Tag: Arvind Kejriwal

  • ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‍ಗೆ ರಾಹುಲ್ ಗಾಂಧಿ ಕಾನೂನು ನೆರವು?

    ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‍ಗೆ ರಾಹುಲ್ ಗಾಂಧಿ ಕಾನೂನು ನೆರವು?

    ನವದೆಹಲಿ: ಜಾರಿ ನಿರ್ದೇಶನಾಲಯದಿಂದ (Enforcement Directorate) ಬಂಧನಕ್ಕೊಳಗಾದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಭೇಟಿಯಾಗಿ ಕಾನೂನು ನೆರವು ನೀಡುವ ಭರವಸೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಇಂದು (ಶುಕ್ರವಾರ) ಅರವಿಂದ್ ಕೇಜ್ರಿವಾಲ್ ಅಥವಾ ಅವರ ಕುಟುಂಬವನ್ನು ಅವರು ಭೇಟಿಯಾಗುವ ಸಾಧ್ಯತೆಗಳಿವೆ.

    ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಅವರ ಮನೆಯಲ್ಲಿ ಶೋಧ ಕಾರ್ಯ ನಡೆಸಿದ ಅಧಿಕಾರಿಗಳು, ಮಹತ್ವದ ದಾಖಲೆಗಳನ್ನು ವಶಕ್ಕೆ ಮಡೆದುಕೊಂಡರು. ಬಳಿಕ ಅವರನ್ನು ಅಧಿಕಾರಿಗಳು ಬಂಧಿಸಿ ಇಡಿ ಪ್ರಧಾನ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಸಿಎಂ ಹುದ್ದೆಗೆ ಕೇಜ್ರಿವಾಲ್‌ ರಾಜೀನಾಮೆ ಇಲ್ಲ – ಜೈಲಿನಿಂದಲೇ ಆಡಳಿತ ನಡೆಸಲು ಸಾಧ್ಯವೇ?

    ಇಡಿ ಜಾರಿಗೊಳಿಸಿದ್ದ 9 ಸಮನ್ಸ್‌ಗಳಿಗೆ ಉತ್ತರಿಸದೇ, ಸತತವಾಗಿ ವಿಚಾರಣೆಗೆ ಗೈರಾಗಿದ್ದರು. ಅಲ್ಲದೇ ಅಕ್ರಮ ಹಣ ವರ್ಗಾವಣೆ ಕುರಿತಂತೆ ಜಾರಿಗೊಳಿಸಲಾಗಿದ್ದ ಸಮನ್ಸ್ ರದ್ದುಗೊಳಿಸುವಂತೆ ದೆಹಲಿ ಹೈಕೋರ್ಟ್‍ಗೆ ಕೇಜ್ರಿವಾಲ್ ಮನವಿ ಸಲ್ಲಿಸಿದ್ದರು. ಅವರ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಲಿಲ್ಲ.

    ಬಂಧನದ ಬಗ್ಗೆ ಪ್ರತಿಕ್ರಿಯಿಸಿದ ದೆಹಲಿ ಸಚಿವ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಅತಿಶಿ, ಜಾರಿ ನಿರ್ದೇಶನಾಲಯದ ಹಿಂದೆ ರಾಜಕೀಯ ಮಾಡುವುದನ್ನು ನಿಲ್ಲಿಸುವಂತೆ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಇಂದು ಬಿಜೆಪಿ ಪ್ರಜಾಪ್ರಭುತ್ವವನ್ನು ಕೊಲೆ ಮಾಡುತ್ತಿದೆ. ಅವರು ಇಬ್ಬರು ವಿರೋಧ ಪಕ್ಷದ ಮುಖ್ಯಮಂತ್ರಿಗಳನ್ನು ಬಂಧಿಸಿದ್ದಾರೆ ಮತ್ತು ಪಕ್ಷದ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿದ್ದಾರೆ. ನೀವು ಹೋರಾಡಲು ಬಯಸಿದರೆ, ರಾಜಕೀಯ ಕ್ಷೇತ್ರದಲ್ಲಿ, ಚುನಾವಣಾ ಕ್ಷೇತ್ರದಲ್ಲಿ ಹೋರಾಡಲು ಮುಂದೆ ಬನ್ನಿ, ರಾಜಕೀಯ ಮಾಡುವುದನ್ನು ನಿಲ್ಲಿಸಿ ಎಂದು ಸವಾಲು ಹಾಕಿದ್ದಾರೆ.

    ಕೇಜ್ರಿವಾಲ್ ಅವರ ಬಂಧನವನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್‍ಗೆ ಮನವಿ ಮಾಡಿದ್ದೇವೆ ಮತ್ತು ತುರ್ತು ವಿಚಾರಣೆಯನ್ನು ಕೋರಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಟಿಕೆಟ್ ಘೋಷಣೆ ಬಾಕಿ

  • ಸಿಎಂ ಹುದ್ದೆಗೆ ಕೇಜ್ರಿವಾಲ್‌ ರಾಜೀನಾಮೆ ಇಲ್ಲ – ಜೈಲಿನಿಂದಲೇ ಆಡಳಿತ ನಡೆಸಲು ಸಾಧ್ಯವೇ?

    ಸಿಎಂ ಹುದ್ದೆಗೆ ಕೇಜ್ರಿವಾಲ್‌ ರಾಜೀನಾಮೆ ಇಲ್ಲ – ಜೈಲಿನಿಂದಲೇ ಆಡಳಿತ ನಡೆಸಲು ಸಾಧ್ಯವೇ?

    ನವದೆಹಲಿ: ಮದ್ಯ ಹಗರಣದಲ್ಲಿ (Delhi Excise Policy Case) ಜಾರಿ ನಿರ್ದೇಶನಾಲಯ(ED) ಬಂಧಿತರಾಗಿರುವ ಅರವಿಂದ ಕೇಜ್ರಿವಾಲ್‌ (Arvind Kejriwal) ಇನ್ನೂ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡದೇ ಇದ್ದರೂ ಜೈಲಿನಿಂದಲೇ (Jail) ಆಡಳಿತ ನಡೆಸಲಿದ್ದಾರೆ ಎಂದು ಆಪ್‌ (AAP) ಹೇಳಿದೆ.

    ಈ ಬಗ್ಗೆ ಆಪ್‌ ಪಕ್ಷದ ನಾಯಕಿ ಅತಿಶಿ (Atishi) ಪ್ರತಿಕ್ರಿಯಿಸಿ, ಕೇಜ್ರಿವಾಲ್‌ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವುದಿಲ್ಲ. ಅವರು ತಮ್ಮ ಖಾತೆಗಳನ್ನು ತ್ಯಜಿಸಲಿದ್ದಾರೆ. ಒಂದು ವೇಳೆ ಅಗತ್ಯಬಿದ್ದರೆ ಜೈಲಿನಿಂದಲೇ ಸರ್ಕಾರ ಚಲಾಯಿಸಲಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸುರಪುರ ಉಪ ಚುನಾವಣೆ; ದಿವಂಗತ ರಾಜಾ ವೆಂಕಟಪ್ಪ ನಾಯಕ ಪುತ್ರನಿಗೆ ಕಾಂಗ್ರೆಸ್‌ ಟಿಕೆಟ್‌

    ಜೈಲಿನಿಂದ ಆಡಳಿತ್ಯ ಸಾಧ್ಯವೆ?
    ಜೈಲಿನಿಂದ ಸಿಎಂ ಹುದ್ದೆಯನ್ನು ನಿರ್ವಹಿಸುವುದನ್ನು ತಡೆಯಲು ಯಾವುದೇ ಕಾನೂನಿನಲ್ಲ. ಕಾನೂನಿನ ಪ್ರಕಾರ ಸಿಎಂ ಒಬ್ಬರು ಯಾವುದೇ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದರೆ ಮಾತ್ರ ಅಧಿಕಾರ ಕಳೆದುಕೊಳ್ಳುತ್ತಾರೆ. ಇದನ್ನೂ ಓದಿ: Lok Sabha 2024: ಸಚಿವರ ಮಕ್ಕಳು, ಕುಟುಂಬದವರಿಗೆ ‘ಕೈ’ ಟಿಕೆಟ್‌ – ಯಾರು ಎಲ್ಲಿಂದ ಸ್ಪರ್ಧೆ?

    ರಾಜೀನಾಮೆ ನೀಡಿದ್ದ ಮುಖ್ಯಮಂತ್ರಿಗಳು:
    ಅಧಿಕಾರದಲ್ಲಿ ಇರುವಾಗಲೇ ಮುಖ್ಯಮಂತ್ರಿಗಳನ್ನು ಇಡಿ, ಸಿಬಿಐ ಬಂಧಿಸುವುದು ಹೊಸದೆನಲ್ಲ. ಈ ಹಿಂದೆ ಹಲವು ಪಕ್ಷದ ಮುಖ್ಯಮಂತ್ರಿಗಳನ್ನು ಬಂಧನ ಮಾಡಲಾಗಿತ್ತು. ಆದರೆ ಅವರು ಬಂಧನಕ್ಕೂ ಮೊದಲು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೆ ಸಿಎಂ ಹುದ್ದೆಯಲ್ಲಿದ್ದಾಗಲೇ ಬಂಧನಕ್ಕೆ ಒಳಗಾದ ಮೊದಲ ನಾಯಕ ಕೇಜ್ರಿವಾಲ್‌ ಆಗಿದ್ದಾರೆ.

    ಯಡಿಯೂರಪ್ಪ(ಕರ್ನಾಟಕ), ಮಧು ಕೋಡಾ(ಜಾರ್ಖಂಡ್‌), ಶಿಬು ಸೊರೇನ್‌(ಜಾರ್ಖಂಡ್‌), ಜಯಲಲಿತಾ(ತಮಿಳಿನಾಡು), ಲಾಲು ಪ್ರಸಾದ್‌ ಯಾದವ್‌(ಬಿಹಾರ), ಹೇಮಂತ್‌ ಸೊರೇನ್(ಜಾರ್ಖಂಡ್‌), ಓಂ ಪ್ರಕಾಶ್‌ ಚೌತಾಲಾ(ಹರ್ಯಾಣ), ಚಂದ್ರಬಾಬು ನಾಯ್ಡು(ಆಂಧ್ರಪ್ರದೇಶ), ಕರುಣಾನಿಧಿ(ತಮಿಳುನಾಡು), ಚರಣ್‌ ಸಿಂಗ್‌(ಉತ್ತರ ಪ್ರದೇಶ) ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಬಂಧನಕ್ಕೆ ಒಳಗಾಗಿದ್ದರು.

  • ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಬಂಧನ

    ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಬಂಧನ

    ನವದೆಹಲಿ: ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.

    ಕೇಜ್ರಿವಾಲ್ ಅವರಿಗೆ ಬಂಧನದಿಂದ ರಕ್ಷಣೆ ನೀಡಲು ಗುರುವಾರ ದೆಹಲಿ ಹೈಕೋರ್ಟ್ ನಿರಾಕರಿಸಿತ್ತು. ಇದರ ಬೆನ್ನಲ್ಲೇ ಇ.ಡಿ ಅಧಿಕಾರಿಗಳ ತಂಡವು ಕೇಜ್ರಿವಾಲ್‌ ಅವರ ನಿವಾಸಕ್ಕೆ ತೆರಳಿ ಶೋಧ ಕಾರ್ಯ ನಡೆಸಿದವು.

    12 ಅಧಿಕಾರಿಗಳ ತಂಡವು ಸರ್ಚ್ ವಾರಂಟ್‌ನೊಂದಿಗೆ ದೆಹಲಿ ಸಿಎಂ ಕೇಜ್ರಿವಾಲ್‌ ನಿವಾಸಕ್ಕೆ ತೆರಳಿ ಪರಿಶೀಲನೆ ನಡೆಸಿದ್ದವು. ಈ ವೇಳೆ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು, ಬಳಿಕ ಕೇಜ್ರಿವಾಲ್‌ ಅವರನ್ನು ಬಂಧಿಸಿದ್ದಾರೆ.

    ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕರೂ ಆಗಿರುವ ಕೇಜ್ರಿವಾಲ್, ಆಪಾದಿತ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನೀಡಿದ ಎಂಟು ಸಮನ್ಸ್‌ಗಳಿಗೂ ಸ್ಪಂದಿಸಿಲ್ಲ. ದೆಹಲಿ ಜಲ ಮಂಡಳಿಯಲ್ಲಿ ನಡೆದ ಅಕ್ರಮಗಳಿಗೆ ಸಂಬಂಧಿಸಿದ ಒಂದು ಸಮನ್ಸ್‌ಗೂ ಕೂಡ ಪ್ರತಿಕ್ರಿಯಿಸಿಲ್ಲ.

    ಒಂಬತ್ತು ಬಾರಿ ಇ.ಡಿ ಸಮನ್ಸ್‌ ನೀಡಿದೆ. ಮಧ್ಯಂತರ ರಕ್ಷಣೆ ಕೋರಿ ಕೇಜ್ರಿವಾಲ್‌ ಹೈಕೋರ್ಟ್‌ ಮೊರೆ ಹೋಗಿದ್ದರು. ಆದರೆ ಬಂಧನದಿಂದ ರಕ್ಷಣೆ ನೀಡಲು ಹೈಕೋರ್ಟ್‌ ನಿರಾಕರಿಸಿತ್ತು. ಸದ್ಯ ಪ್ರಕರಣ ಸಂಬಂಧ ಕೇಜ್ರಿವಾಲ್ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.

  • ಕೇಜ್ರಿವಾಲ್‌ ನಿವಾಸದಲ್ಲಿ ಇ.ಡಿ ಶೋಧ – ದೆಹಲಿ ಸಿಎಂ ಬಂಧನ ಸಾಧ್ಯತೆ

    ಕೇಜ್ರಿವಾಲ್‌ ನಿವಾಸದಲ್ಲಿ ಇ.ಡಿ ಶೋಧ – ದೆಹಲಿ ಸಿಎಂ ಬಂಧನ ಸಾಧ್ಯತೆ

    ನವದೆಹಲಿ: ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರಿಗೆ ಬಂಧನದಿಂದ ರಕ್ಷಣೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ. ಇದರ ಬೆನ್ನಲ್ಲೇ ಇ.ಡಿ (Enforcement Directorate) ಅಧಿಕಾರಿಗಳ ತಂಡವು ಕೇಜ್ರಿವಾಲ್‌ ಅವರ ನಿವಾಸಕ್ಕೆ ತೆರಳಿ ಶೋಧ ಕಾರ್ಯ ನಡೆಸುತ್ತಿವೆ.

    12 ಅಧಿಕಾರಿಗಳ ತಂಡವು ಸರ್ಚ್ ವಾರಂಟ್‌ನೊಂದಿಗೆ ದೆಹಲಿ ಸಿಎಂ ಕೇಜ್ರಿವಾಲ್‌ ನಿವಾಸಕ್ಕೆ ತೆರಳಿದೆ ಎಂದು ಮೂಲಗಳು ತಿಳಿಸಿವೆ. ಇ.ಡಿ ಯಿಂದ ಕೇಜ್ರಿವಾಲ್‌ ಬಂಧನ ಸಾಧ್ಯತೆ ಇದೆ. ಇದನ್ನೂ ಓದಿ: ಕೊಯಮತ್ತೂರಿನಿಂದ ಅಣ್ಣಾಮಲೈ ಸ್ಪರ್ಧೆ – ಬಿಜೆಪಿಯಿಂದ 3ನೇ ಪಟ್ಟಿ ರಿಲೀಸ್‌

    ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕರೂ ಆಗಿರುವ ಕೇಜ್ರಿವಾಲ್, ಆಪಾದಿತ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನೀಡಿದ ಎಂಟು ಸಮನ್ಸ್‌ಗಳಿಗೂ ಸ್ಪಂದಿಸಿಲ್ಲ. ದೆಹಲಿ ಜಲ ಮಂಡಳಿಯಲ್ಲಿ ನಡೆದ ಅಕ್ರಮಗಳಿಗೆ ಸಂಬಂಧಿಸಿದ ಒಂದು ಸಮನ್ಸ್‌ಗೂ ಕೂಡ ಪ್ರತಿಕ್ರಿಯಿಸಿಲ್ಲ.

    ಒಂಬತ್ತು ಬಾರಿ ಇ.ಡಿ ಸಮನ್ಸ್‌ ನೀಡಿದೆ. ಮಧ್ಯಂತರ ರಕ್ಷಣೆ ಕೋರಿ ಕೇಜ್ರಿವಾಲ್‌ ಹೈಕೋರ್ಟ್‌ ಮೊರೆ ಹೋಗಿದ್ದರು. ಆದರೆ ಬಂಧನದಿಂದ ರಕ್ಷಣೆ ನೀಡಲು ಹೈಕೋರ್ಟ್‌ ನಿರಾಕರಿಸಿದೆ. ಇದನ್ನೂ ಓದಿ: ಐತಿಹಾಸಿಕ ಸೋಲಿನ ಭೀತಿ ಹಿನ್ನೆಲೆ ಬಿಜೆಪಿ ವಿರುದ್ಧ ಆರೋಪ – ಕಾಂಗ್ರೆಸ್ ಆರೋಪಕ್ಕೆ ಜೆಪಿ ನಡ್ಡಾ ತಿರುಗೇಟು

  • ಅಬಕಾರಿ ನೀತಿ ಹಗರಣ – ಇ.ಡಿಯಿಂದ ಕೇಜ್ರಿವಾಲ್‌ಗೆ 9ನೇ ಬಾರಿ ಸಮನ್ಸ್

    ಅಬಕಾರಿ ನೀತಿ ಹಗರಣ – ಇ.ಡಿಯಿಂದ ಕೇಜ್ರಿವಾಲ್‌ಗೆ 9ನೇ ಬಾರಿ ಸಮನ್ಸ್

    ನವದೆಹಲಿ: ಅಬಕಾರಿ ನೀತಿ ಪ್ರಕರಣದಲ್ಲಿ (Excise Policy Case) ಜಾಮೀನು (Bail) ಪಡೆದ ಕೆಲವೇ ಗಂಟೆಗಳ ನಂತರ ಜಾರಿ ನಿರ್ದೇಶನಾಲಯ (ED) ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (AAP) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರಿಗೆ ದೆಹಲಿ ಜಲಮಂಡಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಭಾನುವಾರ ಮತ್ತೊಂದು ಸಮನ್ಸ್ (Summons) ಜಾರಿ ಮಾಡಿದೆ.

    ಹಿಂದಿನ ಸಮನ್ಸ್‌ಗಳನ್ನು ಕಾನೂನುಬಾಹಿರ ಎಂದು ಕರೆದಿದ್ದ ಕೇಜ್ರಿವಾಲ್ ವಿಚಾರಣೆಗೆ ಹಾಜರಾಗಲು ನಿರಾಕರಿಸಿದ್ದರು. ಈ ಹಿನ್ನೆಲೆ ಜಾರಿ ನಿರ್ದೇಶನಾಲಯ ಎರಡು ದೂರುಗಳನ್ನು ನೀಡಿತ್ತು. ಶನಿವಾರ ಇ.ಡಿ ನೀಡಿದ ದೂರಿನ ವಿಚಾರಣೆಗಾಗಿ ಅರವಿಂದ್ ಕೇಜ್ರಿವಾಲ್ ಶನಿವಾರ ರೋಸ್ ಅವೆನ್ಯೂ ಕೋರ್ಟ್‌ಗೆ ಹಾಜರಾಗಿದ್ದರು. ಈ ಪ್ರಕರಣದಲ್ಲಿ ನ್ಯಾಯಾಲಯ ಕೇಜ್ರಿವಾಲ್ ಅವರಿಗೆ 15,000 ರೂ. ಮೌಲ್ಯದ ಶ್ಯೂರಿಟಿ ಬಾಂಡ್ ಹಾಗೂ 1 ಲಕ್ಷ ರೂ.ಗಳ ವೈಯಕ್ತಿಕ ಬಾಂಡ್ ಮೇಲೆ ಶನಿವಾರ ಜಾಮೀನು ಮಂಜೂರು ಮಾಡಿತ್ತು. ಇದನ್ನೂ ಓದಿ: ಕಾಂಗ್ರೆಸ್‌ ಇಲ್ಲದೇ ಇದ್ದಿದ್ರೆ ದೇಶಕ್ಕೆ ಸ್ವಾತಂತ್ರ್ಯ ಸಿಗುತ್ತಿರಲಿಲ್ಲ: ಸಂಜಯ್‌ ರಾವತ್‌

    ಒಂಬತ್ತನೇ ಸಮನ್ಸ್‌ನಲ್ಲಿ ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾರ್ಚ್ 21 ರಂದು ಕೇಜ್ರಿವಾಲ್ ಹಾಜರಾಗುವಂತೆ ತನಿಖಾ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ಗಂಡು ಮಗುವಿಗೆ ಜನ್ಮ ನೀಡಿದ ಗಾಯಕ ಸಿಧು ಮೂಸೆವಾಲಾ ತಾಯಿ

     

  • ಸಿಎಂ ಕೇಜ್ರಿವಾಲ್‌ಗೆ ಬಿಗ್ ರಿಲೀಫ್ – ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು

    ಸಿಎಂ ಕೇಜ್ರಿವಾಲ್‌ಗೆ ಬಿಗ್ ರಿಲೀಫ್ – ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು

    ನವದೆಹಲಿ: ನೂತನ ಅಬಕಾರಿ ನೀತಿ ಪ್ರಕರಣಕ್ಕೆ (Liquor Policy Case) ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ (Arvind Kejriwal) ರೋಸ್ ಅವೆನ್ಯೂ ಕೋರ್ಟ್ ನಿರೀಕ್ಷಣಾ‌ ಜಾಮೀನು ಮಂಜೂರು ಮಾಡಿದೆ.

    ಸಮನ್ಸ್ ಹಿನ್ನೆಲೆ ಶನಿವಾರ ಕೋರ್ಟ್ ಮುಂದೆ ಅರವಿಂದ್ ಕೇಜ್ರಿವಾಲ್ ಹಾಜರಾಗಿ ಜಾಮೀನು ನೀಡುವಂತೆ ಮನವಿ ಮಾಡಿದರು. ವಿಚಾರಣೆ ಬಳಿಕ 15,000 ರೂ. ಮೌಲ್ಯದ ಶ್ಯೂರಿಟಿ ಬಾಂಡ್ ಮತ್ತು 1 ಲಕ್ಷ ರೂ. ವೈಯಕ್ತಿಕ ಬಾಂಡ್‌ನೊಂದಿಗೆ ಜಾಮೀನು ಮಂಜೂರು ಮಾಡಲಾಯಿತು‌. ಇದನ್ನೂ ಓದಿ: ನಾವು ಎಷ್ಟು ಅರ್ಜಿಗಳನ್ನು ಪರಿಗಣಿಸಬೇಕು? – EVM ಬೇಡವೆಂದು ಕಾಂಗ್ರೆಸ್‌ ಸಲ್ಲಿಸಿದ್ದ ಅರ್ಜಿ ವಜಾ

    ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ‌ ನಿರ್ದೇಶನಾಲಯದ ಅಧಿಕಾರಿಗಳು ಸಿಎಂ ಅರವಿಂದ್ ಕೇಜ್ರಿವಾಲ್ 8 ಬಾರಿ ಸಮನ್ಸ್ ಜಾರಿ ಮಾಡಿದ್ದರು. ಆದರೆ ವಿಚಾರಣೆಗೆ ಹಾಜರಾಗದ ಹಿನ್ನೆಲೆ ಇಡಿ ಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಅರವಿಂದ್ ಕೇಜ್ರಿವಾಲ್ ಅವರಿಗೆ ಖುದ್ದು ಹಾಜರಾಗಲು ಸಮನ್ಸ್ ಜಾರಿ ಮಾಡಿತ್ತು.

    ಇಂದು ವಿಚಾರಣೆ ವೇಳೆ ಅರವಿಂದ್ ಕೇಜ್ರಿವಾಲ್ ನ್ಯಾಯಾಧೀಶರ ಮುಂದೆ ಹಾಜರಾಗುತ್ತಿದ್ದಂತೆ ಅವರ ಅನುಪಸ್ಥಿತಿಯಲ್ಲಿ ವಿಚಾರಣೆ ನಡೆಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಕೋರ್ಟ್ ಒಪ್ಪಿತು. ಬಳಿಕ ಕೇಜ್ರಿವಾಲ್ ಕೋರ್ಟ್‌ನಿಂದ ಹೊರ ಬಂದರು. ಇನ್ನು ಕೇಜ್ರಿವಾಲ್ ವಿಚಾರಣೆ ಹಿನ್ನೆಲೆ ಕೋರ್ಟ್ ಮುಂದೆ ಭಾರಿ ಭದ್ರತೆ ಒದಗಿಸಲಾಗಿತ್ತು. ಈ ಹಿಂದೆ ಇಡಿ ಸಲ್ಲಿಸಿದ ದೂರಿನ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ವಿಚಾರಣೆಗೆ ತಡೆ ಕೋರಿ ಕೇಜ್ರಿವಾಲ್ ಮಾಡಿದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಇದನ್ನೂ ಓದಿ: ಚುನಾವಣಾ ಬಾಂಡ್ ಪ್ರಕರಣ – ಅಸಮರ್ಪಕ ಮಾಹಿತಿ ನೀಡಿದ ಎಸ್‌ಬಿಐಗೆ ಮತ್ತೆ ಸುಪ್ರೀಂ ತರಾಟೆ

  • ವೋಟ್‌ ಬ್ಯಾಂಕ್ ರಾಜಕಾರಣಕ್ಕಾಗಿ ಸಿಎಎ ಜಾರಿ: ಕೇಂದ್ರದ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ

    ವೋಟ್‌ ಬ್ಯಾಂಕ್ ರಾಜಕಾರಣಕ್ಕಾಗಿ ಸಿಎಎ ಜಾರಿ: ಕೇಂದ್ರದ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ

    ನವದೆಹಲಿ: ಪೌರತ್ವ ತಿದ್ದುಪಡಿ ಕಾನೂನು (CAA) ಜಾರಿ ರಾಜಕೀಯ ಸಂಘರ್ಷಕ್ಕೆ ವೇದಿಕೆಯಾಗಿದ್ದು, ವಿರೋಧ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ (Narendra Modi) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಈ ನಡುವೆ ಮಾತನಾಡಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ವೋಟ್‌ ಬ್ಯಾಂಕ್ ರಾಜಕಾರಣಕ್ಕಾಗಿ ನೆರೆ ರಾಷ್ಟ್ರಗಳಲ್ಲಿರುವ ಜನರನ್ನು ಭಾರತಕ್ಕೆ ಕರೆತರಲಾಗುತ್ತಿದೆ ಎಂದು ಆರೋಪಿಸಿದರು.

    ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಎ ಈಶಾನ್ಯ ರಾಜ್ಯಗಳಿಗೆ ಹೆಚ್ಚಿನ ಹಾನಿಯನ್ನುಂಟು ಮಾಡುತ್ತದೆ. ಇತರ ದೇಶಗಳು ಹೊರಗಿನವರು ಬರುವುದನ್ನು ನಿಲ್ಲಿಸುತ್ತವೆ. ಆದರೆ ಬಿಜೆಪಿ ಚುನಾವಣಾ ಲಾಭಕ್ಕಾಗಿ ಸಿಎಎ ತಂದಿದೆ. ತಮ್ಮ ದೇಶದ ಹಕ್ಕುಗಳನ್ನು ಪಾಕಿಸ್ತಾನಿಗಳಿಗೆ ನೀಡುತ್ತಿದ್ದಾರೆ. ಸಿಎಎ ಹಿಂಪಡೆಯಬೇಕು ಎಂದು ದೇಶ ಒತ್ತಾಯಿಸುತ್ತಿದೆ ಎಂದರು. ಇದನ್ನೂ ಓದಿ: ಸಿಎಎ ವಿಷಯದಲ್ಲಿ ನಟ ವಿಜಯ್ ಗೆ ಟಾಂಗ್ ಕೊಟ್ಟ ಕಂಗನಾ

    ದೇಶದ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಬಿಜೆಪಿ 10 ವರ್ಷಗಳಲ್ಲಿ ಸರಿಯಾಗಿ ಕೆಲಸ ಮಾಡಿದ್ದರೆ. ಚುನಾವಣೆಗೆ ಮುನ್ನ ಸಿಎಎ ತರುವ ಅಗತ್ಯವಿರಲಿಲ್ಲ. ಭಾರತದಲ್ಲಿ ಹಣದುಬ್ಬರವು ಏರಿದೆ. ನಿರುದ್ಯೋಗ ಉತ್ತುಂಗದಲ್ಲಿದೆ. ಯುವಕರು ಉದ್ಯೋಗಕ್ಕಾಗಿ ಪರದಾಡುವ ಸನ್ನಿವೇಶ ನಿರ್ಮಾಣವಾಗಿದೆ. ಈ‌ ನಡುವೆ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಅಲ್ಪಸಂಖ್ಯಾತರು ಭಾರತೀಯ ಪೌರತ್ವ ಪಡೆಯಲು ಬಯಸಿದರೆ, ಅವರಿಗೂ ಪೌರತ್ವ ನೀಡಲಾಗುವುದು ಎಂದು ಕೇಂದ್ರದ ಬಿಜೆಪಿ ಸರ್ಕಾರ ಹೇಳುತ್ತದೆ. ಇದರರ್ಥ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ದೇಶಕ್ಕೆ ಕರೆತರುವ ಯೋಜನೆಯಾಗಿದೆ. ಮಾಹಿತಿ ಪ್ರಕಾರ ಸುಮಾರು 2.5 ಕೋಟಿಯಿಂದ 3 ಕೋಟಿ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲಾಗುತ್ತಿದೆ. ಅಂದರೆ ಅವರನ್ನು ಕರೆತಂದು ಉದ್ಯೋಗ ನೀಡಿ ಮನೆ ನಿರ್ಮಿಸಿಕೊಡಲಾಗುವುದು ಎಂದು ತಿಳಿಸಿದರು.

    ಬಿಜೆಪಿಯವರಿಗೆ ಇಲ್ಲಿರುವ ನಮ್ಮ ಮಕ್ಕಳಿಗೆ ಕೆಲಸ ಕೊಡಲು ಸಾಧ್ಯವಿಲ್ಲ. ಆದರೆ ಪಾಕಿಸ್ತಾನದಿಂದ ಬರುವ ಮಕ್ಕಳಿಗೆ ಕೆಲಸ ಕೊಡಲು ಬಯಸುತ್ತಾರೆ. ನಮ್ಮ ಅನೇಕ ಜನರು ನಿರಾಶ್ರಿತರಾಗಿದ್ದಾರೆ. ಆದರೆ ಬಿಜೆಪಿ ಪಾಕಿಸ್ತಾನದಿಂದ ಬರುವ ಜನರನ್ನು ಇಲ್ಲಿ ನೆಲೆ ನೀಡಲು ಬಯಸುತ್ತದೆ. ಅವರು ನಮ್ಮ ಕೆಲಸವನ್ನು ವಿದೇಶಿ ಮಕ್ಕಳಿಗೆ ನೀಡಲು ಬಯಸುತ್ತಾರೆ. ಪಾಕಿಸ್ತಾನಿಗಳನ್ನು ನಮ್ಮ ಹಕ್ಕಿನ ಮನೆಗಳಲ್ಲಿ ನೆಲೆಸಲು ಬಿಜೆಪಿ ನಾಯಕರು ಬಯಸುತ್ತಾರೆ. ಭಾರತ ಸರ್ಕಾರದ ಬಳಿ ಇರುವ ಹಣವನ್ನು ನಮ್ಮ ಕುಟುಂಬ ಮತ್ತು ದೇಶದ ಅಭಿವೃದ್ಧಿಗೆ ಬಳಸಬೇಕು. ಆದರೆ ಪಾಕಿಸ್ತಾನಿಗಳನ್ನು ನೆಲೆಗೊಳಿಸಲು ಇದನ್ನು ಬಳಸಲಾಗುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಭಾರತದ ಪ್ರತಿಯೊಬ್ಬ ಮುಸ್ಲಿಮರೂ ಸಿಎಎಯನ್ನು ಸ್ವಾಗತಿಸಬೇಕು: ಮುಸ್ಲಿಂ ಜಮಾತ್‌ ಅಧ್ಯಕ್ಷ ಕರೆ

  • ಮೋದಿ ಜಪಿಸ್ತಿರೋ ಗಂಡಂದಿರಿಗೆ ಊಟ ಬಡಿಸ್ಬೇಡಿ- ಮಹಿಳೆಯರಿಗೆ ಕೇಜ್ರಿವಾಲ್ ಕರೆ

    ಮೋದಿ ಜಪಿಸ್ತಿರೋ ಗಂಡಂದಿರಿಗೆ ಊಟ ಬಡಿಸ್ಬೇಡಿ- ಮಹಿಳೆಯರಿಗೆ ಕೇಜ್ರಿವಾಲ್ ಕರೆ

    ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಜಪ ಮಾಡಿದರೆ ತಮ್ಮ ಗಂಡನಿಗೆ ರಾತ್ರಿ ಊಟವನ್ನು ನೀಡಬೇಡಿ ಎಂದು ಮಹಿಳೆಯರಿಗೆ ಕರೆ ನೀಡಿದ್ದಾರೆ.

    ‘ಮಹಿಳಾ ಸಮ್ಮಾನ್ ಸಮರೋಹ್’ ಎಂಬ ಹೆಸರಿನ ಟೌನ್‌ಹಾಲ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಅನೇಕ ಪುರುಷರು ಪ್ರಧಾನಿ ಮೋದಿಯವರ ಹೆಸರನ್ನು ಜಪಿಸುತ್ತಿದ್ದಾರೆ. ನಿಮ್ಮ ಪತಿ ಮೋದಿಯವರ (Narendra Modi) ಹೆಸರನ್ನು ಜಪಿಸಿದರೆ, ನೀವು ಅವರಿಗೆ ರಾತ್ರಿಯ ಊಟವನ್ನು ನೀಡುವುದಿಲ್ಲ ಎಂದು ಹೇಳುವಂತೆ ತಿಳಿಸಿದ್ದಾರೆ.

    ನಿಮ್ಮ ಸಹೋದರ ಕೇಜ್ರಿವಾಲ್ (Arvind Kejriwal) ಮಾತ್ರ ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ ಎಂದು ಬಿಜೆಪಿಯನ್ನು ಬೆಂಬಲಿಸುವ ಇತರ ಮಹಿಳೆಯರಿಗೆ ಹೇಳುವಂತೆ ಇದೇ ವೇಳೆ ದೆಹಲಿ ಸಿಎಂ ತಿಳಿಸಿದರು. ನಾನು ಮಹಿಳೆಯರಿಗೆ ಕರೆಂಟ್ ಫ್ರೀ ಮಾಡಿದ್ದೇನೆ, ಬಸ್ ಟಿಕೆಟ್ ಉಚಿತ ಮಾಡಿದ್ದೇನೆ ಎಂದು ಹೇಳಿ.ಅಲ್ಲದೇ ಈಗ ನಾನು ಪ್ರತಿ ತಿಂಗಳು ಮಹಿಳೆಯರಿಗೆ ಈ 1,000 ರೂಗಳನ್ನು ನೀಡುತ್ತಿದ್ದೇನೆ. ಬಿಜೆಪಿ (BJP) ಅವರಿಗೆ ಏನು ಮಾಡಿದೆ? ಬಿಜೆಪಿಗೆ ಏಕೆ ಮತ ಹಾಕಬೇಕು? ಈ ಬಾರಿ ಕೇಜ್ರಿವಾಲ್‌ಗೆ ಮತ ಹಾಕಿ ಎಂದು ಕೇಜ್ರಿವಾಲ್‌ ತಿಳಿಸಿದರು. ಇದನ್ನೂ ಓದಿ: ಪಶ್ಚಿಮ ಬಂಗಾಳ ಉಳಿಸಿ- ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದ ಕೌಸ್ತವ್ ಬಾಗ್ಚಿ

    ಬೇರೆ ಪಕ್ಷಗಳು ಮಹಿಳೆಗೆ ಒಂದಷ್ಟು ಹುದ್ದೆ ನೀಡಿ ಮಹಿಳೆ ಸಬಲೀಕರಣ ಮಾಡಿದ್ದೇವೆ ಎಂದು ಹೇಳುತ್ತಿವೆ. ಮಹಿಳೆಯರಿಗೆ ಹುದ್ದೆ ಬೇಡ, ದೊಡ್ಡ ಹುದ್ದೆ, ಟಿಕೆಟ್ ಎಲ್ಲ ಸಿಗಬೇಕು ಎಂದು ನಾನು ಹೇಳುತ್ತಿಲ್ಲ. ಆದರೆ ಇದರಿಂದ ಕೇವಲ ಎರಡ್ಮೂರು ಮಹಿಳೆಯರಿಗೆ ಮಾತ್ರ ಲಾಭವಾಗುತ್ತದೆ. ಉಳಿದ ಮಹಿಳೆಯರಿಗೆ ಏನು ಸಿಗುತ್ತದೆ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

    ತಮ್ಮ ಸರ್ಕಾರದ ಅಡಿಯಲ್ಲಿ ಹೊಸ ಯೋಜನೆ ‘ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆ’ಯು ನಿಜವಾದ ಸಬಲೀಕರಣವನ್ನು ತರುತ್ತದೆ. ಹಣವಿದ್ದಾಗ ಸಬಲೀಕರಣವಾಗುತ್ತದೆ, ಪ್ರತಿ ಮಹಿಳೆಗೆ ಪ್ರತಿ ತಿಂಗಳು 1000 ರೂ. ಸಿಕ್ಕಾಗ ನಿಜವಾದ ಸಬಲೀಕರಣವಾಗುತ್ತದೆ. ಇಡೀ ವಿಶ್ವದಲ್ಲಿ ಈ ಯೋಜನೆಯು “ಅತಿದೊಡ್ಡ ಮಹಿಳಾ ಸಬಲೀಕರಣ ಕಾರ್ಯಕ್ರಮ” ಎಂದು ದೆಹಲಿ ಮುಖ್ಯಮಂತ್ರಿ ಬಣ್ಣಿಸಿದರು.

  • ಇಡಿ ವಿಚಾರಣೆಗೆ ಗೈರು – ಅರವಿಂದ್ ಕೇಜ್ರಿವಾಲ್‌ಗೆ ದೆಹಲಿ ನ್ಯಾಯಾಲಯದಿಂದ ಸಮನ್ಸ್

    ಇಡಿ ವಿಚಾರಣೆಗೆ ಗೈರು – ಅರವಿಂದ್ ಕೇಜ್ರಿವಾಲ್‌ಗೆ ದೆಹಲಿ ನ್ಯಾಯಾಲಯದಿಂದ ಸಮನ್ಸ್

    ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರಿಗೆ ದೆಹಲಿ ನ್ಯಾಯಾಲಯ (Delhi Court) ಸಮನ್ಸ್ ಜಾರಿ ಮಾಡಿದ್ದು, ಮಾರ್ಚ್ 16 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ. ದೆಹಲಿ ಹೊಸ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಈ ಸಮನ್ಸ್ ಜಾರಿ ಮಾಡಿದೆ.

    ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ಪಿಎಂಎಲ್‌ಎಯ ಸೆಕ್ಷನ್ 50 ರ ಅಡಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಎಂಟು ಬಾರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸಮನ್ಸ್ ನೀಡಿತ್ತು. ಆದರೆ ಈವರೆಗೂ ಒಮ್ಮೆಯೂ ವಿಚಾರಣೆಗೆ ಹಾಜರಾಗದ ಹಿನ್ನೆಲೆ ದೆಹಲಿ ನ್ಯಾಯಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಇಡಿ (Enforcement Directorate) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈಗ ವಿಚಾರಣೆಗೆ ಸಮನ್ಸ್ ಜಾರಿ ಮಾಡಿದೆ. ಇದನ್ನೂ ಓದಿ: ದಕ್ಷಿಣ ಗೆಲ್ಲಲು AI ಮೊರೆ ಹೋದ ಮೋದಿ – ವಿಶ್ವದಲ್ಲೇ ಮೊದಲು ಎಂದು ಬಿಜೆಪಿ

    ಇದಕ್ಕೂ ಮೊದಲು ದೆಹಲಿಯ ಅಬಕಾರಿ ನೀತಿಗೆ ಸಂಬಂಧಿಸಿದ ಮನಿ ಲ್ಯಾಂಡರಿಂಗ್ ಪ್ರಕರಣದಲ್ಲಿ ಕೇಜ್ರಿವಾಲ್ ಅವರಿಗೆ ನೀಡಲಾದ ಮೊದಲ ಮೂರು ಸಮನ್ಸ್‌ಗಳಿಗೆ ಹಾಜರಾಗದ ಕಾರಣ ಪ್ರಾಸಿಕ್ಯೂಷನ್ ಕೋರಿ ತನಿಖಾ ಸಂಸ್ಥೆ ಸ್ಥಳೀಯ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ನ್ಯಾಯಾಲಯವು ಮಾರ್ಚ್ 16 ರಂದು ವಿಚಾರಣೆಗೆ ಈ ವಿಷಯವನ್ನು ಪಟ್ಟಿ ಮಾಡಿದೆ.

    ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಚಾರ್ಜ್‌ಶೀಟ್‌ಗಳಲ್ಲಿ ಕೇಜ್ರಿವಾಲ್ ಅವರ ಹೆಸರನ್ನು ಹಲವು ಬಾರಿ ಉಲ್ಲೇಖಿಸಲಾಗಿದೆ. 2021-22ರ ಅಬಕಾರಿ ನೀತಿಯನ್ನು ಸಿದ್ಧಪಡಿಸುವ ಕುರಿತು ಆರೋಪಿಗಳು ಕೇಜ್ರಿವಾಲ್ ಅವರೊಂದಿಗೆ ಸಂಪರ್ಕದಲ್ಲಿದ್ದರು ಎಂದು ಇಡಿ ಆರೋಪಿಸಿದೆ. ಈ ಪ್ರಕರಣದಲ್ಲಿ ಎಎಪಿ ನಾಯಕರಾದ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್, ಪಕ್ಷದ ಸಂವಹನ ಉಸ್ತುವಾರಿ ವಿಜಯ್ ನಾಯರ್ ಮತ್ತು ಕೆಲವು ಮದ್ಯದ ಉದ್ಯಮಿಗಳನ್ನು ತನಿಖಾ ಸಂಸ್ಥೆ ಇಲ್ಲಿಯವರೆಗೆ ಬಂಧಿಸಿದೆ. ಇದನ್ನೂ ಓದಿ: 15 ವರ್ಷದ ಬಳಿಕ ಘರ್‌ ವಾಪ್ಸಿ – ಮರಳಿ ಬಿಜೆಪಿ ಜೊತೆ ಬಿಜೆಡಿ ಮೈತ್ರಿ?

  • 18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಪ್ರತಿ ತಿಂಗಳು 1,000 ರೂ. – ಆಪ್‌ ಸರ್ಕಾರದಿಂದ ಬಂಪರ್‌ ಕೊಡುಗೆ

    18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಪ್ರತಿ ತಿಂಗಳು 1,000 ರೂ. – ಆಪ್‌ ಸರ್ಕಾರದಿಂದ ಬಂಪರ್‌ ಕೊಡುಗೆ

    ನವದೆಹಲಿ: ರಾಷ್ಟ್ರ ರಾಜಧಾನಿಯ ಮಹಿಳೆಯರಿಗಾಗಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ (Arvind Kejriwal Government) ನೇತೃತ್ವದ ಸರ್ಕಾರ ಬಂಪರ್ ಯೋಜನೆ ಪ್ರಕಟಿಸಿದೆ.

    ಸೋಮವಾರ ದೆಹಲಿ ವಿಧಾನಸಭೆಯಲ್ಲಿ ರಾಜ್ಯ ಹಣಕಾಸು ಸಚಿವೆ ಅತಿಶಿ 2024-25ನೇ ಸಾಲಿನ‌ ವರ್ಷದ ಬಜೆಟ್‌ ಮಂಡಿಸಿದ್ದಾರೆ. 76,000 ಕೋಟಿ ರೂ. ಗಾತ್ರದ ಬಜೆಟ್‌ ಮಂಡಿಸಿದ್ದು, ತಮ್ಮ ಚೊಚ್ಚಲ ಬಜೆಟ್‌ನಲ್ಲಿ ʻಮುಖ್ಯಮಂತ್ರಿ ಮಹಿಳಾ ಸಮ್ಮಾನ್ʼಯೋಜನೆ (Mukyamnatri Mahila Samman Yojana) ಘೋಷಿಸಿದರು.

    ಈ ಯೋಜನೆ ಅಡಿಯಲ್ಲಿ 18 ವರ್ಷ ಮೇಲ್ಪಟ್ಟ ಮಹಿಳೆಯರು (Delhi Women) ಪ್ರಸಕ್ತ ಆರ್ಥಿಕ ವರ್ಷದಿಂದ ಪ್ರತಿ ತಿಂಗಳು 1,000 ರೂ. ಆದಾಯ ಪಡೆಯಲಿದ್ದಾರೆ. ಮಹಿಳೆಯರನ್ನು ಸಬಲೀಕರಣಗೊಳಿಸುವ ಉದ್ದೇಶವೂ ಇದಾಗಿದೆ ಎಂದು ತಮ್ಮ ಬಜೆಟ್‌ ಭಾಷಣದಲ್ಲಿ ತಿಳಿಸಿದರು. ಇದನ್ನೂ ಓದಿ: ಮಮತಾ ಸವಾಲು ಸ್ವೀಕಾರ – ಸಕ್ರೀಯ ರಾಜಕಾರಣಕ್ಕೆ ಇಳಿದ ಕೋಲ್ಕತ್ತಾ ಹೈಕೋರ್ಟ್‌ ಜಡ್ಜ್‌ ಗಂಗೋಪಾಧ್ಯಾಯ

    ಇಲ್ಲಿಯವರೆಗೆ ದೆಹಲಿಯಲ್ಲಿ ಶ್ರೀಮಂತರ ಕುಟುಂಬದ ಮಕ್ಕಳು ಶ್ರೀಮಂತರಾಗಿ, ಬಡ ಕುಟುಂಬದ ಮಕ್ಕಳು ಬಡವರಾಗಿಯೇ ಉಳಿಯುತ್ತಿದ್ದರು. ಇದು ರಾಮರಾಜ್ಯದ ಪರಿಕಲ್ಪನೆಗೆ ವಿರುದ್ಧವಾಗಿತ್ತು. ಆದ್ರೆ ನಮ್ಮ ಸರ್ಕಾರ ರಾಮರಾಜ್ಯದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಬಜೆಟ್‌ ಮಂಡಿಸಿದೆ ಎಂದು ಒತ್ತಿ ಹೇಳಿದರು. ಇದನ್ನೂ ಓದಿ: ನೌಕಾಪಡೆಗೆ ಎಂಹೆಚ್ 60ಆರ್ ಸೀಹಾಕ್ ಹೆಲಿಕಾಪ್ಟರ್ ನಿಯೋಜನೆಗೆ ಸಿದ್ಧತೆ – ಭಾರತಕ್ಕೆ ಭೀಮ ಬಲ

    ಕೇಜ್ರಿವಾಲ್ ಸರ್ಕಾರವು 2015 ರಿಂದ 22,711 ಹೊಸ ಶಾಲಾ ಕೊಠಡಿಗಳನ್ನು ನಿರ್ಮಿಸಿದೆ. ಶಿಕ್ಷಣವು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಈ ವರ್ಷ ಶಿಕ್ಷಣಕ್ಕಾಗಿ 16,396 ಕೋಟಿ ರೂ., ದೆಹಲಿಯ ಆರೋಗ್ಯ ಕ್ಷೇತ್ರಕ್ಕೆ 8,685 ರೂ.ಗಳನ್ನು ಮೀಸಲಿಡಲಾಗಿದೆ. ಈ ಅನುದಾನದ ಅಡಿಯಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ 6,215 ರೂ.ಗಳಷ್ಟು ಮೂಲ ಸೌಕರ್ಯಗಳ ಸೌಲಭ್ಯ ಸಿಗಲಿದೆ. ಅಲ್ಲದೇ ಹೊಸ ಆಸ್ಪತ್ರೆಗಳ ನಿರ್ಮಾಣಕ್ಕೆ 400 ಕೋಟಿ ರೂ. ಗಳನ್ನು ಮೀಸಲಿಡಲಾಗಿದೆ ಎಂದು ವಿವರಿಸಿದರು.