧಿಕೃತ ಆದೇಶ

  • ರಾಜ್ಯದ ಎಲ್ಲಾ 224 ಕ್ಷೇತ್ರದಲ್ಲೂ AAP ಸ್ಪರ್ಧೆ – ಫೆ.26ಕ್ಕೆ ದಾವಣಗೆರೆಗೆ ಅರವಿಂದ್ ಕೇಜ್ರಿವಾಲ್ ಭೇಟಿ

    ರಾಜ್ಯದ ಎಲ್ಲಾ 224 ಕ್ಷೇತ್ರದಲ್ಲೂ AAP ಸ್ಪರ್ಧೆ – ಫೆ.26ಕ್ಕೆ ದಾವಣಗೆರೆಗೆ ಅರವಿಂದ್ ಕೇಜ್ರಿವಾಲ್ ಭೇಟಿ

    ದಾವಣಗೆರೆ: ಆಮ್ ಆದ್ಮಿ ಪಕ್ಷದಿಂದ (AAP) ರಾಜ್ಯದ ಎಲ್ಲಾ 224 ಕ್ಷೇತ್ರದಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಹಾಗಾಗಿ ಫೆಬ್ರವರಿ 26 ರಂದು ದಾವಣಗೆರೆಯಲ್ಲಿ (Davanagere) ರಾಜ್ಯಮಟ್ಟದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ (Arvind Kejriwal) ಆಗಮಿಸಲಿದ್ದಾರೆ.

    ಈ ಬಗ್ಗೆ ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಡಾ.ವಿಶ್ವನಾಥ್ ಸುದ್ದಿಗೋಷ್ಠಿ ನಡೆಸಿ, ಮುಂಬರುವ ರಾಜ್ಯ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಲಿದೆ. ಫೆಬ್ರವರಿ 26 ರಂದು ದಾವಣಗೆರೆಯ ಕಾರ್ಯಕ್ರಮದ ನಂತರ ಪಕ್ಷದ ಚುನಾವಣಾ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ನಗರದ ಎಸ್‍ಎಸ್ ಲೇಔಟ್‍ನಲ್ಲಿರುವ ರಿಂಗ್ ರಸ್ತೆ ಬಳಿ ದಾವಣಗೆರೆಯ ಕಾರ್ಯಾಲಯಕ್ಕೆ ಚಾಲನೆ ನೀಡಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಮೂಡಿಗೆರೆ ಹಾಲಿ ಶಾಸಕನಿಗೆ ಟಿಕೆಟ್ ಇಲ್ಲ – ಗ್ರಂಥಪಾಲಕ ಬಿಜೆಪಿ ಅಭ್ಯರ್ಥಿ?

    ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಜಾಫರ್ ಮೋಹಿಯುದ್ದೀನ್ ಮಾತನಾಡಿ, ದಾವಣಗೆರೆಯ ಎಲ್ಲಾ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಭ್ರಷ್ಟಾಚಾರ ರಹಿತ ಸರ್ಕಾರ ನಿರ್ಮಾಣ ನಮ್ಮ ಕನಸು. ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿದ್ದು ಆಮ್ ಆದ್ಮಿಗೆ ಜನ ಬೆಂಬಲ ನೀಡುವ ಭರವಸೆ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸುದೀಪ್ ಕಾಂಗ್ರೆಸ್ ಸೇರಿದರೆ ಸ್ವಾಗತ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಫೆಬ್ರವರಿಯಲ್ಲಿ ರಾಜ್ಯಕ್ಕೆ ದೆಹಲಿ ಸಿಎಂ – ಚುನಾವಣೆಗೆ ಮೊದಲು ಹಲವು ಜಿಲ್ಲೆಗೆ ಕೇಜ್ರಿವಾಲ್ ಭೇಟಿ

    ಫೆಬ್ರವರಿಯಲ್ಲಿ ರಾಜ್ಯಕ್ಕೆ ದೆಹಲಿ ಸಿಎಂ – ಚುನಾವಣೆಗೆ ಮೊದಲು ಹಲವು ಜಿಲ್ಲೆಗೆ ಕೇಜ್ರಿವಾಲ್ ಭೇಟಿ

    ಧಾರವಾಡ: ಫೆಬ್ರವರಿಯಲ್ಲಿ ಕರ್ನಾಟಕಕ್ಕೆ ದೆಹಲಿ ಸಿಎಂ (Delhi CM) ಅರವಿಂದ್ ಕೇಜ್ರಿವಾಲ್ (Arvind Kejriwal) ಆಗಮಿಸಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ (AAP) ರಾಜ್ಯ ಕಾರ್ಯದರ್ಶಿ ಎಂ ಅರವಿಂದ್ (M Aravind) ಹೇಳಿದರು.

    ಧಾರವಾಡದಲ್ಲಿ ಮಾತನಾಡಿದ ಅವರು, ಫೆಬ್ರವರಿ 26 ರಂದು ದಾವಣಗೆರೆಯಲ್ಲಿ ಆಮ್ ಆದ್ಮಿ ಪಕ್ಷದ ಬ್ಲಾಕ್ ಪದಾಧಿಕಾರಿಗಳ ಶಪಥ ಕಾರ್ಯಕ್ರಮ ಇದೆ. ಅದಕ್ಕೆ ಕೇಜ್ರಿವಾಲ್ ಬರುತ್ತಿದ್ದಾರೆ ಎಂದು ತಿಳಿಸಿದರು.

    ಫೆಬ್ರವರಿ ಬಳಿಕ ರಾಜ್ಯದ ಪ್ರಮುಖ ಜಿಲ್ಲಾ ಕೇಂದ್ರಗಳಿಗೆ ಕೂಡಾ ಅವರು ಬರಲಿದ್ದಾರೆ. ಫೆಬ್ರವರಿ 26ರ ನಂತರ ಕೇಜ್ರಿವಾಲ್ ಅವರ ಟೂರ್ ಪ್ರೋಗ್ರಾಮ್ ಮಾಡುತ್ತಿದ್ದೇವೆ. ಹುಬ್ಬಳ್ಳಿ, ಧಾರವಾಡ, ಬೆಳಗಾವಿಯಲ್ಲಿ ಕೇಜ್ರಿವಾಲ್ ಅವರ ಕಾರ್ಯಕ್ರಮಗಳು ಇರಲಿದೆ. ಚುನಾವಣೆಗೆ ಮೊದಲೇ ಈ ಕಾರ್ಯಕ್ರಮಗಳು ನಡೆಯಲಿದೆ ಎಂದರು. ಇದನ್ನೂ ಓದಿ: ಮತ್ತೆ ಬಿಜೆಪಿ ಜೊತೆ ಕೈ ಜೋಡಿಸುವುದಕ್ಕಿಂತ ಸಾಯುತ್ತೇನೆ: ನಿತೀಶ್ ಕುಮಾರ್

    ನಾನು ಕೂಡಾ 2 ದಿನಗಳಲ್ಲಿ ದೆಹಲಿಗೆ ಹೋಗುತ್ತಿದ್ದೇನೆ. ಸದ್ಯ ಕೇಜ್ರಿವಾಲ್ ಅವರ ತಾತ್ಕಾಲಿಕ ಭೇಟಿಯ ಪಟ್ಟಿ ಮಾಡಿದ್ದೇವೆ. ಅವರು ಯಾವ ದಿನಾಂಕಕ್ಕೆ ಸಿಗುತ್ತಾರೆ ಎಂಬುದನ್ನು ನೋಡಿಕೊಂಡು ಫೈನಲ್ ಪಟ್ಟಿ ಮಾಡುತ್ತೇವೆ ಎಂದು ಆಪ್ ರಾಜ್ಯ ಕಾರ್ಯದರ್ಶಿ ತಿಳಿಸಿದರು. ಇದನ್ನೂ ಓದಿ: ಡಿಕೆಶಿ ಬಾವ ಎಎಪಿಗೆ ಸೇರ್ಪಡೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • BRSನಿಂದ ಮೊದಲ ಸಾರ್ವಜನಿಕ ಸಭೆ – ಕೆಂಪು ಕೋಟೆ ಮೇಲೆ ಗುಲಾಬಿ ಬಾವುಟ ಹಾರಲಿದೆ : ಕೆಸಿಆರ್ ವಿಶ್ವಾಸ

    BRSನಿಂದ ಮೊದಲ ಸಾರ್ವಜನಿಕ ಸಭೆ – ಕೆಂಪು ಕೋಟೆ ಮೇಲೆ ಗುಲಾಬಿ ಬಾವುಟ ಹಾರಲಿದೆ : ಕೆಸಿಆರ್ ವಿಶ್ವಾಸ

    ಹೈದರಾಬಾದ್ : ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (K Chandrashekar Rao) ನೇತೃತ್ವದ ಭಾರತ್ ರಾಷ್ಟ್ರ ಸಮಿತಿ ಪಕ್ಷದ (BRS) ವತಿಯಿಂದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಹೈದರಾಬಾದ್‌ನಿಂದ 200 ಕಿ.ಮೀ ದೂರದಲ್ಲಿರುವ ಖಮ್ಮಂನಲ್ಲಿ ಪಕ್ಷದ ಶಕ್ತಿ ಪ್ರದರ್ಶನ ನಡೆಯುತ್ತಿದೆ.

    ತೆಲಂಗಾಣ ರಾಷ್ಟ್ರ ಸಮಿತಿಯಿಂದ ಭಾರತ್ ರಾಷ್ಟ್ರ ಸಮಿತಿಯಾಗಿ ಹೆಸರು ಬದಲಿಸಿಕೊಂಡ ಬಳಿಕ ನಡೆಯುತ್ತಿರುವ ಈ ಬೃಹತ್ ಸಮಾವೇಶದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal), ಕೇರಳ ಸಿಎಂ ಪಿಣರಾಯಿ ವಿಜಯನ್ (Pinarayi Vijayan), ಪಂಜಾಬ್ ಸಿಎಂ ಭಗವಂತ್ ಮಾನ್ (Bhagwant Mann), ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಮತ್ತು ಸಿಪಿಐ ಜನರಲ್ ಸೆಸಿ ಡಿ ರಾಜಾ ಭಾಗಿಯಾಗಿದ್ದು, ಈ ಮೂಲಕ ಪ್ರತಿಪಕ್ಷಗಳ ಶಕ್ತಿ ಪ್ರದರ್ಶನವೂ ನಡೆಯುತ್ತಿದೆ.

    ಸಮಾವೇಶಕ್ಕೆ ತೆರಳುವ ಮುನ್ನ ಸರ್ಕಾರದಿಂದ ಬೃಹತ್ ಪ್ರಮಾಣದಲ್ಲಿ ನವೀಕರಿಸಲ್ಪಟ್ಟ ಹೈದರಾಬಾದ್ ಬಳಿಯ ಯಾದಾದ್ರಿಯಲ್ಲಿರುವ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಕೆಸಿಆರ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ಕೆಂಪು ಕೋಟೆಯ ಮೇಲೆ ಒಂದು ದಿನ ಗುಲಾಬಿ ಧ್ವಜ ಹಾರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕುಡಿತದ ಚಟವಿರುವವರು ಕೆಟ್ಟವರಲ್ಲ, ಅವರ ಕುಡಿತ ಕೆಟ್ಟದ್ದು: ವೀರೇಂದ್ರ ಹೆಗ್ಗಡೆ

    ಅಬ್ ಕಿ ಬಾರ್ ಕಿಸಾನ್ ಸರ್ಕಾರ್ (ಈ ಬಾರಿ ರೈತರ ಸರ್ಕಾರ) ಘೋಷಣೆ ಕೂಗಿದ ಅವರು, ಹೊಸ ಆರ್ಥಿಕ, ಪರಿಸರ, ನೀರು, ವಿದ್ಯುತ್ ಮತ್ತು ಮಹಿಳಾ ಸಬಲೀಕರಣ ನೀತಿಗಳು ದೇಶದಲ್ಲಿ ಅಗತ್ಯವಿದೆ ಎಂದು ಹೇಳಿದರು. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಬೆನ್ನಲ್ಲೇ ನಡೆಯುತ್ತಿರುವ ಈ ಸಭೆ ರಾಜಕೀಯ ವಲಯದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಜನಪ್ರಿಯ ಬಜೆಟ್ ಬ್ಲೂಪ್ರಿಂಟ್‌ಗೆ ಸಿಎಂ ಸೂಚನೆ- ಎಲೆಕ್ಷನ್ ಬಜೆಟ್‌ನಲ್ಲಿ ಬಂಪರ್ ಗಿಫ್ಟ್ ಸುರಿಮಳೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದೆಹಲಿ ಬಳಿಕ ಕರ್ನಾಟಕದಲ್ಲೂ ಆಪ್ `ಟಿಕೆಟ್ ಫಾರ್ ಸೇಲ್’ – ಸುಕೇಶ್ ಚಂದ್ರಶೇಖರ್ ಗಂಭೀರ ಆರೋಪ

    ದೆಹಲಿ ಬಳಿಕ ಕರ್ನಾಟಕದಲ್ಲೂ ಆಪ್ `ಟಿಕೆಟ್ ಫಾರ್ ಸೇಲ್’ – ಸುಕೇಶ್ ಚಂದ್ರಶೇಖರ್ ಗಂಭೀರ ಆರೋಪ

    ನವದೆಹಲಿ: ದೆಹಲಿ ನಗರಪಾಲಿಕೆ ಚುನಾವಣೆಯಲ್ಲಿ (MCD Election) ಟಿಕೆಟ್ ಮಾರಾಟ ಮಾಡಿರುವ ಆರೋಪದ ಬೆನ್ನಲ್ಲೇ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ (Karnataka Election 2023) ಟಿಕೆಟ್ ಮಾರಾಟ ಮಾಡುತ್ತಿರುವ ಆರೋಪ ಕೇಳಿಬಂದಿದೆ.

    200 ಕೋಟಿ ಸುಲಿಗೆ ಪ್ರಕರಣದಲ್ಲಿ ತಿಹಾರ್ ಜೈಲು ಸೇರಿರುವ ಕರ್ನಾಟಕ ಮೂಲದ ಸುಕೇಶ್ ಚಂದ್ರಶೇಖರ್ (Sukesh Chandrasekhar) ಇಂತಹದ್ದೊಂದು ಗಂಭೀರ ಆರೋಪ ಮಾಡಿದ್ದಾನೆ. ಇದನ್ನೂ ಓದಿ: ʼಸರ್‌ʼ, ʼಮೇಡಂʼ ಅನ್ನುವಂತಿಲ್ಲ.. ʼಟೀಚರ್‌ʼ ಎನ್ನಬೇಕು – ಕೇರಳ ಮಕ್ಕಳ ಹಕ್ಕುಗಳ ಆಯೋಗ

    ಈ ಬಗ್ಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ ಕುಮಾರ್ ಸಕ್ಸೇನಾಗೆ (Vinai Kumar Saxena) ಪತ್ರ ಬರೆದಿದ್ದು, ತನ್ನ ವಕೀಲರ ಮೂಲಕ ಪತ್ರ ರವಾನಿಸಿರುವ ಸುಕೇಶ್, ಆಮ್ ಅದ್ಮಿ ಸರ್ಕಾರದಲ್ಲಿನ ಭ್ರಷ್ಟಾಚಾರದ ಸಾಕ್ಷ್ಯಗಳನ್ನು ನನ್ನ ಬಳಿ ಇವೆ. ಅವುಗಳನ್ನು ವಾಪಸ್ ನೀಡುವಂತೆ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಹಾಗೂ ತಿಹಾರ್ ಜೈಲಿನಲ್ಲಿರುವ ಸಚಿವ ಸತ್ಯೇಂದ್ರ ಜೈನ್ ಜೈಲು ಅಧಿಕಾರಿಗಳ ಮೂಲಕ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದ್ದಾನೆ. ಇದನ್ನೂ ಓದಿ: ‘ಮಠ’ ಚಿತ್ರ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಬಂಧನ

    ಡಿಸೆಂಬರ್ 31 ರಂದು ಜೈಲು ಅಧಿಕಾರಿ ರಾಜ್‌ಕುಮಾರ್ ಮೂಲಕ ಆಮಿಷವೊಡ್ಡಲಾಗಿದ್ದು, ಸರ್ಕಾರದ ವಿರುದ್ಧದ ಸಾಕ್ಷ್ಯಗಳನ್ನು ನೀಡಿದ್ದಲ್ಲಿ ಅದರ ಬದಲಾಗಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಆಪ್ (AAP) ಟಿಕೆಟ್ ಮಾರಾಟಕ್ಕೆ ಜವಬ್ದಾರಿ ನೀಡಲಾಗುವುದು ಮತ್ತು ಪಂಜಾಬ್ ನಲ್ಲಿ ಮರುಳು ಗಣಿಗಾರಿಕೆಗೆ ಗುತ್ತಿಗೆ ನೀಡುವ ಭರವಸೆ ನೀಡಲಾಗಿದೆ. ಒಂದು ವೇಳೆ ಇದಕ್ಕೆ ಒಪ್ಪಿಗೆ ನೀಡದಿದ್ದಲ್ಲಿ ಬೇರೆ ಜೈಲಿಗೆ ವರ್ಗಾವಣೆ ಮಾಡುವ ಬ್ಲಾಕ್‌ಮೇಲ್ ಸಹ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾನೆ.

    ದೆಹಲಿ ಕಾರ್ಪೊರೇಷನ್ ಚುನಾವಣೆ ವೇಳೆಯೂ ಆಪ್ ಅಭ್ಯರ್ಥಿಗಳಿಗೆ ಟಿಕೆಟ್ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿಲಾಗಿತ್ತು. ರಹಸ್ಯ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದ ಬಿಜೆಪಿ ನಾಯಕರು ಟಿಕೆಟ್ ಫಾರ್ ಸೇಲ್ ಎಂದು ಅರವಿಂದ್ ಕೇಜ್ರಿವಾಲ್ ಅವರನ್ನ ಕುಟುಕಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜಾಹೀರಾತಿಗೆ ಸರ್ಕಾರಿ ಹಣ ದುರ್ಬಳಕೆ – 10 ದಿನದಲ್ಲಿ 163 ಕೋಟಿ ವಾಪಸ್ ಕೊಡಿ AAPಗೆ ನೋಟಿಸ್

    ಜಾಹೀರಾತಿಗೆ ಸರ್ಕಾರಿ ಹಣ ದುರ್ಬಳಕೆ – 10 ದಿನದಲ್ಲಿ 163 ಕೋಟಿ ವಾಪಸ್ ಕೊಡಿ AAPಗೆ ನೋಟಿಸ್

    ನವದೆಹಲಿ: ಸರ್ಕಾರಿ ಜಾಹೀರಾತು ಪ್ರಸಾರ ಮಾಡುವ ನೆಪದಲ್ಲಿ ರಾಜಕೀಯ ಜಾಹೀರಾತುಗಳನ್ನ (Political Advertisements) ಪ್ರಸಾರ ಮಾಡಲು ಆಮ್ ಆದ್ಮಿ ಪಕ್ಷವು (AAP) 163.62 ಕೋಟಿ ರೂ. ದುರ್ಬಳಕೆ ಮಾಡಿಕೊಂಡಿದೆ. ಆ ಮೊತ್ತವನ್ನು ಹಿಂದಿರುಗಿಸುವಂತೆ ದೆಹಲಿ ಸರ್ಕಾರ (Delhi Government) ನೋಟಿಸ್ ಜಾರಿಗೊಳಿಸಿದೆ.

    ದೆಹಲಿ ಆಡಳಿತ ಪಕ್ಷವು 10 ದಿನಗಳಲ್ಲಿ ಈ ಮೊತ್ತ ಪಾವತಿಸುವಂತೆ ಮಾಹಿತಿ ಮತ್ತು ಪ್ರಚಾರ ನಿರ್ದೇಶನಾಲಯ (DIP) ನೋಟಿಸ್‌ನಲ್ಲಿ ತಾಕೀತು ಮಾಡಿದೆ. 163,61,88,265 ರೂ. ಮೊತ್ತ ಠೇವಣಿ ಇಡುವ ಮೂಲಕ ಹಣ ಮರುಪಾವತಿಸಲು ಅಂತಿಮ ಅವಕಾಶ ನೀಡಿದೆ. ಇದನ್ನೂ ಓದಿ: ಕುಡಿದ ನಶೆಯಲ್ಲಿ ವಿಮಾನ ನಿಲ್ದಾಣದಲ್ಲೇ ವ್ಯಕ್ತಿ ಬಹಿರಂಗ ಮೂತ್ರ ವಿಸರ್ಜನೆ

    ಒಂದು ವೇಳೆ ಎಎಪಿ ಸಂಚಾಲಕರು ಠೇವಣಿ ಇಡಲು ವಿಫಲವಾದಲ್ಲಿ ಕಾನೂನಿನ ಅನ್ವಯ ಪಕ್ಷದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಜೊತೆಗೆ ನಿರ್ದಿಷ್ಟ ಕಾಲಮಿತಿಯಲ್ಲೇ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಜಾನ್ಸನ್‌ & ಜಾನ್ಸನ್‌ ಬೇಬಿ ಪೌಡರ್‌ ಉತ್ಪಾದನೆ, ಮಾರಾಟಕ್ಕೆ ಬಾಂಬೆ ಹೈಕೋರ್ಟ್‌ ಅನುಮತಿ

    ದೆಹಲಿ ರಾಜ್ಯಪಾಲ ವಿನಯ್ ಕುಮಾರ್ ಸಕ್ಸೇನಾ (Vinai Kumar Saxena), ಅರವಿಂದ್ ಕೇಜ್ರಿವಾಲ್ (Arvind Kejriwal) ನೇತೃತ್ವದ ಎಎಪಿ ಪಕ್ಷವು ಸರ್ಕಾರಿ ಜಾಹೀರಾತುಗಳ ಸೋಗಿನಲ್ಲಿ ರಾಜಕೀಯ ಜಾಹೀರಾತುಗಳನ್ನ ಪ್ರಚಾರ ಮಾಡ್ತಿದೆ ಎಂದು ಆರೋಪಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಒಂದು ತಿಂಗಳ ನಂತರ ಈ ಬೆಳವಣಿಗೆ ನಡೆದಿದೆ.

    ಆದ್ರೆ ಎಎಪಿ ಈ ರೀತಿಯ ಆದೇಶಗಳನ್ನು ಹೊರಡಿಸಲು ರಾಜ್ಯಪಾಲರಿಗೆ ಅಧಿಕಾರವಿಲ್ಲ. ರಾಜ್ಯಪಾಲರ ನಿರ್ದೇಶನಗಳು ಕಾನೂನಿನ ದೃಷ್ಟಿಯಲ್ಲಿ ನಿಲ್ಲುವುದಿಲ್ಲ ಎಂದು ಹೇಳಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸರ್ಕಾರಿ ಹಣದಲ್ಲಿ AAP ಜಾಹೀರಾತು – 97 ಕೋಟಿ ವಸೂಲಿಗೆ LG ಆದೇಶ

    ಸರ್ಕಾರಿ ಹಣದಲ್ಲಿ AAP ಜಾಹೀರಾತು – 97 ಕೋಟಿ ವಸೂಲಿಗೆ LG ಆದೇಶ

    ನವದೆಹಲಿ: ಸರ್ಕಾರಿ ಜಾಹೀರಾತು ಹೆಸರಿನಲ್ಲಿ ಆಮ್ ಆದ್ಮಿ ಪಕ್ಷ (AAP) ರಾಜಕೀಯ ಜಾಹೀರಾತುಗಳಿಗೆ ಬಳಸಿರುವ 97 ಕೋಟಿ ರೂ. ಹಣವನ್ನು ವಸೂಲಿ ಮಾಡುವಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ (Lieutenant Governor VK Saxena) ಅವರು ಮುಖ್ಯ ಕಾರ್ಯದರ್ಶಿಗಳಿಗೆ ಮಂಗಳವಾರ ಆದೇಶ ನೀಡಿದ್ದಾರೆ.

    ದೆಹಲಿಯ ಆಡಳಿತಾರೂಢ ಆಪ್ ಸುಪ್ರೀಂ ಕೋರ್ಟ್‌ನ ಆದೇಶಗಳನ್ನು, 2016ರ ದೆಹಲಿ ಹೈಕೋಟ್ ಆದೇಶವನ್ನು ಹಾಗೂ 2016ರ ಸರ್ಕಾರಿ ಜಾಹೀರಾತುಗಳಲ್ಲಿ ವಿಷಯ ನಿಯಂತ್ರಣ ಸಮಿತಿ (CCRGA) ಆದೇಶಗಳನ್ನು ಉಲ್ಲಂಘಿಸಿದೆ ಎಂದು ಸಕ್ಸೇನಾ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಗಡಿ ವಿವಾದ – ಮಹಾರಾಷ್ಟ್ರ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯಿಲ್ಲ: ದೇವೇಂದ್ರ ಫಡ್ನವಿಸ್

    ಎಫ್ಟಿನೆಂಟ್ ಗವರ್ನರ್ ಸರ್ಕಾರ ಪ್ರಕಟಿಸಿರುವ ಕೆಲವು ನಿರ್ದಿಷ್ಟ ಜಾಹೀರಾತುಗಳನ್ನು ಗುರುತಿಸಿ, ಇದು ಮಾರ್ಗಸೂಚಿಗಳ ಸಂಪೂರ್ಣ ಉಲ್ಲಂಘನೆಯಾಗಿದೆ. ಅಂತಹ ಜಾಹೀರಾತುಗಳಿಗೆ ಖರ್ಚು ಮಾಡಿರುವ ಮೊತ್ತವನ್ನು ಲೆಕ್ಕ ಹಾಕಲು ಹಾಗೂ ಆಪ್ ನಿಂದ ವಸೂಲಿ ಮಾಡುವಂತೆ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ. ಇದನ್ನೂ ಓದಿ: ಕೊಟ್ಟ ಮಾತು ಉಳಿಸಿದ ಬಿಜೆಪಿ – ಸಭಾಪತಿ ಸ್ಥಾನಕ್ಕೆ ಹೊರಟ್ಟಿ ನಾಮಪತ್ರ ಸಲ್ಲಿಕೆ

    Live Tv
    [brid partner=56869869 player=32851 video=960834 autoplay=true]

  • ಗುಜರಾತ್‌ನಲ್ಲಿ 5 ಸ್ಥಾನಗಳನ್ನು ಗೆದ್ದಿರುವುದು ಎತ್ತುವಿನಿಂದ ಹಾಲು ಕರೆದಷ್ಟು ದೊಡ್ಡ ಸಾಧನೆ: ಕೇಜ್ರಿವಾಲ್

    ಗುಜರಾತ್‌ನಲ್ಲಿ 5 ಸ್ಥಾನಗಳನ್ನು ಗೆದ್ದಿರುವುದು ಎತ್ತುವಿನಿಂದ ಹಾಲು ಕರೆದಷ್ಟು ದೊಡ್ಡ ಸಾಧನೆ: ಕೇಜ್ರಿವಾಲ್

    ನವದೆಹಲಿ: ಇತ್ತೀಚೆಗೆ ನಡೆದ ಗುಜರಾತ್ ಚುನಾವಣೆಯಲ್ಲಿ (Gujarat Election) ಆಮ್ ಆದ್ಮಿ ಪಕ್ಷ (AAP) 5 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದ ಶೇ.14 ರಷ್ಟು ಮತಗಳನ್ನು ಗಳಿಸಿದೆ. ಇದು ಎತ್ತುವಿನಿಂದ (Ox) ಹಾಲು ಕರೆದಷ್ಟು ಕಷ್ಟದ ಕೆಲಸವಾಗಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಹೇಳಿಕೆ ನೀಡಿದ್ದಾರೆ.

    ದೆಹಲಿಯಲ್ಲಿ ಆಪ್ ರಾಷ್ಟ್ರೀಯ ಕೌನ್ಸಿಲ್ ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಒಂದು ವರ್ಷದಲ್ಲಿ ನಾವು ಪಂಜಾಬ್ ಅನ್ನು ಪಡೆದುಕೊಂಡಿದ್ದೇವೆ. ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್ (MCD), ಗೋವಾದಲ್ಲಿ 2 ಶಾಸಕರು ಹಾಗೂ ಗುಜರಾತ್‌ನಲ್ಲಿ ಶೇ.14 ರಷ್ಟು ಮತಗಳನ್ನು ಪಡೆಯುವ ಮೂಲಕ ನಮ್ಮ 5 ಶಾಸಕರು ಗೆದ್ದಿದ್ದಾರೆ ಎಂದರು.

    ಎಲ್ಲರೂ ಹಸುವಿನಿಂದ ಹಾಲು ಕರೆಯುತ್ತಾರೆ. ಆದರೆ ನಾವು ಎತ್ತುವಿನಿಂದ ಹಾಲು ಕರೆದಿದ್ದೇವೆ ಎಂದು ತಮ್ಮ ಪಕ್ಷದ ಸಾಧನೆಯನ್ನು ಕೊಂಡಾಡಿದ ಕೇಜ್ರಿವಾಲ್ 2027ರಲ್ಲಿ ಗುಜರಾತ್‌ನಲ್ಲಿ ನಮ್ಮ ಸರ್ಕಾರ ರಚನೆಯಾಗಲಿದೆ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ಸೋನಿಯಾ ಗಾಂಧಿಗೆ ಈ ದೇಶಕ್ಕೂ ಏನು ಸಂಬಂಧ?: ಡಿಕೆಶಿಗೆ ಈಶ್ವರಪ್ಪ ತಿರುಗೇಟು

    Arvind Kejriwal

    ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕೇಜ್ರಿವಾಲ್, ಸರ್ಕಾರಕ್ಕೆ ಸೈನಿಕರ ಪ್ರಾಣದ ಬಗ್ಗೆ ಕಾಳಜಿಯೇ ಇಲ್ಲ. ಚೀನಾದ ವಸ್ತುಗಳನ್ನು ಯಾರು ಖರೀದಿಸುತ್ತಾರೆ? ಚೀನಾದಿಂದ ಸರಕುಗಳನ್ನು ಖರೀದಿಸಲು ಬಿಜೆಪಿಗೆ ಯಾರ ಒತ್ತಾಯವಿದೆ? ನಾವು ಇಲ್ಲಿ ಉತ್ಪಾದಿಸಬಹುದಾದ ವಸ್ತುಗಳನ್ನೇ ಚೀನಾದಿಂದ ಖರೀದಿಸುತ್ತೇವೆ. ಆದರೆ ನಮ್ಮ ದೇಶದಲ್ಲಿ ಉತ್ಪಾದಿಸಲಾಗುತ್ತಿಲ್ಲ. ನಾವು ನಮ್ಮ ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸಲು ಸಾಧ್ಯವಿಲ್ಲವೆ? ದಯವಿಟ್ಟು ಚೀನಾದ ವಸ್ತುಗಳನ್ನು ಬಹಿಷ್ಕರಿಸಿ ಎಂದು ಕೇಜ್ರಿವಾಲ್ ಜನರಿಗೆ ಮನವಿ ಮಾಡಿದರು. ಇದನ್ನೂ ಓದಿ: ಮಂಗಳೂರು ಕುಕ್ಕರ್ ಸ್ಫೋಟ – ಶಾರೀಕ್‌ಗೆ ನಾಳೆ ಸರ್ಜರಿ

    Live Tv
    [brid partner=56869869 player=32851 video=960834 autoplay=true]