Tag: Arvind Kejriwal

  • Loksabha Election 2024: ದೆಹಲಿಯಲ್ಲಿ ಕೈಗೆ 3 ಸ್ಥಾನ ಬಿಟ್ಟು ಕೊಟ್ಟು 4 ಸ್ಥಾನಗಳಲ್ಲಿ AAP ಸ್ಪರ್ಧೆ?

    Loksabha Election 2024: ದೆಹಲಿಯಲ್ಲಿ ಕೈಗೆ 3 ಸ್ಥಾನ ಬಿಟ್ಟು ಕೊಟ್ಟು 4 ಸ್ಥಾನಗಳಲ್ಲಿ AAP ಸ್ಪರ್ಧೆ?

    ನವ ದೆಹಲಿ: ಲೋಕಸಭಾ ಚುನಾವಣೆ 2024ಕ್ಕೆ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದೊಂದಿಗೆ (SP) ಕಾಂಗ್ರೆಸ್‌ನ ಸೀಟು ಹಂಚಿಕೆ ಒಪ್ಪಂದದ ಬಳಿಕ ಆಮ್ ಆದ್ಮಿ ಪಕ್ಷವು (AAP) ದೆಹಲಿ, ಗುಜರಾತ್, ಅಸ್ಸಾಂ ಮತ್ತು ಹರಿಯಾಣದಲ್ಲಿ ಸ್ಥಾನಗಳ ಬಗ್ಗೆ ಹಳೆಯ ಪಕ್ಷದೊಂದಿಗೆ ಸಹಮತ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.

    ಉಭಯ ಪಕ್ಷಗಳ ನಾಯಕರ ನಡುವೆ ಹಲವಾರು ಸುತ್ತಿನ ಮಾತುಕತೆಯ ನಂತರ ಅವರು ಸ್ಪರ್ಧಿಸುವ ಸ್ಥಾನಗಳ ಸಂಖ್ಯೆಯ ಬಗ್ಗೆ ಒಪ್ಪಂದಕ್ಕೆ ಒಪ್ಪಿಗೆ ನೀಡಲಾಗಿದೆ ಎನ್ನಲಾಗಿದೆ. ಆದರೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು, ಮೈತ್ರಿ ಕುರಿತು ಮಾತುಕತೆ ವಿಳಂಬವಾಗಿದೆ. ಈ ಬಗ್ಗೆ ಒಂದೆರಡು ದಿನಗಳಲ್ಲಿ ಹೊಸ ಬೆಳವಣಿಗೆಗಳ ಸುಳಿವು ನೀಡಿದ್ದಾರೆ.

    ಒಪ್ಪಂದದ ಪ್ರಕಾರ, ದೆಹಲಿಯಲ್ಲಿ ಎಎಪಿ ನಾಲ್ಕು ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ ಮೂರು ಸ್ಥಾನಗಳಲ್ಲಿ ಚುನಾವಣೆ ಎದುರಿಸಲಿದೆ. ಗುಜರಾತ್‌ನಲ್ಲಿ ಕಾಂಗ್ರೆಸ್, ಎಎಪಿಗೆ ಎರಡು ಸ್ಥಾನಗಳನ್ನು ನೀಡಿದರೆ, ಹರಿಯಾಣ ಮತ್ತು ಅಸ್ಸಾಂನಲ್ಲಿ ತಲಾ ಒಂದು ಸ್ಥಾನಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆಯಂತೆ. ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ ಜೊತೆ SP ಮೈತ್ರಿ ಖಚಿತ: ಅಖಿಲೇಶ್‌ ಯಾದವ್‌

    ಇಂಡಿಯಾ ಒಕ್ಕೂಟದ ಮೈತ್ರಿ ಪಕ್ಷ ಎಸ್‌ಪಿ ಮತ್ತು ಕಾಂಗ್ರೆಸ್ ಈ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಉತ್ತರ ಪ್ರದೇಶದಲ್ಲಿ ಸೀಟು ಹಂಚಿಕೆಯನ್ನು ಬುಧವಾರ ಅಂತಿಮಗೊಳಿಸಿವೆ. ಸಮಾಜವಾದಿ ಪಕ್ಷ ಮತ್ತು ಇತರ ಮೈತ್ರಿ ಪಕ್ಷಗಳು 63 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಕಾಂಗ್ರೆಸ್‌ಗೆ 17 ಸೀಟು ಹಂಚಿಕೆ ಮಾಡಲಾಗಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ 29 ಸ್ಥಾನಗಳಲ್ಲಿ 28 ರಲ್ಲಿ ಸ್ಪರ್ಧಿಸಲಿದೆ. ಎಸ್‌ಪಿ ಒಂದು ಸ್ಥಾನದಲ್ಲಿ ಬಲಪ್ರಯೋಗ ಮಾಡಲಿದೆ ಎಂಬುದಾಗಿ ತಿಳಿದುಬಂದಿದೆ.

  • ಆರನೇ ಸಮನ್ಸ್‌ಗೂ ಗೈರಾದ ಸಿಎಂ ಅರವಿಂದ್ ಕೇಜ್ರಿವಾಲ್

    ಆರನೇ ಸಮನ್ಸ್‌ಗೂ ಗೈರಾದ ಸಿಎಂ ಅರವಿಂದ್ ಕೇಜ್ರಿವಾಲ್

    ನವದೆಹಲಿ: ಹೊಸ ಅಬಕಾರಿ ನೀತಿಯಲ್ಲಿ (Excise Policy) ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ (ED) ನೀಡಿದ ಆರನೇ ಸಮನ್ಸ್‌ಗೂ (Summons) ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ವಿಚಾರಣೆಗೆ ಹಾಜರಾಗಿಲ್ಲ. ಪ್ರಕರಣ ಕೋರ್ಟ್‌ನಲ್ಲಿರುವಾಗ ಸಮನ್ಸ್ ನೀಡುವುದು ಕಾನೂನು ಬಾಹಿರ ಎಂದು ಆಪ್ ಸಮರ್ಥಿಸಿಕೊಂಡಿದೆ.

    ಜಾರಿ ನಿರ್ದೇಶನಾಲಯವೇ ನ್ಯಾಯಾಲಯದ ಮೊರೆ ಹೋಗಿದ್ದು, ಮತ್ತೆ ಮತ್ತೆ ಸಮನ್ಸ್ ಕಳುಹಿಸುವ ಬದಲು ಇಡಿ ನ್ಯಾಯಾಲಯದ ತೀರ್ಪಿಗಾಗಿ ಕಾಯಬೇಕು ಎಂದು ಪಕ್ಷ ಹೇಳಿದೆ. ಫೆಬ್ರವರಿ 14 ರಂದು, ತನಿಖಾ ಸಂಸ್ಥೆಯು ಕೇಜ್ರಿವಾಲ್‌ಗೆ ತನ್ನ ಆರನೇ ಸಮನ್ಸ್ ಜಾರಿ ಮಾಡಿತು. ಫೆಬ್ರವರಿ 19 ರಂದು ತನ್ನ ಮುಂದೆ ಹಾಜರಾಗುವಂತೆ ಕೇಳಿಕೊಂಡಿತು. ಇದನ್ನೂ ಓದಿ: ಕೇಂದ್ರ ಸರ್ಕಾರದ ಜೊತೆ ಚರ್ಚೆ, ಐದು ಬೆಳೆಗೆ ಬೆಂಬಲ ಬೆಲೆ ಖಾತರಿ ಕಾನೂನು ಪ್ರಸ್ತಾವನೆ

    ಕೇಜ್ರಿವಾಲ್ ಅವರಿಗೆ ನೀಡಲಾದ ಮೊದಲ ಮೂರು ಸಮನ್ಸ್‌ಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 174 ರ ಅಡಿಯಲ್ಲಿ ತನಿಖಾ ಸಂಸ್ಥೆ ದೂರು ದಾಖಲಿಸಿದೆ. ಕೇಜ್ರಿವಾಲ್ ಸಮನ್ಸ್‌ಗಳನ್ನು ತಪ್ಪಿಸಿರುವುದನ್ನು ನ್ಯಾಯಾಲಯವು ಗಮನಿಸಿದೆ. ಅರವಿಂದ್ ಕೇಜ್ರಿವಾಲ್ ಅವರು ಅಪರಾಧ ಎಸಗಿದ್ದಾರೆ ಎಂದು ನ್ಯಾಯಾಲಯ ಒಪ್ಪಿಕೊಂಡಿದೆ ಎಂದು ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ. ಇದನ್ನೂ ಓದಿ: ರಾಜಸ್ಥಾನದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ; ಬುಡಕಟ್ಟು ಮುಖಂಡ ಮಹೇಂದ್ರ ಜೀತ್ ಬಿಜೆಪಿ ಸೇರ್ಪಡೆ

    ನ್ಯಾಯಾಲಯದ ಮುಂದಿರುವ ಪ್ರಶ್ನೆಯು ಸಮನ್ಸ್‌ಗಳ ಸಿಂಧುತ್ವದ ಬಗ್ಗೆ ಅಲ್ಲ. ಬದಲಿಗೆ ಕೇಜ್ರಿವಾಲ್ ಅವರು ಹೇಳಿದ ಮೂರು ಸಮನ್ಸ್‌ಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ ಕಾನೂನುಬಾಹಿರ ಕೃತ್ಯ ಎಂದು ಇಡಿ ಅಧಿಕಾರಿಗಳು ಆರೋಪಿಸಿದರು. ಕೇಜ್ರಿವಾಲ್ ಇದುವರೆಗಿನ ಎಲ್ಲಾ ತನಿಖಾ ಸಂಸ್ಥೆಯ ಸಮನ್ಸ್‌ಗಳನ್ನು ‘ಕಾನೂನುಬಾಹಿರ’ ಮತ್ತು ‘ರಾಜಕೀಯ ಪ್ರೇರಿತ’ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಆಫರ್‌ ಒಪ್ಪಿಕೊಂಡರೆ ಮಾತ್ರ INDIA ದಲ್ಲಿ ಮುಂದುವರಿಕೆ- ಕಾಂಗ್ರೆಸ್‌ಗೆ ಎಸ್‌ಪಿ ಷರತ್ತು

    ಇತ್ತೀಚಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆಗೆ ಹಾಜರಾದ ಅರವಿಂದ್ ಕೇಜ್ರಿವಾಲ್, ದೆಹಲಿ ವಿಧಾನಸಭೆಯಲ್ಲಿ ವಿಶ್ವಾಸ ನಿರ್ಣಯದ ಚರ್ಚೆ ನಡೆಯುತ್ತಿದೆ. ಅಧಿವೇಶನದಿಂದಾಗಿ ಅವರು ನ್ಯಾಯಾಲಯದ ಮುಂದೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಕೇಜ್ರಿವಾಲ್ ಮನವಿ ಆಲಿಸಿದ ನ್ಯಾಯಾಲಯವು ಮಾರ್ಚ್ 16 ರಂದು ಬೆಳಿಗ್ಗೆ 10 ಗಂಟೆಗೆ ದೈಹಿಕವಾಗಿ ಹಾಜರಾಗಲು ಮುಂದಿನ ದಿನಾಂಕವನ್ನು ನಿಗದಿಪಡಿಸಿದೆ. ಇದನ್ನೂ ಓದಿ: NDA ಸೇರುತ್ತಾರಾ ನವನಿರ್ಮಾಣ ಸೇನೆಯ ರಾಜ್‌ ಠಾಕ್ರೆ?

  • 2029ರಲ್ಲಿ ಆಪ್‌ನಿಂದ ಬಿಜೆಪಿ ಮುಕ್ತ – 3ನೇ ಬಾರಿ ವಿಶ್ವಾಸಮತ ಗೆದ್ದ ಕೇಜ್ರಿವಾಲ್‌

    2029ರಲ್ಲಿ ಆಪ್‌ನಿಂದ ಬಿಜೆಪಿ ಮುಕ್ತ – 3ನೇ ಬಾರಿ ವಿಶ್ವಾಸಮತ ಗೆದ್ದ ಕೇಜ್ರಿವಾಲ್‌

    – ವಿಧಾನಸಭೆಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ

    ನವದೆಹಲಿ: ದೆಹಲಿ ವಿಧಾನಸಭೆಯಲ್ಲಿ (Delhi Vidhan Sabha) ಮತ್ತೊಮ್ಮೆ ವಿಶ್ವಾಸ ಮತ ಸಾಬೀತುಪಡಿಸುವಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಯಶಸ್ವಿಯಾಗಿದ್ದಾರೆ. ಆಪ್ ಶಾಸಕರನ್ನು ಆಮಿಷವೊಡ್ಡಿ ಸೆಳೆಯಲು ಬಿಜೆಪಿ (BJP) ಪ್ರಯತ್ನಿಸುತ್ತಿದೆ ಎನ್ನುವ ಆರೋಪದ ಬೆನ್ನಲ್ಲೇ ಅವರು ಈ ಅವಧಿಯಲ್ಲಿ ಮೂರನೇ ಬಾರಿಗೆ ವಿಶ್ವಾಸಮತ ಸಾಬೀತುಪಡಿಸುವ ಕಾರ್ಯ ಮಾಡಿದರು.

    ಸದನವು ನಂತರ ಧ್ವನಿ ಮತದ ಮೂಲಕ ವಿಶ್ವಾಸದ ನಿರ್ಣಯವನ್ನು ಅಂಗೀಕರಿಸಿತು, ಮತದಾನದ ಸಮಯದಲ್ಲಿ  ಆಪ್‌ನ 62 ಶಾಸಕರ ಪೈಕಿ 54 ಮಂದಿ ಉಪಸ್ಥಿತರಿದ್ದರು. ಆಪ್‌ನ ಯಾವ ಶಾಸಕರು ಪಕ್ಷಾಂತರ ಮಾಡಿಲ್ಲ, ಇಬ್ಬರು ಶಾಸಕರು ಜೈಲಿನಲ್ಲಿದ್ದಾರೆ, ಕೆಲವರು ಅಸ್ವಸ್ಥರಾಗಿದ್ದಾರೆ ಇನ್ನು ಕೆಲವರು ನಗರದಿಂದ ಹೊರಗಿದ್ದರು. ಇದನ್ನೂ ಓದಿ: ರಂಭಾಪುರಿ ಶ್ರೀಗಳ ಕಾರಿಗೆ ಚಪ್ಪಲಿ ಎಸೆತ

    ವಿಶ್ವಾಸಮತ ಸಾಬೀತುಪಡಿಸಿದ ಬಳಿಕ ಮಾತನಾಡಿದ ಅವರು, ಆಮ್ ಅದ್ಮಿ ಪಕ್ಷವೂ ಬಿಜೆಪಿಗೆ ಪ್ರಬಲ ಪೈಪೋಟಿಯಾಗಿದೆ. ಈ ಕಾರಣಕ್ಕೆ ನಮಗೆ ಕಿರುಕುಳ ಕೊಡಲಾಗುತ್ತಿದೆ. 2029ರ ಚುನಾವಣೆಯಲ್ಲಿ ದೇಶವನ್ನು ಬಿಜೆಪಿಯಿಂದ ಆಪ್ ಮುಕ್ತಗೊಳಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಸಿದರು. ಇದನ್ನೂ ಓದಿ: 21 ವರ್ಷಗಳಿಂದ ಭೂಗತನಾಗಿದ್ದ ಮೋಸ್ಟ್ ವಾಂಟೆಡ್ ನಕ್ಸಲ್‌ನನ್ನ ಹಿಡಿದುಕೊಟ್ಟ ಕಾಡಾನೆ!

    ನಮಗೆ ಸದನದಲ್ಲಿ ಬಹುಮತವಿದೆ ಆದರೆ ಬಿಜೆಪಿ ಎಎಪಿ ಶಾಸಕರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿರುವ ಕಾರಣ ಈ ವಿಶ್ವಾಸ ನಿರ್ಣಯದ ಅಗತ್ಯವಿತ್ತು. ಬಿಜೆಪಿ ʼರಾಮ ಭಕ್ತ’ ಎಂದು ಹೇಳಿಕೊಳ್ಳುತ್ತದೆ ಆದರೆ ಅವರು ನಮ್ಮ ಆಸ್ಪತ್ರೆಗಳಲ್ಲಿ ಬಡವರ ಔಷಧಿಗಳ ಪೂರೈಕೆ ನಿಲ್ಲಿಸಿದ್ದಾರೆ ಎಂದು ಕೇಜ್ರಿವಾಲ್ ಆರೋಪಿಸಿದರು.

     

    ನಾವು ಸರ್ಕಾರವನ್ನು ನಡೆಸುತ್ತಿದ್ದರೂ ಅವರು ಇಲಾಖೆಗಳು ಮತ್ತು ಅಧಿಕಾರಶಾಹಿಯ ಮೇಲೆ ನಿಯಂತ್ರಣದ ಮೂಲಕ ನಮ್ಮ ಕೆಲಸವನ್ನು ನಿಲ್ಲಿಸುತ್ತಿದ್ದಾರೆ. ನಮ್ಮ ನಾಯಕರನ್ನು ಬಂಧಿಸುವ ಮೂಲಕ ಆಪ್‌ ಅನ್ನು ಕೊನೆಗೊಳಿಸಬಹುದು ಎಂದು ಬಿಜೆಪಿ ಭಾವಿಸಿದೆ. ನೀವು ನನ್ನನ್ನೂ ಬಂಧಿಸಬಹುದು ಆದರೆ ನನ್ನ ಮತ್ತು ಅವರ ಆಲೋಚನೆಗಳನ್ನು ಹೇಗೆ ಮುಗಿಸುತ್ತೀರಿ ಎಂದು ಪ್ರಶ್ನಿಸಿದರು.

    70 ಸದಸ್ಯರ ಸದನದಲ್ಲಿ 62 ಶಾಸಕರನ್ನು ಅಪ್‌ ಹೊಂದಿದ್ದು ಪ್ರತಿಪಕ್ಷ ಬಿಜೆಪಿ ಎಂಟು ಶಾಸಕರನ್ನು ಹೊಂದಿದೆ. ಅವರಲ್ಲಿ ಏಳು ಮಂದಿ ಸದನದಿಂದ ಅಮಾನತುಗೊಂಡಿದ್ದಾರೆ.

     

  • ವಿಚಾರಣೆಗೆ ಖುದ್ದು ಹಾಜರಾಗುವಂತೆ ಕೇಜ್ರಿವಾಲ್‍ಗೆ ಕೋರ್ಟ್ ಆದೇಶ

    ವಿಚಾರಣೆಗೆ ಖುದ್ದು ಹಾಜರಾಗುವಂತೆ ಕೇಜ್ರಿವಾಲ್‍ಗೆ ಕೋರ್ಟ್ ಆದೇಶ

    – ಮಾರ್ಚ್ 16 ರಂದು ವಿಚಾರಣೆ

    ನವದೆಹಲಿ: ಹೊಸ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರಿಗೆ ಮಾರ್ಚ್ 16 ರಂದು ಖುದ್ದು ಹಾಜರಾಗಲು ರೋಸ್ ಅವೆನ್ಯೂ ಕೋರ್ಟ್ (Rouse Avenue court) ಅನುಮತಿ ನೀಡಿದೆ. ಜಾರಿ ನಿರ್ದೇಶನಾಲಯ (Enforecement Directorate) ನೀಡಿದ ಐದು ಸಮನ್ಸ್‌ಗಳಿಗೆ ಹಾಜರಾಗದ ಹಿನ್ನಲೆ ಅಧಿಕಾರಿಗಳು ಕೋರ್ಟ್ ಮೊರೆ ಹೋಗಿದ್ದರು.

    ಈ ಮೊದಲು ಇಂದು ವಿಚಾರಣೆಗೆ ಹಾಜರಾಗಲು ಕೋರ್ಟ್ ಸೂಚನೆ ನೀಡಿತ್ತು. ವಿಡಿಯೋ ಕಾನ್ಫೆರೆನ್ಸ್ ಮೂಲಕ ವಿಚಾರಣೆಯಲ್ಲಿ ಭಾಗಿಯಾದ ಅರವಿಂದ್ ಕೇಜ್ರಿವಾಲ್, ಇವತ್ತು ವಿಚಾರಣೆಗೆ ಹಾಜರಾಗಬೇಕು ಎಂದುಕೊಂಡಿದ್ದೆ ಆದರೆ ವಿಧಾನಸಭೆಯಲ್ಲಿ ಇಂದು ನಡೆಯಲಿರುವ ವಿಶ್ವಾಸ ನಿರ್ಣಯದ ಚರ್ಚೆಯಿಂದಾಗಿ ನ್ಯಾಯಾಲಯದ ಮುಂದೆ ನೇರವಾಗಿ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಬಜೆಟ್ ಅಧಿವೇಶನವೂ ನಡೆಯುತ್ತಿದೆ. ಇದು ಮಾರ್ಚ್ 1 ರವರೆಗೆ ನಡೆಯಲಿದೆ. ತದನಂತರ ಯಾವುದೇ ದಿನಾಂಕವನ್ನು ನೀಡಬಹುದು ಎಂದು ಅವರು ಕೋರ್ಟ್‍ಗೆ ಮನವಿ ಮಾಡಿಕೊಂಡರು. ಮನವಿ ಆಲಿಸಿದ ಕೋರ್ಟ್ ಕೇಜ್ರಿವಾಲ್ ಅವರ ಮುಂದೆ ದೈಹಿಕವಾಗಿ ಹಾಜರಾಗಲು ಮುಂದಿನ ದಿನಾಂಕವನ್ನು ಮಾರ್ಚ್ 16ರ ಬೆಳಿಗ್ಗೆ 10 ಗಂಟೆಗೆ ನಿಗದಿಪಡಿಸಿತು. ಇದನ್ನೂ ಓದಿ: ಸಿಎಂಗೆ ಗೌರವ ಕೊಡುವುದು ನಮ್ಮ ಜವಾಬ್ದಾರಿ- ಅನಂತ್ ಕುಮಾರ್ ಹೆಗಡೆಗೆ ಹೈಕೋರ್ಟ್ ತರಾಟೆ

    ನ್ಯಾಯಾಲಯದ ಆದೇಶದ ನಂತರ ಮಾತನಾಡಿದ ಕೇಜ್ರಿವಾಲ್ ಅವರ ವಕೀಲ ರಮೇಶ್ ಗುಪ್ತಾ, ಮುಖ್ಯಮಂತ್ರಿಯವರು ರೋಸ್ ಅವೆನ್ಯೂ ನ್ಯಾಯಾಲಯದ ಮುಂದೆ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿಗಾಗಿ ಸಲ್ಲಿಸಿದ ಅರ್ಜಿಯನ್ನು ಸ್ವೀಕರಿಸಿದೆ. ಇಡಿಯನ್ನು ಪ್ರತಿನಿಧಿಸುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ ರಾಜು ಅವರು ಅರ್ಜಿಯನ್ನು ವಿರೋಧಿಸಿಲ್ಲ. ಮುಂದಿನ ವಿಚಾರಣೆಗೆ ನ್ಯಾಯಾಲಯಕ್ಕೆ ಕೇಜ್ರಿವಾಲ್ ಹಾಜರಾಗಿ ಜಾಮೀನು ಪಡೆಯಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಎನ್.ವಿ ಅಂಜಾರಿಯಾ ನೇಮಕ

  • ಮದ್ಯ ನೀತಿ ಪ್ರಕರಣ; ಕೇಜ್ರಿವಾಲ್‌ಗೆ 6ನೇ ಬಾರಿಗೆ ED ಸಮನ್ಸ್‌

    ಮದ್ಯ ನೀತಿ ಪ್ರಕರಣ; ಕೇಜ್ರಿವಾಲ್‌ಗೆ 6ನೇ ಬಾರಿಗೆ ED ಸಮನ್ಸ್‌

    ನವದೆಹಲಿ: ಮದ್ಯ ನೀತಿ ಪ್ರಕರಣದಲ್ಲಿ (Liquor Scam) ಜಾರಿ ನಿರ್ದೇಶನಾಲಯ (Enforcement Directorate) ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ಗೆ (Arvind Kejriwal) 6ನೇ ಬಾರಿ ಸಮನ್ಸ್‌ ನೀಡಿದೆ.

    ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕರೂ ಆಗಿರುವ ಕೇಜ್ರಿವಾಲ್ ಅವರನ್ನು ಫೆ.19 ರಂದು ಕೇಂದ್ರ ತನಿಖಾ ಸಂಸ್ಥೆಯ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ. ಇದನ್ನೂ ಓದಿ: Rajyasabha Polls: ಕಾಂಗ್ರೆಸ್‌ನಿಂದ ಕರ್ನಾಟಕದ ಮೂವರಿಗೆ ಟಿಕೆಟ್

    ಸತತ ಆರನೇ ಬಾರಿಗೆ ಕೇಜ್ರಿವಾಲ್ ಅವರನ್ನು ವಿಚಾರಣೆಗೆ ಹಾಜರಾಗುವಂತೆ ತನಿಖಾ ಸಂಸ್ಥೆ ಕರೆದಿದೆ. ಈ ಹಿಂದೆ ಫೆಬ್ರವರಿ 2, ಜನವರಿ 18 ಮತ್ತು ಜನವರಿ 3 ರಂದು ಮತ್ತು 2023 ರಲ್ಲಿ ಡಿಸೆಂಬರ್ 21 ಮತ್ತು ನವೆಂಬರ್ 2 ರಂದು ಅವರನ್ನು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು.

    ದೆಹಲಿ ಸಿಎಂ ಕೇಜ್ರಿವಾಲ್‌, ಉದ್ದೇಶಪೂರ್ವಕವಾಗಿ ಸಮನ್ಸ್‌ಗೆ ಅವಿಧೇಯರಾಗಿದ್ದಾರೆ. ಕುಂಟು ನೆಪಗಳನ್ನು ನೀಡುತ್ತಿದ್ದಾರೆ ಎಂದು ಇ.ಡಿ ತನ್ನ ದೂರಿನಲ್ಲಿ ಆರೋಪಿಸಿದೆ. ಗೌರವಾನ್ವಿತ ಸ್ಥಾನದಲ್ಲಿರುವವರು ಹೀಗೆ ಮಾಡಿದರೆ, ರಾಜ್ಯದ ಜನತೆಗೆ ತಪ್ಪು ಸಂದೇಶ ಹೋಗುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ಅಜ್ಜನ ಕನಸು ನೆರವೇರಿಸಲು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಲಾಲ್ ಬಹದ್ದೂರ್ ಶಾಸ್ತ್ರಿ ಮೊಮ್ಮೊಗ

    ಕೇಜ್ರಿವಾಲ್ ಅವರು ಈ ಹಿಂದೆ ಇ.ಡಿಗೆ ಪತ್ರ ಬರೆದಿದ್ದರು. ಸಮನ್ಸ್‌ಗಳನ್ನು, ಅಕ್ರಮ ಮತ್ತು ರಾಜಕೀಯ ಪ್ರೇರಿತ ಎಂದು ಟೀಕಿಸಿದ್ದರು. ಚುನಾವಣೆ ಪ್ರಚಾರಕ್ಕೆ ಬರದಂತೆ ತಡೆಯುವ ಉದ್ದೇಶ ಹೀಗೆ ಮಾಡಲಾಗುತ್ತಿದೆ ಎಂದು ಟೀಕಿಸಿದ್ದಾರೆ.

  • ಕುಟುಂಬ ಸಮೇತರಾಗಿ ಅಯೋಧ್ಯೆ ರಾಮಲಲ್ಲಾನ ದರ್ಶನ ಪಡೆದ ದೆಹಲಿ ಸಿಎಂ

    ಕುಟುಂಬ ಸಮೇತರಾಗಿ ಅಯೋಧ್ಯೆ ರಾಮಲಲ್ಲಾನ ದರ್ಶನ ಪಡೆದ ದೆಹಲಿ ಸಿಎಂ

    – ಪಂಜಾಬ್‌ ಸಿಎಂ ಭಗವಂತ್‌ ಮಾನ್‌ ಸಾಥ್‌

    ಅಯೋಧ್ಯೆ (ಉತ್ತರ ಪ್ರದೇಶ): ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರು ಕುಟುಂಬ ಸಮೇತರಾಗಿ ಅಯೋಧ್ಯೆಯ (Ayodhya) ಐತಿಹಾಸಿಕ ರಾಮಮಂದಿರಕ್ಕೆ (Ram Mandir) ಭೇಟಿ ನೀಡಿ ಭಗವಾನ್‌ ರಾಮಲಲ್ಲಾನಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.

    ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರೊಂದಿಗೆ ಭವ್ಯ ದೇವಾಲಯಕ್ಕೆ ಇಂದು (ಸೋಮವಾರ) ಭೇಟಿ ನೀಡಿದರು. ಉಭಯ ನಾಯಕರ ಕುಟುಂಬದವರೂ ಜೊತೆಗಿದ್ದರು. ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಹರಿಸಲು CWRC ಶಿಫಾರಸು

    ರಾಮಲಲ್ಲಾಗೆ ಪ್ರಾರ್ಥನೆ ಸಲ್ಲಿಸಿದ ನಂತರ ನಾನು ವರ್ಣಿಸಲಾಗದ ಶಾಂತತೆಯನ್ನು ಅನುಭವಿಸಿದೆ. ಪ್ರತಿದಿನ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಜನರ ಪ್ರೀತಿ ಮತ್ತು ಭಕ್ತಿಯನ್ನು ನೋಡುವುದು ನಿಜಕ್ಕೂ ಹೃದಯಸ್ಪರ್ಶಿಯಾಗಿದೆ. ಎಲ್ಲರ ಒಳಿತಿಗಾಗಿ ನಾನು ಪ್ರಾರ್ಥಿಸಿದ್ದೇನೆ ಎಂದು ಸಿಎಂ ಕೇಜ್ರಿವಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

    ರಾಮಲಲ್ಲಾನ ದರ್ಶನ ಪಡೆಯುವುದು ನನ್ನ ಬಹುದಿನಗಳ ಆಸೆಯಾಗಿತ್ತು. ದೇಶದ ಕ್ಷೇಮಕ್ಕಾಗಿ ಪ್ರಾರ್ಥಿಸಿದ್ದೇನೆ ಎಂದು ಪಂಜಾಬ್ ಸಿಎಂ ಮಾನ್ ಹೇಳಿದ್ದಾರೆ. ಇದನ್ನೂ ಓದಿ: ʻದೆಹಲಿ ಚಲೋʼ ಪ್ರತಿಭಟಗೆ ತೆರಳುತ್ತಿದ್ದ ರಾಜ್ಯದ 100ಕ್ಕೂ ಹೆಚ್ಚು ರೈತರು ಪೊಲೀಸ್‌ ವಶಕ್ಕೆ

    ಅಯೋಧ್ಯೆಯ ದೇವಾಲಯದಲ್ಲಿ ರಾಮಲಲ್ಲಾನ ‘ಪ್ರಾಣ ಪ್ರತಿಷ್ಠಾಪನೆ’ ಜ.22 ರಂದು ನೆರವೇರಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಪ್ರಾಣ ಪ್ರತಿಷ್ಠಾಪನೆ ಶಾಸ್ತ್ರೋಕ್ತವಾಗಿ ನಡೆದಿತ್ತು.

  • ಅಯೋಧ್ಯೆ ರಾಮಮಂದಿರಕ್ಕೆ ನಾಳೆ ಅರವಿಂದ್‌ ಕೇಜ್ರಿವಾಲ್‌ ಭೇಟಿ

    ಅಯೋಧ್ಯೆ ರಾಮಮಂದಿರಕ್ಕೆ ನಾಳೆ ಅರವಿಂದ್‌ ಕೇಜ್ರಿವಾಲ್‌ ಭೇಟಿ

    ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಸೋಮವಾರ ಅಯೋಧ್ಯೆಯ ರಾಮಮಂದಿರಕ್ಕೆ (Ram Mandir) ಭೇಟಿ ನೀಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಆಮ್ ಆದ್ಮಿ ಪಕ್ಷದ (AAP) ನಾಯಕ ಅವರ ಪತ್ನಿ ಮತ್ತು ಕುಟುಂಬಸ್ಥರೊಂದಿಗೆ ಭೇಟಿ ನೀಡಲಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಕೂಡ ಪವಿತ್ರ ತಾಣಕ್ಕೆ ಭೇಟಿ ನೀಡಲಿದ್ದಾರೆ. ಇದನ್ನೂ ಓದಿ: ರಾಮಲಲ್ಲಾ ದರ್ಶನಕ್ಕೆ ಅಯೋಧ್ಯೆಗೆ ಬಸ್‌ನಲ್ಲಿ ತೆರಳಿದ ಯುಪಿ ಶಾಸಕರು

    ಜ.22 ರಂದು ನಡೆದ ‘ಪ್ರಾಣ ಪ್ರತಿಷ್ಠಾಪನೆ’ ಸಮಾರಂಭಕ್ಕೆ ತನಗೆ ಔಪಚಾರಿಕ ಆಹ್ವಾನ ಬಂದಿಲ್ಲ ಎಂದು ಕೇಜ್ರಿವಾಲ್ ಈ ಹಿಂದೆ ಹೇಳಿದ್ದರು. ಅವರು ತಮ್ಮ ಕುಟುಂಬದೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಲು ಬಯಸಿದ್ದಾರೆ ಎನ್ನಲಾಗಿತ್ತು.

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಜ.22 ರಂದು ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಶಾಸ್ತ್ರೋಕ್ತವಾಗಿ ನೆರವೇರಿತು. ಇದಾದ ಬಳಿಕ ಪಕ್ಷಾತೀತವಾಗಿ ನಾಯಕರು ಕೂಡ ಪವಿತ್ರ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಇದನ್ನೂ ಓದಿ: ಬಾಲ ರಾಮನ ಕಣ್ಣನ್ನು ಕೆತ್ತಿದ್ದ ಚಿನ್ನದ ಉಳಿ, ಬೆಳ್ಳಿಯ ಸುತ್ತಿಗೆಯ ಫೋಟೋ ಹಂಚಿಕೊಂಡ ಯೋಗಿರಾಜ್‌

    ಬಿಜೆಪಿ, ಕಾಂಗ್ರೆಸ್, ಮಾಯಾವತಿಯವರ ಬಹುಜನ ಸಮಾಜ ಪಕ್ಷ, ಒಪಿ ರಾಜ್‌ಭರ್ ನೇತೃತ್ವದ ಎಸ್‌ಬಿಎಸ್‌ಪಿ ಮತ್ತು ಜಯಂತ್ ಚೌಧರಿ ನೇತೃತ್ವದ ರಾಷ್ಟ್ರೀಯ ಲೋಕದಳ ಸೇರಿದಂತೆ ಇತರ ಪಕ್ಷಗಳ ಶಾಸಕರು ಅಯೋಧ್ಯೆಗೆ ಭೇಟಿ ನೀಡಿದ್ದಾರೆ.

  • I.N.D.I.A ಮೈತ್ರಿಕೂಟದಿಂದ ಹೊರಬಂದ ಆಪ್‌

    I.N.D.I.A ಮೈತ್ರಿಕೂಟದಿಂದ ಹೊರಬಂದ ಆಪ್‌

    ನವದೆಹಲಿ: ಪಂಜಾಬ್ (Punjab), ಚಂಡೀಗಢದಲ್ಲಿ (Chandigarh) ಇಂಡಿಯಾ ಒಕ್ಕೂಟದೊಂದಿಗೆ (INDIA Bloc) ಯಾವುದೇ ಮೈತ್ರಿ ಇಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಘೋಷಿಸಿದ್ದಾರೆ. ಎಎಪಿ ಎಲ್ಲಾ ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಹೇಳಿದ್ದಾರೆ.

    ಈ ಘೋಷಣೆಯಿಂದ ಇಂಡಿಯಾ ಒಕ್ಕೂಟಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ಆಮ್‌ ಆದ್ಮಿ ಪಕ್ಷವು ಮಹಾಮೈತ್ರಿಯನ್ನು ತೊರೆದಿದೆ. ಪಕ್ಷದ ರಾಷ್ಟ್ರೀಯ ಸಂಚಾಲಕ ಕೇಜ್ರಿವಾಲ್ ಈ ಸಂಬಂಧ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಮುನ್ನ ಸಿಎಎ ಜಾರಿ: ಅಮಿತ್‌ ಶಾ ಘೋಷಣೆ

    ಇಂಡಿಯಾ ಒಕ್ಕೂಟ ತೊರೆಯಲು ಆರ್‌ಎಲ್‌ಡಿ ನಾಯಕ ಜಯಂತ್ ಚೌಧರಿ ಸಿದ್ಧರಾಗಿದ್ದಾರೆ. ಮಾಜಿ ಪ್ರಧಾನಿ ಚರಣ್‌ ಸಿಂಗ್‌ ಅವರಿಗೆ ‘ಭಾರತ ರತ್ನ’ ಮರಣೋತ್ತರ ಪ್ರಶಸ್ತಿ ಘೋಷಿಸಿದ ಬಳಿಕ ಬಿಜೆಪಿ ಜೊತೆ ಮೈತ್ರಿಗೆ ಮುಂದಾಗಿದ್ದಾರೆ.

    ಈ ಮೊದಲು ನಿತೀಶ್ ಕುಮಾರ್ ಮೈತ್ರಿ ತೊರೆದು ಎನ್‌ಡಿಎ ಒಕ್ಕೂಟ ಸೇರಿದ್ದರು. ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಕೂಡ ಮೈತ್ರಿಕೂಟದಿಂದ ಹೊರಬಂದಿದ್ದರು. ಇದನ್ನೂ ಓದಿ: ಮೋದಿಯವರ 10 ವರ್ಷ ರಾಜ್ಯಕ್ಕೆ ಅನ್ಯಾಯದ ಕಾಲ: ಸಿದ್ದರಾಮಯ್ಯ

  • ಬಿಜೆಪಿಯಿಂದ ಕೋಟಿ ಕೋಟಿ ಆಫರ್‌ – ಆರೋಪ ಮಾಡಿದ್ದ ಕೇಜ್ರಿವಾಲ್‌ಗೆ ಕಂಟಕ – ದೆಹಲಿ ಕ್ರೈಂಬ್ರ್ಯಾಂಚ್‌ ನೋಟಿಸ್‌

    ಬಿಜೆಪಿಯಿಂದ ಕೋಟಿ ಕೋಟಿ ಆಫರ್‌ – ಆರೋಪ ಮಾಡಿದ್ದ ಕೇಜ್ರಿವಾಲ್‌ಗೆ ಕಂಟಕ – ದೆಹಲಿ ಕ್ರೈಂಬ್ರ್ಯಾಂಚ್‌ ನೋಟಿಸ್‌

    ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಆಪ್‌ ಸರ್ಕಾರವನ್ನು ಕೆಡವಲು ಸಂಚು ರೂಪಿಸಿರುವ ಬಿಜೆಪಿ 7 ಆಮ್ ಆದ್ಮಿ ಪಕ್ಷದ ಶಾಸಕರನ್ನ (AAP MLAs) ಖರೀದಿಸಲು ಪ್ರಯತ್ನಿಸುತ್ತಿದೆ. 7 ಶಾಸಕರಿಗೆ ಬಿಜೆಪಿ ತಲಾ 25 ಕೋಟಿ ರೂ. ಆಫರ್‌ ನೀಡಿದೆ ಎಂದು ಆರೋಪಿಸಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರಿಗೆ ದೆಹಲಿ ಪೊಲೀಸರ ಅಪರಾಧ ವಿಭಾಗದ ನೋಟಿಸ್‌ ನೀಡಿದೆ ಎಂದು ಮೂಲಗಳು ತಿಳಿಸಿವೆ.

    ಶುಕ್ರವಾರ ಸಂಜೆ ಮುಖ್ಯಮಂತ್ರಿ ಅವರ ನಿವಾಸಕ್ಕೆ ಭೇಟಿ ನೀಡಿದ ದೆಹಲಿ ಪೊಲೀಸರ ಕ್ರೈಂ ಬ್ರ್ಯಾಂಚ್‌ ತಂಡ ನೋಟಿಸ್‌ ನೀಡಿದೆ ಎಂದು ಹೇಳಲಾಗಿದೆ. ಆದ್ರೆ ದೆಹಲಿ ಮುಖ್ಯಮಂತ್ರಿಗಳ ಕಚೇರಿ, ಅಪರಾಧ ವಿಭಾಗದ ಅಧಿಕಾರಿಗಳು ಯಾವುದೇ ರೀತಿಯ ನೋಟಿಸ್‌ ನೀಡಿಲ್ಲ ಎಂದು ಹೇಳಿಕೊಂಡಿದೆ. ಇದನ್ನೂ ಓದಿ: 7 ಶಾಸಕರನ್ನ ಖರೀದಿಸಲು ಬಿಜೆಪಿಯಿಂದ ತಲಾ 25 ಕೋಟಿ ರೂ. ಆಫರ್‌ – ಕೇಜ್ರಿವಾಲ್‌ ಹೊಸ ಬಾಂಬ್‌

    7 ಆಮ್ ಆದ್ಮಿ ಪಕ್ಷದ ಶಾಸಕರನ್ನ ಖರೀದಿಸಲು ಬಿಜೆಪಿ ತಲಾ 25 ಕೋಟಿ ರೂ. ಆಫರ್‌ ನೀಡಿದೆ ಎಂದು ಕಳೆದವಾರ ಕೇಜ್ರಿವಾಲ್‌ ಆರೋಪಿಸಿದ್ದರು. ಇದರ ವಿರುದ್ಧ ದೆಹಲಿ ಬಿಜೆಪಿ ನಿಯೋಗವು ಅಪರಾಧ ವಿಭಾಗಕ್ಕೆ ದೂರು ನೀಡಿತ್ತು. ಅಲ್ಲದೇ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ತನಿಖೆ ನಡೆಸುವಂತೆ ಬಿಜೆಪಿ ನಿಯೋಗ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರ ಕ್ರೈಂ ಬ್ರ್ಯಾಂಚ್‌ ತಂಡವು ಇಂದು ಕೇಜ್ರಿವಾಲ್‌ ಅವರ ನಿವಾದಕ್ಕೆ ಭೇಟಿ ನೀಡಿ ನೋಟಿಸ್‌ ನೀಡಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.

    ಕೇಜ್ರಿವಾಲ್‌ ಆರೋಪ ಏನು?
    ರಾಷ್ಟ್ರರಾಜಧಾನಿಯಲ್ಲಿ ಆಪ್‌ ಸರ್ಕಾರವನ್ನು ಕೆಡವಲು ಸಂಚು ರೂಪಿಸಿರುವ ಬಿಜೆಪಿ 7 ಆಮ್ ಆದ್ಮಿ ಪಕ್ಷದ ಶಾಸಕರನ್ನ ಖರೀದಿಸಲು ಪ್ರಯತ್ನಿಸುತ್ತಿದೆ. 7 ಶಾಸಕರಿಗೆ ಬಿಜೆಪಿ ತಲಾ 25 ಕೋಟಿ ರೂ. ಆಫರ್‌ ನೀಡಿದೆ. ಬಿಜೆಪಿ ಆಪ್‌ ಶಾಸಕರೊಂದಿಗೆ ಮಾತುಕತೆಯಲ್ಲಿ ತೊಡಗಿದೆ. ಆಪ್‌ ಸರ್ಕಾರವನ್ನು ಸಂಪೂರ್ಣವಾಗಿ ಮುಗಿಸಲು ಪ್ಲ್ಯಾನ್‌ ಮಾಡಿದೆ. ಆದ್ದರಿಂದ ದೆಹಲಿ ಮದ್ಯ ನೀತಿ ಪ್ರಕರಣಕ್ಕೆ (Delhi liquor Policy Case) ಸಂಬಂಧಿಸಿದಂತೆ ಮುಖ್ಯಮಂತ್ರಿಗಳನ್ನು ಬಂಧಿಸುವುದಾಗಿ ಬೆದರಿಕೆ ಹಾಕಿದೆ. ಇದನ್ನೂ ಓದಿ: 5ನೇ ಬಾರಿಯೂ ಇಡಿ ವಿಚಾರಣೆಗೆ ಕೇಜ್ರಿವಾಲ್‌ ಗೈರು

    ದೆಹಲಿಯ ಆಪ್‌ ಸರ್ಕಾರವನ್ನ ಸಂಪೂರ್ಣವಾಗಿ ಉರುಳಿಸುತ್ತೇವೆ. ಈಗಾಗಲೇ 21 ಶಾಸಕರೊಟ್ಟಿಗೆ ಮಾತುಕತೆ ನಡೆಸಿದ್ದೇವೆ. ನೀವೂ ಬಂದುಬಿಡಿ, ಪ್ರತಿಯೊಬ್ಬರಿಗೆ ತಲಾ 25 ಕೋಟಿ ರೂ. ಕೊಡುತ್ತೇವೆ. ಜೊತೆಗೆ ಬಿಜೆಪಿಯಿಂದ ಟಿಕೆಟ್‌ ನೀಡುತ್ತೇವೆ ಎಂದು ಆಮಿಷ ತೋರಿಸಿದ್ದಾರೆ ಎಂದು ಆರೋಪಿಸಿದ್ದರು. ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ನಾನು ಪ್ರಚಾರ ಮಾಡೋದನ್ನು ತಡೆಯಲು ಸಮನ್ಸ್‌: ಕೇಜ್ರಿವಾಲ್‌ ಕಿಡಿ

  • 5ನೇ ಬಾರಿಯೂ ಇಡಿ ವಿಚಾರಣೆಗೆ ಕೇಜ್ರಿವಾಲ್‌ ಗೈರು

    5ನೇ ಬಾರಿಯೂ ಇಡಿ ವಿಚಾರಣೆಗೆ ಕೇಜ್ರಿವಾಲ್‌ ಗೈರು

    ನವದೆಹಲಿ: ಮದ್ಯ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED)ಯಿಂದ 5ನೇ ಬಾರಿಗೆ ಸಮನ್ಸ್ ಪಡೆದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಇಂದು ಕೂಡ ವಿಚಾರಣೆಗೆ ಹಾಜರಾಗುವುದಿಲ್ಲ.

    ಜನವರಿ 19 ರಂದು ಅರವಿಂದ್ ಕೇಜ್ರಿವಾಲ್ ಅವರು ವಿಚಾರಣೆಗೆ ಗೈರಾದ ನಂತರ, ಇಡಿ ನೀಡಿದ ಸಮನ್ಸ್ (ED Summons) ಕಾನೂನುಬಾಹಿರವಾಗಿದೆ ಮತ್ತು ಅವರನ್ನು ಬಂಧಿಸುವುದು ಅದರ ಏಕೈಕ ಗುರಿಯಾಗಿದೆ ಎಂದು ಎಎಪಿ ಆರೋಪಿಸಿದೆ.

    ಎಎಪಿ ಮುಖ್ಯಸ್ಥರೂ ಆಗಿರುವ ಶ್ರೀ ಕೇಜ್ರಿವಾಲ್ ಅವರು ನವೆಂಬರ್ 2, ಡಿಸೆಂಬರ್ 21 ಮತ್ತು ಜನವರಿ 3 ರಂದು ನೀಡಿದ್ದ ಸಮನ್ಸ್‌ ಗಳಲ್ಲಿ ತನಿಖಾ ಸಂಸ್ಥೆಯ ಮುಂದೆ ಹಾಜರಾಗಲು ನಿರಾಕರಿಸಿದ್ದರು. ಇದನ್ನೂ ಓದಿ: ಚಿಕ್ಕಪ್ಪನಿಂದಲೇ 11 ವರ್ಷದ ಬಾಲಕಿಯ ಶಿರಚ್ಛೇದ – ಪಶ್ಚಿಮ ಬಂಗಾಳದಲ್ಲಿ ಪರಿಸ್ಥಿತಿ ಉದ್ವಿಗ್ನ

    ಕೇಜ್ರಿವಾಲ್‌ ಅವರಿಗೆ ಇಡಿ ಸಮನ್ಸ್‌ ನೀಡಿರುವುದು ರಾಜಕೀಯ ಪ್ರೇರಿತ ಮತ್ತು ಕಾನೂನುಬಾಹಿರ ಎಂದು ಟೀಕಿಸಿದೆ. ಅಲ್ಲದೇ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿ ದೆಹಲಿ ಸರ್ಕಾರವನ್ನು ಉರುಳಿಸುವುದು ಪ್ರಧಾನಿ ಮೋದಿಯವರ ಗುರಿಯಾಗಿದೆ. ಇದನ್ನು ಮಾಡಲು ನಾವು ಬಿಡುವುದಿಲ್ಲ ಎಂದು ಕಿಡಿಕಾರಿತ್ತು.

    ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ಮುಖ್ಯಸ್ಥರನ್ನು ಕೇಂದ್ರೀಯ ತನಿಖಾ ದಳ (CBI) ಏಪ್ರಿಲ್‌ನಲ್ಲಿ ಪ್ರಶ್ನಿಸಿತ್ತು. ಆದರೆ ಸಂಸ್ಥೆಯು ಆರೋಪಿಯನ್ನಾಗಿ ಮಾಡಿರಲಿಲ್ಲ. ಇಡಿಯಿಂದ ಮೊದಲ ಸಮನ್ಸ್ ಜಾರಿಯಾದಾಗಿನಿಂದಲೂ ದೆಹಲಿ ಮುಖ್ಯಮಂತ್ರಿಯನ್ನು ವಿಚಾರಣೆಯ ನಂತರ ಬಂಧಿಸುತ್ತದೆ ಎಂಬ ತೀವ್ರ ಊಹಾಪೋಹಗಳು ಇದ್ದವು.